ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್

ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಚೆನ್ನೈನಲ್ಲಿ ‘ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್’ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ, ಸಿಎಂ ದಳಪತಿ ವಿಜಯ್ ಅವರು ಪಾಲ್ಗೊಂಡಿದ್ದಾರೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಓಟದಲ್ಲಿ ಅವರು ಬರೋಬ್ಬರಿ 6 ಕಿಲೋಮೀಟರ್ ಓಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಇಂತಹ ಕಾರ್ಯಕ್ರಮಗಳಿಗೆ ಕೇವಲ ಚಾಲನೆ ನೀಡಿ ನಿರ್ಗಮಿಸುತ್ತಾರೆ. ಆದರೆ, ತಳಪತಿ ವಿಜಯ್ ಅವರು ಯಾವುದೇ ರಾಜಕೀಯ ಹಮ್ಮು-ಬಿಮ್ಮು ಇಲ್ಲದೆ, ತಾವೂ ಒಬ್ಬ ಸಾಮಾನ್ಯ ನಾಗರಿಕನಂತೆ ಜನರೊಂದಿಗೆ ಹೆಜ್ಜೆ ಹಾಕಿದ್ದು ಅವರ ಸರಳತೆಗೆ ಸಾಕ್ಷಿಯಾಗಿದೆ. ಭದ್ರತೆಯ ನಡುವೆಯೂ ಸಾರ್ವಜನಿಕರ ಜೊತೆ ಜೊತೆಯಾಗಿಯೇ 6 ಕಿಲೋಮೀಟರ್ ದೂರವನ್ನು ಓಡಿ ಮುಗಿಸಿದ ಸಿಎಂ ವಿಜಯ್ ಅವರ ಫಿಟ್‌ನೆಸ್ ಹಾಗೂ ಸರಳ ಗುಣಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಯುವ ಜನತೆಯನ್ನು ಮಾದಕ ದ್ರವ್ಯದ ಜಾಲದಿಂದ ಮುಕ್ತಗೊಳಿಸಲು ಸ್ವತಃ ಮುಖ್ಯಮಂತ್ರಿಗಳೇ ರಸ್ತೆಗಿಳಿದು ಮಾದರಿಯಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಡೂಟಕ್ಕಿಂತ ತರಕಾರಿ ಊಟವೇ ದುಬಾರಿ: ಬೆಂಗಳೂರಿನಲ್ಲಿ ಬದನೆಕಾಯಿ, ಬೀನ್ಸ್ ಬೆಲೆ ಕೇಳಿ ಗ್ರಾಹಕರು ಕಂಗಾಲು! – Kannada News | Bengaluru Vegetable Price Hike: Beans and Brinjal Cross Century, Tomato Rates Drop

ಸಿಲಿಕಾನ್ ಸಿಟಿಯಲ್ಲಿ ಬದನೆಕಾಯಿ, ಬೀನ್ಸ್ ಬೆಲೆ ಕೇಳಿ ಗ್ರಾಹಕರು ಕಂಗಾಲು!

ಬೆಂಗಳೂರು, ಜೂನ್ 26: ನಗರದ (Bengaluru) ಜನತೆಗೆ ಮಾರುಕಟ್ಟೆಯಲ್ಲಿ ಮತ್ತೊಂದು ಭಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಿನನಿತ್ಯದ ಅಡುಗೆಗೆ ಅತ್ಯಗತ್ಯವಾಗಿರುವ ತರಕಾರಿಗಳ (Vegetable Price Hike) ಬೆಲೆ ಗಗನಕ್ಕೇರಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಕಳೆದ ವಾರ ಗ್ರಾಹಕರ ಕಣ್ಣೀರು ಹಾಕಿಸಿದ್ದ ಟೊಮೇಟೊ ಬೆಲೆ ಈಗ ಕೊಂಚ ಇಳಿಕೆಯಾಗಿದ್ರೂ, ಸದ್ಯ ಬದನೆಕಾಯಿ ಮತ್ತು ಬೀನ್ಸ್ ಸರದಿ ಬಂದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬದನೆಕಾಯಿ ಬೆಲೆ ನೂರರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಭಾರಿ ಶಾಕ್ ನೀಡಿದೆ.

ಮುಂಗಾರು ಅವಾಂತರ: ತರಕಾರಿ ಹರಿವು ಕುಸಿತ

ರಾಜ್ಯಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದರೂ, ಹವಾಮಾನದ ಏರುಪೇರು ತರಕಾರಿ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಒಂದೆಡೆ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಕೊಳೆತು ಹೋಗುತ್ತಿದ್ದರೆ, ಇನ್ನೊಂದೆಡೆ ಸಕಾಲಕ್ಕೆ ಮಳೆಯಾಗದ ಕಡೆಗಳಲ್ಲಿ ಅನಾವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿವೆ. ಇದರ ನೇರ ಪರಿಣಾಮ ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿಗಳ ಪ್ರಮಾಣ ಭಾರಿ ಕುಸಿದಿದ್ದು, ಬೆಲೆಗಳು ದಿಢೀರ್ ರೇಷ್ಮೆ ದರವನ್ನು ಪಡೆದುಕೊಳ್ಳುತ್ತಿವೆ.

ಸೆಂಚುರಿ ದಾಟಿದ ಬದನೆಕಾಯಿ, ಡಬಲ್ ಸೆಂಚುರಿ ಬಾರಿಸಿದ ಬೀನ್ಸ್!

ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬಿಳಿ ಬದನೆಕಾಯಿ ಬೆಲೆ ಬರೋಬ್ಬರಿ 100 ರಿಂದ 140 ರೂಪಾಯಿಗೆ ತಲುಪಿದೆ. ಇನ್ನು ಅಡುಗೆಗೆ ರುಚಿ ನೀಡುವ ಬೀನ್ಸ್, ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ದರಗಳು ಈಗ ‘ಡಬಲ್ ಸೆಂಚುರಿ’ (200 ರೂ.) ಬಾರಿಸಿ ಗ್ರಾಹಕರು ತರಕಾರಿ ಮಾರ್ಕೆಟ್ ಕಡೆ ತಲೆಹಾಕದಂತೆ ಮಾಡಿವೆ. ನುಗ್ಗೆಕಾಯಿ, ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ದರಗಳೂ ಸಹ ನೂರರ ಗಡಿ ದಾಟಿ ಮುನ್ನುಗ್ಗುತ್ತಿವೆ.

ಮಾರುಕಟ್ಟೆಯ ಇಂದಿನ ಪ್ರಮುಖ ತರಕಾರಿಗಳ ದರ ಪಟ್ಟಿ (ಕೆಜಿಗಳಲ್ಲಿ) ಹೀಗಿದೆ:

  • ಬದನೆಕಾಯಿ: 40 ರೂ. ಇದ್ದದ್ದು ಈಗ 100 ರೂ.
  • ಬೀನ್ಸ್: 50 ರೂ. ಇಂದ ಬರೋಬ್ಬರಿ 150 ರೂ.ಗೆ ಏರಿಕೆ
  • ಬಟಾಣಿ, ಶುಂಠಿ, ಬೆಳ್ಳುಳ್ಳಿ: 80-100 ರೂ. ಇಂದ ನೇರವಾಗಿ 200 ರೂ.
  • ಹಸಿಮೆಣಸಿನಕಾಯಿ: 50 ರೂ. ಇಂದ 120 ರೂ.
  • ನುಗ್ಗೆಕಾಯಿ ಮತ್ತು ಕ್ಯಾಪ್ಸಿಕಂ: 90 ರಿಂದ 100 ರೂ.

ಸಾಂಬಾರ್ ಮಾಡೋಕೂ ಯೋಚನೆ ಮಾಡಬೇಕು: ಗ್ರಾಹಕರ ಅಳಲು

ನಾವೇನು ತಿನ್ನಬೇಕು ಹೇಳಿ? ಸಂಬಳ ಹೆಚ್ಚಾಗಲ್ಲ, ಆದ್ರೆ ತರಕಾರಿ ಬೆಲೆ ದಿನಾ ಹೆಚ್ಚಾಗುತ್ತೆ. ನೂರು ರೂಪಾಯಿ ತಗೊಂಡು ಬಂದ್ರೆ ಒಂದು ಕೆಜಿ ಬದನೆಕಾಯಿನೂ ಬರಲ್ಲ. ಎಲ್ಲಾ ನೂರರ ಗಡಿ ದಾಟಿದೆ. ಸಾಂಬಾರ್ ಮಾಡೋಕೂ ಯೋಚನೆ ಮಾಡಬೇಕಾಗಿದೆ ಎಂದು ಮಾರುಕಟ್ಟೆಗೆ ಬಂದ ಗ್ರಾಹಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವ್ಯಾಪಾರಿಗಳೂ ಸಹ ತರಕಾರಿ ಬಾರದ ಹಿನ್ನೆಲೆಯಲ್ಲಿ ವ್ಯಾಪಾರ ಕುಂಠಿತಗೊಂಡಿರುವುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ನಿರಾಳ ತಂದ ಟೊಮೇಟೊ!

ಈ ಎಲ್ಲಾ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಸದ್ಯ ಸಮಾಧಾನ ತಂದಿರೋದು ಕೇವಲ ಟೊಮೇಟೊ ಮಾತ್ರ. ಕಳೆದ ವಾರ 60 ರಿಂದ 70 ರೂಪಾಯಿ ಮುಟ್ಟಿದ್ದ ಟೊಮೇಟೊ ಬೆಲೆ, ಈಗ ಮಾರುಕಟ್ಟೆಗೆ ಭರ್ಜರಿ ಆವಕ ಹಿನ್ನೆಲೆಯಲ್ಲಿ 20 ರಿಂದ 30 ರೂಪಾಯಿಗೆ ಇಳಿಕೆಯಾಗಿದೆ. ಆದಾಗ್ಯೂ, ಉಳಿದೆಲ್ಲಾ ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿರುವುದು ಮಧ್ಯಮ ವರ್ಗದ ಜನರ ಬಜೆಟ್‌ ಅಸ್ತವ್ಯಸ್ತಗೊಳಿಸಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮ ಮಂದಿರ ದೇಣಿಗೆ ಕಳ್ಳತನ​: ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ – Kannada News | Ram Mandir Donation Theft: Champat Rai and Anil Mishra Resign Amid Ayodhya Scam

ಲಕ್ನೋ, ಜೂನ್ 26: ಅಯೋಧ್ಯೆ(Ayodhya)ಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇಣಿಗೆ ಮತ್ತು ಕಾಣಿಕೆ ಹಣದ ಕಳ್ಳತನ ಹಗರಣವು ಈಗ ದೇಶದ ಅತ್ಯಂತ ದೊಡ್ಡ ರಾಜಕೀಯ ಬಿರುಗಾಳಿಯಾಗಿ ಮಾರ್ಪಟ್ಟಿದೆ. ರಾಮ ಮಂದಿರ ಟ್ರಸ್ಟ್‌ನ  ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಆಪ್ತ ಸಹಾಯಕ (PA) ಟಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಟ್ರಸ್ಟ್‌ನ ಇಬ್ಬರು ಪ್ರಮುಖ ಉನ್ನತ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ವಿಶೇಷ ತನಿಖಾ ತಂಡ (SIT) ನಡೆಸಿದ ತೀವ್ರ ಕಾರ್ಯಾಚರಣೆಯ ನಂತರ ಎಂಟು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಈ ಬಂಧನದ ಬೆಳವಣಿಗೆಯಿಂದಾಗಿ ಟ್ರಸ್ಟ್‌ನ ಆಡಳಿತ ಮಂಡಳಿಯ ಮೇಲೆ ಭಾರಿ ಒತ್ತಡ ಉಂಟಾಗಿತ್ತು. ಇದರ ಬೆನ್ನಲ್ಲೇ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಹಿರಿಯ ಹಾಗೂ ಪ್ರಮುಖ ಸದಸ್ಯರಾದ ಅನಿಲ್ ಮಿಶ್ರಾ ಕೂಡ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಹಗರಣದ ತೀವ್ರತೆ ಹಾಗೂ ರಾಜೀನಾಮೆಗೆ ಕಾರಣ
ಬಂಧಿತ ಆರೋಪಿಗಳೆಲ್ಲರೂ ದೇವಸ್ಥಾನದ ಕಾಣಿಕೆ ಮತ್ತು ನಗದು ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯಲ್ಲಿದ್ದ ಸಿಬ್ಬಂದಿಯಾಗಿದ್ದರು. ಸ್ವತಃ ಚಂಪತ್ ರಾಯ್ ಅವರ ಅತ್ಯಂತ ಆಪ್ತ ಸಹಾಯಕನೇ ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಜೈಲು ಪಾಲಾಗಿರುವುದರಿಂದ, ಇಡೀ ಹಗರಣದ ನೈತಿಕ ಹೊಣೆ ಹೊತ್ತು ಅಥವಾ ತನಿಖೆಯ ತೀವ್ರತೆಗೆ ಹೆದರಿ ಈ ಇಬ್ಬರು ಪ್ರಮುಖರು ಟ್ರಸ್ಟ್‌ನಿಂದ ಹೊರನಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ವಂಚನೆ: ಲಕ್ನೋ ಹೈಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ

ವಿರೋಧ ಪಕ್ಷಗಳ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಹಗರಣ ಆಡಳಿತಾರೂಢ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯನ್ನು ತಂದೊಡ್ಡಿದೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಈ ಕಳ್ಳತನದ ವಿರುದ್ಧ ನಿರಂತರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದವು ಹಾಗೂ ಉನ್ನತ ಅಧಿಕಾರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿದ್ದವು.

ಈಗ ಟ್ರಸ್ಟ್‌ನ ಇಬ್ಬರು ಪ್ರಮುಖ ಹಿರಿಯರೇ ರಾಜೀನಾಮೆ ನೀಡಿರುವುದರಿಂದ ವಿರೋಧ ಪಕ್ಷಗಳ ಆರೋಪಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣವು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:33 pm, Fri, 26 June 26

Source link

ಅಮೆರಿಕದ ಸಂಪತ್ತು ಬೇಡ, ಭಾರತದ ಮಣ್ಣು ಸಾಕು: ಭಾರತೀಯಳಾಗಿ ಸಾಯ್ತೀನಿ ಅಂದ 94 ವರ್ಷದ ವೃದ್ಧೆ – Kannada News | Mahalakshmamma’s Wish: 94 yr old Quits US Citizenship for India, Seeks Homeland End

ಬಾಪಟ್ಲಾ ಜೂ.26: “ನನ್ನ ಕೊನೆಯುಸಿರು ಇರುವವರೆಗೂ ನಾನು ನನ್ನ ಮಾತೃಭೂಮಿಯಲ್ಲೇ ಇರಬೇಕು. ಸಾಯುವಾಗ ನಾನು ಒಬ್ಬ ಭಾರತೀಯ ಪ್ರಜೆಯಾಗಿಯೇ ಕಣ್ಣು ಮುಚ್ಚಬೇಕು…” ಇದು ಆಂಧ್ರಪ್ರದೇಶದ 94 ವರ್ಷದ ವೃದ್ಧೆಯೊಬ್ಬರ ಕೊನೆಯ ಆಸೆ ಎಂದು ಹೇಳಿದ್ದಾರೆ. ಅಮೆರಿಕದಂತಹ ಐಷಾರಾಮಿ ದೇಶದ ಪೌರತ್ವವನ್ನು (US Citizenship) ಸ್ವಇಚ್ಛೆಯಿಂದ ತ್ಯಜಿಸಿ, ತಮಗೆ ಭಾರತದ ಪೌರತ್ವವನ್ನು ಮರುಸ್ಥಾಪಿಸಿಕೊಡಬೇಕೆಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕೊಂಡ್ರಗುಂಟ ಮಹಾಲಕ್ಷ್ಮಮ್ಮ ಎಂಬ ವೃದ್ಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದುನ್ನು ನಬಿಲಾ ಜಮಾಲ್ ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಮಹಾಲಕ್ಷ್ಮಮ್ಮ ಅವರು 2000ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದರು. ಆ ಬಳಿಕ ಸುಮಾರು 18 ವರ್ಷಗಳ ಕಾಲ ಅಮೆರಿಕದಲ್ಲೇ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ, ವಯಸ್ಸಾಗುತ್ತಿದ್ದಂತೆ ಅವರಿಗೆ ತನ್ನ ಸ್ವಗ್ರಾಮ, ತಾಯ್ನಾಡಿನ ಮಣ್ಣಿನ ನೆನಪು ತೀವ್ರವಾಗಿ ಕಾಡಲಾರಂಭಿಸಿದೆ. ಅದಕ್ಕಾಗಿ ಅವರು 2018ರಲ್ಲಿಯೇ ಅಮೆರಿಕವನ್ನು ತೊರೆದು ಭಾರತಕ್ಕೆ ಮರಳಿದ್ದರು.

ಇಲ್ಲಿದೆ ನೋಡಿ ವಿಡಿಯೋ:

ಪ್ರಸ್ತುತ 94ನೇ ವಯಸ್ಸಿನಲ್ಲಿರುವ ಮಹಾಲಕ್ಷ್ಮಮ್ಮ ಅವರು ಇತ್ತೀಚೆಗೆ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲಾಧಿಕಾರಿಯನ್ನು ಖುದ್ದಾಗಿ ಭೇಟಿಯಾಗಿದ್ದಾರೆ. ಅಮೆರಿಕದ ಪೌರತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿರುವ ದಾಖಲೆಗಳನ್ನು ಸಲ್ಲಿಸಿದ ಅವರು, ತಮಗೆ ತಕ್ಷಣವೇ ಭಾರತೀಯ ಪೌರತ್ವವನ್ನು ಮರುಸ್ಥಾಪಿಸಿಕೊಡಬೇಕೆಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ಗುಜರಿಗೆ ಹೋಗಬೇಕಿದ್ದ ಬ್ರಿಟನ್‌ 9 ಯುದ್ಧವಿಮಾನಗಳ ಖರೀದಿಗೆ ಮುಂದಾದ ಭಾರತ: ಅಸಲಿ ಕಾರಣ ಬಿಚ್ಚಿಟ್ಟ ವಾಯುಪಡೆ

“ನನ್ನ ಕೊನೆಯ ಕಾಲ ಹತ್ತಿರವಾಗುತ್ತಿದೆ. ನನ್ನ ಅಂತ್ಯಕ್ರಿಯೆಯು ನನ್ನ ಸ್ವಂತ ಗ್ರಾಮದಲ್ಲೇ ನೆರವೇರಬೇಕು. ದೇಶದ ಅಧಿಕೃತ ಪ್ರಜೆಯಾಗಿ ನಾನು ಸಾಯಬೇಕು. ದಯವಿಟ್ಟು ನನ್ನ ಪೌರತ್ವದ ಅರ್ಜಿಯನ್ನು ಶೀಘ್ರವಾಗಿ ಸ್ವೀಕಾರಿಸಿ” ಎಂದು ಅವರು ಅಧಿಕಾರಿಗಳ ಮುಂದೆ ಕೈಮುಗಿದು ಕೇಳಿಕೊಂಡಿದ್ದಾರೆ. ವೃದ್ಧೆಯ ಈ ಅಪಾರ ದೇಶಪ್ರೇಮ ಹಾಗೂ ಭಾವುಕ ಆಸೆಯನ್ನು ಕಂಡು ಅಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದು, ಭಾರತೀಯರು ಈ ಅಜ್ಜಿಯ ದೇಶಪ್ರೇಮಕ್ಕೆ ಸಲಾಂ ಎನ್ನುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:26 pm, Fri, 26 June 26

Source link

Mars Transit in Taurus: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ? – Kannada News | July 2026 Mars Transit in Taurus: Zodiac Impacts, Predictions and Remedies

ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರImage Credit source: Getty Images

ಜುಲೈ ತಿಂಗಳಲ್ಲಿ ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜನನ್ನು ಶಕ್ತಿ, ಸಾಹಸ, ಭೂಮಿ ಮತ್ತು ಭ್ರಾತೃತ್ವದ ಕಾರಕನೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯು ಶುಕ್ರನ ಮನೆಯಾಗಿದ್ದು, ಇದು ಸ್ಥಿರ ಹಾಗೂ ಪೃಥ್ವಿ ತತ್ವದ ರಾಶಿಯಾಗಿದೆ. ಈ ಸಂಚಾರದಿಂದಾಗಿ ಜುಲೈ ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಹೀಗೆಲ್ಲ ಪರಿಣಾಮ ಬೀರಲಿದೆ.

​ಈ ರಾಶಿಗೆ ಉತ್ತಮ ಫಲ:

ಮೇಷ ರಾಶಿ:

ನಿಮ್ಮ ರಾಶ್ಯಾಧಿಪತಿಯಾದ ಕುಜನು ದ್ವಿತೀಯ ಭಾವದಲ್ಲಿ ಸಂಚರಿಸುವುದರಿಂದ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಬಾಕಿ ಉಳಿದಿರುವ ಹಣ ಕೈ ಸೇರಲಿದೆ. ಆದರೆ, ಮಾತಿನಲ್ಲಿ ಕಠೋರತೆ ಬರಬಹುದು, ಕುಟುಂಬದಲ್ಲಿ ಸಂಯಮದಿಂದ ವರ್ತಿಸುವುದು ಒಳಿತು.

​ಸಿಂಹ ರಾಶಿ:

ದಶಮ ಭಾವದಲ್ಲಿ ಕುಜನ ಸಂಚಾರವು ವೃತ್ತಿ ರಂಗದಲ್ಲಿ ಅದ್ಭುತ ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಧೈರ್ಯದ ನಿರ್ಧಾರಗಳು ಲಾಭ ತರಲಿವೆ.

​ವೃಶ್ಚಿಕ ರಾಶಿ:

ಸಪ್ತಮ ಭಾವದಲ್ಲಿ ಕುಜನಿರುವುದರಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಆದರೆ ವ್ಯಾಪಾರ ಮತ್ತು ಜಂಟಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ನಿಮ್ಮ ಪ್ರಭಾವ ಸಮಾಜದಲ್ಲಿ ಹೆಚ್ಚಾಗಲಿದೆ.

​ಮಕರ ರಾಶಿ:

ಪಂಚಮ ಭಾವದಲ್ಲಿ ಕುಜನ ಇರುವಿಕೆಯಿಂದಾಗಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆಕಸ್ಮಿಕ ಧನಲಾಭದ ಯೋಗವಿದೆ.

​ಈ ರಾಶಿಗೆ ಮಿಶ್ರ ಫಲ

ವೃಷಭ ರಾಶಿ:

ನಿಮ್ಮದೇ ರಾಶಿಯಲ್ಲಿ ಕುಜನಿರುವುದರಿಂದ ಕೋಪ ಮತ್ತು ಆತುರ ಹೆಚ್ಚಾಗಬಹುದು. ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯ. ರಕ್ತದೊತ್ತಡ ಅಥವಾ ಉಷ್ಣ ಬಾಧೆ ಕಾಡಬಹುದು. ಆದಾಗ್ಯೂ, ಕಾರ್ಯಕ್ಷಮತೆ ಹೆಚ್ಚಿರುತ್ತದೆ.

​ಕರ್ಕಾಟಕ ರಾಶಿ:

ಏಕಾದಶ ಭಾವದಲ್ಲಿ ಕುಜನಿರುವುದರಿಂದ ಆರ್ಥಿಕ ಪ್ರಗತಿ ಉತ್ತಮವಾಗಿರುತ್ತದೆ. ಆದರೆ ದೊಡ್ಡ ಒಡಹುಟ್ಟಿದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರದಂತೆ ಎಚ್ಚರ ವಹಿಸಬೇಕು.

​ಕನ್ಯಾ ರಾಶಿ:

ಭಾಗ್ಯಸ್ಥಾನದಲ್ಲಿ ಕುಜನಿರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ತಂದೆಯವರ ಆರೋಗ್ಯದ ಕಡೆಗೆ ನಿಗಾ ಇರಲಿ. ವಿದೇಶ ಪ್ರಯಾಣ ಅಥವಾ ದೂರದ ಪ್ರಯಾಣದ ಯೋಜನೆಗಳು ಸಫಲವಾಗುತ್ತವೆ.

​ಮೀನ ರಾಶಿ:

ತೃತೀಯ ಭಾವದಲ್ಲಿ ಕುಜನಿರುವುದರಿಂದ ನಿಮ್ಮ ಪರಾಕ್ರಮ ಮತ್ತು ಧೈರ್ಯ ವೃದ್ಧಿಯಾಗುತ್ತದೆ. ಸಣ್ಣ ಪ್ರವಾಸಗಳಿಂದ ಲಾಭವಾಗಲಿದೆ. ಸಹೋದರ-ಸಹೋದರಿಯರೊಂದಿಗೆ ಸುಧಾರಿತ ಬಾಂಧವ್ಯ ಇರಲಿದೆ.

​ಈ ರಾಶಿಗೆ ಅಶುಭ ಫಲ

​ಮಿಥುನ ರಾಶಿ:

ದ್ವಾದಶ ಭಾವದಲ್ಲಿ ಕುಜನಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ಕಣ್ಣಿನ ಸಮಸ್ಯೆ ಅಥವಾ ನಿದ್ರಾಹೀನತೆ ಕಾಡಬಹುದು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.

ಇದನ್ನೂ ಓದಿ: ಶುಕ್ರ-ಕೇತು ಸಂಯೋಗ; ಈ 4 ರಾಶಿಯವರು ಜುಲೈನಲ್ಲಿ ಅತ್ಯಂತ ಜಾಗರೂಕರಾಗಿರಿ

​ತುಲಾ ರಾಶಿ:

ಅಷ್ಟಮ ಭಾವದಲ್ಲಿ ಕುಜನ ಸಂಚಾರವಿರುವುದರಿಂದ ವಾಹನ ಚಾಲನೆಯಲ್ಲಿ ಅತಿ ಹೆಚ್ಚಿನ ಜಾಗ್ರತೆ ಅಗತ್ಯ. ಹಠಾತ್ ಆರೋಗ್ಯ ಏರುಪೇರಾಗಬಹುದು. ಮಾತು ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ.

​ಧನು ರಾಶಿ:

ಷಷ್ಠ ಭಾವದಲ್ಲಿ ಕುಜನಿರುವುದರಿಂದ ಶತ್ರುಗಳ ಮೇಲೆ ಜಯ ಸಿಗಲಿದೆ. ಆದರೆ ಸಾಲದ ವಹಿವಾಟುಗಳಿಂದ ದೂರವಿರಿ. ಆರೋಗ್ಯದ ದೃಷ್ಟಿಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಗಮನ ಕೊಡಿ.

​ಕುಂಭ ರಾಶಿ:

ಚತುರ್ಥ ಭಾವದಲ್ಲಿ ಕುಜನಿರುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ಕೊರತೆಯಾಗಬಹುದು. ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಭೂಮಿ ಅಥವಾ ವಾಹನ ಖರೀದಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಕುಜನ ಅನುಗ್ರಹಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡುವುದು ಉತ್ತಮ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಗಳ ಆರ್ಥಿಕ ಆರೋಗ್ಯಕ್ಕೆ ಉರುಳಾಗುತ್ತಿರುವ ಉಚಿತ ಕೊಡುಗೆಗಳು; ಕರ್ನಾಟಕಕ್ಕೆ ಅತಿಹೆಚ್ಚು ಬಾಧೆ; ಬೆಚ್ಚಿಬೀಳಿಸಿದೆ ಸಿಎಜಿ ವರದಿ – Kannada News | Welfare bills make Karnataka and other few states to fall from revenue surplus state, CAG Report says

ಬೆಂಗಳೂರು, ಜೂನ್ 26: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಈಗ ಜನಪ್ರಿಯ ಘೋಷಣೆಗಳನ್ನು ಹೊರಡಿಸುವ, ಮತ್ತು ಜನಪ್ರಿಯ ಸ್ಕೀಮ್​ಗಳನ್ನು ನಡೆಸುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ವರದಿ ಇದು. 2022-23ರ ಆರ್ಥಿಕ ವರ್ಷದಲ್ಲಿ ಆದಾಯ ಮಿಗುತೆ (Revenue Surplus) ಹೊಂದಿದ್ದ ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ ಮತ್ತು ಬಿಹಾರ ರಾಜ್ಯಗಳು, ಕೇವಲ ಎರಡೇ ವರ್ಷಗಳಲ್ಲಿ ಅಂದರೆ 2024-25ರ ವೇಳೆಗೆ ತೀವ್ರ ಆದಾಯ ಕೊರತೆ (Revenue Deficit) ಅನುಭವಿಸುತ್ತಿವೆ ಎಂದು ಸಿಎಜಿ ವರದಿ ತಿಳಿಸಿದೆ. ಈ ನಾಲ್ಕು ರಾಜ್ಯಗಳ ಒಟ್ಟು ಆದಾಯ ಕೊರತೆ ₹35,710 ಕೋಟಿಗೆ ತಲುಪಿದೆ.

ವಿಪರ್ಯಾಸವೆಂದರೆ, 15ನೇ ಹಣಕಾಸು ಆಯೋಗವು ಈ ರಾಜ್ಯಗಳು 2024-25ರಲ್ಲಿ ಒಟ್ಟಾರೆ ₹1.14 ಲಕ್ಷ ಕೋಟಿ ಲಾಭದಲ್ಲಿರಲಿವೆ ಎಂದು ಅಂದಾಜಿಸಿತ್ತು. ಆದರೆ, ಗ್ಯಾರಂಟಿ ಯೋಜನೆಗಳು ಮತ್ತು ಸಬ್ಸಿಡಿಗಳ ಅತಿಯಾದ ವೆಚ್ಚದಿಂದಾಗಿ ಲೆಕ್ಕಾಚಾರ ಉಲ್ಟಾ ಆಗಿದೆ. ಸಬ್ಸಿಡಿಗಳಿಂದ ಅತಿಹೆಚ್ಚು ಆದಾಯ ನಷ್ಟ ಕಂಡಿರುವ ರಾಜ್ಯಗಳಲ್ಲಿ ಕರ್ನಾಟಕವೇ ಅಗ್ರಗಣ್ಯ ಎನ್ನಲಾಗಿದೆ.

ಕರ್ನಾಟಕದಲ್ಲಿ ಸಬ್ಸಿಡಿಗಾಗೇ ಶೇ. 14 ಹಣ ವೆಚ್ಚ

ಆದಾಯ ಮತ್ತು ವೆಚ್ಚದ ಅನುಪಾತ ತೆಗೆದುಕೊಂಡರೆ ಅತಿಹೆಚ್ಚು ಪ್ರಮಾಣದ ಸಬ್ಸಿಡಿ ನೀಡುತ್ತಿರುವ ರಾಜ್ಯ ಕರ್ನಾಟಕ ಎಂದು ಸಿಎಜಿ ವರದಿ ಹೇಳಿದೆ. ಕರ್ನಾಟಕದ ಆದಾಯವು ಶೇ. 10.6 ರಷ್ಟು ಬೆಳೆದು ₹2.58 ಲಕ್ಷ ಕೋಟಿಗೆ ತಲುಪಿದ್ದರೂ, ರಾಜ್ಯದ ವೆಚ್ಚಗಳು ಶೇ. 15 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಇದರಿಂದಾಗಿ ರಾಜ್ಯವು ₹20,834 ಕೋಟಿ ಆದಾಯ ಕೊರತೆ ಎದುರಿಸುತ್ತಿದೆ ಎಂಬುದನ್ನು ಮಹಾಲೇಖಪಾಲರ ವರದಿ ಎತ್ತಿ ತೋರಿಸಿದೆ.

ಸಬ್ಸಿಡಿ ಹೊರೆ: ಒಟ್ಟು ಬಜೆಟ್ ವೆಚ್ಚದಲ್ಲಿ ಸಬ್ಸಿಡಿಗಳಿಗಾಗಿಯೇ ಅತಿ ಹೆಚ್ಚು (ಶೇ. 14 ರಷ್ಟು) ಹಣ ಖರ್ಚು ಮಾಡುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಸಿಎಜಿ ಗುರುತಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಸಬ್ಸಿಡಿ ಬಿಲ್ ಶೇ. 49 ರಷ್ಟು ಜಿಗಿದಿದೆ.

ಉಚಿತ ವಿದ್ಯುತ್ ಯೋಜನೆಗೆ (Energy Subsidies) ಹೆಚ್ಚುವರಿಯಾಗಿ ₹8,086 ಕೋಟಿ ಖರ್ಚಾಗಿದೆ. ಸಾರಿಗೆ ಸಬ್ಸಿಡಿ (ಉಚಿತ ಬಸ್ ಪ್ರಯಾಣ) ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಸಾಮಾಜಿಕ ಕಲ್ಯಾಣ ಮತ್ತು ಪೌಷ್ಟಿಕಾಂಶ ಯೋಜನೆಗಳ ವೆಚ್ಚ ₹32,677 ಕೋಟಿಯಿಂದ ₹49,592 ಕೋಟಿಗೆ ಏರಿದೆ.

ಇದನ್ನೂ ಓದಿ: ಎಐ ‘ಕಿಲ್ ಸ್ವಿಚ್’ ಕಡ್ಡಾಯ: ಬ್ಯಾಂಕುಗಳಿಗೆ ಆರ್​ಬಿಐ ಹೊಸ ಪ್ರಸ್ತಾಪಿತ ನಿಯಮ

ತೆಲಂಗಾಣಕ್ಕೆ ಸಬ್ಸಿಡಿ ಬರೆ; ಭಾರೀ ನಷ್ಟದ ಹೊರೆ

ತೆಲಂಗಾಣದ ಸ್ವಂತ ತೆರಿಗೆ ಆದಾಯವು ₹1.11 ಲಕ್ಷ ಕೋಟಿಯಿಂದ ₹1.09 ಲಕ್ಷ ಕೋಟಿಗೆ ಕುಸಿದಿದೆ. ಇಲ್ಲಿ ಸಾಮಾಜಿಕ ಕಲ್ಯಾಣ ಸಬ್ಸಿಡಿಗಳು ನಾಲ್ಕು ಪಟ್ಟು ಹೆಚ್ಚಾಗಿದ್ದು, ಒಟ್ಟು ಸಬ್ಸಿಡಿ ವೆಚ್ಚ ಶೇ. 65 ರಷ್ಟು ಏರಿಕೆಯಾಗಿ ₹15,553 ಕೋಟಿಗೆ ತಲುಪಿದೆ. ಕಳೆದ ವರ್ಷದಲ್ಲಿ ಕೇವಲ 2 ದಿನಗಳನ್ನು ಹೊರತುಪಡಿಸಿ ಇಡೀ ವರ್ಷ ಆರ್‌ಬಿಐನಿಂದ ಸಾಲ ಪಡೆಯುವ ಪರಿಸ್ಥಿತಿ ತೆಲಂಗಾಣಕ್ಕೆ ಬಂದಿತ್ತು. ಇದರಿಂದಾಗಿ ₹779 ಕೋಟಿ ಲಾಭದಲ್ಲಿದ್ದ ರಾಜ್ಯ ₹9,420 ಕೋಟಿ ನಷ್ಟಕ್ಕೆ ಸಿಲುಕಿದೆ.

ಛತ್ತೀಸ್‌ಗಢ ಸಬ್ಸಿಡಿ ವೆಚ್ಚ ಶೇ. 53 ಏರಿಕೆ

2022-23ರಲ್ಲಿ ₹8,592 ಕೋಟಿ ಲಾಭದಲ್ಲಿದ್ದ ಛತ್ತೀಸ್​ಗಡ ರಾಜ್ಯದ ಸಬ್ಸಿಡಿ ವೆಚ್ಚಗಳು ಕಳೆದ ವರ್ಷ (2024-25) ಶೇ. 53 ರಷ್ಟು ಹೆಚ್ಚಾಗಿ ₹16,539 ಕೋಟಿಗೆ ತಲುಪಿವೆ. ವಿಶೇಷವಾಗಿ ಕೃಷಿ ವಲಯದ ಸಬ್ಸಿಡಿಗಳು ದುಪ್ಪಟ್ಟಾಗಿದ್ದು, ₹7,905 ಕೋಟಿಗೆ ಏರಿದೆ.

ಬಿಹಾರದ ಅರ್ಧ ಆದಾಯ ಸಂಬಳ, ಪಿಂಚಣಿ, ಬಡ್ಡಿಗೇ ಸಂದಾಯ

ಬಿಹಾರದಲ್ಲಿ ಸಾಮಾಜಿಕ ಸೇವೆಗಳ ವೆಚ್ಚ ಶೇ. 21 ರಷ್ಟು ಹೆಚ್ಚಾಗಿದೆ (ಶಿಕ್ಷಣ ವಲಯದಲ್ಲಿ ಶೇ. 33 ಮತ್ತು ಸಮಾಜ ಕಲ್ಯಾಣದಲ್ಲಿ ಶೇ. 64 ರಷ್ಟು ಏರಿಕೆ). ರಾಜ್ಯದ ಒಟ್ಟು ಆದಾಯ ವೆಚ್ಚದ ಶೇ. 52 ರಷ್ಟು ಭಾಗ ಕೇವಲ ಸರ್ಕಾರಿ ನೌಕರರ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸುವುದಕ್ಕೇ ಖರ್ಚಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

ಆರ್ಥಿಕ ತಜ್ಞರು ಏನು ಹೇಳುತ್ತಾರೆ?

ಕೆನರಾ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಮಾಧವನ್‌ಕುಟ್ಟಿ ಜಿ ಅವರು ಈ ಆರ್ಥಿಕ ಕುಸಿತಕ್ಕೆ ಕೆಲ ಕಾರಣಗಳನ್ನು ಗುರುತಿಸಿದ್ದಾರೆ. ಪ್ರಮುಖ ಮೂರು ಕಾರಣಗಳು ಹೀಗಿವೆ:

  • ಜಿಎಸ್‌ಟಿ ಪರಿಹಾರ ಸ್ಥಗಿತ: ಕೇಂದ್ರ ಸರ್ಕಾರ ನೀಡುತ್ತಿದ್ದ ಜಿಎಸ್‌ಟಿ ಪರಿಹಾರದ ಅವಧಿ ಮುಗಿದಿರುವುದು (Phasing out of GST Compensation Cess) ಕರ್ನಾಟಕ ಮತ್ತು ತೆಲಂಗಾಣಕ್ಕೆ ದೊಡ್ಡ ಹೊಡೆತ ನೀಡಿದೆ.
  • ಕೇಂದ್ರದ ಅನುದಾನ ಕೊರತೆ: ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಬರುವ ತೆರಿಗೆ ಹಂಚಿಕೆ (Devolution) ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ಸಿದ್ಧಾಂತಗಳ ಭಿನ್ನಾಭಿಪ್ರಾಯದಿಂದಾಗಿ ಹಲವು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸದ ಕಾರಣ ಆ ಅನುದಾನಗಳೂ ಕೈತಪ್ಪಿವೆ.
  • ಚುನಾವಣಾ ಉಚಿತ ಕೊಡುಗೆಗಳು: ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಘೋಷಿಸಿದ ಜನಪ್ರಿಯ ಉಚಿತ ಯೋಜನೆಗಳು ಮತ್ತು ಗ್ಯಾರಂಟಿಗಳು ರಾಜ್ಯಗಳ ಖಜಾನೆಯನ್ನು ಖಾಲಿ ಮಾಡುತ್ತಿವೆ. ಆದಾಯಕ್ಕಿಂತ ವೆಚ್ಚವೇ ವೇಗವಾಗಿ ಬೆಳೆಯುತ್ತಿರುವುದು ಈ ಆರ್ಥಿಕ ಕೊರತೆಗೆ ಮುಖ್ಯ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸೋಲಿಗೆ ವಿಚಿತ್ರ ಕಾರಣ ಕೊಟ್ಟರಾ ರಾಜ್‌ಕುಮಾರ್ ಹಿರಾನಿ; ನೆಟ್ಟಿಗರ ಆಕ್ರೋಶ – Kannada News | Dunki’s Box Office Failure: Rajkumar Hirani Blames Audience, Faces Netizen Backlash

ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ಸೋಲು ಹೊಸತು. ಅವರು ಹೆಚ್ಚು ಸೋಲು ಕಂಡವರಲ್ಲ. ಈಗ ಅವರು ಸೋಲಿನ ಬಗ್ಗೆ ನೀಡಿದ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡಷ್ಟು ಯಶಸ್ಸು ಕಾಣದಿದ್ದಕ್ಕೆ ಹಿರಾನಿ ವಿಚಿತ್ರ ಕಾರಣ ನೀಡಿದ್ದಾರೆ. ಇದನ್ನು ಕೇಳಿದ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ‘ಡಂಕಿ’ ಸಿನಿಮಾದ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಕೆಲ ಭಾರತೀಯರು ಅಕ್ರಮ ಮಾರ್ಗದ ಮೂಲಕ ಅಮೆರಿಕಾಗೆ ತೆರಳುವ ಕಥೆಯನ್ನು ಹೇಳಲಾಗಿತ್ತು. ಈ ವಿಷಯವು ಭಾರತದ ಬಹುಪಾಲು ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ ಎಂಬುದು ಅವರ ವಾದ. ಹಾಗಾಗಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಲಿಲ್ಲ ಎಂದು ಹಿರಾನಿ ಹೇಳಿದ್ದಾರೆ.

ಸಿದ್ದಾರ್ಥ್ ಆನಂದ್ ಹೇಳಿಕೆಗೆ ಹೋಲಿಕೆ

ರಾಜ್‌ಕುಮಾರ್ ಹಿರಾನಿ ಅವರ ಈ ಹೇಳಿಕೆಯು ಈ ಹಿಂದೆ ನಿರ್ದೇಶಕ ಸಿದ್ದಾರ್ಥ್ ಆನಂದ್ ನೀಡಿದ್ದ ಹೇಳಿಕೆಯನ್ನು ನೆನಪಿಸುವಂತಿದೆ. ‘ಫೈಟರ್’ ಸಿನಿಮಾ ಸೋತಾಗ ಸಿದ್ದಾರ್ಥ್ ಆನಂದ್ ಕೂಡ ಇದೇ ರೀತಿಯ ವಾದ ಮಾಡಿದ್ದರು. ಭಾರತದ ಶೇಕಡಾ 90 ರಷ್ಟು ಜನ ಇನ್ನು ವಿಮಾನ ಪ್ರಯಾಣ ಮಾಡಿಲ್ಲ. ಹಾಗಾಗಿ ಅವರಿಗೆ ‘ಫೈಟರ್’ ಚಿತ್ರದ ಕಥೆ ಅರ್ಥವಾಗಲಿಲ್ಲ ಎಂದು ಸಿದ್ದಾರ್ಥ್ ಹೇಳಿದ್ದರು.

ಅಂದು ಸಿದ್ದಾರ್ಥ್ ಆನಂದ್ ಅವರ ಮಾತಿಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಚಿತ್ರದ ಕಥೆಯ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರೇಕ್ಷಕರ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಜನ ಆಕ್ರೋಶ ಹೊರಹಾಕಿದ್ದರು. ಈಗ ಹಿರಾನಿ ಕೂಡ ಅದೇ ಹಾದಿ ಹಿಡಿದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಪ್ರೇಕ್ಷಕರ ಆಕ್ಷೇಪವೇನು?

ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರು ಹಿರಾನಿ ಅವರ ತರ್ಕವನ್ನು ಒಪ್ಪುತ್ತಿಲ್ಲ. ಯಾವುದೇ ಒಂದು ಸಿನಿಮಾ ಗೆಲ್ಲಲು ಅದರ ಕಥೆ ಹೇಳುವ ಶೈಲಿ, ಭಾವನಾತ್ಮಕ ಆಳ ಮತ್ತು ಮೇಕಿಂಗ್ ಮುಖ್ಯವಾಗಿರುತ್ತದೆ. ಪ್ರೇಕ್ಷಕರು ಆ ಘಟನೆಯನ್ನು ಸ್ವತಃ ಅನುಭವಿಸಿರಬೇಕು ಎಂಬ ನಿಯಮ ಎಲ್ಲೂ ಇಲ್ಲ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ಯಾವುದೋ ಹಾರರ್ ಸಿನಿಮಾ ಹಿಟ್ ಆಯಿತು ಎಂದರೆ, ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕನಿಗೂ ನಿಜ ಜೀವನದಲ್ಲಿ ದೆವ್ವದ ಅನುಭವ ಆಗಿತ್ತು, ಅದಕ್ಕೆ ಹಿಟ್ ಆಯಿತು ಎಂದು ಹೇಳಲು ಸಾಧ್ಯವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ, ಹೇಳಿದ್ದೇನು?

ಜೀವನದಲ್ಲಿ ಎಂದೂ ನೋಡಿರದ ಪ್ರಪಂಚದ ಕಥೆಗಳನ್ನು ಹೊಂದಿದ್ದ ಎಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ರಾಜ್‌ಕುಮಾರ್ ಹಿರಾನಿ ಅವರಂತಹ ಹಿರಿಯ ನಿರ್ದೇಶಕರಿಂದ ಇಷ್ಟು ಸರಳವಾದ ಮತ್ತು ಜವಾಬ್ದಾರಿಯಿಲ್ಲದ ಉತ್ತರವನ್ನು ಯಾರು ನಿರೀಕ್ಷಿಸಿರಲಿಲ್ಲ ಎಂದು ಸಿನಿ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:10 pm, Fri, 26 June 26

Source link

‘ಕಡಲ ನಾಡಿಗೆ ಸ್ವಾಗತ’: ‘ಕರಾವಳಿ’ ಸಿನಿಮಾ ಟೈಟಲ್ ಸಾಂಗ್ ರಿಲೀಸ್ – Kannada News | Prajwal Devaraj starrer Karavali movie title song released

ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟ ನಟನೆಯ ‘ಕರಾವಳಿ’ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಭಿನ್ನ ಕತೆಯ, ಭಿನ್ನ ನಿರೂಪಣೆಯ ಈ ಸಿನಿಮಾ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಇತ್ತೀಚೆಗಷ್ಟೆ ಘೋಷಿಸಲಾಗಿದ್ದು, ಸಿನಿಮಾದ ಪ್ರಚಾರವೂ ಆರಂಭವಾಗಿದೆ. ಇದೀಗ ‘ಕರಾವಳಿ’ ಸಿನಿಮಾದ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಯೂಟ್ಯೂಬ್​​ನಲ್ಲಿ ಬಿಡುಗಡೆ ಮಾಡಿದೆ.

‘ಕರಾವಳಿ’ ಸಿನಿಮಾದ ಕತೆಯಂತೆ ಈ ಹಾಡು ಸಹ ಕರಾವಳಿಯ ಭೌಗೋಳಿಕ ಭಿನ್ನತೆ, ಸಂಸ್ಕೃತಿ, ಜನರ ಆಚರಣೆ ಇನ್ನಿತರೆಗಳನ್ನು ಪ್ರಮುಖವಾಗಿ ಒಳಗೊಂಡಿದ್ದು, ಕರಾವಳಿ ಜನ ಜೀವನವನ್ನು ಸಾಹಿತ್ಯ ಮತ್ತು ಸಂಗೀತದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದೆ. ‘ಕಡಲಿಂದ ನಾಡು, ಕಡಲಿಂದ ಕಾಡು, ಕಡಲಿಂದ ತಾನೆ ಒಡಲಾಗೂಡು’ ಎಂಬ ಹಾಡು ಕರಾವಳಿ ಜನರ ಮನ ಗೆಲ್ಲುವುದು ಖಾತ್ರಿ. ಬಿಡುಗಡೆ ಆಗಿರುವ ಹಾಡಿನಲ್ಲಿ ಕಂಬಳವೇ ಹೈಲೆಟ್ ಆಗಿದೆ. ‘ಕರಾವಳಿ’ ಸಿನಿಮಾ ಸಹ ಕಂಬಳದ ಸುತ್ತಲೇ ಸುತ್ತುತ್ತದೆ.

‘ಕರಾವಳಿ’ ಸಿನಿಮಾದ ಈ ಹಾಡಿನ ಸಂಪೂರ್ಣ ಚಿತ್ರೀಕರಣ ಕಟಪಾಡಿ ಕಂಬಳ ಟ್ರ್ಯಾಕ್ ನಲ್ಲಿ ಮಾಡಲಾಗಿದೆ. ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಂಬಳಗಳಲ್ಲಿಯೇ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವ ಕಂಬಳ ಕಟಪಾಡಿ ಕಂಬಳ. ತೀರಾ ಸಾಂಪ್ರಾದಾಯಿಕವಾಗಿ ಇಲ್ಲಿ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷ ಎಂದರೆ ಸುಮಾರು 700ವರ್ಷಗಳಿಂದನೂ ಒಂದೇ ಕುಟುಂಬ ಕಂಬಳ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್, ರಾಗಿಣಿ ಅವರ ಭಾನುವಾರ ಹೀಗಿತ್ತು

ಇಷ್ಟು ದೊಡ್ಡ ಇತಿಹಾಸ ಇರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಕರಾವಳಿ ತಂಡ ಅವಕಾಶವನ್ನು ಅಷ್ಟೆ ಅದ್ಭುತವಾಗಿ ಬಳಸಿಕೊಂಡಿದೆ ಎಂಬುದು ಹಾಡಿನಿಂದ ಗೊತ್ತಾಗುತ್ತಿದೆ. ಹಾಡಿಗೆ ಒದಗಿರುವಂತೆ ಸುಂದರವಾಗಿ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಈಗ ಬಿಡುಗಡೆ ಆಗಿರುವ ಹಾಡನ್ನು ಗಾಯಕ ಸಾಯಿ ವಿಗ್ನೇಶ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಈ ಹಾಡಿಗಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

‘ಕರಾವಳಿ’ ಸಿನಿಮಾವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್‌ ನಾಯಕ, ರಾಜ್ ಬಿ ಶೆಟ್ಟಿ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ನಾಕಿಯಾಗಿ ಸಂಪದಾ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಸಿನಿಮಾನಲ್ಲಿ ಪ್ರತಿಭಾವಂತ ತಂತ್ರಜ್ಞರ ತಂಡವೇ ಇದೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯನ್ನು ಮಾಡುತ್ತಿರುವುದು ವಿಶೇಷ. ಸಿನಿಮಾ ಜುಲೈ 24ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ, 3 ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಊಟದ ಖರ್ಚು ಬರೋಬ್ಬರಿ 27 ಲಕ್ಷ ರೂ. – Kannada News | Rajkot Demolition Food Bill: Rs 27 Lakh Scam Sparks Corruption Probe

ರಾಜ್‌ಕೋಟ್, ಜೂನ್ 26: ಮೂರು ದಿನಗಳ ಅಕ್ರಮ ಕಟ್ಟಡಗಳ(Illegal Building) ತೆರವು ಕಾರ್ಯಾಚರಣೆಯೊಂದರಲ್ಲಿ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರರು ಮತ್ತು ಪೊಲೀಸ್ ಸಿಬ್ಬಂದಿಯ ಆಹಾರ ಹಾಗೂ ಪಾನೀಯಗಳ ಬಿಲ್ ಕೇಳಿದರೆ ನೀವೇ ಬೆಚ್ಚಿಬೀಳುತ್ತೀರಿ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (RMC) ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಲ್ಲಿ, ಕೇವಲ ಮೂರೇ ದಿನಕ್ಕೆ ಬರೋಬ್ಬರಿ 27.20 ಲಕ್ಷ ರೂಪಾಯಿಗಳ ಉಪಹಾರದ ಬಿಲ್ ಸೃಷ್ಟಿಯಾಗಿದ್ದು, ಮಹಾ ಹಗರಣದ ಸಂಶಯ ಹುಟ್ಟುಹಾಕಿದೆ.

ಮೆನುವಿನಲ್ಲಿತ್ತು ಗೋಡಂಬಿ, ಖರ್ಜೂರ, ಕಾಜು ಕಟ್ಲಿ
ಜಂಗ್ಲೇಶ್ವರ ಪ್ರದೇಶದ 8 ವಲಯಗಳಲ್ಲಿ ಇತ್ತೀಚೆಗೆ ಈ ಧ್ವಂಸ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಸಿಬ್ಬಂದಿಗೆ ಆರ್ಡರ್ ಮಾಡಲಾದ ತಿಂಡಿಗಳ ಬೆಲೆ ಕೇಳಿದರೆ ಭ್ರಷ್ಟಾಚಾರದ ವಾಸನೆ ಎದ್ದುಕಾಣುತ್ತದೆ.

ದುಬಾರಿ ಸ್ವೀಟ್ಸ್: ಕೇವಲ 150 ತಿಂಡಿ ತಟ್ಟೆಗಳಿಗೆ ಬರೋಬ್ಬರಿ 34,650 ರೂ. ಬಿಲ್ ಮಾಡಲಾಗಿದೆ. ಇನ್‌ವಾಯ್ಸ್‌ನಲ್ಲಿ ಕೇವಲ ಒಂದು ‘ಕಾಜು ಕಟ್ಲಿ’ಗೆ ತಲಾ 231ರೂ. ದರ ನಿಗದಿಪಡಿಸಲಾಗಿದೆ.

ರೆಸ್ಟೋರೆಂಟ್ ಬಿಲ್: ಕಾರ್ಯಾಚರಣೆ ವೇಳೆ ನೌಕರರು ಗೋಡಂಬಿ, ಖರ್ಜೂರ, ಸಮೋಸಾ, ಜಿಲೇಬಿ ಮತ್ತು ಗಂಥಿಯಾದಂತಹ ದುಬಾರಿ ಸಿಹಿತಿಂಡಿಗಳನ್ನು ಸವಿದಿದ್ದಾರೆ. ಇದರಲ್ಲಿ ಕೇವಲ ಒಂದು ಪ್ರಸಿದ್ಧ ರೆಸ್ಟೋರೆಂಟ್‌ನ ಬಿಲ್ ಮಾತ್ರ ಸುಮಾರು 20 ಲಕ್ಷ ರೂಪಾಯಿ ಬಂದಿದೆ.

ಮತ್ತಷ್ಟು ಓದಿ: ಜೆಸಿಬಿಯಿಂದ ಕಟ್ಟಡಗಳ ನೆಲಸಮ: ಕರಾವಳಿಯಲ್ಲಿ ಬುಲ್ಡೋಜರ್ ಬಾಬಾ ಆದ ಕಾಂಗ್ರೆಸ್ ಶಾಸಕ

21 ಸಾವಿರ ಕಪ್ ಚಹಾ, 4 ಸಾವಿರ ಲೆಮನ್ ಜ್ಯೂಸ್
ಬಿಸಿಲಿನಲ್ಲಿ ಕೆಲಸ ಮಾಡಿದ ನೌಕರರು ಹಾಗೂ ಪೊಲೀಸರು ಕೇವಲ 3 ದಿನಗಳಲ್ಲಿ ‘ಆರಾಧನಾ ಟೀ ಸ್ಟಾಲ್’ ನಿಂದ ಬರೋಬ್ಬರಿ 21,000 ಕಪ್ ಚಹಾ-ಕಾಫಿ ಮತ್ತು 4,000 ಕ್ಕೂ ಹೆಚ್ಚು ಬಾಟಲಿ ನಿಂಬೆ ಪಾನಕ ಹಾಗೂ ಬಿಸ್ಕತ್ತುಗಳನ್ನು ತಿಂದಿದ್ದಾರೆ ಎಂದು ಬಿಲ್‌ನಲ್ಲಿ ತೋರಿಸಲಾಗಿದೆ. ಈ ಚಹಾ ಮತ್ತು ಕಾಫಿಯ ಒಟ್ಟು ವೆಚ್ಚವೇ ಸುಮಾರು 6 ಲಕ್ಷ ರೂಪಾಯಿಗಳಾಗಿದೆ.

ಬಿಲ್ ತಡೆಹಿಡಿದ ಸ್ಥಾಯಿ ಸಮಿತಿ, ತನಿಖೆಗೆ ಆದೇಶ
ಮಾಜಿ ಪದಾಧಿಕಾರಿಗಳ ತಂಡವು ಮಂಜೂರಾತಿಗಾಗಿ ಸಲ್ಲಿಸಿದ ಈ 27.20 ರೂ. ಲಕ್ಷದ ಬೃಹತ್ ಇನ್‌ವಾಯ್ಸ್ ನಾಗರಿಕ ಆಡಳಿತದಲ್ಲಿ ತಲ್ಲಣ ಸೃಷ್ಟಿಸಿದೆ. ಇದರಲ್ಲಿ ಮೇಲ್ನೋಟಕ್ಕೇ ಭಾರಿ ವ್ಯತ್ಯಾಸಗಳು ಮತ್ತು ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್‌ಕೋಟ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಈ ಪ್ರಸ್ತಾವನೆಯನ್ನು ತಕ್ಷಣವೇ ತಡೆಹಿಡಿದಿದ್ದಾರೆ. ಈ ವೆಚ್ಚಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಬಿಲ್ಲಿಂಗ್‌ನ ನಿಖರತೆಯ ಬಗ್ಗೆ ಅಧಿಕೃತ ವಿವರಣೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇದು ಹಗಲು ದರೋಡೆ ಎಂದು ಕಾಂಗ್ರೆಸ್ ಆಕ್ರೋಶ
ಮತ್ತೊಂದೆಡೆ, ಈ ಬೃಹತ್ ಆಹಾರ ಮಸೂದೆಯ ಹಿಂದೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಕೆಡವುವಿಕೆಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದಲ್ಲಿ 72,000 ಹುದ್ದೆಗಳ ನೇಮಕಾತಿಗೆ ಕ್ರಮ: ಮಹತ್ವದ ಘೋಷಣೆ ಮಾಡಿದ ಡಿಸಿಎಂ ಪರಮೇಶ್ವರ್​​ – Kannada News | Karnataka Government to Fill 72,000 Vacant Posts: Revenue Minister G Parameshwara

ಬೆಂಗಳೂರು, ಜೂನ್​​ 26: ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ತುಂಬುತ್ತೇವೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿಯೇ ನಾವು ಹೇಳಿದ್ದೆವು. ಆದರೆ ಅನೇಕ ಕಾರಣಗಳಿಂದ ಅದು ವಿಳಂಬವಾಗಿದೆ. ಒಳ ಮೀಸಲಾತಿಯೇ ದೊಡ್ಡ ಸಮಸ್ಯೆಯಾಗಿತ್ತು. ಆದರೀಗ ಒಟ್ಟು 72,000 ಹುದ್ದೆಗಳಿಗೆ ನೇಮಕ ಸಂಬಂಧ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್​​ ತಿಳಿಸಿದ್ದಾರೆ. ಈ ಬಗ್ಗೆ ಇಲಾಖೆಗಳಿಗೆ ನೋಟಿಫಿಕೇಶನ್​​ಗೂ ಸೂಚಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು, ಇಬ್ಬರು ಅಧಿಕಾರಿಗಳನ್ನು ಇದಕ್ಕಾಗಿ ನೇಮಕ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version