ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ – Kannada News | Karnataka Voter List Revision: EC Begins House to House Survey, Aadhaar Linking

ಬೆಂಗಳೂರು, ಜೂ.29: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಹಾಗೂ ನಕಲಿ ಮತದಾರರಿಗೆ ಬ್ರೇಕ್ ಹಾಕಲು ನಾಳೆಯಿಂದ (ಜೂನ್ 30) ಅತ್ಯಂತ ಕಟ್ಟುನಿಟ್ಟಿನ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯಲಿದೆ.

ಮತದಾರರ ಪಟ್ಟಿಯ ನೈಜತೆಯನ್ನು ಪರಿಶೀಲಿಸಲು ನಾಳೆಯಿಂದ ಜುಲೈ 29ರವರೆಗೆ ಆಯಾ ಭಾಗದ ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ಬಾರಿ ನಕಲಿ ಮತದಾರರನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಆಯೋಗವು ಪ್ರತಿಯೊಬ್ಬ ಮತದಾರರ ‘ಪ್ರೊಜೆನಿ ಮ್ಯಾಪಿಂಗ್’ (ಕುಟುಂಬದ ವಂಶಾವಳಿ ಆಧಾರಿತ ಮ್ಯಾಪಿಂಗ್) ತಂತ್ರಜ್ಞಾನವನ್ನು ಬಳಸುತ್ತಿದೆ. ಸಮೀಕ್ಷೆಯ ವೇಳೆ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ವಿವರಗಳ ಹೊಂದಾಣಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಈ ಪರಿಷ್ಕರಣಾ ಅವಧಿಯಲ್ಲಿ ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಯಾರೆಲ್ಲಾ ಲಭ್ಯವಿರುವುದಿಲ್ಲವೋ ಅಥವಾ ಇತ್ತೀಚೆಗೆ ಮನೆ ಬದಲಾಯಿಸಿ ಬೇರೆಡೆ ವಲಸೆ ಹೋಗಿದ್ದಾರೋ, ಅಂತಹವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.

18 ವರ್ಷ ತುಂಬಿದ ಯುವಕ-ಯುವತಿಯರು ಅಥವಾ ಇದುವರೆಗೆ ಹೆಸರು ಸೇರಿಸದವರು ಫಾರಂ 6 ಬಳಸಿ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ತಿದ್ದುಪಡಿ ಮಾಡಲು ಅಥವಾ ಹೊಸ ವಿಳಾಸಕ್ಕೆ ಹೆಸರು ವರ್ಗಾಯಿಸಲು ಫಾರಂ 8 ಅನ್ನು ಬಳಸಬೇಕಾಗುತ್ತದೆ. ಜೂನ್ 30 ರಿಂದ ಜುಲೈ 29ರವರೆಗೆ ಬಿಎಲ್‌ಒಗಳಿಂದ ಮನೆ-ಮನೆ ಸಮೀಕ್ಷೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟಣೆ. ಅಕ್ಟೋಬರ್ 7ರಂದು ಎಲ್ಲಾ ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ.

ಇದನ್ನೂ ಓದಿ: ದೇಶಾದ್ಯಂತ ‘SIR’ ಮತದಾರರ ಪಟ್ಟಿ ಪರಿಷ್ಕರಣೆ: 12 ರಾಜ್ಯಗಳಲ್ಲಿ ಬರೋಬ್ಬರಿ 5.18 ಕೋಟಿ ಮತದಾರರ ಹೆಸರು ಡಿಲೀಟ್

ಯಾವೆಲ್ಲಾ ರಾಜ್ಯಗಳಲ್ಲಿ ಈ ಪರಿಷ್ಕರಣೆ?:

ಕರ್ನಾಟಕ, ದೆಹಲಿ, ಪಂಜಾಬ್, ಹರಿಯಾಣ, ಉತ್ತರಾಖಂಡ್, ಮಣಿಪುರ, ಮೇಘಾಲಯ, ಜಾರ್ಖಂಡ್, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಸೇರಿದಂತೆ ಒಟ್ಟು 19 ಪ್ರಮುಖ ವಲಯಗಳಲ್ಲಿ ಈ ವಿಶೇಷ ಪರಿಷ್ಕರಣೆ ನಾಳೆಯಿಂದ ಏಕಕಾಲದಲ್ಲಿ ಜಾರಿಗೆ ಬರಲಿದೆ.

12 ರಾಜ್ಯಗಳಲ್ಲಿ ಬರೋಬ್ಬರಿ 5.18 ಕೋಟಿ ಮತದಾರರ ಹೆಸರು ಡಿಲೀಟ್

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಹಮ್ಮಿಕೊಂಡಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಕ್ರಿಯೆ ಪ್ರಕಾರ, ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 5.18 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಧಿಕೃತವಾಗಿ ಕೈಬಿಡಲಾಗಿದೆ. ಚುನಾವಣಾ ಆಯೋಗದ ಈ ವೋಟರ್ ಲಿಸ್ಟ್ ಕ್ಲೀನ್-ಅಪ್ ಪ್ರಕ್ರಿಯೆಯು ಆರಂಭದಿಂದಲೂ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಸೂಕ್ತ ದಾಖಲೆಗಳ ಕೊರತೆಯ ನೆಪವೊಡ್ಡಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ಪ್ರಮುಖ ಸಾಮಾಜಿಕ ಕಾರ್ಯಕರ್ತರು ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಈ ಎಲ್ಲಾ ಕಾನೂನು ಸವಾಲುಗಳು ಮತ್ತು ರಾಜಕೀಯ ವಿವಾದಗಳ ನಡುವೆಯೂ, ದೇಶದ ಸರ್ವೋನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಈ ಮಹತ್ತರ ಹೆಜ್ಜೆಯನ್ನು ಸರ್ವಾನುಮತದಿಂದ ಎತ್ತಿಹಿಡಿದು, ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:43 am, Mon, 29 June 26

Source link

Horoscope Today: ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ! – Kannada News | Horoscope Today 29th June​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 29, ಸೋಮವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷದ ಮೂಲಾ ನಕ್ಷತ್ರ, ಭದ್ರ ಯೋಗ ಹಾಗೆ ಶುಕ್ಲ ಯೋಗ, ಭದ್ರ ಕರಣ ಈ ದಿನದ ಪ್ರಮುಖ ಪಂಚಾಂಗ ಅಂಶಗಳಾಗಿವೆ.

ಸೋಮವಾರದ ರಾಹುಕಾಲ ಬೆಳಗ್ಗೆ 7.32 ನಿಮಿಷದಿಂದ 9.08 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲವು 9.09 ನಿಮಿಷದಿಂದ 10.46 ನಿಮಿಷದ ತನಕ ಲಭ್ಯವಿದೆ. ಇದು ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಲು ವಿಶೇಷವಾಗಿ ಸೂಕ್ತವಾದ ಸಮಯವಾಗಿದೆ.

ಇದಲ್ಲದೆ, ಈ ದಿನವನ್ನು ಭೂಮಿ ಹುಣ್ಣಿಮೆ ಅಥವಾ ಕಾರ ಹುಣ್ಣಿಮೆ ಎಂದು ಆಚರಿಸಲಾಗುತ್ತದೆ. ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸುವ ಪವಿತ್ರ ದಿನವೂ ಇದಾಗಿದೆ. ಜೇಷ್ಠ ಮಾಸದಲ್ಲಿ ಬರುವ ಸಂತ ಕಬೀರದಾಸರ ಜಯಂತ್ಯೋತ್ಸವವನ್ನೂ ಸಹ ಈ ದಿನದಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ತಮ್ಮ ರಾಶಿಗಳಿಗೆ ಅನುಗುಣವಾಗಿ ಶುಭ ಮತ್ತು ಅಶುಭ ಫಲಗಳನ್ನು ಡಾ. ಬಸವರಾಜ ಗುರೂಜಿ ವಿವರವಾಗಿ ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಹಲವು ಪ್ರಯೋಜನವಿದ್ದರೂ ನಗಣ್ಯ – Kannada News | Daily Horoscope for June 29, 2026: Monday Astrology Predictions for All 12 Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಮೂಲಾ, ಯೋಗ : ಶುಕ್ಲ, ಕರಣ : ಭದ್ರ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:34 – 09:10, ಯಮಗಂಡ ಕಾಲ 10:47 – 12:23, ಗುಳಿಕ ಕಾಲ 13:59 – 15:36

ಮೇಷ ರಾಶಿ: ನಿಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ.‌ ಅನೇಕ ಲಾಭಗಳು ನಿಮಗಾಗಲಿವೆ. ಸುವಸ್ತುವಿನ ದಾನವನ್ನು ಮಾಡಿ ಪುಣ್ಯ ಸಂಗ್ರಹ ಮಾಡಿಕೊಳ್ಳುವಿರಿ. ಬುದ್ಧಿಪೂರ್ವಕವಾಗಿ ನೀವಿಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.‌ ನಿಮ್ಮ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬರಬಹುದು. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ.

ವೃಷಭ ರಾಶಿ: ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ನೀವಂದುಕೊಂಡ ಉದ್ಯೋಗವು ಸಿಗದೇ ಹೋಗಬಹದು. ನಿಮ್ಮ ಸ್ತರವನ್ನು ಅರಿತು ವರ್ತಿಸಬೇಕು. ಅತ್ತ ಕಡೆ ನಿಮ್ಮ ಗಮನ ಯಾವಾಗಲೂ ಬೇಕು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ನಡೆದಾಡುವ ಹಾದಿಗಳು ಒಂದೇ ರೀತಿ ಇರದು ಎನ್ನುವುದು ಗಮನದಲ್ಲಿಟ್ಟುಕೊಳ್ಳಿ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು.

ಮಿಥುನ ರಾಶಿ: ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಇಂದು ನಿಮಗೆ ಭವಿಷ್ಯದ ಬಗ್ಗೆ ಬಹಳ ಆಲೋಚನೆ ಇರಲಿದೆ‌. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆನಿಸುವುದು. ಒನ್ಬರನ್ನೇ ಸಹಾಯಕ್ಕಾಗಿ ಬೇಡುವುದು ಬೇಡ. ಸಂಗಾತಿಯ ಜೊತೆ ಕಾಲಕಳೆಯುವಿರಿ. ತಂದೆಯಿಂದ ಅಸಮಾಧನಾವಾದೀತು. ದೈವವೇ ನಿಮ್ಮನ್ನು ಅನುಕೂಲ ವಾತಾವರಣದ ಕಡೆ ಒಯ್ಯಲಿದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು.

ಕರ್ಕಾಟಕ ರಾಶಿ: ನೂತನ ಉದ್ಯೋಗವನ್ನು ಪ್ರಾರಂಭಿಸುವ ಅಲೋಚನೆ ಇದ್ದರೆ ಸದ್ಯ ಕೂಗೂಡುವುದು ಕಷ್ಟ. ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ಪೂರ್ಣವಾಗಿ ಸರಿ ಮಾಡಿಕೊಳ್ಳಿ. ಬಿರುಕಿನ ಬಾಂಧವ್ಯದಿಂದ ಹೊರಬರುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಬಹುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಯಂತ್ರಗಳ ಕೆಲಸವು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು.

ಸಿಂಹ ರಾಶಿ: ನಿಮ್ಮ ಆರ್ಥಿಕತೆಯು ಏರಿಕೆಯಾಗಲಿದೆ. ನಿಮ್ಮವರ ಮೇಲೆ‌ ನಿಮಗೆ ಬೇಸರ ಉಂಟಾಗಬಹುದು. ನಿಮ್ಮ ಹೃದಯ ವೈಶಾಲ್ಯವನ್ನು ತೋರಿಸುವಿರಿ. ವಿವಾಹವಾಗಬೇಕೆಂಬ ಆತುರ ಸರಿಯಲ್ಲ.‌ ಆಡಿದ ಮಾತನ್ನೇ ಮತ್ತೆ ಮತ್ತೆ ಹೇಳಿ ಕಿರಿಕಿರಿ ತರಿಸುವಿರಿ. ಕಾಲ ಬಂದಾಗ ಎಲ್ಲವೂ ಸರಿಯಾಗುತ್ತದೆ. ಯಾರನ್ನೂ ಒತ್ತಾಯಕ್ಕೆ ಬಳಸಿಕೊಳ್ಳುವುದು ಬೇಡ. ಅತಿಯಾದ ಆಸೆಯಿಂದ ಮೋಸ ಹೋಗಬೇಕಾಗಬಹುದು. ಎಚ್ಚರಿಕೆ ಇಂದ ವ್ಯವಹರಿಸಿ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ.

ಕನ್ಯಾ ರಾಶಿ: ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಸುಪ್ತ ಮನಸ್ಸಿನ ಮಾತು ನಿಜವಾಗಬಹುದು. ಗೊಂದಲವಿರುವ ವಿಚಾರದ ಬಗ್ಗೆ ಅತಿಯಾಗಿ ತಲೆ ಕಡಸಿಕೊಳ್ಳಬೇಡಿ.‌ ಸ್ವಲ್ಪ ದಿನ ಅದನ್ನು ತಲೆಯಿಂದ ತೆಗದು ಹಾಕಿ. ನಿಮ್ಮ ಗೊಂದಲವನ್ನು ಇನ್ನೊಬ್ಬರಿಗೆ ಹೇರುವುದು ಬೇಡ. ನಿಮ್ಮ ಬೆಳವಣಿಗೆತಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ವೈದ್ಯವೃತ್ತಿಯಲ್ಲಿ ಒತ್ತಡವಿರುವುದು. ನೀವು ಕಷ್ಟವನ್ನೂ ಸಂತೋಷದಿಂದ ಕಳೆಯುವಿರಿ.

ತುಲಾ ರಾಶಿ: ಒಂಟಿಯಾಗೆ ಸುತ್ತಾಡುವ ಬಯಕೆ ಉಂಟಾಗಲಿದೆ. ಅಧಿಕ ಸುತ್ತಾಟದಿಂದ ಆಯಾಸವಾಗಬಹುದು. ಸ್ವಂತ ಖರ್ಚಿನಿಂದಲಾದರೂ ಬೇಕಾದುದನ್ನು ಕೊಡಿಸುವಿರಿ. ನಿಮ್ಮ ಶಕ್ತಿಯನ್ನು ಆಧರಿಸಿಕೊಂಡು ಮುಂದುವರಿಯಿರಿ. ಜೀವನಕ್ಕೆ ಅನುಭವಿಗಳ ಮಾರ್ಗದಶರ್ನವನ್ನು ಪಡೆದುಕೊಳ್ಳುವಿರಿ. ನಿಮ್ಮ ವಾಹನವು ದುರಸ್ತಿಗೆ ಬರಬಹುದು. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ಇಂದು ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ.

ವೃಶ್ಚಿಕ ರಾಶಿ: ವಾಹನಕ್ಕೋಸ್ಕರ ಸಾಲಮಾಡುವ ಸ್ಥಿತಿ. ಬಂಧುಗಳ ಸಹಕಾರ ಸಿಗದೇ ಅವರನ್ನು ದ್ವೇಷಿಸಬಹುದು. ಸಾಮಾಜಿಕ ಕಾರ್ಯಗಳಲ್ಲಿ ಸಲ್ಪ ಕಾಲ ತೊಡಗುವಿರಿ. ಅತಿಯಾದ ಹಠವು ಒಳ್ಳೆಯದಲ್ಲ. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಿದರೆ ಕೂಡಲೇ ಸಿಗುತ್ತದೆ ಎಂಬ ಭ್ರಮೆ ಬೇಡ. ದ್ವಂದ್ವದಲ್ಲಿ ನಿಮ್ಮ ಮನಸ್ಸು ಇರಲಿದೆ. ದೇವರ ವಿಷಯದಲ್ಲಿ ನಂಬಿಕೆ ಕಡಿಮೆ ಆಗಬಹುದು. ಆಲಸ್ಯದಿಂದ‌ ಮಾಡಬೇಕಾದ ಕೆಲಸವನ್ನು ಮಾಡದೇ ಇರುವಿರಿ. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.

ಧನು ರಾಶಿ: ಸಾಮಾಜಿಕವಾಗಿ ನಿಮ್ಮ ಕಾರ್ಯವನ್ನು ಗುರುತಿಸಿ ಸಮ್ಮಾನಿಸಬಹುದು. ಹೂಡಿಕೆಯನ್ನು ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ. ಹೊಂದಣೆಯನ್ನು ಅಲ್ಪ ಪ್ರಮಾಣದಲ್ಲಿ ಮಾಡಿಕೊಳ್ಳುವಿರಿ. ಇಂದಿನ ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ಉದ್ಯೋಗವನ್ನು ಬಿಡುವ ಮನಸ್ಸಾಗಬಹುದು. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು.

ಮಕರ ರಾಶಿ: ವಂಚನೆಯಿಂದ ನಿಮ್ಮ ಹಣ ನಷ್ಟ ಮಾಡಿಕೊಳ್ಳುವಿರಿ. ಮನೆಯಲ್ಲಿ ಮಕ್ಕಳ ಜೊತೆ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಆಡಿಕೊಂಡಾರು. ಸಹೋದ್ಯೋಗಿಗಳು ನಿಮ್ಮ ಮೇಲೆ ಕೆಲಸದ ಭಾರವನ್ನು ಹೊರಿಸಬಹುದು. ದಾಂಪತ್ಯದ ವಿರಸವು ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಕಠೋರ ಮಾತಿನಿಂದ ವಿಚಲಿತವಾಗುವುದು.

ಕುಂಭ ರಾಶಿ: ಸಹೋದರರ ಜೊತೆ ಕಲಹವಾಗಿ ಕೆಲವು ಕಾಲ ಮೌನವಹಿಸುವಿರಿ. ಕೆಟ್ಟವರ ಸಹವಾಸದಿಂದ ಕೆಟ್ಟ ಹೆಸರೇ ಬರಲಿದೆ.‌ ಆರ್ಥಿಕತೆಯ ಬಗ್ಗೆ ಇರುವ ನಿಮ್ಮ ಧೋರಣೆ ಬದಲಾಗುವುದು. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದು. ಮುಂದೆ ಮಾಡಿದರಾಯಿತು ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ತಂದೆಯಿಂದ ಹಿತವಚನವು ಸಿಗಬಹುದು. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ.‌

ಮೀನ ರಾಶಿ: ನೀವು ಪ್ರಯತ್ನಿಸಿದ ಕಾರ್ಯಗಳು ಫಲಿಸುವುದು ಎಂಬ ನಂಬಿಕೆ ಇರುವುದು. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ಚರ್ಚಿತ ವಿಚಾರವನ್ನೇ ಚರ್ಚಿಸಿ ಪ್ರಯೋಜನವಾಗದು. ನೀವು ಮಾಡಲು ಹೊರಟ ಕೆಲಸದ ಮೇಲೇ ಹೆಚ್ಚು ಗಮನವಿರಲಿ. ಅನ್ಯ ವಿಚಾರದಲ್ಲಿ ನೀವು ತಲೆ ಹಾಕಿ ಮುಖ್ಯ ಕೆಲಸವನ್ನು ಮರೆಯಬಹುದು. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಮನೆಯ ಸಮಸ್ಯೆಗೆ ಪರಿಹಾರ ಕಾಣುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವು ಇರುವದು.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಅಯೋಧ್ಯೆ ರಾಮ ಮಂದಿರ ದೇಣಿಗೆ ಲೂಟಿ; ಆರೋಪಿಗಳಿಂದ ಹಣ, ಚಿನ್ನ ಜಪ್ತಿ, ವಕಾಲತ್ ವಹಿಸಲು ಒಪ್ಪದ ವಕೀಲರು – Kannada News | Police seizes jewellery, cash in Ram Temple donation theft Case lawyers refuse to represent accused

ಅಯೋಧ್ಯೆ, ಜೂನ್ 28: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉತ್ತರ ಪ್ರದೇಶ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಎಲ್ಲಾ 8 ಮಂದಿ ಆರೋಪಿಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಆಸ್ತಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಯೋಧ್ಯೆಯ ಭದ್ರತಾ ಪಡೆಗಳ ಮಾಹಿತಿ ಪ್ರಕಾರ, ಶಂಕಿತರೆಲ್ಲರ ಮನೆಗಳ ಮೇಲೂ ಏಕಕಾಲದಲ್ಲಿ ಈ ದಾಳಿ ನಡೆದಿದೆ. ಟೀನು ಎಂದು ಗುರುತಿಸಲಾದ ಪ್ರಮುಖ ಆರೋಪಿಯೊಬ್ಬನಿಂದ ಚಿನ್ನದ ಒಡವೆಗಳು ಹಾಗೂ ಕೆಲವು ಪ್ರಮುಖ ಕಾಗದಪತ್ರಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಮನೆಗಳಿಂದಲೂ ಇದೇ ರೀತಿಯ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಆರೋಪಿಗಳ ಕುಟುಂಬಸ್ಥರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶೌಚಾಲಯದಲ್ಲಿ ಹಣದ ರಾಶಿ, ಭಕ್ತರು ರಾಮಲಲ್ಲಾಗೆ ನೀಡಿದ್ದ ಚಿನ್ನವೂ ಕಳವು; ರಾಮ ಮಂದಿರ ದೇಣಿಗೆ ಕಳ್ಳತನದ ಮಾಹಿತಿ ಬಯಲು

ಕೋರ್ಟ್ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಜೂನ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎರಡು ದಿನಗಳ ನಂತರ ಈ ಶೋಧ ಕಾರ್ಯಗಳು ನಡೆದಿವೆ. ಸೋಮವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ (ವಿಚಾರಣೆಗೆ) ನೀಡುವಂತೆ ಕೋರುವ ಸಾಧ್ಯತೆಯಿದೆ.

ಆರೋಪಿಗಳಿಗೆ ವಕೀಲರೇ ಸಿಗುತ್ತಿಲ್ಲ;

ಮತ್ತೊಂದೆಡೆ, ಈ ಕಳ್ಳತನ ಪ್ರಕರಣದ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ಅಯೋಧ್ಯೆಯ ವಕೀಲರ ಸಮುದಾಯವು ತೀವ್ರ ಹಿಂಜರಿಕೆ ವ್ಯಕ್ತಪಡಿಸಿದೆ. ಸೋಮವಾರ ನಡೆಯಲಿರುವ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ನ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸಾಮೂಹಿಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯ ನ್ಯಾಯವಾದಿಗಳು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ನಂಬಿಕೆಯೊಂದಿಗೆ ಆಟವಾಡುವುದನ್ನು ಒಪ್ಪಲಾಗದು; ರಾಮ ಮಂದಿರದ ದೇಣಿಗೆ ಕಳ್ಳತನದ ಕುರಿತು ಸಿಎಂ ಯೋಗಿ ಆಕ್ರೋಶ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆಗಳ ನಿರ್ವಹಣೆಯಲ್ಲಿ ನಡೆದಿರುವ ಆಪಾದಿತ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪವಾಗಲಿದೆ. ಅರ್ಜಿದಾರರ ಪರ ವಕೀಲ ಅಜಯ್ ಕುಮಾರ್ ರೈ ಅವರು ಈ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್ – Kannada News | Rishab Shetty shared video of son doing Yakshaghana

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಕರಾವಳಿ, ಮಲೆನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಹಚ್ಚಿಕೊಂಡು, ನೆಚ್ಚಿಕೊಂಡು ಬಾಳುತ್ತಿದ್ದಾರೆ. ಅವರ ಸಿನಿಮಾಗಳಲ್ಲಿ ಮಾತ್ರವಲ್ಲದೆ, ಅವರ ಜೀವನದಲ್ಲಿಯೂ ಕರಾವಳಿಯ ಆಚರಣೆ, ಸಂಪ್ರದಾಯಗಳು ಹಾಸು-ಹೊಕ್ಕಾಗಿವೆ. ಇತ್ತೀಚೆಗೆ ನಟ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಯಕ್ಷಗಾನ ಮತ್ತು ರಾಮನ ಭಜನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಿಷಬ್ ಶೆಟ್ಟಿ ಮೊದಲ ಬಾರಿಗೆ ತಮ್ಮ ಪುತ್ರ ರನ್ವಿತ್​​ಗೆ ಬಣ್ಣ ಹಚ್ಚಿಸಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ರಿನ್ವಿತ್ ಪಾತ್ರವೊಂದನ್ನು ಮಾಡಿದ್ದಾರೆ. ವಿಡಿಯೋ ಅನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಪಕನ ಜೊತೆ ಮಲಗಬೇಕು ಎಂದಿದ್ದ: ಕಹಿ ಅನುಭವ ಬಿಚ್ಚಿಟ್ಟ ಸುಶಾಂತ್ ಮಾಜಿ ಗೆಳತಿ – Kannada News | Ankita Lokhande talks about casting couch experience she faced

ಸುಶಾಂತ್ ಸಿಂಗ್ (Sushanth Singh) ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಈಗ ಟಿವಿ ಧಾರಾವಾಹಿ, ರಿಯಾಲಿಟಿ ಶೋ ಮತ್ತು ಆಗಾಗ್ಗೆ ಸಿನಿಮಾಗಳಲ್ಲಿ ನಟಿಸುತ್ತಾ ಇರುತ್ತಾರೆ. ಉದ್ಯಮಿ ವಿವೇಕ್ ಜೈನ್ ಅವರನ್ನು 2021 ರಲ್ಲಿ ವಿವಾಹವಾಗಿರುವ ಅಂಕಿತಾ, ಆಗಾಗ್ಗೆ ಪಾಡ್​​ಕಾಸ್ಟ್​​ಗಳು, ಸಂದರ್ಶನಗಳಲ್ಲಿ ಭಾಗಿ ಆಗುತ್ತಿರುತ್ತಾರೆ. ಇದೀಗ ಅಂಕಿತಾ ಲೋಖಂಡೆ ಜನಪ್ರಿಯ ಪಾಡ್​ಕಾಸ್ಟ್ ಒಂದರಲ್ಲಿ ತಾವು ಎದುರಿಸಿದ್ದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅದೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮಗೆ ಕಹಿ ಅನುಭವ ಆಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ಅವರೊಟ್ಟಿಗೆ ಬಹು ಸಮಯ ಪ್ರೇಮ ಸಂಬಂಧದಲ್ಲಿದ್ದ ಅಂಕಿತಾ ಲೋಖಂಡೆ, ಪಾಡ್​​ಕಾಸ್ಟ್​ನಲ್ಲಿ ತಾವು ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದು, ‘ನಾನು ಒಂದು ದಕ್ಷಿಣದ ಸಿನಿಮಾಕ್ಕಾಗಿ ಮುಂಬೈನಲ್ಲಿ ಆಡಿಷನ್ ನೀಡಿದ್ದೆ. ಆಗಿನ್ನೂ ನನಗೆ 19 ವರ್ಷ ವಯಸ್ಸು. ಸಿನಿಮಾಗಳಲ್ಲಿ ನಟಿ ಆಗಬೇಕು, ನಾಯಕಿ ಆಗಬೇಕು ಎಂದೆಲ್ಲ ಆಸೆಗಳು ಆಗ ನನಗೆ ಬಹಳ ಇದ್ದವು. ಅದೇ ಕಾರಣಕ್ಕೆ ನಾನು ದಕ್ಷಿಣ ಭಾರತದ ಸಿನಿಮಾಕ್ಕಾಗಿ ಆಡಿಷನ್ ಸಹ ನೀಡಿದ್ದೆ’ ಎಂದಿದ್ದಾರೆ.

ಆದರೆ ಆಡಿಷನ್ ತೆಗೆದುಕೊಂಡ ವ್ಯಕ್ತಿ, ನೀವು ಕಾಂಪ್ರಮೈಸ್ ಮಾಡಿಕೊಳ್ಳಬೇಕು ಎಂದರು. ನನಗೆ ಆಗಲೇ ಆತ ಏನೆಂದು ಕೇಳುತ್ತಿದ್ದಾನೆ ಎಂದು ಅರ್ಥವಾಯ್ತು, ಆದರೆ ಅದು ಆತನ ಬಾಯಿಯಿಂದಲೇ ಬರಲೆಂದು, ನಾನು ನನಗೆ ಆತ ಹೇಳಿದ್ದು ಏನೆಂಬುದು ಗೊತ್ತಿಲ್ಲದಂತೆ ನಟಿಸಿದೆ. ಚೆನ್ನಾಗಿ ನಟಿಸುತ್ತೇನೆ, ಎಲ್ಲರೊಟ್ಟಿಗೆ ಗೆಳೆತನದಿಂದ ಇರುತ್ತೇನೆ ಎಂದೆಲ್ಲ ಹೇಳಿದೆ. ಕೊನೆಗೆ ಆತನೇ, ‘ನಿರ್ಮಾಪಕನ ಜೊತೆ ಮಲಗಬೇಕು‘ ಎಂದು ನೇರವಾಗಿ ಹೇಳಿದ. ಆಗ ನಾನು ಅಲ್ಲಿಂದ ಎದ್ದು ಹೊರನಡೆದೆ’ ಎಂದಿದ್ದಾರೆ.

ಇದನ್ನೂ ಓದಿ:ಯಶ್​​ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ

‘ನಿಮ್ಮ ನಿರ್ಮಾಪಕರಿಗೆ ನಟಿ ಬೇಕಾಗಿಲ್ಲ, ಅವರಿಗೆ ಒಬ್ಬ ವ್ಯೇಶ್ಯೆ ಬೇಕಾಗಿದ್ದಾಳೆ. ಆದರೆ ಅದು ನಾನಲ್ಲ’ ಎಂದು ಆತನಿಗೆ ಹೇಳಿದ್ದೆ. ಆ ಘಟನೆಯ ಬಳಿಕ ನನಗೆ ಚಿತ್ರರಂಗದ ಮೇಲೆ ನಂಬಿಕೆ ಹೊರಟು ಹೋಯ್ತು. ನನ್ನ ಬಗ್ಗೆ ನನಗೆ ಕೀಳರಿಮೆ ಉಂಟಾಗಲು ಶುರುವಾಯ್ತು. ಆ ನಂತರ ನನಗೆ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಕೂಡಲೇ ನಾನು ಒಪ್ಪಿಕೊಂಡು ಬಿಟ್ಟೆ. ಧಾರಾವಾಹಿ, ಟಿವಿ ಲೋಕದಲ್ಲೇ ಮುಂದುವರೆದೆ, ಆರಾಮವಾಗಿ ಇಲ್ಲಿಯವರೆಗೆ ತಲುಪಿದ್ದೇನೆ’ ಎಂದು ಅಂಕಿತಾ ಹೇಳಿದ್ದಾರೆ.

ಅಂಕಿತಾ ಮತ್ತು ಸುಶಾಂತ್ ಸಿಂಗ್ ಒಟ್ಟಿಗೆ ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. 2010 ರಲ್ಲಿ ಈ ಇಬ್ಬರೂ ಪ್ರೀತಿಸಲು ಪ್ರಾರಂಭಿಸಿದರು. 2016 ರಲ್ಲಿ ಮದುವೆ ಆಗುವುದಾಗಿಯೂ ಘೋಷಿಸಿದ್ದರು. ಆದರೆ ಅದೇ ವರ್ಷ ಅವರು ಬ್ರೇಕಪ್ ಸಹ ಮಾಡಿಕೊಂಡರು. ಬಳಿಕ 2021 ರಲ್ಲಿ ಅಂಕಿತಾ, ಉದ್ಯಮಿ ವಿಕ್ಕಿ ಜೈನ್ ಅನ್ನು ಮದುವೆಯಾದರು. ಬಳಿಕ ಈ ಇಬ್ಬರೂ ಒಟ್ಟಿಗೆ ಬಿಗ್​​ಬಾಸ್​​ಗೆ ಸಹ ಹೋಗಿದ್ದರು. ಈಗಲೂ ಅಂಕಿತಾ, ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳವಾರದಿಂದ ರಾಜ್ಯದಲ್ಲಿ SIR ಪ್ರಕ್ರಿಯೆ ಶುರು: ಜಾಗೃತಿ ವಹಿಸದಿದ್ರೆ ಮಾರಣಹೋಮ ಎಂದ ಸಿದ್ದರಾಮಯ್ಯ – Kannada News | SIR Process Begins Tuesday: Siddaramaiah Urges Public Awareness to Avoid Major Issues

ಬೆಂಗಳೂರು, ಜೂನ್​​ 28: ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಯಲಿದೆ. ಪಶ್ಚಿಮ ಬಂಗಾಳ ಫಲಿತಾಂಶದ ಬಳಿಕ SIR ವಿಚಾರದಲ್ಲಿ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಯತೀಂದ್ರ ಸಿದ್ದರಾಮಯ್ಯ ಭಾಗಿಯಾಗಿ ಕಾರ್ಯಕರ್ತರಿಗೆ ಎಚ್ಚರಿಕೆ ಸಂದೇಶಗಳನ್ನ ನೀಡಿದ್ದಾರೆ.

ಕರ್ನಾಟಕದಲ್ಲಿ ಎಸ್​ಐಆರ್​ ಮಾಡುತ್ತಿರುವ ಮುಖ್ಯ ಉದ್ದೇಶ ಏನು ಅಂದರೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಸ್ವಚ್ಛ ಮತ್ತು ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದಾಗಿದೆ. ಆದರೆ ಅಕ್ರಮ SIR ವಿಚಾರದಲ್ಲಿ ಕಾಂಗ್ರೆಸ್​ ಸಮರ ಸಾರಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಇಂದು ಮೈಸೂರಿನಲ್ಲಿ SIR ಜಾಗೃತಿ ಸಮಾವೇಶ ಆಯೋಜನೆ ಮಾಡಲಾಗಿತ್ತು.

ಮೈಮರೆತರೆ ಮಾರಣಹೋಮ ನಿಶ್ಚಿತ ಎಂದ ಸಿದ್ದರಾಮಯ್ಯ

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಎಸ್ಐಆರ್ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರ ತಪ್ಪಬಾರದು. SIR ಗಂಭೀರವಾಗಿ ಪರಿಗಣಿಸದಿದ್ದರೆ ನಿಮ್ಮ ಮಾರಣಹೋಮ ನಿಶ್ಚಿತ. ಕಾಂಗ್ರೆಸ್ ಕಾರ್ಯಕರ್ತರು ಮೈಮರೆತರೆ ಬಿಜೆಪಿಯವರು ಮುಗಿಸುತ್ತಾರೆ. ನಿಮ್ಮ ರಾಜಕೀಯ ಭವಿಷ್ಯ ಚೆನ್ನಾಗಿರಬೇಕೆಂದರೆ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮತದಾರರೇ ಗಮನಿಸಿ: SIR ಪ್ರಕ್ರಿಯೆ ಹೇಗೆ? ಗಣತಿ ನಮೂನೆ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್

ನಮ್ಮ ದೇಶದಲ್ಲಿ ಸಂವಿಧಾನ ಬದ್ಧವಾದ ಚುನಾವಣಾ ಆಯೋಗ ಇಲ್ಲ. ಭಾರತದಲ್ಲಿ ಭಾರತೀಯ ಜನತಾ ಪಕ್ಷ ದುರಾಡಳಿತ ನಡೆಸುತ್ತಿದೆ. ವರ್ಷದಿಂದ ವರ್ಷಕ್ಕೆ ಬಿಜೆಪಿ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಬಿಜೆಪಿ ಯಾವಾಗಲೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುತ್ತದೆ. ದೇಶದಲ್ಲಿ ಸರ್ವಾಧಿಕಾರ ತರಬೇಕು ಎಂಬುದು ಬಿಜೆಪಿ ಉದ್ದೇಶ ಎಂದು ವಾಗ್ದಾಳಿ ಮಾಡಿದರು.

ಎಸ್ಐಆರ್ ಎರಡನೇ ಸ್ವಾತಂತ್ರ್ಯ ಹೋರಾಟ ಎಂದ ಬಿಕೆ ಹರಿಪ್ರಸಾದ್

ಇನ್ನು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮಾತನಾಡಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ, ಆದರೆ ಜಾತಿ ಆಧಾರದ ಮೇಲೆ ಮತ ತೆಗೆದುಹಾಕುವುದಕ್ಕೆ ವಿರೋಧ ಇದೆ. ಯಾರ ಮತಗಳು 2 ಕಡೆ ಇವೆ, ದೇಶದಲ್ಲಿ ಇಲ್ಲದವರ ಮತ ತೆಗೆಯಿರಿ. ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ವಿಸ್ತೃತವಾಗಿ ವಿವರಿಸಿದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.

ಇದನ್ನೂ ಓದಿ: ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುತ್ತೆ ಮತದಾರರ ಪಟ್ಟಿ ಪರಿಷ್ಕರಣೆ​: ರಾಜ್ಯ ಚುನಾವಣಾ ಆಯೋಗ

ಮಹಾತ್ಮಗಾಂಧಿ ಅವರ ಸಿದ್ಧಾಂತದ ಮೇಲೆ ಎಲ್ಲಾ ನಡೆಯಬೇಕು. ಆರ್‌ಎಸ್‌ಎಸ್‌ನವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಪರಿಷ್ಕರಣೆ ನೆಪದಲ್ಲಿ ಬೇಡವಾದವರ ಹೆಸರನ್ನ ಕೈಬಿಡುವ ಕೆಲಸ ಆಗುತ್ತಿದೆ. ಎಸ್ಐಆರ್ ಎರಡನೇ ಸ್ವಾತಂತ್ರ್ಯ ಹೋರಾಟ. ಯಾರ ಹೆಸರು ಮತಪಟ್ಟಿಯಿಂದ ಕೈಬಿಡದಂತೆ ನೋಡಿಕೊಳ್ಳಬೇಕು. ಐದು ವರ್ಷಗಳಿಗೊಮ್ಮೆ ಚುನಾವಣೆ ಬರುತ್ತದೆ‌. ಜನರು ತಮಗೆ ಬೇಕಾದವರ ಆಯ್ಕೆಯನ್ನ ಮಾಡಿಕೊಳ್ಳುವ ಶಕ್ತಿ ಇದೆ. ಬಿಜೆಪಿ ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಲು ಹೊರಟಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆಸ್ಟ್ರೇಲಿಯಾ ವಿರುದ್ಧ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಟೀಂ ಇಂಡಿಯಾ – Kannada News | India Women Knocked Out of T20 World Cup 2026 Semis After Loss to Australia

ಭಾನುವಾರ ನಡೆದ ಮಹಿಳಾ ಟಿ20 ವಿಶ್ವಕಪ್ 2026 ರ 30 ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಿತ್ತು. ಆದರೆ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಮುಗ್ಗರಿಸಿದ ಹರ್ಮನ್​ಪ್ರೀತ್ ಕೌರ್ ಪಡೆ 6 ವಿಕೆಟ್‌ಗಳ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಭಾರತ ಟಿ20 ವಿಶ್ವಕಪ್​ ಫೈನಲ್​ ರೇಸ್​ನಿಂದ ಹೊರಬಿದ್ದರೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎ ಗುಂಪಿನಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದವು. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಅಜೇಯವಾಗಿ ಉಳಿದರೆ, ದಕ್ಷಿಣ ಆಫ್ರಿಕಾ 8 ಅಂಕಗಳೊಂದಿಗೆ ಎರಡನೇ ಸ್ಥಾನ ಮತ್ತು ಭಾರತ 6 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದವು. ಇದೀಗ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿದರೆ, ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Source link

ಬಿಡುಗಡೆ ಆಯ್ತು, ‘ಗ್ರಾಮಾಯಣ’ ಟ್ರೈಲರ್, ಪಕ್ಕಾ ಹಳ್ಳಿ ಕತೆ – Kannada News | Vinay Rajkumar starrer Gramayana movie trailer released

ವಿನಯ್ ರಾಜ್​​ಕುಮಾರ್ (Vinay Rajkuar) ನಟನೆಯ ‘ಗ್ರಾಮಾಯಣ’ ಸಿನಿಮಾ ಸೆಟ್ಟೇರಿ ವರ್ಷಗಳೇ ಆಗಿದ್ದವು, ಹಲವು ಅಡೆ-ತಡೆ, ಬದಲಾವಣೆಗಳ ಬಳಿಕ ಕೊನೆಗೂ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ‘ಗ್ರಾಮಾಯಣ’ ಸಿನಿಮಾದ ಟ್ರೈಲರ್ ಇಂದು (ಜೂನ್ 28) ರಿಲೀಸ್ ಆಗಿದೆ. ಟ್ರೈಲರ್ ಮೊದಲ ನೋಟದಲ್ಲಿಯೇ ಗಮನ ಸೆಳೆಯುತ್ತಿದ್ದು, ತಮಿಳಿನ ವೆಟ್ರಿಮಾರನ್ ಸಿನಿಮಾಗಳ ಫೀಲ್ ಕೊಡುತ್ತಿದೆ. ‘ಗ್ರಾಮಾಯಣ’ ಟ್ರೈಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ ಭಾಸವಾಗುತ್ತಿದೆ.

‘ಗ್ರಾಮಾಯಣ’ ಸಿನಿಮಾದ ಟ್ರೈಲರ್​​ನಲ್ಲಿ ವಿನಯ್ ರಾಜ್​ಕುಮಾರ್ ಸೇರಿದಂತೆ ಹಲವು ಪಾತ್ರಗಳು ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿವೆ. ವಿನಯ್, ಹಳ್ಳಿಯ ಮೊಂಡ, ಸಿಟ್ಟಿನ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಆ ಯುವಕನ ಪ್ರೇಯಸಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಸಿನಿಮಾನಲ್ಲಿ ಲೂಸ್ ಮಾದ ಯೋಗಿ ಸಹ ಇದ್ದು, ನಾಯಕನ ಎದುರು ನಿಲ್ಲುವ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ನಾಯಕನ ಎದುರಾಳಿಯಾಗಿ ಇನ್ನೂ ಕೆಲವು ಪಾತ್ರಗಳಿದ್ದು, ಟ್ರೈಲರ್, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಲು ಸಂಪೂರ್ಣ ಯಶಸ್ವಿ ಆಗಿದೆ.

ಟ್ರೈಲರ್​​ ನೋಡಿದರೆ ಇದೊಂದು ಆಕ್ಷನ್, ಸೆಂಟಿಮೆಂಟ್, ರೊಮ್ಯಾನ್ಸ್, ಡ್ರಾಮಾ ಬೆರೆತ ಕತೆಯುಳ್ಳ ಸಿನಿಮಾ ಎಂಬುದು ಸ್ಪಷ್ಟವಾಗುತ್ತಿದೆ. ವಿನಯ್ ರಾಜ್​​ಕುಮಾರ್ ಅವರು ಹಳ್ಳಿ ಯುವಕನ ಪಾತ್ರದಲ್ಲಿ ಸಖತ್ ಮಾಸ್ ಆಗಿಯೂ, ರಾ ಮತ್ತು ರಸ್ಟಿಕ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಯೋಗಿಯ ಪಾತ್ರವೂ ಸಹ ತುಸು ಹಾಗೆಯೇ ಇದೆ. ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್ ಅವರುಗಳು ಚಾಣಾಕ್ಷ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲ ಪ್ರಮುಖ ಪಾತ್ರಗಳು ಸಿನಿಮಾನಲ್ಲಿವೆ. ಟ್ರೈಲರ್​​ನಲ್ಲೂ ಕಾಣಿಸಿಕೊಂಡಿವೆ. ಟ್ರೈಲರ್​​ನಲ್ಲಿ ಅಪರ್ಣಾ ಅವರ ದೃಶ್ಯಗಳು ಸಹ ಇವೆ. ಅಪರ್ಣಾ ಅವರ ಕೊನೆಯ ಸಿನಿಮಾ ಆಗಿತ್ತು ‘ಗ್ರಾಮಾಯಣ’. ಟ್ರೈಲರ್​​ನಲ್ಲೇ ಅವರ ನಟನೆ ಗಮನ ಸೆಳೆಯುತ್ತಿದೆ. ಆದರೆ ಅವರ ಪಾತ್ರಕ್ಕೆ ಬೇರೆಯವರು ಧ್ವನಿ ನೀಡಿದಂತಿದ್ದಾರೆ.

ಇದನ್ನೂ ಓದಿ:ಹುಟ್ಟುಹಬ್ಬದಂದು ರಕ್ತಸಿಕ್ತ ಲುಕ್​​ನಲ್ಲಿ ಬಂದ ವಿನಯ್ ರಾಜ್​​ಕುಮಾರ್

‘ಗ್ರಾಮಾಯಣ’ ಸಿನಿಮಾವನ್ನು ದೇವನೂರು ಚಂದ್ರು ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಪೂರ್ಣಚಂದ್ರ ತೇಜಸ್ವಿ ಎಸ್​​ವಿ. ಕ್ಯಾಮೆರಾ ಕೆಲಸ ಸಂತೋಷ್ ರೈ ಪತಾಜೆ ಅವರದ್ದು. ಸಿನಿಮಾವನ್ನು ಲಹರಿ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಜುಲೈ 3 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:31 pm, Sun, 28 June 26

Source link

IND vs IRE: ಐರ್ಲೆಂಡ್ ಐತಿಹಾಸಿಕ ಸಾಧನೆ; ಟೀಂ ಇಂಡಿಯಾಕ್ಕೆ ವೈಟ್ ವಾಶ್ ಮುಖಭಂಗ

ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ, ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಳ್ಳಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದ ಬೇರೆ. ವಿಶ್ವ ಚಾಂಪಿಯನ್​ಗಳೆಂಬ ಅಹಂಕಾರವನ್ನು ಮೈದುಂಬಿಸಿಕೊಂಡಿದ್ದ ಟೀಂ ಇಂಡಿಯಾಕ್ಕೆ ಕ್ರಿಕೆಟ್ ಶಿಶು ಐರ್ಲೆಂಡ್ ಎಂದಿಗೂ ಮರೆಯದ ಮರ್ಮಾಘಾತ ನೀಡಿದೆ. ಮೊದಲ ಟಿ20 ಪಂದ್ಯವನ್ನು 34 ರನ್​ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿದ್ದಲ್ಲದೆ ಕ್ಲೀನ್ ಸ್ವೀಪ್ ಮಾಡಿದ ದಾಖಲೆಯನ್ನು ನಿರ್ಮಿಸಿತು.

Source link

Exit mobile version