3 ವರ್ಷಗಳ ಅಜೇಯ ಓಟಕ್ಕೆ ಬ್ರೇಕ್; ಐರ್ಲೆಂಡ್​ನಿಂದಲೇ ಆರಂಭ ಐರ್ಲೆಂಡ್​ನಲ್ಲೇ ಅಂತ್ಯ – Kannada News | Team India’s T20 Record Broken: Ireland Ends 3 Year Unbeaten Run with Series Victory

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ (Team India) ಅಜೇಯ ಓಟ ಕೊನೆಗೂ ಅಂತ್ಯಗೊಂಡಿದೆ. ಟಿ20 ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಐರಿಶ್ (India vs Ireland) ತಂಡವು ತಮ್ಮ ತವರು ನೆಲದಲ್ಲಿ ಇತಿಹಾಸ ನಿರ್ಮಿಸಿದೆ. ಈ ಸೋಲಿನೊಂದಿಗೆ, ಕಳೆದ 3 ವರ್ಷಗಳಿಂದ ಟಿ20 ಸರಣಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಟೀಂ ಇಂಡಿಯಾದ ಅಜೇಯ ಓಟಕ್ಕೆ ಅಂತ್ಯ ಸಿಕ್ಕಿದೆ. ಇಲ್ಲಿ ಗಮನಿಸಬೇಕಾದ ಆಸಕ್ತಿದಾಯಕ ಮತ್ತು ವಿಶಿಷ್ಟ ಕಾಕತಾಳೀಯವೆಂದರೆ ಭಾರತದ ಈ ಐತಿಹಾಸಿಕ ಅಜೇಯ ಓಟವು 2023 ರಲ್ಲಿ ಇದೇ ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಪ್ರಾರಂಭವಾಗಿತ್ತು. ಇದೀಗ ಮೂರು ವರ್ಷಗಳ ನಂತರ ಇದೇ ಐರ್ಲೆಂಡ್ ನೆಲದಲ್ಲೇ ಅಂತ್ಯಗೊಂಡಿದೆ.

ಐರ್ಲೆಂಡ್‌ನಿಂದಲೇ ಪ್ರಾರಂಭ

ಭಾರತ ತಂಡವು ತನ್ನ ಕೊನೆಯ 16 ಟಿ20 ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ (ಸರಣಿಗಳು ಮತ್ತು ಪ್ರಮುಖ ಪಂದ್ಯಾವಳಿಗಳು) ಪ್ರಾಬಲ್ಯ ಸಾಧಿಸಿತ್ತು. ಈ ಅವಧಿಯಲ್ಲಿ, ಭಾರತ ಎರಡು ಬಾರಿ ಟಿ20 ವಿಶ್ವಕಪ್ ಮತ್ತು ಒಂದು ಬಾರಿ ಏಷ್ಯಾಕಪ್ ಗೆದ್ದಿತ್ತು. ಹಾಗೆಯೇ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು. ಈ ಮೂಲಕ 2023 ರ ಆಗಸ್ಟ್​ನಿಂದ ಸತತ 16 ಅಂತರರಾಷ್ಟ್ರೀಯ ಟಿ20 ಪಂದ್ಯಾವಳಿಗಳಲ್ಲಿ ಅಜೇಯ ದಾಖಲೆ ಮಾಡಿತ್ತು. 2023 ರಲ್ಲಿ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಐರ್ಲೆಂಡ್ ಪ್ರವಾಸ ಮಾಡಿತ್ತು. ಆ ಎರಡು ಪಂದ್ಯಗಳ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿತ್ತು.

ಐರ್ಲೆಂಡ್​ನಲ್ಲೇ ಅಂತ್ಯ

ಇದಾದ ನಂತರ, ಟೀಂ ಇಂಡಿಯಾ ಯಾವುದೇ ಟಿ20 ಸರಣಿಯಲ್ಲಿ ಸೋಲನ್ನು ಎದುರಿಸಿರಲಿಲ್ಲ. ಈ ಅವಧಿಯಲ್ಲಿ, ಭಾರತ 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿತು, 2024 ರ ಟಿ20 ವಿಶ್ವಕಪ್ ಗೆದ್ದಿತು ಮತ್ತು ನಂತರ 2026 ರ ಟಿ20 ವಿಶ್ವಕಪ್​ ಅನ್ನು ತನ್ನದಾಗಿಸಿಕೊಂಡಿತು. ಈ ಮೂರು ವರ್ಷಗಳಲ್ಲಿ, ಟೀಂ ಇಂಡಿಯಾ ಒಟ್ಟು 73 ಟಿ20 ಪಂದ್ಯಗಳನ್ನು ಆಡಿದೆ, ಆದರೆ ಯಾವುದೇ ತಂಡಕ್ಕೂ ಭಾರತವನ್ನು ಸರಣಿಯಲ್ಲಿ ಸೋಲಿಸಲು ಸಾಧ್ಯವಾಗಿರಲಿಲ್ಲ. ಈ 17 ಸರಣಿಗಳಲ್ಲಿ, ಕೇವಲ ಒಂದು ಸರಣಿ ಮಾತ್ರ ಡ್ರಾದಲ್ಲಿ ಕೊನೆಗೊಂಡಿತ್ತು. ಆದರೆ ಈಗ, ಐರಿಶ್ ನೆಲದಲ್ಲಿ ಅಜೇಯ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಕಳೆದ 17 ಟಿ20 ಸರಣಿಯಲ್ಲಿ ಭಾರತದ ಪ್ರದರ್ಶನ

  • 2026: ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸರಣಿ ಸೋಲು.
  • 2026: ಟಿ20 ವಿಶ್ವಕಪ್ ಚಾಂಪಿಯನ್
  • 2026: 4-1 ಅಂತರದಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿ ಜಯ
  • 2025: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು 3-1 ಅಂತರದಿಂದ ಗೆದ್ದಿತು.
  • 2025: 2-1 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯ
  • 2025: ಏಷ್ಯಾಕಪ್ ಚಾಂಪಿಯನ್
  • 2025: ಇಂಗ್ಲೆಂಡ್ ವಿರುದ್ಧ4-1 ಅಂತರದಿಂದ ಸರಣಿ ಜಯ
  • 2024: ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಿಂದ ಸರಣಿ ಜಯ
  • 2024: ಬಾಂಗ್ಲಾದೇಶ ವಿರುದ್ಧ 3-0 ಅಂತರದಿಂದ ಸರಣಿ ಜಯ
  • 2024: ಶ್ರೀಲಂಕಾ ವಿರುದ್ಧ 3-0 ಅಂತರದಿಂದ ಸರಣಿ ಜಯ
  • 2024: ಜಿಂಬಾಬ್ವೆ ವಿರುದ್ಧ 4-1 ಅಂತರದಿಂದ ಸರಣಿ ಜಯ
  • 2024: ಟಿ20 ವಿಶ್ವಕಪ್ ಚಾಂಪಿಯನ್
  • 2024: ಅಫ್ಘಾನಿಸ್ತಾನ ವಿರುದ್ಧ 3-0 ಅಂತರದಿಂದ ಸರಣಿ ಜಯ.
  • 2023: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ 1-1 ರಿಂದ ಡ್ರಾ.
  • 2023: ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಜಯ
  • 2023: ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ
  • 2023: ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಸರಣಿ ಜಯ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ – Kannada News | Donald Trump confirms US Iran meeting scheduled in Doha tomorrow after Tehran requested it

ವಾಷಿಂಗ್ಟನ್, ಜೂನ್ 29: ಅಮೆರಿಕ ಮತ್ತು ಇರಾನ್ (Iran) ನಡುವಿನ ರಾಜತಾಂತ್ರಿಕ ಬಾಂಧವ್ಯದಲ್ಲಿ ತೀವ್ರ ಕುತೂಹಲ ಕೆರಳಿಸುವ ಬೆಳವಣಿಗೆಯೊಂದು ನಡೆದಿದೆ. ಇರಾನ್ ದೇಶದ ಮನವಿಯ ಮೇರೆಗೆ ನಾಳೆ (ಜೂನ್ 30) ಕತಾರ್‌ನ ದೋಹಾದಲ್ಲಿ ಉಭಯ ದೇಶಗಳ ನಡುವೆ ಮಹತ್ವದ ಸಭೆ ನಿಗದಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇಂದು ತಮ್ಮ ‘ಟ್ರೂತ್ ಸೋಷಿಯಲ್’ (Truth Social) ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡ ಡೊನಾಲ್ಡ್ ಟ್ರಂಪ್, ಇರಾನ್ ಕಡೆಯಿಂದಲೇ ಈ ಸಭೆಗಾಗಿ ಮನವಿ ಬಂದಿತ್ತು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ದೀರ್ಘಕಾಲದಿಂದ ಸಂಘರ್ಷಕ್ಕೆ ಕಾರಣವಾಗಿರುವ ಹಾರ್ಮುಜ್ ಜಲಸಂಧಿಯ ವಿವಾದದ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ಈ ಪ್ರಮುಖ ಜಲಮಾರ್ಗದ ಮೇಲೆ ತನ್ನ ನಿಯಂತ್ರಣ ಇರಬೇಕು ಎಂದು ಇರಾನ್ ಬಯಸುತ್ತಿದ್ದರೆ, ಈ ಜಲಸಂಧಿಯು ಜಾಗತಿಕ ಸಂಚಾರಕ್ಕೆ ಮುಕ್ತವಾಗಿರಬೇಕು ಎಂದು ಅಮೆರಿಕ ಪ್ರತಿಪಾದಿಸುತ್ತಿದೆ. ಕಳೆದ ವಾರ ಹಾರ್ಮುಜ್ ಜಲಸಂಧಿಯಿಂದ ಹೊರಹೋಗುತ್ತಿದ್ದ ಸರಕು ಸಾಗಣೆ ಹಡಗೊಂದನ್ನು ಇರಾನ್ ಗುರಿಯಾಗಿಸಿಕೊಂಡ ನಂತರ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಅಮೆರಿಕವು ಇರಾನ್‌ನ ಕ್ಷಿಪಣಿ, ಡ್ರೋನ್ ಮತ್ತು ರಾಡಾರ್ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಇರಾನ್ ಮರುದಾಳಿ ನಡೆಸಿತ್ತು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಸಂಘರ್ಷ: ಶಾಂತಿ ಒಪ್ಪಂದವಾದ ಕೆಲವೇ ದಿನಗಳಲ್ಲಿ ಅಮೆರಿಕ-ಇರಾನ್ ಮುಖಾಮುಖಿ ದಾಳಿ

ಈ ಸಭೆಗೆ ಅಮೆರಿಕದ ಶ್ವೇತಭವನವು ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಮಧ್ಯಪ್ರಾಚ್ಯದ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಶಾಂತಿ ಪ್ರಕ್ರಿಯೆಯ ವಿಶೇಷ ರಾಯಭಾರಿ ಜ್ಯಾರೆಡ್ ಕುಶ್ನರ್ ಅವರು ಈ ಸಭೆಯಲ್ಲಿ ಅಮೆರಿಕದ ಪರವಾಗಿ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ಖಚಿತಪಡಿಸಿದೆ. ಕಳೆದ ಕೆಲವು ದಿನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಮಿಲಿಟರಿ ಸಂಘರ್ಷ ಹೆಚ್ಚುತ್ತಿರುವುದರಿಂದ, ಪ್ರಸ್ತುತ ಇರುವ ಸೂಕ್ಷ್ಮ ಮಧ್ಯಂತರ ಒಪ್ಪಂದವನ್ನು ಉಳಿಸಿಕೊಳ್ಳಲು ಟ್ರಂಪ್ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ.

ಇದನ್ನೂ ಓದಿ: ಇರಾನ್​ನಲ್ಲಿ ಖಮೇನಿ ಅಂತ್ಯಕ್ರಿಯೆ; ಭಾರತದ ಪರವಾಗಿ ಬಿಹಾರದ ರಾಜ್ಯಪಾಲ, ಸಚಿವ ಪವಿತ್ರ ಮಾರ್ಗರಿಟಾ ಭಾಗಿ

ಇದೇ ಸಂದರ್ಭದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು, ಕತಾರ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್‌ನ 6 ಬಿಲಿಯನ್ ಡಾಲರ್ (ಸುಮಾರು 600 ಕೋಟಿ ಡಾಲರ್) ಮೌಲ್ಯದ ಆಸ್ತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಮೆರಿಕದೊಂದಿಗಿನ ಮಾತುಕತೆಗೆ ಪ್ರಸ್ತುತ ಸಂಘರ್ಷದ ವಾತಾವರಣವು ಸವಾಲಾಗಿದ್ದರೂ, ಈ ಆಸ್ತಿ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ, ಉಭಯ ದೇಶಗಳ ನಡುವಿನ ಪ್ರಮುಖ ಸಂಧಾನಕಾರ ರಾಷ್ಟ್ರವಾಗಿರುವ ಪಾಕಿಸ್ತಾನ ಮಂಗಳವಾರದಿಂದ ಮಾತುಕತೆಗಳು ಪುನರಾರಂಭಗೊಳ್ಳಲಿವೆ ಎಂದು ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಚಾಮರಾಜನಗರದಲ್ಲಿ ಭೀಕರ ಅಪಘಾತ: ಸಾರಿಗೆ ಬಸ್ ಪಲ್ಟಿಯಾಗಿ ಇಬ್ಬರು ಸಾವು; 67 ಪ್ರಯಾಣಿಕರಿಗೆ ಗಾಯ – Kannada News | KSRTC Bus Accident: Tire Burst Causes Bus to Overturn, 2 Dead and 67 Injured

ಚಾಮರಾಜನಗರ, ಜೂನ್​​ 29: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ (bus accident) ಟೈರ್ ಏಕಾಏಕಿ ಸ್ಫೋಟಗೊಂಡು ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು (death), ಬರೋಬ್ಬರಿ 67 ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೊಳ್ಳೇಗಾಲದ ಪುಟ್ಟನಂಜಮ್ಮ(60) ಮತ್ತು ಕುದೇರು ನಿವಾಸಿ ಮಹೇಶ್(50) ಮೃತರು. ಸದ್ಯ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಡೆದಿದ್ದೇನು?

ಇಂದು ಸೋಮವಾರ ಹಾಗೂ ಹುಣ್ಣಿಮೆಯ ವಿಶೇಷ ದಿನ ಹೀಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಾದಪ್ಪನ ದರ್ಶನ ಮುಗಿಸಿಕೊಂಡು ಮೈಸೂರಿಗೆ ವಾಪಸ್ ಪ್ರಯಾಣಿಸುತ್ತಿದ್ದ ವೇಳೆ, KA 57 F 3964 ಸಂಖ್ಯೆಯ ಕೆಎಸ್​​​ಆರ್​ಟಿಸಿ ಸಾರಿಗೆ ಬಸ್‌ನ ಮುಂಭಾಗದ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ.

ಇದನ್ನೂ ಓದಿ: ರಾಯಚೂರು: ಏಕಾಏಕಿ ಕುಸಿದ ಕಟ್ಟಡ​​ದ ಗೋಡೆ; ನಾಲ್ವರ ಪೈಕಿ ಇಬ್ಬರು ಸಾವು

ಬಸ್ ಪಲ್ಟಿಯಾಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರಿಗೆ ದಿಕ್ಕೇ ತೋಚದಾಗಿದೆ. ಅಪಘಾತದ ತೀವ್ರತೆಗೆ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಬಸ್‌ನ ಅವಶೇಷಗಳ ನಡುವೆ ಸಿಲುಕಿದ್ದ ಎಲ್ಲಾ ಪ್ರಯಾಣಿಕರನ್ನು ಹೊರಗೆ ತೆಗೆದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಬರೋಬ್ಬರಿ 67 ಮಂದಿ ಪ್ರಯಾಣಿಕರಿಗೆ ಗಾಯ

ಇನ್ನು ಬಸ್‌ನಲ್ಲಿದ್ದ ಬರೋಬ್ಬರಿ 67 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ತಕ್ಷಣವೇ ಎಲ್ಲರನ್ನೂ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 10ಕ್ಕೂ ಹೆಚ್ಚು ಮಂದಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು, ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಬೈಕ್ ಸವಾರ: ಜಸ್ಟ್ ಮಿಸ್

ಗುಂಡಿ ತಪ್ಪಿಸಲು ಹೋಗಿ ಬೈಕ್ ಸವಾರ ಕೆಳಗೆ ಬಿದ್ದ ಘಟನೆ ಕೋಲಾರ ನಗರದ ಕನಕನ ಪಾಳ್ಯ 3ನೇ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಬೈಕ್ ಸವಾರ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಬೈಕ್ ಸವಾರನನ್ನು ಮೇಲಕ್ಕೆ ಎತ್ತಿದ್ದು, ರಸ್ತೆ ಗುಂಡಿ ಮುಚ್ಚುವಂತೆ ಮನವಿ ಮಾಡಿದ್ದಾರೆ. ಸವಾರ ಬೈಕ್​ನಿಂದ ಬೀಳುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಗುತ್ತಿಗೆದಾರ ಕೃಷ್ಣಪ್ಪ ಯುಜಿಡಿ ಕಾಮಗಾರಿ ಮಾಡಿ ಸರಿಯಾಗಿ ಗುಂಡಿ ಮುಚ್ಚದೆ ಇದ್ದ ಕಾರಣ ಅನಾಹುತ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ – Kannada News | Courts cannot straightaway award maintenance to wife when she earns more than husband: Karnataka High Court

ಕರ್ನಾಟಕ ಹೈಕೋರ್ಟ್​​Image Credit source: Getty Images

ಬೆಂಗಳೂರು, (ಜೂನ್ 29):  ವಿಚ್ಛೇದನ ಪ್ರಕರಣದ ಜೀವನಾಂಶ (Divorce Compensation) ಕುರಿತು ಕರ್ನಾಟಕ ಹೈಕೋರ್ಟ್‌ (Karnataka High Court) ಮಹತ್ವದ ಆದೇಶ ನೀಡಿದೆ. ತನಗಿಂತ ಪತ್ನಿ ಹೆಚ್ಚಿನ ಸಂಬಳ ಇದ್ದರೂ ಸಹ ಕೆಳಹಂತಕದ ಕೋರ್ಟ್ ಜೀವನಾಂಶ ನೀಡಲು ಆದೇಶವನ್ನು ಪ್ರಶ್ನಿಸಿದ್ದ ವ್ಯಕ್ತಿಯೊಬ್ಬರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹೌದು.. ಗಂಡನಿಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೀವನಾಂಶ ನೀಡಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದು, ಪತಿಗೆ 60,646 ಸಂಬಳವಿದ್ದರೆ ಪತ್ನಿಗೆ ಮಾಸಿಕ 1 ಲಕ್ಷ ಸಂಬಳವಿತ್ತು. ಹೀಗಾಗಿ ಪತ್ನಿಗೆ ಮಕ್ಕಳು, ಇತರೆ ಬಾದ್ಯತೆಗಳಿಲ್ಲದಿರುವುದನ್ನ ಪರಿಗಣಿಸಿದ್ದು, ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ ತ್ನಿಯನ್ನು ಪತಿಯೇ ಸಲಹಬೇಕು ಎಂಬ ಕಾರಣದ ಮೇರೆಗೆ ಜೀವನಾಂಶವನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಲು ನ್ಯಾಯಾಲಯಗಳು ಒಲವು ತೋರಬಾರದು ಎಂದು ಸಲಹೆ ನೀಡಿದೆ.

ಪತಿಗಿಂತ ಪತ್ನಿಯ ಸಂಬಳವೇ ಹೆಚ್ಚು

2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದು, ಪತಿಗೆ 60,646 ಸಂಬಳವಿದ್ದರೆ ಪತ್ನಿಗೆ ಮಾಸಿಕ 1 ಲಕ್ಷ ಸಂಬಳವಿತ್ತು. ಆದರೂ ಸಹ ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು, ಪ್ರತಿ ತಿಂಗಳು ಪತ್ನಿಗೆ 20 ಸಾವಿರ ಜೀವನಾಂಶ ನೀಡಲು ಆದೇಶಿಸಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಪತಿ, ಹೈಕೋರ್ಟ್​ ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ. 1 ಲಕ್ಷ ರೂಪಾಯಿ ಸಂಬಳದಲ್ಲಿ ಪತ್ನಿ ತನ್ನ ನಿರ್ವಹಣೆ ಮಾಡಿಕೊಳ್ಳಬಲ್ಲಳು. ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ಪತ್ನಿಗೆ ಮಕ್ಕಳು, ಇತರೆ ಬಾದ್ಯತೆಗಳಿಲ್ಲದಿರುವುದನ್ನ ಪರಿಗಣಿಸಿ ಈ ಆದೇಶ ನೀಡಿದೆ.

ಜೀವನಾಂಶದ ಬಗ್ಗೆ ಕೋರ್ಟ್​ ಹೇಳಿದ್ದಿಷ್ಟು

ಯಾವಾಗ ಪತ್ನಿಯು ಆರ್ಥಿಕವಾಗಿ ಸಬಲಳಾಗಿದ್ದಾಳೋ, ಪತ್ನಿಯ ಆದಾಯವು ಪತಿಯ ಆದಾಯಕ್ಕಿಂತ ಹೆಚ್ಚಾಗಿದೆಯೋ ಮತ್ತು ಮಕ್ಕಳನ್ನು ಸಾಕುವುದು ಸೇರಿದಂತೆ ಪತ್ನಿಯ ಕಡೆಯಿಂದ ಬೇರೆ ಯಾವುದೇ ಹೊಣೆಗಾರಿಕೆಗಳು ಇಲ್ಲದಿರುವಂತಹ ಸಂದರ್ಭಗಳಲ್ಲಿ, ಮಹಿಳೆಯರನ್ನು ಪುರುಷರೇ ಸಾಕಬೇಕು ಅಥವಾ ಪತ್ನಿಯನ್ನು ಪತಿಯೇ ಸಲಹಬೇಕು ಎಂಬ ಕಾರಣದ ಮೇರೆಗೆ ಜೀವನಾಂಶವನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಲು ನ್ಯಾಯಾಲಯಗಳು ಒಲವು ತೋರಬಾರದು ಎಂದು ಕೋರ್ಟ್ ತಿಳಿಸಿದೆ.

ತನ್ನ ಪತಿಯ ಜೀವನಮಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ಸಲಹಿಕೊಳ್ಳಲು ಪತ್ನಿಯ ಬಳಿ ಯಾವುದೇ ಆರ್ಥಿಕ ಮೂಲಗಳಿಲ್ಲ ಎಂದು ಸಾಬೀತಾದಾಗ ಮಾತ್ರ ನ್ಯಾಯಾಲಯಗಳು ಮಧ್ಯಂತರ ಅಥವಾ ಅಂತಿಮ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐರ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾಕ್ಕೆ ಡಬ್ಲ್ಯೂಟಿಸಿಯಲ್ಲಿ ಮುಂಬಡ್ತಿ

Source link

Video: ತನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟ ಅಮ್ಮ; ತಾಯಿಯ ತ್ಯಾಗ ನೆನಪಿಸಿಕೊಂಡ ಮಗಳು – Kannada News | Daughter’s job is the reward for her mother’s sacrifice; Daughter recalls mother’s hardships

ತಾಯಿ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ (mother) ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಒತ್ತೆಯಿಡುತ್ತಾಳೆ. ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ತನ್ನ ತಾಯಿಯ ತ್ಯಾಗ ಹಾಗೂ ಹೋರಾಟದ ಕಥೆಯನ್ನು ಹೇಳಿದ್ದಾರೆ. ತಮ್ಮ ಕಾಲೇಜು ಪ್ರವೇಶ ಶುಲ್ಕವನ್ನು ಪಾವತಿಸಲು ತನ್ನ ತಾಯಿ ತಮ್ಮ ಬಳೆಗಳನ್ನೇ ಅಡವಿಟ್ಟಿದ್ದರು. ಇಂದು ಫ್ಲಿಪ್‌ಕಾರ್ಟ್ ಉದ್ಯೋಗಿಯಾಗಿ ತಾಯಿಯನ್ನು ನೋಡಿಕೊಳ್ಳುವ ಮಟ್ಟಿಗೆ ಬದುಕು ಕಟ್ಟಿಕೊಂಡಿದ್ದೇನೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿ ಮಗಳ ಬಾಂಧವ್ಯವನ್ನು ಮೆಚ್ಚಿಕೊಂಡಿದ್ದಾರೆ.

ಅನುಸ್ಮಿತಾ ಮೊಹಾಪಾತ್ರ (anusmitaaa mohapatra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್‌ನಲ್ಲಿ ಮಗಳು ತನ್ನ ತಾಯಿಯನ್ನು ತಬ್ಬಿಕೊಂಡು ಕುಳಿತಿರುವುದನ್ನು ಕಾಣಬಹುದು. ನನ್ನ ತಾಯಿ ಕಾಲೇಜು ಶುಲ್ಕಕ್ಕಾಗಿ ಸ್ವಲ್ಪವೂ ಯೋಚಿಸದೇ ತಮ್ಮ ಬಳೆಗಳನ್ನು ಅಡವಿಟ್ಟರು. ಆದರೆ ಇಂದು ನಾನು ಪ್ರತಿದಿನ ನಾನು ಫ್ಲಿಪ್‌ಕಾರ್ಟ್ ಆಫೀಸಿಗೆ ಹೋಗುತ್ತೇನೆಂದರೆ ಅದು ನನ್ನ ತಾಯಿಯಿಂದಲೇ ಹಾಗೂ ನನ್ನ ತಾಯಿಗಾಗಿಯೇ.

ವೈರಲ್ ವಿಡಿಯೋ ಇಲ್ಲಿದೆ

ಇಂದು ನನ್ನ ತಾಯಿಗೆ ಎಲ್ಲವನ್ನೂ ಕೊಡಿಸುವ ಸಾಮರ್ಥ್ಯವಿರುವ ಕೆಲಸವು ನನ್ನ ಕೈಯಲ್ಲಿದೆ. ಈ ಕೆಲಸ ನನಗೆ ಉದ್ಯೋಗ ಮಾತ್ರವಲ್ಲ. ನನ್ನ ತಾಯಿ ಪ್ರೀತಿ ತ್ಯಾಗಕ್ಕೆ ಸಿಕ್ಕ ಪ್ರತಿಫಲ ಇದು. ನಾನು ಹೆಚ್ಚೇನು ಮಾತಾಡಲ್ಲ, ಆದರೆ ಇಂದು ಈ ತ್ಯಾಗವನ್ನು ಜೋರಾಗಿ ಹೇಳಲು ಸರಿಯಾದ ದಿನವೆಂದು ಭಾವಿಸಿದೆ. ಅಮ್ಮ ಇದು ನಿನಗಾಗಿ, ಎಲ್ಲವೂ ನಿನಗಾಗಿ. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಾಯಿ ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದಾಗ ಮಕ್ಕಳ ಓದಿಗಾಗಿ ಕೇವಲ 3,000 ರೂ. ವೇತನದ ಸರ್ಕಾರಿ ಗುತ್ತಿಗೆ ಶಿಕ್ಷಕಿ ಕೆಲಸಕ್ಕೆ ಸೇರಿಕೊಂಡಿದ್ದರು. ಭುವನೇಶ್ವರದಿಂದ ಹನ್ನೆರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ಒಡಿಶಾದ ರಾಯಗಡ ಜಿಲ್ಲೆಯ ಅಂಬೊಡಾಲದಲ್ಲಿ ಕೆಲಸ ಸಿಕ್ಕಿತ್ತು. ಆ ವೇಳೆಗೆ ನಾನು 5 ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಮ್ಮ 3 ನೇ ತರಗತಿ ಓದುತ್ತಿದ್ದ. ಮಕ್ಕಳನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಪ್ರತಿ ಬಾರಿ ನಮ್ಮನ್ನು ಬಿಟ್ಟು ಹೋಗುವಾಗಲೂ ಕಣ್ಣೀರು ಹಾಕುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು, ನನಗೆ ಎನ್‌ಐಟಿ ತಿರುಚ್ಚಿಯಲ್ಲಿ ಸೀಟು ಸಿಕ್ಕಾಗ, ಅಡ್ಮಿಶನ್ ಹಾಗೂ ಹಾಸ್ಟೆಲ್ ಶುಲ್ಕ ಸೇರಿ ಸರಿಸುಮಾರು 1.25 ಲಕ್ಷ ರೂ ಅಗತ್ಯವಿತ್ತು. ಆ ವೇಳೆಗೆ ಅಮ್ಮನ ಬಳಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ ಹಿಂದೆ ಮುಂದೆ ಯೋಚಿಸದೇ ನನ್ನ ಓದಿಗಾಗಿ ಚಿನ್ನದ ಬಳೆಗಳನ್ನು ಅಡವಿಟ್ಟರು. ಇಬ್ಬರು ಮಕ್ಕಳಿಗೂ ತಲಾ 60 ರಿಂದ 70 ಸಾವಿರ ರೂ ಬೆಲೆ ಬಾಳುವ ಲ್ಯಾಪ್‌ಟಾಪ್‌ಗಳನ್ನು ಅದೇನೋ ಮಾಡಿ ಕೊಡಿಸಿದ್ದರು ಎಂದು ತನ್ನ ತಾಯಿಯ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ.

ತನ್ನ ತಾಯಿ ತನ್ನ ಆದಾಯದಲ್ಲಿ ಏನನ್ನೂ ಉಳಿಸಲು ಸಾಧ್ಯವಿರಲಿಲ್ಲ. ಆದರೆ ಮಕ್ಕಳಿಗಾಗಿ ಎಲ್ಲವನ್ನೂ ಮಾಡಿದರು. ಇಂದು ನನ್ನ ದುಡಿಮೆ ಹಾಗೂ ನಾನು ಏನು ಮಾಡುತ್ತಿದ್ದರೂ ಅದು ಅವರಿಗಾಗಿ ಅರ್ಪಿತವಾಗಿದೆ. ನಾನು ಅವರಿಗೆ ಎಂದಿಗೂ ಕೃತಜ್ಞತರಾಗಿರಲೂ ಸಾಧ್ಯವಿಲ್ಲ. ಅವರು ನಮಗೆ ಕೊಟ್ಟಿರುವುದರಲ್ಲಿ ಒಂದು ಸಣ್ಣ ಭಾಗವಾದರೂ, ಅವಳಿಗೆ ಅರ್ಹವಾದ ಜೀವನವನ್ನು ನೀಡಲು ನಾನು ನನ್ನ ಕೈಲಾದಷ್ಟು ಮಾಡುತ್ತಲೇ ಇರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೆತ್ತವರನ್ನು ತಾನು ಕೆಲಸ ಮಾಡುವ ಅಮೆಜಾನ್ ಆಫೀಸಿಗೆ ಕರೆತಂದ ಉದ್ಯೋಗಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಎಂದಿಗೂ ಅಪರಿಚಿತರ ಬಗ್ಗೆ ಇಷ್ಟು ಹೆಮ್ಮೆಪಟ್ಟಿಲ್ಲ. ಧನ್ಯವಾದಗಳು ಎಂದಿದ್ದಾರೆ. ಇನ್ನೊಬ್ಬರು, ಅವರು ಮಾಡಿದ ತ್ಯಾಗವೇ ನಿಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಮುಂದೆ ನಿಮಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್​ಲೈನ್​ಗಳಿವೆ, ಗಮನಿಸಿ – Kannada News | Income Tax and financial tasks deadlines in 2026 July Month

ನವದೆಹಲಿ, ಜೂನ್ 29: ಭಾರತದ ಟ್ಯಾಕ್ಸ್ ಕ್ಯಾಲೆಂಡರ್‌ನಲ್ಲಿ ಜುಲೈ ತಿಂಗಳು ಅತ್ಯಂತ ಬಿಡುವಿಲ್ಲದ ಮತ್ತು ಪ್ರಮುಖವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಸಾಮಾನ್ಯ ಸಂಬಳದಾರರಿಂದ ಹಿಡಿದು ಕಂಪನಿಗಳವರೆಗೆ ಹಲವು ಪ್ರಮುಖ ತೆರಿಗೆ ನಿಯಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ವೈಯಕ್ತಿಕ ತೆರಿಗೆ ಪಾವತಿದಾರರು (Individual tax payers) ಜುಲೈ 31ರೊಳಗೆ ಐಟಿಆರ್ ಫೈಲಿಂಗ್ ಮಾಡಬೇಕು. ಹಾಗೆಯೇ, ಆದಾಯ ತೆರಿಗೆಗೆ (Income Tax) ಸಂಬಂಧಿಸಿದ ಒಂದಷ್ಟು ಹಣಕಾಸು ಕಾರ್ಯಗಳಿಗೆ ಜುಲೈನಾದ್ಯಂತ ಬೇರೆ ಬೇರೆ ಡೆಡ್​ಲೈನ್​ಗಳಿವೆ. ಈ ಕುರಿತು ಮಾಹಿತಿ ಇಲ್ಲಿದೆ:

ಜುಲೈ 7: ಟಿಡಿಎಸ್ (TDS) ಮತ್ತು ಟಿಸಿಎಸ್ (TCS) ಪಾವತಿ

ಜೂನ್ 2026 ರ ತಿಂಗಳಿನಲ್ಲಿ ಕಡಿತಗೊಳಿಸಲಾದ ಟಿಡಿಎಸ್ (Tax Deducted at Source) ಮತ್ತು ಟಿಸಿಎಸ್ (Tax Collected at Source) ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಮಾ ಮಾಡಲು ಜುಲೈ 7 ಕೊನೆಯ ದಿನವಾಗಿದೆ.

ಒಂದು ವೇಳೆ ಅಸೆಸಿಂಗ್ ಅಧಿಕಾರಿಯಿಂದ ತ್ರೈಮಾಸಿಕ (Quarterly) ಟಿಡಿಎಸ್ ಪಾವತಿಗೆ ಅನುಮತಿ ಪಡೆದಿದ್ದರೆ, ಏಪ್ರಿಲ್-ಜೂನ್ 2026 ರ ಮೊದಲ ತ್ರೈಮಾಸಿಕದ ಟಿಡಿಎಸ್ ಹಣವನ್ನು ಜಮಾ ಮಾಡಲು ಕೂಡ ಇದೇ ಕೊನೆಯ ದಿನಾಂಕವಾಗಿದೆ.

ಜೂನ್ ತಿಂಗಳಲ್ಲಿ ಖರೀದಿದಾರರಿಂದ ಪಡೆದ ‘ಫಾರ್ಮ್ 127’ ಮತ್ತು ಜೂನ್ ತ್ರೈಮಾಸಿಕದಲ್ಲಿ ಸ್ವೀಕರಿಸಿದ ‘ಫಾರ್ಮ್ 121’ ರ ಪ್ರಕಟಣೆಗಳನ್ನು (Declarations) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಕೂಡ ಜುಲೈ 7 ಕೊನೆಯ ದಿನ.

ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?

ಜುಲೈ 15: ಟಿಡಿಎಸ್ ಪ್ರಮಾಣಪತ್ರಗಳು ಮತ್ತು ವರದಿಗಳ ಸಲ್ಲಿಕೆ

ಜುಲೈ 15 ರೊಳಗೆ ವಿವಿಧ ತೆರಿಗೆ ವರದಿಗಳು, ಟಿಡಿಎಸ್ ಪ್ರಮಾಣಪತ್ರಗಳು (TDS Certificates) ಮತ್ತು ರೆಮಿಟೆನ್ಸ್ ವರದಿಗಳ ಸಲ್ಲಿಕೆ ಸೇರಿದಂತೆ ಹಲವು ಪ್ರಮುಖ ಶಾಸನಬದ್ಧ ಕೆಲಸಗಳನ್ನು ಮುಗಿಸಬೇಕಾಗುತ್ತದೆ.

ಜುಲೈ 30: ಚಲನ್-ಕಮ್-ಸ್ಟೇಟ್‌ಮೆಂಟ್ ಸಲ್ಲಿಕೆ

ಜೂನ್ ತಿಂಗಳಿನಲ್ಲಿ ಸೆಕ್ಷನ್ 194-IA (ಆಸ್ತಿ ಖರೀದಿ), 194-IB (ಬಾಡಿಗೆ ಪಾವತಿ), ಮತ್ತು 194-M ಅಡಿಯಲ್ಲಿ ಕಡಿತಗೊಳಿಸಿದ ಟಿಡಿಎಸ್ ಮೊತ್ತಕ್ಕೆ ಸಂಬಂಧಿಸಿದ ಚಲನ್ ಮತ್ತು ವಿವರಗಳ ಸ್ಟೇಟ್‌ಮೆಂಟ್ ಸಲ್ಲಿಸಲು ಜುಲೈ 30 ಗಡುವಾಗಿದೆ.

ಜುಲೈ 31: ಐಟಿಆರ್ ಸಲ್ಲಿಕೆಗೆ ಡೆಡ್​ಲೈನ್

ಸಂಬಳದಾರರಿಗೆ ಐಟಿಆರ್ (ITR) ಸಲ್ಲಿಕೆಯ ಅಂತಿಮ ದಿನವಾಗಿದೆ. ಇದು ಇಡೀ ತಿಂಗಳಲ್ಲೇ ಅತ್ಯಂತ ಪ್ರಮುಖವಾದ ಡೆಡ್‌ಲೈನ್ ಆಗಿದೆ.

ಯಾರಿಗೆ ಅನ್ವಯ? ಯಾವುದೇ ಆಡಿಟ್ ಅಗತ್ಯವಿಲ್ಲದ ಸಾಮಾನ್ಯ ಸಂಬಳ ಪಡೆಯುವ ಉದ್ಯೋಗಿಗಳು, ಪೆನ್ಷನ್ ದಾರರು ಮತ್ತು ಸಣ್ಣ ಹೂಡಿಕೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR-1 ಅಥವಾ ITR-2 ಫಾರ್ಮ್‌ಗಳನ್ನು) ಸಲ್ಲಿಸಲು ಜುಲೈ 31, 2026 ಕೊನೆಯ ದಿನವಾಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ?

ಸಲ್ಲಿಸಬೇಕಿರುವ ಇತರ ಪ್ರಮುಖ ಫಾರ್ಮ್‌ಗಳು (ಜುಲೈ 31)

  • ಫಾರ್ಮ್ 10E: ಹಿಂಬಾಕಿ (Arrears) ಅಥವಾ ಮುಂಗಡವಾಗಿ ಸಂಬಳ ಪಡೆದಾಗ ಸೆಕ್ಷನ್ 89 ರ ಅಡಿಯಲ್ಲಿ ತೆರಿಗೆ ವಿನಾಯಿತಿ ಕ್ಲೈಮ್ ಮಾಡಲು ಉದ್ಯೋಗಿಗಳು ಫಾರ್ಮ್ 10E ಅನ್ನು ಜುಲೈ 31ರೊಳಗೆ ಸಲ್ಲಿಸಬೇಕು.
  • ಫಾರ್ಮ್ 10-IA: ಸೆಕ್ಷನ್ 80DD ಮತ್ತು 80U ಅಡಿಯಲ್ಲಿ ವಿಕಲಚೇತನರ ವೈದ್ಯಕೀಯ ವೆಚ್ಚಗಳ ತೆರಿಗೆ ವಿನಾಯಿತಿ ಪಡೆಯಲು ವೈದ್ಯಕೀಯ ಮಂಡಳಿಯಿಂದ ಪಡೆದ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬೇಕು.
  • ಫಾರ್ಮ್ 138: ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಸಂಬಳದ ಟಿಡಿಎಸ್ ತ್ರೈಮಾಸಿಕ ಸ್ಟೇಟ್‌ಮೆಂಟ್ ಅಥವಾ ಹಿರಿಯ ನಾಗರಿಕರಿಗೆ ಪಾವತಿಸಿದ ಆದಾಯದ ವಿವರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.

ಗಮನಿಸಿ: ತಜ್ಞರ ಪ್ರಕಾರ ಈ ಬಾರಿ ಐಟಿಆರ್ ಸಲ್ಲಿಕೆಯ ಗಡುವನ್ನು ವಿಸ್ತರಿಸುವ (Deadline Extension) ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ, ಕೊನೆಯ ಕ್ಷಣದ ವೆಬ್‌ಸೈಟ್ ತಾಂತ್ರಿಕ ದೋಷಗಳು ಅಥವಾ ದಂಡವನ್ನು ತಪ್ಪಿಸಲು ಜುಲೈ 31 ರ ಒಳಗಾಗಿಯೇ ನಿಮ್ಮ ರಿಟರ್ನ್ಸ್ ಸಲ್ಲಿಸುವುದು ಸೂಕ್ತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಮಗಳೂರಿನಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ: ಸಿಡಿದೆದ್ದ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ – Kannada News | Unauthorized Graves Spark Fresh Manikyadhara Controversy; Hindu Organizations Stage Protest

ಚಿಕ್ಕಮಗಳೂರು, ಜೂನ್​ 29: ಹಿಂದೂ ಮುಸ್ಲಿಂರ ನಡುವಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿನ (baba budangiri dargah) ವಿವಾದದ ಜೊತೆಗೆ ಬಾಬಾ ಬುಡನ್ ಸ್ವಾಮಿ ದರ್ಗಾ ಸಮೀಪದ ಮಾಣಿಕ್ಯಧಾರಾ ಬಳಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಚಂದ್ರದ್ರೋಣ (Chandradrona) ಪರ್ವತದ ಸಾಲಿನಲ್ಲಿ ಅನಧಿಕೃತ ಗೋರಿಗಳನ್ನ ನಿರ್ಮಾಣ ಮಾಡಿ, ಹಸಿರು ಚಾದರ ಹೊದಿಸಿ, ಹೊಸ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ ಗೋರಿಗಳಿರುವ ಸ್ಥಳದಲ್ಲೇ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ.

ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೊಂದು ವಿವಾದ ಮುನ್ನೆಲೆ

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ‌ ದರ್ಗಾದ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೊಂದು ವಿವಾದ ಮುನ್ನೆಲೆಗೆ ಬಂದಿದೆ. ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ‌ಸ್ವಾಮಿ‌ ದರ್ಗಾ ಸಮೀಪದ ಮಾಣಿಕ್ಯಧಾರಾ ಸೇರಿದಂತೆ ಮಾಣಿಕ್ಯಧಾರಾಕ್ಕೆ ತೆರಳುವ ರಸ್ತೆಯಲ್ಲಿ ಅನಧಿಕೃತವಾಗಿ ಮರಗಳ ಕೆಳಗೆ ಗೋರಿಗಳನ್ನ ನಿರ್ಮಿಸಿ, ಹಸಿರು ಬಟ್ಟೆಗಳನ್ನ ಹೊದಿಸಿ ಹೊಸ‌ಹೊಸ‌ ಆಚರಣೆ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.

ಇದನ್ನೂ ಓದಿ: 2000 ಅಡಿ ಆಳದ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ

ಈ ಕುರಿತಾಗಿ ಫೋಟೋಗಳನ್ನ ಬಿಡುಗಡೆ ಮಾಡಿ ಏಕಾಏಕಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮುಂಭಾಗ ಪ್ರತಿಭಟನೆ ಮಾಡಲಾಗಿದೆ. ಇನ್ನೂ ಸಂಪೂರ್ಣ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತ ಗೋರಿಗಳ ನಿರ್ಮಾಣ ಮಾಡಿ ಹೊಸ ಆಚರಣೆ ಮಾಡುವ ಮೂಲಕ ಸಂಪೂರ್ಣ ಇಸ್ಲಾಮೀಕರಣ ಮಾಡುವ ಸಂಚು ಎಂದು ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿವೆ.

ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳಿಂದ ಪಟ್ಟು

ಇನ್ನು ವಿವಾದ ಬೆನ್ನಲ್ಲೇ ಮುಜರಾಯಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ  ಗೋರಿಗಳಿರುವ ಮಾಣಿಕ್ಯಧಾರಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಿಪಿಎಸ್​ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳ ಮುಖಂಡ ರಘು ಸಕಲೇಶಪುರ ನೇತೃತ್ವದಲ್ಲಿ ಹಿಂದೂ‌ ಸಂಘಟನೆಗಳು ಮನವಿ ಮಾಡಿವೆ. ಹೊಸ ಆಚರಣೆ ನಡೆಸಿದವರು ಯಾರು ಎಂಬುದರ ಮಾಹಿತಿ ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರವಾಸಿಗರ ಸ್ವರ್ಗದಲ್ಲಿ ಹೊಸ ರೂಲ್ಸ್: ಚಿಕ್ಕಮಗಳೂರು ಟ್ರಿಪ್ ಹೋಗುವವರು ತಿಳಿದುಕೊಳ್ಳಲೇಬೇಕು

ಸದ್ಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದದ ಬಳಿಕ ಚಂದ್ರದ್ರೋಣ ಪರ್ವತದ ಸಾಲಿನ ಮತ್ತೊಂದು ಸ್ಥಳ ಮಾಣಿಕ್ಯಧಾರಾದಲ್ಲಿ ವಿವಾದ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ಕ್ರಮಕೈಗೊಳ್ಳಲಿದ್ದಾರೆ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ವಾರಣಾಸಿ’ ಸಿನಿಮಾ ಅಬ್ಬರ; 3,500 ಜೂನಿಯರ್ ಆರ್ಟಿಸ್ಟ್‌ಗಳ ಜತೆ ಮಹೇಶ್ ಬಾಬು ಮಹಾಯುದ್ಧ – Kannada News | SS Rajamouli to shoot Varanasi movie massive war sequence ft Mahesh Babu and 3500 junior artists

ಪ್ರಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ (SS Rajamouli) ಸಾರಥ್ಯದಲ್ಲಿ ಮೂಡಿಬರುತ್ತಿರುವ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ನಟನೆಯ ಬಹುನಿರೀಕ್ಷಿತ ಚಿತ್ರ ‘ವಾರಣಾಸಿ’ (Varanasi) ಚಿತ್ರೀಕರಣದ ಬಗ್ಗೆ ರೋಮಾಂಚನಕಾರಿ ಅಪ್‌ಡೇಟ್ ಒಂದು ಹೊರಬಿದ್ದಿದೆ. ಜುಲೈ 7ರಿಂದ ಹೈದರಾಬಾದ್‌ನಲ್ಲಿ ಚಿತ್ರದ ಬೃಹತ್ ಶೂಟಿಂಗ್ ಶೆಡ್ಯೂಲ್ ಆರಂಭವಾಗಲಿದ್ದು, ಭಾರತೀಯ ಚಿತ್ರರಂಗದಲ್ಲೇ ಹಿಂದೆಂದೂ ಕಾಣದ ಭೀಕರ ಯುದ್ಧದ ದೃಶ್ಯವೊಂದನ್ನು ಸೆರೆಹಿಡಿಯಲು ರಾಜಮೌಳಿ ಸಜ್ಜಾಗಿದ್ದಾರೆ.

‘ಮಿಡ್-ಡೇ’ ವರದಿಯ ಪ್ರಕಾರ, ಈ ಯುದ್ಧದ ದೃಶ್ಯವು ರಾಜಮೌಳಿ ಅವರ ಈ ಹಿಂದಿನ ‘ಬಾಹುಬಲಿ’ ಅಥವಾ ‘ಆರ್‌ಆರ್‌ಆರ್‌’ ಚಿತ್ರಗಳಿಗಿಂತಲೂ ಮಿಗಿಲಾದ ಬೃಹತ್ ಕ್ಯಾನ್ವಾಸ್‌ನಲ್ಲಿ ಮೂಡಿಬರಲಿದೆ. ಈ ಅತ್ಯಂತ ಸಂಕೀರ್ಣವಾದ ಶೂಟಿಂಗ್‌ಗಾಗಿ ಬರೋಬ್ಬರಿ 3,500 ಜೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಯಕ ಮಹೇಶ್ ಬಾಬು ಈ ಬೃಹತ್ ಸೈನಿಕರ ದಂಡಿನ ನಡುವೆ ಹೋರಾಡಲಿದ್ದು, ಇದಕ್ಕಾಗಿ ಕಳೆದ ಕೆಲವು ವಾರಗಳಿಂದ ಭರ್ಜರಿ ಪೂರ್ವಸಿದ್ಧತೆಗಳು ನಡೆದಿವೆ.

ಲೈವ್ ಆಗಿ ಶೂಟ್ ಮಾಡಲಾಗುವ 3,500 ಕಲಾವಿದರ ದೃಶ್ಯಗಳು ಕೇವಲ ಆರಂಭವಷ್ಟೇ. ಈ ಯುದ್ಧದ ಅಸಲಿ ದೃಶ್ಯವೈಭವವು ಪೋಸ್ಟ್ ಪ್ರೊಡಕ್ಷನ್ ಹಾಗೂ ಗ್ರಾಫಿಕ್ಸ್ ಕೆಲಸಗಳ ಮೂಲಕ ಅನಾವರಣಗೊಳ್ಳಲಿದೆ. ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಬಳಸಿ, ಶೂಟ್ ಮಾಡಲಾದ ಕಲಾವಿದರ ಸಂಖ್ಯೆಯನ್ನು ಡಿಜಿಟಲ್ ಆಗಿ ಹೆಚ್ಚಿಸಲಾಗುತ್ತದೆ. ತೆರೆಯ ಮೇಲೆ ಏಕಕಾಲದಲ್ಲಿ ಬರೋಬ್ಬರಿ 50 ಸಾವಿರ ವಾನರರು ಇರುವಂತೆ ದೃಶ್ಯವನ್ನು ಸೃಷ್ಟಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

ಇತ್ತೀಚೆಗಷ್ಟೇ ಪ್ಯಾರಿಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಮೌಳಿ, ಯುರೋಪಿಯನ್ ಪ್ರೇಕ್ಷಕರೆದುರು ‘ವಾರಣಾಸಿ’ ಚಿತ್ರದ ಮೊದಲ ಗ್ಲಿಂಪ್ಸ್ ಪ್ರದರ್ಶಿಸಿದ್ದರು. ಈ ಮೊದಲ ಝಲಕ್‌ಗೆ ಅಲ್ಲಿನ ಪ್ರೇಕ್ಷಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಜಾಗತಿಕ ಮಟ್ಟದಲ್ಲಿ ದುಪ್ಪಟ್ಟಾಗಿದೆ. ಆದ್ದರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ರಿಲೀಸ್​​ಗೆ 7 ತಿಂಗಳಿರುವಾಗಲೇ ‘ವಾರಣಾಸಿ’ ಶೂಟ್ ಪೂರ್ಣಗೊಳಿಸಲಿದ್ದಾರೆ ರಾಜಮೌಳಿ

‘ವಾರಣಾಸಿ’ ಒಂದು ಭವ್ಯವಾದ ಪೌರಾಣಿಕ ಆ್ಯಕ್ಷನ್ ಸಿನಿಮಾವಾಗಿದ್ದು, ನಾಯಕ ಬೇರೆ ಬೇರೆ ಕಾಲಘಟ್ಟಗಳಿಗೆ ಹೋಗಿ ಬರುವ ಡಿಫರೆಂಟ್ ಕಥಾಹಂದರವನ್ನು ಹೊಂದಿರಲಿದೆ. ಮಹೇಶ್ ಬಾಬು ಜೊತೆಗೆ ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ 2027ರ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ – Kannada News | These items should not be given as gifts to anyone

ನಮ್ಮವರಿಗೆ, ಅದರಲ್ಲೂ ನಾವು ಪ್ರೀತಿಸುವ ಜೀವಕ್ಕೆ ಬಗೆಬಗೆಯ ಉಡುಗೊರೆಗಳನ್ನು (gifts) ನೀಡುವುದೆಂದರೆ ಅದೇನೋ ಸಂತೋಷ. ಇಂತಹ ಸಣ್ಣಪುಟ್ಟ ಸರ್‌ಪ್ರೈಸ್‌ಗಳು ಸಂಬಂಧಗಳಿಗೆ ಮಾಧುರ್ಯವನ್ನು ನೀಡುತ್ತದೆ. ಅದೇ ಈ ಗಿಫ್ಟ್‌ ನೀಡುವ ವಿಚಾರದಲ್ಲಿ ಮಾಡುವ ಕೆಲವೊಂದು ತಪ್ಪುಗಳು ಸಂಬಂಧವನ್ನೇ ಹಾಳು ಮಾಡುವ ಸಾಧ್ಯತೆ ಇದೆಯಂತೆ. ಹೌದು ಉಡುಗೊರೆಯನ್ನು ನೀಡುವಾಗ ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿ, ಲವರ್‌ಗೆ ಈ ಕೆಲವೊಂದು ನಿರ್ಧಿಷ್ಟ ವಸ್ತುಗಳನ್ನು ಉಡುಗೊರೆ ನೀಡಿದರೆ ಇದರಿಂದ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಎಂತಹ ವಸ್ತುಗಳನ್ನು ಗಿಫ್ಟ್‌ ನೀಡುವುದು ಬಹುದೊಡ್ಡ ತಪ್ಪು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ:

ಮುಳುಗುತ್ತಿರುವ ಹಡಗಿನ ಫೋಟೋ: ನೀವು ನಿಮ್ಮ ಸಂಗಾತಿಗೆ ಮುಳುಗುತ್ತಿರುವ ಹಡಗಿನ ಚಿತ್ರವನ್ನು ಎಂದಿಗೂ ಉಡುಗೊರೆಯಾಗಿ ನೀಡಬಾರದು. ಅಂತಹ ಚಿತ್ರವನ್ನು ವಾಸ್ತುಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಸಂಬಂಧವನ್ನು ಹದಗೆಡಿಸುತ್ತದೆ ಅಷ್ಟೇ ಅಲ್ಲದೆ  ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು.

ಕಪ್ಪು ಬಣ್ಣದ ಬಟ್ಟೆ: ಹೆಚ್ಚಿನ ಜನರು ತಮ್ಮ ಸಂಗಾತಿಗೆ ಸ್ಟೈಲಿಷ್‌ ಬಟ್ಟೆಗಳನ್ನು ಆಗಾಗ್ಗೆ ಗಿಫ್ಟ್‌ ಮಾಡುತ್ತಿರುತ್ತಾರೆ. ಹೀಗೆ ನೀವೇನಾದರೂ ಕಪ್ಪು ಬಣ್ಣದ ಬಟ್ಟೆಯನ್ನು ಗಿಫ್ಟ್‌ ಮಾಡಿದ್ರೆ ಇದು ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಂಬಿಕೆಗಳ ಪ್ರಕಾರ ಕಪ್ಪು ಬಣ್ಣವು ನಕಾರಾತ್ಮಕತೆ, ದುಃಖ ಮತ್ತು ಪ್ರತ್ಯೇಕತೆಯ ಸಂಕೇತವಾಗಿದೆ, ಹಾಗಾಗಿ ಕಪ್ಪು ಬಣ್ಣದ ಬಟ್ಟೆಯನ್ನು ಉಡುಗೊರೆ ನೀಡಿದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ತಪ್ಪು ತಿಳುವಳಿಕೆ, ಜಗಳಗಳು ನಡೆಯುವ ಸಾಧ್ಯತೆ ಇರುತ್ತದೆ.

ಶೂಗಳು ಮತ್ತು ಚಪ್ಪಲಿಗಳು: ಹೆಚ್ಚಿನವರು ಶೂ, ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಲು ಇಷ್ಟಪಡುತ್ತಾರೆ. ಆದರೆ ನೀವು ಈ ಉಡುಗೊರೆಗಳನ್ನು ನೀಡುವ ತಪ್ಪನ್ನು ಮಾಡಬೇಡಿ. ಶೂ ಮತ್ತು ಚಪ್ಪಲಿಗಳನ್ನು ನೀಡುವುದರಿಂದ ಸಂಗಾತಿಗಳ ನಡುವೆ ವಾದಗಳು ಉಂಟಾಗುತ್ತವೆ ಮತ್ತು ಶೀಘ್ರದಲ್ಲೇ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಶೂ ಉಡುಗೊರೆ ನೀಡುವುದನ್ನು ಪ್ರತ್ಯೇಕತೆಯ ಸಂಕೇತವೆಂದು ಪರಿಗಣಿಸಲಾಗಿದೆ.

ಕರವಸ್ತ್ರ: ಯಾರಿಗೂ ಕರವಸ್ತ್ರಗಳನ್ನು ಉಡುಗೊರೆಯಾಗಿ ನೀಡಬಾರದು. ಅದರಲ್ಲೂ ವಿಶೇಷವಾಗಿ, ದಂಪತಿಗಳು ಪರಸ್ಪರ ಕರವಸ್ತ್ರಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು. ಇದು ಗಂಡ ಮತ್ತು ಹೆಂಡತಿಯ ನಡುವೆ ದುಃಖ ಮತ್ತು ಸಂಘರ್ಷದ ಸಾಧ್ಯತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಪುರುಷರು ಮದುವೆಗೂ ಮುನ್ನ ಸಂಗಾತಿಯ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳಲೇಬೇಕು

ಸುಗಂಧ ದ್ರವ್ಯ: ಸುಗಂಧದ್ರವ್ಯ ಸಾಮಾನ್ಯ ಗಿಫ್ಟ್‌ ಆಯ್ಕೆಗಳಲ್ಲಿ ಒಂದಾಗಿದ್ದು, ಹೆಚ್ಚಿನವರು ಸುಗಂಧ ದ್ರವ್ಯವನ್ನು ತಮ್ಮವರಿಗೆ ಗಿಫ್ಟ್‌ ಮಾಡುತ್ತಾರೆ. ಆದರೆ ಈ ವಸ್ತುವನ್ನು ಯಾವುದೇ ಕಾರಣಕ್ಕೂ ಗಿಫ್ಟ್‌ ಮಾಡಬಾರದಂತೆ. ಸುಗಂಧ ದ್ರವ್ಯವನ್ನು ಉಡುಗೊರೆಯಾಗಿ ನೀಡುವುದನ್ನು ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಪರ್ಫ್ಯೂಮ್‌ ಪರಿಮಳ ಸ್ವಲ್ಪ ಸಮಯದ ಬಳಿಕ ಮಾಯವಾಗುವಂತೆ, ಪ್ರೀತಿ ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಗಾಜಿನ ವಸ್ತುಗಳು: ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದನ್ನು ತಪ್ಪಿಸಬೇಕು. ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಾಜಿನ ವಸ್ತು ಒಡೆದು ಹೋಗುವಂತೆ ಗಾಜಿನ ವಸ್ತುಗಳನ್ನು ಗಿಫ್ಟ್‌ ಮಾಡಿದ್ರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ. ಈ ರೀತಿಯ ಗಿಫ್ಟ್‌ಗಳು ಸಂಬಂಧದಲ್ಲಿ ಜಗಳ ಮತ್ತು ಉದ್ವಿಗ್ನತೆಯನ್ನು ಉಂಟು ಮಾಡುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗಾಜಿನ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಂಬಂಧಗಳನ್ನು ದುರ್ಬಲಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version