ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ – Kannada News | Karnataka education Department issues guidelines Over School reopen From June 1st

ಬೆಂಗಳೂರು (ಮೇ.26): ಬೇಸಿಗೆ ರಜೆ (Summer Holidays) ಅಂತ್ಯವಾಗಲಿದ್ದು, ಜೂನ್ 1ರಿಂದ ಕರ್ನಾಟಕದಾದ್ಯಂತ ಶಾಲೆಗಳು (Schools) ಆರಂಭವಾಗಲಿವೆ. ಇನ್ನು ಮಕ್ಕಳು (Students) ಸಹ ಬೇಸಿಗೆ ರಜೆ ಮುಗಿಸಿ ಶಾಲೆಗೆ ತೆರಳಲು ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಶಾಲೆ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಮಾರ್ಗಸೂಚಿ (Education Department Guidelines) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯಗೊಳಿಸಿದೆ. ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಶಾಲೆ ಆರಂಭಕ್ಕೆ ಕೌಂಟ್ ಡೌನ್
  • ಶಾಲೆಗಳ ಆಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟ
  • ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟ
  • ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ಕೊಡಲು ಒತ್ತು

ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ

ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ್ದು, ಶಾಲಾ ಕಟ್ಟಡಗಳ ಸುರಕ್ಷತೆಗೆ ಆದ್ಯತೆ ಕೊಡಲು ಒತ್ತು ನೀಡಲಾಗಿದೆ. ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ರೆ, ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಅಥವಾ ತೆರವುಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಶಾಲೆ ಕಟ್ಟಡದ ಸುರಕ್ಷತೆಗೆ ಕ್ರಮ ವಹಿಸಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಮಕ್ಕಳೇ ಮುಗಿಯಿತು ಸಮ್ಮರ್ ಹಾಲಿಡೇಸ್ ಮಜಾ!: ಮೇ 29 ರಿಂದಲೇ ಸ್ಕೂಲ್ ಬೆಲ್ ರೆಡಿ; ಈ ಬಾರಿ ಸಿಗಲಿದೆ ಭರ್ಜರಿ ದಸರಾ ರಜೆ!

ಮಾರ್ಗಸೂಚಿಯ ಪ್ರಮುಖಾಂಶಗಳು

  • ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಅಥವಾ ತೆರವುಗೊಳಿಸಬೇಕು.
  • 6 ರಿಂದ 14 ವರ್ಷದ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.
  • ಉರ್ದು-ಇಂಗ್ಲೀಷ್ ದ್ವಿಭಾಷಾ ಮಾಧ್ಯಮವೂ ಸಹ ಈ ವರ್ಷವೇ ಆರಂಭ
  • ದ್ವಿಭಾಷಾ ಶಿಕ್ಷಣಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲು ಸೂಚನೆ.
  • ಮೇ 28 ಶಾಲೆಗಳ ಸಂಪೂರ್ಣ ಸ್ವಚ್ಛತೆ, ಕುಡಿಯುವ ನೀರು ಮತ್ತು ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ.
  • ಮೇ 29 ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.
  • ಜೂನ್ 1 ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ದಾಖಲಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭ.
  • ಜೂನ್ 30 – ದಾಖಲಾತಿ ಆಂದೋಲನ ಮುಕ್ತಾಯ.
  • ವಿದ್ಯಾರ್ಥಿಗಳು & ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ.

ಕರ್ನಾಕಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ಮೇಲ್ ತಂತ್ರ ಗೊತ್ತಾಗಿದೆ: ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿದ್ದೇನು ನೋಡಿ – Kannada News | High Command Aware of Blackmail Tactics: Rebel MLA Yatnal Slams BSY Family Over Karnataka BJP President Change Rumours

ಬೆಂಗಳೂರು, ಮೇ 26: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಕ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಪಕ್ಷದಲ್ಲಿ ಆಂತರಿಕ ಸಮಸ್ಯೆಗಳು ಹೆಚ್ಚಾಗಿವೆ ಎಂದಿದ್ದಾರೆ. ಪಕ್ಷದಲ್ಲಿ ವ್ಯವಸ್ಥಿತವಾಗಿ ಕೆಲಸ ನಡೆಯುತ್ತಿಲ್ಲ, ವ್ಯಕ್ತಿ ಪೂಜೆ ಅತಿಯಾಗಿದೆ ಹಾಗೂ ಪಕ್ಷಕ್ಕಿಂತ ವ್ಯಕ್ತಿ ವೈಭವೀಕರಣ ಹೆಚ್ಚಾಗಿದೆ ಎಂದು ಅವರು ಟೀಕಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಅನ್ನು ಬ್ಲಾಕ್‌ಮೇಲ್ ಮಾಡುವಂತಹ ತಂತ್ರಗಳು ನಡೆಯುತ್ತಿವೆ. ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ನಡೆದ ಸ್ವಾಮೀಜಿಗಳ ಮೆರವಣಿಗೆ ಇಂತಹ ಕಾರ್ಯತಂತ್ರದ ಭಾಗವಾಗಿತ್ತು. ಹೈಕಮಾಂಡ್‌ಗೆ ಈ ಕುರಿತು ಮನವರಿಕೆಯಾಗಿದೆ ಎಂದು ಯತ್ನಾಳ್ ಹೇಳಿದರು.

ಒಂದು ಕುಟುಂಬವು ತಮ್ಮ ಶಕ್ತಿ ದೊಡ್ಡದಿದೆ ಎಂದು ಹೇಳಿ ಪಕ್ಷವನ್ನು ಒತ್ತಾಯಿಸುವ ಪ್ರಯತ್ನ ಮಾಡಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರೋಕ್ಷವಾಗಿ ಪಕ್ಷ ಒಂದು ಕುಟುಂಬದ ಹಿಡಿತದಿಂದ ಮುಕ್ತವಾಗುತ್ತಿದೆ ಎಂಬ ಸುಳಿವು ನೀಡಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ. ಅಲ್ಲದೆ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ತೆಗೆದುಕೊಂಡ ಆ ಕುಟುಂಬದವರ (ಯಡಿಯೂರಪ್ಪರನ್ನು ಉದ್ದೇಶಿಸಿ) ಕೊನೆಯ ಫೋಟೋ ಇದನ್ನೇ ಸೂಚಿಸುತ್ತದೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​! – Kannada News | Medical Shock in Bidar: Doctor Accused of Cheating Patient by Faking Surgery and Charging Rupees 37,000

ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?Image Credit source: Tv9 Kannada

ಬೀದರ್​​, ಮೇ 26: ವೈದ್ಯೋ ನಾರಾಯಣೋ ಹರಿಃ ಅಂದರೆ ವೈದ್ಯನು ಸಾಕ್ಷಾತ್ ಭಗವಂತನ (ನಾರಾಯಣನ) ಸ್ವರೂಪ ಎಂಬ ಮಾತಿದೆ. ಎಂತಹ ಕಷ್ಟ ಕಾಲದಲ್ಲೂ ಮುಷ್ಯನ ಜೀವ ಉಳಿಸಬಹುದಾದ ಶಕ್ತಿ ವೈದ್ಯರಿಗಿರುವ ಕಾರಣ ಅವರಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಆದರೆ ಇದೇ ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ಇತ್ತೀಚೆಗೆ ಕೆಲವರು ಹಣ ಮಾಡುವ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ರೋಗಿಗೆ ಏನಾದರೂ ಪರವಾಗಿಲ್ಲ ನಮಗೆ ದುಡ್ಡಾದರೆ ಸಾಕು ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಹ ಘಟನೆಯೊಂದು ಬೀದರ್​​ನಲ್ಲಿ ನಡೆದಿದೆ.

ಮುಖ್ಯಾಂಶಗಳು

  • ಆಪರೇಷನ್ ಮಾಡದೆ ಮಾಡಿದ್ದೇವೆಂದು ಹೇಳಿ ಹಣ ವಸೂಲಿ?
  • ಮನ್ನಾಖೇಳಿಯ ಆಸ್ಪತ್ರೆಯ ವೈದ್ಯರಿಂದ ನಡೀತಾ ಕಳ್ಳಾಟ?
  • ಆಪರೇಷನ್​​ ಹೆಸರಲ್ಲಿ ಹಣ ಪಡೆದು ವಂಚಿಸಿತಾ ಆಸ್ಪತ್ರೆ?

ಬೀದರ್ ತಾಲೂಕಿನ ‌ಮನ್ನಾಖೇಳಿ ಗ್ರಾಮದಲ್ಲಿರುವ ಸೇಡಂಕರ್ ಆಸ್ಪತ್ರೆ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಆಪರೇಷನ್ ಮಾಡದೆ ಮಾಡಿದ್ದೇವೆಂದು ದುಡ್ಡು ಪಡೆದಿದ್ದಾರೆ ಎಂದು ದೂರಲಾಗಿದೆ. ರೋಗಿಗೆ ಕೇವಲ ಬ್ಯಾಂಡೇಜ್​ ಸುತ್ತಿ 37 ಸಾವಿರ ರೂ. ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಬುಜ ನೋವಾಗುತ್ತಿದೆ ಎಂದು ಸ್ಕ್ಯಾನ್ ಮಾಡಿಸಿದಾಗ ಆಪರೇಷನ್ ಮಾಡದೆ ಇರುವ ವಿಷಯ ಬಹಿರಂಗವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ; ಹನಿ ನೀರಿಗೂ ಜನರ ಪರದಾಟ!

ಬೀದರ್ ತಾಲೂಕಿನ ಬಸಲಾಪುರ ಗ್ರಾಮದ ಪ್ರಜ್ವಲ್ ಎಂಬವರ ಬುಜದ ಎಲಬು ರಸ್ತೆ ಅಪಘಾತದಲ್ಲಿ ಮುರಿದಿತ್ತು. ಹೀಗಾಗಿ ಚಿಕಿತ್ಸೆಗೆಂದು ತೆರಳಿದ್ದಾಗ ಆಪರೇಷನ್ ಮಾಡಿ ಮುರಿದಿದ್ದ ಎಲುಬಿಗೆ ರಾಡ್ ಹಾಕಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ 37 ಸಾವಿರ ರೂಪಾಯಿಯನ್ನು ಕಟ್ಟಿಸಿಕೊಂಡಿದ್ದರು. ಆದರೆ ಆಪರೇಷನ್​​ ಮಾಡದೆ ಪ್ರಜ್ವಲ್​​ ಕೈಗೆ ಹಾಗೇ ಬ್ಯಾಂಡೇಜ್​​ ಸುತ್ತಲಾಗಿದೆ. ಆಪರೇಷನ್​​ ಆದಮೇಲೂ ಬುಜ ನೋವಾಗುತ್ತಿದ್ದ ಹಿನ್ನೆಲೆ ಸ್ಕ್ಯಾನಿಂಗ್​​ ಮಾಡಿಸಿದಾಗ ಆಪರೇಷನ್ ಮಾಡದೆ ವೈದ್ಯರು ಸುಳ್ಳು ಹೆಳಿರುವುದು ಗೊತ್ತಾಗಿದೆ. ಮುರಿದಿದ್ದ ಬುಜದ ಎಲುಬು ಹಾಗೇ ಇದೆ ಎನ್ನಲಾಗಿದ್ದು, ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:17 pm, Tue, 26 May 26

Source link

IPL 2026: ಈ ಮೂರು ವಿಕೆಟ್ ಪಡೆದ್ರೆ RCB ಅರ್ಧ ಪಂದ್ಯ ಗೆದ್ದಂತೆ..!

Source link

ದೈವಕ್ಕೆ ಅಪಮಾನ: ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್ – Kannada News | Ranveer Singh asks apology in Chamundi temple for mocking Daiva

ನಟ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಹಿಟ್ ಆಯ್ತು. ಆದರೆ ಎರಡೂ ಸಿನಿಮಾಗಳ ಬಹುತೇಕ ಕ್ರೆಡಿಟ್ ಹೋಗಿದ್ದು ನಿರ್ದೇಶಕ ಆದಿತ್ಯ ಧರ್​​ಗೆ. ‘ಧುರಂಧರ್’ ಬಳಿಕ ದೊಡ್ಡ ಸಿನಿಮಾನಲ್ಲಿ ರಣ್ವೀರ್ ನಟಿಸಲಿದ್ದಾರೆ ಎಂದುಕೊಳ್ಳುತ್ತಿದ್ದಂತೆ ಅವರನ್ನು ಬಾಲಿವುಡ್​​ನಿಂದಲೇ ಬ್ಯಾನ್ ಮಾಡಲಾಗಿದೆ. ಆದರೆ ಈ ಬ್ಯಾನ್ ಘೋಷಣೆ ಆಗುತ್ತಿದ್ದಂತೆ ನಟ ರಣ್ವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಓಡಿ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ದೈವಕ್ಕೆ ಅಪಮಾನ ಎಸಗಿದ್ದ ರಣ್ವೀರ್ ಸಿಂಗ್​​ ಅವರಿಗೆ ಮಾಡಿದ ತಪ್ಪಿಗೆ ಕ್ಷಮೆ ಕೇಳುವಂತೆ ಹೈಕೋರ್ಟ್ ಸೂಚಿಸಿತ್ತು. ಈಗ ಜೀವನದಲ್ಲಿ ದೊಡ್ಡ ಹಿನ್ನಡೆ ಆಗುತ್ತಿದ್ದಂತೆ ಚಾಮುಂಡಿ ತಾಯಿಯ ಬಳಿ ಕ್ಷಮೆ ಕೇಳಲು ಬಂದಿದ್ದಾರೆ ರಣ್ವೀರ್ ಸಿಂಗ್.

ಕೆಲ ತಿಂಗಳ ಹಿಂದೆ ಗೋವಾನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ವದಲ್ಲಿ ವಿಶೇಷ ಅತಿಥಿಯಾಗಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಸಹ ವೇದಿಕೆಯ ಮುಂದೆ ಇದ್ದರು. ಈ ವೇಳೆ ರಿಷಬ್ ಅವರನ್ನು ಮಾತನಾಡಿಸುವ ಸಂದರ್ಭದಲ್ಲಿ ಅತಿಯಾಗಿ ಆಡಿದ ರಣ್ವೀರ್ ಸಿಂಗ್ ತೀರ ಕೆಟ್ಟದಾಗಿ, ಅಸಹ್ಯಕರ ರೀತಿಯಲ್ಲಿ ದೈವವನ್ನು ಅನುಕರಣೆ ಮಾಡಿದ್ದರು. ರಿಷಬ್ ಶೆಟ್ಟಿ ಬೇಡವೆಂದರೂ ಸಹ ಅನುಕರಣೆ ನಿಲ್ಲಿಸಲಿಲ್ಲ ರಣ್ವೀರ್ ಸಿಂಗ್.

ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಯ್ತು. ಮರು ದಿನವೇ ರಣ್ವೀರ್ ಸಿಂಗ್ ಕ್ಷಮೆ ಕೇಳಿದರಾದರೂ, ಈ ಬಗ್ಗೆ ಹೈಕೋರ್ಟ್​​ನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ರಣ್ವೀರ್ ಸಿಂಗ್ ಮಾಡಿರುವುದು ತಪ್ಪೆಂದು ತೀರ್ಮಾನಿಸಿ, ಚಾಮುಂಡಿ ದೇವಾಲಯದಲ್ಲಿ ರಣ್ವೀರ್ ಸಿಂಗ್ ಕ್ಷಮೆ ಕೇಳಬೇಕು ಎಂದು ಕೆಲ ವಾರಗಳ ಹಿಂದೆ ಸೂಚನೆ ನೀಡಿತ್ತು. ಆದರೆ ರಣ್ವೀರ್ ಸಿಂಗ್ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ಇದೀಗ ತಮ್ಮ ಜೀವನದಲ್ಲಿ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಿದ್ದಂತೆ ಇಂದು (ಮೇ 26) ಚಾಮುಂಡಿ ಬೆಟ್ಟಕ್ಕೆ ಆಗಮಿಸಿರುವ ನಟ ರಣ್ವೀರ್ ಸಿಂಗ್ ಚಾಮುಂಡಿ ದೇವಾಲಯದ ಗರ್ಭಗುಡಿಯಲ್ಲಿ ಕೂತು ತಾಯಿಯ ಮುಂಚೆ ಕ್ಷಮೆ ಯಾಚನೆ ಮಾಡಿದ್ದಾರೆ. ಅಲ್ಲದೆ, ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಿಸಿದ್ದಾರೆ. ಕೆಲ ಹರಕೆಗಳನ್ನು ಸಹ ರಣ್ವೀರ್ ಸಿಂಗ್ ಹೊತ್ತಿದ್ದಾರೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಚಾಮುಂಡಿ ದೇವಾಲಯದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿರುವ ಚಿತ್ರ ಮತ್ತು ವಿಡಿಯೋ ಇದೀಗ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಬ್ಬರು ಕನ್ನಡಿಗರ ಮಧ್ಯೆ ಸಿಕ್ಕಿಹಾಕಿಕೊಂಡ ಸಮಂತಾ – Kannada News | Samantha’s ‘Maa Inti Bangaram’ Trailer Unleashes Dual Shade Action; Diganth Co stars

ಟಾಲಿವುಡ್​​ನ ಸ್ಟಾರ್ ನಾಯಕಿ ಸಮಂತಾ (Samantha) ಹಾಗೂ ಕನ್ನಡಿಗ ದಿಗಂತ್ ಮಂಚಾಲೆ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಸಮಂತಾ ಅವರು ಆ್ಯಕ್ಷನ್ ಮೆರೆದಿದ್ದಾರೆ. ಅವರು ಈ ಚಿತ್ರಕ್ಕೆ ನಿರ್ಮಾಪಕಿ ಕೂಡ ಹೌದು. ಸಮಂತಾ ಅವರು ಕೇವಲ ನಾಯಕಿಯಾಗಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿಯೂ ಈ ಚಿತ್ರದ ಮೂಲಕ ಗಮನ ಸೆಳೆಯಲಿದ್ದಾರೆ.

ಟ್ರೇಲರ್‌ನಲ್ಲಿ ಸಮಂತಾ ಅವರ ನಟನೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಟ್ರೇಲರ್‌ನಲ್ಲಿ ಸ್ಯಾಮ್ ಎರಡು ಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆಡೆ ಅತ್ಯಂತ ಸಾಂಪ್ರದಾಯಿಕ ಹಾಗೂ ಮುಗ್ಧ ಸೊಸೆಯಾಗಿ ಇಷ್ಟವಾಗುವ ಅವರು, ಮತ್ತೊಂದೆಡೆ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ಕೊಟ್ಟು ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸುವ ರಗಡ್ ಮಹಿಳೆಯಾಗಿ ಅಬ್ಬರಿಸಿದ್ದಾರೆ. ‘ನನ್ನ ಜೀವ ಅಪಾಯದಲ್ಲಿದ್ದರೂ ಸಹ ನನ್ನ ಕುಟುಂಬಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೇನೆ’ ಎಂಬ ಸಮಂತಾ ಬಾಯಿಂದ ಬರುವ ಪವರ್‌ಫುಲ್ ಡೈಲಾಗ್‌ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

ಇದನ್ನೂ ಓದಿ: ಟಾಲಿವುಡ್​​​ನಲ್ಲಿ ಮತ್ತೊಂದು ಸಮಂತಾ ಆಗ್ತಾರಾ ಜಾನ್ವಿ ಕಪೂರ್ ?

ಸಮಂತಾ ‘ಓ ಬೇಬಿ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ನಿರ್ದೇಶಿಸಿದ್ದ ನಂದಿನಿ ರೆಡ್ಡಿ ಅವರೇ ‘ಮಾ ಇಂಟಿ ಬಂಗಾರಂ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಮಂತಾ ಪತಿ, ನಿರ್ದೇಶಕ ರಾಜ್ ನಿಡಿಮೋರು ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಮಂತಾ ತಮ್ಮದೇ ಆದ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮಾ ಇಂಟಿ ಬಂಗಾರಂ ಟ್ರೇಲರ್

ಕನ್ನಡಿಗ ದಿಗಂತ್ ಸೇರಿದಂತೆ ತಾರಾಗಣದಲ್ಲಿ ಯಾರಿದ್ದಾರೆ?

ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಒಂದಾಗಿದೆ. ವಿಶೇಷವಾಗಿ ಕನ್ನಡದ ಚಾಕಲೇಟ್ ಹೀರೊ ದಿಗಂತ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಅವರೊಂದಿಗೆ ಮತ್ತೋರ್ವ ಕನ್ನಡಿಗ ಗುಲ್ಶನ್ ದೇವಯ್ಯ ಇದ್ದಾರೆ. ಇದರಲ್ಲಿ ದಿಗಂತ್ ಹಾಲಿ ಪತಿ ಆದರೆ, ಗುಲ್ಶನ್ ಮಾಜಿ ಪತಿ ಎನ್ನಲಾಗಿದೆ. ಇಬ್ಬರ ಮಧ್ಯೆ ಸಮಂತಾ ಸಿಕ್ಕಿ ಹಾಕಿಕೊಳ್ಳುತ್ತಾರೆ. ಜೂನ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Guru Sanchara 2026: ಗುರು ಸಂಚಾರ ಧನುಸ್ಸು ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Dhanu Rashi 2026 Predictions: Jupiter Transit Effects, Opportunities, and Remedies

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಧನುಸ್ಸು ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರಲ್ಲಿ ಧನುಸ್ಸು ರಾಶಿಯವರಿಗೆ ಗುರು ಸಂಚಾರವು ಮಿಶ್ರ ಫಲಗಳನ್ನು ತರಲಿದೆ. ರಾಶ್ಯಾಧಿಪತಿ ಗುರು ಎಂಟನೇ ಮನೆಗೆ ಪ್ರವೇಶಿಸುವುದರಿಂದ ಆರಂಭದಲ್ಲಿ ನಿಷ್ಟೂರ, ಅಪವಾದಗಳು ಎದುರಾಗಬಹುದು. ಬಂಧು ಮಿತ್ರರಿಂದ ಮತ್ತು ಕುಟುಂಬದ ಸದಸ್ಯರಿಂದ ಅಪವಾದಗಳು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗ್ರತೆ ವಹಿಸಿ. ಆರೋಗ್ಯದ ಕಡೆ ಗಮನವಿರಲಿ.

ಅದೇ ಸಮಯದಲ್ಲಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು, ಶಿಕ್ಷಣ ಕ್ಷೇತ್ರದಲ್ಲಿನವರಿಗೆ ಪ್ರಗತಿ ಇರುತ್ತದೆ. ವಿವಾಹ ಯೋಗ ಬಲವಾಗಿದೆ, ವ್ಯಾಪಾರದಲ್ಲಿ ಲಾಭ, ಸರ್ಕಾರಿ ನೌಕರರಿಗೆ ಶುಭಫಲಗಳು ಇವೆ. ರಾಜಕೀಯ ವ್ಯಕ್ತಿಗಳು, ಮಹಿಳೆಯರು ಹಾಗೂ ವಿದೇಶದಿಂದ ಶುಭ ಸುದ್ದಿ ನಿರೀಕ್ಷಿಸಬಹುದು ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ನಾವೇನು ಫಿಲಂ ಸ್ಟಾರ್ಸ್ ಅಲ್ಲ”: ರಿಯಾನ್​ನತ್ತ ವೈಭವ್ ಓರೆಗಣ್ಣಿನ  ನೋಟ! – Kannada News | IPL 2026: Vaibhav Sooryavanshi Stares At Riyan Parag

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಮುಲ್ಲನ್​ಪುರ್​ಗೆ ಬಂದಿಳಿದಿದೆ. ನಾಳೆ (ಮೇ 27) ನಡೆಯಲಿರುವ ಈ ಪಂದ್ಯಕ್ಕಾಗಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಆರ್​ಆರ್ ಆಟಗಾರರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು (ಛಾಯಾಗ್ರಾಹಕರು) ಸುತ್ತುವರಿದಿದ್ದರು. ಇದೇ ವೇಳೆ ಆಗಮಿಸಿದ ರಿಯಾನ್ ಪರಾಗ್​ಗೆ ಫೋಟೋ ಪೋಸ್ ನೀಡುವಂತೆ ಸೂಚಿಸಿದ್ದಾರೆ.

“ರಿಯಾನ್ ಭಾಯ್, ವೈಭವ್ ಜೊತೆ ಒಂದು ಫೋಟೋ ಪ್ಲೀಸ್, ಇಬ್ಬರೂ ಒಟ್ಟಿಗೆ ನಿಲ್ಲಿ” ಎಂದು ಛಾಯಾಗ್ರಾಹಕರೊಬ್ಬರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಿಯಾನ್ ಪರಾಗ್, “ನಾವು ಫಿಲಂ ಸ್ಟಾರ್​ಗಳಲ್ಲ” ಎಂದು ಹೇಳುತ್ತಾ ಮುಂದೆ ಸಾಗಿದ್ದಾರೆ.

ಆದರೆ ಇದೇ ವೇಳೆ ಅತ್ತ ವೈಭವ್ ಸೂರ್ಯವಂಶಿ ಪಾಪರಾಜಿಗಳಿಗೆ ಪೋಸ್ ನೀಡಲು ಸಜ್ಜಾಗುತ್ತಿದ್ದರು. ಇದರ ನಡುವೆ ರಿಯಾನ್ ಪರಾಗ್ ಹೇಳಿದ ಡೈಲಾಗ್ ಕೇಳಿ ವೈಭವ್ ಸೂರ್ಯವಂಶಿ ಒಂದು ಕ್ಷಣ ತಬ್ಬಿಬ್ಬಾದರು. ಅಲ್ಲದೆ ರಾಜಸ್ಥಾನ್ ರಾಯಲ್ಸ್  ನಾಯಕನನ್ನೇ ಒಂದು ವಿಚಿತ್ರ ಹಾಗೂ  ಓರೆಗಣ್ಣಿನ ನೋಟದಿಂದ ದಿಟ್ಟಿಸಿ ನೋಡಿದರು.

ವೈಭವ್ ಓರೆಗಣ್ಣಿನ  ನೋಟ!

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ರಿಯಾನ್ ಪರಾಗ್ ನಡೆಯನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಇಷ್ಟೊಂದು ಅಹಂ ಒಳ್ಳೆದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಎಲಿಮಿನೇಟರ್ ಪಂದ್ಯ:

ಇಂಡಿಯನ್ ಪ್ರೀಮಿಯರ್ ಲೀಗ್​ನ 72ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮೇ 27 ರಂದು ಮುಲ್ಲನ್​ಪುರ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಇನ್ನು ಸೋಲುವ ತಂಡದ ಐಪಿಎಲ್ ಅಭಿಯಾನ ಅಂತ್ಯವಾಗಲಿದೆ.

ಅಂದರೆ ನಾಳೆ ನಡೆಯಲಿರುವ ಮ್ಯಾಚ್​ನಲ್ಲಿ ಒಂದು ತಂಡ ಹೊರಬೀಳುವುದು ಖಚಿತ. ಇನ್ನು ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್​ನಲ್ಲಿ ಸೋಲುವ ತಂಡದ ವಿರುದ್ಧ ದ್ವಿತೀಯ ಕ್ವಾಲಿಫೈಯರ್ ಮ್ಯಾಚ್ ಆಡಲಿದೆ.

ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

ಪ್ಲೇಆಫ್ ಸುತ್ತಿನ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ / ಸ್ಥಳ
ಕ್ವಾಲಿಫೈಯರ್ 1  ಮೇ 26, ಮಂಗಳವಾರ  ರಾಯಲ್ ಚಾಲೆಂಜರ್ಸ್​ ಬೆಂಗಳೂರು vs ಗುಜರಾತ್ ಟೈಟಾನ್ಸ್ ಹೆಚ್​ಪಿಸಿಎ ಸ್ಟೇಡಿಯಂ, ಧರ್ಮಶಾಲಾ
ಎಲಿಮಿನೇಟರ್  ಮೇ 27, ಬುಧವಾರ ಸನ್​ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಕ್ವಾಲಿಫೈಯರ್ 2  ಮೇ 29, ಶುಕ್ರವಾರ ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ vs ಎಲಿಮಿನೇಟರ್ ವಿಜೇತ ತಂಡ ಮುಲ್ಲನ್‌ಪುರ್ ಸ್ಟೇಡಿಯಂ, ನ್ಯೂ ಚಂಡೀಗಢ್
ಫೈನಲ್  ಮೇ 31, ಭಾನುವಾರ ಕ್ವಾಲಿಫೈಯರ್ 1 ವಿಜೇತರು vs ಕ್ವಾಲಿಫೈಯರ್ 2 ವಿಜೇತರು ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

Source link

‘ಮ್ಯಾಂಗೊ ಪಚ್ಚ’ ಟ್ರೈಲರ್: ಸಾಮ್ರಾಜ್ಯ ಕಟ್ಟಲು ಹೊರಟ ಸಾಮಾನ್ಯನ ಕತೆ – Kannada News | Mango Pachcha movie trailer this is a full packaged Kannada movie

ಕಿಚ್ಚ ಸುದೀಪ್ ಪ್ರಸ್ತುತ ಪಡಿಸುತ್ತಿರುವ, ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸುದೀಪ್ ಅವರು ಈ ಸಿನಿಮಾವನ್ನು ಪದೇ ಪದೇ ಪ್ರಮೋಟ್ ಮಾಡುತ್ತಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಸಾಮಾನ್ಯ ಯುವಕನ ಅಸಾಮಾನ್ಯ ಕತೆಯೆಂತೆ ತೋರುತ್ತಿದೆ. ‘ಶಕ್ತಿ ಇರುವವರು ಯುದ್ಧ ಗೆಲ್ಲುತ್ತಾರೆ, ಆತ್ಮಶಕ್ತಿ ಉಳ್ಳವರು ಸಾಮ್ರಾಜ್ಯ ಕಟ್ಟುತ್ತಾರೆ’ ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಈ ಟ್ರೈಲರ್ ಗಮನ ಸೆಳೆಯುತ್ತಿದೆ.

ಸಾಮಾನ್ಯ ಯುವಕ ಪ್ರಶಾಂತ್, ಗೆಳೆಯರ ಬಾಯಲ್ಲಿ ಪಚ್ಚ ಆಗಿ ಆ ನಂತರ ವ್ಯವಸ್ಥೆಯ ಹೊಡೆತಕ್ಕೆ ಸಿಲುಕಿ ‘ಮ್ಯಾಂಗೊ ಪಚ್ಚ’ ಆಗುವುದು ಹೇಗೆಂಬುದನ್ನು ‘ಮ್ಯಾಂಗೊ ಪಚ್ಚ’ ಸಿನಿಮಾ ಒಳಗೊಂಡಿದೆ. ಸಾಮಾನ್ಯ ಬಡ ಮಧ್ಯಮ ಕುಟುಂಬದ ಯುವಕ ಸಾಮ್ರಾಜ್ಯ ಕಟ್ಟುವ ಕನಸು ಕಾಣುವುದು ಹಾಗೂ ಅದರ ಈಡೇರಿಕೆಗೆ ಮಾಡುವ ಪ್ರಯತ್ನಗಳು, ಆತನ ದಾರಿಗೆ ಅಡ್ಡಾಗುವ ವ್ಯಕ್ತಿಗಳು, ಅವರನ್ನು ನಾಯಕ ಹಿಮ್ಮೆಟ್ಟಿಸುವ ಬಗೆ ಇನ್ನಿತರೆಗಳನ್ನು ಈ ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೈಲರ್ ಹೇಳುತ್ತಿದೆ.

‘ಮ್ಯಾಂಗೊ ಪಚ್ಚ’ ಮೈಸೂರು ಭಾಗದಲ್ಲಿ ಒಂದು ದಶಕದ ಹಿಂದೆ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ಇದೊಂದು ಸಂಪೂರ್ಣ ಪ್ಯಾಕೇಜ್ ಆಗಿರುವ ಕಮರ್ಶಿಯಲ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ಸಿನಿಮಾದ ಮತ್ತೊಂದು ವಿಶೇಷವೆಂದರೆ ಇದು ಸುದೀಪ್ ಪುತ್ರಿ ಸಾನ್ವಿ ಸುದೀಪ್ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಆಗಿದೆ. ತಮ್ಮ ತಾಯಿ ಪ್ರಿಯಾ ಅವರೊಟ್ಟಿಗೆ ಸೇರಿ ಈ ಸಿನಿಮಾದ ಸಹ ನಿರ್ಮಾಣ ಮಾಡುತ್ತಿದ್ದಾರೆ ಅವರು.

ಟ್ರೈಲರ್​​ನಲ್ಲಿ ನಾಯಕ ಸಂಚಿತ್ ಸಂಜೀವ್ ಜೊತೆಗೆ ಇನ್ನೂ ಕೆಲವು ಪಾತ್ರಗಳ ಪರಿಚಯ ಮಾಡಲಾಗಿದೆ. ನಾಯಕನ ತಂದೆಯ ಪಾತ್ರದಲ್ಲಿ ಉಗ್ರಂ ಮಂಜು ನಟಿಸಿದ್ದಾರೆ. ನಾಯಕಿಯಾಗಿ ಕಾಜಲ್ ಕುಂದರ್, ವಿಲನ್ ಆಗಿ ನಟ ಮಯೂರ್ ಪಟೇಲ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ವಿವೇಕ. ಸಿನಿಮಾಕ್ಕೆ ಸುದೀಪ್ ಪುತ್ರಿ ಸಾನ್ವಿ ಅವರು ಬಂಡವಾಳ ಹಾಕಿರುವ ಜೊತೆಗೆ ಒಂದು ಹಾಡನ್ನೂ ಸಹ ಹಾಡಿದ್ದಾರಂತೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಕೆಆರ್​​ಜಿ ಸಹ ಬಂಡವಾಳ ಹೂಡಿದ್ದು, ವಿತರಣೆ ಸಹ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB vs GT: 4 ಕಾರಣಗಳಿಂದ ಮೊದಲ ಕ್ವಾಲಿಫೈಯರ್​ ‘ಕುತೂಹಲ’ – Kannada News | IPL 2026, RCB vs GT Qualifier 1 Match in Dharamsala

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದೆ. ಆದರೆ ಹೀಗೆ ಫೈನಲ್​ಗೆ ಎಂಟ್ರಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಬಾರಿ ಮುಖಾಮುಖಿಯಾಗುತ್ತಿರುವುದು ಎರಡು ಬಲಿಷ್ಠ ತಂಡಗಳು.

ಈ ಬಲಿಷ್ಠತೆಯ ನಡುವೆ ನಾಲ್ಕು ಅಂಶಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವನ್ನು ಮತ್ತಷ್ಟು ರೋಮಾಂಚನಗೊಳಿಸಲಿವೆ. ಅಂದರೆ ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುವುದು ದಿಟ. ಏಕೆಂದರೆ…

  • ಗುಜರಾತ್ ಟೈಟಾನ್ಸ್ ತಂಡಕ್ಕೆ ಧರ್ಮಶಾಲಾದ ಮೈದಾನದ ಪರಿಚಯವಿಲ್ಲ. 2022 ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಈವರೆಗೆ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಇದೇ ಮೊದಲ ಬಾರಿಗೆ ಹೆಚ್​ಪಿಸಿಎ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಏತನ್ಮಧ್ಯೆ, ಆರ್‌ಸಿಬಿ ಈಗಾಗಲೇ ಐಪಿಎಲ್ 2026 ರಲ್ಲಿ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು 23 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿತ್ತು.
  • ಮೊದಲ ಕ್ವಾಲಿಫೈಯರ್ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿಸಿರುವ ಮತ್ತೊಂದು ಅಂಶವೆಂದರೆ ಆರ್‌ಸಿಬಿ ಮತ್ತು ಜಿಟಿ ಮೊದಲ ಬಾರಿಗೆ ಪ್ಲೇಆಫ್‌ನಲ್ಲಿ ಎದುರಾಗುತ್ತಿರುವುದು. ಈ ಎರಡೂ ತಂಡಗಳು ಐಪಿಎಲ್‌ನಲ್ಲಿ ಎಂಟು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದಾಗ್ಯೂ, ಉಭಯ ತಂಡಗಳು  ಪ್ಲೇಆಫ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿರಲಿಲ್ಲ.
  • ಕಳೆದ ಮೂರು ಸೀಸನ್​ಗಳಲ್ಲಿ ಎರಡೂ ತಂಡಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇಂದಿನ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಏಕೆಂದರೆ 2023 ರಿಂದ, ಆರ್‌ಸಿಬಿ ಮತ್ತು ಜಿಟಿ ಐಪಿಎಲ್‌ನಲ್ಲಿ ಎರಡು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದೆ. ಗಮನಾರ್ಹ ವಿಷಯವೆಂದರೆ ಈ ಅವಧಿಯಲ್ಲಿ, ಎರಡೂ ತಂಡಗಳ ಗೆಲುವು-ಸೋಲಿನ ದಾಖಲೆ ಒಂದೇ ಆಗಿದೆ. ಅಂದರೆ ಆರ್‌ಸಿಬಿ ಮತ್ತು ಜಿಟಿ ಎರಡೂ 34 ಪಂದ್ಯಗಳನ್ನು ಗೆದ್ದಿವೆ. ಹಾಗೆಯೇ 24 ಪಂದ್ಯಗಳನ್ನು ಸೋತಿವೆ.
  • ಮೊದಲ ಕ್ವಾಲಿಫೈಯರ್ ಪಂದ್ಯದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಕ್ವಾಲಿಫೈಯರ್ 1 ರ ವಿಜೇತರು ಕಳೆದ ಎಂಟು ಸತತ ಸೀಸನ್‌ಗಳನ್ನು ಒಳಗೊಂಡಂತೆ 12 ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಈ ಅಂಕಿಅಂಶವು ಆರ್‌ಸಿಬಿ vs ಜಿಟಿ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದ್ದು, ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

ಅಂದಹಾಗೆ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್​ನಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ. ಅಂದರೆ ಮೊದಲ ಕ್ವಾಲಿಫೈಯರ್​ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್​ಗೇರಿದರೆ, ಸೋತ ತಂಡ ಎಲಿಮೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಮುಖಾಮುಖಿಯಾಗಲಿದೆ. ಈ ಮೂಲಕ ದ್ವಿತೀಯ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್​ಗೇರುವ ಅವಕಾಶ ಪಡೆಯಲಿದೆ.

Source link

Exit mobile version