ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar visits DGP office in Bengaluru over Hassan site controversy

ನಟ ಯಶ್ (Yash) ಅವರ ತಾಯಿ ಪುಷ್ಪಾ ಅರುಣ್​ಕುಮಾರ್ ಅವರು ಬೆಂಗಳೂರಿನಲ್ಲಿ ಡಿಜಿಪಿ (DGP) ಕಚೇರಿಗೆ ಭೇಟಿ ನೀಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಸನ ಸೈಟ್ ವಿಚಾರವಾಗಿ ಭೇಟಿಯಾಗಿದ್ದೆ. ಕೋರ್ಟ್​ನಲ್ಲಿ ಒಂದು ರಿಪೋರ್ಟ್ ಕೇಳಿದ್ದರು. ಪೊಲೀಸರ ಹತ್ತಿರ ರಿಪೋರ್ಟ್ ತರಬೇಕಿತ್ತು. ಅಲ್ಲಿನ ಎಸ್ ಪಿ ಸ್ಪಂದಿಸಿರಲಿಲ್ಲ. ನಿಧಾನ ಆಯ್ತು, ಅದಕ್ಕೆ ಡಿಜಿಪಿಯವರನ್ನ ಭೇಟಿಯಾಗಿದ್ದೇವೆ. ಇಲ್ಲಿಂದ ಎಸ್​ಪಿಯವರಿಗೆ ರೆಫರ್ ಮಾಡಿದ್ದಾರೆ. ಅಲ್ಲಿನ ಅಧಿಕಾರಿ ಆ ಕೆಲಸ ಮಾಡಬೇಕಿತ್ತು. ಅವರು ಮಾಡಿಲ್ಲ. ನಾನು ಈಗ ಬೆಂಗಳೂರಿನಲ್ಲಿ ಇದ್ದೆ. ಹಾಗಾಗಿ ಡಿಜಿಪಿಯವರನ್ನ ಭೇಟಿ ಮಾಡಿ ಕೇಳಿದ್ದೇನೆ. ಈಗ ಹಾಸನ ಎಸ್​ಪಿ ಅವರಿಗೆ ತಿಳಿಸಿದ್ದಾರೆ’ ಎಂದು ಡಿಜಿ ಕಚೇರಿಯಲ್ಲಿ ಯಶ್ ತಾಯಿ ಪುಷ್ಪಾ (Pushpa Arun Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈರಲ್ ಆಗುತ್ತಿದೆ ಈ ಚಿತ್ರ..! ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿರುವ ಈ ಫೋಟೋದ ಹಿಂದಿನ ಕಥೆ ಏನು? – Kannada News | Moon behind the adventurous man, photo becomes viral on social media

ಬೆಂಗಳೂರು, ಮೇ 26: ಇಲ್ಲಿ ನೋಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹು ಚರ್ಚೆಯ ವಿಷಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ಆಗಿ ಈ ಫೋಟೋ ಹರಿಬಿಟ್ಟಿದ್ದಾರೆ. ಆದರೆ, ಈ ವೈರಲ್ ಇಮೇಜ್ (Viral photo) ಅಷ್ಟು ಸಿಂಪಲ್ ಇದ್ದಂತಿಲ್ಲ. ಇಂಟರ್ನೆಟ್​ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿ, ತಕ್ಕಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ. ಇದು ಸುಖಾಸುಮ್ಮನೆ ಅಪ್​ಲೋಡ್ ಮಾಡಿರುವ ಫೋಟೋವಾ? ಅಥವಾ ಯಾವುದೋ ಬ್ರ್ಯಾಂಡ್​ನ ತಂತ್ರವಾ?

ಇದು ಚಂದಿರನ ಚಂದದ ಚಿತ್ರ. ಚಂದ್ರ ತನ್ನ ಅರ್ಧ ಭಾಗವನ್ನು ಬೆಳಕಾಗಿಸಿ ಕಾಯುತ್ತಿದ್ದಾನೆ. ಆದರೆ ಆ ಚಂದ್ರನ ವಕ್ರರೇಖೆ ಕೇವಲ ಒಂದು ಬೆಳಕಿನ ಗೆರೆಯಲ್ಲ. ಅದು ಒಂದು ಅಸಾಧ್ಯವಾದ ಸಾಹಸಕ್ಕೆ ಸಿದ್ಧವಾಗಿರುವ ರಂಗಭೂಮಿ! ಒಬ್ಬ ಅಪ್ರತಿಮ ಸಾಹಸಿ, ಗುರುತ್ವಾಕರ್ಷಣೆಯನ್ನೇ ಸವಾಲಿಗೆ ಕರೆದು, ಆಕಾಶದ ಅಂಚಿನಿಂದ ಧುಮುಕುತ್ತಿದ್ದಾನೆ. ಅವನ ದೇಹದ ಆ ವಾಲುವಿಕೆ, ಚಂದ್ರನ ಅರ್ಧವೃತ್ತಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿ ಒಂದು ಅದ್ಭುತವಾದ ವೃತ್ತವನ್ನು ಸೃಷ್ಟಿಸುತ್ತಿದೆ.

ಇದು ಕೇವಲ ಕಲ್ಪನೆಯಲ್ಲ, ನಿಮ್ಮ ಕಣ್ಣುಗಳು ಕಾಣುತ್ತಿರುವುದು ಒಂದು ಜಾಗತಿಕ ಕ್ರಾಂತಿಯ ಮುನ್ನುಡಿ! ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ…

ಪ್ರಕಾಶಮಾನವಾದ ಆ ಬಿಳಿ ಚಂದ್ರ… ಕಡು ನೀಲಿ ಬಣ್ಣದ ನಿಗೂಢ ಆಕಾಶ… ಆ ಸಾಹಸಿಯ ಕೈಗಳಲ್ಲಿ ಮಿನುಗುತ್ತಿರುವ ಕೆಂಪು ಛಾಯೆಯ ಶಕ್ತಿ…

ಈ ಮೂರು ಬಣ್ಣಗಳು ಸೇರಿದರೆ ಜಗತ್ತನ್ನೇ ಆಳುವ, ಯುವ ಪೀಳಿಗೆಯ ನೆಚ್ಚಿನ ಯಾವ ಬ್ರ್ಯಾಂಡ್ ನೆನಪಿಗೆ ಬರುತ್ತದೆ? “ಲೈಫ್‌ನಲ್ಲಿ ಏನಾದರೂ ಹೊಸದಾಗಿ ಟ್ರೈ ಮಾಡಬೇಕು, ಗಡಿಗಳನ್ನು ಮೀರಿ ಬೆಳೆಯಬೇಕು!” ಆಕಾಶದ ಚಂದ್ರನನ್ನೂ ತನ್ನ ಲೋಗೋ ಆಗಿ ಬದಲಾಯಿಸಿಕೊಳ್ಳಬಲ್ಲ ಧೈರ್ಯ ಇರುವುದು ಕೇವಲ ಒಂದೇ ಬ್ರ್ಯಾಂಡ್‌ಗೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Padma Awards 2026: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸದ ರೋಹಿತ್ ಶರ್ಮಾ..! ಕಾರಣವೇನು? – Kannada News | Padma Shri for Rohit Sharma: The Real Reason Behind His Ceremony Skip

2026 ರ ಗಣರಾಜ್ಯೋತ್ಸವಕ್ಕೆ ಒಂದು ದಿನ ಮೊದಲು ಅಂದರೆ ಜನವರಿ 25 ರಂದು ಕೇಂದ್ರ ಸರ್ಕಾರ 131 ಪದ್ಮ ಪ್ರಶಸ್ತಿ (Padma Awards 2026) ಪುರಸ್ಕೃತರ ಹೆಸರುಗಳನ್ನು ಘೋಷಿಸಿತ್ತು. ಈ ಪೈಕಿ 66 ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 25 ರಂದು ಪ್ರಶಸ್ತಿ ಪ್ರದಾನ ಮಾಡಿದರು. ಪಟ್ಟಿಯಲ್ಲಿ ಕೆಲವು ಅನುಭವಿ ಕ್ರೀಡಾಪಟುಗಳ ಹೆಸರೂ ಸೇರಿತ್ತು. ಅದರಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಅವರ ಹೆಸರಿತ್ತು. ಆದರೆ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲಿಯೂ ಕಾಣಿಸಲಿಲ್ಲ. ಇದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿತು. ಇದೀಗ ರೋಹಿತ್ ಶರ್ಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗದಿರಲು ಕಾರಣ ಬೆಳಕಿಗೆ ಬಂದಿದೆ.

ಪ್ರಶಸ್ತಿ ಸ್ವೀಕರಿಸದ ರೋಹಿತ್

ವಾಸ್ತವವಾಗಿ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ವಿವಿಧ ಹಂತಗಳಲ್ಲಿ ಗೌರವಿಸಲಾಗುತ್ತದೆ. ಅದರಂತೆ ಮೊದಲ ಹಂತದಲ್ಲಿ 66 ಜನರನ್ನು ಗೌರವಿಸಲಾಗಿದೆ. ರಾಷ್ಟ್ರಪತಿಗಳು ಮೊದಲ ಹಂತದಲ್ಲಿ 2 ಪದ್ಮವಿಭೂಷಣ, 6 ಪದ್ಮಭೂಷಣ ಮತ್ತು 58 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಇದರಲ್ಲಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಸೇರಿದ್ದರು. ಹೀಗಿರುವಾಗ ರೋಹಿತ್ ಶರ್ಮಾ ಏಕೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನು ಸ್ವೀಕರಿಸಲಿಲ್ಲ ಎಂಬುದು ಎಲ್ಲರಲ್ಲೂ ಮೂಡಿರುವ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.

ಪ್ರಶಸ್ವಿ ಸ್ವೀಕರಿಸದಿರಲು ಕಾರಣವೇನು?

ರೋಹಿತ್ ಶರ್ಮಾ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಮೊದಲ ಹಂತದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಹೀಗಾಗಿ ರೋಹಿತ್ ಎರಡನೇ ಹಂತದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಬಹುದು. ಮೇಲೆ ಹೇಳಿದಂತೆ ಪದ್ಮ ಪ್ರಶಸ್ತಿಗಳನ್ನು ಹಲವಾರು ಹಂತಗಳಲ್ಲಿ ವಿತರಿಸಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿ ವಿವಿಧ ಹಂತಗಳಲ್ಲಿ ಇದನ್ನು ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗದವರಿಗೆ ಮುಂದಿನ ದಿನಾಂಕದಂದು ಪ್ರದಾನ ಮಾಡಲಾಗುವುದು.

ಪ್ರಸ್ತುತ ರೋಹಿತ್ ಶರ್ಮಾ ಐಪಿಎಲ್​ನಲ್ಲಿ ಭಾಗವಹಿಸಿದ್ದರಿಂದ ಒಂದು ವೇಳೆ ಮುಂಬೈ ತಂಡವು ಪ್ಲೇಆಫ್ ತಲುಪಿದ್ದರೆ, ರೋಹಿತ್​ಗೆ ಈ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ಹೀಗಾಗಿಯೇ ರೋಹಿತ್ ಶರ್ಮಾ ಕಾರ್ಯನಿರತ ಐಪಿಎಲ್ ವೇಳಾಪಟ್ಟಿಯನ್ನು ಪರಿಗಣಿಸಿ ಮುಂದಿನ ಬಾರಿ ಪ್ರಶಸ್ತಿ ಸ್ವೀಕರಿಸಬಹುದು.

IPL 2026: ಕಣ್ಣೀರಿಟ್ಟಿದ್ದ ಅಭಿಮಾನಿ ಬಳಿ ಕ್ಷಮೆಯಾಚಿಸಿದ ರೋಹಿತ್ ಶರ್ಮಾ

ಐಪಿಎಲ್​ನಲ್ಲಿ ರೋಹಿತ್ ಪ್ರದರ್ಶನ

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಆಡಿದ 9 ಪಂದ್ಯಗಳಲ್ಲಿ ರೋಹಿತ್ 35.38 ರ ಸರಾಸರಿಯಲ್ಲಿ 283 ರನ್ ಗಳಿಸಿದರು. ಈ ಪಂದ್ಯಾವಳಿಯಲ್ಲಿ ಅವರ ಪ್ರದರ್ಶನ ವಿಶೇಷವಾಗಿರಲಿಲ್ಲ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲಿಯೇ ಸೋಲಬೇಕಾಯಿತು. ಈಗ ಜೂನ್‌ನಲ್ಲಿ, ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಆಡುವುದನ್ನು ಕಾಣಬಹುದು. ಆದರೆ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಈ ಸರಣಿಯಲ್ಲಿ ಭಾಗವಹಿಸುತ್ತಾರೆ. ಇದಕ್ಕಾಗಿ, ಅವರು ಮೊದಲು ಬಿಸಿಸಿಐ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:32 pm, Tue, 26 May 26

Source link

ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಕ್ಯಾತೆ: ಪ್ರಧಾನಿ ಮೋದಿಗೆ ಪತ್ರ ಬರೆದ ವಿಜಯ್​​ – Kannada News | Mekedatu Project: Tamil Nadu CM Vijay Appeals to PM Modi to Halt Karnatakas Dam Construction

ಚೆನ್ನೈ, ಮೇ 26: ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ವಿಜಯ್ ಕ್ಯಾತೆ ತೆಗೆದಿದ್ದು, ಪ್ರಧಾನಿ ಮೋದಿಗೆ ಪತ್ರ ಬರೆದು ಕರ್ನಾಟಕಕ್ಕೆ ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ. ಕಾವೇರಿ ನದಿಯಲ್ಲಿ ಯಾವುದೇ ಯೋಜನೆ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆ ತೀರ್ಪು ಉಲ್ಲಂಘಿಸದಂತೆ ಕರ್ನಾಟಕಕ್ಕೆ ಸಲಹೆ ನೀಡಿ ಎಂದು ವಿಜಯ್​​ ತಿಳಿಸಿದ್ದಾರೆ. ಈ ಸಂಬಂಧ ಇಂದು ಮೋದಿಗೆ ಪತ್ರ ಬರೆದಿರುವ ಅವರು, ನಾಳೆ ಸಂಜೆ 4 ಗಂಟೆಗೆ ಪ್ರಧಾನಿಯನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಒಳ್ಳೆತನದ ಮುಖವಾಡ ಧರಿಸಿದ್ದ ದೀಪಿಕಾ ಪಡುಕೋಣೆ’: ಹೇಳಿಕೆಗೆ ಕ್ಷಮೆ ಕೇಳಿದ ನಿರ್ದೇಶಕ – Kannada News | Imtiaz Ali clarification on Deepika Padukone Good Girl Image Comment Controversy

ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ‘ಒಳ್ಳೆಯ ಹುಡುಗಿ ಇಮೇಜ್ ಕೇವಲ ಒಂದು ಮುಖವಾಡ ಆಗಿತ್ತು’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದ ಖ್ಯಾತ ನಿರ್ದೇಶಕ ಇಮ್ತಿಯಾಜ್ ಅಲಿ, ಈಗ ತಮ್ಮ ಹೇಳಿಕೆಗೆ ಸ್ಪಷ್ಟನೆ ಹಾಗೂ ಕ್ಷಮೆಯಾಚನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಅವರಿಗಾಗಿ ಒಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಇಮ್ತಿಯಾಜ್, ತಮ್ಮ ಹೇಳಿಕೆ ಕೇವಲ ತಮಾಷೆಗಾಗಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಮ್ತಿಯಾಜ್ ಅಲಿ (Imtiaz Ali) ಅವರು ದೀಪಿಕಾ ಪಡುಕೋಣೆ ಅವರ ಆಫ್-ಸ್ಕ್ರೀನ್ ಇಮೇಜ್ ಮತ್ತು 2012ರ ಸೂಪರ್ ಹಿಟ್ ಸಿನಿಮಾ ‘ಕಾಕ್‌ಟೇಲ್’ ಬಗ್ಗೆ ಮಾತನಾಡಿದ್ದರು.

‘ಆ ಸಮಯದಲ್ಲಿ ದೀಪಿಕಾ ಹೊಂದಿದ್ದ ಇಮೇಜ್‌ಗೂ ಕಾಕ್‌ಟೇಲ್ ಚಿತ್ರದ ವೆರೋನಿಕಾ ಪಾತ್ರಕ್ಕೂ ತೀರಾ ವ್ಯತ್ಯಾಸವಿತ್ತು. ನಾನು ಅವರೊಂದಿಗೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರಿಂದ, ಅವರು ಎಷ್ಟರಮಟ್ಟಿಗೆ ಕ್ರೇಜಿ ಮತ್ತು ವೈಲ್ಡ್ ಆಗಿರಬಲ್ಲರು ಎಂಬುದು ನನಗೆ ಗೊತ್ತಿತ್ತು. ಹೊರಗಡೆ ಅವರು ತುಂಬಾ ಒಳ್ಳೆಯ ಹುಡುಗಿ ರೀತಿ ಇಮೇಜ್ ಪ್ರೊಜೆಕ್ಟ್ ಮಾಡುತ್ತಿದ್ದರೂ, ಅವರ ಅಸಲಿ ಮುಖ ಏನೆಂಬುದು ನನಗೆ ತಿಳಿದಿತ್ತು’ ಎಂದಿದ್ದರು ಇಮ್ತಿಯಾಜ್ ಅಲಿ.

‘ಈಗ ಜನರು ದೀಪಿಕಾ ಪಡುಕೋಣೆ ಅವರ ಆ ಮುಖವಾಡವನ್ನು ನೋಡಿದ್ದಾರೆ. ಹಾಗಾಗಿ ದೀಪಿಕಾಗೆ ಆ ಪಾತ್ರ ಹೊಸದಾಗಿರುತ್ತದೆ ಮತ್ತು ಅವರಲ್ಲಿನ ಎಮೋಷನಲ್ ಆಯಾಮವನ್ನು ಹೊರತರಬಹುದು ಎಂದು ನಾನು ಭಾವಿಸಿದ್ದೆ’ ಎಂದು ಇಮ್ತಿಯಾಜ್ ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನ ಅತ್ಯಂತ ಪ್ರೀತಿಯ ದೀಪಿಕಾ, ನೀನು ನನ್ನ ಆತ್ಮೀಯ ಗೆಳತಿ. ನನ್ನ ಜೋಕ್‌ಗಳಿಗೆ ನೀನೇ ಸುರಕ್ಷಿತ ಆಯ್ಕೆ. ನಾನು ಕೇವಲ ತಮಾಷೆಗಾಗಿ ಮಾಡಿದ ಈ ಕಮೆಂಟ್‌ ಅನ್ನು ನೀನು ಖಂಡಿತವಾಗಿಯೂ ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ. ಯಾಕೆಂದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ ಎಂಬುದು ನಿನಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿಲ್ಲ. ಆದರೆ ಕೆಲವರು ನೀನು ಈ ಹೇಳಿಕೆಯಿಂದ ಬೇಸರ ಮಾಡಿಕೊಳ್ಳಬಹುದು ಎಂದು ನನಗೆ ಹೇಳಿದರು, ಹಾಗಾಗಿ ದಯವಿಟ್ಟು ಬೇಸರ ಮಾಡಿಕೊಳ್ಳಬೇಡ. ನಿನಗೆ ನೋವು ಉಂಟುಮಾಡುವುದು ಈ ಜನ್ಮದಲ್ಲಂತೂ ನನ್ನಿಂದ ಸಾಧ್ಯವಿಲ್ಲ ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ನಾನು ನಿನಗೆ ಇಂತಹದೊಂದು ಸ್ಪಷ್ಟನೆ ನೀಡಬೇಕಾಗುತ್ತದೆ ಅಂತ ಯಾವತ್ತೂ ಯೋಚಿಸಿರಲಿಲ್ಲ. ಆದರೆ ವಿಷಯಗಳನ್ನು ಹಾಗೇ ಬಿಟ್ಟು ರಿಸ್ಕ್ ತೆಗೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಿನಗೆ ಯಾವಾಗಲೂ ನನ್ನ ಪ್ರೀತಿ ಇರಲಿದೆ’ ಎಂದು ಇಮ್ತಿಯಾಜ್ ತಿಳಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಇಮ್ತಿಯಾಜ್ ಅಲಿ ಕಾಂಬಿನೇಷನ್‌ನಲ್ಲಿ ಈ ಹಿಂದೆ 2009ರ ರೊಮ್ಯಾಂಟಿಕ್ ಸಿನಿಮಾ ‘ಲವ್ ಆಜ್ ಕಲ್’ ಮೂಡಿಬಂದಿತ್ತು. ಇದಾದ ಬಳಿಕ 2015ರಲ್ಲಿ ರಣಬೀರ್ ಕಪೂರ್ ನಟನೆಯ ‘ತಮಾಷಾ’ ಚಿತ್ರದಲ್ಲೂ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಿಗೆ ಕೆಲಸಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ; ವಿಡಿಯೋ ಲೀಕ್

ಈಗ ದಿಲ್ಜಿತ್ ದೋಸಾಂಜ್, ಶರ್ವರಿ, ವೇದಾಂತ್ ರೈನಾ ಮತ್ತು ನಸೀರುದ್ದೀನ್ ಶಾ ನಟನೆಯ ‘ಮೈ ವಾಪಸ್ ಆವುಂಗಾ’ ಸಿನಿಮಾಗೆ ಇಮ್ತಿಯಾಜ್ ಅಲಿ ಅವರು ನಿರ್ದೇಶನ ಮಾಡಿದ್ದಾರೆ. ಜೂನ್ 12ರಂದು ಈ ಸಿನಿಮಾ ತೆರೆಕಾಣಲಿದೆ. ಇತ್ತ, ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಜೊತೆ ‘ಕಿಂಗ್’ ಹಾಗೂ ಅಲ್ಲು ಅರ್ಜುನ್ ಜೊತೆ ‘ರಾಕಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ನಾನು ಯಾವುದಕ್ಕೂ ಕೇರ್ ಮಾಡಲ್ಲ: ಪಾಕಿಸ್ತಾನಿ ಕಲಾವಿದರ ಬಗ್ಗೆ ಅರಿಜಿತ್ ಸಿಂಗ್ ಹೇಳಿಕೆ – Kannada News | Arijit Singh talks about Pakistani singers facing ban in India

ಅರಿಜಿತ್ ಸಿಂಗ್ (Arijit Singh) ಭಾರತದ ಟಾಪ್ ಗಾಯಕ. ಸ್ಪಾಟಿಫೈನಲ್ಲಿ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಅತಿ ಹೆಚ್ಚು ಫಾಲೋವರ್​​ಗಳನ್ನು ಹೊಂದಿರುವ ಗಾಯಕ ಅರಿಜಿತ್. ಅದ್ಭುತವಾದ ಕಂಠ ಹೊಂದಿರುವ, ಆದರೆ ತಮ್ಮ ಸರಳತೆ, ವಿನಯತೆಯಿಂದಲೂ ಜನಪ್ರಿಯತೆಗಳಿಸಿರುವ ಅರಿಜಿತ್ ಸಿಂಗ್, ಕೆಲ ತಿಂಗಳ ಹಿಂದಷ್ಟೆ ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ಹಿನ್ನೆಲೆ ಗಾಯನ ಮಾಡುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಕಾನ್ಸರ್ಟ್​​ಗಳನ್ನು ಮುಂದುವರೆಸುವುದಾಗಿ ಹೇಳಿದ್ದರು. ಇದೀಗ ಅಬುದಾಬಿಯಲ್ಲಿ ಲೈವ್ ಕಾನ್ಸರ್ಟ್ ನೀಡಿರುವ ಅರಿಜಿತ್ ಸಿಂಗ್ ಪಾಕ್ ಗಾಯಕರ ಬಗ್ಗೆ ಮಾತನಾಡಿರುವುದು ಸಖತ್ ವೈರಲ್ ಆಗಿದೆ.

ಭಾರತ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಗಾಯಕ ಅರಿಜಿತ್ ಸಿಂಗ್, ಅಬುದಾಬಿ ಕಾನ್ಸರ್ಟ್​​ನಲ್ಲಿ ‘ಪೆಹಲಿ ನಜರ್ ಮೇ’ ಹಾಡು ಹಾಡಿದರು. ಅಸಲಿಗೆ ಆ ಹಾಡು ಪಾಕಿಸ್ತಾನಿ ಗಾಯಕ ಅತೀಪ್ ಅಸ್ಲಂ ಹಾಡಿದ್ದ ಹಾಡಾಗಿತ್ತು. ಬಳಿಕ ಮಾತನಾಡಿದ ಅರಿಜಿತ್ ಸಿಂಗ್, ‘ಭಾರತದಲ್ಲಿ ಏನಾಗುತ್ತಿದೆ, ಪಾಕಿಸ್ತಾನಿ ಹಾಡುಗಾರರ ಮೇಲೆ ನಿಷೇಧ ಹೇರಲಾಗಿದೆಯೇ?, ಇದು ಸರಿಯೇ?’ ಎಂದು ಪ್ರಶ್ನೆ ಮಾಡಿದರು. ಬಳಿಕ ‘ನಾನು ಇಂಥಹಾ ವಿವಾದಕ್ಕೆಲ್ಲ ಕೇರ್ ಮಾಡುವವನಲ್ಲ’ ಎಂದ ಅರಿಜಿತ್ ಸಿಂಗ್, ‘ನಾನಂತೂ ಆತಿಫ್ ಅಸ್ಲಂ ಮತ್ತು ಶಫ್ಕತ್ ಅಮಾನತ್ ಅವರುಗಳ ಫ್ಯಾನ್’ ಎಂದರು.

ಇದನ್ನೂ ಓದಿ:ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?

ಅರಿಜಿತ್ ಹೇಳಿದ ಆತಿಫ್ ಅಸ್ಲಂ ಮತ್ತು ಶಫ್ಕತ್ ಅಮಾನತ್ ಇಬ್ಬರೂ ಸಹ ಪಾಕಿಸ್ತಾನಿ ಗಾಯಕರಾಗಿದ್ದು, ಅತೀಫ್ ಅಸ್ಲಂ ಅಂತೂ ಹಿಂದಿ ಸಿನಿಮಾಗಳಲ್ಲಿ ಹಲವಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ದಶಕಗಳಿಂದಲೂ ಪಾಕಿಸ್ತಾನದ ಹಲವಾರು ಗಾಯಕರುಗಳು ಹಿಂದಿ ಸಿನಿಮಾಗಳಲ್ಲಿ ಹಾಡುತ್ತಾ, ಸಂಗೀತ ನೀಡುತ್ತಾ ಬಂದಿದ್ದಾರೆ. ಪಾಕಿಸ್ತಾನಿ ಹಾಡುಗಳನ್ನು ಹಿಂದಿಗೆ ರೀಮೇಕ್ ಮಾಡುತ್ತಾ ಬರುತ್ತಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿದ್ದು, ಎರಡೂ ದೇಶಗಳ ಕಲಾವಿದರು ಪರಸ್ಪರರ ದೇಶಗಳಲ್ಲಿ ಕೆಲಸ ಮಾಡದಂಥಹಾ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಅರಿಜಿತ್ ಸಿಂಗ್ ಅವರು ಇದೀಗ ಇದರ ವಿರುದ್ಧ ದನಿ ಎತ್ತಿದ್ದಾರೆ.

ಅರಿಜಿತ್ ಸಿಂಗ್, ಭಾರತದ ಟಾಪ್ ಗಾಯಕರಾಗಿದ್ದಾರೆ. ಹಲವರಿಗೆ ಭಾರತದಲ್ಲಿ ಮಾತ್ರವಲ್ಲದೆ ಪಾಕಿಸ್ತಾನ ಹಾಗೂ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ ಅವರು ಸಿನಿಮಾ ಹಿನ್ನೆಲೆ ಗಾಯನದಿಂದ ನಿವೃತ್ತಿ ಹೊಂದಿದ್ದಾರೆ. ಸಿನಿಮಾ ಹಿನ್ನೆಲೆ ಗಾಯನ ತಮಗೆ ಆನಂದ ನೀಡುತ್ತಿಲ್ಲ, ನನ್ನ ಗಾಯನ ಪ್ರತಿಭೆಗೆ ಸವಾಲು ಹಾಕುತ್ತಿಲ್ಲ ಎಂಬ ಕಾರಣಕ್ಕೆ ಗಾಯನದಿಂದ ನಿವೃತ್ತಿ ಪಡೆದಿರುವ ಅವರು ಲೈವ್ ಕಾನ್ಸರ್ಟ್​​ಗಳನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ತಿಂಗಳಾಂತ್ಯದವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ – Kannada News | IMD issues yellow And Orange alert for Karnataka Some Districts amid rain Till May 30

ಬೆಂಗಳೂರು, (ಮೇ 26): ಕರ್ನಾಟಕ(Karnataka) ಹಲವೆಡೆ ಪೂರ್ವ ಮುಂಗಾರು ಮಳೆ (Pre Monsoon) ಭರ್ಜರಿಯಾಗುತ್ತಿದ್ದು, ಇದು ಈ ತಿಂಗಳು ಅಂತ್ಯ ಅಂದರೆ ಜೂನ್ 30ರ ವರೆಗೂ ಮುಂದುವರೆಯಲಿದೆ.  ಹೌದು…ಜೂನ್ 3ರ ವರೆಗೂ ರಾಜ್ಯದ ವಿವಿದೆಡೆ ಗುಡುಗು, ಮಿಂಚು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಆಲಿಕಲ್ಲು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ (ಮೇ 27) ‘ಯೆಲ್ಲೋ (Yellow Alert) ಹಾಗೂ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 30ರ ವರೆಗೂ ಮಳೆ

ಮೇ 26 ರಿಂದ 28 ರವರೆಗೆ ಉತ್ತರ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.ದಕ್ಷಿಣ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇನ್ನು ಮೇ 26 ರಿಂದ 30, 2026 ರವರೆಗೆ ಕರಾವಳಿ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಬೆಂಗಳೂರು ನಗರಕ್ಕೆ ಮುನ್ಸೂಚನೆ

ಇಂದು (ಮೇ 26) ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಗಾಳಿಯೊಂದಿಗೆ (ಗಂಟೆಗೆ 30-40 ಕಿ.ಮೀ) ಹಗುರದಿಂದ ಮಧ್ಯಮ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 26 ಮತ್ತು 27ರಂದು ಭಾರೀ ಮಳೆ (64.5mm – 115.5mm) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಯೆಲ್ಲೊ ಅಲರ್ಟ್ ನೀಡಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 27 ರಂದು, ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 50-60 ಕಿಮೀ ತಲುಪುವ ಸಾದ್ಯತೆಯಿದ್ದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ IMD ಆರೆಂಜ್‌ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ? – Kannada News | Human Creators Thrive Amidst AI Influencers: The Future of Trustworthy Brand Endorsements

AI ಇನ್‌ಫ್ಲುಯೆನ್ಸರ್ಸ್Image Credit source: Whosthat and Anandbazar

ಬೆಂಗಳೂರು, ಮೇ 26: ಇತ್ತೀಚಿನ ದಿನಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ತಮ್ಮ ಮಾರ್ಕೆಟಿಂಗ್ ಬಜೆಟ್ ಅನ್ನು ಮರುಹಂಚಿಕೆ ಮಾಡುತ್ತಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ, ಬ್ರ್ಯಾಂಡ್‌ಗಳು ಈಗ ನ್ಯಾನೋ ಮತ್ತು ಮೈಕ್ರೋ ಕಂಟೆಂಟ್ ಕ್ರಿಯೇಟರ್ಸ್‌ಗಳ ಬದಲಿಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವರ್ಚುವಲ್ ವ್ಯಕ್ತಿತ್ವಗಳನ್ನು (AI Influencers) ಬಳಸಿಕೊಳ್ಳಲು ಮುಂದಾಗುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಇಂತಹ ಸಿಂಥೆಟಿಕ್ ಇನ್‌ಫ್ಲುಯೆನ್ಸರ್‌ಗಳ ಸಂಖ್ಯೆ ಹೆಚ್ಚುತ್ತಿದ್ದರೂ, ನೈಜ ಮತ್ತು ವಿಶ್ವಾಸಾರ್ಹ ಫಾಲೋವರ್ಸ್ ಹೊಂದಿರುವ ಹ್ಯೂಮನ್ ಕ್ರಿಯೇಟರ್ಸ್‌ಗಳಿಗೆ (ಕಂಟೆಂಟ್ ಸೃಷ್ಟಿಸುವ ವ್ಯಕ್ತಿಗಳು) ಬೇಡಿಕೆ, ಮೌಲ್ಯ ಹಾಗೂ ಸಂಭಾವನೆ ಮತ್ತಷ್ಟು ಹೆಚ್ಚುತ್ತಿದೆ ಎಂದು ದಿ ಮಿಂಟ್ ಪತ್ರಿಕೆಯ ವಿಶೇಷ ವರದಿಯಲ್ಲಿ ಹೇಳಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಮೈರಾ ಕಪೂರ್’ ಮತ್ತು ‘ಕೈರಾ’

ಖ್ಯಾತ ಕಾಂಡೋಮ್ ಬ್ರ್ಯಾಂಡ್ ‘ಮ್ಯಾನ್‌ಫೋರ್ಸ್’ ಇತ್ತೀಚೆಗೆ ‘ಮೈರಾ ಕಪೂರ್’ ಎಂಬಾಕೆಯನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಆದರೆ ಅಚ್ಚರಿಯ ವಿಷಯವೆಂದರೆ, ಮೈರಾ ಎಂಬಾಕೆ ನಿಜವಾಗಿ ಅಸ್ತಿತ್ವದಲ್ಲೇ ಇಲ್ಲ! ಆಕೆ ಸಂಪೂರ್ಣವಾಗಿ ಬ್ರ್ಯಾಂಡ್ ಒಡೆತನದ ಒಂದು ಎಐ ಮಾಡೆಲ್.

“ಸಾಂಪ್ರದಾಯಿಕ ಅಂಬಾಸಿಡರ್‌ಗಳಿಗೆ ಹೋಲಿಸಿದರೆ, AI ಪಾತ್ರಗಳು (Character) ಹೆಚ್ಚಿನ ಕ್ರಿಯೇಟಿವಿಟಿಗೆ ಅವಕಾಶ (Creative flexibility) ನೀಡುತ್ತವೆ. ವಿವಿಧ ಪ್ರಚಾರಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ತಕ್ಕಂತೆ ಇವುಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು” ಎಂದು ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್‌ನ ಗ್ರಾಹಕ ವ್ಯವಹಾರಗಳ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಜಾಯ್ ಚಟರ್ಜಿ ತಿಳಿಸಿದ್ದಾರೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕಂಟೆಂಟ್ ರಚನೆ ಮತ್ತು ಗ್ರಾಹಕರ ಸಂವಹನಕ್ಕಾಗಿ ಎಐ ಉಪಕರಣಗಳನ್ನು ವ್ಯಾಪಕವಾಗಿ ಬಳಸಲು ಯೋಜಿಸಿದೆ.

ಇದನ್ನೂ ಓದಿ: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

ಇದೇ ಹಾದಿಯಲ್ಲಿ, ಪ್ರಸಿದ್ಧ ಐಸ್‌ಕ್ರೀಮ್ ತಯಾರಕ ಸಂಸ್ಥೆ ‘ವಾಡಿಲಾಲ್’ ಮಾನವ ಮತ್ತು ಎಐ ಮಿಶ್ರಣದ ‘ವ್ಯಾಡಿ’ (Vaddy) ಎಂಬ ಮ್ಯಾಸ್ಕಾಟ್ ಅನ್ನು ಬಿಡುಗಡೆ ಮಾಡಿದೆ. ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್ ‘ಕ್ಯಾರಟ್‌ಲೇನ್’ (Carat Lane) ಎಐ ಇನ್‌ಫ್ಲುಯೆನ್ಸರ್ ‘ಕೈರಾ’ (Kyra) ಜೊತೆ ಅಭಿಯಾನ ನಡೆಸಿದ್ದರೆ, ಮತ್ತೊಂದು ಜನಪ್ರಿಯ ಎಐ ಇನ್‌ಫ್ಲುಯೆನ್ಸರ್ ‘ನೈನಾ’ (Naina) ಈಗಾಗಲೇ ಒಪ್ಪೋ, ಕೋಟಕ್ ಮತ್ತು ಸೋಫಿ ಅಂತಹ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದೆ.

ದೀರ್ಘಾವಧಿಯ ತಂತ್ರಗಾರಿಕೆ

‘ನೈನಾ’ ಎಐ ಪಾತ್ರವನ್ನು ಸೃಷ್ಟಿಸಿದ ‘ಅವತಾರ್ ಮೆಟಾ ಲ್ಯಾಬ್ಸ್’ನ ಸಹ-ಸ್ಥಾಪಕ ಅಭಿಷೇಕ್ ರಜ್ದಾನ್ ಮಾತನಾಡಿ, “ಹಿಂದೆ ಎಐ ಇನ್‌ಫ್ಲುಯೆನ್ಸರ್‌ಗಳನ್ನು ಕೇವಲ ಒಂದು ಪ್ರಚಾರದ ಪ್ರಯೋಗವಾಗಿ ನೋಡಲಾಗುತ್ತಿತ್ತು. ಆದರೆ ಇಂದು ಬ್ರ್ಯಾಂಡ್‌ಗಳು ಇದನ್ನು ದೀರ್ಘಾವಧಿಯ ವಿಷಯ ಮತ್ತು ಸಂವಹನ ತಂತ್ರವಾಗಿ ಪರಿಗಣಿಸುತ್ತಿವೆ,” ಎಂದಿದ್ದಾರೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ಆದರೆ, ಕೇವಲ ಎಐ ತಂತ್ರಜ್ಞಾನವಿದ್ದರೆ ಸಾಲದು, ಅದಕ್ಕೆ ಸಾಂಸ್ಕೃತಿಕ ಪ್ರಸ್ತುತತೆ ಮತ್ತು ಬಲವಾದ ಕಥೆ ಹೇಳುವ ಶೈಲಿ (Storytelling) ಬೇಕು. ಭವಿಷ್ಯದಲ್ಲಿ ಎಐ ಇನ್‌ಫ್ಲುಯೆನ್ಸರ್‌ಗಳು ಕೇವಲ ಪುನರಾವರ್ತಿತ ಬ್ರ್ಯಾಂಡ್ ಸಂವಹನಗಳನ್ನು ನಿಭಾಯಿಸಲಿದ್ದಾರೆ. ಆದರೆ ನೈಜ ವಿಶ್ವಾಸಾರ್ಹತೆಗಾಗಿ ಮಾನವ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು? – Kannada News | How did the dowry system start? Here is information about it

ನಮ್ಮ ಭಾರತದಲ್ಲಿ ವರದಕ್ಷಿಣೆ ಪದ್ಧತಿ (dowry system) ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ ಸಹ ಇಂದಿಗೂ ಅದೆಷ್ಟೋ ಕಡೆ ವರದಕ್ಷಿಣೆಯೆಂಬ ಅನಿಷ್ಟ ಪಿಡುಗು ಜೀವಂತವಾಗಿದೆ. ಈ ಪಿಡುಗಿಗೆ ಅದೆಷ್ಟೋ ಮುಗ್ಧ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇತ್ತೀಚಿಗಷ್ಟೇ ಭೋಪಾಲ್‌ನ  33 ವರ್ಷದ  ತ್ವಿಷಾ ಶರ್ಮಾ ಹಾಗೂ ಗ್ರೇಟರ್‌ ನೋಯ್ಡದ 24 ವರ್ಷದ ದೀಪಿಕಾ ನಾಗರ್‌ ಎಂಬ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ಎಷ್ಟೋ ಹೆಣ್ಣು ಮಕ್ಕಳು ವರದಕ್ಷಿಣೆ ಪಿಡುಗಿಗೆ ಬಲಿಯಾಗಿದ್ದಾರೆ. ಹೆಣ್ಣು ಮಕ್ಕಳ ಜೀವ ಕಸಿಯುತ್ತಿರುವ ಈ ಅನಿಷ್ಟ ಪಿಡುಗು ಪ್ರಾರಂಭವಾದದ್ದು ಹೇಗೆ ಗೊತ್ತಾ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವರದಕ್ಷಿಣೆ ಪದ್ಧತಿ ಆರಂಭವಾದ್ದು ಹೇಗೆ?

ವರದಕ್ಷಿಣೆ ಯಾವಾಗ ಪ್ರಾರಂಭವಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ನಾವು ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಇದು ಆರಂಭದಲ್ಲಿ ಸಾಮಾಜಿಕ ಪಿಡುಗು ಆಗಿರಲಿಲ್ಲ, ಬದಲಿಗೆ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗವಾಗಿತ್ತು. ಆದರೆ ಕಾಲ ಕ್ರಮೇಣ ವರದಕ್ಷಿಣೆ ಹೆಣ್ಣು ಮಕ್ಕಳ ಜೀವ ಕಸಿಯುವ ಅನಿಷ್ಟ ಪಿಡುಗಾಯಿತು.

ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗ:

ಪ್ರಾಚೀನ ಭಾರತದಲ್ಲಿ ಅಥವಾ ವೈದಿಕ ಕಾಲದಲ್ಲಿ, ಇಂದು ಪ್ರಚಲಿತದಲ್ಲಿರುವ ದುರಾಸೆಯ ವರದಕ್ಷಿಣೆ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಹಿಂದೂ ಧರ್ಮಗ್ರಂಥಗಳು ಆ ಸಮಯದಲ್ಲಿ ಕನ್ಯಾದಾನ (ಮಗಳನ್ನು ದಾನ) ಜೊತೆಗೆ ದಕ್ಷಿಣೆ (ಉಡುಗೊರೆಗಳು) ನೀಡುವ ಪದ್ಧತಿಯನ್ನು ಉಲ್ಲೇಖಿಸುತ್ತವೆ. ಒಬ್ಬ ಹುಡುಗಿ ಮದುವೆಯಾದಾಗ, ಮದುವೆಯ ನಂತರ ತನ್ನ ತಂದೆಯ ಆಸ್ತಿಯ ಒಂದು ಭಾಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಇಡೀ ವ್ಯವಸ್ಥೆಯನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದರು. ಮದುವೆಯ ಸಮಯದಲ್ಲಿ ಪಡೆದ ಹಣ ಮತ್ತು ಅಮೂಲ್ಯ ಉಡುಗೊರೆಗಳನ್ನು ವರ ಅಥವಾ ಅವನ ಕುಟುಂಬಕ್ಕೆ ಅಲ್ಲ, ವಧುವಿಗೆ ನೇರವಾಗಿ ನೀಡಲಾಗುತ್ತಿತ್ತು. ಈ ಮೂಲಕ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕ ಬೆಂಬಲ, ಸ್ವಾತಂತ್ರ್ಯವನ್ನು ನೀಡಲಾಯಿತು.

ಸಮಾಜದಲ್ಲಿ ಹೆಮ್ಮೆಯ ಸಂಕೇತ:

ಕಾಲ ಬದಲಾಯಿತು, ಮತ್ತು ಮಧ್ಯಯುಗದ ವೇಳೆಗೆ, ಈ ವರದಕ್ಷಿಣೆ ಪದ್ಧತಿ ಸಂಪೂರ್ಣವಾಗಿ ಬದಲಾಯಿತು.  ರಾಜರು, ಚಕ್ರವರ್ತಿಗಳು ಮತ್ತು ಶ್ರೀಮಂತ ಕುಟುಂಬಗಳ ಯುಗದ ವೇಳೆ, ನಿರ್ದಿಷ್ಟವಾಗಿ ರಜಪೂತ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ವಿವಾಹದ ಜೊತೆಗೆ ದೊಡ್ಡ ಮೊತ್ತದ ಹಣ, ಆಭರಣಗಳು ಮತ್ತು ಸೇವಕರನ್ನು ವರದಕ್ಷಿಣೆಯ ರೂಪದಲ್ಲಿ ಗಂಡಿನ ಮನೆಗೆ  ಕಳುಹಿಸಲು ಪ್ರಾರಂಭಿಸಿದವು, ಈ ಪದ್ಧತಿಯು ಪ್ರತಿಷ್ಠೆಯ ಸಂಕೇತವಾಗಿ ಬದಲಾಯಿತು. ಈ ವಿವಾಹಗಳಿಂದ ಪಡೆದ ಅಪಾರ ವರದಕ್ಷಿಣೆಯು ರಾಜಮನೆತನದ ಖಜಾನೆಯನ್ನು ಶ್ರೀಮಂತಗೊಳಿಸಿತು ಮತ್ತು ಈ ಪದ್ಧತಿ ಮುಸ್ಲಿಂ ಸಮುದಾಯಕ್ಕೂ ಹರಡಿತು. ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜವಾಬ್ದಾರಿಯಿಂದ ಬೇಗನೆ ಮುಕ್ತರಾಗಲು, ಪೋಷಕರು ದೊಡ್ಡ ಮೊತ್ತದ ವರದಕ್ಷಿಣೆಯನ್ನು ನೀಡಲು ಪ್ರಾರಂಭಿಸಿದರು. ನಂತರದಲ್ಲಿ ವರದಕ್ಷಿಣೆಯೆಂಬ ಪಿಡುಗು ಸಮಾಜದಲ್ಲಿ  ಮತ್ತಷ್ಟು ಬೇರೂರಿತು.

ಇದನ್ನೂ ಓದಿ: ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ವರದಕ್ಷಿಣೆ ಸಮಾಜಿಕ ಪಿಡುಗಾಗಿ ಬದಲಾಯಿತು:

ವಿವಾಹಿತ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಒಂದು ಮಾರ್ಗವಾಗಿ ಸ್ಥಾಪಿಸಲಾದ ವರದಕ್ಷಿಣೆ ವ್ಯವಸ್ಥೆಯು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಸಾಮಾಜಿಕ ಪಿಡುಗಾಗಿ ಬದಲಾಯಿತು. ಈ ಸಮಯದಲ್ಲಿ ಬ್ರಿಟಿಷರು ಮಹಿಳೆಯರ ಸ್ಥಾನವನ್ನು ತೀವ್ರವಾಗಿ ದುರ್ಬಲಗೊಳಿಸುವ ಕಾನೂನನ್ನು ಜಾರಿಗೆ ತಂದರು. ಈ ನಿಯಮವು ಮಹಿಳೆಯರು ಯಾವುದೇ ಆಸ್ತಿಯನ್ನು ಹೊಂದುವುದನ್ನು ಸಂಪೂರ್ಣವಾಗಿ ನಿಷೇಧಿಸಿತು. ಪರಿಣಾಮವಾಗಿ, ಮದುವೆಯ ನಂತರ ವಧು ತನ್ನ ಹೆತ್ತವರಿಂದ ಪಡೆದ ಯಾವುದೇ ಹಣ ಅಥವಾ ಆಸ್ತಿಯು ಕಾನೂನುಬದ್ಧವಾಗಿ ಅವಳ ಗಂಡನ ಒಡೆತನಕ್ಕೆ ಹೋಗಲು ಪ್ರಾರಂಭಿಸಿತು. ಇದು ಹಳೆಯ ಸಂಪ್ರದಾಯವನ್ನು ದುರಾಸೆಯ ಅಪಾಯಕಾರಿ ಆಟವಾಗಿ ಪರಿವರ್ತಿಸಿತು. ಇದರ ಬಳಿಕ ವರನ ಕುಟುಂಬಗಳು ತಮ್ಮ ಮನೆಗೆ ಬರುವ  ವಧುವನ್ನು ಸೊಸೆಯಾಗಿ ನೋಡದೆ ಹಣ, ಆಸ್ತಿಯನ್ನು ಕೊಡುವ ವಸ್ತುವಾಗಿ ನೋಡಲು ಪ್ರಾರಂಭಿಸಿದವು. ಹಣ, ಆಸ್ತಿ, ಬಂಗಾರ ಸೇರಿದಂತೆ ದುಬಾರಿ ವಸ್ತುಗಳ ಸಲುವಾಗಿ ವರದಕ್ಷಿಣೆಯ ಹೆಸರಲ್ಲಿ ಹೆಣ್ಣಿಗೆ ಚಿತ್ರಹಿಂಸೆಯನ್ನು ಕೊಡಲು ಪ್ರಾರಂಭಿಸಿದವು.

ಈ ರೀತಿಯಾಗಿ, ಒಂದು ಕಾಲದಲ್ಲಿ ಮಗಳನ್ನು ತನ್ನ ಹೊಸ ಮನೆಯಲ್ಲಿ ಆರ್ಥಿಕವಾಗಿ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿಡಲು ಪ್ರಾರಂಭಿಸಲಾದ ವರದಕ್ಷಿಣೆ ಪದ್ಧತಿ, ಇಂದು ಹೆಣ್ಣು ಮಕ್ಕಳ ಜೀವ ಕಸಿಯುತ್ತವೆ. 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಇಂದಿಗೂ ಆಧುನಿಕ ಸಮಾಜದಲ್ಲಿ ವರದಕ್ಷಿಣೆಯೆಂಬ ಪಿಡುಗು ಜೀವಂತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು – Kannada News | Kolar Farm Pond Tragedy: 9 Deaths Including Children Reported in Just 20 Days

ಕೋಲಾರ, ಮೇ 26: ಜಿಲ್ಲೆಯಲ್ಲಿ ಕೃಷಿ ಹೊಂಡಗಳು (Farm Ponds) ಅಕ್ಷರಶಃ ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ನಿನ್ನೆ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮತ್ತೆ ಇಬ್ಬರು ಸಹೋದರರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ನಡೆದಿದೆ. ಆ ಮೂಲಕ ಕಳೆದ ಇಪ್ಪತ್ತು ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರು ಮೃತಪಟ್ಟಿದ್ದಾರೆ. ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ, ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶದ ನಡುವೆಯೂ ಸಾವಿನ ಸರಣಿ ಮುಂದುವರೆದಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ ಮೃತ್ಯು ಕೂಪವಾದ ಕೃಷಿ ಹೊಂಡಗಳು
  • ಕಳೆದ 20 ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರ ಸಾವು
  • ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ

ತಾತನ ಮನೆಗೆ ಬಂದಿದ್ದ ಅಣ್ಣತಮ್ಮ ಕೃಷಿ ಹೊಂಡಕ್ಕೆ ಬಿದ್ದು ಸಾವು

ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರ ಸಂಖ್ಯೆ ಏರಿಕೆ ಆಗುತ್ತಿದೆ. ಕೃಷಿ ಹೊಂಡಗಳಿಗೆ ಮುಳ್ಳುತಂತಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂಆರ್​​ ರವಿ ಒಂದು ವಾರದ ಗಡುವು ನೀಡಿದ್ದರು. ಒಂದು ವಾರದ ನಂತರವೂ ಸಾವಿನ ಸರಣಿ ಮುಂದುವರೆದಿದೆ. ನಿನ್ನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮುಳುಗಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡಗಳು: 15 ದಿನದಲ್ಲಿ 7 ಮಂದಿ ಸಾವು

ದೇವಕಿರಣ್(12) ಮತ್ತು ವಿನುತ್​(9) ಮೃತ ಸಹೋದರರು. ಬಾಲಕರು ವಸತಿ ಶಾಲೆಯಲ್ಲಿ ಓದುತ್ತಿದ್ದರು. ಬೇಸಿಗೆ ರಜೆ ಹಿನ್ನೆಲೆ ತಾತನ ಮನೆಗೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ಮೃತರಾದವ ವಿವರ

  • ಮೇ-5ರಂದು ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಗ್ರಾಮದ ತನುಶ್ರೀ(15) ಮತ್ತು ಕಾರ್ತಿಕ್ (8) ಮೃತಪಟ್ಟಿದ್ದರು.
  • ಮೇ-8ರಂದು ಶ್ರೀನಿವಾಸಪುರ ‌ತಾಲ್ಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋಗಿದ್ದ ನರೇಂದ್ರ (25) ಮತ್ತು ಚಂದನ್ (24) ಮೃತಪಟ್ಟಿದ್ದರು.
  • ಮೇ- 17ರಂದು ಜಿಲ್ಲೆಯ ಮಾಲೂರು ತಾಲ್ಲೂಕು ನಕ್ಕನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸ್ (40), ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಸಾವನ್ನಪ್ಪಿದ್ದರು.
  • ಮೇ-25ರಂದು ಮಾಲೂರು ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಸೋದರರಾದ ದೇವಿಕಿರಣ್ (12) ಹಾಗೂ ವಿನುತ್(9) ಸಾವನ್ನಪ್ಪಿದ್ದರು. ಸದ್ಯ ಸುರಕ್ಷತಾ ಕ್ರಮಕೈಗೊಳ್ಳದ ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ ನೀಡಿದ್ದಾರೆ.

ಹೈವೇಯಲ್ಲಿ ಮತ್ತೊಂದು ಅಪಘಾತ: ಬಾಲಕ ಸಾವು

ಕೋಲಾರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿದ್ದು, ನಾಲ್ಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಡೆದಿದೆ. ಬಂಗಾರಪೇಟೆ ಮೂಲದ ಮುಜಾಮಿಲ್ (9) ಮೃತ ಬಾಲಕ. ಇನೋವಾ ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಾಯಗಾಳಾಗಿವೆ.

ಇದನ್ನೂ ಓದಿ: ಗಡಿಪಾರಾಗಿದ್ದ ರೌಡಿಯನ್ನು ಮಗಳ ಮದುವೆ ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದ ಪೊಲೀಸರು: ವಿಡಿಯೋ ವೈರಲ್

ಗಾಯಾಳುಗಳಾದ ಸಯ್ಯದ್ ಉಲ್ಲಾ, ಸಯ್ಯದ್ ಅಫ್ರಿದ್, ಯಾಸ್ಮಿನ್ ಹಾಗೂ ಅಸೀಬಾರನ್ನು ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version