ಸರ್ಕಾರ ಕೊಟ್ಟ ಭಾಷಣ ಓದದ ಗವರ್ನರ್: ಸದನದಲ್ಲೇ ಸಿಡಿದೆದ್ದ ಕಾಂಗ್ರೆಸ್ ನಾಯಕರು – Kannada News | Governor Skips Government Speech in Karnataka Assembly; Congress Opposes Gehlot’s Move
ರಾಜ್ಯಪಾಲರ ನಡೆಗೆ ಕಾಂಗ್ರೆಸಿಗರ ಆಕ್ರೋಶ ಬೆಂಗಳೂರು, ಜನವರಿ 22: ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲ ಅಧಿವೇಶನ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸರ್ಕಾರ ನೀಡಿದ ಭಾಷಣ ಓದದೆ, ಕೇವಲ ಎರಡು ಸಾಲು ಓದಿ ಅಧಿವೇಶನದಿಂದ ಹೊರನಡೆದಿದ್ದಾರೆ. ಗವರ್ನರ್ ನಡೆಗೆ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರ ನಿರ್ಗಮನ ವೇಳೆ ಘೋಷಣೆ ಕೂಗುವ ಮೂಲಕ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಜಂಟಿ ಅಧಿವೇಶನ ಹೈಡ್ರಾಮಾಗೆ ಸಾಕ್ಷಿಯಾಗಿದೆ. ಗವರ್ನರ್ ಅಡ್ಡಗಟ್ಟಿದ…