ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್‌ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ – Kannada News | Prime Video Ad Row: Australia’s Watchdog Sues Amazon Over Subscription Changes

ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಹೊಸ ಕಾನೂನು ಸಂಕಷ್ಟವನ್ನು ಎದುರಿಸುತ್ತಿದೆ. ಪ್ರೈಮ್ ವಿಡಿಯೋ (Prime Video) ಸೇವೆಯಲ್ಲಿ ಮಾಡಲಾದ ಬದಲಾವಣೆಗಳ ವಿರುದ್ಧ ಅಲ್ಲಿನ ಸ್ಪರ್ಧಾತ್ಮಕ ನಿಯಂತ್ರಣ ಮಂಡಳಿಯು (Competition Watchdog) ಕಂಪನಿಯನ್ನು ಫೆಡರಲ್ ಕೋರ್ಟ್‌ಗೆ ಎಳೆದೊಯ್ದಿದೆ. ಚಂದಾದಾರಿಕೆ ಪಡೆದುಕೊಂಡ ಹೊರತಾಗಿಯೂ ಬಳಕೆದಾರರ ಖಾತೆಗಳಿಗೆ ಜಾಹೀರಾತುಗಳನ್ನು ಪರಿಚಯಿಸಿರುವುದು ಈ ಪ್ರಕರಣದ ಪ್ರಮುಖ ಕಾರಣವಾಗಿದೆ.

ನಿಯಂತ್ರಣ ಮಂಡಳಿಯ ಆರೋಪದ ಪ್ರಕಾರ, ಗ್ರಾಹಕರು ತಾವು ಮೊದಲೇ ಹಣ ಪಾವತಿಸಿ ಪಡೆದುಕೊಂಡಿದ್ದ ಸೇವೆಯಲ್ಲಿ ಬದಲಾವಣೆಯಾಗಲಿದೆ ಎಂಬ ಸೂಕ್ತ ಮಾಹಿತಿಯನ್ನು ನೀಡದೆಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಜಾಹೀರಾತು ರಹಿತ ಸೇವೆಯನ್ನು ಬಯಸುವ ಬಳಕೆದಾರರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದಿದೆ.

ನಿಯಂತ್ರಣ ಮಂಡಳಿಯ ಪ್ರಕಾರ, ಅನೇಕ ಚಂದಾದಾರರು ಹೆಚ್ಚುವರಿ ಹಣ ಪಾವತಿಸಲು ಒಪ್ಪದಿದ್ದರೆ ಜಾಹೀರಾತು ಪ್ರಸಾರ ಆಗುತ್ತದೆ. ಇದು ಗ್ರಾಹಕರು ತಾವು ಪಡೆದ ಚಂದಾದಾರಿಕೆಯ ಸ್ವರೂಪದ ಬಗ್ಗೆ ತಪ್ಪು ದಾರಿಗೆಳೆಯುವಂತೆ ಮಾಡಿದೆ ಎಂದು ಮಂಡಳಿ ವಾದಿಸಿದೆ.

ಆದರೆ, ಅಮೆಜಾನ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಹೊಸ ಯೋಜನೆ ಜಾರಿಗೆ ಬರುವ ಮುನ್ನವೇ ಇಮೇಲ್ ಮತ್ತು ಆ್ಯಪ್ ನೋಟಿಫಿಕೇಶನ್‌ಗಳ ಮೂಲಕ ಗ್ರಾಹಕರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದೆ. ಕಂಪನಿಯು ಈ ಆರೋಪಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಸಜ್ಜಾಗಿದೆ.

ಈ ಪ್ರಕರಣವು ಈಗ ಡಿಜಿಟಲ್ ಚಂದಾದಾರಿಕೆ ಸೇವೆಗಳಿಗೆ ಒಂದು ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿದೆ. ಒಂದು ವೇಳೆ ನ್ಯಾಯಾಲಯವು ಅಮೆಜಾನ್ ವಿರುದ್ಧ ತೀರ್ಪು ನೀಡಿದರೆ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪಾವತಿ ಯೋಜನೆಗಳನ್ನು ಬದಲಾಯಿಸುವಾಗ ಅಥವಾ ಹೊಸ ಶುಲ್ಕಗಳನ್ನು ಪರಿಚಯಿಸುವಾಗ ಹೆಚ್ಚಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದನ್ನು ಇದು ಕಡ್ಡಾಯಗೊಳಿಸಲಿದೆ.

ಇದನ್ನೂ ಓದಿ: ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

ಭಾರತದಲ್ಲೂ ಇದೇ ಸಮಸ್ಯೆ

ಭಾರತದಲ್ಲೂ ಇದೇ ಸಮಸ್ಯೆ ಎದುರಾಗಿದೆ. ಇದು ಸಿನಿರಸಿಕರು ಹಾಗೂ ಗ್ರಾಹಕರ ವಲಯದಲ್ಲಿ ತೀವ್ರ ಚರ್ಚೆಯಲ್ಲಿತ್ತು. ಒಟಿಟಿ ವೀಕ್ಷಣೆಗಾಗಿ ಈಗಾಗಲೇ ದೊಡ್ಡ ಮಟ್ಟದಲ್ಲಿ ದುಡ್ಡು ಕೊಟ್ಟ ಹೊರತಾಗಿಯೂ, ಮಧ್ಯದಲ್ಲಿ ಮತ್ತೆ ಜಾಹೀರಾತುಗಳನ್ನು ಹಾಕಲಾಗುತ್ತದೆ ಎಂದು ಅನೇಕ ಬಳಕೆದಾರರು ತೀವ್ರ ಅಪಸ್ವರ ಎತ್ತಿದ್ದರು. ಹಣ ಪಡೆದೂ ಜಾಹೀರಾತು ತೋರಿಸುವ ಒಟಿಟಿ ಸಂಸ್ಥೆಗಳ ಈ ಧೋರಣೆಗೆ ಭಾರತದಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಭಾರತದಲ್ಲಿಯೂ ಕೋರ್ಟ್​​ಗೆ ಹೋಗುವ ಅನಿವಾರ್ಯತೆ ಇದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ – Kannada News | Discarded smartphones can become part of data center, US researchers experimenting

ನವದೆಹಲಿ, ಜುಲೈ 1: ಈಗ ಹೊಸ ಸ್ಮಾರ್ಟ್​ಫೋನ್​ಗಳು ಅಗ್ಗದ ಬೆಲೆ ಸಿಗುವುದರಿಂದ ಅಸಂಖ್ಯಾತ ಹಳೆಯ ಫೋನ್​ಗಳು ತ್ಯಾಜ್ಯಗಳಾಗಿ ಮಾರ್ಪಡುತ್ತಿವೆ. ನಿತ್ಯವೂ ಟನ್​ಗಟ್ಟಲೆ ಎಲೆಕ್ಟ್ರಾನಿಕ್ಸ್ ತ್ಯಾಜ್ಯವು (eWaste) ಭೂಮಿಯ ನೆಲವನ್ನು ಕಲುಷಿತಗೊಳಿಸುತ್ತಿದೆ. ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳು ರೀಸೈಕಲ್ ಆಗುವುದಿಲ್ಲ. ಇದೇ ವೇಳೆ, ಸಮಾಧಾನಕರ ಬೆಳವಣಿಗೆಯೊಂದರಲ್ಲಿ, ಕಂಪ್ಯೂಟರ್ ವಿಜ್ಞಾನಿಗಳು ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್ ತಯಾರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಗೂಗಲ್ (Google) ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಸೇರಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮಿನಿ ಡೇಟಾ ಸೆಂಟರ್ (Mini Data Centre) ನಿರ್ಮಿಸುವ ಹೊಸ ಪ್ರಯೋಗದಲ್ಲಿ ತೊಡಗಿದ್ದಾರೆ. ಗೂಗಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಒಂದು ಬ್ಲಾಗ್ ಪೋಸ್ಟ್​ನಲ್ಲಿ ಇದರ ಮಾಹಿತಿ ನೀಡಿದೆ.

ಫೋನ್ ಕ್ಲಸ್ಟರ್ ಕಂಪ್ಯೂಟಿಂಗ್

ನಾವು ಮನೆಯ ಮೂಲೆಗಳಲ್ಲಿ ಎಸೆದಿಡುವ ಹಳೆಯ ಸ್ಮಾರ್ಟ್‌ಫೋನ್‌ಗಳ ಮದರ್‌ಬೋರ್ಡ್‌ಗಳನ್ನು ಒಂದಕ್ಕೊಂದು ಜೋಡಿಸಿ ಒಂದು ನೆಟ್‌ವರ್ಕ್ ಸೃಷ್ಟಿಸಲಾಗುತ್ತದೆ. ಇದನ್ನು ‘ಫೋನ್ ಕ್ಲಸ್ಟರ್ ಕಂಪ್ಯೂಟಿಂಗ್’ (Phone Cluster Computing) ಎಂದು ಕರೆಯಲಾಗುತ್ತದೆ. ಇದರ ಮೂಲಕ ಹಳೆಯ ಫೋನ್‌ಗಳ ಹಾರ್ಡ್‌ವೇರ್ ಸಾಮರ್ಥ್ಯವನ್ನು ಬಳಸಿಕೊಂಡು ಕ್ಲೌಡ್ ಕಂಪ್ಯೂಟಿಂಗ್ ಅಥವಾ ಡೇಟಾ ಸೆಂಟರ್‌ನಂತಹ ಕೆಲಸಗಳನ್ನು ಮಾಡಬಹುದು.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

2,000 ಪಿಕ್ಸೆಲ್ ಫೋನ್‌ಗಳ ಬಳಕೆ

ಗೂಗಲ್ ಬೆಂಬಲದೊಂದಿಗೆ ಆರಂಭದಲ್ಲಿ 2,000 ಹಳೆಯ ಪಿಕ್ಸೆಲ್ (Google Pixel) ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಈ ಡೇಟಾ ಸೆಂಟರ್ ನಿರ್ಮಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಕಡಿಮೆ ವೆಚ್ಚದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಸೌಲಭ್ಯ ಒದಗಿಸಲಿದೆ.

ಕೇವಲ 20 ಹಳೆಯ ಫೋನ್‌ಗಳ ನೆಟ್‌ವರ್ಕ್, 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಒಂದು ಇಡೀ ಕಾಲೇಜು ಕೋರ್ಸ್‌ನ ಲೋಡ್ ಅನ್ನು ಯಶಸ್ವಿಯಾಗಿ ನಿಭಾಯಿಸಬಲ್ಲುದು. ಅಷ್ಟೇ ಅಲ್ಲ, ಇದು ಅಮೆಜಾನ್‌ನ AWS ಗಿಂತಲೂ ವೇಗವಾಗಿ ಫಲಿತಾಂಶ ನೀಡಿದೆ ಎಂದು ಸಂಶೋಧನೆ ತಿಳಿಸಿದೆ. ಇನ್ನು, 2,000 ಪಿಕ್ಸೆಲ್ ಫೋನ್​ಗಳನ್ನು ಬಳಸಿ ನೆಟ್ವರ್ಕ್ ನಿರ್ಮಿಸಿದರೆ ಇಂಥ ನೂರಾರು ತರಗತಿಗಳನ್ನು ಬೆಂಬಲಿಸಬಹುದು.

ಇದು ಗೂಗಲ್ ಅಥವಾ ಅಮೆಜಾನ್‌ನಂತಹ ದೈತ್ಯ ಎಐ (AI) ಡೇಟಾ ಸೆಂಟರ್‌ಗಳಿಗೆ ಪರ್ಯಾಯವಲ್ಲ. ಬದಲಾಗಿ ಸಣ್ಣ ಸಂಶೋಧನೆಗಳು, ಶೈಕ್ಷಣಿಕ ಕಂಪ್ಯೂಟಿಂಗ್ ಮತ್ತು ಸಣ್ಣ ಮಟ್ಟದ ಡೇಟಾ ಪ್ರೊಸೆಸಿಂಗ್‌ಗೆ ಇದು ಅತ್ಯಂತ ಕಡಿಮೆ ವೆಚ್ಚದ ಮಾರ್ಗವಾಗಿದೆ. ಇದು ಇನ್ನೂ ಪ್ರಯೋಗ ಹಂತದಲ್ಲಿರುವುದರಿಂದ, ವಾಸ್ತವಿಕವಾಗಿ ಇದನ್ನು ಅಳವಡಿಸುವಾಗ ಯಾವ್ಯಾವ ಸವಾಲುಗಳು ಎದುರಾಗಬಹುದು ಎನ್ನುವುದು ಖಾತ್ರಿ ಇಲ್ಲ.

ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್

ಕ್ಲಸ್ಟರ್ ಫೋನ್ ಕಂಪ್ಯೂಟಿಂಗ್ ತಂತ್ರಜ್ಞಾನ ಏಕೆ ಮುಖ್ಯ?

  • ಇ-ತ್ಯಾಜ್ಯ (E-Waste) ನಿಯಂತ್ರಣ: ಪ್ರತಿ ವರ್ಷ ಲಕ್ಷಾಂತರ ಹಳೆಯ ಫೋನ್‌ಗಳು ಕಸದ ಬುಟ್ಟಿ ಸೇರಿ ಪರಿಸರ ಮಾಲಿನ್ಯ ಉಂಟುಮಾಡುತ್ತಿವೆ. ಈ ಯೋಜನೆ ಫೋನ್‌ಗಳಿಗೆ ಎರಡನೇ ಜೀವನ ನೀಡುತ್ತದೆ.
  • ಕಾರ್ಬನ್ ಹೊರಸೂಸುವಿಕೆ ಇಳಿಕೆ: ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯ ತಪ್ಪುವುದರಿಂದ ಪರಿಸರಕ್ಕೆ ಆಗುವ ಹಾನಿ ಮತ್ತು ಕಾರ್ಬನ್ ಹೊರಸೂಸುವಿಕೆ (Carbon footprint) ಕಡಿಮೆಯಾಗುತ್ತದೆ.

ಈ ಸಂಪೂರ್ಣ ವ್ಯವಸ್ಥೆಯು 2026 ರ ಅಂತ್ಯದ ವೇಳೆಗೆ ಅಧಿಕೃತವಾಗಿ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಗೂಗಲ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಎತ್ತಿನಹೊಳೆಯ ಆಳ-ಅಗಲ: ಯೋಜನೆ ಕಾಮಗಾರಿ ಎಷ್ಟಾಯ್ತು? ಇನ್ನೆಷ್ಟಿದೆ? ಇಲ್ಲಿದೆ ಮಾಹಿತಿ – Kannada News | How Much of the Yettinahole Project Has Been Completed? What’s Left to Finish

ಎತ್ತಿನಹೊಳೆ, ಸಚಿವ ರಾಮಲಿಂಗಾರೆಡ್ಡಿImage Credit source: tv9 kannada

ತುಮಕೂರು, ಜುಲೈ 01: ಎತ್ತಿನಹೊಳೆ ಯೋಜನೆ (Yettinahole Project) ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಆಗಿದೆ. ತುಮಕೂರು (tumakuru), ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 7 ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಸದ್ಯ ಈ ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಒಟ್ಟು 252 ಕಿಮೀನಲ್ಲಿ  220 ಕಿಮೀ ಸಂಪೂರ್ಣಗೊಂಡಿದೆ. ಅದರಲ್ಲಿ 23 ಕಿಮೀ ಪ್ರಗತಿಯಲ್ಲಿದ್ದು, 9 ಕಿಮೀ ಕಾಮಗಾರಿ ಬಾಕಿಯಿದೆ ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿದ ಸಚಿವ ರಾಮಲಿಂಗಾರೆಡ್ಡಿ 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿದರು. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ನಾಲೆ ಜಾಗ ಪರಿಶೀಲನೆ ಮಾಡಿ, ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ರಾಮಲಿಂಗಾರೆಡ್ಡಿಗೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ: ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್​ ಯೋಜನೆಯ ಆಳ-ಅಗಲ

ಇನ್ನು ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಎತ್ತಿನಹೊಳೆ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ. 220 ಕಿಮೀ ಕಾಮಗಾರಿ ಮುಗಿದಿದೆ. ಇದರಲ್ಲಿ 6 ಕಿಮೀ ಅರಣ್ಯಕ್ಕೆ ಸೇರಿದ್ದು, ಸದ್ಯ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ 1.9 ಕಿಮೀ ಬಾಕಿ ಇತ್ತು. ನೂರು ದಿನಗಳಲ್ಲಿ 174 ಕಿಮೀವರೆಗೆ ಕೆಲಸ ಮುಗಿಸಿ ನೀರು ಬಿಡಬಹುದು ಎಂದು ಹೇಳಿದರು.

ಡಿಎಫ್ಓ ವಕ್೯ ಆರ್ಡರ್ ಕೊಟ್ಟಿದ್ದು, ಕೆಲಸ ಆರಂಭಿಸುತ್ತಾರೆ. ಅರಸೀಕೆರೆ ಹತ್ತಿರ ಅರಣ್ಯ ಇದೆ ಅದಕ್ಕೂ ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಅರಣ್ಯದ್ದು ಎಲ್ಲಾ ಕ್ಲಿಯರ್ ಆಗಿದೆ. ವಕ್೯ ಆರ್ಡರ್ ಕೊಟ್ಟಿದ್ದಾರೆ. ಇದು ಕ್ಲೋಸಿಂಗ್ ಕೆನಾಲ್​ ಆಗಿದ್ದು, ಯಾವುದೇ ತೊಂದರೆ ಆಗುವುದಿಲ್ಲ. ಪ್ರಾಣಿಗಳಿಗೆ ತೊಂದರೆ ಆಗಬಾರದು ಅಂತಾ ಸೂಚನೆ ಮೇಲೆ ಅನುಮತಿ ಕೊಟ್ಟಿದ್ದಾರೆ. ಅದನ್ನ ತೆಗೆದು ಮತ್ತೆ ಕ್ಲೋಸ್ ಮಾಡಬೇಕು ಎಂದರು.

12 ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ ಎಂದ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿ ಮಳೆ ಕೊರತೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ನಮ್ಮ ರಾಜ್ಯ ಮಾತ್ರವಲ್ಲ 12 ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ಮಧ್ಯ ಭಾರತದಲ್ಲಿ ಶೇ.50 ರಷ್ಟು ಮಳೆ ಕೊರತೆ ಇದೆ. ನಮ್ಮ ಡ್ಯಾಂಗಳಲ್ಲಿ ಕುಡಿಯುವ ನೀರಿಗೆ 3 ತಿಂಗಳಿಗೆ ಆಗುತ್ತೆ. ಮಳೆ ಬರದೆ ಇದ್ದರೆ ವ್ಯವಸಾಯಕ್ಕೆ ಕಷ್ಟ ಆಗುತ್ತೆ. ಕಳೆದ ಭಾರೀ ಎಲ್ಲಾ ಡ್ಯಾಂಗಳು ಇಷ್ಟೋತ್ತಿಗೆ ಭರ್ತಿ ಆಗಿದ್ದವು ಎಂದು ಹೇಳಿದರು.

ಬೆಂಗಳೂರಿಗೆ ನೀರನ ಸಮಸ್ಯೆ ಎದುರಾಗುತ್ತಾ? 

ಇನ್ನು ಬೆಂಗಳೂರಿಗೆ ನೀರನ ಸಮಸ್ಯೆ ಎದುರಾಗುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದು ನಮ್ಮ ರಾಜ್ಯದ ಸಮಸ್ಯೆಯಲ್ಲ, ಇದು ದೇಶದ ಅರ್ಧ ಭಾಗದ ಸಮಸ್ಯೆ. ಸದ್ಯ ನಮಗೆ ತೊಂದರೆ ಇಲ್ಲ. ಮೂರು ತಿಂಗಳಿಗೆ ಆಗುವಷ್ಟು ಕುಡಿಯುವ ನೀರಿಗೆ ಇದೆ. ಅಷ್ಟರಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಸಿಎಂ ಜೊತೆ ಚರ್ಚಿಸಿ ತೀರ್ಮಾನ 

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿವಾದ ವಿಚಾರವಾಗಿ ಮಾತನಾಡಿದ್ದು, ಪರಮೇಶ್ವರ್ ಜೊತೆ ಮಾತನಾಡಬೇಕು. ಎಲ್ಲಾ ಒಂದೇ ಜಿಲ್ಲೆಯ ಸಮಸ್ಯೆ ಇರುವುದು. ಮಾಗಡಿ, ಕುಣಿಗಲ್, ಥೇಲೆಂಡ್ ಎರಡಕ್ಕೂ ನೀರು ಬರುವುದಲ್ಲ. ಅವರಿಗೆ ಎಷ್ಟು ಬೇಕು ಅಷ್ಟು ನೀರು ನಾಲೆಯಲ್ಲೇ ತಗೋಳಿ ಅಂತಾ ಇವರು. ಪರಮೇಶ್ವರ್ ಮತ್ತು ನಾವು ಮಾತನಾಡಿ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಪರ ವಿರೋಧ ಇದೆ, ಎಲ್ಲಾ ಪಾರ್ಟಿ ಅವರು ಕೂತು ಮಾತನಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಿಂದ ಜಮೀನು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ: ಶಿವಕುಮಾರ್

ಇನ್ನು ಕೊರಟಗೆರೆ ವಡೇರಹಳ್ಳಿ ಬಳಿ ಎತ್ತಿನ ಹೊಳೆ ಬಫರ್ ಡ್ಯಾಮ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಇದೆ ನೀರು ಸ್ಟೋರೇಜ್ ಮಾಡಲೇ ಬೇಕಲ್ಲ. ಎರಡು ಮೂರು ಜಾಗ ಗುರುತಿಸಿದ್ದಾರೆ. ನೀರು ಸ್ಟೋರೇಜ್ ಮಾಡದೇ ಇದ್ದರೆ ಬೇಸಿಗೆಯಲ್ಲಿ ಕಷ್ಟ. 4 ಟಿಎಂಸಿ ನೀರಿದ್ದರೆ ಜನರಿಗೆ ಅನುಕೂಲ ಆಗುತ್ತೆ. ಅದನ್ನ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೆನೆಜುವೆಲಾದಲ್ಲಿ ಭಾರತೀಯ ನಾವಿಕನ ನಿಗೂಢ ಸಾವು; ಶವದಲ್ಲಿ ಹೃದಯ, ಮೆದುಳು, ಶ್ವಾಸಕೋಶಗಳೇ ಇಲ್ಲ ಎಂದ ಕುಟುಂಬಸ್ಥರು! – Kannada News | Indian Sailors Mysterious Death In Venezuela his Family Alleges Missing Organs in his Dead body

ನವದೆಹಲಿ, ಜುಲೈ 1: ವೆನೆಜುವೆಲಾದಲ್ಲಿ (Venezuela) ನಿಗೂಢವಾಗಿ ಸಾವನ್ನಪ್ಪಿದ 33 ವರ್ಷದ ಭಾರತೀಯ ನಾವಿಕನ (ನೌಕಾಪಡೆಯ ಉದ್ಯೋಗಿ) ಮೃತದೇಹವು ಭಾರತಕ್ಕೆ ತಲುಪಿದ ನಂತರ ಭೀಕರ ಸತ್ಯವೊಂದು ಬೆಳಕಿಗೆ ಬಂದಿದೆ. ಮೃತ ನಾವಿಕನ ದೇಹದಲ್ಲಿ ಹೃದಯ, ಮೆದುಳು ಮತ್ತು ಶ್ವಾಸಕೋಶಗಳು ಸೇರಿದಂತೆ ಪ್ರಮುಖ ಅಂಗಾಗಗಳೇ ನಾಪತ್ತೆಯಾಗಿವೆ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದೆ. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಅಲ್ಲದೆ, ದೇಹದ ಮೇಲೆ ವ್ಯಾಪಕವಾದ ಹೊಲಿಗೆಗಳಿದ್ದವು. ಕತ್ತಿನಿಂದ ಪ್ಯುಬಿಕ್ ಸಿಂಫಿಸಿಸ್‌ವರೆಗೆ (ಹೊಟ್ಟೆಯ ಕೆಳಭಾಗ) 22 ಹೊಲಿಗೆಗಳು ಮತ್ತು ಒಂದು ಕಿವಿಯಿಂದ ಇನ್ನೊಂದು ಕಿವಿಯವರೆಗೆ 21 ಹೊಲಿಗೆಗಳನ್ನು ಹಾಕಲಾಗಿತ್ತು ಎಂದು 2ನೇ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಮೃತದೇಹವನ್ನು ಸುಮಾರು ಒಂದು ತಿಂಗಳ ಕಾಲ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲಾಗಿತ್ತು. ಸಾವಿಗೆ ಮುನ್ನ ಸಂಭವಿಸಿದ ಯಾವುದೇ ಗಾಯಗಳು ದೇಹದ ಮೇಲಿರಲಿಲ್ಲ. ಎಲ್ಲಾ ಆಂತರಿಕ ಅಂಗಗಳು ನಾಪತ್ತೆಯಾಗಿದ್ದರಿಂದ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿಸಿದೆ. ವಿದೇಶದಲ್ಲಿ ಭಾರತೀಯ ಕಾರ್ಮಿಕರನ್ನು ನಡೆಸಿಕೊಳ್ಳುವ ವಿಧಾನ ಮತ್ತು ಸಂಬಂಧಪಟ್ಟ ವಿದೇಶಿ ಅಧಿಕಾರಿಗಳ ಜವಾಬ್ದಾರಿಯ ಬಗ್ಗೆ ಈ ಘಟನೆಯು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಇದನ್ನೂ ಓದಿ: ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ನಿವಾಸಿಯಾದ ರಾಕೇಶ್ ಚೌಹಾಣ್ ಅವರ ಕುಟುಂಬಸ್ಥರು ಈ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ವಾಣಿಜ್ಯ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಇವರು ವೆನೆಜುವೆಲಾ ಕರಾವಳಿಯ ಬಳಿ ಇದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹಡಗಿನ ಕಂಪನಿಯು ಕುಟುಂಬಕ್ಕೆ ಮಾಹಿತಿ ನೀಡಿತ್ತು. ಪ್ರಾಥಮಿಕ ವರದಿಗಳಲ್ಲಿ ಇದು ನೈಸರ್ಗಿಕ ಸಾವು ಅಥವಾ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು ಎನ್ನಲಾಗಿದೆ. ಆದರೆ, ಕಾನೂನು ಪ್ರಕ್ರಿಯೆಗಳು ಮತ್ತು ದೀರ್ಘಕಾಲದ ಕಾಯುವಿಕೆಯ ನಂತರ ನಾವಿಕನ ಮೃತದೇಹವನ್ನು ಭಾರತಕ್ಕೆ ತಾಯ್ನಾಡಿಗೆ ತಂದಾಗ ಅಸಲಿ ಕತೆ ಶುರುವಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದ್ದೇನು?:

ವೆನೆಜುವೆಲಾದಲ್ಲಿ ನಡೆದ ತನಿಖೆಯ ಬಗ್ಗೆ ತೃಪ್ತಿಯಿಲ್ಲದ ಕಾರಣ ಮತ್ತು ಸಾವಿನ ಬಗ್ಗೆ ಅನುಮಾನಗಳಿದ್ದರಿಂದ ಆ ನಾವಿಕನ ಕುಟುಂಬಸ್ಥರು ಭಾರತಕ್ಕೆ ಶವ ಬಂದ ತಕ್ಷಣ ಇಲ್ಲಿನ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ವಿನಂತಿಸಿದರು. ಭಾರತದ ವೈದ್ಯರು ಶವ ಪರೀಕ್ಷೆ ನಡೆಸಿದಾಗ ಅವರಿಗೆ ಭಾರಿ ಆಘಾತ ಕಾದಿತ್ತು. ಮೃತದೇಹದ ಒಳಗಿನ ಪ್ರಮುಖ ಅಂಗಗಳಾದ ಹೃದಯ, ಮೆದುಳು ಮತ್ತು ಶ್ವಾಸಕೋಶಗಳು ನಾಪತ್ತೆಯಾಗಿದ್ದವು. ವೈದ್ಯಕೀಯ ವರದಿಯಲ್ಲಿ ಈ ಅಂಗಗಳು ದೇಹದಲ್ಲಿ ಇರಲಿಲ್ಲ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಗಳು; 164 ಜನ ಸಾವು, 971 ಜನರಿಗೆ ಗಂಭೀರ ಗಾಯ

ಅಂಗಾಂಗ ಕಳ್ಳಸಾಗಣೆ ದಂಧೆಯ ಶಂಕೆ:

ಈ ಆಘಾತಕಾರಿ ಬೆಳವಣಿಗೆಯಿಂದ ಕಂಗಾಲಾಗಿರುವ ಕುಟುಂಬಸ್ಥರು, ತಮ್ಮ ಮಗನನ್ನು ವೆನೆಜುವೆಲಾದಲ್ಲಿ ಕೊಲೆ ಮಾಡಲಾಗಿದೆ, ಅಂತಾರಾಷ್ಟ್ರೀಯ ಅಂಗಾಂಗಗಳ ಕಳ್ಳಸಾಗಣೆ ದಂಧೆಗೆ ಆತ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ. “ಯಾವುದೇ ಅಂಗಾಗಗಳಿಲ್ಲದೆ ಕೇವಲ ಖಾಲಿ ದೇಹವನ್ನು ನಮಗೆ ಕಳುಹಿಸಿಕೊಡಲಾಗಿದೆ. ಆತನ ಸಾವಿಗೆ ನಿಜವಾದ ಕಾರಣವೇನು ಎಂದು ತಿಳಿಯಲು ನಮಗೆ ಈಗ ಯಾವುದೇ ಪುರಾವೆಗಳೂ ಸಿಗದಂತೆ ಮಾಡಲಾಗಿದೆ” ಎಂದು ಕುಟುಂಬದ ಸದಸ್ಯರು ಕಣ್ಣೀರಿಟ್ಟಿದ್ದಾರೆ.

ಭಾರತ ಸರ್ಕಾರದ ಹಸ್ತಕ್ಷೇಪಕ್ಕೆ ಆಗ್ರಹ:

ನಾವಿಕನ ಕುಟುಂಬಸ್ಥರು ಈ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯ (MEA) ಮತ್ತು ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಡಗಿನ ಆಡಳಿತ ಮಂಡಳಿ, ಅಲ್ಲಿನ ಸ್ಥಳೀಯ ಆಸ್ಪತ್ರೆ ಮತ್ತು ವೆನೆಜುವೆಲಾ ಸರ್ಕಾರದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ವಿಷಯದ ಕುರಿತು ಭಾರತೀಯ ತನಿಖಾ ಸಂಸ್ಥೆಗಳು ಮತ್ತು ವಿದೇಶಾಂಗ ಇಲಾಖೆಯು ವೆನೆಜುವೆಲಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವ್ಯಾಪಾರಿಗಳ ವಿರೋಧದ ನಡುವೆಯೂ ಫುಟ್​​ಪಾತ್ ಮಾಡುತ್ತಿರುವುದರ ಬಗ್ಗೆ ಕೃಷ್ಣಭೈರೇಗೌಡ ಖಡಕ್ ಮಾತು – Kannada News | Minister Krishna Byre gowda talks about Safe footpath drive begins across Bengaluru

ಬೆಂಗಳೂರು, (ಜುಲೈ 01): ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (krishna byre gowda) ಸೂಚನೆ ಮೇರೆಗೆ ಜಿಬಿಎ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು, ರಾಜಧಾನಿಯಲ್ಲಿ ಇಂದಿನಿಂದ ಫುಟ್​​​​ಪಾತ್ (footpath)​​​​ ಒತ್ತುವರಿ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ. ಜಿಬಿಎ ವ್ಯಾಪ್ತಿಯ ಎಲ್ಲಾ 5 ನಗರ ಪಾಲಿಕೆಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೀತಿದೆ. ಫುಟ್​ಪಾತ್​ಗಳನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡ್ತಿರುವವರು, ಹೋಟೆಲ್, ಕೆಫೆ, ಸಣ್ಣ ಪುಟ್ಟ ಅಂಗಡಿಗಳಿಗೆ ಅಧಿಕಾರಿಗಳು ಚುರುಕು ಮುಟ್ಟಿಸಿದ್ದಾರೆ. ಇನ್ನು ಕೆಲವವೆಡೆ ಹೈಡ್ರಾಮಾಗಳೇ ನಡೆದಿವೆ. ಫುಟ್​​ಪಾತ್ ತೆರವು ಮಾಡಲ್ಲ.ನೀವು ತೆಗೆದರೆ ಮತ್ತೆ ಇಲ್ಲೇ ವ್ಯಾಪಾರ ಮಾಡುತ್ತೇವೆ. ಈ ಸ್ಥಳ ಬಿಟ್ಟು ಹೋಗಲ್ಲ ಎಂದು ಬೀದಿ ವ್ಯಾಪಾರಿಗಳು ಹಠಕ್ಕೆ ಬಿದ್ದಿದ್ದಾರೆ.

ಇನ್ನು ಈ ಫುಟ್​​​ಪಾತ್ ಒತ್ತುವರಿ ತೆರವು ಬಗ್ಗೆ ವಿಕಾಸಸೌಧದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಕೃ್ಣಭೈರೇಗೌಡ, ‘ಸುಪ್ರೀಂ ಕೋರ್ಟ್’ ಆದೇಶದ ಮೇರೆಗೆ ತೆರವು ಕಾರ್ಯ ಮಾಡುತ್ತಿದ್ದೇವೆ. ಇದರಿಂದ ನಾಗರಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಫುಟ್​ಪಾತ್ ತೆರವು ಮಾಡ್ತಿದ್ದೇವೆ. ಕೇವಲ ಶೇ.15ರಷ್ಟು ಫುಟ್​ಪಾತ್ ತೆರವು ಮಾಡುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 15 ಸಾವಿರ ಕಿ.ಮೀ. ಫುಟ್​ಪಾತ್ ಇದೆ. ಆದ್ರೆ, ನಾವು 2000 ಕಿ.ಮೀ. ಮಾತ್ರ ತೆರವುಗೊಳಿಸಿ ಅಂತಾ ಹೇಳಿದ್ದೇವೆ. ಹೆಚ್ಚು ಜನರು ಓಡಾಡುವ ಕಡೆ ಮಾತ್ರ ತೆರವು ಮಾಡುತ್ತಿದ್ದೇವೆ. ಫುಟ್​ಪಾತ್ ಒತ್ತುವರಿಯಿಂದಾಗಿ ಅಪಘಾತ ಸಂಭವಿಸುತ್ತಿದ್ದು, ಫುಟ್​ಪಾತ್ ತೆರವುಗೊಳಿಸುವಂತೆ ಜನರು ಕೇಳುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಡಾಕ್ಟರ್ ಆಗಿ ಸ್ಯಾಂಡಲ್‌ವುಡ್-ಬಾಲಿವುಡ್​ನಲ್ಲಿ ಮಿಂಚಿದ ಜನಪ್ರಿಯ ತಾರೆಯರು – Kannada News | Sreeleela to Sai Pallavi Star Actors Who Are Also Doctors: Cinema Stars with Medical Degrees

ಇಂದು (ಜುಲೈ 1) ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಂಭ್ರಮ. ಈ ವಿಶೇಷ ದಿನದಂದು ಕಠಿಣವಾದ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿ, ಬಳಿಕ ಚಿತ್ರರಂಗದಲ್ಲೂ ತಮ್ಮದೇ ಆದ ಹೊಸ ಮುದ್ರೆ ಒತ್ತಿರುವ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಜನಪ್ರಿಯ ಸ್ಟಾರ್ಸ್ ಕುರಿತಾದ ಒಂದು ವಿಶೇಷ ವರದಿ ಇಲ್ಲಿದೆ.

Source link

Video: ಸಿಲಿಕಾನ್ ಸಿಟಿಯನ್ನು ಜನರು ದೂರಿದ್ರು ಈ ನಗರವನ್ನು ಬಿಡಲ್ಲ; ಅಸಲಿ ಕಾರಣ ಬಿಚ್ಚಿಟ್ಟ ಬೆಂಗಳೂರಿನ ಟೆಕ್ಕಿ – Kannada News | A techie from Bengaluru says that despite the thousands of problems here, people will not leave Bengaluru.

ಬೆಂಗಳೂರು, ಜುಲೈ 01: ಬೆಂಗಳೂರು (Bengaluru) ಅಂದ್ರೇನೆ ಅದೊಂದು ತರಹ ಮಾಯಲೋಕ. ಹೀಗಾಗಿ ಯುವಕ ಯುವತಿಯರು ಓದು ಮುಗಿಯುತ್ತಿದ್ದಂತೆ ಉತ್ತಮ ಅವಕಾಶಗಳು, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ವಾತಂತ್ರ್ಯ ಹೀಗೆ ಸಾಕಷ್ಟು ಆಯ್ಕೆಗಳಿಂದ ಬೆಂಗಳೂರಿನತ್ತ ಬರುತ್ತಾರೆ. ಸಂಚಾರ ದಟ್ಟಣೆ, ಹೆಚ್ಚುತ್ತಿರುವ ಬಾಡಿಗೆಗಳು, ನೀರಿನ ಸಮಸ್ಯೆಗಳು ಸೇರಿದಂತೆ ಇನ್ನಿತ್ತರ ವಿಚಾರಗಳ ಬಗ್ಗೆ ಟೀಕೆಗಳಿದ್ದರೂ ಇಲ್ಲಿಗೆ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಟೆಕ್ಕಿಯೊಬ್ಬರು ಸವಾಲುಗಳ ನಡುವೆ ಬೆಂಗಳೂರನ್ನು ತೊರೆಯದೇ ಜನರು ಇಲ್ಲೇ ನೆಲೆಸಿರುವುದು ಏಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

ಅಂಕಿತ್ (ankitsimplifies) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಗೆ ಬೆಂಗಳೂರು ಜೀವನವನ್ನು ಬದಲಾಯಿಸುವ ಐಟಿ ವೃತ್ತಿಗಳನ್ನು ನಿರ್ಮಿಸುತ್ತದೆ ಎಂಬ ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಏನೋ ವಿಚಿತ್ರವಿದೆ. ಇಲ್ಲಿ ವಾಸಿಸುವ ಜನರು ನಿರಂತರವಾಗಿ ಟ್ರಾಫಿಕ್, ದುಬಾರಿ ಬಾಡಿಗೆ ಮತ್ತು ನೀರಿನ ಸಮಸ್ಯೆಗಳ ಬಗ್ಗೆ ದೂರುತ್ತಾರೆ. ಆದರೆ ಅವರೆಲ್ಲರೂ ಈ ನಗರವನ್ನು ಎಂದಿಗೂ ಬಿಡುವುದಿಲ್ಲ. ಸತ್ಯಾಂಶವೆಂದರೆ ಅವರೆಲ್ಲರೂ ಬೆಂಗಳೂರನ್ನು ಪ್ರೀತಿಸುವುದಿಲ್ಲ. ಬೆಂಗಳೂರು ಅವರಿಗೆ ಸಹಾಯ ಮಾಡಿದ ಆವೃತ್ತಿಯನ್ನು ಇಷ್ಟಪಡುತ್ತಾರೆ. ಯಾರೋ ಒಬ್ಬರಿಗೆ, ಈ ನಗರವು ಹೆಚ್ಚಿನ ಸಂಬಳ ಕೆಲಸವನ್ನು ನೀಡಿತು. ಇನ್ನೊಬ್ಬರಿಗೆ ತಮ್ಮದೇ ಆದ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದ ಸ್ಥಳವಾಯಿತು ಎಂದಿದ್ದಾರೆ.

ಇನ್ಯಾರೋ ಈ ನಗರಕ್ಕೆ ಮೊದಲ ಬಾರಿಗೆ ಬಂದು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಿದರು. ಮತ್ಯಾರೋ ಈ ನಗರಕ್ಕೆ ಬಂದು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ರೂಪಿಸುವ ಮಾರ್ಗದರ್ಶಕರನ್ನು ಕಂಡುಕೊಂಡರು. ಅದಕ್ಕಾಗಿಯೇ ಜನರು ಈ ನಿತ್ಯ ನಿರಂತರ ಹೋರಾಟವನ್ನು ಸಹಿಸಿಕೊಳ್ಳುತ್ತಾರೆ. ಈ ಬೆಂಗಳೂರು ಕೇವಲ ಒಂದು ನಗರವಲ್ಲ. ಇದು ಒಂದು ಮಹತ್ವದ ತಿರುವು ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: 45 ಲಕ್ಷ ರೂ ಸಂಬಳ ಇದ್ರೂ ತಿಂಗಳ ಕೊನೆಯಲ್ಲಿ ನಾನು ದಿವಾಳಿ ಎಂದ ಬೆಂಗಳೂರಿನ ಟೆಕ್ಕಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ಬೆಂಗಳೂರಿನ ಬಗ್ಗೆ ಎಷ್ಟೇ ತೆಗಳಿದರೂ ಈ ಊರನ್ನು ಬಿಡಲು ಯಾರು ರೆಡಿ ಇಲ್ಲ ಎಂದಿದ್ದಾರೆ. ಇನ್ನೊಬ್ಬರು, ಸಂಚಾರ ಮತ್ತು ಬಾಡಿಗೆ ನಿಜವಾದ ಸಮಸ್ಯೆಗಳು, ಇಲ್ಲಿ ವೃತ್ತಿಜೀವನದ ಬೆಳವಣಿಗೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮತ್ತೊಬ್ಬರು, ಈ ನಗರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಅಡುಗೆಮನೆಯಲ್ಲಿ ಮುರಿದ ಪಾತ್ರೆಗಳನ್ನು ಎಂದಿಗೂ ಇಡಬಾರದು ಯಾಕೆ ಗೊತ್ತಾ? – Kannada News | Vastu: Broken Kitchen Utensils Invite Negative Energy and Financial Loss

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಅತ್ಯಂತ ಚಿಕ್ಕ ವಸ್ತು ಕೂಡ ನಮ್ಮ ಜೀವನದ ಮೇಲೆ ಆಳವಾದ ಮತ್ತು ಗಮನಾರ್ಹವಾದ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ನಾವು ಜಾಗರೂಕರಾಗಿರಬೇಕು. ಮುಖ್ಯವಾಗಿ, ಅಡುಗೆಮನೆಯನ್ನು ಮನೆಯ ಅತ್ಯಂತ ಪವಿತ್ರ ಮತ್ತು ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ, ನಾವು ದಿನನಿತ್ಯ “ಮುಂದೆ ಎಂದಾದರೂ ಉಪಯೋಗಕ್ಕೆ ಬರಬಹುದು” ಎಂದು ಯೋಚಿಸುತ್ತಾ ಬಿರುಕು ಬಿಟ್ಟ ಅಥವಾ ಮುರಿದ ಅಡುಗೆ ಪಾತ್ರೆಗಳನ್ನು ನಿರ್ಲಕ್ಷಿಸಿ ಅಲ್ಲೇ ಇಟ್ಟಿರುತ್ತೇವೆ. ನಮ್ಮ ಈ ಸಣ್ಣ ಅಜಾಗರೂಕತೆಯು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮುರಿದ ಪಾತ್ರೆಗಳಿಂದ ಹೆಚ್ಚಾಗುತ್ತೆ ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಮುರಿದ ಅಥವಾ ಬಿರುಕು ಬಿಟ್ಟ ಪಾತ್ರೆಗಳು ನಕಾರಾತ್ಮಕ ಶಕ್ತಿಯನ್ನು ಬಲವಾಗಿ ಆಕರ್ಷಿಸುತ್ತವೆ. ಅಂತಹ ವಸ್ತುಗಳು ಮನೆಯ ಒಟ್ಟಾರೆ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಪರಿಣಾಮವಾಗಿ ಕುಟುಂಬದ ಸದಸ್ಯರಲ್ಲಿ ಅನಗತ್ಯ ಮಾನಸಿಕ ಒತ್ತಡ, ಕಿರಿಕಿರಿ ಮತ್ತು ಆತಂಕ ಕ್ರಮೇಣ ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇರಬೇಕಾದರೆ ಇಂತಹ ವಸ್ತುಗಳನ್ನು ತಕ್ಷಣವೇ ಹೊರಹಾಕಬೇಕು.

ತೀವ್ರ ಆರ್ಥಿಕ ತೊಂದರೆಗಳ ಮುನ್ಸೂಚನೆ:

ಹಳೆಯ, ಮುರಿದ ಅಥವಾ ಹಾನಿಗೊಳಗಾದ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಇಟ್ಟುಕೊಳ್ಳುವುದನ್ನು ವಾಸ್ತು ಶಾಸ್ತ್ರದಲ್ಲಿ ತೀವ್ರ ಆರ್ಥಿಕ ನಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಇಂತಹ ವಸ್ತುಗಳಿರುವ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಇದು ಹಣದ ಹರಿವಿನಲ್ಲಿ ನಿರಂತರ ಅಡೆತಡೆಗಳನ್ನು ಉಂಟುಮಾಡುತ್ತದೆ ಮತ್ತು ಅನಗತ್ಯ ವೆಚ್ಚಗಳು ಹಠಾತ್ತನೆ ಹೆಚ್ಚಾಗುತ್ತವೆ. ಎಷ್ಟೇ ದುಡಿದರೂ ಸಾಲದ ಬಾಧೆ ಮುಗಿಯುವುದಿಲ್ಲ.

ಕೌಟುಂಬಿಕ ಸಂಬಂಧಗಳು ಹದಗೆಡಬಹುದು:

ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ನಕಾರಾತ್ಮಕ ಶಕ್ತಿಯು ನೇರವಾಗಿ ನಮ್ಮ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತದೆ. ಮುರಿದ ಪಾತ್ರೆಗಳಿಂದ ಹೊರಹೊಮ್ಮುವ ನಕಾರಾತ್ಮಕ ಕಂಪನಗಳು ಕುಟುಂಬ ಸದಸ್ಯರ ನಡುವೆ ಸದಾ ತಪ್ಪು ತಿಳುವಳಿಕೆ, ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಜಗಳಗಳು ಮತ್ತು ವಾದ-ವಿವಾದಗಳಿಗೆ ಕಾರಣವಾಗುತ್ತವೆ. ಇದು ಮನೆಯ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸುತ್ತದೆ.

ಇದನ್ನೂ ಓದಿ: ಸಾನ್ನದ ನೀರಿಗೆ ಒಂದು ಚಿಟಿಕೆ ಕರ್ಪೂರ ಬೆರೆಸಿ; ಇದರ ಚಮತ್ಕಾರಿ ಪ್ರಯೋಜನಗಳು ಇಲ್ಲಿವೆ…

ಆರೋಗ್ಯದ ಮೇಲಾಗುತ್ತೆ ಭೀಕರ ಪರಿಣಾಮ:

ವಾಸ್ತು ದೋಷ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಕೋನದಿಂದಲೂ ಮುರಿದ ಪಾತ್ರೆಗಳು ಅತ್ಯಂತ ಅಪಾಯಕಾರಿ. ಬಿರುಕು ಬಿಟ್ಟ ಪಾತ್ರೆಗಳ ಸಣ್ಣ ಮೂಲೆಗಳಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಮತ್ತು ಧೂಳು ಸುಲಭವಾಗಿ ಸಂಗ್ರಹವಾಗುತ್ತವೆ. ಅಂತಹ ಪಾತ್ರೆಗಳಲ್ಲಿ ಆಹಾರ ಬೇಯಿಸಿದಾಗ ಅಥವಾ ತಿಂದಾಗ, ಆ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ವಿವಿಧ ರೀತಿಯ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ.

ಮಹಿಳೆಯರಿಗಾಗಿ ಒಂದು ವಿಶೇಷ ವಾಸ್ತು ಸಲಹೆ:

ಅಡುಗೆಮನೆಯನ್ನು ಅನ್ನಪೂರ್ಣೇಶ್ವರಿ ದೇವಿಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಅಡುಗೆಮನೆಯಲ್ಲಿ ಮುರಿದ ಕಪ್‌ಗಳು, ಪ್ಲೇಟ್‌ಗಳು, ಹ್ಯಾಂಡಲ್ ಮುರಿದ ಪ್ಯಾನ್‌ಗಳು ಅಥವಾ ಬಿರುಕು ಬಿಟ್ಟ ಗಾಜಿನ ವಸ್ತುಗಳನ್ನು ಇಟ್ಟುಕೊಳ್ಳಬೇಡಿ. ಶನಿವಾರದ ದಿನ ಇಂತಹ ಹಳೆಯ ಮುರಿದ ವಸ್ತುಗಳನ್ನು ಮನೆಯಿಂದ ಹೊರಹಾಕುವುದು ಅತ್ಯಂತ ಒಳಿತು.

ನಿಮ್ಮ ಅಡುಗೆಮನೆಯಲ್ಲೂ ಇಂತಹ ಪಾತ್ರೆಗಳಿದ್ದರೆ, ತಕ್ಷಣವೇ ಅವುಗಳನ್ನು ತೆಗೆದುಹಾಕಿ ಮತ್ತು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹಾಗೂ ಸಂಪತ್ತು ವೃದ್ಧಿಯಾಗುವಂತೆ ನೋಡಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ ಎಂದ ಸಚಿವ ಯತೀಂದ್ರ – Kannada News | Chamundi Hills Gears Up for Ashada Shukravara: Special Arrangements and VIP Protocol

ಮೈಸೂರು, ಜುಲೈ 01: ಮೈಸೂರಿನ ಪ್ರಸಿದ್ಧ ಚಾಮುಂಡಿಬೆಟ್ಟಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ, ಮುಂಬರುವ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಬೆಟ್ಟಕ್ಕೆ ಭೇಟಿ ನೀಡಿದ ಡಾ. ಯತೀಂದ್ರ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭಕ್ತರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವ ಕುರಿತು ಚರ್ಚಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಯತೀಂದ್ರ ಹೇಳಿದ್ದಾರೆ.

ಜುಲೈ 17ರಿಂದ ಆರಂಭವಾಗುವ ಆಷಾಢ ಶುಕ್ರವಾರದ ಆಚರಣೆಗೆ ಡಿಸಿ ಲಕ್ಷ್ಮಿಕಾಂತ್ ರೆಡ್ಡಿ, ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿಐಪಿ ದರ್ಶನಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದ್ದು, ಪ್ರೋಟೋಕಾಲ್ ಇರುವವರಿಗೆ ಮಾತ್ರ ವಾಹನ ಪ್ರವೇಶವಿರುತ್ತದೆ. ಇತರ ವಿಐಪಿಗಳು ಕೂಡ ಸಾರ್ವಜನಿಕ ಬಸ್‌ಗಳಲ್ಲೇ ತೆರಳಬೇಕು. 2000 ರೂಪಾಯಿಗಳ ವಿಶೇಷ ಟಿಕೆಟ್‌ಗಳನ್ನು ಪಾರ್ಕಿಂಗ್, ಬೆಟ್ಟದ ಮೇಲೆ ಹಾಗೂ ಆನ್‌ಲೈನ್ ಮೂಲಕ ಖರೀದಿಸಬಹುದು. ಈ ಟಿಕೆಟ್‌ನೊಂದಿಗೆ ಶ್ರೀಚಕ್ರ ಚಿಹ್ನೆಯ ಕಿಟ್, ನೀರು ಬಾಟಲಿ, ದೇವಿ ಫೋಟೋ ಮತ್ತು ಪ್ರಸಾದ ನೀಡಲಾಗುವುದು. ಭಕ್ತರ ಹಿತದೃಷ್ಟಿಯಿಂದ ಸುಗಮ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: SIT ತನಿಖೆ ವೇಳೆ ಅನಧಿಕೃತ ಕಾಣಿಕೆ ಹುಂಡಿಗಳು, QR ಕೋಡ್‌ ಪತ್ತೆ – Kannada News | Unauthorised Donation Boxes, QR Codes Found in Ram Temple Donation Theft Investigation

ಲಖನೌ, ಜುಲೈ 01: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ದಳದ (ಎಸ್​ಐಟಿ) ತನಿಖೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.  ಅನಧಿಕೃತ ಕಾಣಿಕೆ ಹುಂಡಿಗಳು, ಬ್ಯಾಗ್, QR ಕೋಡ್‌ಗಳು ಮಂದಿರದ ಯೋಗ ಕೇಂದ್ರದಲ್ಲಿ ಪತ್ತೆಯಾಗಿದ್ದು, ದೇಣಿಗೆ ಪೆಟ್ಟಿಗೆಗಳ ಮೇಲೆ ವಂಚಕರು  QR ಕೋಡ್‌ ಅಂಟಿಸಿದ್ದರು. ಇದೇ QR ಕೋಡ್‌ ಸ್ಕ್ಯಾನ್​ ಮಾಡಿ ಭಕ್ತರು ಹಣವನ್ನು ಪಾವತಿಸುತ್ತಿದ್ದರು. ಈ ಹಣ ರಾಮರಾಜ್ಯ ಕೋಶ್​​​ ಹೆಸರಿನ ಖಾತೆಗೆ ಹೋಗುತ್ತಿತ್ತು ಎಂಬ ಮಹತ್ವದ ವಿಚಾರವನ್ನೂ ತನಿಖೆ ವೇಳೆ ಎಸ್​ಐಟಿ ಪತ್ತೆ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version