Headlines

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು – Kannada News | Hubballi: Crores in Transactions Found in Auto Driver’s Bank Account; Investigation Uncovers Source of Funds

ಆಟೋ ಚಾಲಕನ ಮನೆಯಲ್ಲಿ ಪೊಲೀಸ್ ತಪಾಸಣೆ, ಇರ್ಫಾನ್‌ Image Credit source: tv9 kannada ಹುಬ್ಬಳ್ಳಿ, ಫೆಬ್ರವರಿ 11: ಆತ ಹೆಸರಿಗೆ ಬಡ ಆಟೋ ಚಾಲಕ, ಬ್ಯಾಂಕ್‌ ಖಾತೆಯಲ್ಲಿನ ಹಣ ವರ್ಗಾವಣೆಯಾಗಿದ್ದು, ಮಾತ್ರ ಲಕ್ಷ ಲಕ್ಷ ಹಣ. ಸೈಬರ್ ಅಪರಾಧಗಳ ಪ್ರಕರಣಗಳಿಗೆ (Cyber crime case) ಸಂಬಂಧಿಸಿದಂತೆ ಆ ಅಕೌಂಟ್ ಬಳಕೆಯಾಗಿತ್ತು. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡ ಹುಬ್ಬಳ್ಳಿ (Hubballi) ಸೆನ್ ಠಾಣೆಯ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಆ ಮೂಲಕ ಅನೇಕ ಅಂಶಗಳು ಹೊರಬರುತ್ತಿವೆ. ಮೂಲ…

Read More

ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ – Kannada News | Vasuki Koushik Creates World Record in List A Cicket

ಕರ್ನಾಟಕದ ವೇಗಿ ವಾಸುಕಿ‌ ಕೌಶಿಕ್ ಲಿಸ್ಟ್ ಎ (ಏಕದಿನ) ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ತನ್ನ ಕರಾರುವಾಕ್ ದಾಳಿ ಮೂಲಕ. ಈ ದಾಳಿಯೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. Source link

Read More

VIDEO: ಮೊದಲ ಓವರ್​ನಲ್ಲಿ ಗೆರೆ ದಾಟಿ ಔಟಾದ ಬಾಬರ್ ಆಝಂ – Kannada News | Babar Azam Dismissed For A Duck in BBL 2026

ಬಿಗ್ ಬ್ಯಾಷ್ ಲೀಗ್​ನಲ್ಲಿ ಬಾಬರ್ ಆಝಂ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ನಡುವೆ ಕ್ವಾಲಿಫೈಯರ್ ಪಂದ್ಯದಲ್ಲಿ ಔಟಾದ ರೀತಿ ಈಗ ಚರ್ಚೆಗೆ ಕಾರಣವಾಗಿದೆ. ಪರ್ತ್​ನಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್​ನ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಹಾಗೂ ಪರ್ತ್ ಸ್ಕಾಚರ್ಸ್​​ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ತ್​ ಸ್ಕಾಚರ್ಸ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 147 ರನ್​ಗಳು ಮಾತ್ರ. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಡ್ನಿ ಸಿಕ್ಸರ್ಸ್…

Read More

ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ – Kannada News | Belagavi ED Raid: Money Laundering and Benami Assets Allegations on Y. Manjunath

ವೈ. ಮಂಜುನಾಥ್, ಸತೀಶ್ ಜಾರಕಿಹೊಳಿ ಬೆಳಗಾವಿ, ಜೂ.24: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಲೋಕಾಯುಕ್ತ ಹಾಗೂ ಇಡಿ ದಾಳಿಗಳು ನಡೆಯುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್​​ ಮೇಲೆ ಶಾಕ್​​ ನೀಡಲಾಗುತ್ತಿದೆ. ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಸಹೋದರಿಯ ಪತಿ (ಭಾವ) ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ (Y. Manjunath) ಅವರಿಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮುಂಜಾನೆ ಭರ್ಜರಿ ಶಾಕ್ ನೀಡಿದ್ದಾರೆ. ಬೇನಾಮಿ ಆಸ್ತಿ ಹಾಗೂ…

Read More

ಮುಜಾಫರ್‌ಪುರ ಅಗ್ನಿ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಆಸ್ಪತ್ರೆ ನೋಂದಣಿ ರದ್ದು, ಮೂವರ ಬಂಧನ – Kannada News

ಮುಜಾಫರ್‌ಪುರ, ಜೂನ್ 6: ಬಿಹಾರದ ಮುಜಾಫರ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿದ್ದು, ಸುರಕ್ಷತಾ ಲೋಪಗಳ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಮೃತಪಟ್ಟ ಸಂತ್ರಸ್ತರನ್ನು ಮುಜಾಫರ್‌ಪುರ ಜಿಲ್ಲೆಯ ಪಾರ್ರಿ ಗ್ರಾಮದ ನಿವಾಸಿ ಅಂಜನಿ ಕುಮಾರ್ ಸಿಂಗ್ ಎಂದು…

Read More

ಮತದಾರರ ಪಟ್ಟಿ ಪರಿಷ್ಕರಣೆ: 2002ರ ವಿವರ ಕಡ್ಡಾಯವಲ್ಲ ಎಂದ ರಾಜ್ಯ ಮುಖ್ಯ ಚುನಾವಣಾಧಿಕಾರಿ – Kannada News | Voter List Revision: 2002 Details Not Mandatory, Submit Forms by August 8, Clarifies Karnataka CEO V Anbukumar

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಬೆಂಗಳೂರು, ಜುಲೈ 23: ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಮತದಾರರ ಪಟ್ಟಿ ಸಮೀಕ್ಷೆಯ ಎಣಿಕೆ ನಮೂನೆಗಳಲ್ಲಿ 2002ರ ಸ್ವಯಂ ಹಾಗೂ ಪೋಷಕರ ವಿವರಗಳನ್ನು ಕಡ್ಡಾಯವಾಗಿ ಭರ್ತಿ ಮಾಡುವ ಅಗತ್ಯವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆಗಸ್ಟ್ 8, 2026ರೊಳಗೆ ನಾಗರಿಕರು ತಮ್ಮ ನಮೂನೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ‘ಆನ್‌ಲೈನ್‌ನಲ್ಲೂ ಸಲ್ಲಿಕೆ ಸಾಧ್ಯ’ ಭೌತಿಕ ನಮೂನೆ ಪಡೆದಿದ್ದರೂ, ಅದನ್ನು ಆನ್‌ಲೈನ್…

Read More

ಮತ್ತೆ ಬಾಲಿವುಡ್​​ನತ್ತ ಗನ್ನು ಗುರಿ ಇಟ್ಟ ಭೂಗತ ಜಗತ್ತು: ಎಲ್ಲೆಲ್ಲಿ ದಾಳಿ? – Kannada News | Under world mafia again troubling Bollywood here is the recent attacks

ಬಾಲಿವುಡ್ (Bollywood) ಮತ್ತು ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ದಾವೂದ್ ಇಬ್ರಾಹಿಂಗಿಂತಲೂ ಮುಂಚಿನಿಂದಲೂ ಭೂತದ ಪಾತಕಿಗಳು ಬಾಲಿವುಡ್​​ ಜೊತೆಗೆ ಸಕ್ರಿಯ ನಂಟು ಹೊಂದಿದ್ದಾರೆ. ಬಾಲಿವುಡ್​​ನಲ್ಲಿರುವ ರಾಶಿ-ರಾಶಿ ಹಣ ಭೂಗತ ಜಗತ್ತನ್ನು ಅದರತ್ತ ಸೆಳೆದಿದೆ. ದಾವೂದ್ ಕಾಲದಿಂದಲೂ ಸಿನಿಮಾಗಳ ನಿರ್ಮಾಣ, ನಟ-ನಟಿಯರ ಆಯ್ಕೆ, ಹಫ್ತಾ ವಸೂಲಿ, ಲಾಭ ಹಂಚಿಕೆ, ಸಿನಿಮಾ ಫೈನ್ಯಾನ್ಸ್ ಇನ್ನೂ ಹಲವು ವಿಷಯಗಳಲ್ಲಿ ಭೂಗತ ಲೋಕದವರು ಬಾಲಿವುಡ್​​ ಮೇಲೆ ಪ್ರಭಾವ ಬೀರುತ್ತಲೇ ಬರುತ್ತಿದ್ದಾರೆ. ಬಾಲಿವುಡ್​​ನ ಹಲವಾರು ನಟ-ನಟಿ, ನಿರ್ಮಾಪಕ, ನಿರ್ದೇಶಕರುಗಳು ಭೂಗತ ಪಾತಕಿಗಳಿಂದ ಬೆದರಿಕೆ…

Read More

‘ಆ್ಯಂಡಿ ಫ್ಲವರ್’​ನಲ್ಲಿ ಅರಳಿದ RCB | TV9 Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದು ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದೊಂದು ಭಾವನೆ. ಕಳೆದ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಹಣೆಬರಹವನ್ನು ಬದಲಾಯಿಸಲು ಸಾರಥಿಗಳಾಗಿ ಬಂದಿದ್ದು ಬರೋಬ್ಬರಿ 8 ಹೆಡ್ ಕೋಚ್‌ಗಳು! ಆದರೆ 7 ಕೋಚ್​ಗಳಿಂದ ಆರ್​ಸಿಬಿ ಅಭಿಮಾನಿಗಳಿಗೆ ಸಿಕ್ಕಿದ್ದು ‘ಈ ಸಲ ಕಪ್ ನಮ್ದಲ್ಲ’ ಎನ್ನುವ ಡೈಲಾಗ್ ಮಾತ್ರ. ಅದರಲ್ಲೂ 2023 ರಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚೈತನ್ಯ ನೀಡಿದ್ದು ಝಿಂಬಾಬ್ವೆ ತಂಡದ ಮಾಜಿ ನಾಯಕ…

Read More

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ; ರಷ್ಯಾದಿಂದ ಮೊದಲ ವಿಡಿಯೋ ಬಿಡುಗಡೆ – Kannada News | Russia releases Ukraine drone footage which targeted Putin’s residence

ಮಾಸ್ಕೋ, ಡಿಸೆಂಬರ್ 31: ಉಕ್ರೇನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ (Russia) ಹೇಳಿಕೊಂಡಿದೆ. ಆದರೆ, ಉಕ್ರೇನ್ ಈ ಆರೋಪವನ್ನು ನಿರಾಕರಿಸಿದೆ. ಇದರ ನಡುವೆ ರಷ್ಯಾ ತಾನು ಪತನಗೊಳಿಸಿದ ಉಕ್ರೇನ್​ನ ಡ್ರೋನ್​ಗಳ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ. ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದ ನಿವಾಸವನ್ನು ಹೊಡೆಯಲು ಉಕ್ರೇನ್ ಪ್ರಯತ್ನ ಮಾಡಿತ್ತು ಎಂದು ಆರೋಪಿಸಿರುವ ರಷ್ಯಾ ತಾನು ಹೊಡೆದುರುಳಿಸಿದ ಡ್ರೋನ್‌ನ ರಾತ್ರಿಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ….

Read More

ಈಗ ಸಿನಿಮಾ ಆಗಿದೆ 47 ವರ್ಷ ಹಿಂದಿನ ಕತೆ, ಕಮಲ್ ಹಾಸನ್ ನಟಿಸಬೇಕಿತ್ತು – Kannada News

ಕೆಲವು ಕತೆಗಳಿಗೆ ಸಮಯದ ಮಿತಿ ಇರುವುದಿಲ್ಲ. ಅವು ಸಾರ್ವಕಾಲಿಕ ಆಗಿರುತ್ತವೆ. ಅಂಥಹಾ ಕತೆಗಳುಳ್ಳ ಸಿನಿಮಾಗಳೇ ಗೆಲ್ಲುವುದು. 47 ವರ್ಷ ಹಿಂದೆ ಬರೆಯಲಾಗಿದ್ದ ಕತೆಯೊಂದು ಈಗ ಸಿನಿಮಾ ಆಗಿದ್ದು, ಬಿಡುಗಡೆಗೆ ರೆಡಿಯಾಗಿದೆ. 47 ವರ್ಷಗಳ ಹಿಂದೆ ಆ ಸಿನಿಮಾನಲ್ಲಿ ನಟ ಕಮಲ್ ಹಾಸನ್ (Kamal Haasan) ನಟಿಸಬೇಕಿತ್ತು. ಆದರೆ ಕಮಲ್ ಹಾಸನ್ ಅವರು ಆಗ ಬೇರೊಂದು ಕತೆಯನ್ನು ಆಯ್ದುಕೊಂಡರು. ಆದರೆ ಇಷ್ಟು ವರ್ಷ ಆ ಕತೆ ನಿರ್ದೇಶಕನ ಯೋಚನೆಯಲ್ಲಿತ್ತು, ಆದರೆ ಈಗ ಸಿನಿಮಾ ಆಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ…

Read More