ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ – Kannada News | PM Narendra Modi Receives Ceremonial Guard of Honour in Seychelles

ವಿಕ್ಟೋರಿಯಾ, ಜೂನ್ 28: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ ಐತಿಹಾಸಿಕ 3 ದಿನಗಳ ಪ್ರವಾಸದ ಅಂಗವಾಗಿ ಸೆಶೆಲ್ಸ್‌ಗೆ ತೆರಳಿದ್ದಾರೆ. ಈ ವೇಳೆ ಸೆಶೆಲ್ಸ್​ನ ಸ್ಟೇಟ್ ಹೌಸ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸರ್ಕಾರಿ ಗೌರವ ವಂದನೆಯನ್ನು ನೀಡಲಾಯಿತು. ಇದು ಉಭಯ ದೇಶಗಳ ನಡುವಿನ 50 ವರ್ಷಗಳ ರಾಜತಾಂತ್ರಿಕ ಬಾಂಧವ್ಯದ ಸಂಕೇತವಾಗಿದೆ. ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಆತ್ಮೀಯವಾಗಿ ಸ್ವಾಗತಿಸಿದರು.

ಸೆಶೆಲ್ಸ್ ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 29ರವರೆಗೆ ಸೆಶೆಲ್ಸ್‌ನಲ್ಲಿರಲಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಸೋಮವಾರ ನಡೆಯಲಿರುವ ಆ ದೇಶದ ಸುವರ್ಣ ಮಹೋತ್ಸವದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದು ಸೆಶೆಲ್ಸ್ ಸ್ವಾತಂತ್ರ್ಯದ 50ನೇ ವರ್ಷದ ಸ್ಮರಣೋತ್ಸವವಾಗಿದೆ.

ಪ್ರಧಾನಿ ಮೋದಿ ಶನಿವಾರ ವಿಕ್ಟೋರಿಯಾ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಹರ್ಮಿನೀ, ಹಿರಿಯ ಸಚಿವರು ಮತ್ತು ಇತರ ಗಣ್ಯರು ಅವರನ್ನು ಬರಮಾಡಿಕೊಂಡರು. ಈ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರು ಪ್ರಸ್ತುತಪಡಿಸಿದ ಗುಜರಾತ್‌ನ ಕಚ್ ಪ್ರಾಂತ್ಯದ ಸಾಂಪ್ರದಾಯಿಕ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಗಮನ ಸೆಳೆದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 30 ಲಕ್ಷ ರೂ ಹೂಡಿಕೆಯಿಂದ 20,000 ರೂಗೂ ಹೆಚ್ಚು ಮಾಸಿಕ ವರಮಾನ – Kannada News | Post Office SCSS Senior Citizen Savings Scheme, invest upto Rs 30 lakh to get regular income

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಮೂಲಕ ನಿವೃತ್ತರು ತಮ್ಮ 30 ಲಕ್ಷ ರೂ ಉಳಿತಾಯದಿಂದ ಪ್ರತಿ ತಿಂಗಳು ಸುಮಾರು ₹20,500 ನಿಯಮಿತ ಆದಾಯವನ್ನು ಹೇಗೆ ಪಡೆಯಬಹುದು. ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಾರುಕಟ್ಟೆಯ ಏರಿಳಿತಗಳಿಂದ ದೂರವಿದ್ದು, ಸುರಕ್ಷಿತ ಹಾಗೂ ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ಈ ಸರ್ಕಾರಿ ಯೋಜನೆ ಅತ್ಯುತ್ತಮವಾಗಿದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರ ಹೆಸರಿನಲ್ಲಿ (ಅಕೌಂಟ್) ಈ ಸ್ಕೀಮ್ ಆರಂಭಿಸಿ ಲಾಭ ಪಡೆಯಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿವರ

  • ಅರ್ಹತೆ: 60 ವರ್ಷ ಮೇಲ್ಪಟ್ಟ ವಯೋಮಾನದ ಭಾರತೀಯ ನಾಗರಿಕರು
  • ಹೂಡಿಕೆ ಮಿತಿ: ಕನಿಷ್ಠ 1,000 ರೂನಿಂದ ಹಿಡಿದು 30,00,000 ರೂವರೆಗೂ ಹೂಡಿಕೆ ಮಾಡಬಹುದು.
  • ಹೂಡಿಕೆ ಅವಧಿ: ಐದು ವರ್ಷ. ಇನ್ನೂ 3 ವರ್ಷ ವಿಸ್ತರಣೆ ಅವಕಾಶ ಇರುತ್ತದೆ.
  • ಬಡ್ಡಿದರ: ವಾರ್ಷಿಕ ಶೇ. 8.2 ಬಡ್ಡಿ ಸದ್ಯಕ್ಕೆ (ಪ್ರತೀ ಕ್ವಾರ್ಟರ್​ಗೆ ಸರ್ಕಾರದಿಂದ ಬಡ್ಡಿ ಪರಿಷ್ಕರಣೆ ಇರುತ್ತದೆ.)
  • ಬಡ್ಡಿ ಹಣ ಸಂದಾಯ: ಪ್ರತೀ ಕ್ವಾರ್ಟರ್​ಗೆ ಬಡ್ಡಿ ಆದಾಯ ನೀಡಲಾಗುತ್ತದೆ.

ಇದನ್ನೂ ಓದಿ: ಜಾಗತಿಕ ವ್ಯಾಪಾರ ವರ್ಷಕ್ಕೆ ಶೇ. 5 ಏರುತ್ತದೆ, ನೀವು ಶೇ. 5-10 ಹೆಚ್ಚಳಕ್ಕೆ ತೃಪ್ತರಾಗಬೇಡಿ: ಭಾರತೀಯ ಉದ್ಯಮಗಳಿಗೆ ಪಿಯೂಶ್ ಗೋಯಲ್ ಕರೆ

30 ಲಕ್ಷ ರೂ ಹೂಡಿಕೆ ಮಾಡಿದರೆ ಎಷ್ಟು ಆದಾಯ?

ಒಬ್ಬ ವ್ಯಕ್ತಿ 30 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಈ ಗರಿಷ್ಠ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಆದಾಯ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ. ಪ್ರಸ್ತುತ ಇರುವ ವಾರ್ಷಿಕ ಶೇ. 8.2 ಬಡ್ಡಿದರವೇ ಮುಂದುವರಿದಿದ್ದೇ ಆದಲ್ಲಿ ಈ ಕೆಳಕಂಡಂತೆ ಆದಾಯ ಸಿಗುತ್ತದೆ:

30 ಲಕ್ಷ ರೂಗೆ ವಾರ್ಷಿಕ ಶೇ. 8.2 ಬಡ್ಡಿ ಎಂದರೆ ವರ್ಷಕ್ಕೆ 2.46 ಲಕ್ಷ ರೂ ಆಗುತ್ತದೆ.

ಪ್ರತೀ ಕ್ವಾರ್ಟರ್​ಗೆ 61,500 ರೂ. ಪ್ರತೀ ತಿಂಗಳಿಗೆ ಸುಮಾರು 20,500 ರೂ ಆದಾಯ ಸಿಕ್ಕಂತಾಗುತ್ತದೆ.

ಹಿರಿಯ ನಾಗರಿಕರಾದ ಪತಿ ಮತ್ತು ಪತ್ನಿ ಇಬ್ಬರೂ ತಲಾ ₹30 ಲಕ್ಷದಂತೆ ಒಟ್ಟು ₹60 ಲಕ್ಷ ಹೂಡಿಕೆ ಮಾಡಬಹುದು. ಆಗ ವಾರ್ಷಿಕವಾಗಿ ಒಟ್ಟು ₹4,92,000 ಬಡ್ಡಿ ಸಿಗುತ್ತದೆ. ಇದು ತಿಂಗಳಿಗೆ ಸರಾಸರಿ ಸುಮಾರು ₹41,000 ಆದಾಯ ಸಿಕ್ಕಂತಾಗುತ್ತದೆ.

ಎಸ್​ಸಿಎಸ್​ಎಸ್ ಯೋಜನೆಯಿಂದ ತೆರಿಗೆ ಸೌಲಭ್ಯಗಳು

ಈ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ (ಹಳೆಯ ತೆರಿಗೆ ಪದ್ಧತಿಯ ಪ್ರಕಾರ) ವಿನಾಯಿತಿ (Tax deduction) ಪಡೆಯಬಹುದು. ಆದರೆ, ಈ ಯೋಜನೆಯಿಂದ ಬರುವ ಬಡ್ಡಿ ಹಣಕ್ಕೆ ಹೂಡಿಕೆದಾರರ ವೈಯಕ್ತಿಕ ತೆರಿಗೆ ಸ್ಲ್ಯಾಬ್ (Tax Slab) ಪ್ರಕಾರ ತೆರಿಗೆ ಅನ್ವಯವಾಗುತ್ತದೆ.

ಇದನ್ನೂ ಓದಿ: ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ

ಒಟ್ಟಾರೆ, ಅಸಲು ಹಣಕ್ಕೆ ಸಂಪೂರ್ಣ ಗ್ಯಾರಂಟಿ ಹಾಗೂ ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ SCSS ಒಂದು ಉತ್ತಮ ಆಸರೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಿರುಪತಿ ದೇವಸ್ಥಾನದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ಅನಂತ್ ಅಂಬಾನಿ – Kannada News | Anant Ambani visits Tirumala Tirupati temple donates hair TTD

ತಿರುಮಲ, ಜೂನ್ 28: ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ (Anant Ambani) ಅವರು ಇಂದು ಆಂಧ್ರಪ್ರದೇಶದ ಪವಿತ್ರ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಪೂರ್ಣ ಸಾಂಪ್ರದಾಯಿಕ ಉಡುಪಿನಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಅವರು, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಲ್ಲದೆ, ಭಗವಂತನಿಗೆ ತಮ್ಮ ಕೂದಲನ್ನು ದಾನ (ಮುಡಿ) ನೀಡುವ ಮೂಲಕ ಹರಕೆ ತೀರಿಸಿದ್ದಾರೆ. ಅಂಬಾನಿ ಕುಟುಂಬವು ತಿರುಪತಿ ದೇವಸ್ಥಾನದ ಭಕ್ತರಾಗಿದ್ದು, ಕುಟುಂಬದ ಯಾವುದೇ ಪ್ರಮುಖ ಕಾರ್ಯಕ್ರಮಗಳು ಅಥವಾ ಶುಭ ಸಮಾರಂಭಗಳಿಗೂ ಮುನ್ನ ಇಲ್ಲಿಗೆ ಭೇಟಿ ನೀಡುತ್ತಾರೆ.

ದೇವಾಲಯಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಮತ್ತು ಅರ್ಚಕರು ಆತ್ಮೀಯವಾಗಿ ಸ್ವಾಗತಿಸಿದರು. ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದ ಮಂತ್ರಗಳ ಮೂಲಕ ಆಶೀರ್ವಾದ ನೀಡಿ, ತೀರ್ಥ ಪ್ರಸಾದ ಹಾಗೂ ದೇವರ ಪವಿತ್ರ ಶೇಷ ವಸ್ತ್ರವನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆಯ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಅನಂತ್​​ ಅಂಬಾನಿ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮುಡಿಪು ಕೊಡುವುದು ಎಂದರೆ ದೇವರೆದುರು ತನ್ನಲ್ಲಿರುವ ‘ಅಹಂಕಾರ’ ಮತ್ತು ಗರ್ವವನ್ನು ಸಂಪೂರ್ಣವಾಗಿ ತ್ಯಜಿಸಿ, ಶರಣಾಗತಿಯಾಗುವುದರ ಸಂಕೇತವಾಗಿದೆ. ಅನಂತ್ ಅಂಬಾನಿ ಅವರು ಈ ಸಂಪ್ರದಾಯವನ್ನು ಪಾಲಿಸುವ ಮೂಲಕ ತಮ್ಮ ದೈವಭಕ್ತಿಯನ್ನು ಮೆರೆದಿದ್ದಾರೆ.

ಇದಕ್ಕೂ ಮುನ್ನ, ಜೂನ್ 12ರಂದು ಅನಂತ್ ಅಂಬಾನಿ ಅವರು ತಮ್ಮ ತಂದೆ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ತಮ್ಮ ಪತ್ನಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜಂಟಿಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಮದುವೆಯ ಶುಭ ಸಂದರ್ಭದ ಮುನ್ನ ಕೂಡ ಇಡೀ ಕುಟುಂಬ ತಿರುಪತಿಗೆ ಬಂದು ದೇವರ ಆಶೀರ್ವಾದ ಪಡೆದಿತ್ತು. ಅನಂತ್ ಅಂಬಾನಿ ಅವರ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕೂಡ ಮುಕೇಶ್ ಅಂಬಾನಿ ಅವರು ತಿರುಪತಿ ದೇವಸ್ಥಾನಕ್ಕೆ ತಂದು ದೇವರ ಪಾದದ ಮೇಲಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Tirupati Friday Abhishekam: ತಿರುಪತಿ ತಿಮ್ಮಪ್ಪನ ಹತ್ತಾರು ಸೇವೆಗಳಲ್ಲಿ ಶುಕ್ರವಾರದ ಅಭಿಷೇಕಕ್ಕೆ ಅಷ್ಟೊಂದು ವಿಶೇಷ ಏಕೆ ಗೊತ್ತಾ?

ಆಂಧ್ರಪ್ರದೇಶದ ತಿರುಮಲ ಬೆಟ್ಟಗಳ ಮೇಲೆ ನೆಲೆಗೊಂಡಿರುವ ತಿರುಪತಿ ಬಾಲಾಜಿ ದೇವಾಲಯವು ದೇಶದ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಕಲಿಯುಗದ ವೈಕುಂಠ ಎಂದೂ ಕರೆಯುತ್ತಾರೆ. ಇದು ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ವೆಂಕಟೇಶ್ವರನ ದರ್ಶನ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದಲ್ಲಿ ಕೂದಲು ದಾನ ಮಾಡುವ ಸಂಪ್ರದಾಯವು ಸಹ ಪ್ರಾಚೀನ ಕಾಲದಿಂದಲೂ ನಡೆದು ಅತ್ಯಂತ ಮಹತ್ವದ ಧಾರ್ಮಿಕ ಆಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ  ಡ್ಯಾನಿ ವ್ಯಾಟ್-ಹಾಡ್ಜ್! – Kannada News | Danni Wyatt Hodge Creates News World Record in Women’s T20 World Cup

ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.  ಈ ಇತಿಹಾಸದೊಂದಿಗೆ ಆಸ್ಟ್ರೇಲಿಯಾ ಆಟಗಾರ್ತಿ ಬೆತ್ ಮೂನಿ ಹೆಸರಿನಲ್ಲಿದ್ದ 6 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಮಹಿಳಾ ಟಿ20 ವಿಶ್ವಕಪ್​ನ 28ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಡ್ಯಾನಿ ವ್ಯಾಟ್-ಹಾಡ್ಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 163 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ವ್ಯಾಟ್-ಹಾಡ್ಜ್ ಕೇವಲ 53 ಎಸೆತಗಳಲ್ಲಿ ಅಜೇಯ 89 ರನ್ (15 ಬೌಂಡರಿ, 1 ಸಿಕ್ಸರ್) ಬಾರಿಸಿದರು. ಇನ್ನು ಸೋಫಿಯಾ ಡಂಕ್ಲಿ (ಅಜೇಯ 49) ಅವರೊಂದಿಗೆ ಸೇರಿ 128 ರನ್‌ಗಳ ಮುರಿಯದ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಈ ಅದ್ಭುತ ಗೆಲುವಿನೊಂದಿಗೆ ಇಂಗ್ಲೆಂಡ್ ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರೆ, ನ್ಯೂಝಿಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

ಡ್ಯಾನಿ ವ್ಯಾಟ್-ಹಾಡ್ಜ್ ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಬಾರಿಸಿದ 89 ರನ್​ಗಳೊಂದಿಗೆ ಮಹಿಳಾ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಡ್ಯಾನಿ ವ್ಯಾಟ್-ಹಾಡ್ಜ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಬೆತ್ ಮೂನಿ ಹೆಸರಿನಲ್ಲಿತ್ತು.

  • 2020ರ ಮಹಿಳಾ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಬೆತ್ ಮೂನಿ ಒಟ್ಟು 259 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಪ್ರಸ್ತುತ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ವ್ಯಾಟ್-ಹಾಡ್ಜ್, ಈಗಾಗಲೇ 282 ರನ್ ಕಲೆಹಾಕಿದ್ದಾರೆ.

ಈ ಮೂಲಕ ಮಹಿಳಾ ಟಿ20 ವಿಶ್ವಕಪ್​ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ಡ್ಯಾನಿ ವ್ಯಾಟ್-ಹಾಡ್ಜ್ ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಟಿ20 ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದವರು

ಶ್ರೇಯಾಂಕ ಆಟಗಾರ್ತಿ ದೇಶ ಒಟ್ಟು ರನ್ ವಿಶ್ವಕಪ್ ಆವೃತ್ತಿ
1 ಡ್ಯಾನಿ ವ್ಯಾಟ್-ಹಾಡ್ಜ್ ಇಂಗ್ಲೆಂಡ್ 282* 2026 (ಇಂಗ್ಲೆಂಡ್)
2 ಬೆತ್ ಮೂನಿ ಆಸ್ಟ್ರೇಲಿಯಾ 259 2020 (ಆಸ್ಟ್ರೇಲಿಯಾ)
3 ಮೆಗ್ ಲ್ಯಾನಿಂಗ್ ಆಸ್ಟ್ರೇಲಿಯಾ 257 2014 (ಬಾಂಗ್ಲಾದೇಶ್)
4 ಸ್ಟಾಫನಿ ಟೇಲರ್ ವೆಸ್ಟ್ ಇಂಡೀಸ್ 246 2016 (ಭಾರತ)
5 ಅಲಿಸ್ಸಾ ಹೀಲಿ ಆಸ್ಟ್ರೇಲಿಯಾ 236 2020 (ಆಸ್ಟ್ರೇಲಿಯಾ)

ಇದನ್ನೂ ಓದಿ: ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?

ಡ್ಯಾನಿ ವ್ಯಾಟ್-ಹಾಡ್ಜ್ ಪ್ರಸ್ತುತ ಟೂರ್ನಿಯಲ್ಲಿ 94.00 ಸರಾಸರಿಯಲ್ಲಿ ರನ್ ಕಲೆಹಾಕಿದ್ದು, ಈ ಮೂಲಕ 5 ಪಂದ್ಯಗಳಲ್ಲಿ ಮೂರು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಹಾಡ್ಜ್​ ಅವರ ಈ ಭರ್ಜರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೆ ಲೆಗ್ಗೆಯಿಟ್ಟಿದೆ.

Source link

24 ಗಂಟೆಗಳ ಅಂತರದಲ್ಲಿ 2 ಐತಿಹಾಸಿಕ ಜಯ ಸಾಧಿಸಿದ ಐರ್ಲೆಂಡ್..! – Kannada News | Ireland Cricket Makes History: Men Beat India, Women Conquer West Indies in T20 World Cup

ಕ್ರಿಕೆಟ್ ಲೋಕದಲ್ಲಿ ಈಗಷ್ಟೇ ನೆಲೆ ಕಂಡುಕೊಳ್ಳುತ್ತಿರುವ ಐರ್ಲೆಂಡ್ ತಂಡ (Ireland Cricket) ಕೇವಲ 24 ಗಂಟೆಗಳ ಅಂತರದಲ್ಲಿ 2 ಐತಿಹಾಸಿಕ ಗೆಲುವು ಸಾಧಿಸಿದೆ. ಒಂದೆಡೆ ಐರ್ಲೆಂಡ್ ಪುರುಷರ ತಂಡ, ಟೀಂ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು 34 ರನ್​​ಗಳಿಂದ ಗೆದ್ದುಕೊಂಡಿತು. ಇದು ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ವಿರುದ್ಧ ಯಾವುದೇ ಮಾದರಿಯಲ್ಲಿ ಐರ್ಲೆಂಡ್ ತಂಡದ ಮೊದಲ ಜಯವಾಗಿತ್ತು. ಈ ಪಂದ್ಯ ಮುಗಿದು 24 ಗಂಟೆಗಳ ಅಂತರದಲ್ಲಿ ಐರ್ಲೆಂಡ್ ಮಹಿಳಾ ತಂಡ ಟಿ20 ವಿಶ್ವಕಪ್​ನಲ್ಲಿ (T20 World Cup) ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿದೆ. ಈ ಪಂದ್ಯಾವಳಿಯಲ್ಲಿ ಕೊನೆಯ ಲೀಗ್ ಪಂದ್ಯವನ್ನು ಆಡಿದ ಐರ್ಲೆಂಡ್, ಬಲಿಷ್ಠ ವೆಸ್ಟ್ ತಂಡವನ್ನು ಸೋಲಿಸುವ ಮೂಲಕ ಪಂದ್ಯಾವಳಿಯ ಇತಿಹಾಸದಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿತು.

21 ಪಂದ್ಯಗಳ ಸೋಲಿಗೆ ಬ್ರೇಕ್

ಜೂನ್ 26 ರಂದು ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ಪುರುಷರ ತಂಡ ಭಾರತವನ್ನು 34 ರನ್‌ಗಳಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿತು. 11 ಸೋಲುಗಳ ನಂತರ ಯಾವುದೇ ಸ್ವರೂಪದಲ್ಲಿ ಭಾರತದ ವಿರುದ್ಧ ಐರ್ಲೆಂಡ್ ಗಳಿಸಿದ ಮೊದಲ ಗೆಲುವು ಇದಾಗಿದೆ. ಇತ್ತ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್ ಮಹಿಳಾ ತಂಡ ತನ್ನ ಮೊದಲ ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸಿತು. ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್ ತಂಡ ಸತತ 21 ಪಂದ್ಯಗಳ ಸೋಲಿಗೆ ಅಂತ್ಯ ಹಾಡಿತು. ಈ ಪಂದ್ಯಕ್ಕೂ ಮುನ್ನ ಆಡಿದ್ದ ಎಲ್ಲಾ ಪಂದ್ಯಗಳನ್ನು ಐರ್ಲೆಂಡ್ ಸೋತಿತ್ತು.

ವಿಂಡೀಸ್ ಮಣಿಸಿದ ಐರ್ಲೆಂಡ್

ಗುಂಪು ಹಂತದಲ್ಲಿ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಐರ್ಲೆಂಡ್ ಮಹಿಳಾ ತಂಡ ಅಧಿಕೃತವಾಗಿ 2026 ರ ಮಹಿಳಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿತ್ತು. ಹೀಗಾಗಿ ಔಪಚಾರಿಕ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡ, ಐರ್ಲೆಂಡ್​ಗೆ ಎದುರಾಳಿಯಾಗಿತ್ತು. ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ವಿಂಡೀಸ್ ಪಡೆಗೆ ನಿರ್ಣಾಯಕವಾಗಿತ್ತು. ಆದರೆ ಮಾಜಿ ಚಾಂಪಿಯನ್ ವಿಂಡೀಸ್ ತಂಡಕ್ಕೆ ಮರ್ಮಾಘಾತ ನೀಡುವಲ್ಲಿ ಗ್ಯಾಬಿ ಲೂಯಿಸ್ ನಾಯಕತ್ವದ ಐರಿಶ್ ತಂಡ ಯಶಸ್ವಿಯಾಯಿತು.

ಹೀಗೊಂದು ಕಾಕತಾಳೀಯ; 2028 ರ ಟಿ20 ವಿಶ್ವಕಪ್ ಕೂಡ ಭಾರತದ್ದೇ

ಟಿ20 ವಿಶ್ವಕಪ್ ಪಂದ್ಯ ಹೀಗಿತ್ತು

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೇಲಿ ಮ್ಯಾಥ್ಯೂಸ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಕೇವಲ 128 ರನ್‌ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಶೆನೆಲ್ಲೆ ಹೆನ್ರಿ ಅತ್ಯಧಿಕ 27 ರನ್‌ಗಳ ಇನ್ನಿಂಗ್ಸ್ ಆಡಿದರು. ಇತ್ತ ಐರ್ಲೆಂಡ್ ಪರ ಕಾರಾ ಮುರ್ರೆ (2/13) ಮತ್ತು ಆಮಿ ಮ್ಯಾಗೈರ್ (2/22) ಬೌಲಿಂಗ್​ನಲ್ಲಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ಐರ್ಲೆಂಡ್​ಗೂ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಲೂಯಿಸ್ ಕೇವಲ 26 ರನ್‌ಗಳಿಗೆ ಔಟಾದರಾದರೂ ಓರ್ಲಾ ಪ್ರೆಂಡರ್‌ಗ್ಯಾಸ್ಟ್ ಏಕಾಂಗಿ ಹೋರಾಟ ನೀಡಿ 44 ಎಸೆತಗಳಲ್ಲಿ 63 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಅಂತಿಮವಾಗಿ ಐರ್ಲೆಂಡ್ 19 ನೇ ಓವರ್‌ನ ಮೊದಲ ಎಸೆತದಲ್ಲಿ ಗೆಲುವಿನ ರನ್ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಾಹುಬಲಿ’ ಬಳಿಕ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾಗಿ ಹೇಳಿದ ಪ್ರಭಾಸ್ – Kannada News | Prabhas says after Bahubali success he faced many stressful days

ಭಾರತ ಚಿತ್ರರಂಗದ ಇತಿಹಾಸ ಬರೆದಲ್ಲಿ, ‘ಬಾಹುಬಲಿ’ಗೆ ಮೊದಲು, ‘ಬಾಹುಬಲಿ’ಯ ನಂತರ ಎಂದು ಬರೆಯಬೇಕಾಗುತ್ತದೆ. ರಾಜಮೌಳಿ (Rajamouli) ನಿರ್ದೇಶನದ ಈ ಸಿನಿಮಾಗಳು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆ. ನಟ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ಸಂಪೂರ್ಣ ಬದಲಾದರು. ಅವರ ಸಿನಿಮಾಗಳ ಆಯ್ಕೆಯ ವಿಧಾನ, ಅವರ ಸ್ಟಾರ್​​ಡಮ್, ಬೇಡಿಕೆ, ಅವರು ವರ್ತಿಸುವ ರೀತಿ ಎಲ್ಲವೂ ಬದಲಾಯ್ತು. ಇದೀಗ ‘ಬಾಹುಬಲಿ: ದಿ ಟಾರ್ಚ್ ಬೇರರ್’ ಡಾಕ್ಯುಮೆಂಟರಿಯಲ್ಲಿ ಮಾತನಾಡಿರುವ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ಬಳಿಕ ತಾವು ಒತ್ತಡಕ್ಕೆ ಸಿಲುಕಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

‘ಬಾಹುಬಲಿ’ ಚಿತ್ರದ ಯಶಸ್ಸಿನ ನಂತರ ತಮ್ಮ ಮುಂದಿನ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಅತೀವ ಒತ್ತಡಕ್ಕೆ ಸಿಲುಕಿದ್ದರಂತೆ. ‘ಬಾಹುಬಲಿ’ ಮೂಲಕ ಅತಿ ದೊಡ್ಡ ಯಶಸ್ಸು ಕಂಡಿದ್ದ ಪ್ರಭಾಸ್​​ಗೆ ತಮ್ಮ ಮುಂದಿನ ಸಿನಿಮಾ ಆಗಿ ಯಾವ ರೀತಿಯ ಕತೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಸಹ ಗೊತ್ತಾಗಿರಲಿಲ್ಲವಂತೆ. ಈ ಚಿತ್ರದ ಯಶಸ್ಸಿನಿಂದಾಗಿ ತಮಗೆ ಉಂಟಾದ ಒತ್ತಡ ಮತ್ತು ಆತಂಕದಿಂದಾಗಿ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಸರಿಯಾಗಿ ನಿದ್ದೆ ಸಹ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

‘ಬಾಹುಬಲಿ’ ನಂತರ ಜೀವನ ಗೊಂದಲಮಯವಾಗಿತ್ತು ಎಂಬುದನ್ನು ನಟ ಪ್ರಭಾಸ್ ವಿವರಿಸಿದ್ದಾರೆ. ‘ಬಾಹುಬಲಿ’ ಸಿನಿಮಾದ ವ್ಯಾಪ್ತಿಯು ತೆಲುಗು ಚಿತ್ರರಂಗದ ವ್ಯವಹಾರವನ್ನೇ ರಾತ್ರೋರಾತ್ರಿ ಬದಲಾಯಿಸಿತು. ಇಷ್ಟು ದೊಡ್ಡ ಯಶಸ್ಸಿನ ನಂತರ ಏನು ಮಾಡಬೇಕು ಎಂಬ ಗೊಂದಲದಲ್ಲಿ ತಾನು ಹಲವು ವರ್ಷಗಳ ಕಾಲ ನಿದ್ರೆಯಿಲ್ಲದೆ ಕಷ್ಟಪಟ್ಟಿದ್ದಾಗಿ ಅವರು ಹೇಳಿದ್ದಾರೆ.

‘ಬಾಹುಬಲಿ’ ತನ್ನ ವೃತ್ತಿಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆಯೂ ಮಾತನಾಡಿದ ಪ್ರಭಾಸ್, ‘ಬಾಹುಬಲಿ’ ಬಳಿಕ ತಮ್ಮ ಮುಂದಿನ ಚಿತ್ರ ‘ಸಾಹೋ’ ಉತ್ತರ ಭಾರತದಲ್ಲಿ ಪಡೆದ ಓಪನಿಂಗ್ ಕಲೆಕ್ಷನ್ ಅನ್ನು ಪ್ರಭಾಸ್ ಉಲ್ಲೇಖಿಸಿದ್ದಾರೆ. ‘ಉತ್ತರ ಭಾರತದಲ್ಲಿ ‘ಸಾಹೋ’ ಚಿತ್ರದ ಮೊದಲ ದಿನದ ಗಳಿಕೆ ಸುಮಾರು 26 ಕೋಟಿ ರೂ. ಆಗಿತ್ತು’, ಇದು ಬಲು ದೊಡ್ಡ ಸಂಖ್ಯೆ. ಆ ಸಮಯದಲ್ಲಿ ಈ ಅಂಕಿಅಂಶವು ನಿಜಕ್ಕೂ ಆಘಾತಕಾರಿ ಆಗಿತ್ತು, ಈ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ‘ಬಾಹುಬಲಿ’ಗೆ ಸಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

“ಇದು ಕೇವಲ ಬಾಹುಬಲಿಯ ಕಾರಣದಿಂದಲೇ ಸಂಭವಿಸಿತು. ಇದರಲ್ಲಿ ಬೇರೆ ಏನೂ ಇಲ್ಲ. ಯಾವುದೇ ಭಾಷೆಯಲ್ಲಿ ಮೊದಲ ದಿನದ ಗಳಿಕೆ ಬಂದಿದ್ದರೆ ಅದು ಕೇವಲ ‘ಬಾಹುಬಲಿ’ಯ ಕಾರಣದಿಂದ ಮಾತ್ರ. ‘ಸಾಹೋ’, ‘ರಾಧೇಶ್ಯಾಮ್’ ಚಿತ್ರದ ಹಡಗು ಸನ್ನಿವೇಶ ಮತ್ತು ಆ ನಂತರ ತಾವು ಮಾಡಿದ ಪ್ರತಿಯೊಂದು ಚಿತ್ರದ ಬಜೆಟ್ ಕೂಡ ‘ಬಾಹುಬಲಿ’ಯ ಯಶಸ್ಸಿನಿಂದ ಸಿಕ್ಕ ಆರ್ಥಿಕ ಸ್ವಾತಂತ್ರ್ಯದಿಂದಲೇ ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಅದಕ್ಕೂ ಮುನ್ನ ತಮ್ಮ ಚಿತ್ರಗಳು ಸಾಮಾನ್ಯವಾಗಿ 20 ರಿಂದ 40 ಕೋಟಿ ರೂ ಬಜೆಟ್‌ನಲ್ಲಿ ನಡೆಯುತ್ತಿದ್ದವು ಎಂದು ಅವರು ಒಪ್ಪಿಕೊಂಡಿದ್ದಾರೆ.

‘ಬಾಹುಬಲಿ’ ನಂತರದ ಅವಧಿಯನ್ನು ತಮ್ಮ ವೃತ್ತಿಜೀವನದ ಅತ್ಯಂತ ಒತ್ತಡದ ದಿನಗಳೆಂದು ಪ್ರಭಾಸ್ ಬಣ್ಣಿಸಿದ್ದು, ’ಮುಂದೆ ಏನು ಮಾಡಬೇಕು? ಬಾಹುಬಲಿಯಂತಹ ಹೈ-ಪ್ಯಾಕ್ಡ್ ಡ್ರಾಮಾನಾ? ಅಥವಾ ಹೆಚ್ಚು ದೃಶ್ಯ ವೈಭವದ ಚಿತ್ರವೇ? ಆದರೆ ಅದು ರಾಜಮೌಳಿ ಅವರ ಶೈಲಿಯಾ ಎಂದು ನಿರ್ಣಯಿಸುವುದೇ ಕಷ್ಟವಾಗಿತ್ತು. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ತಂಡವು ಹಲವಾರು ವಿಭಿನ್ನ ದಾರಿಗಳನ್ನು ಯೋಚಿಸಿತು. ‘ನಾವು ಚಿತ್ರಕಥೆ ಆಧಾರಿತ ಚಿತ್ರವನ್ನು ಮಾಡಬೇಕೆಂದುಕೊಂಡಿದ್ದೆವು. ನಂತರ ಪ್ರೇಮಕಥೆಯನ್ನು ಮಾಡೋಣ ಎಂದುಕೊಂಡೆವು. ಪ್ರಶಾಂತ್ ನೀಲ್ ಮತ್ತು ನಾಗ್ ಅಶ್ವಿನ್ ಅವರೊಂದಿಗೆ ಚರ್ಚೆಗಳು ನಡೆದಿದ್ದವು’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಮಂದಿರ ದೇಣಿಗೆ ಲೂಟಿ ಕೇಸ್​​: 40 ಸಿಬ್ಬಂದಿಯಿಂದ್ಲೇ ಸಂಚು! SIT ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ – Kannada News | Ayodhya Ram Mandir Donation Scam: SIT Report Reveals Alleged Conspiracy Involving 40 Staff Members

ರಾಮಮಂದಿರದ ದೇಣಿಗೆಯಲ್ಲಿ ಅಕ್ರಮImage Credit source: tv9 kannada

ಬೆಂಗಳೂರು, ಜೂನ್​​ 28: ರಾಮಂದಿರದ (Ram Mandir) ದೇಣಿಗೆಯಲ್ಲಿ ಕೋಟಿ ಕೋಟಿ ಲೂಟಿ ಕೇಸ್​ನ ತನಿಖೆ ಚುರುಕುಗೊಂಡಿದೆ. ಎಸ್​ಐಟಿ (SIT) ಅಧಿಕಾರಿಗಳು ಎರಡು ಹಂತಗಳಲ್ಲಿ ಇಡೀ ಘಟನೆಯ ಬಗ್ಗೆ ಕೂಲಂಕಷ ತನಿಖೆ ಮುಂದುವರಿಸಿದ್ದಾರೆ. ಎಸ್​ಐಟಿ ಪ್ರಾಥಮಿಕ ವರದಿಯ ಇನ್​ಸೈಡ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ದೋಷಗಳಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಸ್​​ಐಟಿ ವರದಿಯಲ್ಲಿ ಸ್ಫೋಟಕ ಅಂಶ ಬೆಳಕಿಗೆ

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಎಸ್​​ಐಟಿ ವರದಿಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ನಿಯಂತ್ರಣ ಕೊಠಡಿಯ ಉಸ್ತುವಾರಿ ಸೇರಿದಂತೆ 40 ಜನರು ತಪ್ಪಿತಸ್ಥರೆಂದು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ರಾಮಭಕ್ತರೇ ಆತಂಕ ಬೇಡ, ನೀವು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಅಯೋಧ್ಯೆ ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ

ನಿಯಂತ್ರಣ ಕೊಠಡಿಯ ಉಸ್ತುವಾರಿ, ನಿಯಂತ್ರಣ ಕೊಠಡಿಯೊಳಗೆ ನಿಯೋಜಿಸಲಾದ ಸಿಬ್ಬಂದಿ, ಎಣಿಕೆ ಕೊಠಡಿಯ ಹೊರಗೆ ನಿಯೋಜಿಸಲಾದ ಖಾಸಗಿ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿ ಸೇರಿದ್ದಾರೆ. ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಬಹು ಹಂತಗಳಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾದ ಹಿನ್ನೆಲೆ ಭಾರೀ ಅಕ್ರಮ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರತಿಯೊಬ್ಬ ವ್ಯಕ್ತಿಯನ್ನು ಇದೀಗ ಎಸ್​ಐಟಿ ಪ್ರತ್ಯೇಕವಾಗಿ ತನಿಖೆ ಮಾಡುತ್ತಿದೆ.

ಶಾಸಕ ಪ್ರಭು ಚೌಹಾಣ್, ಆರ್​ಎಸ್​​ಎಸ್​ನ ಗೋಪಾಲ್ ವಿರುದ್ಧ ದೂರು

ಇನ್ನು ಎಸ್​ಐಟಿ ತನಿಖೆ ಮಧ್ಯೆ ಬೀದರ್‌ ಜಿಲ್ಲೆಯ ಔರಾದ್‌ನ ದೀಪಕ್ ಪಾಟೀಲ್‌ ಎಂಬುವವರಿಂದ ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್‌ಗೆ ದೂರು ಸಲ್ಲಿಸಿದ್ದಾರೆ. ಮಂದಿರ ಹೆಸರಲ್ಲಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಶಾಸಕ ಪ್ರಭು ಚೌಹಾಣ್, ಆರ್​ಎಸ್​​ಎಸ್​ನ ಗೋಪಾಲ್ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ಮತ್ತೆ ಪ್ರಿಯಾಂಕ್ ಖರ್ಗೆ​​ ಕಿಡಿ: ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಗೃಹ ಸಚಿವ

ಈ ಹಣವನ್ನು ರಾಮ ಮಂದಿರಕ್ಕೆ ತಲುಪಿಸಿದ ಬಗ್ಗೆ ಖಾತರಿಯಿಲ್ಲ. ಗುತ್ತಿಗೆದಾರರಿಂದ 5 ಲಕ್ಷದಿಂದ ದೊಡ್ಡ ಮೊತ್ತದವರೆಗೆ ಸಂಗ್ರಹಿಸಲಾಗಿದ್ದ ಹಣಕ್ಕೆ ಯಾವುದೇ ದಾಖಲಾತಿ ಕೂಡ ನೀಡಿಲ್ಲ ಎಂದಿದ್ದಾರೆ. ಅಯೋಧ್ಯೆ ರಾಮಮಂದಿರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ದಾಖಲೆಗಳಿವೆ. ಎಸ್ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್ – Kannada News | Producer Bhama Harish son Ullas Gowda Passes Away Last Rites in Bengaluru

ಮದನ್​ ಕುಮಾರ್​
|

Updated on: Jun 28, 2026 | 2:17 PM

ಭಾಮಾ ಹರೀಶ್ ಕುಟುಂಬದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಶನಿವಾರ (ಜೂ.27) ಕೊಡಚಾದ್ರಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಇಂದು (ಜೂ.28) ವಿಜಯನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಭಾಮಾ ಹರೀಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಮುಖ್ಯಾಂಶಗಳು

  • ನಿರ್ಮಾಪಕ ಭಾಮಾ ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಅಂತ್ಯಕ್ರಿಯೆ.
  • ಕನ್ನಡ ಚಿತ್ರರಂಗದ ಹಲವರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ.
  • ಕೊಡಚಾದ್ರಿಯಲ್ಲಿ ಹೃದಯಾಘಾತದಿಂದ ನಿಧನರಾದ ಉಲ್ಲಾಸ್ ಗೌಡ.

Source link

15,000 ಜನರನ್ನು ಕೊಲ್ಲುವ ಪಿತೂರಿ; ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ ಸಿಕ್ಕಿದ್ದ ವ್ಯಕ್ತಿ ಬಾಯ್ಬಿಟ್ಟ ಭಯಾನಕ ವಿಚಾರ – Kannada News | Mumbai man caught with toxic pills during muharram procession reveals chilling intention of killing 15,000 people

ಅಪರಾಧದ ಸಾಂದರ್ಭಿಕ ಚಿತ್ರImage Credit source: Getty Images

ಮುಂಬೈ, ಜೂನ್ 28: ಇಲ್ಲಿನ ಬೈಕುಲ್ಲಾ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯಲ್ಲಿ (Muharram Procession) ಭಾಗವಹಿಸಿದ್ದ ಜನರಿಗೆ “ನೋವು ನಿವಾರಕ” (Painkiller) ಎಂದು ಸುಳ್ಳು ಹೇಳಿ, ವಿಷಕಾರಿ ಮಾತ್ರೆಗಳನ್ನು ವಿತರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಪ್ರೇಮ್​ಜಿ (Fayyaz Premji) ಎನ್ನುವ ಈತ ನೀಡಿದ್ದ ಮಾತ್ರೆ ನುಂಗಿ ಹಲವರು ಅಸ್ವಸ್ಥಗೊಂಡಿದ್ದಾರೆ. ಅದೃಷ್ಟವಶಾತ್, ಸಾವಿರಾರು ಜನರು ಈತನ ಸಾವಿನ ಪಾಶಕ್ಕೆ ಸಿಲುಕುವುದರಿಂದ ಬಚಾವಾಗಿದ್ದಾರೆ. ಈತನ ಪೊಲೀಸ್ ವಿಚಾರಣೆ ವೇಳೆ, ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಬೈಕುಲ್ಲಾ ಪ್ರದೇಶದಲ್ಲಿರುವ ರೀಯಾ ರಸ್ತೆಯಲ್ಲಿನ ರೆಹಮತಾಬಾದ್ ಸ್ಮಶಾನದ ಸಮೀಪ ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಲ್ಮಾನ್ ಎಂಬ ವ್ಯಕ್ತಿ, ಆರೋಪಿ ನೀಡಿದ ಮಾತ್ರೆ ಸೇವಿಸಿದ ನಂತರ ವಾಂತಿ ಮತ್ತು ಹೊಟ್ಟೆ ನೋವಿನಿಂದ ಅಸ್ವಸ್ಥಗೊಂಡಿದ್ದನು. ಆತನಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಪ್ರಸ್ತುತ ಆತ ಅಪಾಯದಿಂದ ಪಾರಾಗಿದ್ದಾನೆ. ಹತ್ತಕ್ಕೂ ಹೆಚ್ಚು ಜನರು ಈತ ನೀಡಿದ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮೊಹರಂ ಮೆರವಣಿಗೆಯಲ್ಲಿ ಮಹಾ ಸಂಚು:’ನೋವು ನಿವಾರಕ’ ಎಂದು ಇಲಿ ಪಾಷಾಣದ ಮಾತ್ರೆ ಹಂಚುತ್ತಿದ್ದ ಪಾಪಿ ಅರೆಸ್ಟ್!

ಬಂಧಿತ ಆರೋಪಿಯನ್ನು ಫಯಾಜ್ ಪ್ರೇಮ್​ಜಿ ಎಂದು ಗುರುತಿಸಲಾಗಿದೆ. ಈತ ಪೇಂಟ್ (ಬಣ್ಣದ) ವ್ಯವಹಾರವನ್ನು ನಡೆಸುತ್ತಿದ್ದನು. ವಿಚಾರಣೆ ವೇಳೆ, ಈತ ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ಸಾಮೂಹಿಕ ಹಾನಿ ಉಂಟುಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈತನ ಬಳಿ ಸುಮಾರು 15,000 ವಿಷಕಾರಿ ಮಾತ್ರೆಗಳಿದ್ದುವು. ಈತ ಹದಿನೈದು ಸಾವಿರ ಮಂದಿಯನ್ನು ಕೊಲ್ಲುವ ಪಿತೂರಿ ಮಾಡಿದ್ದನೆನ್ನಲಾಗಿದೆ.

ಝಿಂಕ್ ಫಾಸ್​ಫೈಡ್ ಇರುವ ಮಾತ್ರೆಗಳು

ಆರೋಪಿಯ ಬಳಿ ಇಲಿಗಳನ್ನು ಕೊಲ್ಲಲು ಬಳಸುವ ಅತ್ಯಂತ ವಿಷಕಾರಿ ರಾಸಾಯನಿಕವಾದ ‘ಝಿಂಕ್ ಫಾಸ್ಫೈಡ್’ (Zinc Phosphide) ಪತ್ತೆಯಾಗಿದೆ. ಈತ 50 ಕೆ.ಜಿ.ಯಷ್ಟು ವಿಷಕಾರಿ ರಾಸಾಯನಿಕ ಮತ್ತು ಸುಮಾರು 30,000 ಖಾಲಿ ಕ್ಯಾಪ್ಸುಲ್‌ಗಳನ್ನು ಖರೀದಿಸಿ, ಕಳೆದ 15 ದಿನಗಳಿಂದ ಮುಂಬೈನಲ್ಲೇ ಇದ್ದು, ಪ್ರತಿ ಕ್ಯಾಪ್ಸುಲ್‌ನಲ್ಲಿ ವಿಷವನ್ನು ತುಂಬಿ ಸಿದ್ಧಪಡಿಸುತ್ತಿದ್ದನೆನ್ನಲಾಗಿದೆ.

ಪೊಲೀಸರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ಸುಮಾರು 14,900 ವಿಷಕಾರಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಮನ್​​ ಕಿ ಬಾತ್ 135ನೇ ಸಂಚಿಕೆ: ಮೇಕ್​​ ಇನ್​​ ಇಂಡಿಯಾ ಸಾಧನೆ ಬಣ್ಣಿಸಿದ ಮೋದಿ

ಸೆಕ್ಷನ್ 123 ಅಡಿಯಲ್ಲಿ ತನಿಖೆ

ಆರೋಪಿಯ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 123ರ ಅಡಿಯಲ್ಲಿ (ವಿಷ ಅಥವಾ ಅಪಾಯಕಾರಿ ವಸ್ತುಗಳನ್ನು ನೀಡಿ ಹಾನಿ ಉಂಟುಮಾಡಲು ಪ್ರಯತ್ನಿಸಿದ ಆರೋಪ) ಪ್ರಕರಣ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಆರೋಪಿಯು ಕಳೆದ ವರ್ಷದಲ್ಲಿ ಇರಾನ್ ಮತ್ತು ಇರಾಕ್‌ಗೆ ಹಲವು ಬಾರಿ ಪ್ರಯಾಣ ಬೆಳೆಸಿರುವುದು ಪತ್ತೆಯಾಗಿದ್ದು, ಆತನ ಸಂಪರ್ಕಗಳು ಮತ್ತು ವಿದೇಶಿ ನಂಟಿನ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು? – Kannada News | Vastu Shastra: Why You Must Not Sleep During Pradosha Kala or Sunset Time

ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಯಾಕೆ? Image Credit source: unsplash

ಹಿಂದೂ ಧರ್ಮಗ್ರಂಥಗಳಲ್ಲಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಸಮಯದ ಪರಿಪಾಲನೆಗೆ ಮತ್ತು ದೈನಂದಿನ ದಿನಚರಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಶಾಸ್ತ್ರಗಳು ಇಡೀ ದಿನದ 24 ಗಂಟೆಗಳನ್ನು ವಿವಿಧ ಅವಧಿಗಳಾಗಿ ವಿಂಗಡಿಸುತ್ತವೆ. ಅವುಗಳಲ್ಲಿ ‘ಪ್ರದೋಷ ಕಾಲ’ ಅಂದರೆ ಹಗಲು ಮುಗಿದು ರಾತ್ರಿ ಆರಂಭವಾಗುವ ಸೂರ್ಯಾಸ್ತದ ಸಮಯವನ್ನು ಅತ್ಯಂತ ಸೂಕ್ಷ್ಮ ಮತ್ತು ಪವಿತ್ರವಾದ ಸಂಧ್ಯಾಕಾಲವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಈ ಪವಿತ್ರ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ಸಂಜೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮಲಗುವುದು. ಈ ಸಮಯದಲ್ಲಿ ಮಲಗುವುದನ್ನು ಏಕೆ ನಿಷೇಧಿಸಲಾಗಿದೆ? ಅದರ ಹಿಂದಿನ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸಂಜೆಯ ಸಮಯ:

ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯವು ಬ್ರಹ್ಮಾಂಡದಲ್ಲಿ ಧನಾತ್ಮಕ ಶಕ್ತಿಯು ತೀವ್ರವಾಗಿ ಚಲಿಸುವ ಕಾಲವಾಗಿದೆ. ಎರಡು ಕಾಲಗಳು ಭೇಟಿಯಾಗುವ ಈ ಸಂದರ್ಭದಲ್ಲಿ ಮನೆಯಲ್ಲಿ ದೀಪವನ್ನು ಹಚ್ಚುವುದು, ಪ್ರಾರ್ಥನೆ, ಆರತಿ ಮತ್ತು ಧ್ಯಾನ ಮಾಡುವುದು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ. ಈ ಸಮಯದಲ್ಲಿ ನಿದ್ರಿಸದೆ, ಎಚ್ಚರವಾಗಿದ್ದು ದೇವರ ನಾಮಸ್ಮರಣೆ ಮಾಡುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಮನೆಯೊಳಗೆ ಲಕ್ಷ್ಮಿ ದೇವಿಯ ಆಗಮನದ ಸಮಯ:

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ಸಮಯವನ್ನು ಧನಲಕ್ಷ್ಮಿ ದೇವಿಯು ಭೂಲೋಕಕ್ಕೆ ಸಂಚರಿಸುವ ಮತ್ತು ಮನೆ ಮನಗಳಿಗೆ ಆಗಮಿಸುವ ಪವಿತ್ರ ಮುಹೂರ್ತ ಎನ್ನಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಈ ಸಮಯದಲ್ಲಿ ಮನೆಯ ಮುಖದ್ವಾರವನ್ನು ತೆರೆದಿಟ್ಟು, ಹೊಸ್ತಿಲಿಗೆ ಪೂಜೆ ಮಾಡಿ, ದೀಪ ಬೆಳಗಿಸಲಾಗುತ್ತದೆ. ಇಂತಹ ಮಂಗಳಕರ ಸಮಯದಲ್ಲಿ ಮನೆಯ ಸದಸ್ಯರು ಮಲಗಿದ್ದರೆ, ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಮತ್ತು ಆ ಮನೆಯಲ್ಲಿ ದಾರಿದ್ರ್ಯ ಕಾಡುತ್ತದೆ ಎಂಬ ನಂಬಿಕೆಯಿದೆ.

ಸೋಮಾರಿತನ ಮತ್ತು ನಕಾರಾತ್ಮಕತೆಯ ಹೆಚ್ಚಳ:

ವಾಸ್ತು ಮತ್ತು ಆರೋಗ್ಯದ ದೃಷ್ಟಿಯಿಂದ, ಸೂರ್ಯಾಸ್ತದ ಸಮಯದಲ್ಲಿ ಅಥವಾ ತಕ್ಷಣವೇ ಮಲಗುವುದರಿಂದ ದೇಹದಲ್ಲಿ ತಾಮಸಿಕ ಗುಣಗಳು ಅಂದರೆ ಸೋಮಾರಿತನ ಮತ್ತು ಜಡತ್ವ ಹೆಚ್ಚಾಗುತ್ತದೆ. ಇದು ಮನುಷ್ಯನ ದೈಹಿಕ ಶಕ್ತಿ ಮತ್ತು ಮಾನಸಿಕ ಉತ್ಸಾಹವನ್ನು ಕುಂದಿಸುತ್ತದೆ. ಈ ಸಮಯದಲ್ಲಿ ಮಲಗಿ ಎದ್ದೇಳುವ ವ್ಯಕ್ತಿಗಳಲ್ಲಿ ದಿನನಿತ್ಯದ ಕೆಲಸಗಳ ಮೇಲಿನ ಆಸಕ್ತಿ ಕಡಿಮೆಯಾಗಿ, ಚಿಂತನೆಗಳು ಋಣಾತ್ಮಕವಾಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಸಂಜೆ ಸಮಯದಲ್ಲಿ ಏನು ಮಾಡುವುದು ಶುಭ?

ವಾಸ್ತು ಶಾಸ್ತ್ರ ಮತ್ತು ಹಿರಿಯರ ನಂಬಿಕೆಯ ಪ್ರಕಾರ, ಸೂರ್ಯಾಸ್ತದ ಅವಧಿಯಲ್ಲಿ ಈ ಕೆಳಗಿನ ಕಾರ್ಯಗಳನ್ನು ಮಾಡುವುದು ಮನೆಗೆ ಐಶ್ವರ್ಯವನ್ನು ತರುತ್ತದೆ:

  • ಮನೆಯ ದೇವರ ಕೋಣೆಯಲ್ಲಿ ಹಾಗೂ ಮುಖ್ಯ ದ್ವಾರದ ಬಳಿ ತುಳಸಿ ಗಿಡಕ್ಕೆ ದೀಪ ಹಚ್ಚುವುದು.
  • ಧೂಪ ಅಥವಾ ಅಗರಬತ್ತಿ ಹಚ್ಚಿ ಇಡೀ ಮನೆಗೆ ಅದರ ಹೊಗೆಯನ್ನು ಆಡಿಸುವುದು.
  • ಗಾಯತ್ರಿ ಮಂತ್ರ, ಲಕ್ಷ್ಮಿ ಅಷ್ಟೋತ್ತರ ಅಥವಾ ಯಾವುದೇ ದೇವರ ಮಂತ್ರಗಳನ್ನು ಪಠಿಸುವುದು ಅಥವಾ ಧ್ಯಾನ ಮಾಡುವುದು.
  • ಕುಟುಂಬದ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಪ್ರೀತಿಯ ಸಮಯ ಕಳೆಯುವುದು.

ಈ ನಿಯಮ ಎಲ್ಲರಿಗೂ ಅನ್ವಯಿಸುತ್ತದೆಯೇ?

ಸೂರ್ಯಾಸ್ತದ ನಂತರ ಮಲಗಬಾರದು ಎಂಬುದು ಪ್ರಾಥಮಿಕವಾಗಿ ಸಾಂಪ್ರದಾಯಿಕ ನಂಬಿಕೆಗಳು ಮತ್ತು ವಾಸ್ತು ನಿಯಮಗಳನ್ನು ಆಧರಿಸಿದೆ. ಇದು ಕಟ್ಟುನಿಟ್ಟಾದ ವೈಜ್ಞಾನಿಕ ನಿಯಮವೇನಲ್ಲ. ಒಬ್ಬ ವ್ಯಕ್ತಿಗೆ ತೀವ್ರ ಆರೋಗ್ಯ ಸಮಸ್ಯೆ ಇದ್ದರೆ, ಗರ್ಭಿಣಿಯರು, ಸಣ್ಣ ಮಕ್ಕಳು, ವೃದ್ಧರು ಅಥವಾ ನೈಟ್ ಶಿಫ್ಟ್ ಕೆಲಸ ಮುಗಿಸಿ ಬಂದವರಿಗೆ ಈ ನಿಯಮದಿಂದ ವಿನಾಯಿತಿ ಇರುತ್ತದೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದಾಗ ದೈಹಿಕ ಅಗತ್ಯಕ್ಕೆ ತಕ್ಕಂತೆ ಸಂಜೆ ವಿಶ್ರಾಂತಿ ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version