ಭಾರತ -ಇಂಗ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ – Kannada News | IND vs ENG T20 Series: Durham Match Forecast Warns of Heavy Rain for July 1st

ಐರ್ಲೆಂಡ್ ವಿರುದ್ಧ ಟಿ20 ಸರಣಿ ಸೋತಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್‌ (India vs England) ತಂಡವನ್ನು ಎದುರಿಸಲು ಸಜ್ಜಾಗಿದೆ. ಕಳೆದ ವರ್ಷ, ಹೊಸ ನಾಯಕ ಶುಭ್​ಮನ್ ಗಿಲ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಇಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಬಾರಿ, ಹೊಸ ಟಿ20 ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಐದು ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ಸರಣಿಯ ಮೊದಲ ಪಂದ್ಯ ಜುಲೈ 1 ರ ಬುಧವಾರದಂದು ಡರ್ಹ್ಯಾಮ್ ಕೌಂಟಿಯ ತವರು ಮೈದಾನವಾದ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೀಂ ಇಂಡಿಯಾ ಈ ಮೈದಾನದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನವಾಗಿದೆ. ಏಕೆಂದರೆ ಪಂದ್ಯದ ದಿನದಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಹವಾಮಾನ ಹೇಗಿರಲಿದೆ?

ಇಂಗ್ಲೆಂಡ್‌ನಲ್ಲಿ ಯಾವಾಗ ಮಳೆ ಬರುತ್ತದೆ ಎಂದು ಊಹಿಸುವುದು ಕಷ್ಟ. ಅಲ್ಲಿ ಬೇಸಿಗೆ ಇದ್ದರೂ ಮಳೆ ಬೀಳುತ್ತದೆ, ಇದರಿಂದ ಅನೇಕ ಕ್ರಿಕೆಟ್ ಪಂದ್ಯಗಳು ರದ್ದಾಗಿವೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಉಭಯ ತಂಡಗಳ ನಡುವಿನ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 10ಗಂಟೆಗೆ ಆರಂಭವಾಗಲಿದೆ. ಅಂದರೆ ಇಂಗ್ಲೆಂಡ್‌ನಲ್ಲಿ ಪಂದ್ಯ ಪ್ರಾರಂಭವಾಗುವ ಸಮಯ ಸಂಜೆ 5:30. ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಸಂಜೆ 5 ಗಂಟೆಯ ನಂತರ ಮಳೆ ಬೀಳುವ ಸಾಧ್ಯತೆ ಶೇ. 43 ರಷ್ಟು ಇದೆ ಎಂದು ಬಿಬಿಸಿ ಹವಾಮಾನ ಸೂಚಿಸುತ್ತದೆ. ಈ ವರದಿಯ ಪ್ರಕಾರ, ಸಂಜೆ 5 ಗಂಟೆಯ ನಂತರ ಮಳೆಯಾಗುವ ಸಾಧ್ಯತೆ ಶೇ. 43 ರಷ್ಟು ಇದೆ. ಸಂಜೆ 6 ರಿಂದ ರಾತ್ರಿ 8 ರವರೆಗೆ ಮಳೆಯಾಗುವ ಸಾಧ್ಯತೆ ಶೇ. 66 ರಷ್ಟು ಇದೆ. ಇದರ ನಂತರವೂ, ರಾತ್ರಿಯಿಡೀ ನಿರಂತರ ಮಳೆಯಾಗುವ ಸಾಧ್ಯತೆ ಶೇ. 44 ರಿಂದ 45 ರಷ್ಟು ಇದೆ. ಇದರರ್ಥ ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ ಪ್ರಾರಂಭವಾಗಿ ಬೆಳಗಿನ ಜಾವ 2:00 ರವರೆಗೆ ನಡೆಯಬೇಕಿದ್ದ ಪಂದ್ಯವು ಮಳೆಯಿಂದ ಸಂಪೂರ್ಣವಾಗಿ ರದ್ದಾಗಬಹುದು.

IND vs IRE: ಸೋಲಿನ ಆಘಾತದ ನಡುವೆ ಕೊನೆಯ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ

ಹಿಂದಿನ 2 ಪಂದ್ಯಗಳು ರದ್ದಾಗಿದ್ದವು

ಈ ಮೈದಾನದಲ್ಲಿ ಟೀಂ ಇಂಡಿಯಾ ಟಿ20 ಪಂದ್ಯ ಆಡುತ್ತಿರುವುದು ಇದೇ ಮೊದಲು. ಭಾರತ ಇಲ್ಲಿಯವರೆಗೆ ಅಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದೆ, ಎರಡೂ ಏಕದಿನ ಪಂದ್ಯಗಳಾಗಿದ್ದವು. ಆದಾಗ್ಯೂ, ಕಾಕತಾಳೀಯವಾಗಿ, ಎರಡೂ ಮಳೆಯಿಂದಾಗಿ ರದ್ದಾಗಿದ್ದವು. ಮೊದಲ ಪಂದ್ಯವನ್ನು 2002 ರಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿಯಲ್ಲಿ ಆಡಲಾಗಿದ್ದರೆ, ಎರಡನೆಯ ಪಂದ್ಯವನ್ನು 2011 ರಲ್ಲಿ ಏಕದಿನ ಸರಣಿಯಲ್ಲಿ ಆಡಲಾಯಿತು. ಎರಡೂ ಪಂದ್ಯಗಳಲ್ಲಿ, ಭಾರತ ತಂಡವು ಮೊದಲು ಬ್ಯಾಟಿಂಗ್ ಮಾಡಿತ್ತಾದರೂ ಆ ನಂತರ ಇಂಗ್ಲೆಂಡ್‌ನ ಇನ್ನಿಂಗ್ಸ್ ಸಮಯದಲ್ಲಿ ಮಳೆ ಸುರಿದ ಪರಿಣಾಮವಾಗಿ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್ – Kannada News | Kalaburagi City Police commissioner Sharanappa Warns to rowdy

ಕಲಬುರಗಿ, (ಜುಲೈ 01): ಡಿಕೆ ಶಿವಕುಮಾರ್ (DK Shivakumar) ಅವರು ಸಿಎಂ ಆದ ಬಳಿಕ ಮೊದಲ ಸಭೆಯಲ್ಲೇ ರಾಜ್ಯದಲ್ಲಿ ರೌಡಿ (Rowdy) ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದರು. ಅಲ್ಲದೇ ರೌಡಿ ನಿಗ್ರಹ ದಳ ರಚನೆಗೆ ಸೂಚಿಸಿದ್ದು. ಅದರಂತೆ ರಾಜ್ಯದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆಗೆ ಈಗಾಗಲೇ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅವರ ಆಟಾಟೋಪಗಳಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಕಲಬುರಗಿಯಲ್ಲಿಂದು (Kalaburagi) ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಅವರು ರೌಡಿ ಪರೇಡ್ ನಡೆಸಿದ್ದು, ರೌಡಿಸಂ ಬಿಡಬೇಕು ಇಲ್ಲಾಂದ್ರೆ ನಮ್ಮಿಂದ ಅಕ್ಷನ್ ಆಗಿ ಹೋಗ್ತಿಯಾ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯ ಕಮೀಷನರ್ ಕಚೇರಿ ಆವರಣದಲ್ಲಿ ಠಾಣಾವಾರು ಟಾಪ್ 10 ರೌಡಿ ಪರೇಡ್ ನಡೆಸಿದ್ದು, ಈ ವೇಳೆ ರೌಡಿ ಶೀಟರ್ ಗಜಾನನ್ ಗೆ ಕಮಿಷನರ್ ತರಾಟಗೆ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಇರೋಕೆ ಆಗೋಲ್ವಾ? ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅಂದುಕೊಂಡಿದ್ದಿಯಾ? ಎಂದು ವಾರ್ನ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ ನಾಗತಿಹಳ್ಳಿ ಚಂದ್ರಶೇಖರ್ – Kannada News | America America 2: Nagathihalli Chandrashekar Announces Kannada Sequel; Shooting Done

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ ‘ಅಮೆರಿಕಾ ಅಮೆರಿಕಾ’ (America America) ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆ್ಯಕ್ಷನ್ ಕಟ್ ಹೇಳಿದ್ದ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಸಿದ್ಧವಾಗುತ್ತಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಹಾಗೂ ಭರಪೂರ ನಿರೀಕ್ಷೆ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ಟೈಟಲ್ ಏನಿರಬಹುದು ಎಂದು ಊಹಿಸುವಂತೆ ಪೋಸ್ಟ್ ಮಾಡಿದ್ದರು. ‘ಅಮೆರಿಕಾ ಅಮೆರಿಕಾ’, ‘ಅಮೃತಧಾರೆ’, ‘ನನ್ನ ಪ್ರೀತಿಯ ರಾಮು’, ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರ ತಂಡದಿಂದ ಜುಲೈ 1ರಂದು ಹೊಸ ಟೈಟಲ್ ರಿವೀಲ್ ಮಾಡೋದಾಗಿ ತಿಳಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ. ‘ಅಮೆರಿಕಾ ಅಮೆರಿಕಾ 2’ ಟೈಟಲ್ ಕೇಳಿ ಅನೇಕರಲ್ಲಿ ಕುತೂಹಲ ಮೂಡಿದೆ.

ತಾರಾಗಣದ ಬಗ್ಗೆ ವಿವರ

ಈ ರೋಮ್ಯಾಂಟಿಕ್ ಹಾಗೂ ಎಮೋಷನಲ್ ಡ್ರಾಮಾದಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ತಾರೆಗಳು ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಿರೂಪ್ ಇಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಮತ್ತೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಗ್ಲಾಮರ್ ಹಾಗೂ ನಟನೆಯ ಮೂಲಕ ಮೋಡಿ ಮಾಡಿರುವ ಶಾನ್ವಿ, ಈ ಚಿತ್ರದಲ್ಲಿ ನಾಯಕಿಯಾಗಿ ಕಮಾಲ್ ಮಾಡಲಿದ್ದಾರೆ.

ಅಮೆರಿಕಾ ಅಮೆರಿಕಾ ಪೋಸ್ಟರ್

ಕಾದಂಬರಿ ಆಧಾರಿತ ಸಿನಿಮಾ

ವಿಶೇಷವೆಂದರೆ, ಈ ಚಿತ್ರವು ಖ್ಯಾತ ಲೇಖಕಿ ಸಹನಾ ವಿಜಯಕುಮಾರ್ ಅವರ ಜನಪ್ರಿಯ ಕಾದಂಬರಿ ‘ಕ್ಷಮೆ’ಯನ್ನು ಆಧರಿಸಿ ತೆರೆಗೆ ಬರುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಕಾದಂಬರಿಯ ಕಥಾಹಂದರವನ್ನು ಇಂದಿನ ಟ್ರೆಂಡ್‌ಗೆ ತಕ್ಕಂತೆ ಅದ್ಭುತವಾಗಿ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ, ನಾಗತಿಹಳ್ಳಿ ಟ್ರೆಂಡ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಅಮೆರಿಕಾ ಚಿತ್ರಕ್ಕೆ 25 ವರ್ಷ; ನಾಗತಿಹಳ್ಳಿಗೆ ಈ ಅದ್ಭುತ ಕಥೆ ಹೊಳೆದಿದ್ದು ಹೇಗೆ?

ಕೆವಿಎನ್ ಪ್ರೊಡಕ್ಷನ್ಸ್ ಸಾಥ್

ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಹಾಗೂ ದೊಡ್ಡ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯದಲ್ಲೇ ಪ್ರಚಾರ ಕಾರ್ಯ ಹಾಗೂ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಾರ್ಟೂನ್’ ಕಟ್ಟಿದ ಫುಟ್​ಬಾಲ್ ತಂಡ: ಇದು ಜಪಾನಿನ ಕಾಲ್ಚೆಂಡು ಕಥೆ! – Kannada News | Anime to Reality: How Cartoons Shaped Japan’s Football Revolution

ಜಪಾನ್ ಎಂದ ತಕ್ಷಣ ನಮಗೆ ನೆನಪಾಗುವುದು ಅಲ್ಲಿನ ಶಿಸ್ತು, ತಂತ್ರಜ್ಞಾನ ಮತ್ತು ಜಗತ್ತನ್ನೇ ಆಕರ್ಷಿಸಿರುವ ಅನಿಮೆ ಕಾರ್ಟೂನ್‌ಗಳು. ಆದರೆ, ಇದೇ ಅನಿಮೆ ಜಪಾನ್ ದೇಶದ ಕ್ರೀಡಾ ಇತಿಹಾಸವನ್ನೇ ಬದಲಾಯಿಸಿದೆ ಎಂದರೆ ನೀವು ನಂಬುತ್ತೀರಾ? ಹೌದು, ಒಂದು ಕಾಲದಲ್ಲಿ ಬೇಸ್‌ಬಾಲ್ ಹುಚ್ಚಿನಲ್ಲಿದ್ದ ಜಪಾನ್, ಇಂದು ಜಾಗತಿಕ ಫುಟ್‌ಬಾಲ್ ನಕ್ಷೆಯಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮಲು ಈ ಕಾರ್ಟೂನ್‌ಗಳೇ ಪ್ರೇರಣೆ! ಫುಟ್‌ಬಾಲ್ ಮೈದಾನದ ಹಸಿರು ಹುಲ್ಲುಗಾವಲು ಮತ್ತು ಅನಿಮೆ ಕಲಾವಿದರ ವರ್ಣರಂಜಿತ ಕುಂಚ ಹೇಗೆ ಒಂದಾಗಿ ಇತಿಹಾಸ ಸೃಷ್ಟಿಸಿದವು ಎಂಬುದರ ರೋಚಕ ಕಥೆ ಇಲ್ಲಿದೆ.

ಕಾಮಿಕ್ಸ್​ನಿಂದ ಶುರುವಾದ ಕಿಚ್ಚು:

80ರ ದಶಕದಲ್ಲಿ ಜಪಾನ್ ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಬೇಸ್‌ಬಾಲ್. ಇದು ಅಲ್ಲಿನ ಅಧಿಕೃತ ರಾಷ್ಟ್ರೀಯ ಕ್ರೀಡೆ ಅಲ್ಲದಿದ್ದರೂ, ಬೇಸ್‌ಬಾಲ್ ಇಡೀ ದೇಶವನ್ನು ಆವರಿಸಿಕೊಂಡಿತ್ತು. ಜಪಾನಿನ ಪ್ರೊಫೆಷನಲ್ ಬೇಸ್‌ಬಾಲ್ ಲೀಗ್ ಪಂದ್ಯಗಳನ್ನು ನೋಡಲು ಮತ್ತು ತಮಗೆ ಇಷ್ಟವಾದ ತಂಡಗಳನ್ನು ಬೆಂಬಲಿಸಲು ಲಕ್ಷಾಂತರ ಜನರು ಸ್ಟೇಡಿಯಂಗೆ ಮುಗಿಬೀಳುತ್ತಿದ್ದರು.

ಅಲ್ಲದೆ ಪ್ರೌಢಶಾಲಾ ಮಟ್ಟದ ಬೇಸ್‌ಬಾಲ್ ಟೂರ್ನಮೆಂಟ್ ಆದ ‘ಕೋಶಿಯನ್’ ಪಂದ್ಯಾವಳಿಯನ್ನು ಇಡೀ ದೇಶವೇ ಹಬ್ಬದಂತೆ ಸಂಭ್ರಮದಿಂದ ಟಿವಿಯಲ್ಲಿ ವೀಕ್ಷಿಸುತ್ತಿದ್ದರು.

ಇಂತಹ ಜಪಾನ್​ನಲ್ಲಿ 1981 ರಲ್ಲಿ ‘ಕ್ಯಾಪ್ಟನ್ ತ್ಸುಬಾಸಾ’ ಎಂಟ್ರಿ ಕೊಟ್ಟಿದ್ದರು. ಯೋಯಿಚಿ ತಕಹಾಶಿ ಎಂಬ ಕಲಾವಿದ ‘ಕ್ಯಾಪ್ಟನ್ ತ್ಸುಬಾಸಾ’ ಎಂಬ ಮಂಗಾ (ಕಾಮಿಕ್ಸ್) ಪುಸ್ತಕವನ್ನು ಹೊರ ತಂದಿದ್ದರು. ಕಾಮಿಕ್ಸ್ ಬುಕ್​ನ ಹೀರೋ ತ್ಸುಬಾಸಾ ಒಜೋರಾ ಎಂಬ ಪುಟ್ಟ ಬಾಲಕ. ಈ ಬಾಲಕನ ಅತೀ ದೊಡ್ಡ ಕಸನು ಜಪಾನ್ ದೇಶಕ್ಕೆ ಫುಟ್​ಬಾಲ್ ವಿಶ್ವಕಪ್ ಗೆದ್ದುಕೊಡುವುದು.

ಈ ಕಥೆಯ ನಾಯಕ ತ್ಸುಬಾಸಾ ಒಜೋರಾ, “ಫುಟ್‌ಬಾಲ್ ನನ್ನ ಗೆಳೆಯ” ಎಂದು ನಂಬಿದ್ದ. ಅವನು ಮೈದಾನದಲ್ಲಿ ತೋರುತ್ತಿದ್ದ ಅದ್ಭುತ ಕೌಶಲ್ಯಗಳು ಮತ್ತು ಜಪಾನ್‌ಗೆ ಫಿಫಾ ವಿಶ್ವಕಪ್  ಗೆದ್ದುಕೊಡಬೇಕೆಂಬ ಅವನ ಹಠ, ಅಂದಿನ ಜಪಾನಿ ಬಾಲಕರಲ್ಲಿ ಹೊಸ ಆಕರ್ಷಣೆಯನ್ನು ಮೂಡಿಸಿತು.

ಈ ಕಾಮಿಕ್ಸ್ ಪುಸ್ತಕ ಭಾರಿ ಜನಪ್ರಿಯತೆ ಗಳಿಸಿದ ನಂತರ, 1983 ರಲ್ಲಿ ಇದನ್ನು ಟಿವಿ ಕಾರ್ಟೂನ್ ಸರಣಿಯಾಗಿ ಪರಿವರ್ತಿಸಲಾಯಿತು. ಇದು ಟಿವಿ ಟೋಕಿಯೋ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕ್ಯಾಪ್ಟನ್ ತ್ಸುಬಾಸಾ ಜಪಾನ್ ಬಾಲಕರು ಫಿದಾ ಆದರು. ಎಷ್ಟರ ಮಟ್ಟಿಗೆ ಎಂದರೆ ನಾವು ಕೂಡ ಕ್ಯಾಪ್ಟನ್ ತ್ಸುಬಾಸಾನಂತೆ ಫುಟ್​ಬಾಲ್ ಆಡಿ ವಿಶ್ವಕಪ್ ಗೆದ್ದುಕೊಡಬೇಕೆಂಬ ಆಸೆ ಚಿಗುರುವಷ್ಟರ ಮಟ್ಟಿಗೆ.

ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿ:

ಕ್ಯಾಪ್ಟನ್ ತ್ಸುಬಾಸಾ  ಕಾರ್ಟೂನ್ ಪ್ರಸಾರವಾದ ಕೆಲವೇ ವರ್ಷಗಳಲ್ಲಿ, ಜಪಾನ್‌ನಲ್ಲಿ ಫುಟ್‌ಬಾಲ್ ಆಡುವ ಮಕ್ಕಳ ಸಂಖ್ಯೆ ಕೇವಲ 1 ಲಕ್ಷದಿಂದ ಬರೋಬ್ಬರಿ 2.5 ಲಕ್ಷಕ್ಕೆ ಏರಿತು ಎಂದರೆ ನಂಬಲೇಬೇಕು.

ಇತ್ತ ಕೇವಲ ಬೇಸ್‌ಬಾಲ್ ಆಡುತ್ತಿದ್ದ ಜಪಾನಿನ ಬಹುತೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಫುಟ್​ಬಾಲ್ ಕೂಡ ಕಡ್ಡಾಯವಾಯಿತು. ಮಕ್ಕಳು ಸಂಜೆ ಮನೆಗೆ ಹೋಗುವ ಮುನ್ನ ‘ಕ್ಯಾಪ್ಟನ್ ತ್ಸುಬಾಸಾ’ ಸ್ಟೈಲ್‌ನಲ್ಲಿ ಕಿಕ್ ಹೊಡೆಯಲು ಗಂಟೆಗಟ್ಟಲೆ ಮೈದಾನದಲ್ಲಿ ಕಳೆಯಲು ತೊಡಗಿದರು.

ಒಂದಾರ್ಥದಲ್ಲಿ ಕ್ಯಾಪ್ಟನ್ ತ್ಸುಬಾಸಾ ಕಾರ್ಟೂನ್ ಜಪಾನಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಈ ಕ್ರಾಂತಿಗೆ ಕಿಚ್ಚು ಹಚ್ಚುವಂತೆ ಅಲ್ಲಲ್ಲಿ ಫುಟ್​ಬಾಲ್ ಅಕಾಡೆಮಿಗಳು ತಲೆ ಎತ್ತಿ ನಿಂತವು.  ಇದರೊಂದಿಗೆ ಸೂರ್ಯ ಉದಯಿಸುವ ನಾಡಿನಲ್ಲಿ ಫುಟ್​ಬಾಲ್ ಕಲ್ಚರ್ ಕೂಡ ಶುರುವಾಯಿತು.

ಫುಟ್​ಬಾಲ್ ಫೀವರ್ ಶುರುವಾಗುತ್ತಿದ್ದಂತೆ ಜಪಾನ್ 1992ರಲ್ಲಿ ತನ್ನ ಮೊದಲ ವೃತ್ತಿಪರ ಫುಟ್‌ಬಾಲ್ ಲೀಗ್ (J-League) ಅನ್ನು ಕೂಡ ಆರಂಭಿಸಿತು. ಇದರ ಬೆನ್ನಲ್ಲೇ ಜಪಾನೀಸ್ ಪಡೆ ಏಷ್ಯನ್ ಅಧಿಪತಿಯಾದರು.

ಏಷ್ಯನ್ ಅಧಿಪತಿ:

1981 ರಲ್ಲಿ ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿಯ ಪ್ರಭಾವ ಹೇಗಿತ್ತೆಂದರೆ ಹತ್ತೇ ವರ್ಷಗಳಲ್ಲಿ ಜಪಾನ್ ಏಷ್ಯನ್ ಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರು. 1992 ರಲ್ಲ ನಡೆದ ‘ಎಎಫ್‌ಸಿ ಏಷ್ಯನ್ ಕಪ್’ ಟೂರ್ನಮೆಂಟ್‌ನಲ್ಲಿ ಸೌದಿ ಅರೇಬಿಯಾವನ್ನು 1-0 ಗೋಲಿನಿಂದ ಮಣಿಸಿ ಜಪಾನ್ ಪ್ರಥಮ ಬಾರಿಗೆ ಏಷ್ಯಾದ ಫುಟ್​ಬಾಲ್ ಚಾಂಪಿಯನ್ ಎನಿಸಿಕೊಂಡರು.

ಈ ಚಾಂಪಿಯನ್ ಪಟ್ಟವು ಜಪಾನಿನನಲ್ಲಿ ಫುಟ್​ಬಾಲ್ ಕ್ರೇಝ್​ ಅನ್ನು ಮುಗಿಲೆತ್ತರಕ್ಕೇರಿಸಿತು. ಅಲ್ಲಿಂದಲೇ ಶುರುವಾಗಿದ್ದು ಫಿಫಾ ವಿಶ್ವಕಪ್ ಕನಸು.

ವಿಶ್ವಕಪ್​ಗೆ ಎಂಟ್ರಿ:

ಏಷ್ಯನ್ ರಾಷ್ಟ್ರಗಳ ವಿರುದ್ಧ ತನ್ನ ಪರಾಕ್ರಮ ತೋರಿಸಿದ ಜಪಾನ್ ಪಡೆಯು 1998 ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್​ಗೆ ಅರ್ಹತೆ ಪಡೆಯಿತು. ಅಂದರೆ ಜಪಾನ್​ನಲ್ಲಿ ಫುಟ್​ಬಾಲ್ ಕಲ್ಚರ್ ಶುರುವಾಗಿ 17 ವರ್ಷಗಳಾಗುವಷ್ಟರಲ್ಲಿ ಜಪಾನೀಸ್ ಪಡೆ ವಿಶ್ವಕಪ್​ ಅಂಗಳದಲ್ಲಿದ್ದರು.

ಆದರೆ ಚೊಚ್ಚಲ ವಿಶ್ವಕಪ್​ ಟೂರ್ನಿಯಲ್ಲಿ ಜಪಾನ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಆಡಿದ ಮೂರು ಪಂದ್ಯಗಳಲ್ಲೂ ಸೋತರೂ, ಜಮೈಕಾ ವಿರುದ್ಧದ ಪಂದ್ಯದಲ್ಲಿ ಜಪಾನ್ ಆಟಗಾರ ಮಸಾಶಿ ನಕಯಾಮಾ ಅವರು ಹೊಡೆದ ಏಕೈಕ ಗೋಲು, ಜಪಾನ್ ದೇಶದ ವಿಶ್ವಕಪ್ ಇತಿಹಾಸದ ‘ಮೊದಲ ಚಾರಿತ್ರಿಕ ಗೋಲು’ ಆಗಿ ದಾಖಲಾಯಿತು.

ಬದಲಾದ ರಣತಂತ್ರ:

ಕ್ಯಾಪ್ಟನ್ ತ್ಸುಬಾಸಾ ಸೃಷ್ಟಿಸಿದ ಕ್ರಾಂತಿಯಿಂದ ಶುರುವಾದ ಫುಟ್​ಬಾಲ್ ರಣತಂತ್ರಗಳು ನಿಧಾನಕ್ಕೆ ಬದಲಾಯಿತು. ಅದರಲ್ಲೂ ನ್ಯೂ ಜೆನ್ ಹುಡುಗರು ಆಟದಲ್ಲಿ ಬದಲಾವಣೆ ತರಲಾರಂಭಿಸಿದ್ದರು. ಯುರೋಪಿಯನ್ ಹಾಗೂ ಲ್ಯಾಟಿನ್ ಅಮೆರಿಕನ್ ಶೈಲಿಯಂತೆ ತಮ್ಮದೇಯಾದ ಒಂದು ರಣತಂತ್ರ ಇರಬೇಕೆಂದು ಬಯಸುತ್ತಿದ್ದರು. ಇಂತಹ ಸಂದರ್ಭದಲ್ಲೇ ಬಂದಿದ್ದೇ ಬ್ಲೂ ಲಾಕ್.

ಬ್ಲೂ ಲಾಕ್ ಎಂಬ ಮೈಂಡ್ ಗೇಮ್:

2018 ರಲ್ಲಿ ಜಪಾನ್​ನಲ್ಲಿ ಮಂಗಾ ಕಾಮಿಕ್ಸ್ ಪುಸ್ತಕ ಬಿಡುಗಡೆಯಾಯಿತು. ಈ ಕಾಮಿಕ್ಸ್ ಬುಕ್​ನಲ್ಲಿ ಫುಟ್​ಬಾಲ್​ ಎಂಬುದು ಕೇವಲ ದೈಹಿಕ ಆಟವಲ್ಲ. ಇದು ಆಟಗಾರರ ಮನಸ್ಥಿತಿಯ ಆಟ ಎಂದು ಒತ್ತಿ ಹೇಳಲಾಯಿತು.

ಸಾಮಾನ್ಯವಾಗಿ ಕ್ರೀಡೆಗಳಲ್ಲಿ ಟೀಮ್ ವರ್ಕ್​ ಮತ್ತು ತ್ಯಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಬ್ಲೂ ಲಾಕ್ ಕಥೆಯು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು.

ಬದಲಿಗೆ ಜಪಾನ್‌ಗೆ ಒಳ್ಳೆಯ ಸ್ನೇಹಿತರ ತಂಡ ಬೇಡ, ಜಗತ್ತನ್ನೇ ನಡುಗಿಸುವ ಅತ್ಯಂತ ಸ್ವಾರ್ಥಿ, ಅಹಂಕಾರಿ ಮತ್ತು ಡೇಂಜರಸ್ ಸ್ಟ್ರೈಕರ್​ಗಳ ತಂಡ ಬೇಕು ಎಂಬ ಹೊಸ ರಣತಂತ್ರವನ್ನು ಪರಿಚಯಿಸಿತು. ಈ ಕಥೆಯು ಮುಂದೆ ಕಾರ್ಟೂನ್ ಆಗಿ ಪ್ರಸಾರವಾಗ ತೊಡಗಿತು. ಇದನ್ನು ವೀಕ್ಷಿಸಿದ ನ್ಯೂ ಜೆನ್ ಜಪಾನ್ ಫುಟ್​ಬಾಲ್ ಪ್ರಿಯರ ಮನಸ್ಥಿತಿ ಬದಲಾಯಿತು.

ಸಾಂಪ್ರದಾಯಿಕವಾಗಿ ಜಪಾನಿ ಆಟಗಾರರು ಮೈದಾನದಲ್ಲಿ ತುಂಬಾ ಸೌಮ್ಯವಾಗಿರುತ್ತಿದ್ದರು ಮತ್ತು ಗೋಲು ಹೊಡೆಯುವ ಅವಕಾಶವಿದ್ದರೂ ಬೇರೆಯವರಿಗೆ ಪಾಸ್ ನೀಡುತ್ತಿದ್ದರು. ಆದರೆ ‘ಬ್ಲೂ ಲಾಕ್’ ಬಂದ ಮೇಲೆ ಜಪಾನಿ ಯುವ ಆಟಗಾರರಲ್ಲಿ “ನಾನೇ ಗೋಲು ಹೊಡೆಯಬೇಕು” ಎಂಬ ಆಕ್ರಮಣಕಾರಿ ಮತ್ತು ಧೈರ್ಯಶಾಲಿ ಮನಸ್ಥಿತಿ ಬೆಳೆಯಿತು. ಮೈದಾನದಲ್ಲಿ ಎದುರಾಳಿ ಯಾರೇ ಇರಲಿ, ಹೆದರದೆ ನುಗ್ಗುವ ಗುಣವನ್ನು ಮೈಗೂಡಿಸಿಕೊಂಡರು.

ಪರಿಣಾಮ 2022ರ ಫಿಫಾ ವಿಶ್ವಕಪ್‌ನಲ್ಲಿ ಜಪಾನ್ ತಂಡವು ಮಾಜಿ ವಿಶ್ವ ಚಾಂಪಿಯನ್ನರಾದ ಜರ್ಮನಿ ಮತ್ತು ಸ್ಪೇನ್ ತಂಡಗಳನ್ನು ಸೋಲಿಸಿ ಇಡೀ ಜಗತ್ತನ್ನೇ ಚಕಿತಗೊಳಿಸಿತು. ಆ ಪಂದ್ಯಗಳಲ್ಲಿ ಜಪಾನ್ ಆಟಗಾರರು ಹೊಡೆದ ಅದ್ಭುತ ಗೋಲುಗಳು ಮತ್ತು ಕೌಂಟರ್-ಅಟ್ಯಾಕ್ ತಂತ್ರಗಳು, ಬ್ಲೂ ಲಾಕ್ ಅನಿಮೆಯ ದೃಶ್ಯಗಳಂತೆಯೇ ಇದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಇಂದಿಗೂ ಇದನ್ನು “ನೈಜ ಜಗತ್ತಿನ ಬ್ಲೂ ಲಾಕ್ ಪವಾಡ” ಎಂದೇ ಕರೆಯುತ್ತಾರೆ.

ಜಪಾನ್ ಮಿಂಚಿನಾಟ:

ಬ್ಲೂ ಲಾಕ್ ನೀಡಿದ ಆಕ್ರಮಣಕಾರಿ ‘ಈಗೋಯಿಸ್ಟ್’ ಮನಸ್ಥಿತಿಯೊಂದಿಗೆ 2026ರ ಫಿಫಾ ವಿಶ್ವಕಪ್​ನಲ್ಲಿ ಜಪಾನ್ ಪಡೆ ಕಣಕ್ಕಿಳಿದಿತ್ತು. ಜಗತ್ತಿನ ಬಲಿಷ್ಠ 48 ತಂಡಗಳಲ್ಲಿ ಒಂದಾಗಿ ಬಂದಿದ್ದ ಸಮುರಾಯ್ ಬ್ಲೂ ಪಡೆ, ಲೀಗ್ ಹಂತದಲ್ಲಿ ನೆದರ್ಲೆಂಡ್ಸ್ ಮತ್ತು ಸ್ವೀಡನ್ ತಂಡಗಳಿಗೆ ನಡುಕ ಹುಟ್ಟಿಸಿ, ಟುನೀಶಿಯಾವನ್ನು 4-0 ಗೋಲುಗಳಿಂದ ಧೂಳೀಪಟ ಮಾಡಿತು. ಅಲ್ಲದೆ ಎಫ್ ಗ್ರೂಪ್​ನಿಂದ ‘ರೌಂಡ್ ಆಫ್ 32’  ಹಂತಕ್ಕೆ ಪ್ರವೇಶಿಸಿತ್ತು.

ನಾಕೌಟ್ ಹಂತದಲ್ಲಿ ಜಪಾನ್ ಪಡೆಗೆ ಎದುರಾಗಿದ್ದು ಫುಟ್‌ಬಾಲ್ ಜಗತ್ತಿನ ಸರ್ವಕಾಲಿಕ ದೈತ್ಯ ತಂಡ, 5 ಬಾರಿಯ ವಿಶ್ವ ಚಾಂಪಿಯನ್ ಬ್ರೆಝಿಲ್! ಹೂಸ್ಟನ್ ಕ್ರೀಡಾಂಗಣದಲ್ಲಿ ನಡೆದ ಆ ಮಹಾಸಮರದಲ್ಲಿ ಜಪಾನ್ ಕೇವಲ ರಕ್ಷಣಾತ್ಮಕವಾಗಿ ಆಡಲಿಲ್ಲ.

ಬ್ಲೂ ಲಾಕ್ ಅನಿಮೆಯ ಕಥೆಯನ್ನೇ ನೆನಪಿಸುವಂತೆ ಪ್ರತಿ ಕ್ಷಣದಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಪಂದ್ಯದ 29ನೇ ನಿಮಿಷದಲ್ಲೇ ಜಪಾನಿನ ಕೌಶು ಸಾನೊ ಹೊಡೆದ ಆ ಅದ್ಭುತ ಗೋಲು ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿತ್ತು. ಬ್ರೆಝಿಲ್‌ನಂತಹ ಮಹಾಶಕ್ತಿ ವಿರುದ್ಧ ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡು ಜಪಾನ್ ದೃಢವಾಗಿ ಸವಾಲು ಒಡ್ಡಿತು.

ಇದನ್ನೂ ಓದಿ: FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..!

ಆದರೆ ದ್ವಿತೀಯಾರ್ಧದಲ್ಲಿ ಬ್ರೆಝಿಲ್‌ನ ಸಾಂಬಾ ಶೈಲಿಯ ಮಾಂತ್ರಿಕ ಆಟದಿಂದಾಗಿ ಜಪಾನ್ ತಂಡವು 2-1 ಅಂತರದಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು. ಮೈದಾನದಲ್ಲಿ ರೆಫ್ರಿ ಕೊನೆಯ ಸೀಟಿ ಊದಿದಾಗ ಜಪಾನಿ ಆಟಗಾರರು ಕಣ್ಣೀರು ಹಾಕುತ್ತಾ ಮೈದಾನದಲ್ಲೇ ಕುಸಿದು ಬಿದ್ದರು. ಕಣ್ಣೆದುರೇ ಜಾರಿದ ಆ ಒಂದು ಗೆಲುವು ಇಡೀ ಜಪಾನ್ ದೇಶದ ಹೃದಯವನ್ನೇ ಛಿದ್ರ ಮಾಡಿತು.

ಆದರೆ ಈ ಸೋಲಿನ ಹೊರತಾಗಿಯೂ… ಜಪಾನ್ ಸೋತಿದ್ದು ಕೇವಲ ಸ್ಕೋರ್ ಬೋರ್ಡ್‌ನಲ್ಲಿ ಮಾತ್ರ, ಕೋಟ್ಯಂತರ ಫುಟ್‌ಬಾಲ್ ಪ್ರೇಮಿಗಳ ಹೃದಯದಲ್ಲಲ್ಲ!

ಒಂದು ಕಾಲದಲ್ಲಿ ಫುಟ್‌ಬಾಲ್ ಎಂದರೇನು ಎಂದು ತಿಳಿಯದ ದೇಶದಲ್ಲಿ, ಕೇವಲ ಒಂದು ಕಾರ್ಟೂನ್ (ಅನಿಮೆ) ಹಚ್ಚಿದ ಕಿಡಿ ಇಂದು ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ದೈತ್ಯ ತಂಡಗಳಿಗೇ ನಡುಕ ಹುಟ್ಟಿಸುವ ಮಟ್ಟಿಗೆ ಬೆಳೆದು ನಿಂತಿದೆ.

ಈ ಬಾರಿ ಟ್ರೋಫಿ ಬ್ರೆಝಿಲ್, ಅರ್ಜೆಂಟೀನಾ, ಫ್ರಾನ್ಸ್ ಅಥವಾ ಇನ್ನಾವುದೋ ತಂಡದ ಪಾಲಾಗಬಹುದು. ಆದರೆ ಕಣಕಣದಲ್ಲೂ ವೀರಾವೇಶದಿಂದ ಹೋರಾಡಿದ ಜಪಾನ್ ಪಡೆ “ಮುಂದೊಂದು ದಿನ ಜಗತ್ತನ್ನು ಆಳಲು ನಾವು ಬರುತ್ತಿದ್ದೇವೆ” ಎಂಬ ಸಂದೇಶ ರವಾನಿಸಿ ತೆರಳಿದ್ದಾರೆ.

ಹೀಗಾಗಿ ಮುಂದಿನ ವಿಶ್ವಕಪ್​ನಲ್ಲಿ ಅವರು ಹೊಸ ರಣತಂತ್ರದೊಂದಿಗೆ ಬಂದೇ ಬರುತ್ತಾರೆ. ಮುಂದೊಂದು ದಿನ ಸಮುರಾಯ್​ ಪಡೆ ವಿಶ್ವಕಪ್ ಗೆದ್ದೇ ಗೆಲ್ತಾರೆ! ಏಕೆಂದರೆ ಅವರು ಬಂದಿರುವುದು ಜಪಾನ್​ನಿಂದ… ಸೂರ್ಯ ಉದಯಿಸುವ ನಾಡು ಜಪಾನ್​ನಿಂದ!

Published On – 3:03 pm, Wed, 1 July 26

Source link

BSNL Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣವಕಾಶ; BSNLನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | BSNL JTO Recruitment 2026: Apply Online for Junior Telecom Officer Posts! Last Date July 3

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನೇರ ನೇಮಕಾತಿ ಮೂಲಕ ಜೂನಿಯರ್ ಟೆಲಿಕಾಂ ಆಫೀಸರ್ (JTO – Telecom) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್​ಸೈಟ್​​ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಪರೀಕ್ಷಾ ಸಮಯ:

ಈ ಹುದ್ದೆಗಳಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜೂನ್ 4 ರಿಂದಲೇ ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜುಲೈ 3 ರಂದು ಬೆಳಗ್ಗೆ 10:00 ಗಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ. ಒಂದು ವೇಳೆ ಅರ್ಜಿಯಲ್ಲಿ ಯಾವುದೇ ತಪ್ಪುಗಳಾಗಿದ್ದಲ್ಲಿ, ಅಭ್ಯರ್ಥಿಗಳಿಗೆ ಜುಲೈ 4 ರಿಂದ ಜುಲೈ 11 ರವರೆಗೆ ಅರ್ಜಿ ತಿದ್ದುಪಡಿ ಮಾಡಲು (Application Editing) ಕಾಲಾವಕಾಶ ನೀಡಲಾಗುತ್ತದೆ. ಇನ್ನು ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯು (CBT) ತಾತ್ಕಾಲಿಕವಾಗಿ ಆಗಸ್ಟ್ 2026 ರ ತಿಂಗಳಿನಲ್ಲಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಆದರೆ, ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯ ‘ಅನೆಕ್ಸರ್-ಎ’ ನಲ್ಲಿ ಸೂಚಿಸಲಾದ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರಬೇಕು. ಇದರೊಂದಿಗೆ ಕೇವಲ ಭಾರತೀಯ ನಾಗರಿಕರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಭಾರತದಾದ್ಯಂತ ಸೇವೆ ಸಲ್ಲಿಸಲು ಸಿದ್ಧರಿರಬೇಕು:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಬಿಎಸ್‌ಎನ್‌ಎಲ್‌ನ ಅವಶ್ಯಕತೆಗೆ ಅನುಗುಣವಾಗಿ ನಿಯೋಜಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಅಥವಾ ಸಂಸ್ಥೆಯ ಹಿತದೃಷ್ಟಿಯಿಂದ ಆಯ್ಕೆಯಾದ ಅಧಿಕಾರಿಗಳನ್ನು ಭಾರತದ ಯಾವುದೇ ಭಾಗಕ್ಕಾದರೂ ಅಥವಾ ಬಿಎಸ್‌ಎನ್‌ಎಲ್ ವ್ಯಾಪ್ತಿಯ ಯಾವುದೇ ಕಾರ್ಯಾಚರಣೆಯ ಪ್ರದೇಶಕ್ಕಾದರೂ ವರ್ಗಾವಣೆ ಮಾಡಬಹುದಾಗಿದ್ದು, ಅಭ್ಯರ್ಥಿಗಳು ದೇಶದಾದ್ಯಂತ ಸೇವೆ ಸಲ್ಲಿಸಲು ಸಿದ್ಧರಿರಬೇಕಾಗುತ್ತದೆ.

ವೇಗದ ಉದ್ಯೋಗ ಮಾಹಿತಿ:

ಅರ್ಜಿ ಸಲ್ಲಿಸಲು ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು (ಕೊನೆಯ ದಿನಾಂಕ: ಜುಲೈ 3), ಆಸಕ್ತರು ಕೊನೆಯ ಕ್ಷಣದ ವೆಬ್‌ಸೈಟ್ ಸರ್ವರ್ ದಟ್ಟಣೆಯನ್ನು ತಪ್ಪಿಸಲು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ. ಹೆಚ್ಚಿನ ವಿವರಗಳಿಗಾಗಿ  ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ:

Published On – 3:59 pm, Wed, 1 July 26

Source link

ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ: ಕೃಪೆ ತೋರುವನೇ ವರುಣ ದೇವ? – Kannada News | Farmer’s Mouna Anushthana: A Silent Prayer for Rain

ಮೌನಾನುಷ್ಠಾನಕ್ಕೆ ಕುಳಿತ ರೈತ Image Credit source: tv9 kannada

ಗದಗ, ಜುಲೈ 01: ಮುಂಗಾರು ಮಳೆ (Rain) ಕೈ ಕೊಟ್ಟಿದೆ. ಸಾಲ-ಸೋಲ ಮಾಡಿ‌ ಬೆಳೆದ ಬೆಳೆ ನಾಶವಾಗುತ್ತಿದ್ದು, ರೈತರು (farmer) ಕಣ್ಣೀರು ಹಾಕುವಂತಾಗಿದೆ. ಹೀಗಾಗಿ ಮಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಹೀಗಿರುವಾಗ ಓರ್ವ ರೈತ ಊಟ, ನಿದ್ದೆ, ಇಲ್ಲದೆ ಹಗಲು-ರಾತ್ರಿ ಎನ್ನದೆ ಮೌನ ಅನುಷ್ಠಾನಕ್ಕೆ ಕುಳಿತ್ತಿದ್ದಾರೆ. ಮಳೆ ಆಗುವವರಿಗೆ ಮೌನ ಅನುಷ್ಠಾನ ಮಾಡಲು ಮುಂದಾಗಿದ್ದಾರೆ. ರೈತನಿಗೆ ಗ್ರಾಮದ ನೂರಾರು ಜನರು ಸಾಥ್ ನೀಡಿದ್ದು, ವರುಣನಿಗಾಗಿ ಪ್ರಾರ್ಥನೆ ನಡೆಸಿದ್ದಾರೆ.

ಮೌನ ಅನುಷ್ಠಾನಕ್ಕೆ ಕುಳಿತ ರೈತ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೂದಿಹಾಳ ಗ್ರಾಮದ ಹೊರವಲಯದ ಜಮೀನಿನ ಮರದ ಕೆಳಗೆ ರೈತ ಭೀಮಪ್ಪ ಚಳ್ಳಿಕೇರಿ ಮೌನ ಅನುಷ್ಠಾನಕ್ಕೆ ಕುಳಿತ್ತಿದ್ದಾರೆ. ಮೈಲಾರ ದೇವರ ಆರಾಧಕರಾಗಿರುವ ಭೀಮಪ್ಪ ಚಳ್ಳಿಕೇರಿ ರೈತ ಕೂಡ ಹೌದು. ಸದ್ಯ ಭೀಮಪ್ಪ ಚಳ್ಳಿಕೇರಿ ಅವರು ಮಳೆ ಆಗುವವರಿಗೆ ಮೌನ ಅನುಷ್ಠಾನದ ನಿರ್ಧಾರ ಕೈಗೊಂಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಮಾಯವಾಯ್ತು ಮುಂಗಾರು, ಹೇಳತೀರದಾಯ್ತು ಅನ್ನದಾತರ ಸ್ಥಿತಿ

ಸಾಲ-ಸೋಲ ಮಾಡಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಮಾತ್ರ ಆಗುತ್ತಿಲ್ಲ. ಬೆಳೆಗಳು ಒಣಗುತ್ತಿವೆ. ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಭೀಮಪ್ಪ ಚಳ್ಳಿಕೇರಿ ದೇವರ ಮೊರೆ ಹೋಗಿದ್ದಾರೆ. ಕೆಲವು ರೈತರೊಂದಿಗೆ ಚರ್ಚೆ ಮಾಡಿ, ನಂತರ ಮೌನ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಮಳೆ ಆಗುವವರಿಗೆ ಮೌನ ಅನುಷ್ಠಾನ ಮಾಡುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಮಳೆ ಆಗದಿರುವುದರಿಂದ ಜಿಲ್ಲೆಯಲ್ಲಿ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜಾನಪದ ಹಾಡು ಹೇಳುವ ಮೂಲಕ ಮಳೆರಾಯನ ಸ್ಮರಣೆ

ಇನ್ನು ಯಾರೊಂದಿಗೂ ಮಾತನಾಡದೆ ದೇವರ ನಾಮಸ್ಮರಣೆಯಲ್ಲಿ ನಿರತರಾಗಿರುವ ಭೀಮಪ್ಪ ಅವರ ಈ ವಿಶಿಷ್ಟ ಅನುಷ್ಠಾನವನ್ನು ನೋಡಲು, ಅಕ್ಕಪಕ್ಕದ ಗ್ರಾಮಸ್ಥರು ಆಗಮಿಸುತ್ತಿದ್ದಾರೆ. ಮಹಿಳೆಯರು ಮಳೆರಾಯ ಕೃಪೆ ತೋರಲಿ ಎಂದು ಜಾನಪದ ಹಾಡು ಹಾಡುವ ಮೂಲಕ ಮಳೆರಾಯನ ಸ್ಮರಣೆ ಮಾಡುತ್ತಿದ್ದಾರೆ.

ಮಳೆ ಆಗುತ್ತದೆ ಎಂದ ರೈತರು 

ಜಿಲ್ಲೆಯಲ್ಲಿ ಶೇಕಡ 50 ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಆಗದಿರುವುದರಿಂದ ಹೆಸರು, ಮೆಕ್ಕೆಜೋಳ ಒಣಗಿ ಹೋಗುತ್ತಿದೆ. ಹೀಗಾಗಿ ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಮಳೆ ಬರಲಿ ಎಂದು ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಪುರಸ್ಕಾರ ಮಾಡಲಾಗುತ್ತಿದೆ. ಈ ಮಧ್ಯೆ ರೈತ ಹಾಗೂ ದೇವರ ಆರಾಧಕರಾದ ಭೀಮಪ್ಪ ಅವರು ದೇವರ ಸ್ಮರಣೆ ಮಾಡುತ್ತಿದ್ದಾರೆ. ಮಳೆ ಆಗುತ್ತದೆ ಎನ್ನುವ ನಂಬಿಕೆಯಿದೆ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ:  ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು

ಮಳೆ ಕೈಕೊಟ್ಟಿರುವುದರಿಂದ ಅನ್ನದಾತರು ಕಂಗಾಲಾಗಿದ್ದಾರೆ. ಈ ಹಿಂದೆ ಕೂಡ ಭೀಮಪ್ಪ ಅವರು ಮೌನ ಅನುಷ್ಠಾನ ಮಾಡಿದ್ದರು. ಇದೀಗ ಮತ್ತೆ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಈಗಲಾದರೂ ಮಳೆರಾಯ ಕೃಪೆ ತೋರಿಸುತ್ತಾನೆ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾರ್ದಿಕ್ ಪಾಂಡ್ಯ ಖರೀದಿಗೆ ಸಾಲುಗಟ್ಟಿ ನಿಂತ ಫ್ರಾಂಚೈಸಿಗಳು; ಹೊಸ ಸೇರ್ಪಡೆ ಸಿಎಸ್​ಕೆ – Kannada News | IPL 2027: Hardik Pandya Released by MI? CSK, KKR, RR in Transfer Race

2027 ರ ಐಪಿಎಲ್ (IPL 2027) ಆರಂಭಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ತಂಡದಿಂದ ಬಿಡುಗಡೆ ಮಾಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಚಿಂತಿಸಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಆಟಗಾರನಾಗಿ ಹಾಗೂ ನಾಯಕನಾಗಿ ಹಾರ್ದಿಕ್ ಅವರ ಕಳಪೆ ಪ್ರದರ್ಶನ ಎನ್ನಲಾಗುತ್ತಿದೆ. ಒಂದು ವೇಳೆ ಹಾರ್ದಿಕ್ ತಂಡದಿಂದ ಹೊರಬಿದ್ದರೆ ಮುಂದೆ ಯಾವ ತಂಡವನ್ನು ಸೇರುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಏಕೆಂದರೆ ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಹಲವು ಫ್ರಾಂಚೈಸಿಗಳು ತಯಾರಿ ನಡೆಸಿವೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಪಾಂಡ್ಯರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿತ್ತು. ಆದರೀಗ ಪಾಂಡ್ಯ ಖರೀದಿಗಾಗಿ ಹಲವು ತಂಡಗಳು ಮುಂದಾಗಿವೆ ಎನ್ನಲಾಗುತ್ತಿದೆ.

ಹಾರ್ದಿಕ್ ಪಾಂಡ್ಯ ಖರೀದಿಗೆ ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯು ಮೂರೂ ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಹಿಂದೆ, ಕೆಕೆಆರ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸ್ಪರ್ಧೆಯಲ್ಲಿದ್ದವು. ಏಕೆಂದರೆ ಕೆಕೆಆರ್ ಹೊಸ ನಾಯಕನನ್ನು ಹುಡುಕುತ್ತಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ಒಬ್ಬೊಳ್ಳೆ ಆಲ್‌ರೌಂಡರ್​ಗಾಗಿ ಪ್ರಯತ್ನಿಸುತ್ತಿದೆ. ಆದರೆ ಈಗ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹಾರ್ದಿಕ್ ಪಾಂಡ್ಯ ಖರೀದಿಗೆ ಮುಂದಾಗಿದೆ

ಹಾರ್ದಿಕ್ ಪಾಂಡ್ಯ ಹಿಂದೆ ಬಿದ್ದ ಸಿಎಸ್​ಕೆ

ಪ್ರಶ್ನೆ ಏನೆಂದರೆ, ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಏನು ಲಾಭ? ಎಂಬುದು. ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ತಂಡಕ್ಕೆ ಅವರಂತಹ ಆಲ್‌ರೌಂಡರ್ ತೀರಾ ಅಗತ್ಯವಿದೆ. ಪಾಂಡ್ಯ ಒಬ್ಬ ವೇಗದ ಬೌಲರ್ ಮತ್ತು ಅದ್ಭುತ ಬ್ಯಾಟ್ಸ್‌ಮನ್. ಪಾಂಡ್ಯ 4 ನೇ ಕ್ರಮಾಂಕದಿಂದ 7 ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡಬಹುದು. ಅಲ್ಲದೆ ಧೋನಿ ನಿರ್ಗಮನದೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಭಾರತದಾದ್ಯಂತ ಜನಪ್ರಿಯವಾಗಿರುವ ಪಾಂಡ್ಯ ಅವರ ಇಮೇಜ್ ಹೊಂದಿರುವ ಆಟಗಾರನ ಅಗತ್ಯವಿದೆ.

ಈ 2 ತಂಡಗಳಿಗೆ ಪಾಂಡ್ಯ ಬೇಕಾಗಿಲ್ಲ

ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಖರೀದಿಗೆ ಎರಡು ತಂಡಗಳು ಆಸಕ್ತಿ ಹೊಂದಿಲ್ಲ. ಆ ಎರಡು ತಂಡಗಳು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಉಳಿದೆಲ್ಲ ತಂಡಗಳು ಅವರ ಹಿಂದೆ ಬಿದ್ದಿವೆ. ಹಾರ್ದಿಕ್ ಪಾಂಡ್ಯ ಕಳೆದ ಮೂರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಒಮ್ಮೆ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದು ಅವರ ನಾಯಕತ್ವದಲ್ಲಿ ತಂಡವು ಎರಡನೇ ಬಾರಿಗೆ ಫೈನಲ್ ತಲುಪಿತ್ತು.

ಐಪಿಎಲ್ ಮುಗಿದ ಬೆನ್ನಲ್ಲೇ ಹೊಸ ಟಿ20 ತಂಡ ಸೇರಿಕೊಂಡ ದೇವದತ್ ಪಡಿಕ್ಕಲ್

ಹಾರ್ದಿಕ್ ಪಾಂಡ್ಯ ಐಪಿಎಲ್ ವೃತ್ತಿಜೀವನ

ಹಾರ್ದಿಕ್ ಪಾಂಡ್ಯ ಇದುವರೆಗೆ 162 ಐಪಿಎಲ್ ಪಂದ್ಯಗಳನ್ನಾಡಿದ್ದು, 2955 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 82 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಆದರೆ ಐಪಿಎಲ್ 2026 ರಲ್ಲಿ ಪಾಂಡ್ಯ ಅವರ ಬ್ಯಾಟಿಂಗ್ ಕಳಪೆಯಾಗಿತ್ತು, 22.8 ರ ಸರಾಸರಿಯಲ್ಲಿ ಕೇವಲ 206 ರನ್‌ ಕಲೆಹಾಕಿದರೆ, ಬೌಲಿಂಗ್​ನಲ್ಲಿ ಆಡಿದ 10 ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:00 pm, Wed, 1 July 26

Source link

ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು? – Kannada News | VB G RAM G Replaces MGNREGA Today: Government announces wage rates under new jobs scheme

ಬೆಂಗಳೂರು, (ಜುಲೈ 01): ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯ್ದೆಯ (ನರೇಗಾ) ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ಉದ್ಯೋಗ ಖಾತಿ ಮತ್ತಯ ಜೀವನೋಪಾಯ ಮಿಷನ್ (ಗ್ರಾಮೀಣ) (VB G RAM G)  ಕಾಯ್ದೆಯು ದೇಶದಾದ್ಯಂತ ಇಂದಿನಿಂದಲೇ (ಜುಲೈ 01) ಅನುಷ್ಠಾನಕ್ಕೆ ಬರಲಿದ್ದು, ಹೊಸ ಕಾಯ್ದೆಯ ಪರಿಷ್ಕೃತ ವೇತನ ದರಗಳನ್ನು ಸಹ ಪ್ರಕಟಿಸಲಾಗಿದ್ದು, ದಿನಕ್ಕೆ 300 ರೂ.ಗಿಂತ ಕಡಿಮೆ ಇರದರಂತೆ ಕುಟುಂಬಕ್ಕೆ 125 ದಿನಗಳ ಕೆಲಸದ ಗ್ಯಾರಂಟಿ ನೀಡಲಾಗಿದೆ.  ರಾಷ್ಟ್ರೀಯ ಸರಾಸರಿ ವೇತನ, ನರೇಗಾ ಅಡಿಯಲ್ಲಿ ದಿನಕ್ಕೆ 298.8 ರೂಪಾಯಿಗಳಿಂದ ಈಗ ಬಿಬಿ-ಜಿ-ರಾಮ್​ ಜಿ ಅಡಿಯಲ್ಲಿ ದಿನಕ್ಕೆ 327.4ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅಂದರೆ ದಿನಕ್ಕೆ ಸರಾಸರಿ 28.6 ರೂ. ಹೆಚ್ಚಳವಾಗಿದೆ ಎಂದು ವೇತನ ದರ ಜಾರಿಗೆ ಬರಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಇನ್ನು ಕರ್ನಾಟಕದಲ್ಲಿ ವೇತನ 382 ರೂಪಾಯಿ.

ಪರಿಷ್ಕೃತ ಅಧಿಸೂಚನೆಯು ಹೆಚ್ಚಿನ ವೇತನವನ್ನು ಖಾತರಿಪಡಿಸಿದ್ದು, ಇದು ಪ್ರಾದೇಶಿಕ ಅಸಮಾನತೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಕಾರ್ಮಿಕರ ಘನತೆಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಹೆಗ್ಗುರುತಿನ ಹೆಜ್ಜೆಯಾಗಿದೆ. 300 ರೂ.ಗಳ ಮಧ್ಯಂತರ ಮೂಲ ವೇತನ ದರವನ್ನು ಪರಿಚಯಿಸಿರುವುದು ಅಧಿಸೂಚನೆಯ ಒಂದು ಪ್ರಮುಖ ವೈಶಿಷ್ಟ್ಯವಾಗಿದೆ. ಆ ಮೂಲಕ ಕಾರ್ಯಕ್ರಮದ ಅಡಿಯಲ್ಲಿ ಯಾವುದೇ ಅಧಿಸೂಚಿತ ವೇತನವು ದಿನಕ್ಕೆ 300 ರೂ.ಗಿಂತ ಕಡಿಮೆ ಇರದರಂತೆ ಇದು ಖಚಿತಪಡಿಸುತ್ತದೆ.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದು, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಅಭಿವೃದ್ಧಿಯ ಪ್ರಯೋಜನಗಳು ಪ್ರತಿ ಬಡ ಕುಟುಂಬಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ʻವಿಬಿ-ಜಿ ರಾಮ್ ಜಿ ಕಾಯ್ದೆʼಯ ಪ್ರಾರಂಭವು ಸಮೃದ್ಧ ಹಳ್ಳಿಗಳ ಮೂಲಕ ʻವಿಕಸಿತ ಭಾರತʼವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಉದ್ಯೋಗ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುವುದರ ಜೊತೆಗೆ, ನಾವು ಗ್ರಾಮೀಣ ಕಾರ್ಮಿಕರಿಗೆ ಉತ್ತಮ ವೇತನವನ್ನು ಖಾತ್ರಿಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಐತಿಹಾಸಿಕವಾಗಿ ವೇತನ ಕಡಿಮೆ ಇರುವ ರಾಜ್ಯಗಳಿಗೆ ಅತ್ಯಧಿಕ ಹೆಚ್ಚಳವನ್ನು ಒದಗಿಸಲಾಗಿದೆ, ಇದರಿಂದಾಗಿ ಹೆಚ್ಚಿನ ಬೆಂಬಲದ ಅಗತ್ಯವಿರುವವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಐತಿಹಾಸಿಕ ವೇತನ ಪರಿಷ್ಕರಣೆಯು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ, ಖರೀದಿ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಭಾರತದಾದ್ಯಂತ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದರು.

ದೇಶಾದ್ಯಂತ ಐತಿಹಾಸಿಕ ವೇತನ ಹೆಚ್ಚಳ

ಪರಿಷ್ಕೃತ ವೇತನ ಅಧಿಸೂಚನೆಯು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವೇತನ ಪ್ರದೇಶಗಳಲ್ಲಿ ವೇತನ ದರಗಳ ಹೆಚ್ಚಳವನ್ನು ಜಾರಿಗೊಳಿಸುತ್ತದೆ. ಇದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಅತ್ಯಂತ ಮಹತ್ವದ ವೇತನ ಪರಿಷ್ಕರಣೆಗಳಲ್ಲಿ ಒಂದಾಗಿದೆ. ಎಲ್ಲಾ 34 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ವೇತನ ಪ್ರದೇಶಗಳಲ್ಲಿ ವೇತನ ದರಗಳನ್ನು ಹೆಚ್ಚಿಸಲಾಗಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಡಳಿತ ಘಟಕಗಳನ್ನು ಹೊಸ 300 ರೂ.ಗಳ ಮಧ್ಯಂತರ ಮೂಲ ವೇತನ ದರದ ವ್ಯಾಪ್ತಿಗೆ ತರಲಾಗಿದೆ. ರಾಷ್ಟ್ರೀಯ ಸರಾಸರಿ ಅಧಿಸೂಚಿತ ವೇತನವು ʻಮನರೇಗಾʼ ಅಡಿಯಲ್ಲಿ ದಿನಕ್ಕೆ 298.8 ರೂ.ಇದ್ದದ್ದು ʻವಿಬಿ-ಜಿ ರಾಮ್‌ ಜಿʼ ಅಡಿಯಲ್ಲಿ ದಿನಕ್ಕೆ 327.4 ರೂ.ಗೆ ಏರಿಕೆಯಾಗಿದೆ. ಇದು ದಿನಕ್ಕೆ ಸರಾಸರಿ 28.6 ರೂ. ಹೆಚ್ಚಳವನ್ನು ಸೂಚಿಸುತ್ತದೆ. ದೇಶಾದ್ಯಂತ ಸರಾಸರಿ ಶೇಕಡಾವಾರು ಹೆಚ್ಚಳವು ಶೇಕಡಾ 10 ಕ್ಕಿಂತ ಅಧಿಕವಾಗಿದೆ. 300 ರೂ.ಗಳು ʻವಿಬಿ ಜಿ ರಾಮ್‌ ಜಿʼ ಅಡಿಯಲ್ಲಿ ಈಗ ಗ್ರಾಮೀಣ ವೇತನದ ಹೊಸ ರಾಷ್ಟ್ರೀಯ ಮಾನದಂಡವಾಗಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮದಡಿ ಮೊದಲ ಬಾರಿಗೆ ದಿನಕ್ಕೆ 300 ರೂ.ಗಳ ಮಧ್ಯಂತರ ಮೂಲ ವೇತನ ದರವನ್ನು ಪರಿಚಯಿಸಲಾಗಿದೆ.ಈ ಅಧಿಸೂಚನೆಗೆ ಮೊದಲು, ಹಲವಾರು ರಾಜ್ಯಗಳಲ್ಲಿ ವೇತನ ದರಗಳು 300 ರೂ.ಗಿಂತ ಕಡಿಮೆ ಇದ್ದವು. ಕೆಲವೆಡೆ ಕನಿಷ್ಠ ಅಧಿಸೂಚಿತ ವೇತನವು ದಿನಕ್ಕೆ 241 ರೂ. ಮಾತ್ರ ಇತ್ತು. ಪರಿಷ್ಕೃತ ಅಧಿಸೂಚನೆಯ ಅಡಿಯಲ್ಲಿ, ಅಂತಹ ಪ್ರತಿಯೊಂದು ರಾಜ್ಯವನ್ನು ಹೊಸ ಮಾನದಂಡದ ವ್ಯಾಪ್ತಿಗೆ ತರಲಾಗಿದೆ, ಇದು ಗ್ರಾಮೀಣ ಕಾರ್ಮಿಕರಿಗೆ ಆದಾಯ ಭದ್ರತೆಯನ್ನು ಗಮನಾರ್ಹ ಮಟ್ಟದಲ್ಲಿ ಸುಧಾರಿಸುತ್ತದೆ. ಜೊತೆಗೆ ದೀರ್ಘಕಾಲದ ಪ್ರಾದೇಶಿಕ ವೇತನ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ. ಹೊಸ ಮಧ್ಯಂತರ ಮೂಲ ವೇತನ ದರವು 21 ರಾಜ್ಯಗಳು ಮತ್ತು ಆಡಳಿತಾತ್ಮಕ ಘಟಕಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಇದರ ಅತಿದೊಡ್ಡ ಪ್ರಯೋಜನಗಳು ಐತಿಹಾಸಿಕವಾಗಿ ಕಡಿಮೆ-ವೇತನ ಹೊಂದಿದ್ದ ರಾಜ್ಯಗಳನ್ನು ತಲುಪುತ್ತವೆ.

ಐತಿಹಾಸಿಕವಾಗಿ ಕಡಿಮೆ ವೇತನ ದರಗಳನ್ನು ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಲಾಭವನ್ನು ಖಚಿತಪಡಿಸಿಕೊಳ್ಳಲು ಪರಿಷ್ಕೃತ ವೇತನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ, ಇದು ಸಮಾನತೆ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನ ಕಾರ್ಮಿಕರು ಸುಮಾರು ಶೇಕಡಾ 24.5 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್, ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ ಮತ್ತು ಇತರ ಹಲವಾರು ರಾಜ್ಯಗಳು ಗಣನೀಯ ಹೆಚ್ಚಳಕ್ಕೆ ಸಾಕ್ಷಿಯಾಗಲಿವೆ.

ಹೆಚ್ಚಿನ ವೇತನ ದರ ಹೊಂದಿರುವ ರಾಜ್ಯಗಳೂ ಸಹ ವೇತನ ಏರಿಕೆಯ ಪ್ರಯೊಜನ ಪಡೆಯಲಿವೆ. ಈಗಾಗಲೇ ಮಧ್ಯಂತರ ಮೂಲ ವೇತನಕ್ಕಿಂತ ಹೆಚ್ಚಿನ ವೇತನ ದರಗಳನ್ನು ಹೊಂದಿರುವ ರಾಜ್ಯಗಳು ಸಹ ನಿಗದಿತ ವಿಧಾನದ ಆಧಾರದ ಮೇಲೆ ವೇತನ ಪರಿಷ್ಕರಣೆಗಳನ್ನು ಪಡೆಯಲಿವೆ. ಅಧಿಸೂಚನೆಯ ನಂತರ ಹರಿಯಾಣ (409 ರೂ.), ಗೋವಾ (406 ರೂ.), ಕೇರಳ (401 ರೂ.) ಮತ್ತು ಸಿಕ್ಕಿಂ (ಭೌಗೋಳಿಕವಾಗಿ ಎತ್ತರದಲ್ಲಿರುವ ಗ್ರಾಮ ಪಂಚಾಯಿತಿಗಳು) (450 ರೂ.) ಈಗ ದಿನಕ್ಕೆ 400 ರೂ.ಗಿಂತಲೂ ಅಧಿಕ ವೇತನ ದರಗಳನ್ನು ಸೂಚಿಸಿವೆ.

ಪಾರದರ್ಶಕ ಮತ್ತು ವೈಜ್ಞಾನಿಕ ವೇತನ ನಿರ್ಣಯ

ಪಾರದರ್ಶಕ ಮತ್ತು ವಸ್ತುನಿಷ್ಠ ವಿಧಾನದ ಆಧಾರದ ಮೇಲೆ ʻವಿಬಿ-ಜಿ ರಾಮ್‌ ಜಿ ಕಾಯ್ದೆ-2025ʼರ ನಿಬಂಧನೆಗಳ ಅಡಿಯಲ್ಲಿ ಪರಿಷ್ಕೃತ ವೇತನವನ್ನು ಅಧಿಸೂಚಿಸಲಾಗಿದೆ. ಗ್ರಾಮೀಣ ವೇತನ ದರಗಳಲ್ಲಿನ ಐತಿಹಾಸಿಕ ಅಸಮಾನತೆಗಳನ್ನು ಕಡಿಮೆ ಮಾಡುವುದರ ಜೊತೆಗೆ ನ್ಯಾಯಯುತ ವೇತನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಅಧಿಸೂಚನೆಯು ಹೊಸದಾಗಿ ಪರಿಚಯಿಸಲಾದ ಮಧ್ಯಂತರ ಮೂಲ ವೇತನ ದರವನ್ನು ವಾರ್ಷಿಕ ಸೂಚ್ಯಂಕದೊಂದಿಗೆ ಸಂಯೋಜಿಸುತ್ತದೆ.

ವಿಕಸಿತ ಭಾರತ ಅಡಿಯಲ್ಲಿ ಗ್ರಾಮೀಣ ಸಮೃದ್ಧಿಯ ಬಲವರ್ಧನೆ

ಪರಿಷ್ಕೃತ ವೇತನ ಅಧಿಸೂಚನೆಯು ʻವಿಬಿ-ಜಿ ರಾಮ್‌ ಜಿ ಕಾಯ್ದೆ-2025ʼರ ಪರಿವರ್ತನಾತ್ಮಕ ನಿಬಂಧನೆಗಳಿಗೆ ಪೂರಕವಾಗಿದೆ. ಇದು ಪ್ರತಿ ಅರ್ಹ ಗ್ರಾಮೀಣ ಕುಟುಂಬಕ್ಕೆ 125 ದಿನಗಳ ವೇತನಸಹಿತ ಉದ್ಯೋಗದ ಖಾತರಿ ಒದಗಿಸುತ್ತದೆ. ಒಟ್ಟಾರೆಯಾಗಿ, ವಿಸ್ತೃತ ಉದ್ಯೋಗ ಖಾತರಿ ಮತ್ತು ಪರಿಷ್ಕೃತ ವೇತನ ದರಗಳು ಗ್ರಾಮೀಣ ಆದಾಯವನ್ನು ಬಲಪಡಿಸುತ್ತವೆ, ಖರೀದಿ ಶಕ್ತಿಯನ್ನು ಸುಧಾರಿಸುತ್ತವೆ ಹಾಗೂ ದೀರ್ಘ ಬಾಳಿಕೆಯ ಗ್ರಾಮೀಣ ಸ್ವತ್ತುಗಳನ್ನು ಸೃಷ್ಟಿಸುತ್ತವೆ, ಜೊತೆಗೆ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಗ್ರಾಮೀಣಾಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂದು ನಿರೀಕ್ಷಿಸಲಾಗಿದೆ.

ಕಾಯ್ದೆಯ ಪ್ರಾರಂಭ ಮತ್ತು ಪರಿಷ್ಕೃತ ವೇತನ ದರಗಳ ಅಧಿಸೂಚನೆಯು ʻಗರೀಬ್ ಕಲ್ಯಾಣ್ʼ, ʻಅಂತ್ಯೋದಯʼ ಮತ್ತು ʻವಿಕಸಿತ ಭಾರತ@2047ʼದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಸೂಚಿಸುತ್ತದೆ. ಇದು ಭಾರತದ ಬೆಳವಣಿಗೆಯ ಪ್ರಯೋಜನಗಳು ಪ್ರತಿ ಹಳ್ಳಿ ಮತ್ತು ಪ್ರತಿ ಗ್ರಾಮೀಣ ಕುಟುಂಬವನ್ನು ತಲುಪುವುದನ್ನು ಖಚಿತಪಡಿಸುತ್ತದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:06 pm, Wed, 1 July 26

Source link

ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ – Kannada News | New Toll Rates: Bangalore’s NICE Road and E City Flyover See Big Price Jump

ಬೆಂಗಳೂರು, ಜು. 1: ಸಿಲಿಕಾನ್ ಸಿಟಿಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಸಾರಿಗೆ ಬಸ್ ದರ ಏರಿಕೆಯ ಪ್ರಸ್ತಾವನೆಯ ಬೆನ್ನಲ್ಲೇ, ಈಗ ಬೆಂಗಳೂರಿನ ಪ್ರಮುಖ ಟೋಲ್ ರಸ್ತೆಗಳ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಬೆಂಗಳೂರಿನ ಅತಿ ಬ್ಯುಸಿ ಕಾರಿಡಾರ್‌ಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಮತ್ತು ನೈಸ್ ರಸ್ತೆಗಳನ್ನು (NICE Road) ಬಳಸುವ ವಾಹನ ಸವಾರರು ಇಂದು ಜುಲೈ 1, 2026 ರಿಂದ ಪರಿಷ್ಕೃತ ಟೋಲ್ ದರಗಳನ್ನು ಪಾವತಿಸಬೇಕಾಗಿದೆ.

ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NECE) ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯ ವಿವಿಧ ಹಂತಗಳ ಟೋಲ್ ದರವನ್ನು ಪರಿಷ್ಕರಿಸಿದೆ. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ಸಂಪೂರ್ಣ ಪೆರಿಫೆರಲ್ ರಸ್ತೆಯಲ್ಲಿ ಚಲಿಸುವ ಕಾರುಗಳಿಗೆ ಸೆಕ್ಷನ್ ವಾರು ನಿಗದಿಪಡಿಸಲಾದ ದರ ಪಟ್ಟಿ ಇಲ್ಲಿದೆ.

ನೈಸ್ ರಸ್ತೆಯಲ್ಲಿ ಕಾರುಗಳ ಹೊಸ ದರ ವಿವರ:

ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂ.

ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂ.

ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂ.

ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂ.

ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂ.

ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂ.

ಲಿಂಕ್ ರಸ್ತೆ (Link Road): 83 ರೂ.

ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಹೊಸ ದರ ಪಟ್ಟಿ:

ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾರ್ಗಸೂಚಿಗಳ ಅನ್ವಯ ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರ ಹೆಚ್ಚಿಸಿದೆ. ಈ ದರಗಳು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ಇನ್ಮುಂದೆ ಕಾರುಗಳು ಸಿಂಗಲ್ ಜರ್ನಿಗೆ 65 ರೂ. (ಹಿಂದೆ 60 ರೂ. ಇತ್ತು) ಹಾಗೂ ಮಲ್ಟಿಪಲ್ ಜರ್ನಿಗೆ 100 ರೂ. ಪಾವತಿಸಬೇಕು.

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಂತ್ಲಿ ಪಾಸ್
ದ್ವಿಚಕ್ರ ವಾಹನ (ಟೂ-ವೀಲರ್) 25 ರೂ. 40 ರೂ. 785 ರೂ.
ಕಾರು / ಜೀಪ್ / ವ್ಯಾನ್ 65 ರೂ. 100 ರೂ. 1,960 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 90 ರೂ. 135 ರೂ. 2,745 ರೂ.
ಬಸ್ / ಟ್ರಕ್ 185 ರೂ. 275 ರೂ. 5,495 ರೂ.
ಮಲ್ಟಿ-ಆಕ್ಸಲ್ ವಾಹನ (MAV) 365 ರೂ. 550 ರೂ. 10,985 ರೂ.

ಇದನ್ನೂ ಓದಿ: ಎತ್ತಿನಹೊಳೆಯ ಆಳ-ಅಗಲ: ಯೋಜನೆ ಕಾಮಗಾರಿ ಎಷ್ಟಾಯ್ತು? ಇನ್ನೆಷ್ಟಿದೆ? ಇಲ್ಲಿದೆ ಮಾಹಿತಿ

ಅತ್ತಿಬೆಲೆ ಟೋಲ್ ಪ್ಲಾಜಾ ಪರಿಷ್ಕೃತ ದರಗಳು:

ತಮಿಳುನಾಡು ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ ಅತ್ತಿಬೆಲೆ ಟೋಲ್‌ನಲ್ಲೂ ದರ ಏರಿಕೆಯಾಗಿದೆ. ಆದರೆ, ಎಂದಿನಂತೆ ದ್ವಿಚಕ್ರ ವಾಹನಗಳಿಗೆ ಅತ್ತಿಬೆಲೆಯಲ್ಲಿ ಟೋಲ್ ವಿನಾಯಿತಿ ಮುಂದುವರಿದಿದೆ.

ವಾಹನದ ವರ್ಗ ಸಿಂಗಲ್ ಜರ್ನಿ ಮಲ್ಟಿಪಲ್ ಜರ್ನಿ ಮಂತ್ಲಿ ಪಾಸ್
ಕಾರು / ಜೀಪ್ / ವ್ಯಾನ್ 40  ರೂ. 60 ರೂ. 1,175 ರೂ.
ಲಘು ವಾಣಿಜ್ಯ ವಾಹನ / ಮಿನಿ ಬಸ್ 65 ರೂ. 100 ರೂ. 1,960 ರೂ.
ಬಸ್ / ಟ್ರಕ್  130 ರೂ. 195 ರೂ.  3,925 ರೂ.
ಮಲ್ಟಿ-ಆಕ್ಸಲ್ ವಾಹನ (MAV)  275 ರೂ.  410 ರೂ.  8,240 ರೂ.

ಐಟಿ ಉದ್ಯೋಗಿಗಳು ಹಾಗೂ ನಿತ್ಯ ಈ ಮಾರ್ಗಗಳಲ್ಲಿ ಸಂಚರಿಸುವ ಸವಾರರಿಗೆ ಈ ದರ ಏರಿಕೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್​​: ವಿಡಿಯೋ ವೈರಲ್ – Kannada News | Vice President CP Radhakrishnan Calls BJP Leader CT Ravi His Boss; Bengaluru Event Video Goes Viral

ಬೆಂಗಳೂರು, ಜುಲೈ 01: ಜೂನ್​​ 27ರಂದು ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್​​ ತಮ್ಮ ಭಾಷಣದ ವೇಳೆ ವಿಧಾನ ಪರಿಷತ್​​ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರನ್ನು ತಮ್ಮ ಬಾಸ್​​ ಎಂದು ಹೇಳಿರುವ ವಿಡಿಯೋ ಭಾರಿ ವೈರಲ್​​ ಆಗಿದೆ. ತಮಿಳುನಾಡು ಉಸ್ತುವಾರಿಯಾಗಿ ಸಿ.ಟಿ. ರವಿ ಅವರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರ ಜೊತೆ ತಾನು ಕೆಲಸ ಮಾಡಿದ್ದೆ. ಹಳೆಯದೋ, ಈಗಿನದೋ ಆದರೆ ಬಾಸ್​​ ಯಾವಾಗಲೂ ಬಾಸ್​​ ಎಂದು ಹೇಳುವ ಮೂಲಕ ಅವರು ಸರಳತೆ ಮೆರೆದಿದ್ದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version