ಸ್ನಾನದ ನೀರಿಗೆ ಚಿಟಿಕೆ ಅರಶಿನ ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | Know the benefits of bathing in water mixed with a pinch of turmeric

ಅರಶಿನವನ್ನು (turmeric) ಬಹಳ ಹಿಂದಿನ ಕಾಲದಿಂದಲೂ ಅಡುಗೆಯಲ್ಲಿ ಬಳಸಲಾಗುತ್ತದೆ. ಇದಲ್ಲದೆ ತ್ವಚೆಯ ಆರೈಕೆಯಲ್ಲೂ ಅರಶಿನವನ್ನು ಬಳಸಲಾಗುತ್ತದೆ. ಇದರ ಅಂತರ್ಗತ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ತುರಿಕೆ, ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.  ಇದಲ್ಲದೆ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದಲೂ ಹಲವು ಪ್ರಯೋಜನಗಳಿವೆ. ಆಯುರ್ವೇದದಲ್ಲಿ, ಅರಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ದೇಹ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಚರ್ಮವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಅರಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಅರಿಶಿನ ಬೆರೆಸಿದ ನೀರಿನಿಂದ ಸ್ನಾನ ಮಾಡುವುದರಿಂದ ಲಭಿಸುವ ಪ್ರಯೋಜನಗಳು:

ಚರ್ಮವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿರಿಸುತ್ತದೆ: ಅರಿಶಿನವು ಚರ್ಮದ ಮೇಲೆ ಸಂಗ್ರಹವಾಗಿರುವ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಚರ್ಮವನ್ನು ಸ್ವಚ್ಛ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ.

ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ: ಅರಿಶಿನವು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಲ್ಲದೆ, ಅರಿಶಿನವು ಉರಿಯೂತವನ್ನು, ಮೊಡವೆಗಳಿಂದ ಉಂಟಾಗುವ ಕೆಂಪು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಟೋನ್ ಅನ್ನು ಸಮಗೊಳಿಸಲು ಸಹಾಯ ಮಾಡುತ್ತದೆ.

ಚರ್ಮವನ್ನು ತೇವಗೊಳಿಸುತ್ತದೆ: ಅರಿಶಿನವು ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಒಣಗದಂತೆ ತಡೆಯುತ್ತದೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಚರ್ಮವನ್ನು ಮೃದು ಮತ್ತು ಮೃದುವಾಗಿಸುತ್ತದೆ.

ಗಾಯಗಳನ್ನು ಗುಣಪಡಿಸಲು ಸಹಕಾರಿ: ಚರ್ಮದ ಗಾಯಗಳನ್ನು ಗುಣಪಡಿಸುವಲ್ಲಿ ಅರಿಶಿನ ನೀರು ತುಂಬಾ ಉಪಯುಕ್ತವಾಗಿದೆ. ಅರಶಿನ ನೀರಿನಿಂದ ನಿಯಮಿತವಾಗಿ ಸ್ನಾನ ಮಾಡುವುದರಿಂದ ಗಾಯಗಳು ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.

ತುರಿಕೆ ಮತ್ತು ಸೋಂಕುಗಳಿಂದ ಪರಿಹಾರ: ನೀವು ತುರಿಕೆ, ದದ್ದುಗಳು ಅಥವಾ ಶಿಲೀಂಧ್ರಗಳ ಸೋಂಕಿನಿಂದ ಬಳಲುತ್ತಿದ್ದರೆ, ಸ್ನಾನದ ನೀರಿಗೆ ಚಿಟಿಕೆ ಅರಶಿನವನ್ನು ಬೆರೆಸಿ.

ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ: ಪ್ರತಿದಿನ ಅರಿಶಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸೂಕ್ಷ್ಮವಾದ ಹೊಳಪು ಮತ್ತು ಕಾಂತಿ ಬರುತ್ತದೆ.

ದೇಹದ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಅರಿಶಿನದಲ್ಲಿರುವ ಗುಣಗಳು ದೇಹದ ವಾಸನೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೇರ್‌ ಫಾಲ್‌ ಸಮಸ್ಯೆಯಿಂದ ಮುಕ್ತಿ ಪಡೆಯಲು ತಲೆಸ್ನಾನಕ್ಕೂ ಮುನ್ನ ಕೂದಲಿಗೆ ಒಂದು ವಸ್ತುವನ್ನು ಹಚ್ಚಿ

ಅರಶಿನ ನೀರಿನ ಸರಿಯಾದ ಬಳಕೆಯ ವಿಧಾನ:

ಒಂದು ಬಕೆಟ್ ನೀರಿಗೆ ಸುಮಾರು ಒಂದು ಟೀ ಚಮಚ ಅರಿಶಿನ ಹಾಕಿದರೆ ಸಾಕು. ಮೊದಲು ಒಂದು ಬಕೆಟ್‌ನಲ್ಲಿ ಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಆ ನೀರಿಗೆ ಚಿಟಿಕೆ ಅರಿಶಿನ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಬೆರೆಸಿ. ನೀವು ಬಯಸಿದರೆ, ನೀವು ಸ್ವಲ್ಪ ರೋಸ್ ವಾಟರ್ ಅಥವಾ ಬೇವಿನ ನೀರನ್ನು ಕೂಡ ಸೇರಿಸಬಹುದು.

ಅರಿಶಿನ ನೀರನ್ನು ಬಳಸುವ ಮೊದಲು ಯಾವಾಗಲೂ ಸಣ್ಣ ಪ್ಯಾಚ್ ಟೆಸ್ಟ್‌ ಮಾಡಿ. ನಿಮಗೆ ಯಾವುದೇ ಕಿರಿಕಿರಿ ಅಥವಾ ಚರ್ಮದಲ್ಲಿ ಕೆಂಪು ಬಣ್ಣ ಕಾಣಿಸಿದರೆ ಇದರ ಬಳಕೆಯನ್ನು ನಿಲ್ಲಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ – Kannada News | Ragini Dwivedi new film Ragini IPS 2 announced Jaggesh sons will direct and K Manju Produce

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಅವರ ಹೊಸ ಸಿನಿಮಾದ ಘೋಷಣೆ ಮಾಡಲಾಯಿತು. 12 ವರ್ಷಗಳ ಹಿಂದೆ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದ ‘ರಾಗಿಣಿ ಐಪಿಎಸ್’ ಸಿನಿಮಾ ತೆರೆಕಂಡಿತ್ತು. ಈಗ ಆ ಸಿನಿಮಾಗೆ ಸೀಕ್ವೆಲ್ ಮಾಡಲು ತಯಾರಿ ನಡೆದಿದೆ. ಹೌದು, ‘ರಾಗಿಣಿ ಐಪಿಎಸ್ 2’ ಸಿನಿಮಾ ಅನೌನ್ಸ್ ಆಗಿದೆ. ಜಗ್ಗೇಶ್ (Jaggesh) ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಅವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕೆ. ಮಂಜು ಬಂಡವಾಳ ಹೂಡಲಿದ್ದಾರೆ.

ಜಗ್ಗೇಶ್ ರೀತಿಯೇ ಅವರ ಮಕ್ಕಳಾದ ಗುರುರಾಜ್, ಯತಿರಾಜ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ಆದರೆ ನಿರ್ದೇಶನದ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ‘ರಾಗಿಣಿ ಐಪಿಎಸ್ 2’ ಸಿನಿಮಾದ ಮೂಲಕ ನಿರ್ದೇಶಕರಾಗಿ ಅವರಿಬ್ಬರು ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ರಾಗಿಣಿ ಅವರ ಹುಟ್ಟುಹಬ್ಬದ ದಿನವೇ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಕೆ. ಮಂಜು ಹಾಗೂ ‘ರಾಗಿಣಿ ವೆಂಚರ್ಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಗುರುರಾಜ್ ಮತ್ತು ಯತಿರಾಜ್ ಮಾತನಾಡಿದರು. ‘ರಾಗಿಣಿ ಐಪಿಎಸ್ ಜನಪ್ರಿಯ ಸಿನಿಮಾ. ರಾಗಿಣಿ ಅವರ ಅಭಿನಯ ಅಭಿಮಾನಿಗಳಿಗೆ ಇಷ್ಟ ಆಗಿತ್ತು. ಈಗ ಆ ಸಿನಿಮಾದ ಮುಂದುವರಿದ ಭಾಗವಾಗಿ ‘ರಾಗಿಣಿ ಐಪಿಎಸ್ 2’ ಸಿನಿಮಾವನ್ನು ಶುರು ಮಾಡುತ್ತಿದ್ದೇವೆ. ನಾವಿಬ್ಬರು 2019ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ‌. ನಟನೆಯೇ ಬೇರೆ, ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ’ ಎಂದು ಅವರು ಹೇಳಿದರು.

‘ರಾಗಿಣಿ ಅವರು ಈಗಾಗಲೇ ಜನಪ್ರಿಯ ನಟಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಸಿನಿಮಾವನ್ನು ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ ಸಿನಿಮಾದ ಮುಂದುವರಿದ ಭಾಗ ಎಂದರೆ, ಮೊದಲ ಸಿನಿಮಾದಲ್ಲಿ ಕಥೆ ಎಲ್ಲಿ ಕೊನೆಯಾಗಿತ್ತೋ ಈಗ ಅಲ್ಲಿಂದಲೇ ಮುಂದುವರಿಯುತ್ತದೆ’ ಎಂದು ಗುರುರಾಜ್ ಮತ್ತು ಯತಿರಾಜ್ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬಿ ಹಾಡು ಕೇಳುತ್ತಾ ಎಂಜಾಯ್ ಮಾಡಿದ ರಾಗಿಣಿ

ರಾಗಿಣಿ ದ್ವಿವೇದಿ ಅವರು ಮಾತನಾಡಿ, ‘ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿರುವುದು ಮತ್ತು ಜಗ್ಗೇಶ್ ಪುತ್ರರಾದ ಗುರುರಾಜ್, ಯತಿರಾಜ್ ನಿರ್ದೇಶನ ಮಾಡುತ್ತಿರುವುದು ನನಗೆ ಸಂತಸ ತಂದಿದೆ’ ಎಂದು ಹೇಳಿದರು. ‘ಈ ಸಿನಿಮಾದ ಕಥೆ ಬಹಳ ಚೆನ್ನಾಗಿದೆ. ಆದಷ್ಟು ಬೇಗ ಚಿತ್ರದ ಕೆಲಸಗಳಿಗೆ ಚಾಲನೆ ಸಿಗಲಿದೆ’ ಎಂದು ನಿರ್ಮಾಪಕ ಕೆ ಮಂಜು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಲೈ ಲಾಮಾ ಉತ್ತರಾಧಿಕಾರಿ ನೇಮಕದಿಂದ ದೂರವಿರಿ; ಭಾರತಕ್ಕೆ ಚೀನಾ ಎಚ್ಚರಿಕೆ – Kannada News | China warns India to stay away from Dalai Lama succession issue ahead of Dharamshala ceremony

ನವದೆಹಲಿ, ಮೇ 25: ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈ ಲಾಮಾ (Dalai Lama) ಅವರ ಉತ್ತರಾಧಿಕಾರಿ ನೇಮಕದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚೀನಾ ಸರ್ಕಾರವು ಭಾರತಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಮಹತ್ವದ ಧಾರ್ಮಿಕ ಸಮಾರಂಭಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, “ಭಾರತವು ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕದ ವಿಷಯದಿಂದ ಸಂಪೂರ್ಣವಾಗಿ ದೂರವಿರಬೇಕು” ಎಂದು ಆಗ್ರಹಿಸಿದೆ.

ಚೀನಾದ ವಿದೇಶಾಂಗ ಸಚಿವಾಲಯವು ಜಾಗತಿಕ ಮಾಧ್ಯಮಗಳ ಮುಂದೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತಕ್ಕೆ ಈ ಬಗ್ಗೆ ನೇರ ಸಂದೇಶವನ್ನು ರವಾನಿಸಿದೆ. ದಲೈ ಲಾಮಾ ಅವರ ಉತ್ತರಾಧಿಕಾರಿಯನ್ನು ಆರಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಚೀನಾದ ಆಂತರಿಕ ಮತ್ತು ಕಾನೂನಾತ್ಮಕ ವಿಷಯವಾಗಿದೆ. ಇದರಲ್ಲಿ ಯಾವುದೇ ವಿದೇಶಿ ಶಕ್ತಿಗಳು ಅಥವಾ ನೆರೆಯ ರಾಷ್ಟ್ರಗಳು ಹಸ್ತಕ್ಷೇಪ ಮಾಡಬಾರದು ಎಂದು ಚೀನಾ ಭಾರತಕ್ಕೆ ಸೂಚಿಸಿದೆ.

ಇದನ್ನೂ ಓದಿ: ದಲೈ ಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಥೀಮ್ ಹಾಡು ಸಿದ್ಧಪಡಿಸಿದ ವಿಐಪಿ ಮೋಷನ್ ಪಿಕ್ಚರ್ಸ್

ದಲೈ ಲಾಮಾ ಅವರ ಉತ್ತರಾಧಿಕಾರಿ ನೇಮಕಾತಿಯು ಚೀನಾ ಸರ್ಕಾರದ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳು, ಐತಿಹಾಸಿಕ ಸಂಪ್ರದಾಯಗಳು ಮತ್ತು ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿಯೇ ನಡೆಯಬೇಕು ಎಂದು ಚೀನಾ ಪ್ರತಿಪಾದಿಸಿದೆ.

ಇದರ ನಡುವೆ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಾಸಿಸುತ್ತಿರುವ ದಲೈ ಲಾಮಾ ಮತ್ತು ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ಧರ್ಮಗುರುಗಳು ಉನ್ನತ ಮಟ್ಟದ ಧಾರ್ಮಿಕ ಸಮಾರಂಭ ಮತ್ತು ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಮುಂದಿನ 15ನೇ ದಲೈ ಲಾಮಾ ಅವರ ಆಯ್ಕೆ ಪ್ರಕ್ರಿಯೆಯ ಕರಡು ನಿಯಮಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ಸಮಾರಂಭಕ್ಕೆ ಭಾರತ ಸರ್ಕಾರದ ಪ್ರತಿನಿಧಿಗಳು ಅಥವಾ ಭಾರತೀಯ ನಾಯಕರು ಬೆಂಬಲ ನೀಡಬಹುದು ಎಂಬ ಆತಂಕ ಚೀನಾವನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಈ ಸಮಾರಂಭಕ್ಕೂ ಮುನ್ನವೇ ಚೀನಾ ಭಾರತಕ್ಕೆ ರಾಜತಾಂತ್ರಿಕ ಒತ್ತಡ ಹೇರಲು ಯತ್ನಿಸುತ್ತಿದೆ.

ಇದನ್ನೂ ಓದಿ: ಇನ್ನೂ 30-40 ವರ್ಷ ಬದುಕುವ ಭರವಸೆಯಿದೆ; ಅನಾರೋಗ್ಯದ ವದಂತಿ ತಳ್ಳಿಹಾಕಿದ ದಲೈ ಲಾಮಾ

ಭಾರತದ ನಿಲುವು ಏನು?:

ಭಾರತ ಸರ್ಕಾರವು ಮೊದಲಿನಿಂದಲೂ 14ನೇ ದಲೈ ಲಾಮಾ ಅವರನ್ನು ಒಬ್ಬ ಅತ್ಯುನ್ನತ ಆಧ್ಯಾತ್ಮಿಕ ನಾಯಕರಾಗಿ ಗೌರವಿಸುತ್ತಾ ಬಂದಿದೆ ಮತ್ತು ಅವರಿಗೆ ಭಾರತದಲ್ಲಿ ಆಶ್ರಯ ನೀಡಿದೆ. ಉತ್ತರಾಧಿಕಾರದ ವಿಷಯದ ಬಗ್ಗೆ ಭಾರತವು ಪ್ರತಿಕ್ರಿಯಿಸಿದ್ದು, “ಇದು ಸಂಪೂರ್ಣವಾಗಿ ಧಾರ್ಮಿಕ ವಿಷಯವಾಗಿದ್ದು, ಟಿಬೆಟಿಯನ್ ಬೌದ್ಧ ಸಮುದಾಯ ಮತ್ತು ಸ್ವತಃ ದಲೈ ಲಾಮಾ ಅವರೇ ತಮ್ಮ ಸಂಪ್ರದಾಯದ ಪ್ರಕಾರ ನಿರ್ಧಾರ ಕೈಗೊಳ್ಳಬೇಕು” ಎಂಬ ಮೃದು ನಿಲುವನ್ನು ಹೊಂದಿದೆ. ಆದರೆ, ಚೀನಾ ಮಾತ್ರ ಭಾರತದಲ್ಲಿ ಟಿಬೆಟಿಯನ್ ದೇಶಭ್ರಷ್ಟ ಸರ್ಕಾರ ಚಟುವಟಿಕೆಯಿಂದ ಇರುವುದನ್ನು ಸತತವಾಗಿ ವಿರೋಧಿಸುತ್ತಾ ಬಂದಿದೆ.

ದಲೈ ಲಾಮಾ ಹೇಳಿದ್ದೇನು?:

ಧರ್ಮಶಾಲಾದಲ್ಲಿರುವ 14ನೇ ದಲೈ ಲಾಮಾ ಅವರು ಈ ಹಿಂದೆ ಮಾತನಾಡುತ್ತಾ, “ನನ್ನ ಉತ್ತರಾಧಿಕಾರಿಯನ್ನು ಚೀನಾ ಸರ್ಕಾರ ಆಯ್ಕೆ ಮಾಡಲು ಸಾಧ್ಯವಿಲ್ಲ. ನನ್ನ ಪುನರ್ಜನ್ಮವು ಮುಕ್ತ ದೇಶದಲ್ಲಿ (ಭಾರತ ಅಥವಾ ಮಂಗೋಲಿಯಾದಲ್ಲಿ) ಸಂಭವಿಸಲಿದೆಯೇ ಹೊರತು ಚೀನಾದ ನಿಯಂತ್ರಣದಲ್ಲಿರುವ ಟಿಬೆಟ್‌ನಲ್ಲಿ ಅಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಆದರೆ, ಧರ್ಮಶಾಲಾ ಸಮಾರಂಭದ ಹಿನ್ನೆಲೆಯಲ್ಲಿ ಚೀನಾ ನೀಡಿರುವ ಈ ಹೇಳಿಕೆಯು ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ನೆಲದಲ್ಲಿ ಮತ್ತೆ ಮರುಕಳಿಸಲಿದೆ ಕ್ರೀಡಾ ಗತವೈಭವ: 100 ವರ್ಷ ಇತಿಹಾಸವಿರುವ ಕ್ರೀಡಾಂಗಣಕ್ಕೆ ಪುನಶ್ಚೇತನ ಭಾಗ್ಯ – Kannada News | Kolar Gold Fields Sports Revival: 100 Year Old Gymkhana Stadium Set for a Comeback

ಕೋಲಾರ, ಮೇ 25: ಚಿನ್ನದ ನೆಲದಲ್ಲಿ ನೂರಾರು ಯುವಕರಿಗೆ ಕ್ರೀಡೆಯ (Sports) ಮೂಲಕ ಜೀವನ ರೂಪಿಸಿಕೊಟ್ಟಿದ್ದ ಐತಿಹಾಸಿಕ ಕ್ರೀಡಾಂಗಣ. ಆದರೆ, ಚಿನ್ನದ ಗಣಿಗೆ ಬೀಗ ಬಿದ್ದ ಬೆನ್ನಲ್ಲೇ ಆ ಬೃಹತ್ ಮೈದಾನಕ್ಕೂ ಗ್ರಹಣ ಹಿಡಿದಿತ್ತು. ಆದರೆ ಇದೀಗ ಹತ್ತಾರು ವರ್ಷಗಳಿಂದ ಮೂಲೆಗುಂಪಾಗಿದ್ದ ಆ ಕ್ರೀಡಾಂಗಣಕ್ಕೆ ಕೊನೆಗೂ ಪುನರ್ಜನ್ಮ ಸಿಕ್ಕಿದೆ. ಕೋಲಾರ (kolar) ಜಿಲ್ಲೆಯ ಕೆಜಿಎಫ್‌ನಲ್ಲಿ ಕ್ರೀಡಾಂಗಣಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗುತ್ತಿದ್ದು, ಚಿನ್ನದ ನೆಲದ ಕ್ರೀಡಾಭಿಮಾನಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಮುಖ್ಯಾಂಶಗಳು

  • ಕೆಜಿಎಫ್​ನಲ್ಲಿ ಮತ್ತೆ ಕ್ರೀಡಾ ಸುಗ್ಗಿ ಆರಂಭವಾಗುವ ಲಕ್ಷಣಗಳು ಗೋಚರ
  • ಸಮಾನ ಮನಸ್ಕರ ಹೋರಾಟ ಹಾಗೂ ಅಭಿಯಾನಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು
  • ಕೆಜಿಎಫ್ ಕ್ರೀಡಾಭಿವೃದ್ಧಿಯ ಹೊಸ ಹಾದಿ

ಕೋಲಾರ ಜಿಲ್ಲೆಯ ಕೆಜಿಎಫ್ ನಗರ ಕೇವಲ ಚಿನ್ನಕ್ಕೆ ಮಾತ್ರವಲ್ಲ, ಕ್ರೀಡಾ ಚಟುವಟಿಕೆಗಳಿಗೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಫುಟ್‌ಬಾಲ್, ಹಾಕಿ, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ಹಲವು ಕ್ರೀಡಾಂಗಣಗಳಿವೆ. ಈ ಪೈಕಿ ಉರಿಗಾಂ ಏರಿಯಾದಲ್ಲಿರುವ ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ‘ಜಿಮಕಾನ ಫುಟ್‌ಬಾಲ್ ಕ್ರೀಡಾಂಗಣ’ ನೂರಾರು ಜನರಿಗೆ ಕ್ರೀಡೆಯ ಮೂಲಕ ಉದ್ಯೋಗ ಕಲ್ಪಿಸಿಕೊಟ್ಟ ಇತಿಹಾಸ ಹೊಂದಿದೆ.

ಇದನ್ನೂ ಓದಿ: ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ!

ಇಂದಿರಾ ಗಾಂಧಿ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ.ಆರ್ ಹಾಗೂ ಪ್ರಖ್ಯಾತ ನಟ ಶಿವಾಜಿ ಗಣೇಶನ್ ಸೇರಿದಂತೆ ಹಲವು ಗಣ್ಯರು ಈ ಮೈದಾನಕ್ಕೆ ಭೇಟಿ ನೀಡಿದ್ದರು. ಆದರೆ, ಚಿನ್ನದ ಗಣಿ ಮುಚ್ಚಿದ ನಂತರ ನಿರ್ವಹಣೆಯ ಕೊರತೆ ಹಾಗೂ ಕಾನೂನಾತ್ಮಕ ಕಾರಣಗಳಿಂದಾಗಿ ಈ ಕ್ರೀಡಾಂಗಣಕ್ಕೆ ಬೀಗ ಜಡಿಯಲಾಗಿತ್ತು.

ಹೋರಾಟಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು

ಹೀಗೆ ಅಳಿವಿನ ಅಂಚಿನಲ್ಲಿದ್ದ ಕ್ರೀಡಾಂಗಣವನ್ನು ಉಳಿಸಲು ‘ಸೇವ್ ಕೆಜಿಎಫ್’ ಎಂಬ ಘೋಷವಾಕ್ಯದೊಂದಿಗೆ ಸ್ಥಳೀಯ ಮುಖಂಡ ಜ್ಯೋತಿಬಸು ನೇತೃತ್ವದಲ್ಲಿ ಕಳೆದ ಒಂದು ವರ್ಷದಿಂದ ಸಮಾನ ಮನಸ್ಕರು ಹೋರಾಟ ಮತ್ತು ಅಭಿಯಾನ ನಡೆಸಿದ್ದರು. ಈ ಹೋರಾಟಕ್ಕೆ ಸ್ಪಂದಿಸಿದ ಸಂಸದ ಮಲ್ಲೇಶ್ ಬಾಬು, ಕೇಂದ್ರ ಗಣಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸುವ ಮೂಲಕ ಮತ್ತೆ ಕ್ರೀಡಾ ಚಟುವಟಿಕೆಗಳು ಆರಂಭವಾಗುವಂತೆ ಮಾಡಿದ್ದಾರೆ.

ಇದರ ಜೊತೆಗೆ ದೇಶದ ಮೊದಲ ನ್ಯಾಚುರಲ್ ಗಾಲ್ಫ್ ಕ್ರೀಡಾಂಗಣ ಎಂಬ ಖ್ಯಾತಿ ಹೊಂದಿರುವ, 14 ಹೋಲ್‌ಗಳ ಬೃಹತ್ ಗಾಲ್ಫ್ ಕೋರ್ಟ್ ಅನ್ನು ಸದ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ನಗರದಲ್ಲಿರುವ ಬಾಂಬೆ ಫುಟ್‌ಬಾಲ್ ಕ್ರೀಡಾಂಗಣ ಮತ್ತು ಹಾಕಿ ಮೈದಾನವನ್ನೂ ನವೀಕರಿಸಲಾಗುತ್ತಿದ್ದು, ಕೆಜಿಎಫ್‌ನಲ್ಲಿ ಮತ್ತೆ ಕ್ರೀಡಾ ವೈಭವ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಜಿಮಕಾನ ಕ್ರೀಡಾಂಗಣದ ಹಿನ್ನೆಲೆ

ಜಿಮಕಾನ ಕ್ರೀಡಾಂಗಣವನ್ನು ಮೊದಲು ಬ್ರಿಟಿಷರು 1905 ರಲ್ಲಿ ಆರಂಭಿಸಿದ್ದರು. ಆಗ ಇದು ಕೇವಲ ಸಾಮಾನ್ಯ ಆಟದ ಮೈದಾನವಾಗಿತ್ತು. 1956 ರಲ್ಲಿ ಚಿನ್ನದ ಗಣಿ ರಾಷ್ಟ್ರೀಕರಣಗೊಂಡು ಕೇಂದ್ರ ಸರ್ಕಾರದ ಒಡೆತನಕ್ಕೆ ಬಂದ ನಂತರ, 1972 ರಲ್ಲಿ ಇದನ್ನು ಸುಸಜ್ಜಿತ ಫುಟ್‌ಬಾಲ್ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಯಿತು. ಇಲ್ಲಿ ತರಬೇತಿ ಪಡೆದ ನೂರಾರು ಗಣಿ ಕಾರ್ಮಿಕರ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಕ್ರೀಡಾ ಕೋಟಾದಡಿ HAL, BEL, BHEL ನಂತಹ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

1980ರಲ್ಲಿ ಚಿನ್ನದ ಗಣಿಯ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೂಡ ಇಲ್ಲಿಗೆ ಆಗಮಿಸಿದ್ದರು. ಹೀಗೆ ಭವ್ಯ ಇತಿಹಾಸವಿರುವ ಈ ಕ್ರೀಡಾಂಗಣಗಳು ಮರುಜೀವ ಪಡೆದರೆ, ಇಂದಿನ ಯುವ ಪೀಳಿಗೆಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಭವಿಷ್ಯ ಸಿಗಲಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ಇದನ್ನೂ ಓದಿ: ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ

ಒಟ್ಟಾರೆಯಾಗಿ, ಚಿನ್ನದ ಗಣಿಗೆ ಬೀಗ ಬಿದ್ದ ನಂತರ ತುಕ್ಕು ಹಿಡಿದಿದ್ದ ಕೆಜಿಎಫ್‌ನ ಕ್ರೀಡಾ ಇತಿಹಾಸಕ್ಕೆ ಸಂಸದ ಮಲ್ಲೇಶ್ ಬಾಬು ಹಾಗೂ ಸ್ಥಳೀಯರ ಹೋರಾಟದ ಮೂಲಕ ಕೊನೆಗೂ ಪುನರ್ಜನ್ಮ ಸಿಕ್ಕಂತಾಗಿದೆ. ಇಲ್ಲಿನ ಎಲ್ಲಾ ಮೈದಾನಗಳು ಸಂಪೂರ್ಣವಾಗಿ ಪುನಶ್ಚೇತನಗೊಂಡರೆ, ಕೆಜಿಎಫ್‌ನಲ್ಲಿ ಚಿನ್ನದ ಇತಿಹಾಸದಷ್ಟೇ ಪ್ರಸಿದ್ಧಿ ಪಡೆದಿದ್ದ ಕ್ರೀಡಾ ಗತವೈಭವ ಮರುಕಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:33 pm, Mon, 25 May 26

Source link

ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್ – Kannada News | Ram Charan speech in Peddi movie Bengaluru Press Meet with Shiva Rajkumar

ನಟ ರಾಮ್ ಚರಣ್ ಅವರು ಬೆಂಗಳೂರಿಗೆ ಬಂದು ‘ಪೆದ್ದಿ’ (Peddi) ಸಿನಿಮಾದ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇದಿಕೆಯಲ್ಲಿ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Shiva Rajkumar) ಸಾಥ್ ನೀಡಿದರು. ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಮತ್ತು ರಾಮ್ ಚರಣ್ ಅವರು ತೆರೆ ಹಂಚಿಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ನೆರೆದಿದ್ದ ಅನೇಕ ಅಭಿಮಾನಿಗಳನ್ನು ಉದ್ದೇಶಿಸಿ ರಾಮ್ ಚರಣ್ ಅವರು ಮಾತನಾಡಿದರು. ಕನ್ನಡ, ತೆಲುಗು, ಇಂಗ್ಲಿಷ್ ಮಿಶ್ರಿತವಾಗಿ ಅವರು ಮಾತಾಡಿದರು. ‘ಈಗ ನನಗೆ ಸ್ವಲ್ಪ ಕನ್ನಡ ಬರುತ್ತದೆ. ಮುಂದಿನ ಭೇಟಿ ವೇಳೆಗೆ ಕನ್ನಡ ಕಲಿತುಕೊಳ್ಳುತ್ತೇನೆ. ಮುಂದಿನ ಬಾರಿ ಜಾಸ್ತಿ ಕನ್ನಡ ಮಾತಾಡುತ್ತೇನೆ’ ಎಂದು ರಾಮ್ ಚರಣ್ (Ram Charan) ಅವರು ಹೇಳಿದರು. ಈ ಸಿನಿಮಾವನ್ನು ಬಹಳ ಕಷ್ಟಪಟ್ಟು ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಜೂನ್ 4ರಂದು ‘ಪೆದ್ದಿ’ ಸಿನಿಮಾ ರಿಲೀಸ್ ಆಗಲಿದೆ. ಜಾನ್ವಿ ಕಪೂರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗುಲ್ಮಾರ್ಗ್‌ನಲ್ಲಿ ಆಕಾಶದ ಮಧ್ಯೆ ಸಿಲುಕಿದ 300 ಪ್ರವಾಸಿಗರು!

ಶ್ರೀನಗರ, ಮೇ 25: ಇಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನಪ್ರಿಯ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿರುವ ಗೊಂಡೊಲಾ ಕೇಬಲ್ ಕಾರ್ ಸೇವೆಯಲ್ಲಿ ತಾಂತ್ರಿಕ ದೋಷ ಸಂಭವಿಸಿದೆ. ಆದರೆ, ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಇದರಿಂದಾಗಿ ಸುಮಾರು 300 ಪ್ರವಾಸಿಗರು ಕೇಬಲ್ ಕಾರ್​ಗಳಲ್ಲಿ ಸಿಲುಕಿದರು. ತಾಂತ್ರಿಕ ಸಮಸ್ಯೆಯಿಂದಾಗಿ ಗೊಂಡೊಲಾ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್‌ನಲ್ಲಿ ಸೂರ್ಯ ಅಬ್ಬರ: 300 ಕೋಟಿ ಕ್ಲಬ್‌ನತ್ತ ‘ಕರುಪ್ಪು’ ಸಿನಿಮಾ ಕಲೆಕ್ಷನ್ – Kannada News | Trisha Krishnan Suriya starrer Karuppu Box Office Collection crosses Rs 200 Cr heading towards 300 Cr

ಕಾಲಿವುಡ್ ನಟ ಸೂರ್ಯ (Suriya) ಅಭಿನಯದ ಆ್ಯಕ್ಷನ್ ಡ್ರಾಮಾ ಸಿನಿಮಾ ‘ಕರುಪ್ಪು’ (Karuppu) ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಎರಡನೇ ವಾರಾಂತ್ಯದಲ್ಲೂ ಚಿತ್ರದ ಕಲೆಕ್ಷನ್ ಭರ್ಜರಿಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಗಳನ್ನು ಬರೆಯುವತ್ತ ಮುನ್ನುಗ್ಗುತ್ತಿದೆ. ಚಿತ್ರದ ಮೊದಲ ದಿನದ ಗಳಿಕೆಗಿಂತಲೂ ಕಳೆದ ಭಾನುವಾರದ ಕಲೆಕ್ಷನ್ ಹೆಚ್ಚಾಗಿರುವುದು ಚಿತ್ರದ ಭರ್ಜರಿ ಯಶಸ್ಸಿಗೆ ಸಾಕ್ಷಿಯಾಗಿದೆ.

ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕರುಪ್ಪು’ ಸಿನಿಮಾ ಈಗ 300 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಲು ಸಜ್ಜಾಗಿದೆ. ಈ ವಾರದಲ್ಲೇ ಬಕ್ರೀದ್ ಹಬ್ಬದ ರಜೆ ಇರುವುದರಿಂದ ಚಿತ್ರದ ಬಿಸಿನೆಸ್‌ಗೆ ಮತ್ತಷ್ಟು ಬೂಸ್ಟ್ ಸಿಗಲಿದೆ. ಕಳೆದ ಸುಮಾರು ಒಂದು ದಶಕದಿಂದ ಸರಿಯಾದ ಹಿಟ್ ಸಿನಿಮಾ ಇಲ್ಲದೆ ಟ್ರೋಲ್‌ಗಳಿಗೆ ಒಳಗಾಗಿದ್ದ ನಟ ಸೂರ್ಯ, ಈಗ ದಾಖಲೆಗಳ ಮೇಲೆ ದಾಖಲೆ ಬರೆಯುವ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ನೆನಪಿಡುವಂತಹ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

ಖ್ಯಾತ ನಟ ಮತ್ತು ನಿರ್ದೇಶಕ ಆರ್‌.ಜೆ. ಬಾಲಾಜಿ ಆ್ಯಕ್ಷನ್ ಕಟ್‌ ಹೇಳಿರುವ ಈ ಚಿತ್ರವನ್ನು ಪ್ರತಿಷ್ಠಿತ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ನಟಿಸಿದ್ದು, ಪ್ರಮುಖ ಪಾತ್ರಗಳಲ್ಲಿ ಆರ್‌.ಜೆ. ಬಾಲಾಜಿ, ಇಂದ್ರನ್ಸ್, ನಟ್ಟಿ ಸುಬ್ರಮಣಿಯನ್, ಸ್ವಾಸಿಕಾ ಹಾಗೂ ಅನಘಾ ಮಾಯಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಾಯಿ ಅಭ್ಯಂಕರ್ ಅವರ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿರುವ ‘ಕರುಪ್ಪು’ ಚಿತ್ರದ ಹಾದಿ ಆರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಚಿತ್ರದ ನಿರ್ಮಾಣ ಸಂಸ್ಥೆಯಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ ಚಿತ್ರೀಕರಣದ ಸಮಯದಿಂದಲೇ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಈ ಹಣಕಾಸಿನ ಸಮಸ್ಯೆಯಿಂದಾಗಿ ವಿತರಕರಿಗೆ ನೀಡಬೇಕಿದ್ದ ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ, ಮೇ 14ರಂದು ನಿಗದಿಯಾಗಿದ್ದ ಪ್ರೀಮಿಯರ್ ಹಾಗೂ ಮುಂಜಾನೆಯ ಶೋಗಳು ಕೊನೆ ಕ್ಷಣದಲ್ಲಿ ರದ್ದಾಗಿ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಮೂಡಿಸಿತ್ತು.

ಇದನ್ನೂ ಓದಿ: ವಿಜಯ್ ಸಿಎಂ ಆದ ಬಳಿಕ ಗೆದ್ದ ತ್ರಿಷಾ; ‘ಕರುಪ್ಪು’ ಚಿತ್ರ ಹೊಗಳಿದ ಫ್ಯಾನ್ಸ್

ಅಷ್ಟೇ ಅಲ್ಲದೆ, ಚಿತ್ರದ ಒಂದು ಪ್ರಮುಖ ದೃಶ್ಯದಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಅವರ ಹೆಸರನ್ನು ಬಳಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಯಾಗಿ, ನಂತರ ಚಿತ್ರತಂಡ ಬಹಿರಂಗವಾಗಿ ಕ್ಷಮೆಯಾಚಿಸಬೇಕಾಗಿ ಬಂದಿತ್ತು. ಇಷ್ಟೆಲ್ಲಾ ಆರಂಭಿಕ ಹಿನ್ನಡೆ ಹಾಗೂ ವಿವಾದಗಳ ನಡುವೆಯೂ ಧೃತಿಗೆಡದ ಚಿತ್ರತಂಡ, ಮೇ 15ರಂದು ಚಿತ್ರವನ್ನು ಯಶಸ್ವಿಯಾಗಿ ತೆರೆಗೆ ತಂದಿತು. ಈಗ ಆ ಎಲ್ಲಾ ಕಷ್ಟಗಳನ್ನು ಮರೆಸುವಂತೆ ಸಿನಿಮಾ ವಿಶ್ವಾದ್ಯಂತ ದಾಖಲೆಯ ಕಲೆಕ್ಷನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಿಲ್ಲಿ ಜಿಮ್ಖಾನಾ ಕ್ಲಬ್​ಗೆ ಬೀಗ? ಹೃದಯಭಾಗದಲ್ಲಿ 27 ಎಕರೆಯಲ್ಲಿರವ ಈ ಕ್ಲಬ್ ಸುತ್ತಮುತ್ತಲ ವಿವಾದಗಳೇನು? – Kannada News | Delhi Gymkhana Club controveries and why govt want to close this historic club

ನವದೆಹಲಿ, ಮೇ 25: ರಾಷ್ಟ್ರರಾಜಧಾನಿಯ ಪ್ರತಿಷ್ಠಿತ ಲೂಟ್ಯನ್ಸ್ ಪ್ರದೇಶದಲ್ಲಿರುವ ಭಾರತದ ಅತ್ಯಂತ ಹಳೆಯ ಮತ್ತು ಗಣ್ಯ (Elite) ಕ್ಲಬ್‌ಗಳಲ್ಲಿ ಒಂದಾದ ‘ದೆಹಲಿ ಜಿಮ್ಖಾನಾ ಕ್ಲಬ್’ (Delhi Gymkhana Club) ಇತಿಹಾಸದ ಅತಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪ್ರಧಾನಿ ನಿವಾಸದ (Lok Kalyan Marg) ಪಕ್ಕದಲ್ಲೇ ಇರುವ, 27.3 ಎಕರೆ ವಿಸ್ತೀರ್ಣದ ಈ ಅತ್ಯಮೂಲ್ಯ ಸರ್ಕಾರಿ ಭೂಮಿಯನ್ನು ತಕ್ಷಣವೇ ವಾಪಸ್ ಪಡೆಯಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಭೂಮಿ ಮತ್ತು ಅಭಿವೃದ್ಧಿ ಕಚೇರಿ (L&DO) ಆದೇಶಿಸಿದೆ. ಕೇಂದ್ರ ಸರ್ಕಾರದ ಈ ಹಠಾತ್ ಆದೇಶವು ದೆಹಲಿಯ ರಾಜತಾಂತ್ರಿಕರು, ನಿವೃತ್ತ ಸೇನಾ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.

ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಜಿಮ್ಖಾನಾ ಕ್ಲಬ್ ಇರುವ ಜಾಗವು ಅತ್ಯಂತ ಸೂಕ್ಷ್ಮ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವಾದ ಪ್ರದೇಶದಲ್ಲಿದೆ (Highly Sensitive and Strategic Area).

ಈ ಪ್ರೀಮಿಯಂ ಭೂಮಿಯನ್ನು ದೇಶದ ರಕ್ಷಣಾ ಮೂಲಸೌಕರ್ಯಗಳನ್ನು (Defence Infrastructure) ಬಲಪಡಿಸಲು ಮತ್ತು ಇತರ ಪ್ರಮುಖ ಸಾರ್ವಜನಿಕ ಭದ್ರತಾ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಲೀಸ್ ರದ್ದು ಮಾಡಿದ ಸರ್ಕಾರ

1928 ರ ಮೂಲ ಲೀಸ್ ಒಪ್ಪಂದದ (Lease Deed) ‘ಸಾರ್ವಜನಿಕ ಉದ್ದೇಶ’ದ ನಿಯಮವನ್ನು (Clause 4) ಉಲ್ಲೇಖಿಸಿ, ಕೇಂದ್ರ ಸರ್ಕಾರವು ಕ್ಲಬ್‌ನ ಲೀಸ್ ಅನ್ನು ತಕ್ಷಣವೇ ರದ್ದುಗೊಳಿಸಿದೆ. ಜೂನ್ 5 ರೊಳಗೆ ಕ್ಲಬ್‌ನ ಎಲ್ಲಾ ಕಟ್ಟಡಗಳು, ಆಟದ ಮೈದಾನಗಳು ಮತ್ತು ಲಾನ್‌ಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಅಮೆರಿಕದ ಯುದ್ಧವೆಲ್ಲವೂ ತೈಲಕ್ಕಾಗಿಯೇ; ಇವಿ, ಸೋಲಾರ್ ದಾಂಗುಡಿ ಇಟ್ಟರೂ ಆಯಿಲ್​ಗೆ ಯಾಕಿಷ್ಟು ಬೇಡಿಕೆ? ಈ ಕಪ್ಪು ಚಿನ್ನ ಅಂತಿಂಥದ್ದಲ್ಲ

47 ಕೋಟಿ ರೂಪಾಯಿ ಬಾಕಿ ಮತ್ತು ಹಳೆಯ ವಿವಾದಗಳು

ಕೇಂದ್ರದ ಈ ಕಠಿಣ ಕ್ರಮಕ್ಕೆ ಕೇವಲ ಭದ್ರತೆ ಮಾತ್ರ ಕಾರಣವಲ್ಲ, ಕಳೆದ ಕೆಲವು ವರ್ಷಗಳಿಂದ ಕ್ಲಬ್ ಸುತ್ತ ಹತ್ತಾರು ವಿವಾದಗಳು ಸುತ್ತಿಕೊಂಡಿವೆ:

  • ಬಾಡಿಗೆ ದರ ಏರಿಕೆ: ಕ್ಲಬ್‌ನ ವಾರ್ಷಿಕ ಬಾಡಿಗೆ ಕೇವಲ ₹409 ಇತ್ತು. ಆದರೆ ಸರ್ಕಾರ ಇದನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಏಪ್ರಿಲ್ 2026 ರಲ್ಲಿ ಬರೋಬ್ಬರಿ ₹47.59 ಕೋಟಿ ಬಾಕಿ ಪಾವತಿಸುವಂತೆ ಕ್ಲಬ್‌ಗೆ ನೋಟಿಸ್ ನೀಡಿತ್ತು.
  • ಅತಿ ಗಣ್ಯರ ಅಪಾರ್ಟ್‌ಹೈಡ್ (ಘೆಟ್ಟೋಯಿಸಂ): ಕ್ಲಬ್ ಕೇವಲ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ಜನರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಮತ್ತು ಸದಸ್ಯತ್ವಕ್ಕಾಗಿ ಜನರು 30-40 ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಈ ಹಿಂದೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT) ತರಾಟೆಗೆ ತೆಗೆದುಕೊಂಡಿತ್ತು.
  • ಹಣಕಾಸು ಅಕ್ರಮಗಳು: ಕ್ರೀಡೆಯ ಹೆಸರಲ್ಲಿ ಜಾಗ ಪಡೆದು ಕೇವಲ ಶೇ. 2.7 ರಷ್ಟು ಹಣವನ್ನು ಮಾತ್ರ ಕ್ರೀಡೆಗೆ ಬಳಸಿ, ಉಳಿದ ಹಣವನ್ನು ಮದ್ಯ ಮತ್ತು ಮನರಂಜನೆಗೆ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ 2022 ರಿಂದ ಕ್ಲಬ್‌ನ ಆಡಳಿತವನ್ನು ಸರ್ಕಾರಿ ನೇಮಿತ ಸಮಿತಿಯೇ ನೋಡಿಕೊಳ್ಳುತ್ತಿದೆ.

ಕೋರ್ಟ್ ಮೆಟ್ಟಿಲೇರಿದ ಜಿಮ್ಖಾನಾ ಸದಸ್ಯರು; ನೌಕರರ ಆತಂಕ

ಸರ್ಕಾರದ ಈ ಹಠಾತ್ ಒಕ್ಕಲೆಬ್ಬಿಸುವಿಕೆ ಆದೇಶದ ವಿರುದ್ಧ ಕ್ಲಬ್‌ನ ಖಾಯಂ ಸದಸ್ಯರು ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ

“ಯಾವುದೇ ಮುನ್ಸೂಚನೆ ಇಲ್ಲದೆ, ಕೇವಲ 15 ದಿನಗಳ ಕಾಲಾವಕಾಶ ನೀಡಿ ಶತಮಾನದ ಇತಿಹಾಸವಿರುವ ಸಂಸ್ಥೆಯನ್ನು ಖಾಲಿ ಮಾಡಲು ಹೇಳುತ್ತಿರುವುದು ಕಾನೂನುಬಾಹಿರ ಮತ್ತು ಬಲವಂತದ ಒಕ್ಕಲೆಬ್ಬಿಸುವಿಕೆ” ಎಂದು ಕ್ಲಬ್ ಸದಸ್ಯರು ವಾದಿಸಿದ್ದಾರೆ. ಅಲ್ಲದೆ, ಕ್ಲಬ್‌ನಲ್ಲಿ ಕೆಲಸ ಮಾಡುವ ಸುಮಾರು 600 ಕ್ಕೂ ಹೆಚ್ಚು ಬಡ ನೌಕರರ ಜೀವನೋಪಾಯ ಏನಾಗಬೇಕು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಕಿರಣ್ ಬೇಡಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಸರ್ಕಾರದ ಈ ನಿರ್ಧಾರವನ್ನು ‘ದುರದೃಷ್ಟಕರ’ ಎಂದು ಕರೆದಿದ್ದಾರೆ. ಸದ್ಯ ಹೈಕೋರ್ಟ್ ಈ ಅರ್ಜಿಯ ತುರ್ತು ವಿಚಾರಣೆಗೆ ಒಪ್ಪಿಕೊಂಡಿದ್ದು, ಜಿಮ್ಖಾನಾ ಕ್ಲಬ್ ಉಳಿವು ಈಗ ನ್ಯಾಯಾಲಯದ ತೀರ್ಪಿನ ಮೇಲೆ ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕಿಲಕಿಲನೆ ನಕ್ಕ ಪೊಲೀಸ್ ಅಧಿಕಾರಿ; ವಿಡಿಯೋಗೆ ಭಾರೀ ಆಕ್ರೋಶ

ಚೆನ್ನೈ, ಮೇ 25: ತಮಿಳುನಾಡಿನ ಕೊಯಮತ್ತೂರು (Coimbatore) ಜಿಲ್ಲೆಯಲ್ಲಿ ನಡೆದ 10 ವರ್ಷದ ಬಾಲಕಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ನಗುತ್ತಾ ಬೇಜವಾಬ್ದಾರಿಯಿಂದ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ಹರಿದಾಡುತ್ತಿದ್ದಂತೆ ಜಾಲತಾಣಗಳಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಪೊಲೀಸರ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಸಂತ್ರಸ್ತ ಕುಟುಂಬದ ದುಃಖಕ್ಕೆ ಕಿಂಚಿತ್ತೂ ಗೌರವ ನೀಡದ ಆ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರರು ಮತ್ತು ಮಹಿಳಾ ಸಂಘಟನೆಗಳು ತಮಿಳುನಾಡು ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈರಾಯ್ಡ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಆಹಾರದಲ್ಲಿ ಈ ಬದಲಾವಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ – Kannada News | Early Signs Of Thyroid Problems + Diet Plan For Healthy Thyroid On World Thyroid Day 2026

ಭಾರತದಲ್ಲಿ ಥೈರಾಯ್ಡ್ (Thyroid) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ವರದಿಗಳ ಪ್ರಕಾರ ಸುಮಾರು 4.2 ಕೋಟಿ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಇದು ಹೆಚ್ಚು ಕಂಡುಬರುತ್ತಿದೆಯಾದರೂ, ಇತ್ತೀಚೆಗೆ ಮಕ್ಕಳು ಮತ್ತು ಪುರುಷರಲ್ಲೂ ಪ್ರಕರಣಗಳು ಹೆಚ್ಚಾಗುತ್ತಿವೆ. ತಜ್ಞರ ಪ್ರಕಾರ, ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆ ಗಂಭೀರವಾಗಬಹುದು. ಸೀನಿಯರ್ ಡೈಟಿಷಿಯನ್ ಗೀತಿಕಾ ಚೋಪ್ರಾ ಅವರು ಹೇಳುವ ಪ್ರಕಾರ, ಥೈರಾಯ್ಡ್‌ನಲ್ಲಿ ಮುಖ್ಯವಾಗಿ ಎರಡು ವಿಧಗಳಿರುತ್ತವೆ. ಒಂದು ಹೈಪೋಥೈರಾಯ್ಡಿಸಮ್ ಮತ್ತು ಹೈಪರ್‌ಥೈರಾಯ್ಡಿಸಮ್. ಇವುಗಳ ಲಕ್ಷಣಗಳು ಕೂಡ ಬೇರೆಯಾಗಿರುತ್ತವೆ. ಹಾಗಾಗಿ ಈ ಬಗ್ಗೆ ತಿಳಿದುಕೊಂಡು ಸಮಸ್ಯೆ ತಡೆಗಟ್ಟಬೇಕಾಗುತ್ತದೆ. ಹಾಗಾದರೆ ಥೈರಾಯ್ಡ್ ಸಮಸ್ಯೆ ಇರುವವರು ತಮ್ಮ ಆಹಾರಕ್ರಮದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಥೈರಾಯ್ಡ್ ಇದ್ದಾಗ ಆಹಾರಕ್ರಮ ಹೇಗಿರಬೇಕು?

ಪ್ರೋಟೀನ್ ಸಮೃದ್ಧ ಆಹಾರ: ತಜ್ಞರ ಪ್ರಕಾರ, ಪ್ರೋಟೀನ್ ಸಮೃದ್ಧ ಆಹಾರ ಸೇವಿಸುವುದು ಬಹಳ ಮುಖ್ಯ. ದಾಲ್, ಪನೀರ್, ಮೊಟ್ಟೆ, ಮೊಸರು, ಮೀನು ಮತ್ತು ಚಿಕನ್ ಆಹಾರದಲ್ಲಿ ಸೇರಿಸಬೇಕು. ಇದು ಮೆಟಾಬಾಲಿಸಂ ಸುಧಾರಿಸಿ ಆಯಾಸ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೆಲೆನಿಯಂ ಮತ್ತು ಜಿಂಕ್ ಅಗತ್ಯ: ಪಂಪ್ಕಿನ್ ಸೀಡ್ಸ್, ನಟ್ಸ್, ಸಮುದ್ರ ಆಹಾರ ಮತ್ತು ಸಂಪೂರ್ಣ ಧಾನ್ಯಗಳಲ್ಲಿ ಇರುವ ಸೆಲೆನಿಯಂ ಹಾಗೂ ಜಿಂಕ್ ಥೈರಾಯ್ಡ್ ಹಾರ್ಮೋನ್ ಸಮತೋಲನಕ್ಕೆ ಸಹಕಾರಿ.

ಐಯೋಡಿನ್ ಸಮತೋಲನ ಮುಖ್ಯ: ಐಯೋಡಿನ್ ಅಗತ್ಯವಾದರೂ ಅದರ ಅತಿಯಾದ ಸೇವನೆ ಹಾನಿಕಾರಕವಾಗಬಹುದು. ಆದ್ದರಿಂದ ಐಯೋಡೈಸ್ ಉಪ್ಪನ್ನು ನಿಯಮಿತ ಪ್ರಮಾಣದಲ್ಲಿ ಬಳಸಬೇಕು.

ಪ್ರೊಸೆಸ್ಡ್ ಮತ್ತು ಸಕ್ಕರೆ ಆಹಾರ ಕಡಿಮೆ ಮಾಡಿ: ಸಾಫ್ಟ್ ಡ್ರಿಂಕ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಫ್ರೈಡ್ ಮತ್ತು ಹೆಚ್ಚು ಸಕ್ಕರೆ ಇರುವ ಆಹಾರಗಳು ದೇಹದಲ್ಲಿ ಉರಿಯನ್ನು ಹೆಚ್ಚಿಸಬಹುದು ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು.

ಗಟ್ ಆರೋಗ್ಯಕ್ಕೂ ಗಮನ ಕೊಡಿ: ಮೊಸರು, ಮಜ್ಜಿಗೆ, ಫರ್ಮೆಂಟೆಡ್ ಫುಡ್ಸ್ ಮತ್ತು ಫೈಬರ್ ಸಮೃದ್ಧ ಆಹಾರಗಳು ಗಟ್ ಆರೋಗ್ಯ ಸುಧಾರಿಸಿ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.

ತಜ್ಞರ ಪ್ರಕಾರ, ಔಷಧಿಯ ಜೊತೆಗೆ ಸರಿಯಾದ ಆಹಾರ, ಉತ್ತಮ ನಿದ್ರೆ, ವ್ಯಾಯಾಮ ಮತ್ತು ನಿಯಮಿತ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version