ಮಂಗಳೂರಿನ ಜೊತೆ ನಂಟು, ಬಾಲ್ಯ ನೆನಪಿಸಿಕೊಂಡ ಶಾರುಖ್ ಖಾನ್ – Kannada News | Shah Rukh Khan talks about his relation with Mangalore

ಶಾರುಖ್ ಖಾನ್ (Shah Rukh Khan), ಭಾರತದ ಟಾಪ್ ಸೂಪರ್ ಸ್ಟಾರ್. ವಿಶ್ವದಾದ್ಯಂತ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಭಾರತೀಯ ನಟ ಶಾರುಖ್ ಖಾನ್ ಎನ್ನಲಾಗುತ್ತದೆ. ನಿನ್ನೆಯಷ್ಟೆ ಶಾರುಖ್ ಖಾನ್ ಮಂಗಳೂರಿಗೆ ಬಂದಿದ್ದರು. ತಮ್ಮ ಮೊದಲ ಸಿನಿಮಾ ‘ದೀವಾನಾ’ ಬಿಡುಗಡೆ ಆಗಿ 35 ವರ್ಷಗಳಾಗಿದ್ದು ಅದರ ಸಂಭ್ರಮಾಚರಣೆಗಾಗಿ ಶಾರುಖ್ ಖಾನ್ ಅವರು ಮಂಗಳೂರಿಗೆ ಬಂದಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಶಾರುಖ್ ಖಾನ್ ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ಶಾರುಖ್ ಖಾನ್ ಅವರು ಮಂಗಳೂರಿನಲ್ಲಿ ತಾವು ಕಳೆದ ಬಾಲ್ಯವನ್ನು ನೆನಪು ಮಾಡಿಕೊಂಡರು. ಅಲ್ಲದೆ, ತಾವು ನಟರಾಗದೇ ಇದ್ದಿದ್ದರೆ ಮಂಗಳೂರಿನಲ್ಲೇ ಇರುತ್ತಿದ್ದೆ ಎಂದು ಸಹ ಹೇಳಿದರು.

ಶಾರುಖ್ ಖಾನ್, ಪುಟ್ಟ ಬಾಲಕನಾಗಿದ್ದಾಗ ಅವರು ಮಂಗಳೂರಿನಲ್ಲಿದ್ದ ತಮ್ಮ ಅಜ್ಜಿ-ತಾತನ ಜೊತೆಗೆ ನೆಲೆಸಿದ್ದರು. ಶಾರುಖ್ ಖಾನ್ ಅವರ ತಾಯಿ, ಮಗನನ್ನು ಅಜ್ಜಿಗೆ ಸಾಕಿಕೊಳ್ಳಲು ನೀಡಿದ್ದರಂತೆ. ಮಂಗಳೂರಿನಲ್ಲಿ ಸುಮಾರು ಐದು ವರ್ಷಗಳ ಕಾಲ ಶಾರುಖ್ ಖಾನ್ ನೆಲೆಸಿದ್ದರು. ಆ ಸಮಯದಲ್ಲಿ ಅವರು ಇಲ್ಲಿ ಶಾಲೆಗೆ ಸಹ ಸೇರಿದ್ದರಂತೆ. 1960ರ ಸಮಯದಲ್ಲಿ ಶಾರುಖ್ ಖಾನ್ ಅವರ ತಾತ ಮಂಗಳೂರಿನ ಬಂದರಿನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಶಾರುಖ್ ಖಾನ್ ಸಹ ಇಲ್ಲಿಯೇ ಇದ್ದರು.

ಇದನ್ನೂ ಓದಿ:ಮರಾಠಿ ಸಿನಿಮಾದ 42 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ ಶಾರುಖ್ ಖಾನ್

ಮಂಗಳೂರಿಗೆ ಬಂದಿದ್ದ ಶಾರುಖ್ ಖಾನ್, ‘ನಮಸ್ಕಾರ ಕುಡ್ಲ, ಎಂಚ ಉಲ್ಲಾರ್’ ಎಂದು ತುಳುವಿನಲ್ಲೇ ಮಾತು ಆರಂಭಿಸಿದರು. ಮಂಗಳೂರು ಒಂದು ಸುಂದರ ನಗರ, ನಾನು ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಬರುವವರೆಗೆ ನೀವು ಪ್ರೀತಿಯನ್ನು ಸುರಿಸಿದ್ದೀರಿ, ಅದಕ್ಕೆ ಧನ್ಯವಾದ. ನನಗೆ ಮಂಗಳೂರಿನಲ್ಲಿ ಸಮಯ ಕಳೆಯಲು ಇಷ್ಟ, ಜೊತೆಗೆ ಇಲ್ಲಿನ ನೀರು ದೋಸೆಯೂ ಬಹಳ ಇಷ್ಟ. ಮಂಗಳೂರು ತನ್ನ ವಿಭಿನ್ನ ಸಂಸ್ಕೃತಿಯಿಂದ ಗಮನ ಸೆಳೆಯುತ್ತದೆ. ಮಂಗಳೂರಿನ ಹಲವರು ಮುಂಬೈ ಜೊತೆಗೂ ಬಹಳ ಆಪ್ತ ನಂಟು ಹೊಂದಿದ್ದಾರೆ’ ಎಂದರು.

‘ಮಂಗಳೂರಿನಲ್ಲಿ ತಾವು ಕಳೆದ ದಿನಗಳ ಬಗ್ಗೆ ಮಾತನಾಡಿದ ಶಾರುಖ್ ಖಾನ್, ‘ನನ್ನ ತಾತ ಇಲ್ಲಿ ಎಂಜಿನಿಯರ್ ಆಗಿದ್ದರು. ಆಗಿನ್ನೂ ನಾನು ಬಹಳ ಚಿಕ್ಕವನು, ಅದರ ಹೆಚ್ಚು ನೆನಪುಗಳು ನನಗೆ ಇಲ್ಲ, ಆದರೆ ಇಲ್ಲಿ ತೆಗೆದ ಕೆಲವು ಚಿತ್ರಗಳು ನನ್ನ ಬಳಿ ಇವೆ. ಎಂದು ಹೇಳಿ ಚಿತ್ರಗಳನ್ನು ಸಹ ಅವರು ತೋರಿಸಿದರು. ತಾವು ನಟನೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ, ತಾನು ಮಂಗಳೂರಿನ ನಗರದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೆ ಎಂದ ಶಾರುಖ್. ‘ಮಕ್ಕಳಿಗೆ ಪಾಠ ಮಾಡುವುದು ಎಂದರೆ ನಮಗೆ ತುಂಬಾ ಇಷ್ಟ, ನಟನಾಗದೇ ಇದ್ದಿದ್ದೆ, ನಾನು ಇಲ್ಲಿ ಸೇಂಟ್ ಅಲೋಷಿಯಸ್, ಮೌಂಟ್ ಕಾರ್ಮಲ್ ಅಥವಾ ಶಾರದಾ ವಿದ್ಯಾ ಮಂದಿರದಲ್ಲಿ ಶಿಕ್ಷಕನಾಗಿ ಇರುತ್ತಿದ್ದೆ. ಮತ್ತು ಆ ಕೆಲಸದಲ್ಲಿ ನಾನು ತುಂಬಾ ಸಂತೋಷವಾಗಿರುತ್ತಿದ್ದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:08 pm, Fri, 26 June 26

Source link

ಗುಜರಿಗೆ ಹೋಗಬೇಕಿದ್ದ ಬ್ರಿಟನ್‌ 9 ಯುದ್ಧವಿಮಾನಗಳ ಖರೀದಿಗೆ ಮುಂದಾದ ಭಾರತ: ಅಸಲಿ ಕಾರಣ ಬಿಚ್ಚಿಟ್ಟ ವಾಯುಪಡೆ – Kannada News | India’s Defence Strategy: UK Jaguar Jets for IAF Spares to Boost Fighter Squadron Readiness

ದೆಹಲಿ, ಜೂ.26: ಬ್ರಿಟನ್‌ನಲ್ಲಿ ಹರಾಜಾಗಿ ಗುಜರಿ ಸೇರಬೇಕಿದ್ದ 9 ರಾಯಲ್ ಏರ್‌ಫೋರ್ಸ್‌ನ ನಿವೃತ್ತ ಯುದ್ಧವಿಮಾನಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಮೇಲ್ನೋಟಕ್ಕೆ ಇದು ಹಳೆಯ ವಿಮಾನಗಳ ಖರೀದಿ ಎನಿಸಿದರೂ, ಇದರ ಹಿಂದೆ ಭಾರತೀಯ ವಾಯುಪಡೆಯ (IAF) ದೊಡ್ಡ ರಕ್ಷಣಾ ತಂತ್ರಗಾರಿಕೆ ಅಡಗಿದೆ ಎಂದು ಉನ್ನತ ರಕ್ಷಣಾ ಮೂಲಗಳು ಅಸಲಿ ಕಾರಣವನ್ನು ಬಿಚ್ಚಿಟ್ಟಿವೆ.

ಗುಜರಿ ವಿಮಾನಗಳ ಖರೀದಿಯ ಹಿಂದಿನ ‘ಅಸಲಿ’ ರಹಸ್ಯವೇನು?

ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಈ ವಿಮಾನಗಳನ್ನು ಮತ್ತೆ ಯುದ್ಧ ರಂಗಕ್ಕೆ ಇಳಿಸಲು ಅಲ್ಲ! ಬದಲಿಗೆ, ಭಾರತೀಯ ವಾಯುಪಡೆಯಲ್ಲಿ ಸದ್ಯ ಸಕ್ರಿಯವಾಗಿರುವ 120 ಜಾಗ್ವಾರ್ (ಲೋಕಲ್ ಹೆಸರು ‘ಶಂಶೇರ್’) ಯುದ್ಧವಿಮಾನಗಳ ಜೀವಿತಾವಧಿಯನ್ನು ವಿಸ್ತರಿಸಲು.

ಜಾಗತಿಕವಾಗಿ ಜಾಗ್ವಾರ್ ವಿಮಾನಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅವುಗಳ ಇಂಜಿನ್, ಏವಿಯಾನಿಕ್ಸ್ ಮತ್ತು ಹೈಡ್ರಾಲಿಕ್ಸ್‌ನಂತಹ ಪ್ರಮುಖ ಬಿಡಿಭಾಗಗಳು ಎಲ್ಲೂ ಸಿಗುತ್ತಿಲ್ಲ. ಬ್ರಿಟನ್‌ನ ಈ 9 ವಿಮಾನಗಳನ್ನು ಭಾರತಕ್ಕೆ ತಂದು, ಅವುಗಳನ್ನು ಬಿಚ್ಚಿ, ಅವುಗಳೊಳಗಿರುವ ಬಿಡಿಭಾಗಗಳನ್ನು ಭಾರತದ ಸಕ್ರಿಯ 6 ಜಾಗ್ವಾರ್ ಸ್ಕ್ವಾಡ್ರನ್‌ಗಳ ದುರಸ್ತಿಗೆ ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜು.07ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ

ವಾಯುಪಡೆಗೆ ಸದ್ಯ ಜಾಗ್ವಾರ್‌ಗಳೇ ಅನಿವಾರ್ಯ

ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನಗಳ ಕೊರತೆ ತೀವ್ರವಾಗಿದೆ. ಇರಬೇಕಾದ 42 ಸ್ಕ್ವಾಡ್ರನ್‌ಗಳ ಬದಲಿಗೆ ಸದ್ಯ ಕೇವಲ 29 ಸ್ಕ್ವಾಡ್ರನ್‌ಗಳು ಮಾತ್ರ ಸಕ್ರಿಯವಾಗಿವೆ. ಸ್ವದೇಶಿ ‘ತೇಜಸ್ ಎಂಕ್-1ಎ’ ವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ಹಾಗೂ ಫ್ರಾನ್ಸ್‌ನಿಂದ ಬರಬೇಕಾದ ‘ರಫೇಲ್’ ವಿಮಾನಗಳ ಒಪ್ಪಂದ ಇನ್ನು ಅಂತಿಮವಾಗದ ಹಿನ್ನೆಲೆಯಲ್ಲಿ, ಹೊಸ ವಿಮಾನಗಳು ಬರುವವರೆಗೆ ಜಗತ್ತಿನ ಏಕೈಕ ಜಾಗ್ವಾರ್ ಆಪರೇಟರ್ ಆಗಿರುವ ಭಾರತಕ್ಕೆ, ತನ್ನಲ್ಲಿರುವ ‘ಶಂಶೇರ್’ ಅನ್ನು ಗಟ್ಟಿಯಾಗಿಟ್ಟುಕೊಳ್ಳಲು ಬ್ರಿಟನ್‌ನ ಈ ವಿಮಾನಗಳು “ಸಂಜೀವಿನಿ”ಯಾಗಲಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ: ದಾರುಣ ಅಂತ್ಯ ಕಂಡ ಯುವಕ – Kannada News | Tumakuru Tragedy: Youth Dies After Tipper Rams Newly Purchased Bike

ತುಮಕೂರು/ಧಾರವಾಡ, ಜೂನ್​​ 26: ಹೊಸ ಬೈಕ್​​ ಖರೀದಿಸಿದ ಮರುದಿನವೇ ಭೀಕರ ಅಪಘಾತ ನಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ. ನಂದೀಶ್​​ ಕುಮಾರ್​​ (19) ಮೃತದುರ್ದೈವಿಯಾಗಿದ್ದು, ವೇಗವಾಗಿ ಬಂದ ಟಿಪ್ಪರ್​​ ಬೈಕ್​​ಗೆ ಗುದ್ದಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂದೀಶ್​​ ಮೂಲತಃ ಪಾವಗಡದ ದೊಡ್ಡಹಳ್ಳಿ ನಿವಾಸಿ ಎಂಬುದು ಗೊತ್ತಾಗಿದೆ.

ನಿನ್ನೆಯಷ್ಟೇ ಹೊಸ ಬೈಕ್​​ ಖರೀದಿ

ನಿನ್ನೆಯಷ್ಟೇ ಹೊಸ ಬೈಕ್​​ ಖರೀದಿಸಿದ್ದ ನಂದೀಶ್​​ ಕುಮಾರ್​​ ಸ್ನೇಹಿತನ ಜೊತೆ ಸ್ವಗ್ರಾಮಕ್ಕೆ ಬರುತ್ತಿದ್ದ. ಈ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್​​ಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ನಂದೀಶ್​​ ಮೃತಪಟ್ಟಿದ್ದರೆ ಹಿಂಬದಿ ಸವಾರ ಅದೃಷ್ಟವಶಾತ್​​ ಪ್ರಾಣಾಪಾಯದಿಂದ ಪಾರಾಗಾದ್ದಾನೆ. ಘಟನೆ ಸಂಬಂಧ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಳ್ಳ ಹಿಡಿಯಿತಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?; ತುಮಕೂರು ನಗರದಲ್ಲಿ ಇಂದಿರಾ ಕ್ಯಾಂಟೀನ್​​ಗಳ ಬಾಗಿಲು ಬಂದ್​​!

ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಹಳೇ ತೇಗೂರಿನ ಷಣ್ಮುಖ ಜೋಗಿ(28), ಉತ್ತರ ಪ್ರದೇಶ ಮೂಲದ ಸಾಗರ್​(30) ಮೃತ ದುರ್ದೈವಿಗಳಾಗಿದ್ದು, ಘಟನಾ ಸ್ಥಳಕ್ಕೆ ಗರಗ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೈರ್ ಬ್ಲಾಸ್ಟ್‌ ಆಗಿದ್ದ ಹಿನ್ನೆಲೆ ಲಾರಿ ಚಾಲಕ ಟೈರ್​​ ಬದಲಿಸುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್​​ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಬಿಎಸ್‌ಇ ತ್ರಿಭಾಷಾ ನೀತಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ – Kannada News | Dharmendra Pradhan Ends CBSE Language Policy Confusion: Existing Students Unaffected

ನವದೆಹಲಿ, ಜೂನ್ 26: ಸಿಬಿಎಸ್‌ಇ (CBSE) ಶಾಲೆಗಳಲ್ಲಿ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯುವ ‘ತ್ರಿಭಾಷಾ ನೀತಿ’ಯ ಸುತ್ತ ಎದ್ದಿದ್ದ ಗೊಂದಲ ಮತ್ತು ಆತಂಕಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪೂರ್ಣವಿರಾಮ ಇಟ್ಟಿದ್ದಾರೆ. ಈ ಹೊಸ ನಿಯಮವು ಕೇವಲ ಈ ವರ್ಷದಿಂದ 6 ನೇ ತರಗತಿಗೆ ದಾಖಲಾಗುವ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ 7, 8 ಮತ್ತು 9 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಭಾಷಾ ವಿಷಯಗಳನ್ನು ಬದಲಾಯಿಸುವ ಅಗತ್ಯವಿಲ್ಲ.

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

ಸಿಬಿಎಸ್‌ಇ ನೀಡಿದ್ದ ಹಿಂದಿನ ಸೂಚನೆ ಅಸ್ಪಷ್ಟವಾಗಿದ್ದರಿಂದ, ಈಗ ಓದುತ್ತಿರುವ ಮಕ್ಕಳೂ ಭಾಷೆ ಬದಲಾಯಿಸಬೇಕೇ ಎಂಬ ಆತಂಕ ಪೋಷಕರಲ್ಲಿ ಮನೆಮಾಡಿತ್ತು. ಆದರೆ ಈಗ ನೀಡಿರುವ ಸ್ಪಷ್ಟೀಕರಣದ ಪ್ರಕಾರ, ಪ್ರಸ್ತುತ ಎರಡು ವಿದೇಶಿ ಭಾಷೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಬೋರ್ಡ್ ಪರೀಕ್ಷೆಯವರೆಗೆ ಅದೇ ವಿಷಯಗಳೊಂದಿಗೆ ಮುಂದುವರಿಯಬಹುದು. ಸಿಬಿಎಸ್‌ಇ ಶೀಘ್ರದಲ್ಲೇ ಈ ಬಗ್ಗೆ ಪರಿಷ್ಕೃತ ಅಧಿಕೃತ ಆದೇಶ ಹೊರಡಿಸಲಿದೆ.

ಏನಿದು R1, R2 ಮತ್ತು R3 ಭಾಷಾ ಚೌಕಟ್ಟು?

ಹೊಸ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಭಾಷೆಗಳನ್ನು 3 ಹಂತಗಳಾಗಿ ವಿಂಗಡಿಸಲಾಗಿದೆ

R1 (ಪ್ರಥಮ ಭಾಷೆ): ಇದು ಶಾಲೆಯ ಮುಖ್ಯ ಬೋಧನಾ ಮಾಧ್ಯಮವಾಗಿರುತ್ತದೆ (ಉದಾಹರಣೆಗೆ: ಇಂಗ್ಲಿಷ್ ಅಥವಾ ಹಿಂದಿ).

R2 (ದ್ವಿತೀಯ ಭಾಷೆ): ಇದು ಮೊದಲ ಭಾಷೆಯನ್ನು ಹೊರತುಪಡಿಸಿ ಮತ್ತೊಂದು ಭಾಷೆಯಾಗಿರುತ್ತದೆ.

R3 (ಮೂರನೇ ಭಾಷೆ): ಇದು ಮೊದಲ ಎರಡು ಭಾಷೆಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ.

ಮುಖ್ಯ ನಿಯಮ: ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಈ 3 ಭಾಷೆಗಳಲ್ಲಿ ಕನಿಷ್ಠ 2 ಭಾಷೆಗಳು ಕಡ್ಡಾಯವಾಗಿ ಸ್ಥಳೀಯ ಭಾರತೀಯ ಭಾಷೆಗಳೇ ಆಗಿರಬೇಕು.

ಮತ್ತಷ್ಟು ಓದಿ: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

ವಿದೇಶಿ ಭಾಷೆಗಳ ಮೇಲೆ ನಿಷೇಧವಿಲ್ಲ; ನಾಲ್ಕನೇ ಆಪ್ಷನ್

ಶಾಲೆಗಳಿಂದ ಜರ್ಮನ್, ಫ್ರೆಂಚ್ ನಂತಹ ವಿದೇಶಿ ಭಾಷೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಪೋಷಕರ ಕಳವಳವನ್ನು ಸಚಿವರು ತಳ್ಳಿಹಾಕಿದ್ದಾರೆ. ವಿದೇಶಿ ಭಾಷೆಗಳ ಮೇಲೆ ಯಾವುದೇ ನಿಷೇಧವಿಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿರುವ ಮೂರು ಪ್ರಾಥಮಿಕ ಭಾಷೆಗಳ ಜೊತೆಗೆ, ಹೆಚ್ಚುವರಿಯಾಗಿ ನಾಲ್ಕನೇ ಭಾಷೆಯಾಗಿ ವಿದೇಶಿ ಭಾಷೆಯನ್ನು ಆರಿಸಿಕೊಳ್ಳಬಹುದು. ದೇಶದ ಸ್ಥಳೀಯ ಭಾಷೆಗಳನ್ನು ಬಲಪಡಿಸುವುದೇ ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ಪುಸ್ತಕ ಮತ್ತು ಶಿಕ್ಷಕರ ಕೊರತೆ ಎದುರಾಗಲ್ಲ

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಈ ನಿಯಮ ಜಾರಿಯಾಗುತ್ತಿರುವುದರಿಂದ ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯ ಭೀತಿ ಎದುರಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.

ಈ ಬಗ್ಗೆ ಭರವಸೆ ನೀಡಿರುವ ಶಿಕ್ಷಣ ಸಚಿವರು, ದೇಶದ 22 ಅಧಿಕೃತ ಭಾರತೀಯ ಭಾಷೆಗಳಲ್ಲಿ ಹೊಸ ಪಠ್ಯಪುಸ್ತಕಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗಲಿವೆ. ಶಾಲೆಗಳಲ್ಲಿ ಅಗತ್ಯವಿರುವಷ್ಟು ಅರ್ಹ ಶಿಕ್ಷಕರು ಮತ್ತು ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳುವುದು ಸಿಬಿಎಸ್‌ಇಯ ಜವಾಬ್ದಾರಿಯಾಗಿದೆ, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ದೇಶದ ಸುಮಾರು ಶೇ. 90 ವಿದ್ಯಾರ್ಥಿಗಳು ಈಗಾಗಲೇ ಮೂರು ಭಾಷೆಗಳನ್ನು ಕಲಿಯುತ್ತಿದ್ದು, ಸಿಬಿಎಸ್‌ಇ ಯಲ್ಲಿ ಕೇವಲ ಶೇ. 1.3 ವಿದ್ಯಾರ್ಥಿಗಳು ಮಾತ್ರ ಎರಡು ವಿದೇಶಿ ಭಾಷೆಗಳನ್ನು ಓದುತ್ತಿರುವುದರಿಂದ ಈ ಬದಲಾವಣೆಯಿಂದ ಯಾರಿಗೂ ದೊಡ್ಡ ಮಟ್ಟದ ಸಮಸ್ಯೆಯಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ISRO SDSC SHAR Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜು.07ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | ISRO SDSC SHAR Recruitment 2026: Apply Online for 10 TGT/PRT Teaching Jobs

ಇಸ್ರೋದಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿImage Credit source: Getty Images

ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಡಿಯಲ್ಲಿ ಕಾರ್ಯನಿರ್ವಹಿಸುವ ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ‘ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ’ (SDSC SHAR) ಖಾಲಿ ಇರುವ ವಿವಿಧ ಬೋಧನಾ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ವಿವರಗಳು:

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸ್ಪೇಸ್ ಸೆಂಟ್ರಲ್ ಸ್ಕೂಲ್‌ಗಳಲ್ಲಿ ಖಾಲಿ ಇರುವ ಒಟ್ಟು 10 ಬೋಧನಾ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಹೀಗಿದೆ:

  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT): ಒಟ್ಟು 4 ಹುದ್ದೆಗಳು (ಗಣಿತ, ವಿಜ್ಞಾನ, ತೆಲುಗು ಮತ್ತು ವರ್ಕ್‌ಶಾಪ್ ಎಜುಕೇಶನ್ ವಿಭಾಗಗಳು).
  • ಪ್ರಾಥಮಿಕ ಶಿಕ್ಷಕರು (PRT): ಒಟ್ಟು 6 ಹುದ್ದೆಗಳು.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಅಥವಾ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಪಡೆದಿರಬೇಕು. ಇದರೊಂದಿಗೆ ಬಿ.ಎಡ್ (B.Ed), ಡಿ.ಎಲ್.ಎಡ್ (D.El.Ed), ಬಿ.ಎಲ್.ಎಡ್ (B.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರಬೇಕು. ಜೊತೆಗೆ, ಕೇಂದ್ರ ಸರ್ಕಾರದ CTET ಅಥವಾ ರಾಜ್ಯ ಸರ್ಕಾರಗಳ TET ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷಗಳ ಒಳಗಿರಬೇಕು (ನಿಯಮಾನುಸಾರ ವಯೋಮಿತಿ ಸಡಲಿಕ್ಕೆ ಇರಲಿದೆ).

ಆಯ್ಕೆ ವಿಧಾನ ಮತ್ತು ಆಕರ್ಷಕ ವೇತನ ಶ್ರೇಣಿ:

ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (Written Test – CBT) ಮತ್ತು ಕೌಶಲ್ಯ ಪರೀಕ್ಷೆಯ (Skill Test) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಶಿಕ್ಷಕರಿಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಅತ್ಯುತ್ತಮ ವೇತನ ನೀಡಲಾಗುತ್ತದೆ:

  • TGT ಹುದ್ದೆಗಳಿಗೆ: ತಿಂಗಳಿಗೆ ರೂ. 44,900 ರಿಂದ ರೂ. 1,44,400 ವರೆಗೆ ವೇತನ ಇರಲಿದೆ.
  • PRT ಹುದ್ದೆಗಳಿಗೆ: ತಿಂಗಳಿಗೆ ರೂ. 35,400 ರಿಂದ ರೂ. 1,12,400 ವರೆಗೆ ವೇತನ ಶ್ರೇಣಿ ಸಿಗಲಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು:

ಆಸಕ್ತ ಅಭ್ಯರ್ಥಿಗಳು ಇಸ್ರೋ ಶಾರ್ (SDSC SHAR) ಅಧಿಕೃತ ವೆಬ್‌ಸೈಟ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕದೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 16 ಜೂನ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಜುಲೈ 2026 (ರಾತ್ರಿ 11:59 ರವರೆಗೆ)

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಈ ಬಾಹ್ಯಾಕಾಶ ಸಂಸ್ಥೆಯಲ್ಲಿ ಗೌರವಾನ್ವಿತ ಬೋಧನಾ ವೃತ್ತಿ ಆರಂಭಿಸಲು ಇದು ಸುವರ್ಣಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಸನಿಹದವರೆಗೂ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮ ಮೆಟ್ರೋದಲ್ಲಿ 3 ವರ್ಷದಲ್ಲಿ 21 ಬಾರಿ ಯಡವಟ್ಟು: ಬಿಎಂಆರ್‌ಸಿಎಲ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ, ತನಿಖೆಗೆ ಪತ್ರ – Kannada News | Namma Metro Disruption: MP Tejasvi Surya Demands Safety Audit Over 21 Technical Disruptions Since 2024

ನಮ್ಮ ಮೆಟ್ರೋ ರೈಲು ಹಾಗೂ ಸಂಸದ ತೇಜಸ್ವಿ ಸೂರ್ಯImage Credit source: tv9

ಬೆಂಗಳೂರು, ಜೂನ್ 26: ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೆ ನೆಮ್ಮದಿಯಾಗಿ ಸಂಚರಿಸಬಹುದು ಎಂದು ನಂಬಿರುವ ಬೆಂಗಳೂರಿನ ಕೋಟ್ಯಂತರ ಪ್ರಯಾಣಿಕರ ಜೀವನಾಡಿ ನಮ್ಮ ಮೆಟ್ರೋ (Namma Metro) ಇತ್ತೀಚಿನ ದಿನಗಳಲ್ಲಿ ಸರಣಿ ತಾಂತ್ರಿಕ ದೋಷಗಳಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ರೈಲ್ವೆ ಹಳಿ, ಸಿಗ್ನಲಿಂಗ್ ಸಮಸ್ಯೆ, ವಿದ್ಯುತ್ ವ್ಯತ್ಯಯ ಹಾಗೂ ಸ್ಮಾರ್ಟ್ ಕಾರ್ಡ್ ಸರ್ವರ್ ವೈಫಲ್ಯ ಸೇರಿದಂತೆ 2024 ರಿಂದ 2026 ರ ಜೂನ್ 26 ರವರೆಗಿನ ಕೇವಲ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 21 ಬಾರಿ ತಾಂತ್ರಿಕ ಅಡಚಣೆಗಳು ವರದಿಯಾಗಿವೆ. ಅದರಲ್ಲೂ ವಿಶೇಷವಾಗಿ ಕಚೇರಿ ಅವಧಿಯಲ್ಲೇ (Peak Hours) ಈ ಯಡವಟ್ಟುಗಳು ಮರುಕಳಿಸುತ್ತಿರುವುದು ಪ್ರಯಾಣಿಕರನ್ನು ಪರದಾಡುವಂತೆ ಮಾಡಿದೆ. ಅಲ್ಲದೆ, ಬಿಎಂಆರ್​​ಸಿಎಲ್ (BMRCL) ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಿರಂತರ ವೈಫಲ್ಯಗಳ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ (X) ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಸುರಕ್ಷತಾ ಕಮಿಷನರ್ ಮತ್ತು ಸಚಿವರಿಗೆ ತೇಜಸ್ವಿ ಸೂರ್ಯ ಪತ್ರ

ಮೆಟ್ರೋ ರೈಲುಗಳು ನಿರಂತರ ಕೈಕೊಡುತ್ತಿರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದ ರೈಲ್ವೆ ಕಮೀಷನರ್ ಆಫ್ ಸೇಫ್ಟಿ (ದಕ್ಷಿಣ ವಲಯ) ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.

ತೇಜಸ್ವಿ ಸೂರ್ಯ ಪತ್ರದಲ್ಲೇನಿದೆ?

ಜೂನ್ 23, 2026 ರಂದು ಕರೆಂಟ್ ಕಲೆಕ್ಟರ್ ಡಿವೈಸ್ (CCD) ದೋಷದಿಂದ ಇಡೀ ನಗರದ ಸಂಚಾರ ವ್ಯವಸ್ಥೆ ಸ್ತಬ್ಧಗೊಂಡಿದ್ದನ್ನು ಪತ್ರದಲ್ಲಿ ಅವರು ನೆನಪಿಸಿದ್ದಾರೆ. ಬಿಎಂಆರ್‌ಸಿಎಲ್ ಪ್ರಯಾಣಿಕರಿಂದ ದೇಶದಲ್ಲೇ ಅತ್ಯಧಿಕ ಪ್ರಮಾಣದ ದರ ವಸೂಲಿ ಮಾಡುತ್ತದೆ, ಆದರೂ ಇಷ್ಟೊಂದು ಭಾರಿ ಪ್ರಮಾಣದಲ್ಲಿ ತಾಂತ್ರಿಕ ದೋಷಗಳು ಬೇರೆಲ್ಲೂ ಕಂಡುಬರುವುದಿಲ್ಲ ಎಂದು ಉಲ್ಲೇಖಿಸಿ ಕಿಡಿಕಾರಿದ್ದಾರೆ. ಬಿಎಂಆರ್‌ಸಿಎಲ್ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಉತ್ತರದಾಯಿಯಾಗಬೇಕಿದೆ ಎಂದಿರುವ ತೇಜಸ್ವಿ ಸೂರ್ಯ, 5 ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತೇಜಸ್ವಿ ಸೂರ್ಯ ಕೇಳಿದ 5 ಪ್ರಶ್ನೆಗಳು

ಥರ್ಡ್ ರೈಲ್ (Third Rail) ಮೂಲಸೌಕರ್ಯದ ಘಟಕಗಳ ತಪಾಸಣೆಯ ನಿಗದಿತ ಅವಧಿ ಎಷ್ಟು?
ತೊಂದರೆಗೊಳಗಾದ ಮಾರ್ಗದ ಕೊನೆಯ ತಪಾಸಣೆ ಯಾವಾಗ ನಡೆದಿತ್ತು ಮತ್ತು ಅದರ ವರದಿ ಏನಾಗಿತ್ತು?
ಈ ತಪಾಸಣೆಯನ್ನು ಬಿಎಂಆರ್‌ಸಿಎಲ್ ಸಿಬ್ಬಂದಿ ಮಾಡಿದ್ದಾರೋ ಅಥವಾ ಥರ್ಡ್ ಪಾರ್ಟಿ ಏಜೆನ್ಸಿಗೆ ವಹಿಸಲಾಗಿತ್ತೇ?
ಕಳೆದ 12 ತಿಂಗಳ ತಪಾಸಣಾ ವರದಿ ಹಾಗೂ ಆಡಿಟ್ ದಾಖಲೆಗಳನ್ನು ಸಾರ್ವಜನಿಕರ ಅವಗಾಹನೆಗೆ ಮುಕ್ತವಾಗಿ ಇಡುತ್ತೀರಾ?
ಈ ಸರಣಿ ದೋಷಗಳ ಮೂಲ ಕಾರಣದ ತನಿಖೆ (Root Cause Analysis) ಮುಗಿದಿದೆಯೇ? ಆ ವರದಿಯನ್ನು ಬಹಿರಂಗಪಡಿಸಿ.

ತೇಜಸ್ವಿ ಸೂರ್ಯ ಎಕ್ಸ್ ಸಂದೇಶ

ಕಳೆದ 3 ವರ್ಷಗಳಲ್ಲಿ ಮೆಟ್ರೋ ತಾಂತ್ರಿಕ ಸಮಸ್ಯೆಗಳ ಇತಿಹಾಸ

  • 2024ರ ಪ್ರಮುಖ ಘಟನೆಗಳು: ಜನವರಿ 27 ರಂದು ಎಂಜಿ ರೋಡ್ ನಿಲ್ದಾಣದಲ್ಲಿ ತಾಂತ್ರಿಕ ದೋಷ, ಫೆಬ್ರವರಿ 20 ರಂದು ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿವರೆಗೆ ರೈಲು ಸ್ಥಗಿತ, ಮಾರ್ಚ್ 27 ರಂದು ಇಡೀ ನೇರಳೆ ಮಾರ್ಗದಲ್ಲಿ ಸಿಗ್ನಲ್ ವೈಫಲ್ಯ, ಜುಲೈ 30 ರಂದು ಹಸಿರು ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ.
  • 2025ರ ಪ್ರಮುಖ ಘಟನೆಗಳು: ಮಾರ್ಚ್ 3 ರಂದು ಅತ್ತಿಗುಪ್ಪೆ ನಿಲ್ದಾಣದ ಸಮಸ್ಯೆ, ಏಪ್ರಿಲ್ 8 ರಂದು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಸಮಸ್ಯೆ, ಜೂನ್ 16 ರಂದು ಇಡೀ ದಿನ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೊಸದಾಗಿ ಆರಂಭವಾದ ಹಳದಿ ಮಾರ್ಗದಲ್ಲೇ 3 ಬಾರಿ ತಾಂತ್ರಿಕ ದೋಷ, ನವೆಂಬರ್‌ನಲ್ಲಿ ಟಿಕೆಟಿಂಗ್ ಕೌಂಟರ್ ಸರ್ವರ್ ಸ್ಥಗಿತ.
  • 2026ರ ಇತ್ತೀಚಿನ ಘಟನೆಗಳು: ಜನವರಿ 15 ರಂದು ಹಳದಿ ಮಾರ್ಗದಲ್ಲಿ ಚಾಲಕರಹಿತ ಮೆಟ್ರೋ ಹಳಿತಪ್ಪಿತ್ತು. ಫೆಬ್ರವರಿ 10 ರಂದು ಆರ್‌ವಿ ರಸ್ತೆ ನಿಲ್ದಾಣದಲ್ಲಿ ದೋಷ, ಮೇ 4 ರಂದು ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಪವರ್ ಕಟ್. ಇನ್ನು ಜೂನ್ ತಿಂಗಳೊಂದರಲ್ಲೇ ಜೂನ್ 12 ರಂದು ಕಾರ್ಡ್ ರೀಚಾರ್ಜ್ ಸಮಸ್ಯೆ, ಜೂನ್ 21 ರಂದು ನಾಗಾಸಂದ್ರ ನಿಲ್ದಾಣದ ನಾಮಫಲಕದಲ್ಲಿ ಬೆಂಕಿ ಅವಘಡ, ಜೂನ್ 23 ರಂದು ಕಬ್ಬನ್ ಪಾರ್ಕ್ ದೋಷ ಮತ್ತು ಜೂನ್ 26 ರಂದು ಕಬ್ಬನ್ ಪಾರ್ಕ್ ನಿಲ್ದಾಣದಲ್ಲೇ ಬಾಗಿಲು ಮುಚ್ಚದ ಸಮಸ್ಯೆ ಕಂಡುಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 11 ಬಾರಿ ನೇರಳೆ ಮಾರ್ಗವೊಂದರಲ್ಲೇ ತಾಂತ್ರಿಕ ದೋಷಗಳು ವರದಿಯಾಗಿವೆ. ಬೆಂಗಳೂರಿನ ನಿವಾಸಿಗಳು ಮತ್ತು ಪ್ರಯಾಣಿಕರು ಸುರಕ್ಷಿತ, ನಂಬಿಕಸ್ಥ ಹಾಗೂ ಪಾರದರ್ಶಕ ಮೆಟ್ರೋ ವ್ಯವಸ್ಥೆಯನ್ನು ಹೊಂದಲು ಅರ್ಹರಾಗಿದ್ದು, ಬಿಎಂಆರ್‌ಸಿಎಲ್ ತಕ್ಷಣವೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕರ್ಣ’ ಧಾರಾವಾಹಿ: ಸಂಜು ಅಸಲಿ ಮುಖ ಬಯಲು; ರಿಯಾ ಜೊತೆ ಮದುವೆ – Kannada News | Karna Serial: Sanju’s Deceit Exposed Forced Marriage with Riya in Zee Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಕರ್ಣ’ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಸದ್ದಿಲ್ಲದೆ ಮೋಸದ ಜಾಲ ಹೆಣೆಯುತ್ತಿದ್ದ ಸಂಜು ಅಸಲಿ ಬಣ್ಣ ಈಗ ಎಲ್ಲರ ಮುಂದೆ ಬಯಲಾಗಿದೆ. ಈ ಕುರಿತಾದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆತನಿಗೂ ರಿಯಾಗೂ ಮದುವೆ ಮಾಡಿಸಲು ಕರ್ಣ ಮುಂದಾಗಿದ್ದಾನೆ.

ಪ್ರೋಮೋದಲ್ಲಿ ಏನಿದೆ?

ಸಂಜುಗೆ ಮದುವೆ ಮಾಡಿಸಲು ಇಡೀ ಕುಟುಂಬಸ್ಥರು ಒಂದೆಡೆ ನೆರೆದಿರುತ್ತಾರೆ. ಈ ವೇಳೆ ಮಧ್ಯಪ್ರವೇಶಿಸುವ ಕರ್ಣ, ‘ಈ ಸಂಬಂಧವನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲ’ ಎಂದು ಮದುವೆ ನಿಲ್ಲಿಸುತ್ತಾನೆ. ಇದಕ್ಕೆ ಕಾರಣ ಕೇಳಿದಾಗ, ಸಂಜು ಮತ್ತು ರಿಯಾ ಪ್ರೀತಿಸುತ್ತಿದ್ದಾರೆ ಹಾಗೂ ರಿಯಾ ಈಗ ಗರ್ಭಿಣಿಯಾಗಿದ್ದಾಳೆ ಎಂಬ ಶಾಕಿಂಗ್ ಸತ್ಯವನ್ನು ಎಲ್ಲರ ಎದುರು ಬಿಚ್ಚಿಡಲಾಗುತ್ತದೆ.

ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಂಜು!

ತನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಎಲ್ಲಿದೆ ಎಂದು ಸಂಜು ಗದರಿದಾಗ, ದಿವಾಕರ್ ಎಂಬಾತನ ಕಡೆಯಿಂದ ಅಸಲಿ ಸತ್ಯ ಹೊರಬರುತ್ತದೆ. ‘ರಿಯಾ ಕುಡಿಯುವ ಜ್ಯೂಸ್‌ಗೆ ಟ್ಯಾಬ್ಲೆಟ್ ಮಿಕ್ಸ್ ಮಾಡಿ ಅವಳು ಪ್ರಜ್ಞೆ ತಪ್ಪುವಂತೆ ಮಾಡಲಾಗಿತ್ತು. ಆ ಬಳಿಕ ಸಂಜು ಅವಳನ್ನು ರೂಮ್‌ಗೆ ಕರೆದುಕೊಂಡು ಹೋಗಿದ್ದ’ ಎಂಬ ಆಘಾತಕಾರಿ ರಹಸ್ಯ ಬಯಲಾಗುತ್ತದೆ.

ಇದನ್ನೂ ಓದಿ: ನಿತ್ಯಾಗೆ ಗೊತ್ತಾಯ್ತ ಪ್ರೀತಿಯ ಸತ್ಯ; ಕರ್ಣ-ನಿಧಿ ವಿವಾಹ ಮಾಡಿಸಲು ಮುಂದಾದ ಸಹೋದರಿ 

ಕೊನೆಗೆ, ‘ಈಗ ರಿಯಾಗೆ ತಾಳಿ ಕಟ್ಟಿ ಆಕೆಯನ್ನು ಹೆಂಡತಿ ಎಂದು ಒಪ್ಪಿಕೊಳ್ಳಬೇಕು’ ಎಂಬ ಖಡಕ್ ಆದೇಶ ಕರ್ಣನಿಂದ ಬರುತ್ತದೆ. ಈ ಮಾತು ಕೇಳಿ ಸಂಜು ಹಾಗೂ ಇಡೀ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ತಾನು ಹೆಣೆದ ಮೋಸದ ಜಾಲದಲ್ಲೇ ಸಂಜು ಈಗ ಸಿಕ್ಕಿಬಿದ್ದಿದ್ದು, ಮುಂದಿನ ಸಂಚಿಕೆಗಳಲ್ಲಿ ಕಥೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು: ವಜ್ರ, ಚಿನ್ನ, ಫ್ಲಾಟ್‌ಗಳು ಪತ್ತೆ, ಎಸಿಬಿ ಅಧಿಕಾರಿಗಳೇ ಶಾಕ್ – Kannada News | Lady Tahsildar’s Corruption Uncovered: Rs 5 Crore Illegal Assets Seized by Hyderabad ACB

ಹೈದರಾಬಾದ್, ಜೂನ್ 26: ಅಮಾನತುಗೊಂಡಿದ್ದ ತಹಶೀಲ್ದಾರ್ ಮತ್ತು ಜಂಟಿ ಸಬ್​ ರಿಜಿಸ್ಟ್ರಾರ್ ತುಮ್ಮಕೊಮ್ಮ ಸುಚರಿತ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ACB) ದಾಳಿ ನಡೆದಿದೆ. ಹೈದರಾಬಾದ್‌ನ ಶಮೀರ್‌ಪೇಟೆಯಲ್ಲಿನ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಆದಾಯದ ಮೂಲಗಳಿಗಿಂತಲೂ ಅಧಿಕವಾಗಿ ಸಂಪಾದಿಸಲಾಗಿದ್ದ ಬರೋಬ್ಬರಿ 5.05 ಕೋಟಿ ರೂಪಾಯಿ ಅಧಿಕೃತ ಮೌಲ್ಯದ ಅಕ್ರಮ ಆಸ್ತಿಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಇದರ ಅಸಲಿ ಮೌಲ್ಯ ಇನ್ನೂ ಹಲವು ಪಟ್ಟು ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.

ಆರೋಪಿ ತುಮ್ಮಕೊಮ್ಮ ಸುಚರಿತ ಅವರನ್ನು ಇತ್ತೀಚೆಗಷ್ಟೇ 30 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಪ್ರಸ್ತುತ ಅವರು ಜೈಲು ಪಾಲಾಗಿದ್ದಾರೆ. ಈ ಲಂಚದ ಪ್ರಕರಣದ ಬೆನ್ನಲ್ಲೇ ಆಕೆಯ ಅಕ್ರಮ ಸಂಪತ್ತಿನ ಜಾಡು ಹಿಡಿದ ಅಧಿಕಾರಿಗಳಿಗೆ ಭಾರಿ ಆಸ್ತಿಪಾಸ್ತಿಗಳು ಸಿಕ್ಕಿವೆ.

ಸುಚರಿತ ಅವರ ಸ್ವಂತ ನಿವಾಸ, ಆಕೆಯ ಸಂಬಂಧಿಕರು, ಬೇನಾಮಿಗಳು ಹಾಗೂ ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿ ಈ ಕೆಳಗಿನ ಆಸ್ತಿಗಳನ್ನು ವಶಪಡಿಸಿಕೊಂಡಿವೆ.

ಮತ್ತಷ್ಟು ಓದಿ: ಬಿಬಿಎಂಪಿ ಕೇಂದ್ರ ಕಚೇರಿ, ವಲಯ ಕಚೇರಿಗಳ ಮೇಲೆ ಎಸಿಬಿ ದಾಳಿ; 200ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ

ಚಿನ್ನ ಮತ್ತು ವಜ್ರ: 1.2 ಕೋಟಿ ರೂಪಾಯಿ ಮೌಲ್ಯದ ಭಾರಿ ಚಿನ್ನ ಮತ್ತು ವಜ್ರದ ಆಭರಣಗಳು.

ಕೃಷಿ ಭೂಮಿ: ಸಿದ್ದಿಪೇಟೆಯಲ್ಲಿರುವ 2.17 ಎಕರೆ ಕೃಷಿ ಭೂಮಿ.

ನಿವೇಶನಗಳು: ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶಗಳಲ್ಲಿರುವ 3 ಐಷಾರಾಮಿ ಫ್ಲಾಟ್‌ಗಳು ಮತ್ತು 2 ಪ್ಲಾಟ್‌ಗಳು.

ಕಾರುಗಳು: ಒಂದು ಫೋಕ್ಸ್‌ವ್ಯಾಗನ್ ಮತ್ತು ಒಂದು ಹುಂಡೈ ಕ್ರೆಟಾ ಕಾರು.

ನಗದು ಮತ್ತು ಠೇವಣಿ: 12 ಲಕ್ಷ ರೂಪಾಯಿ ನಗದು ಹಾಗೂ 38 ಲಕ್ಷ ರೂಪಾಯಿ ಬ್ಯಾಂಕ್ ಠೇವಣಿ ದಾಖಲೆಗಳು

ಬೇನಾಮಿ ಆಸ್ತಿಗಳ ಬಗ್ಗೆ ತೀವ್ರ ತನಿಖೆ
ಸುಚರಿತ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮಾರ್ಗಗಳ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಕೆ ತನ್ನ ಕಪ್ಪು ಹಣವನ್ನು ಬಚ್ಚಿಡಲು ಬೇರೆ ಯಾರ ಹೆಸರಿನಲ್ಲಾದರೂ ಬೇನಾಮಿ ಆಸ್ತಿಗಳನ್ನು ಖರೀದಿ ಮಾಡಿದ್ದಾಳೆಯೇ ಎಂಬ ಬಗ್ಗೆ ಅಧಿಕಾರಿಗಳು ಈಗ ಬ್ಯಾಂಕ್ ಖಾತೆ ಹಾಗೂ ಭೂ ದಾಖಲೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಲಂಚ ಪ್ರಕರಣ ಹಾಗೂ ಅಕ್ರಮ ಆಸ್ತಿ ಗಳಿಕೆ ಎರಡೂ ಪ್ರಕರಣಗಳ ತನಿಖೆಯನ್ನು ಎಸಿಬಿ ಈಗ ಮತ್ತಷ್ಟು ಚುರುಕುಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ: ಜಾತಿ, ಧರ್ಮ ಭೇದವಿಲ್ಲದೆ ಮೆರವಣಿಗೆಯಲ್ಲಿ ಭಾಗಿ – Kannada News | Ramanal Village Celebrates Muharram with Exemplary Communal Harmony

ಧಾರವಾಡ, ಜೂನ್​​ 26: ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ ಗ್ರಾಮವು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೊಹರಂ ಹಬ್ಬವನ್ನು ಹಿಂದೂ ಧರ್ಮೀಯರೂ ಸಂಭ್ರಮದಿಂದ ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ. ಹಿಂದೂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ, ಮೊಹರಂ ಹಬ್ಬದ ಆಚರಣೆಯು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಮನಾಳ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಸಾವಿರಾರು ಜನರು, ಜಾತಿ, ಧರ್ಮ ಭೇದವಿಲ್ಲದೆ,  ಹಬ್ಬದಲ್ಲಿ ಭಾಗವಹಿಸಿದ್ದಾರೆ. ಅಲಾಯಿ ದೇವರನ್ನು ಡೋಲಿಯಲ್ಲಿ ಇಟ್ಟು, ಗ್ರಾಮದ ತುಂಬೆಲ್ಲಾ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಐ ‘ಕಿಲ್ ಸ್ವಿಚ್’ ಕಡ್ಡಾಯ: ಬ್ಯಾಂಕುಗಳಿಗೆ ಆರ್​ಬಿಐ ಹೊಸ ಪ್ರಸ್ತಾಪಿತ ನಿಯಮ – Kannada News | Kill Switch for Banking AI systems, RBI proposes draft framework for customer safety

ಭಾರತೀಯ ರಿಸರ್ವ್ ಬ್ಯಾಂಕ್Image Credit source: Getty Images

ನವದೆಹಲಿ, ಜೂನ್ 26: ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ತಮ್ಮ ವ್ಯವಹಾರ ಹಾಗೂ ಗ್ರಾಹಕ ಸೇವೆಗಳಿಗಾಗಿ ಹೆಚ್ಚೆಚ್ಚು ಕೃತಕ ಬುದ್ಧಿಮತ್ತೆ (AI) ಮತ್ತು ಮಷಿನ್ ಲರ್ನಿಂಗ್ (ML) ಮಾದರಿಗಳನ್ನು ಬಳಸುತ್ತಿವೆ. ಇವುಗಳ ಮೇಲಿನ ನಿಯಂತ್ರಣ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಆರ್‌ಬಿಐ (RBI) ಒಂದು ಫ್ರೇಮ್​ವರ್ಕ್ (Model Risk Management Framework – MRMF) ರಚಿಸಿ, ಅದರ ಕರಡನ್ನು ಬಿಡುಗಡೆ ಮಾಡಿದೆ.

ಹಣಕಾಸು ಸಂಸ್ಥೆಗಳು ಬಳಸುವ ಯಾವುದೇ AI ಮಾದರಿಯು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ, ಸೈಬರ್ ದಾಳಿಗೆ ಒಳಗಾಗಿದ್ದರೆ ಅಥವಾ ಅಸಹಜವಾಗಿ ವರ್ತಿಸುತ್ತಿದ್ದರೆ, ಅದನ್ನು ತಕ್ಷಣವೇ ಸ್ಥಗಿತಗೊಳಿಸಲು, ಅಮಾನತುಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಒಂದು ತುರ್ತು ‘ಕಿಲ್ ಸ್ವಿಚ್’ (Kill Switch) ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಆರ್‌ಬಿಐ ಪ್ರಸ್ತಾಪಿಸಿದೆ.

ಎಐ ಮಾಡಲ್​ಗಳಿಗೆ ಮಾನವ ಉಸ್ತುವಾರಿ ಅಗತ್ಯ

ಬ್ಯಾಂಕಿಂಗ್ ವಲಯದಲ್ಲಿ ನಿರ್ಧಾರವನ್ನು AI ಸಂಪೂರ್ಣ ಸ್ವಯಂಚಾಲಿತವಾಗಿ ತೆಗೆದುಕೊಳ್ಳಲು ಬಿಡಬಾರದು. ಪ್ರತಿಯೊಂದು ಹಂತದಲ್ಲೂ ಮಾನವನ ಮೇಲ್ವಿಚಾರಣೆ (Human-in-the-loop) ಕಡ್ಡಾಯವಾಗಿ ಇರಬೇಕು ಮತ್ತು ತಂತ್ರಜ್ಞಾನದ ನಿರ್ಧಾರವನ್ನು ಬದಲಾಯಿಸುವ (Override) ಶಕ್ತಿ ಮಾನವ ಅಧಿಕಾರಿಗೆ ಇರಬೇಕು ಎಂದು ರಿಸರ್ವ್ ಬ್ಯಾಂಕ್​ನ ಪ್ರಸ್ತಾಪಿತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತವೇ ಫೇವರಿಟ್; ಜಾಗತಿಕ ಬಿಕ್ಕಟ್ಟಿನ ನಡುವೆಯೂ ಹೂಡಿಕೆಯ ಮಹಾಪೂರ

ಎಐ ಸೇವೆ ಚಾಲನೆಯಲ್ಲಿದ್ದರೆ ಗ್ರಾಹಕರಿಗೆ ಮಾಹಿತಿ ನೀಡಬೇಕು

ಗ್ರಾಹಕರಿಗೆ ಸೇವೆ ನೀಡುವಾಗ ಅಥವಾ ಸಾಲದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ AI ಬಳಸಲಾಗುತ್ತಿದ್ದರೆ, ಆ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಅಷ್ಟೇ ಅಲ್ಲದೆ, ಗ್ರಾಹಕರು ಬಯಸಿದಲ್ಲಿ AI ಚಾಟ್‌ಬಾಟ್‌ಗಳ ಬದಲಿಗೆ ನೇರವಾಗಿ ಬ್ಯಾಂಕಿನ ಸಿಬ್ಬಂದಿಯೊಂದಿಗೆ (Human Assistance) ಮಾತನಾಡುವ ಆಯ್ಕೆಯನ್ನು ಒದಗಿಸಬೇಕು.

ಥರ್ಡ್ ಪಾರ್ಟಿಯ ಎಐ ಮಾಡಲ್​ಗಳಿಂದ ತಪ್ಪಾದರೂ ಜವಾಬ್ದಾರಿ ಬ್ಯಾಂಕುಗಳದ್ದೇ

ಬ್ಯಾಂಕುಗಳು ತಾವೇ ಸ್ವತಃ ಅಭಿವೃದ್ಧಿಪಡಿಸಿದ AI ಮಾದರಿಗಳಿರಲಿ ಅಥವಾ ಬೇರೆ ಮೂರನೇ ವ್ಯಕ್ತಿ/ಸಂಸ್ಥೆಗಳಿಂದ (Third-party vendors) ಖರೀದಿಸಿದ ತಂತ್ರಜ್ಞಾನವಿರಲಿ, ಅದರಿಂದಾಗುವ ಯಾವುದೇ ತಪ್ಪು ನಿರ್ಧಾರಗಳು ಮತ್ತು ನಷ್ಟಗಳಿಗೆ ಆಯಾ ಬ್ಯಾಂಕುಗಳೇ ನೇರ ಜವಾಬ್ದಾರರಾಗಿರಬೇಕಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

AI ಮಾಡಲ್​ಗಳ ಜಟಿಲತೆ ಮತ್ತು ಅವುಗಳ ಪ್ರಭಾವದ ಆಧಾರದ ಮೇಲೆ ಅವುಗಳನ್ನು ವಿವಿಧ ಅಪಾಯದ ಹಂತಗಳಾಗಿ (Risk Tiering) ವರ್ಗೀಕರಿಸಬೇಕು. ಹೆಚ್ಚಿನ ಅಪಾಯವಿರುವ ಮಾದರಿಗಳಿಗೆ ಬ್ಯಾಂಕಿನ ಬೋರ್ಡ್‌ನ ಅಪಾಯ ನಿರ್ವಹಣಾ ಸಮಿತಿಯ ಒಪ್ಪಿಗೆ ಅಗತ್ಯವಿರುತ್ತದೆ.

ಆರ್​ಬಿಐ ಯಾಕೆ ಈ ನಿಯಮ ರೂಪಿಸಲು ಮುಂದಾಗಿರುವುದು?

AI ತಂತ್ರಜ್ಞಾನದಲ್ಲಿ ಕಂಡುಬರುವ ತಪ್ಪು ಮಾಹಿತಿ (AI Hallucinations), ತಾರತಮ್ಯದ ಫಲಿತಾಂಶಗಳು (Bias), ಮತ್ತು ಡೇಟಾ ಸುರಕ್ಷತೆಯ ಕೊರತೆಯಿಂದಾಗಿ ಬ್ಯಾಂಕುಗಳಿಗೆ ಆರ್ಥಿಕ ನಷ್ಟ ಹಾಗೂ ಸೈಬರ್ ವಂಚನೆಗಳ ಅಪಾಯ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಆರ್‌ಬಿಐ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಪ್ರಸ್ತಾವನೆಗೆ ಸಾರ್ವಜನಿಕರು ಮತ್ತು ಪಾಲುದಾರರು ಜುಲೈ 24, 2026 ರವರೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version