ದರ್ಶನ್-ವಿಜಯಲಕ್ಷ್ಮೀ ಮದುವೆ ಆದ ಜಾಗದಲ್ಲೇ ಉಗ್ರಂ ಮಂಜು ವಿವಾಹ – Kannada News | Ugram Manju To Marry Sandhya At Dharmasthala in Simple Marriage

ರಾಜೇಶ್ ದುಗ್ಗುಮನೆ |

Updated on:Jan 22, 2026 | 8:35 AM

Share

ಬಿಗ್ ಬಾಸ್​​ಗೆ ತೆರಳುವ ಮೂಲಕ ಒಂದಷ್ಟು ಜನರಿಗೆ ಉಗ್ರಂ ಮಂಜು ಇಷ್ಟ ಆಗಿದ್ದರು. ಈಗ ಅವರು ವಿವಾಹ ಆಗುತ್ತಿದ್ದಾರೆ. ಸಂಧ್ಯಾ ಜೊತೆ ಅವರು ಹಸಮಣೆ ಏರುತ್ತಿದ್ದಾರೆ. ಈ ಮಧ್ಯೆ ಅವರು ಮದುವೆ ವಿಷಯದಲ್ಲಿ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ರವಾರ ಅವರು ಧರ್ಮಸ್ಥಳದಲ್ಲಿ ಮದುವೆ ಆಗುತ್ತಿದ್ದಾರೆ.

Published on: Jan 22, 2026 08:34 AM

Source link

IPL 2026: ಇದೇ ಕಾರಣಕ್ಕೆ RCB ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದೆ!

Source link

ಅಭಿಷೇಕ್ ಶರ್ಮಾ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್

Source link

Video: ದೂರ ಕುಳಿತು ಮಾತನಾಡಿ, ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿಗೆ ಸಂಸದೆ ಪ್ರಿಯಾ ಖಡಕ್ ರಿಯಾಕ್ಷನ್ – Kannada News | Awkward Moment on Stage: MP Priya Saroj Steps Back as Supporter Breaches Personal Space

ಲಕ್ನೋ, ಜನವರಿ 22: ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ಮದುವೆಯಾಗಲಿರುವ ಪ್ರಿಯಾ ಸರೋಜ್ ವೇದಿಕೆ ಕಾರ್ಯಕ್ರಮವೊಂದರಲ್ಲಿ ಇರಿಸುಮುರಿಸು ಅನುಭವಿಸಿರುವ ವಿಡಿಯೋ ವೈರಲ್ ಆಗಿದೆ. ವೇದಿಕೆಯಲ್ಲಿ ಖಾಲಿ ಇದ್ದ ಖುರ್ಚಿಯಲ್ಲಿ ವ್ಯಕ್ತಿಯೊಬ್ಬರು ಬಂದು ಕುಳಿತು ಪ್ರಿಯಾ ಅವರ ಮುಖದ ಹತ್ತಿರ ತಮ್ಮ ಮುಖ ತಂದು ಮಾತನಾಡಿದ್ದು, ಪ್ರಿಯಾ ಅವರ ಕೋಪಕ್ಕೆ ಕಾರಣವಾಗಿದೆ.

ಕೂಡಲೇ ಪ್ರಿಯಾ ಸ್ವಲ್ಪ ಪಕ್ಕಕ್ಕೆ ಸರಿದು ದೂರದಿಂದ ಮಾತನಾಡಿ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ.ಈ ಘಟನೆ ನಡೆದಾಗ ಪ್ರಿಯಾ ಸರೋಜ್ ಅವರನ್ನು ದಂಗಲ್ (ಕುಸ್ತಿ) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ಪ್ರಿಯಾ 2024ರ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಮಚ್ಲಿಶಹರ್‌ನಿಂದ ಸ್ಪರ್ಧಿಸಿ ಗೆದ್ದರು, ಬಿಜೆಪಿಯ ಹಾಲಿ ಸಂಸದ ಬಿಪಿ ಸರೋಜ್ ಅವರನ್ನು 35,೦೦೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಷ್ಟೇ ಅಲ್ಲ ಕೇರಳ, ತಮಿಳುನಾಡಲ್ಲೂ ನಡೆದಿದೆ ರಾಜ್ಯಪಾಲರು VS ಸರ್ಕಾರ ಸಂಘರ್ಷ! ಅಲ್ಲಿ ಏನೇನಾಗಿತ್ತು? ಇಲ್ಲಿದೆ ನೋಡಿ – Kannada News | Not Just Karnataka: Governor vs Government Clashes in Kerala and Tamil Nadu Explained

ಬೆಂಗಳೂರು, ಜನವರಿ 21: ಕರ್ನಾಟಕ ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿನ 11 ಅಂಶಗಳನ್ನು ಓದಲು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ದಕ್ಷಿಣ ಭಾರತದಲ್ಲಿ ತೀವ್ರಗೊಂಡಂತಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡುಳಲ್ಲಿಯೂ ಇಂತಹ ಪ್ರಕರಣ ವರದಿಯಾಗಿತ್ತು. ಕಾನೂನು ತಜ್ಞರ ಪ್ರಕಾರ, ರಾಜ್ಯಪಾಲರ ಭಾಷಣವಿಲ್ಲದೆ ವಿಧಾನಸಭೆ ಕಲಾಪಗಳನ್ನು ನಡೆಸಲು ಸಾಧ್ಯವಿಲ್ಲ.

ತಮಿಳುನಾಡಿನಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ರಾಷ್ಟ್ರಗೀತೆಗೆ ಅಗೌರವ ತೋರಲಾಗಿದೆ ಎಂದು ಭಾಷಣ ಮಾಡದೆ ಸದನದಿಂದ ಹೊರ ನಡೆದಿದ್ದರು. ಭಾಷಣದಲ್ಲಿ ಆಧಾರರಹಿತ ಹೇಳಿಕೆಗಳಿವೆ ಎಂದು ಕೂಡ ಆರೋಪಿಸಿದ್ದರು. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯಪಾಲರು ಭಾಷಣದ ಕೆಲವು ಅಂಶಗಳನ್ನು ಕೈಬಿಟ್ಟು ಓದಿದ್ದಾರೆ ಎಂದು ದೂರಿದ್ದರು. ಸಂವಿಧಾನದ 176ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರು ಸರ್ಕಾರ ನೀಡಿದ ಭಾಷಣವನ್ನು ಓದಬೇಕು ಎಂದು ಸ್ಪಷ್ಟಪಡಿಸಲಾಗಿದೆ. 1966ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್, ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರಾಕರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು ಎಂಬುದು ಗಮನಾರ್ಹ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವರ್ಲ್ಡ್ ರೆಕಾರ್ಡ್… ಟೀಮ್ ಇಂಡಿಯಾದ ಇನ್ನೂರರ ನಾಗಾಲೋಟ

Source link

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್ – Kannada News | Ram Charan on why 8 AM 6 PM Actor’s Mindset and Why Legacy is an Advantage

ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ರಾಮ್ ಚರಣ್ (Ram Charan) ಈಗ ಓಪನ್ ಆಗಿ ಮಾತನಾಡಿದ್ದಾರೆ. ಅನೇಕ ನಾಯಕರು ತಮ್ಮ ಕುಟುಂಬದ ಪರಂಪರೆ ಒತ್ತಡ ಎಂದರೂ, ರಾಮ್ ಚರಣ್ ಮಾತ್ರ ಅನುಕೂಲ ಎನ್ನುತ್ತಿದ್ದಾರೆ. ಆಸ್ಕರ್ ಮಟ್ಟವನ್ನು ತಲುಪಿದ ನಂತರವೂ ಅವರು ತಮ್ಮನ್ನು ತಾವು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಚರಣ್ ತಮ್ಮ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ರಾಮ್ ಚರಣ್, ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಹುಟ್ಟಿದ್ದರಿಂದ ಆದ ಪ್ರಯೋಜನಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ‘ಸಿನಿಮಾ ಕುಟುಂಬದಿಂದ ಬಂದಿರುವುದು ಒಂದು ಅದ್ಭುತ ಅವಕಾಶ. ಮನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಜನರಿದ್ದಾಗ, ನೀವು ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತೀರಿ. ಅಂತಹ ವಾತಾವರಣದಲ್ಲಿ ಬೆಳೆದವರು ನಟನಾ ಶಾಲೆಗೆ ಹೋಗಿ ಹೊಸ ವಿಷಯಗಳನ್ನು ಕಲಿಯುವವರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ’ ಎಂದು ಚರಣ್ ಹೇಳಿದರು. ಪರಂಪರೆಯು ತನ್ನ ಮೇಲೆ ಹೊರೆಯಾಗಿದೆ ಎಂದು ತಾನು ಎಂದಿಗೂ ಭಾವಿಸಲಿಲ್ಲ, ಆದರೆ ಅದನ್ನು ಒಂದು ಅವಕಾಶವಾಗಿ ನೋಡಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಆರಂಭದಲ್ಲಿ ನನಗೆ ಕಷ್ಟವಾಗಲಿಲ್ಲ. ಆದರೆ ಪ್ರೇಕ್ಷಕರು ನನ್ನನ್ನು ನಟನಾಗಿ ಸ್ವೀಕರಿಸುವುದು ಕಷ್ಟಕರವಾಗಬಹುದು. ಏಕೆಂದರೆ ಅವರ ನಿರೀಕ್ಷೆಗಳು ತುಂಬಾ ಹೆಚ್ಚಿರುತ್ತವೆ. ಆದರೆ ಕಾಲಾನಂತರದಲ್ಲಿ, ನಾವು ಮಾಡುವ ಕೆಲಸದ ಮೂಲಕ ಅವರ ಅಭಿಪ್ರಾಯಗಳು ಬದಲಾಗುತ್ತವೆ ಎಂದು ನಾನು ನಂಬುತ್ತೇನೆ’ ಎಂದು ಅವರು ಪ್ರಾಮಾಣಿಕವಾಗಿ ಹೇಳಿದರು.

‘ನಾನು ನನ್ನನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಅದು ಮುಗಿದ ನಂತರ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತೇನೆ. ಯಶಸ್ಸಿನ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ’ ಎಂದು ಎಂದು ಚರಣ್ ತಮ್ಮ ಸರಳ ಜೀವನಶೈಲಿಯ ಬಗ್ಗೆ ವಿವರಿಸುತ್ತಾರೆ. ಈ ಅಭ್ಯಾಸವು ಅವರನ್ನು ಯಾವಾಗಲೂ ಶಾಂತವಾಗಿರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್​​ನಿಂದ ಬಂದು ರಾಮ್ ಚರಣ್​​ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು?

ರಾಮ್ ಚರಣ್ ಪ್ರಸ್ತುತ ತಮ್ಮ ಮುಂದಿನ ಚಿತ್ರ ‘ಪೆದ್ದಿ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಮಾರ್ಚ್ 27, 2026 ರಂದು ಬಿಡುಗಡೆಯಾಗಲಿದೆ. ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರು, ಮೈಸೂರು ಜನರಿಗೆ ತೃಪ್ತಿದಾಯಕ ಸುದ್ದಿ: ಗಾಳಿಯ ಗುಣಮಟ್ಟದಲ್ಲಿ ಈ ನಗರಗಳು ಬೆಸ್ಟ್​ – Kannada News | Karnataka Air Quality Alert: Winter Fog and Pollution Impact on Major Cities

ಬೆಂಗಳೂರು, ಜ.22: ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಹವಾಮಾನದ ಬದಲಾವಣೆಯಿಂದ ಗಾಳಿಯ ಮಟ್ಟದಲ್ಲೂ (Air Quality) ಕೂಡ ಬದಲಾವಣೆ ಆಗಿದೆ. ಚಳಿಗಾಲದ ಈ ಸಮಯದಲ್ಲಿ ಗಾಳಿಯ ವೇಗ ಕಡಿಮೆಯಿರುವುದರಿಂದ ಮತ್ತು ಮುಂಜಾನೆ ಮಂಜು ಇರುವುದರಿಂದ ಮಾಲಿನ್ಯಕಾರಕ ಕಣಗಳು ಭೂಮಿಗೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಬೆಂಗಳೂರಿನಲ್ಲಿ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾಮಗಾರಿಗಳಿರುವ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕಡಿಮೆ ಇರಲಿದೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್​​​ನಲ್ಲಿ ಗಾಳಿಯ ಗುಣಮಟ್ಟ 150 ದಾಟಿದ್ದು, ಇದು ಮಕ್ಕಳಿಗೆ ಹಾಗೂ ಹಿರಿಯರಿಗೆ ಅಪಾಯಕಾರಿ ಎಂದು ಹೇಳಲಾಗದೆ. ಜಿಲ್ಲೆಯ ಇತರ ಭಾಗದಲ್ಲೂ ಕೂಡ ಗಾಳಿಯ ಗುಣಮಟ್ಟ ಕಳಪೆಯಾಗಿದೆ. ಬೆಂಗಳೂರಿನ ಜಯನಗರ ಮತ್ತು ಲಾಲ್‌ಬಾಗ್​​ ಪ್ರದೇಶಗಳಲ್ಲಿ ಹಸಿರು ಹೆಚ್ಚಾಗಿರುವುದರಿಂದ ಇಲ್ಲಿ ಗಾಳಿಯ ಗುಣಮಟ್ಟ ಸಾಧಾರಣವಾಗಿರಲಿದೆ. ಇಲ್ಲಿ 85 – 95ರಷ್ಟು ಗಾಳಿಯ ಮಟ್ಟದ ಇರಲಿದೆ.

ಬೆಂಗಳೂರಿನಲ್ಲಿ ಇಂದು ಗಾಳಿಯ ಗುಣಮಟ್ಟ 110ರಿಂದ 135 ಇರಲಿದೆ. ಇದು ಸಾಧಾರಣ ಎಂದು ಹೇಳಲಾಗಿದೆ. ಮೈಸೂರು 65ರಿಂದ 80 ತೃಪ್ತಿದಾಯಕ ಗಾಳಿಮಟ್ಟವನ್ನು ಹೊಂದಿದೆ. ಇಲ್ಲಿನ ವಾತಾರಣ ಕೂಡ ತುಂಬಾ ಉತ್ತಮವಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಜನ ದಟ್ಟಣೆ ಹಾಗೂ ಕಾಮಗಾರಿಗಳು ಕಾಣರದಿಂದ ಗಾಳಿಯ ಗುಣಮಟ್ಟ 90ರಿಂದ 115ಕ್ಕೆ ತಲುಪಿದೆ. ಮಂಗಳೂರಿನಲ್ಲೂ ವಾತಾವರಣ ಉತ್ತಮವಾಗಿದ್ದು, ಗಾಳಿಯ ಗುಣಮಟ್ಟ 55ರಿಂದ 70 ಇದ್ದು, ತೃಪ್ತಿದಾಯಕವಾಗಿದೆ ಎಂದು ಹೇಳಲಾಗಿದೆ. ಕಲಬುರಗಿಯಲ್ಲಿ ಗಾಳಿಯ ಗುಣಮಟ್ಟ 105ರಿಂದ 120 ಇರಲಿದೆ ಎಂದು ಹೇಳಲಾಗದೆ.

ಹಿರಿಯ ನಾಗರಿಕರು ಮತ್ತು ಉಸಿರಾಟದ ಸಮಸ್ಯೆ ಇರುವವರು ದಟ್ಟ ಮಂಜು ಮತ್ತು ಮಾಲಿನ್ಯ ಪ್ರದೇಶದಲ್ಲಿ ಓಡಾಡುವದನ್ನು ತಪ್ಪಿಸಿ, ಹಾಗೂ ಸ್ವಲ್ಪ ಬಿಸಿಲು ಬಂದ ನಂತರ ಹೊರಗೆ ಹೋಗುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ. ವಾಹನ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದನ್ನು ಮರೆಯಬಾರದು, ಕಳಪೆ ಗಾಳಿಯ ಗುಣಮಟ್ಟ ಇರುವ ಪ್ರದೇಶದಲ್ಲಿ ಮಕ್ಕಳನ್ನು ಬಿಡಬೇಡಿ, ಹಾಗೂ ಸ್ಕೂಲ್​​​​​ಗೆ ಹೋಗವಾಗ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ಗಾಳಿಯ ಗುಣಮಟ್ಟ ಮುಂದಿನ ಎರಡು ವಾರಗಳವರೆಗೆ ಹೀಗೆ ಇರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಜನರೇ ಗಮನಿಸಿ, ಬೆಳಿಗ್ಗೆ ದಟ್ಟ ಮಂಜು ಇರುವ ಕಾರಣ ವಾಹನ ಸವಾರರೇ ಎಚ್ಚರ

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ

ಬೆಂಗಳೂರು: 127

ಮಂಗಳೂರು: 164

ಮೈಸೂರು: 96

ಬೆಳಗಾವಿ: 114

ಕಲಬುರುಗಿ: 86

ಶಿವಮೊಗ್ಗ: 166

ಹುಬ್ಬಳ್ಳಿ : 161

ಉಡುಪಿ : 160

ವಿಜಯಪುರ : 66

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ, ಕೆಲಸ ಸಿಗುತ್ತೆ’; ರೆಹಮಾನ್​​ಗೆ ಕಿವಿಮಾತು ಹೇಳಿದ ಗಾಯಕ – Kannada News | AR Rahman Bollywood Communalism Claim: Anup Jalota Suggests Reconversion

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ (Ar Rahman) ಇತ್ತೀಚಿನ ಸಂದರ್ಶನವೊಂದರಲ್ಲಿ ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಸಿಗುತ್ತಿಲ್ಲ ಎಂದು ಒಪ್ಪಿಕೊಂಡರು. ಬಾಲಿವುಡ್ ಉದ್ಯಮವು ಈಗ ಹೆಚ್ಚು ಕೋಮುವಾದಿಯಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗೆ ವಿವಿಧ ಪ್ರತಿಕ್ರಿಯೆಗಳು ಹೊರಬರಲು ಪ್ರಾರಂಭಿಸಿವೆ. ಧರ್ಮದ ಕಾರಣದಿಂದ ಕೆಲಸ ಸಿಗುತ್ತಿಲ್ಲ ಎಂಬ ದೂರನ್ನು ಹಲವರು ವಿರೋಧಿಸಿದ್ದಾರೆ. ಈಗ, ಭಜನೆಯ ಸಾಮ್ರಾಟ ಎಂಬ ಖ್ಯಾತಿ ಇರೋ ಗಾಯಕ ಅನುಪ್ ಜಲೋಟಾ ನೀಡಿದ ಹೇಳಿಕೆ ಈ ನಿಟ್ಟಿನಲ್ಲಿ ಚರ್ಚೆಗೆ ಬಂದಿದೆ. ಅನುಪ್ ಜಲೋಟಾ ನೇರವಾಗಿ ರೆಹಮಾನ್‌ಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿದ್ದಾರೆ.

IANSಗೆ ನೀಡಿದ ಸಂದರ್ಶನದಲ್ಲಿ ಅನುಪ್ ಜಲೋಟಾ ಮಾತನಾಡಿದ್ದಾರೆ. ಎ.ಆರ್. ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸ ಸಿಗುತ್ತಿಲ್ಲ ಎಂದು ಭಾವಿಸಿದರೆ, ಅವರು ಹಿಂದೂ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಕು’ ಎಂದು ಹೇಳಿದರು. ಇದು ಚರ್ಚೆಯ ಕೇಂದ್ರಬಿಂದು ಆಗಿದೆ.

‘ಅವರು ಮೊದಲು ಹಿಂದೂ ಆಗಿದ್ದರು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದರು. ಅದಾದ ನಂತರವೂ ಅವರು ಸಂಗೀತ ಜಗತ್ತಿನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು, ಹಣ ಮತ್ತು ಖ್ಯಾತಿಯನ್ನು ಗಳಿಸಿದರು. ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದರು. ಆದರೆ ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸದ ಅವಕಾಶಗಳು ಸಿಗುತ್ತಿಲ್ಲ ಎಂದು ಭಾವಿಸಿದರೆ ತಮ್ಮ ಹಳೆಯ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಖಕಿದೆ’ ಎಂದು ಸಲಹೆ ನೀಡಿದರು.

‘ನಮ್ಮ ದೇಶದಲ್ಲಿ ಮುಸ್ಲಿಮರಾಗಿರುವುದರಿಂದ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ನಂಬಿದರೆ, ಅವರು ಮತ್ತೆ ಹಿಂದೂಗಳಾಗಬೇಕು. ಹಿಂದೂಗಳಾಗಿರುವುದರಿಂದ ಅವರಿಗೆ ಮತ್ತೆ ಸಿನಿಮಾ ಸಿಗುತ್ತವೆ ಎಂದು ಅವರು ನಂಬಬೇಕು. ರೆಹಮಾನ್ ಹೇಳಿದ್ದು ಇದನ್ನೇ. ಆದ್ದರಿಂದ ನಾನು ಅವರಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಲು ಸಲಹೆ ನೀಡುತ್ತೇನೆ. ನಂತರ ಅವರಿಗೆ ಮತ್ತೆ ಕೆಲಸ ಸಿಗುತ್ತದೆಯೇ ಎಂದು ನೋಡಬೇಕು’ ಎಂದು ಜಲೋಟಾ ಹೇಳಿದರು.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

‘ಕಳೆದ 8 ವರ್ಷಗಳಲ್ಲಿ ಬಾಲಿವುಡ್​​ನಲ್ಲಿ ಸೃಜನಶೀಲರಲ್ಲದವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಕೋಮು ವಿಷಯಗಳು ಇರಬಹುದು, ಆದರೆ ಯಾರೂ ನನಗೆ ನೇರವಾಗಿ ಏನನ್ನೂ ಹೇಳಿಲ್ಲ. ಕೆಲವು ವಿಷಯಗಳು ನನ್ನ ಕಿವಿಗೆ ಬಿದ್ದಿವೆ’ ಎಂದು ರೆಹಮಾನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶೇಷ ಅಧಿವೇಶನ: ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲರು? ಕುತೂಹಲ ಮೂಡಿಸಿದ ನಡೆ! – Kannada News | Special Assembly Session in Karnataka: Will Governor Checkmate Government Over Speech Dispute? Many options before him

ರಾಜ್ಯಪಾಲ vs ಕರ್ನಾಟಕ ಸರ್ಕಾರ (ಸಾಂದರ್ಭಿಕ ಚಿತ್ರ)

ಬೆಂಗಳೂರು, ಜನವರಿ 22: ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿರುವುದರ ವಿರುದ್ಧ ನಿರ್ಣಯ ಕೈಗೊಳ್ಳಲು ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಇದೀಗ ರಾಜ್ಯಪಾಲರು ತಗಾದೆ ತೆಗೆದಿದ್ದಾರೆ. ಭಾಷಣದ 11 ಪ್ಯಾರಾಗಳನ್ನು ಓದಲು ಅವರು ನಿರಾಕರಿಸಿದ್ದಾರೆ. ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕೆಲ ಅಂಶಗಳಿವೆ. ಕೇಂದ್ರ ವಿರುದ್ಧದ ವಿಚಾರ ಕೈಬಿಡಬೇಕೆಂಬುದು ಅವರ ಆಗ್ರಹ. ಆದರೆ, ಸರ್ಕಾರ ಅದನ್ನು ಕೈಬಿಡಲು ತಯಾರಿಲ್ಲ. ಹೀಗಾಗಿ ರಾಜ್ಯಪಾಲರು ಅಧಿವೇಶನಕ್ಕೆ ಗೈರಾಗುತ್ತಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಒಂದು ವೇಳೆ ಅವರು ಗೈರಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಿದ್ಧತೆ ಮಾಡಿದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಿಯೇ ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಎಂಬ ಪ್ರಶ್ನೆ ಈಗ ಮೂಡಿದೆ.

ಹಾಗಾದರೆ, ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ಮುಂದೆ ಏನೇನು ಆಯ್ಕೆಗಳಿವೆ? ಮಾಹಿತಿ ಇಲ್ಲಿದೆ.

ರಾಜ್ಯಪಾಲರ ಮುಂದಿರುವ ಆಯ್ಕೆಗಳೇನು?

ಸರ್ಕಾರ ನೀಡಿರುವ ಭಾಷಣದ ಆಕ್ಷೇಪಾರ್ಹ ಪ್ಯಾರಾಗಳನ್ನು ಬಿಟ್ಟು ಉಳಿದ ಭಾಷಣವನ್ನು ರಾಜ್ಯಪಾಲರು ಓದಬಹುದು. ಆಕ್ಷೇಪಾರ್ಹ ಪ್ಯಾರಾಗಳನ್ನು ಓದುವುದನ್ನು ಕೈಬಿಡುವ ಸಂದರ್ಭದಲ್ಲಿ ‘ಈ ಪ್ಯಾರಾಗಳು ನನ್ನ ಭಾಷಣದ ಭಾಗವಾಗಿಲ್ಲ’ ಎಂದು ಉಚ್ಚರಿಸಬೇಕು. ರಾಜ್ಯಪಾಲರು ಹೀಗೆ ಉಲ್ಲೇಖಿಸಿದರೆ ಆ ಪ್ಯಾರಾಗಳ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶವಿಲ್ಲ. ಇದು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸುವುದರ ಮೂಲ ಉದ್ದೇಶಕ್ಕೇ ಪೆಟ್ಟು ಕೊಡುತ್ತದೆ. ಹೀಗಾಗಿ ಈ ರೀತಿ ಸರ್ಕಾರಕ್ಕೆ ಚೆಕ್ ಮೇಟ್ ಕೊಡುವ ಆಯ್ಕೆ ರಾಜ್ಯಪಾಲರ ಎದುರಿದೆ.

ರಾಜ್ಯಪಾಲರ ಮುಂದಿರುವ ಇನ್ನಿತರ ಆಯ್ಕೆಗಳೇನು?

ಸಂವಿಧಾನದ ಆರ್ಟಿಕಲ್ 160ರ ಪ್ರಕಾರ ರಾಜ್ಯಪಾಲರಿಗೆ ವಿಶೇಷ ಪರಿಸ್ಥಿತಿಗಳಲ್ಲಿ ಅಧಿವೇಶನಕ್ಕೆ ಗೈರುಹಾಜರಾಗುವ ಅವಕಾಶವಿದೆ. ಅನಿರೀಕ್ಷಿತ ಅಥವಾ ಅಸಾಧಾರಣ ಸಂದರ್ಭಗಳು, ಆಕಸ್ಮಿಕ ಅನಾರೋಗ್ಯ ಅಥವಾ ತುರ್ತು ಪರಿಸ್ಥಿತಿ ಎದುರಾದಲ್ಲಿ, ರಾಜ್ಯಪಾಲರು ರಾಷ್ಟ್ರಪತಿಗಳಿಂದ ಅನುಮತಿ ಪಡೆದು ಅಧಿವೇಶನಕ್ಕೆ ಹಾಜರಾಗದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಗೈರು ಹಾಜರಾತಿಗೆ ಅನುಮೋದನೆ ನೀಡುವ ಅಧಿಕಾರ ಹೊಂದಿದ್ದಾರೆ. ರಾಷ್ಟ್ರಪತಿಗಳ ಅನುಮತಿ ದೊರೆತಿದ್ದರೆ, ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಸ್ತಕ್ಷೇಪ ಕಷ್ಟಸಾಧ್ಯವಾಗುತ್ತದೆ. ರಾಜ್ಯಪಾಲರ ವಿರುದ್ಧ ಯಾವುದೇ ಕಾನೂನು ಕ್ರಮ ಆರಂಭವಾದರೂ, ಅವರು ಸಂವಿಧಾನಾತ್ಮಕವಾಗಿ ಸಮಂಜಸವಾದ ಕಾರಣವನ್ನು ನೀಡುವ ಹಕ್ಕು ಹೊಂದಿರುತ್ತಾರೆ.

ಸರ್ಕಾರದ ಮುಂದಿರುವ ಆಯ್ಕೆಗಳೇನು?

ರಾಜ್ಯಪಾಲರು ಅಧಿವೇಶನಕ್ಕೆ ಗೈರಾದರೆ ಕಾನೂನು ಹೋರಾಟ ಮಾಡುವ ಆಯ್ಕೆ ಸರ್ಕಾರ ಮುಂದಿದೆ. ರಾಜ್ಯಪಾಲರು ಸಾಂವಿಧಾನಿಕ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲ ಎಂದು ಆರೋಪಿಸಬಹುದು. ರಾಜ್ಯಪಾಲರು ಭಾಷಣ ಓದದೇ ಇದ್ದ ಪಕ್ಷದಲ್ಲಿ ತನ್ನ ಭಾಷಣವನ್ನು ಸದನದಲ್ಲಿ ನಿರ್ಣಯ ಮಂಡಿಸಿ ಸಭಾಧ್ಯಕ್ಷರಿಂದ ಚರ್ಚೆ ಅವಕಾಶ ಕೇಳಬಹುದು.

ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ಧತೆ!

ಸದ್ಯ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಣ ಸಂಘರ್ಷ ಕುತೂಹಲ ಘಟ್ಟ ತಲುಪಿದ್ದು, ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version