ಮತದಾರರೇ ಗಮನಿಸಿ: SIR ಪ್ರಕ್ರಿಯೆ ಹೇಗೆ? ಗಣತಿ ನಮೂನೆ ಭರ್ತಿ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್ – Kannada News | Karnataka Voter List SIR 2026: How to Update Your Details, Verify Your Name, and Ensure Your Vote Counts

ಪ್ರಾತಿನಿಧಿಕ ಚಿತ್ರ Image Credit source: tv9 kannada

ಬೆಂಗಳೂರು, ಜೂನ್​​​ 25: ಸ್ಪೆಷಲ್ ಇಂಟೇನ್‌ಸೀವ್ ರಿವಿಜನ್ ಅಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಕರ್ನಾಟಕದಲ್ಲಿ (Karnataka) ಎಸ್​​ಐಆರ್​ (SIR) ನಡೆಸಲಾಗುತ್ತಿದೆ. ಇದೇ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಿ, ಗಣತಿ ಕಾರ್ಯ ನಡೆಸಲಿದ್ದಾರೆ. ಹೀಗಾಗಿ ಈ ವೇಳೆ ದಾಖಲೆಗಳನ್ನು ತೋರಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಖಚಿತ ಪಡಿಸಿಕೊಳ್ಳುವುದು ಮುಖ್ಯ.

ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು ಏಕೆ?

ದೇಶಾದ್ಯಂತ ಚುನಾವಣಾ ಆಯೋಗ, ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ ಮಾಡುತ್ತಿದೆ. ಅಕ್ರಮ ಹಾಗೂ ನಕಲಿ ಮತದಾನ ತಡೆಯುವುದು. ಒಂದಕ್ಕಿಂತ ಹೆಚ್ಚು ಕಡೆ, ಅಂದರೆ ಊರಿನಲ್ಲಿ ಒಂದು ವೋಟರ್ ಐಡಿ, ನಗರದಲ್ಲಿ ಒಂದು ವೋಟರ್ ಐಡಿ ಹೊಂದಿರುವವರನ್ನ ಪತ್ತೆ ಹಚ್ಚುವುದು. ಸತ್ತವರು ಹಾಗೂ ಕಾಯಂ ಆಗಿ ಬೇರೆಡೆಗೆ ವಲಸೆ ಹೋದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದು. ಜೊತೆಗೆ ಹೊಸದಾಗಿ ಅರ್ಹತೆ ಪಡೆದ ಯುವ ಮತದಾರರನ್ನು ಪಟ್ಟಿಗೆ ಸೇರಿಸಲು ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಈ ಎಸ್​ಐಆರ್​ ಶುರು ಮಾಡಿದೆ.

ಜಿಬಿಎ ಟ್ವೀಟ್​

ಗಣತಿ ನಮೂನೆ ಭರ್ತಿ ಮಾಡುವ ವಿಧಾನ

  • ಗಣತಿ ಪ್ರತಿಯ ಒಂದು ಭಾಗದಲ್ಲಿ ಮತದಾರರ ಹೆಸರು, ಎಪಿಕ್ (EPIC) ಸಂಖ್ಯೆ, ವಿಳಾಸ, ವಿಧಾನಸಭಾ ಕ್ಷೇತ್ರದ ವಿವರಗಳು ಹಾಗೂ ಹಳೆಯ ಭಾವಚಿತ್ರವನ್ನು ಈಗಾಗಲೇ ಮುದ್ರಿಸಲಾಗಿರುತ್ತದೆ. ಇದರೊಂದಿಗೆ ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇರುತ್ತದೆ. ಒಂದು ವೇಳೆ ಫಾರ್ಮ್‌ನಲ್ಲಿ ಮುದ್ರಿತವಾಗಿರುವ ಹಳೆಯ ಭಾವಚಿತ್ರವು ಅಸ್ಪಷ್ಟವಾಗಿದ್ದರೆ ಅಥವಾ ಹಳೆಯದಾಗಿದ್ದರೆ ಮಾತ್ರ, ಹೊಸದಾದ ಸ್ಪಷ್ಟ ಭಾವಚಿತ್ರವನ್ನು ಅದರ ಪಕ್ಕದ ಜಾಗದಲ್ಲಿ ಅಂಟಿಸಬೇಕು.

ಇದನ್ನೂ ಓದಿ: ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯುತ್ತೆ ಮತದಾರರ ಪಟ್ಟಿ ಪರಿಷ್ಕರಣೆ​: ರಾಜ್ಯ ಚುನಾವಣಾ ಆಯೋಗ

  • ನಿಮ್ಮ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಆ ಪಟ್ಟಿಯಲ್ಲಿರುವ ನಿಮ್ಮದೇ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು. ಒಂದು ವೇಳೆ 2002ರಲ್ಲಿ ನಿಮ್ಮ ಹೆಸರು ನೋಂದಣಿಯಾಗಿರದಿದ್ದರೆ, ನಿಮ್ಮ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯ 2002ರ ಮತದಾರರ ಪಟ್ಟಿಯ ವಿವರಗಳನ್ನು ಒದಗಿಸಬೇಕಾಗುತ್ತದೆ.
  • ಈ 2002ರ ಮತದಾರರ ಪಟ್ಟಿಯ ವಿವರಗಳು ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಬಳಿ ಲಭ್ಯವಿರುತ್ತವೆ ಅಥವಾ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್ ceo.karnataka.gov.in, ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ voters.eci.gov.in ಮತ್ತು ECINET ಮೊಬೈಲ್ ಆ್ಯಪ್ ಮೂಲಕವೂ ನೀವು ಪಡೆದುಕೊಳ್ಳಬಹುದು.
  • ಇನ್ನು ಗಣತಿ ಪ್ರತಿಯಲ್ಲಿ ಪ್ರಸ್ತುತ ವಿವರಗಳನ್ನು ನಮೂದು ಮಾಡಬೇಕು. ನಿಮ್ಮ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬಹುದು ಅಥವಾ ಬಿಡಬಹುದು, ಕಡ್ಡಾಯವಲ್ಲ.
  • ಕುಟುಂಬದ ಸದಸ್ಯರೊಬ್ಬರ ಅಂದರೆ ಪೋಷಕರು ಅಥವಾ ವಿವಾಹಿತರಾಗಿದ್ದರೆ ಪತಿ/ಪತ್ನಿ ಹೆಸರನ್ನು ಬರೆಯಬೇಕು. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ, ಫಾರ್ಮ್‌ನ ಕೆಳಗೆ ಸಹಿ ಮಾಡಬೇಕು ಅಥವಾ ಎಡಗೈ ಹೆಬ್ಬೆರಳಿನ ಗುರುತನ್ನು ಹಾಕಬೇಕು.

ಇದನ್ನೂ ಓದಿ: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ: ಕಾರಣ ಏನೂ ಗೊತ್ತಾ?

  • ಇನ್ನು ಈ ಗಣತಿ ನಮೂನೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಲಗತ್ತಿಸುವ ಅಗತ್ಯವಿರುವುದಿಲ್ಲ. ಗಣತಿದಾರರು ಪ್ರತಿ ಮನೆಗೆ ಮೂರು ಸಲ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅವರ ಹೆಸರು ಪಟ್ಟಿಗೆ ಸೇರ್ಪಡೆಯಾಗುವುದಲ್ಲ.
  • ಇನ್ನು ಕೊನೆಯದಾಗಿ ಸಹಿ ಮಾಡಿದ ಫಾರ್ಮ್ ಅನ್ನು ನಿಮ್ಮ ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಫಾರ್ಮ್ ಅನ್ನು ಪರಿಶೀಲಿಸಿ ಅವರು ಸಹಿ ಮಾಡುತ್ತಾರೆ. ತದನಂತರ, ಒಂದು ಪ್ರತಿಯನ್ನು ಕಚೇರಿಯ ದಾಖಲೆಗಾಗಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ನಿಮಗ ನೀಡುತ್ತಾರೆ. ಹೀಗೆ ಹಿಂತಿರುಗಿಸಿದ ಪ್ರತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಸ್‌ಪೋರ್ಟ್ ಪಡೆಯುವುದು ಈಗ ಮತ್ತಷ್ಟು ದುಬಾರಿ; ಹೊಸ ಶುಲ್ಕ ಪಟ್ಟಿ ಇಲ್ಲಿದೆ – Kannada News | Government hikes fees for passport application Check New fees List

ನವದೆಹಲಿ, ಜೂನ್ 25: ವಿದೇಶ ಪ್ರವಾಸ ಕೈಗೊಳ್ಳುವ ಯೋಚನೆಯಲ್ಲಿರುವ ನಾಗರಿಕರಿಗೆ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಪಾಸ್‌ಪೋರ್ಟ್ (Passport) ಅರ್ಜಿ ಸಲ್ಲಿಕೆ ಮತ್ತು ಮರುಹಂಚಿಕೆ ಪ್ರಕ್ರಿಯೆಯ ಶುಲ್ಕವನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ಏರಿಕೆ ಮಾಡಿದೆ. ಪರಿಷ್ಕೃತ ದರಗಳ ಪ್ರಕಾರ, ಸಾಮಾನ್ಯ ಹಾಗೂ ತತ್ಕಾಲ್ ಪಾಸ್‌ಪೋರ್ಟ್‌ಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಈ ಹೊಸ ಶುಲ್ಕ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

36 ಪುಟಗಳನ್ನು ಹೊಂದಿರುವ ಹೊಸ ಸಾಮಾನ್ಯ ಪಾಸ್‌ಪೋರ್ಟ್‌ನ ಶುಲ್ಕ 2,500 ರೂ. ಆಗಿದೆ. ಈ ಶುಲ್ಕವು ವಯಸ್ಕರಿಗೆ ಮತ್ತು 15ರಿಂದ 18 ವರ್ಷದೊಳಗಿನ ಅಪ್ರಾಪ್ತ ವಯಸ್ಕರಿಗೆ ಅನ್ವಯಿಸುತ್ತದೆ. ಅರ್ಜಿ ಸಲ್ಲಿಸಲು, ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ (Passport Seva Online Portal) ಖಾತೆಯನ್ನು ರಚಿಸಿ.

ಇದನ್ನೂ ಓದಿ: ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಪರಿಷ್ಕೃತ ಹೊಸ ಪಾಸ್‌ಪೋರ್ಟ್ ಶುಲ್ಕದ ವಿವರಗಳು ಇಲ್ಲಿವೆ:

ಸಾಮಾನ್ಯ ಪಾಸ್‌ಪೋರ್ಟ್ (36 ಪುಟಗಳು):

ನೀವು ಮೊದಲ ಬಾರಿಗೆ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದರೆ ಅಥವಾ 36 ಪುಟಗಳನ್ನು ಹೊಂದಿರುವ ಹಳೆಯ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಬಯಸಿದರೆ, ಇನ್ಮುಂದೆ 2,500 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತತ್ಕಾಲ್ ಪಾಸ್‌ಪೋರ್ಟ್ ಸೇವೆ:

ತುರ್ತಾಗಿ ಪಾಸ್‌ಪೋರ್ಟ್ ಅಗತ್ಯವಿರುವ ಗ್ರಾಹಕರು ತತ್ಕಾಲ್ ಯೋಜನೆಯಡಿ ಅರ್ಜಿ ಸಲ್ಲಿಸಲು ಈಗ ಭಾರಿ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರವು ತತ್ಕಾಲ್ ಪಾಸ್‌ಪೋರ್ಟ್ ಶುಲ್ಕವನ್ನು ಬರೋಬ್ಬರಿ 5,000 ರೂ.ಗೆ ಏರಿಕೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ​ ಪರಿಶೀಲನೆಗೆ ಹೊಸ ಮಾರ್ಗಸೂಚಿ

ದರ ಹೆಚ್ಚಳಕ್ಕೆ ಕಾರಣ:

ಪಾಸ್‌ಪೋರ್ಟ್ ವಿತರಣಾ ಪ್ರಕ್ರಿಯೆಯಲ್ಲಿ ತಾಂತ್ರಿಕ ಸುಧಾರಣೆಗಳು, ಉನ್ನತ ದರ್ಜೆಯ ಭದ್ರತಾ ಫೀಚರ್‌ಗಳ ಅಳವಡಿಕೆ (ಉದಾಹರಣೆಗೆ: ಇ-ಪಾಸ್‌ಪೋರ್ಟ್ ಚಿಪ್ ತಂತ್ರಜ್ಞಾನ) ಮತ್ತು ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗಿರುವುದರಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಪಾಸ್‌ಪೋರ್ಟ್ ಶುಲ್ಕದಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿರಲಿಲ್ಲ. ಆದರೆ, ಈಗ ಏಕಕಾಲಕ್ಕೆ ದರ ಹೆಚ್ಚಿಸಿರುವುದು ಹೊಸದಾಗಿ ಪಾಸ್‌ಪೋರ್ಟ್ ಪಡೆಯುವ ಜನಸಾಮಾನ್ಯರಿಗೆ ಕೊಂಚ ಆರ್ಥಿಕ ಹೊರೆಯಾಗಲಿದೆ. ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಹೊಸ ಶುಲ್ಕದ ಅನ್ವಯವೇ ಪಾವತಿ ಮಾಡಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ತಲೆಸುತ್ತು ಬರುತ್ತಿದೆಯೇ? ಇದು ವಿಟಮಿನ್ ಕೊರತೆಯ ಲಕ್ಷಣವಾಗಿರಬಹುದು! – Kannada News | Feeling Dizzy Frequently? Here’s What Your Body May Be Telling You

ಅನೇಕರು ತಲೆಸುತ್ತು (Frequent Dizziness) ಬರುವುದನ್ನು ಸಾಮಾನ್ಯ ದಣಿವು, ಹವಾಮಾನ ಬದಲಾವಣೆ ಅಥವಾ ಒತ್ತಡದ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಇದು ದೇಹದಲ್ಲಿ ಅಗತ್ಯ ವಿಟಮಿನ್‌ಗಳ ಕೊರತೆಯ ಸೂಚನೆಯಾಗಿರಬಹುದು. ಆದರೆ ತಲೆಸುತ್ತು ಬರುವುದಕ್ಕೆ ವಿಟಮಿನ್ ಕೊರತೆ ಮಾತ್ರ ಏಕೈಕ ಕಾರಣವಲ್ಲ. ಕಡಿಮೆ ರಕ್ತದೊತ್ತಡ, ರಕ್ತಹೀನತೆ, ದೇಹದಲ್ಲಿ ನೀರಿನ ಕೊರತೆ ಹಾಗೂ ಇತರೆ ಆರೋಗ್ಯ ಸಮಸ್ಯೆಗಳೂ ಕಾರಣವಾಗಬಹುದು. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ತಲೆತಿರುಗುವಿಕೆ ಉಂಟಾಗಬಹುದು ಮತ್ತು ಯಾವ ರೀತಿ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ವಿಟಮಿನ್ ಕೊರತೆಯಿಂದ ತಲೆಸುತ್ತು ಬರಬಹುದು?

ವಿಟಮಿನ್ ಬಿ12, ಫೋಲೇಟ್ (ವಿಟಮಿನ್ B9) ಮತ್ತು ವಿಟಮಿನ್ ಡಿ ಕೊರತೆಗೂ ತಲೆಸುತ್ತಿಗು ಸಂಬಂಧ ಹೊಂದಿರಬಹುದು. ವಿಟಮಿನ್ ಬಿ12 ಮತ್ತು ಫೋಲೇಟ್ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯ. ಇವುಗಳ ಕೊರತೆಯಿಂದ ರಕ್ತಹೀನತೆ ಉಂಟಾಗಿ, ಮೆದುಳು ಮತ್ತು ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದೆ ತಲೆಸುತ್ತು, ದೌರ್ಬಲ್ಯ ಮತ್ತು ಆಯಾಸವಾಗಬಹುದು. ಜೊತೆಗೆ ವಿಟಮಿನ್ ಡಿ ಕೊರತೆಯಿಂದ ಸ್ನಾಯುಗಳ ಬಲ ಕುಂದಿ, ದೇಹದ ಸಮತೋಲನ ತಪ್ಪುವ ಸಾಧ್ಯತೆ ಇದೆ. ಇದರಿಂದ ಕೆಲವರಿಗೆ ತಲೆಸುತ್ತು ಅಥವಾ ಅಸ್ಥಿರತೆ ಅನುಭವವಾಗಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ತಲೆಸುತ್ತಿನ ಜೊತೆಗೆ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ನಿರಂತರ ದೌರ್ಬಲ್ಯ ಮತ್ತು ಆಯಾಸ
  • ಉಸಿರಾಟದ ತೊಂದರೆ
  • ದೃಷ್ಟಿ ಮಸುಕಾಗುವುದು
  • ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ
  • ನಡೆಯಲು ತೊಂದರೆ
  • ಮೂರ್ಛೆ ಹೋಗುವುದು
  • ತೀವ್ರ ತಲೆನೋವು ಅಥವಾ ಎದೆನೋವು

ಏನು ಮಾಡಬೇಕು?

ಪದೇ ಪದೇ ತಲೆಸುತ್ತು ಕಾಣಿಸಿಕೊಂಡರೆ ಸ್ವಯಂ ಔಷಧಿ ಅಥವಾ ವಿಟಮಿನ್ ಪೂರಕಗಳನ್ನು ಸೇವಿಸಬೇಡಿ. ವೈದ್ಯರ ಸಲಹೆಯೊಂದಿಗೆ ಅಗತ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಸಮತೋಲಿತ ಆಹಾರ, ಸಾಕಷ್ಟು ನೀರು ಮತ್ತು ಉತ್ತಮ ನಿದ್ರೆ ಆರೋಗ್ಯ ಕಾಪಾಡಲು ಸಹಕಾರಿ. ತಲೆಸುತ್ತಿನ ಜೊತೆಗೆ ಎದೆನೋವು, ಉಸಿರಾಟದ ತೊಂದರೆ, ಮಾತಾಡಲು ಕಷ್ಟ ಅಥವಾ ಮೂರ್ಛೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:35 pm, Thu, 25 June 26

Source link

ವೈ. ಮಂಜುನಾಥ್​​ ಮತ್ತು ಆಪ್ತರ ಮನೆಗಳ ಮೇಲೆ ಇಡಿ ದಾಳಿ ಕೇಸ್​​: ರೇಡ್​​ ವೇಳೆ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕವೇ ಪತ್ತೆ! – Kannada News | Excise Scam Explodes: ED Recovers ‘Bribe Diary’ and 13.3 Crore Assets in Raids on Commissioner Y Manjunath and Associates

ದಾಳಿ ಬಗ್ಗೆ ಇಡಿ ಮಾಹಿತಿImage Credit source: Tv9 Kannada and ED X Account

ಬೆಂಗಳೂರು, ಜೂನ್​​ 25: ಸಚಿವ ಸತೀಶ್ ಜಾರಕಿಹೊಳಿ ಬಾಮೈದ ಮತ್ತು ಬೆಳಗಾವಿ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಸೇರಿ ಅವರ ಆಪ್ತರ ಮನೆಗಳ ಮೇಲೆ ನಿನ್ನೆ (ಜೂನ್​​ 24) ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿರುವ ಒಟ್ಟು 14 ಸ್ಥಳಗಳಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆದಿತ್ತು. ಈ ಸಂಬಂಧ ಇಡಿ ಮಾಹಿತಿ ನೀಡಿದ್ದು, ಪರಿಶೀಲನೆ ವೇಳೆ ಕೆಲ ದಾಖಲೆ ಪತ್ರಗಳು, ಹಣ ಮತ್ತು ಆಭರಣಗಳು ಸೇರಿ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕ ಸಿಕ್ಕಿರೋದು ಅಧಿಕಾರಿಗಳೇ ಹೌಹಾರುವಂತೆ ಮಾಡಿದೆ.

ರೇಡ್​​ ವೇಳೆ ಸಿಕ್ಕಿದ್ದೇನು?

ದಾಳಿಯ ವೇಳೆ ಡಿಜಿಟಲ್ ಸಾಧನಗಳು, ಲಂಚದ ಹಣ ಹಂಚಿಕೆ ಕುರಿತ ನಗದು ಪುಸ್ತಕ, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ. ವಿಶೇಷವಾಗಿ ವೈ.ಡಿ. ಮಂಜುನಾಥ್, ಅವರ ಚಾಲಕ, ಕುಟುಂಬ ಸದಸ್ಯರು ಹಾಗೂ ಸಹಚರರ ಸ್ಥಳಗಳಿಂದ ಸುಮಾರು 5.5 ಕೋಟಿ ನಗದು, ಸುಮಾರು 7.8 ಕೋಟಿ ಮೌಲ್ಯದ ಚಿನ್ನಾಭರಣ, 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 13.3 ಕೋಟಿ ಮೌಲ್ಯದ ಅಕ್ರಮ ಆಸ್ತಿ (Proceeds of Crime) ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಂಜುನಾಥ್ ಆಪ್ತರಿಗೂ ತಟ್ಟಿದ ಇಡಿ ಬಿಸಿ: ಅಬಕಾರಿ ಎಸ್ಪಿ, ಡಿವೈಎಸ್ಪಿ ಮನೆಗಳ ಮೇಲೂ ರೇಡ್​

ಅಧಿಕಾರಿಗಳಿಂದಲೇ ಮದ್ಯದಂಗಡಿ!

ಇನ್ನು ಇಡಿ ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅಬಕಾರಿ ಇಲಾಖೆ ಅಧಿಕಾರಿಗಳು, ಅವರ ಸಹಚರರು ಮತ್ತು ಖಾಸಗಿ ವ್ಯಕ್ತಿಗಳ ಸಹಭಾಗಿತ್ವದಲ್ಲಿ ಸಂಘಟಿತ ಭ್ರಷ್ಟಾಚಾರದ ಜಾಲ ಕಾರ್ಯನಿರ್ವಹಿಸುತ್ತಿತ್ತು. ರಾಜ್ಯದ ವಿವಿಧ ಮದ್ಯ ಮಾರಾಟ ಮಳಿಗೆಗಳಿಂದ ಪ್ರತಿ ತಿಂಗಳು ನಿಗದಿತ ಪ್ರಮಾಣದ ಲಂಚವನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ಸಂಗ್ರಹಿಸುತ್ತಿದ್ದರು. ಪರವಾನಗಿ ನವೀಕರಣ, ಸ್ಥಳಾಂತರ ಮತ್ತು ಹೊಸ ಲೈಸೆನ್ಸ್ ನೀಡುವ ಸಂದರ್ಭದಲ್ಲಿಯೂ ಹಣ ಸಂಗ್ರಹಿಸಲಾಗುತ್ತಿತ್ತು. ಸಂಗ್ರಹಿಸಿದ ಲಂಚದ ಹಣವನ್ನು ಮಧ್ಯವರ್ತಿಗಳ ಮೂಲಕ ಕೇಂದ್ರೀಕೃತವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಈ ಹಣದ ಲೆಕ್ಕಪತ್ರವನ್ನು ಪುಸ್ತಕದಲ್ಲಿ ದಾಖಲಿಸಲಾಗುತ್ತಿತ್ತು. ಅಂತಹ ಒಂದು ನಗದು ಪುಸ್ತಕವನ್ನು ಇಡಿ ವಶಪಡಿಸಿಕೊಂಡಿದೆ. ಈ ಅಕ್ರಮ ಹಣವನ್ನು ಅಧಿಕಾರಿಗಳು ವೈಯಕ್ತಿಕ ಖರ್ಚು, ಆಸ್ತಿ ಖರೀದಿ ಹಾಗೂ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಬಳಸುತ್ತಿದ್ದರು. ತನಿಖೆಯಲ್ಲಿ ಪತ್ತೆಯಾದ ಮತ್ತೊಂದು ಪ್ರಮುಖ ಅಂಶವೆಂದರೆ, ಹಲವಾರು ಅಬಕಾರಿ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಪಡೆದು, ಪರೋಕ್ಷವಾಗಿ ಮದ್ಯ ವ್ಯವಹಾರ ನಡೆಸುತ್ತಿದ್ದರು ಎಂದು ಇಡಿ ತಿಳಿಸಿದೆ.

ಯಾರ್ಯಾರ ಮೇಲೆ ಇಡಿ ದಾಳಿ ನಡೆದಿತ್ತು?

ಅಬಕಾರಿ ಇಲಾಖೆಯ ಅಧಿಕಾರಿಗಳಾದ ಜಗದೀಶ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ.ಡಿ. ಮಂಜುನಾಥ್ ಸೇರಿದಂತೆ ಅವರ ಕುಟುಂಬ ಸದಸ್ಯರು, ವ್ಯವಹಾರ ಪಾಲುದಾರರು ಮತ್ತು ಆಪ್ತ ಸಹಚರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯೂನಿಫಾರಂ ಇದೆ ಎಂದು ಏನು ಬೇಕಾದ್ರೂ ಮಾಡುತ್ತೀರಾ? ಆರೋಪಿ ತಮ್ಮನನ್ನು ಬಂಧಿಸಿದ ಪೊಲೀಸರಿಗೆ ಹೈಕೋರ್ಟ್ ತರಾಟೆ – Kannada News | Karnataka High Court Takes dig at Chitradurga Police Over Arrested Accused Brother

ಕರ್ನಾಟಕ ಹೈಕೋರ್ಟ್​​Image Credit source: Getty Images

ಬೆಂಗಳೂರು/ಚಿತ್ರದುರ್ಗ, (ಜೂನ್ 25): ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ಪ್ರೊಬೇಷನರಿ ಸಬ್ಇನ್ಸ್‌ಪೆಕ್ಟರ್‌ವೊಬ್ಬರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ (Chitradruga) ಮಹಿಳಾ ಠಾಣೆ ಪೊಲೀಸರ ಕ್ರಮವನ್ನು ಹೈಕೋರ್ಟ್‌ (Karnataka High Court) ಖಂಡಿಸಿದ್ದು, ತರಾಟೆಗೆ ತೆಗೆದುಕೊಂಡಿದೆ. ಆರೋಪಿಯ ಸಹೋದರನ ಬಂಧನ ಪ್ರಶ್ನಿಸಿ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದಲ್ಲಿ ಆರೋಪಿ ತಮ್ಮನ ತಪ್ಪಿಲ್ಲದಿದ್ದರೂ ಬಂಧಿಸಿರುವುದೇಕೆ? ವಿನಾಕಾರಣ ಬಂಧಿಸುವುದು ಪೊಲೀಸರಿಗೆ ಆಟವಾಗಿದೆ. ಬಂಧಿತನ ಜೀವನದ ಮೇಲಾಗುವ ಪರಿಣಾಮದ ಅರಿವು ಪೊಲೀಸರಿಗಿದೆಯೇ? ಬಂಧನ ಅವಶ್ಯವಿರುವ ಕೇಸ್​ನಲ್ಲಿ ಆರೋಪಿಗಳನ್ನು ಬಂಧಿಸುವುದಿಲ್ಲ. ಪೊಲೀಸ್ ಸಮವಸ್ತ್ರವಿದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಕಾನೂನು ಉಲ್ಲಂಘಿಸಿ ಬಂಧಿಸುವ ಪೊಲೀಸರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪೊಲೀಸರನ್ನ ಕರೆಯಿಸಿ ಕ್ಲಾಸ್ ತೆಗೆದುಕೊಂಡ ಕೋರ್ಟ್​

ಆರೋಪಿ ಸಹೋದರನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಳವಳ ವ್ಯಕ್ತಪಡಿಸಿತ್ತು.  ಅಲ್ಲದೇ ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶಿಸಿತ್ತು. ಇನ್ನು ಚಿತ್ರದುರ್ಗ ಪೊಲೀಸರು ಖುದ್ದಾಗಿ ಹಾಜರಾಗಬೇಕೆಂದು ಸೂಚಿಸಿ ಇಂದಿಗೆ ಜೂನ್ 25 ವಿಚಾರಣೆ ಮುಂದೂಡಿತ್ತು. ಅದರಂತೆ ಇಂದು ಪೊಲೀಸರು ಹಾಜರಾಗಿದ್ದು, ಕೋರ್ಟ್​​ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ಮ್ಯಾಜಿಸ್ಟ್ರೇಟ್ ಕೂಡಾ ಇಂತಹ ಬಂಧನಕ್ಕೆ ಅವಕಾಶ ನೀಡಬಾರದು. ಕಾನೂನು ಉಲ್ಲಂಘಿಸಿ ಬಂಧಿಸುವ ಪೊಲೀಸರನ್ನು ಅಮಾನತುಪಡಿಸಲಾಗುವುದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಖಡಕ್ ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೊಟ್ಟ ವಿಧಾನ ಸರಿಯಲ್ಲ: ವಚನಾನಂದ ಸ್ವಾಮೀಜಿಗೆ ಹೈಕೋರ್ಟ್​ ಬಿಗ್ ಶಾಕ್

ಆರೋಪವಿರುವುದು ಎಸ್‌ಐ ಮೇಲೆ ಬಂಧಿಸಿದ್ದು ಸಹೋದರನನ್ನ!

ಇನ್​ಸ್ಟಾಗ್ರಾಂನಲ್ಲಿ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ಪ್ರೊಬೆಷನರಿ ಪಿಎಸ್ಐ ವರುಣ್ ಕುಮಾರ್, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮಹಿಳೆಗೆ ವಿವಾಹವಾಗಿದೆ ಎಂದು ಸಂಬಂಧ ಕಡಿತಗೊಳಿಸಿದ್ದ. ಈ ಸಂಬಂಧ ಮಹಿಳೆ, ಎಸ್‌ಐ ವರುಣ್ ಕುಮಾರ್ ವಿರುದ್ಧ ಮಹಿಳೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಚಿತ್ರದುರ್ಗ ಮಹಿಳಾ ಠಾಣೆಯ ಪೊಲೀಸರು, ಆರೋಪಿ ಕುಟುಂಬಸ್ಥರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ ಆರೋಪಿ ಸಹೋದರನನ್ನು ಬಂಧಿಸಿದ್ದರು. ಹೀಗಾಗಿ ಪೊಲಿಸರು ಕ್ರಮವನ್ನು ಖಂಡಿಸಿ ಕುಟುಂಬಸ್ಥರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಪೊಲಿಸರನ್ನ ತರಾಟೆಗೆ ತೆಗೆದುಕೊಂಡ ಕೋರ್ಟ್​

ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿನಾಕಾರಣ ಆರೋಪಿ ಸಹೋದರನ ಬಂಧನ ಆಘಾತಕಾರಿ. ‘ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸುವುದು ಹೇಗೆ ಎಂದು ಪ್ರಶ್ನಿಸಿತ್ತು. ಅಲ್ಲದೇ ತನಿಖೆಗೆ ಮಧ್ಯಂತರ ತಡೆ ನೀಡಿರುವುದಲ್ಲದೆ, ತಕ್ಷಣವೇ ಬಂಧಿತನ ಬಿಡುಗಡೆ ಮಾಡಬೇಕು. ಅಷ್ಟೇ ಅಲ್ಲ, ಪ್ರಕರಣದಲ್ಲಿ ಸಂಬಂಧವಿಲ್ಲದವರನ್ನು ಬಂಧಿಸಿದ್ದು ಏಕೆ? ಎಂದು ಪ್ರಮಾಣಪತ್ರ ಸಲ್ಲಿಸಲು ತನಿಖಾಧಿಕಾರಿಗೆ ಸೂಚನೆ ನೀಡಿ ವಿಚಾರಣೆಯನ್ನು ಇಂದಿಗೆ ಅಂದರೆ ಜೂ.25ಕ್ಕೆ ಮುಂದೂಡಿತ್ತು.

ಅರ್ಜಿದಾರರ ಪರ ವಕೀಲ ಭರತ್‌ ಕುಮಾರ್‌ ವಾದ ಮಂಡಿಸಿದ್ದು, ಪ್ರಕರಣದಲ್ಲಿ ಆರೋಪವಿರುವುದು ಎಸ್‌ಐ ಮೇಲೆ ಮಾತ್ರ. ಆದರೆ ಇಡೀ ಕುಟುಂಬದವರ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರು ಆಧರಿಸಿ ಆರೋಪಿಯ ಸಹೋದರನನ್ನು ಪೊಲೀಸರು ಬಂಧಿಸಿರುವುದು ಕಾನೂನು ಬಾಹಿರ ಕ್ರಮ. ಕೂಡಲೇ ಆತನ ಬಿಡುಗಡೆಗೆ ಆದೇಶ ನೀಡಬೇಕು ಎಂದು ಕೋರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ – Kannada News | Shah Rukh Khan visited Mangalore watch video

ನಟ ಶಾರುಖ್ ಖಾನ್ (Shah Rukh Khan) ಇಂದು (ಜೂನ್ 25) ಮಂಗಳೂರಿಗೆ ಬಂದಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲೆಂದು ನಟ ಶಾರುಖ್ ಖಾನ್ ಮಂಗಳೂರಿಗೆ ಬಂದಿದ್ದು, ಬಾಲಿವುಡ್​ನ ಬಾದ್​​ಶಾ ಅನ್ನು ಕಣ್ತುಂಬಿಸಿಕೊಳ್ಳಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಶಾರುಖ್ ಖಾನ್ ಸಹ ವಿಮಾನ ನಿಲ್ದಾಣದಿಂದ ಹೊರಗೆ ಬಂದು, ಕಾರಿನಲ್ಲಿ ಏರಿ ಸುತ್ತಲೂ ನೆರದಿದ್ದವರಿಗೆ ಕೈಬೀಸಿದರು. ಶಾರುಖ್ ಖಾನ್ ಅನ್ನು ನೋಡಿದ ಜನ ಜಯಘೋಷಗಳನ್ನು ಮಾಡಿದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್; ಟಿಕೆಟ್ ದರ ಇಳಿಕೆಯ ಸುಳಿವು ನೀಡಿದ ಸರ್ಕಾರ – Kannada News | Flight tickets might be get cheaper Modi government signals amid a fall in crude oil prices

ನವದೆಹಲಿ, ಜೂನ್ 25: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಗಳು ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ವಿಮಾನ ಟಿಕೆಟ್ ದರಗಳು ಅಗ್ಗವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಸುಳಿವು ನೀಡಿದೆ. ಹಬ್ಬಗಳ ಸೀಸನ್ ಹಾಗೂ ಹೆಚ್ಚಿನ ಬೇಡಿಕೆಯ ಸಮಯದಲ್ಲಿ ವಿಮಾನ ದರಗಳು ಗಗನಕ್ಕೇರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರದ ಈ ನಿಲುವು ಮಹತ್ವ ಪಡೆದುಕೊಂಡಿದೆ. ಹೆಚ್ಚುವರಿ ಶುಲ್ಕಗಳನ್ನು ಕಡಿಮೆ ಮಾಡುವುದು ಮತ್ತು ದರಗಳನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

ಎಟಿಎಫ್ (ATF) ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಗಲಿ:

ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಶೇ. 40ಕ್ಕಿಂತ ಹೆಚ್ಚು ಪಾಲು ವಿಮಾನ ಇಂಧನ ಅಥವಾ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF)ಗೆ ವ್ಯಯವಾಗುತ್ತದೆ. ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾದಾಗ ಎಟಿಎಫ್ ದರಗಳೂ ಕಡಿಮೆಯಾಗುತ್ತವೆ. ಹೀಗಾಗಿ, ಇಂಧನದ ವೆಚ್ಚ ತಗ್ಗಿದಾಗ ಅದರ ನೇರ ಲಾಭವನ್ನು ವಿಮಾನ ಪ್ರಯಾಣಿಕರಿಗೆ ಟಿಕೆಟ್ ದರ ಕಡಿತಗೊಳಿಸುವ ಮೂಲಕ ತಲುಪಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳನ್ನು ಗ್ಲೋಬಲ್ ಟ್ರಾನ್ಸಿಟ್ ಹಬ್​ಗಳಾಗಿ ಅಭಿವೃದ್ದಿಪಡಿಸಲು ಕೇಂದ್ರ ಯೋಜನೆ

ಅತಿಯಾದ ದರ ಏರಿಕೆಗೆ ಲಗಾಮು:

ಹಬ್ಬದ ದಿನಗಳು ಮತ್ತು ರಜಾದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಅತಿಯಾಗಿ ಟಿಕೆಟ್ ದರ ಹೆಚ್ಚಿಸುವುದನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ದರಗಳನ್ನು ನಿರ್ಧರಿಸುವ ಹಕ್ಕು ಸಂಸ್ಥೆಗಳಿಗಿದ್ದರೂ, ಇಂಧನ ದರ ಇಳಿಕೆಯ ಸೌಲಭ್ಯವನ್ನು ಬಳಸಿಕೊಂಡು ಜನಸಾಮಾನ್ಯರಿಗೆ ಹೊರೆಯಾಗದಂತೆ ಕೈಗೆಟುಕುವ ದರಗಳನ್ನು ನಿಗದಿಪಡಿಸಬೇಕು ಎಂದು ಸರ್ಕಾರಿ ನಿಯಂತ್ರಣ ಸಂಸ್ಥೆಗಳು ಸ್ಪಷ್ಟಪಡಿಸಿವೆ.

ಪ್ರಯಾಣಿಕರ ಬೇಡಿಕೆ ಮತ್ತು ವಿಮಾನಯಾನ ಸಂಸ್ಥೆಗಳ ಸ್ಪರ್ಧೆ:

ಮಾರುಕಟ್ಟೆ ತಜ್ಞರ ಪ್ರಕಾರ, ಇಂಧನದ ದರ ಇಳಿಕೆಯ ಜೊತೆಗೆ ವಿಮಾನಯಾನ ಸಂಸ್ಥೆಗಳ ನಡುವಿನ ಆಂತರಿಕ ಸ್ಪರ್ಧೆಯೂ ಟಿಕೆಟ್ ದರ ಇಳಿಕೆಗೆ ಕಾರಣವಾಗಬಹುದು. ಹೊಸ ವಿಮಾನಗಳ ಸೇರ್ಪಡೆ ಮತ್ತು ಕಾರ್ಯಾಚರಣೆ ವಿಸ್ತರಣೆಯಿಂದಾಗಿ ಮುಂಬರುವ ದಿನಗಳಲ್ಲಿ ಪ್ರಮುಖ ಮಾರ್ಗಗಳಲ್ಲಿ ವಿಮಾನದ ಟಿಕೆಟ್ ದರ ಶೇ. 10ರಿಂದ 15ರಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ 

ವಿಮಾನ ಟಿಕೆಟ್ ದರಗಳು ಸಂಪೂರ್ಣವಾಗಿ ಇಂಧನ ಬೆಲೆ ಹಾಗೂ ಆಯಾ ಸಮಯದ ಬೇಡಿಕೆಯ ಮೇಲೆ ಆಧಾರಿತವಾಗಿರುತ್ತವೆ. ಆದರೆ, ಸರ್ಕಾರದ ಈ ಸಕಾರಾತ್ಮಕ ಸೂಚನೆಯಿಂದಾಗಿ ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಜೇಬಿಗೆ ಕೊಂಚ ವಿನಾಯಿತಿ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್​​​​, 5 ಕೆಜಿ ಸಿಲ್ವರ್​​ ಜಪ್ತಿ – Kannada News | Youth Arrested in Halsuru Silver Robbery Case, 5kg Silver Seized

ಬೆಂಗಳೂರು, ಜೂನ್​​ 25: ಹಲಸೂರಿನ ಕಾರ್ ಸ್ಟ್ರೀಟ್‌ನಲ್ಲಿ ನಡೆದ ಬೆಳ್ಳಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಯುವಕನನ್ನು ಬಂಧಿಸಿದ್ದಾರೆ. ಅಂಗಡಿಯ ಗೋಡೆ ಕೊರೆದು 10 ಕೆಜಿ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ತಮಿಳುನಾಡು ಮೂಲದ ತೇಜು ಎಂದು ಗುರುತಿಸಲಾಗಿದೆ. ಆರೋಪಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಈ ಕೃತ್ಯ ಎಸಗಿದ್ದ ಎಂಬುದರ ಜೊತೆಗೆ ಇದೇ ಮೊದಲ ಬಾರಿಗೆ ಇಂತಹ ಅಪರಾಧ ಚಟುವಟಿಕೆಯಲ್ಲಿ ಈತ ಭಾಗಿಯಾಗಿ ಎಂಬುದು ಗೊತ್ತಾಗಿದೆ. ಬಂಧಿತನಿಂದ 5 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಬೆಳ್ಳಿ ಆಭರಣಗಳಿಗಾಗಿ ತನಿಖೆ ಮುಂದುವರಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs IRE: ಐರ್ಲೆಂಡ್​ನಲ್ಲೂ ವೈಭವ್ ಕ್ರೇಜ್; ಕ್ರೀಡಾಂಗಣದಲ್ಲಿ ಆಸನಗಳ ಹೆಚ್ಚಳ – Kannada News | Vaibhav Sooryavanshi Hype: India Ireland T20 Series in Belfast Sees Demand for Extra Seats

ಐರ್ಲೆಂಡ್ ರಾಜಧಾನಿ ಬೆಲ್‌ಫಾಸ್ಟ್‌ನಲ್ಲಿ ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಜೂನ್ 26 ಮತ್ತು 28 ರಂದು ನಡೆಯಲಿದೆ. ಇತ್ತ ಟೀಂ ಇಂಡಿಯಾ ಪರ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನಾಡಲು ವೈಭವ್ ಸೂರ್ಯವಂಶಿ ಕೂಡ ಸಜ್ಜಾಗಿದ್ದಾರೆ. ಈ ನಡುವೆ ಐರ್ಲೆಂಡ್‌ನಲ್ಲೂ ವೈಭವ್ ಕ್ರೇಜ್ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡಾಂಗಣದಲ್ಲಿ ಆಸನಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ (PC- BCCI X).

ವೈಭವ್ ಸೂರ್ಯವಂಶಿ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಆಡಲಿದ್ದಾರೆ. ಎಲ್ಲರ ಕಣ್ಣುಗಳು ಅವರ ಚೊಚ್ಚಲ ಪಂದ್ಯದ ಮೇಲೆ ಇವೆ. ಈ ಕಾರಣದಿಂದಾಗಿ, ಬೆಲ್‌ಫಾಸ್ಟ್ ಕ್ರೀಡಾಂಗಣದಲ್ಲಿ ಆಸನಗಳನ್ನು ಹೆಚ್ಚಿಸಲಾಗುತ್ತಿದೆ. ಅಂದರೆ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಆದಾಗ್ಯೂ, ಈ ಕ್ರೀಡಾಂಗಣದಲ್ಲಿ 10 ಸಾವಿರ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ (PC- BCCI X).

ಬೆಲ್‌ಫಾಸ್ಟ್‌ನಲ್ಲಿರುವ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಜೂನ್ 26 ಮತ್ತು 28 ರಂದು ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಟಿ20 ಪಂದ್ಯಗಳು ನಡೆಯಲಿವೆ. ಆದರೆ ಐರ್ಲೆಂಡ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಜನರ ಸಂಖ್ಯೆ ಅಷ್ಟಾಗಿ ಇಲ್ಲದ ಕಾರಣ ಈ ಮೈದಾನದಲ್ಲಿ ಅಭಿಮಾನಿಗಳಿಗೆ ಹೆಚ್ಚಿನ ಆಸನ ವ್ಯವಸ್ಥೆ ಇಲ್ಲ. ಮಾಹಿತಿಯ ಪ್ರಕಾರ, ಕೇವಲ ನಾಲ್ಕೂವರೆ ಸಾವಿರ ಅಭಿಮಾನಿಗಳು ಮಾತ್ರ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಬಹುದು (PC- BCCI X).

ಆದರೆ 15 ವರ್ಷದ ವೈಭವ್ ಆಟಕ್ಕೆ ಐರ್ಲೆಂಡ್‌ನಲ್ಲೂ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಹೀಗಾಗಿ ಈ ಎರಡು ಪಂದ್ಯಗಳನ್ನು ನೋಡಲು ಅಭಿಮಾನಿಗಳು ನಿರೀಕ್ಷೆಗೂ ಮೀರಿ ಬರುವುದು ಖಚಿತವಾಗಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಸ್ಟ್ಯಾಂಡ್‌ಗಳನ್ನು ಸ್ಥಾಪಿಸಲಾಗುತ್ತಿದ್ದು, ಆಸನಗಳ ಸಂಖ್ಯೆಯನ್ನು 7 ಸಾವಿರಕ್ಕೆ ಏರಿಸಲಾಗುತ್ತಿದೆ (PC- BCCI X).

ಆದಾಗ್ಯೂ ವೈಭವ್ ಸೂರ್ಯವಂಶಿ ಈ ಸರಣಿಯಲ್ಲಿ ಪಾದಾರ್ಪಣೆ ಮಾಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಆರಂಭಿಕರಾಗಿ ಅಭಿಷೇಕ್ ಹಾಗೂ ಸಂಜು ಸ್ಯಾಮ್ಸನ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ವೈಭವ್​ಗೆ ಮೊದಲ ಪಂದ್ಯದಲ್ಲಿಯೇ ಅವಕಾಶ ಸಿಗುತ್ತದೆಯೇ ಅಥವಾ ಎರಡನೇ ಪಂದ್ಯಕ್ಕಾಗಿ ಕಾಯಬೇಕಾಗುತ್ತದೆಯೇ? ಎಂಬುದು ಪಂದ್ಯದ ದಿನವಷ್ಟೇ ತಿಳಿಯಲಿದೆ (PC- BCCI X).

Published On – 5:47 pm, Thu, 25 June 26

Source link

ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ – Kannada News | Amazon CEO Andy Jassi meets PM Modi, eCommerce giant announces big investments in India

ನವದೆಹಲಿ, ಜೂನ್ 25: ಜಾಗತಿಕ ಇ-ಕಾಮರ್ಸ್ ಮತ್ತು ತಂತ್ರಜ್ಞಾನ ದೈತ್ಯ ಕಂಪನಿ ‘ಅಮೆಜಾನ್’ (Amazon) ಭಾರತದಲ್ಲಿ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೂಡಿಕೆಯ ಯೋಜನೆಗಳನ್ನು ಪ್ರಕಟಿಸಿದೆ. ಅಮೆಜಾನ್ ಜಾಗತಿಕ ಸಿಇಒ ಆಂಡಿ ಜಸ್ಸಿ (Andy Jassy) ಅವರು ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಭಾರತದ ಆರ್ಥಿಕ ಮತ್ತು ಡಿಜಿಟಲ್ ಬೆಳವಣಿಗೆಗೆ ದೀರ್ಘಾವಧಿಯ ಬದ್ಧತೆಯನ್ನು ಪುನರುಚ್ಚರಿಸಿದ ಆಂಡಿ ಜಸ್ಸಿ, 2026 ರಿಂದ 2030 ರ ಅವಧಿಯಲ್ಲಿ ಭಾರತದಲ್ಲಿ ಬರೋಬ್ಬರಿ $48 ಬಿಲಿಯನ್ (ಅಂದಾಜು ₹4.5 ಲಕ್ಷ ಕೋಟಿ) ಹೂಡಿಕೆ ಮಾಡುವ ಬೃಹತ್ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಎಐ ಮತ್ತು ಕ್ಲೌಡ್ ತಂತ್ರಜ್ಞಾನಕ್ಕೆ $13 ಬಿಲಿಯನ್ ಹೆಚ್ಚುವರಿ ಹೂಡಿಕೆ

ಕೇವಲ ಆರು ತಿಂಗಳ ಹಿಂದೆಯಷ್ಟೇ ಅಮೆಜಾನ್ ಭಾರತದಲ್ಲಿ $35 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ $13 ಬಿಲಿಯನ್ ಘೋಷಿಸಿದೆ. ಇದರೊಂದಿಗೆ, 2030ರ ವೇಳೆಗೆ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯಕ್ಕಾಗಿ ಅಮೆಜಾನ್ ಮಾಡುತ್ತಿರುವ ಒಟ್ಟು ಹೂಡಿಕೆ $21 ಬಿಲಿಯನ್ ದಾಟಲಿದೆ.

2010 ರಿಂದ 2030 ರವರೆಗಿನ ಎರಡು ದಶಕಗಳ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್‌ನ ಒಟ್ಟು ಹೂಡಿಕೆ (Cumulative Investment) $88 ಬಿಲಿಯನ್ ದಾಟಲಿದೆ. ಇದರೊಂದಿಗೆ ಭಾರತದಲ್ಲಿ ಅತ್ಯಂತ ದೊಡ್ಡ ವಿದೇಶಿ ಹೂಡಿಕೆದಾರ ಸಂಸ್ಥೆಯಾಗಿ ಅಮೆಜಾನ್ ಹೊರಹೊಮ್ಮಿದೆ.

ಲಕ್ಷಾಂತರ ಉದ್ಯೋಗಾವಕಾಶ ಮತ್ತು ರಫ್ತು ಗುರಿ

ಭಾರತ ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ, 2030 ರ ವೇಳೆಗೆ ದೇಶದಲ್ಲಿ 38 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ಬೆಂಬಲ ನೀಡಲು ಹಾಗೂ ಇ-ಕಾಮರ್ಸ್ ಮೂಲಕ ಒಟ್ಟು $80 ಬಿಲಿಯನ್ ಮೌಲ್ಯದ ರಫ್ತು (Exports) ಪ್ರಕ್ರಿಯೆಗೆ ವೇಗ ನೀಡಲು ಅಮೆಜಾನ್ ಸಂಕಲ್ಪ ಮಾಡಿದೆ.

ಸಣ್ಣ ವ್ಯಾಪಾರಿಗಳು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ AI ತರಬೇತಿ

ಭಾರತದ 1.5 ಕೋಟಿ (15 ಮಿಲಿಯನ್) ಸಣ್ಣ ಉದ್ಯಮಗಳಿಗೆ ಎಐ ತಂತ್ರಜ್ಞಾನದ ಲಾಭವನ್ನು ತಲುಪಿಸಲು ಮತ್ತು 40 ಲಕ್ಷ (4 ಮಿಲಿಯನ್) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ (AI) ಶಿಕ್ಷಣವನ್ನು ಒದಗಿಸಲು ಅಮೆಜಾನ್ ನಿರ್ಧರಿಸಿದೆ.

ಇದನ್ನೂ ಓದಿ: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಹೇಗೆ ಹಿಂದಿಕ್ಕಬಹುದು? ಸೀಕ್ರೆಟ್ ತಿಳಿಸಿದ ಟಾಟಾ ಮೋಟರ್ಸ್​ನ ಶ್ವೆನ್ ಪಟುಶ್ಕಾ

ಕ್ವಿಕ್ ಕಾಮರ್ಸ್ ಮತ್ತು ಡೆಲಿವರಿ ಜಾಲದ ವಿಸ್ತರಣೆ

ತನ್ನ ಇ-ಕಾಮರ್ಸ್ ಮತ್ತು ಇತ್ತೀಚಿನ ‘ಕ್ವಿಕ್ ಕಾಮರ್ಸ್’ (Quick Commerce) ವ್ಯವಸ್ಥೆಯನ್ನು ಬಲಪಡಿಸಲು ಈ ವರ್ಷ ಭಾರತದಾದ್ಯಂತ 20ಕ್ಕೂ ಹೆಚ್ಚು ಹೊಸ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳು (ದಾಸ್ತಾನು ಮಳಿಗೆಗಳು) ಮತ್ತು 100ಕ್ಕೂ ಹೆಚ್ಚು ಹೊಸ ಲಾಸ್ಟ್-ಮೈಲ್ ಡೆಲಿವರಿ ಸ್ಟೇಷನ್‌ಗಳನ್ನು ಅಮೆಜಾನ್ ಆರಂಭಿಸಲಿದೆ. ಇದರಿಂದ ಸಣ್ಣ ನಗರಗಳಿಗೂ ಕೆಲವೇ ನಿಮಿಷ ಅಥವಾ ಗಂಟೆಗಳಲ್ಲಿ ಡೆಲಿವರಿ ಸಾಧ್ಯವಾಗಲಿದೆ.

ಮುಂಬೈ, ಹೈದರಾಬಾದ್‌ನಲ್ಲಿ AWS ಡೇಟಾ ಸೆಂಟರ್ ವಿಸ್ತರಣೆ

ಅಮೆಜಾನ್‌ನ ಕ್ಲೌಡ್ ವಿಭಾಗವಾದ AWS (Amazon Web Services) ತನ್ನ ಮುಂಬೈ ಮತ್ತು ಹೈದರಾಬಾದ್ ರೀಜನ್‌ಗಳ ಡೇಟಾ ಸೆಂಟರ್ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದು ಭಾರತೀಯ ಸ್ಟಾರ್ಟ್‌ಅಪ್‌ಗಳು, ದೊಡ್ಡ ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅಮೆಜಾನ್‌ನ ಅತ್ಯಾಧುನಿಕ ಎಐ ಚಿಪ್ಸ್ (Trainium Chips) ಹಾಗೂ ‘ಅಮೆಜಾನ್ ಬೆಡ್‌ರಾಕ್’ (Amazon Bedrock) ನಂತಹ ಮುಂಚೂಣಿಯ ತಂತ್ರಜ್ಞಾನಗಳನ್ನು ಭಾರತದಲ್ಲೇ ಸುರಕ್ಷಿತವಾಗಿ ಬಳಸಲು ನೆರವಾಗಲಿದೆ. ಪ್ರಸ್ತುತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಗೌರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM), ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಫಿಸಿಕ್ಸ್ ವಾಲಾದಂತಹ ನೂರಾರು ಸಂಸ್ಥೆಗಳು AWS ಕ್ಲೌಡ್ ಬಳಸುತ್ತಿವೆ.

ಡೆಲಿವರಿ ಸಿಬ್ಬಂದಿಗಾಗಿ ‘ಸಮ್ಮಾನ್’ ಯೋಜನೆ

ತನ್ನ ಸರಬರಾಜು ಜಾಲದ ಬೆನ್ನೆಲುಬಾಗಿರುವ ಹತ್ತಾರು ಸಾವಿರ ಡೆಲಿವರಿ ಸಿಬ್ಬಂದಿಯ (Delivery Associates) ಕಲ್ಯಾಣಕ್ಕಾಗಿ ಅಮೆಜಾನ್ ಇಂಡಿಯಾ ‘ಸಮ್ಮಾನ್’ (Sammaan) ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಿದೆ.

ಇದರ ಅಡಿಯಲ್ಲಿ ಡೆಲಿವರಿ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ (Scholarships) ನೀಡಲಾಗುತ್ತದೆ. ಸರ್ಕಾರಿ ಸೌಲಭ್ಯಗಳು ಮತ್ತು ವಿಮಾ ಯೋಜನೆಯ (Insurance) ಸೌಲಭ್ಯ ಒದಗಿಸಲಾಗುತ್ತದೆ. ರಸ್ತೆ ಸುರಕ್ಷತಾ ಕ್ರಮಗಳ ಜೊತೆಗೆ, ಯಾವುದೇ ಕಂಪನಿಯ ಡೆಲಿವರಿ ಸಿಬ್ಬಂದಿಯೂ ಬಳಸಬಹುದಾದ ‘ಆಶ್ರಯ್’ (Ashray) ವಿಶ್ರಾಂತಿ ಕೇಂದ್ರಗಳ ಸಂಖ್ಯೆಯನ್ನು ಈ ವರ್ಷ 250ಕ್ಕೆ ವಿಸ್ತರಿಸಲಾಗುವುದು.

ಪ್ರಧಾನಿ ಮೋದಿ ವಿಷನ್‌ಗೆ ಆಂಡಿ ಜಸ್ಸಿ ಪ್ರಶಂಸೆ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆಜಾನ್ ಸಿಇಒ ಆಂಡಿ ಜಸ್ಸಿ ಶ್ಲಾಘಿಸಿದ್ದಾರೆ. “ನಾವು ಒಂದು ದಶಕದ ಹಿಂದೆ ಭಾರತಕ್ಕೆ ಬಂದೆವು. ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ದ ದೂರದೃಷ್ಟಿಯಿಂದ ನಾವು ಪ್ರೇರಿತರಾಗಿದ್ದೇವೆ. ಮುಂದಿನ 5 ವರ್ಷಗಳಲ್ಲಿ ನಾವು ಹೂಡಿಕೆ ಮಾಡುತ್ತಿರುವ $48 ಬಿಲಿಯನ್ ಹಣವು ಭಾರತದ ಸಣ್ಣ ಉದ್ಯಮಗಳ ಡಿಜಿಟಲೀಕರಣ, ಉದ್ಯೋಗ ಸೃಷ್ಟಿ ಮತ್ತು ರಫ್ತು ಹೆಚ್ಚಿಸುವ ಗುರಿಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ಭಾರತದ ಬೆಳವಣಿಗೆಯ ಪಯಣದಲ್ಲಿ ನಾವು ದೀರ್ಘಾವಧಿಯ ಪಾಲುದಾರರಾಗಲು ಬದ್ಧರಾಗಿದ್ದೇವೆ,” ಎಂದಿದ್ದಾರೆ.

ಇದನ್ನೂ ಓದಿ: ಜೊನ್ನಗಿರಿಯಲ್ಲ, ಸ್ವರ್ಣಗಿರಿ; ಆಂಧ್ರದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ; ಈ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು

ಭಾರತದಲ್ಲಿ ಅಮೇಜಾನ್ ಗ್ರಾಹಕರು ಮತ್ತು ಮಾರಾಟಗಾರರ ಸಂಖ್ಯೆ ಹೆಚ್ಚಳ

ಪ್ರಸ್ತುತ ಭಾರತದಲ್ಲಿ ಅಮೆಜಾನ್ 10 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 17 ಲಕ್ಷಕ್ಕೂ ಹೆಚ್ಚು ಮಾರಾಟಗಾರರನ್ನು ಹೊಂದಿದೆ. ವಿಶೇಷವೆಂದರೆ, ಅಮೆಜಾನ್‌ಗೆ ಬರುವ ಹೊಸ ಗ್ರಾಹಕರಲ್ಲಿ ಶೇ. 85 ರಷ್ಟು ಮಂದಿ ಮತ್ತು ಒಟ್ಟು ಆರ್ಡರ್‌ಗಳಲ್ಲಿ ಶೇ. 65 ಕ್ಕೂ ಹೆಚ್ಚು ಆರ್ಡರ್‌ಗಳು ದೇಶದ ದ್ವಿತೀಯ ಮತ್ತು ತೃತೀಯ ದರ್ಜೆಯ (Tier 2 & 3) ನಗರಗಳಿಂದ ಬರುತ್ತಿವೆ.

ಭಾರತದಲ್ಲಿ ಅಮೆಜಾನ್ ಪ್ರೈಮ್ (Amazon Prime) ಚಂದಾದಾರರ ಸಂಖ್ಯೆ ಈ ವರ್ಷ (2023ಕ್ಕೆ ಹೋಲಿಸಿದರೆ) ದುಪ್ಪಟ್ಟಾಗುವ ನಿರೀಕ್ಷೆಯಿದೆ. ಇದರಲ್ಲಿ ಶೇ. 70 ಕ್ಕಿಂತ ಹೆಚ್ಚು ಹೊಸ ಪ್ರೈಮ್ ಸದಸ್ಯರು ಮೆಟ್ರೋ ಅಲ್ಲದ ನಗರಗಳಿಂದ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚಿನ ‘ಅಮೆಜಾನ್ ಎಂಎಕ್ಸ್ ಪ್ಲೇಯರ್’ (Amazon MX Player) ಮತ್ತು ಪ್ರೈಮ್ ವಿಡಿಯೋ ವಿಲೀನದ ನಂತರ, ಇದು ಭಾರತದ ಅತ್ಯಂತ ದೊಡ್ಡ ಒಟಿಟಿ ಸ್ಟ್ರೀಮಿಂಗ್ ಸೇವೆಯಾಗಿ ಮುಂಚೂಣಿಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version