ಪರಭಾಷೆಯಲ್ಲಿ ಮಿಂಚಿ ತಾಯ್ನಾಡಿನಲ್ಲಿ ಸೋಲುತ್ತಿದ್ದಾರಾ ಸ್ಟಾರ್ ನಟ ಪೃಥ್ವಿರಾಜ್? – Kannada News | Prithviraj Sukumaran: Why His Malayalam Films Are Failing Despite Rajamouli Varanasi Hype
ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಸದ್ಯ ಅವರು ಎಸ್‌ಎಸ್ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ವಂತ ಚಿತ್ರರಂಗದಲ್ಲಿ ಮಾತ್ರ ಅವರ ಮಾರುಕಟ್ಟೆ ಕೊಂಚ ಮಂಕಾದಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾ ‘ಐ, ನೋಬಡಿ’ ಇತ್ತೀಚೆಗಷ್ಟೇ ತೆರೆಕಂಡಿದೆ. ಈ ಚಿತ್ರ ಬೇರೆ ಭಾಷೆಗೂ ಡಬ್ ಆಗಿ ಬಿಡುಗಡೆಯಾಗಿತ್ತು. ಆದರೆ ಡಬ್ ಆದ ಭಾಷೆಗಳಲ್ಲಿ ಸಿನಿಮಾ ಅಟ್ಟರ್ ಫ್ಲಾಪ್ ಹಾದಿಯಲ್ಲಿದೆ. ಮಲಯಾಳಂನಲ್ಲೂ ಕೂಡ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ…