ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ – Kannada News | Fifa world cup 2026 round of 32 schedule

ಫಿಫಾ ವಿಶ್ವಕಪ್​ನ ಮೊದಲ ಸುತ್ತಿನ ಬಹುತೇಕ ಪಂದ್ಯಗಳು ಮುಗಿದಿವೆ. ಈ ಪಂದ್ಯಗಳ ಮುಕ್ತಾಯದೊಂದಿಗೆ ‘ರೌಂಡ್ ಆಫ್ 32’ ವೇಳಾಪಟ್ಟಿ ಹೊರಬಿದ್ದಿದೆ. ಅದರಂತೆ ನಾಕೌಟ್ ಹಂತದ ರೋಚಕ ಪಂದ್ಯಗಳು ನಾಳೆಯಿಂದ (ಜೂನ್ 29) ಆರಂಭವಾಗಲಿದೆ. ಈ ಸುತ್ತಿನಲ್ಲಿ ಗೆಲ್ಲುವ ತಂಡ ಮುಂದಿನ ಹಂತಕ್ಕೇರಿದರೆ, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ‘ರೌಂಡ್ ಆಫ್ 32’ ಸುತ್ತಿನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

‘ರೌಂಡ್ ಆಫ್ 32’ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 16  ಹೈ-ವೋಲ್ಟೇಜ್ ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ದಿನಾಂಕ (2026) ಪಂದ್ಯ ಕ್ರೀಡಾಂಗಣ ಮತ್ತು ನಗರ 
ಜೂನ್ 29 ಸೌತ್ ಆಫ್ರಿಕಾ vs ಕೆನಡಾ ಲಾಸ್ ಏಂಜಲೀಸ್ ಸ್ಟೇಡಿಯಂ
ಜೂನ್ 29 ಬ್ರೆಝಿಲ್ vs ಜಪಾನ್ ಹೂಸ್ಟನ್ ಸ್ಟೇಡಿಯಂ
ಜೂನ್ 30 ಜರ್ಮನಿ vs ಪರಾಗ್ವೆ ಬಾಸ್ಟನ್ ಸ್ಟೇಡಿಯಂ
ಜೂನ್ 30 ನೆದರ್ಲ್ಯಾಂಡ್ಸ್ vs ಮೊರಾಕೊ ಮೊಂಟೆರ್ರಿ ಸ್ಟೇಡಿಯಂ
ಜೂನ್ 30 ಕೋಟ್ ಡಿ ಐವರಿ vs ನಾರ್ವೆ ಡಲ್ಲಾಸ್ ಸ್ಟೇಡಿಯಂ
ಜುಲೈ 1 ಫ್ರಾನ್ಸ್ vs ಸ್ವೀಡನ್ ನ್ಯೂಯಾರ್ಕ್ / ನ್ಯೂಜೆರ್ಸಿ ಸ್ಟೇಡಿಯಂ
ಜುಲೈ 1 ಮೆಕ್ಸಿಕೋ vs ಈಕ್ವೆಡಾರ್ ಮೆಕ್ಸಿಕೋ ಸಿಟಿ ಸ್ಟೇಡಿಯಂ
ಜುಲೈ 1 ಇಂಗ್ಲೆಂಡ್ vs ಡಿಆರ್​ ಕಾಂಗೋ ಅಟ್ಲಾಂಟಾ ಸ್ಟೇಡಿಯಂ
ಜುಲೈ 2 ಬೆಲ್ಜಿಯಂ vs ಸೆನೆಗೆಲ್ ಸಿಯಾಟಲ್ ಸ್ಟೇಡಿಯಂ
ಜುಲೈ 2 ಯುಎಸ್ಎ vs ಬೋಸ್ನಿಯಾ ಮತ್ತು ಹರ್ಜೆಗೋವಿನಾ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂ
ಜುಲೈ 3 ಸ್ಪೇನ್ vs ಆಸ್ಟ್ರಿಯಾ ಲಾಸ್ ಏಂಜಲೀಸ್ ಸ್ಟೇಡಿಯಂ
ಜುಲೈ 3 ಪೋರ್ಚುಗಲ್ vs ಕ್ರೊಯೇಷಿಯಾ ಟೊರೊಂಟೊ ಸ್ಟೇಡಿಯಂ
ಜುಲೈ 3 ಸ್ವಿಟ್ಜರ್ಲೆಂಡ್ vs ಇರಾನ್ ಬಿಸಿ ಪ್ಲೇಸ್, ವ್ಯಾಂಕೋವರ್
ಜುಲೈ 3 ಆಸ್ಟ್ರೇಲಿಯಾ vs ಈಜಿಪ್ಟ್ ಡಲ್ಲಾಸ್ ಸ್ಟೇಡಿಯಂ
ಜುಲೈ 4 ಅರ್ಜೆಂಟೀನಾ vs ಕೇಪ್ ವರ್ಡೆ ಮಿಯಾಮಿ ಸ್ಟೇಡಿಯಂ
ಜುಲೈ 4 ಕೊಲಂಬಿಯಾ vs ಘಾನಾ ಕನ್ಸಾಸ್ ಸಿಟಿ ಸ್ಟೇಡಿಯಂ

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಖಡಕ್ ಸೂಚನೆ..!

ಫಿಫಾ ವಿಶ್ವಕಪ್ 2026ರಿಂದ ಹೊರಬಿದ್ದಿರುವ ತಂಡಗಳು:

ತುರ್ಕಿಯೆ, ಜೆಕ್ ರಿಪಬ್ಲಿಕ್, ಖತಾರ್, ಜೋರ್ಡನ್, ಸೌದಿ ಅರೇಬಿಯಾ, ಇರಾಕ್, ಟ್ಯುನೀಷಿಯಾ, ಹೈತಿ, ಪನಾಮ, ಕುರಾಸಾವೊ, ಉರುಗ್ವೆ, ನ್ಯೂಝಿಲೆಂಡ್, ಸ್ಕಾಟ್‌ಲ್ಯಾಂಡ್.

Source link

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ – Kannada News | K Bhagyaraj passed away Tamil filmmaker Eye Donation like Dr Rajkumar

ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ (K Bhagyaraj) ಅವರು ಶನಿವಾರ (ಜೂನ್ 27) ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ತಮ್ಮ ವಿಶಿಷ್ಟ ಕಥಾಹಂದರ ಹಾಗೂ ಚಿತ್ರಕಥೆಯ ಮೂಲಕ ಚಿತ್ರರಂಗದಲ್ಲಿ ‘ಚಿತ್ರಕಥೆಯ ರಾಜ’ ಎಂದೇ ಖ್ಯಾತರಾಗಿದ್ದ ಭಾಗ್ಯರಾಜ್ ಅವರ ಅಗಲಿಕೆ ಚಿತ್ರರಂಗ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಡಾ. ರಾಜ್​ಕುಮಾರ್ ರೀತಿ ಕೆ. ಭಾಗ್ಯರಾಜ್ ಕೂಡ ನೇತ್ರದಾನ (Eye Donation) ಮಾಡಿದ್ದಾರೆ.

ಭಾಗ್ಯರಾಜ್ ಅವರು ತಮ್ಮ ನೇತ್ರಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರ ನಿಧನದ ಬೆನ್ನಲ್ಲೇ ಕುಟುಂಬಸ್ಥರು ಆ ಆಸೆಯನ್ನು ತಕ್ಷಣವೇ ಈಡೇರಿಸಿದ್ದಾರೆ. ಭಾಗ್ಯರಾಜ್ ಅವರ ಮರಣದ ನಂತರ ಕುಟುಂಬಸ್ಥರು ಕಣ್ಣಿನ ಆಸ್ಪತ್ರೆಗೆ ಮಾಹಿತಿ ನೀಡಿದ್ದು, ವೈದ್ಯರ ತಂಡವು ಅವರ ನಿವಾಸಕ್ಕೆ ಆಗಮಿಸಿ ಕಾರ್ನಿಯಾ ನೇತ್ರದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾಗ್ಯರಾಜ್ ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ‘ಕೆ. ಭಾಗ್ಯರಾಜ್ ಅವರ ಅಂತಿಮ ದರ್ಶನಕ್ಕೆ ಹೋದಾಗ ಅವರು ನೇತ್ರದಾನ ಮಾಡಿರುವ ವಿಷಯ ತಿಳಿಯಿತು. ತಾನು ಮರಣ ಹೊಂದಿದ ಮೇಲೆಯೂ ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂಬ ಅವರ ಆಲೋಚನೆ ಎಷ್ಟು ಶ್ಲಾಘಿಸಿದರೂ ಸಾಲದು. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಇಂತಹ ಪ್ರಮುಖ ವ್ಯಕ್ತಿಗಳು ನೇತ್ರದಾನ ಮಾಡಿದಾಗ, ಅದು ಸಾರ್ವಜನಿಕರಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಭಾರತದಲ್ಲಿ ವಾರ್ಷಿಕವಾಗಿ 1 ಲಕ್ಷದಿಂದ 2 ಲಕ್ಷ ಜನರಿಗೆ ಕಾರ್ನಿಯಾ ನೇತ್ರದಾನದ ಅಗತ್ಯವಿರುತ್ತದೆ, ಆದರೆ ಪ್ರಸ್ತುತ ದೇಶದಲ್ಲಿ ಕೇವಲ 45ರಿಂದ 50 ಸಾವಿರ ಕಾರ್ನಿಯಾಗಳು ಮಾತ್ರ ಲಭ್ಯವಾಗುತ್ತಿವೆ ಎಂದು ಅವರು ದೇಶದ ನೇತ್ರದಾನದ ಕೊರತೆಯ ಕುರಿತು ಕಳಕಳಿ ವ್ಯಕ್ತಪಡಿಸಿದ್ದಾರೆ. ಭಾಗ್ಯರಾಜ್ ಅವರು ನೇತ್ರದಾನ ಮಾಡಿರುವುದು ಇತರರಿಗೂ ಮಾದರಿ ಆಗಿದೆ.

ಇದನ್ನೂ ಓದಿ: ಅಪ್ಪು ಪ್ರೇರಣೆಯಿಂದ ನೇತ್ರದಾನಕ್ಕೆ ಸಹಿ ಹಾಕಿದ 105 ವಿದ್ಯಾರ್ಥಿಗಳು ಮತ್ತು ಪೋಷಕರು

ಭಾಗ್ಯರಾಜ್ ಅವರು ಪತ್ನಿ ಪೂರ್ಣಿಮಾ, ಮಗಳು ಶರಣ್ಯಾ ಮತ್ತು ಶಾಂತನು ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಅವರ ಗುರು ಹಾಗೂ ಆಪ್ತ ಸ್ನೇಹಿತರಾಗಿದ್ದ ನಿರ್ದೇಶಕ ಕೆ. ಭಾರತಿರಾಜ ಅವರು ನಿಧನರಾಗಿದ್ದರು. ಆ ನೋವು ಮಾಸುವ ಮುನ್ನವೇ ಭಾಗ್ಯರಾಜ್ ಅವರು ಇಹಲೋಕ ತ್ಯಜಿಸಿರುವುದು ತಮಿಳು ಚಿತ್ರರಂಗಕ್ಕೆ ಭರಿಸಲಾಗದ ನಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಮಾಜಿ ಸಿಎಂ ಸಿದ್ದರಾಮಯ್ಯ – Kannada News | Former CM Siddaramaiah Shares Emotional Post After Grand Welcome in Mysuru

ಮಾಜಿ ಸಿಎಂ ಸಿದ್ದರಾಮಯ್ಯImage Credit source: Siddaramaiah X Account

ಬೆಂಗಳೂರು, ಜೂನ್​​ 28: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆ ಮೈಸೂರಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದು, ಆ ಬೆನ್ನಲ್ಲೇ ಭಾವುಕ ಸಂದೇಶವೊಂದನ್ನು ಎಕ್ಸ್​​ ಪೋಸ್ಟ್​​ ಮೂಲಕ ಅವರು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ. ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ ಎಂದವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಎಕ್ಸ್​​ ಪೋಸ್ಟ್​​ನಲ್ಲಿ ಏನಿದೆ?

ರಾಜಕೀಯ ಅಧಿಕಾರ ಎನ್ನುವುದು ಜನರ ಸೇವೆ ಮಾಡಲು ಒದಗಿಬಂದ ಅವಕಾಶದ ಭಾಗ್ಯ ಎಂದು ನಾನು ತಿಳಿದುಕೊಂಡವನು. ಮುಖ್ಯಮಂತ್ರಿಯ ಪದತ್ಯಾಗ ಮಾಡಿದ ದಿನದಿಂದ ಹೋದಲ್ಲಿ, ಬಂದಲ್ಲಿ ಜನತೆ ವ್ಯಕ್ತಪಡಿಸುತ್ತಿರುವ ಪ್ರೀತಿ, ಅಭಿಮಾನ, ವಿಶ್ವಾಸವನ್ನು ನೋಡಿದರೆ ಅಧಿಕಾರವನ್ನು ಬಳಸಿಕೊಂಡು ಜಗಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ್ದೇನೆ ಎಂಬ ಸಾರ್ಥಕ್ಯದ ಭಾವನೆ ಮೂಡಿದೆ. ಪದತ್ಯಾಗದ ನಂತರ ಇಂದು ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದಾಗ ಇದೇ ಅನುಭವವಾಯಿತು. ಸೇರಿದ್ದ ಜನಸಾಗರ, ಅವರು ತೋರಿದ ಪ್ರೀತಿ-ಅಭಿಮಾನ ಕಂಡು ಮೂಕವಿಸ್ಮಿತನಾಗಿದ್ದೇನೆ. ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಜನರ ಪ್ರೀತಿ ನಿರಂತರ. ನನ್ನ ಸಾರ್ವಜನಿಕ ಬದುಕಿನಲ್ಲಿ ನನ್ನನ್ನು ಪ್ರೀತಿಸುವ ದೊಡ್ಡ ಜನಸಮೂಹವನ್ನೇ ಸಂಪಾದಿಸಿದ್ದೇನೆ ಎನ್ನುವ ಹೆಮ್ಮೆ ನನ್ನದು. ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ. ನಾಡಿನ ಉದ್ದಗಲಕ್ಕೂ ಯಾವ ನಿರೀಕ್ಷೆಯೂ ಇಲ್ಲದೆ ಪ್ರೀತಿ – ಅಕ್ಕರೆ ತೋರುತ್ತಿರುವ ಪ್ರೀತಿಯ ಬಂಧುಗಳ ಸೇವೆಗೆ ತಾನು ಸದಾ ಬದ್ಧ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಗಳು ತಮಗೆ ಕೋರಿದ್ದ ಅದ್ದೂರಿ ಸ್ವಾಗತದ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ

ಶನಿವಾವರ (ನಿನ್ನೆ) ಮೈಸೂರಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಹೈವೇ ಸರ್ಕಲ್‌ನಲ್ಲಿ ಅಭಿಮಾನಿಗಳು ಬೃಹತ್ ಸೇಬಿನ ಹಾರದೊಂದಿಗೆ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದ್ದರು. ಶಾಸಕರಾದ ಸ್ವಾಗತಿಸಿದ ತನ್ವೀರ್ ಸೇಠ್, ಹರೀಶ್ ಗೌಡ ಸೇರಿ ಹಲವರು ಸಿದ್ದರಾಮಯ್ಯನವರನ್ನು ಬರಮಾಡಿಕೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯದ ಹಲವೆಡೆ ಸಾಧಾರಣ ಮಳೆ; ಉಡುಪಿ, ದಕ್ಷಿಣ ಕನ್ನಡಕ್ಕೆ ಯೆಲ್ಲೋ ಅಲರ್ಟ್​! – Kannada News | Karnataka Weather Forecast: Yellow Alert Issued for Coastal Districts; Rain Likely Across State

ಬೆಂಗಳೂರು, ಜೂನ್ 27: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ವ್ಯಾಪಕ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕರಾವಳಿಯಲ್ಲಿ ವರುಣಾರ್ಭಟ

ಕರಾವಳಿ ತೀರದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಭಾಗದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ನಿರಂತರ ಬಲವಾದ ಗಾಳಿ ಬೀಸಲಿದ್ದು, ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಕರ್ನಾಟಕದಲ್ಲೂ ಗುಡುಗು ಸಹಿತ ಮಳೆ

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿಯ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನ ಸ್ಥಿತಿ ಏನು?

ದಕ್ಷಿಣ ಒಳನಾಡಿನ ಮಲೆನಾಡು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಅನೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಮತ್ತೊಂದೆಡೆ, ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರವಾದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ತೀರದ ಸಾರ್ವಜನಿಕರು ಮತ್ತು ಮೀನುಗಾರರು ಬಿರುಗಾಳಿ ಹಾಗೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಿಬಿಎಯಿಂದ ಮಹತ್ವದ ನಿರ್ಣಯ: ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಇನ್ಮುಂದೆ ಸಂಜೆ ವೇಳೆಯಲ್ಲೂ ಕಸ ಸಂಗ್ರಹ – Kannada News | Bengaluru Clean Up Drive: GBA Introduces Evening Garbage Collection in High Waste Zones; Warns Violators of Heavy Fines

ಬೆಂಗಳೂರು, ಜೂನ್​​: ನಗರದಲ್ಲಿ ಕಸದ ಸಮಸ್ಯೆಗೆ ಶತಾಯಗತಾಯ ಬ್ರೇಕ್​​ ಹಾಕಲು ಮುಂದಾಗಿರುವ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಮಹತ್ವದ ನಿರ್ಣಯಕ್ಕೆ ಮುಂದಾಗಿದೆ. ನಿರಂತರವಾಗಿ ಕಸದ ಸಮಸ್ಯೆ ಎದುರಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಅಗತ್ಯವಿರುವೆಡೆ ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್‌ಗಳನ್ನು ನಿಯೋಜಿಸಿ ಕಸವನ್ನು ಸಕಾಲದಲ್ಲಿ ಸಂಗ್ರಹಿಸುವಂತೆ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ನಿರ್ದೇಶನ ನೀಡಿದ್ದು, ಕಸದ ನಿರ್ವಹಣೆಯಲ್ಲಿ ಸಹಕರಿಸುವಂತೆ ಸಾರ್ವಜನಿಕರಿಗೂ ಅವರು ಮನವಿ ಮಾಡಿದ್ದಾರೆ. ಯಾವುದೇ ಪ್ರದೇಶದಲ್ಲಿ ಕಸ ರಾಶಿಯಾಗಿದ್ದರೆ ಅಥವಾ ಆಟೋ ಟಿಪ್ಪರ್ ಸಮಯಕ್ಕೆ ಬಾರದಿದ್ದರೆ ತಕ್ಷಣ ನಿಗಮಕ್ಕೆ ಮಾಹಿತಿ ನೀಡಿ. ಮಾಹಿತಿ ಬಂದ ಕೂಡಲೇ ನಿಗಮದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

‘ನಾಗರಿಕರು ಸಹಕರಿಸಿ’

ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಾದರೆ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅಗತ್ಯ. ನಾಗರಿಕರು ನಿಗಮದೊಂದಿಗೆ ಕೈಜೋಡಿಸಿದಾಗ ಮಾತ್ರ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಸಾಧ್ಯ. ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಯಂಸೇವಕರು ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ತಕ್ಷಣ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ದಂಡ ವಿಧಿಸಲಾಗುವುದು ಎಂದು ಕೂಡ ಅವರು ಎಚ್ಚರಿಸಿದ್ದಾರೆ.

ಕಸ ಸಂಗ್ರಹಕ್ಕೆ ಜಿಬಿಎಯ ವಾಹನಗಳು ಸರಿಯಾಗಿ ಬರಲ್ಲ ಎಂಬ ಆರೋಪವೂ ಇರುವ ಕಾರಣ ತಂತ್ರಜ್ಞಾನ ಬಳಸಿ ಇವುಗಳ ಓಡಾಟ ನಿರ್ವಹಣೆಗೆ ಜಿಬಿಎ ಮುಂದಾಗಿದೆ. ‘ಮಾತ್ರ’ ಎಂಬ ಆ್ಯಪ್ ಮೂಲಕ ಕಸದ ವಾಹನಗಳ ಚಲನವಲನ ಗಮನಿಸಿಲು ನಿರ್ಧರಿಸಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಕಸದ ವಾಹನಗಳ ಚಾಲಕರ ಮೊಬೈಲ್​​ನಲ್ಲಿ ‘ಮಾತ್ರ’ ಆ್ಯಪ್ ಇನ್ಸ್ಟಾಲ್ ಮಾಡಲಾಗಿದ್ದು, ಅವರು ಕಸ ಸಂಗ್ರಹಣೆ ಮಾಡುವ ಮಾರ್ಗ ತಪ್ಪಿಸಿದರೆ ಈ ಆ್ಯಪ್ ಮೂಲಕ ಅಧಿಕಾರಿಗಳು ತಿಳಿದುಕೊಳ್ಳಬಹುದಾಗಿದೆ. ಈ ವ್ಯವಸ್ಥೆ ಕ್ಲಿಕ್ ಆದರೆ ಉಳಿದ ನಾಲ್ಕೂ ನಗರ ಪಾಲಿಕೆಗಳಿಗೂ ಈ ವ್ಯವಸ್ಥೆಯನ್ನ ವಿಸ್ತರಿಸುವ ಚಿಂತನೆ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಮಾತಿನ ಮೇಲೆ ನಿಗಾ ವಹಿಸಿ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 28, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಶುಕ್ಲಪಕ್ಷ ಚತುರ್ದಶಿ ಇರಲಿದ್ದು, ಜೇಷ್ಠ ನಕ್ಷತ್ರದಲ್ಲಿ ಚಂದ್ರ ಸಂಚರಿಸಲಿದ್ದಾನೆ. ರಾಹುಕಾಲ ಸಂಜೆ 5.10 ರಿಂದ 6.47 ರವರೆಗೆ ಇದ್ದರೆ, ಶುಭಕಾಲ ಬೆಳಿಗ್ಗೆ 10.46 ರಿಂದ 12.22 ರವರೆಗೆ ಇರುತ್ತದೆ.

ರವಿ ಮಿಥುನ ರಾಶಿಯಲ್ಲಿ ಮತ್ತು ಚಂದ್ರ ವೃಶ್ಚಿಕ ರಾಶಿಯ ಜೇಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ. ಇದು ಸೂರ್ಯಾರಾಧನೆ ಮತ್ತು ಸೂರ್ಯ ನಮಸ್ಕಾರಕ್ಕೆ ಹೆಚ್ಚು ಪ್ರಾಶಸ್ತ್ಯವಿರುವ ದಿನವಾಗಿದೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಖರ್ಚು ಹೆಚ್ಚಾಗುವ ಸಾಧ್ಯತೆಯಿದ್ದು, ತುಲಾ ರಾಶಿಯವರಿಗೆ ಅನಿರೀಕ್ಷಿತ ಧನಲಾಭವಿದೆ. ಮಿಥುನ ರಾಶಿಯವರಿಗೆ ಅದೃಷ್ಟ ಕೂಡಿಬರಲಿದ್ದು, ಕುಂಭ ರಾಶಿಯವರಿಗೆ ಸಂತಾನ ಯೋಗದ ಸಾಧ್ಯತೆ ಇದೆ. ಕಟಕ ರಾಶಿಯವರಿಗೆ ಆರೋಗ್ಯ ಚೆನ್ನಾಗಿರಲಿದ್ದು, ಸಿಂಹ ರಾಶಿಯವರಿಗೆ ಮನೆ ಅಥವಾ ವಾಹನ ಖರೀದಿಯ ಯೋಗವಿದೆ. ಪ್ರತಿಯೊಂದು ರಾಶಿಯವರಿಗೂ ಆಯಾ ಗ್ರಹಗಳ ಸ್ಥಿತಿ ಆಧರಿಸಿ ನಿರ್ದಿಷ್ಟ ಸಲಹೆ, ಅದೃಷ್ಟ ಸಂಖ್ಯೆ ಮತ್ತು ಬಣ್ಣಗಳನ್ನು ಡಾ. ಬಸವರಾಜ ಗುರೂಜಿ ನೀಡಿದ್ದಾರೆ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಮಾತನ್ನು ಅಲ್ಲಗಳೆಯುವರು – Kannada News | June 28, 2026 Horoscope: Sunday Predictions for Aries, Taurus, Gemini and All Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಆರ್ದ್ರಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಜ್ಯೇಷ್ಠ, ಯೋಗ : ಶುಭ, ಕರಣ : ಗರಜ, ಸೂರ್ಯೋದಯ – 05 – 57 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:12 – 18:48, ಯಮಗಂಡ ಕಾಲ 12:23 – 13:59, ಗುಳಿಕ ಕಾಲ 15:36 – 17:12

ಮೇಷ ರಾಶಿ: ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಸರಿಯಾದ ಚಿತ್ರಣವಿರಲಿ. ಇಲ್ಲವಾದರೆ ನೀವು ಮಾಡಲು ಹೊರಟ ಕೆಲಸವು ಅಪೂರ್ಣವಾಗುವುದು ಅಥವಾ ಆಗದೇಯೂ ಹೋಗಬಹುದು. ಗೌಪ್ಯವಾದ ಮಾತುಗಳು ಗೊತ್ತಿಲ್ಲದಂತೆ ಪ್ರಕಟವಾಗಲಿದೆ‌. ತಂತ್ರಜ್ಞಾನವು ನಿಮ್ಮ ಉಪಯೋಗಕ್ಕೆ ಬರಲಿದೆ. ಬೇಕಾದಷ್ಟು ಸಮಯವು ನಿಮ್ಮ ಪಾಲಿಗೆ ಇರಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಭಾವ ನಿಮ್ಮಲ್ಲಿರಲಿ.

ವೃಷಭ ರಾಶಿ: ಸಿಟ್ಟಿನ ಮಾತನ್ನು ನಿಯಂತ್ರಿಸುವುದು ನಿಮಗೆ ಕಷ್ಟವಾಗುವುದು. ನೀವು ಇಂದು ಶತ್ರುಗಳನ್ನು ಹೆಡೆಮುರಿ ಕಟ್ಟುತ್ತೇನೆ ಎಂಬ ಮನಃಸ್ಥಿತಿಯನ್ನು ಬಿಟ್ಟು ಶಾಂತರಾಗಿ. ನಿಮಗೆ ಕಾಲವು ಬರಲಿದೆ. ಆತುರದಿಂದ ಏನನ್ನಾದರೂ ಮಾಡಲು ಹೋದೀರಿ. ಕಬ್ಬಿಣದ ಕಡಲೆಯನ್ನೂ ನುಂಗಲೂ ಉಗುಳಲೂ ಆಗದು. ಅದು ನಿಮಗೆ ಬಳಕೆ ಬರಲಿದೆ. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ ರಾಶಿ: ಆಪ್ತರ ಜೊತೆ ವಿವಾದ ಆಗಲಿದೆ. ನಾನು ಮಾಡಿದ್ದೇ ಸರಿ ಎಂಬ ಹುಂಬುತನ ಇರಲಿದೆ. ಮುಖವನ್ನೇ ನೋಡದ ವ್ಯಕ್ತಿಯೋರ್ವ ನಿಮಗೆ ಹೂಡಿಕೆಯನ್ನು ಮಾಡಲು ಹೇಳಿ ಅದರ ವಿಧಾನವನ್ನು ತಿಳಿಸಿ ಹಣವನ್ನು ಪಡೆಯಬಹುದು. ಕೆಲವು ವಿಚಾರದಲ್ಲಿ ನಿಮಗೆ ಸೋಲಾಗಬಹುದು. ಛಲದಿಂದ ಸಾಧಿಸುವ ಬಗ್ಗೆ ಗಮನವಿರಲಿ. ಹಿರಿಯರ ಎದುರು ವಿನಯದಿಂದ ಮಾತನಾಡಿ. ಸಾಧ್ಯವಾದರೆ ಅವರ ಸೇವೆ ಮಾಡಿ. ಮಾತಿಗೆ ತಪ್ಪಿ ನಡೆಯುವಿರಿ ಎಂಬ ಮಾತು ಕೇಳಬಹುದು.

ಕರ್ಕಾಟಕ ರಾಶಿ: ಒಂದೇ ರೀತಿಯ ಕೆಲಸದಿಂದ ನೀವು ಬೇಸರಗೊಂಡು ಬೇರೆ ಕ್ರಮದಲ್ಲಿ ಬೇರೆ ಕೆಲಸವನ್ನು ಮಾಡಲು ಆಲೋಚಿಸುವಿರಿ. ಆಕಸ್ಮಿಕ ಲಾಭದಿಂದ ಸಂತೋಷ. ಹೊಸತನ್ನು ಕಲಿಯುವ ಉತ್ಸುಕತೆಯೂ ನಿಮ್ಮಲ್ಲಿ ಇರಲಿದೆ. ದುರಭ್ಯಾಸದಿಂದ ಅಪಕೀರ್ತಿ ಬರಲಿದೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವಿಂದು ಮನೆಯನ್ನು ಬಿಡಬೇಕಾಗಿಬರಬಹುದು. ಅಕಸ್ಮಾತ್ ದೂರ ಪ್ರಯಾಣವು ಅನಿವಾರ್ಯವಾದೀತು. ಸರಿಯಾದ ಸಿದ್ಧತೆಯ ಜೊತೆ ಹೋಗಿ. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ.

ಸಿಂಹ ರಾಶಿ: ನಿಮ್ಮ ಹಿತೈಷಿಗಳ ಸಹಕಾರದಿಂದ ನಿಮ್ಮ ಉದ್ಯಮವು ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದನ್ನೂ ತಾಳ್ಮೆಯಿಂದ ಕೇಳುವ ಸ್ಥಿತಿ ಇರದೇ ಉದ್ವೇಗದ ಮಾತುಗಳನ್ನಾಡುವಿರಿ. ಒಂದಿಲ್ಲೊಂದು ಆರೋಪದಿಂದ ನೀವು ಬೇಸತ್ತು ಹೋಗಬಹುದು. ಮನಸ್ಸಿಗೆ ಒದು ಬಹಳ ಕಿರಿಕಿರಿಯ ವಿಚಾತವಾಗಿ ಪರಿಣಮಿಸುವುದು. ಆಪ್ತರೇ ನಿಮ್ಮನ್ನು ಕೆಡಗಲು ಸಂಚನ್ನು ರೂಪಿಸಬಹುದು. ಒಂಟಿತನದ ಆಲೋಚನೆಯು ಪೂರ್ಣವಾಗದು.

ಕನ್ಯಾ ರಾಶಿ: ಯಾವುದೋ ಬಲವಾದ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕೈ ಮೀರಿದ ಸ್ಥಿತಿಯನ್ನು ನಿಮ್ಮ ನಿಯಂತ್ರಣಕ್ಕೆ ತರಲಾಗದು. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಸರಿಯಾದ ಅಭ್ಯಾಸವಿಲ್ಲದೇ ಮಕ್ಕಳು ಪರೀಕ್ಷೆಯಲ್ಲಿ ಸೋಲವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಸುಖವು ಇರಲಿದೆ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು. ಮಕ್ಕಳ‌ ವಿಚಾರದಲ್ಲಿ ದುಂದು ವೆಚ್ಚ ಮಾಡಬೇಕಾದೀತು.

ತುಲಾ ರಾಶಿ: ಎದುರಾದ ಸಂಕಟಕ್ಕೆ ಹಳೆಯ ಮಿತ್ರನ ಸ್ಮರಣೆ ಮಾಡುವಿರಿ. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಯಸಿದರೂ ಅದು ಅಕಾಲದಲ್ಲಿ ಪ್ರಕಟವಾಗುವುದು. ಸಾಲವನ್ನು ಹಿಂದಿರುಗಿಸಲು ಕಷ್ಟವಾಗಬಹುದು. ನಿಮ್ಮಿಂದಾದ ಕೆಲಸವನ್ನು ನೀವೇ ಹೊಗಳಿಕೊಳ್ಳಬೇಡಿ. ಖಂಡಿಸಿ ನಿಷ್ಠುರವಾಗುವ ಸಾಧ್ಯತೆ ಇದೆ. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ.

ವೃಶ್ಚಿಕ ರಾಶಿ: ಪರರ ಕಲಹದಲ್ಲಿ ಮಧ್ಯಸ್ತಿಕೆ ವಹಿಸುವುದು ಇಷ್ಟವಾಗುವುದು. ನಿಮ್ಮ ಹಿಂದಿನ‌ ಜೀವನವನ್ನು ನೆನೆದು, ಈಗಿನ ಸಮೃದ್ಧಿಯನ್ನು ಕಂಡು ಬಹಳ ಆನಂದವಾಗುವುದು. ಯಾರದೋ ಕಾರಣಕ್ಕೆ ನೀವು ತಲೆತಗ್ಗಿಸಬೇಕಾಗಬಹುದು. ಸಾಲವನ್ನು ಮರುಪಾವತಿ ಮಾಡುವ ಬಗ್ಗೆ ಸ್ವಲ್ಪ ಆಲೋಚಿಸಿ. ಪರರನ್ನು ನಿಂದಿಸುವ ದುರಭ್ಯಾಸದಿಂದ ದೂರವಿರುವುದು ಒಳ್ಳೆಯದು. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಸಾಗುವುದು.

ಧನು ರಾಶಿ: ಅಧಿಕ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಇಂದಿನ ಕೆಲಸವನ್ನು ಮಾಡಬೇಕಾಗುತ್ತದೆ. ಮಕ್ಕಳಿಗೆ ಆಸಕ್ತಿಯಿರುವ ಕಲಿಕೆಗೆ ಉತ್ತೇಜನ ನೀಡುವಿರಿ, ಸಾಧಕ ಬಾಧಕಗಳ ಪರಿಚಯ ಮಾಡಿಕೊಟ್ಟರೆ ಒಳ್ಳೆಯದು. ಉದ್ಯೋಗದಲ್ಲಿ ಭಡ್ತಿಗಾಗಿ ಬಹಳ ಶ್ರಮವಹಿಸುವಿರಿ. ನಿಮ್ಮಲ್ಲಿ ಹಣವನ್ನು ಕೇಳಿ ಯಾರಾದರೂ ಬರಬಹುದು, ಇಲ್ಲವೆನ್ನದೇ ಎಷ್ಟೋ ಒಂದಿಷ್ಟನ್ನು ಇದಂ‌ ನ ಮಮ ಎಂಬ ಭಾವದಿಂದ ಕೊಡಿ. ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಂಭವವು ಬರಬಹುದು.

ಮಕರ ರಾಶಿ: ಹಸಿದವರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ. ಮಕ್ಕಳ ವಿಷಯಕ್ಕೆ ಖರ್ಚು ಮಾಡುವ ಸ್ಥಿತಿ ಬರಲಿದೆ. ಯಾತ್ರಾ ಸ್ಥಳಗಳಲ್ಲಿ ನಿಮ್ಮ ಹಾಗೂ ನಿಮ್ಮ ವಸ್ತುಗಳ ಸುರಕ್ಷತೆಗೆ ಗಮನ ಬೇಕು. ದೈನಂದಿನ ಕೆಲಸಗಳು ನಿಶ್ಚಿಂತೆಯಿಂದ ನಡೆಯುವುವು.‌ ಕುಟಂಬದ ಜೊತೆ ನೀವು ಇನ್ನಷ್ಟು ಆಪ್ತರಾಗುವಿರಿ. ಶತ್ರುಗಳ ಭಯವು ನಿಮ್ಮನ್ನು ಕಾಡಬಹುದು.‌ ಕಲಾವಿದರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವರು. ಈ ದಿನ ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು.

ಕುಂಭ ರಾಶಿ: ವಾಹನ ಸವಾರಿಯು ಈ ದಿನ ನಿಮಗೆ ಬೇಡವೆನಿಸವುದು. ನಿಮ್ಮನ್ನು ತರತರದ ಮಾತುಗಳಿಂದ ನಿಮ್ಮ ಉತ್ತೇಜಿಸಬಹುದು. ಇನ್ನೊಬ್ಬರಿಗಾಗಿ ಸುಳ್ಳು ಹೇಳಬೇಕಾದ ಸ್ಥಿತಿ ಬರುವುದು. ಅದು ಸರಿ ಎನಿಸಿ ನೀವು ಮಾಡಿ ಸಮಸ್ಯೆಗಳನ್ನು ತಂದುಕೊಳ್ಳುವಿರಿ. ಲೋಹದ ವ್ಯಾಪಾರಕ್ಕೆ ಬಂಡವಾಳ ಹಾಕುವಿರಿ. ಆಪ್ತಮಿತ್ರರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅಪರಿಚಿತರ ಜೊತೆ ಅನುಚಿತ ವರ್ತನೆ ಬೇಡ. ನಂಬಿಕೆಯು ಹುಸಿಯಾಗುವುದು. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ.

ಮೀನ ರಾಶಿ: ಮಕ್ಕಳ ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಮನೆಗೆ ಅಗತ್ಯವಿರುವ ಯಂತ್ರೋಪಕರಣವನ್ನು ಖರೀದಿಸುವಿರಿ. ಆರ್ಥಿಕ ಲಿಖಿತ ರೂಪದಲ್ಲಿ ಸ್ಪಷ್ಟವಾಗಿರಲಿ. ಸರ್ಕಾರಿ ಕೆಲಸವು ಪ್ರಗತಿಯಲ್ಲಿ ಇರಲಿದೆ. ಸಂಗಾತಿಯು ಇಂದು ನಿಮ್ಮ ಮಾತನ್ನು ಅನುಸರಿಸುವಳು. ಹೆಚ್ಚಿನ ಸಂಪಾದನೆಗೆ ಅನ್ಯ ಮಾರ್ಗವನ್ನು ಹಿಡಿದುಕೊಳ್ಳಬೇಕಾಗುವುದು. ಪ್ರತಿಯೊಂದು ಕ್ಷಣವನ್ನೂ ಆನಂದಿಸುವಿರಿ. ಸಜ್ಜನರ ಸಹವಾಸ ನಿಮಗೆ ಸಿಕ್ಕಿ ಮಾರ್ಗದರ್ಶನವೂ ಆಗಕಿದೆ.

ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ – Kannada News | BaMa Harish son passed away, his friend explains the incident

ನಿರ್ಮಾಪಕ ಮತ್ತು ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ (Ba Ma Harish) ಅವರ ಪುತ್ರ ಉಲ್ಲಾಸ್ ನಿಧನ ಹೊಂದಿದ್ದಾರೆ. ಕೊಡಚಾದ್ರಿಗೆ ಗೆಳೆಯರೊಟ್ಟಿಗೆ ಚಾರಣಕ್ಕೆಂದು ಹೋಗಿದ್ದಾಗ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಉಲ್ಲಾಸ್ ಅವರಿಗೆ ಇನ್ನೂ 29 ವರ್ಷ ವಯಸ್ಸು. ಇದೇ ಡಿಸೆಂಬರ್ ತಿಂಗಳಲ್ಲಿ ಅವರ ಮದುವೆ ಸಹ ನಿಶ್ಚಯವಾಗಿತ್ತು. ಉಲ್ಲಾಸ್ ನಿಧನ ಹೇಗಾಯ್ತು? ಎಂಬಿತ್ಯಾದಿ ಅನುಮಾನಗಳು ಹಲವರಿಗಿದ್ದವು. ಉಲ್ಲಾಸ್ ಅವರ ನಿಧನ ಹೇಗಾಯ್ತು? ಇತ್ಯಾದಿ ವಿವರಗಳನ್ನು ಅವರ ಜೊತೆಯಲ್ಲಿದ್ದ ಗೆಳೆಯರೇ ಇದೀಗ ನೀಡಿದ್ದಾರೆ. ಕೊನೆಯ ಕ್ಷಣಗಳಲ್ಲಿ ಉಲ್ಲಾಸ್ ಜೊತೆಗಿದ್ದ ಅವರ ಗೆಳೆಯ ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಆಂಬ್ಯುಲೆನ್ಸ್ ಸೇವೆಗೆ ಚುರುಕು, ಬೆಂಗಳೂರಿನ ಈ ಟ್ರಾಫಿಕ್​​ನಲ್ಲೂ 13 ನಿಮಿಷಕ್ಕೆ ಸೇವೆ ಕೊಡುವ ಗುರಿ..! – Kannada News | Health Department Plan Ambulance Reach On Spot in 13 minutes During Bengaluru traffic

ಬೆಂಗಳೂರು, (ಜೂನ್ 27): ರೋಗಿಗಳ ಪಾಲಿನ ಸಂಜೀವಿನಿ ಎನ್ನಿಸಿಕೊಂಡಿರುವ ಆಂಬ್ಯುಲೆನ್ಸ್  (Ambulance)ಸೇವೆ ಸದ್ಯ ಹಲವು ಆರೋಪಗಳನ್ನು ಎದುರಿಸುತ್ತಿದೆ. ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ಸಿಗಲ್ಲ, ಹಣ ಪಡಿತಾರೆ ಜೊತೆಗೆ ಸಿಕ್ಕಾಪಟ್ಟೆ ಲೇಟ್ ಬರುತ್ತೆ ಎಂಬಿತ್ಯಾದಿ ಆರೋಪಗಳಿದೆ.‌ ಸದ್ಯ ಟ್ರಾಫಿಕ್ ನಗರಿ ಎನ್ನಿಸಿಕೊಂಡ ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಸಕಾಲದಲ್ಲಿ ಆಸ್ಪತ್ರೆ ತಲುಪಲು ಸಾಧ್ಯವಾಗ್ತಿಲ್ಲ. ಉದಾಹರಣೆಗೆ ಸೈರನ್ ಹಾಕಿದ್ರೂ ವಿಕ್ಟೋರಿಯಾ ಆಸ್ಪತ್ರೆ ತಲುಪಲು ಕೆಲವೊಮ್ಮೆ 50 ನಿಮಿಷ ಬೇಕಾಗುತ್ತದೆ. 10 ಕಿಲೋಮೀಟರ್ ದೂರಕ್ಕೆ 2 ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಳ್ತಿದೆ.‌ ಸ್ಟ್ಯಾಂಡರ್ಡ್ ಟೈಮಿಂಗ್ ಪ್ರಕಾರ ಒಂದು ಆಂಬ್ಯುಲೆನ್ಸ್ 8 ಕಿಲೋಮೀಟರ್ ಅನ್ನು 20 ನಿಮಿಷಕ್ಕೆ ತಲುಪಬೇಕು. ಆದರೆ ಬೆಂಗಳೂರಿನಲ್ಲಿ ಇದು ಡಬ್ಬಲ್ ಆಗ್ತಿದೆ. ಈ ವಿಚಾರವನ್ನು ಖುದ್ದು ಆರೋಗ್ಯ ಸಚಿವರೇ ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಬ್ರೇಕ್ ಹಾಕಿ, ಕೇವಲ 13 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ನೀಡುವ ಗುರಿಯನ್ನು ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಹೊಂದಿದ್ದಾರೆ.

ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ?

ರಾಜ್ಯದಲ್ಲಿ ಒಟ್ಟು 715 ಆಂಬ್ಯುಲೆನ್ಸ್ ಗಳಿವೆ. ಈ ಪೈಕಿ‌ 530 ಮಾತ್ರ ಲಭ್ಯವಿದೆ. ಇನ್ನುಳಿದ  ಶೇ.25  ಆಂಬ್ಯುಲೆನ್ಸ್ ಗಳು ರಿಪೇರಿ, ಔಟ್ ಆಫ್ ಸರ್ವೀಸ್ ಇದೆ. ಇನ್ನು ಆಂಬ್ಯುಲೆನ್ಸ್ ಪ್ರಾಯೋಗಿಕ ರೇಡಿಯಸ್ ಹೇಗಿದೆ ಅಂತ ನೋಡುವುದಾದರೆ, ಸ್ಟ್ಯಾಂಡರ್ಡ್ ‌8 ಕಿ.ಮೀ 20 ನಿಮಿಷ, ಬೆಂಗಳೂರು ಸರಾಸರಿ 5-7 ಕಿ.ಮಿ 15 ನಿಮಿಷ, ಟ್ರಾಫಿಕ್ ಪೀಕ್ ಹವರ್ 2-3 ಕಿ.ಮೀ 30-50 ನಿಮಿಷ, ಗ್ರೀನ್ ಕಾರಿಡಾರ್‌ 14 ಕಿ.ಮೀ 13 ನಿಮಿಷ.

13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳು

ಆಂಬ್ಯುಲೆನ್ಸ್ 13 ನಿಮಿಷಗಳಿಗೆ ತರುವುದಕ್ಕೆ ಅನೇಕ ಸವಾಲುಗಳಿವೆ. ಉದಾಹರಣೆಗೆ 19 ಕಿಲೋಮೀಟರ್ ಗೆ ಪೀಕ್ ಹವರ್ ನಲ್ಲಿ ಗಂಟೆಗಟ್ಟಲೆ ಬೇಕಾಗುತ್ತದೆ. ಆಂಬ್ಯುಲೆನ್ಸ್ ಕೊರತೆ ಸಮಸ್ಯೆ ಹೆಚ್ವಿಸಿದರೆ, ಪ್ರತಿ ಬಾರಿ ಗ್ರೀನ್ ಕಾರಿಡಾರ್ ಸಾಧ್ಯವಿಲ್ಲ.

ಒಟ್ನಲ್ಲಿ ಸಚಿವರ 13 ನಿಮಿಷದ ಗುರಿ ಸರಿಯೇ. ಆದರೆ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದೇ, ಕೇವಲ ಆಂಬ್ಯುಲೆನ್ಸ್ ಹೆಚ್ಚಿಸಿದರೆ ಸಾಲದು. ಗ್ರೀನ್ ಕಾರಿಡಾರ್, ಸಾರ್ವಜನಿಕರ ಸಹಕಾರ, ಸಿಗ್ನಲ್ ಮ್ಯಾನೇಜ್ಮೆಂಟ್ ಎಲ್ಲವೂ ಒಟ್ಟಿಗೆ ಸೇರಿದರೆ ಗುರಿ ಮುಟ್ಟಲು ಸಾಧ್ಯವಿದರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬರಿದಾಗಿದ್ದ ಹಲಸೂರು ಕೆರೆಗೆ ಸಿಕ್ತು ಹೊಸ ಸ್ಪರ್ಶ: ಸ್ವಚ್ಛ ನೀರು, ಪಕ್ಷಿಗಳ ಕಲರವ; ಇಲ್ಲಿವೆ ಫೋಟೋಸ್​​ – Kannada News | Ulsoor Lake Rejuvenation: Bengaluru’s Historic Water Body Springs Back to Life After Desilting

ಎರಡು ತಿಂಗಳ ಹಿಂದೆ ಹೂಳು ಮತ್ತು ನೀರಿಲ್ಲದೆ ಸಂಪೂರ್ಣ ಬರಿದಾಗಿದ್ದ ಬೆಂಗಳೂರಿನ ಐತಿಹಾಸಿಕ ಹಲಸೂರು ಕೆರೆ, ಇಂದು ಮತ್ತೆ ನೀರು ತುಂಬಿಕೊಂಡು ಪ್ರಕೃತಿಯ ಸೊಬಗಿನಿಂದ ಕಂಗೊಳಿಸುತ್ತಿದೆ.

Source link

Exit mobile version