ದಿ ಫೌಂಡ್ರಿ- 5,000 ರೂ ಶುಲ್ಕ, 90 ದಿನ ವಸತಿ, ಹೊಸ ಸ್ಟಾರ್ಟಪ್ ಕಟ್ಟಿ, ಹೂಡಿಕೆದಾರರ ಬೆಂಬಲವೂ ಪಡೆಯಿರಿ – Kannada News | The Foundry by Nikhil Kamath intends to help aspiring entrepreneurs to build products

ಬೆಂಗಳೂರು, ಜೂನ್ 29: ಭಾರತದ ಪ್ರಸಿದ್ಧ ಬಿಲಿಯನೇರ್ ಮತ್ತು ಝೀರೋಧಾ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಫ್ಯೂಚರ್ ಗ್ರೂಪ್‌ನ ಕಿಶೋರ್ ಬಿಯಾನಿ ಮತ್ತು ಅಪ್‌ಗ್ರಾಡ್‌ನ ರೋನಿ ಸ್ಕ್ರೂವಾಲಾ ಮೊದಲಾದವರು ಸೇರಿ ‘ದಿ ಫೌಂಡ್ರಿ’ (The Foundery) ಎಂಬ ವಿನೂತನ ಸ್ಟಾರ್ಟ್‌ಅಪ್ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿದ್ದಾರೆ. ಇದನ್ನು ಸಾಂಪ್ರದಾಯಿಕ ಕಾಲೇಜು ಅಥವಾ ಬಿಸಿನೆಸ್ ಸ್ಕೂಲ್ ಎನ್ನುವ ಬದಲು “ಕೋ-ಫೌಂಡರ್ ಫ್ಯಾಕ್ಟರಿ” (ಸಹ-ಸಂಸ್ಥಾಪಕರನ್ನು ಸೃಷ್ಟಿಸುವ ಕಾರ್ಖಾನೆ) ಎಂದು ಕರೆಯಲಾಗುತ್ತಿದೆ. ಈಗಾಗಲೇ ಮೊದಲ ಬ್ಯಾಚ್ ಮುಗಿದಿದೆ. ಎರಡನೇ ಬ್ಯಾಚ್ ಸದ್ಯದಲ್ಲೇ ಆರಂಭವಾಗಬಹುದು. ಈ ಮೊದಲ ಬ್ಯಾಚ್​ನಿಂದ 20 ಬ್ರ್ಯಾಂಡ್​ಗಳನ್ನು ಹೊರತರಲಾಗುತ್ತಿದೆ ಎನ್ನುವ ಮಾಹಿತಿ ಇದೆ.

‘ದಿ ಫೌಂಡ್ರಿ’ ಎಂದರೇನು?

ಇದು 90 ದಿನಗಳ ಕಾಲ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ನಡೆಯುವ ವಸತಿ ಸಹಿತ (Residential) ಸ್ಟಾರ್ಟ್‌ಅಪ್ ಕಾರ್ಯಕ್ರಮವಾಗಿದೆ. ಇಲ್ಲಿ ಸಾಂಪ್ರದಾಯಿಕ ತರಗತಿಗಳ ಬದಲಾಗಿ ಪ್ರಾಯೋಗಿಕವಾಗಿ ಉದ್ಯಮವನ್ನು ಹೇಗೆ ಕಟ್ಟುವುದು ಎಂಬುದನ್ನು ಕಲಿಸಲಾಗುತ್ತದೆ. ನಿಖಿಲ್ ಕಾಮತ್ ಅವರ ಪ್ರಕಾರ, “ಯೂನಿವರ್ಸಿಟಿಗಳಲ್ಲಿ ನೀವು ಕಲಿಯುತ್ತೀರಿ, ಆದರೆ ಇಲ್ಲಿ ನೀವು ಗಳಿಸುತ್ತೀರಿ (There, you learn. Here, you earn).”

ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಐಡಿಯಾ ಇಲ್ಲದಿದ್ದರೂ, ದಿ ಫೌಂಡ್ರಿಯ ಬಿಸಿನೆಸ್ ವಾಲ್ಟ್‌ನಲ್ಲಿರುವ ಅತ್ಯುತ್ತಮ ಐಡಿಯಾಗಳನ್ನು ನೀಡಿ, ತಜ್ಞರ ಮಾರ್ಗದರ್ಶನದಲ್ಲಿ ಹೊಸ ಬ್ರ್ಯಾಂಡ್ ಅಥವಾ ಕಂಪನಿಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಲಾಗುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ದೇಶಾದ್ಯಂತ 13 ಬ್ಯಾಂಕ್ ರಜಾ ದಿನಗಳು; ಕರ್ನಾಟಕದಲ್ಲೆಷ್ಟು?

ಫೌಂಡ್ರಿ ಸೇರಲು ಏನು ಅರ್ಹತೆ (Eligibility)?

ಹೊಸದಾಗಿ ಉದ್ಯಮ ಆರಂಭಿಸಬೇಕೆಂಬ ಹಂಬಲವಿರುವ ಯುವಕರು, ವೃತ್ತಿಜೀವನದ ಮಧ್ಯದಲ್ಲಿರುವ ವೃತ್ತಿಪರರು (Mid-career professionals) ಮತ್ತು ಆರಂಭಿಕ ಹಂತದ ಸ್ಟಾರ್ಟ್‌ಅಪ್ ಸಂಸ್ಥಾಪಕರು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ: ಯಾವುದೇ ನಿರ್ದಿಷ್ಟ ಪದವಿ ಅಥವಾ ಕಾಲೇಜು ಸರ್ಟಿಫಿಕೇಟ್‌ಗಳ ಅಗತ್ಯವಿಲ್ಲ.

ಆಯ್ಕೆಯ ಮಾನದಂಡ: ಅಭ್ಯರ್ಥಿಗಳ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ (Problem Solving), ಸೃಜನಶೀಲತೆ, ಬದ್ಧತೆ ಮತ್ತು ಕಠಿಣ ಸನ್ನಿವೇಶಗಳನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು (Resilience) ನೋಡಿ ಆಯ್ಕೆ ಮಾಡಲಾಗುತ್ತದೆ. ಒಟ್ಟು ಸಲ್ಲಿಕೆಯಾಗುವ ಅರ್ಜಿಗಳಿಂದ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೊದಲು 5 ದಿನಗಳ ಬೂಟ್‌ಕ್ಯಾಂಪ್ ನಡೆಸಿ, ಬಳಿಕ ಅಂತಿಮವಾಗಿ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ದಿ ಫೌಂಡ್ರಿ ಅವಧಿ ಮತ್ತು ಶುಲ್ಕ ಎಷ್ಟಿದೆ?

ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ ‘ದಿ ಫೌಂಡ್ರಿ ಸೆಂಟರ್’ನಲ್ಲಿ 90 ದಿನಗಳ ಕಾಲ ಒಟ್ಟಿಗೆ ವಾಸಿಸುತ್ತಾ, ಉದ್ಯಮದ ಮಾದರಿಯನ್ನು ಸಿದ್ಧಪಡಿಸಬೇಕು.

ಅರ್ಜಿ ಶುಲ್ಕ: ಅರ್ಜಿ ಸಲ್ಲಿಸಲು ₹5,000 + GST ನೋಂದಣಿ ಶುಲ್ಕವಿರುತ್ತದೆ.

ತರಬೇತಿ ಶುಲ್ಕ: ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಪ್ರತ್ಯೇಕ ಕಾಲೇಜು ಫೀಸ್ ಇರುವುದಿಲ್ಲ. ಉಳಿದುಕೊಳ್ಳುವ ಮತ್ತು ಕಲಿಯುವ ಸಂಪೂರ್ಣ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ.

ಇದನ್ನೂ ಓದಿ: ಜೂನ್ 30 ಡೈಡ್​ಲೈನ್: ಎಲ್​ಪಿಜಿ ಇಕೆವೈಸಿ, ಐಟಿಆರ್ ಪರಿಶೀಲನೆ ಇತ್ಯಾದಿ ಹಣಕಾಸು ಕಾರ್ಯಗಳಿಗೆ ನಾಳೆಯ ಗಡುವು

ಫಂಡಿಂಗ್ ಮತ್ತು ಇಕ್ವಿಟಿ (Equity)

ಯಶಸ್ವಿಯಾಗಿ ಬ್ರ್ಯಾಂಡ್ ನಿರ್ಮಿಸುವ ಸ್ಟಾರ್ಟ್‌ಅಪ್‌ಗಳಿಗೆ ₹4 ಕೋಟಿವರೆಗೆ ಸೀಡ್ ಫಂಡಿಂಗ್ (Seed Funding) ನೀಡಲಾಗುತ್ತದೆ. ಇದರಲ್ಲಿ ಕಂಪನಿಯನ್ನು ಮುನ್ನಡೆಸುವ ಸಂಸ್ಥಾಪಕರಿಗೆ ಶೇ. 25 ರಷ್ಟು ಇಕ್ವಿಟಿ (ಷೇರು) ಸಿಗುತ್ತದೆ, ಉಳಿದ ಭಾಗವನ್ನು ಹೂಡಿಕೆದಾರರು ಮತ್ತು ಇಕೋಸಿಸ್ಟಮ್ ಹಂಚಿಕೊಳ್ಳುತ್ತದೆ.

ಮಾರ್ಗದರ್ಶಕರು (Mentorship): ಪೇಟಿಎಂನ ವಿಜಯ್ ಶೇಖರ್ ಶರ್ಮಾ, ಟೈಟಾನ್ ಕ್ಯಾಪಿಟಲ್‌ನ ಕುನಾಲ್ ಬಹ್ಲ್ ಮತ್ತು ರಾಜನ್ ಆನಂದನ್ ಅವರಂತಹ ಭಾರತದ ಪ್ರಮುಖ ಉದ್ಯಮಿಗಳು ಇಲ್ಲಿ ಭಾಗವಹಿಸುವ ಯುವಕರಿಗೆ ನೇರವಾಗಿ ಉದ್ಯಮದ ಪಾಠಗಳನ್ನು ಹೇಳಿಕೊಡಲಿದ್ದಾರೆ.

90 ದಿನದವರೆಗೂ ಇಲ್ಲದಿದ್ದರೆ ದಂಡ ಇರುತ್ತೆ; ಈ ಷರತ್ತು (Clawback Clause) ಗಮನಿಸಿ

ಒಪ್ಪಂದದ ಪ್ರಕಾರ, ಕಾರ್ಯಕ್ರಮದ ಮಧ್ಯದಲ್ಲೇ ಯಾರಾದರೂ ಕಾರಣವಿಲ್ಲದೆ ಹೊರನಡೆದರೆ ಅಥವಾ ಜವಾಬ್ದಾರಿಗಳನ್ನು ನಿಭಾಯಿಸದಿದ್ದರೆ, ಸಂಸ್ಥೆಯು ಅವರ ಮೇಲೆ ವೆಚ್ಚ ಮಾಡಿದ ಸ್ಥಿರ ಶುಲ್ಕ (ಸುಮಾರು ₹10 ಲಕ್ಷ ಮತ್ತು ದಿನಕ್ಕೆ ₹20,000 ನಂತೆ) ರಿಕವರಿ ಮಾಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

ವರ್ಷದ ಹಿಂದೆ ಆರಂಭವಾದ ದಿ ಫೌಂಡ್ರಿ ಈಗಾಗಲೇ ಕಾರ್ಯಾರಂಭಗೊಂಡಿದೆ. ಮೊದಲ ಬ್ಯಾಚ್ ಶುರುವಾಗಿ ಮುಗಿದುಹೋಗಿದೆ. ಮೂಲ ಪರಿಕಲ್ಪನೆ ಪ್ರಕಾರ 30 ಮಂದಿಯ ಬ್ಯಾಚ್​ನ ಗುರಿ ಹೊಂದಲಾಗಿತ್ತು. ಆದರೆ, 26 ಮಂದಿಯನ್ನು ಮಾತ್ರ ಸೇರಿಸಿಕೊಳ್ಳಲಾಗಿತ್ತು. ಎರಡನೇ ಬ್ಯಾಚ್ ಇನ್ನೂ ಶುರುವಾಗಿಲ್ಲ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಅದರ ಅಧಿಕೃತ ವೆಬ್​ಸೈಟ್ ನೋಡಿ:  www.thefoundery.in/

ನಿಖಿಲ್ ಕಾಮತ್, ರೋನಿ ಸ್ಕ್ರೂವಾಲಾ ಮೊದಲಾದವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಚರ್ಚೆ ಮಾಡಿರುವ ವಿಡಿಯೋ ಇಲ್ಲಿದೆ:

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:33 pm, Mon, 29 June 26

Source link

ವಿಜಯೇಂದ್ರನನ್ನು ಕಿತ್ತು ಬಿಸಾಕಿ: ಆಡಿಯೋ ವೈಲರ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು – Kannada News | Audio Is Not Mine, I Wont React: DV Sadananda Gowda On Alleged Viral Audio On BY Vijayendra

ಬೆಂಗಳೂರು, (ಜೂನ್ 29): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಉಚ್ಚಾಟನೆ ಕುರಿತು ಮಾಜಿ ಸಿಎಂ ಸದಾನಂದಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸದಾನಂದಗೌಡರು, ಇದು ತಮ್ಮ ವಿರುದ್ಧದ ಪಿತೂರಿ ಎಂದು ಆರೋಪಿಸಿದ್ದು, ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ತಾರಕಕ್ಕೇರಿದೆ. ಇನ್ನು ಆಡಿಯೋ ವೈರಲ್ ಸಂಬಂಧ ಸದಾನಂದಗೌಡ ಪ್ರತಿಕ್ರಿಯಿಸಲು ನಿರಾಕರಿಸಿದಾದರೂ ಒಂದೆಡೆರು ಮಾತುಗಳನ್ನಾಡಿದ್ದಾರೆ. ನೋ ಕಾಮೆಂಟ್ಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವಿಜಯೇಂದ್ರರನ್ನ ಕೆಳಗಿಳಿಸಲು ಪ್ಲ್ಯಾನ್? ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್

Source link

ಕರ್ನಾಟಕದಲ್ಲಿ SIR ಎಲ್ಲಿಂದ ಎಲ್ಲಿಯವರೆಗೆ; ಮತದಾರರು ಏನು ಮಾಡ್ಬೇಕು? ಇಲ್ಲಿದೆ ವಿವರ – Kannada News | Special Intensive Revision in Karnataka: From Where to Where and What Voters Should Do

ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್Image Credit source: tv9 kannada

ಬೆಂಗಳೂರು, ಜೂನ್​​ 29: ಕರ್ನಾಟಕದಲ್ಲಿ ನಾಳೆಯಿಂದ (ಜೂನ್​​ 29) ಆರಂಭಗೊಳ್ಳಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ರಾಜ್ಯ ಚುನಾವಣಾ ಆಯೋಗ ಬೇಕಾದ ತಯಾರಿ ಮಾಡಿಕೊಂಡಿದೆ. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್​​ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,54,32,314 ಮತದಾರಿದ್ದು, ಎಲ್ಲರು ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈಗಾಗಲೇ ಶೇ 91.61ನಷ್ಟು ಮತದಾರರು ಮ್ಯಾಪಿಂಗ್‌ಗೆ ಒಳಪಟ್ಟಿದ್ದಾರೆ. 46,52,504 ಮ್ಯಾಪಿಂಗ್‌ನಿಂದ ಹೊರ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.

ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಬಿಡುಗಡೆ: ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್, ನಾಳೆಯಿಂದ ಜುಲೈ 29ರವರೆಗೆ ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತೆ. BLOಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಆಗಸ್ಟ್​ 5ರಂದು ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗುವುದು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ನಂತರ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಜಿಬಿಎ ವ್ಯಾಪ್ತಿಯಲ್ಲಿ ಶೇ 76.32ರಷ್ಟು ಮ್ಯಾಪಿಂಗ್: ಬೆಂಗಳೂರಿನಲ್ಲಿ SIR ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ಆಯುಕ್ತರು

ಇನ್ನು ರಾಜ್ಯದಾದ್ಯಂತ 59,050 ಬೂತ್ ಮಟ್ಟದ ಅಧಿಕಾರಿಗಳ ನಿಯೋಜಿಸಲಾಗಿದೆ. 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ನೋಂಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು, 7556 BLOಗಳು, 1,15,112 ಬಿಎಲ್​ಎಗಳ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಗಣತಿ ನಮೂನೆಯನ್ನು  ಏನು ಮಾಡಬೇಕು?

BLOಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಮಾಡುತ್ತಾರೆ. ಭರ್ತಿ ಮಾಡಿದ ನಮೂನೆಗಳನ್ನು BLOಗಳು ಡಿಜಿಟಲೀಕರಣಕ್ಕೆ ಕಳಿಸುತ್ತಾರೆ. ಮನೆಗೆ ಅರ್ಜಿ ನೀಡಿದ ಬಳಿಕ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಲಾಗುತ್ತದೆ. ಎನ್ಯೂಮರೇಷನ್ ಫಾರ್ಮ್ ಭರ್ತಿ ದಯವಿಟ್ಟು ಬಿಎಲ್​ಒಗಳಿಗೆ ವಾಪಸ್ ಕೊಡಬೇಕು. ಭರ್ತಿ ಮಾಡಿದ ನಮೂನೆ ಪಡೆಯಲು ಅಗತ್ಯವಿದ್ದರೆ ಕನಿಷ್ಟ ಮೂರು ಬಾರಿ ಅಧಿಕಾರಿಗಳು ಮನೆಗೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ 1 ಕೋಟಿ 88 ಲಕ್ಷ ಮನೆಗಳಿವೆ ಎಂದರು.

ಪ್ರತಿಯೊಂದು ಮಾಹಿತಿ ವೆಬ್​ಸೈಟ್​ ಲಭ್ಯ ಎಂದ ಅನ್ಬುಕುಮಾರ್

ಬಿಎಲ್​ಒ, BLAಗಳ ನಂಬರ್ ಕೂಡ ಆಯೋಗದ ವೆಬ್​ಸೈಟ್​ನಲ್ಲಿದೆ. ಬಿಎಲ್​ಒಗಳಿಗೆ ಯಾವುದೇ ದಾಖಲೆ ಕೊಡಬಾರದು. SIR ಬಗ್ಗೆ ಪ್ರತಿದಿನ ಅಪ್​ಡೇಟ್ ಕೊಡುತ್ತೇವೆ. ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ. ಎಷ್ಟು ಫಾರ್ಮ್ ಕೊಟ್ಟಿದ್ದೇವೆ, ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ ಹೀಗೆ ಪ್ರತಿಯೊಂದು ಮಾಹಿತಿಯನ್ನು ಅಪ್​ಡೇಟ್ ಮಾಡುತ್ತೇವೆ. ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಇರುತ್ತೆ. ತಾಲೂಕು ವ್ಯಾಪ್ತಿಯಲ್ಲಿ ಬಿಎಲ್​ಒ ಅನುಕೂಲಕ್ಕಾಗಿ ಸೆಂಟರ್ ಇರುತ್ತೆ. ಇನ್ನು SIR ಸಂದರ್ಭದಲ್ಲಿ ನೆಟ್​ವರ್ಕ್, ಟೆಕ್ನಿಕಲ್‌ ಸಮಸ್ಯೆಯಾದಂತೆ ಸಿದ್ಧತೆಯಾಗಿದೆ. ನೆಟ್​ವರ್ಕ್ ಇಲ್ಲದ ಕಡೆ ಬಿಎಲ್​ಒಗಳಿಗೆ ವೈ-ಫೈ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ

ಎನ್ಯೂಮರೇಷನ್ ಫಾರ್ಮ್​ಗೆ ಆ ಕುಟುಂಬದ ಯಾರು ಬೇಕಾದರು ಸಹಿ ಹಾಕಬಹುದು. ಆ ಅರ್ಜಿಯ ಮತದಾರ ಹೊರಗಡೆ ಹೋಗಿದ್ದರೆ, ಗಂಡನ ಪರವಾಗಿ ಹೆಂಡತಿ ಅಥವಾ ಅಕ್ಕನ ಪರವಾಗಿ ಸಹೋದರ ಸಹಿ ಮಾಡಬಹುದು. BLOಗಳಿಗೆ ನಿಗದಿತ ಸಮಯ ಇಲ್ಲ. ಮ್ಯಾಪಿಂಗ್ ಮಾಡಿದ ಸಮಯವನ್ನ ಆಧರಿಸಿ ಕೆಲವೊಂದು ಏರಿಯಾ, ಜಿಲ್ಲೆಗಳಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಪ್ರಮುಖ ದಿನಾಂಕಗಳು

  • ಜೂನ್ 20ರಿಂದ ಜೂನ್ 29ರವರೆಗೂ SIR ಪ್ರಕ್ರಿಯೆಗೆ ತಯಾರಿ
  • ಜೂನ್ 30ರಿಂದ ಜುಲೈ 29ರವರೆಗೆ ಅಧಿಕಾರಿಗಳು ಮನೆ ಮನೆಗೆ ಭೇಟಿ
  • ಜುಲೈ 27ರಂದು ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ವಿಂಗಡಣೆ
  • ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಬಿಡುಗಡೆ
  • ಆಗಸ್ಟ್ 5 ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
  • ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ನೋಟಿಸ್ ಹಂತ ಮತ್ತು ಆಕ್ಷೇಪಣೆಗಳ ವಿಲೇವಾರಿ
  • ಅಕ್ಟೋಬರ್ 7 ಅಂತಿಮ ಮತದಾರರ ಪಟ್ಟಿ ಪ್ರಕಟಣೆ

ವರದಿ: ಅರಣ್​ ಕುಮಾರ್​ 


ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:30 pm, Mon, 29 June 26

Source link

ಕ್ರಿಕೆಟ್ ಕೋಚ್ ವಿರುದ್ಧ 6 ಪ್ರಕರಣ ದಾಖಲು; 3 ಪ್ರಕರಣಗಳಲ್ಲಿ 99 ವರ್ಷ ಜೈಲು ಶಿಕ್ಷೆ..! – Kannada News | Cricket Coach Jailed 99 Years in Thiruvananthapuram for Physical attack on Girl Cricketers

ಕ್ರಿಕೆಟ್ ತರಬೇತಿಗೆಂದು ಬರುತ್ತಿದ್ದ ಮಹಿಳಾ ಆಟಗಾರ್ತಿರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ ಆರೋಪವನ್ನು ಹೊತ್ತಿದ್ದ ಕ್ರಿಕೆಟ್ ಕೋಚ್​ಗೆ ತಿರುವನಂತಪುರಂನ ಪೋಕ್ಸೊ ತ್ವರಿತ ನ್ಯಾಯಾಲಯವು ಸಧ್ಯಕ್ಕೆ ಮೂರು ಪ್ರಕರಣಗಳಲ್ಲಿ ಒಟ್ಟು 99 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿದೆ. ಆರೋಪಿಯ ವಿರುದ್ಧ ಪ್ರಸ್ತುತ 6 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳ ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿತ ಕೋಚ್​, ಜೀವನ ಪರ್ಯಂತ ಜೈಲಿನಲ್ಲಿಯೇ ಕೊಳೆಯುವ ಶಿಕ್ಷೆಯನ್ನು ವಿಧಿಸಿದೆ.

ತರಬೇತಿಗೆ ಬರುತ್ತಿದ್ದವರಿಗೆ ಲೈಂಗಿಕ ಕಿರುಕುಳ

ತಿರುವನಂತಪುರದ ವಲ್ಲಕಡವು ಪ್ರದೇಶದ ಮನು ಎಂಬ ಹೆಸರಿನ ಕ್ರಿಕೆಟ್ ಕೋಚ್​ ಮೇಲೆ ಈ ಆರೋಪ ಹೊರಿಸಲಾಗಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್ ​​ಪರವಾಗಿ ಕ್ರಿಕೆಟ್ ತರಬೇತಿ ನೀಡುತ್ತಿದ್ದ ಮನು ಅವರ ಬಳಿ 2018 ರಲ್ಲಿ ಯುವ ಆಟಗಾರ್ತಿಯೊಬ್ಬರು ತರಬೇತಿ ಪಡೆಯುತ್ತಿದ್ದರು. ಆ ಸಮಯದಲ್ಲಿ, ಮನು ಆಟಗಾರ್ತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕ್ರಿಕೆಟ್ ಕೋಚ್​ನ ಈ ನಡೆಯಿಂದ ಆಘಾತಕ್ಕೊಳಗಾದ ಯುವತಿ ಈ ಘಟನೆಯ ನಂತರ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದಾರೆ. ತನ್ನ ಹೀನ ಕೃತ್ಯವನ್ನು ಇಲ್ಲಿಗೆ ನಿಲ್ಲಿಸದ ಮನು ಮತ್ತಷ್ಟು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಒಟ್ಟು 6 ಪ್ರಕರಣ ದಾಖಲು

ತರಬೇತಿಗೆಂದು ಬರುತ್ತಿದ್ದ ಯುವತಿಯರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಮನು, ಯುವತಿಯರ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡು ಅವುಗಳನ್ನು ಮುಂದಿಟ್ಟುಕೊಂಡು ಆ ಯುವತಿಯರ ಮೇಲೆ ನಿರಂತರವಾಗಿ ಲೈಂಗಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ತಿರುವನಂತಪುರಂದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಒಂದು ದೂರು ದಾಖಲಾದ ಬಳಿಕ ಇದರಿಂದ ಪ್ರೇರಿತರಾದ ಉಳಿದ ಸಂತ್ರಸ್ತೆಯರು ಕೂಡ ದೂರುಗಳನ್ನು ದಾಖಲಿಸಿದ್ದಾರೆ.

ದೂರಿನನ್ವಯ ಆಪಾದಿತ ಕೋಚ್ ಮನುವನ್ನು ತಿರುವನಂತಪುರಂ ಪೊಲೀಸರು ಬಂದಿಸಿದ್ದಾರೆ. ಮನು ವಿರುದ್ಧ ಪ್ರಸ್ತುತ 6 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ತಿರುವನಂತಪುರಂ ಪೋಕ್ಸೊ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಮೊದಲ ಪ್ರಕರಣದಲ್ಲಿ ಮನುಗೆ ಕಳೆದ ತಿಂಗಳು 16 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ನಂತರ ಜೂನ್ 25 ರಂದು ನಡೆದಿದ್ದ ಎರಡನೇ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ, ಮನುಗೆ 35 ವರ್ಷ ಜೈಲು ಶಿಕ್ಷೆ ಮತ್ತು 66,000 ರೂ. ದಂಡ ವಿಧಿಸಿದ್ದರು.

3 ಪ್ರಕರಣಗಳಲ್ಲಿ 99 ವರ್ಷ ಜೈಲು ಶಿಕ್ಷೆ

ಇನ್ನು ಮೂರನೇ ಪ್ರಕರಣದಲ್ಲಿ ಆರೋಪಿತನಿಗೆ, ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ 48 ವರ್ಷ ಜೈಲು ಶಿಕ್ಷೆ ಮತ್ತು 79 ಸಾವಿರ ರೂ. ದಂಡ ವಿಧಿಸಿದ್ದಾರೆ. ಹಿಂದಿನ ಪ್ರಕರಣಗಳ ಶಿಕ್ಷೆ ಪೂರ್ಣಗೊಂಡ ನಂತರವೇ ಈ ಪ್ರಕರಣದ ಶಿಕ್ಷೆ ಆರಂಭವಾಗಲಿದೆ. ಅದರಂತೆ, 3 ಪ್ರಕರಣಗಳಿಂದ ಆರೋಪಿಗೆ ಒಟ್ಟು 99 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ 4 ನೇ ಪ್ರಕರಣದಲ್ಲಿಯೂ ಮನು ತಪ್ಪಿತಸ್ಥನೆಂದು ಸಾಬೀತಾಗಿದ್ದು, ಆ ಪ್ರಕರಣದ ಶಿಕ್ಷೆಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:17 pm, Mon, 29 June 26

Source link

ಇರಾನ್​ನಲ್ಲಿ ಖಮೇನಿ ಅಂತ್ಯಕ್ರಿಯೆ; ಭಾರತದ ಪರವಾಗಿ ಬಿಹಾರದ ರಾಜ್ಯಪಾಲ, ಸಚಿವ ಪವಿತ್ರ ಮಾರ್ಗರಿಟಾ ಭಾಗಿ – Kannada News | Bihar Governor Lt Gen Syed Ata Hasnain, MoS Pabitra Margherita to represent India at Ayatollah Khamenei’s funeral In Iran

ನವದೆಹಲಿ, ಜೂನ್ 29: ಇರಾನ್‌ನ ಅತ್ಯುನ್ನತ ಧಾರ್ಮಿಕ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei’s funeral in Iran) ಅವರ ನಿಧನದ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾರತ ಸರ್ಕಾರದ ಪರವಾಗಿ ಅಧಿಕೃತವಾಗಿ ಭಾಗವಹಿಸಲು ಉನ್ನತ ಮಟ್ಟದ ನಿಯೋಗ ಇರಾನ್‌ಗೆ ತೆರಳುತ್ತಿದೆ. ಬಿಹಾರದ ರಾಜ್ಯಪಾಲರಾದ ಸೈಯದ್ ಅಟಾ ಹಸ್ನೈನ್ ಮತ್ತು ಕೇಂದ್ರ ವಿದೇಶಾಂಗ ಹಾಗೂ ಜವಳಿ ಖಾತೆಯ ರಾಜ್ಯ ಸಚಿವರಾದ ಪವಿತ್ರ ಮಾರ್ಗರಿಟಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇರಾನ್ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ, ಅವರ ಪರವಾಗಿ ಬಿಹಾರದ ರಾಜ್ಯಪಾಲರು ಮತ್ತು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರ ನಿಯೋಗ ಇರಾನ್​ಗೆ ತೆರಳುತ್ತಿದೆ. ಇರಾನ್‌ನೊಂದಿಗೆ ಭಾರತ ಹೊಂದಿರುವ ಐತಿಹಾಸಿಕ ಮತ್ತು ರಾಜತಾಂತ್ರಿಕ ಬಾಂಧವ್ಯದ ದೃಷ್ಟಿಯಿಂದ ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

ಬಿಹಾರದ ರಾಜ್ಯಪಾಲ ಸೈಯದ್ ಅಟಾ ಹಸ್ನೈನ್ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿದ್ದವರು. ಇಸ್ಲಾಮಿಕ್ ಜಗತ್ತು ಮತ್ತು ಮಧ್ಯಪ್ರಾಚ್ಯ ವ್ಯವಹಾರಗಳಲ್ಲಿ ಅಪಾರ ಜ್ಞಾನ ಹಾಗೂ ತಾಂತ್ರಿಕ ಅನುಭವ ಹೊಂದಿರುವ ಇವರ ನೇತೃತ್ವದ ನಿಯೋಗವು ಭಾರತದ ಪರವಾಗಿ ಖಮೇನಿಯವರಿಗೆ ಸಂತಾಪ ಸೂಚಿಸಲಿದೆ.

ಇದನ್ನೂ ಓದಿ: ಶಾಂತಿ ಒಪ್ಪಂದದ ಬಳಿಕವೂ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ: ಇರಾನ್ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಕೇಂದ್ರ ಸಚಿವ ಪವಿತ್ರ ಮಾರ್ಗರಿಟಾ ಭಾರತ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ನಡೆಯಲಿರುವ ಶೋಕಾಚರಣೆ ಮತ್ತು ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಮತ್ತು ಇರಾನ್ ದೇಶಗಳು ಚಬಹಾರ್ ಬಂದರು ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯತಂತ್ರ ಹಾಗೂ ಆರ್ಥಿಕ ಒಪ್ಪಂದಗಳಲ್ಲಿ ನಿಕಟ ಪಾಲುದಾರಿಕೆಯನ್ನು ಹೊಂದಿವೆ. ಈ ಸಂದಿಗ್ಧ ಸಮಯದಲ್ಲಿ ಭಾರತದ ಉನ್ನತ ನಿಯೋಗ ಇರಾನ್‌ಗೆ ಭೇಟಿ ನೀಡುತ್ತಿರುವುದು ಉಭಯ ದೇಶಗಳ ನಡುವಿನ ಗಾಢ ಸ್ನೇಹಕ್ಕೆ ಸಾಕ್ಷಿಯಾಗಿದೆ.

ಜಾಗತಿಕ ನಾಯಕರ ಆಗಮನ:

ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಷ್ಯಾ, ಚೀನಾ, ಟರ್ಕಿ ಹಾಗೂ ಅರಬ್ ರಾಷ್ಟ್ರಗಳು ಸೇರಿದಂತೆ ವಿಶ್ವದ ವಿವಿಧ ದೇಶಗಳ ಪ್ರಮುಖ ನಾಯಕರು ಮತ್ತು ರಾಜತಾಂತ್ರಿಕ ಪ್ರತಿನಿಧಿಗಳು ಇರಾನ್ ರಾಜಧಾನಿ ಟೆಹ್ರಾನ್‌ಗೆ ಆಗಮಿಸುತ್ತಿದ್ದಾರೆ. ಇರಾನ್‌ನ ಇಸ್ಲಾಮಿಕ್ ಗಣರಾಜ್ಯದಲ್ಲಿ ಸುದೀರ್ಘ ಕಾಲ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ಖಮೇನಿ ಅವರ ಸಾವು ಜಾಗತಿಕ ರಾಜಕಾರಣದಲ್ಲೂ ಭಾರಿ ಸಂಚಲನ ಮೂಡಿಸಿತ್ತು.

ಇದನ್ನೂ ಓದಿ: ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ

ಅಂತ್ಯಕ್ರಿಯೆ ಎಲ್ಲಿ?:

ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಟೆಹ್ರಾನ್, ಕೋಮ್ ಮತ್ತು ಮಶಾದ್ ನಗರಗಳಲ್ಲಿ ನಡೆಯಲಿವೆ. ಜುಲೈ 5, 6 ಮತ್ತು 7ರಂದು ಪ್ರಮುಖ ಕಾರ್ಯಕ್ರಮಗಳು ನಿಗದಿಯಾಗಿದ್ದು, ಅಂತಿಮ ವಿಧಿವಿಧಾನಗಳು ಜುಲೈ 9ರಂದು ಮಶಾದ್‌ನಲ್ಲಿ ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮೂರೂ ನಗರಗಳಲ್ಲಿ ಒಟ್ಟು ಸುಮಾರು 2 ಕೋಟಿ ಶೋಕತಪ್ತ ಜನರು ಜಮಾಯಿಸುವ ಸಾಧ್ಯತೆಯಿದ್ದು, ಅಂದಾಜುಗಳು ನಿಜವಾದರೆ ಇದು ಇರಾನ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಂತ್ಯಕ್ರಿಯೆಗಳಲ್ಲಿ ಒಂದಾಗಲಿದೆ.

ಇರಾನ್ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಘರ್ಷದ ಕಾರಣದಿಂದಾಗಿ, ಮಾರ್ಚ್ ಆರಂಭದಲ್ಲಿ ನಡೆಯಬೇಕಿದ್ದ ಈ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ ಅನ್ನು ಮುನ್ನಡೆಸಿದ್ದ ಅಯತೊಲ್ಲಾ ಅಲಿ ಖಮೇನಿ ಅವರು ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭಾರಿ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದರು. ಅವರ ನಿಧನದ ನಂತರ, ಮಾರ್ಚ್ 8ರಂದು ಅವರ 56 ವರ್ಷದ ಪುತ್ರ ಮೊಜ್ತಾಬಾ ಹೊಸೇನಿ ಖಮೇನಿ ಇರಾನ್‌ನ ನೂತನ ಅತ್ಯುನ್ನತ ನಾಯಕರಾಗಿ ಅಧಿಕಾರ ವಹಿಸಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ದೇವರು ಒಬ್ಬನೇ..’; ಮಕ್ಕಳಿಗೆ ಧರ್ಮದ ಪಾಠ ಮಾಡುವ ವಿಧಾನ ಬಿಚ್ಚಿಟ್ಟ ಸೈಫ್ ಅಲಿ ಖಾನ್ – Kannada News | Actor Saif Ali Khan reveals how he and Kareena Kapoor teache kids Taimur and Jeh about Religion

ಬಾಲಿವುಡ್‌ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರು ತಮ್ಮ ಮಕ್ಕಳಾದ ತೈಮೂರ್ (Taimur Ali Khan) ಮತ್ತು ಜೆಹ್ ಅವರನ್ನು ಎಲ್ಲ ಧರ್ಮಗಳನ್ನು ಗೌರವಿಸುವ ಮುಕ್ತ ಮನೋಭಾವದೊಂದಿಗೆ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ‘ವಿ ವಿಮೆನ್ಸ್ ಲಂಡನ್ ಎಡಿಷನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೈಫ್, ತಾವು ಮಕ್ಕಳಿಗೆ ಧರ್ಮದ ಬಗ್ಗೆ ಹೇಗೆ ಪಾಠ ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ‘ನಾನು ನನ್ನ ಮಕ್ಕಳಿಗೆ ದೇವರು ಒಬ್ಬನೇ, ಆದರೆ ಅವನಿಗೆ ಹಲವು ಹೆಸರುಗಳಿವೆ ಅಂತ ಹೇಳಿಕೊಡುತ್ತೇನೆ. ಇದು ಅತ್ಯಂತ ಸರಳವಾದ ವಿಷಯ’ ಎಂದು ಸೈಫ್ ಅಲಿ ಖಾನ್ (Saif Ali Khan) ತಿಳಿಸಿದ್ದಾರೆ.

ಧರ್ಮದ ಕುರಿತು ಮುಂದುವರಿದು ಮಾತನಾಡಿದ ಸೈಫ್, ‘ನಾನು ವೈಯಕ್ತಿಕವಾಗಿ ಅತಿ ಹೆಚ್ಚು ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಯೇನಲ್ಲ. ಆದರೆ ನನ್ನ ತಾಯಿ (ಶರ್ಮಿಳಾ ಟಾಗೋರ್) ನನಗೆ ಇದನ್ನೇ ಕಲಿಸಿದ್ದರು ಮತ್ತು ನಾನು ನನ್ನ ಮಕ್ಕಳಿಗೆ ಇದನ್ನೇ ಕಲಿಸುತ್ತಿದ್ದೇನೆ. ನೀವು ದೇವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಆರಾಧಿಸಬಹುದು. ನಿಮ್ಮ ಧರ್ಮವು ಇತರೆ ಮನುಷ್ಯರ ಕಡೆಗೆ ಪ್ರೀತಿ ಮತ್ತು ಕ್ಷಮಾಪಣೆಯನ್ನು ಕಲಿಸಿದರೆ, ಅಷ್ಟೇ ಸಾಕು, ಅದೇ ನಿಜವಾದ ಧರ್ಮ’ ಎಂದಿದ್ದಾರೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸೈಫ್, ತಾವು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ಬೆಳೆದಿದ್ದಾಗಿ ಮತ್ತು ಪ್ರತಿ ದಿನ ಪ್ರಾರ್ಥನೆಯೊಂದಿಗೆ ಶಾಲೆ ಆರಂಭವಾಗುತ್ತಿತ್ತು ಎಂದು ಹೇಳಿದರು. ಆ ದಿನಗಳಲ್ಲಿ ಮಕ್ಕಳು ಒಂದು ಧರ್ಮದ ಪ್ರಾರ್ಥನೆ ಮುಗಿಸಿ, ನಂತರ ಇತರ ಧರ್ಮಗಳ ಪ್ರಾರ್ಥನೆಗಳನ್ನೂ ಹೇಳುತ್ತಿದ್ದರು. ನಾವು ದೀಪಾವಳಿಯನ್ನು ಎಷ್ಟು ಸಡಗರದಿಂದ ಆಚರಿಸುತ್ತೇವೆಯೋ, ಅಷ್ಟೇ ಸಂಭ್ರಮದಿಂದ ಕ್ರಿಸ್‌ಮಸ್ ಕೂಡ ಆಚರಿಸುತ್ತೇವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸೈಫ್ ತಮ್ಮ ಹಿರಿಯ ಮಗ ತೈಮೂರ್ ಜೊತೆ ನಡೆಸಿದ ಸಂಭಾಷಣೆಯೊಂದನ್ನು ನೆನಪಿಸಿಕೊಂಡರು. ‘ಇತ್ತೀಚೆಗೆ ನಾನು ತೈಮೂರ್‌ಗೆ ‘ಧರ್ಮ ಮತ್ತು ಮೆಥಡಾಲಜಿ ನಡುವೆ ಏನು ವ್ಯತ್ಯಾಸ ಎಂದು ಕೇಳಿದ್ದೆ. ಅದಕ್ಕೆ 9 ವರ್ಷದ ತೈಮೂರ್, ಧರ್ಮದಲ್ಲಿ ನಾವು ಪ್ರಾರ್ಥನೆ ಮಾಡುತ್ತೇವೆ, ಆದರೆ ಮೆಥಡಾಲಜಿಯಲ್ಲಿ ಪ್ರಾರ್ಥನೆ ಮಾಡುವುದಿಲ್ಲ ಅಂತ ಉತ್ತರಿಸಿದ. ಆತನ ಆ ಜಾಣ್ಮೆಯ ಉತ್ತರ ನನಗೆ ತುಂಬಾ ಇಷ್ಟವಾಯಿತು‘ ಎಂದು ಸೈಫ್ ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್

‘ನಮ್ಮ ಮನೆಯಲ್ಲಿ ಇಂತಹ ವಿಷಯಗಳ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ನನ್ನ ತಾಯಿಗೂ ಈ ವಿಷಯಗಳಲ್ಲಿ ಮುಕ್ತ ಮನಸ್ಸಿತ್ತು, ನನ್ನ ಪತ್ನಿ ಕರೀನಾ ಕೂಡ ಅದೇ ಆಲೋಚನೆಯುಳ್ಳವಳು. ಹೀಗಾಗಿ ನಮ್ಮದು ಧರ್ಮಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಮನೋಭಾವದ ದಾರಿಯಾಗಿದೆ’ ಎಂದು ಸೈಫ್ ಅಲಿ ಖಾನ್ ಅವರು ತಮ್ಮ ಕುಟುಂಬದ ಮುಕ್ತ ವಾತಾವರಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಳೆಯಿಂದ ಎಸ್​ಐಆರ್, ಮನೆಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕು? ಇಲ್ಲಿದೆ ಮಾಹಿತಿ – Kannada News | SIR of Voter List in Karnataka From June 30: BLOs to Visit Houses; Here is What You Need to Do

ಬೆಂಗಳೂರು, ಜೂನ್ 29: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಜೂನ್ 30ರಿಂದ ಆರಂಭವಾಗಲಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ, ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಿ ಪರಿಷ್ಕರಿಸಲಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಈ ಪ್ರಕ್ರಿಯೆಯು ರಾಜ್ಯಾದ್ಯಂತ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ, 18 ವರ್ಷ ತುಂಬಿದ ಹೊಸ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸಲು ಅರ್ಜಿ (ಫಾರ್ಮ್ 6) ನೀಡಲಾಗುತ್ತದೆ. ಮೃತಪಟ್ಟವರ ಹೆಸರುಗಳನ್ನು ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು (ಫಾರ್ಮ್ 7) ಅವಕಾಶವಿರುತ್ತದೆ. ಅಲ್ಲದೆ, ಮತದಾರರ ಗುರುತಿನ ಚೀಟಿಯಲ್ಲಿನ ಹೆಸರು, ವಯಸ್ಸು, ಲಿಂಗ, ವಿಳಾಸ ಅಥವಾ ಭಾವಚಿತ್ರದಂತಹ ತಪ್ಪುಗಳನ್ನು ತಿದ್ದುಪಡಿ ಮಾಡಲು (ಫಾರ್ಮ್ 8) ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನ್ಬು ಕುಮಾರ್ ಅವರ ಪ್ರಕಾರ, 5.54 ಕೋಟಿ ಎನ್ಯುಮರೇಶನ್ ಫಾರ್ಮ್‌ಗಳನ್ನು ಮುದ್ರಿಸಲಾಗಿದ್ದು, 1.02 ಲಕ್ಷ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ನಿಖರ ಮತ್ತು ಪಾರದರ್ಶಕ ಮತದಾರರ ಪಟ್ಟಿ ನಿರ್ಮಿಸುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ. ಎಸ್​ಐಆರ್ ಹೇಗೆ ನಡೆಯುತ್ತದೆ? ನೀವು ಮಾಡಬೇಕಾದದ್ದೇನು ಎಂಬ ವಿವರಣೆ ಈ ವಿಡಿಯೋದಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ – Kannada News | Remove Vijayendra : Audio allegedly featuring DV Sadananda Gowda triggers row

ಬೆಂಗಳೂರು,(ಜೂನ್ 29): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ಕೆಳಗಿಳಿಸುವ ಬಗ್ಗೆ ದೆಹಲಿ ನಾಯಕರಿಗೆ ಒತ್ತಾಯ ಮಾಡಿರುವ ಆಡಿಯೋ (Audio) ಒಂದು ಕೇಸರಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉಚ್ಚಾಟಿಸುವ ಕುರಿತು ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಕೇಂದ್ರದ ಪ್ರಭಾವಿ ನಾಯಕರೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಮತದ ಬೆಂಕಿ ಮತ್ತೆ ಹೊಗೆಯಾಡಲು ಆರಂಭಿಸಿದೆ. ಹಾಗಾದ್ರೆ, ಆಡಿಯೋನಲ್ಲೇನಿದೆ ಎನ್ನುವುದನ್ನು ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

2 ಹೀನಾಯ ಸೋಲುಗಳು; ಭಾರತದ ಎರಡೂ ತಂಡಗಳು ಎಡವಿದ್ದೆಲ್ಲಿ? ಇಲ್ಲಿದೆ ವಿವರ – Kannada News | India’s Cricket June 28: Analyzing Men’s Ireland Defeat and Women’s T20 World Cup Exit

ಜೂನ್ 28 ರ ಭಾನುವಾರದಂದು ಭಾರತದ ಕ್ರಿಕೆಟ್ ಪ್ರಿಯರು ಮನರಂಜನೆಯ ರಸದೌತಣವನ್ನು ನಿರೀಕ್ಷಿಸಿದ್ದರು. ಏಕೆಂದರೆ ಈ ದಿನದಂದು ಭಾರತದ ಎರಡು ಬಲಿಷ್ಠ ತಂಡಗಳು ನಿರ್ಣಾಯಕ ಪಂದ್ಯಗಳನ್ನಾಡಲು ಕಣಕ್ಕಿಳಿದಿದ್ದವು. ಒಂದೆಡೆ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಭಾರತದ ಪುರುಷರ ತಂಡ ಸರಣಿ ನಿರ್ಧಾರಕ ಪಂದ್ಯವನ್ನಾಡಿದರೆ, ಮತ್ತೊಂದೆಡೆ ಭಾರತದ ಮಹಿಳಾ ತಂಡ 2026 ರ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಎದುರಿಸಿತ್ತು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಭಾರತ ಮಹಿಳಾ ತಂಡಕ್ಕೆ ಬಹಳ ಮುಖ್ಯವಾಗಿತ್ತು. ಅಂದರೆ ಒಂದೇ ದಿನ ಎರಡು ತಂಡಗಳು ತಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯೊಂದಿಗೆ ಅಂಗಳಕ್ಕಿಳಿದಿದ್ದವು. ಆದರೆ ಎರಡು ತಂಡಗಳಿಗೆ ಎದುರಾಗಿದ್ದು ಸೋಲಿನ ನಿರಾಶೆ.

ಇಂಗು ತಿಂದ ಮಂಗನಂತ್ತಾದರು

ಮಹಿಳಾ ತಂಡಕ್ಕೆ ಹೋಲಿಸಿದರೆ, ಪುರುಷರ ತಂಡದ ಸೋಲನ್ನು ಯಾವ ಭಾರತೀಯನಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೌದು, ಐರ್ಲೆಂಡ್ ವಿಶ್ವ ದರ್ಜೆಯ ಪ್ರದರ್ಶನ ನೀಡಿತು ಎಂಬುದರಲ್ಲಿ ಸುಳಿಲ್ಲ. ಆದರೆ ಸತತ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದಿರುವ ತಂಡಕ್ಕೆ ಐರ್ಲೆಂಡ್ ವಿರುದ್ಧ ಸೋಲು ಎಂಬುದನ್ನು ಕೇಳಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಐರ್ಲೆಂಡ್ ಪ್ರವಾಸಕ್ಕೂ ಮೊದಲು ಐಪಿಎಲ್‌ನಲ್ಲಿ ಇವರ ಆಟವನ್ನು ನೋಡಿದವರೆಲ್ಲ, ಇವರ ಮುಂದೆ ಐರ್ಲೆಂಡ್ ಲೆಕ್ಕಕ್ಕೆ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಐರ್ಲೆಂಡ್ ಲೆಕ್ಕಾಚಾರದ ಮುಂದೆ ಐಪಿಎಲ್ ಕಲಿಗಳ ಕರಾಮತ್ತು ನಡೆಯಲಿಲ್ಲ. ಅತಿ ವೇಗದ ಶತಕ, ಅರ್ಧಶತಕ, ಸಿಕ್ಸರ್‌ಗಳ ಮಳೆ ಎಂಬೆಲ್ಲ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡು ಐರ್ಲೆಂಡ್​ಗೆ ಹೋಗಿದ್ದವರು ಐರಿಶ್ ಆಟಗಾರರ ತಂತ್ರದ ಎದುರು ಇಂಗು ತಿಂದ ಮಂಗನಂತ್ತಾದರು.

ಪಿಚ್​ನ ಮರ್ಮವನ್ನು ಅರಿತುಕೊಳ್ಳಲಿಲ್ಲ

ಮೊದಲ ಟಿ20 ಸೋಲನ್ನು ಎಚ್ಚರಿಕೆಯ ಪಾಠವನ್ನಾಗಿ ತೆಗೆದುಕೊಳ್ಳದ ಯಂಗ್ ಇಂಡಿಯಾ, ಎರಡನೇ ಟಿ20 ಪಂದ್ಯದಲ್ಲಿ 1 ರನ್​ಗಳ ಸೋಲು ಅನುಭವಿಸಿತು. ಕೇವಲ 1 ರನ್​ಗಳ ಸೋಲಿಗೆ ಕಾರಣವಾಗಿದ್ದು, ಭಾರತದ ಯುವ ಬೌಲರ್​ಗಳೇ ಹೊರತು, ಐಪಿಎಲ್‌ನಲ್ಲಿ ರನ್​ಗಳ ಮಳೆಯನ್ನೇ ಹರಿಸಿದ ಬ್ಯಾಟ್ಸ್‌ಮನ್​ಗಳಲ್ಲ. ನಮ್ಮಂತಹ ಬ್ಯಾಟಿಂಗ್‌ ವೀರರ ಮುಂದೆ ಈ ಐರ್ಲೆಂಡ್ ಬೌಲರ್​ಗಳು ಯಾವ ಲೆಕ್ಕ ಎಂಬ ಅಂಹಕಾರದೊಂದಿಗೆ ಕ್ರೀಸ್​ಗಿಳಿದವರು ಪಿಚ್​ನ ಮರ್ಮವನ್ನು ಅರಿತುಕೊಳ್ಳುವ ಮುನ್ನವೇ ದೊಡ್ಡ ದೊಡ್ಡ ಹೊಡೆತಗಳಿಗೆ ಕೈ ಹಾಕಿ ಪೆವಿಲಿಯನ್ ಸೇರಿಕೊಂಡರು. ಟೀಂ ಇಂಡಿಯಾದ ಈ ಮಂದಬುದ್ದಿಯ ಬ್ಯಾಟಿಂಗ್ ವಿಭಾಗವನ್ನು ಮೊದಲ ಪಂದ್ಯದಲ್ಲೇ ಅರ್ಥ ಮಾಡಿಕೊಂಡಿದ್ದ ಐರ್ಲೆಂಡ್ ಬೌಲರ್​ಗಳು ಎರಡನೇ ಪಂದ್ಯಕ್ಕೆ ಮತ್ತಷ್ಟು ಉತ್ತಮ ತಯಾರಿಯನ್ನು ಮಾಡಿಕೊಂಡು ಕಣಕ್ಕಿಳಿದಿದ್ದರು.

ಐರ್ಲೆಂಡ್ ತಂಡದ ತಂತ್ರಗಾರಿಕೆ ಹೇಗಿತ್ತು?|

ಹೀಗಾಗಿ 154 ರನ್​ಗಳ ಅಲ್ಪ ಗುರಿ ನೀಡಿಯೂ ಐರ್ಲೆಂಡ್ ಬೌಲಿಂಗ್ ವಿಭಾಗ ಎಲ್ಲಿಯೂ ಲಯ ಕಳೆದುಕೊಳ್ಳಲಿಲ್ಲ. ಇತ್ತ ಫಿಲ್ಡರ್​ಗಳು ಕೂಡ ಬೌಲರ್​ಗಳ ಶ್ರಮಕ್ಕೆ ಪ್ರತಿಫಲವೆಂಬಂತೆ ಒಂದೇ ಒಂದು ಕ್ಯಾಚ್​ಗಳನ್ನು ಕೈಚೆಲ್ಲಲಿಲ್ಲ. ಇತ್ತ ಎಷ್ಟೇ ಟಾರ್ಗೆಟ್ ಇದ್ದರೂ ಕೊನೆಯ ಐದು ಓವರ್​ಗಳಲ್ಲಿ ಪಂದ್ಯ ಮುಗಿಸುವ ಮನಸ್ಥಿತಿಯಲ್ಲಿದ್ದ ಭಾರತದ ಮಧ್ಯಮ ಕ್ರಮಾಂಕ ಸ್ಟ್ರೈಕ್ ತಿರುಗಿಸುವುದನ್ನು ಬಿಟ್ಟು ಹೆಚ್ಚು ಡಾಟ್ ಬಾಲ್​ಗಳನ್ನು ಆಡಿತು. ಇದಕ್ಕೂ ಮತ್ತೊಂದು ಪ್ಲಾನ್ ಮಾಡಿಕೊಂಡು ಬಂದಿದ್ದ ಐರ್ಲೆಂಡ್ ಬೌಲರ್​ಗಳು ಟೀಂ ಇಂಡಿಯಾ ಬ್ಯಾಟರ್​ಗಳಿಗೆ ಒಂದೇ ಒಂದು ಸ್ಟ್ರೈಟ್ ಹಿಟ್ಟಿಂಗ್​ಗೆ ಅವಕಾಶ ನೀಡಲಿಲ್ಲ. ಸೈಡ್ ಬೌಂಡರಿಗಳು ದೊಡ್ಡದ್ದಾಗಿದ್ದರ ಕಾರಣ ಭಾರತದ ಬ್ಯಾಟರ್​​ಗಳು ಆ ಕಡೆಗೆ ಶಾಟ್ ಆಡುವಂತೆ ಐರ್ಲೆಂಡ್ ಬೌಲರ್​ಗಳು ಬೌಲ್ ಮಾಡಿದರು. ತಮ್ಮ ತೋಳ್ಬಲವನ್ನು ನೆಚ್ಚಿಕೊಂಡಿದ್ದ ಭಾರತದ ಬ್ಯಾಟರ್​​ಗಳು ಗಾಳಿಯ ವಿರುದ್ಧವಾಗಿ ದೊಡ್ಡ ದೊಡ್ಡ ಹೊಡೆತಗಳಿಗೆ ಕೈಹಾಕಿ ಕ್ಯಾಚ್ ನೀಡಿ ಔಟಾದರು.

ಮಾನ ಉಳಿಸಿದ ಬೌಲರ್​ಗಳು

ಕೊನೆಯಲ್ಲಿ ಯುವ ಬೌಲಿಂಗ್ ಆಲ್‌ರೌಂಡರ್ ಹರ್ಷಿತ್ ರಾಣಾ ಹಾಗೂ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಪ್ರಿನ್ಸ್ ಯಾದವ್ ಗೆಲುವಿಗಾಗಿ ಹೋರಾಟ ನೀಡದಿದ್ದರೆ, ಟೀಂ ಇಂಡಿಯಾ ಮೊದಲ ಪಂದ್ಯದಂತೆಯೇ ಎರಡನೇ ಪಂದ್ಯದಲ್ಲೂ 30 ರನ್​ಗಳ ಸೋಲು ಅನುಭವಿಸುತ್ತಿತ್ತು. ಐರ್ಲೆಂಡ್​ನಂತಹ ದುರ್ಬಲ ತಂಡದ ಎದುರೇ ಮುಗ್ಗರಿಸಿರುವ ಟೀಂ ಇಂಡಿಯಾ, ಇದೀಗ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಎದುರಿಸಲು ಹೋಗುತ್ತಿದೆ. ಅಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಮಹಿಳಾ ತಂಡ ಟಿ20 ಮಾದರಿಗೆ ಬದಲಾಗಲಿಲ್ಲ

ಇದು ಪುರುಷರ ತಂಡದ ವ್ಯಥೆಯಾದರೆ, ಇತ್ತ ಮಹಿಳಾ ತಂಡದ್ದು ಇನ್ನೊಂದು ರೀತಿಯ ವ್ಯಥೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ವನಿತಾ ಪಡೆ, ಏಕದಿನ ಮಾದರಿಯಿಂದ ಟಿ20 ಮಾದರಿಗೆ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಕೆಲಸವನ್ನು ಟೂರ್ನಿ ಆರಂಭಕ್ಕೂ ಮುನ್ನ ಹಾಗೂ ಟೂರ್ನಿಯ ನಡುವೆಯೂ ಮಾಡಲಿಲ್ಲ. ಆರಂಭಿಕ ಆಟಘಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನರನ್ನು ಹೊರತುಪಡಿಸಿ ಯಾವ ಆಟಗಾರ್ತಿಗೂ ನಾವು ಟಿ20 ಕ್ರಿಕೆಟ್ ಆಡುತ್ತಿದ್ದೇವೆ ಎಂಬುದು ನೆನಪಿಗೂ ಬಾರಲಿಲ್ಲ ಎನಿಸುತ್ತದೆ. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲ ಹೆಚ್ಚಿಸಬೇಕಿದ್ದ ಜೆಮಿಮಾ ರೊಡ್ರಿಗ್ಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಲೀಗ್ ಹಂತದ ಯಾವ ಪಂದ್ಯದಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಆದರೆ ನಾಯಕಿ ಹರ್ಮನ್, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನೀಡಿದರು ಎಂಬುದನ್ನು ಮರೆಯಬಾರದು. ಹರ್ಮನ್ ಆ ರೀತಿಯ ಬ್ಯಾಟಿಂಗ್‌ ಮಾಡದಿದ್ದರೆ, ಟೀಂ ಇಂಡಿಯಾ 150 ರನ್​ಗಳ ಗಡಿ ಕೂಡ ದಾಟುತ್ತಿರಲಿಲ್ಲ.

ಆಸೀಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ

ಇದೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ಅಜೇಯ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜೆಮಿಮಾ, ಟಿ20 ವಿಶ್ವಕಪ್‌ನಲ್ಲಿ ಹೆಸರಿಗಷ್ಟೇ ತಂಡದಲ್ಲಿದ್ದರು ಎಂದರೆ ತಪ್ಪಾಗಲಾರದು. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಜೆಮಿಮಾ 34 ರನ್ ಬಾರಿಸದರಾದರೂ ಅದಕ್ಕೆ ತೆಗೆದುಕೊಂಡಿದ್ದು, ಬರೊಬ್ಬರಿ 28 ಎಸೆತಗಳು. ಇದನ್ನು ನೋಡಿಯೇ ಅವರನ್ನು ಕೊನೆಯ ಓವರ್​ಗೂ ಮುನ್ನ ರಿಟೈರ್ಡ್​ ಔಟ್​ ಆಗಿ ವಾಪಸ್ ಕರೆಸಿಕೊಂಡಿದ್ದು. ಇನ್ನು ಈ ಪಂದ್ಯದಲ್ಲಿ ಸ್ಮೃತಿ ಅವರ ಇನ್ನಿಂಗ್ಸ್ ಕೂಡ ನಿಧಾನಗತಿಯಲ್ಲಿತ್ತು. ಹೀಗಾಗಿ ತಂಡ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳಲಿಲ್ಲ, ಇತ್ತ ರನ್ ಕೂಡ ಕಲೆಹಾಕಲಿಲ್ಲ. ಒಂದು ವೇಳೆ ಮೊದಲ 10 ಓವರ್​ಗಳಲ್ಲಿ ಸ್ಫೋಟಕ ಆರಂಭ ಸಿಕ್ಕಿದ್ದಿದ್ದರೆ, ನಿನ್ನೆಯ ಫಲಿತಾಂಶ ಬೇರೆಯದ್ದೇ ಇರುತ್ತಿತ್ತು.

ಬಲಿಷ್ಠ ಪ್ಲೇಯಿಂಗ್ 11 ಕಟ್ಟಲಿಲ್ಲ

ಒಟ್ಟಾರೆ ಒಂದು ಒಳ್ಳೇಯ ತಂಡವನ್ನು ಕಟ್ಟದೆ ಏಕದಿನ ಕ್ರಿಕೆಟ್​ನಲ್ಲಿ ಮಿಂಚಿದವರನ್ನೇ ಟಿ20 ಮಾದರಿಗೂ ಕರೆತಂದಿದ್ದು, ಮಹಿಳಾ ತಂಡದ ಸೋಲಿಗೆ ಕಾರಣವೆನ್ನಬಹುದು. ಏಕೆಂದರೆ ಲೀಗ್ ಹಂತ ಮುಗಿಯುವ ಹಂತಕ್ಕೆ ಬಂದರೂ ಮೂರನೇ ಕ್ರಮಾಂಕಕ್ಕೆ ಸರಿಯಾದ ಆಟಗಾರ್ತಿಯರನ್ನು ಆಯ್ಕೆ ಮಾಡಲು ಆಯ್ಕೆ ಮಂಡಳಿಗೆ ಸಾಧ್ಯವಾಗಲಿಲ್ಲ. ವೇಗದ ಬೌಲರ್​ಗಳು ಯಶಸ್ವಿಯಾಗದಿದ್ದರೂ, ಸ್ಪಿನ್ನರ್​ಗಳ ಶ್ರಮಕ್ಕೆ ಫಿಲ್ಡರ್​ಗಳಿಂದ ಸರಿಯಾದ ಬೆಂಬಲ ಸಿಗಲಿಲ್ಲ. ಒಂದರ್ಥದಲ್ಲಿ ಭಾರತ ತಂಡ ಸೆಮಿಫೈನಲ್​ಗೇರಲು ಆಗದಿರುವುದಕ್ಕೆ ಪ್ರಮುಖ ಕಾರಣ ತಂಡದ ಕಳಪೆ ಫಿಲ್ಡಿಂಗ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೈಚೆಲ್ಲಿದ ಆ ಕ್ಯಾಚ್​ಗಳು ತಂಡವನ್ನು ಟೂರ್ನಿಯಿಂದ ಹೊರಹಾಕಿದವು ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:36 pm, Mon, 29 June 26

Source link

ಹಿಗ್ಗಾಮುಗ್ಗಾ ಟ್ರೋಲ್ ಆದರೂ ಬುದ್ಧಿ ಕಲಿಯದ ‘ಧುರಂಧರ್’ ಗಾಯಕಿ; ವೇದಿಕೆಯಲ್ಲಿ ಮತ್ತೆ ಕಳ್ಳಾಟ – Kannada News | Dhurandhar Singer Jasmine Sandlas faces backlash after Hyderabad Concert fans allege delay and Lip Sync

ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ (Jasmine Sandlas) ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 27ರಂದು ಹೈದರಾಬಾದ್‌ನ ‘ಕ್ವೇಕ್ ಅರೆನಾ’ದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಜಾಸ್ಮಿನ್ ಅವರು ನಿಗದಿತ ಸಮಯಕ್ಕಿಂತ ಬರೋಬ್ಬರಿ 3 ಗಂಟೆ ತಡವಾಗಿ ವೇದಿಕೆ ಏರಿದ್ದಲ್ಲದೆ, ಲೈವ್ ಶೋನಲ್ಲಿ ಹಾಡುವ ಬದಲು ಲಿಪ್-ಸಿಂಕ್ (Lip Sync) ಮಾಡಿದ್ದಾರೆ ಎಂದು ನೆಟ್ಟಿಗರು ಹಾಗೂ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅಭಿಮಾನಿಯೊಬ್ಬರು, ‘ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ಆದರೆ ಈ ಶೋ ನನ್ನನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದೆ. ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಶೋಗೆ ಜಾಸ್ಮಿನ್ ಬಂದಿದ್ದು ರಾತ್ರಿ 11.20ಕ್ಕೆ! ಮೂರು ಗಂಟೆ ತಡವಾಗಿ ಬಂದರೂ ಅವರು ಅಭಿಮಾನಿಗಳಲ್ಲಿ ಯಾವುದೇ ಕ್ಷಮೆ ಕೇಳಲಿಲ್ಲ. ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಅದಾದ ಮೇಲೆ ಲೈವ್ ಕಾರ್ಯಕ್ರಮದಲ್ಲಿ ಬಂದು ಲಿಪ್-ಸಿಂಕ್ ಮಾಡಿದರು. ಕೊನೆಯಲ್ಲಿ ಯಾರಿಗೂ ಧನ್ಯವಾದ ಅಥವಾ ಸಾರಿ ಹೇಳದೆ ದಿಢೀರನೆ ವೇದಿಕೆಯಿಂದ ನಿರ್ಗಮಿಸಿದರು’ ಎಂದು ಬೇಸರ ಹೊರಹಾಕಿದ್ದಾರೆ.

ಕೇವಲ ಗಾಯಕಿ ಮಾತ್ರವಲ್ಲದೆ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಸಂಸ್ಥೆಯ ವಿರುದ್ಧವೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ತಡವಾಗುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಮತ್ತು ಅಲ್ಲಿನ ನಿರ್ವಹಣಾ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

‘ನಾವು ರಾತ್ರಿ 8ರಿಂದ 11.30ರವರೆಗೆ ಕಾದು ಸುಸ್ತಾಗಿ ವಾಪಸ್ ಬಂದೆವು. ನಮಗೆ ದೂರದ ಊರಿಗೆ ಪ್ರಯಾಣಿಸಬೇಕಿತ್ತು. ಇಂಥ ಈವೆಂಟ್‌ಗಳು ಜನರನ್ನು ವಂಚಿಸುವ ಹೊಸ ದಾರಿಯಾಗಿವೆ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಜಾಸ್ಮಿನ್ ಅವರ ಹಳೆಯ ವಿಡಿಯೋಗಳನ್ನು ಪ್ರಸ್ತಾಪಿಸಿ, ‘ಅವರು ಬಹುತೇಕ ಎಲ್ಲಾ ಶೋಗಳಲ್ಲೂ ಕೇವಲ ಲಿಪ್-ಸಿಂಕ್ ಮಾತ್ರ ಮಾಡುತ್ತಾರೆ’ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾಮೆರಾ ಎದುರಲ್ಲೇ ಬಯಲಾಯ್ತು ‘ಧುರಂಧರ್’ ಗಾಯಕಿಯ ಕಳ್ಳಾಟ; ಭಾರಿ ಟ್ರೋಲ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿವಾದ ಭಾರಿ ಸದ್ದು ಮಾಡುತ್ತಿದ್ದರೂ, ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಆಗಲಿ ಅಥವಾ ಕಾರ್ಯಕ್ರಮದ ಆಯೋಜಕರಾಗಲಿ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version