ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ

ಹಿಂದೂ ಸಂಘಟನೆಗಳಿಂದ ಪ್ರತಿಭಟನೆImage Credit source: tv9 kannada

ಬಾಗಲಕೋಟೆ, ಮೇ 27: ನಾಳೆ (ಮೇ 28) ನಾಡಿನಾದ್ಯಂತ ಬಕ್ರೀದ್ (Bakrid) ಹಬ್ಬದ ಸಂಭ್ರಮ. ಮುಸ್ಲಿಂ ಸಮಾಜದ ಬಾಂಧವರು ಸಂಭ್ರಮದಿಂದ ಬಕ್ರೀದ್ ಆಚರಣೆಗೆ ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗೋತ್ಯೆಗೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಪ್ರತಿಭಟನೆ ಮೂಲಕ ಪೊಲೀಸ್ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದು, ಆ ಮೂಲಕ ಗೋಹತ್ಯೆ ತಡೆಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಕಸಾಯಿಖಾನೆಗಳ ಪಟ್ಟಿ ಮಾಡಿ ಬಂದ್​​ಗೆ ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು

  • ಬಕ್ರೀದ ಹಬ್ಬ ಬೆನ್ನಲ್ಲೇ ಕಸಾಯಿಖಾನೆಗಳ ವಿರುದ್ಧ ಧ್ವನಿ ಎತ್ತಿದ ಹಿಂದೂ ಪರಸಂಘಟನೆ ಕಾರ್ಯಕರ್ತರು
  • ಬಾಗಲಕೋಟೆ ಜಿಲ್ಲೆಯಲ್ಲಿನಲ್ಲಿ ಕಸಾಯಿಖಾನೆಗಳ ಬಂದ್​​ಗೆ ಒತ್ತಾಯ
  • ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಆಗ್ರಹ

ನಾಳೆ ಎಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ. ಮುಸ್ಲಿಂ ಸಮುದಾಯದವರು ಅದ್ಧೂರಿಯಾಗಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಬಾಗಲಕೋಟೆಯಲ್ಲಿ ಹಿಂದೂಪರ ಸಂಘಟನೆಗಳು ಬಕ್ರೀದ್ ಹಬ್ಬದ ವೇಳೆ ಯಾವುದೇ ಕಾರಣಕ್ಕೂ ಗೋ ಹತ್ಯೆಗೆ ಅವಕಾಶ ನೀಡಬಾರದು ಎಂದು ಪ್ರತಿಭಟಿಸಿದ್ದಾರೆ. ಶ್ರೀರಾಮ ಸೇನೆಯ ಸಂಘಟನೆಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೂ ಜಾಗರಣವೇದಿಕೆ ಕಾರ್ಯಕರ್ತರು ಗೋ ಅಕ್ರಮ ಸಾಗಾಣಿಕೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. 2023ರ ಗೋಹತ್ಯೆ ನಿಷೇಧ ಕಾಯ್ದೆ ಬಾಗಲಕೋಟೆಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರು ವಿರುದ್ಧ ಆಕ್ರೋಶ

ಇನ್ನು ಗಿರೀಶ್ ಫೌಂಡೇಶನ್ ಎಂಬ ಎನ್‌ಜಿಒ ಮೂಲಕ ಎಸ್​​ಪಿ ಅವರಿಗೆ ಗೋ ಹತ್ಯೆ ತಡೆಯುವಂತೆ ಮನವಿ ಸಲ್ಲಿಸಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾದ್ಯಂತ ಕಸಾಯಿಖಾನೆಗಳಿಗೆ ಸಾಗಿಸುವ ಗೋವುಗಳ ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲಾದ್ಯಂತ 60ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಅದರ ಜೊತೆಗೆ ಪರ ಜಿಲ್ಲೆ, ಪರ ರಾಜ್ಯಗಳಿಗೆ ಕೂಡ ಗೋವುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ‌ ಆಗ್ರಹಿಸಿ ಮುಸ್ಲಿಂ ಸಂಘಟನೆಯಿಂದ ಪ್ರತಿಭಟನೆ

ಈ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಕೊಟ್ಟರು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ, ಕಾಟಾಚಾರಕ್ಕೆ ಭೇಟಿ ನೀಡ್ತಾರೆ ಎಂದು ಕೂಡ ಆಕ್ರೋಶ ಹೊರಹಾಕಿದ್ದಾರೆ. ಆಯಾ ಠಾಣೆ ವ್ಯಾಪ್ತಿಯ ಪೊಲೀಸರಿಗೆ ಪೊಲೀಸ್ ಮೇಲಾಧಿಕಾರಿಗಳು ಸ್ಪಷ್ಟವಾಗಿ ನಿರ್ದೇಶನ ಕೊಡಬೇಕು. ದೂರು ನೀಡಿದ ತಕ್ಷಣ ಗೋ ಹತ್ಯೆ ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ್ ಗೋಯೆಲ್ ಹೇಳಿದ್ದಿಷ್ಟು 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ್ ಗೋಯೆಲ್​​, ಗೋ ಸಾಗಾಣಿಕೆ ತಡೆಯಲು 26 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ದಾಖಲಾತಿ ಇಲ್ಲದೆ ಗೋಸಾಗಾಣಿಕೆ ಹಿನ್ನೆಲೆ ಎರಡು ಕೇಸ್ ದಾಖಲಿಸಲಾಗಿದೆ. ಗೋಸಾಗಾಣಿಕೆ ಬಗ್ಗೆ ಕಂಟ್ರೋಲ್ ರೂಮ್​ಗೂ ಕರೆ ಮಾಡಬಹುದು. ಕೂಡಲೇ ಕ್ರಮಕೈಗೊಳ್ಳುತ್ತೇವೆ‌‌. ಇನ್ನು ಬಕ್ರೀದ್​ ಹಬ್ಬದ ಭದ್ರತೆಗೆ 600 ಜನ ಪೊಲೀಸ್, 300 ಜನ ಹೋಮ್ ಗಾರ್ಡ್, 3 ಕೆಎಸ್​ಆರ್​ಪಿ, 10 ಡಿಎಆರ್ ತುಕಡಿ ನಿಯೋಜಿಸಲಾಗಿದೆ. 147 ಕಡೆ ಪ್ರಾರ್ಥನೆ ನಡೆಯಲಿದ್ದು, 18 ಕಡೆ‌ ಮೆರವಣಿಗೆ ಇದೆ. 6 ಕಡೆ ಸೂಕ್ಷ್ಮ ಸ್ಥಳ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಗೋ ಹತ್ಯೆ ಮಾಡುವವರನ್ನು ಗುಂಡಿಕ್ಕಬೇಕು: ಸಚಿವ ಮಂಕಾಳು ವೈದ್ಯ ಹೇಳಿಕೆಗೆ ಪರಮೇಶ್ವರ ಹೇಳಿದ್ದಿಷ್ಟು

ಒಟ್ಟಿನಲ್ಲಿ ಒಂದು ಕಡೆ ಬಕ್ರೀದ್​ ಹಬ್ಬಕ್ಕೆ ಮುಸ್ಲಿಮರು ಸಜ್ಜಾಗಿದ್ದರೆ, ಹಿಂದೂ ಕಾರ್ಯಕರ್ತರು ಬಕ್ರೀದ್ ವೇಳೆ ಗೋಹತ್ಯೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನನಗೆ ಹಲವು ಸಂಗಾತಿಗಳಿದ್ದಾರೆ’: ಮುಚ್ಚುಮರೆ ಇಲ್ಲದೇ ಎಲ್ಲವನ್ನೂ ಹೇಳಿದ ನಟಿ ಶಹನಾ ಗೋಸ್ವಾಮಿ

‘ರಾಕ್ ಆನ್’, ‘ಹೀರೋಯಿನ್’ ಮುಂತಾದ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಬಾಲಿವುಡ್ (Bollywood) ನಟಿ ಶಹನಾ ಗೋಸ್ವಾಮಿ (Shahana Goswami) ಪ್ರೀತಿ ಮತ್ತು ಸಂಬಂಧಗಳ ಕುರಿತಾದ ತಮ್ಮ ವಿಭಿನ್ನ ದೃಷ್ಟಿಕೋನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ತಾವು ಈಗ ಓಪನ್ ರಿಲೇಶನ್‌ಶಿಪ್​ನಲ್ಲಿ (Open Relationship) ಇರುವುದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಹಲವು ಸಂಗಾತಿಗಳು ಇದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಸಾಂಪ್ರದಾಯಿಕ ಸಂಬಂಧಗಳು ತಮಗೆ ಎಂದಿಗೂ ಸರಿಹೊಂದುವುದಿಲ್ಲ ಎಂದು ಶಹನಾ ಹೇಳಿದ್ದಾರೆ. ಏಕೆಂದರೆ ಅವರು ಪ್ರೀತಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎರಡನ್ನೂ ಸಮಾನವಾಗಿ ನಂಬುತ್ತಾರೆ. ಈ ಹಿಂದೆ ನಟ ಮಿಲಿಂದ್ ಸೋಮನ್ ಜೊತೆಗಿನ ಬ್ರೇಕಪ್ ನೆನಪಿಸಿಕೊಂಡ ಅವರು, ಆ ಬಳಿಕ ತಮಗೆ ಸಾಂಪ್ರದಾಯಿಕ ಸಂಬಂಧದ ಸೂತ್ರಗಳು ಅರ್ಥಹೀನ ಎನಿಸಿದವು ಎಂದಿದ್ದಾರೆ. ತದನಂತರ ತಾವು ರೆಸ್ಟೋರೆಂಟ್ ಉದ್ಯಮಿ ಮೌರೊ ಗಾಜಿ ಅವರನ್ನು ಭೇಟಿಯಾದಾಗ, ಯಾವುದೇ ಕಟ್ಟುನಿಟ್ಟಾದ ನಿಯಮಗಳು ಅಥವಾ ಲೇಬಲ್‌ಗಳಿಲ್ಲದ ಮುಕ್ತ ಸಂಬಂಧವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

ತಮ್ಮ ಮುಕ್ತ ಸಂಬಂಧದ ಅರ್ಥವನ್ನು ವಿವರಿಸಿದ ನಟಿ, ‘ಇದರರ್ಥ ನಮ್ಮ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕವಾದ ಸಂವಹನವನ್ನು ಹೊಂದುವುದು. ಸದ್ಯಕ್ಕೆ ನನ್ನ ಜೀವನದಲ್ಲಿ ಒಬ್ಬನೇ ಪ್ರಮುಖ ಸಂಗಾತಿ ಅಂತ ಯಾರೂ ಇಲ್ಲ. ನನ್ನೊಂದಿಗೆ ದೀರ್ಘಕಾಲದ ಒಡನಾಟ ಹೊಂದಿರುವ ಹಲವು ಜನರಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಸಾಮಾನ್ಯ ಅಲ್ಲ. ಪ್ರತಿಯೊಂದು ಸಂಬಂಧವೂ ನನಗೆ ಮುಖ್ಯವಾದದ್ದು’ ಎಂದಿದ್ದಾರೆ.

‘ನಾವು ಹೇಗೆ ಹಲವು ಸ್ನೇಹಿತರನ್ನು ಹೊಂದಿರುತ್ತೇವೆಯೋ ಮತ್ತು ಪ್ರತಿಯೊಬ್ಬ ಸ್ನೇಹಿತನೊಂದಿಗೂ ವಿಭಿನ್ನ ಒಡನಾಟ ಇರುತ್ತದೆಯೋ ಇದೂ ಹಾಗೆಯೇ. ನನಗೆ ಈ ಹಂತದಲ್ಲಿ ಮುಕ್ತತೆ ಎಂದರೆ ಯಾರೊಂದಿಗೂ ನಿರ್ದಿಷ್ಟವಾದ ಗಟ್ಟಿ ಪಾಲುದಾರಿಕೆ ಇಲ್ಲದಿರುವುದು. ಆದರೆ ದೀರ್ಘಕಾಲದ ಬಾಂಧವ್ಯ ಮತ್ತು ಸಂಪರ್ಕದ ಭಾವನೆ ನಮ್ಮೊಂದಿಗಿರುತ್ತದೆ. ಕೆಲವೊಮ್ಮೆ ಅದು ಕೇವಲ ಸ್ನೇಹವಾಗಿರುತ್ತದೆ, ಕೆಲವೊಮ್ಮೆ ದೈಹಿಕವಾಗಿಯೂ ಇರಬಹುದು. ಅದನ್ನು ಯಾವುದೋ ಒಂದು ನಿರ್ದಿಷ್ಟ ದಿಕ್ಕಿಗೆ ತಿರುಗಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​​ನ ‘ಕಿರಿ ಕಿರಿ’ ಕಪಲ್ ಬಗ್ಗೆ ಮಾತನಾಡಿದ ನಿರ್ಮಾಪಕ; ಈ ಜೋಡಿ ಮೇಲೆ ಅನುಮಾನ

‘ಇದರ ಮೂಲ ಸಿದ್ಧಾಂತ ಸರಳ: ಪ್ರೀತಿ ಮತ್ತು ಸ್ನೇಹ. ನನ್ನಲ್ಲಿ ನೀಡಲು ಅಪಾರವಾದ ಪ್ರೀತಿ ಇರುವಾಗ, ನಾನು ಅದನ್ನು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಏಕೆ ಸೀಮಿತಗೊಳಿಸಬೇಕು?’ ಎಂದು ಶಹನಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಜೀವನದಲ್ಲಿ ಯಾವುದೂ ರಹಸ್ಯವಾಗಿಲ್ಲ ಮತ್ತು ತಾವು ಇತರ ಸಂಗಾತಿಗಳೊಂದಿಗೆ ಆತ್ಮೀಯವಾಗಿರುವುದರ ಬಗ್ಗೆ ತಮ್ಮ ಎಲ್ಲ ಪಾರ್ಟ್‌ನರ್‌ಗಳಿಗೂ ತಿಳಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SRH vs RR: ಶಹಬ್ಬಾಸ್ ಸೂರ್ಯವಂಶಿ; ಶತಕ ವಂಚಿತರಾದ್ರೂ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದ ವೈಭವ್

ವೈಭವ್ ಸೂರ್ಯವಂಶಿ (Vaibhav Sooryavanshi).. ತಾನು ಕ್ರೀಸ್​ನಲ್ಲಿ ಇರುವವರೆಗೂ ಎದುರಾಳಿಗಳ ಗುಂಡಿಗೆಯ ಬಡಿತ ಹೆಚ್ಚಿಸುವ ಹದಿನೈದೇ ವರ್ಷದ ಹಾಲ್ಗೆನ್ನೆಯ ಯುವಕ. ಬರೀ ಹೊಡಿಬಡಿ ಆಟವನ್ನೇ ಕೇಳುವ ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರನೆನಿಸಿಕೊಂಡಿರುವ ವೈಭವ್, ಐಪಿಎಲ್ 2026 (IPL 2026) ರ ಎಲಿಮಿನೇಟರ್ ಪಂದ್ಯದಲ್ಲೂ ಅದೇ ಆಟವನ್ನು ಪ್ರದರ್ಶಿಸಿದರು. ಈ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸನ್‌ರೈಸರ್ಸ್, ಪಂದ್ಯ ಆರಂಭಕ್ಕೂ ಮುನ್ನವೇ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ನಾನಾ ರಣತಂತ್ರವನ್ನು ಹೆಣೆದುಕೊಂಡು ಮೈದಾನಕ್ಕಿಳಿದಿತ್ತು. ಆದರೆ ವೈಭವ್ ಸೂರ್ಯವಂಶಿ ಎಂಬ ಸುನಾಮಿಯ ಮುಂದೆ ಸನ್‌ರೈಸರ್ಸ್ ಬೌಲರ್​ಗಳು ಅಕ್ಷರಶಃ ನಲುಗಿ ಹೋದರು.

16 ಎಸೆತಗಳಲ್ಲಿ ಅರ್ಧಶತಕ

ತಂತ್ರಗಾರಿಕೆಯಲ್ಲಿ ನಿಸ್ಸೀಮನೆನಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್​ನ ದುಃಸ್ವಪ್ನದಂತೆ ಕಾಡಿದ ವೈಭವ್, ಹ್ಯಾಟ್ರಿಕ್ ಸಿಕ್ಸರ್​ಗಳನ್ನು ಬಾರಿಸುವುದರ ಜೊತೆಗೆ ಅವರ ಓವರ್​ನಲ್ಲಿ ಬರೋಬ್ಬರಿ 25 ರನ್ ಕಲೆಹಾಕಿದರು. ವೈಭವ್ ಹೊಡೆದ ಒಂದೊಂದು ಹೊಡೆತವೂ ಎಸ್‌ಆರ್‌ಎಚ್ ಆಟಗಾರರನ್ನು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಬೌಲರ್​ಗಳನ್ನು ದಂಡಿಸುವುದಕ್ಕೆ ನಾನು ಕ್ರೀಸ್​ನಲ್ಲಿ ನಿಂತಿರುವುದು ಎಂಬುದನ್ನು ಪ್ರತಿ ಹೊಡೆತದಲ್ಲೂ ಸಾಭೀತು ಪಡಿಸಿದವರಂತೆ ಬ್ಯಾಟ್ ಬೀಸಿದ ವೈಭವ್ ಕೇವಲ 16 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.

28 ಎಸೆತಗಳಲ್ಲಿ 97 ರನ್

ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ ವೈಭವ್ ಬಾರಿಸಿದ ಸಿಕ್ಸರ್​ಗಳು ಬರೋಬ್ಬರಿ 8. ಇದರ ಜೊತೆಗೆ 1 ಬೌಂಡರಿಯೂ ಸೇರಿತ್ತು. ಅಂದರೆ ವೈಭವ್ ಬರಿ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು. ಈ ಮೂಲಕ ವೈಭವ್, ಪ್ಲೇಆಫ್‌ ಪಂದ್ಯದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರನೆಂಬ ದಾಖಲೆಯನ್ನು ನಿರ್ಮಿಸಿದರು. ಅರ್ಧಶತಕದ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ವೈಭವ್ ಕೇವಲ 28 ಎಸೆತಗಳಲ್ಲಿ 97 ರನ್ ಕಲೆಹಾಕಿದರು. ಅಂದರೆ ವೈಭವ್ ತಮ್ಮ ಅರ್ಧಶತಕದಿಂದ 97 ರನ್ ಬಾರಿಸಲು ಕೇವಲ 12 ಎಸೆತಗಳನ್ನಷ್ಟೇ ತೆಗೆದುಕೊಂಡರು. ವೈಭವ್ ಅವರ ಈ ಅಬ್ಬರದಿಂದಾಗಿ ರಾಜಸ್ಥಾನ್ ಕೇವಲ 8 ಓವರ್​ಗಳಲ್ಲಿ 125 ರನ್​ಗಳ ಗಡಿ ದಾಟಿತು.

ಶತಕ ವಂಚಿತರಾದ ವೈಭವ್

ಅಂದರೆ ರಾಜಸ್ಥಾನ್ ದಾಖಲಿಸಿದ 125 ರನ್​ಗಳಲ್ಲಿ ವೈಭವ್ ಒಬ್ಬರೇ 97 ರನ್ ಕಲೆಹಾಕಿದರು. ವೈಭವ್ ಔಟಾದ 8ನೇ ಓವರ್​ನಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ವೈಭವ್ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಎಲ್ಲರೂ ಕಾದು ಕುಳಿತಿದ್ದರು. ಆದರೆ ಓವರ್​ನ ಕೊನೆಯ ಎಸೆತದಲ್ಲಿ ವೈಭವ್ ಮಾಡಿದ ತಪ್ಪು ಅವರನ್ನು ಶತಕ ವಂಚಿತರನ್ನಾಗಿಸಿತು. ವೈಭವ್ ಶತಕವನ್ನು ಕಣ್ತುಂಬಿಕೊಳ್ಳಲು ಖುಷಿಯಿಂದ ಕಾಯುತ್ತಿದ್ದ ಅಭಿಮಾನಿಗಳು ಅವರು ಔಟಾಗುತ್ತಿದ್ದಂತೆ ಒಂದು ಕ್ಷಣ ಆಘಾತಕ್ಕೊಳಗಾದರು. ಎಲ್ಲೆಲ್ಲೂ ನೀರವ ಮೌನ ಆವರಿಸಿತು.

IPL 2026 Eliminator SRH vs RR Live: ರಾಜಸ್ಥಾನ್ 200 ರನ್ ಪೂರ್ಣ

ಸ್ವತಃ ವೈಭವ್ ಅವರೇ ಅಯ್ಯೋ ಎಂತಾ ಕೆಲಸ ಮಾಡಿದೆ ಎಂದು ತಲೆಯ ಮೇಲೆ ಕೈ ಇಟ್ಟುಕೊಂಡರು. ಇತ್ತ ಎದುರಾಳಿ ತಂಡದ ಆಟಗಾರರು ವೈಭವ್ ಅವರ ಆಟಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ವೈಭವ್ ಬೇಸರದಿಂದ ಪೆವಿಲಿಯನ್​ತ್ತ ಹೆಜ್ಜೆ ಹಾಕುತ್ತಿದ್ದರೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ 15 ವರ್ಷದ ಪೋರನ ಆಟಕ್ಕೆ ಶಹಬ್ಬಾಸ್​ ಗಿರಿ ಹೇಳುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:55 pm, Wed, 27 May 26

Source link

ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ನವದೆಹಲಿ, ಮೇ 27: ಭಾರತದ ಆನ್‌ಲೈನ್ ಗೇಮಿಂಗ್ (Online Gaming) ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರದಂದು (ಮೇ 27, 2026) ಬಿಗ್ ಶಾಕ್ ನೀಡಿದೆ. ಆನ್‌ಲೈನ್ ಗೇಮಿಂಗ್ ಮೇಲಿನ ಶೇ. 28 ರಷ್ಟು ಜಿಎಸ್‌ಟಿ (GST) ವಿಧಿಸುವ ಸರ್ಕಾರದ ತೀರ್ಮಾನದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಒಂದೂವರೆ ಲಕ್ಷ ಕೋಟಿ ರೂ ಮೊತ್ತವಾಗುವ ಪೂರ್ವಾನ್ವಯ ತೆರಿಗೆ (Retrospective Tax) ಪಾವತಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಗೇಮಿಂಗ್ ಕಂಪನಿಗಳ ತೀವ್ರ ವಿರೋಧದ ನಡುವೆಯೂ, ಹಿಂದಿನ ಬಾಕಿ ವಹಿವಾಟಿಗೂ ಇದು ಅನ್ವಯವಾಗುತ್ತದೆ ಎಂದು ಪೂರ್ವಾನ್ವಯ ತೆರಿಗೆ ಬೇಡಿಕೆಯನ್ನು ಕೋರ್ಟ್ ಮಾನ್ಯ ಮಾಡಿದೆ. ಇದರಿಂದಾಗಿ ಗೇಮಿಂಗ್ ಉದ್ಯಮದ ಮೇಲೆ ಸುಮಾರು 1.5 ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬೃಹತ್ ತೆರಿಗೆ ಬಾಕಿಯ ತೂಗುಗತ್ತಿ ಮುಂದುವರಿದಂತಾಗಿದೆ.

ಸುಪ್ರೀಂ ಕೋರ್ಟ್ ಪೀಠ ಗಮನಿಸಿದ ಕೆಲ ಅಂಶಗಳು

  • ಕೌಶಲ್ಯ vs ಅದೃಷ್ಟದ ಆಟ (Skill vs Chance): “ಒಮ್ಮೆ ಹಣವನ್ನು ಪಣವಾಗಿ ಇಟ್ಟಾಗ (Staking Money), ಆ ಆಟವು ‘ಕೌಶಲ್ಯದ ಆಟವೋ’ ಅಥವಾ ‘ಅದೃಷ್ಟದ ಆಟವೋ’ ಎಂಬ ವ್ಯತ್ಯಾಸ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇರುವುದಿಲ್ಲ. ಅನಿಶ್ಚಿತ ಫಲಿತಾಂಶಗಳ ಮೇಲೆ ಹಣವನ್ನು ಒಟ್ಟಿಗೆ ಪಣಕ್ಕಿಡುವುದು ಜಿಎಸ್‌ಟಿ ಕಾಯ್ದೆಯಡಿ ಬೆಟ್ಟಿಂಗ್ ಮತ್ತು ಜೂಜಿಗೆ (Betting & Gambling) ಸಮಾನವಾಗಿರುತ್ತದೆ” ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಸ್ಪಷ್ಟಪಡಿಸಿದೆ.
  • ಕೇವಲ ಮಧ್ಯವರ್ತಿಗಳಲ್ಲ: ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ಇಬ್ಬರು ಗ್ರಾಹಕರ ನಡುವಿನ ವಹಿವಾಟಿಗೆ ವೇದಿಕೆ ಒದಗಿಸುವ ಮಧ್ಯವರ್ತಿಗಳಲ್ಲ (Intermediaries). ಅವುಗಳೇ ಸ್ವತಃ ತೆರಿಗೆ ವ್ಯಾಪ್ತಿಗೆ ಬರುವ ‘ಆಕ್ಷನೇಬಲ್ ಕ್ಲೈಮ್ಸ್’ (Actionable Claims) ಅನ್ನು ಪೂರೈಸುವ ಸಂಸ್ಥೆಗಳಾಗಿವೆ ಎಂದು ಕೋರ್ಟ್ ಹೇಳಿದೆ.
  • ಸ್ಪಷ್ಟೀಕರಣ ಕಾಯ್ದೆ: 2023 ರ ಜಿಎಸ್‌ಟಿ ತಿದ್ದುಪಡಿಗಳು ಕೇವಲ ಅಸ್ತಿತ್ವದಲ್ಲಿದ್ದ ಕಾನೂನಿನ ಸ್ಪಷ್ಟೀಕರಣವಾಗಿದ್ದರಿಂದ, ಇವುಗಳನ್ನು ಹಿಂದಿನ ಅವಧಿಗೂ ಅನ್ವಯಿಸಿ (Retrospectively) ತೆರಿಗೆ ವಸೂಲಿ ಮಾಡುವುದು ಕಾನೂನುಬದ್ಧವಾಗಿದೆ ಎಂದು ಸರ್ಕಾರಿ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ಏನಿದು ವಿವಾದ?

Dream11, Gameskraft ಮತ್ತು Games24x7 ನಂತಹ ಪ್ರಮುಖ ಆನ್‌ಲೈನ್ ಗೇಮಿಂಗ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಗಳು ಸರ್ಕಾರದ ಈ ನಿಯಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದವು.

ಹೊಸ ವ್ಯವಸ್ಥೆ vs ಹಳೆಯ ವ್ಯವಸ್ಥೆ

ಹಳೆಯ ವ್ಯವಸ್ಥೆಯಲ್ಲಿ (Old Regime) ಕೇವಲ ಪ್ಲಾಟ್‌ಫಾರ್ಮ್ ಶುಲ್ಕದ ಮೇಲೆ (Gross Gaming Revenue – GGR) 18% GST ವಿಧಿಸಲಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ (New Regime) ಒಟ್ಟು ಠೇವಣಿ ಇಡುವ ಪೂರ್ಣ ಮೊತ್ತದ ಮೇಲೆ (Full Face Value) 28% GST ವಿಧಿಸಲಾಗುತ್ತದೆ.

ಉದಾಹರಣೆಗೆ, ಒಬ್ಬ ಆಟಗಾರ ₹1,000 ಹಣವನ್ನು ಆಟಕ್ಕಾಗಿ ಠೇವಣಿ ಇಟ್ಟರೆ, ಹಳೆಯ ನಿಯಮದಂತೆ ಕಂಪನಿಯ ಕಮಿಷನ್ ₹100 ಆಗಿದ್ದರೆ ಅದರ ಮೇಲೆ ಮಾತ್ರ ತೆರಿಗೆ ಇರುತ್ತಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಆಟಗಾರ ಠೇವಣಿ ಇಡುವ ಸಂಪೂರ್ಣ ₹1,000 ಮೇಲೆ ₹280 ಜಿಎಸ್‌ಟಿ ಕಟ್ಟಬೇಕಾಗುತ್ತದೆ.

ಗೇಮಿಂಗ್ ಕಂಪನಿಗಳು ತಿದ್ದುಪಡಿ ಜಾರಿಗೆ ಬಂದ ಅಕ್ಟೋಬರ್ 1, 2023 ರ ನಂತರದ ವಹಿವಾಟಿಗೆ ತೆರಿಗೆ ಕಟ್ಟಲು ಸಿದ್ಧವಿದ್ದವು. ಆದರೆ ತೆರಿಗೆ ಇಲಾಖೆಯು ಅದಕ್ಕಿಂತ ಹಿಂದಿನ ಅವಧಿಗೂ ಅನ್ವಯವಾಗುವಂತೆ ಭಾರಿ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಇದನ್ನು ಕಂಪನಿಗಳು ತೀವ್ರವಾಗಿ ವಿರೋಧಿಸಿದ್ದವು.

ಇದನ್ನೂ ಓದಿ: ‘ನಾನು ಯಾವ ತಪ್ಪು ಮಾಡಿಲ್ಲ’- 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ್ ಕೋರ್ಟ್ ತೀರ್ಪಿಗೆ ಬೈಜು ಬೇಸರ

ಉದ್ಯಮದ ಮೇಲಾಗುವ ಪರಿಣಾಮಗಳು

ಈ ಹಿಂದೆ ಕರ್ನಾಟಕ ಹೈಕೋರ್ಟ್ ಗೇಮ್ಸ್‌ಕ್ರಾಫ್ಟ್ (Gameskraft) ಕಂಪನಿಗೆ ನೀಡಿದ್ದ ₹21,000 ಕೋಟಿ ತೆರಿಗೆ ನೋಟಿಸ್ ರದ್ದತಿ ರಿಲೀಫ್ ಅನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ. ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು 90 ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಮತ್ತು ಕ್ಯಾಸಿನೋಗಳಿಗೆ ಸುಮಾರು ₹1.44 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ನೋಟಿಸ್‌ಗಳನ್ನು ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್

ಅಹಮದಾಬಾದ್, ಮೇ 27: ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಎಬೋಲಾ (Ebola)  ವೈರಸ್ ಭಾರತಕ್ಕೂ ಎಂಟ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಗುಜರಾತ್‌ಗೆ ಮರಳಿದ್ದ 37 ವರ್ಷದ ಬ್ಯಾಂಕರ್ ಒಬ್ಬರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿವೆ. ಇದು ಗುಜರಾತ್ ರಾಜ್ಯದಲ್ಲೇ ವರದಿಯಾಗಿರುವ ಮೊದಲ ಶಂಕಿತ ಪ್ರಕರಣವಾಗಿದೆ.

ಈ ವ್ಯಕ್ತಿ ಕಾಂಗೋದಿಂದ ಮುಂಬೈ ಮಾರ್ಗವಾಗಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಡೋದರಾದಲ್ಲಿದ್ದಾಗ ಅವರಿಗೆ ತೀವ್ರ ಜ್ವರ ಸೇರಿದಂತೆ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ವಿಶೇಷವಾಗಿ ಸಿದ್ಧಪಡಿಸಲಾದ ಎಬೋಲಾ ಐಸೊಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿರಂತರ ನಿಗಾ ಇಟ್ಟಿವೆ. ಪ್ರಾಥಮಿಕ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಮುಂದಿನ ಎಲ್ಲಾ ಪರೀಕ್ಷಾ ವರದಿಗಳು ನೆಗೆಟಿವ್ ಬರುವವರೆಗೂ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನ ಶಂಕಿತ ಪ್ರಕರಣ ನೆಗೆಟಿವ್:

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಇತ್ತೀಚೆಗೆ ಆತಂಕ ಮೂಡಿಸಿದ್ದ ಉಗಾಂಡಾದ 28 ವರ್ಷದ ಮಹಿಳೆಯ ಎಬೋಲಾ ಪರೀಕ್ಷಾ ವರದಿ ‘ನೆಗೆಟಿವ್’ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಆಕೆಗೆ ಮೈಕೈ ನೋವು ಸೇರಿದಂತೆ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡಾಗ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿ, ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಂಸ್ಥೆಗೆ ಕಳುಹಿಸಲಾಗಿತ್ತು. ಸದ್ಯ ಆಕೆ ಸುರಕ್ಷಿತವಾಗಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ಹರಡುತ್ತಿರುವುದರಿಂದ ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಆಫ್ರಿಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕನಿಷ್ಠ 21 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಎಬೋಲಾ ಎಂದರೇನು?:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಬೋಲಾ ಪ್ರಾಣಿಗಳಿಂದ (ಮುಖ್ಯವಾಗಿ ಬಾವಲಿ, ಮುಳ್ಳುಹಂದಿ ಇತ್ಯಾದಿ) ಮನುಷ್ಯರಿಗೆ ಮತ್ತು ನಂತರ ಮನುಷ್ಯರಿಂದ ಮನುಷ್ಯರ ದೈಹಿಕ ದ್ರವಗಳ (ಬೆವರು, ರಕ್ತ) ಸಂಪರ್ಕದ ಮೂಲಕ ಹರಡುವ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 pm, Wed, 27 May 26

Source link

ಎಚ್​ಡಿಎಫ್​ಸಿಯಿಂದ 45 ಕೋಟಿ ರೂ ಅಕ್ರಮ ಬಡ್ಡಿ ಪಾವತಿ ವಿವಾದ; ಆರೋಪ ನಿರಾಕರಿಸಿದ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್Image Credit source: Getty Images

ಮುಂಬೈ, ಮೇ 27: ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ (MSRDC) ಸಂಬಂಧಿಸಿದ 45 ಕೋಟಿ ರೂ ಬಡ್ಡಿ ಪಾವತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ವರದಿಗಳು ಹರಿದಾಡಿದ ಬೆನ್ನಲ್ಲೇ, ಭಾರತದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇಂದು ಷೇರು ಬಜಾರಿನಲ್ಲಿ ಶೇ. 2.54ರಷ್ಟು (19 ರೂ) ಹಿನ್ನಡೆ ಅನುಭವಿಸಿದೆ. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಬ್ಯಾಂಕು ತಳ್ಳಿಹಾಕಿದರೂ, ಷೇರು ಕುಸಿತ ತಡೆಯಲು ಆಗಲಿಲ್ಲ. ಮಂಗಳವಾರ ವಹಿವಾಟಿನಲ್ಲಿ ಈ ಬ್ಯಾಂಕ್​ನ ಷೇರು ಸಂಪತ್ತು 24,000 ಕೋಟಿ ರೂಗೂ ಅಧಿಕ ಮೊತ್ತದಷ್ಟು ಕರಗಿದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಸ್ಪಷ್ಟನೆಗಳು ಹೂಡಿಕೆದಾರರಿಗೆ ಸಮಾಧಾನ ಎನಿಸಿದಲ್ಲಿ ನಾಳೆ ಗುರುವಾರ ಅದರ ಷೇರುಬೆಲೆ ಚೇತರಿಕೆ ಕಾಣಬಹುದು.

ಏನಿದು ಎಚ್​ಡಿಎಫ್​ಸಿ ಎಂಎಸ್​ಆರ್​ಡಿಸಿ ವಿವಾದ?

ಮಹಾರಾಷ್ಟ್ರ ಸರ್ಕಾರಿ ಸ್ವಾಮ್ಯದ ಎಂಎಸ್‌ಆರ್‌ಡಿಸಿ (MSRDC) ಸಂಸ್ಥೆಯ ನಿಧಿ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಸುಮಾರು 45 ಕೋಟಿ ರೂಪಾಯಿಗಳ ಬಡ್ಡಿ ಪಾವತಿಯ ಪ್ರಕ್ರಿಯೆಯಲ್ಲಿ ಕೆಲವು ನಿಯಮ ಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ವರದಿ ಹೂಡಿಕೆದಾರರು ಮತ್ತು ಬ್ಯಾಂಕಿಂಗ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಪ್ರಕಾರ, ಮಹಾರಾಷ್​ಟ್ರ ರಸ್ತೆ ಅಭಿವೃದ್ಧಿ ನಿಗಮವು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಠೇವಣಿಗಳನ್ನು ಇಟ್ಟಿತ್ತು. ಇದಕ್ಕೆ ಪೂರ್ವದಲ್ಲೇ ನಿಗದಿಯಾದ ಬಡ್ಡಿದರಕ್ಕಿಂತಲೂ ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ನೀಡಿತ್ತು. ಈ ಹೆಚ್ಚುವರಿ ಬಡ್ಡಿ ಮೊತ್ತ 45 ಕೋಟಿ ರೂ. ಸ್ಥಳೀಯ ಕಂಪನಿಗಳ ಮೂಲಕ ರಸ್ತೆ ಸುರಕ್ಷತೆ ಅಭಿಯಾನ ಇತ್ಯಾದಿ ಹೆಸರಿನಲ್ಲಿ ಬ್ಯಾಂಕ್​ನ ಮಾರ್ಕೆಟಿಂಗ್ ವಿಭಾಗದ ಮೂಲಕ ನಿಗಮದ ಅಕೌಂಟ್​ಗೆ ಹಣವನ್ನು ಹಾಕಲಾಗಿತ್ತು.

ಮಾರ್ಚ್ 12ರಂದು ಎಂಡಿ ರಂಗನಾಥ್ ಅಧ್ಯಕ್ಷತೆಯ ಆಡಿಟ್ ಕಮಿಟಿ ಬೋರ್ಡ್ (ಎಸಿಬಿ) ಈ ಹೆಚ್ಚುವರಿ ಪಾವತಿ ವಿಚಾರವಾಗಿ ಆಂತರಿಕ ವಿಚಕ್ಷಣಾ ತನಿಖೆಗೆ (Internal Vigilance Investigation) ಆದೇಶ ನೀಡಿತ್ತು. ಈ ವಿಚಾರವನ್ನು ಬ್ಯಾಂಕ್ ತನ್ನ ಷೇರುದಾರರಿಗೆ ತಿಳಿಸದೆ ಮುಚ್ಚಿಟ್ಟಿತು ಎನ್ನುವ ಆರೋಪವೂ ಇದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಎಚ್‌ಡಿಎಫ್‌ಸಿ ಬ್ಯಾಂಕ್ ನೀಡಿದ ಸ್ಪಷ್ಟನೆ

ಮಾಧ್ಯಮಗಳ ವರದಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್, “ನಮ್ಮ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿಧಿಸಿರುವ ಎಲ್ಲಾ ನಿಯಂತ್ರಕ ಮಾರ್ಗಸೂಚಿಗಳು ಮತ್ತು ಆಡಳಿತಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ” ಎಂದು ಹೇಳಿದೆ.

ಎಂಎಸ್‌ಆರ್‌ಡಿಸಿ ನಿಧಿಗೆ ಸಂಬಂಧಿಸಿದ ಬಡ್ಡಿ ಲೆಕ್ಕಾಚಾರ ಅಥವಾ ಪಾವತಿಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ತಪ್ಪು ನಡೆದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಬ್ಯಾಂಕ್ ತನ್ನ ಕಾರ್ಪೊರೇಟ್ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳ ಅಡಿಯಲ್ಲೇ ಎಲ್ಲಾ ಹಣಕಾಸು ಪ್ರಕ್ರಿಯೆಗಳನ್ನು ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ಮಾರುಕಟ್ಟೆಯ ಮೇಲಿನ ಪರಿಣಾಮ

ಇಂತಹ ದೊಡ್ಡ ಮೊತ್ತದ ವಿವಾದಗಳು ಮುಂಚೂಣಿಗೆ ಬಂದಾಗ ಬ್ಯಾಂಕ್‌ಗಳ ಷೇರುಗಳ ಮೇಲೆ ಪ್ರಭಾವ ಬೀರುವುದು ಸಹಜ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಿ ಆರೋಪಗಳನ್ನು ತಳ್ಳಿಹಾಕಿರುವುದರಿಂದ, ಹೂಡಿಕೆದಾರರಲ್ಲಿ ಉಂಟಾಗಬಹುದಾಗಿದ್ದ ಆತಂಕ ನಿವಾರಣೆಯಾದಂತಾಗಿದೆ.

ದೇಶದ ಅತ್ಯಂತ ನಂಬಿಕಸ್ಥ ಮತ್ತು ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಚ್‌ಡಿಎಫ್‌ಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ನಿಯಂತ್ರಕ ಸಂಸ್ಥೆಗಳಿಗೆ ಸಂಪೂರ್ಣ ದಾಖಲೆಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Eliminator SRH vs RR Live: ಶತಕ ವಂಚಿತ ವೈಭವ್

  • 27 May 2026 08:20 PM (IST)

    IPL 2026 Eliminator Live: 100 ರನ್ ದಾಟಿದ ರಾಜಸ್ಥಾನ

    ರಾಜಸ್ಥಾನ್ ರಾಯಲ್ಸ್ ತಂಡವು 7.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್‌ಗಳ ಗಡಿ ದಾಟಿತು. ವೈಭವ್ ಸೂರ್ಯವಂಶಿ 77 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ.

  • 27 May 2026 08:04 PM (IST)

    IPL 2026 Eliminator Live: ಸೂರ್ಯವಂಶಿ ಅರ್ಧಶತಕ

    ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಬಾರಿಸಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ರಾಜಸ್ಥಾನ ನಾಲ್ಕು ಓವರ್‌ಗಳಲ್ಲಿ 63 ರನ್ ಗಳಿಸಿದೆ.

  • 27 May 2026 07:51 PM (IST)

    IPL 2026 Eliminator Live:ಸೂರ್ಯವಂಶಿಯ ಬಿರುಗಾಳಿ

    ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 36 ರನ್ ಗಳಿಸಿದ್ದಾರೆ. ಇದರೊಂದಿಗೆ, ರಾಜಸ್ಥಾನದ ಸ್ಕೋರ್ ಮೂರು ಓವರ್‌ಗಳ ನಂತರ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದೆ.

  • 27 May 2026 07:42 PM (IST)

    IPL 2026 Eliminator Live: ರಾಜಸ್ಥಾನಕ್ಕೆ ಉತ್ತಮ ಆರಂಭ

    ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 20 ರನ್ ಗಳಿಸಿದರು.

  • 27 May 2026 07:16 PM (IST)

    IPL 2026 Eliminator Live: ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11

    ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಶಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

  • 27 May 2026 07:15 PM (IST)

    IPL 2026 Eliminator Live: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI

    ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

  • 27 May 2026 07:03 PM (IST)

    IPL 2026 Eliminator Live: ಟಾಸ್ ಗೆದ್ದ ಸನ್​​ರೈಸರ್ಸ್

    ಟಾಸ್ ಗೆದ್ದ ಸನ್​​ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • Source link

    ಪಿರಿಯಡ್ಸ್ ಸಮಯದಲ್ಲಿ ಸರಿಯಾದ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡುವುದು ಎಷ್ಟು ಮುಖ್ಯ ಗೊತ್ತಾ?

    ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಪಿರಿಯಡ್ಸ್ (Periods) ಹೈಜೀನ್ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಈಗ ಮಹಿಳೆಯರು ತಾವು ಬಳಸುವ ಪ್ಯಾಡ್‌ನ ಗುಣಮಟ್ಟ ಮತ್ತು ಅದು ಚರ್ಮದ ಮೇಲೆ ಬೀರುವ ಪರಿಣಾಮಗಳತ್ತವೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಜ್ಞರ ಪ್ರಕಾರ, ಸರಿಯಾದ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡದಿದ್ದರೆ ಚರ್ಮದ ಸಮಸ್ಯೆಗಳು ಮತ್ತು ಸೋಂಕಿನ ಅಪಾಯ ಹೆಚ್ಚಾಗಬಹುದು. ವೈದ್ಯರು ನೀಡುವ ಮಾಹಿತಿ ಪ್ರಕಾರ, ಸ್ಯಾನಿಟರಿ ಪ್ಯಾಡ್‌ನ ಮೇಲಿನ ಪದರ ದೇಹದ ಸೂಕ್ಷ್ಮ ಭಾಗದೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ಪ್ಯಾಡ್‌ನಲ್ಲಿ ಹೆಚ್ಚು ಸುಗಂಧ ದ್ರವ್ಯಗಳು ಅಥವಾ ಹಾನಿಕಾರಕ ರಾಸಾಯನಿಕಗಳು ಇದ್ದರೆ ಚರ್ಮದಲ್ಲಿ ಉರಿ, ಕೆಂಪು ದದ್ದುಗಳು ಮತ್ತು ಅಲರ್ಜಿ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಬೇಸಿಗೆ ಮತ್ತು ತೇವಾಂಶ ಇರುವ ವಾತಾವರಣದಲ್ಲಿ ದೀರ್ಘಕಾಲ ಒಂದೇ ಪ್ಯಾಡ್ ಬಳಸುವುದರಿಂದ ಬ್ಯಾಕ್ಟೀರಿಯಾ ಹಾಗೂ ಫಂಗಲ್ ಇನ್‌ಫೆಕ್ಷನ್ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಯಾವ ರೀತಿಯ ಪ್ಯಾಡ್ ಬಳಸಬೇಕು, ಏನಿದು ಮೋರಿಂಗಾ ಪ್ಯಾಡ್‌, ಇದು ನಿಜವಾಗಿಯೂ ಉಪಯೋಗಕಾರಿಯೇ ಎಂಬುದನ್ನು ತಿಳಿದುಕೊಳ್ಳಿ.

    ಯಾವ ರೀತಿಯ ಪ್ಯಾಡ್ ಬಳಸಬೇಕು?

    ತಜ್ಞರು, ಮಹಿಳೆಯರಿಗೆ ಮೃದುವಾದ, ಗಾಳಿಯಾಡುವ ಮತ್ತು ಚರ್ಮ ಸ್ನೇಹಿ ಪ್ಯಾಡ್‌ಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಹೆಚ್ಚು ಸುಗಂಧವಿರುವ ಪ್ಯಾಡ್‌ಗಳನ್ನು ಬಳಸದಿರುವುದು ಉತ್ತಮ ಎಂದು ಹೇಳಿದ್ದಾರೆ. ಜೊತೆಗೆ ಪ್ರತಿ 4ರಿಂದ 6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಹೆಚ್ಚು ಬೆವರು ಅಥವಾ ಚರ್ಮದ ಸಮಸ್ಯೆ ಇರುವಂತಹ ಮಹಿಳೆಯರಿಗೆ ಕಾಟನ್ ಆಧಾರಿತ ಪ್ಯಾಡ್‌ಗಳು ಅಥವಾ ಕಾಟನ್ ಪ್ಯಾಂಟಿ ಉತ್ತಮ ಆಯ್ಕೆ ಎಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

    ಮೋರಿಂಗಾ ಪ್ಯಾಡ್‌ ನಿಜವಾಗಿಯೂ ಉಪಯೋಗಕಾರಿಯೇ?

    ಇತ್ತೀಚೆಗೆ ಮೋರಿಂಗಾ ಆಧಾರಿತ ಸ್ಯಾನಿಟರಿ ಪ್ಯಾಡ್‌ಗಳು ಗಮನ ಸೆಳೆಯುತ್ತಿವೆ. ಮೋರಿಂಗಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿ ಕಡಿಮೆ ಮಾಡುವ ಗುಣಗಳಿರುವುದರಿಂದ ಚರ್ಮದ ಸಮಸ್ಯೆ ಹಾಗೂ ದುರ್ಗಂಧ ಕಡಿಮೆ ಮಾಡಲು ಸಹಾಯಕವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಮಹಿಳೆಯರ ಆರೋಗ್ಯಕ್ಕೆ ಪೀರಿಯಡ್ಸ್ ಹೈಜೀನ್ ಅತ್ಯಂತ ಮುಖ್ಯ. ಆದ್ದರಿಂದ ಗುಣಮಟ್ಟದ ಮತ್ತು ಸುರಕ್ಷಿತ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡುವುದು ಆರೋಗ್ಯ ಕಾಪಾಡುವ ಪ್ರಮುಖ ಹೆಜ್ಜೆಯಾಗಿದೆ.

    ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ

    ಬೆಂಗಳೂರು, ಮೇ 27: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ದಟ್ಟವಾಗುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಅಹಿಂದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರದ ವಿರುದ್ಧ ನಿಗಿ ನಿಗಿ ಎನ್ನುತ್ತಿರುವ ಅಭಿಮಾನಿಗಳು ಸಿದ್ದರಾಮಯ್ಯನವರ ನಿವಾಸದ ಮುಂದೆ ಜಮಾಯಿಸಿ ಪ್ರತಿಭಟಿಸಿದರು. ‘ಯಾವನು ಹೈಕಮಾಂಡ್’ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ ಎಂದು ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ಆ ಪಕ್ಷಕ್ಕೆ ಹಿನ್ನಡೆಯಾಗಿತ್ತು ಎಂದು ಉದಾಹರಿಸಿದ ಅಭಿಮಾನಿಗಳು, ಇದೇ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೂ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯ ಒಬ್ಬ ಜನಪ್ರಿಯ ನಾಯಕರು ಮತ್ತು ಅಹಿಂದ ವರ್ಗದ ಬಲ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದೇ ಸಿದ್ದರಾಮಯ್ಯರಿಂದ, ಒಂದು ವೇಳೆ ಸಿಎಂ ಸ್ಥಾನದಿಂದ ಅವರನ್ನ ಕೆಳಗಿಳಿಸಿದರೆ, 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೆ ಎಂದಿದ್ದಾರೆ. ಇನ್ನು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

    Source link

    ದೆಹಲಿಯಲ್ಲಿ ನಕಲಿ ಕೆವೈಸಿ ಮೂಲಕ ಚಹಾ ವ್ಯಾಪಾರಿಗೆ 90,000 ರೂ. ವಂಚನೆ; ಮೂವರ ಬಂಧನ

    ನವದೆಹಲಿ, ಮೇ 27: ಮೊಬೈಲ್ ಆಪ್‌ಗಳಲ್ಲಿ ಕೆವೈಸಿ (KYC) ಅಪ್‌ಡೇಟ್ ಮಾಡುವ ನೆಪದಲ್ಲಿ ಚಹಾ ವ್ಯಾಪಾರಿಯೊಬ್ಬರಿಂದ 90,000 ರೂ. ಹಣ ದೋಚಿದ್ದ ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕನೊಬ್ಬ ತಾನು ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿ ಎಂದು ಪರಿಚಯಿಸಿಕೊಂಡು ಚಹಾ ಅಂಗಡಿಗೆ ಬಂದಿದ್ದ. ಆತ ವ್ಯಾಪಾರಿಯ ಮೊಬೈಲ್‌ನಲ್ಲಿ ಪೇಮೆಂಟ್ ಆಪ್‌ನ ಸೆಟ್ಟಿಂಗ್ಸ್ ಸರಿಪಡಿಸಿಕೊಡುವ ಮತ್ತು ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನೆಪದಲ್ಲಿ ಆತನ ನಂಬಿಕೆ ಗಳಿಸಿದ್ದ.

    ದೆಹಲಿಯ ಸೌತ್ ಪಟೇಲ್ ನಗರದ ಚಹಾ ವ್ಯಾಪಾರಿಯೊಬ್ಬರು ಈ ವಂಚನೆಗೆ ಒಳಗಾಗಿದ್ದಾರೆ. ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿಯಂತೆ ನಟಿಸಿ ಬಂದಿದ್ದ ವ್ಯಕ್ತಿಯೊಬ್ಬ, ವ್ಯಾಪಾರಿಯ ಮೊಬೈಲ್‌ನಲ್ಲಿ ಕೆವೈಸಿ (KYC) ಪ್ರಕ್ರಿಯೆ ಮತ್ತು ಆಪ್ ಸೆಟ್ಟಿಂಗ್ಸ್ ಸರಿಪಡಿಸಿಕೊಡುವುದಾಗಿ ನಂಬಿಸಿದ್ದ. ವ್ಯಾಪಾರಿಯ ವಿಶ್ವಾಸಗಳಿಸಿ ಆತನ ಮೊಬೈಲ್ ಪಡೆದುಕೊಂಡ ವಂಚಕ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 90,000 ರೂ. ಹಣವನ್ನು ವರ್ಗಾಯಿಸಿಕೊಂಡು ಪರಾರಿಯಾಗಿದ್ದ.

    ಇದನ್ನೂ ಓದಿ: ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

    ಆ ವ್ಯಾಪಾರಿ ಮೇ 15ರಂದು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಹರಿಯಾಣದ ಪಂಚಕುಲ, ಪಂಜಾಬ್‌ನ ಜಿರಾಕ್‌ಪುರ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತರನ್ನು ಹರಿಯಾಣದ ಪಂಚಕುಲ ನಿವಾಸಿಗಳಾದ ವಿಶೇಷ್ ಸಿಂಗ್, ಸಚಿನ್ ಮೌರ್ಯ (22) ಮತ್ತು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಆಶಿಶ್ ಶರ್ಮಾ (27) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸೈಬರ್ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ: ಮಂಡ್ಯ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್

    ಬ್ಯಾಂಕ್ ಖಾತೆಗಳ ಅಕ್ರಮ ಜಾಲ:

    ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಬಂಧಿತರು ಕೇವಲ ಸ್ಥಳೀಯ ವಂಚಕರಲ್ಲ. ಇವರು ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ಅಪರಾಧ ಎಸಗುವ ದೊಡ್ಡ ಸಿಂಡಿಕೇಟ್‌ಗಳಿಗೆ ನಕಲಿ/ಬಾಡಿಗೆ ಬ್ಯಾಂಕ್ ಖಾತೆಗಳು (Mule Accounts), ಸಿಮ್ ಕಾರ್ಡ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ಪೂರೈಸುವ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಹಾಗೂ ಹಣ ವರ್ಗಾವಣೆಯ ಸಂಪೂರ್ಣ ಜಾಲವನ್ನು ಭೇದಿಸಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    Exit mobile version