Karnataka Weather Forecast: ಜುಲೈ ಆರಂಭದವರೆಗೂ ರಾಜ್ಯದಲ್ಲಿ ಮಳೆ ಅಬ್ಬರ; ಕರಾವಳಿಯಲ್ಲಿ ವರುಣಾರ್ಭಟ – Kannada News | Karnataka Weather Forecast: Orange Alert Issued for 6 Districts on June 29; Heavy Showers Forecast Till July 1

ಬೆಂಗಳೂರು, ಜೂನ್ 25: ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿರುವ ನಡುವೆ ಜುಲೈ 1ರವರೆಗೂ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್​​ 29ರಂದು ಭಾರಿ ಪ್ರಮಾಣದಲ್ಲಿ ಮಳೆಯಾಗಲಿದ್ದು, ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಉಳಿದಂತೆ ಜೂನ್​​ 26ರಿಂದ ಜುಲೈ ಆರಂಭದವರೆಗೂ ಈ ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಗಾಳಿ ಸಹಿತ ಉತ್ತಮ ಮಳೆಯಾಗಲಿರುವ ಎಚ್ಚರಿಕೆ ನೀಡಲಾಗಿದೆ.

ಮಳೆ ಮುನ್ನೆಚ್ಚರಿಕೆ

ಮುಂದಿನ 24 ಗಂಟೆಗಳಲ್ಲಿ ಕರಾವಳಿ ಭಾಗದ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಪ್ರದೇಶಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಉಳಿದ ಪ್ರದೇಶಗಳಲ್ಲಿ ಸಾಧಾರಣ ವರ್ಷಧಾರೆ ನಿರೀಕ್ಷಿಸಲಾಗಿದೆ. ಹಾಗೆಯೇ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ. ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವೆಡೆಯೂ ಮಳೆ ಸಾಧ್ಯತೆ ಇದೆ.

ಇದನ್ನೂ ಓದಿ: ಡೆಡ್ ಸ್ಟೋರೇಜ್​ನತ್ತ ಕಬಿನಿ ಡ್ಯಾಂ; ಬೆಂಗಳೂರಿಗೆ ಕೆಆರ್​ಎಸ್​ನಿಂದ ಮಾತ್ರ ನೀರು

ಜೂನ್​​ 29ರಂದು 6 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​

ಜೂನ್​​ 29ರಂದು ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ. ಹೀಗಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Viral: ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿ ಅನುಭವ ಹಂಚಿಕೊಂಡ ಟ್ರಾವೆಲರ್ – Kannada News | Traveller praises Chennai city’s cleanliness, post goes viral

ಕೆಲವರಿಗೆ ಊರು, ದೇಶ ಸುತ್ತೋದು ಅಂದ್ರೆ ಅದೇನೋ ಖುಷಿ. ಹೀಗಾಗಿ ಸೋಲೋ ಟ್ರಿಪ್ ಎಂದು ಊರಿಂದ ಊರಿಗೆ ಸುತ್ತುತ್ತಾ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ದೆಹಲಿ (Delhi) ಮೂಲದ ಟ್ರಾವೆಲರ್ ಒಬ್ಬರು ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿದ್ದಾರೆ. ಇಲ್ಲಿನ ಜನರ ಜೀವನಶೈಲಿ ಹಾಗೂ ನಗರದ ಸ್ವಚ್ಛತೆಯನ್ನು ಮೆಚ್ಚಿಕೊಂಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅವಿಜೀತ್ (Avijeet) ತಮ್ಮ ಎಕ್ಸ್ ಖಾತೆಯಲ್ಲಿಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗಷ್ಟೇ ಚೆನ್ನೈಗೆ ಬಂದಿಳಿದಿದ್ದೇನೆ. ಹಾಗೂ ಇಲ್ಲಿ ವಿಷಯಗಳು ದೆಹಲಿಗಿಂತ ಭಿನ್ನವಾಗಿವೆ ಎಂದು ನಾನು ಹೇಳಲೇಬೇಕು. ನನ್ನ ಜೀವನದ 27 ವರ್ಷಗಳ ಜರ್ನಿಯಲ್ಲಿ ನಾನು ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಬರುತ್ತಿದ್ದೇನೆ. ಇಲ್ಲಿನ ಪ್ರತಿಯೊಂದು ಅನುಭವವೂ ಒಳ್ಳೆಯದು, ಕೆಟ್ಟದುಗಳೊಂದಿಗೆ ನನಗೆ ಹೊಸದಾಗಿರುತ್ತದೆ. ನನ್ನ ಮೊದಲ ಅವಲೋಕನವೆಂದರೆ, ಅಸ್ತವ್ಯಸ್ತವಲ್ಲದ ಜನರು ಎಂದು ಬರೆದಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇಲ್ಲಿ ಹೆಚ್ಚು ಜನಸಂದಣಿ ಇದ್ದರೂ, ಎಲ್ಲರೂ ನಿರಾಳವಾಗಿದ್ದಾರೆ, ಒಬ್ಬರನ್ನೊಬ್ಬರು ಅಡ್ಡಲಾಗಿ ಹೋಗಲು ಪ್ರಯತ್ನಿಸದೆ ಒಂದೇ ಲೈನ್‌ನಲ್ಲಿ ನಿಧಾನವಾಗಿ ಹೋಗುತ್ತಾರೆ. ನಾನು ನಿನ್ನೆ ಬೆಳಿಗ್ಗೆ ಇದ್ದ ಭೋಪಾಲ್‌ಗಿಂತ ಈ ರೈಲ್ವೆ ನಿಲ್ದಾಣದ ಒಳಗೆ ಹಾಗೂ ಹೊರಗೆ ಸ್ವಚ್ಛವಾಗಿದೆ. ಇಲ್ಲಿನ ಆರಂಭಿಕ ಅನುಭವವು ತಾವು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ತಂಗಿ, ನಂಗೂ ತಂಗಿ ಇದ್ದಂತೆ; ಕ್ಯಾಬ್‌ ಹತ್ತಿದ ಯುವತಿಯ ಅಣ್ಣನಿಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟ ಕ್ಯಾಬ್‌ ಡ್ರೈವರ್

ಈ ಪೋಸ್ಟ್ ಒಂದು ಲಕ್ಷದ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಾನು ಮೊದಲ ಬಾರಿಗೆ ಚೆನ್ನೈಗೆ ಭೇಟಿ ನೀಡಿದಾಗ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ರುಚಿಕರ ಆಹಾರ, ಉತ್ತಮ ಮೂಲಸೌಕರ್ಯ. ಬೇರೆ ನಗರದ ಮೆಟ್ರೋ ಸೇವೆಗಳಿಗಿಂತ ಇಲ್ಲಿನ ಮೆಟ್ರೋ ವ್ಯವಸ್ಥೆಗಳಿಗಿಂತ ಹೆಚ್ಚು ಸಂಘಟಿತ ಹಾಗೂ ಶಿಸ್ತುಬದ್ಧವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಚೆನ್ನೈ ನಗರವು ಅಭಿವೃದ್ಧಿ ಹೊಂದಿದ್ದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಭಾರತದ ನಿಜವಾದ ಅಭಿವೃದ್ಧಿ ಹೊಂದಿದ ಭಾಗಕ್ಕೆ ಸ್ವಾಗತ. ನೀವು ಉತ್ತಮ ವಾಸ್ತವ್ಯವನ್ನು ಹೊಂದಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ಚೆನ್ನೈನ ಪಾಕಪದ್ಧತಿಗಳನ್ನು ಸಹ ಪ್ರಯತ್ನಿಸಿ. ಖಂಡಿತ ಇಲ್ಲಿನ ರುಚಿಗಳನ್ನು ಇಷ್ಟಪಡುತ್ತೀರಿ ಎಂದು ನನಗೆ ಖಚಿತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇತನ್ ಕೊಲೆಗೂ ಮುನ್ನ ಲವರ್ ಜೊತೆ ಕೆಫೆಯಲ್ಲಿ ಕುಳಿತು ಪ್ಲಾನ್ ಮಾಡಿದ್ದಳು ಸಿಯಾ ಗೋಯಲ್! – Kannada News | Siya Goyal and her Lover Chetan planned fiance Ketan’s Murder at Pune Cafe watch cctv video

ಪುಣೆ, ಜೂನ್ 25: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 25 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal Death) ಅವರ ಭೀಕರ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಅತ್ಯಂತ ಆಘಾತಕಾರಿ ಮತ್ತು ಸಿನಿಮೀಯ ಶೈಲಿಯ ವಿವರಗಳು ಹೊರಬಂದಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರೇಮಿ ಚೇತನ್ ಚೌಧರಿ ಜೊತೆ ಸೇರಿ ಪುಣೆಯ ಕೆಫೆಯೊಂದರಲ್ಲಿ ಕಾಫಿ ಡೇಟ್ ಮಾಡುತ್ತಾ ಈ ಕೊಲೆಗೆ ಪಕ್ಕಾ ಪ್ಲಾನ್ ಮಾಡಿದ್ದಳು ಎಂಬುದು ಸಿಸಿಟಿವಿ ದೃಶ್ಯಾವಳಿ ಹಾಗೂ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.

ಕೇತನ್​ನ ಕೊಲೆಗೆ ಜೂನ್ 17ರಂದು ಪುಣೆಯ ಕೆಫೆಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಸಂಚು ರೂಪಿಸಿದ್ದರು. ಇದಾದ ಮರುದಿನವೇ (ಜೂನ್ 18) ಲೋಹಗಢ್ ಕೋಟೆಯ ಮೇಲೆ ಕರೆದುಕೊಂಡು ಹೋಗಿ, ಕಂದಕಕ್ಕೆ ತಳ್ಳಿ ಕೇತನ್ ಅವರನ್ನು ಕೊಲೆ ಮಾಡಲಾಗಿತ್ತು.

ಕೆಫೆ ಡೇಟ್‌ನಲ್ಲೇ ಕೊಲೆಗೆ ಸಂಚು:

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಜೂನ್ 17ರಂದು ಪುಣೆಯ ಪ್ರಸಿದ್ಧ ಕೆಫೆಯೊಂದರಲ್ಲಿ ಭೇಟಿಯಾಗಿದ್ದರು. ಇದು ಹೊರನೋಟಕ್ಕೆ ಸಾಮಾನ್ಯ ಪ್ರೇಮಿಗಳ ಕಾಫಿ ಡೇಟ್‌ನಂತೆ ಕಂಡರೂ, ಆ ಸಮಯದಲ್ಲಿ ಅವರಿಬ್ಬರೂ ಚರ್ಚಿಸುತ್ತಿದ್ದುದು ಕೇತನ್ ಅಗರ್ವಾಲ್ ಅವರನ್ನು ಹೇಗೆ ಕೊಲ್ಲಬೇಕು ಎಂಬುದರ ಬಗ್ಗೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರೂ ಕೆಫೆಯಲ್ಲಿ ಕುಳಿತು ಮಾತನಾಡುತ್ತಿರುವ ಸಿಸಿಟಿವಿ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಕೋಟೆಯಿಂದ ಕೇತನ್​ನ ತಳ್ಳುವ ಮುನ್ನ, ಕೊಲೆಯನ್ನು ಅಪಘಾತ ಎಂದು ಬಿಂಬಿಸುವುದು ಹೇಗೆ? ಎಂದು ಸರ್ಚ್​ ಮಾಡಿದ್ದ ಸಿಯಾ

ಯೂಟ್ಯೂಬ್ ನೋಡಿ ಸ್ಥಳ ಫೈನಲ್:

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಕೊಲೆ ಸಂಚಿನಲ್ಲಿ ಸಿಯಾ ಗೋಯಲ್ ಪ್ರಮುಖ ಪಾತ್ರ ವಹಿಸಿದ್ದಳು. ಸಿಯಾ ತನ್ನ ಪ್ರೇಮಿ ಚೇತನ್ ಜೊತೆ ಲೋಹಗಢ್ ಕೋಟೆಯ ಸಂಪೂರ್ಣ ಭೌಗೋಳಿಕ ಮಾಹಿತಿಯನ್ನು ಹಂಚಿಕೊಂಡಿದ್ದಳು. ಆ ಕೋಟೆಯ ಯಾವ ಭಾಗದಿಂದ ತಳ್ಳಿದರೆ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ ಎಂಬುದನ್ನು ಪತ್ತೆಹಚ್ಚಲು ಅವರಿಬ್ಬರೂ ಕೆಫೆಯಲ್ಲೇ ಕುಳಿತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಜಾಗವನ್ನು ಫೈನಲ್ ಮಾಡಿದ್ದರು.

ಇದನ್ನೂ ಓದಿ: ನನಗೆ ವಿಷಯ ತಿಳಿಸಿದ್ರೆ ಮದುವೆಯನ್ನೇ ಕ್ಯಾನ್ಸಲ್ ಮಾಡ್ತಿದ್ದೆ, ಆದ್ರೆ ನನ್ನ ಮಗನನ್ನು ಸಿಯಾ ಕೊಂದಿದ್ಯಾಕೆ? ಕೇತನ್ ತಂದೆ ಪ್ರಶ್ನೆ

ಮರುದಿನವೇ ಪ್ಲಾನ್ ಜಾರಿ:

ಕೆಫೆಯಲ್ಲಿ ಸ್ಕೆಚ್ ಹಾಕಿದ ಮರುದಿನವೇ, ಅವರ ಪ್ಲಾನ್ ಪ್ರಕಾರ ಕೇತನ್ ಅಗರ್ವಾಲ್ ಅವರನ್ನು ಲೋಹಗಢ್ ಕೋಟೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಕೇತನ್ ಅವರನ್ನು ಆಳವಾದ ಕಂದಕಕ್ಕೆ ತಳ್ಳಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈಗಾಗಲೇ ಪೊಲೀಸರು ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿಯನ್ನು ಬಂಧಿಸಿದ್ದು, ಕೆಫೆಯ ಸಿಸಿಟಿವಿ ದೃಶ್ಯಾವಳಿ ಹಾಗೂ ಅವರ ಮೊಬೈಲ್ ಹಿಸ್ಟರಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:22 pm, Thu, 25 June 26

Source link

ಮಧ್ಯಾಹ್ನ ಆದ್ರೆ ಸಾಕು ಬಾರ್, ಡಾಬಾಗಳೇ ಇವ್ರ ಅಡ್ಡ! ಅಧಿಕಾರಿ, ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ – Kannada News | KBJNL Officials Accused of Drinking on Duty in Alamel, Public Seeks Action

ವಿಜಯಪುರ, ಜೂನ್​​ 25: ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಕೆಬಿಜೆಎನ್‌ಎಲ್ ಹೊಲಗಾಲುವೆ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲೇ ಮದ್ಯಪಾನ ಪಾರ್ಟಿ (Alcohol party) ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಲಮೇಲ ಪಟ್ಟಣದ ಹೊರವಲಯದ ಡಾಬಾವೊಂದರಲ್ಲಿ ಅವರು ಮದ್ಯಪಾನ ಮಾಡುತ್ತಿರುವುದನ್ನು ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕರ್ತವ್ಯ ವೇಳೆಯೇ ಪಾರ್ಟಿ

ಹೊಲಗಾಲುವೆ ವಿಭಾಗದ ಮ್ಯಾನೇಜರ್ ಶಶಿಧರ್ ಚೌಹಾನ್, ದ್ವಿತೀಯ ದರ್ಜೆ ಸಹಾಯಕ ಮುರಳಿದರ್ ಕುಲಕರ್ಣಿ ಹಾಗೂ ಸಿಪಾಯಿ ಶಂಕರಯ್ಯ ಕರ್ತವ್ಯದ ವೇಳೆಯಲ್ಲೇ ಮದ್ಯಪಾನ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಆರೋಪದ ಪ್ರಕಾರ, ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಮಧ್ಯಾಹ್ನ ಕಚೇರಿಗೆ ಗೈರಾಗುತ್ತಿದ್ದು, ಬಾರ್‌ ಹಾಗೂ ಡಾಬಾಗಳಲ್ಲಿ ಸಮಯ ಕಳೆಯುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೌಡಿ ಶೀಟರ್ ಎಣ್ಣೆ ಪಾರ್ಟಿ!

ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯದ ವೇಳೆಯಲ್ಲೇ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖೆ ಸಮಗ್ರ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಹಾಸ್ಟೆಲ್​​ನಲ್ಲೇ ವಿದ್ಯಾರ್ಥಿನಿಯರ ಎಣ್ಣೆ ಪಾರ್ಟಿ

ಕಲಬುರಗಿ ಜಿಲ್ಲೆಯ ಆಳದ ತಾಲೂಕಿನ‌ ಕಡಗಂಚಿ ಗ್ರಾಮದ ದೇವರಾಜ್ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಹಾಸ್ಟೆಲ್​​ನಲ್ಲಿ ತಡರಾತ್ರಿವರೆಗೂ ವಿದ್ಯಾರ್ಥಿನಿಯರು ಬಿಂದಾಸ್ ಆಗಿ ಹುಡುಗರ ಜೊತೆ ಎಣ್ಣೆ ಪಾರ್ಟಿ ಮಾಡಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು.

ಹಣಕ್ಕೆ ಡಿಮ್ಯಾಂಡ್: ವಾರ್ಡನ್ ಆಡಿಯೋ ವೈರಲ್​ 

ಕಡಗಂಚಿ ಗ್ರಾಮದ ಬಿಸಿಎಂ ಹಾಸ್ಟೆಲ್​​ನಲ್ಲಿ ಹೇಳುವವರು, ಕೇಳುವವರಿಲ್ಲದಂತಾಗಿತ್ತು. ಈ ಹಾಸ್ಟೆಲ್​ನಲ್ಲಿರುವ ವಿದ್ಯಾರ್ಥಿನಿಯರು ಬಿಂದಾಸ್ ಆಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆದರೆ ದುರಂತ ಅಂದರೆ ಹಾಸ್ಟೆಲ್​ಗೆ ಎಣ್ಣೆ ತಂದು ಹುಡುಗರ ಜೊತೆ ಬಿಂದಾಸ್ ಆಗಿ ಪಾರ್ಟಿ ಮಾಡುತ್ತಿರುವುದು ವಾರ್ಡನ್ ಆಗಲಿ, ತಾಲೂಕು ಅಧಿಕಾರಿಗಳಾಗಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಎಣ್ಣೆ ಪಾರ್ಟಿಯ ವಿಚಾರ, ಹುಡುಗರು ಬಂದು ಹೋಗುವ ವಿಚಾರವನ್ನ ಮುಚ್ಚಿ ಹಾಕುವುದಕ್ಕೆ ವಾರ್ಡನ್ ಹುಡುಗಿಯರ ಬಳಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಆಡಿಯೋ ಕೂಡ ವೈರಲ್ ಆಗಿತ್ತು. ಇದನ್ನು ನೋಡಿದರೆ ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಬಹಳ ಸ್ಪಷ್ಟವಾಗಿ ಕಂಡುಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವೆನೆಜುವೆಲಾದಲ್ಲಿ ಪ್ರಬಲ ಭೂಕಂಪಗಳು; 164 ಜನ ಸಾವು, 971 ಜನರಿಗೆ ಗಂಭೀರ ಗಾಯ – Kannada News | Venezuela earthquakes At least 164 dead and 971 people injured

ಕರಾಕಸ್, ಜೂನ್ 25: ದಕ್ಷಿಣ ಅಮೆರಿಕಾದ ದೇಶವಾದ ವೆನೆಜುವೆಲಾದಲ್ಲಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಸರಣಿ ಪ್ರಬಲ ಭೂಕಂಪಗಳ (Earthquake) ಪರಿಣಾಮವಾಗಿ ಕನಿಷ್ಠ 164 ಜನರು ಸಾವನ್ನಪ್ಪಿದ್ದಾರೆ ಮತ್ತು 971ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ನೂರಾರು ಜನರು ಸಿಲುಕಿರುವ ಆತಂಕ ಎದುರಾಗಿದೆ.

ಪ್ರಬಲ ಭೂಕಂಪದ ಕಂಪನಕ್ಕೆ ರಾಜಧಾನಿ ಕರಾಕಸ್ ಸೇರಿದಂತೆ ಪ್ರಮುಖ ನಗರಗಳ ಬಹು ಅಂತಸ್ತಿನ ಕಟ್ಟಡಗಳು, ವಸತಿ ಗೃಹಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಕ್ಷಣಾರ್ಧದಲ್ಲಿ ಕುಸಿದು ಬಿದ್ದಿವೆ. ರಸ್ತೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ಮತ್ತು ಸಂವಹನ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ:

ಸ್ಥಳೀಯ ವಿಪತ್ತು ನಿರ್ವಹಣಾ ಪಡೆಗಳು, ಸೇನೆ ಮತ್ತು ಸ್ವಯಂಸೇವಕರು ಜಂಟಿಯಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಆಸ್ಪತ್ರೆಗಳು ಹೌಸ್‌ಫುಲ್:

900ಕ್ಕೂ ಅಧಿಕ ಜನರು ಗಾಯಗೊಂಡಿರುವುದರಿಂದ ಸ್ಥಳೀಯ ಆಸ್ಪತ್ರೆಗಳಲ್ಲಿ ಬೆಡ್‌ಗಳು ಮತ್ತು ವೈದ್ಯಕೀಯ ಸಾಮಗ್ರಿಗಳ ಕೊರತೆ ಎದುರಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Telangana Earthquake: ತೆಲಂಗಾಣದಲ್ಲಿ 3.8 ತೀವ್ರತೆಯ ಭೂಕಂಪ

ಭೂಕಂಪ ಪೀಡಿತ ವೆನೆಜುವೆಲಾಕ್ಕೆ ನೆರೆಹೊರೆಯ ದೇಶಗಳು ಹಾಗೂ ಜಾಗತಿಕ ಸಮುದಾಯವು ತುರ್ತು ರಕ್ಷಣಾ ಸಾಮಗ್ರಿಗಳು, ವೈದ್ಯಕೀಯ ತಂಡಗಳು ಮತ್ತು ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲು ಮುಂದಾಗಿವೆ. ದೇಶದ ಇತಿಹಾಸದಲ್ಲೇ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ ಇದಾಗಿದೆ ಎಂದು ಹೇಳಲಾಗುತ್ತಿದ್ದು, ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದೆ.

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ, ವೆನೆಜುವೆಲಾದ ರಾಜಧಾನಿ ಕರಾಕಸ್‌ನಿಂದ ಸುಮಾರು 1,700 ಕಿಲೋಮೀಟರ್ ದೂರದಲ್ಲಿರುವ ಬ್ರೆಜಿಲ್‌ನ ಅಮೆಜಾನ್ ಪ್ರದೇಶದವರೆಗೂ ಕಂಪನದ ಅನುಭವವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಕಟ್ಟಡಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನಿರೀಕ್ಷಣಾ ಜಾಮೀನು ಕೊಟ್ಟ ವಿಧಾನ ಸರಿಯಲ್ಲ: ವಚನಾನಂದ ಸ್ವಾಮೀಜಿಗೆ ಹೈಕೋರ್ಟ್​ ಬಿಗ್ ಶಾಕ್ – Kannada News | Vachanananda Swamiji anticipatory bail Canceled By Karnataka High Court In POCSO Case)

ಬೆಂಗಳೂರು/ದಾವಣಗೆರೆ, (ಜೂನ್ 25): ಪೋಕ್ಸೋ ಪ್ರಕರಣಕ್ಕೆ (POCSO Case) ನಿರೀಕ್ಷಣಾ ಜಾಮೀನು (anticipatory bail) ಪಡೆದಿದ್ದ ವಚನಾನಂದ ಸ್ವಾಮೀಜಿಗೆ (Vachanananda Swamiji) ಹೈಕೋರ್ಟ್  ( karnataka High Court) ಬಿಗ್ ಶಾಕ್ ಕೊಟ್ಟಿದೆ. ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದಶ್ರೀ ನಿರೀಕ್ಷಣಾ ಜಾಮೀನು ಪಡೆದಿದ್ದು, ಇದನ್ನು ಪ್ರಶ್ನಿಸಿ ಬಾಲಕನ ತಾಯಿ ಹೈಕೋರ್ಟ್​ ಮೆಟ್ಟಿಲೇರಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​​​, ಕೇಸ್ ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿದ್ದು ಸರಿಯಾದ ಕ್ರಮವಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದು, ನಿರೀಕ್ಷಣಾ ಜಾಮೀನು ರದ್ದುಪಡಿಸಿ ನ್ಯಾಯಮೂರ್ತಿ ಎಂ‌.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಆದರೆ, ರೆಗ್ಯುಲರ್ ಜಾಮೀನು ಅರ್ಜಿ ಸಲ್ಲಿಸಲು 3 ವಾರಗಳ ಕಾಲಾವಕಾಶ ನೀಡಿದ್ದು, ಅಲ್ಲಿಯವರೆಗೂ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದೆ. ಹೀಗಾಗಿ ಸ್ವಾಮೀಜಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್​​​ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ. ಆದರೂ ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ವಚನಾನಂದ ಸ್ವಾಮೀಜಿಗೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ಮುಂದೂಡಿತ್ತು. ಆದ್ರೆ, ಇಂದಿನ ವಿಚಾರಣೆಯಲ್ಲಿ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:41 pm, Thu, 25 June 26

Source link

ಮೈತ್ರಿ ಕಚೇರಿಯಲ್ಲಿ ಒಂದಾದ ‘7000 ಕೋಟಿ’ ನಿರ್ದೇಶಕರು: ದೊಡ್ಡ ಸ್ಕೆಚ್? – Kannada News | Super star directors meeting at Mythri movie Makers office

ಮೈತ್ರಿ ಮೂವಿ ಮೇಕರ್ಸ್ (Mythri Movie Makers), ತೆಲುಗಿನ ಬಲು ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಸಿನಿಮಾ ನಿರ್ಮಾಣಕ್ಕೆ ಇಳಿದು ಹೆಚ್ಚು ವರ್ಷವಾಗಿಲ್ಲವಾದರೂ ಒಂದರ ಹಿಂದೊಂದು ಭಾರಿ ದೊಡ್ಡ ಬಜೆಟ್​​ನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಯಾರೂ ಊಹಿಸದ ಕಾಂಬಿನೇಷನ್​​ಗಳನ್ನು ತೆರೆಗೆ ತರುತ್ತಾ, ಪ್ರತಿಭಾವಂತ ನಿರ್ದೇಶಕರು, ಸ್ಟಾರ್ ನಟರ ಮೇಲೆ ಬಂಡವಾಳ ಹಾಕುತ್ತಾ, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಮೈತ್ರಿ ನೀಡುತ್ತಿದೆ. ಇದೀಗ ಮೈತ್ರಿ ಕಚೇರಿಯಲ್ಲಿ ಮೀಟಿಂಗ್ ಒಂದು ನಡೆದಿದ್ದು, ಬಲು ದೊಡ್ಡ ‘ಸ್ಕೆಚ್’ ಒಂದು ಸಿದ್ಧವಾಗಿದೆ.

ತೆಲುಗಿನ ಹಾಸ್ಯನಟ ನಿವಿನ್ ಪೋಲಿಶೆಟ್ಟಿ, ಇಂದು (ಜೂನ್ 25) ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಖುದ್ದು ಅವರೇ ಹೇಳಿರುವಂತೆ, ‘ಈ ವಿಡಿಯೋ ದೇಶದ ಅತ್ಯಂತ ದುಬಾರಿ ವಿಡಿಯೋ’. ಯಾಕೆಂದರೆ ಆ ವಿಡಿಯೋನಲ್ಲಿ ದೇಶದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ನಿರ್ದೇಶಕರುಗಳು ಇದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಇನ್ನೂ ಹಲವಾರು ಸ್ಟಾರ್ ಸಿನಿಮಾ ನಿರ್ದೇಶಕರು ಸೇರಿದ್ದರು.

ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಲೋಕೇಶ್ ಕನಗರಾಜ್, ‘ಪುಷ್ಪ’ ನಿರ್ದೇಶಕ ಸುಕುಮಾರ್, ‘ಗಬ್ಬರ್ ಸಿಂಗ್’ ನಿರ್ದೇಶಕ ಹರೀಶ್ ಶಂಕರ್ ಅವರುಗಳು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮೈತ್ರಿ ಮೂವಿ ಮೇಕರ್ಸ್​​ನ ನಿರ್ಮಾಪಕ ನವೀನ್ ಯೆರಿನೇನಿ ಅವರು ಸಹ ಹಾಜರಿದ್ದರು. ವಿಶೇಷವೆಂದರೆ ಈ ಸಭೆಯಲ್ಲಿ ಯುವ ನಟ ನವೀನ್ ಪೋಲಿಶೆಟ್ಟಿ ಸಹ ಹಾಜರಿದ್ದರು. ವಿಡಿಯೋ ಮಾಡಿರುವ ನವೀನ್, ಪೋಲಿಶೆಟ್ಟಿ, ಪ್ರತಿಯೊಬ್ಬ ನಿರ್ದೇಶಕರ ಸಿನಿಮಾಗಳು ಗಳಿಸಿರುವ ಬಾಕ್ಸ್ ಲೆಕ್ಕಾಚಾರ ನೀಡಿದ್ದಾರೆ.

ಇದನ್ನೂ ಓದಿ:ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್

‘ಪುಷ್ಪ’, ‘ಪುಷ್ಪ 2’ 2000 ಕೋಟಿಗೂ ಹೆಚ್ಚು, ‘ಕಾಂತಾರ’ ಮತ್ತು ‘ಕಾಂತಾರ 2’ ಸಹ 2000 ಕೋಟಿಗೂ ಹೆಚ್ಚು, ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳು ಸಹ 2000 ಕೋಟಿಗೂ ಹೆಚ್ಚು, ಇನ್ನು ಲೋಕೇಶ್ ಅವರ ‘ವಿಕ್ರಂ’ ಇನ್ನಿತರೆ ಕೆಲ ಸಿನಿಮಾಗಳು ಸುಮಾರು 1000 ಕೋಟಿ ಗಳಿಸಿವೆ. ಅಲ್ಲಿಗೆ ಆ ಸಭೆಯಲ್ಲಿ 7000 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿರುವ ದೊಡ್ಡ ಸಿನಿಮಾಗಳ ನಿರ್ದೇಶಕರು ಒಟ್ಟಿಗೆ ಸೇರಿದ್ದರು. ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಮೈತ್ರಿ ಮೂವಿ ಮೇಕರ್ಸ್ ಅವರು ಸಭೆಯಲ್ಲಿ ಹಾಜರಿದ್ದ ಎಲ್ಲ ನಿರ್ದೇಶಕರುಗಳ ಮೈತ್ರಿ ಮೂವಿ ಮೇಕರ್ಸ್​​ಗೆ ಸಿನಿಮಾ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲರನ್ನೂ ಒಟ್ಟಿಗೆ ಸೇರಿಸಲಾಗಿತ್ತು ಎನ್ನಲಾಗಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಅಧಿಕೃತ ಘೊಷಣೆ ಸಹ ಹೊರಬೀಳಲಿದೆ.

ಅಸಲಿಗೆ ರಿಷಬ್ ಶೆಟ್ಟಿ ಈಗಾಗಲೇ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಸಿನಿಮಾನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ರಿಷಬ್ ನಟಿಸುತ್ತಿರುವ ‘ಜೈ ಹನುಮಾನ್’ ಸಿನಿಮಾಕ್ಕೆ ಮೈತ್ರಿ ಅವರೇ ನಿರ್ಮಾಪಕರು. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶಿಸಿ, ಅಲ್ಲು ಅರ್ಜುನ್ ನಟಿಸಲಿರುವ ಹೊಸ ಸಿನಿಮಾಕ್ಕೂ ಮೈತ್ರಿ ಅವರದ್ದೇ ಬಂಡವಾಳ. ಸುಕುಮಾರ್ ನಿರ್ದೇಶಿಸಿ, ರಾಮ್ ಚರಣ್ ನಟಿಸಲಿರುವ ಹೊಸ ಸಿನಿಮಾಕ್ಕೂ ಮೈತ್ರಿ ಅವರದ್ದೆ ಬಂಡವಾಳ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:31 pm, Thu, 25 June 26

Source link

ವಾಹನ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಹೇಗೆ ಹಿಂದಿಕ್ಕಬಹುದು? ಸೀಕ್ರೆಟ್ ತಿಳಿಸಿದ ಟಾಟಾ ಮೋಟರ್ಸ್​ನ ಶ್ವೆನ್ ಪಟುಶ್ಕಾ – Kannada News | India can overtake China by shifting to AI defined vehicles, says Tata Motors PV CTO Sven Patuschka

ಬೆಂಗಳೂರು, ಜೂನ್ 25: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಅವಕಾಶ ಮತ್ತು ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಟಾಟಾ ಮೋಟರ್ಸ್​ನ ಟಾಪ್ ಎಕ್ಸಿಕ್ಯೂಟಿವ್​ವೊಬ್ಬರು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಇಟಿಆಟೋಟೆಕ್ ಎಸ್‌ಡಿವಿ ಶೃಂಗಸಭೆ’ಯಲ್ಲಿ (ETAutoTech SDV Summit) ಮಾತನಾಡಿದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವಾಹನ ವಿಭಾಗದ ಸಿಟಿಒ ಆದ ಸ್ವೆನ್ ಪಟುಶ್ಕಾ (Sven Patuschka) ಅವರು ಮಾತನಾಡುತ್ತಾ ಈ ಆಶಾವಾದ ತುಂಬಿದ್ದಾರೆ. ಸಾಫ್ಟ್​​ವೇರ್ ಆಧಾರಿತ ವಾಹನಗಳಲ್ಲಿ (Software-Defined Vehicles – SDVs) ಚೀನಾ ಹಾದಿಯಲ್ಲೇ ಭಾರತ ಸಾಗಬೇಕಿಲ್ಲ. ಬದಲಿಗೆ, ತನ್ನಲ್ಲಿರುವ ಅಪಾರ ಸಾಫ್ಟ್‌ವೇರ್ ಪ್ರತಿಭೆ, ಬಲಿಷ್ಠ ಡಿಜಿಟಲ್ ಇಕೋಸಿಸ್ಟಂ ಮತ್ತು ದೇಶದ ಸವಾಲಿನ ಸಂಚಾರ ವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡು, ನೇರವಾಗಿ ‘ಎಐ-ಚಾಲಿತ ವಾಹನಗಳ’ (AI-Defined Vehicles) ಯುಗಕ್ಕೆ ಜಿಗಿಯಬಹುದು. ಈ ಮೂಲಕ ವಾಹನ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕುವ ಸುವರ್ಣ ಅವಕಾಶ ಭಾರತಕ್ಕಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಆಟೋಮೊಬೈಲ್ ಉದ್ಯಮವು ಪ್ರಸ್ತುತ ಹೊಸದೊಂದು ಮಹತ್ವದ ಬದಲಾವಣೆಯ ಹಂತದಲ್ಲಿದೆ. ಇನ್ಮುಂದೆ ಕೇವಲ ಹಾರ್ಸ್‌ಪವರ್, ಮೈಲೇಜ್ ಅಥವಾ ಬೆಲೆ ಮಾತ್ರವಲ್ಲದೆ, ವಾಹನಗಳ ಒಳಗಿರುವ ಬುದ್ಧಿವಂತಿಕೆ (Intelligence) ಹಾಗೂ ಕೃತಕ ಬುದ್ಧಿಮತ್ತೆ (AI) ಪ್ರಮುಖ ಆದ್ಯತೆಯಾಗಲಿದೆ ಎಂದಿದ್ದಾರೆ.

“ನಾವು ಚೀನಾವನ್ನು ಹಿಂಬಾಲಿಸುವ ಅಗತ್ಯವಿಲ್ಲ”

“ಭಾರತವು ಚೀನಾದ ಮಾದರಿಯನ್ನು ನಕಲು ಮಾಡಬೇಕಾಗಿಲ್ಲ. ನಾವು ನೇರವಾಗಿ ಮುಂದಿನ ಹಂತಕ್ಕೆ ಜಿಗಿದು ನಮ್ಮದೇ ಆದ ಹೊಸ ಹಾದಿಯನ್ನು ಸೃಷ್ಟಿಸಬಹುದು,” ಎಂದು ಪಟುಶ್ಕಾ ಹೇಳಿದ್ದಾರೆ. ಭಾರತದ ವೈವಿಧ್ಯಮಯ ರಸ್ತೆಗಳು ಮತ್ತು ಸವಾಲಿನ ಸಾರಿಗೆ ವ್ಯವಸ್ಥೆಯು ಮುಂದಿನ ಪೀಳಿಗೆಯ ಆಟೋಮೋಟಿವ್ ಎಐ (Automotive Intelligence) ತಂತ್ರಜ್ಞಾನವನ್ನು ತರಬೇತುಗೊಳಿಸಲು ಮತ್ತು ಪರೀಕ್ಷಿಸಲು ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ” ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ: ಜೊನ್ನಗಿರಿಯಲ್ಲ, ಸ್ವರ್ಣಗಿರಿ; ಆಂಧ್ರದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ; ಈ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು

ಸಾಫ್ಟ್‌ವೇರ್‌ನಿಂದ ‘ಎಐ’ ಯುಗದ ಕಡೆಗೆ ವಾಹನಗಳು

“ಆಟೋಮೊಬೈಲ್ ಉದ್ಯಮವು ಕೇವಲ ಸಾಫ್ಟ್‌ವೇರ್-ಚಾಲಿತ ವಾಹನಗಳ (ಎಸ್‌ಡಿವಿ) ಹಂತವನ್ನು ದಾಟಿ, ಈಗ ಎಐ-ಚಾಲಿತ ವಾಹನಗಳ ಕಡೆಗೆ ಹೆಜ್ಜೆ ಇಡುತ್ತಿದೆ. ಸಾಫ್ಟ್‌ವೇರ್ ವಾಹನಗಳು ಕೇವಲ ಓವರ್-ದಿ-ಏರ್ (OTA) ಅಪ್ಡೇಟ್‌ಗಳಿಗೆ ಸೀಮಿತವಾಗಿದ್ದರೆ, ಎಐ-ಚಾಲಿತ ವಾಹನಗಳು ಸಂದರ್ಭಗಳನ್ನು ಅರ್ಥಮಾಡಿಕೊಳ್ಳಬಲ್ಲವು, ಚಾಲಕನ ಹವ್ಯಾಸಗಳನ್ನು ಕಲಿಯಬಲ್ಲವು ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ನಿರಂತರವಾಗಿ ಬದಲಾಗಬಲ್ಲವು. “ಕಳೆದ ಒಂದು ಶತಮಾನದಿಂದ ನಾವು ಮನುಷ್ಯರು ಅರ್ಥಮಾಡಿಕೊಳ್ಳಬೇಕಾದ ಕಾರುಗಳನ್ನು ತಯಾರಿಸಿದ್ದೇವೆ. ಆದರೆ ಇಂದು ನಾವು ಮನುಷ್ಯರನ್ನು ಅರ್ಥಮಾಡಿಕೊಳ್ಳುವ ಕಾರುಗಳನ್ನು ತಯಾರಿಸಲು ಆರಂಭಿಸಿದ್ದೇವೆ,” ಎಂದು ಅವರು ಬಣ್ಣಿಸಿದ್ದಾರೆ.

ಭಾರತಕ್ಕಿರುವ ವಿಶಿಷ್ಟ ಅನುಕೂಲಗಳು

ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ, ಭಾರತದ ರಸ್ತೆ ಮೂಲಸೌಕರ್ಯ, ಟ್ರಾಫಿಕ್ ಶೈಲಿ, ಭಾಷೆಗಳು ಮತ್ತು ಗ್ರಾಹಕರ ಬಳಕೆಯ ವಿಧಾನಗಳು ವಿಭಿನ್ನ ಹಾಗೂ ಸಂಕೀರ್ಣವಾಗಿವೆ. ಇದನ್ನು ಒಂದು ಸವಾಲಾಗಿ ನೋಡುವ ಬದಲು ಭಾರತದ ತಾಂತ್ರಿಕ ಶಕ್ತಿಯಾಗಿ ಬಳಸಿಕೊಳ್ಳಬೇಕು. ಭಾರತದ ಇಂತಹ ಅನಿಶ್ಚಿತ ರಸ್ತೆ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ತರಬೇತಿ ಪಡೆದ ಎಐ ವ್ಯವಸ್ಥೆಗಳು, ಜಾಗತಿಕ ಮಟ್ಟದಲ್ಲೂ ಅತ್ಯಂತ ಸುಲಭವಾಗಿ ಯಶಸ್ವಿಯಾಗಬಲ್ಲವು ಎಂಬುದು ಸ್ವೆನ್ ಪಟುಶ್ಕಾ ಅವರ ಅನಿಸಿಕೆ.

ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳು

“ಇಂದಿನ ಗ್ರಾಹಕರು ತಮ್ಮ ವಾಹನಗಳಲ್ಲಿ ಕನೆಕ್ಟೆಡ್ ಸೇವೆಗಳು, ವಾಯ್ಸ್ ಇಂಟರ್‌ಫೇಸ್ (ಧ್ವನಿ ನಿಯಂತ್ರಣ) ಮತ್ತು ನಿರಂತರವಾದ ಫೀಚರ್ ಅಪ್‌ಗ್ರೇಡ್‌ಗಳನ್ನು ನಿರೀಕ್ಷಿಸುತ್ತಿದ್ದಾರೆ. “ಈಗ ವಾಹನಗಳಿಗೆ ಮತ್ತೊಂದು ಕಾರು ಮೈಲಿಗಲ್ಲಲ್ಲ (Benchmark), ಬದಲಿಗೆ ಸ್ಮಾರ್ಟ್‌ಫೋನ್ ಹೊಸ ಮೈಲಿಗಲ್ಲಾಗಿದೆ,” ಎಂದು ಪಟುಶ್ಕಾ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಟ್ರಾನ್ಸಾಕ್ಷನ್ಸ್​ನಲ್ಲಿ ಸಣ್ಣ ಮೊತ್ತದ ವಂಚನೆ ಸಿಗಲಿದೆ ಪರಿಹಾರ; ಆರ್​ಬಿಐನಿಂದ ಹೊಸ ನಿಯಮಗಳು ಜಾರಿಗೆ

ಎಐ ಕಾರುಗಳ ನಿರ್ಮಾಣಕ್ಕೆ 6 ಪ್ರಮುಖ ಸ್ತಂಭಗಳು

ಎಐ-ಚಾಲಿತ ವಾಹನಗಳನ್ನು ಸೃಷ್ಟಿಸಲು ಪ್ರಮುಖ ಆರು ಅಂಶಗಳು ಅತ್ಯಗತ್ಯ ಎಂದು ಟಾಟಾ ಮೋಟರ್ಸ್ ಪಿವಿ ಸಿಟಿಒ ಪಟ್ಟಿ ಮಾಡಿದ್ದಾರೆ:

  1. ಬೃಹತ್ ಪ್ರಮಾಣದ ಡೇಟಾ (Large-scale data)
  2. ಇನ್-ವೆಹಿಕಲ್ ಇಂಟೆಲಿಜೆನ್ಸ್ (ವಾಹನದ ಒಳಗಿನ ಬುದ್ಧಿವಂತಿಕೆ)
  3. ಎಐ-ನೇಟಿವ್ ಆರ್ಕಿಟೆಕ್ಚರ್
  4. ಸಾರಿಗೆಗೆ ಸೂಕ್ತವಾದ ಎಐ ಮಾಡೆಲ್‌ಗಳು
  5. ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಚೌಕಟ್ಟುಗಳು
  6. ಬಲಿಷ್ಠ ಸಾಫ್ಟ್‌ವೇರ್ ಪ್ರತಿಭೆಗಳ ವ್ಯವಸ್ಥೆ (Talent Ecosystem)

ಸಹಭಾಗಿತ್ವದ ಮಹತ್ವ ವಿವರಿಸಿದ ಪಟುಶ್ಕಾ

ಯಾವುದೇ ಒಂದು ವಾಹನ ತಯಾರಕ ಕಂಪನಿ (OEM) ಇಡೀ ಎಐ ಮೊಬಿಲಿಟಿ ತಂತ್ರಜ್ಞಾನವನ್ನು ಏಕಾಂಗಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಭವಿಷ್ಯದ ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಕ್ಲೌಡ್ ಪೂರೈಕೆದಾರರು, ಎಐ ಪ್ಲಾಟ್‌ಫಾರ್ಮ್ ಕಂಪನಿಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಒದಗಿಸುವವರ ಜೊತೆ ಕೈಜೋಡಿಸುವುದು ಅನಿವಾರ್ಯವಾಗಿದೆ. ಕಾರಿನ ಸುರಕ್ಷತೆ, ಸಿಸ್ಟಮ್ ವಿನ್ಯಾಸ ಮತ್ತು ಗ್ರಾಹಕರ ಅನುಭವದ ನಿಯಂತ್ರಣವನ್ನು ವಾಹನ ಕಂಪನಿಗಳು ತಮ್ಮ ಬಳಿಯೇ ಇಟ್ಟುಕೊಂಡು, ಉಳಿದ ತಂತ್ರಜ್ಞಾನಕ್ಕೆ ಪಾಲುದಾರಿಕೆಯನ್ನು ಅವಲಂಬಿಸಬೇಕಾಗುತ್ತದೆ ಎಂದು ಸ್ವೆನ್ ಪಟುಶ್ಕಾ ವಿವರಿಸಿದ್ದಾರೆ.

ಕೊನೆಯದಾಗಿ ಮಾತನಾಡಿದ ಪಟುಶ್ಕಾ, “ಈಗ ಭಾರತದಿಂದ, ಭಾರತಕ್ಕಾಗಿ ಮತ್ತು ಇಡೀ ಜಗತ್ತಿಗಾಗಿ ಅತ್ಯಾಧುನಿಕ ಕಾರುಗಳನ್ನು ನಿರ್ಮಿಸುವ ಸಮಯ ಬಂದಿದೆ,” ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ – Kannada News | CM Dk Shivakumar Talks after Inauguration of Newly installed 33 Spillway Gates at Tungabhadra Dam

ಕೊಪ್ಪಳ, (ಜೂನ್ 25): ಮುನಿರಾಬಾದ್​ನಲ್ಲಿರುವ ತುಂಗಾಭದ್ರಾ ಜಲಾಶಯದ 33 ಗೇಟ್​​​ಗಳನ್ನು ಬದಲಾಯಿಸಿ ಹೊಸ ಗೇಟ್​​ಗಳನ್ ಅಳವಡಿಸಲಾಗಿದ್ದು, ಇಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿಕೊಂಡು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ನಾವು ಇವತ್ತು ತುಂಗಭದ್ರಾ ಜಲಾಶಯ ಕಾಪಾಡಿದ್ದೇವೆ.ಹೀಗಾಗಿ ಇವತ್ತು ನಮಗೆ ಹೆಮ್ಮೆಯ ದಿನ, ನಾನು ಅತ್ಯಂತ ಖುಷಿಯಾಗಿದ್ದೇನೆ. 19ನೇ ಗೇಟ್​ ಕೊಚ್ಚಿಕೊಂಡು ಹೋದಾಗ ನನಗೆ ಕರೆ ಮಾಡಿದ್ದರು. ಅಂದು ಬೆಳಗ್ಗೆ 8.30ಕ್ಕೆ ಡ್ಯಾಂ ಬಳಿ ಬಂದು ಪರಿಶೀಲನೆ ಮಾಡಿದ್ದೆ. ದಿಟ್ಟ ಪ್ರಯತ್ನದಿಂದ ಡ್ಯಾಂನ 19ನೇ ಗೇಟ್ ಬದಲಾವಣೆ ಮಾಡಿ ರೈತರ ಬೆಳೆಯನ್ನು ಉಳಿಸಿದ್ವಿ. ಈಗ 33 ಗೇಟ್ ಬದಲಾಯಿಸಲು ಭಗವಂತ ಆಶೀರ್ವಾದ ಮಾಡಿದ್ದಾನೆ. ನಾನು ನೀರಾವರಿ ಸಚಿವನಾಗಿದ್ದೆ, ಇವತ್ತು ಮುಖ್ಯಮಂತ್ರಿ ಆಗಿದ್ದೇನೆ. ಡ್ಯಾಂನ ಹೇಗೆ ರಕ್ಷಣೆ ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ. 3 ರಾಜ್ಯಗಳ ನೀರಾವರಿ ಸಮಸ್ಯೆಯನ್ನು ಒಮ್ಮತದಿಂದ ಬಗೆಹರಿಸೋಣ. ನಾವೆಲ್ಲ ಒಟ್ಟಾಗಿ ಹೋಗಬೇಕು ಅದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.

Source link

IND vs IRE: ಭಾರತ-ಐರ್ಲೆಂಡ್ ನಡುವಿನ ಟಿ20 ಸರಣಿಯ ಸಮಯ ಬದಲಾವಣೆ – Kannada News | India Ireland T20s: New Schedule, Shreyas Iyer Captaincy and Match Timings Update

ಭಾರತ ಹಾಗೂ ಐರ್ಲೆಂಡ್ (India vs Ireland) ನಡುವೆ ಎರಡು ಪಂದ್ಯಗಳ ಟಿ20 ಸರಣಿಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈಗಾಗಲೇ ಟೀಂ ಇಂಡಿಯಾ ಕೂಡ ಎರಡೆರಡು ಬ್ಯಾಚ್​ಗಳಲ್ಲಿ ಐರ್ಲೆಂಡ್ ತಲುಪಿದೆ. ಐಪಿಎಲ್ ಬಳಿಕ ಟೀಂ ಇಂಡಿಯಾ ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ. ಹಾಗೆಯೇ ಸೂರ್ಯಕುಮಾರ್ ಯಾದವ್​ ಅವರನ್ನು ಟಿ20 ತಂಡದಿಂದ ಕೈಬಿಟ್ಟು ಬಳಿಕ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ನೂತನ ನಾಯಕನ ನಾಯಕತ್ವದಲ್ಲಿ ತಂಡ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಈ ಎರಡು ಪಂದ್ಯಗಳ ಆರಂಭದ ಸಮಯವನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಮಹಿಳಾ ಟಿ20 ವಿಶ್ವಕಪ್ ಎನ್ನಲಾಗುತ್ತಿದೆ.

ವಾಸ್ತವವಾಗಿ ಈ ಮೊದಲು ಭಾರತ ಹಾಗೂ ಐರ್ಲೆಂಡ್ ನಡುವಿನ ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯವು ಜೂನ್ 28 ರ ಭಾನುವಾರದಂದು ನಡೆಯಲಿದೆ. ಈ ದಿನ ಭಾರತ ಮತ್ತು ಐರ್ಲೆಂಡ್ ನಡುವಿನ ಸರಣಿಯ ಎರಡನೇ ಮತ್ತು ಅಂತಿಮ ಟಿ20ಪಂದ್ಯ ಕೂಡ ನಡೆಯಲಿದೆ. ಹೀಗಾಗಿ ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಸಮಯವನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ.

1 ಗಂಟೆ ಮುಂಚಿತವಾಗಿ ಆರಂಭ

ಎರಡೂ ಟಿ20 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಾರಂಭವಾಗಲಿವೆ ಎಂದು ಐರ್ಲೆಂಡ್ ಕ್ರಿಕೆಟ್ ಹೇಳಿರುವುದಾಗಿ ಕ್ರಿಕ್‌ಬಜ್ ಉಲ್ಲೇಖಿಸಿದೆ. ಮೂಲತಃ ಪಂದ್ಯಗಳು ಸಂಜೆ 7:00 ಗಂಟೆಗೆ ಆರಂಭವಾಗಬೇಕಿತ್ತು. ಸಮಯವನ್ನು ಉದ್ದೇಶಪೂರ್ವಕವಾಗಿ ಒಂದು ಗಂಟೆ ಮುಂಚಿತವಾಗಿ ಬದಲಾಯಿಸಲಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ಟಿ20 ಪಂದ್ಯಗಳು ಸಾಮಾನ್ಯವಾಗಿ ಸ್ಥಳೀಯ ಸಮಯ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಐರ್ಲೆಂಡ್ ಟಿ20 ಸರಣಿಯನ್ನು ಇದೇ ರೀತಿ ನಿಗದಿಪಡಿಸಲಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಬದಲಾಯಿಸಬೇಕಾಯಿತು.

ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ.
  • ಎರಡನೇ ಟಿ20 ಪಂದ್ಯ ಜೂನ್ 28 ರಂದು ಸಂಜೆ 6 ಗಂಟೆಗೆ ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ.

ಭಾರತದ ಟಿ20 ನಾಯಕನಾಗಿ ಶ್ರೇಯಸ್ ಅಯ್ಯರ್​ ಪ್ರಯಾಣ ಇಷ್ಟರಲ್ಲೇ ಅಂತ್ಯ

ಉಭಯ ತಂಡಗಳು

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version