‘ಮೊಮ್ಮಗಳು ನಿತ್ಯ ಮೋದಿ ಜಪ ಮಾಡ್ತಾಳೆ, ಪಿಎಂ ಫೋಟೋಗೆ ಸಿಹಿ ನೀಡ್ತಾಳೆ’; ಸುನೀಲ್ ಶೆಟ್ಟಿ – Kannada News | Suniel Shetty’s Granddaughter Ivana’s Unique Ritual: Offering Sweets to PM Modi’s Photo Daily

ನಟ ಸುನೀಲ್ ಶೆಟ್ಟಿ ಅವರು (Suniel Shetty) ನಟನೆಯ ಜೊತೆಗೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ಕೌಟುಂಬಿಕ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುತ್ತಾರೆ. ಈಗ ಮಗಳು ಆಥಿಯಾ ಹಾಗೂ ಅಳಿಯ ರಾಹುಲ್ ದಂಪತಿಗೆ ಜನಿಸಿರೋ ಮಗಳ ಬಗ್ಗೆ ಅವರು ಮಾತನಾಡಿದ್ದಾರೆ. ತಮ್ಮ ಮೊಮ್ಮಗಳು ನಿತ್ಯ ಏನು ಮಾಡುತ್ತಾಳೆ ಎಂಬುದನ್ನು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.

ಸುನೀಲ್ ಶೆಟ್ಟಿ ಮೊಮ್ಮಗಳು ಇವಾರಾ ವಿಪುಲ ರಾಹುಲ್​ಗೆ ಈಗ 15 ತಿಂಗಳು. ‘ನನ್ನ ಮೊಮ್ಮಗಳಿಗೆ 15 ವರ್ಷ. ಪ್ರಧಾನಿ ಮೋದಿ ಅವರ ಬಗ್ಗೆ ದಾದಿ ಒಬ್ಬರು ಏರ್‌ಪೋರ್ಟ್‌ನಲ್ಲಿ ಹೇಳಿದ್ದರು, ಫೋಟೋ ತೋರಿಸಿದ್ದರು. ಅಂದಿನಿಂದ ಆ ಮಗು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿಯನ್ನು ಅರ್ಪಿಸುತ್ತಿದೆ’ ಎಂದು ಸುನೀಲ್ ಶೆಟ್ಟಿ ವಿವರಿಸಿದ್ದಾರೆ.

‘ನಾನಾಗಲೀ ಅಥವಾ ಮಗುವಿನ ಪೋಷಕರಾಗಲಿ ಹೀಗೆ ಮಾಡಲು ಹೇಳಿಕೊಟ್ಟಿಲ್ಲ. ಮಗು ತನ್ನಷ್ಟಕ್ಕೆ ತಾನೇ ಪ್ರತಿದಿನ ಬೆಳಗ್ಗೆ ಸಾಯಿಬಾಬಾ ಪುಸ್ತಕವನ್ನು ತೆರೆಯುತ್ತದೆ. ಆ ಪುಸ್ತಕದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕೂಡ ಇದೆ. ಮಗು ಆ ಫೋಟೋ ನೋಡಿ ‘ಮೋದಿ ಜಿ, ಮೋದಿ ಜಿ’ ಎಂದು ಕರೆಯುತ್ತದೆ. ನಂತರ ಮನೆಯಲ್ಲಿರುವ ಗಣಪತಿ ಮೂರ್ತಿಯ ಬಳಿ ಇರುವ ಸಿಹಿಯನ್ನು ತಂದು ಮೋದಿ ಫೋಟೋಗೆ ಕೊಡುತ್ತದೆ. ಮಗು ಪ್ರತಿ ದಿನ ಹೀಗೆ ಮಾಡುತ್ತಿರುವುದನ್ನು ನೋಡಿದರೆ ಮೋದಿ ಅವರಲ್ಲಿ ಏನೋ ಒಂದು ಅದ್ಭುತವಾದ ಮ್ಯಾಜಿಕ್ ಇದೆ ಎಂದು ನನಗೆ ಅನಿಸುತ್ತದೆ’ ಎಂದು ನಟ ಹೇಳಿದ್ದಾರೆ. ತಾವು ಯಾವುದೇ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಒಬ್ಬ ಶ್ರೇಷ್ಠ ನಾಯಕನ ಬಗ್ಗೆ ಮಾತನಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ನಟ ಸುನೀಲ್ ಶೆಟ್ಟಿ ಅವರು ತಮ್ಮ ದಿನಚರಿಯ ಬಗ್ಗೆಯೂ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ 5:30 ರಿಂದ 7 ಗಂಟೆಯವರೆಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ. ನಂತರ ಮನೆಗೆ ಬಂದು ಸ್ನಾನ ಮುಗಿಸಿ ಮೊಮ್ಮಗಳೊಂದಿಗೆ ಸಮಯ ಕಳೆಯುತ್ತಾರೆ. ಈ ಸಮಯ ತಮ್ಮ ಜೀವನದ ಅತ್ಯಂತ ಸಂತೋಷದ ಮತ್ತು ತೃಪ್ತಿಯ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಂಭಾವನೆ ಪಡೆಯದೇ ತುಳು ಸಿನಿಮಾದಲ್ಲಿ ನಟಿಸಿದ ಸುನೀಲ್ ಶೆಟ್ಟಿ

ಸುನೀಲ್ ಶೆಟ್ಟಿ ಉದ್ಯಮದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಸುನೀಲ್ ಶೆಟ್ಟಿ ನಟನೆಯ ‘ವೆಲ್​​ಕಮ್​ ಟು ದಿ ಜಂಗಲ್’ ಸಿನಿಮಾ ಜೂನ್ 26ರಂದು ತೆರೆಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆಯಲ್ಲಿ ದಾಳಿಂಬೆ ಬೆಳೆಗೆ ಅಂಡಮಾರಿ ರೋಗದ ಕಂಟಕ; 10 ಸಾವಿರಕ್ಕೂ ಅಧಿಕ ಎಕರೆ ಬೆಳೆ ನಾಶ! – Kannada News | Bagalkot Pomegranate Crops Destroyed by Bacterial Blight Disease; Farmers In Distress

ಬಾಗಲಕೋಟೆಯಲ್ಲಿ ದಾಳಿಂಬೆ ಬೆಳೆಗೆ ಅಂಡಮಾರಿ ರೋಗದ ಕಂಟಕ

ಬಾಗಲಕೋಟೆ, ಜೂನ್ 27: ಒಂದು ಕಡೆ ಮುಂಗಾರು ಕೈಕೊಟ್ಟು ಬರದ ಛಾಯೆ ಆವರಿಸಿದ್ದರೆ, ಮತ್ತೊಂದೆಡೆ ದೇಶ-ವಿದೇಶಗಳಿಗೆ ರಫ್ತಾಗುವ ಬಾಗಲಕೋಟೆಯ (Bagalakot) ಹೆಮ್ಮೆಯ ದಾಳಿಂಬೆ ಬೆಳೆಗೆ ಭೀಕರ ‘ದುಂಡಾಣು ಅಂಡಮಾರಿ’ (ಬ್ಯಾಕ್ಟೀರಿಯಲ್ ಬ್ಲೈಟ್) ರೋಗದ ಕಂಟಕ ಎದುರಾಗಿದೆ. ತೀವ್ರ ಬರದ ನಡುವೆಯೂ ನೀರಾವರಿ ಮೂಲಕ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದ ಜಿಲ್ಲೆಯ ಅನ್ನದಾತರಿಗೆ ಈಗ ರೋಗದ ಬರೆ ಬಿದ್ದಂತಾಗಿದ್ದು, ಕಣ್ಣೆದುರೇ ಬೆಳೆ ನಾಶವಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

10 ಸಾವಿರಕ್ಕೂ ಅಧಿಕ ಎಕರೆ ನಾಶ

ವಿಶೇಷವಾಗಿ ದಾಳಿಂಬೆ ಬೆಳೆಗೆ ವಿಶ್ವಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ತಾಲೂಕಿನ ಕಲಾದಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಲಾದಗಿ ವ್ಯಾಪ್ತಿಯೊಂದರಲ್ಲೇ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದ್ದು, ಅದರಲ್ಲಿ ಈಗಾಗಲೇ 4 ಸಾವಿರಕ್ಕೂ ಅಧಿಕ ಎಕರೆ ತೋಟಗಳು ರೋಗಕ್ಕೆ ಬಲಿಯಾಗಿವೆ. ಕಲಾದಗಿ ಅಕ್ಕಪಕ್ಕದ ಹಳ್ಳಿಗಳು ಸೇರಿದಂತೆ ಒಟ್ಟು 15 ಸಾವಿರ ಎಕರೆ ದಾಳಿಂಬೆ ಪ್ರದೇಶದ ಪೈಕಿ 10 ಸಾವಿರಕ್ಕೂ ಹೆಚ್ಚು ಎಕರೆ ತೋಟಗಳು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಂಪೂರ್ಣ ಹಾನಿಗೊಳಗಾಗಿವೆ.

ದಾಳಿಂಬೆ ಬೆಳೆಗೆ ಪ್ರತಿ ಎಕರೆಗೆ ಕನಿಷ್ಠ 4 ರಿಂದ 5 ಲಕ್ಷ ರೂಪಾಯಿಗಳನ್ನು ರೈತರು ಖರ್ಚು ಮಾಡಿದ್ದಾರೆ. ಆದರೆ, ತೀವ್ರವಾಗಿ ಹರಡುತ್ತಿರುವ ಈ ರೋಗದ ಹಿನ್ನೆಲೆಯಲ್ಲಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ, ರೋಗ ತಗುಲಿದ ಹಣ್ಣುಗಳನ್ನು ಕಡಿದು ತೋಟದಿಂದ ಹೊರಗೆ ಹಾಕಿ, ಅವುಗಳನ್ನು ಸುಟ್ಟು ಹಾಕಬೇಕಾದ ದುಸ್ಥಿತಿ ರೈತರಿಗೆ ಎದುರಾಗಿದೆ.

ವಿಜ್ಞಾನಿಗಳ ವಿರುದ್ಧ ಆಕ್ರೋಶ

ವಿಷಾದದ ಸಂಗತಿಯೆಂದರೆ, ಬಾಗಲಕೋಟೆ ಜಿಲ್ಲೆಯಲ್ಲೇ ಪ್ರತಿಷ್ಠಿತ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವಿದೆ (UHS Bagalkot). ಈ ವಿಶ್ವವಿದ್ಯಾಲಯದಲ್ಲಿ ನೂರಾರು ಜನ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಿಗಳಿದ್ದರೂ, ದಾಳಿಂಬೆ ಬೆಳೆಗಾರರನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಈ ಅಂಡಮಾರಿ ರೋಗಕ್ಕೆ ಇಂದಿಗೂ ಸೂಕ್ತ ಮತ್ತು ಶಾಶ್ವತ ಔಷಧಿಯನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಣ್ಣೆದುರೇ ಒಣಗುತ್ತಿರುವ ತೋಟಗಳನ್ನು ಕಂಡು ಕಣ್ಣೀರು ಹಾಕುತ್ತಿರುವ ರೈತರು, ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅಂಡಮಾರಿ ರೋಗಕ್ಕೆ ಶಾಶ್ವತ ಪರಿಹಾರ ಒದಗಿಸುವ ಔಷಧಿಯನ್ನು ವಿಜ್ಞಾನಿಗಳು ಶೀಘ್ರವಾಗಿ ಸಂಶೋಧಿಸಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.

ದಾಳಿಂಬೆ ಅಂಡಮಾರಿ ರೋಗವು ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಪೀಡಿತ ತೋಟದ ಹಣ್ಣು ಅಥವಾ ಗಿಡದ ಭಾಗಗಳನ್ನು ಹಾಗೇ ಬಿಡದೆ ತಕ್ಷಣ ಸುಟ್ಟು ಹಾಕುವುದರಿಂದ ಪಕ್ಕದ ತೋಟಗಳಿಗೆ ರೋಗ ಹರಡುವುದನ್ನು ತಕ್ಕಮಟ್ಟಿಗೆ ತಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠ್ಠಲ್ ಗೌಡಗೆ ಅರೆಸ್ಟ್​​​​​​ ವಾರಂಟ್ – Kannada News | Contempt of Court: Vittal Gowda Faces Arrest for Violating Dharmasthala Order

ಮಂಗಳೂರು, ಜೂ,27: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಠ್ಠಲ್ ಗೌಡನಿಗೆ ಬೆಂಗಳೂರಿನ ನ್ಯಾಯಾಲಯವು ಬಂಧನ ವಾರಂಟ್ (Arrest Warrant) ಜಾರಿಗೊಳಿಸಿದೆ. ನ್ಯಾಯಾಂಗ ನಿಂದನೆ (Contempt of Court) ಪ್ರಕರಣದಡಿಯಲ್ಲಿ ಈ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಸದ್ಯ ವಿಠ್ಠಲ್ ಗೌಡ ಪತ್ತೆಗಾಗಿ ಪೊಲೀಸರು ಹಾಗೂ ಕೋರ್ಟ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಈ ಬಂಧನ ವಾರಂಟ್ ಅನ್ನು ಜಾರಿಗೊಳಿಸಿದೆ. ಜೂನ್ 8 ರಂದೇ ಈ ವಾರಂಟ್ ಜಾರಿಯಾಗಿದ್ದು, ಮುಂಬರುವ ಜೂನ್ 30 ರೊಳಗೆ ವಿಠ್ಠಲ್ ಗೌಡನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಅರೆಸ್ಟ್​​ ವಾರಂಟ್ ಕೈಸೇರುತ್ತಿದ್ದಂತೆ ವಿಠ್ಠಲ್ ಗೌಡ ಕಾನೂನು ಕ್ರಮಕ್ಕೆ ಹೆದರಿ ತಲೆಮರೆಸಿಕೊಂಡಿರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಕೋರ್ಟ್ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ಬೆಳ್ತಂಗಡಿ ಮತ್ತು ಧರ್ಮಸ್ಥಳ ಭಾಗದ ವಿವಿಧೆಡೆ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಶೋಧ ಕಾರ್ಯ ಚುರುಕುಗೊಳಿಸಿದೆ. ವಿಠ್ಠಲ್ ಗೌಡನ ಸ್ವಗೃಹ ಆತನ ಸಹೋದರಿ ಕುಸುಮಾವತಿ ಅವರ ನಿವಾಸ ಹಾಗೂ ಪ್ರಮುಖವಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿಯೂ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ:ಕೊಂಬುಚಾ ಜ್ಯೂಸ್ ಅನ್ನು ಬಿಯರ್ ಅಂದುಕೊಂಡು ಮಹಿಳೆಗೆ ಕಿರುಕುಳ: ಚಾಲಕನ ವಿರುದ್ಧ ಎಫ್‌ಐಆರ್!

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಅವಹೇಳನಕಾರಿ ಹಾಗೂ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು ಎಂದು ಈ ಹಿಂದೆ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಆದರೆ, ವಿಠ್ಠಲ್ ಗೌಡ ನ್ಯಾಯಾಲಯದ ಅಧಿಕೃತ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಮತ್ತೆ ಅವಹೇಳಕಾರಿ ಹೇಳಿಕೆಯನ್ನು ನೀಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿಯಲ್ಲಿ ಆತನನ್ನು ಬಂಧಿಸಿ ಜೂನ್ 30 ರೊಳಗೆ ಕೋರ್ಟ್‌ಗೆ ಒಪ್ಪಿಸುವಂತೆ ಖಡಕ್ ಆದೇಶ ಹೊರಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:55 pm, Sat, 27 June 26

Source link

ಭಾನುವಾರದಂದು 2 ಮಾಡು ಇಲ್ಲವೇ ಮಡಿ ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ – Kannada News | Do or Die June 28: India Men vs. Ireland, India Women vs. Australia for T20 wc Fate

ಜೂನ್ 28 ರಂದು ಅಂದರೆ ಭಾನುವಾರದಂದು ಕ್ರಿಕೆಟ್ ಪ್ರಿಯರಿಗೆ ಎರಡೆರಡು ಹೈವೋಲ್ಟೇಜ್ ಪಂದ್ಯಗಳನ್ನು ನೋಡುವ ಅವಕಾಶವಿದೆ. ಈ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಕಣಕ್ಕಿಳಿಯುತ್ತಿದ್ದು, ಈ ಎರಡೂ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯಗಳಾಗಿವೆ. ಒಂದೆಡೆ ಭಾರತದ ಪುರುಷರ ತಂಡ ಐರ್ಲೆಂಡ್ (India vs Ireland) ವಿರುದ್ಧ ಎರಡನೇ ಹಾಗೂ ಕೊನೆಯ ಟಿ20 ಪಂದ್ಯವನ್ನು ಆಡಿದರೆ, ಮತ್ತೊಂದೆಡೆ 2026 ರ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು (India vs Australia) ಎದುರಿಸುತ್ತಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯಗೊಳ್ಳಲಿದೆ. ಸೋತರೆ, ಸರಣಿ ಭಾರತದ ಕೈತಪ್ಪಲಿದೆ. ಇತ್ತ ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್​ಗೇರಬೇಕೆಂದರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಿದೆ. ಸೋತರೆ, ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಗಳಿವೆ. ಹೀಗಾಗಿ ಭಾರತದ ಎರಡೂ ತಂಡಗಳಿಗೆ ನಾಳೆಯ ಪಂದ್ಯ ನಿರ್ಣಾಯಕವಾಗಿದೆ.

ಭಾರತಕ್ಕೆ ಸರಣಿ ಸೋಲಿನ ಆತಂಕ

ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸದಲ್ಲಿದೆ. ಈ ಮೊದಲು ನಡೆದಿದ್ದ ಎಲ್ಲಾ ಸರಣಿಗಳಲ್ಲೂ ಭಾರತ ಏಕಪಕ್ಷೀಯ ಗೆಲುವು ಸಾಧಿಸಿದ್ದರಿಂದ ಈ ಸರಣಿ ಕೂಡ ಭಾರತದ ಪಾಲಾಗಲಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಬಲಿಷ್ಠ ಟೀಂ ಇಂಡಿಯಾಕ್ಕೆ ಹೀನಾಯ ಸೋಲಿನ ಶಾಕ್ ನೀಡಿರುವ ಆತಿಥೇಯ ಐರ್ಲೆಂಡ್ ತಂಡ ಮೊದಲ ಟಿ20 ಪಂದ್ಯವನ್ನು 34 ರನ್​ಗಳಿಂದ ಗೆದ್ದುಕೊಂಡಿದೆ.

ಈ ಮೂಲಕ 2 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೀಗ ನಾಳೆ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಸೋತರೆ, ಐರ್ಲೆಂಡ್ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಒಂದು ವೇಳೆ ಭಾರತ ಗೆದ್ದರೆ ಸರಣಿ 1-1 ರ ಸಮಬಲದೊಂದಿಗೆ ಅಂತ್ಯವಾಗಲಿದೆ. ಹೀಗಾಗಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಭಾರತ, ಸರಣಿ ಸೋಲಿನಿಂದ ಪಾರಾಗಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಎದುರಾಳಿ ಯಾರು?

ಗೆದ್ದರಷ್ಟೇ ಸೆಮೀಸ್ ಟಿಕೆಟ್

ಇನ್ನು ಮಹಿಳಾ ಟಿ20 ವಿಶ್ವಕಪ್​ನಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅದ್ಭುತ ಆರಂಭ ಪಡೆದುಕೊಂಡಿದ್ದ ಹರ್ಮನ್‌ಪ್ರೀತ್ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿತ್ತು. ಆ ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿತ್ತಾದರೂ, ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯವನ್ನು ಗೆದ್ದರಷ್ಟೇ ಅದಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಒಂದು ವೇಳೆ ಸೋತರೆ ಅದರ ಸೆಮಿಫೈನಲ್ ಕನಸಿಗೆ ಬ್ರೇಕ್ ಬೀಳಲಿದೆ. ಹೀಗಾಗಿ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಅಜೇಯರಾಗಿ ಉಳಿದಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಶತಾಯಗತಾಯ ಸೋಲಿಸಲೇಬೇಕಾದ ಒತ್ತಡದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಪಕ ಬಾಮಾ ಹರೀಶ್​​ಗೆ ಪುತ್ರ ವಿಯೋಗ, ಮದುವೆ ಆಗಬೇಕಿದ್ದವ ಮಸಣಕ್ಕೆ – Kannada News | Producer Ba Ma Harish son passed away

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಬಾಮಾ ಹರೀಶ್​​ ಅವರ ಪುತ್ರ ಉಲ್ಲಾಸ್ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು. ಉಲ್ಲಾಸ್ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ ಎಂದು ತೆರಳಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಲ್ಲಾಸ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಕೆಲವೇ ದಿನಗಳಲ್ಲಿ ಮದುವೆ ನಡೆಯಲಿದ್ದು, ಅಷ್ಟರಲ್ಲಿ ಉಲ್ಲಾಸ್ ನಿಧನ ಹೊಂದಿದ್ದಾರೆ.

ಉಲ್ಲಾಸ್ ಅವರಿಗೆ ಡಿಸೆಂಬರ್ ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗಷ್ಟೆ ನಿಶ್ಚಿತಾರ್ಥವೂ ನಡೆದಿತ್ತು. ಆದರೆ ಇದೀಗ ಹಠಾತ್ತನೆ ಉಲ್ಲಾಸ್ ನಿಧನ ಹೊಂದಿದ್ದಾರೆ. ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯರೊಟ್ಟಿಗೆ ಚಾರಣಕ್ಕಾಗಿ ಹೋಗಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಅವರ ಮೃತದೇಹವನ್ನು ಬೆಂಗಳೂರಿಗೆ ತರಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Published On – 2:40 pm, Sat, 27 June 26

Source link

ಠಾಣೆಗೆ ದೂರು ಕೊಡಲು ಬಂದ ವೃದ್ಧರೊಬ್ಬರ ಎದುರು ಮೇಜಿನ ಮೇಲೆ ಕಾಲು ಚಾಚಿ ಕುಳಿತ ಮಹಿಳಾ ಕಾನ್​ಸ್ಟೆಬಲ್ – Kannada News | Rajasthan Police: Female Constable Suspended for Disrespecting Elderly Complainant

ಡುಂಗರಪುರ,ಜೂನ್ 27: ಸಾರ್ವಜನಿಕರ ರಕ್ಷಣೆ ಮತ್ತು ಸೇವೆಗಾಗಿಯೇ ಮುಡಿಪಾಗಿರಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಸೌಜನ್ಯವನ್ನೇ ಮರೆತು ವರ್ತಿಸಿರುವ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಪೊಲೀಸ್(Police) ಠಾಣೆಗೆ ದೂರು ನೀಡಲು ಬಂದಿದ್ದ ವೃದ್ಧ ನಾಗರಿಕರೊಬ್ಬರ ಎದುರೇ ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಮೇಜಿನ ಮೇಲೆ ಎರಡೂ ಕಾಲುಗಳನ್ನು ಚಾಚಿ ಉಡಾಫೆಯಿಂದ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋ ದೊಡ್ಡ ಮಟ್ಟದ ಚರ್ಚೆ ಮತ್ತು ಆಕ್ರೋಶದ ಬಿರುಗಾಳಿ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಡುಂಗರಪುರ ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ಕರ್ತವ್ಯ ಲೋಪ, ಶಿಸ್ತು ಉಲ್ಲಂಘನೆ ಮತ್ತು ಸಾರ್ವಜನಿಕರೊಂದಿಗೆ ಅತ್ಯಂತ ಅಸಭ್ಯವಾಗಿ ನಡೆದುಕೊಂಡ ಆರೋಪದ ಮೇಲೆ ಸದರಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಜೊತೆಗೆ ಆಕೆಯ ವಿರುದ್ಧ ಕಟ್ಟುನಿಟ್ಟಿನ ಇಲಾಖಾ ಶಿಸ್ತು ತನಿಖೆಗೆ ಆದೇಶಿಸಲಾಗಿದೆ.

ರಾಜಸ್ಥಾನದ ಡುಂಗರಪುರ ಜಿಲ್ಲೆಯ ಬಿಚ್ಚಿವಾರ ಪೊಲೀಸ್ ಠಾಣೆಯಲ್ಲಿ ಈ ಅತಿರೇಕದ ಘಟನೆ ನಡೆದಿದೆ. ವೃದ್ಧರೊಬ್ಬರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ದೂರು ದಾಖಲಿಸಲು ಠಾಣೆಗೆ ಬಂದಾಗ, ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ವೃದ್ಧರ ದೂರನ್ನು ಕೇಳುವ ಅಥವಾ ಅವರಿಗೆ ಗೌರವ ಕೊಡುವ ಕನಿಷ್ಠ ಸೌಜನ್ಯವನ್ನೂ ತೋರಿಸಿಲ್ಲ. ಬದಲಿಗೆ, ಆಕೆ ತನ್ನ ಕಚೇರಿಯ ಮೇಜಿನ ಮೇಲೆ ಕಾಲುಗಳನ್ನು ಚಾಚಿ ಆರಾಮವಾಗಿ ಕುಳಿತಿದ್ದಾರೆ.

ಮತ್ತಷ್ಟು ಓದಿ: ಮದುವೆ ಇಷ್ಟವಿಲ್ಲ ಎಂದು ಕುಟುಂಬವನ್ನು ಒಪ್ಪಿಸುವುದಕ್ಕಿಂತ ಕೇತನ್​ನನ್ನು ಕೊಲ್ಲೋದೇ ಸುಲಭವಾಗಿತ್ತು; ಸಿಯಾ ಹೇಳಿಕೆ

ಠಾಣೆಯಲ್ಲಿದ್ದ ಯಾರೋ ಒಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ಇಲಾಖೆಯ ವಿರುದ್ಧ ಮುಗಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಕುರಿತು ಕಠಿಣ ಸಂದೇಶ ರವಾನಿಸಿದ್ದು, ಉನ್ನತ ಅಧಿಕಾರಿಗಳು ಇಡೀ ಘಟನೆಯ ಸಂಪೂರ್ಣ ವರದಿಯನ್ನು ಕೋರಿದ್ದಾರೆ. ಪೊಲೀಸ್ ಠಾಣೆಗೆ ಬರುವ ಪ್ರತಿಯೊಬ್ಬ ನಾಗರಿಕರೊಂದಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರೊಂದಿಗೆ ಅತ್ಯಂತ ಸೌಜನ್ಯ, ಗೌರವ ಮತ್ತು ಜವಾಬ್ದಾರಿಯಿಂದ ವರ್ತಿಸುವುದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ.

ಸಾರ್ವಜನಿಕರ ನಂಬಿಕೆಗೆ ಧಕ್ಕೆ ತರುವ ಹಾಗೂ ಇಲಾಖೆಯ ಕೀರ್ತಿಯನ್ನು ಮಣ್ಣುಪಾಲು ಮಾಡುವ ಇಂತಹ ಬೇಜವಾಬ್ದಾರಿ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಅಂತಹ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯು ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಮತ್ತು ಆಡಳಿತದಲ್ಲಿ ಶಿಸ್ತಿನ ಮಹತ್ವ ಎಷ್ಟಿದೆ ಎಂಬುದರ ಕುರಿತು ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲಿಂಗನಮಕ್ಕಿ ಜಲಾಶಯದಲ್ಲಿ ತೀವ್ರ ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತ – Kannada News | Linganamakki Dam Hydroelectric Power Generation Suspended Due to Low Water Level

ಶಿವಮೊಗ್ಗ, ಜೂನ್ 27: ರಾಜ್ಯದ ಪ್ರಮುಖ ಜಲವಿದ್ಯುತ್ ಮೂಲಗಳಲ್ಲಿ ಒಂದಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಬಳಿಯಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿಯಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ವಿದ್ಯುತ್ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1,745.75 ಅಡಿಗೆ ತಲುಪಿದೆ. ಸಾಮಾನ್ಯವಾಗಿ ಜಲಾಶಯದಲ್ಲಿ 1,743 ಅಡಿಗಳವರೆಗೆ ಯಾವುದೇ ತೊಂದರೆಯಿಲ್ಲದೆ ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ, ಸದ್ಯದ ಮಟ್ಟ ಕನಿಷ್ಠ ಮಟ್ಟಕ್ಕೆ ಅತ್ಯಂತ ಹತ್ತಿರದಲ್ಲಿದೆ.

ನೀರಿನ ಸಂಗ್ರಹ ತೀರಾ ಕನಿಷ್ಠ ಮಟ್ಟಕ್ಕೆ ತಲುಪಿದಾಗ ವಿದ್ಯುತ್ ಉತ್ಪಾದನೆ ಮುಂದುವರಿಸಿದರೆ ಯಂತ್ರಗಳಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ತಾಂತ್ರಿಕ ದೋಷಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಹಾಗೂ ಕೆಪಿಸಿಎಲ್ ಅಧಿಕಾರಿಗಳು ವಿದ್ಯುತ್ ಉತ್ಪಾದನೆಯನ್ನು ಸದ್ಯಕ್ಕೆ ನಿಲ್ಲಿಸಲು ನಿರ್ಧರಿಸಿದ್ದಾರೆ.

ದಿನಕ್ಕೆ 55 ಮೆಗಾವ್ಯಾಟ್ ನಷ್ಟ

ಲಿಂಗನಮಕ್ಕಿ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಪ್ರತಿದಿನ ಸರಾಸರಿ 55 ಮೆಗಾವ್ಯಾಟ್ (MW) ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಕಡಿಮೆಯಾಗಿದ್ದು, ಮಳೆ ಚುರುಕಾಗಿ ನೀರಿನ ಮಟ್ಟ ಏರಿಕೆಯಾಗುವವರೆಗೂ ವಿದ್ಯುತ್ ಉತ್ಪಾದನೆ ಪುನಾರಂಭಗೊಳ್ಳುವುದು ಕಷ್ಟಸಾಧ್ಯ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ: ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ; ಒಣ ಕಸದಿಂದ ಉತ್ಪತ್ತಿಯಾಗಲಿದೆ ಹಸಿರು ಇದ್ದಿಲು! – Kannada News | South India’s First Green Charcoal Plant to Start in Hubballi Soon


ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಚಾರ್ಕೋಲ್ ಘಟಕ ಆರಂಭ

ಹುಬ್ಬಳ್ಳಿ, ಜೂನ್ 27: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ (Hubballi-Dharwad) ದೊಡ್ಡ ತಲೆನೋವಾಗಿದ್ದ ಕಸದ ಸಮಸ್ಯೆಗೆ ಈಗ ಅತ್ಯಾಧುನಿಕ ತಂತ್ರಜ್ಞಾನದ ಮುಕ್ತಿ ಸಿಕ್ಕಿದೆ. ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಒಣ ಕಸವನ್ನು ಸಂಸ್ಕರಿಸಿ ಹಸಿರು ಇದ್ದಿಲಾಗಿ ಪರಿವರ್ತಿಸುವ ಅತ್ಯಾಧುನಿಕ ಘಟಕವೊಂದು ಹುಬ್ಬಳ್ಳಿಯಲ್ಲಿ ತಲೆ ಎತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ದಕ್ಷಿಣ ಭಾರತದ ಮೊದಲ ಚಾರ್ಕೋಲ್ ಘಟಕ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ವಿಶೇಷ ಕಾಳಜಿ ಮತ್ತು ಮುತುವರ್ಜಿಯಿಂದಾಗಿ ಈ ನೂತನ ಪರಿಸರಸ್ನೇಹಿ ಯೋಜನೆ ಅನುಷ್ಠಾನಗೊಂಡಿದೆ. ಹುಬ್ಬಳ್ಳಿಯ ಗಬ್ಬೂರು ಬಳಿ ಸುಮಾರು 10 ಎಕರೆ ಭೂಮಿಯಲ್ಲಿ ಈ ಬೃಹತ್ ಘಟಕವನ್ನು ಸ್ಥಾಪಿಸಲಾಗಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಇತ್ತೀಚೆಗೆ ಘಟಕಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (NTPC) ಅಂಗಸಂಸ್ಥೆಯಾದ ವಿದ್ಯುತ್ ವ್ಯಾಪಾರ ನಿಗಮವು ಈ ಅತ್ಯಾಧುನಿಕ ಯೋಜನೆಯನ್ನು ಜಾರಿಗೆ ತಂದಿದೆ.

ಅವಳಿ ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ನೂರಾರು ಟನ್ ತ್ಯಾಜ್ಯದಿಂದ ಕಸದ ಬೆಟ್ಟಗಳು ನಿರ್ಮಾಣವಾಗುತ್ತಿದ್ದವು. ಸದ್ಯ ಹುಬ್ಬಳ್ಳಿಯಲ್ಲಿ 280 ಟನ್ ಹಾಗೂ ಧಾರವಾಡದಲ್ಲಿ 120 ಟನ್ ಸೇರಿದಂತೆ ಪ್ರತಿದಿನ ಒಟ್ಟು 400 ಟನ್ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ, ಕೇವಲ ಒಣ ಕಸವನ್ನು ಮಾತ್ರ ಈ ಚಾರ್ಕೋಲ್ ಉತ್ಪಾದನಾ ಘಟಕಕ್ಕೆ ರವಾನಿಸಲಾಗುತ್ತದೆ.

ನಿತ್ಯ 120 ಟನ್ ಹಸಿರು ಇದ್ದಿಲು ಉತ್ಪಾದನೆಯ ಗುರಿ

ಈ ಘಟಕವು ಪ್ರತಿನಿತ್ಯ ಗರಿಷ್ಠ 200 ಟನ್ ಒಣ ತ್ಯಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದಹಿಸಿ, ಸುಮಾರು 120 ಟನ್ ಪರಿಸರಸ್ನೇಹಿ ಹಸಿರು ಇದ್ದಿಲನ್ನು (Charcoal) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕದ ಯಶಸ್ವಿ ಕಾರ್ಯಾಚರಣೆಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಪ್ರತಿದಿನ 150 ಟನ್ ಒಣ ಕಸವನ್ನು ಕಡ್ಡಾಯವಾಗಿ ಪೂರೈಸುವುದಾಗಿ ಕಂಪನಿಗೆ ವಾಗ್ದಾನ ನೀಡಿದೆ.

ತ್ಯಾಜ್ಯ ಮುಕ್ತ ಸ್ವಚ್ಛ ನಗರ ನಿರ್ಮಾಣದ ನಿಟ್ಟಿನಲ್ಲಿ ಈ ಯೋಜನೆ ಮೈಲಿಗಲ್ಲಾಗಲಿದ್ದು, ಇಲ್ಲಿ ಉತ್ಪತ್ತಿಯಾಗುವ ಹಸಿರು ಇದ್ದಿಲನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಇದು ಕಸದ ಸಮಸ್ಯೆಗೆ ಮುಕ್ತಿ ನೀಡುವುದರ ಜೊತೆಗೆ ಪರಿಸರ ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಲಿದೆ. ಕಸದ ವಿಲೇವಾರಿ ಮಾಡಲಾಗದೆ ಕಂಗಾಲಾಗಿದ್ದ ಅವಳಿ ನಗರಕ್ಕೆ ಈ ಯೋಜನೆ ಹೊಸ ಆಶಾಕಿರಣ ಮೂಡಿಸಿದೆ. ತ್ಯಾಜ್ಯದಿಂದಲೇ ಇಂಧನ ತಯಾರಿಸುವ ಈ ಮಾದರಿ ಪ್ರಾಜೆಕ್ಟ್ ಇಡೀ ದಕ್ಷಿಣ ಭಾರತಕ್ಕೇ ಹೆಮ್ಮೆಯ ಸಂಗತಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

438 ರನ್ ಗಳಿಸಿಯೂ ಹೀನಾಯ ದಾಖಲೆ ಬರೆದ ನ್ಯೂಝಿಲೆಂಡ್ – Kannada News | New Zealand set embarrassing Test record against ENG

ಕ್ರಿಕೆಟ್ ಎಂಬುದು ಅನಿಶ್ಚಿತತೆಗಳ ಆಟ ಎಂಬುದಕ್ಕೆ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್​ ತಾಜಾ ಉದಾಹರಣೆ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಲ್ಯಾಥಮ್ ಹಾಗೂ ಡೆವೊನ್ ಕಾನ್ವೆ ಅದ್ಭುತ ಆರಂಭ ಒದಗಿಸಿದ್ದರು. ಈ ಆರಂಭದೊಂದಿಗೆ ಈ ಜೋಡಿಯು ಮೊದಲ ವಿಕೆಟ್​ಗೆ ಕಲೆಹಾಕಿದ್ದು ಬರೋಬ್ಬರಿ 317 ರನ್​ಗಳು.

  • ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್​ಗಳೊಂದಿಗೆ 157 ರನ್ ಬಾರಿಸಿದ್ದರು
  • ಟಾಮ್ ಲ್ಯಾಥಮ್ 214 ಎಸೆತಗಳಲ್ಲಿ 15 ಫೋರ್ ನೆರವಿನೊಂದಿಗೆ 151 ರನ್ ಗಳಿಸಿದ್ದರು.

ಮೊದಲ ವಿಕೆಟ್‌ಗೆ 317 ರನ್‌ಗಳ ಜೊತೆಯಾಟವಾಡಿದ ಕಿವೀಸ್ ಪಡೆ, ಆನಂತರ ಕೇವಲ 121 ರನ್‌ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 438 ರನ್​ಗಳಿಗೆ ಆಲೌಟ್ ಆಗಿ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ದಿಢೀರ್ ಕುಸಿತದೊಂದಿಗೆ ನ್ಯೂಝಿಲೆಂಡ್ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ  ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದೆ.

ಕಿವೀಸ್ ಪಡೆಯ ಅನಪೇಕ್ಷಿತ ದಾಖಲೆ:

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟದ ಬಳಿಕ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಇದಕ್ಕೂ ಮುನ್ನ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.

ಆದರೆ ಈ ಬಾರಿ ನ್ಯೂಝಿಲೆಂಡ್ ಮೊದಲ ವಿಕೆಟ್​ಗೆ ತ್ರಿಶತಕದ ಜೊತೆಯಾಟವಾಡಿ ಐನೂರು ರನ್​ಗಳಿಸಲು ವಿಫಲವಾಗಿದೆ. ಈ ಮೂಲಕ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ವಿಕೆಟ್​ಗೆ 300 ಕ್ಕೂ ಹೆಚ್ಚು ರನ್​ಗಳಿಸಿ 500 ರನ್​ಗಳಿಸಲಾಗದೇ ಆಲೌಟ್ ಆದ ತಂಡವೆಂಬ ಅಪಕೀರ್ತಿಯೊಂದು ಕಿವೀಸ್ ಪಾಲಾಗಿದೆ.

ಹಾಗೆಯೇ ಟೆಸ್ಟ್ ಇತಿಹಾಸದಲ್ಲೇ ಆರಂಭಿಕ ದಾಂಡಿಗರು 300+ ರನ್​ ಗಳಿಸಿದ ಬಳಿಕ ತಂಡವೊಂದು ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಅನಪೇಕ್ಷಿತ ದಾಖಲೆಗೂ ನ್ಯೂಝಿಲೆಂಡ್ ತಂಡ ಕೊರೊಳೊಡ್ಡಿದೆ.

  • ನ್ಯೂಝಿಲೆಂಡ್ – 438/10 (vs ಇಂಗ್ಲೆಂಡ್, 2026)
  • ಇಂಗ್ಲೆಂಡ್ – 589/10 (vs ಆಸ್ಟ್ರೇಲಿಯಾ, 1912)
  • ಇಂಗ್ಲೆಂಡ್ – 608/10 (vs ದಕ್ಷಿಣ ಆಫ್ರಿಕಾ, 1948)

## 📊 114 ವರ್ಷಗಳ ಕ್ರಿಕೆಟ್ ಇತಿಹಾಸ ಬ್ರೇಕ್!
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟ ಸಿಕ್ಕ ನಂತರ ತಂಡವೊಂದು ಇಷ್ಟು ಕಡಿಮೆ ಮೊತ್ತಕ್ಕೆ ಆಲ್-ಔಟ್ ಆಗಿರುವುದು ಇದೇ ಮೊದಲು. ಈ ಮುಂಚೆ 1912 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತಂಡ 323 ರನ್‌ಗಳ ಓಪನಿಂಗ್ ಪಾರ್ಟ್‌ನರ್‌ಶಿಪ್ ಬಳಿಕ 589 ರನ್‌ಗಳಿಗೆ ಆಲ್-ಔಟ್ ಆಗಿದ್ದು ಇದುವರೆಗಿನ ಕನಿಷ್ಠ ಮೊತ್ತವಾಗಿತ್ತು.

* ನ್ಯೂಝಿಲೆಂಡ್ 🇳🇿 — 438/10 (vs ಇಂಗ್ಲೆಂಡ್, 2026)
* ಇಂಗ್ಲೆಂಡ್ 🏴󠁧󠁢󠁥󠁮󠁧󠁿 — 589/10 (vs ಆಸ್ಟ್ರೇಲಿಯಾ, 1912)
* ಇಂಗ್ಲೆಂಡ್ 🏴󠁧󠁢󠁥󠁮󠁧󠁿 — 608/10 (vs ದಕ್ಷಿಣ ಆಫ್ರಿಕಾ, 1948)

ಇದನ್ನೂ ಓದಿ: ಒಂದೇ ಪಂದ್ಯ, ಮೂರು ತಂಡಗಳ ಸೆಮಿಫೈನಲ್​ ಭವಿಷ್ಯ ನಿರ್ಧಾರ!

ಒಟ್ಟಾರೆಯಾಗಿ, ಒಂದೇ ದಿನದಲ್ಲಿ ದಾಖಲೆಯ ಶಿಖರವೇರಿ, ಅಷ್ಟೇ ವೇಗವಾಗಿ ಪ್ರಪಾತಕ್ಕೆ ಕುಸಿದ ನ್ಯೂಝಿಲೆಂಡ್​ ತಂಡದ ಪಾಲಿಗೆ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಮರೆಯಲಾಗದ ಕಹಿ ನೆನಪಾಗಿ ಉಳಿಯಲಿದೆಯಾ? ಅಥವಾ ಈ ಕುಸಿತದ ಹೊರತಾಗಿಯೂ ದ್ವಿತೀಯ ಇನಿಂಗ್ಸ್​ ಮೂಲಕ ಇಂಗ್ಲೆಂಡ್ ವಿರುದ್ಧ ಪಾರುಪತ್ಯ ಮೆರೆದು ಗೆದ್ದು ಬೀಗಲಿದೆಯಾ ಕಾದು ನೋಡಬೇಕಿದೆ.

Source link

ಸೀಶೆಲ್ಸ್‌ಗೆ ಪ್ರಧಾನಿ ಮೋದಿ ಐತಿಹಾಸಿಕ ಭೇಟಿ: 194 ವರ್ಷದ ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಭೇಟಿಯಾಗಲಿರುವ ಪ್ರಧಾನಿ – Kannada News | PM Modi Visits Seychelles: Historic Ties, Blue Economy and Jonathan, World’s Oldest Tortoise

ನವದೆಹಲಿ, ಜೂನ್ 27: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಜೂನ್ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ಸೀಶೆಲ್ಸ್ ದೇಶಕ್ಕೆ ಐತಿಹಾಸಿಕ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವಾರ್ಷಿಕೋತ್ಸವ ಹಾಗೂ ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಈ ಭೇಟಿಯ ಅತ್ಯಂತ ಆಸಕ್ತಿದಾಯಕ ಮತ್ತು ವಿಶಿಷ್ಟ ಆಕರ್ಷಣೆಯೆಂದರೆ, ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಅನ್ನು ಪ್ರಧಾನಿ ಭೇಟಿಯಾಗಲಿದ್ದಾರೆ.

ಗಿನ್ನೆಸ್ ದಾಖಲೆಯ ವೀರ ‘ಜೊನಾಥನ್’ ಯಾರು?
ಜೊನಾಥನ್ ಜನಿಸಿದ್ದು ಸುಮಾರು 1832 ರಲ್ಲಿ. ಅಂದರೆ ಬ್ರಿಟನ್‌ನ ರಾಣಿ ವಿಕ್ಟೋರಿಯಾ ಸಿಂಹಾಸನ ಏರುವ ಮುನ್ನ, ಭಾರತದಲ್ಲಿ ಮಹಾತ್ಮ ಗಾಂಧೀಜಿ ಜನಿಸುವ ಮುನ್ನವೇ ಈ ಆಮೆ ಜನ್ಮತಾಳಿತ್ತು. ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಂತ ಭೂಮಂಡಲ ಪ್ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿ ಗಿನ್ನೆಸ್ ವಿಶ್ವ ದಾಖನೆ ಬರೆದಿದೆ.

ಇದು ಅಲ್ಡಾಬ್ರಾ ದೈತ್ಯ ಆಮೆ ಪ್ರಭೇದಕ್ಕೆ ಸೇರಿದ್ದು, 250 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕ ಹಾಗೂ ಒಂದು ಮೀಟರ್‌ಗಿಂತ ಹೆಚ್ಚು ಉದ್ದವಿದೆ. ಈ ಪ್ರಭೇದದ ಸರಾಸರಿ ಆಯಸ್ಸು 150 ವರ್ಷಗಳಾದರೆ, ಜೊನಾಥನ್ ಅದನ್ನು ಮೀರಿ 194 ವರ್ಷಗಳಿಂದ ಆರೋಗ್ಯವಾಗಿ ಬದುಕುತ್ತಿದ್ದಾನೆ.

ಮತ್ತಷ್ಟು ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ

ಸೀಶೆಲ್ಸ್‌ನ ಸ್ವಾತಂತ್ರ್ಯದ 50ನೇ ವರ್ಷದ ಸಂಭ್ರಮದ ಮೆರವಣಿಗೆಯಲ್ಲಿ ಪಿಎಂ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ರಕ್ಷಣಾ ಸಿಬ್ಬಂದಿಯ ತುಕಡಿಯೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ಪ್ರಧಾನಿ ಮೋದಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಕಡಲ ಭದ್ರತೆ, ನೀಲಿ ಆರ್ಥಿಕತೆ (Blue Economy), ರಕ್ಷಣಾ ಸಹಕಾರ ಮತ್ತು ಹವಾಮಾನ ಬದಲಾವಣೆಯ ತಡೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಸೀಶೆಲ್ಸ್ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿ ಉಭಯ ದೇಶಗಳ ಪರಿಸರ ಕಾಳಜಿಯ ಸಂಕೇತವಾಗಿ ವಿಶೇಷ ಮರ ನೆಡುವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version