ಬೆಂಗಳೂರು ಮೆಟ್ರೋದಲ್ಲಿ ರಾರಾಜಿಸುತ್ತಿದೆ ‘ಟಾಕ್ಸಿಕ್’ ಪೋಸ್ಟರ್; ಯಶ್ ಅಭಿಮಾನಿಗಳಿಗೆ ಹಬ್ಬ

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಕಾರ್ಯಗಳು ರಾಜಧಾನಿ ಬೆಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಆರಂಭವಾಗಿವೆ. ನಮ್ಮ ಮೆಟ್ರೋ ರೈಲುಗಳ ಮೇಲೆ ‘ಟಾಕ್ಸಿಕ್’ ಚಿತ್ರದ ಪೋಸ್ಟರ್‌ಗಳನ್ನು ಹಾಗೂ ಬ್ರ್ಯಾಂಡಿಂಗ್‌ ಅನ್ನು ಅಳವಡಿಸಲಾಗಿದ್ದು, ಈಗ ನಗರದಲ್ಲೆಲ್ಲಾ ‘ಟಾಕ್ಸಿಕ್’ದ್ದೇ ಹವಾ ಎದ್ದಿದೆ.

ಬೆಂಗಳೂರು ಮೆಟ್ರೋದ ಒಳಭಾಗ ಮತ್ತು ಹೊರಭಾಗಕ್ಕೆ ‘ಟಾಕ್ಸಿಕ್’ ಚಿತ್ರದ ಮಾಸ್ ಪೋಸ್ಟರ್‌ಗಳು ಮತ್ತು ಯಶ್ ಅವರ ವಿಭಿನ್ನ ಲುಕ್‌ಗಳ ಬ್ಯಾನರ್‌ಗಳನ್ನು ಹಚ್ಚಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮ್ಯಾನ್‌ಸ್ಟರ್ ಮೈಂಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಪ್ರಚಾರದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೆಟ್ರೋದಲ್ಲಿ ಪ್ರಯಾಣಿಸುವ ಸಾರ್ವಜನಿಕರು ಹಾಗೂ ಯಶ್ ಅಭಿಮಾನಿಗಳು ಈ ಪ್ರಚಾರ ಶೈಲಿಯನ್ನು ಕಂಡು ಫಿದಾ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಎಂಬ ಅಡಿಬರಹ ಹೊಂದಿರುವ ಈ ಸಿನಿಮಾ, 2026ರ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಬಂದ್​​: ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಬಸ್​ಗಳಿಗೆ ತಾತ್ಕಾಲಿಕ ತಡೆ – Kannada News | Karnataka Bandh: Bus Services to Tamil Nadu Halted from Bengaluru; Airport Cabs and Intrastate Transport Normal

ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಬಸ್​ಗಳಿಗೆ ತಾತ್ಕಾಲಿಕ ತಡೆImage Credit source: Tv9 Kannada

ಬೆಂಗಳೂರು, ಆಗಸ್ಟ್​​ 13: ಕಾವೇರಿ ಜಲ ವಿವಾದ ಸಂಬಂಧ ಇಂದು (ಆಗಸ್ಟ್​ 13) ಕರ್ನಾಟಕ ಬಂದ್​​ಗೆ ಕರೆ ನೀಡಿರುವ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಜನ ಜೀವನ, ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಹೀಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರ ಸೂಚನೆ ಮೇರೆಗೆ ನಗರದಿಂದ ತಮಿಳುನಾಡಿಗೆ ಸಂಚರಿಸುವ ಬಸ್​​ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸ್ಯಾಟ್​ಲೈಟ್​ ಬಸ್ ನಿಲ್ದಾಣದಿಂದ ತಮಿಳುನಾಡಿನ ಪ್ರಮುಖ ನಗರಗಳಾದ ಊಟಿ, ತಿರುವಣ್ಣಾಮಲೈ, ತಲ್ಲಕುರ್ಚಿ, ಸೇಲಂ, ವೇಲೂರು, ಕಲ್ಪಕಂ,‌ ಕಾಂಜಿವರಂ, ವಂದಾವಾಸಿ, ತಿರುವಳ್ಳೂರು, ಉಳುಂದೂರು ಪೇಟೆ, ತಿರುಪ್ಪತ್ತೂರು, ಕಡಲೂರು, ತಿರುತ್ತಣಿ, ತಿಟ್ಟಕುಡಿ, ತಿರುಕ್ಕೋವಿಲೂರು, ಚಿದಂಬರಂ, ವಿರುತ್ತಾಚಲಂ ಸೇರಿ ಹಲವು ಊರುಗಳಿಗೆ ತೆರಳಬೇಕಿದ್ದ ಬಸ್​​ಗಖ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಸಹಜ ಸ್ಥಿತಿಯಲ್ಲಿರುವ ವಾಹನಗಳ ಸಂಚಾರ

ಉಳಿದಂತೆ ರಾಜ್ಯದ ವಿವಿಧೆಡೆ ಸಂಚರಿಸುವ ಬಸ್​ಗಳ ಸಹಜ ಸ್ಥಿತಿಯಲ್ಲಿ ಆರಂಭವಾಗಿದ್ದು, ಮೈಸೂರು, ಟಿ.ನರಸೀಪುರ, ಹುಣಸೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಡಿಕೇರಿ, ಕುಶಾಲ ನಗರ, ಮಂಗಳೂರು ಸೇರಿ ಹಲವು ಕಡೆಗೆ KSRTC ಬಸ್​ಗಳು ಸಂಚಾರ ಆರಂಭಿಸಿವೆ.

ಇದನ್ನೂ ಓದಿ: ಇಂದು ಕರ್ನಾಟಕ ಬಂದ್​​; ಬೆಂಗಳೂರಲ್ಲಿ ಪೊಲೀಸರಿಂದ ಹೈ ಅಲರ್ಟ್​​

ಹೇಗಿದೆ ಏರ್​ಪೋರ್ಟ್​​ ಬಳಿಯ ಸ್ಥಿತಿ?

ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯಾ ವಿಮಾನ ನಿಲ್ಥಾಣದಲ್ಲಿಯೂ ಎಂದಿನಂತೆ ಕ್ಯಾಬ್ಗಳ ಸಂಚಾರವಿದ್ದು, ಬಂದ್ ಹಿನ್ನೆಲೆ ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಓಡಾಟ ಕಂಡುಬಂದಿದೆ. ಬಂದ್​​ನಿಂದ‌ ಕ್ಯಾಬ್ಗಳು ಇರುತ್ತೋ? ಇಲ್ವೋ? ಎಂಬ ಆತಂಕದಲ್ಲಿಯೇ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಆದರೆ ಟರ್ಮಿನಲ್ 1 ಮತ್ತು 2ರಲ್ಲಿ ಎಂದಿನಂತೆ ಕ್ಯಾಬ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರವಿದೆ. ಡ್ರಾಪ್ ಮತ್ತು ಪಿಕಪ್​​ಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೀಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಏರ್ಪೋಟ್ ಆವರಣದಲ್ಲಿಯೂ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:31 am, Thu, 13 August 26

Source link

ಕರ್ನಾಟಕ ಬಂದ್​​: ರಾಜ್ಯದ ಶಾಲಾ, ಕಾಲೇಜುಗಳಿಗಿಲ್ಲ ಇಂದು ರಜೆ – Kannada News | Karnataka Bandh: Schools, Colleges Remain Open; Bus Services Normal Amidst Protests

ಬೆಂಗಳೂರು, ಆಗಸ್ಟ್​​ 13: ಕರ್ನಾಟಕ ಬಂದ್​​ಗೆ ಕರೆ ನಡುವೆಯೂ ರಾಜ್ಯದ ಶಾಲಾ-ಕಾಲೇಜುಗಳು ಎಂದಿನಂತೆ ಇಂದು ಕಾರ್ಯನಿರ್ವಹಿಸಲಿವೆ, ಯಾವುದೇ ರಜೆ ಘೋಷಿಸಲಾಗಿಲ್ಲ. ತರಗತಿಗಳು ನಡೆಯಲಿದ್ದು, ಪರೀಕ್ಷೆಗಳು ನಡೆಯುತ್ತಿರುವ ಕಾರಣ ಮಕ್ಕಳಿಗೆ ತೊಂದರೆಯಾಗಬಾರದೆಂಬುದು ಪೋಷಕರ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡದಿರಲು ತೀರ್ಮಾನಿಸಿವೆ. ರಾಜ್ಯದ ಎಲ್ಲಾ ಕಡೆ ಎಂದಿನಂತೆ ಶಾಲಾ, ಕಾಲೇಜುಗಳು ಓಪನ್​ ಆಗುತ್ತಿವೆ. ಅಂಗಡಿ ಮುಂಗಟ್ಟುಗಳು, ಮಾರ್ಕೆಟ್​​ಗಳು ಓಪನ್​​ ಆಗಿವೆ. ಬಹುತೇಕ ಜಿಲ್ಲೆಗಳಲ್ಲಿ ಬಂದ್​ಗೆ ನೈತಿಕ ಬೆಂಬಲ ಮಾತ್ರ ಘೋಷಣೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2027: KKRಗೆ ಹಾರ್ದಿಕ್ ಪಾಂಡ್ಯ? – Kannada News | Hardik Pandya to KKR? Cryptic Video Sparking Rumours

ಐಪಿಎಲ್ 2027ರ ಸೀಸನ್‌ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಕೆಕೆಆರ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಒಂದು ಸಣ್ಣ ವಿಡಿಯೋ.

ವೈರಲ್ ವಿಡಿಯೋದಲ್ಲಿ ಏನಿದೆ?

ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕೆಕೆಆರ್ ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ತರಬೇತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿಯವರ ವೇಟ್ ಲಿಫ್ಟಿಂಗ್​ ಶೈಲಿಯನ್ನು ತಮಾಷೆಯಾಗಿ ನಕಲಿ ಮಾಡುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕಂಡುಬಂದಿದೆ. ಕೆಕೆಆರ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಹಾರ್ದಿಕ್ ಮುಂಬೈ ತಂಡವನ್ನು ತೊರೆದು ಕೆಕೆಆರ್ ಕ್ಯಾಂಪ್ ಸೇರುತ್ತಿದ್ದಾರೆ ಎಂಬ ವದಂತಿಗಳು ಹರಡಲಾರಂಭಿಸಿದವು.

ಈ ವಿಡಿಯೋಗೆ ಕೆಕೆಆರ್ ಖಾತೆಯ ಅಡ್ಮಿನ್ “ವೈಟ್ ಆಫ್ ಇಟ್…” (White of it…) ಎಂಬ ನಿಗೂಢ ಟ್ಯಾಗ್ ಲೈನ್ ನೀಡಿದ್ದಾರೆ. ಈ ವಿಶಿಷ್ಟ ಕ್ಯಾಪ್ಷನ್ ನೋಡಿದ ಕೆಕೆಆರ್ ಅಭಿಮಾನಿಗಳು, ಇದು ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಎಂಟ್ರಿ ಕೊಡಲಿರುವ ಮುನ್ಸೂಚನೆ ಅಥವಾ ಸುಳಿವು ಎಂದೇ ಭಾವಿಸುತ್ತಿದ್ದಾರೆ. ಅಡ್ಮಿನ್ ಅವರ ಈ ಒಂದೇ ಒಂದು ಟ್ಯಾಗ್ ಲೈನ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ವಿಡಿಯೋ ಭಾರಿ ಪ್ರಮಾಣದಲ್ಲಿ ವೈರಲ್ ಆಗಲು ಮುಖ್ಯ ಕಾರಣವಾಗಿದೆ.

ವರ್ಗಾವಣೆ ಚರ್ಚೆಯ ಹಿಂದಿನ ಅಸಲಿ ಸತ್ಯ:

ಮೂಲಗಳ ಪ್ರಕಾರ, ಈ ವರ್ಗಾವಣೆ ಕುರಿತು ಉಭಯ ಫ್ರಾಂಚೈಸಿಗಳ ನಡುವೆ ಮಾತುಕತೆಗಳು ನಡೆದಿದ್ದರೂ, ಸದ್ಯಕ್ಕೆ ಯಾವುದೇ ಅಧಿಕೃತ ಒಪ್ಪಂದ ಆಗಿಲ್ಲ. ಮುಂಬೈ ಇಂಡಿಯನ್ಸ್ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ತಂಡವು ಪ್ರಸ್ತುತ ಕಳೆದ ಸೀಸನ್‌ನ ಪ್ರದರ್ಶನದ ವಿಮರ್ಶೆಯಲ್ಲಿದ್ದು, ಯಾವುದೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ” ಎಂದು ತಿಳಿಸಿದ್ದಾರೆ.

ಹೊಸ ನಾಯಕನ ಅಗತ್ಯತೆ!

ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಅವರ ನಿರ್ಗಮನದ ಬಳಿಕ ಕೆಕೆಆರ್ ತಂಡಕ್ಕೆ ಒಬ್ಬ ಅನುಭವಿ ಭಾರತೀಯ ನಾಯಕನ ಅಗತ್ಯವಿದೆ. ಹಾರ್ದಿಕ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಉತ್ಸುಕವಾಗಿದ್ದರೂ, ಮುಂಬೈ ಇಂಡಿಯನ್ಸ್ ಇಟ್ಟ ಬದಲಿ ಆಟಗಾರರ ಬೇಡಿಕೆಗೆ ಕೆಕೆಆರ್ ಒಪ್ಪಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಗಂಭೀರ್ ಪಾಲಿಗೆ ವರವಾದ ಆಟಗಾರರ ಗಾಯದ ಸಮಸ್ಯೆ!

ಹಾರ್ದಿಕ್ ಪಾಂಡ್ಯಗೆ ಪ್ರತಿಯಾಗಿ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಅಥವಾ ರಿಂಕು ಸಿಂಗ್ ಅವರಂತಹ ಸ್ಟಾರ್ ಆಟಗಾರರನ್ನು ಬಿಟ್ಟುಕೊಡಲು ಕೆಕೆಆರ್ ನಿರಾಕರಿಸಿದ್ದು, ಕೇವಲ ನಗದು ಆಧಾರಿತ ಒಪ್ಪಂದಕ್ಕೆ ಮಾತ್ರ ಒಲವು ತೋರಿದೆ. ಈ ಒಪ್ಪಂದವನ್ನು ಮುಂಬೈ ಇಂಡಿಯನ್ಸ್ ಒಪ್ಪಿಕೊಂಡರೆ, ಐಪಿಎಲ್ 2027 ರಲ್ಲಿ ಹಾರ್ದಿಕ್ ಪಾಂಡ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Source link

ಬಂದ್ ನಡುವೆಯೂ ಮೆಜೆಸ್ಟಿಕ್‌ನಲ್ಲಿ ಬಸ್ ಸಂಚಾರ ಯಥಾಸ್ಥಿತಿ: ಬಿಎಂಟಿಸಿ, ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣ – Kannada News | Cauvery Dispute: Bengalurus Transport Unaffected by Karnataka Bandh Call.

ಬೆಂಗಳೂರು, ಆ.13: ಕಾವೇರಿ ನೀರು ಬಿಡುಗಡೆ ವಿವಾದದ ಹಿನ್ನಲೆಯಲ್ಲಿ ವಾಟಾಳ್ ನಾಗರಾಜ್ ಅವರು ಕರೆ ನೀಡಿದ ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‌ಗೆ ಮನವಿ ಮಾಡಲಾಗಿತ್ತು. ಬಂದ್‌ ಇದ್ದರೂ, ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಸಂಚಾರ ಯಥಾಸ್ಥಿತಿಯಲ್ಲಿದೆ. ಪ್ರಯಾಣಿಕರಲ್ಲಿ ಆತಂಕದ ವಾತಾವರಣವಿದ್ದರೂ, ಬಿಎಂಟಿಸಿ ಬಸ್‌ಗಳು ಎಂದಿನಂತೆ ಬೆಳಗ್ಗೆ 4:30ರಿಂದಲೇ ಸಂಚಾರ ಆರಂಭಿಸಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದರೆ, ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿದಿನ 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸುತ್ತಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಕರ್ಣನ ಕೊಲ್ಲಿಸೋಕೆ ಮುಂದಾದ ರಮೇಶ್; ಲಾರಿ ಅಪಘಾತ – Kannada News | Karna Serial Update: Ramesh Plots Murder Plan, Karna Hospitalized After Lorry Accident

‘ಕರ್ಣ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​​ಗಳು ಎದುರಾಗಿದ್ದವು. ಈಗ ದೊಡ್ಡ ತಿರುವು ಎದುರಾಗಿದೆ. ತನ್ನ ತಂದೆಯಿದಲೇ ಕರ್ಣ ಸಾಯುವ ಸ್ಥಿತಿ ತಲುಪಿದ್ದಾನೆ. ಹೌದು, ಕರ್ಣ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ಕರ್ಣನನ್ನು ರಮೇಶ್ ಕೊಲ್ಲಲು ಮುಂದಾಗಿದ್ದಾನೆ. ತನಗೆ ಆದ ಅವಮಾನಗಳನ್ನು ಸಹಿಸಲಾಗದೆ ಆತ ಈ ರೀತಿ ಮಾಡಲು ಮುಂದಾಗಿದ್ದಾನೆ. ಮುಂದಿನ ಎಪಿಸೋಡ್​​ಗಳು ಸಾಕಷ್ಟು ಕುತೂಹಲ ಮೂಡಿಸುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

ರಮೇಶ್​ಗೆ ಕರ್ಣನೇ ಮಗ ಆಗಬೇಕು. ಆದರೆ, ಆತ ಸದ್ಯಕ್ಕೆ ಸಾಕು ಮಗ. ಅವನು ತನ್ನದೇ ಮಗ ಎಂಬ ವಿಷಯ ರಿವೀಲ್ ಆಗಿಲ್ಲ. ಹೀಗಾಗಿ, ಕರ್ಣನ ವಿರುದ್ಧ ಆತ ದ್ವೇಷ ಸಾಧಿಸುತ್ತಿದ್ದಾನೆ. ತನ್ನದೇ ಮಗನ ಮೇಲೆ ಕೋಪಗೊಳ್ಳುತ್ತಿದ್ದಾನೆ. ಕರ್ಣನ ಮುಗಿಸಬೇಕು ಎಂಬುದು ರಮೇಶ್ ತಂಗಿ ತಾರಾಳ ಪ್ಲ್ಯಾನ್. ಇದಕ್ಕೆ ರಮೇಶ್​​ನ ದಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ. ಕರ್ಣನ ಕೊಲೆ ಮಾಡುವ ಪ್ಲ್ಯಾನ್ ಕೊಟ್ಟಿದ್ದು ಅವಳೇ.

ರಮೇಶ್ ಪತ್ನಿಗೆ ವಿಚ್ಛೇದನ ನೀಡಬೇಕು ಎಂದುಕೊಂಡಿದ್ದಾನೆ. ಆದರೆ, ಇದಕ್ಕೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಇದೆಲ್ಲ ಕರ್ಣನ ಕುಮ್ಮಕ್ಕು ಎಂಬುದು ರಮೇಶ್ ಅಭಿಪ್ರಾಯ. ಈ ರೀತಿಯ ಆಲೋಚನೆಯನ್ನು ಆತನ ತಲೆಯಲ್ಲಿ ತುಂಬಿದ್ದು ತಾರಾ. ಅಲ್ಲದೆ, ಹಣಕ್ಕಾಗಿ ಕರ್ಣನ ಬಳಿ ಕೈಚಾಚ ಬೇಕು ಎಂದು ಆತನಿಗೆ ಅನಿಸಿದೆ.

ಇದನ್ನೂ ಓದಿ:ಕರ್ಣ ಧಾರಾವಾಹಿಯಲ್ಲಿ ಆಷಾಢದ ಟ್ವಿಸ್ಟ್; ಮೆಕ್ಯಾನಿಕ್ ವೇಷದಲ್ಲಿ ಬಂದ ಕಥಾನಾಯಕ

ಇದಕ್ಕೆಲ್ಲ ಪರಿಹಾರ ಏನು ಎಂದು ತಂಗಿ ತಾರಾ ಬಳಿ ಕೇಳಿದ್ದಾನೆ ರಮೇಶ್. ಇದಕ್ಕೆ ಪರಿಹಾರವನ್ನು ತಾರಾ ಸೂಚಿಸಿದ್ದಾಳೆ. ಕೊಲೆ ಮಾಡೋಣ ಎಂದಿದ್ದಾಳೆ. ಆದರೆ, ಆರಂಭದಲ್ಲಿ ರಮೇಶ್ ಇದಕ್ಕೆ ಒಪ್ಪಿಲ್ಲ. ಕೊನೆಗೆ ಇದಕ್ಕೆ ಅವನು ಒಪ್ಪಿಗೆ ಕೊಟ್ಟಿದ್ದಾನೆ.
ಕರ್ಣನ ಸೀತಾಳ ಹುಡುಕಿ ಹೋಗಿದ್ದಾನೆ. ಸೀತಾ ಎಂಬುದು ರಮೇಶ್ ಮತ್ತೊಂದು ಪತ್ನಿ. ಈ ವೇಳೆ ರಸ್ತೆಯಲ್ಲಿದ್ದ ಕರ್ಣನಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಕರ್ಣನ ಪ್ರಾಣಕ್ಕೆ ಕುತ್ತು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Live: ಕಾವೇರಿ ಕಿಚ್ಚು; CWRC, CWMA ಆದೇಶ ಖಂಡಿಸಿ ಕರ್ನಾಟಕ ಬಂದ್ – Kannada News | Cauvery Water Dispute: Karnataka Bandh Against CWRC, CWMA Orders

ಬೆಂಗಳೂರು, ಆಗಸ್ಟ್​​ 13: ಕಾವೇರಿ ಜಲ ವಿವಾದ ಸಂಬಂಧ ಇಂದು ಕರ್ನಾಟಕ ಬಂದ್​​ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಲಾಗಿದೆ. ರಾಜ್ಯದ ಕೆಲ ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಪ್ರತಿಭಟನೆಗಳು ಆರಂಭವಾಗಿರುವ ಹೊರತಾಗಿಯೂ, ಜನ ಜೀವನ ಮತ್ತು ವಾಹನಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಹೋಟೆಲ್​​ಗಳು ಸೇರಿ ಎಲ್ಲವೂ ಓವಪ್​​ ಆಗಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಣ್ಣಯ್ಯ’ ಧಾರಾವಾಹಿಗೆ ಗುಡ್​ಬೈ ಹೇಳಿದ ಸುಷ್ಮಿತ್; ಜಿಮ್ ಸೀನಾ ಪಾತ್ರ ಬದಲು

ಜೀ ಕನ್ನಡದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಮೂಲಕ ಎಲ್ಲರನ್ನೂ ರಂಜಿಸೋ ಕೆಲಸವನ್ನು ಸುಷ್ಮಿತ್ ಜೈನ್ ಮಾಡುತ್ತಿದ್ದರು. ಈ ಧಾರಾವಾಹಿ ಸಾಕಷ್ಟು ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ‘ಜಿಮ್ ಸೀನಾ’ ಎಂಬ ಜನಪ್ರಿಯ ಪಾತ್ರದಲ್ಲಿ ನಟಿಸುತ್ತಿದ್ದ ಸುಷ್ಮಿತ್ ಜೈನ್ ಅವರು ಈ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ಕುರಿತು ಸ್ವತಃ ಅವರೇ ವೀಡಿಯೊ ಸಂದೇಶದ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸುಷ್ಮಿತ್ ಜೈನ್ ಅವರ ಸಂದೇಶ

“ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಜಿಮ್ ಸೀನಾ ಮಾತಾಡ್ತಾ ಇದ್ದೀನಿ. ಇನ್ನು ಮುಂದೆ ಈ ಜಿಮ್ ಸೀನಾ ಅನ್ನೋ ಪಾತ್ರವನ್ನು ನಾನು ಮುಂದುವರಿಸುವುದಕ್ಕೆ ಆಗುತ್ತಿಲ್ಲ. ಕೆಲವು ಕಾರಣಾಂತರಗಳಿಂದ ಈ ನಿರ್ಧಾರ ತಗೆದುಕೊಳ್ಳಬೇಕಾಯಿತು. ನನ್ನ ಮನವಿ ಏನೆಂದರೆ, ಇಷ್ಟು ದಿನ ನನಗೆ ಹೇಗೆ ಬೆಂಬಲ ಹಾಗೂ ಪ್ರೀತಿ ಕೊಟ್ಟಿರೋ, ಹಾಗೆಯೇ ಇನ್ನು ಮುಂದೆ ಈ ಪಾತ್ರವನ್ನು ಅಭಿನಯಿಸಲು ಬರುವ ಹೊಸ ಕಲಾವಿದರಿಗೂ ಅದೇ ಪ್ರೀತಿ ಮತ್ತು ಸಪೋರ್ಟ್ ನೀಡಿ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿ‘ ಎಂದು ಅವರು ಪ್ರೇಕ್ಷಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಹೊಸ ನಟನ ಎಂಟ್ರಿ

ಸುಷ್ಮಿತ್ ಜೈನ್ ಅವರು ಧಾರಾವಾಹಿಯಿಂದ ಹೊರಬಿದ್ದ ಬೆನ್ನಲ್ಲೇ, ‘ಜಿಮ್ ಸೀನಾ’ ಪಾತ್ರಕ್ಕೆ ಹೊಸ ನಟರೊಬ್ಬರು ಸೇರ್ಪಡೆಯಾಗಿದ್ದಾರೆ. ಇನ್ಮುಂದೆ ಈ ಪಾತ್ರದಲ್ಲಿ ನೂತನ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ವಿಷಯ ಸುಷ್ಮಿತ್ ಜೈನ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಧಾರಾವಾಹಿಯಿಂದ ಹೊರ ಹೋಗಬಾರದಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಅಣ್ಣಯ್ಯ’ ಸೀರಿಯಲ್ ನಟ ವಿಕಾಶ್ ಹೊಸ ಸಿನಿಮಾ ‘ಪಾರ್ಥನ್ ಪರಪಂಚ’

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಸುಷ್ಮಿತ್?

ಮತ್ತೊಂದೆಡೆ, ‘ಕನ್ನಡ ಬಿಗ್ ಬಾಸ್ ಸೀಸನ್ 13’ ಶೀಘ್ರವೇ ಆರಂಭವಾಗಲಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಪರ್ಧಿಗಳ ಕುರಿತು ಕುತೂಹಲ ಹೆಚ್ಚಾಗಿದೆ. ಈ ಹಂತದಲ್ಲೇ ಸುಷ್ಮಿತ್ ಜೈನ್ ಅವರು ‘ಅಣ್ಣಯ್ಯ’ ಧಾರಾವಾಹಿಯಿಂದ ದಿಢೀರ್ ಹೊರಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಕಿರುತೆರೆ ವಲಯದಲ್ಲಿ ಹರಿದಾಡುತ್ತಿದ್ದು, ಪ್ರೇಕ್ಷಕರಲ್ಲೂ ಈ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Bandh Live Updates: ಕಾವೇರಿ ನೀರು ಬಿಡುಗಡೆ ಖಂಡಿಸಿ ಇಂದು ಕರ್ನಾಟಕ ಬಂದ್, ಇಲ್ಲಿದೆ ಪ್ರಮುಖ ಸುದ್ದಿಗಳು – Kannada News | Karnataka Bandh Live Updates 13 August Cauvery Water Issue pro kannada activists farmers protest Latest News

ಬೆಂಗಳೂರು, ಆ.13: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶವನ್ನು ಖಂಡಿಸಿ ಹಾಗೂ ನೀರು ಹರಿಸುವುದನ್ನು ತಡೆಯುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಬಂದ್ ಕರೆ ನೀಡಲಾಗಿದ್ದರೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸಾರ್ವಜನಿಕ ಸಾರಿಗೆ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದು, ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವುದು ಅಥವಾ ವಾಹನ ಸಂಚಾರಕ್ಕೆ ಅಡ್ಡಿಪಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂದಿನಿಂದ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವೂ ಆರಂಭ. ಇನ್ನು ಇದರ ಜತೆಗೆ ಸುಪ್ರೀಂ ಕೋರ್ಟ್​​ನಲ್ಲಿ ತಮಿಳುನಾಡು ಸಲ್ಲಿಸಿರುವ ಕಾವೇರಿ ಅರ್ಜಿ ವಿಚಾರಣೆ ನಡೆಯಲಿದೆ.

Source link

ಗಂಭೀರ್ ಪಾಲಿಗೆ ವರವಾದ ಆಟಗಾರರ ಗಾಯದ ಸಮಸ್ಯೆ! – Kannada News | How Team India’s Injury Woes Saved Gautam Gambhir’s Test Coach Job

ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ, ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ. ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಗಂಭೀರ್ ಅವರ ರೆಡ್-ಬಾಲ್ (ಟೆಸ್ಟ್) ಕೋಚಿಂಗ್ ಸ್ಥಾನವು ಸದ್ಯಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ‘ರೆವ್‌ಸ್ಪೋರ್ಟ್ಸ್’ ತನ್ನ ವಿಶೇಷ ವರದಿಯಲ್ಲಿ ಖಚಿತಪಡಿಸಿದೆ.

ಇತ್ತೀಚಿನ ದಿನಗಳಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ತಾಯ್ನಾಡಿನ ಟೆಸ್ಟ್ ಸರಣಿಗಳಲ್ಲಿ ಅನುಭವಿಸಿದ ಸೋಲು ಹಾಗೂ ಆಸ್ಟ್ರೇಲಿಯಾ ಪ್ರವಾಸದ ಹಿನ್ನಡೆಯಿಂದಾಗಿ ಗಂಭೀರ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೋಚಿಂಗ್ ಶೈಲಿಯ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಬಿಸಿಸಿಐ ಮಾತ್ರ ಗಂಭೀರ್ ಬೆನ್ನಿಗೆ ನಿಂತಿದೆ.

ಗಂಭೀರ್ ಬೆಂಬಲಕ್ಕೆ ಕಾರಣವಾದ ಅಂಶಗಳು:

ಪರಿವರ್ತನಾ ಹಂತ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರ ನಿವೃತ್ತಿ ಹಾಗೂ ಅನುಪಸ್ಥಿತಿಯ ನಂತರ ಟೀಮ್ ಇಂಡಿಯಾ ಪ್ರಸ್ತುತ ಹೊಸ ಪೀಳಿಗೆಯನ್ನು ಕಟ್ಟುವ ಪ್ರಮುಖ ಪರಿವರ್ತನಾ ಹಂತದಲ್ಲಿದೆ. ಇಂತಹ ಸಮಯದಲ್ಲಿ ಹೊಸ ತರಬೇತುದಾರರಿಗೆ ತಂಡವನ್ನು ಸಿದ್ಧಪಡಿಸಲು ಹೆಚ್ಚಿನ ಸಮಯದ ಅಗತ್ಯವಿದೆ ಎಂಬುದನ್ನು ಬಿಸಿಸಿಐ ಒಪ್ಪಿಕೊಂಡಿದೆ.

ಗಾಯದ ಸಮಸ್ಯೆ: ಇತ್ತೀಚಿನ ಸರಣಿಗಳಲ್ಲಿ ಹಿರಿಯ ಆಟಗಾರರ ಗಾಯದ ಸಮಸ್ಯೆಗಳು ತಂಡದ ಪ್ರದರ್ಶನದ ಮೇಲೆ ಭಾರಿ ಪರಿಣಾಮ ಬೀರಿವೆ. ಪ್ರಸಕ್ತ ಶ್ರೀಲಂಕಾ ಸರಣಿಗೂ ಜಸ್‌ಪ್ರೀತ್ ಬುಮ್ರಾ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಪ್ರಮುಖ ಆಟಗಾರರು ಲಭ್ಯವಿಲ್ಲದಿರುವುದನ್ನು ಮಂಡಳಿಯು ಗಣನೆಗೆ ತೆಗೆದುಕೊಂಡಿದೆ.

ಅಂದರೆ ಟೀಮ್ ಇಂಡಿಯಾದ ಪ್ರಸ್ತುತ ಪರಿವರ್ತನಾ ಹಂತ ಮತ್ತು ಪ್ರಮುಖ ಆಟಗಾರರ ಗಾಯದ ಸಮಸ್ಯೆಗಳನ್ನು ಪರಿಗಣಿಸಿ, ಗೌತಮ್ ಗಂಭೀರ್ ಅವರನ್ನು ಕೋಚ್ ಹುದ್ದೆಯಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ತಕ್ಷಣದ ಸವಾಲುಗಳನ್ನು ಅರಿತಿರುವ ಮಂಡಳಿಯು, ಯುವ ಆಟಗಾರರೊಂದಿಗೆ ತಂಡವನ್ನು ಮರುಸಂಘಟಿಸಲು ಗಂಭೀರ್ ಅವರಿಗೆ ಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆ.

ಬಿಸಿಸಿಐ ನಿಲುವೇನು?

ವರದಿಗಳ ಪ್ರಕಾರ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಸೋತರೂ ಸಹ ಯಾವುದೇ ಮಧ್ಯಂತರ ಕೋಚ್ ನೇಮಕ ಮಾಡುವ ಆಲೋಚನೆ ಬಿಸಿಸಿಐಗೆ ಇಲ್ಲ. ವಿವಿಎಸ್ ಲಕ್ಷ್ಮಣ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲೇ (NCA) ಮುಂದುವರಿಯಲು ಇಚ್ಛಿಸಿರುವುದರಿಂದ ಮತ್ತು ಭಾರತೀಯ ಕ್ರಿಕೆಟ್‌ನಲ್ಲಿ ‘ಸ್ಪ್ಲಿಟ್ ಕೋಚಿಂಗ್’ (ವಿಭಿನ್ನ ಮಾದರಿಗಳಿಗೆ ವಿಭಿನ್ನ ಕೋಚ್) ಪದ್ಧತಿ ಇನ್ನೂ ಜಾರಿಗೆ ಬಾರದಿರುವುದರಿಂದ ಗಂಭೀರ್ ಅವರೇ ಸುದೀರ್ಘ ಅವಧಿಗೆ ಮುಂದುವರಿಯಲಿದ್ದಾರೆ.

ಅಲ್ಲದೆ, ಶಾರ್ಟ್ ಫಾರ್ಮ್ಯಾಟ್ (ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ಗಂಭೀರ್ ಅವರ ದಾಖಲೆ ಅತ್ಯುತ್ತಮವಾಗಿದ್ದು, 2027 ರ ಏಕದಿನ ವಿಶ್ವಕಪ್‌ವರೆಗೂ ಅವರು ಸೀಮಿತ ಓವರ್‌ಗಳ ಕೋಚ್ ಆಗಿ ಮುಂದುವರಿಯುವುದು ಶತಸಿದ್ಧ. ಸದ್ಯಕ್ಕೆ ಗಂಭೀರ್ ಅವರ ಮುಂದಿನ ಗುರಿ ಶ್ರೀಲಂಕಾ ನೆಲದಲ್ಲಿ ಸರಣಿ ಗೆದ್ದು, ಮುಂಬರುವ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಸರಣಿಗಳಿಗೆ ತಂಡವನ್ನು ಬಲಿಷ್ಠವಾಗಿ ಸಜ್ಜುಗೊಳಿಸುವುದಾಗಿದೆ.

ಇದನ್ನೂ ಓದಿ: Asian Games: ಮೊದಲ ಸುತ್ತಿನಲ್ಲಿಲ್ಲ ಇಂಡೋ-ಪಾಕ್ ಮ್ಯಾಚ್!

ಒಟ್ಟಾರೆಯಾಗಿ, ಶ್ರೀಲಂಕಾ ಸರಣಿಯ ಫಲಿತಾಂಶ ಏನೇ ಆದರೂ ಗೌತಮ್ ಗಂಭೀರ್ ಅವರ ರೆಡ್-ಬಾಲ್ ಕೋಚಿಂಗ್ ಹುದ್ದೆಗೆ ಯಾವುದೇ ಕುತ್ತಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ್ದು, ತಂಡದ ದೀರ್ಘಾವಧಿಯ ಸ್ಥಿರತೆಗೆ ಆದ್ಯತೆ ನೀಡಿದೆ. ಹೊಸ ತಲೆಮಾರಿನ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಲು ಗೌತಮ್ ಗಂಭೀರ್ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಕಾಲಾವಕಾಶವನ್ನು ಮಂಡಳಿಯು ನೀಡಿದ್ದು, ಹೀಗಾಗಿ 2027ರ ಏಕದಿನ ವಿಶ್ವಕಪ್​ವರೆಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಯುವುದು ಖಚಿತ.

Source link

Exit mobile version