Video: ಕಾರ್ಪೊರೇಟ್ ಉದ್ಯೋಗಗಳಲ್ಲಿ ನಿಷ್ಠಾವಂತರಿಗೆ ಕಿವಿಮಾತು ಹೇಳಿದ ಬೆಂಗಳೂರಿನ ವ್ಯಕ್ತಿ – Kannada News | A Bengaluru man says it’s not good for employees to be loyal to one company.

ಕಾರ್ಪೊರೇಟ್ (corporate) ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರ ಕಷ್ಟ ಹೇಳಲಾಗದು. ಕೆಲವರು ತಮ್ಮ ಉದ್ಯೋಗಕ್ಕೆ ತುಂಬಾ ನಿಷ್ಠಾವಂತರಾಗಿರುತ್ತಾರೆ. ಆಫೀಸು ಬಿಟ್ಟು ಮನೆಗೆ ಬಂದರೂ ಮುರೊತ್ತು ಕೆಲಸ ಕೆಲಸ ಎಂದು ಗೊಣಗುವವರನ್ನು ನೀವು ನೋಡಿರುತ್ತೀರಿ. ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ಉದ್ಯೋಗಿಗಳು ಒಂದೇ ಕಂಪನಿಗೆ ನಿಷ್ಠರಾಗಿರಬೇಕೇ, ಇಲ್ಲವಾದ್ರೆ ವೃತ್ತಿಜೀವನದ ಬೆಳವಣಿಗೆ ನಿಧಾನವಾದಾಗ ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸಬೇಕೇ ಎಂಬ ಪೋಸ್ಟ್ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಣಿಕ್ ಸಲಾರಿಯಾ (life_with_manik) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ಗೆ ನಿಷ್ಠೆಯಾ ಬದಲಾವಣೆಯಾ?” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ನಿಷ್ಠೆಯೋ ಅಥವಾ ಬದಲಾವಣೆಯೋ? ನೀವು ಕಳೆದ ಮೂರು ವರ್ಷಗಳಿಂದ ಒಂದೇ ಕಂಪನಿಗೆ ನಿಷ್ಠಾವಂತರಾಗಿ ಉಳಿದಿದ್ದರೆ, ನಾನು ಹೇಳಲಿರುವ ವಿಷಯ ನಿಮಗೆ ಇಷ್ಟವಾಗದಿರಬಹುದು, ಆದರೆ ಸತ್ಯವೆಂದರೆ ಕಂಪನಿಗಳು ಯಾವಾಗಲೂ ನಿಷ್ಠೆಗೆ ಪ್ರತಿಫಲ ನೀಡುವುದಿಲ್ಲ ಎಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ನಿಮಗೆ ಸಾಮಾನ್ಯ ಶೇ. 10 ರಷ್ಟು ವೇತನ ಹೆಚ್ಚಳವಾಗಬಹುದು. ಆದರೆ ಒಂದು ಹುದ್ದೆ ಖಾಲಿಯಿದ್ದಾಗ ಅಥವಾ ಬಡ್ತಿ ಸಮಯ ಬಂದಾಗ, ಕಂಪನಿಗಳು ಹೆಚ್ಚಾಗಿ ಹೊರಗಿನವರನ್ನು ನೇಮಿಸಿಕೊಳ್ಳಲು ಬಯಸುತ್ತವೆ ಎಂದು ಹೇಳಿದ್ದಾರೆ. ಇಲ್ಲಿ ಉದ್ಯೋಗ ಬದಲಾವಣೆಗಳು ಯಾವಾಗಲೂ ಸರಿಯಾದ ವಿಧಾನವಾಗಿರುವುದಿಲ್ಲ. ನೀವು ಪ್ರತಿ ಆರು ತಿಂಗಳಿಗೊಮ್ಮೆ ಕೆಲಸ ಬದಲಾಯಿಸಬೇಕು ಎಂಬ ಕಲ್ಪನೆಯನ್ನು ನಾನು ಒಪ್ಪುವುದಿಲ್ಲ, ಏಕೆಂದರೆ ಅದು ನಿಮ್ಮ ರೆಸ್ಯೂಮ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದರೆ, ನೀವು ಏನು ಮಾಡಬೇಕು? ನೀವು ನಿಷ್ಠಾವಂತರಾಗಿ ಉಳಿಯಬೇಕೇ ಅಥವಾ ಬದಲಾಯಿಸಬೇಕೇ? ನನ್ನ ಅಭಿಪ್ರಾಯದಲ್ಲಿ, ನೀವು ಹೊಂದಿಕೊಳ್ಳುವವರಾಗಿರಬೇಕು ಎಂದಿದ್ದಾರೆ.

ಒಂದು ನಿರ್ದಿಷ್ಟ ನಿಯಮವನ್ನು ಅನುಸರಿಸುವ ಬದಲು ಉದ್ಯೋಗಿಗಳು ತಮ್ಮ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಬೇಕು. ಒಂದು ಕಂಪನಿಯಲ್ಲಿ ಎರಡು ಮೂರು ವರ್ಷಗಳ ಕಾಲ ಇರಿ. ನಿಮ್ಮ ಬೆಳವಣಿಗೆ ಉತ್ತಮವಾಗಿದ್ದರೆ, ಬಡ್ತಿಗಳು ಹಾಗೂ ಉತ್ತಮ ಅವಕಾಶಗಳನ್ನು ನೀವು  ಪಡೆಯುತ್ತಿದ್ದರೆ, ಮುಂದುವರಿಯುವುದು ಅರ್ಥಪೂರ್ಣವಾಗಿದೆ. ಆದರೆ ನೀವು ನಿಶ್ಚಲತೆಯನ್ನು ಅನುಭವಿಸಲು ಪ್ರಾರಂಭಿಸಿದಾಗ, ಯಾವುದೇ ಬೆಳವಣಿಗೆ ಇಲ್ಲ ಎಂದೆನಿಸಿದಾಗ, ನೀವು ಹೊಸದನ್ನು ಕಲಿಯುತ್ತಿಲ್ಲ ಎಂದು ಭಾವಿಸಿದಾಗ, ಉದ್ಯೋಗ ಬದಲಾವಣೆಯನ್ನು ಮಾಡುವ ಸಮಯ ಬಂದಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಕೆಲಸದಿಂದ ಕಲಿತ ಐದು ಜೀವನ ಪಾಠಗಳನ್ನು ವಿವರಿಸಿದ ಯುವಕ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವೈಯಕ್ತಿಕ ಬೆಳವಣಿಗೆಗೆ ಉದ್ಯೋಗ ಜಿಗಿತ ಮುಖ್ಯ ಎಂದು ನಾನು ನಂಬುತ್ತೇನೆ, ಆದರೆ ಅದನ್ನು ಚಿಂತನಶೀಲವಾಗಿ ಮಾಡಬೇಕು, ಆಗಾಗ ಉದ್ಯೋಗ ಬದಲಾವಣೆ ಮಾಡಬಾರದು ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮ ಪ್ರತಿಯೊಂದು ಮಾತು ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಯಾರಿಗಾದರೂ ಅನ್ವಯಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ವೈಯುಕ್ತಿಕ ಬೆಳವಣಿಗೆಗೆ ಉದ್ಯೋಗ ಬದಲಾವಣೆ ಬಹಳ ಮುಖ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On – 10:58 am, Mon, 29 June 26

Source link

ಲಿಪ್‌ಲಾಕ್ ದೃಶ್ಯದಲ್ಲಿ ಸಹ ಕಲಾವಿದನಿಗೆ ಗಾಯ ಮಾಡಿದರಾ ಕಂಗನಾ? – Kannada News | Kangana Ranaut Vir Das ‘Revolver Rani’ Lip Lock Controversy: Actor Debunks Viral Rumor

2014ರಲ್ಲಿ ಬಂದ ‘ರಿವಾಲ್ವರ್ ರಾಣಿ’ ಸಿನಿಮಾದಲ್ಲಿ ಕಂಗನಾ ರಣಾವತ್ ಹಾಗೂ ವೀರ್ ದಾಸ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯ ಇತ್ತು. ಈ ದೃಶ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಳೇ ಸುದ್ದಿಯೊಂದು ಮತ್ತೆ ವೈರಲ್ ಆಗಿದೆ. ಈ ದೃಶ್ಯದಲ್ಲಿ ನಟ ವೀರ್ ದಾಸ್ ಅವರಿಗೆ ಕಂಗನಾ ರಣಾವತ್ ಗಾಯಗೊಳಿಸಿದ್ದರು ಎಂದು ಹೇಳಲಾಗಿತ್ತು. ಆದರೆ ನಟ ವೀರ್ ದಾಸ್ ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸತ್ಯವನ್ನು ಬಹಿರಂಗಪಡಿಸಿದ ತಮ್ಮ ಸಹನಟನಿಗೆ ಕಂಗನಾ ಧನ್ಯವಾದ ತಿಳಿಸಿದ್ದಾರೆ.

ವೈರಲ್ ಆಗಿದ್ದ ವದಂತಿ ಏನು?

ಪತ್ರಕರ್ತೆ ಸಿಮಿ ಚಾಂದೋಕ್ ಅವರು ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದರು. ‘ರಿವಾಲ್ವರ್ ರಾಣಿ’ ಚಿತ್ರದ ಶೂಟಿಂಗ್ ವೇಳೆ ಕಂಗನಾ ಜೊತೆ ನಟಿಸಲು ವೀರ್ ದಾಸ್ ಕಷ್ಟಪಟ್ಟಿದ್ದರು ಎಂದು ಅವರು ಹೇಳಿದ್ದರು. ಒಂದು ದೃಶ್ಯದಲ್ಲಿ ಕಂಗನಾ ಅವರು ಕಟ್ ಹೇಳಿದ ಮೇಲೂ ವೀರ್ ದಾಸ್ ಅವರಿಗೆ ಕಿಸ್ ಮಾಡುವುದನ್ನು ಮುಂದುವರಿಸಿದ್ದರು ಎಂದು ಸಿಮಿ ಆರೋಪಿಸಿದ್ದರು. ಅಲ್ಲದೆ ಕಂಗನಾ ಅವರು ವೀರ್ ದಾಸ್ ತುಟಿಗೆ ಜೋರಾಗಿ ಕಚ್ಚಿದ್ದರಿಂದ ರಕ್ತ ಬಂದಿತ್ತು ಎಂದೂ ಅವರು ಹೇಳಿದ್ದರು.

ನಟ ವೀರ್ ದಾಸ್ ಪ್ರತಿಕ್ರಿಯೆ

ಈ ವೈರಲ್ ಸುದ್ದಿ ಸುಳ್ಳು ಎಂದು ವೀರ್ ದಾಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಕಂಗನಾ ಅತ್ಯಂತ ವೃತ್ತಿಪರರಾಗಿ ನಡೆದುಕೊಂಡಿದ್ದರು. ಅವರು ತುಂಬಾ ಪ್ರತಿಭಾವಂತ ನಟಿ. ಈ ಸುದ್ದಿ ಕಂಗನಾ ಅವರಿಗೆ ಮಾಡುತ್ತಿರುವ ಅಪಪ್ರಚಾರವಾಗಿದೆ ಎಂದು ವೀರ್ ದಾಸ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್​​ನ ಹೊರಗಿಟ್ಟಿದ್ದೇಕೆ?

ಕಂಗನಾ ರಣಾವತ್ ಆಕ್ರೋಶ

ಟ್ವಿಟರ್ ಮೂಲಕ ವೀರ್ ದಾಸ್ ಅವರಿಗೆ ಕಂಗನಾ ಧನ್ಯವಾದ ಹೇಳಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಹರಡಿದ ಪತ್ರಕರ್ತೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆ ಪತ್ರಕರ್ತೆ ತನ್ನ ವಿಕೃತ ಲೈಂಗಿಕ ಕಲ್ಪನೆಗಳಿಗಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಂಗನಾ ಕಿಡಿಕಾರಿದ್ದಾರೆ. ನಾನು ನಿಮ್ಮ ರಕ್ತ ಕುಡಿಯುತ್ತಿದ್ದೇನೆ ಮತ್ತು ನೀವು ಇಂದಿಗೂ ನೊಂದು ಅಳುತ್ತಿದ್ದೀರಾ ಎನ್ನುವ ಮಾತುಗಳು ತುಂಬಾ ಹಾಸ್ಯಾಸ್ಪದವಾಗಿವೆ ಎಂದು ಕಂಗನಾ ವ್ಯಂಗ್ಯವಾಡಿದ್ದಾರೆ.

‘ರಿವಾಲ್ವರ್ ರಾಣಿ’ ಸಿನಿಮಾ

ಕಂಗನಾ ರಣಾವತ್ ಮತ್ತು ವೀರ್ ದಾಸ್ ನಟನೆಯ ‘ರಿವಾಲ್ವರ್ ರಾಣಿ’ ಸಿನಿಮಾ 2014 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸಾಯಿ ಕಬೀರ್ ಶ್ರೀವಾಸ್ತವ್ ನಿರ್ದೇಶಿಸಿದ್ದರು. ಸುಮಾರು 22 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ 13 ಕೋಟಿ ರೂಪಾಯಿ ಗಳಿಸಿ ಸೋತಿತ್ತು. ನಿರ್ಮಾಪಕರಿಗೆ ಚಿತ್ರ ನಷ್ಟ ಉಂಟು ಮಾಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಕಾರಣವೇನು? ಇಲ್ಲಿದೆ ಅಸಲಿ ವಿಚಾರ! – Kannada News | Why did Ben Stokes retire from Test cricket so suddenly?

ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ… ಪಂದ್ಯದ ನಡುವೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಮ್ಯಾಚ್ ಆರಂಭಕ್ಕೂ ಮುನ್ನ ಈ ಬಗ್ಗೆ ಸಣ್ಣ ಸುಳಿವು ಕೂಡ ನೀಡದ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ತೀವ್ರ ಮಾನಸಿಕ ಒತ್ತಡ, ದೈಹಿಕ ಬಳಲಿಕೆ ಮತ್ತು ಆಫ್-ಫೀಲ್ಡ್ ವಿವಾದಗಳು ಮತ್ತು ಮನಸ್ತಾಪ!

ಮಾನಸಿಕ ಒತ್ತಡ ಮತ್ತು ಮನಸ್ತಾಪ:

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಮುಖ್ಯ ಕಾರಣ ಮಾನಸಿಕ ಒತ್ತಡ ಮತ್ತು ಮನಸ್ತಾಪ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ನೈಟ್ ಕ್ಲಬ್ ವಿವಾದದ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಬೆನ್ನಿಗೆ ನಿಲ್ಲದೆ ಕೇವಲ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ಅವರಲ್ಲಿ ಬೆಸರವನ್ನುಂಟು ಮಾಡಿದೆ ಎಂದು ತಿಳಿದು ಬಂದಿದೆ.

ಆಶಸ್ ಸರಣಿಯ ಸೋಲಿನಿಂದ ಈಗಾಗಲೇ ತೀವ್ರ ಮಾನಸಿಕ ಒತ್ತಡ ಹಾಗೂ ದೈಹಿಕ ಬಳಲಿಕೆಗೆ ಒಳಗಾಗಿದ್ದ ಸ್ಟೋಕ್ಸ್, ನೈಟ್‌ಕ್ಲಬ್ ವಿವಾದದ ತನಿಖೆಯಲ್ಲಿ ತಮಗೆ ಕ್ಲೀನ್ ಚೀಟ್ ಸಿಕ್ಕಿದರೂ ಬೋರ್ಡ್‌ನ ಹಿರಿಯ ಅಧಿಕಾರಿಗಳು ತಮಗೆ ಬಹಿರಂಗ ಬೆಂಬಲ ನೀಡದೆ ತಂಡದಿಂದ ಅಮಾನತುಗೊಳಿಸಿದ್ದರಿಂದ ಮತ್ತು ಲಿಖಿತ ಎಚ್ಚರಿಕೆ ನೀಡಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದರು.  ಬೋರ್ಡ್ ತನ್ನನ್ನು ಒಂಟಿ ಮಾಡಿ ಮಾಧ್ಯಮಗಳ ಟೀಕೆಗೆ ಗುರಿಪಡಿಸಿದೆ ಎಂದು ಭಾವಿಸಿದ ಅವರು, ಆಟದ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ಜಾಗತಿಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಹಲವರು ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್‌ನ ಈ ನಿಲುವನ್ನು ಕಠಿಣವಾಗಿ ಟೀಕಿಸಿದ್ದು, ಕಳೆದ ಮೂರು ವಾರಗಳ ಈ ಆಡಳಿತಾತ್ಮಕ ಗೊಂದಲವೇ ಸ್ಟೋಕ್ಸ್ ನಿವೃತ್ತಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

 ನಾಯಕತ್ವದ ಭಾರ:

2022 ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬೆನ್ ಸ್ಟೋಕ್ಸ್, ಕೋಚ್ ಬ್ರೆಂಡನ್ ಮೆಕಲಮ್ ಜೊತೆಗೂಡಿ ‘ಬಾಝ್​ಬಾಲ್’ ಎಂಬ ಆಕ್ರಮಣಕಾರಿ ಆಟದ ಶೈಲಿಯನ್ನು ಪರಿಚಯಿಸಿದರು. ಈ ಶೈಲಿ ಇಂಗ್ಲೆಂಡ್ ತಂಡಕ್ಕೆ ಯಶಸ್ಸು ತಂದಿತ್ತಾದರೂ, ಸ್ಟೋಕ್ಸ್ ಅವರ ವೈಯಕ್ತಿಕ ಶಕ್ತಿಯನ್ನು ಸಂಪೂರ್ಣವಾಗಿ ಹೀರಿಬಿಟ್ಟಿತು.

ಇತ್ತೀಚಿನ ಆಶಸ್ ಸರಣಿಯಲ್ಲಿ ಅನುಭವಿಸಿದ 4-1ಮುಖಭಂಗದ ನಂತರ ತಂಡವನ್ನು ಮತ್ತೆ ಹಳಿಗೆ ತರಲು ಅವರು ನಡೆಸಿದ ನಿರಂತರ ಮಾನಸಿಕ ಹೋರಾಟ ಅವರನ್ನು ಸಂಪೂರ್ಣವಾಗಿ ‘ಬರ್ನ್‌ಔಟ್’ ಮಾಡಿತು. ನಾಯಕತ್ವದ ಅತಿಯಾದ ಜವಾಬ್ದಾರಿ ಅವರ ಕುಟುಂಬದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು ಎಂಬುದನ್ನು ಸ್ವತಃ ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ. ಇದು ಕೂಡ ಒಂದು ಕಾರಣ.

ಆಟದ ಮೇಲೆ ನಿರಾಸಕ್ತಿ:

ಯಾವ ಕ್ರೀಡಾಪಟುವೂ ಎದುರಿಸಬಾರದ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಸ್ಟೋಕ್ಸ್ ಎದುರಿಸಿದರು. ಈ ಸರಣಿಯ ಆರಂಭದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲೇ ಅವರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮೂಡತೊಡಗಿದ್ದವು. ಆಟದ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ಅವರು, ಕೇವಲ “ಅದು ನನ್ನ ಜವಾಬ್ದಾರಿ” ಎಂಬ ಏಕೈಕ ಕಾರಣಕ್ಕಾಗಿ ತಮ್ಮನ್ನು ತಾವು ಬಲವಂತವಾಗಿ ಮೈದಾನಕ್ಕೆ ತಳ್ಳಿಕೊಳ್ಳುತ್ತಿದ್ದರು. ನನಗೆ ನಿಜವಾಗಿಯೂ ಆಟದ ಮೇಲೆ ಆಸಕ್ತಿ ಇಲ್ಲದಂತಾಗಿದೆ ಎಂದು ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನಿವೃತ್ತಿ ಹೊಂದುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಸ್ಟೋಕ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!

ಬಳಲಿದ ದೇಹ:

ಕಳೆದ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಸ್ಟೋಕ್ಸ್ ಒಬ್ಬ ಅತ್ಯುತ್ತಮ ಆಲ್‌ರೌಂಡರ್ ಆಗಿ ಮೂರೂ ವಿಭಾಗಗಳಲ್ಲಿ ಶ್ರಮಿಸಿದ್ದಾರೆ. ಮೊಣಕಾಲು, ಹೆಗಲು ಮತ್ತು ಸ್ನಾಯು ಸೆಳೆತದ ನಿರಂತರ ಗಾಯಗಳು 35ರ ಹರೆಯದ ಈ ಆಟಗಾರನ ದೈಹಿಕ ಸಾಮರ್ಥ್ಯವನ್ನು ಕುಂದಿಸಿದ್ದವು. ತಂಡಕ್ಕೆ ಶೇ. 100 ರಷ್ಟು ಕೊಡುಗೆ ನೀಡಲು ಸಾಧ್ಯವಾಗದಿದ್ದಾಗ ಮೈದಾನದಿಂದ ಗೌರವಯುತವಾಗಿ ಹೊರನಡೆಯುವುದೇ ಸೂಕ್ತ ಎಂದು ಬೆನ್ ಸ್ಟೋಕ್ಸ್ ತೀರ್ಮಾನಕ್ಕೆ ಬಂದಿದ್ದಾರೆ. ಈ ನಿರ್ಧಾರದೊಂದಿಗೆ ಸ್ಟೋಕ್ಸ್ ಅವರ ಅಂತಾರಾಷ್ಟ್ರೀಯ ಕೆರಿಯರ್ ಕೂಡ ಅಂತ್ಯವಾಗಿದೆ.

Source link

Gold Rate: ಚಿನ್ನದ ಬೆಲೆ ಗ್ರಾಮ್​ಗೆ 85 ರೂ ಕಡಿಮೆ; ಬೆಳ್ಳಿ ಬದಲಾವಣೆ ಇಲ್ಲ – Kannada News | Gold Price Today on 29th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 29: ಕಳೆದ ಎರಡು ಮೂರು ದಿನಗಳಲ್ಲಿ 300 ರೂಗೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Prices) ಸೋಮವಾರ ಗ್ರಾಮ್​ಗೆ 85 ರೂ ಕಡಿಮೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ತುಸು ಇಳಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,302 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,110 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,727 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,302 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,110 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,110 ರೂ
  • ಚೆನ್ನೈ: 13,330 ರೂ
  • ಮುಂಬೈ: 13,110 ರೂ
  • ದೆಹಲಿ: 13,125 ರೂ
  • ಕೋಲ್ಕತಾ: 13,110 ರೂ
  • ಕೇರಳ: 13,110 ರೂ
  • ಅಹ್ಮದಾಬಾದ್: 13,115 ರೂ
  • ಜೈಪುರ್: 13,125 ರೂ
  • ಲಕ್ನೋ: 13,125 ರೂ
  • ಭುವನೇಶ್ವರ್: 13,110 ರೂ

ಇದನ್ನೂ ಓದಿ: ಹೂಡಿಕೆಗೆ ಯಾವ ಷೇರುಗಳನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲವಾ? ಗಮನಿಸಬೇಕಾದ 10 ಅಂಶಗಳಿವು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 546 ರಿಂಗಿಟ್ (12,673 ರುಪಾಯಿ)
  • ದುಬೈ: 492.75 ಡಿರಾಮ್ (12,655 ರುಪಾಯಿ)
  • ಅಮೆರಿಕ: 135 ಡಾಲರ್ (12,734 ರುಪಾಯಿ)
  • ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,118 ರುಪಾಯಿ)
  • ಕತಾರ್: 494 ಕತಾರಿ ರಿಯಾಲ್ (12,784 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,735 ರುಪಾಯಿ)
  • ಓಮನ್: 51.80 ಒಮಾನಿ ರಿಯಾಲ್ (12,681 ರುಪಾಯಿ)
  • ಕುವೇತ್: 41.36 ಕುವೇತಿ ದಿನಾರ್ (12,670 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ! – Kannada News | Bengaluru Tops India in Over Speeding and Straight Road Crashes; Second in Total Accidents

ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!

ಬೆಂಗಳೂರು, ಜೂನ್ 29: ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆ ಸುರಕ್ಷತೆಯಲ್ಲಿ ಮತ್ತೊಮ್ಮೆ ಆತಂಕಕಾರಿ ದಾಖಲೆ ಬರೆದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ 2024ರ ರಸ್ತೆ ಅಪಘಾತಗಳ (Road Accidents) ವರದಿಯ ಪ್ರಕಾರ, ದೇಶದ ಪ್ರಮುಖ ನಗರಗಳ ಪೈಕಿ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳು ಹಾಗೂ ಅತಿ ವೇಗದ (Over-speeding) ಚಾಲನೆಯಿಂದ ನಡೆಯುವ ರಸ್ತೆ ದುರಂತಗಳಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

ನೇರ ರಸ್ತೆಗಳಲ್ಲಿ ಭೀಕರ ಅಪಘಾತಗಳು

ಸಾಮಾನ್ಯವಾಗಿ ತಿರುವುಗಳು ಅಥವಾ ಕೆಟ್ಟ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಹಜ. ಆದರೆ, ಬೆಂಗಳೂರಿನಲ್ಲಿ ನೇರ ಮತ್ತು ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ವರದಿಯಾಗಿವೆ. ವರದಿಯ ಪ್ರಕಾರ, ನಗರದ ನೇರ ರಸ್ತೆಗಳಲ್ಲಿ ಬರೋಬ್ಬರಿ 4,161 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 766 ಜನರು ಸಾವನ್ನಪ್ಪಿದ್ದಾರೆ ಮತ್ತು 3,463 ಜನರು ಗಾಯಗೊಂಡಿದ್ದಾರೆ. ಇದಕ್ಕೆ ವಿರುದ್ಧವಾಗಿ, ತಿರುವು ರಸ್ತೆಗಳಲ್ಲಿ (Curved roads) 415 ಅಪಘಾತಗಳು ನಡೆದು 87 ಜನರು ಮೃತಪಟ್ಟಿದ್ದಾರೆ. ಆಶ್ಚರ್ಯಕರವಾಗಿ, ಗುಂಡಿಗಳಿಂದಾಗಿ (Potholes) ಕೇವಲ ಎರಡು ಅಪಘಾತಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ನಿರ್ಮಾಣ ಹಂತದಲ್ಲಿರುವ ರಸ್ತೆಗಳಲ್ಲಿ 21 ಅಪಘಾತಗಳು ಸಂಭವಿಸಿದ್ದು, 6 ಮಂದಿ ಜೀವ ಕಳೆದುಕೊಂಡಿದ್ದಾರೆ.

ಅತಿ ವೇಗವೇ ಅಪಘಾತಕ್ಕೆ ಕಾರಣ

ಅತಿ ವೇಗದ ಚಾಲನೆಯ ವಿಭಾಗದಲ್ಲೂ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಅತಿ ವೇಗದಿಂದಾಗಿ ನಗರದಲ್ಲಿ ಒಟ್ಟು 4,290 ಅಪಘಾತಗಳು ಸಂಭವಿಸಿದ್ದು, 776 ಜನರು ಬಲಿಯಾಗಿದ್ದಾರೆ ಹಾಗೂ 3,609 ಜನರು ಗಾಯಗೊಂಡಿದ್ದಾರೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಜಬಲ್ಪುರ ನಗರವು 3,878 ಅಪಘಾತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ (Drunken driving) 129 ಅಪಘಾತಗಳು ಸಂಭವಿಸಿದ್ದು, 45 ಜನರು ಮೃತಪಟ್ಟಿದ್ದಾರೆ.

ಒಟ್ಟು ಅಪಘಾತಗಳಲ್ಲಿ ದೇಶದಲ್ಲೇ ಎರಡನೇ ಸ್ಥಾನ

2024 ರಲ್ಲಿ ಒಟ್ಟಾರೆ ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯನ್ನು ಪರಿಗಣಿಸಿದರೆ, ಬೆಂಗಳೂರು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ದೆಹಲಿಯಲ್ಲಿ 5,657 ಅಪಘಾತಗಳು ನಡೆದು 1,551 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 4,769 ರಸ್ತೆ ಅಪಘಾತಗಳು ದಾಖಲಾಗಿದ್ದು, 894 ಜನರು ಸಾವನ್ನಪ್ಪಿದ್ದಾರೆ ಮತ್ತು 4,022 ಜನರು ಗಾಯಗೊಂಡಿದ್ದಾರೆ. 2023 ಕ್ಕೆ ಹೋಲಿಸಿದರೆ (4,974 ಅಪಘಾತಗಳು, 915 ಸಾವು) ನಗರದಲ್ಲಿ ಅಪಘಾತಗಳ ಸಂಖ್ಯೆ ಶೇ 4.1 ರಷ್ಟು ಕಡಿಮೆಯಾಗಿದೆಯಾದರೂ, 2020 ಕ್ಕೆ ಹೋಲಿಸಿದರೆ (3,233 ಅಪಘಾತಗಳು) ಕಳೆದ ನಾಲ್ಕು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಇದನ್ನೂ ಓದಿ ಕೊಪ್ಪಳ: ಭಾನಾಪೂರ ಬಳಿ ಭೀಕರ ಅಪಘಾತ, ನಾಲ್ವರು ಸಾವು

ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳೇ ಹೆಚ್ಚಿನ ಬಲಿ

ನಗರದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲು. ಬೈಕ್ ಅಪಘಾತಗಳಿಗೆ ಸಂಬಂಧಿಸಿದಂತೆ 2,175 ಪ್ರಕರಣಗಳು ದಾಖಲಾಗಿದ್ದು, 467 ಸವಾರರು ಮೃತಪಟ್ಟಿದ್ದಾರೆ. ಇನ್ನು ಪಾದಚಾರಿಗಳಿಗೆ ಸಂಬಂಧಿಸಿದಂತೆ 216 ಅಪಘಾತಗಳು ಸಂಭವಿಸಿದ್ದರೂ, ಬಲಿಯಾದ ಪಾದಚಾರಿಗಳ ಸಂಖ್ಯೆ ಬರೋಬ್ಬರಿ 241 ಆಗಿದೆ. ಬಹುತೇಕ ಅಪಘಾತಗಳು (4,213 ಅಪಘಾತಗಳು, 755 ಸಾವು) ಹವಾಮಾನವು ಸಂಪೂರ್ಣ ಸ್ವಚ್ಛವಾಗಿದ್ದ ಹಾಗೂ ಬಿಸಿಲಿದ್ದ ಸಂದರ್ಭದಲ್ಲೇ ನಡೆದಿರುವುದು ವಿಶೇಷವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೆ ಕೇಂದ್ರ ನೀಡುವ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯದಿಂದ ಸಿಗ್ತಿಲ್ಲ ಅನುಮೋದನೆ: ತೇಜಸ್ವಿ ಸೂರ್ಯ ಗಂಭೀರ ಆರೋಪ – Kannada News | BJP MP Tejasvi Surya Slams Karnataka Govt Over Delay in Cabinet Approval for 4500 Central Electric Buses for BMTC

ತೇಜಸ್ವಿ ಸೂರ್ಯ (ಚಿತ್ರ ಕೃಪೆ: ತೇಜಸ್ವಿ ಸೂರ್ಯ ಫೇಸ್​​ಬುಕ್ ಪುಟ)Image Credit source: Facebook

ಬೆಂಗಳೂರು, ಜೂನ್ 29: ಬೆಂಗಳೂರಿನ (Bengaluru) ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಬಿಎಂಟಿಸಿಗೆ (BMTC) ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಬಸ್‌ಗಳ ನಿಯೋಜನೆಗೆ ಅಗತ್ಯವಿರುವ ಕ್ಯಾಬಿನೆಟ್ ಅನುಮೋದನೆಯನ್ನು ನೀಡದೆ ಉದಾಸೀನತೆ ತೋರುತ್ತಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಸ್‌ಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ತನ್ನ ಪಾಲಿನ ಅತ್ಯಲ್ಪ ಮೊತ್ತದ ಹಣವನ್ನು ಹೂಡಿಕೆ ಮಾಡಬೇಕಿದೆ. ಆದರೆ, ಸಾರ್ವಜನಿಕ ಹಿತಾಸಕ್ತಿಯ ಈ ಯೋಜನೆಗೆ ಒಪ್ಪಿಗೆ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಐಷಾರಾಮಿ ಟನಲ್ ಯೋಜನೆಗಳಿಗೆ ಹಣವಿದೆ, ಸಾರ್ವಜನಿಕ ಸಾರಿಗೆಗಿಲ್ಲವೇ?

ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ‘ಈ ಬಸ್ಸುಗಳ ವಿಳಂಬದ ಕುರಿತು ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದು, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸಹ ಇದಕ್ಕೆ ಪೂರಕವಾಗಿ ಉತ್ತರಿಸಿದ್ದಾರೆ. ಈ ಸರ್ಕಾರದ ಬಳಿ 1,300 ಕಿಲೋಮೀಟರ್ ಹಾಗೂ ಕೇವಲ ಐಷಾರಾಮಿ ಕಾರುಗಳ ಸಂಚಾರಕ್ಕಾಗಿ 2 ಕಿಲೋಮೀಟರ್ ಉದ್ದದ ಟನಲ್ ರಸ್ತೆಗಳಂತಹ ವಿಐಪಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲು ಹಣವಿದೆ. ಆದರೆ, ದಿನನಿತ್ಯ ಬಿಎಂಟಿಸಿ ಬಸ್ ಹಾಗೂ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗಾಗಿ ಖರ್ಚು ಮಾಡಲು ಹಣವಿಲ್ಲವೇ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗಕರಿಕರು 2ನೇ ದರ್ಜೆ ಪ್ರಜೆಗಳು: ಸೂರ್ಯ

ಈ ಸರ್ಕಾರದ ದೃಷ್ಟಿಯಲ್ಲಿ ಸಾಮಾನ್ಯ ನಾಗರಿಕರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಇವರಿಗೆ ದಿನಾಲೂ ಬಸ್‌ನಲ್ಲಿ ಓಡಾಡುವ ಮಹಿಳೆಯರಾಗಲಿ, ಪಾದಚಾರಿಗಳಾಗಲಿ ಆದ್ಯತೆಯಾಗಿ ಉಳಿದಿಲ್ಲ. ಕಮಿಷನ್ ದಂಡು ಹೊಡೆಯಬಹುದಾದ ‘ಬಿಳಿ ಆನೆ’ಯಂತಹ ದೊಡ್ಡ ಯೋಜನೆಗಳ ಬೆನ್ನತ್ತಿರುವ ವಿಐಪಿ ಸರ್ಕಾರ ಇದಾಗಿದೆ ಎಂದು ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದರು.

ತೇಜಸ್ವಿ ಸೂರ್ಯ ಮಾತಿನ ವಿಡಿಯೋ

ಬನಶಂಕರಿ ಸ್ಕೈವಾಕ್ ಕಾಮಗಾರಿ ಸ್ಥಗಿತಕ್ಕೆ ತೀವ್ರ ವಿರೋಧ

ಇದೇ ವೇಳೆ, ಬೆಂಗಳೂರಿನ ಸ್ಥಳೀಯ ಮೂಲಸೌಕರ್ಯಗಳ ಕುರಿತು ಮಾತನಾಡಿದ ತೇಜಸ್ವಿ ಸೂರ್ಯ, ಬನಶಂಕರಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರು ಮತ್ತು ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್ (ಪಾದಚಾರಿ ಮೇಲ್ಸೇತುವೆ) ನಿರ್ಮಾಣ ಮಾಡಲು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ, ಈಗ ಆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಯಾರೋ ಒಬ್ಬ ಗುತ್ತಿಗೆದಾರನ ಮಾತು ಕೇಳಿ, ಲಾಭದ ಉದ್ದೇಶದಿಂದ ಇಲ್ಲೊಂದು ಫ್ಲೈ ಓವರ್ ಮಾಡಲು ಸರ್ಕಾರ ಹೊರಟಿದೆ ಎಂದು ದೂರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಗೋಕರ್ಣ ಮಹಾಬಲೇಶ್ವರ ದೇಗುಲದ ಗರ್ಭಗುಡಿಗೆ ನುಗ್ಗಿದ ನೀರು, ಹಲವೆಡೆ ಸಂಚಾರ ವ್ಯತ್ಯಯ – Kannada News | Heavy Rains in Uttara Kannada: Gokarna Mahabaleshwar Temple Sanctum Flooded, Atmalinga Submerged

ಗೋಕರ್ಣ ಮಹಾಬಲೇಶ್ವರ ದೇಗುಲದ ಆವರಣ ಜಲಾವೃತಗೊಂಡಿರುವುದು ಹಾಗೂ ಗರ್ಭಗುಡಿಗೆ ನೀರು ನುಗ್ಗಿರುವುದುImage Credit source: tv9

ಕಾರವಾರ್, ಜೂನ್ 29: ಕರ್ನಾಟಕದ (Karnataka) ಒಳನಾಡಿನ ಹಲವೆಡೆ ಮಳೆಯಿಲ್ಲದೆ ರೈತರು ಬರಗಾಲದ ಆತಂಕದಲ್ಲಿದ್ದರೆ, ಇತ್ತ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಮುಂಗಾರು ಮಳೆ (Monsoon Rain) ಅಬ್ಬರಿಸುತ್ತಿದೆ. ಕಳೆದ 36 ಗಂಟೆಗಳಿಂದ ಜಿಲ್ಲಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಭಾರಿ ಮಳೆಯ ಪರಿಣಾಮವಾಗಿ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಮಳೆನೀರು ನುಗ್ಗಿದ್ದು, ಪವಿತ್ರ ಆತ್ಮಲಿಂಗ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಭಕ್ತರಿಗೆ ನೀಡಲಾಗುತ್ತಿದ್ದ ಆತ್ಮಲಿಂಗದ ಸ್ಪರ್ಶ ದರ್ಶನವನ್ನು ಭಾನುವಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.

ಪಂಪ್‌ಸೆಟ್ ಮೂಲಕ ನೀರು ಹೊರಕ್ಕೆ

ದೇವಸ್ಥಾನದ ಒಳಗೆ ನೀರು ನುಗ್ಗಿದ್ದರಿಂದ ಪ್ರತಿದಿನ ಮಧ್ಯಾಹ್ನ 12:30 ಕ್ಕೆ ಜರುಗುತ್ತಿದ್ದ ಮಹಾಪೂಜೆಯನ್ನು ನೆರವೇರಿಸಲು ಅರ್ಚಕರು ತೀವ್ರ ಅಡಚಣೆ ಎದುರಿಸಬೇಕಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ದೇವಸ್ಥಾನದ ಸಿಬ್ಬಂದಿ, ಗರ್ಭಗುಡಿಯ ಹೊರಗಿನ ನೀರು ಒಳಗೆ ಬರದಂತೆ ತಡೆಗೋಡೆ ನಿರ್ಮಿಸಿಕೊಂಡು, ಪಂಪ್‌ಸೆಟ್ ಮೂಲಕ ಗರ್ಭಗುಡಿಯಲ್ಲಿದ್ದ ನೀರನ್ನು ಹೊರಹಾಕಲು ಹರಸಾಹಸ ಪಟ್ಟರು. ಇತ್ತ ಗೋಕರ್ಣದ ಪ್ರಮುಖ ರಸ್ತೆ ಹಾಗೂ ಬೀದಿಗಳು ಸಂಪೂರ್ಣವಾಗಿ ಕೆರೆಯಂತಾಗಿದ್ದು, ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಪ್ರವಾಸಿಗರು ಮತ್ತು ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸಿದರು.

ಹೆದ್ದಾರಿಗಳು ಬಂದ್: ಮುಳುಗಡೆಯ ಭೀತಿಯಲ್ಲಿ ಅಂಗಡಿ-ಮುಂಗಟ್ಟುಗಳು

ಮಳೆಯ ಆರ್ಭಟ ಕೇವಲ ಗೋಕರ್ಣಕ್ಕೆ ಮಾತ್ರ ಸೀಮಿತವಾಗಿರದೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನಾಲ್ಕೂ ತಾಲೂಕುಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ಕುಮಟಾ – ಸಿದ್ದಾಪುರ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ವಾಲಗಳಿ ಬಳಿ ರಸ್ತೆಯ ಮೇಲೆ ಹಳ್ಳದಂತೆ ನೀರು ಹರಿದಿದ್ದರಿಂದ ದ್ವಿಚಕ್ರ ವಾಹನ ಸವಾರರು ಮುಂದೆ ಸಾಗಲಾರದೆ ರಸ್ತೆ ಬದಿಯಲ್ಲೇ ನಿಲ್ಲಬೇಕಾಯಿತು. ಬೃಹತ್ ವಾಹನಗಳು ಪ್ರಾಣದ ಹಂಗು ತೊರೆದು ನೀರಿನಲ್ಲೇ ಪರದಾಡುತ್ತಾ ಚಲಿಸಿದವು. ಇನ್ನು ಹೆದ್ದಾರಿ ಬದಿಯ ತಗ್ಗು ಪ್ರದೇಶದ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿತ್ತಾದರೂ, ಅದೃಷ್ಟವಶಾತ್ ಮಳೆಯ ತೀವ್ರತೆ ಕೊಂಚ ಕಡಿಮೆಯಾದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು; ಪಶ್ಚಿಮ ಘಟ್ಟಗಳ ನಿಸರ್ಗ ವೈಭವಕ್ಕೆ ಪ್ರವಾಸಿಗರು ಫುಲ್ ಫಿದಾ

ಒಟ್ಟಾರೆಯಾಗಿ ಕಳೆದ 36 ಗಂಟೆಗಳ ಮಳೆ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಕೈಮೀರಬಹುದು ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದ್ದು, ಜಿಲ್ಲಾಡಳಿತವು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Free Bus Pass For All Students: ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ – Kannada News | Free Bus Pass Karnataka: Apply Now and Get Refund for Paid Student Passes

ಬೆಂಗಳೂರು, ಜೂನ್ 29: ಕರ್ನಾಟಕದಲ್ಲಿ ಪ್ರಸ್ತುತ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಇಂದಿನಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಶಾಲಾ ಕಾಲೇಜುಗಳು ಈಗಾಗಲೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಉಚಿತ ಬಸ್ ಪಾಸ್ ಘೋಷಣೆಗೂ ಮುನ್ನ ಬಸ್ ಪಾಸ್ ಪಡೆದುಕೊಂಡು ಶುಲ್ಕ ಪಾವತಿಸಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸರ್ಕಾರವು ಹಣ ಮರುಪಾವತಿಸುವ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುವಾಗ ಪಾವತಿಸಿದ್ದ ಶುಲ್ಕವನ್ನು ಮರಳಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಈ ಹಣ ಮರುಪಾವತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿವೆ. ಶುಲ್ಕ ಪಾವತಿಸಿದ್ದ ವಿದ್ಯಾರ್ಥಿಗಳಿಗೆ 7 ದಿನಗಳೊಳಗೆ ಅವರ ಹಣವನ್ನು ಹಿಂದಿರುಗಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಯೋಜನೆಯು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ.

ಇದನ್ನೂ ಓದಿ ಸೇವಾ ಸಿಂಧು ಪೋರ್ಟಲ್​ನಲ್ಲಿ ಉಚಿತ ಬಸ್ ಪಾಸ್​ಗೆ ಅರ್ಜಿ ಸಲ್ಲಿಸುವುದು ಹೇಗೆ? ಹಂತ ಹಂತದ ಮಾಹಿತಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್-ಅಫ್ಘಾನ್ ಗಡಿಯಲ್ಲಿ ಭೀಕರ ಸೇನಾ ದಾಳಿ, ಉದ್ವಿಗ್ನತೆ: 35 ನಾಗರಿಕರ ಸಾವು – Kannada News | Afghan Border Crisis: Pakistan Operation Kills 35 Civilians, Regional Security at Risk

ಕಾಬೂಲ್, ಜೂ.29: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಪಡೆಗಳು ನಡೆಸಿದ ಭೀಕರ ಭೂ ಕಾರ್ಯಾಚರಣೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ 35 ಕ್ಕೂ ಹೆಚ್ಚು ನಾಗರಿಕರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ರಾಜತಾಂತ್ರಿಕ ಹಾಗೂ ಗಡಿ ಉದ್ವಿಗ್ನತೆ ಅತ್ಯಂತ ಗಂಭೀರ ಹಂತಕ್ಕೆ ತಲುಪಿದೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ‘ಪಾಕಿಸ್ತಾನ ರೇಂಜರ್ಸ್’ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯನ್ನು ಅಫ್ಘಾನಿಸ್ತಾನ ಮೂಲದ ಉಗ್ರಗಾಮಿಗಳೇ ಮಾಡಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಗಂಭೀರವಾಗಿ ಆರೋಪಿಸಿತ್ತು. ಈ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಅಫ್ಘಾನ್ ಗಡಿಯುದ್ದಕ್ಕೂ ಬೃಹತ್ ಮತ್ತು ಕಟ್ಟುನಿಟ್ಟಿನ ಭೂ ಕಾರ್ಯಾಚರಣೆಯನ್ನು ಕೈಗೊಂಡಿದ್ದವು.

ಈ ಕಾರ್ಯಾಚರಣೆಯ ವೇಳೆ ಗಡಿ ಭಾಗದಲ್ಲಿ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಗಳಿಗೆ ಸಿಲುಕಿ 35 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಯಾವುದೇ ತಪ್ಪು ಮಾಡದ ಅಮಾಯಕ ಮಕ್ಕಳು ಮತ್ತು ವೃದ್ಧರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ದಾಳಿಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಸೇನೆ, ತಾನು ನಡೆಸಿದ ಕಾರ್ಯಾಚರಣೆಯಲ್ಲಿ ಗಡಿಯಾಚೆಗಿನ ಭದ್ರತೆಗೆ ಭಂಗ ತರುತ್ತಿದ್ದ 35 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ.

ಇದನ್ನೂ ಓದಿ: ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ

ಈ ಇತ್ತೀಚಿನ ಬೆಳವಣಿಗೆಯು ಗಡಿಯಾಚೆಗಿನ ಹಿಂಸಾಚಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಫ್ಘಾನಿಸ್ತಾನದ ಆಡಳಿತವು ತನ್ನ ನಾಗರಿಕರ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಡಿಯಲ್ಲಿ ಸೇನಾ ಪಡೆಗಳನ್ನು ಜಮಾಯಿಸುತ್ತಿದೆ. ಎರಡು ನೆರೆ ರಾಷ್ಟ್ರಗಳ ನಡುವೆ ಉಂಟಾಗಿರುವ ಈ ಉದ್ವಿಗ್ನತೆಯು ದಕ್ಷಿಣ ಏಷ್ಯಾದ ಭದ್ರತೆಗೆ ಹೊಸ ಸವಾಲನ್ನು ತಂದೊಡ್ಡಿದ್ದು, ಗಡಿಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಹೊಸ ದಾಖಲೆ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | TV9 Kannada News Live 29 June 2026 CM Dk Shivakumar Bengaluru Tunnel Road Politics Cinema Latest News

ವಾಣಿಜ್ಯ ನಗರಿ ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ 15,000 ಜನರನ್ನು ವಿಷದ ಗುಳಿಗೆ ನೀಡಿ ಕೊಲ್ಲಲು ಸಂಚು ರೂಪಿಸಿದ್ದ ಬಿಬಿಎ ಪದವೀಧರ ಫಯ್ಯಾಜ್ ಪ್ರೇಮ್‌ಜಿಯನ್ನು ಪೊಲೀಸರು 14,900 ವಿಷದ ಕ್ಯಾಪ್ಸೂಲ್‌ಗಳೊಂದಿಗೆ ಬಂಧಿಸಿ, ಭೀಕರ ಹತ್ಯಾಕಾಂಡವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ ದಾಖಲೆಯ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಹಾಕಲಾಗಿದ್ದು, ಶೇ. 96.4 ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಕಥೆಗಾರರಿಗೆ ಮುಕ್ತ ವೇದಿಕೆ ಕಲ್ಪಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Source link

Exit mobile version