ಮುಂಗಾರು ಮಳೆಯ ಹಿನ್ನೆಲೆ ರಾಜ್ಯದ ಹಲವೆಡೆ ಶುದ್ಧ ಗಾಳಿ, ವಾಯು ಗುಣಮಟ್ಟದಲ್ಲಿ ಸುಧಾರಣೆ – Kannada News | Karnataka AQI Update June 30: Bengaluru and Major Cities Record ‘Good’ Air Quality

ಬೆಂಗಳೂರು, ಜೂನ್ 30: ರಾಜ್ಯಾದ್ಯಂತ ಮುಂಗಾರು ಮಳೆಯ ಅಬ್ಬರದಲ್ಲಿ ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಉತ್ತಮವಾಗಿದೆ ಎಂದು ಹವಾಮಾನ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ. ಮಳೆ ಮತ್ತು ಬಲವಾದ ಗಾಳಿಯ ಕಾರಣದಿಂದಾಗಿ ಗಾಳಿಯಲ್ಲಿನ ಧೂಳಿನ ಕಣಗಳು (PM2.5 ಮತ್ತು PM10) ಕಡಿಮೆಯಾಗಿದ್ದು, ಜನಸಾಮಾನ್ಯರು ನಿರಾಳವಾಗಿ ಉಸಿರಾಡುವಂತಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ಸರಾಸರಿ 29 ರಿಂದ 60 ರ ಆಸುಪಾಸಿನಲ್ಲಿ ದಾಖಲಾಗಿದ್ದು, ಕೆಲೆವೆಡೆ ವಾಯುಗುಣಮಟ್ಟ ಉತ್ತಮ ಮಟ್ಟದಲ್ಲಿದ್ದರೆ ಇನ್ನೂ ಕೆಲವೆಡೆ ಸಾಧಾರಣ ಮಟ್ಟದಲ್ಲಿದೆ.

  • ಬಿಟಿಎಂ ಲೇಔಟ್: 50-60 (ಸಾಧಾರಣ – ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ಸಣ್ಣ ಮಟ್ಟದ ಜಾಗ್ರತೆ ಅಗತ್ಯ)
  • ಬಸವನಗುಡಿ ಹಾಗೂ ಜಯನಗರ: 33-50 (ಉತ್ತಮ)
  • ಆನಂದ್ ರಾವ್ ಸರ್ಕಲ್ ಮತ್ತು ಹೆಬ್ಬಾಳ:55 (ಸಾಧಾರಣ)
  • ಅದರ್ಶ್ ಪಾಮ್ ರಿಟ್ರೀಟ್: 22 (ಅತ್ಯುತ್ತಮ)

ಮುಂಗಾರು ಮಳೆಯ ಮಾರುತಗಳು ನಗರದ ಸಾರಿಗೆ ಮತ್ತು ಕೈಗಾರಿಕಾ ವಲಯದಿಂದ ಹೊರಹೊಮ್ಮುವ ಮಾಲಿನ್ಯಕಾರಕ ಕಣಗಳನ್ನು ನಿಯಂತ್ರಣದಲ್ಲಿಟ್ಟಿವೆ. ಹೀಗಾಗಿ ಇಂದು ಹೊರಗಿನ ದೈಹಿಕ ಚಟುವಟಿಕೆಗಳು ಹಾಗೂ ವಾಸಕ್ಕೆ ಬೆಂಗಳೂರಿನ ವಾತಾವರಣ ಅತ್ಯಂತ ಯೋಗ್ಯವಾಗಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ವಾಯು ಸ್ಥಿತಿ

ರಾಜ್ಯದ ಇತರೆ ನಗರಗಳಲ್ಲೂ ಸಹ ವಾಯು ಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ನಗರಗಳಲ್ಲಿ ಇಂದು ಶುದ್ಧ ಗಾಳಿ ಲಭ್ಯವಿದೆ. ಯಾದಗಿರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ರಾಜ್ಯದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ್ದು, ಇಲ್ಲಿನ AQI 17 ಮತ್ತು 23ರಷ್ಟಿದೆ.

ಕರಾವಳಿ ಭಾಗದ ಮಂಗಳೂರು ಮತ್ತು ಉಡುಪಿಯಲ್ಲಿ ನಿರಂತರ ಭಾರಿ ಮಳೆಯಾಗುತ್ತಿರುವುದರಿಂದ ಇಲ್ಲಿನ AQI 25 ಕ್ಕಿಂತ ಕಡಿಮೆ ದಾಖಲಾಗಿದ್ದು, ಅತ್ಯಂತ ಶುದ್ಧವಾದ ಗಾಳಿ ಹೊಂದಿವೆ. ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು AQI 35 ರಿಂದ 45ರ ಆಸುಪಾಸಿನಲ್ಲಿದ್ದು, ಸಂಪೂರ್ಣವಾಗಿ ಸುರಕ್ಷಿತ ವಲಯದಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿಮ್ಮ ಹೆಸರು ಬಳಸಿಕೊಳ್ಳುತ್ತೇನೆ’: ಸಿಎಂ ವಿಜಯ್​ಗೆ ನೇರವಾಗಿ ಹೇಳಿದ ನಟ ವಿಶಾಲ್ – Kannada News | Actor Vishal to CM Vijay: You’re not in films, so I’m using your name

ತಮಿಳು ನಟ ವಿಶಾಲ್ ಅವರು (Vishal) ‘ಮುಗುಡಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರಿಗೆ ಚೊಚ್ಚಲ ಅನುಭವ. ಇತ್ತೀಚೆಗೆ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ವೇಳೆ ಅವರು ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಜೊತೆಗಿನ ತಮ್ಮ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ವಿಜಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

‘ಎರಡು ವರ್ಷಗಳ ಹಿಂದೆ ನಾನು ವಿಜಯ್ ಅವರಿಗೆ ಕಥೆ ಹೇಳಲು ಹೋಗಿದ್ದೆ. ಆದರೆ, ಅವರು ಕಥೆ ಒಪ್ಪಿಲ್ಲ. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ನಾನು ಅವರನ್ನು ಮತ್ತೆ ಭೇಟಿಯಾದೆ. ನಿಮಗೆ ಹೇಳಿದ ಕಥೆ ನೆನಪಿದೆಯೇ? ಎಂದು ಕೇಳಿದೆ. ಅವರು ಹೌದು ನೆನಪಿದೆ ಎಂದರು. ನಾನು ನೀವು ಈಗ ಸಿನಿಮಾದಲ್ಲಿಲ್ಲ. ಅದಕ್ಕೆ ನಿಮ್ಮ ಹೆಸರನ್ನು ನಾನು ಬಳಸಿಕೊಳ್ಳುತ್ತಿದ್ದೇನೆ ಎಂದೆ. ಇದನ್ನು ಕೇಳಿ ವಿಜಯ್ ಜೋರಾಗಿ ನಕ್ಕರು’ ಎಂದು ವಿಶಾಲ್ ವೇದಿಕೆಯಲ್ಲಿ ಹೇಳಿದರು.

30 ವರ್ಷಗಳ ಹಳೆಯ ಸ್ನೇಹ

ವಿಶಾಲ್ ಮತ್ತು ಸಿಎಂ ವಿಜಯ್ ನಡುವೆ 30 ವರ್ಷಗಳ ಹಳೆಯ ಸ್ನೇಹವಿದೆ. ಕಾಲೇಜು ದಿನಗಳಿಂದಲೂ ಇಬ್ಬರಿಗೂ ಪರಿಚಯವಿದೆ. ವಿಜಯ್ ಅವರು ವಿಶಾಲ್ ಅಣ್ಣನ ಜೊತೆ ಕಾಲೇಜಿನಲ್ಲಿ ಓದುತ್ತಿದ್ದರು. ‘ಅವರು ಮುಖ್ಯಮಂತ್ರಿಯಾದರೂ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದೇ ಬಾಡಿ ಲಾಂಗ್ವೇಜ್ ಮತ್ತು ಅದೇ ಒಳ್ಳೆಯ ಗುಣಗಳು ಅವರಲ್ಲಿವೆ. ಕೇವಲ ಅವರ ಹುದ್ದೆ ಮಾತ್ರ ಬದಲಾಗಿದೆ’ ಎಂದು ವಿಶಾಲ್ ಹೊಗಳಿದ್ದಾರೆ.

ಭೇಟಿಯ ಸಂದರ್ಭದಲ್ಲಿ ವಿಶಾಲ್ ಅವರು ವಿಜಯ್ ಅವರನ್ನು ‘ಡಾರ್ಲಿಂಗ್’ ಎಂದು ಕರೆದಿದ್ದಾರಂತೆ. ‘ಒಬ್ಬ ಮುಖ್ಯಮಂತ್ರಿಯನ್ನು ಡಾರ್ಲಿಂಗ್ ಎಂದು ಕರೆಯುವುದು ಒಂದು ಅದ್ಭುತ ಅನುಭವ. ಸ್ನೇಹಿತನ ಜೊತೆ ಮಾತನಾಡಿದ ಹಾಗೆ ಅನಿಸಿತು’ ಎಂದು ವಿಶಾಲ್ ಖುಷಿ ಹಂಚಿಕೊಂಡಿದ್ದಾರೆ.

ಹೂಗುಚ್ಛದ ಬದಲು ಮಕ್ಕಳ ಶಿಕ್ಷಣಕ್ಕೆ ನೆರವು

ಸಿಎಂ ವಿಜಯ್ ಅವರನ್ನು ಭೇಟಿಯಾದಾಗ ವಿಶಾಲ್ ಹೂಗುಚ್ಛ ನೀಡಲಿಲ್ಲ. ಅದರ ಬದಲಾಗಿ ವಿಜಯ್ ಅವರ ಹೆಸರಿನಲ್ಲಿ ಮೂವರು ಬಡ ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಪಡೆದಿದ್ದಾರೆ. ‘ನಿಮ್ಮ ಹೆಸರಿನಲ್ಲಿ ಮೂವರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇನೆ ಎಂದೆ. ಇದಕ್ಕೆ ವಿಜಯ್ ತುಂಬಾ ಸಂತೋಷದಿಂದ ಒಪ್ಪಿಕೊಂಡರು’ ಎಂದು ವಿಶಾಲ್ ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಈ ಹೆಣ್ಣುಮಕ್ಕಳು ವಿಜಯ್ ಹೆಸರಿನಲ್ಲಿ ವಿದ್ಯಾಭ್ಯಾಸ ಮಾಡಲಿದ್ದಾರೆ.

ಇದನ್ನೂ ಓದಿ: ‘ವಿಜಯ್ ಅತ್ಯಂತ ಸಮರ್ಥ ಮುಖ್ಯಮಂತ್ರಿ’: ಮುಕ್ತಕಂಠದಿಂದ ಹೊಗಳಿದ ನಟ ವಿಶಾಲ್

ವಿಶಾಲ್ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ‘ಮಗುಡಂ’. ಇದು ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಈ ಸಿನಿಮಾ ಇದೇ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:30 am, Tue, 30 June 26

Source link

ರಣರೋಚಕ ಪಂದ್ಯ… ಅಂತಿಮ ನಿಮಿಷದಲ್ಲಿ ಗೆದ್ದ ಬ್ರೆಝಿಲ್ – Kannada News | Brazil win it in the 95th minute goal against Japan

ಫಿಫಾ ವಿಶ್ವಕಪ್ 2026ರ ರೌಂಡ್ ಆಫ್-32 ಸುತ್ತಿನ 2ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ರೋಚಕ ಜಯ ಸಾಧಿಸಿದೆ. ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆದ ಈ ನಾಕೌಟ್ ಪಂದ್ಯದಲ್ಲಿ ಬ್ರೆಝಿಲ್ ಮತ್ತು ಜಪಾನ್ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಮ್ಯಾಚ್​ನಲ್ಲಿ ಮೊದಲ ಗೋಲು ಬಾರಿಸಿದ್ದು ಜಪಾನ್. ಆದರೆ ಪಂದ್ಯ ಗೆದ್ದಿದ್ದು ಬ್ರೆಝಿಲ್ ಎಂಬುದು ವಿಶೇಷ.

ಮೊದಲಾರ್ಧದಲ್ಲಿ ಜಪಾನ್ ಪರಾಕ್ರಮ:

ಈ ಪಂದ್ಯದ ಆರಂಭದಿಂದಲೂ ಜಪಾನ್ ಆಟಗಾರರು ಬ್ರೆಝಿಲ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಪಂದ್ಯದ 29ನೇ ನಿಮಿಷದಲ್ಲಿ ಬ್ರೆಝಿಲ್‌ನ ಡ್ಯಾನಿಲೋ ಮಾಡಿದ ಸಣ್ಣ ತಪ್ಪನ್ನು ಬಳಸಿಕೊಂಡ ಜಪಾನ್‌ನ ಕೈಶು ಸಾನೊ, ಬ್ರೆಝಿಲ್ ಗೋಲ್‌ಕೀಪರ್ ಅಲಿಸನ್ ಬೆಕರ್ ಅವರನ್ನು ವಂಚಿಸಿ ಮೊದಲ ಗೋಲ್ ಬಾರಿಸಿದರು. ಈ ಮೂಲಕ ಜಪಾನ್ ತಂಡವು ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು.

ಬ್ರೆಝಿಲ್ ಭರ್ಜರಿ ಕಂಬ್ಯಾಕ್:

ದ್ವಿತೀಯಾರ್ಧದಲ್ಲಿ ಪಂದ್ಯದ ಗತಿಯನ್ನು ಬದಲಿಸಲು ಬ್ರೆಝಿಲ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಹೊಸ ತಂತ್ರ ರೂಪಿಸಿದರು. ಪಂದ್ಯದ 56ನೇ ನಿಮಿಷದಲ್ಲಿ ಕಾರ್ನರ್ ಕಿಕ್ ಮೂಲಕ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅನುಭವಿ ಆಟಗಾರ ಕ್ಯಾಸೆಮಿರೊ, ತಲೆಯಿಂದ ಚೆಂಡನ್ನು ಜಪಾನ್ ನೆಟ್‌ಗೆ ತಳ್ಳುವ ಮೂಲಕ 1-1 ಗೋಲುಗಳ ಸಮಬಲ ತಂದರು.

ಮಾರ್ಟಿನೆಲ್ಲಿ ಮ್ಯಾಜಿಕ್:

ಉಭಯ ತಂಡಗಳ ಗೋಲು 1-1 ಅಂತರದಿಂದ ಸಮಗೊಳ್ಳುತ್ತಿದ್ದಂತೆ ಪೈಪೋಟಿ ತೀವ್ರಗೊಂಡಿತು. ಇದಾಗ್ಯೂ ಎರಡೂ ತಂಡಳಿಗೆ ಎರಡನೇ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯ ಮುಕ್ತಾಯದ ಹಂತಕ್ಕೆ ಬಂದಾಗಲೂ ಉಭಯ ತಂಡಗಳು 1-1 ಸಮಬಲದಲ್ಲಿದ್ದವು.

ಆದರೆ, ಇಂಜುರಿ ಟೈಮ್‌ನ 95ನೇ ನಿಮಿಷದಲ್ಲಿ ಬ್ರೂನೋ ಗಿಮರೈಸ್ ನೀಡಿದ ಅದ್ಭುತ ಪಾಸ್ ಅನ್ನು ರಿಸೀವ್ ಮಾಡಿದ ಗೇಬ್ರಿಯಲ್ ಮಾರ್ಟಿನೆಲ್ಲಿ, ಜಪಾನ್ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲ್ ಬಾರಿಸಿದರು. ಈ ಕೊನೆಯ ಕ್ಷಣದ ಗೋಲ್ ಇಡೀ ಕ್ರೀಡಾಂಗಣದಲ್ಲಿದ್ದ ಬ್ರೆಝಿಲ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಪಂದ್ಯ ಕೊನೆಗೊಳ್ಳಲು ನಿಮಿಷಗಳು ಮಾತ್ರ ಬಾಕಿ ಇರುವಾಗ ಮೂಡಿಬಂದ ಈ ಗೋಲಿನೊಂದಿಗೆ ಬ್ರೆಝಿಲ್ ತಂಡವು 2-1 ಅಂತರದಿಂದ ಗೆದ್ದು ಪ್ರಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ

ಬ್ರೆಝಿಲ್ ಮುಂದಿನ ಎದುರಾಳಿ ಯಾರು?

ಈ ರೋಚಕ ಗೆಲುವಿನೊಂದಿಗೆ ಬ್ರೆಝಿಲ್ ತಂಡ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ. ಜುಲೈ 5 ರಂದು ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಬ್ರೆಝಿಲ್ ತಂಡವು ನಾರ್ವೆ ಅಥವಾ ಐವರಿ ಕೋಸ್ಟ್ ತಂಡವನ್ನು ಎದುರಿಸಲಿದೆ.

Source link

Karnataka Weather Forecast: ರಾಜ್ಯದೆಲ್ಲೆಡೆ ವರುಣಾರ್ಭಟ; ಕಡಲತೀರದ ಜಿಲ್ಲೆಗಳಿಗೆ ಮುಂದಿನ ಮೂರು ದಿನ ಆರೆಂಜ್ ಅಲರ್ಟ್​! – Kannada News | Karnataka Weather Forecast: Heavy Rain Alert, Orange Alert in Uttara Kannada Until July 2

ಬೆಂಗಳೂರು, ಜೂನ್ 30: ಮಲೆನಾಡು, ಕರಾವಳಿ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳು ಹಳ್ಳಗಳಂತೆ ತುಂಬಿ ಹರಿಯುತ್ತಿವೆ. ಉತ್ತರ ಕನ್ನಡದಲ್ಲಂತೂ ಭಾರೀ ಮಳೆಗೆ (Weather) ಗೋಕರ್ಣ ದೇವಾಲಯದ ಗರ್ಭಗುಡಿಗೂ ನೀರು ನುಗ್ಗಿತ್ತು. ಇಂದೂ ಸಹ ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಕರಾವಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಜನಸಾಮಾನ್ಯರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಉತ್ತರ ಕನ್ನಡದಲ್ಲಿ ಭಾರೀ ಮಳೆ

ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಂಭವವಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜುಲೈ 2 ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿ ದಡ ಮತ್ತು ಕಡಲತೀರಗಳಿಗೆ ತೆರಳದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ.

ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಈ ಭಾಗದಲ್ಲಿ ಮಳೆಯ ಸಂದರ್ಭದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ದಕ್ಷಿಣ ಒಳನಾಡಿನಲ್ಲಿ ಎಲ್ಲೆಲ್ಲಿ ಮಳೆ?

ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದ ಗಾಳಿ ಬೀಸಲಿದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಸಾರ್ವಜನಿಕರು ಹವಾಮಾನ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಸುರಕ್ಷಿತವಾಗಿರಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ರಾಜ್ಯಾದ್ಯಂತ SIR ಆರಂಭ: ಸಾರ್ವಜನಿಕರ ನೆರವಿಗಾಗಿ ಕಂಟ್ರೋಲ್ ರೂಂ, ಸಹಾಯವಾಣಿ – Kannada News | Karnataka Voter List SIR Starts: Bengaluru Urban DC Launches Helpline Number For Public Grievances

ಬೆಂಗಳೂರು, ಜೂನ್ 30: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (Special Intensive Revision) ಕಾರ್ಯವು ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳ ನಿವಾರಣೆ, ದೂರು ಸಲ್ಲಿಕೆ ಹಾಗೂ ಸ್ಪಷ್ಟೀಕರಣಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ತಿಳಿಸಿದ್ದಾರೆ.

ದೂರು ಸಲ್ಲಿಕೆಗೆ ದೂರವಾಣಿ, ಸೋಷಿಯಲ್ ಮೀಡಿಯಾ ಲಿಂಕ್

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಕ್ಷೇತ್ರಗಳ ಸಾರ್ವಜನಿಕರು ಈ ಸಹಾಯವಾಣಿ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮತದಾರರು ತಮ್ಮ ಅಹವಾಲುಗಳಿಗಾಗಿ ಕಚೇರಿ ವೇಳೆಯಲ್ಲಿ ಸಹಾಯವಾಣಿ ಸಂಖ್ಯೆ 080-22967200 ಗೆ ಕರೆ ಮಾಡಬಹುದು ಅಥವಾ adeobangaloreurban@gmail.com ಗೆ ಇ-ಮೇಲ್ ಕಳುಹಿಸಬಹುದು. ಇದಲ್ಲದೆ ಜಿಲ್ಲಾಧಿಕಾರಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ (Deputy Commissioner, Bengaluru Urban), ಇನ್‌ಸ್ಟಾಗ್ರಾಮ್ (dc_bangalore_urban) ಮತ್ತು ಎಕ್ಸ್ (DC_blrurban) ಮೂಲಕವೂ ಸಂಪರ್ಕಿಸಬಹುದಾಗಿದೆ.

ಮನೆ ಮನೆ ಭೇಟಿ ವೇಳೆ ಏನೆಲ್ಲ ಪ್ರಕ್ರಿಯೆ ನಡೆಯಲಿದೆ?

ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಪ್ಪುಗಳಿದ್ದರೆ ಸೂಕ್ತ ತಿದ್ದುಪಡಿ ಮಾಡಲು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರಿಸಲು ಹಾಗೂ ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್‌ಒಗಳು ಮನೆಗೆ ಬಂದಾಗ ಎಸ್‌ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಅಗತ್ಯ ದಾಖಲೆಗಳಾದ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಚುನಾವಣಾ ಆಯೋಗದ ಅಧಿಕೃತ ವೇಳಾಪಟ್ಟಿ

ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಪ್ರಕಾರ, ಈ ಮಹತ್ವದ ಕಾರ್ಯಕ್ಕೆ ರಾಜ್ಯಾದ್ಯಂತ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಪ್ರಕ್ರಿಯೆಯ ವೇಳಾಪಟ್ಟಿ ಹೀಗಿದೆ;

  • ಜೂನ್ 30 ರಿಂದ ಜುಲೈ 29: ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಮತ್ತು ದಾಖಲೆ ಸಂಗ್ರಹಣೆ.
  • ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ.
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4: ಕರಡು ಪಟ್ಟಿಗೆ ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶ.
  • ಆಗಸ್ಟ್ 5 ರಿಂದ ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ.
  • ಅಕ್ಟೋಬರ್ 7: ಪರಿಷ್ಕೃತಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಟಣೆ.

ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿರುವುದರಿಂದ, ಸಾರ್ವಜನಿಕರು ತಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಚುನಾವಣಾ ಆಯೋಗ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾರ್ಡ್ ಮುರುಗನ್ ಕಥೆಯಲ್ಲಿ ಜೂನಿಯರ್ ಎನ್‌ಟಿಆರ್; ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ – Kannada News | Jr. NTR and Trivikram Team Up for Mythological Film; Anirudh Scores Music

ತೆಲುಗು ನಟ ನಟ ಜೂನಿಯರ್ ಎನ್‌ಟಿಆರ್ (JR NTR) ಸದ್ಯ ‘ಡ್ರ್ಯಾಗನ್’ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಈ ಸಿನಿಮಾ ಕೆಲಸಗಳು ನಡೆಯುವಾಗಲೇ ಜೂನಿಯರ್ ಎನ್​​ಟಿಆರ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಒಂದು ಭಾರಿ ಬಜೆಟ್‌ನ ಪೌರಾಣಿಕ ಸಿನಿಮಾ ಮೂಡಿಬರಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಅವರ ‘ಎನ್‌ಟಿಆರ್ ಆರ್ಟ್ಸ್’ ಮತ್ತು ‘ಹಾರಿಕಾ ಆ್ಯಂಡ್ ಹಾಸಿನಿ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.’ಅರವಿಂದ ಸಮೇದ ವೀರ ರಾಘವ’ ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಜೊತೆಯಾಗಿ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.

ಮುರುಗನ್ ಕಥೆ ಆಧಾರಿತ ಚಿತ್ರ?

ಜೂನಿಯರ್ ಎನ್‌ಟಿಆರ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಶಿವನ ಮಗ, ಪಾರ್ವತಿಯ ಹೆಮ್ಮೆ, ಶಾಶ್ವತ ಕಮಾಂಡರ್. ಮತ್ತೊಮ್ಮೆ ತ್ರಿವಿಕ್ರಮ್ ಜೊತೆ’ ಎಂದು ಅವರು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಯುದ್ಧಭೂಮಿ ಮತ್ತು ದೊಡ್ಡ ತ್ರಿಶೂಲದ ಚಿತ್ರವಿದೆ.

ಜೂ. ಎನ್​​ಟಿಆರ್​ ಟ್ವೀಟ್

ಈ ಪೋಸ್ಟರ್ ಮತ್ತು ಕ್ಯಾಪ್ಷನ್ ನೋಡಿದರೆ ಇದು ಲಾರ್ಡ್ ಮುರುಗನ್ (ಕಾರ್ತಿಕೇಯ) ಅವರ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಚಿತ್ರತಂಡ ಇನ್ನು ಕಥೆಯ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ‘ಉತ್ತರದಲ್ಲಿ ಜನನ. ದಕ್ಷಿಣದಲ್ಲಿ ಆರಾಧನೆ. ಈಗ, ಇಡೀ ಬ್ರಹ್ಮಾಂಡಕ್ಕೆ ಸೇರಬೇಕಾದ ಕಥೆ’ ಎಂದು ಚಿತ್ರತಂಡ ಪೋಸ್ಟ್ ಮಾಡಿದೆ.

ಇದನ್ನೂ ಓದಿ:  ಜೂ. ಎನ್‌ಟಿಆರ್ ಕೈತಪ್ಪಿದ ದೊಡ್ಡ ಚಿತ್ರ? ತಮಿಳು ನಟ ಸೂರ್ಯನ ಎಂಟ್ರಿ

ಎನ್‌ಟಿಆರ್ ಅವರ ‘ಡ್ರಾಗನ್’ ಸಿನಿಮಾ

ಜೂನಿಯರ್ ಎನ್‌ಟಿಆರ್ ಅವರ ಮುಂದಿನ ಸಿನಿಮಾ ‘ಡ್ರಾಗನ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಇದನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಆಕ್ಷನ್ ಸಿನಿಮಾದಲ್ಲಿ ಎನ್‌ಟಿಆರ್ ಜೊತೆ ಬಿಜು ಮೆನನ್, ರುಕ್ಮಿಣಿ ವಸಂತ್, ಖುಷ್ಬು ಸುಂದರ್ ಮತ್ತು ಗುರು ಸೋಮಸುಂದರಂ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ 2027ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ. ಇದು ಎರಡು ಭಾಗದಲ್ಲಿ ಬರೋ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:57 am, Tue, 30 June 26

Source link

Horoscope Today: ಇಂದು ಈ ರಾಶಿಯವರಿಗೆ ಅವರ ಮಾತಿನಿಂದಲೇ ಲಾಭ! – Kannada News | Horoscope Today 30th June​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 30, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ಪಾಡ್ಯ, ಪೂರ್ವಾಷಾಢ ನಕ್ಷತ್ರ, ಬ್ರಹ್ಮಯೋಗ ಮತ್ತು ಬಾಲವ ಕರಣವನ್ನು ಒಳಗೊಂಡಿದೆ. ಮಂಗಳವಾರವು ಸುಬ್ರಮಣ್ಯ ಮತ್ತು ಹನುಮನ ಆರಾಧನೆಗೆ ಪ್ರಾಶಸ್ತ್ಯದ ದಿನವಾಗಿದೆ. ಈ ದಿನ ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ಧನುಸ್ಸು ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಡಾ. ಗುರೂಜಿ ಅವರು ಪ್ರತಿ ರಾಶಿಗೆ ಐದು ಅಥವಾ ಆರು ಗ್ರಹಗಳ ಶುಭಫಲಗಳನ್ನು ವಿವರಿಸಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಧನವನ್ನು ಪಡೆದುದಕ್ಕೆ ಕೃತಜ್ಞತಾ ಭಾವ – Kannada News | Daily Horoscope for June 30, 2026: Tuesday Astrology Predictions for All 12 Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಪೂರ್ವಾಷಾಢಾ, ಯೋಗ : ಕೃಷ್ಣ, ಕರಣ : ಬಾಲವ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:36 – 17:12, ಯಮಗಂಡ ಕಾಲ 09:11 – 10:47, ಗುಳಿಕ ಕಾಲ 12:23 – 13:59.

ಮೇಷ ರಾಶಿ: ಇಂದು ನಿಮ್ಮ ಪರೀಕ್ಷೆಯ ಕಾಲ. ಅದಕ್ಕೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಇಂದು ನೀವು ಧೈರ್ಯದಿಂದ, ಹೆದರದೇ ಕೆಲಸ ಮಾಡುವಿರಿ. ನಿಮ್ಮ ವಿರುದ್ಧ ಮಾತನಾಡುವವರಿಗೆ ಯೋಗ್ಯವಾದ ಉತ್ತರವನ್ನು ಕೊಡುವಿರಿ. ಉದ್ಯೋಗದಲ್ಲಿ ವಿಶ್ವಾಸಾರ್ಹವಾಗಿ ಕೆಲಸವನ್ನು ನಿರ್ವಹಿಸಿ. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು.

ವೃಷಭ ರಾಶಿ: ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಕ್ಕಳ ವಿಚಾರವಾಗಿ ಬ್ಯಾಂಕ್ ನಲ್ಲಿ ಸಾಲಮಾಡಬೇಕಾಗಿಬರಬಹುದು. ಮಾಡಬೇಕಾಗಬಹುದು. ಇನ್ನೊಬ್ಬರ ವರ್ತನೆಯಿಂದ ನಿಮ್ಮ ಮನಸ್ಸು ಹಗುರಾಗುವುದು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಿಥುನ ರಾಶಿ: ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಇಂದು ನಿಮ್ಮ ಸಂಸಾರದ ಬಗ್ಗೆ ಯಾರ ಬಳಿಯಾದರೂ ಹಂಚಿಕೊಳ್ಳಬಯಸುವಿರಿ. ಬದಲಾವಣೆಯನ್ನು ಇಷ್ಟಪಡಲಿದ್ದೀರಿ ನೀವಿಂದು. ಅವಿವಾಹಿತರಿಗೆ ವಿವಾಹ ಭಾಗ್ಯದ ಸೂಚನೆ ಸಿಗಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಸಹಾಯಕ್ಕೆ ಕೃತಜ್ಞತೆ ಇರಲಿ.

ಕರ್ಕಾಟಕ ರಾಶಿ: ನೇರವಾದ ಮಾತುಗಳಿಂದ ಬೇರೆಯವರಿಗೆ ನೋವುಂಟಾಗಬಹುದು. ಹೇಳಬೇಕಾದುದನ್ನು ಹೇಳುವರೀತಿಯಲ್ಲಿಯೇ ಹೇಳಿ ಮೇಲಿನಿಂದ ಬಿದ್ದು ಪೆಟ್ಟು‌‌ಮಾಡಿಕೊಳ್ಳಬಹುದು. ಓರ್ವ ಅಪರಿಚಿತನನ್ನು ನೀವಿಂದು ಪ್ರೀತಿಸಲು ಆರಂಭಿಸುವಿರಿ. ನಿಮ್ಮೊಳಗಿನ ಕಲಾವಿದನ ಪರಿಚಯವಾಗುವುದು. ಪ್ರತ್ಯುತ್ತರಗಳನ್ನು ನೀಡುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಮನಸ್ಸು ಮಾಡುವರು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ಎಲ್ಲ ಸಮಯಕ್ಕೂ ನಿಮಗೆ ಸಹಕಾರ ಸಿಗುತ್ತದೆ ಎಂಬ ಯೋಚನೆ ಬೇಡ.

ಸಿಂಹ ರಾಶಿ; ನಿಮ್ಮ ವಿವಾಹದ ಪ್ರಸ್ತಾಪವು ನಿಮಗೆ ಖುಷಿ ಕೊಡುವುದು. ಇಂದು ಏಕಾಗ್ರತೆಯ ಕೊರತೆ ಕಾಣಿಸಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಬೇಸರವಾಗಿ ಮನೆಯಲ್ಲಿ ಕಲಹವು ಆಗಬಹುದು. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಬಹುದು. ನಿಮಗೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ನಿಮ್ಮ ವ್ಯವಹಾರಗಳಿರಲಿ. ತುರ್ತು ಕೆಲಸಗಳೂ ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ಆಪತ್ಕಾಲದಲ್ಲಿ ಸಹಕಾರ ಸಿಗಲಿದೆ. ಉದ್ಯೋಗದ ಹುಡುಕಾಟಕ್ಕೆ ಓಡಾಡುವುದು ನಿಮಗೆ ಕಷ್ಟವಾದೀತು.

ಕನ್ಯಾ ರಾಶಿ: ನಿಮ್ಮ ಮೇಲಧಿಕಾರಿಗಳನ್ನು ನಿಮ್ಮ ಕಡೆಗೆ ಇರುವಂತೆ ನೋಡಿಕೊಳ್ಳುವಿರಿ. ಯಾವುದಕ್ಕೂ ಪ್ರಯಾಣದಲ್ಲಿ ಜಾಗರೂಕರಾಗಿ. ನಡೆದಾಡುವಾಗಲೂ ಸುತ್ತ ನೋಡಿಕೊಂಡು ಹೆಜ್ಜೆ ಇಡಿ. ಪ್ರಭಾವೀ ವ್ಯಕ್ತಿಗಳು ನಿಮ್ಮ ಜೊತೆ ಸಲಹೆಗೆ ಬರಬಹುದು. ನಿರಪರಾಧಿಯಾಗಲು ಸಮಯವನ್ನೂ ತೆಗದೆಕೊಳ್ಳಬೇಕಾದೀತು. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು.

ತುಲಾ ರಾಶಿ: ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಹೊಸ ಕೆಲಸದಲ್ಲಿ ಗೊಂದಲಗಳು ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಕಾರ್ಯಗಳನ್ನು ಹಿಂಜರಿಕೆ ಇಲ್ಲದೇ ಮಾಡುವಿರಿ. ಪ್ರದರ್ಶನ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ಹೆಚ್ಚಿನ ಆದಾಯವು ಅನಿವಾರ್ಯವಾಗಿದ್ದು, ಆದಾಯದ ಮೂಲವನ್ನು ಹುಡುಕುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು.

ವೃಶ್ಚಿಕ ರಾಶಿ: ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ನಿಮ್ಮ ಉದ್ದೇಶಗಳನ್ನು ಬಿಟ್ಟುಕೊಡಬೇಡಿ. ಅದಕ್ಕೆ ಅಡ್ಡಗಾಲು ಹಾಕಿಯಾರು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಪ್ರಾಮಾಣಿಕತೆ ಬೆಲೆ ಸಿಗಲಾರದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.

ಧನು ರಾಶಿ: ಮಕ್ಕಳಿಂದ ನಿಮಗೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಉದ್ಯೋಗದ ಸ್ಥಾನದಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ನಿಮಗಾಗದವರು ಹರಡುವರು. ಸಾಹೋದರ್ಯ ಅಧಿಕ ಕಾಲ ಉಳಿಯದು. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ಪ್ರಯಾಣದಲ್ಲಿ ಆದ ಪರಿಚಯವು ಮುಂದುವರಿಯುವುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು.

ಮಕರ ರಾಶಿ: ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ನೀವು ಇಂದು ಸಾಲವನ್ನು ಪಡೆಯಲು ಮಾಡಿದ ಪ್ರಯತ್ನವು ಯಶಸ್ವಿಯಾಗುವುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಬಹುದು. ಯಾವುದ ಇಷ್ಟವಾಗದೋ ಅದೇ ಪತನಕ್ಕೆ ಕಾರಣವಾಗಲಿದೆ. ಮಾಡಿದ ಕೆಲಸಕ್ಕೆ ಕೂಡಲೆ ಫಲ ಸಿಗಬೇಕು ಎನ್ನುವ ವೇಗದಿಂದ ಹೊರಬರುವುದು ಉತ್ತಮ. ಉದ್ಯಮಿಗಳ ಜೊತೆ ಇಂದು ಕಾಲ ಕಳೆಯುವಿರಿ.

ಕುಂಭ ರಾಶಿ: ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ಆಲೋಚನೆ ಇರಲಿ. ಕೊಟ್ಟ ಜವಾಬ್ದಾರಿಯನ್ನು ಶಕ್ತಿಮೀರಿ ಪ್ರಯತ್ನಿಸುವಿರಿ. ಅತಿಯಾದ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಗುರಿಯ ಸಾಧನೆಗೆ ಆಲಸ್ಯ ಅಡ್ಡಿಯಾಗಬಹುದು. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ.

ಮೀನ ರಾಶಿ: ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮವರಿಂದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸಲಹೆಗಳು ಬರಬಹುದು. ಹಿರಿಯರ ಬಗ್ಗೆ ಗೌರವದ ಮಾತುಗಳನ್ನಾಡಿ, ಅಪಮಾನವಾಗಲು ಬಿಡಬೇಡಿ. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ಪ್ರತ್ಯುತ್ತರವನ್ನು ಕೊಡುವ ಅವಶ್ಯಕತೆಯಿಲ್ಲ. ದಾಕ್ಷಿಣ್ಯದಿಂದ ಪಡೆದುಕೊಳ್ಳಬೇಕಾದುದನ್ನು ಪಡೆದುಕೊಳ್ಳಲಾರಿರಿ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಬಿಹಾರದ ಬಾನ್ಸ್ ಘಾಟ್ ಚಿತಾಗಾರವನ್ನು ಸಂಪೂರ್ಣ ಆಧುನೀಕರಣಗೊಳಿಸಿದ ಇಶಾ ಫೌಂಡೇಷನ್​ – Kannada News | 5 Ways Baans Ghat Crematorium Is Transforming Cremation Services in Bihar Patna by Isha Foundation

ಪಾಟ್ನಾ, ಜೂನ್ 29: ಬಿಹಾರದ ಪಾಟ್ನಾದಲ್ಲಿರುವ ಏಷ್ಯಾದ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾದ ‘ಬಾನ್ಸ್ ಘಾಟ್’ ಅನ್ನು ಇಶಾ ಔಟ್‌ರೀಚ್ ಸಂಸ್ಥೆಯು ಆಧುನೀಕರಣಗೊಳಿಸುತ್ತಿದೆ. ಇಶಾ ಫೌಂಡೇಷನ್ (Isha Foundation) ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಚಿತಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಗುರುತಿಸಿ, ಬಿಹಾರ ಸರ್ಕಾರವು ಪಾಟ್ನಾದ ‘ಬಾನ್ಸ್ ಘಾಟ್ ಚಿತಾಗಾರ’ದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳಲು ಇಶಾ ಫೌಂಡೇಶನ್‌ನ ಸಾಮಾಜಿಕ ಮತ್ತು ಪರಿಸರ ಕಲ್ಯಾಣ ವಿಭಾಗವಾದ ‘ಇಶಾ ಔಟ್‌ರೀಚ್’ ಅನ್ನು ಆಹ್ವಾನಿಸಿದೆ.

ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಪವಿತ್ರತೆಯನ್ನು ಕಾಪಾಡಿಕೊಳ್ಳುವ ಜೊತೆಗೆ, ಗೌರವಾನ್ವಿತ, ಸುಲಭ ಮತ್ತು ವೃತ್ತಿಪರ ಅಂತ್ಯಸಂಸ್ಕಾರ ಸೇವೆಗಳನ್ನು ಒದಗಿಸಲು ಬಾನ್ಸ್ ಘಾಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಬಾನ್ಸ್ ಘಾಟ್ ಚಿತಾಗಾರದ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:

ಬೃಹತ್ ಮೂಲಸೌಕರ್ಯ:

ಸುಮಾರು 4.5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಬಾನ್ಸ್ ಘಾಟ್, ಏಷ್ಯಾದ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾಗಿದೆ ಮತ್ತು ಪೂರ್ವ ಭಾರತದ ಅತ್ಯಂತ ಆಧುನಿಕ ಚಿತಾಗಾರ ಸೌಲಭ್ಯಗಳಲ್ಲಿ ಒಂದಾಗಿದೆ. ಇಲ್ಲಿ ಏಕಕಾಲದಲ್ಲಿ 18 ಅಂತ್ಯಸಂಸ್ಕಾರಗಳನ್ನು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದ್ದು, ದಿನಕ್ಕೆ ಸುಮಾರು 50 ಅಂತ್ಯಸಂಸ್ಕಾರಗಳನ್ನು ನಿರ್ವಹಿಸಬಹುದಾಗಿದೆ. ಇದು ಮೃತರ ಕುಟುಂಬಸ್ಥರಿಗೆ ದಕ್ಷ ಮತ್ತು ಗೌರವಾನ್ವಿತ ಸೇವೆಗಳನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: ಇಶಾ ಫೌಂಡೇಶನ್​ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ

ಆಧುನಿಕ ಸೌಲಭ್ಯಗಳು:

ಈ ಚಿತಾಗಾರವು ಸ್ವಚ್ಛ, ಶಾಂತಿಯುತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ವಾತಾವರಣದಲ್ಲಿ ವಿದ್ಯುತ್ ಮತ್ತು ಸಾಂಪ್ರದಾಯಿಕ ಕಟ್ಟಿಗೆ ಆಧಾರಿತ ಇವೆರಡೂ ಅಂತ್ಯಸಂಸ್ಕಾರದ ಸೌಲಭ್ಯಗಳನ್ನು ನೀಡುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬಸ್ಥರಿಗೆ ಸುಲಭ, ಪಾರದರ್ಶಕ ಮತ್ತು ಸಹಾನುಭೂತಿಯ ಬೆಂಬಲ ಸಿಗುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ.

ನಿಗದಿತ ದರಗಳು:

ವಿದ್ಯುತ್ ಚಿತಾಗಾರದ ಶುಲ್ಕವನ್ನು 3,500 ರೂ.ಗೆ ನಿಗದಿಪಡಿಸಲಾಗಿದೆ. ಇದು ಪುರಸಭೆಯ ಒಪ್ಪಂದದಡಿಯಲ್ಲಿ ಪ್ರಸ್ತುತ ಅನುಮತಿಸಲಾದ ಅತ್ಯಂತ ಕಡಿಮೆ ದರವಾಗಿದೆ (ಇದು ವಿದ್ಯುತ್ ಮತ್ತು ನಿರ್ವಹಣಾ ವೆಚ್ಚಗಳನ್ನು ಒಳಗೊಂಡಿರುತ್ತದೆ). ಇನ್ನು ಕಟ್ಟಿಗೆ ಆಧಾರಿತ ಅಂತ್ಯಸಂಸ್ಕಾರಕ್ಕೂ ಸೇವಾ ಶುಲ್ಕ 3,500 ರೂ. ಆಗಿರುತ್ತದೆ, ಆದರೆ ಕಟ್ಟಿಗೆಯ ವೆಚ್ಚವನ್ನು ಕುಟುಂಬಸ್ಥರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಸೇವೆ:

ಇಶಾ ಔಟ್‌ರೀಚ್ ಬಾನ್ಸ್ ಘಾಟ್ ಚಿತಾಗಾರದಲ್ಲಿ ‘ಅಂತ್ಯೋದಯ ಅನ್ನ ಯೋಜನೆ’ (AAY) ಕಾರ್ಡ್ ಹೊಂದಿರುವವರಿಗೆ ಉಚಿತ ಅಂತ್ಯಸಂಸ್ಕಾರ ಸೇವೆಗಳನ್ನು ನೀಡುತ್ತದೆ. ಆರ್ಥಿಕ ಸಂಕಷ್ಟವು ಗೌರವಾನ್ವಿತ ವಿದಾಯಕ್ಕೆ ಅಡ್ಡಿಯಾಗಬಾರದು ಎಂಬುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: ಇಶಾ ಫೌಂಡೇಷನ್​​ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಪರಿಸರ ಸ್ನೇಹಿ ಕ್ರಮಗಳು:

ಪ್ರಸ್ತುತ ಇರುವ ವಿದ್ಯುತ್ ಚಿತಾಗಾರದ ಕುಲುಮೆಗಳನ್ನು ನಿರ್ವಹಿಸುವುದರ ಜೊತೆಗೆ, ಇಶಾ ಔಟ್‌ರೀಚ್ ಕ್ರಮೇಣ ಕಟ್ಟಿಗೆ ಆಧಾರಿತ ಕುಲುಮೆಗಳನ್ನು ಎಲ್‌ಪಿಜಿ (LPG) ಆಧಾರಿತ ಕುಲುಮೆಗಳಾಗಿ ಪರಿವರ್ತಿಸಲಿದೆ. ಈ ಬದಲಾವಣೆಯು ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಪವಿತ್ರತೆಯನ್ನು ಕಾಪಾಡುವ ಜೊತೆಗೆ, ಕಟ್ಟಿಗೆ ಬಳಕೆಯನ್ನು ಮತ್ತು ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಇಶಾ ಔಟ್‌ರೀಚ್ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ತಮಿಳುನಾಡು ಸರ್ಕಾರದೊಂದಿಗೆ ಪಾಲುದಾರಿಕೆ ಹೊಂದಿದ್ದು, ರಾಜ್ಯದಾದ್ಯಂತ ಚಿತಾಗಾರಗಳನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಇದು 33 ಚಿತಾಗಾರಗಳನ್ನು ನಿರ್ವಹಿಸುತ್ತಿದ್ದು, ಪಾರದರ್ಶಕ ಮತ್ತು ವೃತ್ತಿಪರ ವ್ಯವಸ್ಥೆಯ ಮೂಲಕ 1.25 ಲಕ್ಷಕ್ಕೂ ಹೆಚ್ಚು ಅಂತ್ಯಸಂಸ್ಕಾರಗಳನ್ನು ನೆರವೇರಿಸಿದೆ. ತಮಿಳುನಾಡಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಉಚಿತ ಸೇವೆ ನೀಡುತ್ತಿದ್ದು, ಅದೇ ಸೇವೆಯನ್ನು ಈಗ ಪಾಟ್ನಾದ ಬಾನ್ಸ್ ಘಾಟ್‌ಗೂ ವಿಸ್ತರಿಸಲಾಗಿದೆ.

ಬಾನ್ಸ್ ಘಾಟ್ ಮಾತ್ರವಲ್ಲದೆ, ಬಿಹಾರ ಸರ್ಕಾರವು ಬೇಗುಸರಾಯ್ (ಸಿಮಾರಿಯಾ), ಭಾಗಲ್ಪುರ್, ಗಯಾ ಮತ್ತು ಸಹರ್ಸಾಗಳಲ್ಲಿರುವ ಚಿತಾಗಾರಗಳನ್ನು ಇಶಾ ಔಟ್‌ರೀಚ್‌ಗೆ ವಹಿಸಿಕೊಟ್ಟಿದೆ ಹಾಗೂ ಛಪ್ರಾದಲ್ಲಿ ಸ್ಥಳ ಹಂಚಿಕೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯಕ್ಕೆ ಇಶಾ ಔಟ್‌ರೀಚ್ ಕೇವಲ ಬಾನ್ಸ್ ಘಾಟ್ ಚಿತಾಗಾರದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಮಾತ್ರ ವಹಿಸಿಕೊಂಡಿದೆ. ಈ ಎಲ್ಲಾ ಚಿತಾಗಾರಗಳ ಮಾಲೀಕತ್ವವು ಬಿಹಾರ ಸರ್ಕಾರದ ಬಳಿಯೇ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Source link

Exit mobile version