ನಾಯಕತ್ವ ಬದಲಾವಣೆ ಗೊಂದಲ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್ – Kannada News | Karnataka Power Tussle: Only Discussed Karnataka Rajya Sabha Polls Says KC Venugopal

ನವದೆಹಲಿ, (ಮೇ 26): ಕರ್ನಾಟಕ ಕಾಂಗ್ರೆಸ್  (karnataka Congress) ನಾಯಕರ ಹೈಕಮಾಂಡ್ ಸಭೆಯ ಬೆನ್ನಲ್ಲೇ ಎದ್ದಿದ್ದ ಹಲವು ರಾಜಕೀಯ ಚರ್ಚೆಗಳು ಹಾಗೂ ವದಂತಿಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (KC Venugopal) ತೆರೆ ಎಳೆದಿದ್ದಾರೆ. ಇಂದು (ಮೇ 26) ದೆಹಲಿಯಲ್ಲಿ ನಡೆದ ಸರಣಿ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಕೇವಲ ಮುಂಬರುವ ಚುನಾವಣೆಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವೇಣುಗೋಪಾಲ್‌ ಹೇಳಿದ್ದೇನು?

ನಾವು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದೇವೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾನು ಭಾಗವಹಿಸಿದ್ದೆ. ಸಭೆಯಲ್ಲಿ ಕೇವಲ ಮುಂಬರುವ ವಿಧಾನ ಪರಿಷತ್‌ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಮಾತ್ರ ಮಾತುಕತೆಯಾಗಿದೆ. ಚುನಾವಣಾ ವಿಚಾರವನ್ನು ಹೊರತುಪಡಿಸಿ ನಾವು ಮತ್ಯಾವ ಬಾಕಿ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಹಾಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಉಳಿದೆಲ್ಲಾ ವಿಚಾರಗಳು ಕೇವಲ ವದಂತಿ ಮತ್ತು ಊಹೆ ಮಾತ್ರ ಎಂದು ಎಂದು ಸ್ಪಷ್ಟಪಡಿಸಿದರು.

ಹಾಗಾದ್ರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ  ಹೊರಗಿಟ್ಟು ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಯ್ತಾ?  ಇನ್ನು ಸಭೆ ಬಳಿಕ ತೆರಳುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬೇಸರದಲ್ಲಿ ತೆರಳಿದ್ದು, ಸಂಥಿಂಗ್ ಸಂಥಿಂಗ್ ಬಗ್ಗೆ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​?

Source link

ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ – Kannada News | For these reasons, a Tulsi plant should be planted in every home

ಹಿಂದೂ ಧರ್ಮದಲ್ಲಿ, ತುಳಸಿ (Tulsi) ಸಸ್ಯವು ಕೇವಲ ಒಂದು ಸಸ್ಯವಲ್ಲ, ಧಾರ್ಮಿಕ ನಂಬಿಕೆಯ ಸಂಕೇತವಾಗಿದೆ. ಮನೆಯ ಅಂಗಳದಲ್ಲಿ ತುಳಸಿಯನ್ನು ನೆಡುವುದು, ಅದಕ್ಕೆ ನೀರು ಅರ್ಪಿಸುವುದು ಮತ್ತು ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ತುಳಸಿಯ ಮಹತ್ವವು ಧಾರ್ಮಿಕ ನಂಬಿಕೆಗಳಿಗೆ ಸೀಮಿತವಾಗಿಲ್ಲ, ಇದು ಹಲವಾರು ಪ್ರಯೋಜನಗಳನ್ನೂ ಹೊಂದಿದೆ.  ಹೌದು ಗಿಡ ಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆಯಂತೆ. ಅಷ್ಟಕ್ಕೂ ತುಳಸಿ ಗಿಡದ ಪ್ರಯೋಜನಗಳೇನು, ಈ ಗಿಡವನ್ನು ಮನೆ ಸುತ್ತಲೂ ನೆಡುವುದು ಏಕೆ ಮುಖ್ಯ ಎಂಬುದನ್ನು ತಿಳಿಯಿರಿ.

ಮನೆಯಲ್ಲಿ ತುಳಸಿ ಗಿಡ ನೆಡುವುದು ಏಕೆ ಮುಖ್ಯ ನೋಡಿ?

ನೈಸರ್ಗಿಕ ಗಾಳಿ ಶುದ್ಧೀಕರಣ ಯಂತ್ರ: ಮಾಲಿನ್ಯವು ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ಇಂದಿನ ಕಾಲದಲ್ಲಿ, ಶುದ್ಧ ಗಾಳಿ ಬೇಕೆಂದರೆ ಮನೆ ಸುತ್ತಲೂ ತುಳಸಿ ಗಿಡವನ್ನು ನೆಡಿ.  ತುಳಸಿ ಸಸ್ಯವು ಅತ್ಯುತ್ತಮ ನೈಸರ್ಗಿಕ ಗಾಳಿ ಶುದ್ಧೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ತುಳಸಿ ಸಸ್ಯಗಳು ಪರಿಸರದಿಂದ ಹಾನಿಕಾರಕ ಅನಿಲಗಳು ಮತ್ತು ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಈ ಸಸ್ಯವು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ, ಗಾಳಿಯನ್ನು ಸ್ವಚ್ಛವಾಗಿರಿಸುತ್ತದೆ.

ಔಷಧೀಯ ಗುಣಗಳ ಗಣಿ: ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿದಿನ ಎರಡರಿಂದ ಮೂರು ತುಳಸಿ ಎಲೆಗಳನ್ನು ಅಗಿಯುವುದು ಅಥವಾ ಅದರ ಚಹಾವನ್ನು ಕುಡಿಯುವುದರಿಂದ ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಒತ್ತಡ ನಿವಾರಣೆ: ತುಳಸಿಯ ಸೌಮ್ಯ ಸುವಾಸನೆಯು ಮನಸ್ಸನ್ನು ಶಾಂತಗೊಳಿಸುತ್ತದೆ. ತುಳಸಿಯು ಒತ್ತಡವನ್ನು ಉಂಟು ಮಾಡುವ ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಇದು ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು?

ಕೀಟಗಳು ಮತ್ತು ಸೊಳ್ಳೆಗಳಿಂದ ರಕ್ಷಣೆ: ತುಳಸಿ ಗಿಡದಿಂದ ಹೊರಹೊಮ್ಮುವ ವಿಶಿಷ್ಟ ಪರಿಮಳವು ಸೊಳ್ಳೆಗಳು, ನೊಣಗಳು ಮತ್ತು ಇತರ ಸಣ್ಣ ಕೀಟಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ. ತುಳಸಿಯ ಸುವಾಸನೆಯು ಮಲೇರಿಯಾ ಮತ್ತು ಡೆಂಗ್ಯೂನಂತಹ ಮಾರಕ ಕಾಯಿಲೆಗಳನ್ನು ಹರಡುವ ಸೊಳ್ಳೆಗಳನ್ನು ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ. ಆದ್ದರಿಂದ, ನಿಮ್ಮ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿ ಗಿಡವನ್ನು ನೆಡುವುದು ತುಂಬಾ ಪ್ರಯೋಜನಕಾರಿಯಾಗಿದೆ.

ಮನೆಯಲ್ಲಿ ಸಕಾರಾತ್ಮಕತೆಯನ್ನು ಹರಡುತ್ತದೆ: ತುಳಸಿ ಗಿಡವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಇದು ಶಾಂತ ಮತ್ತು ಆಹ್ಲಾದಕರ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026 Qualifier-1 RCB vs GT Live Score: ಆರ್​ಸಿಬಿ- ಗುಜರಾತ್ ನಡುವೆ ಹೈವೋಲ್ಟೇಜ್ ಕದನ – Kannada News | IPL 2026 Qualifier 1 RCB vs GT Live Score at Dharamshala Stadium Royal Challengers Bengaluru vs Gujarat Titans News Updates in Kannada

ಐಪಿಎಲ್ 2026 ರ ಪ್ಲೇಆಫ್‌ ಸುತ್ತಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಪರಸ್ಪರ ಮುಖಾಮುಖಿಯಾಗುತ್ತಿವೆ. ಈ ಕ್ವಾಲಿಫೈಯರ್ 1 ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದರೆ, ರಜತ್ ಪತಿದಾರ್ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಈ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಫೈನಲ್​ಗೆ ತಲುಪುತ್ತದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗುತ್ತದೆ. ಆದಾಗ್ಯೂ, ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಮೊದಲ ಪ್ರಯತ್ನದಲ್ಲೇ ಅಂತಿಮ ಸುತ್ತಿಗೆ ತಲುಪಲು ಪ್ರಯತ್ನಿಸುತ್ತವೆ.

Source link

ಅನ್ನಕ್ಕೆ ತುಪ್ಪ ಸೇರಿಸಿ ತಿಂದ್ರೆ ಶುಗರ್ ನಿಯಂತ್ರಣಕ್ಕೆ ಬರುತ್ತಾ? ಇಲ್ಲಿದೆ ವೈದ್ಯರು ನೀಡಿರುವ ಮಹತ್ವದ ಸಲಹೆ – Kannada News | Best Diet Changes to Manage Diabetes Naturally

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes), ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರಲ್ಲಿಯೇ ಡಯಾಬಿಟಿಸ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವೈದ್ಯರ ಪ್ರಕಾರ, ತಪ್ಪಾದ ಆಹಾರ ಪದ್ಧತಿ ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಬಗ್ಗೆ ವೈದ್ಯ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಅವರು ನೀಡಿದ ಮಾಹಿತಿಯ ಅನುಸಾರ, ದೇಹದಲ್ಲಿ ಉಂಟಾಗುವ ‘ಇನ್ಫ್ಲಮೇಶನ್’ ಅಥವಾ ಒಳಗಿನ ಉರಿ ಅನೇಕ ದೀರ್ಘಕಾಲಿಕ ಕಾಯಿಲೆಗಳ ಮೂಲ ಕಾರಣವಾಗಿದೆ. ಪ್ರತಿದಿನ ಬಳಸುವ ರಿಫೈನ್ ಎಣ್ಣೆಗಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಅದರ ಬದಲು ಸಾಂಪ್ರದಾಯಿಕ ಗಾಣದ ಎಣ್ಣೆ ಬಳಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ ಜೊತೆಗೆ ಡಯಾಬಿಟಿಸ್ ನಿಯಂತ್ರಣಕ್ಕೆ ತರಲು ಪ್ರತಿನಿತ್ಯ ಯಾವ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಗ್ಲೂಕೋಸ್ ಮಟ್ಟವೇ ಅಪಾಯಕಾರಿ

ಇಂದಿನ ಜೀವನಶೈಲಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಬಿಳಿ ಅಕ್ಕಿಯನ್ನು ಹೆಚ್ಚಾಗಿ ಬಳಸುವುದು, ದಿನಕ್ಕೆ ಹಲವು ಬಾರಿ ಸಕ್ಕರೆ ಹಾಕಿದ ಚಹಾ ಅಥವಾ ಕಾಫಿ ಕುಡಿಯುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಏಕಾಏಕಿ ಹೆಚ್ಚಿಸುತ್ತದೆ. ಇದರಿಂದ ‘ಇನ್ಸುಲಿನ್ ರೆಸಿಸ್ಟೆನ್ಸ್’ ಉಂಟಾಗಿ, ನಂತರ ಡಯಾಬಿಟಿಸ್, ಹೊಟ್ಟೆಯ ಸುತ್ತ ಕೊಬ್ಬು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.

ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು?

ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಸಿಗುವ ಪ್ರಯೋಜನ?

ಡಾ. ವಿಕ್ರಾಂತ್ ಅವರ ಪ್ರಕಾರ, ವೈಟ್ ರೈಸ್ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿ, ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿಂದರೆ ಗ್ಲೂಕೋಸ್ ಮಟ್ಟ ತಕ್ಷಣ ಏರಿಕೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಶುಗರ್ ನಿಯಂತ್ರಣಕ್ಕೆ ನೆರವಾಗಬಹುದು.

ಆಹಾರದಲ್ಲಿ ಯಾವ ಬದಲಾವಣೆ ಮಾಡಬೇಕು?

  • ಬೆಳಿಗ್ಗೆ ಖಾಲಿ ಹೊಟ್ಟೆಗೆ ಸಕ್ಕರೆ ಚಹಾ ಕುಡಿಯುವುದನ್ನು ತಪ್ಪಿಸಿ
  • ಇಡ್ಲಿ, ದೋಸೆ ಬದಲು ಮೊಟ್ಟೆ, ಸ್ಪ್ರೌಟ್ಸ್ ಮತ್ತು ಡ್ರೈಫ್ರೂಟ್ಸ್ ಸೇವಿಸಿ
  • ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ
  • ಹಾಲು ಮತ್ತು ಮೊಸರು ಸೇವನೆಯಿಂದ ವಿಟಮಿನ್ ಬಿ12 ದೊರೆಯುತ್ತದೆ

ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಡಯಾಬಿಟಿಸ್ ನಿಯಂತ್ರಣದಲ್ಲಿ ಇಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಹಾಪೋಹಗಳಿಗೆ ತೆರೆ: ಚುನಾವಣಾ ಸಂಬಂಧಿ ಚರ್ಚೆಗಷ್ಟೇ ಸೀಮಿತವಾಯ್ತಾ ಕಾಂಗ್ರೆಸಿಗರ ಹೈವೋಲ್ಟೇಜ್​​ ಮೀಟಿಂಗ್​? – Kannada News | KC Venugopal Denies Karnataka Leadership Change Buzz, Says High Command Meet Focused Only on Elections

ಕಾಂಗ್ರೆಸಿಗರ ಜಂಟಿ ಸುದ್ದಿಗೋಷ್ಠಿImage Credit source: Tv9 Kannada

ನವದೆಹಲಿ, ಮೇ 26: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್​​ ಅವರ ಜೊತೆಗಿನ ಸುದೀರ್ಘ ಸಭೆ ಬಳಿಕ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಸುದೀರ್ಘ ಸಭೆ ಹಿಂದಿನ ಕಾರಣವನ್ನು ರಿವೀಲ್​​ ಮಾಡಿದ್ದಾರೆ. ರಾಜ್ಯ ನಾಯಕರಿಗೆ ಹೈಕಮಾಂಡ್​​ನಿಂದ ದಿಢೀರ್​​ ಬುಲಾವ್​​ ಬಂದಿದ್ದ ಹಿನ್ನೆಲೆ ನಾಯಕತ್ವ ಬದಲಾವಣೆ ಸೇರಿ ಸಚಿವ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕರು ಈ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಸಭೆಯಲ್ಲೆ ಚರ್ಚೆಯಾಗಿದ್ದೇನು?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್​​ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸಮ್ಮುಖದಲ್ಲಿ ಇವತ್ತು ದೆಹಲಿಯಲ್ಲಿ ಹೈವೋಲ್ಟೇಜ್​​ ಮೀಟಿಂಗ್​​ ನಡೆದಿತ್ತು. ಹೀಗಾಗಿ ವರಿಷ್ಠರು ಸದ್ಯ ಪಕ್ಷದಲ್ಲಿರುವ ಎಲ್ಲ ಗೊಂದಲಗಳಿಗೂ ತೆರೆ ಎಳೆಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಸಭೆ ಬಗ್ಗೆ ಮಾಹಿತಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯಸಭೆ ಮತ್ತು ವಿಧಾನಪರಿಷತ್​ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಯಾವುದೇ ಗೊಂದಲ ಇಲ್ಲ. ಚುನಾವಣೆ ಸಂಬಂಧ ಮಾತ್ರ ಸಿಎಂ, ಡಿಸಿಎಂ ಜತೆ ಮಾತುಕತೆ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಮೂರಿನ್ ಕಟ್ಟೆ ವಿವಾದ: ಬಕ್ರಿದ್ ಹಬ್ಬದ ದಿನ ಮದ್ಯ ಮಾರಾಟ ನಿಷೇಧ; ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​ – Kannada News | Bhatkal Moorin Katte Controversy: Alcohol Sale Banned During Bakrid, Video that led to clash goes viral

ಕಾರವಾರ, ಮೇ 26: ತಣ್ಣಗಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಮೂರಿನ್ ಕಟ್ಟೆ ಧ್ವಂಸ ವಿವಾದ (Moorin Katte Controversy) ಕೋಲಾಹಲ ಎಬ್ಬಿಸಿದೆ. ಬೂದಿಮುಚ್ಚಿದ ಕೆಂಡದಂತಾಗಿದ್ದು, ಮೂರು ದಿನಗಳ ಕಾಲ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ. ಈ ಮಧ್ಯೆ ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದನೆಯ ವಿಡಿಯೋ ಒಂದು ಟಿವಿ9ಗೆ ಲಭ್ಯ ಆಗಿದೆ. ಅಷ್ಟೇ ಅಲ್ಲದೆ ಬಕ್ರಿದ್ ಹಬ್ಬ ಹಿನ್ನೆಲೆ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಮುಖ್ಯಾಂಶಗಳು

  • ಮೂರಿನಕಟ್ಟೆ ಧ್ವಂಸ ಬೆನ್ನಲ್ಲೇ ಭಟ್ಕಳದಲ್ಲಿ ಕೋಲಾಹಲ
  • ಹಿಂದೂ ಮತ್ತು ಮುಸ್ಲಿಂ ಗಲಾಟೆಗೆ ಪ್ರಚೋದಿಸಿದ ವಿಡಿಯೋ ವೈರಲ್​​
  • ಬಕ್ರಿದ್ ಹಬ್ಬದ ದಿನ ಭಟ್ಕಳದಲ್ಲಿ ಮದ್ಯ ಮಾರಾಟ ನಿಷೇಧ

ವಿವಾದಕ್ಕೆ ಈ ವಿಡಿಯೋ ಕಾರಣವೆಂದ ಪೊಲೀಸ್​​

ನೂರಾರು ವರ್ಷಗಳ ಇತಿಹಾಸವಿರುವ ಭಟ್ಕಳದ ಮೂರಿನ್ ಕಟ್ಟೆ ಸದ್ಯ ವಿವಾದದ ಕೇಂದ್ರಬಿಂದುವಾಗಿದೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಅದೊಂದು ವಿಡಿಯೋ ಟಿವಿ9ಗೆ ಲಭ್ಯವಾಗಿದ್ದು, ವಿಡಿಯೋದಲ್ಲಿನ ಒಂದೊಂದು ಮಾತು ಕೋಮು ಸಂಘರ್ಷಕ್ಕೆ ಪ್ರಚೋದನೆ ಎನ್ನಲಾಗುತ್ತಿದೆ. ಈ ವಿಡಿಯೋ ಬಿಡುಗಡೆ ಆದ ಕೆಲವೇ ಗಂಟೆಯಲ್ಲಿ ಸಾವಿರಾರು ಮುಸ್ಲಿಂಮರು ಜಮಾವಣೆ ಆಗಿದ್ದರು. ವಿವಾದಕ್ಕೆ ಈ ವಿಡಿಯೋ ಕಾರಣ ಎಂದು ಪೊಲೀಸರು ಅಧಿಕೃತ ಸ್ಪಷ್ಟಣೆ ನೀಡಿದ್ದಾರೆ.

ಕೋಮು ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್​​

‘ಮುಸ್ಲಿಂರ ಜಾಗದ ಮುಂದೆ ಹಿಂದೂಗಳು ಕಟ್ಟೆ ಕಟ್ಟಿದ್ದಾರೆ. ಪ್ರಶ್ನಿಸಲು ಬಂದ ನಮ್ಮ ನಾಯಕರಿಗೆ ಪೊಲೀಸರು ಕೇರ್ ಮಾಡಿಲ್ಲ. ನಮ್ಮವರು ನಾಲ್ಕು ಜನ ವಿರೋಧ ಮಾಡಿದಕ್ಕೆ ಅವರು ಬಗ್ಗಿಲ್ಲ. ಕೆಲವೇ ಗಂಟೆಯಲ್ಲಿ ಅನಧಿಕೃತ ಕಟ್ಟೆ ಕಟ್ಟಿದ್ದಾರೆ. ಧರ್ಮ ರಕ್ಷಣೆಯಲ್ಲಿ ಮುಸ್ಲಿಂ ಯುವಕರು ಏಕೆ ಮುಂದೆ ಬರುತ್ತಿಲ್ಲ. ಭಟ್ಕಳದಲ್ಲಿ ಒಂದು ಕ್ರಿಕೆಟ್ ಮ್ಯಾಚ್ ಇದ್ದರೆ ಕನಿಷ್ಟ 300ಕ್ಕೂ ಹೆಚ್ಚು ಯುವಕರು ಬರುತ್ತಾರೆ. ಆದರೆ ಇಷ್ಟು ದೊಡ್ಡ ಅನ್ಯಾಯ ಆಗುತ್ತಿದ್ದರು ಮುಸ್ಲಿಂ ಯುವಕರೇ ಎಲ್ಲಿದ್ದಿರಾ? ಏಕೆ ನೀವು ಇನ್ನೂ ಇದನ್ನು ಗಟ್ಟಿಯಾಗಿ ವಿರೋಧಿಸುತ್ತಿಲ್ಲ’ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

‘ಹಿಂದೂಗಳು ಆಡಳಿತ ದುರುಪಯೋಗ ಮಾಡಿಕೊಂಡು ತಮಗೆ ಬೇಕಾದ ಹಾಗೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ನಾಯಕರಿಗೆ, ಯುವಕರಿಗೆ ಇದನ್ನ ಪ್ರಶ್ನಿಸುವ ಶಕ್ತಿ ಇಲ್ವಾ‌?’ ಹೀಗೆ ಹತ್ತಾರು ಪ್ರಚೋದನೆ ನೀಡುವ ಪದಗಳನ್ನು ಯುವಕ‌ನೋರ್ವ ವಿಡಿಯೋದಲ್ಲಿ ಬಳಿಸಿದ್ದಾನೆ.

ಮದ್ಯ ಮಾರಾಟ ನಿಷೇಧ

ಬಕ್ರಿದ್ ಹಬ್ಬ ಹಿನ್ನೆಲೆ ಮೇ 28ರ ಬೆಳಗ್ಗೆ 6ರಿಂದ ಮೇ 29ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳ ಶಹರ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಲವಂತವಾಗಿ ದೆಹಲಿ ಜಿಮ್ಖಾನಾ ಕ್ಲಬ್​ ಖಾಲಿ ಮಾಡಿಸುವುದಿಲ್ಲ; ಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | Delhi Gymkhana Club Row Centre tells Delhi High Court Police Wont Forcibly Vacate

ನವದೆಹಲಿ, ಮೇ 26: ಲುಟ್ಯೆನ್ಸ್ ದೆಹಲಿಯ ಹೃದಯಭಾಗದಲ್ಲಿರುವ 113 ವರ್ಷಗಳ ಇತಿಹಾಸ ಹೊಂದಿರುವ ದೆಹಲಿ ಜಿಮ್ಖಾನಾ ಕ್ಲಬ್ (Delhi Gymkhana Club) ಅನ್ನು ತೆರವುಗೊಳಿಸುವ ಕೇಂದ್ರ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಕಾನೂನು ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರವು ಜಿಮ್ಖಾನಾ ಕ್ಲಬ್ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ, ಸೂಕ್ತ ಲೀಗಲ್ ನೋಟಿಸ್ ನೀಡಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದೆ.

ಪ್ರಮುಖ ಮುಖ್ಯಾಂಶಗಳು:

  • ದೆಹಲಿ ಜಿಮ್ಖಾನಾ ಕ್ಲಬ್​ಗೆ ದೊಡ್ಡ ರಿಲೀಫ್
  • ಸದ್ಯಕ್ಕೆ ಬಲವಂತವಾಗಿ ಸ್ವಾಧೀನವಿಲ್ಲ ಎಂದ ಕೇಂದ್ರ ಸರ್ಕಾರ
  • ಪ್ರಧಾನಿ ನಿವಾಸದ ಬಳಿ ಇರುವ ಕ್ಲಬ್

113 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಲಬ್‌ನ ಲೀಸ್ (ಗುತ್ತಿಗೆ) ಒಪ್ಪಂದದಲ್ಲಿರುವ ವಿಶೇಷ ನಿಯಮವೊಂದನ್ನು ಉಲ್ಲೇಖಿಸಿದ್ದ ಸರ್ಕಾರ, ಈ ಭೂಮಿ ಸಾರ್ವಜನಿಕ ಹಿತಾಸಕ್ತಿಗೆ ಅಗತ್ಯವಿದೆ ಎಂದು ಹೇಳಿತ್ತು. ಅಲ್ಲದೆ, ಜೂನ್ 5ರ ಒಳಗಾಗಿ ಇಡೀ ಆವರಣವನ್ನು ತನಗೆ ಹಸ್ತಾಂತರಿಸಬೇಕು ಎಂದು ಜಿಮ್ಖಾನಾ ಕ್ಲಬ್‌ಗೆ ತಿಳಿಸಿತ್ತು.

ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್​ನಲ್ಲಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಜೂನ್ 5ರಂದೇ ಪೊಲೀಸರು ನುಗ್ಗಿ ಬಲವಂತವಾಗಿ ಕ್ಲಬ್ ಅನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಆತಂಕ ಬೇಡ. ಸರ್ಕಾರವು ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸಲಿದೆ. ಸೂಕ್ತ ನೋಟಿಸ್ ನೀಡಿದ ಬಳಿಕವಷ್ಟೇ ತೆರವು ಪ್ರಕ್ರಿಯೆ ನಡೆಯಲಿದೆ” ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು

ಜೂನ್ 5ರಂದು ಯಾವುದಾದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಲ್ಲವೆಂದು ಉತ್ತರಿಸಿದರು. “ಜೂನ್ 5ರಂದು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ನಾವು ಮೊದಲು ನೋಟಿಸ್ ನೀಡಬೇಕಾಗುತ್ತದೆ” ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಈ ವಿವಾದಕ್ಕೆ ಕಾರಣವೇನು?:

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಜಿಮ್ಖಾನಾ ಕ್ಲಬ್ ಹೊಂದಿರುವ 27.3 ಎಕರೆ ವಿಸ್ತೀರ್ಣದ ಪ್ರಧಾನ ಭೂಮಿಯ ಲೀಸ್ (ಗುತ್ತಿಗೆ) ಒಪ್ಪಂದವನ್ನು ರದ್ದುಗೊಳಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದ್ದ ಕೇಂದ್ರ ಸರ್ಕಾರ ಜೂನ್ 5ರ ಒಳಗಾಗಿ ಇಡೀ ಆವರಣ, ಕಟ್ಟಡಗಳು ಮತ್ತು ಮೈದಾನವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಮೇ 22ರಂದು ಕ್ಲಬ್‌ಗೆ ಆದೇಶಿಸಿತ್ತು.

ಇದನ್ನೂ ಓದಿ: ದಲೈ ಲಾಮಾ ಉತ್ತರಾಧಿಕಾರಿ ನೇಮಕದಿಂದ ದೂರವಿರಿ; ಭಾರತಕ್ಕೆ ಚೀನಾ ಎಚ್ಚರಿಕೆ

ಈ ವಿವಾದಿತ ಜಾಗವು ಪ್ರಧಾನಮಂತ್ರಿಯವರ ಅಧಿಕೃತ ನಿವಾಸ ಹಾಗೂ ಇತರ ಅತ್ಯಂತ ಸೂಕ್ಷ್ಮ ರಕ್ಷಣಾ ವಲಯಗಳಿಗೆ ಹತ್ತಿರದಲ್ಲಿದೆ. ದೇಶದ ರಕ್ಷಣಾ ಮೂಲಸೌಕರ್ಯಗಳನ್ನು ಮತ್ತು ಸಾರ್ವಜನಿಕ ಭದ್ರತೆಯನ್ನು ಬಲಪಡಿಸಲು ಈ ಭೂಮಿ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಕೇಂದ್ರ ಸರ್ಕಾರದ ಈ ದಿಢೀರ್ ಆದೇಶವನ್ನು ಪ್ರಶ್ನಿಸಿ ಜಿಮ್ಖಾನಾ ಕ್ಲಬ್‌ನ ಸದಸ್ಯರು ಮತ್ತು ನೌಕರರ ಸಂಘವು ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರ ಪೀಠವು ಈಗಾಗಲೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಮಧ್ಯಂತರ ತಡೆಯಾಜ್ಞೆ ನೀಡದಿದ್ದರೂ, ಜಿಮ್ಖಾನಾ ಕ್ಲಬ್ ಹೂಡಿರುವ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿಲ್ಲ. ಬದಲಿಗೆ ಸುದೀರ್ಘ ಕಾನೂನು ಪರಿಶೀಲನೆಗೆ ಒಳಪಡಿಸಿದೆ. ಈ ಲೀಸ್ ಒಪ್ಪಂದವನ್ನು ರದ್ದುಗೊಳಿಸಿರುವ ಕ್ರಮದ ಕುರಿತು ಜಿಮ್ಖಾನಾ ಕ್ಲಬ್ ಎತ್ತಿರುವ ಆಕ್ಷೇಪಣೆಗಳಿಗೆ ಲಿಖಿತವಾಗಿ ವಿವರಣೆ ನೀಡುವಂತೆ ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೆದುಳು ನಿಷ್ಕ್ರಿಯಗೊಂಡ ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು – Kannada News | Family donates 30 Year old Youth Organs Who Brain dead In Accident at Hassan

ಹಾಸನ, (ಮೇ 26): ಮನೆ ಮಗನ ಸಾವಿನಲ್ಲೂ ಸಹ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಹಾಸನ (Hassan) ತಾಲ್ಲೂಕಿನ ದೊಡ್ಡಕೊಂಡಗೊಳದ ಪುನೀತ್(30) ಅಂಗಾಗಗಳನ್ನ (organs) ಕುಟುಂಬಸ್ಥರು ದಾನ ಮಾಡಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ಪುನಿತ್, ಕೆಲಸದ ಸಲುವಾಗಿ ಸಾಮಗ್ರಿ ತರಲು ಹಾಸನಕ್ಕೆ ತೆರಳೊ ವೇಳೆ ಬೈಕ್ ಗೆ ಕಾರು ಡಿಕ್ಕಿಯಾಗಿತ್ತು. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಪೋಷಕರು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಪುನಿತ್ ಅಂಗಾಂಗಗಳನ್ನ ದಾನ ಮಾಡಿದರು. ಇದರೊಂದಿಗೆ ಬೇರೆವರ ಜೀವನ ಬೆಳಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar visits DGP office in Bengaluru over Hassan site controversy

ನಟ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್​ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ (DGP) ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಸನ ಸೈಟ್ ವಿಚಾರವಾಗಿ ಭೇಟಿಯಾಗಿದ್ದೆ. ಕೋರ್ಟ್​ನಲ್ಲಿ ಒಂದು ರಿಪೋರ್ಟ್ ಕೇಳಿದ್ದರು. ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಸ್ಪಂದಿಸಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ. ಇಲ್ಲಿಂದ ಎಸ್​ಪಿಯವರಿಗೆ ರೆಫರ್ ಮಾಡಿದ್ದಾರೆ. ಅಲ್ಲಿನ ಅಧಿಕಾರಿ ಆ ಕೆಲಸ ಮಾಡಬೇಕಿತ್ತು. ಅವರು ಮಾಡಿಲ್ಲ. ನಾನು ಈಗ ಬೆಂಗಳೂರಿನಲ್ಲಿ ಇದ್ದೆ. ಹಾಗಾಗಿ ಡಿಜಿಪಿಯವರನ್ನ ಭೇಟಿ ಮಾಡಿ ಕೇಳಿದ್ದೇನೆ. ಈಗ ಹಾಸನ ಎಸ್​ಪಿ ಅವರಿಗೆ ತಿಳಿಸಿದ್ದಾರೆ’ ಎಂದು ಡಿಜಿ ಕಚೇರಿಯಲ್ಲಿ ಯಶ್ ತಾಯಿ ಪುಷ್ಪಾ (Pushpa Arun Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈರಲ್ ಆಗುತ್ತಿದೆ ಈ ಚಿತ್ರ..! ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿರುವ ಈ ಫೋಟೋದ ಹಿಂದಿನ ಕಥೆ ಏನು? – Kannada News | Moon behind the adventurous man, photo becomes viral on social media

ಬೆಂಗಳೂರು, ಮೇ 26: ಇಲ್ಲಿ ನೋಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹು ಚರ್ಚೆಯ ವಿಷಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ಆಗಿ ಈ ಫೋಟೋ ಹರಿಬಿಟ್ಟಿದ್ದಾರೆ. ಆದರೆ, ಈ ವೈರಲ್ ಇಮೇಜ್ (Viral photo) ಅಷ್ಟು ಸಿಂಪಲ್ ಇದ್ದಂತಿಲ್ಲ. ಇಂಟರ್ನೆಟ್​ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿ, ತಕ್ಕಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ. ಇದು ಸುಖಾಸುಮ್ಮನೆ ಅಪ್​ಲೋಡ್ ಮಾಡಿರುವ ಫೋಟೋವಾ? ಅಥವಾ ಯಾವುದೋ ಬ್ರ್ಯಾಂಡ್​ನ ತಂತ್ರವಾ?

ಇದು ಚಂದಿರನ ಚಂದದ ಚಿತ್ರ. ಚಂದ್ರ ತನ್ನ ಅರ್ಧ ಭಾಗವನ್ನು ಬೆಳಕಾಗಿಸಿ ಕಾಯುತ್ತಿದ್ದಾನೆ. ಆದರೆ ಆ ಚಂದ್ರನ ವಕ್ರರೇಖೆ ಕೇವಲ ಒಂದು ಬೆಳಕಿನ ಗೆರೆಯಲ್ಲ. ಅದು ಒಂದು ಅಸಾಧ್ಯವಾದ ಸಾಹಸಕ್ಕೆ ಸಿದ್ಧವಾಗಿರುವ ರಂಗಭೂಮಿ! ಒಬ್ಬ ಅಪ್ರತಿಮ ಸಾಹಸಿ, ಗುರುತ್ವಾಕರ್ಷಣೆಯನ್ನೇ ಸವಾಲಿಗೆ ಕರೆದು, ಆಕಾಶದ ಅಂಚಿನಿಂದ ಧುಮುಕುತ್ತಿದ್ದಾನೆ. ಅವನ ದೇಹದ ಆ ವಾಲುವಿಕೆ, ಚಂದ್ರನ ಅರ್ಧವೃತ್ತಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿ ಒಂದು ಅದ್ಭುತವಾದ ವೃತ್ತವನ್ನು ಸೃಷ್ಟಿಸುತ್ತಿದೆ.

ಇದು ಕೇವಲ ಕಲ್ಪನೆಯಲ್ಲ, ನಿಮ್ಮ ಕಣ್ಣುಗಳು ಕಾಣುತ್ತಿರುವುದು ಒಂದು ಜಾಗತಿಕ ಕ್ರಾಂತಿಯ ಮುನ್ನುಡಿ! ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ…

ಪ್ರಕಾಶಮಾನವಾದ ಆ ಬಿಳಿ ಚಂದ್ರ… ಕಡು ನೀಲಿ ಬಣ್ಣದ ನಿಗೂಢ ಆಕಾಶ… ಆ ಸಾಹಸಿಯ ಕೈಗಳಲ್ಲಿ ಮಿನುಗುತ್ತಿರುವ ಕೆಂಪು ಛಾಯೆಯ ಶಕ್ತಿ…

ಈ ಮೂರು ಬಣ್ಣಗಳು ಸೇರಿದರೆ ಜಗತ್ತನ್ನೇ ಆಳುವ, ಯುವ ಪೀಳಿಗೆಯ ನೆಚ್ಚಿನ ಯಾವ ಬ್ರ್ಯಾಂಡ್ ನೆನಪಿಗೆ ಬರುತ್ತದೆ? “ಲೈಫ್‌ನಲ್ಲಿ ಏನಾದರೂ ಹೊಸದಾಗಿ ಟ್ರೈ ಮಾಡಬೇಕು, ಗಡಿಗಳನ್ನು ಮೀರಿ ಬೆಳೆಯಬೇಕು!” ಆಕಾಶದ ಚಂದ್ರನನ್ನೂ ತನ್ನ ಲೋಗೋ ಆಗಿ ಬದಲಾಯಿಸಿಕೊಳ್ಳಬಲ್ಲ ಧೈರ್ಯ ಇರುವುದು ಕೇವಲ ಒಂದೇ ಬ್ರ್ಯಾಂಡ್‌ಗೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version