‘ಟಾಕ್ಸಿಕ್’ ಟೀಸರ್​​ನಲ್ಲಿ ಅಷ್ಟು ದೊಡ್ಡ ಎಚ್ಚರಿಕೆ ಕೊಡಲು ಇದೆ ದೊಡ್ಡ ಕಾರಣ – Kannada News | Yash’s Toxic Teaser Has Strict Adult Disclaimer: The Bold Content Reason Behind It

ಯಶ್ ಟಾಕ್ಸಿಕ್ ಸಿನಿಮಾ Image Credit source: Toxic Movie

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಹೊಸ ಟೀಸರ್ ಗಮನ ಸೆಳೆದಿದೆ. ‘ಲೇಡೀಸ್ ಆ್ಯಂಡ್ ಲೇಡಿಸ್’ ಹೆಸರಲ್ಲಿ ಬಿಡುಗಡೆಯಾಗಿದ್ದ ಈ ಟೀಸರ್​ನಲ್ಲಿ ಎಲ್ಲಾ ಹೀರೋಯಿನ್​​ಗಳನ್ನು ಪರಿಚಯಿಸಲಾಗಿದೆ. ಅದರಲ್ಲಿರುವ ವಿಭಿನ್ನ ಡಿಸ್ಕ್ಲೈಮರ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಎಚ್ಚರಿಕೆ ಕೊಡಲು ಕಾರಣವನ್ನು ಫ್ಯಾನ್ಸ್ ಪತ್ತೆ ಹಚ್ಚಿದ್ದಾರೆ.

‘ಲೇಡಿಸ್ ಆ್ಯಂಡ್ ಲೇಡಿಸ್’ ಟೀಸರ್ ಆರಂಭದಲ್ಲಿ ‘ಚಿಕ್ಕ ಮಕ್ಕಳೇ ಇದರಿಂದ ದೂರ ಇರಿ. ಪೋಷಕರೇ, ನಿಮ್ಮ ಮಕ್ಕಳು ಇದರಿಂದ ದೂರವಿರುವುದ್ದಾರೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮುತ್ತಜ್ಜ-ಮುತ್ತಜ್ಜಿಯರೇ ನಿಮ್ಮ ಮೊಮ್ಮಕ್ಕಳು ದೂರ ಇದ್ದಾರಾ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೋಡಿ’ ಎಂದು ಬರೆಯಲಾಗಿದೆ. ಟೀಸರ್ ಸಖತ್ ಬೋಲ್ಡ್ ಆಗಿದೆ ಎಂಬ ಕಾರಣಕ್ಕೆ ಈ ರೀತಿಯ ಡಿಸ್ಕ್ಲೈಮರ್ ಕೊಡಲಾಗಿದೆ. ಇದರ ಜೊತೆಗೆ ವಿವಾದದಿಂದ ತಪ್ಪಿಸಿಕೊಳ್ಳುವ ಒಂದು ಪ್ಲ್ಯಾನ್ ಕೂಡ ಇದರಲ್ಲಿ ಇದೆ.

ಕಾರಣ ಪತ್ತೆ ಹಚ್ಚಿದ ನೆಟ್ಟಿಗರು:

ಯಶ್ ಫ್ಯಾನ್ಸ್ ಹಾಗೂ ಸಿನಿಪ್ರೇಮಿಗಳು ಈ ವಿಲಕ್ಷಣ ಎಚ್ಚರಿಕೆಯ ಹಿಂದಿನ ಅಸಲಿ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ಚಿತ್ರದ ಶೀರ್ಷಿಕೆಯೇ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ) ಎಂದಾಗಿದೆ. ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಹಾಗೂ ಬೋಲ್ಡ್ ಕಂಟೆಂಟ್ ಇರಲಿದ್ದು, ಇದು ಕೇವಲ ವಯಸ್ಕರಿಗೆ ಮಾತ್ರ ಸೀಮಿತವಾಗಿರಲಿದೆ ಎಂಬುದನ್ನು ಚಿತ್ರತಂಡವೇ ನೇರವಾಗಿ ಸೂಚಿಸಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​ನಲ್ಲಿ ಗನ್ ಹಿಡಿದು ಬಂದ ನಟಿ ರುಕ್ಮಿಣಿ ವಸಂತ್

ಹಿಂದಿನ ವಿವಾದಗಳ ಮುನ್ನೆಚ್ಚರಿಕೆ

‘ಟಾಕ್ಸಿಕ್’ ಸಿನಿಮಾದ ಆರಂಭಿಕ ಕಂಟೆಂಟ್ ಬಿಡುಗಡೆಯಾದಾಗ ಅದರಲ್ಲಿನ ಕೆಲವು ತೀವ್ರವಾದ ಬೋಲ್ಡ್ ದೃಶ್ಯಗಳ ವಿರುದ್ಧ ಮಹಿಳಾ ಸಂಘಟನೆಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದವು. ‘ಮೊದಲೇ ಎಚ್ಚರಿಕೆ ಕೊಟ್ಟಿದ್ರೆ ನಾವು ಮಕ್ಕಳ ಎದುರು ಟೀಸರ್ ಓಪನ್ ಮಾಡ್ತಾ ಇರಲಿಲ್ಲ’ ಎಂಬ ಹೇಳಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ಚಿತ್ರತಂಡವು ಮುಂದೆ ಎದುರಾಗಬಹುದಾದ ಯಾವುದೇ ಸೆನ್ಸಾರ್ ಅಥವಾ ಕಾನೂನು ವಿವಾದಗಳಿಂದ ಬಚಾವಾಗಲು ಮೊದಲೇ ಈ ರೀತಿಯ ಸ್ಪಷ್ಟ ಎಚ್ಚರಿಕೆಯನ್ನು ನೀಡಿದೆ ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.

ಬೋಲ್ಡ್ ಡೈಲಾಗ್ ಮತ್ತು ಆ್ಯಕ್ಷನ್

ಹೊಸ ಪ್ರೋಮೋದಲ್ಲಿಯೂ ನಟ ಯಶ್ ಅವರು ನಟಿಯರ ಜೊತೆ ಆ್ಯಕ್ಷನ್ ಹಾಗೂ ರೊಮ್ಯಾನ್ಸ್ ಮಾಡುವ ದೃಶ್ಯ ಇದೆ. ಕೆಲವು ಅತ್ಯಂತ ಬೋಲ್ಡ್ ಇಂಗ್ಲಿಷ್ ಸಂಭಾಷಣೆಗಳು ಇರುವುದರಿಂದ ಮಕ್ಕಳನ್ನು ಇದರಿಂದ ದೂರ ಇಡುವಂತೆ ಕಡಕ್ ಆಗಿ ಹೇಳಲಾಗಿದೆ.

ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ

ಹಲವು ಬಾರಿ ಮುಂದೂಡಲ್ಪಟ್ಟಿದ್ದ ‘ಟಾಕ್ಸಿಕ್’ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಪ್ರಕಟಿಸಿದೆ. ಈ ಹೈ-ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:18 am, Thu, 2 July 26

Source link

ವೈಭವ್​ ಸೂರ್ಯವಂಶಿಯನ್ನು ಮತ್ತೆ ಕಡೆಗಣಿಸಲು ಕಾರಣವೇನು? ಇಲ್ಲಿದೆ ಉತ್ತರ – Kannada News | Why Vaibhav Sooryavanshi Was Ignored For IND vs ENG 1st T20I 

ಐರ್ಲೆಂಡ್ ವಿರುದ್ಧದ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭಿಸಿದೆ. ಈ ಸರಣಿಯ ಮೊದಲ ಮ್ಯಾಚ್​​​ನಲ್ಲಿ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ ಐರ್ಲೆಂಡ್ ವಿರುದ್ಧದ ಸರಣಿಯ ಮ್ಯಾಚ್​ಗಳಲ್ಲಿ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಸಂಪೂರ್ಣ ವಿಫಲರಾಗಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದಾಗ ಹನ್ನೊಂದರ ಬಳಗದಲ್ಲಿ ವೈಭವ್ ಹೆಸರು ಕಾಣಿಸಿಕೊಂಡಿರಲಿಲ್ಲ.

ಇದರ ಬೆನ್ನಲ್ಲೇ  ವೈಭವ್ ಸೂರ್ಯವಂಶಿಯನ್ನು ಟೀಮ್ ಇಂಡಿಯಾದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದ್ದವು. ಅಷ್ಟಕ್ಕೂ ವೈಭವ್​ನನ್ನು ಈ ಮ್ಯಾಚ್​ನಿಂದ ಹೊರಗಿಟ್ಟಿದ್ದೇಕೆ ಎಂದು ನೋಡುವುದಾದರೆ…

ಟಿ20 ವಿಶ್ವಕಪ್ ವಿಜೇತ ಸೂತ್ರಕ್ಕೆ ಮನ್ನಣೆ:

ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್‌ಮೆಂಟ್, ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಗೆದ್ದು ತಂದಿದ್ದ ಕೋರ್ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟ ಹಳೆಯ ಫಾರ್ಮ್ಯುಲಾವನ್ನು ತಕ್ಷಣವೇ ಬದಲಾಯಿಸಲು ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ ಎಂಬುದನ್ನು ಮತ್ತೊಮ್ಮೆ ಸಾರಿದ್ದಾರೆ.

ಆರಂಭಿಕ ಆಟಗಾರರ ಮೇಲಿನ ನಂಬಿಕೆ:

ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾದರೆ ಸದ್ಯದ ಆರಂಭಿಕ ಜೋಡಿಯಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಲ್ಲಿ ಒಬ್ಬರನ್ನು ಕೈಬಿಡಬೇಕಾಗುತ್ತಿತ್ತು. ಐರ್ಲೆಂಡ್ ಪ್ರವಾಸದಲ್ಲಿ ಇಬ್ಬರೂ ಆರಂಭಿಕರು ವೈಫಲ್ಯ ಅನುಭವಿಸಿದ್ದರೂ (ಸಂಜು 5, 0 ಮತ್ತು ಅಭಿಷೇಕ್ 49, 0), ಆಟಗಾರರಿಗೆ ಸುರಕ್ಷತೆ ಮತ್ತು ಅವರ ಜವಾಬ್ದಾರಿಯ ಸ್ಪಷ್ಟತೆ ನೀಡುವ ಸಲುವಾಗಿ ಮ್ಯಾನೇಜ್‌ಮೆಂಟ್ ಅವರಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿತು.

ಯುವ ಆಟಗಾರನ ಮೇಲಿನ ಒತ್ತಡ ನಿರ್ವಹಣೆ:

ವೈಭವ್ ಸೂರ್ಯವಂಶಿ ಅವರಿಗೆ ಸದ್ಯ ಕೇವಲ 15 ವರ್ಷ. ಅವರ ಸುತ್ತ ಮಾಧ್ಯಮಗಳು ಮತ್ತು ಅಭಿಮಾನಿಗಳು ಸೃಷ್ಟಿಸಿರುವ ಭಾರಿ ನಿರೀಕ್ಷೆಯ ಒತ್ತಡವನ್ನು ನಾಯಕ ಶ್ರೇಯಸ್ ಅಯ್ಯರ್ ಪಂದ್ಯದ ಹಿಂದಿನ ದಿನವೇ ತಳ್ಳಿಹಾಕಿದ್ದರು. ಇಂಗ್ಲೆಂಡ್‌ನ ಕಠಿಣ ಪಿಚ್‌ಗಳಲ್ಲಿ ಅನುಭವೀ ಬೌಲರ್‌ಗಳ ಎದುರು ಈ ಹಂತದಲ್ಲೇ ಅವರನ್ನು ಕಣಕ್ಕಿಳಿಸಿದರೆ, ಅದು ಯುವ ಆಟಗಾರನ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವ ದಾಂಡಿಗನನ್ನು ಆಡುವ ಬಳಗದಿಂದ​ ಹೊರಗಿಟ್ಟಿದ್ದಾರೆ ಎನ್ನಬಹುದು.

ಬೌಲಿಂಗ್ ಸಮತೋಲನದ ತಂತ್ರ:

ಮೊದಲ ಪಂದ್ಯದಲ್ಲಿ ಭಾರತ ತಂಡವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮೂವರು ಪ್ರಮುಖ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಕಣಕ್ಕಿಳಿಸಿತು. ಈ ಬೌಲಿಂಗ್ ಆಧಾರಿತ ತಂತ್ರದ ಕಾರಣದಿಂದಾಗಿ, ಹೆಚ್ಚುವರಿ ಬ್ಯಾಟರ್ ಒಬ್ಬರನ್ನು ಮೇಲಿನ ಕ್ರಮಾಂಕದಲ್ಲಿ ಸೇರಿಸಲು ತಂಡದಲ್ಲಿ ಜಾಗವಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ವೈಭವ್ ಸೂರ್ಯವಂಶಿಯನ್ನು ಮೊದಲ ಮ್ಯಾಚ್​ನಿಂದ ಕೈ ಬಿಡಲಾಗಿದೆ.

ಇದನ್ನೂ ಓದಿ: IND vs ENG: ಮೊದಲ ಮ್ಯಾಚ್​ನಲ್ಲೇ 5 ಭರ್ಜರಿ ದಾಖಲೆಗಳು ನಿರ್ಮಾಣ!

ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಲಿದೆಯೇ?

5 ಪಂದ್ಯಗಳ ಈ ಸರಣಿಯಲ್ಲಿ ಇನ್ನು 4 ಪಂದ್ಯಗಳು ಬಾಕಿ ಉಳಿದಿವೆ. ಭಾರತ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೊಶ್ಚೇಟ್ ಅವರು ವೈಭವ್ ಸೂರ್ಯವಂಶಿ ಆಡಲು ಸಂಪೂರ್ಣ “ರೆಡಿ” ಇದ್ದಾರೆ ಎಂದು ಖಚಿತಪಡಿಸಿರುವುದರಿಂದ, ಸರಣಿಯ ಮುಂದಿನ ಪಂದ್ಯಗಳ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಅದು 2ನೇ ಪಂದ್ಯ ಆಗಿರಬಹುದು, ಇಲ್ಲಾ 3ನೇ ಅಥವಾ 4ನೇ ಮ್ಯಾಚ್ ಆಗಿರಬಹುದು. ಹೀಗಾಗಿ ವೈಭವ್ ಸೂರ್ಯವಂಶಿಯ ಎಂಟ್ರಿಗೆ ಕೆಲ ದಿನಗಳವರೆಗೆ ಕಾಯಲೇಬೇಕಾಗುತ್ತದೆ.

Source link

ಅರಬ್ಬಿ ಸಮುದ್ರದಲ್ಲಿ ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಓರ್ವ ಸಿಬ್ಬಂದಿ ನಾಪತ್ತೆ – Kannada News | US Military Helicopter Emergency Lands in Arabian Sea, Crew Member Missing

ಮನಾಮ, ಜುಲೈ 02: ಮಧ್ಯಪ್ರಾಚ್ಯದಲ್ಲಿ ಇರಾನ್(Iran) ಜೊತೆಗಿನ ಉದ್ವಿಗ್ನತೆಯ ಮಧ್ಯೆಯೇ ಅರಬ್ಬಿ ಸಮುದ್ರದಲ್ಲಿ ಅಮೆರಿಕ ನೌಕಾಪಡೆಗೆ (US Navy) ಸೇರಿದ ಯುದ್ಧ ಹೆಲಿಕಾಪ್ಟರ್ ಒಂದು ತುರ್ತು ಪರಿಸ್ಥಿತಿಯಿಂದಾಗಿ ಸಮುದ್ರದ ನೀರಿನ ಮೇಲೆಯೇ ಲ್ಯಾಂಡಿಂಗ್ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳ ಪೈಕಿ ಮೂವರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಮತ್ತೊಬ್ಬ ಸಿಬ್ಬಂದಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಅಮೆರಿಕದನೌಕಾಪಡೆ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮುಂಜಾನೆ 3.30 ರ ಸುಮಾರಿಗೆ ಸಂಭವಿಸಿದೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್ ಅನ್ನು ‘MH-60S ಸೀ ಹಾಕ್’ (Sea Hawk) ಎಂದು ಗುರುತಿಸಲಾಗಿದೆ. ಇದು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ದೈತ್ಯ ವಿಮಾನವಾಹಕ ಯುದ್ಧ ನೌಕೆ ‘ಯುಎಸ್ಎಸ್ ಜಾರ್ಜ್ ಎಚ್​​ಚ್‌ಡಬ್ಲ್ಯೂ ಬುಷ್’ ಗೆ ಸೇರಿದ್ದಾಗಿದೆ.

ನೀರಿನ ಮೇಲೆ ತುರ್ತು ಭೂಸ್ಪರ್ಶ ಮಾಡಿದ ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಸಿಬ್ಬಂದಿಗಳನ್ನು ರಕ್ಷಿಸಿ ಯುದ್ಧ ನೌಕೆಗೆ ಕರೆತರಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ನಾಲ್ಕನೇ ಸಿಬ್ಬಂದಿಯ ಪತ್ತೆಗಾಗಿ ಅಮೆರಿಕ ನೌಕಾಪಡೆಯ ಹಡಗುಗಳು ಮತ್ತು ವಿಮಾನಗಳು ಸಮುದ್ರದಾದ್ಯಂತ ತೀವ್ರ ಹುಡುಕಾಟ ನಡೆಸುತ್ತಿವೆ.

ಮತ್ತಷ್ಟು ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ

ಪ್ರಸ್ತುತ ಮಧ್ಯಪ್ರಾಚ್ಯ ಮತ್ತು ಕೊಲ್ಲಿ ವಲಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧದ ವಾತಾವರಣ ಇರುವುದರಿಂದ ಈ ಹೆಲಿಕಾಪ್ಟರ್ ಮೇಲೆ ಶತ್ರು ದೇಶಗಳು ದಾಳಿ ಮಾಡಿವೆಯೇ ಎಂಬ ಅನುಮಾನ ಮೂಡಿತ್ತು. ಆದರೆ, ಈ ತುರ್ತು ಭೂಸ್ಪರ್ಶಕ್ಕೆ ಯಾವುದೇ ಶತ್ರು ಪಡೆಗಳ ‘ಪ್ರತಿಕೂಲ ಕ್ರಮ’ ಅಥವಾ ದಾಳಿ ಕಾರಣವಲ್ಲ ಎಂದು ಅಮೆರಿಕದ ನೌಕಾಪಡೆ ಸ್ಪಷ್ಟಪಡಿಸಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ಪ್ರಗತಿಯಲ್ಲಿದೆ.

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಬೃಹತ್ ಸೈನಿಕ ಜಮಾವಣೆ
ಅಮೆರಿಕದ ಈ ಬೃಹತ್ ‘ಯುಎಸ್ಎಸ್ ಜಾರ್ಜ್ ಬುಷ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್’ ಮಾರ್ಚ್ 31 ರಂದು ಅಮೆರಿಕದಿಂದ ಹೊರಟು, ಆಫ್ರಿಕಾ ಖಂಡವನ್ನು ಸುತ್ತಿದ್ದೂ ಏಪ್ರಿಲ್ 23 ರ ಹೊತ್ತಿಗೆ ಮಧ್ಯಪ್ರಾಚ್ಯದ ಸಮುದ್ರ ವಲಯವನ್ನು ಪ್ರವೇಶಿಸಿತ್ತು. ಇರಾನ್ ಜೊತೆಗಿನ ಇತ್ತೀಚಿನ ಸಂಘರ್ಷಗಳ ಹಿನ್ನೆಲೆಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಅಮೆರಿಕದ ಹಡಗುಗಳ ಸುರಕ್ಷತೆ ಮತ್ತು ಕಡಲ ಭದ್ರತೆಯ ಉಸ್ತುವಾರಿಯನ್ನು ಈ ಪಡೆ ನೋಡಿಕೊಳ್ಳುತ್ತಿದೆ.

ಅಪಘಾತಕ್ಕೀಡಾದ ‘MH-60S ಸೀ ಹಾಕ್’ ಹೆಲಿಕಾಪ್ಟರ್ ಅನ್ನು ಸಾಮಾನ್ಯವಾಗಿ ಮಿಲಿಟರಿ ಲಾಜಿಸ್ಟಿಕ್ಸ್ ಬೆಂಬಲ, ಶತ್ರು ಹಡಗುಗಳ ಮೇಲಿನ ನಿಗಾ ಮತ್ತು ಇಂತಹ ತುರ್ತು ‘ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ’ (Search and Rescue) ಬಳಸಲಾಗುತ್ತದೆ. ಸದ್ಯ ನಾಪತ್ತೆಯಾಗಿರುವ ಸೈನಿಕನನ್ನು ಜೀವಂತವಾಗಿ ಹೊರತರಲು ಅಮೆರಿಕ ಪಡೆಗಳು ಸಮಯದ ವಿರುದ್ಧ ಓಟ ನಡೆಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಉಡುಪಿ: ಮಳೆಗಾಲ ಬಂದ್ರೆ ಕಡ್ಕೆ ಗ್ರಾಮಸ್ಥರಿಗೆ ‘ಜೀವಭಯ’; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜನ – Kannada News | Kadke Village Neglect: Byndoor Faces Monsoon Connectivity Crisis, Students Risk Lives

ಬೈಂದೂರು ಜು.2: ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗುತ್ತಿದ್ದಂತೆ ಗ್ರಾಮೀಣ ಭಾಗದ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ಬೈಂದೂರು ಸಮೀಪದ ಯಡ್ತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ಕೆ ಗ್ರಾಮದ ನಿವಾಸಿಗಳು ದಶಕಗಳಿಂದ ಮೂಲಸೌಕರ್ಯ ವಂಚಿತರಾಗಿ, ಪ್ರತಿ ವರ್ಷದ ಮಳೆಗಾಲದಲ್ಲೂ ಜೀವದ ಹಂಗು ತೊರೆದು ಸಂಚರಿಸುವ ಭೀಕರ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತೀವ್ರ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಈಗ ಅಕ್ರೋಶ ಹೊರಹಾಕಿದ್ದಾರೆ.

ಕಡ್ಕೆ ಗ್ರಾಮದಲ್ಲಿ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿ ಪರಿಶಿಷ್ಟ ಪಂಗಡದ (ST) ‘ಗೋಂಡ’ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ, ಕೂಲಿ ಕೆಲಸ ಹಾಗೂ ಅರಣ್ಯ ಉತ್ಪನ್ನಗಳನ್ನೇ ನಂಬಿ ಜೀವನ ನಡೆಸುತ್ತಿರುವ ಈ ಜನರಿಗೆ ಮಳೆಗಾಲ ಒಂದು ಶಾಪವಾಗಿ ಪರಿಣಮಿಸಿದೆ. ಕಡ್ಕೆ ಗ್ರಾಮದಿಂದ ಊದೂರು, ಓಮ್ಮಣಮಕ್ಕಿ, ಕರ್ನಗದ್ದೆ ಸೇರಿದಂತೆ ಸುತ್ತಮುತ್ತಲಿನ ಊರುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮಧ್ಯೆಯೇ ದೊಡ್ಡ ತೊರೆ (ಹೊಳೆ) ಹರಿಯುತ್ತದೆ. ಮಳೆ ಜೋರಾದಾಗ ಈ ಹೊಳೆ ಉಕ್ಕಿ ಹರಿದು ರಸ್ತೆ ಸಂಪೂರ್ಣ ಜಲಾವೃತಗೊಳ್ಳುವುದರಿಂದ ಇಡೀ ಗ್ರಾಮವೇ ಸಂಪರ್ಕ ಕಳೆದುಕೊಳ್ಳುತ್ತದೆ.

ಗ್ರಾಮಸ್ಥರು ಪ್ರತಿವರ್ಷ ತಮ್ಮದೇ ಸ್ವಂತ ಶ್ರಮ ಹಾಗೂ ಖರ್ಚಿನಲ್ಲಿ ಮರದ ತಾತ್ಕಾಲಿಕ ಕಾಲುಸಂಕವನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ, ಭಾರಿ ಮಳೆಯ ರಭಸಕ್ಕೆ ಈ ಮರದ ಸಂಕಗಳು ಕೆಲವೇ ದಿನಗಳಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತವೆ. ಆ ಬಳಿಕ ಗ್ರಾಮಸ್ಥರು ಹಲವು ಕಿಲೋಮೀಟರ್ ದೂರದ ಮತ್ತೊಂದು ಕಿರಿದಾದ, ಅಪಾಯಕಾರಿ ಕಾಲುಸಂಕವನ್ನು ನಿರ್ಮಾಣ ಮಾಡಬೇಕಾಗುತ್ತದೆ.

ಕಡ್ಕೆ ಭಾಗದ ನೂರಾರು ವಿದ್ಯಾರ್ಥಿಗಳು ಬೈಂದೂರು, ಶಿರೂರು ಹಾಗೂ ಕುಂದಾಪುರದ ಶಾಲೆ-ಕಾಲೇಜುಗಳಿಗೆ ಈ ಸಂಕದ ಮೇಲೆಯಿಂದಲ್ಲೇ ತೆರಳುತ್ತಿದ್ದು, ಪ್ರತಿದಿನ ಎರಡು ಕಿಲೋಮೀಟರ್ ಹೆಚ್ಚುವರಿ ನಡೆದು, ಜೀವ ಕೈಯಲ್ಲಿ ಹಿಡಿದುಕೊಂಡು ಈ ಕಿರಿದಾದ ಸಂಕ ದಾಟಬೇಕಿದೆ. ಒಂದು ವೇಳೆ ಕಾಲು ಜಾರಿದರೂ ಉಕ್ಕಿ ಹರಿಯುವ ಹೊಳೆ ಪಾಲಾಗುವ ಭೀತಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರನ್ನು ಕಾಡುತ್ತಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಥವಾ ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಬೇಕಾದ ಸಂದರ್ಭದಲ್ಲಂತೂ ಪರಿಸ್ಥಿತಿ ತೀರಾ ಗಂಭೀರವಾಗುತ್ತದೆ.

ಇದನ್ನೂ ಓದಿ: ಮಾಲೀಕರು ಸ್ಪಂದಿಸ್ತಿಲ್ಲ, ಹಳೇ ದಾಖಲೆ ಸಿಗ್ತಿಲ್ಲ; ಉಚಿತ ಕರೆಂಟ್ ಕೈತಪ್ಪುವ ಭೀತಿಯಲ್ಲಿ ಬೆಂಗಳೂರು ಬಾಡಿಗೆದಾರರು

ಚುನಾವಣೆ ಮುಗಿದರೆ ಭರವಸೆ ಮರೆತುಹೋಗುತ್ತೆ

ಪ್ರತಿ ಚುನಾವಣೆ ಬಂದಾಗಲೂ ರಾಜಕಾರಣಿಗಳು ಗ್ರಾಮಕ್ಕೆ ಬಂದು ಸೇತುವೆ ಕಟ್ಟಿಸಿಕೊಡುವುದಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ. ಆದರೆ ಗೆದ್ದ ಮೇಲೆ ಸಮಸ್ಯೆ ಕಡೆ ಗಮನ ನೀಡುವುದಿಲ್ಲ. ಕಳೆದ 20 ವರ್ಷಗಳಿಂದ ನಮ್ಮ ಪರಿಸ್ಥಿತಿ ಹೀಗೆಯೇ ಇದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸಿ ಇಲ್ಲಿ ಸಣ್ಣ ಸೇತುವೆ ಅಥವಾ ಶಾಶ್ವತ ಸುರಕ್ಷಿತ ಕಾಲುಸಂಕ ನಿರ್ಮಿಸಬೇಕು,” ಎಂದು ಸ್ಥಳೀಯ ನಿವಾಸಿ ಯೋಗೀಶ ಶೆಟ್ಟಿ ಒತ್ತಾಯಿಸಿದ್ದಾರೆ. ಯಾವುದೇ ದೊಡ್ಡ ಅನಾಹುತ ಅಥವಾ ಪ್ರಾಣಹಾನಿ ಸಂಭವಿಸುವ ಮುನ್ನವೇ ಉಡುಪಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು, ಕಡ್ಕೆ ಗ್ರಾಮಸ್ಥರ ಈ ನ್ಯಾಯಸಮ್ಮತ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕಿದೆ ಎಂದು ಸ್ಥಳೀಯರ ಒತ್ತಾಯವಾಗಿದೆ.

ರಾಜ್ಯದ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ – Kannada News | India Demands 188 Indian Prisoner Release From Pakistan After List Exchange

ನವದೆಹಲಿ, ಜುಲೈ 02: ಭಾರತ ಮತ್ತು ಪಾಕಿಸ್ತಾನ(Pakistan) ದೇಶಗಳು ಏಕಕಾಲಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ತಮ್ಮ ವಶದಲ್ಲಿರುವ ಕೈದಿಗಳು ಮತ್ತು ಮೀನುಗಾರರ ಅಧಿಕೃತ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ. ಈ ಬೆನ್ನಲ್ಲೇ, ಪಾಕಿಸ್ತಾನದ ಜೈಲುಗಳಲ್ಲಿ ಈಗಾಗಲೇ ತಮ್ಮ ಶಿಕ್ಷಾ ಅವಧಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿರುವ 188 ಭಾರತೀಯ ಮೀನುಗಾರರು ಮತ್ತು ನಾಗರಿಕ ಕೈದಿಗಳನ್ನು ತಕ್ಷಣವೇ ಬಿಡುಗಡೆ ಮಾಡಿ ತಾಯ್ನಾಡಿಗೆ ವಾಪಸ್ ಕಳುಹಿಸುವಂತೆ ಭಾರತ ಸರ್ಕಾರ ಪಾಕಿಸ್ತಾನವನ್ನು ಬಲವಾಗಿ ಒತ್ತಾಯಿಸಿದೆ.

ಪ್ರತಿ ವರ್ಷ ಜುಲೈ 1 ರಂದು ನಡೆಯುವ ಒಪ್ಪಂದ ಪ್ರಕ್ರಿಯೆ
ಉಭಯ ದೇಶಗಳ ನಡುವೆ 2008 ರಲ್ಲಿ ಸಹಿ ಹಾಕಲಾದ ‘ಕಾನ್ಸುಲರ್ ಪ್ರವೇಶ ಒಪ್ಪಂದ’ದ (Agreement on Consular Access) ಅಡಿಯಲ್ಲಿ, ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1 ರಂದು ಇಂತಹ ಪಟ್ಟಿಗಳನ್ನು ಕಡ್ಡಾಯವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಈ ಬಾರಿ ವಿನಿಮಯ ಮಾಡಲಾದ ಪಟ್ಟಿಯ ವಿವರ ಹೀಗಿದೆ.

ಭಾರತ ಜೈಲಿನಲ್ಲಿರುವ 386 ಪಾಕಿಸ್ತಾನಿ ಕೈದಿಗಳು ಮತ್ತು 53ಜನ ಮೀನುಗಾರರು, ಪಾಕಿಸ್ತಾನ ಜೈಲಿನಲ್ಲಿರುವ 52 ಮಂದಿ ಕೈದಿಗಳು ಮತ್ತು 198 ಮಂದಿ ಮೀನುಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂಬ ಒಪ್ಪಂದ ನಡೆಯಿತು.

ಪಾಕಿಸ್ತಾನದ ವಶದಲ್ಲಿರುವ, ಭಾರತೀಯರೆಂದು ನಂಬಲಾದ 13 ನಾಗರಿಕ ಕೈದಿಗಳಿಗೆ ಇದುವರೆಗೆ ಯಾವುದೇ ರಾಜತಾಂತ್ರಿಕ ಸಂಪರ್ಕ ಸಿಕ್ಕಿಲ್ಲ. ಅವರಿಗೆ ತಕ್ಷಣವೇ ಕಾನ್ಸುಲರ್ ಪ್ರವೇಶ ಕಲ್ಪಿಸಬೇಕು. ಪಾಕ್ ಜೈಲುಗಳಲ್ಲಿ ಬಂಧನದಲ್ಲಿರುವ ಮತ್ತು ಬಿಡುಗಡೆಗೆ ಬಾಕಿ ಇರುವ ಎಲ್ಲಾ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸುವುದು ಇಸ್ಲಾಮಾಬಾದ್‌ನ ಜವಾಬ್ದಾರಿಯಾಗಿದೆ.

ಮತ್ತಷ್ಟು ಓದಿ: ಪಾಕ್-ಅಫ್ಘಾನ್ ಗಡಿಯಲ್ಲಿ ಭೀಕರ ಸೇನಾ ದಾಳಿ, ಉದ್ವಿಗ್ನತೆ: 35 ನಾಗರಿಕರ ಸಾವು

ಮೀನುಗಾರರ ದೋಣಿಗಳು ಹಾಗೂ ಈ ಹಿಂದೆ ಗಡಿಯಲ್ಲಿ ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಿಡುಗಡೆ ಮಾಡಬೇಕು. ಭಾರತ ಸರ್ಕಾರದ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ, 2014 ರಿಂದ ಈವರೆಗೆ ಪಾಕಿಸ್ತಾನದ ಜೈಲುಗಳಿಂದ ಬರೋಬ್ಬರಿ 2,661 ಭಾರತೀಯ ಮೀನುಗಾರರನ್ನು ಮತ್ತು 78 ಭಾರತೀಯ ನಾಗರಿಕ ಕೈದಿಗಳನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿ ಕರೆತರಲಾಗಿದೆ.

ಇದರಲ್ಲಿ 2023 ರಿಂದ ಇತ್ತೀಚಿನವರೆಗಿನ ಅವಧಿಯಲ್ಲೇ ವಾಪಸ್ ಬಂದ 500 ಮೀನುಗಾರರು ಹಾಗೂ 20 ನಾಗರಿಕ ಕೈದಿಗಳು ಸೇರಿದ್ದಾರೆ. ಸದ್ಯ ಜೈಲಿನಲ್ಲಿ ಉಳಿದಿರುವವರನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆತರಲು ವಿದೇಶಾಂಗ ಇಲಾಖೆ ಕಾರ್ಯೋನ್ಮುಖವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs ENG: ಮೊದಲ ಮ್ಯಾಚ್​ನಲ್ಲೇ 5 ಭರ್ಜರಿ ದಾಖಲೆಗಳು ನಿರ್ಮಾಣ!

Source link

Venus-Ketu Conjunction: ಜುಲೈ 4 ರಿಂದ ಶುಕ್ರ-ಕೇತು ಯುತಿ; ಈ 4 ರಾಶಿಯವರಿಗೆ ಅದೃಷ್ಟ, ಹಠಾತ್ ಧನಲಾಭ – Kannada News | July 4, 2026: Venus Ketu Conjunction in Leo Brings Golden Time for 4 Zodiacs

ಜುಲೈ 4 ರಿಂದ ಶುಕ್ರ-ಕೇತು ಯುತಿImage Credit source: Getty Images

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಸಂತೋಷ, ಸಮೃದ್ಧಿ, ಪ್ರೀತಿ, ಸೌಂದರ್ಯ, ಕಲೆ ಮತ್ತು ಭೌತಿಕ ಸುಖ-ಸೌಕರ್ಯಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ನಡೆ ಅಥವಾ ರಾಶಿ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಆದರೆ, ಜುಲೈ 4, 2026 ರ ದಿನವು ಅತ್ಯಂತ ವಿಶೇಷವಾಗಿದ್ದು, ಅಂದು ಬಾಹ್ಯಾಕಾಶದಲ್ಲಿ ಒಂದು ಅಪರೂಪದ ವಿದ್ಯಮಾನ ನಡೆಯಲಿದೆ. ಈ ದಿನ ಶುಕ್ರನು ಏಕಕಾಲದಲ್ಲಿ ತನ್ನ ರಾಶಿ ಮತ್ತು ನಕ್ಷತ್ರ ಎರಡನ್ನೂ ಬದಲಾಯಿಸಲಿದ್ದು, ಕೇತು ಗ್ರಹದೊಂದಿಗೆ ವಿಶಿಷ್ಟವಾದ ಸಂಯೋಗವನ್ನು ರೂಪಿಸಲಿದ್ದಾನೆ.

ಸಿಂಹ ರಾಶಿಯಲ್ಲಿ ಗ್ರಹಗಳ ಅಪರೂಪದ ಕಾಕತಾಳೀಯ:

ಪಂಚಾಂಗದ ಪ್ರಕಾರ, ಜುಲೈ 4 ರಂದು ಶುಕ್ರನು ಕರ್ಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಸಿಂಹ ರಾಶಿಯಲ್ಲಿ ಈಗಾಗಲೇ ಕೇತು ನೆಲೆಸಿರುವುದರಿಂದ, ಅಲ್ಲಿ ಶುಕ್ರ ಮತ್ತು ಕೇತುಗಳ ವಿಶಿಷ್ಟ ಸಂಯೋಗ ಉಂಟಾಗಲಿದೆ. ಇದರೊಂದಿಗೆ, ಶುಕ್ರನು ಆಶ್ಲೇಷ ನಕ್ಷತ್ರದಿಂದ ಹೊರಟು ಮಘಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಮಘಾ ನಕ್ಷತ್ರದ ಅಧಿಪತಿ ಸ್ವತಃ ಕೇತು ಆಗಿರುವುದರಿಂದ, ಶುಕ್ರನು ಸಂಪೂರ್ಣವಾಗಿ ಕೇತುವಿನ ಪ್ರಭಾವಕ್ಕೆ ಒಳಗಾಗಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಈ ಯುತಿಯು ವ್ಯಕ್ತಿಯ ಜೀವನದಲ್ಲಿ ಹಠಾತ್ ಬದಲಾವಣೆ, ಹೊಸ ಆಲೋಚನೆ, ಸಾಮಾಜಿಕ ಗೌರವ ಮತ್ತು ಆರ್ಥಿಕ ಪ್ರಗತಿಯನ್ನು ತರುತ್ತದೆ. ಅದರಲ್ಲೂ ಈ 4 ರಾಶಿಯವರಿಗೆ ಈ ಸಮಯವು ಗೋಲ್ಡನ್ ಟೈಮ್ ಆಗಿರಲಿದೆ:

ಮೇಷ ರಾಶಿ (Aries):

ಮೇಷ ರಾಶಿಯ ಜನರಿಗೆ ಈ ಗೋಚರವು ಅನೇಕ ಸುವರ್ಣ ಅವಕಾಶಗಳನ್ನು ತರಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ (Promotion) ಸಿಗುವ ಯೋಗವಿದೆ. ಉದ್ಯಮಿಗಳಿಗೆ ಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಪ್ರೇಮ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಲಿವೆ. ಹಠಾತ್ ಧನಲಾಭದ ಸಾಧ್ಯತೆಯೂ ದಟ್ಟವಾಗಿದೆ.

ಮಿಥುನ ರಾಶಿ (Gemini):

ಮಿಥುನ ರಾಶಿಯವರಲ್ಲಿ ಈ ಅವಧಿಯು ಆತ್ಮವಿಶ್ವಾಸ ಮತ್ತು ಯಶಸ್ಸನ್ನು ದುಪ್ಪಟ್ಟು ಮಾಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಗೌರವ ಹಾಗೂ ಮೆಚ್ಚುಗೆ ಲಭಿಸಲಿದೆ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಅತ್ಯಂತ ಸೂಕ್ತ ಸಮಯ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಳೆಯ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬದವರೊಂದಿಗೆ ಸಂತೋಷದ ಸಮಯ ಕಳೆಯುವಿರಿ.

ಇದನ್ನೂ ಓದಿ: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ!

ತುಲಾ ರಾಶಿ (Libra):

ತುಲಾ ರಾಶಿಯ ಅಧಿಪತಿಯೇ ಶುಕ್ರನಾಗಿರುವುದರಿಂದ, ಈ ಸಂಚಾರವು ನಿಮ್ಮ ಮೇಲೆ ವಿಶೇಷವಾದ ಸಕಾರಾತ್ಮಕ ಪ್ರಭಾವ ಬೀರಲಿದೆ. ವೃತ್ತಿಜೀವನದಲ್ಲಿ ಅದ್ಭುತ ಪ್ರಗತಿ ಕಂಡುಬರಲಿದ್ದು, ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಉತ್ತಮ ಆಫರ್ ಸಿಗಲಿದೆ. ಉದ್ಯಮಿಗಳು ಹೊಸ ಗ್ರಾಹಕರನ್ನು ಆಕರ್ಷಿಸುವ ಮೂಲಕ ಭರ್ಜರಿ ಲಾಭ ಗಳಿಸಲಿದ್ದಾರೆ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚಾಗಲಿದ್ದು, ಸ್ನೇಹಿತರಿಂದ ಪೂರ್ಣ ಬೆಂಬಲ ಸಿಗಲಿದೆ.

ಧನು ರಾಶಿ (Sagittarius):

ಧನು ರಾಶಿಯವರಿಗೆ ಈ ಅವಧಿಯು ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶಗಳು ಸಿಗಲಿವೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಮುಗಿಯಲಿವೆ. ಈ ಸಮಯದಲ್ಲಿ ನೀವು ಕೈಗೊಳ್ಳುವ ಪ್ರಯಾಣಗಳು ಭವಿಷ್ಯದಲ್ಲಿ ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನಗಳನ್ನು ತಂದುಕೊಡಲಿವೆ. ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರಲಿದೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಲೀಕರು ಸ್ಪಂದಿಸ್ತಿಲ್ಲ, ಹಳೇ ದಾಖಲೆ ಸಿಗ್ತಿಲ್ಲ; ಉಚಿತ ಕರೆಂಟ್ ಕೈತಪ್ಪುವ ಭೀತಿಯಲ್ಲಿ ಬೆಂಗಳೂರು ಬಾಡಿಗೆದಾರರು – Kannada News | Karnataka Gruha Jyothi Scheme: Bangalore Residents’ Free Power Eligibility Woes

ಬೆಂಗಳೂರು ಜು. 2: ರಾಜ್ಯ ಸರ್ಕಾರದ ಉಚಿತ ವಿದ್ಯುತ್ ನೀಡುವ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸುವ (Reverification) ಮನೆ ಮನೆ ಸಮೀಕ್ಷೆ ಪ್ರಕ್ರಿಯೆಯನ್ನು ಇಲಾಖೆಯು ಬುಧವಾರದಿಂದ ಅಧಿಕೃತವಾಗಿ ಆರಂಭಿಸಿದೆ. ಆದರೆ, ಇಲಾಖೆಯ ಈ ಹಠಾತ್ ಕ್ರಮವು ರಾಜಧಾನಿ ಬೆಂಗಳೂರಿನ ಸಾವಿರಾರು ಬಾಡಿಗೆದಾರರಲ್ಲಿ ತೀವ್ರ ಆತಂಕ ಹಾಗೂ ಗೊಂದಲವನ್ನು ಮೂಡಿಸಿದೆ. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸುತ್ತಿರುವ ಈ ಮನೆ ಮನೆ ತಪಾಸಣೆಯ ಸಂದರ್ಭದಲ್ಲಿ, ಪ್ರಸ್ತುತ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಗುರುತಿನ ಚೀಟಿ (Voter ID), ಆಧಾರ ದಾಖಲೆ ಹಾಗೂ ಮನೆಗೆ ಸಂಬಂಧಿಸಿದ ಇತರ ಪೂರಕ ಪತ್ರಗಳನ್ನು ಕಡ್ಡಾಯವಾಗಿ ಹಾಜರುಪಡಿಸುವಂತೆ ಕೇಳುತ್ತಿದ್ದಾರೆ. ಜುಲೈ 2023 ರ ನಂತರ ಹೊಸದಾಗಿ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿರುವ ಗ್ರಾಹಕರಲ್ಲಿ ಈ ನಿಯಮವು ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ.

ಅನೇಕ ಬಾಡಿಗೆದಾರರು ತಮಗಿಂತ ಮುಂಚೆ ಆ ಮನೆಯಲ್ಲಿದ್ದ ಹಳೆಯ ಫಲಾನುಭವಿಗಳ ಹೆಸರಿನಲ್ಲೇ ಗೃಹಜ್ಯೋತಿ ಸೌಲಭ್ಯ ಮುಂದುವರಿಯುತ್ತಿರುವುದನ್ನು ಬಳಸಿಕೊಳ್ಳುತ್ತಿದ್ದರು. “ನಾವು ಈ ಬಗ್ಗೆ ಮಾಲೀಕರ (Landlord) ಸಹಾಯ ಕೇಳಿದರೂ ಅವರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಈಗ ಅಧಿಕಾರಿಗಳು ಮರುಪರಿಶೀಲನೆಗೆ ಬಂದಾಗ ಹಳೆಯ ಫಲಾನುಭವಿಗಳ ಮೂಲ ದಾಖಲೆಗಳನ್ನು ಒದಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ತಾಂತ್ರಿಕ ಕಾರಣದಿಂದಾಗಿ ನಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಕಡಿತ ಆಗಬಹುದು,” ಎಂದು ಹಲವು ಬಾಡಿಗೆ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಇಂದಿನ ಹವಾಮಾನ: ರಾಜ್ಯಾದ್ಯಂತ ಮುಂದುವರಿದ ಮೋಡ ಕವಿದ ವಾತಾವರಣ; ಉಡುಪಿ, ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್

ಕೇವಲ ಬಾಡಿಗೆದಾರರು ಮಾತ್ರವಲ್ಲದೆ, ಸ್ವಂತ ಮನೆ ಹೊಂದಿರುವ ಕೆಲವು ಕುಟುಂಬಗಳೂ ಸಹ ಈ ಸಮೀಕ್ಷೆಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಲಹಂಕದ ನಿವಾಸಿಯೊಬ್ಬರು ಮಾತನಾಡಿ, “ನಾನು ನನ್ನ ಪತ್ನಿಯ ಹೆಸರಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೆ, ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ಅವರು ನಿಧನರಾಗಿದ್ದಾರೆ. ಈಗ ಆ ಖಾತೆಯನ್ನು ನನ್ನ ಹೆಸರಿಗೆ ಲಿಂಕ್ ಮಾಡಿಸುವುದು ಹೇಗೆ ಮತ್ತು ಸೌಲಭ್ಯ ಮುಂದುವರಿಯುತ್ತದೆಯೇ ಇಲ್ಲವೇ ಎಂಬ ಗೊಂದಲ ನನಗಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ, ಸರ್ಕಾರವು ಕೇವಲ ಅನರ್ಹರನ್ನು ಮತ್ತು ನಿಯಮ ಬಾಹಿರವಾಗಿ ಸೌಲಭ್ಯ ಪಡೆಯುತ್ತಿರುವವರನ್ನು ಪತ್ತೆ ಹಚ್ಚಲು ಈ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದೆಯಾದರೂ, ಸಾರ್ವಜನಿಕ ವಲಯದಲ್ಲಿ ಮಾತ್ರ ತಲ್ಲಣ ಮುಂದುವರಿದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾರರ ಪಟ್ಟಿಯಲ್ಲಿ 2002ರ ದಾಖಲೆ ಸಿಗದಿದ್ದರೆ ಬೇಡ ಆತಂಕ: ಪರ್ಯಾಯ ಮಾರ್ಗ ತಿಳಿಸಿದ ಚುನಾವಣಾ ಆಯೋಗ – Kannada News | No 2002 Voter Record? Don’t Panic: Election Commission Shares Alternative Options for Voter List Revision

ಬೆಂಗಳೂರು, ಜುಲೈ 02: ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ವೇಳೆ ಗಣತಿ ನಮೂನೆ (Enumeration Form) ಭರ್ತಿ ಮಾಡಲು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹಾಗೂ ಪೋಷಕರ ಹೆಸರುಗಳು ಸಿಗುತ್ತಿಲ್ಲ ಎಂದು ಕರ್ನಾಟಕದ ಹಲವಾರು ಮತದಾರರು ದೂರು ನೀಡಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಸ್ಪಷ್ಟನೆ ನೀಡಿದೆ. ನಿಮ್ಮ ಅಥವಾ ನಿಮ್ಮ ಆಪ್ತ ಕುಟುಂಬ ಸದಸ್ಯರ ಹೆಸರು 2002ರ ಎಸ್‌ಐಆರ್ ಪಟ್ಟಿಯಲ್ಲಿ ಇಲ್ಲದಿದ್ದರೆ, ಸಂತತಿ (Progeny) ಅಥವಾ ಸಂಬಂಧಿಕರ (Relative) ಮ್ಯಾಪಿಂಗ್ ಆಯ್ಕೆ ಮಾಡಬಹುದು. ಇಲ್ಲವೇ, ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್ ಅವಧಿಯಲ್ಲಿ ಫಾರ್ಮ್-6 ಸಲ್ಲಿಸಿ ಹೊಸ ಮತದಾರರಾಗಿ ನೋಂದಣಿ ಮಾಡಿಸಬಹುದು ಎಂದು ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ್ ತಿಳಿಸಿದ್ದಾರೆ.

ಸಂಬಂಧಿಕರ ಹೆಸರು ಮ್ಯಾಪ್ ಮಾಡಬಹುದು

2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಸಂಬಂಧಿಕರ ವಿವರವನ್ನು ನಮೂದಿಸಬೇಕು. 2002ರ ಮತದಾರರ ಪಟ್ಟಿಯನ್ನು https://voters.eci.gov.in ಮೂಲಕ ಪರಿಶೀಲಿಸಬಹುದು. ಪೋಷಕರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಪೋಷಕರ ಸಹೋದರ-ಸಹೋದರಿಯರು ಸೇರಿದಂತೆ ತಂದೆ ಅಥವಾ ತಾಯಿಯ ಕಡೆಯ ಯಾವುದೇ ಸಂಬಂಧಿಕರ ಹೆಸರನ್ನು ಮ್ಯಾಪ್ ಮಾಡಬಹುದು. ಆ ಸಂಬಂಧಿಕರು ಭಾರತದ ಯಾವುದೇ ಭಾಗದಲ್ಲಿ ಮತದಾರರಾಗಿದ್ದರೂ, ಕೇಂದ್ರಿಕೃತ ಪೋರ್ಟಲ್ ಮೂಲಕ ಬಿಎಲ್‌ಒ (BLO) ಪರಿಶೀಲನೆ ನಡೆಸಬಹುದು ಎಂದು ಯೋಗೇಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ:  ಎಸ್​ಐಆರ್​ ಬಗ್ಗೆ ನಿಮಗೆ ಗೊಂದಲಗಳಿವೆಯೇ? ಇಲ್ಲಿದೆ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಹೊಸ ಮತದಾರ ಎಂದು ಪರಿಗಣನೆ

ಈ ಸಂಬಂಧವನ್ನು ಸಾಬೀತುಪಡಿಸಲು ಎಣಿಕೆ ನಮೂನೆಯೊಂದಿಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಪರಿಶೀಲನೆಗಾಗಿ ನೋಟಿಸ್ ಬಂದರೆ ಮಾತ್ರ, ಚುನಾವಣಾ ಆಯೋಗ ಅನುಮೋದಿಸಿರುವ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.ಇನ್ನು, 2002ರ ಪಟ್ಟಿಯಲ್ಲಿ ಯಾವುದೇ ಸಂಬಂಧಿಕರ ಹೆಸರೂ ಇಲ್ಲದಿದ್ದರೆ, ಅಂತಹ ವ್ಯಕ್ತಿಯನ್ನು ಹೊಸ ಮತದಾರ ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ನಡೆಯುವ ‘ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್’ ಅವಧಿಯಲ್ಲಿ, ಫಾರ್ಮ್-6, ಕಡ್ಡಾಯ ಘೋಷಣಾ ಪತ್ರ ಹಾಗೂ ಚುನಾವಣಾ ಆಯೋಗ ಅನುಮೋದಿಸಿರುವ 12 ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕಿರುತೆರೆಗೆ ಬಿ.ಸಿ. ಪಾಟೀಲ್ ಗ್ರ್ಯಾಂಡ್ ಎಂಟ್ರಿ; ರಾಯರ ಧಾರಾವಾಹಿಯಲ್ಲಿ ಮಹತ್ವದ ಪಾತ್ರ – Kannada News | BC Patil TV Debut: Sri Raghavendra Mahatme Welcomes Karatagiriya Desai

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಮೂಲಕ ಅವರು ಹೊಚ್ಚಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ವೀಕ್ಷಕರ ಮನಗೆದ್ದಿರುವ ಈ ಸರಣಿಯಲ್ಲಿ ಬಿ.ಸಿ. ಪಾಟೀಲ್ ಅವರು ಅತ್ಯಂತ ಪ್ರಮುಖವಾದ ‘ಕರಟಗಿರಿಯ ದೇಸಾಯಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ವಿಭಿನ್ನ ಸಿನಿಮಾಗಳ ಮೂಲಕ ಅಬ್ಬರಿಸುತ್ತಿದ್ದ ‘ಕೌರವ’ ಬಿ.ಸಿ. ಪಾಟೀಲ್ ಅವರನ್ನು ಈಗ ರಾಯರ ಮಹಿಮೆಯ ಕಥಾಹಂದರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಅರುಣಾ ಬಾಲರಾಜ್ ಜೊತೆ ಜುಗಲ್‌ಬಂದಿ

ಇದೇ ವಾರಾಂತ್ಯದ ಸಂಚಿಕೆಯಲ್ಲಿ ಬಿ.ಸಿ. ಪಾಟೀಲ್ ಅವರ ಎಂಟ್ರಿ ಅದ್ಧೂರಿಯಾಗಿ ನಡೆಯಲಿದೆ. ವಿಶೇಷವೆಂದರೆ, ಚಿತ್ರರಂಗದ ಮತ್ತೊಬ್ಬ ಹಿರಿಯ ನಟಿ ಅರುಣಾ ಬಾಲರಾಜ್ ಅವರು ಈ ಧಾರಾವಾಹಿಯಲ್ಲಿ ಬಿ.ಸಿ. ಪಾಟೀಲ್ ಅವರಿಗೆ ಪತ್ನಿಯಾಗಿ ಸಾಥ್ ನೀಡುತ್ತಿದ್ದಾರೆ. ಈ ಇಬ್ಬರು ಹಿರಿಯ ಕಲಾವಿದರ ಆಗಮನದಿಂದಾಗಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಸರಣಿಗೆ ಮತ್ತಷ್ಟು ಕಳೆ ಬಂದಂತಾಗಿದೆ. ರಾಯರ ದಿವ್ಯ ಸಂಚಾರದ ಹಾದಿಯಲ್ಲಿ ಎದುರಾಗುವ ಕರಟಗಿರಿಯ ದೇಸಾಯಿ ಕುಟುಂಬದ ಕಥೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಮಂತ್ರ ಮುಗ್ಧಗೊಳಿಸಿದ ರಾಯರ ಪವಾಡ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗೆ ಈಗಾಗಲೇ ಮನೆಮನೆಯಿಂದಲೂ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಜೀವಂತ ನಟನೆಗೆ ಭಕ್ತರು ತಲೆದೂಗಿದ್ದಾರೆ. ಕಳೆದ ವಾರ ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ಸದ್ಗತಿ ನೀಡಿದ ಸಂಚಿಕೆ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು. ಇದೀಗ ಮೂಲರಾಮನ ಅಪ್ಪಣೆಯಂತೆ ಸಂಚಾರ ಹೊರಟಿರುವ ರಾಯರು ಭುವನಗಿರಿ ಮುಗಿಸಿ ಕರಟಗಿರಿಗೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್

ರಾಯರ ಸ್ವಾಗತಕ್ಕೆ ದೇಸಾಯಿ (ಬಿ.ಸಿ. ಪಾಟೀಲ್) ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸುವಾಗ ಅವರ ಮಗ ಅಡುಗೆ ಮನೆಯ ಸೀಕರಣೆ ಪಾತ್ರೆಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಆಗ ಪೂಜೆಯಲ್ಲಿದ್ದ ರಾಯರು ಮಂತ್ರ ಪ್ರೋಕ್ಷಣೆಯ ಮೂಲಕ ಸತ್ತ ಮಗುವನ್ನು ಬದುಕಿಸುವ ಮಹಾ ಪವಾಡ ಈ ವಾರ ಅನಾವರಣಗೊಳ್ಳಲಿದೆ. ಈ ಭಕ್ತಿಪೂರ್ವಕ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:26 am, Thu, 2 July 26

Source link

Exit mobile version