Headlines

ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ – Kannada News | Manchu Manoj did haircut to an orphan watch video

ತೆಲುಗಿನ ಜನಪ್ರಿಯ ನಟ ಮಂಚು ಮನೋಜ್ (Manchu Manoj), ತಮ್ಮ ಕುಟುಂಬ ಜಗಳಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ಆದರೆ ಇದೀಗ ತಮ್ಮ ಸಾಮಾಜಿಕ ಕಾರ್ಯದಿಂದಲೂ ಸುದ್ದಿಗೆ ಬಂದಿದ್ದಾರೆ. ಅನಾಥಾಶ್ರಮವೊಂದರ ಜೊತೆಗೆ ಕೈಜೋಡಿಸಿರುವ ನಟ ಮಂಚು ಮನೋಜ್, ಇದೀಗ ರಸ್ತೆಯಲ್ಲಿ ದಿಕ್ಕು ದೆಸೆ ಇಲ್ಲದೇ ಇದ್ದ ಅನಾಥ ಭಿಕ್ಷುಕನೊಬ್ಬನಿಗೆ ಖುದ್ದು ತಾವೇ ಹೇರ್ ಕಟ್ ಮಾಡಿ ಆರೈಕೆ ಮಾಡಿದ್ದು, ಆತ ಮತ್ತೆ ಸಾಮಾನ್ಯ ಜನರಂತೆ ಕಾಣಲು ಸಹಾಯ ಮಾಡಿದ್ದಾರೆ ಅಲ್ಲದೆ ಆತನ ಆರೈಕೆಗೆ ವ್ಯವಸ್ಥೆಗಳನ್ನು ಸಹ ಮಾಡಿಕೊಟ್ಟಿದ್ದಾರೆ. ಭಿಕ್ಷುಕನ ಹೇರ್…

Read More

ಚಿಕ್ಕಮಗಳೂರಲ್ಲಿ ವರುಣಾರ್ಭಟ: ಮನೆಗಳಿಗೆ ನುಗ್ಗಿದ ಚರಂಡಿ ನೀರು, ಮರ ಬಿದ್ದು ರಸ್ತೆ ಬಂದ್​​ – Kannada News | Chikkamagaluru Rain Fury: Heavy Showers Flood Houses; Tree Fall Block Roads

ಮನೆಗಳಿಗೆ ನುಗ್ಗಿದ ನೀರುImage Credit source: Tv9 Kannada ಚಿಕ್ಕಮಗಳೂರು, ಮೇ 26: ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಮುಳ್ಳಯ್ಯನಗಿರಿ ಭಾಗದಲ್ಲಿ ಕಳೆದ ಅರ್ಧಗಂಟೆಯಿಂದ ಭಾರಿ ಮಳೆಯಾಗಿದ್ದು, ಹೊನ್ನಮ್ಮನಹಳ್ಳ ಬಳಿ ಗುಡ್ಡ ಪ್ರದೇಶದಿಂದ ಭಾರಿ ಪ್ರಮಾಣದ ನೀರು ಹರಿದುಬಂದಿದೆ. ಚಂದ್ರದ್ರೋಣ ಪರ್ವತದ ಸಾಲಿನ ಹೊನ್ನಮ್ಮನಹಳ್ಳ, ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ ಭಾಗದಲ್ಲಿ ಗುಡುಗು-ಮಿಂಚು ಮತ್ತು ಗಾಳಿ ಸಹಿತ ಭಾರಿ ಮಳೆಯಾಗಿದೆ. ಮುಖ್ಯಾಂಶಗಳು ಚಿಕ್ಕಮಗಳೂರು ಜಿಲ್ಲೆಯ ಹಲವು…

Read More

ನಾಯಕತ್ವ ಬದಲಾವಣೆ ಗೊಂದಲ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್ – Kannada News | Karnataka Power Tussle: Only Discussed Karnataka Rajya Sabha Polls Says KC Venugopal

ನವದೆಹಲಿ, (ಮೇ 26): ಕರ್ನಾಟಕ ಕಾಂಗ್ರೆಸ್  (karnataka Congress) ನಾಯಕರ ಹೈಕಮಾಂಡ್ ಸಭೆಯ ಬೆನ್ನಲ್ಲೇ ಎದ್ದಿದ್ದ ಹಲವು ರಾಜಕೀಯ ಚರ್ಚೆಗಳು ಹಾಗೂ ವದಂತಿಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ತೆರೆ ಎಳೆದಿದ್ದಾರೆ. ಇಂದು (ಮೇ 26) ದೆಹಲಿಯಲ್ಲಿ ನಡೆದ ಸರಣಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವೇಣುಗೋಪಾಲ್‌ ಹೇಳಿದ್ದೇನು? ನಾವು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…

Read More

ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ – Kannada News | For these reasons, a Tulsi plant should be planted in every home

ಹಿಂದೂ ಧರ್ಮದಲ್ಲಿ, ತುಳಸಿ (Tulsi) ಸಸ್ಯವು ಕೇವಲ ಒಂದು ಸಸ್ಯವಲ್ಲ, ಧಾರ್ಮಿಕ ನಂಬಿಕೆಯ ಸಂಕೇತವಾಗಿದೆ. ಮನೆಯ ಅಂಗಳದಲ್ಲಿ ತುಳಸಿಯನ್ನು ನೆಡುವುದು, ಅದಕ್ಕೆ ನೀರು ಅರ್ಪಿಸುವುದು ಮತ್ತು ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ತುಳಸಿಯ ಮಹತ್ವವು ಧಾರ್ಮಿಕ ನಂಬಿಕೆಗಳಿಗೆ ಸೀಮಿತವಾಗಿಲ್ಲ, ಇದು ಹಲವಾರು ಪ್ರಯೋಜನಗಳನ್ನೂ ಹೊಂದಿದೆ.  ಹೌದು ಗಿಡ ಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆಯಂತೆ. ಅಷ್ಟಕ್ಕೂ ತುಳಸಿ ಗಿಡದ ಪ್ರಯೋಜನಗಳೇನು, ಈ ಗಿಡವನ್ನು ಮನೆ ಸುತ್ತಲೂ…

Read More

IPL 2026 Qualifier-1 RCB vs GT Live Score: ಆರ್​ಸಿಬಿ- ಗುಜರಾತ್ ನಡುವೆ ಹೈವೋಲ್ಟೇಜ್ ಕದನ – Kannada News | IPL 2026 Qualifier 1 RCB vs GT Live Score at Dharamshala Stadium Royal Challengers Bengaluru vs Gujarat Titans News Updates in Kannada

ಐಪಿಎಲ್ 2026 ರ ಪ್ಲೇಆಫ್‌ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಕ್ವಾಲಿಫೈಯರ್ 1 ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದರೆ, ರಜತ್ ಪತಿದಾರ್ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಈ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಫೈನಲ್​ಗೆ ತಲುಪುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗುತ್ತದೆ. ಆದಾಗ್ಯೂ, ಎರಡೂ ತಂಡಗಳು ಈ ಪಂದ್ಯವನ್ನು…

Read More

ಅನ್ನಕ್ಕೆ ತುಪ್ಪ ಸೇರಿಸಿ ತಿಂದ್ರೆ ಶುಗರ್ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ವೈದ್ಯರು ನೀಡಿರುವ ಮಹತ್ವದ ಸಲಹೆ – Kannada News | Best Diet Changes to Manage Diabetes Naturally

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರಲ್ಲಿಯೇ ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಪ್ರಕಾರ, ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬಗ್ಗೆ ವೈದ್ಯ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಅವರು ನೀಡಿದ ಮಾಹಿತಿಯ ಅನುಸಾರ, ದೇಹದಲ್ಲಿ ಉಂಟಾಗುವ ‘ಇನ್ಫ್ಲಮೇಶನ್’ ಅಥವಾ ಒಳಗಿನ ಉರಿ ಅನೇಕ ದೀರ್ಘಕಾಲಿಕ ಕಾಯಿಲೆಗಳ ಮೂಲ ಕಾರಣವಾಗಿದೆ. ಪ್ರತಿದಿನ ಬಳಸುವ ರಿಫೈನ್ ಎಣ್ಣೆಗಳು…

Read More

ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​? – Kannada News | KC Venugopal Denies Karnataka Leadership Change Buzz, Says High Command Meet Focused Only on Elections

ಕಾಂಗ್ರೆಸಿಗರ ಜಂಟಿ ಸುದ್ದಿಗೋಷ್ಠಿImage Credit source: Tv9 Kannada ನವದೆಹಲಿ, ಮೇ 26: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರ ಜೊತೆಗಿನ ಸುದೀರ್ಘ ಸಭೆ ಬಳಿಕ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಸುದೀರ್ಘ ಸಭೆ ಹಿಂದಿನ ಕಾರಣವನ್ನು ರಿವೀಲ್​​ ಮಾಡಿದ್ದಾರೆ. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ದಿಢೀರ್​​ ಬುಲಾವ್​​ ಬಂದಿದ್ದ ಹಿನ್ನೆಲೆ ನಾಯಕತ್ವ ಬದಲಾವಣೆ ಸೇರಿ ಸಚಿವ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕರು ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. ಸಭೆಯಲ್ಲೆ ಚರ್ಚೆಯಾಗಿದ್ದೇನು? ಎಐಸಿಸಿ…

Read More

ಮೂರಿನ್ ಕಟ್ಟೆ ವಿವಾದ: ಬಕ್ರಿದ್ ಹಬ್ಬದ ದಿನ ಮದ್ಯ ಮಾರಾಟ ನಿಷೇಧ; ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​ – Kannada News | Bhatkal Moorin Katte Controversy: Alcohol Sale Banned During Bakrid, Video that led to clash goes viral

ಕಾರವಾರ, ಮೇ 26: ತಣ್ಣಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಮೂರಿನ್ ಕಟ್ಟೆ ಧ್ವಂಸ ವಿವಾದ (Moorin Katte Controversy) ಕೋಲಾಹಲ ಎಬ್ಬಿಸಿದೆ. ಬೂದಿಮುಚ್ಚಿದ ಕೆಂಡದಂತಾಗಿದ್ದು, ಮೂರು ದಿನಗಳ ಕಾಲ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ. ಈ ಮಧ್ಯೆ ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದನೆಯ ವಿಡಿಯೋ ಒಂದು ಟಿವಿ9ಗೆ ಲಭ್ಯ ಆಗಿದೆ. ಅಷ್ಟೇ ಅಲ್ಲದೆ ಬಕ್ರಿದ್ ಹಬ್ಬ ಹಿನ್ನೆಲೆ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮುಖ್ಯಾಂಶಗಳು ಮೂರಿನಕಟ್ಟೆ ಧ್ವಂಸ ಬೆನ್ನಲ್ಲೇ ಭಟ್ಕಳದಲ್ಲಿ ಕೋಲಾಹಲ ಹಿಂದೂ…

Read More

ಬಲವಂತವಾಗಿ ದೆಹಲಿ ಜಿಮ್ಖಾನಾ ಕ್ಲಬ್​ ಖಾಲಿ ಮಾಡಿಸುವುದಿಲ್ಲ; ಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | Delhi Gymkhana Club Row Centre tells Delhi High Court Police Wont Forcibly Vacate

ನವದೆಹಲಿ, ಮೇ 26: ಲುಟ್ಯೆನ್ಸ್ ದೆಹಲಿಯ ಹೃದಯಭಾಗದಲ್ಲಿರುವ 113 ವರ್ಷಗಳ ಇತಿಹಾಸ ಹೊಂದಿರುವ ದೆಹಲಿ ಜಿಮ್ಖಾನಾ ಕ್ಲಬ್ (Delhi Gymkhana Club) ಅನ್ನು ತೆರವುಗೊಳಿಸುವ ಕೇಂದ್ರ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಕಾನೂನು ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರವು ಜಿಮ್ಖಾನಾ ಕ್ಲಬ್ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ, ಸೂಕ್ತ ಲೀಗಲ್ ನೋಟಿಸ್ ನೀಡಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದೆ. ಪ್ರಮುಖ ಮುಖ್ಯಾಂಶಗಳು: ದೆಹಲಿ ಜಿಮ್ಖಾನಾ ಕ್ಲಬ್​ಗೆ ದೊಡ್ಡ ರಿಲೀಫ್…

Read More

ಮೆದುಳು ನಿಷ್ಕ್ರಿಯಗೊಂಡ ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು – Kannada News | Family donates 30 Year old Youth Organs Who Brain dead In Accident at Hassan

ಹಾಸನ, (ಮೇ 26): ಮನೆ ಮಗನ ಸಾವಿನಲ್ಲೂ ಸಹ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಹಾಸನ (Hassan) ತಾಲ್ಲೂಕಿನ ದೊಡ್ಡಕೊಂಡಗೊಳದ ಪುನೀತ್(30) ಅಂಗಾಗಗಳನ್ನ (organs) ಕುಟುಂಬಸ್ಥರು ದಾನ ಮಾಡಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ಪುನಿತ್, ಕೆಲಸದ ಸಲುವಾಗಿ ಸಾಮಗ್ರಿ ತರಲು ಹಾಸನಕ್ಕೆ ತೆರಳೊ ವೇಳೆ ಬೈಕ್ ಗೆ ಕಾರು ಡಿಕ್ಕಿಯಾಗಿತ್ತು. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಪೋಷಕರು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಪುನಿತ್ ಅಂಗಾಂಗಗಳನ್ನ ದಾನ…

Read More