ಎಐನಿಂದ ಸದ್ಯದಲ್ಲೇ ಮನುಷ್ಯರಿಗೆ ಕೆಲಸ ಇಲ್ಲವಾಗುತ್ತೆ ಎನ್ನುತ್ತಿದ್ದ ಸ್ಯಾಮ್ ಆಲ್ಟ್ಮ್ಯಾನ್ ಬಾಯಿಂದ ಈಗ ಬೇರೆಯೇ ಮಾತು – Kannada News | OpenAI CEO Sam Altman: AI Won’t Cause Job Apocalypse; Human Connection Prevails
ಸಿಡ್ನಿ, ಮೇ 26: ಕೃತಕ ಬುದ್ಧಿಮತ್ತೆ (AI) ಜಗತ್ತನ್ನು ಆವರಿಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಬಿಳಿ ಕಾಲರ್ (White-collar) ಉದ್ಯೋಗಗಳು ನಾಶವಾಗಬಹುದು ಎಂಬ ಭೀತಿ ಜಗತ್ತಿನಾದ್ಯಂತ ಸೃಷ್ಟಿಯಾಗಿತ್ತು. ಆದರೆ, ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಅವರೇ ಈಗ ಸಮಾಧಾನಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮನುಷ್ಯರ ಹೆಚ್ಚಿನ ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ ಎಂದು ಕಳೆದ ವರ್ಷ ಹೇಳುತ್ತಿದ್ದ ಸ್ಯಾಮ್ ಆಲ್ಟ್‌ಮನ್ ಇದೀಗ ತಮ್ಮ ಅಭಿಪ್ರಾಯವನ್ನೇ ಬದಲಿಸಿದ್ದಾರೆ. AI ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಜಗತ್ತಿನಲ್ಲಿ ಉದ್ಯೋಗಗಳ ಮಹಾ ಪ್ರಳಯ ಅಥವಾ ಸರ್ವನಾಶ…