NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ – Kannada News | NCERT,CBSE Textbook Controversy: Madhu Bangarappa Alleges BJPs Ideological Imposition on Children

ಬೆಂಗಳೂರು, ಜೂನ್​​ 25: ರಾಜ್ಯದಲ್ಲಿ ಎನ್.ಸಿ.ಇ.ಆರ್.ಟಿ (NCERT) ಮತ್ತು ಸಿ.ಬಿ.ಎಸ್.ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣದ ಆರೋಪ ಕೇಳಿಬಂದಿದೆ. ಆರನೇ ತರಗತಿಯ ಕನ್ನಡ ಪಠ್ಯದಲ್ಲಿ ಕೃಷ್ಣನಿಗ ಸಂಬಂಧಿಸಿದ ಪಾಠ ಸೇರ್ಪಡೆ, ಸಮತೋಲನ ಆಹಾರದ ವಿಚಾರದಲ್ಲಿ ಸಸ್ಯಾಹಾರಕ್ಕೆ ಮಾತ್ರ ಪ್ರೋತ್ಸಾಹ ಮತ್ತು ಕರ್ನಾಟಕದ ಪ್ರಾದೇಶಿಕ ಸೊಗಡನ್ನು ಕಡೆಗಣಿಸಿರುವ ಬಗ್ಗೆ ಹಲವರು ಧ್ವನಿ ಎತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅನೇಕ ತಪ್ಪುಗಳು ಕಂಡುಬಂದಿದ್ದವು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣವು ಯಾವಾಗಲೂ ಅವರ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ! – Kannada News | Bengaluru Traffic Fine Offer: Rs 6.06 Crore Collected, 2 Lakh Cases Settled in Just 4 Days

ಬೆಂಗಳೂರು, ಜೂನ್ 25: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಬಾಕಿ ದಂಡದ ಮೇಲಿನ ಶೇ 50 ರಷ್ಟು ರಿಯಾಯಿತಿ (Traffic Fine Discount) ಯೋಜನೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಜೂನ್ 21 ರಿಂದ ಅಧಿಕೃತವಾಗಿ ಆರಂಭವಾಗಿರುವ ಈ ರಿಯಾಯಿತಿ ಬಳಸಿಕೊಂಡು ಸಾವಿರಾರು ಸವಾರರು ವಾಹನಗಳ ಮೇಲಿದ್ದ ಹಳೇ ದಂಡಗಳನ್ನು ಪಾವತಿಸಿ ಚುಕ್ತಾಗೊಳಿಸುತ್ತಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶ ಪ್ರಕಾರ, ಜೂನ್ 21 ರಿಂದ ಜೂನ್ 24 ರವರೆಗಿನ ಮೊದಲ 4 ದಿನಗಳ ಅವಧಿಯಲ್ಲಿ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಮಾಧ್ಯಮಗಳ ಮೂಲಕ ಒಟ್ಟು 2,00,139 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ವಸೂಲಿಯಾಗಿದೆ.

ಬಾಕಿ ಉಳಿದ ಕೇಸ್ ವಿಲೇವಾರಿಗೆ ಕ್ರಮ

ಬೆಂಗಳೂರು ನಗರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ದಂಡ ಪಾವತಿಯಾಗದೆ ವರ್ಷಗಳಿಂದ ಬಾಕಿ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಮತ್ತು ಪೊಲೀಸ್ ಇಲಾಖೆ, ಜೂನ್ 21 ರಿಂದ ಜುಲೈ 10 ರವರೆಗೆ ಅನ್ವಯವಾಗುವಂತೆ ಸೀಮಿತ ಅವಧಿಗೆ ಈ ಶೇ 50 ರಿಯಾಯಿತಿ ಯೋಜನೆಯನ್ನು ಮರುಜಾರಿ ಮಾಡಿತ್ತು. ಮೊದಲ ದಿನವೇ ಸವಾರರು ಪೇಟಿಎಂ, ಕರ್ನಾಟಕ ಒನ್ ಮತ್ತು ಸಂಚಾರ ಪೊಲೀಸ್ ವೆಬ್‌ಸೈಟ್‌ಗಳ ಮೂಲಕ ಮುಗಿಬಿದ್ದು ದಂಡ ಪಾವತಿಸಲು ಆರಂಭಿಸಿದ್ದರು.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ಬಾಕಿ ಉಳಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ

ನಗರದ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳ ಪ್ರಕಾರ, ಈ ಯೋಜನೆಯು ಸಾರ್ವಜನಿಕರಿಗೆ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಸಿಕ್ಕಿರುವ ಸುವರ್ಣಾವಕಾಶವಾಗಿದೆ. ಜುಲೈ 10 ರ ಗಡುವು ಮುಗಿದ ನಂತರ ಯಾವುದೇ ಕಾರಣಕ್ಕೂ ರಿಯಾಯಿತಿ ವಿಸ್ತರಿಸಲಾಗುವುದಿಲ್ಲ ಮತ್ತು ಬಾಕಿ ಉಳಿಸಿಕೊಳ್ಳುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:57 pm, Thu, 25 June 26

Source link

ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು? – Kannada News | What Happened Before Krishi Tapanda‘s Friend Vaishak Death

ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಹೊರಬಂದಿದ್ದ ವೈಶಾಕ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಗೆಳತಿ, ನಟಿ ಕೃಷಿ ತಾಪಂಡಾಗೆ ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿದೆ. ‘ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ’ ಎಂದು ಆತ ನಿನ್ನೆ ಸಂಜೆ ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದನು. ಈ ವೇಳೆ ನಟಿ ಕೃಷಿ ತಾಪಂಡಾ ಅವರು ‘ಕ್ಷೇಮವನ’ದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ನಟಿ, ‘ಆ ರೀತಿ ಯಾವುದೇ ತಪ್ಪು ನಿರ್ಧಾರ ಮಾಡಿಕೊಳ್ಳಬೇಡ, ನಾನು ಮನೆಗೆ ಬರುತ್ತೇನೆ, ಅಲ್ಲಿಯವರೆಗೂ ಕಾಯಿ. ನಾವಿಬ್ಬರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಬರೋಣ, ಅಲ್ಲಿಗೆ ಹೋಗಿ ಪೂಜೆ ಮಾಡಿಸಿದರೆ ಮನಸ್ಸು ಹಗುರವಾಗುತ್ತದೆ’ ಎಂದು ಸಮಾಧಾನಪಡಿಸಿದ್ದರು. ಆದರೆ ನಟಿ ಮನೆಗೆ ತಲುಪುವಷ್ಟರಲ್ಲಿ ವೈಶಾಕ್ ನೇಣಿಗೆ ಶರಣಾಗಿದ್ದನು.

ಆದರೆ ತಡರಾತ್ರಿ ನಟಿ ಕೃಷಿ ತಾಪಂಡಾ ಅವರು ಮನೆಗೆ ಬರುವಷ್ಟರಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದನ್ನು ಕಂಡು ದಿಕ್ಕೆಟ್ಟ ನಟಿ, ತಕ್ಷಣವೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವೈಶಾಕ್​ಗೆ ಈಗಾಗಲೇ ಮದುವೆ ಆಗಿತ್ತು. ಪತ್ನಿ ಜೊತೆ ಅವರು ಮಾತು ಬಿಟ್ಟಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಐಸ್​ಕ್ರೀಂಗಾಗಿ ಬಾಲ್ಕನಿಯಿಂದ ಕೈಚಾಚಿ ಆಯ ತಪ್ಪಿ ಕೆಳಗೆ ಬಿದ್ದ ವ್ಯಕ್ತಿ – Kannada News | Viral Balcony Ice Cream Fall: Man Falls While Reaching, Highlighting Safety Risks

ಸೋನ್‌ಭದ್ರ, ಜೂನ್ 25: ಒಂದು ಕ್ಷಣದ ಅಸಡ್ಡೆ ಅಥವಾ ಸೋಮಾರಿತನ ಹೇಗೆ ಪ್ರಾಣಾಪಾಯವನ್ನುಂಟು ಮಾಡಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಸೋನ್​ಭದ್ರ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಐಸ್​ಕ್ರೀಂ(Ice Cream)ಗಾಗಿ ಬಾಲ್ಕನಿಯಿಂದ ಕೈ ಚಾಚಿದ್ದ ವ್ಯಕ್ತಿ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ಹಾಗೂ ಲಭ್ಯವಿರುವ ವಿವರಗಳ ಪ್ರಕಾರ, ರಸ್ತೆಯಲ್ಲಿ ಐಸ್ ಕ್ರೀಂ ಮಾರಾಟಗಾರ ಹೋಗುತ್ತಿರುವುದನ್ನು ಗಮನಿಸಿದ ವ್ಯಕ್ತಿ ಆತನನ್ನು ಕೂಗಿ ಕರೆದಿದ್ದಾರೆ. ಆದರೆ, ಕೆಳಗೆ ಇಳಿದು ಬಂದು ಐಸ್ ಕ್ರೀಂ ಕೊಳ್ಳುವ ಬದಲು, ಆತ ಬಾಲ್ಕನಿಯಲ್ಲೇ ನಿಂತು ಕೆಳಗಿನಿಂದಲೇ ಐಸ್ ಕ್ರೀಂ ಅನ್ನು ಕೊಡುವಂತೆ ಕೇಳಿದ್ದಾರೆ.

ಐಸ್ ಕ್ರೀಂ ಕೊಡಲು ಮಾರಾಟಗಾರ ಕೆಳಗಿನಿಂದ ಕೈಯನ್ನು ಮೇಲಕ್ಕೆ ಚಾಚಿದ್ದಾನೆ. ಇದನ್ನು ಹಿಡಿಯಲು ಬಾಲ್ಕನಿಯಲ್ಲಿದ್ದ ವ್ಯಕ್ತಿ ಅಂಚಿನಿಂದ ಮುಂದಕ್ಕೆ ಬಾಗಿ ಕೈ ಚಾಚಿದ್ದಾರೆ. ಐಸ್ ಕ್ರೀಂ ಹಿಡಿಯುವ ತರಾತುರಿಯಲ್ಲಿ ಅವರ ದೇಹದ ಸಮತೋಲನ ಸಂಪೂರ್ಣವಾಗಿ ತಪ್ಪಿದೆ.

ಮತ್ತಷ್ಟು ಓದಿ: Beyond Ice Cream: ಹಲ್ಲು ತೆಗೆದ ನಂತರ ಐಸ್ ಕ್ರೀಮ್ ಬದಲು ಈ ಆಹಾರ ಸೇವಿಸಬಹುದು? ಇಲ್ಲಿದೆ ನೋಡಿ

ಕಣ್ಮುಚ್ಚಿ ಬಿಡುವಷ್ಟರಲ್ಲಿ ಅವರು ಬಾಲ್ಕನಿಯ ರೇಲಿಂಗ್ ಮೇಲಿಂದ ನೇರವಾಗಿ ಕೆಳಗೆ ರಸ್ತೆಗೆ ಬಿದ್ದಿದ್ದಾರೆ. ಇದನ್ನು ಕಂಡು ಸುತ್ತಮುತ್ತಲಿನ ಜನರು ಆಘಾತದಿಂದ ಕಿರುಚಾಡಿದ್ದಾರೆ. ಆತ ಕೆಳಗೆ ಬೀಳುತ್ತಿದ್ದಂತೆ ವಿಡಿಯೋ ಕಟ್ ಆಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಲಿಪ್ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋ

ದೈನಂದಿನ ಜೀವನದಲ್ಲಿ ಸಣ್ಣ ಶಾರ್ಟ್‌ಕಟ್ ಹುಡುಕಲು ಹೋಗಿ ಇಂತಹ ಗಂಭೀರ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ಬಾಲ್ಕನಿಯಿಂದ ಬಿದ್ದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಎತ್ತರದ ಜಾಗಗಳಲ್ಲಿ ಅಥವಾ ಬಾಲ್ಕನಿಗಳ ಮೇಲೆ ನಿಲ್ಲುವಾಗ ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂಬುದಕ್ಕೆ ಈ ವಿಡಿಯೋ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾ ಮುಂದಿದೆ 3 ಆಯ್ಕೆ: ಇನಿಂಗ್ಸ್ ಆರಂಭಿಸುವವರು ಯಾರು?

Source link

‘ವಾರಣಾಸಿ’ ದೃಶ್ಯಕ್ಕಾಗಿ ಮಹೇಶ್ ಬಾಬುಗೆ 100 ಟೇಕ್; ಸಿಟ್ಟು ಬಂದು ಪ್ಯಾಕಪ್​ ಎಂದ ರಾಜಮೌಳಿ – Kannada News | Rajamouli’s Dedication: One Shot Took a Full Day for Mahesh Babu’s Varanasi Film

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕೆಲಸದ ಶೈಲಿ ಎಷ್ಟೊಂದು ಕಠಿಣವಾಗಿರುತ್ತದೆ ಎಂಬುದನ್ನು ಅವರ ಜೊತೆ ಕೆಲಸ ಮಾಡಿದವರು ಹೇಳುತ್ತಲೇ ಇರುತ್ತಾರೆ. ಪ್ರಭಾಸ್, ಜೂನಿಯರ್ ಎನ್​​ಟಿಆರ್ ಸೇರಿದಂತೆ ಅನೇಕರು ಈ ವಿಷಯ ರಿವೀಲ್ ಮಾಡಿದ್ದರು. ಈಗ ಇದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ರಾಜಮೌಳಿ ನಿರ್ದೇಶನದ ಮುಂಬರುವ ‘ವಾರಣಾಸಿ’ಯಲ್ಲಿ ಮಹೇಶ್ ಬಾಬು ಹೀರೋ ಆದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಖಳನಾಯಕನಾಗಿ ನಟಿಸುತ್ತಿದ್ದಾರೆ. ಸೆಟ್​ನಲ್ಲಿ ನಡೆದ ಒಂದು ಆಸಕ್ತಿದಾಯಕ ವಿಷಯವನ್ನು ಪೃಥ್ವಿರಾಜ್ ಹಂಚಿಕೊಂಡಿದ್ದಾರೆ.

ಒಂದೇ ಶಾಟ್‌ಗಾಗಿ ಇಡೀ ದಿನ ಶೂಟಿಂಗ್

ಚಿತ್ರದ ಒಂದು ನಿರ್ದಿಷ್ಟ ದೃಶ್ಯದ ಚಿತ್ರೀಕರಣದ ವೇಳೆ ತಮಗೆ ಎದುರಾದ ಅನುಭವವನ್ನು ಪೃಥ್ವಿರಾಜ್ ಬಿಚ್ಚಿಟ್ಟಿದ್ದಾರೆ. ‘ನಾನು ಸುಳ್ಳು ಹೇಳುತ್ತಿಲ್ಲ. ಚಿತ್ರದ ಒಂದು ನಿರ್ದಿಷ್ಟ ಶಾಟ್‌ಗಾಗಿ ನಾನು ಮತ್ತು ಮಹೇಶ್ ಬಾಬು ಬೆಳಗ್ಗೆಯೇ ಶೂಟಿಂಗ್ ಆರಂಭಿಸಿದ್ದೆವು. ಅದು ಬಹುಶಃ 94 ಅಥವಾ 97ನೇ ಟೇಕ್ ಇರಬಹುದು. ರಾಜಮೌಳಿ ಅವರಿಗೆ ಆ ಶಾಟ್ ಸರಿಯಾಗಿ ಮೂಡಿಬರದ ಕಾರಣ ನಮಗೆ ಮಧ್ಯಾಹ್ನ ಊಟದ ಬ್ರೇಕ್ ಸಿಕ್ಕಿತು. ನಾವು ಕೇವಲ ಎರಡು ತುತ್ತು ಅನ್ನ ತಿಂದಿದ್ದೆವೋ ಇಲ್ಲವೋ ಅಷ್ಟರಲ್ಲಿ ರಾಜಮೌಳಿ ಮತ್ತೆ ನಮ್ಮನ್ನು ಸೆಟ್‌ಗೆ ಕರೆದರು. ಆ ಒಂದು ಶಾಟ್‌ಗಾಗಿ ಶೂಟಿಂಗ್ ಸಂಜೆ 7 ಗಂಟೆಯವರೆಗೂ ಮುಂದುವರಿಯಿತು’ ಎಂದು ಪೃಥ್ವಿರಾಜ್ ಹೇಳಿದ್ದಾರೆ.

ಮರುದಿನವೂ ಅದೇ ದೃಶ್ಯದ ಚಿತ್ರೀಕರಣ

ಅಷ್ಟೊಂದು ಟೇಕ್‌ಗಳನ್ನು ತೆಗೆದುಕೊಂಡ ನಂತರವೂ ರಾಜಮೌಳಿ ಅವರಿಗೆ ಆ ದೃಶ್ಯ ತೃಪ್ತಿ ನೀಡಲಿಲ್ಲವಂತೆ. ಹೀಗಾಗಿ, ಮೊದಲು ಪ್ಯಾಕಪ್​ ಎಂದರು. ಮರುದಿನವೂ ಸೆಟ್‌ಗೆ ಬಂದು ಅದೇ ದೃಶ್ಯವನ್ನು ಮತ್ತೆ ಶೂಟ್ ಮಾಡುವಂತೆ ಇಬ್ಬರು ನಟರಿಗೆ ನಿರ್ದೇಶಕರು ಸೂಚಿಸಿದ್ದರು. ರಾಜಮೌಳಿ ಅವರ ಈ ಕಠಿಣ ಪರಿಶ್ರಮವನ್ನು ಕಂಡು ಬೆರಗಾಗಿರುವ ಪೃಥ್ವಿರಾಜ್ ಅವರು ತಾವು ನೋಡಿರುವ ಅತ್ಯಂತ ಕಠಿಣ ಪರಿಶ್ರಮಿ ನಿರ್ದೇಶಕ ಎಂದರೆ ಅದು ರಾಜಮೌಳಿ ಮಾತ್ರ ಎಂದು ಕೊಂಡಾಡಿದ್ದಾರೆ.

ಬೆಳಗ್ಗೆ 5 ಗಂಟೆಗೆ ಸೆಟ್‌ನಲ್ಲಿರುತ್ತಾರೆ ರಾಜಮೌಳಿ

ರಾಜಮೌಳಿ ಅವರ ಕೆಲಸದ ಸಮಯದ ಬಗ್ಗೆಯೂ ಪೃಥ್ವಿರಾಜ್ ಮಾತನಾಡಿದ್ದಾರೆ. ‘ನಮಗೆ ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಇದ್ದರೆ ರಾಜಮೌಳಿ ಅದಕ್ಕೂ ಮುನ್ನವೇ ಸೆಟ್‌ಗೆ ಬಂದಿರುತ್ತಾರೆ. ಅವರು ಬೆಳಿಗ್ಗೆ 5.15ಕ್ಕೆಲ್ಲಾ ಬಂದು ತಮ್ಮ ಅಸಿಸ್ಟೆಂಟ್‌ಗಳ ಜೊತೆ ರಿಹರ್ಸಲ್ ಮಾಡಿರುತ್ತಾರೆ. ಕ್ಯಾಮೆರಾ ಸೆಟಪ್ ಮತ್ತು ಪ್ಲಾನಿಂಗ್ ಮುಗಿಸಿರುತ್ತಾರೆ. ಶೂಟಿಂಗ್ ಮುಗಿಸಿ ಕೊನೆಯಲ್ಲಿ ಸೆಟ್‌ನಿಂದ ಹೊರಡುವ ವ್ಯಕ್ತಿಯೂ ಅವರೇ ಆಗಿರುತ್ತಾರೆ. ಅವರ ಸಿನಿಮಾದಲ್ಲಿ ಲಂಚ್ ಬ್ರೇಕ್ ಕೇವಲ 20 ನಿಮಿಷ ಇರುತ್ತದೆ’ ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ

‘ವಾರಣಾಸಿ’ ಸಿನಿಮಾದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ‘ಮಂದಾಕಿನಿ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ‘ಕುಂಭ’ ಎಂಬ ವಿಲನ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಶೂಟಿಂಗ್ ಜಗತ್ತಿನ ವಿವಿಧ ಸುಂದರ ತಾಣಗಳಲ್ಲಿ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪರಿಷತ್​​ ಚುನಾವಣೆಯಲ್ಲಿ ಅಡ್ಡ ಮತದಾನ: ಬಿಜೆಪಿ ಬಗ್ಗೆ ಬಿಗ್​​ ಬಾಂಬ್​​ ಸಿಡಿಸಿದ ಉಚ್ಛಾಟಿತ ಶಾಸಕ ಸೋಮಶೇಖರ್​ – Kannada News | Cross Voting Row: Expelled MLA ST Somashekhar Blames R Ashoka and BY Vijayendra for BJP’s Internal Rift

ಎಸ್‌.ಟಿ. ಸೋಮಶೇಖರ್Image Credit source: Tv9 Kannada

ಬೆಂಗಳೂರು, ಜೂನ್​​ 25: ವಿಧಾನ ಪರಿಷತ್​ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ವಿಚಾರವನ್ನು ಬಿಜೆಪಿ ಹೈಕಮಾಂಡ್​​ ಗಂಭೀರವಾಗಿ ಪರಿಗಣಿಸಿದೆ. ಇತ್ತ ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬ ಬಗ್ಗೆ ಪತ್ತೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಆದೇಶದ ಮೇರೆಗೆ ಸಿ.ಟಿ. ರವಿ ನೇತೃತ್ವದ ಸಮಿತಿಯೂ ಮಾಹಿತಿ ಕಲೆಹಾಕುತ್ತಿದೆ. ಈ ನಡುವೆ ಬಿಜೆಪಿ ಉಚ್ಛಾಟಿತ ಶಾಸಕ ಎಸ್​.ಟಿ.ಸೋಮಶೇಖರ್​ ಹೊಸ ಬಾಂಬ್​ ಸಿಡಿಸಿದ್ದಾರೆ. ವಿಜಯೇಂದ್ರ ಕಡೆಯ ಅಭ್ಯರ್ಥಿ ಸೋಲಿಸಬೇಕೆಂದು ಆರ್​.ಅಶೋಕ್​, ಅಶೋಕ್ ಕಡೆ ಅಭ್ಯರ್ಥಿ ಸೋಲಿಸಲು ಬಿವೈವಿ ಅಡ್ಡ ಮತದಾನ ಮಾಡಿಸಿರಬೇಕು. ಹೀಗಾಗಿ ಇವರಿಬ್ಬರು ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದರೆ ಸಾಕು ಎಂದಿದ್ದಾರೆ.

ಸೋಮಶೇಖರ್​ ಹೇಳಿದ್ದೇನು?

ನಮ್ಮನ್ನು ಉಚ್ಛಾಟನೆ ಮಾಡಿ ಗೂಬೆ ಕೂರಿಸಲು ಹೊರಟಿದ್ದಾರೆ. ಇವರಿಬ್ರೂ 63 ಶಾಸಕರನ್ನು ಕರೆದು ಮಾತಾಡಿ ಬಿಗಿ ಮಾಡಬೇಕಿತ್ತು. ಕಾಂಗ್ರೆಸ್​ ಪಕ್ಷದಲ್ಲಿ ಎಲ್ಲಾ ಶಾಸಕರಿಗೂ ಟ್ರೈನಿಂಗ್ ಕೊಟ್ಟಿದ್ದರು. ಏನಾಗುತ್ತೆ, ಏನಾಗಲ್ಲ ಅಂತಾ ಅವರು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರು. ಆದ್ರೆ ಬಿಜೆಪಿಯವರು ಶಾಸಕರಿಗೆ ವಿಪ್ ಕೂಡ ಜಾರಿ ಮಾಡಲಿಲ್ಲ. ಬೆಳಗ್ಗೆ 9ಕ್ಕೆ ಚುನಾವಣೆ ಇದೆ ಅಂದಾಗ 8 ಗಂಟೆಗೆ ಹೇಳಿದ್ರು. ಹೀಗಾಗಿ ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದು ಸೋಮಶೇಖರ್​​ ಅರೋಪಿಸಿದ್ದಾರೆ.

ಇದನ್ನೂ ಓದಿ: ಆ ಶಾಸಕರಿಂದಲೇ ಅಡ್ಡಮತದಾನ? ಸತ್ಯಶೋಧನಾ ಸಮಿತಿ ವರದಿ ಬಗ್ಗೆ ಸಿಟಿ ರವಿ ಏನಂದ್ರು ನೋಡಿ

ಶೋಭಾ ಕರಂದ್ಲಾಜೆ ಹೇಳಿಕೆಗೂ ತಿರುಗೇಟು

ಸೋಮಶೇಖರ್, ಶಿವರಾಮ ಹೆಬ್ಬಾರ್​ ರಾಜೀನಾಮೆ ನೀಡಲಿ ಎಂಬ ಕೇಂದ್ರ ಸಚಿವೆಎ ಶೋಭಾ ಕರಂದ್ಲಾಜೆ ಹೇಳಿಕೆಗೂ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದು, ಶೋಭಾಗೆ ಅಶೋಕ್ ಕಂಡ್ರೆ ಆಗಲ್ಲ, ವಿಜಯೇಂದ್ರ ಕಂಡ್ರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲ ಅಲ್ಲೋಲ ಕಲ್ಲೋಲಕ್ಕೆ ಅವರೇ ಕಾರಣ. ಮೊದಲು ಈ ಕರಂದ್ಲಾಜೆ ಅವರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ನಿಲ್ಲಿಸಲಿ. ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ, ನಾವು ಅವರಿಗೆ ಮತ ಹಾಕಿದ್ದೇವೆ. ಈ ಬಗ್ಗೆ ನಾವು ಓಪನ್ ಆಗಿಯೇ ಹೇಳಿದ್ದೇವೆ. ಬಿಜೆಪಿಯಲ್ಲಿ ಅಡ್ಡ ಮತ ಹಾಕಿದವರು ಯಾರೆಂದು ಕಂಡು ಹಿಡಿಯಲಿ. ಅದುಬಿಟ್ಟು ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡ್ತೇವೆ ಎಂದು ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:23 pm, Thu, 25 June 26

Source link

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಜನ್ಮ ದಿನಾಂಕ ಕಡ್ಡಾಯ – Kannada News | Maharashtra’s New Child Marriage Law: Birth Date Mandatory on Invites, Presses Seized

ಮುಂಬೈ, ಜೂನ್ 25: ಬಾಲ್ಯ ವಿವಾಹ(Child Marriage) ಎಂಬ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಮಹಾರಾಷ್ಟ್ರ ಸರ್ಕಾರ ಅತ್ಯಂತ ಕಠಿಣವಾದ ಹೊಸ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ವಧು ಮತ್ತು ವರನ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ಮುದ್ರಿಸಬೇಕಾಗುತ್ತದೆ.

ಈ ನಿಯಮವನ್ನು ಉಲ್ಲಂಘಿಸುವ ಮುದ್ರಣಾಲಯಗಳ ಲೈಸೆನ್ಸ್ ರದ್ದು ಮಾಡುವುದಷ್ಟೇ ಅಲ್ಲದೆ, ಆ ಪ್ರೆಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕರೆ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ರಾಜಸ್ಥಾನ ಸರ್ಕಾರ ಈಗಾಗಲೇ ಯಶಸ್ವಿಯಾಗಿ ಜಾರಿಗೆ ತಂದಿರುವ ಮಾದರಿಯನ್ನು ಆಧರಿಸಿ ಮಹಾರಾಷ್ಟ್ರದಲ್ಲೂ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಹೊಸ ಜವಾಬ್ದಾರಿ

ಹೊಸ ನಿಯಮದ ಪ್ರಕಾರ, ಇನ್ಮುಂದೆ ಮದುವೆ ಕಾರ್ಡ್ ಮುದ್ರಿಸುವ ಮುನ್ನ ಪ್ರೆಸ್ ಮಾಲೀಕರು ಕೇವಲ ಜನ್ಮ ದಿನಾಂಕವನ್ನು ಹಾಕುವುದಷ್ಟೇ ಅಲ್ಲ, ವಧು-ವರರ ಅಧಿಕೃತ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ. ಸೂಕ್ತ ವಯಸ್ಸಿನ ಪುರಾವೆ ಇಲ್ಲದೆ ಅಥವಾ ಜನ್ಮ ದಿನಾಂಕವನ್ನು ಮುದ್ರಿಸದೆ ಮದುವೆ ಪತ್ರಿಕೆಗಳನ್ನು ಮುದ್ರಿಸಿಕೊಟ್ಟರೆ, ಅಂತಹ ಮುದ್ರಣಾಲಯಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ.

ಪುರೋಹಿತರು, ಬ್ಯಾಂಡ್ ಮತ್ತು ಅಡುಗೆಯವರಿಗೂ ಬೀಳಲಿದೆ ಕಾನೂನು ಪೆಟ್ಟು

ಬಾಲ್ಯ ವಿವಾಹಗಳನ್ನು ತಡೆಯಲು ಸರ್ಕಾರ ಕೇವಲ ಪೋಷಕರನ್ನು ಮಾತ್ರವಲ್ಲದೆ, ಇಡೀ ವ್ಯವಸ್ಥೆಯನ್ನು ನಿಯಂತ್ರಿಸಲು ಮುಂದಾಗಿದೆ. ಅಪ್ರಾಪ್ತ ವಯಸ್ಕರ ಮದುವೆ ನಡೆದರೆ ಆಯಾ ಕುಟುಂಬದವರ ಜೊತೆಗೆ ಮದುವೆ ಮಾಡಿಸುವ ಪುರೋಹಿತರು, ಮದುವೆಯಲ್ಲಿ ಸಂಗೀತ ನುಡಿಸುವ ಬ್ಯಾಂಡ್ ಸಿಬ್ಬಂದಿ, ಮದುವೆಯ ಅಡುಗೆ ವ್ಯವಸ್ಥಾಪಕರು ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂದಿಗೂ ಭೀಕರ ಪ್ರಮಾಣದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಮತ್ತಷ್ಟು ಓದಿ: ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ: ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು!

ಶೇ. 48 ರಷ್ಟು ಹುಡುಗಿಯರಿಗೆ 18 ವರ್ಷ ತುಂಬುವ ಮುನ್ನವೇ ಮದುವೆ ಮಾಡಲಾಗುತ್ತಿದೆ. ಶೇ. 43.7 ರಷ್ಟು ಬಾಲ್ಯ ವಿವಾಹಗಳು ನಡೆಯುತ್ತಿವೆ. ಕ್ರಮವಾಗಿ ಶೇ. 40.5 ಹಾಗೂ ಶೇ. 40.3 ರಷ್ಟು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ವಿವಾಹವಾಗುತ್ತಿದೆ. ವಿಶೇಷವಾಗಿ ವಲಸೆ ಕಾರ್ಮಿಕರು ಹೆಚ್ಚಿರುವ ಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ತರುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚನೆಯಾಗಲಿದ್ದು, ದೂರು ಬಂದ ತಕ್ಷಣವೇ ದಾಳಿ ನಡೆಸಲಾಗುತ್ತದೆ. ಬಾಲ್ಯ ವಿವಾಹದ ಆರೋಪಿಗಳಿಗೆ ತಕ್ಷಣವೇ ಶಿಕ್ಷೆ ವಿಧಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

ಸಾರ್ವಜನಿಕರು ಅಥವಾ ನೆರೆಹೊರೆಯವರು ತಮಗೆ ತಿಳಿಯದಂತೆ ಗೌಪ್ಯವಾಗಿ ಬಾಲ್ಯ ವಿವಾಹಗಳ ಬಗ್ಗೆ ದೂರು ನೀಡಲು ವಿಶೇಷ ವೆಬ್‌ಸೈಟ್ ಆರಂಭಿಸಲಾಗುವುದು. ಈ ಹೊಸ ಮಸೂದೆಗೆ ಶೀಘ್ರದಲ್ಲೇ ಅಧಿಕೃತ ಕಾನೂನಿನ ಮುದ್ರೆ ಬೀಳಲಿದ್ದು, ಸರ್ಕಾರದಿಂದ ಆದೇಶ ಹೊರಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ: ಆಕಾಂಕ್ಷಿಗಳಿಂದ ಬೆಂಗಳೂರಿನಲ್ಲಿ ಆಕ್ರೋಶ, ಪ್ರತಿಭಟನೆ – Kannada News | Primary School Teacher Aspirants Protest in Bengaluru Against Recruitment Delay and Post Cuts in Kalyana Karnataka

ಬೆಂಗಳೂರು, ಜೂನ್ 25: ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಹುದ್ದೆಗಳ ಕಡಿತ ವಿರೋಧಿಸಿ ಪ್ರಾಥಮಿಕ ಶಾಲಾ ಶಿಕ್ಷಕ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಕಾಂತ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗವಹಿಸಿದರು. ಪ್ರತಿಭಟನಾಕಾರರ ಪ್ರಕಾರ, ಕಳೆದ 11 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ನಡೆದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ 4,424 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ದೊರೆತಿದ್ದರೂ, ನಂತರ ಅದನ್ನು ರದ್ದುಪಡಿಸಿ 800 ಹುದ್ದೆಗಳಿಗೆ ಇಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಸುಮಾರು 30,000ಕ್ಕೂ ಹೆಚ್ಚು ಟಿಇಟಿ ಅರ್ಹ ಅಭ್ಯರ್ಥಿಗಳಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಒಟ್ಟಾರೆ 80,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.

ಸಂವಿಧಾನದ 371ಜೆ ಕಲಂ ಅನ್ವಯ ಕಲ್ಯಾಣ ಕರ್ನಾಟಕದಲ್ಲಿ ಶೇಕಡಾ 80ರಷ್ಟು ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯವಿಲ್ಲ. ಆದರೂ ಸರ್ಕಾರ ನೇಮಕಾತಿ ವಿಳಂಬ ಮಾಡುತ್ತಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ. 4,424 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಿಫ್ಟ್‌ನಲ್ಲಿ ಕನ್ನಡಿಗಳು ಏಕೆ ಇರುತ್ತವೆ ಗೊತ್ತಾ?

ನೀವು ಪ್ರತಿದಿನ ಕಚೇರಿ, ಮಾಲ್ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಬಳಸುವಾಗ ಅಲ್ಲಿ ಕನ್ನಡಿ(Mirror) ಇರುವುದನ್ನು ಖಂಡಿತ  ನೋಡಿರುತ್ತೀರಿ.  ಹಲವರು ಇದು ಕೇವಲ ಮುಖ ನೋಡಿಕೊಳ್ಳಲು ಅಥವಾ ಅಲಂಕಾರಕ್ಕಾಗಿ ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ. ಆದರೆ, ಲಿಫ್ಟ್‌ನಲ್ಲಿ ಕನ್ನಡಿ ಅಳವಡಿಸುವುದರ ಹಿಂದೆ ಇಂಜಿನಿಯರ್‌ಗಳ ದೊಡ್ಡ ಮನೀನಸಿಕ ತಂತ್ರ ಮತ್ತು ಪ್ರಯಾಣಿಕರ ಸುರಕ್ಷತೆಯ ರಹಸ್ಯ ಅಡಗಿದೆ.

ಮೊದಮೊದಲು ಲಿಫ್ಟ್‌ಗಳನ್ನು ತಯಾರಿಸಿದಾಗ ಅವು ಕೇವಲ ಕಬ್ಬಿಣದ ಗ್ರಿಲ್‌ಗಳು ಅಥವಾ ಮುಚ್ಚಿದ ಪೆಟ್ಟಿಗೆಗಳಂತೆ ಇರುತ್ತಿದ್ದವು. ಆಗ ಲಿಫ್ಟ್ ಹತ್ತುತ್ತಿದ್ದ ಜನರಿಗೆ ವಿಚಿತ್ರ ಆತಂಕ ಶುರುವಾಗುತ್ತಿತ್ತು. ಲಿಫ್ಟ್ ತುಂಬಾ ವೇಗವಾಗಿ ಚಲಿಸುತ್ತಿದೆ ಅಥವಾ ಕೆಳಗೆ ಬಿದ್ದುಬಿಡುತ್ತದೆ ಎಂಬ ಭಯ ಅವರನ್ನು ಕಾಡುತ್ತಿತ್ತು.

ಲಿಫ್ಟ್ ಸಾಮಾನ್ಯ ವೇಗದಲ್ಲೇ ಚಲಿಸುತ್ತಿದ್ದರೂ, ಜನರು ಸೀಮಿತ ಜಾಗದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದರು. ಈ ಮಾನಸಿಕ ಸ್ಥಿತಿಯಿಂದ ಜನರು ಲಿಫ್ಟ್ ಕಂಪನಿಗಳಿಗೆ ಸಾಲು ಸಾಲು ದೂರುಗಳನ್ನು ನೀಡುತ್ತಿದ್ದರು. ಲಿಫ್ಟ್ ವಿನ್ಯಾಸಕರು ಮತ್ತು ಇಂಜಿನಿಯರ್‌ಗಳು ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇದು ತಾಂತ್ರಿಕ ದೋಷವಲ್ಲ, ಬದಲಿಗೆ ಜನರ ‘ಮಾನಸಿಕ ಭ್ರಮೆ’ ಎಂಬುದು ಅರ್ಥವಾಯಿತು. ಮುಚ್ಚಿದ ಜಾಗದಲ್ಲಿ ಇರುವುದರಿಂದ ಜನರ ಗಮನವೆಲ್ಲಾ ಲಿಫ್ಟ್‌ನ ವೇಗ ಮತ್ತು ಚಲನೆಯ ಮೇಲೆಯೇ ಇರುತ್ತಿತ್ತು.

ಮತ್ತಷ್ಟು ಓದಿ:
Video: ಕಾಗೆಯನ್ನು ಮಡಿಲಿನಲ್ಲಿ ಮಲಗಿಸಿ ಮಗುವಿನಂತೆ ಮುದ್ದಿಸಿದ ಮಹಿಳೆ

ಇದನ್ನು ತಡೆಯಲು ಇಂಜಿನಿಯರ್‌ಗಳು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಐಡಿಯಾ ಮಾಡಿದರು. ಅದೇ ಲಿಫ್ಟ್‌ ಒಳಗೆ ಕನ್ನಡಿಗಳನ್ನು ಅಳವಡಿಸುವುದು. ಲಿಫ್ಟ್‌ನಲ್ಲಿ ಕನ್ನಡಿಗಳನ್ನು ಅಳವಡಿಸಿದ ತಕ್ಷಣ ಅದ್ಭುತ ಬದಲಾವಣೆ ಕಂಡುಬಂದಿತು. ಜನರು ಲಿಫ್ಟ್ ಹತ್ತುತ್ತಿದ್ದಂತೆ ಕನ್ನಡಿಯಲ್ಲಿ ತಮ್ಮ ಮುಖ ನೋಡುವುದು, ಕೂದಲನ್ನು ನೀಟಾಗಿ ಮಾಡಿಕೊಳ್ಳುವುದು ಅಥವಾ ಬಟ್ಟೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ನಿರತರಾಗಲು ಆರಂಭಿಸಿದರು. ಇದರಿಂದ ಅವರ ಗಮನ ಚಲನೆಯಿಂದ ದೂರ ಸರಿದು, ಭಯ ತಾನಾಗಿಯೇ ಮಾಯವಾಯಿತು. ಅಲ್ಲಿಗೆ ಲಿಫ್ಟ್ ವೇಗದ ಬಗೆಗಿನ ದೂರುಗಳು ಸಂಪೂರ್ಣವಾಗಿ ನಿಂತುಹೋದವು.

ಸುರಕ್ಷತೆ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿ

ಮುಚ್ಚಿದ ಸಣ್ಣ ಜಾಗವನ್ನು ಕಂಡರೆ ಹೆದರುವ ಕಾಯಿಲೆ ಇರುವವರಿಗೆ ಇದು ವರದಾನ. ಕನ್ನಡಿಯು ಸಣ್ಣ ಲಿಫ್ಟ್ ರೂಮನ್ನು ದೊಡ್ಡದಾಗಿ ಮತ್ತು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಲಿಫ್ಟ್‌ನಲ್ಲಿ ನಮ್ಮ ಜೊತೆ ಇರುವ ಇತರ ಅಪರಿಚಿತ ವ್ಯಕ್ತಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ನೋಡದೆ ಕನ್ನಡಿಯ ಮೂಲಕವೇ ಅವರ ಮೇಲೆ ನಿಗಾ ಇಡಬಹುದು. ಇದು ಸುರಕ್ಷತೆಗೆ ಸಹಕಾರಿಯಾಗಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version