Headlines

‘ಶ್ರೀ ರಾಮ ಭೂಮಿ’ಯಲ್ಲಿ ಅನುಪಮ್ ಖೇರ್, ಅಶೋಕ್ ಸಿಂಘಾಲ್ ಪಾತ್ರದಲ್ಲಿ ನಟನೆ – Kannada News | Anupam Kher acting in Shri Ram Bhoomi movie

ಬಾಲಿವುಡ್​​ನ ಖ್ಯಾತ ನಟ ಅನುಪಮ್ ಖೇರ್ (Anupam Kher), ಹಲವು ಅದ್ಭುತ ಸಿನಿಮಾಗಳಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ರಾಜಕೀಯವಾಗಿಯೂ ಸಕ್ರಿಯವಾಗಿರುವ ಅನುಪಮ್ ಖೇರ್, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಅನುಪಮ್ ಖೇರ್ ಅವರು ಬಿಜೆಪಿ ಪರವಾದ ಪ್ರಾಪಗಾಂಡಾ ಸಿನಿಮಾಗಳಲ್ಲಿ ನಟಿಸುತ್ತಾರೆ, ಅವುಗಳ ಪ್ರಚಾರ ಮಾಡುತ್ತಾರೆ ಎಂಬ ಆರೋಪವೂ ಇದೆ. ‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’, ‘ಎಮರ್ಜೆನ್ಸಿ’, ‘ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಅಂಥಹಾ ಸಿನಿಮಾಗಳಲ್ಲಿ ಅವರು ಈಗಾಗಲೇ ನಟಿಸಿದ್ದು, ಇದೀಗ ‘ಶ್ರೀ ರಾಮ…

Read More

Gold Rate: ಚಿನ್ನದ ಬೆಲೆ ಮಂಗಳವಾರವೂ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 14th July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 14: ಚಿನ್ನದ ಬೆಲೆ (Gold Rates) ಮತ್ತೆ ಇಳಿದಿದೆ. ನಿನ್ನೆ 130 ರೂನಷ್ಟು ಕಡಿಮೆಗೊಂಡಿದ್ದ ಅದರ ಬೆಲೆ 10 ರೂ ಇಳಿದಿದೆ. ವಿದೇಶಗಳಲ್ಲಿ ಬಂಗಾರದ ಬೆಲೆ ಅಲ್ಪ ಸ್ವಲ್ಪ ಏರಿಳಿತ ಕಂಡಿದೆ. ಬೆಳ್ಳಿ ಬೆಲೆ ಇವತ್ತು ಮಂಗಳವಾರ ಬದಲಾವಣೆಯಾಗದೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,30,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,42,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ…

Read More

Samudrika Shastra: ನಿಮ್ಮ ಉಗುರುಗಳ ಮೇಲೆ ಬಿಳಿ ಅರ್ಧಚಂದ್ರಾಕೃತಿ ಇದೆಯೇ? ಈ ಬಗ್ಗೆ ಸಾಮುದ್ರಿಕ ಶಾಸ್ತ್ರ ಹೇಳುವುದೇನು ಗೊತ್ತಾ? – Kannada News | Half moon marks on nails unlocking your future with samudrika shastra and luck

ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈ ರೇಖೆಗಳಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಸಾಮುದ್ರಿಕ ಶಾಸ್ತ್ರದಲ್ಲಿ ಉಗುರುಗಳ ಮೇಲಿನ ಗುರುತುಗಳಿಗೂ ಇದೆ. ಸಾಮಾನ್ಯವಾಗಿ ಜನರು ತಮ್ಮ ಉಗುರುಗಳ ಬುಡದಲ್ಲಿರುವ ಬಿಳಿ ಅರ್ಧಚಂದ್ರಾಕಾರದ (Half-Moon Shape) ಮಾದರಿಯನ್ನು ನಿರ್ಲಕ್ಷಿಸುತ್ತಾರೆ. ಆದರೆ, ಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಆಕಾರವು ವ್ಯಕ್ತಿಯ ಭವಿಷ್ಯ, ಯಶಸ್ಸು ಮತ್ತು ಅದೃಷ್ಟದ ಬಗ್ಗೆ ಆಶ್ಚರ್ಯಕರ ಸಂಗತಿಗಳನ್ನು ಬಹಿರಂಗಪಡಿಸುತ್ತದೆ. ನಿಮ್ಮ ಉಗುರುಗಳ ಮೇಲೆ ಈ ಬಿಳಿ ಅರ್ಧಚಂದ್ರ ಸ್ಪಷ್ಟವಾಗಿ ಗೋಚರಿಸಿದರೆ ನೀವು ತುಂಬಾ ಅದೃಷ್ಟವಂತರು ಎಂದರ್ಥ. ಇದು ಅಪಾರ…

Read More

ಪಹಲ್ಗಾಮ್ ದಾಳಿ: ಉಗ್ರ ಹಫೀಜ್ ಸಯೀದ್‌ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ – Kannada News | Hafiz Saeed: NIA Issues Non Bailable Warrant for Pahalgam Attack, Trial In Absentia Under BNSS

ಶ್ರೀನಗರ, ಜುಲೈ 14:ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌(Pahalgam)ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅತ್ಯಂತ ಆಕ್ರಮಣಕಾರಿ ಹೆಜ್ಜೆಯನ್ನಿಟ್ಟಿದೆ. ಈ ದಾಳಿಯ ಮುಖ್ಯ ಸೂತ್ರಧಾರಿ, ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಜಾಗತಿಕ ಉಗ್ರ ಹಫೀಜ್ ಸಯೀದ್ ವಿರುದ್ಧ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಮುಕ್ತ ದಿನಾಂಕದ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಈ ಉಗ್ರನನ್ನು ಭಾರತಕ್ಕೆ ಕರೆತರಲು ಇರುವ…

Read More

Video: ದೈಹಿಕ ನ್ಯೂನತೆಯಿದ್ರೂ ಜೀವನಕ್ಕಾಗಿ ಗುಂಡಿ ಅಗೆಯುವ ಕೆಲಸ ನೆಚ್ಚಿಕೊಂಡ ಕೂಲಿ ಕಾರ್ಮಿಕ – Kannada News | A daily wage laborer who works hard, overcoming physical disability.

ದುಡಿದು ತಿನ್ನುವ ಛಲವಿದ್ದರೆ ದೈಹಿಕ ನ್ಯೂನತೆ ಲೆಕ್ಕಕ್ಕೆ ಬರಲ್ಲ. ಅಂಗವೈಕಲ್ಯತೆ ಹೊಂದಿರುವ ವ್ಯಕ್ತಿಯೊಬ್ಬ ಇಂದಿನ ಯುವಕ ಯುವತಿಯರಿಗೆ ಮಾದರಿಯಾಗಿದ್ದಾನೆ. ವೈರಲ್ ವಿಡಿಯೋದಲ್ಲಿ ದೈಹಿಕ ನ್ಯೂನತೆ (physical disability) ಮೀರಿ ಶ್ರಮ ವಹಿಸಿ ದುಡಿಯುತ್ತಿದ್ದಾನೆ. ಈ ದೃಶ್ಯವು ಗುಂಡಿಯನ್ನು ಅಗೆಯುತ್ತಿರುವ ಈ ಕೂಲಿ ಕಾರ್ಮಿಕನ ಶ್ರಮವನ್ನು ಎತ್ತಿ ತೋರಿಸಿದೆ. ಈ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ. ಇಂಡಿಯಾ ಬ್ಲಾಕ್ ಬಸ್ಟರ್ (India Blockbuster) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ವಿಕಲಚೇತನ…

Read More

ಹಳ್ಳಿಯ ಹೆಣ್ಣುಮಗಳ ಸಾಧನೆ: ಲಾರ್ಡ್ಸ್​ ಗೌರವ ಫಲಕದಲ್ಲಿ ಕ್ರಾಂತಿ ಗೌಡ್ ಹೆಸರು! – Kannada News | Kranti Gaud’s fast rise: From small village to Lord’s honours board

ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದ ಗೌರವ ಫಲಕದ ಮೇಲೆ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ವೇಗಿಯೊಬ್ಬರ ಹೆಸರು ಚಿನ್ನದ ಅಕ್ಷರಗಳಲ್ಲಿ ಕೆತ್ತಲ್ಪಟ್ಟಿದೆ. ಕೇವಲ 22 ವರ್ಷದ ಕ್ರಾಂತಿ ಗೌಡ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 37 ರನ್‌ಗಳಿಗೆ 5 ವಿಕೆಟ್ ಕಬಳಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬರಿಗಾಲಿನಲ್ಲಿ, ಮರದ ಕೊಂಬೆಯನ್ನೇ ಬ್ಯಾಟ್ ಮಾಡಿಕೊಂಡು ಆಡುತ್ತಿದ್ದ ಹಳ್ಳಿಯ ಹುಡುಗಿ, ಇಂದು ಕ್ರಿಕೆಟ್ ಜಗತ್ತಿನ ಮುಕುಟಪ್ರಾಯ ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೋಮಾಂಚಕ ಕಥೆ ಇಲ್ಲಿದೆ. ಕ್ರಾಂತಿ…

Read More

‘ರಿಚರ್ಡ್ ಆ್ಯಂಟನಿ ನ್ಯೂಕ್ಲಿಯರ್ ಬಾಂಬ್ ತರ ಬರುತ್ತೆ’; ಬಿಗ್ ಅಪ್​​ಡೇಟ್ ಕೊಟ್ಟ ಅಜನೀಶ್ ಲೋಕನಾಥ್ – Kannada News | Richard Antony Will Blast Like a Nuclear Bomb: Ajaneesh Loknath Big Update on Rakshit Shetty Movie

ಸ್ಯಾಂಡಲ್‌ವುಡ್‌ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಿಗ್ ಬಜೆಟ್ ಸಿನಿಮಾ ‘ರಿಚರ್ಡ್​ ಆ್ಯಂಟನಿ’ ಮೇಲೆ ಇಡೀ ಕರುನಾಡಿಗೆ ಭಾರಿ ನಿರೀಕ್ಷೆಯಿದೆ. ಚಿತ್ರ ಘೋಷಣೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಯಾವುದೇ ಪ್ರಮುಖ ಅಪ್​​ಡೇಟ್ ಸಿಗದೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಸಂಗೀತ ನಿರ್ದೇಶಕರಾದ ಬಿ. ಅಜನೀಶ್ ಲೋಕನಾಥ್ (Ajaneesh Lokanath) ‘ರಿಚರ್ಡ್ ಆ್ಯಂಟನಿ’ ಬಗ್ಗೆ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. ಎಲ್ಲರೂ ರೆಡಿ ಇದ್ದೀವಿ, ಶೂಟಿಂಗ್ ಆರಂಭವಾಗಬೇಕಿದೆ ಇತ್ತೀಚೆಗೆ…

Read More

Abbi Falls: ನೀರಿಗಿಳಿಯದಂತೆ ಸೂಚನಾ ಫಲಕ ಇದ್ದರೂ ಡೋಂಟ್ ಕೇರ್, ಅಬ್ಬಿ ಫಾಲ್ಸ್​ನಲ್ಲಿ ಪ್ರವಾಸಿಗರ ಹುಚ್ಚಾಟ – Kannada News | Reels Craze at Abbi Falls: Tourists Risk Lives in Sakleshpur Despite Official Ban

ಹಾಸನ, ಜುಲೈ 14: ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅಬ್ಬಿ ಜಲಪಾತ ತುಂಬಿ ಹರಿಯುತ್ತಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದರೂ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಆತಂಕಕ್ಕೆ ಕಾರಣವಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನ್‌ಬಾಳ್‌ ಬಳಿಯ ಅಬ್ಬಿ ಜಲಪಾತದಲ್ಲಿ ನೀರಿಗಿಳಿಯದಂತೆ ಸೂಚನಾ ಫಲಕಗಳಿದ್ದರೂ, ಪ್ರವಾಸಿಗರು ಅವುಗಳನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ. ಜಲಪಾತದ ನೀರಿಗೆ ಇಳಿದು ಆಟವಾಡುವುದು, ಈಜುವುದು ಸಾಮಾನ್ಯವಾಗಿದೆ. ಯುವಕರು, ಕುಟುಂಬ ಸಮೇತ ಜಲಪಾತದ ಮಧ್ಯದಲ್ಲಿ ನಿಂತು ರೀಲ್ಸ್ ಹಾಗೂ ಫೋಟೋ ತೆಗೆಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಆದರೆ, ಈ ರೀತಿಯ ಹುಚ್ಚಾಟ…

Read More

ಮೇವು ಹಗರಣದಲ್ಲಿ ಲಾಲು ಯಾದವ್‌ಗೆ ರಿಲೀಫ್: ಜಾಮೀನು ರದ್ದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಜಾ – Kannada News | Lalu Yadav Fodder Scam Bail Relief: SC Rejects CBI Plea to Cancel

ನವದೆಹಲಿ, ಜುಲೈ 14: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರಿಗೆ ಸಿಕ್ಕಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ನಿರಾಕರಿಸಿದೆ. ಈ ಹಿಂದೆ ಲಾಲು ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದ್ದ ಆದೇಶದ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. 2019 ರಿಂದ ಜಾರಿಯಲ್ಲಿರುವ…

Read More

ಪವನ್ ಕಲ್ಯಾಣ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡ ಪತ್ನಿ – Kannada News | Pawan Kalyan’s wife shares his health update

ನಟ ಮತ್ತು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇತ್ತೀಚೆಗಷ್ಟೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಉಂಟಾಗಿದ್ದವು. ವೈದ್ಯರು ಅವರ ಬಲ ಭುಜಕ್ಕೆ ಮೂರೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಕಳೆದ ವರ್ಷ ಈ ಬಗ್ಗೆ ಮಾತನಾಡಿದ್ದ ಪವನ್ ಕಲ್ಯಾಣ್, ‘ಇದು ಅಭಿಮಾನಿಗಳು ಪ್ರೀತಿಯೊಂದ ಕೊಟ್ಟ ಗಾಯ’ ಎಂದು ತಮಾಷೆಯಾಗಿ ಹೇಳಿದ್ದರು. ಇದೀಗ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು….

Read More