ಕಾರ್ಪೊರೇಟ್ ಸಂಸ್ಥೆಗಳಿಗೆ ಭಾರತವೇ ಫೇವರಿಟ್; ಜಾಗತಿಕ ಬಿಕ್ಕಟ್ಟಿನ ನಡುವೆಯೂ ಹೂಡಿಕೆಯ ಮಹಾಪೂರ! – Kannada News | Amid West Asia crisis World Corporate titans Investing multi billion dollar in India

ನವದೆಹಲಿ, ಜೂನ್ 25: ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದ ಆರ್ಥಿಕ ಸವಾಲುಗಳು ಮುಂದುವರಿದಿದ್ದರೂ, ಜಾಗತಿಕ ಕಾರ್ಪೊರೇಟ್ ವಲಯಕ್ಕೆ ಭಾರತದ ಮೇಲಿರುವ ಭರವಸೆ ಕುಗ್ಗಿಲ್ಲ. ವಿಶ್ವದ ಪ್ರಮುಖ ಉದ್ಯಮ ಸಂಸ್ಥೆಗಳು ಭಾರತವನ್ನು ಮುಂದಿನ ದೂಡ್ಡ ಆರ್ಥಿಕ ಬೆಳವಣಿಗೆಯ ಇಂಜಿನ್ ಎಂದು ಗುರುತಿಸಿದ್ದು, ದೇಶದಲ್ಲಿ ಭಾರಿ ಪ್ರಮಾಣದ ಮಲ್ಟಿ-ಬಿಲಿಯನ್ ಡಾಲರ್ ಹೂಡಿಕೆಗಳನ್ನು (Investments) ಮಾಡಲು ಮುಂದಾಗಿವೆ.

ಇತ್ತೀಚಿನ ತಿಂಗಳುಗಳಲ್ಲಿ ಗೂಗಲ್, ಅಮೆಜಾನ್ ಮತ್ತು ಏರ್‌ಟ್ರಂಕ್‌ನಂತಹ ಜಾಗತಿಕ ದೈತ್ಯರು ಭಾರತದ ಡಿಜಿಟಲ್ ಹಾಗೂ ಕೈಗಾರಿಕಾ ಮೂಲಸೌಕರ್ಯವನ್ನು ವಿಸ್ತರಿಸಲು ಬೃಹತ್ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

ಗೂಗಲ್ — 15 ಬಿಲಿಯನ್ ಡಾಲರ್ (ಫೆಬ್ರವರಿ 18, 2026):

ಗೂಗಲ್ ಸಂಸ್ಥೆಯು ಭಾರತದಲ್ಲಿ 5 ವರ್ಷಗಳ ಅವಧಿಯ ಸುಮಾರು 15 ಶತಕೋಟಿ ಡಾಲರ್ ಎಐ (AI) ಮೂಲಸೌಕರ್ಯ ಯೋಜನೆಯನ್ನು ಘೋಷಿಸಿದೆ. ಇದು ಸಬ್‌ಸೀ ಕನೆಕ್ಟಿವಿಟಿ (ಸಮುದ್ರಾಂತರ ಸಂಪರ್ಕ), ಡೇಟಾ ಸೆಂಟರ್‌ಗಳು, ಕ್ಲೌಡ್ ಸಾಮರ್ಥ್ಯ ಮತ್ತು ಭಾರತದಲ್ಲಿ ಎಐ ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡಿದೆ.

ಎಬಿಬಿ — 75 ಮಿಲಿಯನ್ ಡಾಲರ್ (ಮಾರ್ಚ್ 9, 2026):

ಎಬಿಬಿ ಕಂಪನಿಯು ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಉತ್ಪಾದನೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯಗಳನ್ನು ವಿಸ್ತರಿಸಲು ಭಾರತದಲ್ಲಿ 75 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ಏರ್‌ಟ್ರಂಕ್ — 30 ಬಿಲಿಯನ್ ಡಾಲರ್ (ಜೂನ್ 5, 2026):

ಆಸ್ಟ್ರೇಲಿಯಾದ ಏರ್‌ಟ್ರಂಕ್ ಸಂಸ್ಥೆಯು 2030ರ ವೇಳೆಗೆ 5 ಗಿಗಾವ್ಯಾಟ್ (GW) ಸಾಮರ್ಥ್ಯದ ಡೇಟಾ ಸೆಂಟರ್ ಅನ್ನು ನಿರ್ಮಿಸಲು ಭಾರತದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.

ಸಿಪಿಪಿ ಇನ್ವೆಸ್ಟ್‌ಮೆಂಟ್ಸ್ — 7,000 ಕೋಟಿ ರೂ. (ಜೂನ್ 17, 2026):

ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್‌ಮೆಂಟ್ ಬೋರ್ಡ್, ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸಲು ‘CtrlS ಡೇಟಾಸೆಂಟರ್ಸ್’ ಜೊತೆಗೆ 7,000 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಬದ್ಧವಾಗಿದೆ.

ಸೈಂಟ್-ಗೋಬೈನ್— 1 ಬಿಲಿಯನ್ ಯುರೋ (ಜೂನ್ 18, 2026):

ಭಾರತವನ್ನು ತನ್ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದೆಂದು ಕರೆದಿರುವ ಸೈಂಟ್-ಗೋಬೈನ್ ಸಂಸ್ಥೆಯು, ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 1 ಬಿಲಿಯನ್ ಯುರೋ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಅಮೆಜಾನ್ — 48 ಬಿಲಿಯನ್ ಡಾಲರ್ (ಜೂನ್ 25, 2026):

ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹೊಸ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ವಿಸ್ತರಣೆ ಸೇರಿದಂತೆ 2030ರ ವೇಳೆಗೆ ಭಾರತದಲ್ಲಿ ಅಮೆಜಾನ್‌ನ ಒಟ್ಟು ಹೂಡಿಕೆಯನ್ನು 48 ಬಿಲಿಯನ್‌ ಡಾಲರ್​​ಗೆ (ಸುಮಾರು 4 ಲಕ್ಷ ಕೋಟಿ ರೂ.) ಏರಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಒರಾಕಲ್​ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ

ಅಮೆಜಾನ್‌ನ 48 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮುಕ್ತಾಯಗೊಂಡ ಈ ಬೃಹತ್ ಒಪ್ಪಂದಗಳ ಸರಣಿಯು ಜಾಗತಿಕ ಮಟ್ಟದಲ್ಲಿ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಜಾಗತಿಕ ಸಿಇಒಗಳು ಭಾರತವನ್ನು ಮುಂದಿನ ದೊಡ್ಡ ಆರ್ಥಿಕ ಬೆಳವಣಿಗೆಯ ಇಂಜಿನ್ ಆಗಿ ನೋಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಂಚಿತವಾಗಿಯೇ ಭಾರತದ ಮಾರುಕಟ್ಟೆ ಪ್ರವೇಶಿಸಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.

ಜಾಗತಿಕ ಹೂಡಿಕೆಗೆ ಭಾರತವೇ ಮೊದಲ ಆದ್ಯತೆ ಏಕೆ?:

– ಜಾಗತಿಕ ಮಾರುಕಟ್ಟೆಗಳು ಏರಿಳಿತ ಕಾಣುತ್ತಿದ್ದರೂ, ಭಾರತದ ಆರ್ಥಿಕ ಬೆಳವಣಿಗೆಯ ದರ (GDP Growth) ಸ್ಥಿರವಾಗಿದೆ.

– ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ತಂತ್ರಜ್ಞಾನದ ಅಳವಡಿಕೆ ವೇಗವಾಗಿ ಹೆಚ್ಚುತ್ತಿರುವುದರಿಂದ, ಜಾಗತಿಕ ಟೆಕ್ ಕಂಪನಿಗಳಿಗೆ ಭಾರತ ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿದೆ.

– ಸರ್ಕಾರದ ಪ್ರೋತ್ಸಾಹಕ ಯೋಜನೆಗಳು (PLI Schemes) ಮತ್ತು ಮೂಲಸೌಕರ್ಯ ಅಭಿವೃದ್ಧಿಯು ಜಾಗತಿಕ ಉತ್ಪಾದನಾ ಕಂಪನಿಗಳಿಗೆ ಪೂರಕ ವಾತಾವರಣ ನಿರ್ಮಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ – Kannada News | PM Modi to visit Seychelles as Guest of Honour for National Day celebrationsn on June 27

ನವದೆಹಲಿ, ಜೂನ್ 25: ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೂನ್ 27ರಿಂದ 29ರವರೆಗೆ ಹಿಂದೂ ಮಹಾಸಾಗರದ ಪ್ರಮುಖ ದ್ವೀಪ ರಾಷ್ಟ್ರವಾದ ಸೆಶೆಲ್ಸ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಸೆಶೆಲ್ಸ್‌ನ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಲು ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ ಅವರು ಸೆಶೆಲ್ಸ್ ಅಧ್ಯಕ್ಷರೊಂದಿಗೆ ಉನ್ನತ ಮಟ್ಟದ ನಿಯೋಗದ ಸಭೆ ನಡೆಸಲಿದ್ದು, ವ್ಯಾಪಾರ, ಪ್ರವಾಸೋದ್ಯಮ ಮತ್ತು ಹವಾಮಾನ ಬದಲಾವಣೆ ಎದುರಿಸುವಲ್ಲಿ ಜಂಟಿ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ.

ಪ್ರವಾಸದ ಪ್ರಮುಖ ಕಾರ್ಯಸೂಚಿಗಳು ಈ ಕೆಳಗಿನಂತಿವೆ:

ಕಡಲ ಭದ್ರತೆ ಮತ್ತು ರಕ್ಷಣೆ:

ಹಿಂದೂ ಮಹಾಸಾಗರ ವಲಯದಲ್ಲಿ ಜಂಟಿ ಕಡಲ ಭದ್ರತೆಯನ್ನು ಹೆಚ್ಚಿಸುವುದು ಈ ಪ್ರವಾಸದ ಪ್ರಮುಖ ಆದ್ಯತೆಯಾಗಿದೆ. ಕಡಲ್ಗಳ್ಳತನ ತಡೆ ಮತ್ತು ಕರಾವಳಿ ಕಾವಲು ಪಡೆಯ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ರಕ್ಷಣಾ ಒಪ್ಪಂದಗಳು ಏರ್ಪಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಇರಾನ್‌ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ

ಬ್ಲೂ ಎಕಾನಮಿ:

ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆ, ಸಾಗರ ಸಂಶೋಧನೆ ಮತ್ತು ಮೀನುಗಾರಿಕೆ ವಲಯದಲ್ಲಿ ಪರಸ್ಪರ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಲಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿ:

ಸೆಶೆಲ್ಸ್‌ನಲ್ಲಿ ಭಾರತದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು ಮತ್ತು ಹೊಸ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು.

ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ

ಭಾರತದ ‘ಸಾಗರ್’ (Security and Growth for All in the Region) ನೀತಿಯ ಅಡಿಯಲ್ಲಿ ಸೆಶೆಲ್ಸ್ ಭಾರತಕ್ಕೆ ಅತ್ಯಂತ ಆಯಕಟ್ಟಿನ ಮಿತ್ರ ರಾಷ್ಟ್ರವಾಗಿದ್ದು, ಪ್ರಧಾನಿಯವರ ಈ ಭೇಟಿಯು ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ರಾಜತಾಂತ್ರಿಕ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಪ್ರಧಾನಿ ಮೋದಿ ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್) ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಅಲ್ಲಿನ ಭಾರತೀಯ ಸಮುದಾಯದವರೊಂದಿಗೆ (ಡಯಾಸ್ಪೊರಾ) ಸಂವಾದ ನಡೆಸಲಿದ್ದಾರೆ. ಭಾರತ ಮತ್ತು ಸೆಶೆಲ್ಸ್ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕಗಳ ಆಧಾರದ ಮೇಲೆ ಸುದೀರ್ಘ ಪಾಲುದಾರಿಕೆಯನ್ನು ಹೊಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:09 pm, Thu, 25 June 26

Source link

IND vs BAN: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಏಕಪಕ್ಷೀಯ ಗೆಲುವು – Kannada News | India Dominates Bangladesh in Women’s T20 World Cup, Stays Alive in Semis Race

ಮ್ಯಾಂಚೆಸ್ಟರ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್‌ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು. ಅದರಂತೆ ಈ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿ ಸೆಮಿಫೈನಲ್​ ರೇಸ್​ನಲ್ಲಿ ಜೀವಂತವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 20 ಓವರ್​ಗಳಲ್ಲಿ 8 ವಿಕೆಟ್​ಗಳ ನಷ್ಟಕ್ಕೆ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17ನೇ ಓವರ್​ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಇತ್ತ ಈ ಸೋಲಿನೊಂದಿಗೆ ಬಾಂಗ್ಲಾ ತಂಡ ಸೆಮಿಫೈನಲ್‌ ರೇಸ್​ನಿಂದ ಭಾಗಶಃ ಹೊರಬಿದ್ದಿದೆ.

ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತಾದರೂ ಕೇವಲ 5 ಬ್ಯಾಟರ್​ಗಳಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಈ 5 ಬ್ಯಾಟರ್​ಗಳು ಉತ್ತಮ ಆರಂಭವನ್ನು ಪಡೆದರಾದರೂ ಯಾರಿಗೂ ಈ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್‌ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಂಗ್ಲಾದೇಶ ಪರ ಜುವೈರಿಯಾ ಫಿರ್ದೌಸ್ ಅತ್ಯಧಿಕ 33 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನಿಗರ್ ಸುಲ್ತಾನ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಶೋಭನಾ ಕೂಡ 22 ರನ್​ಗಳ ಕಾಣಿಕೆ ನೀಡಿದರು.

ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್ ಪಡೆದರೆ ಶ್ರೀ ಚರಣಿ 2 ವಿಕೆಟ್ ಕಬಳಿಸಿದರು. ರೇಣುಕಾ ಸಿಂಗ್ ಠಾಕೂರ್ ಮತ್ತು ನಂದಿನಿ ಶರ್ಮಾ ತಲಾ 1 ವಿಕೆಟ್ ಪಡೆದರು. ಆದಾಗ್ಯೂ ಈ ಪಂದ್ಯದಲ್ಲಿ ಬಾಂಗ್ಲಾ ತಂಡ 100 ರನ್​ಗಳ ಗಡಿ ದಾಟಲು ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣವಾಯಿತು. ಎಂದಿನಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರ್ತಿಯರು 4 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಬಾಂಗ್ಲಾ ತಂಡ 136 ರನ್ ಕಲೆಹಾಕಿತು. ಇಲ್ಲದಿದ್ದರೆ ತಂಡದ ಸ್ಕೋರ್ 100 ರ ಗಡಿ ಕೂಡ ದಾಟುತ್ತಿರಲಿಲ್ಲ.

Source link

ಭಾವಿ ಪತ್ನಿಗೆ ಪ್ರೀತಿಯಿಂದ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ – Kannada News | Girl Family cancels marriage Over Gave rold gold In engagement at Haveri

ಹಾವೇರಿ, (ಜೂನ್ 25): ಯುವಕನೋರ್ವ ಈಗಾಗಲೇ ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ನಿಶ್ಚಿತಾರ್ಥದಲ್ಲಿ ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿಯಾಗಿದೆ. ಹೀಗಾಗಿ ವಧು ಕುಟುಂಬಸ್ಥರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಯುವಕ ಕಂಗಾಲಾಗಿದ್ದಾನೆ. ಈ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಸಂತೋಷ್ ಟೋಪೋಜಿ ಎನ್ನುವಾತ 100 ಗ್ರಾಂ ಚಿನ್ನ ಖರೀದಿಸಿದ್ದು, ಇದನ್ನು ನಿಶ್ಚಿತಾರ್ಥದಲ್ಲಿ ಹುಡುಗಿಗೆ ಹಾಕಿದ್ದ. ಆದ್ರೆ, ಆ ಚಿನ್ನ ನಕಲಿ ಎಂದು ಗೊತ್ತಾಗಿದೆ. ಇದರಿಂದ ಆಕ್ರೋಶಗೊಂಡ ಹುಡುಗಿ ಕಡೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಹೌಹಾರಿದ ಸಂತೋಷ್, ನಕಲಿ ಚಿನ್ನ ಕೊಟ್ಟ ವಂಚಿಸಿದ್ದ ವಿಷ್ಣುಕಾಂತ್ ರಾವಲ್, ಬಳ್ಳಾರಿ ನಾಗನ ವಿರುದ್ಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Source link

ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ – Kannada News | Pawan Kalyan acting in OG 2 movie, join hands with Sujeeth

ನಟ ಪವನ್ ಕಲ್ಯಾಣ್ (Pawan Kalyan) ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ‘ಹರಿಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಬಿಡುಗಡೆ ಆಗಿವೆ. ಆದರೆ ಈ ಮೂರೂ ಸಿನಿಮಾಗಳು ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡ ಸಿನಿಮಾಗಳಾಗಿದ್ದವು. ಸಿನಿಮಾ ಶೂಟಿಂಗ್ ಬದಿಗಿಟ್ಟು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದರು ಪವನ್ ಕಲ್ಯಾಣ್. ಮೂರು ಸಿನಿಮಾಗಳು ಬಿಡುಗಡೆ ಆದ ಬಳಿಕ ಬೇರೆ ಹೊಸ ಸಿನಿಮಾ ಒಪ್ಪಿಕೊಳ್ಳುವುದಿಲ್ಲ ಎಂದಿದ್ದರು. ಆದರೆ ಇದೀಗ ತಾವೇ ಹಾಕಿಕೊಂಡ ನಿಯಮವನ್ನು ತಾವೇ ಮುರಿದಿದ್ದಾರೆ.

ಪವನ್ ಕಲ್ಯಾಣ್ ಅವರು ಇದೀಗ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಅವರ ನಟನೆಯ ‘ಓಜಿ’ ಸಿನಿಮಾದ ಎರಡನೇ ಭಾಗದಲ್ಲಿ ನಟಿಸಲು ಪವನ್ ಕಲ್ಯಾಣ್ ಒಪ್ಪಿಗೆ ಸೂಚಿಸಿದ್ದಾರೆ. ಮಾತ್ರವಲ್ಲದೆ ‘ಓಜಿ 2’ ಸಿನಿಮಾವನ್ನು ಖುದ್ದು ಪವನ್ ಕಲ್ಯಾಣ್ ಅವರೇ ನಿರ್ಮಾಣ ಸಹ ಮಾಡಲಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಓಜಿ’ ಸಿನಿಮಾವನ್ನು ಡಿವಿವಿ ಎಂಟರ್ಟೈನ್​​ಮೆಂಟ್ ನಿರ್ಮಾಣ ಮಾಡಿತ್ತು, ಈಗ ‘ಓಜಿ 2’ ಸಿನಿಮಾವನ್ನು ಖುದ್ದು ಪವನ್ ಕಲ್ಯಾಣ್ ನಿರ್ಮಿಸುತ್ತಿದ್ದಾರೆ.

‘ಓಜಿ’ ಸಿನಿಮಾನಲ್ಲಿ ನಾಯಕನಿಗೆ ಜಪಾನಿನ ಸಂಪರ್ಕ ಇರುವ ಬಗ್ಗೆ ಸಣ್ಣ ಹಿಂಟ್ ಕೊಡಲಾಗಿತ್ತು. ಈಗ ‘ಓಜಿ 2’ ಸಿನಿಮಾನಲ್ಲಿ ನಾಯಕನ ಹಿನ್ನೆಲೆಯದ್ದೇ ಮುಖ್ಯ ಕತೆ ಆಗಿರಲಿದೆ. ಅದರಲ್ಲೂ ವಿಶೇಷವಾಗಿ ನಾಯಕನಿಗೂ ಜಪಾನಿಗೂ ಇರುವ ನಂಟನ್ನು ಬಿಚ್ಚಿಡುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ.

ಇದನ್ನೂ ಓದಿ:ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?

‘ಓಜಿ’ ಸಿನಿಮಾ ನಿರ್ದೇಶಿಸಿದ್ದ ಸುಜಿತ್ ಅವರೇ ಈಗ ‘ಓಜಿ 2’ ಸಿನಿಮಾ ನಿರ್ದೇಶಿಸಲಿದ್ದಾರೆ. ಸುಜೀತ್ ಹಾಗೂ ಪವನ್ ಕಲ್ಯಾಣ್ ಈಗಾಗಲೇ ಭೇಟಿಯಾಗಿ ಕತೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಸುಜಿತ್, ‘ಓಜಿ 2’ ಸಿನಿಮಾದ ಸೀನ್​​ಗಳ ಸ್ಟೋರಿ ಬೋರ್ಡ್ ಮಾಡಿಕೊಂಡಿದ್ದು, ಆ ಸ್ಟೋರಿ ಬೋರ್ಡ್ ಅನ್ನು ಪುಸ್ತಕ ರೂಪದಲ್ಲಿ ಪವನ್ ಕಲ್ಯಾಣ್​​ಗೆ ನೀಡಿದ್ದಾರೆ. ಸುಜೀತ್ ಅವರ ತಯಾರಿ ನೋಡಿ ಖುಷಿ ಆಗಿರುವ ಪವನ್ ಕಲ್ಯಾಣ್, ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಶೀಘ್ರವೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

ಡಿಸಿಎಂ ಆಗಿದ್ದಾಗಲೇ ಪವನ್ ಕಲ್ಯಾಣ್ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಬಿಡುವಿಲ್ಲದ ಆಡಳಿತ ಮತ್ತು ರಾಜಕಾರಣದ ಕೆಲಸದ ನಡುವೆ ಬಿಡುವು ಮಾಡಿಕೊಂಡು ಚಿತ್ರೀಕರಣಗಳನ್ನು ಪವನ್ ಕಲ್ಯಾಣ್ ಮುಗಿಸಿದ್ದಾರೆ. ಪವನ್ ಅವರಿಗೆ ಸಹಾಯ ಆಗಲೆಂದು ಅವರ ಕ್ಷೇತ್ರದ ಹತ್ತಿರದಲ್ಲೇ ಸಿನಿಮಾ ಸೆಟ್​​ಗಳನ್ನು ಹಾಕಲಾಗಿತ್ತು. ಈಗ ‘ಓಜಿ 2’ ಸಿನಿಮಾಕ್ಕೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಪ್ಟೋ ಪರಿವರ್ತನೆಗೆ ಹೋಗಿ 17 ಲಕ್ಷ ರೂ ಕಳೆದುಕೊಂಡ ವ್ಯಕ್ತಿ: ಬಿಬಿಎ ವಿದ್ಯಾರ್ಥಿಗಳು ಸೇರಿ 12 ಜನ ಅರೆಸ್ಟ್! – Kannada News | Crypto Robbery Case: 12 Arrested in 17.64 Lakh Digital Currency Conversion Scam

ಬೆಂಗಳೂರು, ಜೂನ್​​ 25: ಡಿಜಿಟಲ್ ಕ್ರಿಪ್ಟೋ ಕರೆನ್ಸಿ (Digital cryptocurrency) ಪರಿವರ್ತನೆ ಹೆಸರಲ್ಲಿ 17.64 ಲಕ್ಷ ರೂ. ದರೋಡೆ (robbery) ಪ್ರಕರಣದಲ್ಲಿ ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿದಂತೆ 12 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ 13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್​​ಗಳನ್ನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತರು

ಮುಜಾಮಿಲ್(23), ಶೋಯೆಬ್(20), ಕರೀಂ(31), ವಾಸೀಂ(40), ಮೊಹಮ್ಮದ್ ಇಸ್ಮೈಲ್(29), ರೆಹಾನ್(27), ಆಯನ್(21), ಅಖಿಲ್ ಮೊಹಮ್ಮದ್(26), ತೌಸಿಫ್(32) ಲಿಯಾಕತ್ ಶರೀಫ್(33), ಅಫ್ಜಲ್ ಖಾನ್(27), ಇಮ್ರಾನ್ ಪಾಷಾ(40) ಬಂಧಿತರು. ಕಾಶ್ಮೀರ ಮೂಲದ ಮುಜಾಮಿಲ್, ಶೋಯೆಬ್ ಜಾವೇದ್ ಬಿಬಿಎ ಓದಲು ಬೆಂಗಳೂರಿಗೆ ಬಂದಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಕ್ರಿಪ್ಟೋ ಕರೆನ್ಸಿ ವಾಟ್ಸಾಪ್​​ನಲ್ಲಿ ಸದಸ್ಯರಾಗಿದ್ದರು. ಈ ವೇಳೆ ಸ್ಥಳೀಯ ಆರೋಪಿಗಳನ್ನ ಮುಜಾಮಿಲ್ ಪರಿಚಯ ಮಾಡಿಕೊಂಡಿದ್ದ.

ಇದನ್ನೂ ಓದಿ: ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು

ಇನ್ನು ಆರೋಪಿ ವಸೀಂಖಾನ್ ರೌಡಿ ಚಟುವಟಿಕೆಗಳ ಹಿನ್ನೆಲೆಯುಳ್ಳವನು. ಈತನ ವಿರುದ್ಧ ಇದುವರೆಗೆ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲಿಯಾಕತ್ ಶರೀಫ್, ರಿಯಾನ್, ಕರೀಂ ಖಾನ್ ವಿರುದ್ಧವೂ ಹಲವು ಪ್ರಕರಣಗಳಿವೆ.

ನಡೆದಿದ್ದೇನು?

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್​, ಕಾಫಿ ಶಾಪ್ ಆರಂಭಿಸಲು ತಯಾರಿ ನಡೆಸಿದ್ದರು. ಈ ಸಂಬಂಧ ಕಿಚನ್​​ ವಸ್ತುಗಳನ್ನ ಹುಡುಕಾಡುತ್ತಿದ್ದರು. ಈ ವಸ್ತುಗಳು ಚೀನಾ, ಜಪಾನ್​ನಲ್ಲಿ ಖರೀದಿಸಲು ಮುಂದಾಗಿದ್ದರು. ಇದಕ್ಕೆ ಕ್ರಿಪ್ಟೋ ಮೂಲಕ ಹಣ ಸಂದಾಯ ಮಾಡಬೇಕಿತ್ತು. ಇದಕ್ಕಾಗಿ ಒಂದು ತಿಂಗಳ ಹಿಂದೆ ಕ್ರಿಪ್ಟೋ ಇಂಡಿಯಾ ಎಫ್​​2ಎಫ್​ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿದ್ದರು.

ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ಬಗ್ಗೆ ಗ್ರೂಪ್​​ನಲ್ಲಿ ವಿಚಾರಿಸಿದ್ದರು. ಜೂ.8ರಂದು ಪ್ರಮುಖ ಆರೋಪಿ ಮುಜಾಮೀಲ್ ವಿಶ್ವಾಸ್​ಗೆ ಕರೆ ಮಾಡಿದ್ದಾರೆ. ಭಾರತೀಯ ರೂಪಾಯಿಯನ್ನ ಕ್ರಿಪ್ಟೋ ಆಗಿ ಕನ್ವರ್ಟ್ ಮಾಡುವುದಾಗಿ ಹೇಳಿದ್ದ. ನಂಬಿಕೆ ಹುಟ್ಟಿಸಲು ಮೊದಲು ಮನೆಗೆ ಬಂದಿದ್ದ ಆರೋಪಿ ಮುಜಾಮಿಲ್, 2.5 ಲಕ್ಷ ರೂ ಹಣವನ್ನ ಕ್ರಿಪ್ಟೋ ಕರೆನ್ಸಿಯಾಗಿ ವರ್ಗಾವಣೆ ಮಾಡಿದ್ದನಂತೆ. ಜೂನ್ 9ರ ಮಧ್ಯಾಹ್ನ ವಾಟ್ಸಾಪ್ ಕರೆ ಮಾಡಿದ ಆರೋಪಿ ಮುಜಾಮಿಲ್, ಹೆಚ್ಚುವರಿ ಯುಎಸ್​​ಡಿಟಿ ಎಕ್ಸ್ಚೇಂಜ್ ಮಾಡಬೇಕಿದ್ದರೆ ತಿಳಿಸುವಂತೆ ಹೇಳಿದ್ದ.

ಹಲ್ಲೆ ಮಾಡಿ ಲಕ್ಷಾಂತರ ರೂ ದರೋಡೆ

ದೂರುದಾರರಿಗೆ ಕ್ರಿಪ್ಟೋ ರೂಪದಲ್ಲಿ ಹಣದ ಅಗತ್ಯವಾಗಿತ್ತು. 17.64 ಲಕ್ಷ ರೂ ಹಣವನ್ನ ಪರಿವರ್ತಿಸಲು ಮುಂದಾಗಿದ್ದರು. ಹಣದೊಂದಿಗೆ ಸಂಜಯನಗರ ಕಲ್ಪನಾ ಚಾವ್ಲಾ ರಸ್ತೆಗೆ ಬರಲು ಆರೋಪಿ ಸೂಚಿಸಿದ್ದ. ಕಾರಿನಲ್ಲಿ 10 ಲಕ್ಷ ರೂ ಇಟ್ಟುಕೊಂಡು ಸ್ನೇಹಿತ, ಸಹೋದರನ ಜೊತೆ ಬಂದಿದ್ದ ವಿಶ್ವಾಸ್, ಈ ವೇಳೆ ಆರೋಪಿ ಮುಜಾಮಿಲ್ ಕೂಡ ಆಗಮಿಸಿದ್ದಾನೆ. ಕೆಲವೇ ಹೊತ್ತಿನಲ್ಲಿ ಐದಾರು ಬೈಕ್​ನಲ್ಲಿ 13 ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ವಿಶ್ವಾಸ್ ಮೇಲೆ ಹಲ್ಲೆ ಮಾಡಿ, ಬಳಿಕ ಹಣ ಎಗರಿಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್​​​​, 5 ಕೆಜಿ ಸಿಲ್ವರ್​​ ಜಪ್ತಿ

ಇನ್ನು ವಿಶ್ವಾಸ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಸಂಜಯನಗರ ಪೊಲೀಸರು, ಸಂಜಯನಗರ, ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ ಇನ್‌ಸ್ಪೆಕ್ಟರ್‌ ಒಳಗೊಂಡ ವಿಶೇಷ ತಂಡದಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ವಾಟ್ಸಾಪ್ ಗ್ರೂಪ್ ಹಾಗೂ ದೂರುದಾರರ ಹಣದ ಹಿನ್ನೆಲೆ ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs IRE: ಶೇಕಡಾ 90 ರಷ್ಟು ಮಳೆ..! ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ – Kannada News | India vs Ireland T20: Belfast Rain Threatens Opener; Sooryavanshi Debut Possible

ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಟಿ20 ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಮೊದಲ ಪಂದ್ಯ ಜೂನ್ 26 ರಂದು ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ 2007 ರಲ್ಲಿ ಏಕದಿನ ಪಂದ್ಯವನ್ನು ಆಡಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಬರೋಬ್ಬರಿ 19 ವರ್ಷಗಳ ನಂತರ ಈ ಮೈದಾನಲ್ಲಿ ಟೀಂ ಇಂಡಿಯಾ ಟಿ20 ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಪರ ಎರಡರಿಂದ ಮೂರು ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಅದರಲ್ಲೂ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಆಡುವುದು ಖಚಿತವೆನ್ನಲಾಗುತ್ತಿದೆ. ಆದರೆ ಹವಾಮಾನ ವರದಿಯ ಪ್ರಕಾರ, ಮೊದಲ ಟಿ20 ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಶೇಕಡಾ 90 ರಷ್ಟು ಮಳೆ

ಬೆಲ್‌ಫಾಸ್ಟ್‌ನಲ್ಲಿ ಹವಾಮಾನದ ಕುರಿತು ಹೇಳುವುದಾದರೆ, ಜೂನ್ 26 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ವೆಬ್‌ಸೈಟ್ ಅಕ್ಯೂವೆದರ್ ಪ್ರಕಾರ, ಗುರುವಾರ 5.1 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಶೇಕಡಾ 90 ರಷ್ಟು ಮೋಡ ಕವಿದ ವಾತಾವರಣವಿರಲಿದ್ದು, ಗಾಳಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ. ಮಳೆಯಾಗುವ ಸಾಧ್ಯತೆ ಶೇಕಡಾ 90 ರಷ್ಟು ಇರುವ ಕಾರಣ, ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವ ಸಾಧ್ಯತೆಯಿದೆ.

ಪಿಚ್ ವರದಿ

ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿರುವ ಪಿಚ್ ಸಾಮಾನ್ಯವಾಗಿ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಆರಂಭಿಕ ಓವರ್‌ಗಳ ನಂತರ, ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ಕ್ರೀಸ್‌ನಲ್ಲಿ ಸಮಯ ಕಳೆದರೆ, ರನ್ ಗಳಿಸುವುದು ಸುಲಭವಾಗುತ್ತದೆ.

ಭಾರತ- ಐರ್ಲೆಂಡ್ ಮೊದಲ ಟಿ20 ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಉಭಯ ತಂಡಗಳು

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:12 pm, Thu, 25 June 26

Source link

‘ಬಿಲ್ಲಾ ರಂಗ ಭಾಷಾ’ ಶೂಟಿಂಗ್ ಶುರು ಯಾವಾಗ? ಉತ್ತರ ಕೊಟ್ಟ ನಿರ್ದೇಶಕ – Kannada News | Sudeep starrer Billa Ranga Baasha movie shooting will start from June 26

ಸುದೀಪ್ (Sudeep) ನಟನೆಯ ಸಿನಿಮಾ ಬಿಡುಗಡೆ ಆಗಿ ಅರ್ಧ ವರ್ಷವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ‘ಮಾರ್ಕ್’ ಸಿನಿಮಾ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿತ್ತು. ಅದಾದ ಮೇಲೆ ಸುದೀಪ್ ನಟಿಸುತ್ತಿರುವ ಸಿನಿಮಾ ಬಗ್ಗೆ ಯಾವ ಅಪ್​ಡೇಟ್ ಸಹ ಹೊರಬಿದ್ದಿರಲಿಲ್ಲ. ಅನೂಪ್ ಭಂಡಾರಿ ಜೊತೆಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಸಿನಿಮಾದ ಶೂಟಿಂಗ್ ಬಗ್ಗೆ ಯಾವುದೇ ಅಪ್​​ಡೇಟ್ ಹೊರಬಿದ್ದಿರಲಿಲ್ಲ. ಇದೀಗ ಖುದ್ದು ಅನೂಪ್ ಭಂಡಾರಿ ಅವರು ಸಿನಿಮಾದ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಅನೂಪ್ ಭಂಡಾರಿ, ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ನಾಳೆ (ಜೂನ್ 26) ಇಂದ ಶುರು ಆಗಲಿದೆ ಎಂದಿದ್ದಾರೆ. ‘ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ. ಧನ್ಯವಾದಗಳು’ ಎಂದಿದ್ದಾರೆ ಅನೂಪ್ ಭಂಡಾರಿ. ಸಿನಿಮಾವನ್ನು ಚೈತನ್ಯ ರೆಡ್ಡಿ, ನಿರಂಜನ ರೆಡ್ಡಿ ಅವರುಗಳು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಭಂಡಾರಿ ಟ್ವೀಟ್​​ನಲ್ಲಿ ಸುದೀಪ್ ಅವರ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಸುದೀಪ ಅವರು ರಿವಾಲ್ವಾರ್ ಹಿಡಿದಿರುವ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ.

ಇದನ್ನೂ ಓದಿ:ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

‘ಬಿಆರ್​​ಬಿ’ ಸಿನಿಮಾನಲ್ಲಿ ಸುದೀಪ್ ಅವರು ವಾರಿಯರ್ ರೀತಿ ಕಾಣಿಸಿಕೊಂಡಿದ್ದಾರೆ. ಅವರ ಉಡುಪು, ಆಯುಧಗಳು ಭಿನ್ನವಾಗಿದ್ದು, ಹಾಲಿವುಡ್​ನ ಹಳೆಯ ಸಿನಿಮಾಗಳ ಮಾದರಿಯಲ್ಲಿದೆ. ಕತೆಗಾಗಿ ಅನೂಪ್ ಭಂಡಾರಿ ಸಾಕಷ್ಟು ಸಮಯ ವ್ಯಯಿಸಿದ್ದು, ಇದೀಗ ಒಂದು ಕತೆ, ಚಿತ್ರಕತೆಯನ್ನು ಸಂಪೂರ್ಣ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಜೂನ್ 26ರಿಂದ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ ಅನೂಪ್ ಭಂಡಾರಿ ಮತ್ತು ಸುದೀಪ್.

ಕೆಲ ದಿನಗಳ ಹಿಂದೆ ಸುದೀಪ್ ಅವರು ಸಹ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಶುರುವಾಗುತ್ತಿರುವ ಕುರಿತಾಗಿ ಟ್ವೀಟ್ ಮಾಡಿದ್ದರು. ಸಿನಿಮಾದ ಚಿತ್ರೀಕರಣ ಜೂನ್ 26ಕ್ಕೆ ಪ್ರಾರಂಭ ಆಗಲಿದೆ ಎಂದಿದ್ದರು. ಮಾತ್ರವಲ್ಲದೆ, ಕೈಯಲ್ಲಿ ನಾಲ್ಕು ಚಿತ್ರಕತೆಗಳು ಇದ್ದು, ಒಂದರ ಹಿಂದೆ ಒಂದರಂತೆ ಸಿನಿಮಾಗಳು ಪ್ರಾರಂಭ ಆಗಲಿವೆ ಎಂದಿದ್ದರು. ಈ ಹಿಂದೆ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದರು. ಈಗ ‘ಬಿಲ್ಲಾ ರಂಘ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:59 pm, Thu, 25 June 26

Source link

ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ; 10 ಜನರಿಗೆ ಗಾಯ – Kannada News | 10 people injured as under construction bridge collapses in Jammu and Kashmir Baramulla

ಬಾರಾಮುಲ್ಲಾ, ಜೂನ್ 25: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 10 ಜನರು ಗಾಯಗೊಂಡಿದ್ದಾರೆ. ಉತ್ತರ ಕಾಶ್ಮೀರದ (Jammu and Kashmir) ಬಾರಾಮುಲ್ಲಾದ ನ್ಯೂ ಬೈಪಾಸ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕಾಮಗಾರಿಯ ಅಂತಿಮ ಹಂತದಲ್ಲಿದ್ದ ಈ ಸೇತುವೆಯ ರಚನೆಯು ಹಠಾತ್ತನೆ ಕುಸಿದು ಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸೇತುವೆಯು ತನ್ನ ಕೊನೆಯ ಹಂತದ ನಿರ್ಮಾಣದಲ್ಲಿದ್ದರಿಂದ ಇದನ್ನು ಇನ್ನೂ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿರಲಿಲ್ಲ. ಈ ಘಟನೆ ನಡೆದ ತಕ್ಷಣ ತುರ್ತು ರಕ್ಷಣಾ ತಂಡಗಳು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs BAN: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್; ದಾಖಲೆ ಬರೆದ ಶ್ರೀ ಚರಣಿ – Kannada News | Sri Charani Breaks Indian T20 WC Wicket Record vs Bangladesh

2026 ರ ಮಹಿಳಾ ಟಿ20 ವಿಶ್ವಕಪ್‌ನ 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 136 ರನ್ ಕಲೆಹಾಕಿತು. ಇತ್ತ ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್‌ಗಳನ್ನು ಪಡೆದರೆ, ತಮ್ಮ ಅಮೋಘ ಫಾರ್ಮ್​ ಮುಂದುವರೆಸಿದ ಶ್ರೀ ಚರಣಿ ಈ ಪಂದ್ಯದಲ್ಲೂ 2 ವಿಕೆಟ್‌ಗಳನ್ನು ಪಡೆದರು (PC- BCCI Women X).

Source link

Exit mobile version