‘ವೈಭವ್​ನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ’; ರಾಹುಲ್ ದ್ರಾವಿಡ್ – Kannada News | Rahul Dravid on Vaibhav Sooryavanshi’s Talent and International Cricket Opportunity

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಯಾವ ಸರಣಿಯಲ್ಲಿ ತಂಡದಲ್ಲಿ ಆಡುವ ಅವಕಾಶ ಸಿಗುತ್ತದೆ ಎಂಬುದು ಇದುವರೆಗೆ ಖಚಿತವಾಗಿಲ್ಲ. ಆದರೆ ಐರ್ಲೆಂಡ್ ಅಥವಾ ಇಂಗ್ಲೆಂಡ್‌ ವಿರುದ್ಧದ ಯಾವುದಾದರೂ ಒಂದು ಸರಣಿಯಲ್ಲಾದರೂ ವೈಭವ್ ಆಡುವುದು ಖಚಿತ. ಹೀಗಾಗಿ ವೈಭವ್​ಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈಗಾಗಲೇ ಕ್ರಿಕೆಟ್ ಪಂಡಿತರು ವೈಭವ್​ಗೆ ಸಲಹೆಗಳನ್ನು ನೀಡುವುದರ ಜೊತೆಗೆ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ. ಈ ನಡುವೆ, ವೈಭವ್ ಸೂರ್ಯವಂಶಿನ ಐಪಿಎಲ್‌ಗೆ ಪರಿಚಯಿಸಿದ ರಾಹುಲ್ ದ್ರಾವಿಡ್, ಸೂರ್ಯವಂಶಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಭವ್ ಈ ಮಟ್ಟವನ್ನು ತಲುಪಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅವರನ್ನು ರಕ್ಷಿಸುವುದು ಬಹಳ ಮುಖ್ಯ. ಅವನಿಗೆ ಮುಕ್ತವಾಗಿ ಆಡುವ ಸ್ವಾತಂತ್ರ್ಯವನ್ನು ನೀಡಬೇಕು ಎಂದಿದ್ದಾರೆ.

ವೈಭವ್ ಬಗ್ಗೆ ದ್ರಾವಿಡ್ ಹೇಳಿದ್ದೇನು?

ವೈಭವ್ ಸೂರ್ಯವಂಶಿ ಅವರ ಚೊಚ್ಚಲ ಪಂದ್ಯಕ್ಕೂ ಮುನ್ನ ಬಿಬಿಸಿ ಜೊತೆ ಮಾತನಾಡಿದ ರಾಹುಲ್ ದ್ರಾವಿಡ್, ‘ವೈಭವ್ ಅವರನ್ನು ಸುರಕ್ಷಿತವಾಗಿಡುವುದು ಮುಖ್ಯ. ಅವರಿಗೆ ಬೆಂಬಲ ಮತ್ತು ಸಹಾಯ ಬೇಕು. ಆದಾಗ್ಯೂ, ಅವರಿಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡಬೇಕು. ವೈಭವ್ ತುಂಬಾ ವಿಶೇಷ ವ್ಯಕ್ತಿ ಮತ್ತು ಅವರಂತಹ ಕ್ರಿಕೆಟಿಗನನ್ನು ಹುಟ್ಟಿಹಾಕಲು ಯಾವುದೇ ಸೂತ್ರವಿಲ್ಲ . ಅವರು ಅಸಾಧಾರಣ ಪ್ರತಿಭೆ. ಅವರು ಬೌಲರ್‌ಗಳ ಚಲನವಲನಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು ಮತ್ತು ಅವರ ಕ್ರಿಕೆಟ್ ತಿಳುವಳಿಕೆ ಮತ್ತು ನಿರ್ಭೀತ ವರ್ತನೆ ಅದ್ಭುತವಾಗಿದೆ. ಸೂರ್ಯವಂಶಿಯಂತಹ ಆಟಗಾರನನ್ನು ಸೃಷ್ಟಿಸಲು ಯಾವುದಾದರೂ ಸಿದ್ಧ ಅಸ್ತ್ರವಿದೆ ಎಂದು ನಾನು ಭಾವಿಸುವುದಿಲ್ಲ. ನೀವು ಯಾವುದೇ ಮಗುವನ್ನು ತೆಗೆದುಕೊಂಡು ಅವನಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಿದರು ಅವನು ಇಷ್ಟು ಒಳ್ಳೆಯ ಆಟಗಾರನಾಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಐರ್ಲೆಂಡ್ ವಿರುದ್ಧ ಅಬ್ಬರಿಸುವ ಮುನ್ನವೇ ಭಾರತದ ಬೌಲರ್​ಗಳ ಬೆಂಡೆತ್ತಿದ ವೈಭವ್; ವಿಡಿಯೋ

ಸೂರ್ಯವಂಶಿಗೆ ಅವಕಾಶ ಸಿಗುತ್ತಾ?

ವೈಭವ್ ಸೂರ್ಯವಂಶಿ ಐರ್ಲೆಂಡ್ ಸರಣಿಯಲ್ಲಿ ಪಾದಾರ್ಪಣೆ ಮಾಡುವುದು ಸ್ವಲ್ಪ ಕಷ್ಟ. ಇಲ್ಲಿ ದೊಡ್ಡ ಪ್ರಶ್ನೆ ಏನೆಂದರೆ, ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದರೆ, ಪ್ಲೇಯಿಂಗ್​ 11ನಿಂದ ಯಾರನ್ನು ಕೈಬಿಡಲಾಗುತ್ತದೆ ಎಂಬುದು. ಏಕೆಂದರೆ ವಿಶ್ವದ ನಂ. 1 ಟಿ20 ಆಟಗಾರ ಅಭಿಷೇಕ್ ಶರ್ಮಾ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ 11ನಿಂದ ಹೊರಗಿಡುವುದು ಕಷ್ಟ. ನಂ. 3 ರಲ್ಲಿ, ಇಶಾನ್ ಕಿಶನ್ ಅವರಂತಹ ಬ್ಯಾಟ್ಸ್‌ಮನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಸೂರ್ಯವಂಶಿ ಯಾವಾಗ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:42 pm, Fri, 26 June 26

Source link

‘ವಾರಣಾಸಿ’ ಚಿತ್ರೀಕರಣದ ಬಾಕಿ ಇರುವುದೆಷ್ಟು? ಮಾಹಿತಿ ನೀಡಿದ ರಾಜಮೌಳಿ – Kannada News | Rajamouli says Varanasi movie shooting will complete 90 percent

ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ವಾರಣಾಸಿ’ ಸಿನಿಮಾ ಇದೀಗ ವಿಶ್ವ ಚಿತ್ರರಂಗದಲ್ಲಿ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಅಡ್ವೆಂಚರಸ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೀಗಿರುವಾಗ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು ರಾಜಮೌಳಿ ಹಂಚಿಕೊಂಡಿದ್ದಾರೆ.

‘ವಾರಣಾಸಿ’ ಸಿನಿಮಾದ ಟೀಸರ್, ಪೋಸ್ಟರ್​​ಗಳು ಈಗಾಗಲೇ ಸಖತ್ ಸದ್ದು ಮಾಡುತ್ತಿವೆ. ಸಿನಿಮಾದ ಬಗ್ಗೆ ನಾನಾ ರೀತಿಯ ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೃಥ್ವಿರಾಜ್ ಸುಕುಮಾರ್, ಸಿನಿಮಾದ ಒಂದು ಸಣ್ಣ ದೃಶ್ಯಕ್ಕೆ 100 ಟೇಕ್​​ಗಳನ್ನು ತೆಗೆದುಕೊಂಡ ಬಗ್ಗೆ ಹೇಳಿಕೊಂಡಿದ್ದರು. ಆ ಮಟ್ಟಿಗೆ ಸಿನಿಮಾವನ್ನು ಬಲು ಜಾಗೃತೆಯಿಂದ ಮತ್ತು ಪೂರ್ಣ ಗುಣಮಟ್ಟದಿಂದ ನಿರ್ಮಾಣ ಮಾಡಲಾಗುತ್ತಿದೆ.

ಪ್ರಸ್ತುತ ಚಿತ್ರೀಕರಣದ ಹಂತದಲ್ಲಿರುವ ಈ ಸಿನಿಮಾ ಬಗ್ಗೆ ನಿರ್ದೇಶಕ ರಾಜಮೌಳಿ ಅಪ್​​ಡೇಟ್ ನೀಡಿದ್ದಾರೆ, ‘ವಾರಣಾಸಿ’ ಸಿನಿಮಾ ಚಿತ್ರೀಕರಣದ ಪ್ರಮುಖ ಭಾಗವನ್ನು ಪೂರ್ಣಗೊಳಿಸಿದ್ದೇವೆ. ಇದು ಸಿನಿಮಾದ ಅತ್ಯಂತ ಪ್ರಮುಖ ಮತ್ತು ಬಲು ಅದ್ಧೂರಿ ಆಕ್ಷನ್ ದೃಶ್ಯವಾಗಿತ್ತು. ಅದರ ಚಿತ್ರೀಕರಣವನ್ನು ನಾವು ಮುಗಿಸಿದ್ದೇವೆ ಎಂದು ರಾಜಮೌಳಿ ಹೇಳಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಎಲ್ಲ ಪ್ರಮುಖ ದೃಶ್ಯಗಳ ಚಿತ್ರೀಕರಣಗಳು ಸಹ ಮುಗಿದಿದ್ದು, ಇನ್ನೇನಿದ್ದರು ಸಣ್ಣ-ಸಣ್ಣ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನು ಹೆಚ್ಚು ಚಿತ್ರೀಕರಣ ಉಳಿದಿಲ್ಲ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಸಿನಿಮಾದ ಪೂರ್ಣ ಚಿತ್ರೀಕರಣ ಮುಗಿಯಲಿದೆ’ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ:‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ

‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಮಾದರಿಯಲ್ಲಿ ನಿರ್ಮಿಸುತ್ತಿರುವ ಬಗ್ಗೆ ರಾಜಮೌಳಿ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದಾರೆ. ‘ನಮ್ಮ ಕಣ್ಣುಗಳು ಸಿನಿಮಾ ಸ್ಕೋಪ್ ಫಾರ್ಮ್ಯಾಟ್‌ಗೆ ಒಗ್ಗಿಕೊಂಡಿವೆ, ನನಗೂ ಅದು ಇಷ್ಟ. ಆದರೆ, ‘ವಾರಣಾಸಿ’ ಸಿನಿಮಾದ ಕಥೆ ಐಮ್ಯಾಕ್ಸ್‌ನಲ್ಲಿ ಅದ್ಭುತವಾಗಿ ಇರುತ್ತದೆ ಎಂದು ಮೊದಲಿನಿಂದಲೂ ಅಂದುಕೊಂಡಿದ್ದೇವೆ. ಹಾಗಂತ ಈ ಫಾರ್ಮ್ಯಾಟ್‌ಗಾಗಿ ಕಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಸಣ್ಣಪುಟ್ಟ ಹೊಂದಾಣಿಕೆಗಳನ್ನು ಮಾತ್ರ ಮಾಡಿದ್ದೇವೆ. ಐಮ್ಯಾಕ್ಸ್ ಮತ್ತು ಸಿನಿಮಾ ಸ್ಕೋಪ್ ಎರಡಕ್ಕೂ ಹೊಂದಿಕೆಯಾಗುವಂತೆ ದೃಶ್ಯಗಳನ್ನು ಫ್ರೇಮ್ ಮಾಡುತ್ತಿದ್ದೇವೆ’ ಎಂದು ವಿವರಿಸಿದ್ದಾರೆ.

‘ವಾರಣಾಸಿ’ ಸಿನಿಮಾದ ಚಿತ್ರೀಕರಣವನ್ನು ಹೈದರಾಬಾದ್, ಮಸೈ ಮಾರಾ, ರಾಜಸ್ಥಾನ, ಜೈಪುರ, ಅಮೆಜಾನ್ ಅರಣ್ಯ ಪ್ರದೇಶ ಇನ್ನೂ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Love Horoscope: ಈ ವಾರ ನಿಮ್ಮ ಪ್ರೇಮ ಜೀವನ ಹೇಗಿರಲಿದೆ? 12ರಾಶಿಗಳ ವಾರದ ಪ್ರೇಮ-ಪ್ರೀತಿ ಭವಿಷ್ಯ ಇಲ್ಲಿದೆ – Kannada News | Weekly Love Horoscope June 28 July 5 : Zodiac Predictions for Your Love Life

ವಾರದ ಪ್ರೇಮ-ಪ್ರೀತಿ ಭವಿಷ್ಯImage Credit source: Getty Images

ಜೂನ್ 28ರಿಂದ ಜುಲೈ 05ರವರೆಗೆ ಪ್ರೇಮಕ್ಕೆ ಸಂಬಂಧಿಸಿದಂತೆ ಅಪಹಾಸ್ಯಗಳು ನಡೆಯಬಹುದು. ಸಂಬಂಧವನ್ನು ತಪ್ಪಿಸುವ ಬಗ್ಗೆ ಅನ್ಯರಿಂದ ಬಹಳ ಗೌಪ್ಯವಾಗಿರಲಿದೆ. ಎಲ್ಲವನ್ನೂ ಗೆಲ್ಲವು ಸಾಮರ್ಥ್ಯ ಇದ್ದರೂ ಎಡವುವುದೂ ಇರಲಿದೆ. ಇಡುವ ಹೆಜ್ಜೆಗಳು ದೃಢವಾಗಿರಲಿ.

ಮೇಷ ರಾಶಿ:

ನಿಮ್ಮ ಪ್ರೇಮ ಜೀವನದಲ್ಲಿ ಈ ಅವಧಿಯು ಅತ್ಯಂತ ರೋಮಾಂಚನಕಾರಿಯಾಗಿರಲಿದೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಅಥವಾ ಸುಂದರ ಕ್ಷಣಗಳನ್ನು ಕಳೆಯುವಿರಿ. ಮನಸ್ತಾಪಗಳು ದೂರವಾಗಿ ಪ್ರೀತಿ ಹೆಚ್ಚುತ್ತದೆ. ಹೊಸ ಪ್ರೇಮ ಪ್ರಸ್ತಾಪಕ್ಕೆ ಇದು ಸಕಾಲ.

ವೃಷಭ ರಾಶಿ:

ಮಂಗಳನ ಪ್ರಭಾವದಿಂದ ಪ್ರೇಮದಲ್ಲಿ ಕೊಂಚ ಹಠದ ಸ್ವಭಾವ ಕಾಣಿಸಬಹುದು. ಆದರೆ ಶುಕ್ರನ ಶುಭ ದೃಷ್ಟಿಯಿಂದ ಸಂಗಾತಿಯು ನಿಮ್ಮನ್ನು ಅರ್ಥಮಾಡಿಕೊಳ್ಳುವರು. ಮಾತುಗಳಲ್ಲಿ ಮಧುರತೆ ಇರಲಿ, ಹಳೆಯ ಮುನಿಸುಗಳನ್ನು ಮರೆತು ಒಂದಾಗಲು ಈ ಸಮಯ ಉತ್ತಮವಾಗಿದೆ.

ಮಿಥುನ ರಾಶಿ:

​ಸೂರ್ಯನ ಪ್ರಭಾವದಿಂದ ಪ್ರೀತಿಯಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಸಂಗಾತಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಿ. ಪ್ರೇಮಿಗಳ ನಡುವೆ ನಂಬಿಕೆ ಗಟ್ಟಿಯಾಗುತ್ತದೆ. ಅವಿವಾಹಿತರಿಗೆ ಮನಸ್ಸಿಗೊಪ್ಪುವ ಸಂಗಾತಿ ಸಿಗುವ ಸುಂದರ ಯೋಗವಿದೆ.

ಕರ್ಕಾಟಕ ರಾಶಿ:

​ಗುರು ಮತ್ತು ಬುಧನ ಆಶೀರ್ವಾದದಿಂದ ನಿಮ್ಮ ಪ್ರೇಮ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಸಂಗಾತಿಯು ನಿಮ್ಮ ಭಾವನೆಗಳಿಗೆ ಗೌರವ ನೀಡುತ್ತಾರೆ. ಪರಸ್ಪರ ಪ್ರೀತಿ ಮತ್ತು ಬದ್ಧತೆ ಹೆಚ್ಚಾಗಲಿದ್ದು, ಪ್ರೇಮ ಸಂಬಂಧವು ಮುಂದಿನ ಹಂತಕ್ಕೆ ಅಂದರೆ ವಿವಾಹಕ್ಕೆ ತಿರುಗಬಹುದು.

ಸಿಂಹ ರಾಶಿ:

​ನಿಮ್ಮದೇ ರಾಶಿಯಲ್ಲಿ ಶುಕ್ರನಟ್ಟಿರುವುದರಿಂದ ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಸಂಗಾತಿ ನಿಮ್ಮ ಪ್ರೀತಿಯ ಜಾಲದಲ್ಲಿ ಬೀಳುವುದು ಖಂಡಿತ. ಪ್ರೇಮ ಜೀವನ ಅತ್ಯಂತ ಮಧುರ ಹಾಗೂ ರೋಮ್ಯಾಂಟಿಕ್ ಆಗಿರುತ್ತದೆ. ಉಡುಗೊರೆಗಳ ವಿನಿಮಯದಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.

ಕನ್ಯಾ ರಾಶಿ:

​ಪ್ರೇಮ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಆದರೆ ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ಅತಿಯಾದ ನಿರೀಕ್ಷೆ ಬೇಡ, ಪ್ರೀತಿಯನ್ನು ಸಹಜವಾಗಿ ಹರಿಯಲು ಬಿಟ್ಟರೆ ನೆಮ್ಮದಿ ಸಿಗುತ್ತದೆ.

ತುಲಾ ರಾಶಿ:

​ನಿಮ್ಮ ರಾಶ್ಯಾಧಿಪತಿ ಶುಕ್ರನ ಶುಭ ಸ್ಥಾನದಿಂದಾಗಿ ಪ್ರೇಮ ಜೀವನದಲ್ಲಿ ಸಂತೋಷ ತುಂಬಿರುತ್ತದೆ. ಪ್ರೇಮಿಗಳ ನಡುವೆ ಇದ್ದ ಗೊಂದಲಗಳು ಬಗೆಹರಿಯಲಿವೆ. ಸಂಗಾತಿಯೊಂದಿಗೆ ಸಂತೋಷದ ದಿನಗಳನ್ನು ಕಳೆಯುವಿರಿ. ಹೊಸ ಸಂಬಂಧಗಳು ದೀರ್ಘಕಾಲದವರೆಗೆ ಗಟ್ಟಿಯಾಗಿ ಉಳಿಯಲಿವೆ.

ವೃಶ್ಚಿಕ ರಾಶಿ :

ಭಾವನಾತ್ಮಕವಾಗಿ ಈ ಸಮಯ ಅತ್ಯಂತ ಆಳವಾದ ಪ್ರೀತಿಯನ್ನು ತರಲಿದೆ. ಸಂಗಾತಿಯ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಪರಸ್ಪರರ ಕಷ್ಟ ಸುಖಗಳಲ್ಲಿ ಭಾಗಿಯಾಗುವಿರಿ. ಪ್ರೇಮ ವಿಷಯದಲ್ಲಿ ಕುಟುಂಬದವರ ಬೆಂಬಲ ಸಿಗುವ ಸಾಧ್ಯತೆ ಇದ್ದು, ಮನಸ್ಸು ಪ್ರಫುಲ್ಲವಾಗಿರುತ್ತದೆ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

ಧನು ರಾಶಿ :

ಲಗ್ನದಲ್ಲೇ ಧನು ರಾಶಿ ಇರುವುದರಿಂದ ಪ್ರೀತಿಯಲ್ಲಿ ಹೊಸ ಆಶಾಕಿರಣ ಮೂಡಲಿದೆ. ಸಂಗಾತಿಯು ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ದೂರದ ಪ್ರಯಾಣವು ನಿಮ್ಮಿಬ್ಬರ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಹಳೆಯ ಪ್ರೀತಿ ಮರಳಿ ಬರಬಹುದು.

ಮಕರ ರಾಶಿ :

​ಪ್ರೇಮ ಸಂಬಂಧದಲ್ಲಿ ಪ್ರಬುದ್ಧತೆ ಕಾಣಿಸುತ್ತದೆ. ಸಂಗಾತಿಯೊಂದಿಗೆ ಆಳವಾದ ವಿಷಯಗಳ ಬಗ್ಗೆ ಚರ್ಚಿಸುವಿರಿ. ಅನಗತ್ಯ ಸಂಶಯಗಳಿಗೆ ಇಲ್ಲಿ ಜಾಗ ನೀಡಬೇಡಿ. ಪರಸ್ಪರ ನಂಬಿಕೆಯೇ ನಿಮ್ಮ ಪ್ರೇಮದ ಯಶಸ್ಸಿನ ಸೂತ್ರವಾಗಲಿದೆ. ಪ್ರೀತಿಯಲ್ಲಿ ಜವಾಬ್ದಾರಿ ಹೆಚ್ಚಾಗುವ ಕಾಲವಿದು.

ಕುಂಭ ರಾಶಿ:

​ಚಂದ್ರ ಮತ್ತು ರಾಹುವಿನ ಸ್ಥಿತಿಯಿಂದ ಮನಸ್ಸಿನಲ್ಲಿ ಕೊಂಚ ಗೊಂದಲವಿರಬಹುದು. ಪ್ರೀತಿಯಲ್ಲಿ ಯಾವುದೇ ತರಾತುರಿಯ ನಿರ್ಧಾರ ಬೇಡ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸಿ. ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಪ್ರೇಮ ಜೀವನವು ಸುಂದರವಾಗಿ ಮತ್ತು ಸುಖಮಯವಾಗಿ ಸಾಗುವುದರಲ್ಲಿ ಸಂಶಯವಿಲ್ಲ.

ಮೀನ ರಾಶಿ:

​ಶನಿಯ ಪ್ರಭಾವವಿದ್ದರೂ ಪ್ರೀತಿಯಲ್ಲಿ ಸ್ಥಿರತೆ ಇರಲಿದೆ. ಸಂಗಾತಿಯು ನಿಮ್ಮ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಪ್ರೇಮ ವಿವಾಹ ಆಕಾಂಕ್ಷಿಗಳಿಗೆ ಈ ಅವಧಿಯಲ್ಲಿ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಪರಸ್ಪರ ಗೌರವ ಮತ್ತು ಮಧುರ ಮಾತುಗಳು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತವೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರಿದಾದ ಮೂರು ರಾಜ್ಯಗಳ ಜೀವನಾಡಿ: ಹೊಸ ಕ್ರಸ್ಟ್​​ಗೇಟ್​​ಗಳನ್ನು ಕಂಡ ತುಂಗಭದ್ರಾ ಜಲಾಶಯವೀಗ ಭಣಭಣ – Kannada News | Water Crisis Looms: Tungabhadra Dam Storage Drops to Just 9 TMC After Weak Monsoon

ಕೊಪ್ಪಳ, ಜೂನ್​​ 26: ಮೂರು ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್​​ ಗೇಟ್​​ಗಳನ್ನು ನಿನ್ನೆಯಷ್ಟೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಲೋಕಾರ್ಪಣೆ ಗೊಳಿಸಿದ್ದರು. ಈ ವಿಚಾರ ಇದೇ ಡ್ಯಾಂನ ನೀರು ನಂಬಿಕೊಂಡಿದ್ದ ಲಕ್ಷಾಂತರ ಮಂದಿಯ ಸಂತಸಕ್ಕೆ ಕಾರಣವಾಗಿತ್ತು. ಆದರೆ ಈ ಸಂತಸದ ನಡುವೆಯೇ ಆತಂಕ ಪಡಬೇಕಾದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 41 ಟಿಎಂಸಿ ನೀರು ಜಲಾಶಯದಲ್ಲಿ ಕಡಿಮೆಯಾಗಿರೋದು, ಮುಂದೇನೆಂಬ ಪ್ರಶ್ನೆ ಹುಟ್ಟುಹಾಕಿದೆ.

ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 50 ಟಿಎಂಸಿ ನೀರಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣಕ್ಕೆ ಡ್ಯಾಂನಲ್ಲಿ ಸದ್ಯ ಲಭ್ಯವಿರೋದು ಕೇವಲ 9 ಟಿಎಂಸಿ ನೀರು ಮಾತ್ರ. ಆದರೆ ಇದೇ ನೀರನ್ನು ನಂಬಿಕೊಂಡು ಕರ್ನಾಟಕದ ವಿಜಯನಗರ, ಬಳ್ಳಾರಿ,ಕೊಪ್ಪಳ, ರಾಯಚೂರು ಜನರಿದ್ದಾರೆ. ಸಾಲದಕ್ಕೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಕೂಡ ಇದರ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಭವಿಷ್ಯದ ಆತಂಕ ತಲೆದೋರಿದ್ದು, ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ

ಕೃಷಿಕರು ಕಂಗಾಲು

ಲಕ್ಷಾಂತರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರುಣಿಸೋದು ಕೂಡ ಇದೇ ಜಲಾಶಯದ ನೀರು. ಬಿತ್ತನೆ ಕಾರ್ಯ ಆರಂಭಿಸಬೇಕಾದ ಈ ಸಂದರ್ಭದಲ್ಲಿ ಬೆಳೆಗೆ ನೀರು ಸಿಗುತ್ತಾ? ಇಲ್ಲವಾ? ಎಂಬ ಗೊಂದಲದಲ್ಲಿ ಅನ್ನದಾತರಿದ್ದು, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಕೇವಲ ಜಲಾಶಯದ ನೀರಿನ ಅವಲಂಬನೆಯೇ ರೈತರಿಗಿರುವ ಏಕೈಕ ಆಯ್ಕೆಯಾಗಿದೆ. ಹೀಗಾಗಿ ತಕ್ಷಣವೇ ಬರ ಘೋಷಣೆ ಮಾಡಿ ಎಂಬ ಆಗ್ರಹವೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುತ್ತತ್ತಿಯಲ್ಲಿ ಐದು ಜನ ಜಲಸಮಾಧಿ: ಕಾವೇರಿ ನದಿಯಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸಚಿವರ ಸೂಚನೆ – Kannada News | Minister ramalinga reddy instruct Mandya DC For install barricade Across cauvery river

ಬೆಂಗಳೂರು/ಮಂಡ್ಯ, (ಜೂನ್ 26): ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಇತ್ತೀಚೆಗೆ ಒಂದೇ ಕುಟುಂಬದ ಐವರು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಎಚ್ಚೆತ್ತುಕೊಂಡಿದ್ದು, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾವೇರಿ ನದಿ ಸಾರ್ವಜನಿಕರ ರಕ್ಷಣೆಗಾಗಿ ‘ಸೇಫ್ ಜೋನ್’ ಬ್ಯಾರಿಕೇಡ್‌ಗಳು, ಜಾಗೃತಿ ಫಲಕಗಳು ಹಾಗೂ ಗೈಡ್‌ಗಳನ್ನು ನಿಯೋಜಿಸಿ, ನಿಗದಿತ ಸ್ಥಳದ ಹೊರಗೆ ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಗೈಡ್‌ಗಳನ್ನು ನಿಯೋಜಿಸಿ, ನಿಗದಿತ ಸ್ಥಳದ ಹೊರಗೆ ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಮೂಲದ ಐವರು ಕಾವೇರಿ ನದಿ ಪಾಲು: ದೇವಸ್ಥಾನಕ್ಕೆ ಹೋದವರು ಮಸಣಕ್ಕೆ

Source link

Balaramana Dinagalu Review: ಬೆಂಗಳೂರು ಭೂಗತ ಜಗತ್ತಿನ ಇನ್ನೊಂದು ರೆಟ್ರೋ ಅಧ್ಯಾಯ ‘ಬಲರಾಮನ ದಿನಗಳು’ – Kannada News | Balaramana Dinagalu Movie Review KM Chaitanya reveals one more chapter of Bengaluru Underworld

ಬಲರಾಮನ ದಿನಗಳು

UA

  • Time – 151 Minutes
  • Released – June 26, 2026
  • Language – Kannada
  • Genre – Action, Crime, Drama, Romantic

Cast – ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಅವಿನಾಶ್, ರಮೇಶ್ ಇಂದಿರ, ಪ್ರತಾಪ್ ನಾರಾಯಣ್ ಮುಂತಾದವರು.

Director – ಕೆ.ಎಂ. ಚೈತನ್ಯ

ಬೆಂಗಳೂರಿನ ಭೂಗತ ಲೋಕದ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಅವುಗಳ ಪೈಕಿ ‘ಆ ದಿನಗಳು’ ಸಿನಿಮಾಗೆ ಇರುವ ಸ್ಥಾನ ವಿಶೇಷವಾದದ್ದು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ಕೆ.ಎಂ. ಚೈತನ್ಯ ಅವರು ಈಗ ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾ ಮಾಡಿದ್ದಾರೆ. ಈ ಬಾರಿ ಕೂಡ ಅವರು ಬೆಂಗಳೂರಿನ ರೌಡಿಸಂ ಜಗತ್ತನ್ನು ತೆರೆಮೇಲೆ ತಂದಿದ್ದಾರೆ. ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ಈ ಚಿತ್ರದಲ್ಲಿ ಬಲರಾಮನ ಪಾತ್ರ ಮಾಡಿದ್ದಾರೆ. 1980 ಮತ್ತು 1990ರ ಕಾಲಘಟ್ಟದಲ್ಲಿ ಇದ್ದ ಬೆಂಗಳೂರು ಭೂಗತ ಜಗತ್ತಿನ ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕರು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ. ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಆ ದಿನಗಳು’, ‘ಸ್ಲಂ ಬಾಲ’, ‘ಎದೆಗಾರಿಕೆ’, ‘ಹೆಡ್ ಬುಷ್’ ಮುಂತಾದ ಸಿನಿಮಾಗಳನ್ನು ನೋಡಿದವರು ಈಗ ‘ಬಲರಾಮನ ದಿನಗಳು’ ಚಿತ್ರಕ್ಕೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ. ಅದರಲ್ಲೂ ‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಅವರೇ ‘ಬಲರಾಮನ ದಿನಗಳು’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ಅದೇ ಶೇಡ್ ಕಾಣಿಸಿದೆ. ಆದರೆ ಕೆಲವು ಬದಲಾವಣೆಗಳು ಕೂಡ ಇವೆ.

ಆ ಕಾಲದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಕುಖ್ಯಾತಿ ಪಡೆದಿದ್ದ ಪಾತ್ರಗಳು ‘ಬಲರಾಮನ ದಿನಗಳು’ ಸಿನಿಮಾದಲ್ಲೂ ಪ್ರೇಕ್ಷಕರ ಎದುರು ಬರುತ್ತವೆ. ಹಾಗಿದ್ದರೂ ಕೂಡ ಇಲ್ಲಿ ಬಲರಾಮನೇ ಕೇಂದ್ರ ಬಿಂದು. ರೌಡಿಸಂ ಜಗತ್ತಿಗೆ ಆತನ ಎಂಟ್ರಿ ಹೇಗೆ ಆಯಿತು? ಆತನ ಹೆಸರು ಯಾವ ಮಟ್ಟಕ್ಕೆ ಬೆಳೆಯಿತು? ಅವನ ಅಂತ್ಯ ಹೇಗಾಯಿತು ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ.

ಕೆ.ಎಂ. ಚೈತನ್ಯ ಅವರ ನಿರ್ದೇಶನ ಎಂಬ ಕಾರಣಕ್ಕೆ ‘ಆ ದಿನಗಳು’ ಚಿತ್ರವನ್ನೇ ತಲೆಯಲ್ಲಿ ಇಟ್ಟುಕೊಂಡು ‘ಬಲರಾಮನ ದಿನಗಳು’ ಸಿನಿಮಾವನ್ನು ನೋಡಿದರೆ ಪ್ರೇಕ್ಷಕರಿಗೆ ಒಂದು ಪ್ರಮುಖವಾದ ಬದಲಾವಣೆ ಕಾಣಿಸುತ್ತದೆ. ಭೂಗತ ಜಗತ್ತಿನ ಕಥೆ ಆಗಿದ್ದರೂ ಕೂಡ ‘ಆ ದಿನಗಳು’ ಸಿನಿಮಾದಲ್ಲಿ ರಕ್ತ ಕಾಣಿಸಿರಲಿಲ್ಲ. ಆದರೆ ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಹಾಗಲ್ಲ. ಈ ಬಾರಿ ಹೊಡಿ-ಬಡಿ ಸನ್ನಿವೇಶಕ್ಕೆ, ರಕ್ತಪಾತಕ್ಕೆ ನಿರ್ದೇಶಕರು ಅವಕಾಶ ನೀಡಿದ್ದಾರೆ. ಕಮರ್ಷಿಯಲ್ ದೃಷ್ಟಿಯಿಂದ ಅವರು ಒಂದಷ್ಟು ಅಂಶಗಳನ್ನು ಸೇರಿಸಿರುವುದು ಸ್ಪಷ್ಟವಾಗಿದೆ.

ನಟ ವಿನೋದ್ ಪ್ರಭಾಕರ್ ಅವರ ವೃತ್ತಿಜೀವನದಲ್ಲಿ ‘ಬಲರಾಮನ ದಿನಗಳು’ ಒಂದು ಗಮನಾರ್ಹ ಸಿನಿಮಾ ಎನಿಸಿಕೊಂಡಿದೆ. ನಟನೆ, ಕಥಾವಸ್ತು, ಪಾತ್ರವರ್ಗ ಸೇರಿದಂತೆ ಎಲ್ಲ ಆಯಾಮದಿಂದಲೂ ಅವರಿಗೆ ಈ ಚಿತ್ರ ವಿಶೇಷವಾಗಿದೆ. ಅಬ್ಬರವಿಲ್ಲದ ಅಭಿನಯ, ಗಟ್ಟಿಯಾದ ಕಥಾಹಂದರದಿಂದ ಅವರಿಗೆ ಈ ಚಿತ್ರ ಮತ್ತು ಪಾತ್ರ ಬಹಳ ಹೊಂದಿಕೆ ಆಗಿವೆ. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಅವರಂತಹ ಘಟಾನುಘಟಿ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶವನ್ನು ವಿನೋದ್ ಪ್ರಭಾಕರ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ.

ಪಾತ್ರವರ್ಗದ ಆಯ್ಕೆಯಲ್ಲಿ ಕೆ.ಎಂ. ಚೈತನ್ಯ ಅವರು ಈ ಬಾರಿ ಕೂಡ ಗೆದ್ದಿದ್ದಾರೆ. ಆಶಿಷ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ, ಅತುಲ್ ಕುಲಕರ್ಣಿ, ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಅವಿನಾಶ್, ರಮೇಶ್ ಇಂದಿರ, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್, ವಿನಯ್ ಗೌಡ, ರಜತ್, ಆದಿತ್ಯ ಆಶ್ರೀ ಮುಂತಾದ ಕಲಾವಿದರು ಈ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ. ತಮ್ಮ ಪಾತ್ರಗಳಿಗೆ ಅವರೆಲ್ಲ ಜೀವ ತುಂಬಿದ್ದಾರೆ.

ಇದನ್ನೂ ಓದಿ: ‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು

ಆ ಕಾಲದ ಬೆಂಗಳೂರನ್ನು ಕಟ್ಟಿಕೊಡುವಲ್ಲಿ ಚಿತ್ರತಂಡ ಶ್ರಮಿಸಿದೆ. ನಿಜಕ್ಕೂ ರೆಟ್ರೋ ಕಾಲದ ಬೆಂಗಳೂರನ್ನು ನೋಡಿದ ಅನುಭವ ಪ್ರೇಕ್ಷಕರಿಗೆ ಆಗುತ್ತದೆ. ಹೆಚ್.ಸಿ. ವೇಣು ಅವರ ಕೆಲಸ ಎದ್ದುಕಾಣುತ್ತದೆ. ಸಂತೋಷ್ ನಾರಾಯಣನ್ ಅವರ ಸಂಗೀತದಿಂದ ಸಿನಿಮಾ ಇನ್ನಷ್ಟು ಚೆನ್ನಾಗಿ ಮೂಡಿಬರುವಂತಾಗಿದೆ. ಭೂಗತ ಲೋಕದ ಸಹವಾಸ ಎಂದಿಗೂ ಒಳ್ಳೆಯದಲ್ಲ ಎಂಬ ಸಂದೇಶವನ್ನು ಕೂಡ ಈ ಸಿನಿಮಾದಲ್ಲಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐರ್ಲೆಂಡ್ ವಿರುದ್ಧ ಅಬ್ಬರಿಸುವ ಮುನ್ನವೇ ಭಾರತದ ಬೌಲರ್​ಗಳ ಬೆಂಡೆತ್ತಿದ ವೈಭವ್; ವಿಡಿಯೋ – Kannada News | Vaibhav Sooryavanshi Shines in Nets: Awaiting India T20 Debut in Ireland or England?

ಎರಡು ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ, ಐರ್ಲೆಂಡ್ (India vs Ireland ) ಪ್ರವಾಸ ಮಾಡಿದೆ. ಸರಣಿಯ ಮೊದಲ ಪಂದ್ಯ ಇಂದು ಅಂದರೆ ಜೂನ್ 26 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವೈಭವ್ ಸೂರ್ಯವಂಶಿ (Vaibhav Sooryavanshi) ಪಾದಾರ್ಪಣೆ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಪಂದ್ಯಕ್ಕೂ ಮುನ್ನ ವೈಭವ್ ನೆಟ್ಸ್​ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಬೆಲ್‌ಫಾಸ್ಟ್‌ನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ಸೂರ್ಯವಂಶಿ ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಕಳೆದರು. ಆ ಬಳಿಕ ಬೌಲಿಂಗ್​ನಲ್ಲೂ ತಮ್ಮ ಮ್ಯಾಜಿಕ್ ತೋರಿದ ಸೂರ್ಯವಂಶಿ, ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾರನ್ನು ಅಚ್ಚರಿಗೊಳಿಸಿದರು.

ನೆಟ್ಸ್​ನಲ್ಲಿ ವೈಭವ್ ಅಬ್ಬರ

ಮೊದಲು ಬ್ಯಾಟಿಂಗ್​ನಲ್ಲಿ ಬೆವರು ಹರಿಸಿದ ವೈಭವ್, ನೆಟ್ಸ್‌ನಲ್ಲಿ ಸಾಕಷ್ಟು ಸಮಯ ಕಳೆದರು. ಈ ವೇಳೆ ಅವರು ಟೀಂ ಇಂಡಿಯಾದ ಸ್ಟಾರ್ ಬೌಲರ್​ಗಳಿಗೂ ನಿರರ್ಗಳವಾಗಿ ದೊಡ್ಡ ದೊಡ್ಡ ಹೊಡೆತಗಳನ್ನು ಆಡಿದರು. ಇದೀಗ ಆ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆ ವೀಡಿಯೊದಲ್ಲಿ ಸೂರ್ಯವಂಶಿ, ನೋ-ಲುಕ್ ಶಾಟ್ ಅನ್ನು ಸಹ ಆಡುವ ಮೂಲಕ ತಮ್ಮ ಬ್ಯಾಟಿಂಗ್‌ ಶಸ್ತ್ರಾಗಾರಕ್ಕೆ ಹೊಸ ಅಸ್ತ್ರವನ್ನು ಸೇರಿಸಿಕೊಂಡಿದ್ದಾರೆ ಎಂಬುದು ಖಚಿತವಾದಂತ್ತಾಗಿದೆ.

ಬೌಲಿಂಗ್‌ನಲ್ಲೂ ವೈಭವ್ ಮ್ಯಾಜಿಕ್

ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ವೈಭವ್ ತಮ್ಮ ಮ್ಯಾಜಿಕ್ ತೊರಿದರು. ವೈಭವ್ ಸೂರ್ಯವಂಶಿ ಬೌಲಿಂಗ್ ಮಾಡುತ್ತಿದ್ದ ಅದೇ ನೆಟ್ಸ್‌ನಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದರು. ಸೂರ್ಯವಂಶಿ ಅವರ ಒಂದು ಎಸೆತದಲ್ಲಿ ಶರ್ಮಾ ದೊಡ್ಡ ಶಾಟ್ ಆಡಿದರು. ಆದರೆ ಮುಂದಿನ ಎಸೆತದಲ್ಲೇ ವೈಭವ್, ಅವರನ್ನು ಬ್ಲಫ್ ಮಾಡಿದರು. ಸೂರ್ಯವಂಶಿ ನಗುತ್ತಾ ತಮ್ಮ ಮುಖವನ್ನು ಮರೆಮಾಡಿದರು. ಸೂರ್ಯವಂಶಿಗೆ ತಾನು ಬ್ಲಫ್ ಮಾಡಿದ್ದೇನೆ ಎಂದು ನಂಬಲು ಸಾಧ್ಯವಾಗಲಿಲ್ಲ. ಸೂರ್ಯವಂಶಿ ಬ್ಯಾಟಿಂಗ್‌ ಜೊತೆಗೆ ಎಡಗೈ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡು ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಐರ್ಲೆಂಡ್ ತಯಾರಿ ಹೇಗಿದೆ?

ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್ ಜೋರಾಗಿದೆ. ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದಲ್ಲಿ ಆಸನಗಳ ವ್ಯವಸ್ಥೆಯನ್ನು ಹೆಚ್ಚಳ ಮಾಡಲಾಗಿದೆ. ಇದುವರೆಗೆ ವಿಶ್ವದ ಅತ್ಯುತ್ತಮ ಬೌಲರ್​ಗಳ ವಿರುದ್ಧ ಅಬ್ಬರಿಸಿರುವ ವೈಭವ್, ಐರ್ಲೆಂಡ್‌ ವಿರುದ್ಧ ಹೇಗೆ ಆಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ವೈಭವ್ ವಿರುದ್ಧ ಐರ್ಲೆಂಡ್​ನ ಯೋಜನೆ ಹೇಗಿರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಕ್ಯಾಲಿಟ್ಜ್,‘ನಮಗೆ ಎಲ್ಲಾ ಆಟಗಾರರು ಒಂದೆ. ನಾಳೆ ವಿರಾಟ್ ಕೊಹ್ಲಿ ಆಗಿರಲಿ, ಶ್ರೇಯಸ್ ಅಯ್ಯರ್ ಆಗಿರಲಿ ಅಥವಾ ಸೂರ್ಯವಂಶಿ ಆಡುತ್ತಿರಲಿ, ನಾವು ಅವರೆಲ್ಲರನ್ನೂ ಒಂದೇ ರೀತಿ ಪರಿಗಣಿಸುತ್ತೇವೆ.

ಈ ಹಿಂದಿನ ವೀಡಿಯೊಗಳನ್ನು ನೋಡುವ ಮೂಲಕ ನಾವು ತಂತ್ರ ರೂಪಿಸುತ್ತೇವೆ. ಆದರೆ ನೀವು ಎಷ್ಟು ಬೇಕಾದರೂ ಯೋಜಿಸಬಹುದು. ಆದರೆ ಪಂದ್ಯದ ದಿನದಂದು ಯಾರು ಉತ್ತಮವಾಗಿ ಆಡುತ್ತಾರೋ ಅವರು ಮೇಲುಗೈ ಸಾಧಿಸುತ್ತಾರೆ. ಆದಾಗ್ಯೂ ಅವರೆಲ್ಲರೂ ಉತ್ತಮ ಆಟಗಾರರು. ಅವರಲ್ಲಿ ಹೆಚ್ಚಿನ ದೌರ್ಬಲ್ಯಗಳಿಲ್ಲ, ಅವರು ವಿಶ್ವ ಚಾಂಪಿಯನ್‌ಗಳು. ಆದರೆ ಅವರೆಲ್ಲರನ್ನೂ ಒಂದೇ ರೀತಿ ನೋಡಲಾಗುತ್ತದೆ ಮತ್ತು ನಾವು ಅವರೆಲ್ಲರನ್ನೂ ಬೇಗನೇ ಔಟ್ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ. ಸಧ್ಯಕ್ಕೆ ಅದೇ ನಮ್ಮ ಯೋಜನೆ ಎಂದಿದ್ದಾರೆ.

IND vs IRE: ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್; ಕ್ರೀಡಾಂಗಣದಲ್ಲಿ ಆಸನಗಳ ಹೆಚ್ಚಳ

ಆಡುವ ಅವಕಾಶ ಸಿಗುತ್ತಾ?

ವೈಭವ್ ಸೂರ್ಯವಂಶಿಗೆ ಐರ್ಲೆಂಡ್‌ನಲ್ಲಿ ಅವಕಾಶ ಸಿಗದಿದ್ದರೆ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರಿಗೆ ಅವಕಾಶ ಸಿಗಬಹುದು. ಐರ್ಲೆಂಡ್ ನಂತರ, ಟೀಂ ಇಂಡಿಯಾ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಐದು ಪಂದ್ಯಗಳನ್ನು ಆಡುವುದರಿಂದ ಸೂರ್ಯವಂಶಿಗೆ ಅವಕಾಶ ಸಿಗುವುದು ಖಚಿತ. ಸೂರ್ಯವಂಶಿ ಚೊಚ್ಚಲ ಪ್ರವೇಶ ಮಾಡಿದರೆ, ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಸಚಿನ್ ಅವರ ದಾಖಲೆಯನ್ನು ಸಹ ಮುರಿಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Fri, 26 June 26

Source link

ನೀಟ್ ಸೋಲು ಜೀವನದ ಅಂತ್ಯವಲ್ಲ; ರೋಲ್ಸ್ ರಾಯ್ಸ್‌ನಲ್ಲಿ 72.3 ಲಕ್ಷ ರೂ. ಪ್ಯಾಕೇಜ್ ಪಡೆದು ಇತಿಹಾಸ ಸೃಷ್ಟಿಸಿದ 20ರ ಹರೆಯದ ಋತುಪರ್ಣ! – Kannada News | NEET Fail to Rolls Royce: Rutuparna’s Robotics Journey and 72.3 Lakh Package Success

ರಿತುಪರ್ಣಾ ಕೆ.ಎಸ್. Image Credit source: Twitter

ಪ್ರತಿ ವರ್ಷ ದೇಶದಲ್ಲಿ ನೀಟ್ (NEET) ಅಥವಾ ಜೆಇಇ (JEE) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿಗಳಲ್ಲಿ ಆತಂಕದ ದೊಡ್ಡ ಅಲೆಯೇ ಎದ್ದಿರುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟು ಸಿಗದೇ ಹೋದಾಗ ತಮ್ಮ ಕನಸೆಲ್ಲ ಮುಗಿದುಹೋಯಿತು ಎಂದೆನಿಸುತ್ತದೆ. ದುರದೃಷ್ಟವಶಾತ್, ಸಮಾಜ ಮತ್ತು ಕುಟುಂಬದ ನಿರೀಕ್ಷೆ ಹುಸಿಯಾಗಿ, ನೋವು  ತಾಳಲಾರದೆ ಕೆಲವರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಕೈಹಾಕುತ್ತಿದ್ದಾರೆ. ಆದರೆ, ಕೇವಲ 20 ವರ್ಷದ ರಿತುಪರ್ಣಾ ಕೆ.ಎಸ್. ಇಡೀ ದೇಶವೇ ತಿರುಗಿ ನೋಡುವಂತಹ ಹೊಸ ಇತಿಹಾಸ ಬರೆದಿದ್ದಾರೆ. ಒಂದು ಪರೀಕ್ಷೆಯ ಅಂಕಗಳು ನಮ್ಮ ಇಡೀ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇವರೇ ಜೀವಂತ ಉದಾಹರಣೆ.

ನೀಟ್ ಪರೀಕ್ಷೆಯಲ್ಲಿ ಅಂದುಕೊಂಡ ರ್ಯಾಂಕ್ ಸಿಗದೇ ವೈದ್ಯಕೀಯ ಸೀಟಿನಿಂದ ವಂಚಿತರಾಗಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಡೂರು ಗ್ರಾಮದ ಈ ಹೆಣ್ಣುಮಗಳು, ಇಂದು ಯಾವುದೇ ಐಐಟಿ (IIT) ಅಥವಾ ದೇಶದ ದೊಡ್ಡ ಹೆಸರಾಂತ ಕಾಲೇಜಿನ ಹಣೆಪಟ್ಟಿ ಇಲ್ಲದೆಯೇ ಜಗತ್ತಿನ ಪ್ರತಿಷ್ಠಿತ ಏರೋಸ್ಪೇಸ್ ಕಂಪನಿ ‘ರೋಲ್ಸ್ ರಾಯ್ಸ್’ (Rolls-Royce) ನಲ್ಲಿ ವಾರ್ಷಿಕ 72.3 ಲಕ್ಷ ರೂ. ಭಾರಿ ಪ್ಯಾಕೇಜ್‌ನೊಂದಿಗೆ ರೊಬೊಟಿಕ್ಸ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ವೈದ್ಯಕೀಯದ ಕನಸು ಭಗ್ನಗೊಂಡಾಗ ಧೃತಿಗೆಡದ ಛಲಗಾರ್ತಿ:

ಬಾಲ್ಯದಿಂದಲೂ ವೈದ್ಯೆಯಾಗಬೇಕೆಂದು ಕನಸು ಕಂಡಿದ್ದ ರಿತುಪರ್ಣಾ, ಪಿಯುಸಿ ನಂತರ ನೀಟ್ ಪರೀಕ್ಷೆಗಾಗಿ ಹಗಲಿರುಳು ಶ್ರಮಿಸಿದ್ದರು. ಆದರೆ ಫಲಿತಾಂಶ ಬಂದಾಗ ಸರ್ಕಾರಿ ವೈದ್ಯಕೀಯ ಸೀಟು ಕೈತಪ್ಪಿತ್ತು. ಆರಂಭದಲ್ಲಿ ತೀವ್ರ ನಿರಾಶೆಯಾದರೂ ಅವರು ಅಲ್ಲಿಗೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ಹಾದಿಯನ್ನು ಬದಲಾಯಿಸಿದ ಅವರು, 2022ರ ಸಿಇಟಿ ಕೌನ್ಸೆಲಿಂಗ್ ಮೂಲಕ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ‘ರೊಬೊಟಿಕ್ಸ್ ಮತ್ತು ಆಟೊಮೇಷನ್’ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದರು. ಐಐಟಿ ಬ್ರ್ಯಾಂಡ್ ಇಲ್ಲದಿದ್ದರೂ, ಹೊಸದನ್ನು ಸಾಧಿಸಬೇಕೆಂಬ ಜಲವಂತಿಕೆ ಅವರಲ್ಲಿತ್ತು.

ರೈತರ ಸಂಕಷ್ಟಕ್ಕೆ ರೊಬೊಟಿಕ್ಸ್ ಪರಿಹಾರ:

ಗ್ರಾಮೀಣ ಭಾಗದಿಂದ ಬಂದ ರಿತುಪರ್ಣಾ ಅವರಿಗೆ ರೈತರ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಕಾಲೇಜು ಸೇರಿದ ಕೆಲವೇ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಸೇರಿ ಅಡಿಕೆ ತೋಟಗಳಲ್ಲಿ ಕೊಯ್ಲು ಮಾಡಲು ಮತ್ತು ಕೀಟನಾಶಕ ಸಿಂಪಡಿಸಲು ನೆರವಾಗುವ ‘ಸ್ವಯಂಚಾಲಿತ ರೊಬೊಟಿಕ್ ವ್ಯವಸ್ಥೆ’ (Automated Robotic System) ಯನ್ನು ಅಭಿವೃದ್ಧಿಪಡಿಸಿದರು. ಈ ಆವಿಷ್ಕಾರವು ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ INEX ಸ್ಪರ್ಧೆಯಲ್ಲಿ ಪ್ರಸ್ತುತಗೊಂಡು, ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿತು. ಈ ಅದ್ಭುತ ಪ್ರತಿಭೆಯನ್ನು ಗುರುತಿಸಿದ ಎನ್‌ಐಟಿಕೆ (NITK) ಸುರತ್ಕಲ್‌ನ ಸಂಶೋಧನಾ ತಂಡವು, ‘ರೋಬೋಟಿಕ್ ನೆರವಿನ ಶಸ್ತ್ರಚಿಕಿತ್ಸೆ’ಯಂತಹ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಅವಕಾಶ ನೀಡಿತು.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ತಿರಸ್ಕಾರದಿಂದ ಜಾಗತಿಕ ಮನ್ನಣೆಯವರೆಗೆ, ರೋಲ್ಸ್ ರಾಯ್ಸ್ ಜರ್ನಿ:

ರಿತುಪರ್ಣಾ ಅವರ ರೋಲ್ಸ್ ರಾಯ್ಸ್ ಕಂಪನಿಯ ಜರ್ನಿ ಸುಲಭದ್ದಾಗಿರಲಿಲ್ಲ. ಇಂಟರ್ನ್‌ಶಿಪ್‌ಗಾಗಿ ರೋಲ್ಸ್ ರಾಯ್ಸ್‌ಗೆ ಅರ್ಜಿ ಸಲ್ಲಿಸಿದಾಗ, ಟೈರ್-3 (ಸಾಮಾನ್ಯ) ಕಾಲೇಜಿನ ವಿದ್ಯಾರ್ಥಿನಿ ಒಂದು ತಿಂಗಳಲ್ಲಿ ಕೊಟ್ಟ ಪ್ರಾಜೆಕ್ಟ್ ಮುಗಿಸಲು ಸಾಧ್ಯವೇ ಎಂದು ಕಂಪನಿಯ ಪ್ರತಿನಿಧಿಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ ರಿತುಪರ್ಣಾ, ಕಠಿಣವಾದ ಆ ಪ್ರಾಜೆಕ್ಟ್ ಅನ್ನು ಕೇವಲ ಒಂದೇ ವಾರದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಕಂಪನಿಯ ಅಧಿಕಾರಿಗಳು ಬೆರಗಾಗುವಂತೆ ಮಾಡಿದರು.

ಮಧ್ಯರಾತ್ರಿಯ ಕಠಿಣ ಪರಿಶ್ರಮ:

ಅವರ ವೇಗ ಮತ್ತು ಪ್ರತಿಭೆಯನ್ನು ಮೆಚ್ಚಿದ ಕಂಪನಿ ಹೆಚ್ಚಿನ ಜವಾಬ್ದಾರಿಗಳನ್ನು ನೀಡಿತು. ಸತತ 8 ತಿಂಗಳ ಕಾಲ ಕಾಲೇಜಿನ ಪಾಠಗಳ ಜೊತೆಗೆ, ದಿನಕ್ಕೆ ಕೇವಲ 4 ಗಂಟೆ ನಿದ್ರಿಸುತ್ತಾ, ಮಧ್ಯರಾತ್ರಿಯಿಂದ ಮುಂಜಾನೆ 6 ಗಂಟೆಯವರೆಗೆ ಶಿಫ್ಟ್‌ಗಳಲ್ಲಿ ಕೆಲಸ ಮಾಡಿ ಹಲವಾರು ಪ್ರಾಜೆಕ್ಟ್‌ಗಳನ್ನು ಮುಗಿಸಿದರು.

ಪ್ರತಿಭೆಗೆ ಸಿಕ್ಕ ಅಪ್ರತಿಮ ಗೌರವ:

ಡಿಸೆಂಬರ್ 2024 ರಲ್ಲಿ ಕಂಪನಿಯು ಆರಂಭದಲ್ಲಿ ಅವರಿಗೆ ವಾರ್ಷಿಕ 39.6 ಲಕ್ಷ ಸಂಬಳದ ಆಫರ್ ನೀಡಿತ್ತು. ಆದರೆ, ರೋಬೋಟ್ ಆಪರೇಟಿಂಗ್ ಸಿಸ್ಟಮ್ (ROS) ಮತ್ತು ಕಂಟ್ರೋಲ್ ಆಲ್ಗಾರಿದಮ್ಸ್‌ನಲ್ಲಿ ಅವರ ಅಸಾಧಾರಣ ಪ್ರತಿಭೆಯನ್ನು ಕಂಡು ಬೆರಗಾದ ರೋಲ್ಸ್ ರಾಯ್ಸ್, ಏಪ್ರಿಲ್ 2025 ರ ವೇಳೆಗೆ ಅವರ ಸಂಬಳವನ್ನು ಬರೋಬ್ಬರಿ 72.3 ಲಕ್ಷಕ್ಕೆ ಹೆಚ್ಚಿಸಿತು!

ಇಂದಿನ ಯುವ ಪೀಳಿಗೆಗೆ ಪ್ರಮುಖ ಸಂದೇಶ:

ಸಣ್ಣ ಸೋಲಿಗೇ ಹತಾಶರಾಗಿ, ಹೆತ್ತವರ ನಿರೀಕ್ಷೆಗಳಿಗೆ ಹೆದರಿ ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂದಿನ ವಿದ್ಯಾರ್ಥಿಗಳಿಗೆ ಋತುಪರ್ಣ ಅವರ ಈ ಯಶೋಗಾಥೆ ಒಂದು ಕಣ್ತೆರೆಸುವ ಪಾಠ.

ಮತ್ತಷ್ಟು ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: 

Source link

ವೈದ್ಯರ ನಿರ್ಲಕ್ಷ್ಯಕ್ಕೆ ಶಾಶ್ವತವಾಗಿ ಕಾಲು ಕಳೆದುಕೊಳ್ಳುವ ಸ್ಥಿತಿಯಲ್ಲಿ ಯುವಕ: ಆಗಿದ್ದೇನು? – Kannada News | Young Man on the Verge of Permanent Leg Loss Due to Alleged Doctor’s Negligence: What Happened

ನೆಲಮಂಗಲ, ಜೂನ್​​​ 26: ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ವೈದ್ಯರನ್ನ ಸಾಕ್ಷಾತ್​​ ದೇವರೆಂದು ಭಾವಿಸಲಾಗುತ್ತದೆ. ಹೀಗಿರುವಾಗ ವೈದ್ಯರು (Doctors) ಕೊಂಚ ಯಾಮಾರಿದರೂ ರೋಗಿಗಳ ಜೀವಕ್ಕೆ ಕುತ್ತು ಬರುವುದು ಗ್ಯಾರಂಟಿ. ಸದ್ಯ ಇಂತಹದೊಂದು ಒಂದು ಘಟನೆ ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ 21 ವರ್ಷದ ಯುವಕ ಯಶವಂತ್ ಕಾಲು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ನಡೆದಿದ್ದೇನು?

ನೆಲಮಂಗಲ ತಾಲೂಕಿನ ಹುಲುಕುಂಟೆ ನಿವಾಸಿ ಯಶವಂತ್, ಮೊದಲ ವರ್ಷದ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದಾನೆ. ಯಶವಂತ್​ಗೆ ತಂದೆ ಇಲ್ಲ. ಹೀಗಾಗಿ ಕುಟುಂಬದ ಜವಾಬ್ದಾರಿ ಈತನ ಮೇಲಿದೆ. ಹೀಗಾಗಿ ಬೆಳಿಗ್ಗೆ ಕಾಲೇಜು, ರಾತ್ರಿ ವೇಳೆ ಕೆಲಸಕ್ಕೆ ತೆರಳುತ್ತಿದ್ದ. ಕಳೆದ ಭಾನುವಾರ ಹುಲುಕೊಂಟೆ ಬಳಿ ಎರಡು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿತ್ತು. ಈ ವೇಳೆ ಆತನ ಬಲಗಾಲಿನ ಮಂಡಿ ಚಿಪ್ಪಿಗೆ ಪೆಟ್ಟು ಬಿದ್ದಿತ್ತು.

ಇದನ್ನೂ ಓದಿ: ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ: ದಾರುಣ ಅಂತ್ಯ ಕಂಡ ಯುವಕ

ಈ ವೇಳೆ ಕುಟುಂಬಸ್ಥರು ನೆಲಮಂಗಲ ಟೌನಲ್ಲಿರುವ ವಿಪಿ ಮಾಗ್ನಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಆಪರೇಷನ್ ಮಾಡಬೇಕು, ಒಂದುವರೆ ಲಕ್ಷ ರೂ ಖರ್ಚಾಗತ್ತೆ ಎಂದಿದ್ದಾರೆ. ಕೆಲ ಸಮಯ ಬಿಟ್ಟು ಸದ್ಯಕ್ಕೆ ಆಪರೇಷನ್ ಮಾಡುವ ಅಗತ್ಯವಿಲ್ಲ ಎಂದು ಡ್ರೆಸ್ಸಿಂಗ್ ಮಾಡಿ ಕಳುಹಿಸಿದ್ದಾರೆ.

ಕಾಲು ತೆಗೆಯಬೇಕು ಎಂದ ವೈದ್ಯರು

ಕಾಲು ನೋವು ತಾಳತಾರದೆ ಯಶವಂತ್ ಪರದಾಡಿದ್ದಾನೆ. ಕೂಡಲೆ ಹಾಸ್ಮಾಟ್, ಬಿಜಿಎಸ್, ಪೀಪಲ್ ಟ್ರೀ ಆಸ್ಪತ್ರೆ ಅಲೆದಾಡಿದ್ದಾನೆ. 8 ಗಂಟೆಗಳಲ್ಲಿ ಸರ್ಜರಿ ಮಾಡಬೇಕಿತ್ತು. ಈಗ ಕಾಲಿನ ನರದಲ್ಲಿ ರಕ್ತ ಹೆಪ್ಪು ಕಟ್ಟಿದೆ. ಇದೀಗ ಕಾಲು ತೆಗೆಯುವ ಪರಿಸ್ಥಿತಿ ಬಂದರೂ ಬರಬಹುದು ಎಂದಿದ್ದಾರೆ ವೈದ್ಯರು. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ನೆಲಮಂಗಲ ಟೌನ್ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜಾಜಿನಗರದಲ್ಲಿ ಅವಘಡ: ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ

ವಿಪಿ ಮಾಗ್ನಸ್ ಆಸ್ಪತ್ರೆಯವರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಕಾನೂನು ಮೂಲಕ ನಾವು ಉತ್ತರ ಕೊಡುತ್ತೇವೆ ಎಂದಿದ್ದಾರೆ. ಸದ್ಯ ನೆಲಮಂಗಲ ಟೌನ್ ಪೊಲೀಸರು ದೂರು ಪಡೆದಿದ್ದು, ಸಂಬಂಧಪಟ್ಟ ವೈದ್ಯಕೀಯ ಇಲಾಖೆಗೆ ಮಾಹಿತಿ ನೀಡಿ ನಂತರ ಕ್ರಮಕೈಗೊಳ್ಳಲಿದ್ದಾರೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ? – Kannada News | Cross Voting Row: BJP Leader MP Renukacharya Talks on BY Vijayendra

ಬೆಂಗಳೂರು, (ಜೂನ್ 26): ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರ ಅಡ್ಡಮತದಾನ ಮಾಡಿರುವುದು ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದನ್ನು ಹೈಕಮಾಂಡ್ ಸಹ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಎಲ್ಲಾ ಮಾಹಿತಿ ಪಡೆದುಕೊಂಡಿದೆ. ಆದ್ರೆ, ಇತ್ತ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿವೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಕೆಲ ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಈ ಬಗ್ಗೆ ಮಾಜಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಕೆಲ ಮೀರ್ ಸಾದಿಕ್‌ರು ಹಣ ಪಡೆದು ಅಡ್ಡಮತದಾನ ಮಾಡಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಆಗಿದ್ದನ್ನು ಸಹಿಸಲು ಆಗುತ್ತಿಲ್ಲ. ವಿಜಯೇಂದ್ರ‌ ಮುಖಕ್ಕೆ ಮಸಿ ಬಳಿಯುವ ಷಡ್ಯಂತ್ರ ಮಾಡ್ತಿದ್ದಾರೆ ಎಂದು ಮತ್ತೆ ಯಡಿಯೂರಪ್ಪ ವಿರೋಧಿ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಪರೋಕ್ಷವಾಗಿ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version