ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು, ಎಲ್ಲಿ ನೋಡಬಹುದು?
ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಒಳ್ಳೆಯ ಪ್ರದರ್ಶನ ಕಾಣುತ್ತಿರುವಾಗಲೇ ಸಿನಿಮಾ ಒಟಿಟಿಗೆ ಕಾಲಿರಿಸಿದೆ. ‘ಮಾರ್ಕ್’ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ. ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿ, ಅರ್ಜುನ್ ಜನ್ಯ ನಿರ್ದೇಶನ ಮಾಡಿರುವ ‘45’ ಸಿನಿಮಾ ಚಿತ್ರಮಂದಿರದಲ್ಲೂ ‘ಮಾರ್ಕ್’ ಜೊತೆಗೆ ಬಿಡುಗಡೆ ಆಗಿತ್ತು. ಈಗ ಒಟಿಟಿಗೂ ‘ಮಾರ್ಕ್’ ಜೊತೆಗೆ ಬಂದಿದೆ. ಈ ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಬಹುದಾಗಿದೆ. ಜಗದ್ವಿಖ್ಯಾತ ‘ಗೇಮ್ ಆಫ್…