‘ಉಲ್ಟಾ ಪಲ್ಟಾ’ ಖ್ಯಾತಿಯ ನಿರ್ದೇಶಕ ಎನ್​ಎಸ್​ ಶಂಕರ್ ನಿಧನ: ಚಿತ್ರರಂಗದ ಕಂಬನಿ – Kannada News | Ulta Palta Kannada movie director NS Shankar dies in Bengaluru

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎನ್​ಎಸ್ ಶಂಕರ್ (NS Shankar) ಅವರು ನಿಧನರಾಗಿದ್ದಾರೆ. ಹೃದಯಾಘಾತದಿಂದ (Heart Attack) ಅವರು ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಕರ್ತರೂ ಆಗಿದ್ದ ಶಂಕರ್ ಅವರು ಕನ್ನಡದ ಹೆಸರಾಂತ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ‘ಉಲ್ಟಾ ಪಲ್ಟಾ’ (Ulta Palta) ರೀತಿಯ ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಖ್ಯಾತಿ ಅವರಿಗಿತ್ತು. ಎನ್​ಎಸ್ ಶಂಕರ್ ಅವರ ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಕಳೆದ ಕೆಲವು ದಿನಗಳಿಂದ ಎನ್​ಎಸ್ ಶಂಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮಲಗಿದ್ದಾಗಲೇ ಅವರು ಕೊನೆಯುಸಿರು ಎಳೆದರು ಎನ್ನಲಾಗಿದೆ. ಉತ್ತಮ ಬರಹಗಾರರಾಗಿದ್ದ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದರು. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಕೊಡುಗೆ ನೀಡಿದ್ದರು.

‘ಪ್ರಜಾವಾಣಿ’, ‘ಮುಂಗಾರು’, ‘ಲಂಕೇಶ್ ಪತ್ರಿಕೆ’ ಸೇರಿದಂತೆ ಹಲವು ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದ ಎನ್.ಎಸ್. ಶಂಕರ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಮೆಸ್ಸಿ – Kannada News | Lionel Messi now holds new record in FIFA World Cup 2026

ಅರ್ಜೆಂಟೀನಾದ ಫುಟ್‌ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ ವಿಶ್ವಕಪ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ಜೋರ್ಡನ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಮೆಸ್ಸಿ ವಿಶ್ವಕಪ್​ನಲ್ಲಿ ಸತತ 7 ಪಂದ್ಯಗಳಲ್ಲಿ ಗೋಲು ಹೊಡೆದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. (PC: gettyimages)

ಈ ಹಿಂದೆ ಫ್ರಾನ್ಸ್‌ನ ಜಸ್ಟ್ ಫಾಂಟೈನ್ ಮತ್ತು ಬ್ರೆಝಿಲ್‌ನ ಜೈರ್ಜಿನ್ಹೋ ಸತತ 6 ವಿಶ್ವಕಪ್ ಪಂದ್ಯಗಳಲ್ಲಿ ಗೋಲು ಗಳಿಸಿ ಜಂಟಿ ದಾಖಲೆ ಹೊಂದಿದ್ದರು. ಜೋರ್ಡನ್ ವಿರುದ್ಧದ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ 80ನೇ ನಿಮಿಷದಲ್ಲಿ ಅದ್ಭುತ ಫ್ರೀ-ಕಿಕ್ ಮೂಲಕ ಗೋಲು ಗಳಿಸಿದ 39 ವರ್ಷದ ಮೆಸ್ಸಿ, ಈ ಇಬ್ಬರೂ ದಿಗ್ಗಜರನ್ನು ಹಿಂದಿಕ್ಕಿದ್ದಾರೆ. (PC: gettyimages)

ಲಿಯೋನೆಲ್ ಮೆಸ್ಸಿ ಅವರು 2022ರಲ್ಲಿ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್, ಕ್ರೊಯೇಷಿಯಾ ಮತ್ತು ಫ್ರಾನ್ಸ್ ವಿರುದ್ಧದ ನಾಕೌಟ್ ಪಂದ್ಯಗಳಲ್ಲಿ ಸತತ ಗೋಲು ದಾಖಲಿಸಿದ್ದರು. ಇದೀಗ 2026ರಲ್ಲಿ ಅಲ್ಜೀರಿಯಾ, ಆಸ್ಟ್ರಿಯಾ ಮತ್ತು ಜೋರ್ಡನ್ ವಿರುದ್ಧ ಸತತವಾಗಿ ಗೋಲು ಬಾರಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್​ನಲ್ಲಿ ಸತತ 7 ಪಂದ್ಯಗಳಲ್ಲಿ ಗೋಲು ದಾಖಲಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. (PC: gettyimages)

ಈ ಗೋಲುಗಳೊಂದಿಗೆ ಮೆಸ್ಸಿ ತಮ್ಮ ವಿಶ್ವಕಪ್ ವೃತ್ತಿಜೀವನದ ಒಟ್ಟು ಗೋಲುಗಳ ಸಂಖ್ಯೆಯನ್ನು 19ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ಪುರುಷರ ಮತ್ತು ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಬ್ರೆಝಿಲ್‌ನ ಮಹಿಳಾ ಆಟಗಾರ್ತಿ ಮಾರ್ಟಾ ಅವರ ದಾಖಲೆಯನ್ನು ಮುರಿದು, ‘ಸರ್ವಕಾಲಿಕ ಗರಿಷ್ಠ ಸ್ಕೋರರ್’ ಆಗಿ ಹೊರಹೊಮ್ಮಿದ್ದಾರೆ. (PC: gettyimages)

ಲಿಯೋನೆಲ್ ಮೆಸ್ಸಿ ಅವರ ಭರ್ಜರಿ ಪ್ರದರ್ಶನದೊಂದಿಗೆ ಇದೀಗ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್​ನ ರೌಂಡ್-32 ಸುತ್ತಿಗೆ ಪ್ರವೇಶಿಸಿದೆ. ಈ ನಾಕೌಟ್ ಸುತ್ತಿನಲ್ಲಿ ಅರ್ಜೆಂಟೀನಾ ತಂಡವು ಕೇಪ್​ ವರ್ಡೆ ತಂಡವನ್ನು ಎದುರಿಸಲಿದ್ದು, ಈ ಪಂದ್ಯವು ಜುಲೈ 4 ರಂದು ಮಿಯಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. (PC: gettyimages)

Published On – 10:23 am, Sun, 28 June 26

Source link

ರಾಜ್ಯದ ರೈತರ ಆರ್​​ಟಿಸಿಗಳಲ್ಲಿ ವಕ್ಫ್ ಉಲ್ಲೇಖ: ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದ ವಿಪಕ್ಷ ನಾಯಕ ಅಶೋಕ್​​ – Kannada News | Waqf Row Erupts Again: LoP R Ashoka Slams Congress as Over 1.8 Lakh Farmers’ RTC Records Reportedly Face Waqf Entries

ಆರ್​​. ಅಶೋಕ್Image Credit source: R Ashok X Account

ಬೆಂಗಳೂರು, ಜೂನ್​​ 28: ಕರ್ನಾಟಕದ ವಿವಿಧ ಭಾಗಗಳಲ್ಲಿ, ರೈತರು ಹಾಗೂ ಖಾಸಗಿ ವ್ಯಕ್ತಿಗಳ ಜಮೀನುಗಳ ದಾಖಲೆಗಳಲ್ಲಿ ಯಾವುದೇ ಪೂರ್ವಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ವಕ್ಫ್‌  ಹೆಸರು ನಮೂದಾಗಿರುವುದು ಈ ಹಿಂದೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದೇ ವಿಚಾರವೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಆರ್​​. ಅಶೋಕ್​​, ರೈತರ ಭೂಮಿಯನ್ನು ವಕ್ಫ್ ವಿವಾದಕ್ಕೆ ಸಿಲುಕಿಸಿ, ಕಾಂಗ್ರೆಸ್ ಸರ್ಕಾರ ಯಾರ ಹಿತ ಕಾಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

‘ರೈತರ ಅಸ್ತಿತ್ವಕ್ಕೇ ಕುತ್ತು’

ರಾಜ್ಯ ಸರ್ಕಾರದ ಓಲೈಕೆ ಮತ್ತು ತುಷ್ಟೀಕರಣದ ರಾಜಕಾರಣ ಈಗ ನಾಡಿನ ರೈತರ ಅಸ್ತಿತ್ವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ರಾಜ್ಯದಾದ್ಯಂತ ರೈತರ RTCಗಳ ಕಾಲಂ 11ರಲ್ಲಿ ವಕ್ಫ್ ಉಲ್ಲೇಖಗಳನ್ನು ದಾಖಲಿಸಲಾಗುತ್ತಿದೆ ಎಂಬ ವರದಿಗಳು ಹೊರಬಿದ್ದಿದ್ದು, ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದು ಕೇವಲ ದಾಖಲೆ ಬದಲಾವಣೆಯ ವಿಚಾರವಲ್ಲ. ಇದು ರೈತನ ಮಾಲೀಕತ್ವದ ಹಕ್ಕು, ಬದುಕು ಮತ್ತು ಭವಿಷ್ಯದ ಪ್ರಶ್ನೆ ಎಂದವರು ತಿಳಿಸಿದ್ದಾರೆ.ರಾಜ್ಯದ 1,80,000ಕ್ಕೂ ಹೆಚ್ಚು ರೈತರ RTCಗಳಲ್ಲಿ ಈಗಾಗಲೇ ವಕ್ಫ್ ಉಲ್ಲೇಖ ದಾಖಲಾಗಿದೆ. ಒಟ್ಟು 3,00,000 RTCಗಳನ್ನು ಈ ಪ್ರಕ್ರಿಯೆಯ ವ್ಯಾಪ್ತಿಗೆ ತರಲು ಕ್ರಮ ನಡೆಯುತ್ತಿದೆ ಎನ್ನಲಾಗಿದೆ. 31 ಜಿಲ್ಲೆಗಳ ರೈತರು ಇದರ ಪರಿಣಾಮಕ್ಕೆ ಒಳಗಾಗುವ ಆತಂಕದಲ್ಲಿದ್ದಾರೆ ಎಂದವರು ದೂರಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಮೂಲದ ಶಾಸಕನಿಂದ ಅಡ್ಡಮತದಾನ ಶಂಕೆ, ವರದಿ ಸಲ್ಲಿಕೆ ಮುನ್ನವೇ ಸ್ಫೋಟಕ ಮಾಹಿತಿ ಬಹಿರಂಗ

ಜಿಲ್ಲಾವಾರು ಅಂಕಿ-ಅಂಶ

  • ಉತ್ತರ ಕನ್ನಡ – 73,000 RTCಗಳು
  • ದಕ್ಷಿಣ ಕನ್ನಡ – 48,000 RTCಗಳು
  • ಶಿವಮೊಗ್ಗ – 38,000 RTCಗಳು
  • ಬೆಂಗಳೂರು ದಕ್ಷಿಣ – 18,000 RTCಗಳು
  • ಕಲಬುರಗಿ – 17,000 RTCಗಳು
  • ಬಾಗಲಕೋಟೆ – 17,000 RTCಗಳು

ರೈತರು ತಮ್ಮದೇ ಭೂಮಿಯನ್ನು ಮಾರಾಟ ಮಾಡಲು, ಬ್ಯಾಂಕ್ ಸಾಲ ಪಡೆಯಲು ಅಥವಾ ಮಾಲೀಕತ್ವದ ಹಕ್ಕು ಚಲಾಯಿಸಲು ಅನಿಶ್ಚಿತತೆ ಎದುರಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಯಿತು? ರೈತರನ್ನು ತಮ್ಮದೇ ಜಮೀನಿನಲ್ಲಿ ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದೀರಾ? ಕಾಂಗ್ರೆಸ್ ಸರ್ಕಾರಕ್ಕೆ ರೈತನ ಹಿತ ಮುಖ್ಯವೇ, ಅಥವಾ ತುಷ್ಟೀಕರಣದ ರಾಜಕಾರಣ ಮುಖ್ಯವೇ? ಎಂದು ಅಶೋಕ್​​ ಪ್ರಶ್ನಿಸಿದ್ದು, ರೈತನು ಅನ್ನ ಬೆಳೆಯುತ್ತಾನೆ. ಇಡೀ ದೇಶದ ಹಸಿವನ್ನು ನೀಗಿಸುತ್ತಾನೆ. ಅಂತಹ ರೈತನನ್ನು ತನ್ನದೇ ಭೂಮಿಯ ಹಕ್ಕಿಗಾಗಿ ಸರ್ಕಾರಿ ಕಚೇರಿಗಳ ಮುಂದೆ ನಿಲ್ಲಿಸಿದರ ಅನ್ನದಾತನ ಶಾಪ ತಟ್ಟದೇ ಇರದು ಎಂದೂ ಅವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:14 am, Sun, 28 June 26

Source link

ರೆಕಾರ್ಡ್ ಬುಕ್‌ನಿಂದ ಮಾಯವಾಯ್ತು ಅಭಿಷೇಕ್ ಶರ್ಮಾ ಅರ್ಧಶತಕ..! – Kannada News | Abhishek Sharma’s Milestone Erased Post Match

ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಎನಿಸುವ ಘಟನೆಯೊಂದಕ್ಕೆ ಭಾರತ ಮತ್ತು ಐರ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಸಾಕ್ಷಿಯಾಗಿದೆ. ಕೇವಲ 19 ಎಸೆತಗಳಲ್ಲಿ ಭರ್ಜರಿ 50 ರನ್ ಚಚ್ಚಿ ಸಂಭ್ರಮಿಸಿದ್ದ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಅರ್ಧಶತಕವನ್ನು ಪಂದ್ಯದ ನಂತರ ಅಧಿಕೃತ ದಾಖಲೆಯಿಂದ ಕೈಬಿಡಲಾಗಿದೆ. ಅಲ್ಲದೆ ಅವರ ಸ್ಕೋರ್​ ಅನ್ನು  50 ರಿಂದ 49 ರನ್‌ಗಳಿಗೆ ಪರಿಷ್ಕರಿಸಲಾಗಿದೆ.

ರನ್ ಕಡಿತವೇಕೆ?

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು 20 ಓವರ್​ಗಳಲ್ಲಿ 182 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಲು ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಸ್ಫೋಟಕ ಇನಿಂಗ್ಸ ಆಡಿದ್ದರು. ಈ ಇನಿಂಗ್ಸ್ ಮೂಲಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅರ್ಧಶತಕದ ಬೆನ್ನಲ್ಲೇ ವಿಕೆಟ್ ಅಭಿಷೇಕ್ ವಿಕೆಟ್ ಒಪ್ಪಿಸಿದ್ದರು.

ಆದರೆ ಈ ಪಂದ್ಯದ ಬಳಿಕ ಅಭಿಷೇಕ್ ಶರ್ಮಾ ಅವರ ರನ್ ಖಾತೆಯಿಂದ ಒಂದು ರನ್ ಮೈನಸ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಲೆಗ್ ಬೈ ರನ್.

ಭಾರತ ತಂಡದ ಬ್ಯಾಟಿಂಗ್ ಚೇಸಿಂಗ್ ವೇಳೆ, ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಲೆಗ್ ಸೈಡ್‌ನಲ್ಲಿ ಶಾರ್ಟ್ ಬಾಲ್ ಒಂದನ್ನು ಪುಲ್ ಮಾಡಲು ಯತ್ನಿಸಿದ್ದರು. ಆದರೆ ಚೆಂಡು ಅವರ ಬ್ಯಾಟ್‌ಗೆ ತಗುಲದೆ, ಥೈ ಪ್ಯಾಡ್‌ಗೆ  ಬಡಿದು ಫೈನ್ ಲೆಗ್ ಕಡೆಗೆ ಹೋಗಿತ್ತು. ಆ ವೇಳೆ ಅವರು 1 ರನ್ ಓಡಿದ್ದರು. ಮೈದಾನದಲ್ಲಿದ್ದ ಸ್ಕೋರರ್‌ಗಳು ಆರಂಭದಲ್ಲಿ ಇದನ್ನು ಅಭಿಷೇಕ್ ಶರ್ಮಾ ಅವರ ಖಾತೆಗೆ ರನ್ ಎಂದು ತಪ್ಪಾಗಿ ದಾಖಲಿಸಿದ್ದರು.

ಲೈವ್ ಸ್ಕೋರ್ ಬೋರ್ಡ್ ನಂಬಿದ ಅಭಿಷೇಕ್ ಶರ್ಮಾ, ತಾವು ಎದುರಿಸಿದ 19ನೇ ಎಸೆತದಲ್ಲಿ ಸಿಂಗಲ್ ತೆಗೆದು ಅರ್ಧಶತಕದ ಸಂಭ್ರಮಾಚರಣೆ ಮಾಡಿದ್ದರು. ಆದರೆ, ಅದರ ಮರು ಎಸೆತದಲ್ಲೇ ಅವರು ಔಟಾದರು.

ಸ್ಕೋರ್ ತಿದ್ದುಪಡಿ:

ಅಭಿಷೇಕ್ ಶರ್ಮಾ ಅವರು ಪೆವಿಲಿಯನ್‌ಗೆ ಮರಳಿದ ಬಳಿಕ, ಐಸಿಸಿ ನಿಯಮಾವಳಿ ಪ್ರಕಾರ ಪಂದ್ಯದ ಅಧಿಕಾರಿಗಳು ವಿಡಿಯೋ ದೃಶ್ಯಾವಳಿಗಳನ್ನು ಮರುಪರಿಶೀಲಿಸಿದರು. ಈ ಪರಿಶೀಲನೆ ವೇಳೆ 1 ರನ್ ಬ್ಯಾಟ್‌ನಿಂದ ಬಂದಿದ್ದಲ್ಲ, ಬದಲಿಗೆ ‘ಲೆಗ್ ಬೈ’ ಎಂದು ಸಾಬೀತಾಯಿತು. ಇದರಿಂದಾಗಿ ಭಾರತ ತಂಡದ ಒಟ್ಟು ಸ್ಕೋರ್ ಹಾಗೇ ಉಳಿದರೂ, ಅಭಿಷೇಕ್ ಅವರ ವೈಯಕ್ತಿಕ ಸ್ಕೋರ್ 49 ರನ್‌ಗೆ ಇಳಿಯಿತು.

ಇದನ್ನೂ ಓದಿ: ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ?

ವಿಶ್ವ ದಾಖಲೆ:

ಈ ಪಂದ್ಯದಲ್ಲಿ ಅರ್ಧಶತಕ ಕೈತಪ್ಪಿದರೂ ಅಭಿಷೇಕ್ ಶರ್ಮಾ  ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಮ್ಯಾಚ್​ನಲ್ಲಿ ಕಲೆಹಾಕಿದ 49 ರನ್​ಗಳೊಂದಿಗೆ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 1000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೇವಲ 528 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ, ಭಾರತದವರೇ ಆದ ಸೂರ್ಯಕುಮಾರ್ ಯಾದವ್ (573 ಎಸೆತಗಳು) ಅವರ ಹೆಸರಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ಅಭಿಷೇಕ್ ಶರ್ಮಾ ಧೂಳೀಪಟ ಮಾಡಿದ್ದಾರೆ.

Source link

‘ಮುನ್ನಾ ಭಾಯ್-ಸರ್ಕ್ಯೂಟ್’ ಪಾತ್ರಗಳಿಗೆ ರಾಮ-ಹನುಮಂತನೇ ಪ್ರೇರಣೆ: ನಿರ್ದೇಶಕ ರಾಜ್‌ಕುಮಾರ್ ಹಿರಾನಿ – Kannada News | Director Rajkumar Hirani says Munna Bhai and Circuit inspired by Lord Rama and Hanuman

ಬಾಲಿವುಡ್‌ನ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರಗಳಾದ ‘ಮುನ್ನಾ ಭಾಯ್ MBBS’ ಮತ್ತು ‘ಲಗೇ ರಹೋ ಮುನ್ನಾ ಭಾಯ್’ ಚಿತ್ರಗಳ ಯಶಸ್ಸಿನ ಹಿಂದಿನ ಅಸಲಿ ರಹಸ್ಯವನ್ನು ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Rajkumar Hirani) ಕೊನೆಗೂ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ (ಮುನ್ನಾ ಭಾಯ್) ಮತ್ತು ಅರ್ಷದ್ ವಾರ್ಸಿ (ಸರ್ಕ್ಯೂಟ್) ನಡುವಿನ ಅದ್ಭುತ ಸ್ನೇಹದ ಬಾಂಡಿಂಗ್‌ಗೆ ಪ್ರಭು ಶ್ರೀರಾಮ (Lord Rama) ಮತ್ತು ಹನುಮಂತನ ಸಂಬಂಧವೇ ಪ್ರೇರಣೆ ಎಂದು ಅವರು ಹೇಳಿದ್ದಾರೆ.

ಪಿಟಿಐ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಹಿರಾನಿ, ‘ನಮ್ಮ ಮನಸ್ಸಿನಲ್ಲಿ ಸರ್ಕ್ಯೂಟ್ ಪಾತ್ರವು ಮುನ್ನಾ ಭಾಯ್ ಪಾಲಿಗೆ ಹನುಮಂತನಂತಿತ್ತು. ಮುನ್ನಾ ಭಾಯ್ ಆತನಿಗೆ ರಾಮನಿದ್ದಂತೆ. ಭಾಯ್ ಒಂದು ಮಾತು ಹೇಳಿದರೆ ಮುಗಿಯಿತು, ಸರ್ಕ್ಯೂಟ್ ಅದಕ್ಕೆ ಯಾವುದೇ ಮರುಪ್ರಶ್ನೆ ಹಾಕುತ್ತಿರಲಿಲ್ಲ. ಕಣ್ಣು ಮುಚ್ಚಿ ಆ ಕೆಲಸ ಮಾಡುತ್ತಿದ್ದ. ಆ ಮಟ್ಟದ ಅಚಲವಾದ ನಿಷ್ಠೆ ಮತ್ತು ಭಕ್ತಿಯನ್ನು ಆ ಪಾತ್ರದಲ್ಲಿ ತರಲು ನಾವು ಬಯಸಿದ್ದೆವು’ ಎಂದು ತಿಳಿಸಿದ್ದಾರೆ.

ಇದೇ ವಿಷಯವಾಗಿ ಮಾತನಾಡಿದ ನಟ ಅರ್ಷದ್ ವಾರ್ಸಿ, ‘ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಬ್ಬ ಸರ್ಕ್ಯೂಟ್‌ನಂತಹ ಸ್ನೇಹಿತ ಇರಬೇಕೆಂದು ಬಯಸುತ್ತಾರೆ. ನನಗೂ ಕೂಡ ಅಂತಹದೇ ಒಬ್ಬ ಗೆಳೆಯ ಬೇಕು’ ಎಂದು ನಗುತ್ತಾ ಹೇಳಿದ್ದಾರೆ. ಅಲ್ಲದೆ, ಆರಂಭದಲ್ಲಿ ಹಿರಾನಿ ಅವರ ಬಗ್ಗೆ ತಮಗೆ ಅಷ್ಟಾಗಿ ತಿಳಿಯದೇ ಇದ್ದರೂ, ಕಥೆ ಕೇಳಿದ ತಕ್ಷಣ ಅವರ ಕಥೆ ಹೇಳುವ ಶೈಲಿ ಮತ್ತು ಅವರಲ್ಲಿದ್ದ ಮಾನವೀಯ ದೃಷ್ಟಿಕೋನ ತಮಗೆ ಬಹುವಾಗಿ ಇಷ್ಟವಾಯಿತು ಎಂದು ಅರ್ಷದ್ ನೆನಪಿಸಿಕೊಂಡಿದ್ದಾರೆ.

ಬಹಳ ವರ್ಷಗಳ ನಂತರ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹಾಗೂ ಅರ್ಷದ್ ವಾರ್ಸಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿ ಸಿನಿಮಾವಲ್ಲ, ಬದಲಿಗೆ ಒಟಿಟಿ ವೆಬ್ ಸರಣಿಯೊಂದಕ್ಕಾಗಿ ಇವರಿಬ್ಬರು ಕೈಜೋಡಿಸಿದ್ದಾರೆ. ‘ಪ್ರೀತಮ್ ಅಂಡ್ ಪೆಡ್ರೊ’ (Pritam and Pedro) ಹೆಸರಿನ ಈ ಸೈಬರ್ ಕ್ರೈಂ ಕಾಮಿಡಿ ಥ್ರಿಲ್ಲರ್ ಸರಣಿಗೆ ಹಿರಾನಿ ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ: ‘ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ಒಂದು ಡಿಸಾಸ್ಟರ್ ಅಂದಿದ್ದರು’; ರಾಜಕುಮಾರ್ ಹಿರಾನಿ

ವಿಶೇಷವೆಂದರೆ, ರಾಜ್‌ಕುಮಾರ್ ಹಿರಾನಿ ಅವರ ಪುತ್ರ ವೀರ್ ಹಿರಾನಿ ಈ ಸರಣಿಯ ಮೂಲಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸೂಪರ್ ಹಿಟ್ ‘ಪಾತಾಳ್ ಲೋಕ್’ ಖ್ಯಾತಿಯ ಅವಿನಾಶ್ ಅರುಣ್ ನಿರ್ದೇಶಿಸಿರುವ ಈ ಸರಣಿಯು ಜುಲೈ 3 ರಿಂದ ‘ಜಿಯೋಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಓಣಂ ಸ್ಪೆಷಲ್​​​​: ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್​​ ರೈಲಿನ ಬೋಗಿಗಳ ಹೆಚ್ಚಳಕ್ಕೆ ನಿರ್ಧಾರ – Kannada News | Onam Rush: Southern Railway to Double Bengaluru–Ernakulam Vande Bharat Capacity from 8 to 16 Coaches

ಬೆಂಗಳೂರು, ಜೂನ್​​ 28: ಓಣಂ ಹಬ್ಬಕ್ಕೆ ಊರಿಗೆ ತೆರಳುವು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ಸಿಕ್ಕಿದ್ದು, ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು ಸೌತರ್ನ್​​ ರೈಲ್ವೆ ನಿರ್ಧರಿಸಿದೆ. ಆ ಮೂಲಕ ಪ್ರಸ್ತುತ 8 ಬೋಗಿಗಳಿರುವ ರೈಲನ್ನು 16 ಬೋಗಿಗಳಿಗೆ ಹೆಚ್ಚಿಸಲಾಗುತ್ತಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಆಸನಗಳು ಲಭ್ಯವಾಗಲಿವೆ. ರೈಲಿಗೆ ಹೊಸ 16 ಬೋಗಿಗಳ ರೇಕ್ ಅನ್ನು ಜುಲೈ ಮೊದಲ ವಾರದಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ರೈಲು ಸೇವೆ ಆರಂಭವಾದ ಸುಮಾರು ಏಳು ತಿಂಗಳ ಬಳಿಕ ಈ ಬದಲಾವಣೆ ಜಾರಿಗೆ ಬರುತ್ತಿದೆ.

ಆಸನ ಸಾಮರ್ಥ್ಯ 1,128ಕ್ಕೆ ಏರಿಕೆ

ಓಣಂ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 21 ಮತ್ತು 22ರ ಪ್ರಯಾಣದ ಟಿಕೆಟ್‌ಗಳು ಬುಕ್ಕಿಂಗ್ ಆರಂಭವಾದ ತಕ್ಷಣವೇ ವೇಟಿಂಗ್ ಲಿಸ್ಟ್​​ಗೆ ತಲುಪಿದ್ದವು. ಹಬ್ಬದ ದಿನಗಳು ಹಾಗೂ ದೀರ್ಘ ವಾರಾಂತ್ಯಗಳಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ತೀವ್ರವಾಗಿ ಹೆಚ್ಚಿದೆ ಎನ್ನಲಾಗಿದೆ. ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಪ್ರಯಾಣಿಕರಿಂದ ಈ ರೈಲಿಗೆ ನಿರಂತರವಾಗಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೆಚ್ಚುವರಿ ಬೋಗಿಗಳ ಸೇರ್ಪಡೆಯಿಂದ ಹಬ್ಬದ ಸಮಯದ ಪ್ರಯಾಣಿಕರ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಈ ಬದಲಾವಣೆಯೊಂದಿಗೆ ರೈಲಿನ ಆಸನ ಸಾಮರ್ಥ್ಯ 530ರಿಂದ 1,128ಕ್ಕೆ ಏರಿಕೆಯಾಗಲಿದ್ದು, ಪ್ರತಿ ಪ್ರಯಾಣದಲ್ಲಿ 598 ಹೆಚ್ಚುವರಿ ಪ್ರಯಾಣಿಕರು ಸಂಚರಿಸಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ಬೆಂಗಳೂರು ಟು ಚೆನ್ನೈ ಜಸ್ಟ್ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ; ದೇಶದ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಟ್ರಾವೆಲ್ ಟೈಮ್ ಇಲ್ಲಿದೆ

ವಾರದಲ್ಲಿ ಆರು ದಿನ ಈ ರೈಲು ಸಂಚರಿಸುವುದರಿಂದ, ಒಂದು ದಿಕ್ಕಿನಲ್ಲಿ ವಾರಕ್ಕೆ 6,768 ಹೆಚ್ಚುವರಿ ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 630 ಕಿಲೋಮೀಟರ್ ದೂರದ ಬೆಂಗಳೂರು–ಎರ್ನಾಕುಲಂ ಮಾರ್ಗವನ್ನು ಈ ವಂದೇ ಭಾರತ್ ರೈಲು 8 ಗಂಟೆ 40 ನಿಮಿಷಗಳಲ್ಲಿ ಕ್ರಮಿಸುತ್ತಿದ್ದು, ಮಾರ್ಗ ಮಧ್ಯೆ ಕೇವಲ ಒಂಬತ್ತು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇರಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೌತ್ ಆಫ್ರಿಕಾ ಎಷ್ಟು ರನ್​​​ಗಳಿಂದ ಗೆದ್ದರೆ ಟೀಮ್ ಇಂಡಿಯಾ ಹೊರಬೀಳಲಿದೆ? – Kannada News | How can South Africa qualify for T20 World Cup semi final

ಟಿ20 ವಿಶ್ವಕಪ್​​​ನಲ್ಲಿ ಸೆಮಿಫೈನಲ್ ಆಡಲಿರುವ 4 ತಂಡಗಳಾವುವು? ಈ ಪ್ರಶ್ನೆಗೆ ಇಂದು (ಜೂ.27) ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಇಂದು ನಡೆಯಲಿರುವ 2 ಪಂದ್ಯಗಳ ಮೂಲಕ ಮೂರು ತಂಡಗಳ ಟಿ20 ವಿಶ್ವಕಪ್ ಸೆಮಿಫೈನಲ್ ಭವಿಷ್ಯ ನಿರ್ಧಾರವಾಗಲಿದೆ. ಆ ಪಂದ್ಯಗಳು ಯಾವುದೆಂದರೆ…

  • ಭಾರತ vs ಆಸ್ಟ್ರೇಲಿಯಾ
  • ಸೌತ್ ಆಫ್ರಿಕಾ vs ಬಾಂಗ್ಲಾದೇಶ್

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗೆದ್ದರೆ 8 ಅಂಕಗಳೊಂದಿಗೆ ಸೆಮಿಫೈನಲ್​​ಗೇರುವುದು ಬಹುತೇಕ ಖಚಿತ. ಇನ್ನು ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡ ಗೆದ್ದರೆ ಒಟ್ಟು 8 ಅಂಕಗಳನ್ನು ಪಡೆಯಲಿದೆ. ಆದರೆ ಟೀಮ್ ಇಂಡಿಯಾವನ್ನು ಹಿಂದಿಕ್ಕಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಭಾರೀ ಅಂತರದಿಂದ ಗೆಲ್ಲಬೇಕು. ಆ ಗೆಲುವಿಗಾಗಿ ಪವಾಡವೇ ನಡೆಯಬೇಕು.

ಪ್ರಸ್ತುತ ಸನ್ನಿವೇಶದಲ್ಲಿ ಭಾರತ ತಂಡವು ಆಡಿರುವ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ +2.268 ರನ್ ರೇಟ್‌ನೊಂದಿಗೆ ಗ್ರೂಪ್‌ನಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಇನ್ನೊಂದೆಡೆ, ಸೌತ್ ಆಫ್ರಿಕಾ ತಂಡವು +0.734 ರನ್ ರೇಟ್ ಹೊಂದಿದ್ದು, ಮೂರನೇ ಸ್ಥಾನದಲ್ಲಿದೆ. ಉಭಯ ತಂಡಗಳ ರನ್ ರೇಟ್ ನಡುವೆ ದೊಡ್ಡ ವ್ಯತ್ಯಾಸವಿರುವುದರಿಂದ ಸೌತ್ ಆಫ್ರಿಕಾ ಇಂದಿನ ಪಂದ್ಯದಲ್ಲಿ ಕೇವಲ ಗೆದ್ದರೆ ಸಾಲದು, ಬದಲಿಗೆ ಇತಿಹಾಸ ಸೃಷ್ಟಿಸಬೇಕಿದೆ.

ಸೌತ್ ಆಫ್ರಿಕಾ ತಂಡದ ಲೆಕ್ಕಾಚಾರ:

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 160 ರನ್ ಗಳಿಸಿ, ಕೇವಲ 1 ರನ್‌ನಿಂದ ಜಯ ಸಾಧಿಸಿದರೂ ಸಹ ಭಾರತದ ರನ್ ರೇಟ್ ಅತ್ಯುನ್ನತ ಮಟ್ಟದಲ್ಲಿಯೇ ಇರಲಿದೆ. ಈ ಮೂಲಕ ಸೆಮಿಫೈನಲ್​ಗೇರಬಹುದು. ಇತ್ತ ಭಾರತ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಈ ಕೆಳಗಿನ ರೀತಿಯಲ್ಲಿ ಪಂದ್ಯ ಗೆಲ್ಲಬೇಕು…

  • 100 ರನ್‌ಗಳ ಟಾರ್ಗೆಟ್ ಇದ್ದರೆ: ಸೌತ್ ಆಫ್ರಿಕಾ ಈ ಸಣ್ಣ ಮೊತ್ತವನ್ನು ಕೇವಲ 3.3 ರಿಂದ 4 ಓವರ್‌ಗಳ ಒಳಗೆ (ಅಂದರೆ ಸುಮಾರು 22 ಎಸೆತಗಳಲ್ಲಿ) ಚೇಸ್ ಮಾಡಬೇಕಾಗುತ್ತದೆ.
  • 150 ರನ್‌ಗಳ ಟಾರ್ಗೆಟ್ ಇದ್ದರೆ: ಈ ಮಧ್ಯಮ ಮೊತ್ತವನ್ನು ಸೌತ್ ಆಫ್ರಿಕಾ ಕೇವಲ 4.5 ರಿಂದ 5 ಓವರ್‌ಗಳ ಒಳಗೆ (ಅಂದರೆ ಸುಮಾರು 28 ರಿಂದ 30 ಎಸೆತಗಳಲ್ಲಿ) ಬೆನ್ನಟ್ಟಬೇಕು.
  • 200 ರನ್‌ಗಳ ಬೃಹತ್ ಟಾರ್ಗೆಟ್ ಇದ್ದರೆ: ಒಂದು ವೇಳೆ ಬಾಂಗ್ಲಾದೇಶ್ ತಂಡ 200 ರನ್ ಗಳಿಸಿದರೆ, ಸೌತ್ ಆಫ್ರಿಕಾ ಅದನ್ನು ಕೇವಲ 5.3 ರಿಂದ 6 ಓವರ್‌ಗಳ ಒಳಗೆ (ಅಂದರೆ ಸುಮಾರು 34 ಎಸೆತಗಳಲ್ಲಿ) ಚೇಸ್ ಮಾಡಬೇಕಾಗುತ್ತದೆ.

ಒಂದು ವೇಳೆ ಬಾಂಗ್ಲಾದೇಶ್ ವಿರುದ್ಧ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್​ ಮಾಡಿದರೆ ಈ ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. ಇದರ ಲೆಕ್ಕಾಚಾರ ಈ ಕೆಳಗಿನಂತಿದೆ…

  • 150 ರನ್ ಗಳಿಸಿದರೆ: ಸೌತ್ ಆಫ್ರಿಕಾ ತಂಡವು ಬಾಂಗ್ಲಾದೇಶವನ್ನು ಕೇವಲ 28 ರಿಂದ 30 ರನ್‌ಗಳ ಒಳಗೆ ಆಲೌಟ್ ಮಾಡಬೇಕು. ಅಂದರೆ ಕನಿಷ್ಠ 120 ರಿಂದ 122 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಬೇಕು.
  • 180 ರನ್ ಗಳಿಸಿದರೆ: ಬಾಂಗ್ಲಾದೇಶ್ ತಂಡವನ್ನು ಗರಿಷ್ಠ 35 ರಿಂದ 40 ರನ್‌ಗಳ ಒಳಗೆ ಕಟ್ಟಿಹಾಕಬೇಕಾಗುತ್ತದೆ. ಅಂದರೆ ಸುಮಾರು 140 ರಿಂದ 145 ರನ್‌ಗಳ ಅಂತರದ ಗೆಲುವು ಅಗತ್ಯವಿರುತ್ತದೆ.
  • 200 ರನ್‌ಗಳ ಬೃಹತ್ ಮೊತ್ತ ಗಳಿಸಿದರೆ: ಸೌತ್ ಆಫ್ರಿಕಾ ತಂಡವು ಬಾಂಗ್ಲಾದೇಶ್ ತಂಡವನ್ನು ಕನಿಷ್ಠ 167 ರನ್‌ಗಳ ಬೃಹತ್ ಅಂತರದಿಂದ ಸೋಲಿಸಬೇಕಾಗುತ್ತದೆ. ಅಂದರೆ ಬಾಂಗ್ಲಾದೇಶವನ್ನು ಕೇವಲ 33 ರನ್‌ಗಳ ಒಳಗೆ ಆಲೌಟ್ ಮಾಡಬೇಕಾದ ಅಸಾಧ್ಯ ಪರಿಸ್ಥಿತಿ ಎದುರಾಗುತ್ತದೆ.

ಇಂತಹದೊಂದು ಪವಾಡಸದೃಶ ಗೆಲುವು ದಾಖಲಿಸಿದರೆ ಮಾತ್ರ ಸೌತ್ ಆಫ್ರಿಕಾ ತಂಡವು ಭಾರತ ತಂಡವನ್ನು ನೆಟ್​ ರನ್ ರೇಟ್​ನಲ್ಲಿ ಹಿಂದಿಕ್ಕಬಹುದು.

  • ಸೌತ್ ಆಫ್ರಿಕಾ ತಂಡದ ನೆಟ್ ರನ್ ರೇಟ್: +0.734
  • ಭಾರತ ತಂಡದ ನೆಟ್ ರನ್ ರೇಟ್: +2.268

ಇದನ್ನೂ ಓದಿ: ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ

ಒಟ್ಟಾರೆಯಾಗಿ, ಸೌತ್ ಆಫ್ರಿಕಾ ತಂಡವು ಸೆಮಿಫೈನಲ್ ತಲುಪಬೇಕಾದರೆ ಬಾಂಗ್ಲಾದೇಶ್ ವಿರುದ್ಧ ಕೇವಲ ಕ್ರಿಕೆಟ್ ಆಡಿದರೆ ಸಾಲದು, ಅಕ್ಷರಶಃ ಬಿರುಗಾಳಿಯ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ.

Published On – 9:24 am, Sun, 28 June 26

Source link

149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಕಂಡರಿಯದ ದಾಖಲೆ ಬರೆದ ವಿಂಡೀಸ್ ದಾಂಡಿಗರು – Kannada News | Amir Jangoo And Roston Chase Set New World Record in Test Cricket

ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ವೆಸ್ಟ್ ಇಂಡೀಸ್ ತಂಡದ ದಾಂಡಿಗ ಅಮೀರ್ ಜಾಂಗೂ ಮತ್ತು ನಾಯಕ ರೋಸ್ಟನ್ ಚೇಸ್. ಅದು ಕೂಡ 6ನೇ ವಿಕೆಟ್​ಗೆ ಅತ್ಯದ್ಭುತ ಜೊತೆಯಾಟವಾಡುವ ಮೂಲಕ.  ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್​ನಲ್ಲಿ 308 ರನ್​ ಕಲೆಹಾಕಿದ್ದರು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಅಮೀರ್ ಜಾಂಗೂ ಹಾಗೂ ರೋಸ್ಟನ್ ಚೇಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್​ನೊಂದಿಗೆ ಈ ಜೋಡಿಯು 6ನೇ ವಿಕೆಟ್​ಗೆ ಬರೋಬ್ಬರಿ 401 ರನ್​ ಪೇರಿಸಿದರು. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ 6ನೇ ವಿಕೆಟ್​ಗೆ ಅತ್ಯಧಿಕ ರನ್​ಗಳ ಜೊತೆಯಾಟವಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿ ಹೆಸರಿನಲ್ಲಿತ್ತು. 2016 ರಲ್ಲಿ ಸ್ಟೋಕ್ಸ್ ಹಾಗೂ ಬೈರ್​ಸ್ಟೋವ್ 6ನೇ ವಿಕೆಟ್​ಗೆ 399 ರನ್ ಸೇರಿಸಿದ್ದು ಇದುವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು.

ಇದೀಗ ಆರನೇ ವಿಕೆಟ್​ಗೆ 401 ರನ್​ಗಳ ಜೊತೆಯಾಟವಾಡುವ ಮೂಲಕ ಅಮೀರ್ ಜಾಂಗೂ ಹಾಗೂ ರೋಸ್ಟನ್ ಚೇಸ್ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಆರನೇ ವಿಕೆಟ್​ಗೆ 400+ ರನ್​ಗಳ ಜೊತೆಯಾಟವಾಡಿದ ಮೊದಲ ಜೋಡಿ ಎನಿಸಿಕೊಂಡಿದ್ದಾರೆ. ಈ ಮೂಲಕ 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಬೃಹತ್ ಮೊತ್ತ ಪೇರಿಸಿದ ವೆಸ್ಟ್ ಇಂಡೀಸ್:

ಶ್ರೀಲಂಕಾ ತಂಡ 308 ರನ್​ಗಳ ಪ್ರಥಮ ಇನಿಂಗ್ಸ್​ಗೆ ಉತ್ತರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ವೆಸ್ಟ್ ಇಂಡೀಸ್ ಬರೋಬ್ಬರಿ 626 ರನ್ ಕಲೆಹಾಕಿದೆ.

  • ಈ ಪಂದ್ಯದಲ್ಲಿ 373 ಎಸೆತಗಳನ್ನು ಎದುರಿಸಿದ ಅಮೀರ್ ಜಾಂಗೂ 3 ಸಿಕ್ಸ್ ಹಾಗೂ 19 ಫೋರ್​ಗಳೊಂದಿಗೆ 233 ರನ್ ಕಲೆಹಾಕಿದ್ದಾರೆ.
  • ಮತ್ತೊಂದೆಡೆ ಜಾಂಗೂಗೆ ಉತ್ತಮ ಸಾಥ್ ನೀಡಿದ ರೋಸ್ಟನ್ ಚೇಸ್ 324 ಎಸೆತಗಳಲ್ಲಿ 193 ರನ್ ಕಲೆಹಾಕಿದ್ದಾರೆ.

ಇದನ್ನೂ ಓದಿ: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ..!

ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 318 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 15 ರನ್ ಕಲೆಹಾಕಿದೆ. ಅಲ್ಲದೆ 303 ರನ್​ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

Source link

Weekly Horoscope: ಜೂನ್ 29 ರಿಂದ ಜುಲೈ 05ರ ವರೆಗಿನ ವಾರದ ದ್ವಾದಶ ರಾಶಿಗಳ ಫಲಾಫಲ – Kannada News | Zodiac Signs Forecast: Astrologer Dr. Basavaraj Gurujis Weekly Predictions

ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಜೂನ್ 29, 2026 ರಿಂದ ಜುಲೈ 05, 2026 ರ ವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವಾರದಲ್ಲಿ ಕಾರ ಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ, ರಾಷ್ಟ್ರೀಯ ವೈದ್ಯರ ದಿನ ಮತ್ತು ಸಂಕಷ್ಟ ಚತುರ್ಥಿಯಂತಹ ಪ್ರಮುಖ ಪರ್ವ ದಿನಗಳು ಇವೆ. ಗ್ರಹಗಳ ಗೋಚಾರದಂತೆ, ಶನಿ ಮೀನ ರಾಶಿಯಲ್ಲಿ, ರವಿ ಮಿಥುನ ರಾಶಿಯಲ್ಲಿ, ಕುಜ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದರೆ, ಗುರು, ಶುಕ್ರ ಮತ್ತು ಬುಧ ಕರ್ಕಾಟಕ ರಾಶಿಯಲ್ಲಿ ತ್ರಿಗ್ರಹ ಕೂಟದಲ್ಲಿವೆ. ಕೇತು ಸಿಂಹ ರಾಶಿಯಲ್ಲಿ, ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ.

ಮೇಷ ರಾಶಿಯವರಿಗೆ ಈ ವಾರ ಮಾತಿನಿಂದ ಕಾರ್ಯಗಳು ಸಿದ್ಧಿಸುತ್ತವೆ. ಆರ್ಥಿಕ ಮತ್ತು ಉದ್ಯೋಗ ವಿಷಯಗಳಲ್ಲಿ ಶುಭವಾಗಲಿದೆ. ವೃಷಭ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಹೋರಾಟ ನಡೆಸಬೇಕಾಗಿದ್ದರೂ, ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಮಿಥುನ ರಾಶಿಯವರಿಗೆ ಅದೃಷ್ಟ ಕೂಡಿಬಂದು ಕಾರ್ಯಗಳು ಪೂರ್ಣಗೊಳ್ಳುತ್ತವೆ. ಕರ್ಕಾಟಕ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದ್ದು, ಉದ್ಯೋಗದಲ್ಲಿ ಪ್ರಗತಿ ಕಾಣುವರು. ಸಿಂಹ ರಾಶಿಯವರಿಗೆ ಆದಾಯದಲ್ಲಿ ಏರಿಕೆ ಮತ್ತು ಅನೇಕ ಹೊಸ ಅವಕಾಶಗಳು ದೊರೆಯಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Source link

ಮೊಹರಂ ಮೆರವಣಿಗೆಯಲ್ಲಿ ಮಹಾ ಸಂಚು:’ನೋವು ನಿವಾರಕ’ ಎಂದು ಇಲಿ ಪಾಷಾಣದ ಮಾತ್ರೆ ಹಂಚುತ್ತಿದ್ದ ಪಾಪಿ ಅರೆಸ್ಟ್! – Kannada News | Mumbai Terror Plot Foiled: Pune Man Arrested for Distributing Poison Laced Capsules at Moharram Procession

ಮುಂಬೈ, ಜೂನ್ 28: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿಕೆ ಮಾಡುವ ಮೂಲಕ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ. ಪೊಲೀಸರ ಗಸ್ತು ವೇಳೆ ಈ ಖತರ್ನಾಕ್ ಸಂಚು ಬಯಲಾಗಿದೆ. ಮುಂಬೈನ ಡೊಂಗ್ರಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪುಣೆಯ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಬೆರೆಸಿದ ಮಾತ್ರೆಗಳನ್ನು ಹಂಚುತ್ತಿದ್ದರು ಎಂದು ತಿಳಿದುಬಂದಿದೆ. ಆತನ ಬಳಿಯಿದ್ದ 14,900 ವಿಷ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಷದ ಮಾತ್ರೆ ಸೇವಿಸಿದ್ದ ವ್ಯಕ್ತಿಯೊಬ್ಬರು ವಾಂತಿಭೇದಿಯಿಂದ ಅಸ್ವಸ್ಥಗೊಂಡ ನಂತರ ಈ ಸಂಚಿನ ಸುಳಿವು ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಪೊಲೀಸ ತನಿಖೆಯಿಂದ ಫಯಾಜ್ ಪ್ರೇಮ್‌ಜಿಯ ಚಟುವಟಿಕೆಗಳು ಬಯಲಾಗಿವೆ. ಪೊಲೀಸರು ಆತನ ಚೀಲದಲ್ಲಿ ಸಂಗ್ರಹಿಸಿದ್ದ ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಿದ್ದು, ತೀವ್ರ ತನಿಖೆ ನಡೆಯುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version