Headlines

ನಾನ್ಯಾವತ್ತೂ ಹೂಡಿಕೆ ಬಗ್ಗೆ ಮಾತನಾಡಲ್ಲ, ನಕಲಿ ವಿಡಿಯೋಗಳ ಬಗ್ಗೆ ಎಚ್ಚರದಿಂದಿರಿ: ಸುಧಾ ಮೂರ್ತಿ – Kannada News | Sudha Murthy, says she won’t talk about investment, flags deepfake videos circulating online

ಬೆಂಗಳೂರು, ಜನವರಿ 21: ಡೀಪ್ ಫೇಕ್ ತಂತ್ರಜ್ಞಾನ ಬಂದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ಸೆಲಬ್ರಿಟಿಗಳ ವಿಡಿಯೋಗಳು ಹರಿದಾಡುತ್ತಿವೆ. ಇಷ್ಟು ಹಣ ಹೂಡಿಕೆ ಮಾಡಿ, ಇಷ್ಟು ಲಾಭ ಮಾಡಿ ಎಂಬಿತ್ಯಾದಿ ಪ್ರಲೋಭನೆಗಳನ್ನು ಈ ವಿಡಿಯೋಗಳಲ್ಲಿ ಕಾಣಬಹುದು. ಇಂಥ ಬಹುತೇಕ ವಿಡಿಯೋಗಳು ಡೀಪ್​ಫೇಕ್ (Deepfake) ಬಳಸಿ ತಯಾರಾದ ನಕಲಿ ವಿಡಿಯೋಗಳೇ ಆಗಿವೆ. ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ (Sudha Murthy) ಇತ್ಯಾದಿ ಗಣ್ಯ ವ್ಯಕ್ತಿಗಳೇ ಮಾತನಾಡಿರುವಂತೆ ಈ ವಿಡಿಯೋಗಳಿವೆ. ಸ್ವತಃ ನರೇಂದ್ರ ಮೋದಿ ಅವರನ್ನೇ ಬಿಟ್ಟಿಲ್ಲ. ಇನ್ಫೋಸಿಸ್ ಪ್ರತಿಷ್ಠಾನದ…

Read More

ಬ್ಯಾಂಕಾಕ್​ನಿಂದ ಬೆಂಗಳೂರಿಗೆ‌ ವಿಮಾನದಲ್ಲಿ ಬಂದವರ ಬಳಿ ಇತ್ತು ಆಮೆಗಳು ಸೇರಿ 35 ವನ್ಯಜೀವಿ! ಮೂವರ ಬಂಧನ

ಬೆಂಗಳೂರು, ಜನವರಿ 21: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 35 ವನ್ಯಜೀವಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಈ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಷ್ಟೊಂದು ಸುಲಭವಾಗಿ ಈ ವನ್ಯಜೀವಿಗಳನ್ನು ಹೇಗೆ ಸಾಗಿಸಲಾಯಿತು ಎಂಬ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕದ ಇನ್ನಷ್ಟು…

Read More

ಈ ವಾರ ಕನ್ನಡದ ಎರಡು ದೊಡ್ಡ ಸಿನಿಮಾಗಳು ರಿಲೀಸ್; ಎರಡರಲ್ಲೂ ರಚಿತಾ ನಟನೆ – Kannada News | Rachita Ram’s Double Treat: Cult and Landlord Hit Theaters Jan 23

ಸಂಕ್ರಾಂತಿ ಸಂದರ್ಭದಲ್ಲಿ ತೆಲುಗು ಸಿನಿಮಾಗಳು ರಿಲೀಸ್ ಆಗಿ ಅಬ್ಬರಿಸಿದವು. ಈಗ ಜನವರಿ 26 ಬರುತ್ತಿದೆ. ಇದರ ಲಾಭ ಪಡೆಯಲು ಕನ್ನಡದ ನಿರ್ಮಾಪಕರು ಮುಂದಾಗಿದ್ದಾರೆ. ಜನವರಿ 23ರಂದು ಕನ್ನಡದ ಎರಡು ಪ್ರಮುಖ ಸಿನಿಮಾಗಳು ರಿಲೀಸ್ ಆಗುತ್ತಿವೆ. ಒಂದು ಎ ಪ್ರಮಾಣ ಪತ್ರ ಪಡೆದ ಸಿನಿಮಾ (Cinema) ಆದರೆ ಮತ್ತೊಂದು ಯುಎ ಪ್ರಮಾಣ ಪತ್ರ ಪಡೆದ ಚಿತ್ರ. ಈ ಎರಡೂ ಸಿನಿಮಾಗಳು ಧೂಳೆಬ್ಬಿಸಲು ರೆಡಿ ಆಗಿದೆ. ಕಲ್ಟ್ ‘ಉಪಾಧ್ಯಕ್ಷ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದ ಅನಿಲ್ ಕುಮಾರ್ ಅವರು…

Read More

ಲೇಡಿ ಫಿಟ್ನೆಸ್ ಇನ್​ಫ್ಲುಯೆನ್ಸರ್​​ಗೆ ಲೈಂಗಿಕ ಕಿರುಕುಳ: ಹರಿಯಾಣ ವ್ಯಕ್ತಿ ಅರೆಸ್ಟ್​​ – Kannada News | Bengaluru Gym Trainer Harassed by Haryana Man, Accused Arrested

ಬೆಂಗಳೂರು, ಜನವರಿ 21: ಯುವತಿಗೆ ಅಶ್ಲೀಲ ಮೆಸೇಜ್​ ಮಾಡುತ್ತಿದ್ದ ಹರಿಯಾಣ ಮೂಲದ ಸುಧೀರ್ ಕುಮಾರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಲೇಡಿ ಫಿಟ್ನೆಸ್ ಇನ್​ಫ್ಲುಯೆನ್ಸರ್​ ಆಗಿರುವ ಯುವತಿಯನ್ನುಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಿದ್ದ ಆರೋಪಿ ಅಶ್ಲೀಲ ಮೆಸೇಜ್ ಮಾಡ್ತಿದ್ದ. ಲೈಂಗಿಕವಾಗಿ ಪ್ರಚೋದಿಸುವ ಮೆಸೇಜ್​ ಮಾಡಿ ಹಿಂಸೆ ಕೊಡ್ತಿದ್ದ. ನಂತರ ಯುವತಿಗಾಗಿ ಹರಿಯಾಣದಿಂದ ಬೆಂಗಳೂರಿಗೆ ಬಂದಿದ್ದ ಈತ, ಬೆಂಗಳೂರಿಗೆ ಬಂದು ಜಿಮ್ ಹಾಗೂ ಸಹೋದ್ಯೋಗಿಗಳ ಬಳಿ ವಿಚಾರಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರಿಗೆ ಯುವತಿ ದೂರು ನೀಡಿದ್ದು, ಸದ್ಯ ಪ್ರಕರಣ…

Read More

Vastu for Wedding Cards: ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸುವ ಮುನ್ನ ಈ ವಾಸ್ತು ನಿಯಮ ತಿಳಿದುಕೊಳ್ಳಿ – Kannada News | Vastu for Wedding Cards: Auspicious Colors and Designs for a Blessed Marriage

ಸನಾತನ ಧರ್ಮದ ಗ್ರಂಥಗಳಲ್ಲಿ ಮದುವೆ ಸೇರಿದಂತೆ 16 ಸಂಸ್ಕಾರಗಳನ್ನು ವಿವರಿಸಲಾಗಿದೆ. ಅವುಗಳಲ್ಲಿ ವಿವಾಹವನ್ನು ಮಾನವನ ಜೀವನದ ಅತ್ಯಂತ ಪವಿತ್ರ ಮತ್ತು ಮಹತ್ವದ ಹಂತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕೇ ಮದುವೆಯ ಆಮಂತ್ರಣ ಪತ್ರಿಕೆಗೂ ವಿಶೇಷ ಮಹತ್ವವಿದೆ. ಅದು ಕೇವಲ ಆಮಂತ್ರಣ ಪತ್ರವಲ್ಲ, ಬದಲಾಗಿ ಹೊಸ ಜೀವನದ ಆರಂಭವನ್ನು ಘೋಷಿಸುವ ಮೊದಲ ಅಧಿಕೃತ ಸಂದೇಶವಾಗಿದೆ. ಪ್ರಾಚೀನ ವಾಸ್ತು ಶಾಸ್ತ್ರವು ಜೀವನದ ಎಲ್ಲ ಹಂತಗಳಿಗೂ ಮಾರ್ಗದರ್ಶನ ನೀಡುವ ವಿಜ್ಞಾನವಾಗಿದೆ. ಮದುವೆಯ ಆಮಂತ್ರಣ ಪತ್ರಿಕೆ ಹೇಗಿರಬೇಕು, ಅದರಲ್ಲಿ ಯಾವ ಬಣ್ಣಗಳು, ಪದಗಳು ಮತ್ತು…

Read More

ಬಿಜೆಪಿ-ಕಾಂಗ್ರೆಸ್​​ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಪರ-ವಿರೋಧ ಚರ್ಚೆ – Kannada News | Udupi Flag Row: BJP Opposes Congress Complaint; DC Issues Clarification

ಉಡುಪಿ ಡಿಸಿ ನಡೆಗೆ ಪರ-ವಿರೋಧ ಚರ್ಚೆ ಉಡುಪಿ, ಜನವರಿ 21: ಶೀರೂರು ಮಠದ ಪರ್ಯಾಯ ಮಹೋತ್ವ ಹಿನ್ನೆಲೆ ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಜಿಲ್ಲಾಧಿಕಾರಿಗಳಿಂದ ಚಾಲನೆ ವಿಚಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಬಿಜೆಪಿ ಶಾಸಕ ಯಶಪಾಲ್ ಸುವರ್ಣ ನೀಡಿದ್ದ ಕೇಸರಿ ಧ್ವಜವನ್ನು ಪಡೆದಿದ್ದ ಡಿಸಿ ಸ್ವರೂಪ ಟಿ. ಕೆ. ಅದನ್ನು ತೋರಿಸುವ ಮೂಲಕ ಪರ್ಯಾಯ ಮೆರವಣಿಗೆ ಚಾಲನೆ ನೀಡಿದ್ದರು. ಇದೇ ವಿಚಾರಕ್ಕೀಗ ಉಡುಪಿ ಜಿಲ್ಲಾ ಕಾಂಗ್ರೆಸ್​​ ಸಮಿತಿ ಆಕ್ಷೇಪ ತೆಗೆದಿದೆ. ಮುಂದುವರಿದು ಮುಖ್ಯಮಂತ್ರಿಗಳಿಗೆ…

Read More

Video: ಸಾರ್ವಜನಿಕ ಶೌಚಾಲಯದಲ್ಲಿ ಎರಡೂವರೆ ತಿಂಗಳ ನಾಯಿ ಮರಿ ಮೇಲೆ ಅತ್ಯಾಚಾರವೆಸಗಿದ ಕಾಮುಕ – Kannada News | Mumbai: Newborn Puppy Brutally Abused in Malad, Suspect Taken into Custody

ಮುಂಬೈ, ಜನವರಿ 21: ಎರಡೂವರೆ ತಿಂಗಳ ನಾಯಿ(Dog) ಮರಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಯುವಕನೊಬ್ಬ ಮರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಥಳಿಸಿದ ಆಘಾತಕಾರಿ ಪ್ರಾಣಿ ಹಿಂಸೆಯ ಘಟನೆ ಬೆಳಕಿಗೆ ಬಂದಿದೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ  ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಾಣಿ ಕಲ್ಯಾಣ ಸಂಸ್ಥೆ ಪಿಎಎಲ್ (ಪ್ಯೂರ್ ಅನಿಮಲ್ ಲವರ್ಸ್) ಫೌಂಡೇಶನ್ ಹಂಚಿಕೊಂಡಿರುವ ಈ ವೀಡಿಯೊದಲ್ಲಿ ಮುಂಬೈ ಪೊಲೀಸ್ ಸಿಬ್ಬಂದಿ ಮತ್ತು…

Read More

‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ ಚಂದ್ರಚೂಡ್

‘ವಾರಸ್ದಾರ’ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ತೋಟ ನಾಶ ಮಾಡಲಾಗಿದೆ ಎಂಬ ಆರೋಪವನ್ನು ಚಿಕ್ಕಮಗಳೂರಿನ ದೀಪಕ್ ಮಯೂರ್ ಮಾಡಿದ್ದರು. ಈ ಧಾರಾವಾಹಿ ನಿರ್ಮಾಣ ಮಾಡಿದ್ದು ಸುದೀಪ್. ಸುದೀಪ್ ಹಾಗೂ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಹಣ ಕೊಡೋದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೀಪಕ್ ದೂರು ನೀಡಿದ್ದಾರೆ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ‘ದೀಪಕ್ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಆತ್ಮ ಸಾಕ್ಷಿಯೇ ಇಲ್ಲ’ ಎಂದಿದ್ದಾರೆ. ಸಂಪೂರ್ಣ ವಿಡಿಯೋ ಮೇಲಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ…

Read More

ಅಕ್ರಮವಾಗಿ ಗುಜರಾತ್ ವಾಹನಗಳಿಗೆ ಎಫ್​ಸಿ ಮಾಡಿದ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು – Kannada News | Karnataka RTO Officer Nisar Ahmed Suspended for Illegally Issuing Fitness Certificates to Gujarat Vehicles

ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್​ ಅಮಾನತು ಬೆಂಗಳೂರು, ಜನವರಿ 21: ಗುಜರಾತ್ (Gujrat) ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ (FC) ನೀಡಿದ ಗಂಭೀರ ಆರೋಪದ ಮೇಲೆ ಕೋರಮಂಗಲ ಆರ್‌ಟಿಒದ ಹಿರಿಯ ಮೋಟರ್ ನಿರೀಕ್ಷಕ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಭ್ರಷ್ಟಾಚಾರದ ಬಗ್ಗೆ ‘ಟಿವಿ9’ ದಾಖಲೆಗಳ ಸಹಿತ ವರದಿ ಮಾಡಿತ್ತು. ನಂತರ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿತ್ತು. ಕೋರಮಂಗಲ ಆರ್‌ಟಿಒ ಅಧಿಕಾರಿಗಳು ಗುಜರಾತ್ ವಾಹನಗಳ ಖುದ್ದು ತಪಾಸಣೆ ನಡೆಸದೆಯೇ ಅವುಗಳಿಗೆ ಎಫ್‌ಸಿ ನೀಡಿದ್ದರು. ಕೇಂದ್ರ…

Read More

ಬಜೆಟ್ 2026: ಆಸ್ಪತ್ರೆಗಳು ಹೆಚ್ಚಬೇಕು, ಸ್ಥಳೀಯ ಉತ್ಪಾದನೆ ಹೆಚ್ಚಬೇಕು- ಹೆಲ್ತ್​ಕೇರ್ ಉದ್ಯಮದ ಬಜೆಟ್ ನಿರೀಕ್ಷೆಗಳು… – Kannada News | Budget 2026, healthcare industry wants medical infrastructure expansion

ನವದೆಹಲಿ, ಜನವರಿ 21: ಭಾರತದ ವೈದ್ಯಕೀಯ ಕ್ಷೇತ್ರದ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದ್ದರೂ ಹಲವು ಸಮಸ್ಯೆಗಳು, ಅಡೆತಡೆಗಳಿಂದ ಬಳಲುತ್ತಿರುವುದು ಹೌದು. ಜಾಗತಿಕ ಅನಿಶ್ಚಿತತೆ ಮತ್ತು ಅಮೆರಿಕದ ಟ್ಯಾರಿಫ್​ಗಳು ಭಾರತದಲ್ಲಿಯ ಈ ಉದ್ಯಮದ ಉತ್ಸಾಹ ಕುಂದಿಸಿದೆ. ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಮುಂದುವರಿದಿದೆ. ಫಾರ್ಮಾ ಕಂಪನಿಗಳು ಅಮೆರಿಕದ ಟ್ಯಾರಿಫ್​ನಿಂದ ಭೀತಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಬಜೆಟ್​ನಲ್ಲಿ (Union Budget) ಹೆಲ್ತ್​ಕೇರ್ ಉದ್ಯಮದ ಸಮಸ್ಯೆಗಳನ್ನು ಅರಿತು ಸರ್ಕಾರ ಒಂದಷ್ಟು ಕ್ರಮಗಳನ್ನು ಘೋಷಿಸಬಹುದು ಎನ್ನುವ ನಿರೀಕ್ಷೆಯಲ್ಲಿ ಉದ್ಯಮ ಇದೆ….

Read More