ಇಲಿ ಕಡಿತವನ್ನು ಸಾಮಾನ್ಯ ಎಂದು ಪರಿಗಣಿಸಿ ಪ್ರಾಣಕ್ಕೇ ಅಪಾಯ ತಂದುಕೊಳ್ಳಬೇಡಿ, ತಪ್ಪದೇ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ – Kannada News | Bitten By A Rat? Follow These 3 Life Saving Tips From Experts Without Fail

ಇಲಿಗಳ ಹಾವಳಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ, ಇದರ ಬಗ್ಗೆ ಯಾರೂ ಹೆಚ್ಚಾಗಿ ಗಮನಹರಿಸುವುದಿಲ್ಲ ಹಾಗೇ ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಮನೆಯಲ್ಲಿ ಇಲಿಗಳ ಓಡಾಟ ಎಷ್ಟು ಕಿರಿಕಿರಿ ಉಂಟುಮಾಡುತ್ತದೆಯೋ, ಅದು ಕಡಿದರೆ ಅಷ್ಟೇ ಅಪಾಯವನ್ನೂ ಉಂಟುಮಾಡುತ್ತದೆ. ಏಕೆಂದರೆ ಇಲಿ ಕಡಿತವನ್ನು (Rat Bite) ವಿಷವೆಂದು ಪರಿಗಣಿಸಲಾಗುತ್ತದೆ ಹಾಗೂ ತಕ್ಷಣದ ವೈದ್ಯಕೀಯ ನೆರವೂ ಅಗತ್ಯವಾಗಿರುತ್ತದೆ. ಇಲಿಯ ಕಡಿತ, ಪರಚುವಿಕೆ ಸಣ್ಣ ಸಂಗತಿಯಲ್ಲ, ಇದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಜೊತೆಗೆ ಇಲಿಯ ವೀರ್ಯ, ಮಲ, ಮೂತ್ರಗಳಿಂದಲೂ ಸೋಂಕುಗಳು ಹರಡುತ್ತವೆ. ಆದ ಕಾರಣ, ಈ ಬಗ್ಗೆ ಸಾಧ್ಯವಾದಷ್ಟು ಗಮನಹರಿಸುವುದು ಬಹಳ ಮುಖ್ಯ. ಹಾಗಾದರೆ ಇಲಿಯಿಂದ ಕಚ್ಚಿಸಿಕೊಂಡರೆ ಏನಾಗುತ್ತದೆ, ಇಲಿ ಕಡಿತದಿಂದ ಕಂಡುಬರುವ ಸಾಮಾನ್ಯ ಲಕ್ಷಣಗಳು ಹೇಗಿರುತ್ತವೆ ಮತ್ತು ಈ ರೀತಿಯಾದಾಗ ಮೊದಲು ಏನು ಮಾಡಬೇಕು ಎಂಬುದರ ಬಗ್ಗೆ ಹಾಸನ ಎಸ್‌ಡಿಎಮ್‌ ಆಯುರ್ವೇದ ಕಾಲೇಜ್‌ ಮತ್ತು ಆಸ್ಪತ್ರೆಯ ಅಸಿಸ್ಟೆಂಟ್‌ ಪ್ರೊಫೆಸರ್, ಅಗದತಂತ್ರ ಏವಂ ವಿಧಿ ವೈದ್ಯಕರಾಗಿರುವ ಡಾ. ರಕ್ಷಿತ್‌ ಎನ್‌ ಎನ್‌ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಇಲಿ ಕಡಿತದಿಂದ ಕಂಡುಬರುವ ಸಾಮಾನ್ಯ ಲಕ್ಷಣಗಳು:

ದದ್ದುಗಳು, ಚರ್ಮದ ಮೇಲೆ ಕೆಂಪು ಕಲೆ, ಚಳಿಯೊಂದಿಗೆ ಜ್ವರ, ಕೀಲು ನೋವು, ದೌರ್ಬಲ್ಯ, ತಲೆ ಸುತ್ತು,. ಚರ್ಮ ಬಿಳಿಚಿಕೊಳ್ಳುವುದು, ಗಂಟುಗಳು, ಊತ, ಮೈ ಜುಮ್‌ ಎನಿಸುವುದು, ಗಾಯದಿಂದ ರಕ್ತ ಸ್ರಾವವಾಗಬಹುದು. ಜೊತೆಗೆ ಇಲಿಗಳು ರ್‍ಯಾಟ್‌ ಫೀವರ್, ಲ್ಯಾಪ್ಟೋಸ್ಟಿರೋಸಿಸ್‌ ಎಂಬ ಅಪಾಯಕಾರಿ ರೋಗವನ್ನು ಹರಡುತ್ತವೆ. ಕಚ್ಚಿದ 3ರಿಂದ 10 ದಿನಗಳೊಳಗೆ ದಿಢೀರ್ ಜ್ವರ, ವಾಂತಿ, ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ.

ಇಲಿ ಕಡಿದರೆ ತಕ್ಷಣ ಏನು ಮಾಡಬೇಕು?

ರಕ್ತಸ್ರಾವ ನಿಲ್ಲಿಸಿ: ಗಾಯದಿಂದ ಹೊರಬರುತ್ತಿರುವ ರಕ್ತಸ್ರಾವವನ್ನು ಮೊದಲು ನಿಲ್ಲಿಸಿ. ಶುದ್ದವಾದ ಬಟ್ಟೆಯಿಂದ ಗಾಯವನ್ನು ಗಟ್ಟಿಯಾಗಿ ಒತ್ತಿ ಹಿಡಿಯಿರಿ.

ಗಾಯವನ್ನು ಸ್ವಚ್ಚಗೊಳಿಸಿ: ರಕ್ತಸ್ರಾವ ನಿಂತ ನಂತರ, ಗಾಯವಾದ ಜಾಗವನ್ನು ಹರಿಯುವ ನೀರಿ (ಬೆಚ್ಚಗಿನ ನೀರಾದರೆ ಉತ್ತಮ) ನಲ್ಲಿ ತೊಳೆಯಿರಿ. ಆಂಟಿ ಬ್ಯಾಕ್ಟೀರಿಯಲ್‌ ಲಿಕ್ವಿಡ್‌ ಅಥವಾ ಸೋಪಿನ ಬಳಕೆ ಉತ್ತಮ, ಇದರಿಂದ ಗಾಯದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ನೆರವಾಗುತ್ತದೆ.

ವೈದ್ಯರ ಭೇಟಿ ಕಡ್ಡಾಯ: ಗಾಯ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಇಲಿ ಪರಚಿದ ಗಾಯವಾದರೂ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಯಾಗಿ. ಇಲಿ ಕಡಿತದಿಂದ ಧನುರ್ವಾಯು ಬರುವ ಅಪಾಯವಿರುತ್ತದೆ, ಕಳೆದ ಐದು ವರ್ಷಗಳಲ್ಲಿ ಟೆಟಾನಸ್‌ ಚುಚ್ಚುಮದ್ದು ಪಡೆಯದೇ ಇದ್ದಲ್ಲಿ ವೈದ್ಯರಿಗೆ ತಿಳಿಸಿ ಟೆಟಾನಸ್‌ ಚುಚ್ಚುಮದ್ದು ಪಡೆಯಿರಿ.

ಇದನ್ನೂ ಓದಿ: ಹಾಂಟಾ ವೈರಸ್ ಯಾರಿಗೆ ಹೆಚ್ಚು ಅಪಾಯಕಾರಿ ಗೊತ್ತಾ? ತಜ್ಞರು ಹೇಳಿರುವ ಈ ಮಾತನ್ನು ನಿರ್ಲಕ್ಷ್ಯ ಮಾಡಬೇಡಿ

ದೇಹಕ್ಕೆ ಸೇರಿದ ವಿಷ ನಿರ್ಮೂಲನೆಗೆ ಆಯುರ್ವೇದ ಸಲಹೆಗಳು:

ಡಾ. ರಕ್ಷಿತ್‌ ಹೇಳಿರುವ ಪ್ರಕಾರ, ತುರ್ತು ಚಿಕಿತ್ಸೆ ಬಳಿಕ ದೇಹದಲ್ಲಿ ಉಳಿದಿರುವ ವಿಷಕಾರಿ ಅಂಶಗಳನ್ನು ತೆಗೆಯುವಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದದ ಕೆಲವು ಮಾರ್ಗಗಳು ಸಹಾಯಕಾರಿ. ಕಹಿಬೇವಿನ ಎಲೆ ಮತ್ತು ಅರಿಶಿಣವನ್ನು ಅರೆದು ಗಾಯದ ಸುತ್ತ (ಗಾಯದ ಮೇಲಲ್ಲ) ಹಚ್ಚುವುದರಿಂದ ಸೋಂಕು ಬೇರೆಡೆ ಹರಡುವುದನ್ನು ತಡೆಯಬಹುದು. ಹಾಗೇ ರಕ್ತ ಶುದ್ದಿಗೆ ಆಯುರ್ವೇದ ತಜ್ಞರ ಸಲಹೆ ಮೇರೆಗೆ ‘ಮಂಜಿಷ್ಠಾದಿ ಕಷಾಯ’ ಅಥವಾ ಸಾರಿವಾದಂತಹ ರಕ್ತ ಶುದ್ಧೀಕರಿಸುವ ಔಷಧಗಳನ್ನು ಸೇವಿಸುವುದು ಉತ್ತಮ. ಹಾಗೇ ರೋಗನಿರೋಧಕ ಶಕ್ತಿ ವರ್ಧನೆಗೆ ಅಮೃತಬಳ್ಳಿ ಮತ್ತು ಅಶ್ವಗಂಧದಂತಹ ಮೂಲಿಕೆಗಳ ಸೇವನೆ ಉತ್ತಮ ಎಂದು ಹೇಳಿದ್ದಾರೆ.

ಸಾಧ್ಯವಾದಷ್ಟು ವಾಸಸ್ಥಾನದಲ್ಲಿ ಇಲಿಗಳ ಓಡಾಟವನ್ನು ತಪ್ಪಿಸಿ, ಮನೆ ಸುತ್ತಮುತ್ತ ಕಸ ಶೇಖರಣೆಯಾಗದಂತೆ ನೋಡಿಕೊಳ್ಳಿ, ಆಹಾರ ಪದಾರ್ಥಗಳನ್ನು ಗಾಳಿಯಾಡದಂತಹ ಡಬ್ಬಿಗಳಲ್ಲಿ ಸುರಕ್ಷಿತವಾಗಿಡಿ. ಹಾಗೇ ಇಲಿ ಕಡಿತವನ್ನು ಎಂದೂ ಚಿಕ್ಕ ಗಾಯವೆಂದು ಕಡೆಗಣಿಸದಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು ‘ಪಂಕ್ಚರ್ ಮಾಫಿಯಾ’ ಆಟ! ರಸ್ತೆ ತುಂಬಾ ಮೊಳೆಗಳನ್ನು ಚೆಲ್ಲಿ ಕೃತ್ಯ! – Kannada News | Shocking Bengaluru Puncture Scam: Police Station Front, Driver Safety Risk

ಬೆಂಗಳೂರು, ಮೇ,25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುವ ಹಾಗೂ ವಾಹನ ಸವಾರರ ಜೀವಕ್ಕೆ ಕುತ್ತು ತರುವ ಕುಖ್ಯಾತ ‘ಪಂಕ್ಚರ್ ಮಾಫಿಯಾ’ (Puncture Mafia) ಮತ್ತೆ ಸಕ್ರಿಯವಾಗಿದೆ. ಈ ಬಾರಿ ಈ ಜಾಲದ ಧೈರ್ಯ ಎಷ್ಟು ಹೆಚ್ಚಾಗಿದೆಯೆಂದರೆ, ನೇರವಾಗಿ ಪೊಲೀಸ್ ಠಾಣೆಯೊಂದರ ಮುಂಭಾಗದ ರಸ್ತೆಯಲ್ಲೇ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಚೆಲ್ಲಿ ವಾಹನ ಸವಾರರಿಗೆ ಭೀಕರ ಬಲೆ ಬೀಸಲಾಗಿದೆ! ಈ ದಂಧೆಕೋರರ ಮೋಡಸ್ ಆಪರೇಟಿ (ಕಾರ್ಯವೈಖರಿ) ಅತ್ಯಂತ ಸರಳ ಆದರೆ ಅಷ್ಟೇ ಕ್ರೂರವಾಗಿದೆ. ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ ಮುಖ್ಯ ರಸ್ತೆಗಳಲ್ಲಿ ತಡರಾತ್ರಿ ಇವರು ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹಾಗೂ ಚೂಪಾದ ವಸ್ತುಗಳನ್ನು ಹರಡುತ್ತಾರೆ. ಆ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಹಾಗೂ ಕಾರುಗಳ ಟೈರ್‌ಗಳು ಪಂಕ್ಚರ್ ಆಗಿ ಸವಾರರು ರಸ್ತೆಯಲ್ಲೇ ಸಿಲುಕಿಕೊಳ್ಳುತ್ತಾರೆ. ಆ ಕಷ್ಟದ ಸಮಯದಲ್ಲಿ ಹತ್ತಿರದಲ್ಲೇ ಇರುವ ಪಂಕ್ಚರ್ ಅಂಗಡಿಗಳು ಇವರಿಗೆ ಕಾಣಿಸುತ್ತವೆ. ಅಲ್ಲಿಗೆ ಹೋದಾಗ ಟೈರ್ ಬದಲಾಯಿಸಬೇಕು ಅಥವಾ ಭಾರಿ ರಿಪೇರಿ ಮಾಡಬೇಕು ಎಂದು ಹೇಳಿ ಮುಗ್ಧ ಸವಾರರಿಂದ ಸಾವಿರಾರು ರೂಪಾಯಿ ಲೂಟಿ ಮಾಡಲಾಗುತ್ತದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಈ ಹಿಂದೆ ಈ ದಂಧೆ ಬೆಳಕಿಗೆ ಬಂದಿತ್ತಾದರೂ, ಈ ಬಾರಿಯ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಕಾನೂನು ರಕ್ಷಣೆ ಮಾಡುವ ಪೊಲೀಸ್ ಠಾಣೆಯ ಕಣ್ಣೆದುರಲ್ಲೇ ಈ ಮಾಫಿಯಾ ಇಷ್ಟೊಂದು ನಿರ್ಭಯವಾಗಿ, ಮುಕ್ತವಾಗಿ ಆಪರೇಟ್ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಗಸ್ತು ಹಾಗೂ ನಿಗಾ ವ್ಯವಸ್ಥೆಯ ಮೇಲೆಯೇ ಇದು ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಈ ಬಗ್ಗೆ ವಿಡಿಯೋವೊಂದನ್ನು ಎಕ್ಸ್​​ ಖಾತೆಯಲ್ಲಿ @Karnataka Portfolio ಹಂಚಿಕೊಂಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಆಟೋ ಚಾಲಕಿಯನ್ನು ಶ್ಲಾಘಿಸಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ, ಕಾರಣ ಇದೇ ನೋಡಿ – Kannada News | Bengaluru: Amazon employee in Bengaluru shocked after hearing woman auto driver’s words

ಬೆಂಗಳೂರು, ಮೇ 25: ಮಹಿಳೆಯರು ಆಟೋ ಓಡಿಸುವುದು ದೂರದ ಮಾತು ಎನ್ನುವ ಕಾಲವಿತ್ತು. ಆದರೆ, ಇದೀಗ ಆಟೋವನ್ನೇ ಬದುಕಿಗೆ ಆಧಾರವಾಗಿಸಿಕೊಂಡ ಮಹಿಳೆಯರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಹೌದು, ಬೆಂಗಳೂರಿನ (Bengaluru) ಅಮೆಜಾನ್ ಉದ್ಯೋಗಿಯೊಬ್ಬರು ಆಟೋ ಓಡಿಸುವ ಮಹಿಳೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಆಟೋ ಚಾಲಕಿ ಈ ಕೆಲಸ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಕಾರಣ ರಿವೀಲ್ ಮಾಡಿದ್ದು ಇದನ್ನು ಕೇಳಿ ಅಮೆಜಾನ್ ಉದ್ಯೋಗಿ ಶಾಕ್ ಆಗಿದ್ದಾರೆ. ಈ ಕುರಿತಾದ ವಿಡಿಯೋ ಹಂಚಿಕೊಂಡಿದ್ದು ಗಟ್ಟಿಗಿತ್ತಿ ಮಹಿಳಾ ಆಟೋ ಚಾಲಕಿಯನ್ನು ಶ್ಲಾಘಿಸಿದ್ದಾರೆ.

ಶ್ರೇಯಶಿ ಸಿನ್ಹಾ (shree__yeahh) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಫೂರ್ತಿದಾಯಕ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಇಂದು, ಮಹಿಳಾ ಆಟೋ ಡ್ರೈವರ್ ನನ್ನನ್ನು ಕರೆದೊಯ್ಯಲು ಬಂದಳು. ಅವಳು ತನ್ನ ಫೋನ್‌ನಲ್ಲಿ ಕೆಲವು ಸಮಸ್ಯೆಯನ್ನು ಎದುರಿಸುತ್ತಿದ್ದಳು, ಆದ್ದರಿಂದ ಅವಳು ಮಾರ್ಗದರ್ಶನ ನೀಡಲು ನನ್ನನ್ನು ಕೇಳಿದಳು. ಅವಳೊಂದಿಗೆ ಮಾತನಾಡುವಾಗ, ನಾನು ಅವಳನ್ನು ಆಟೋ ಓಡಿಸಲು ಕಾರಣ ಏನು ಎಂದು ಕೇಳಿದೆ. ಅವಳು ಮುಗುಳ್ನಕ್ಕು ಪಾತ್ರೆ ತೊಳೆಯುವುದಕ್ಕಿಂತ ಆಟೋ ಓಡಿಸುವುದು ಮೇಲು, ಏಕೆಂದರೆ ನನಗೆ ಸುತ್ತಾಡಲು (ಪ್ರಯಾಣಿಸಲು) ಇಷ್ಟ ಮತ್ತು ಇಲ್ಲಿ ಸಮಯದ ಯಾವುದೇ ನಿರ್ಬಂಧವಿಲ್ಲ. ಎಷ್ಟು ಬೇಕೋ, ಯಾವಾಗ ಬೇಕೋ ಆಟೋ ಓಡಿಸಬಹುದು ಹಾಗೂ ಎಲ್ಲಿಗೆ ಬೇಕಾದರೂ ಹೋಗಬಹುದು ಎಂದಳು. ವೈಯುಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯವನ್ನು ನೀಡುವ ಕೆಲಸವನ್ನು ಆಯ್ಕೆ ಮಾಡುವ ಮಹಿಳೆಯರನ್ನು ನಾನು ಪ್ರಾಮಾಣಿಕವಾಗಿ ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ

ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅವಳ ಆತ್ಮವಿಶ್ವಾಸವು ಯಾವುದೇ ಪ್ರೇರಕ ಭಾಷಣಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಜವಾದ ಸ್ವಾತಂತ್ರ್ಯ ಹೇಗಿರುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತನ್ನದೇ ಮಾರ್ಗ ಆರಿಸಿಕೊಳ್ಳುವ ಮಹಿಳೆಗೆ ನನ್ನದೊಂದು ಗೌರವ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:08 pm, Mon, 25 May 26

Source link

ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು – Kannada News | Setback for Edappadi Palaniswami as 3 AIADMK rebel MLAs resigns ikely to join Vijays TVK

ಚೆನ್ನೈ, ಮೇ 25: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Assembly Elections) ಬೆನ್ನಲ್ಲೇ ಅಲ್ಲಿನ ರಾಜಕಾರಣದಲ್ಲಿ ಹೊಸ ತಿರುವು ಉಂಟಾಗಿದೆ. ಬಹುಮತ ಸಿಗದ ಹಿನ್ನೆಲೆಯಲ್ಲಿ ಇತರೆ ಪಕ್ಷಗಳ ಬೆಂಬಲ ಪಡೆಯಲು ವಿಜಯ್ ನೇತೃತ್ವದ ಟಿವಿಕೆ ಹರಸಾಹಸ ಪಟ್ಟಿತ್ತು. ಕೊನೆಗೂ ಎಡ ಪಕ್ಷಗಳು ಮತ್ತು ಕಾಂಗ್ರೆಸ್​​ನ ಬೆಂಬಲದೊಂದಿಗೆ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಎಐಎಡಿಎಂಕೆ (AIADMK) ಪಕ್ಷದ ಮೂವರು ಶಾಸಕರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಎಐಎಡಿಎಂಕೆಗೆ ರಾಜೀನಾಮೆ ನೀಡಿದ ರೆಬೆಲ್ ಶಾಸಕರು ಟಿವಿಕೆಗೆ ಸೇರುವುದಾಗಿ ಘೋಷಿಸುವ ಮೂಲಕ ಪಕ್ಷದ ಮುಖ್ಯಸ್ಥ ಪಳನಿಸ್ವಾಮಿಗೆ ಶಾಕ್ ನೀಡಿದ್ದಾರೆ.

ಈ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ಸ್ಪೀಕರ್ ಪ್ರಭಾಕರ್, ಅವುಗಳು ನಿಗದಿತ ನಿಯಮಾವಳಿಗಳ ಪ್ರಕಾರ ಸರಿಯಾದ ಮಾದರಿಯಲ್ಲಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಅಂಗೀಕರಿಸಿದ್ದಾರೆ. ರಾಜೀನಾಮೆ ನೀಡಲು ಕಾರಣವನ್ನು ಉಲ್ಲೇಖಿಸಲೇಬೇಕಾದ ಅಗತ್ಯವಿಲ್ಲ ಎಂದು ಈ ವೇಳೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಮಾಣವಚನದ ವೇಳೆ ರಾಹುಲ್ ಗಾಂಧಿ ಹೆಸರು ಹೇಳಿ ವಿವಾದಕ್ಕೀಡಾದ ತಮಿಳುನಾಡು ಕಾಂಗ್ರೆಸ್ ಶಾಸಕ

ರಾಜೀನಾಮೆ ನೀಡಿರುವ ಎಐಎಡಿಎಂಕೆಯ ಮೂವರು ಶಾಸಕರೆಂದರೆ ಮರಗತಂ ಕುಮಾರವೇಲ್, ಸತ್ಯಭಾಮಾ ಮತ್ತು ಜಯಕುಮಾರ್. ಅವರು ಸಿ. ವಿ. ಷಣ್ಮುಗಂ ಮತ್ತು ಎಸ್. ಪಿ. ವೇಲುಮಣಿ ನೇತೃತ್ವದ ಎಐಎಡಿಎಂಕೆ ಬಂಡಾಯ ಬಣದ ಭಾಗವಾಗಿದ್ದರು. ಇತ್ತೀಚೆಗೆ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯ ವೇಳೆ ಈ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ, ನಟ ವಿಜಯ್ ನೇತೃತ್ವದ ಮೈತ್ರಿಕೂಟದ ಪರವಾಗಿ ಮತ ಚಲಾಯಿಸಿದ್ದರು.

ಮರಗತಂ ಕುಮಾರವೇಲ್ ಅವರು ಮಧುರಾಂತಕಂ ಕ್ಷೇತ್ರದಿಂದ, ಸತ್ಯಭಾಮಾ ಅವರು ಧಾರಾಪುರಂ ಕ್ಷೇತ್ರದಿಂದ ಮತ್ತು ಜಯಕುಮಾರ್ ಅವರು ಪೆರುಂದುರೈ ಕ್ಷೇತ್ರದಿಂದ ಎಐಎಡಿಎಂಕೆ ಟಿಕೆಟ್ ಮೂಲಕ ಸ್ಪರ್ಧಿಸಿ ಗೆದ್ದಿದ್ದರು. ಸ್ಪೀಕರ್‌ಗೆ ತಮ್ಮ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಈ ಮೂವರು ಶಾಸಕರು ತಮಿಳುನಾಡು ಸರ್ಕಾರದ ಸಚಿವರು ಹಾಗೂ ಟಿವಿಕೆ ಪಕ್ಷದ ಪ್ರಭಾವಿ ನಾಯಕರಾಗಿರುವ ಆಧವ್ ಅರ್ಜುನ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಅವನತಿಯತ್ತ ಎಐಎಡಿಎಂಕೆ; ಒಳಜಗಳದಿಂದಾಗಿ ಎಂಜಿಆರ್, ಜಯಲಲಿತಾ ಪರಂಪರೆ ಕೊನೆಯಾಗುತ್ತಾ?

ಮರಗತಮ್ ಕುಮಾರವೇಲ್ ನೇತೃತ್ವದಲ್ಲಿ ಪೆರುಂದುರೈ ಶಾಸಕ ಜಯಕುಮಾರ್ ಮತ್ತು ತಾರಾಪುರಂ ಶಾಸಕಿ ಸತ್ಯಭಾಮಾ ರಾಜೀನಾಮೆ ನೀಡಿದ್ದಾರೆ. ಎಐಎಡಿಎಂಕೆ ಬಣವಾದ ಎಸ್.ಪಿ. ವೇಲುಮಣಿ, ಸಿ.ವಿ. ಷಣ್ಮುಗಂ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮತ್ತೆ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವಿವಿಧ ಭಿನ್ನಾಭಿಪ್ರಾಯಗಳ ನಡುವೆ ಒಂದು ಕಡೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿ ಮೂವರು ಶಾಸಕರು ಈಗ ಎಐಎಡಿಎಂಕೆಗೆ ರಾಜೀನಾಮೆ ನೀಡಿದ್ದಾರೆ.

ಇದರಿಂದ ಎಐಎಡಿಎಂಕೆ ಶಾಸಕರ ಸಂಖ್ಯೆ 44ಕ್ಕೆ ಇಳಿದಿದೆ. ಎರಡೂ ಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ರಾಜೀನಾಮೆ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ – Kannada News | China’s tech Marvel: Chongqing East High Speed Rail Station, a Global Engineering Feat

ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋದ ಸ್ಕ್ರೀನ್​ಶಾಟ್Image Credit source: X user @Ivan_8848

ಬೀಜಿಂಗ್, ಮೇ 25: ಚೀನಾ ದೇಶವು ಮೂಲಸೌಕರ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತಹ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ನೈಋತ್ಯ ಚೀನಾದ ಚಾಂಗ್‌ಕಿಂಗ್ (Chongqing) ನಗರದಲ್ಲಿ ವಿಶ್ವದ ಅತ್ಯಂತ ದೊಡ್ಡ ಹೈ-ಸ್ಪೀಡ್ ರೈಲ್ವೆ ನಿಲ್ದಾಣವಾದ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ (Chongqing East Railway Station ನಿರ್ಮಾಣ ಕಾರ್ಯವನ್ನು ಕೇವಲ 38 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದೆ. ಭೌಗೋಳಿಕವಾಗಿ ಅತ್ಯಂತ ಕಠಿಣವಾಗಿದ್ದ ಪರ್ವತ ಶ್ರೇಣಿಯ ಮೇಲೆ ರೋಬೋಟ್‌ಗಳ ಸೈನ್ಯ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಈ ಬೃಹತ್ ನಿಲ್ದಾಣವನ್ನು ಕಟ್ಟಿರುವುದು ಜಾಗತಿಕ ಇಂಜಿನಿಯರ್‌ಗಳನ್ನು ಬೆರಗುಗೊಳಿಸಿದೆ.

ಪರ್ವತವನ್ನೇ ಸವರಿ ಸಮತಟ್ಟು ಮಾಡಿದ ಇಂಜಿನಿಯರಿಂಗ್ ಅದ್ಭುತ

ಸಾಮಾನ್ಯವಾಗಿ ಇಂತಹ ಬೃಹತ್ ನಿಲ್ದಾಣಗಳನ್ನು ಬಯಲು ಸೀಮೆ ಅಥವಾ ಸಮತಟ್ಟಾದ ಭೂಮಿಯ ಮೇಲೆ ನಿರ್ಮಿಸಲಾಗುತ್ತದೆ. ಆದರೆ, ಚಾಂಗ್‌ಕಿಂಗ್‌ನ ಕಡಿದಾದ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ಈ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇಂಜಿನಿಯರ್‌ಗಳು ಮೊದಲು ಇಡೀ ಪರ್ವತ ಪ್ರದೇಶವನ್ನು 3D ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿ, ನಿಯಂತ್ರಿತ ಸ್ಫೋಟಗಳ (Controlled blasting) ಮೂಲಕ ಬಂಡೆಗಳನ್ನು ಸವರಿ, ಬೆಟ್ಟವನ್ನು ಸಮತಟ್ಟು ಮಾಡಿ ಈ ಬೃಹತ್ ಯೋಜನೆಗೆ ಅಡಿಪಾಯ ಹಾಕಿದರು.

ಈ ಯೋಜನೆಯು ಇಷ್ಟು ವೇಗವಾಗಿ ಮುಗಿಯಲು ಮಾನವ ಶ್ರಮದ ಜೊತೆಗೆ ಚೀನಾ ಬಳಸಿದ ಅತ್ಯಾಧುನಿಕ ತಂತ್ರಜ್ಞಾನವೂ ಕಾರಣ ಎಂದು ಹೇಳಿಕೊಳ್ಳಲಾಗಿದೆ. ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್​ಗಳು, ಗ್ಲಾಸ್ ರೋಬೊಟ್​​ಗಳು, ವೆಲ್ಡಿಂಗ್ ರೋಬೋಟ್​ಗಳನ್ನು ಬಳಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್

5G ಮತ್ತು AI ತಂತ್ರಜ್ಞಾನ ಹೊಂದಿದ ಲೇಸರ್ ಗೈಡೆಡ್ ಕಾಂಕ್ರೀಟ್ ರೋಬೋಟ್‌ಗಳು ಕಾಂಕ್ರೀಟ್ ಮೇಲ್ಮೈಯನ್ನು ಅತ್ಯಂತ ನಿಖರವಾಗಿ ಸಮತಟ್ಟು ಮಾಡಿದವು. ಇವು ಮನುಷ್ಯರಿಗಿಂತ 3 ಪಟ್ಟು ವೇಗವಾಗಿ ಕೆಲಸ ಮಾಡಿ ಶೇ. 40 ರಷ್ಟು ಕಾರ್ಮಿಕ ವೆಚ್ಚವನ್ನು ಉಳಿಸಿವೆ.

ಭಾರೀ ತೂಕದ ಗ್ಲಾಸ್ ರೋಬೋಟ್‌ಗಳು ಸುಮಾರು 800 ಕೆಜಿ ತೂಕದ ಬೃಹತ್ ಗ್ಲಾಸ್ ಪ್ಯಾನಲ್‌ಗಳನ್ನು ಎತ್ತಿ ನಿಖರವಾದ ಜಾಗದಲ್ಲಿ ಜೋಡಿಸುವ ಕೆಲಸವನ್ನು ಮಾಡಿದವು. ಇದರಿಂದ ಅಪಘಾತಗಳ ಭಯ ಶೇ. 90 ರಷ್ಟು ಕಡಿಮೆಯಾಯಿತು.

ವೆಲ್ಡಿಂಗ್ ರೋಬೋಟ್‌ಗಳು ಹಾಗೂ ದಿನದ 24 ಗಂಟೆಯೂ ನಿರ್ಮಾಣದ ಪ್ರಗತಿಯನ್ನು ಕಣ್ಣಿಟ್ಟು ನೋಡುವ ಕಾವಲು ರೋಬೋಟ್‌ಗಳನ್ನು ಇಲ್ಲಿ ಬಳಸಲಾಗಿತ್ತು.

ದೈತ್ಯಾಕಾರದ ವಿಸ್ತೀರ್ಣ ಮತ್ತು ಸಾಮರ್ಥ್ಯ

ಸುಮಾರು $7.8 ಬಿಲಿಯನ್ (ಅಂದಾಜು ₹64,000 ಕೋಟಿಗೂ ಅಧಿಕ) ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣವು ಬರೋಬ್ಬರಿ 12 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. (ಇದು ಸುಮಾರು 100 ಕ್ಕೂ ಹೆಚ್ಚು ಫುಟ್‌ಬಾಲ್ ಮೈದಾನಗಳಿಗೆ ಸಮಾನ).

ಈ ನಿಲ್ದಾಣದಲ್ಲಿ ಒಟ್ಟು 29 ಪ್ಲಾಟ್‌ಫಾರ್ಮ್‌ಗಳು ಮತ್ತು 15 ರೈಲ್ವೆ ಟ್ರ್ಯಾಕ್​ಗಳಿವೆ. ಅತ್ಯಂತ ಜನದಟ್ಟಣೆ ಇರುವ ಸಮಯದಲ್ಲಿ ಗಂಟೆಗೆ ಸುಮಾರು 16,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಬೃಹತ್ ನಿಲ್ದಾಣವು ಒಟ್ಟು 8 ಅಂತಸ್ತುಗಳನ್ನು ಒಳಗೊಂಡಿದೆ.

ಈ ಯೋಜನೆಯ ಉತ್ತುಂಗದ ಸಮಯದಲ್ಲಿ ಸುಮಾರು 40,000 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನಿಲ್ದಾಣದ ಒಟ್ಟು ನಿರ್ಮಾಣಕ್ಕೆ 20 ಲಕ್ಷ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮತ್ತು 3.66 ಲಕ್ಷ ಟನ್ ಉಕ್ಕನ್ನು ಬಳಸಲಾಗಿದೆ.

ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ

ಇಲ್ಲಿನ ಮತ್ತೊಂದು ರೋಮಾಂಚನಕಾರಿ ಇಂಜಿನಿಯರಿಂಗ್ ಸಾಹಸವೆಂದರೆ ಅದರ ಮೇಲ್ಛಾವಣಿ (Roof). 16,500 ಟನ್ ತೂಕದ ದೈತ್ಯ ಸ್ಟೀಲ್ ರೂಫ್ ಅನ್ನು ಮೊದಲು ನೆಲದ ಮೇಲೆ ಜೋಡಿಸಿ, ನಂತರ ಹೈಡ್ರಾಲಿಕ್ ತಂತ್ರಜ್ಞಾನದ ಮೂಲಕ 57 ಮೀಟರ್ ಎತ್ತರಕ್ಕೆ ಎತ್ತಿ ಬಿಗಿಯಲಾಗಿದೆ. ಇದು ಭೂಕಂಪ ನಿರೋಧಕ ಸಾಮರ್ಥ್ಯವನ್ನು ಹೊಂದಿದೆ.

ಚೀನಾದ ಆರ್ಥಿಕತೆಗೆ ಹೆಬ್ಬಾಗಿಲು

ಈ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ ಕೇವಲ ರೈಲು ನಿಲ್ದಾಣವಾಗಿರದೆ, ಅದರ ಒಳಗಡೆಯೇ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಕಚೇರಿಗಳನ್ನು ಒಳಗೊಂಡ ಒಂದು ‘ವರ್ಟಿಕಲ್ ಸಿಟಿ’ (ಲಂಬ ನಗರ) ತರಹ ವಿನ್ಯಾಸಗೊಳಿಸಲಾಗಿದೆ. ಇದು ಚೀನಾದ ಬುಲೆಟ್ ರೈಲು ಜಾಲದ ಪ್ರಮುಖ ಕೇಂದ್ರವಾಗಲಿದ್ದು, ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಸೇರಿದಂತೆ ದೇಶದ 14 ಪ್ರಮುಖ ನಗರಗಳಿಗೆ ಗಂಟೆಗೆ 350 ಕಿಮೀ ವೇಗದ ರೈಲು ಸಂಪರ್ಕವನ್ನು ಕಲ್ಪಿಸಲಿದೆ.

ಕಠಿಣ ಹವಾಮಾನ ಮತ್ತು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ನಡುವೆಯೂ, ಚೀನಾ ಸರ್ಕಾರವು ರೋಬೋಟಿಕ್ಸ್ ಮತ್ತು AI ತಂತ್ರಜ್ಞಾನದ ನೆರವಿನಿಂದ ಕೇವಲ 38 ತಿಂಗಳಲ್ಲಿ ಜಗತ್ತಿನ ಅತಿ ದೊಡ್ಡ ರೈಲು ನಿಲ್ದಾಣವನ್ನು ಬೆಟ್ಟದ ಮೇಲೆ ಕಟ್ಟಿ ಮುಗಿಸಿರುವುದು ಆಧುನಿಕ ಇಂಜಿನಿಯರಿಂಗ್ ಇತಿಹಾಸದಲ್ಲೇ ಒಂದು ಅದ್ಭುತ ದಾಖಲೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Mon, 25 May 26

Source link

ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News | Why do Chinese people like to eat cockroaches?

ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಗಳನ್ನು ಪಳಗೊಂಡಿದೆ. ಆದರೆ ಚೀನಾ (China) ತನ್ನ ವಿಚಿತ್ರ ಆಹಾರ ಪದ್ಧತಿಯ ಕಾರಣದಿಂದಲೇ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿನ ಜನ ಹಾವಿನ ಸೂಪ್‌, ಬಾವಲಿ ಸೂಪ್, ನಾಯಿ ಮಾಂಸ, ಜೇಡ ಎಲ್ಲವನ್ನೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದೇ ರೀತಿ ಜಿರಳೆಗಳನ್ನು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಜಿರಳೆಗಳನ್ನು ಕಂಡರೆ ಹೊಡೆದು ಸಾಯಿಸುತ್ತೇವೆ. ಚೀನಾದ ಜನ ಮಾತ್ರ ಇದೇ ಜಿರಳೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಅಷ್ಟಕ್ಕೂ ಚೀನಿಯರು ಜಿರಳೆಗಳನ್ನು ತಿನ್ನೋದೇಕೆ, ಈ ಕುರಿತ ಆಸಕ್ತಿದಾಯಕ ಮಾಹಿತಿಯಲ್ಲಿ ತಿಳಿಯಿರಿ.

ಚೀನಾದ ಜನ ಜಿರಳೆಗಳನ್ನು ಏಕೆ ತಿನ್ನುತ್ತಾರೆ?

ಚೀನಾದಲ್ಲಿ ಜಿರಳೆ ಇತ್ಯಾದಿ ಕೀಟಗಳನ್ನು ಪ್ರೋಟೀನ್‌, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ, ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತದೆ ಮತ್ತು ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನಲಾಗುತ್ತದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಚೀನಾದ ಕ್ಸಿಚಾಂಗ್‌ನಲ್ಲಿರುವ ಒಂದು ಔಷಧ ಕಂಪನಿಯು ಒಂದು ದೊಡ್ಡ ಕಟ್ಟಡದಲ್ಲಿ ವಾರ್ಷಿಕವಾಗಿ ಸುಮಾರು 6 ಬಿಲಿಯನ್ ಜಿರಳೆಗಳನ್ನು ಸಾಕುತ್ತದೆ.  ವಿವಿಧ ಭಕ್ಷ್ಯಗಳು ಮಾತ್ರವಲ್ಲದೆ ಜಿರಳೆಗಳನ್ನು ಪುಡಿಮಾಡಿ ಅವುಗಳ ಸಿರಪ್ ಅನ್ನು ಸಹ ಚೀನಾದ ಜನ ಸೇವನೆ ಮಾಡುತ್ತಾರೆ. ಈ ಜಿರಳೆ ಸಿರಪ್‌ ಅನ್ನು ಸಾಂಪ್ರದಾಯಿಕ ಚೀನೀ ಔಷಧವಾಗಿ ಸೇವಿಸಲಾಗುತ್ತದೆ. ಅಲ್ಲಿ ಇದನ್ನು ಅತಿಸಾರ, ವಾಂತಿ, ಹೊಟ್ಟೆಯ ಹುಣ್ಣು, ಉಸಿರಾಟದ ತೊಂದರೆಗಳು ಮತ್ತು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಒಟ್ಟಾರೆಯಾಗಿ ಜಿರಳೆಗಳು ಪ್ರೋಟೀನ್‌, ಕೊಬ್ಬು ಮತ್ತು ಕಬ್ಬಿಣ, ಸತು ಇತ್ಯಾದಿ ಖನಿಜಗಳಿಂದ ಸಮೃದ್ಧವಾಗಿದ್ದು, ಹಂದಿ, ಕೋಳಿ, ಇತ್ಯಾದಿ ಮಾಂಸಗಳಿಗೆ ಹೋಲಿಸಿದರೆ ಇವುಗಳನ್ನು ಬೆಳೆಸುವುದು ಕೂಡ ಅಗ್ಗ ಮತ್ತು ಸುಲಭವಾಗಿದೆ. ಹಾಗಾಗಿ ಜಿರಳೆಗಳನ್ನು ಪ್ರೋಟೀನ್‌, ಪೋಷಕಾಂಶಗಳ ಉತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗಿರುವುದರಿಂದ ಚೀನಾದ ಜನ ಜಿರಳೆಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತದೆ.

ಇದನ್ನೂ ಓದಿ: ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ

ಅಲ್ಲದೆ ಚೀನಾದ ಹಲವು ಪ್ರದೇಶಗಳಲ್ಲಿ ನಾಯಿ ಮತ್ತು ಹಾವಿನ ಮಾಂಸವನ್ನು ಸೇವಿಸಲಾಗುತ್ತದೆ, ಒಂದು ವರದಿಯ ಪ್ರಕಾರ, ಚೀನಾದಲ್ಲಿ ಪ್ರತಿ ವರ್ಷ 10,000 ಟನ್‌ಗಳಿಗಿಂತ ಹೆಚ್ಚು ಹಾವುಗಳನ್ನು ತಿನ್ನಲಾಗುತ್ತಿತ್ತು ಮತ್ತು ಅನೇಕ ಪ್ರದೇಶಗಳಲ್ಲಿ, ನಾಯಿಗಳನ್ನು ಬೇಯಿಸಿ ತಿನ್ನಲಾಗುತ್ತಿತ್ತು. ಆದರೆ 2020 ರಲ್ಲಿ COVID-19 ಮಹಾಮಾರಿ ಏಕಾಏಕಿ ಹರಡಿದ ನಂತರ, ಅನೇಕ ಪ್ರಮುಖ ನಗರಗಳಲ್ಲಿ ನಾಯಿ ಮತ್ತು ಬೆಕ್ಕಿನ ಮಾಂಸ ಸೇವನೆಯನ್ನು ನಿಷೇಧಿಸಲಾಯಿತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weather Forecast: ಉತ್ತರ ಮತ್ತು ದಕ್ಷಿಣ ಒಳನಾಡಿನ ಜನರೇ ಎಚ್ಚರ!: ಮುಂದಿನ 5 ದಿನ ರಾಜ್ಯದಲ್ಲಿ ವರುಣನ ಆರ್ಭಟ ಜೋರು – Kannada News | IMD Alert: Karnataka Braces for 5 Days of Rain, Storms; Bengaluru Cooler

ಬೆಂಗಳೂರು, ಮೇ.25: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಮೇ 25 ರಿಂದ ಮೇ 29ರ ವರೆಗಿನ ಪ್ರಸ್ತುತ ಪರಿಸ್ಥಿತಿಯ ಕಂಪ್ಲೀಟ್ ವಿವರ ಇಲ್ಲಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 25, 26 ಮತ್ತು 29 ರಂದು ಉತ್ತರ ಒಳನಾಡಿನ (NIK) ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗಲಿದೆ. ಆದರೆ, ಮೇ 27 ಮತ್ತು 28 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ಇರಲಿದ್ದು, ಗಂಟೆಗೆ ಭರೋಬ್ಬರಿ 50 ರಿಂದ 60 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ (Gusty Wind) ಬೀಸುವ ಸಾಧ್ಯತೆ ಇದೆ. ಸಾರ್ವಜನಿಕರು ಹಳೆಯ ಕಟ್ಟಡ ಹಾಗೂ ಮರಗಳ ಬಳಿ ನಿಲ್ಲದಂತೆ ಸೂಚಿಸಲಾಗಿದೆ.

ಇತ್ತ ದಕ್ಷಿಣ ಒಳನಾಡಿನ (SIK) ಜಿಲ್ಲೆಗಳಲ್ಲಿಯೂ ಸಹ ಮೇ 25 ರಿಂದ ಮೇ 29 ರವರೆಗೆ ಕಠಿಣ ಹವಾಮಾನ ಇರಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಇದರೊಂದಿಗೆ ಕರಾವಳಿ ಕರ್ನಾಟಕದ (Coastal Karnataka) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 26 ರಿಂದ ಮೇ 29 ರವರೆಗೆ ಸತತ ನಾಲ್ಕು ದಿನಗಳ ಕಾಲ ಭಾರಿ ಗುಡುಗು ಮತ್ತು ಸಿಡಿಲಿನ ಆರ್ಭಟ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶುಕ್ರವಾರದವರೆಗೆ ಗುಡುಗು ಸಹಿತ ಭಾರೀ ಮಳೆ

ಬೆಂಗಳೂರಿನಲ್ಲಿ ಮೇ 29 ರವರೆಗೆ ಗುಡುಗು ಸಹಿತ ಮಳೆ:

ತೀವ್ರ ಉಷ್ಣಾಂಶ ಹಾಗೂ ಸುಡುವ ಬಿಸಿಲಿನಿಂದ ಕಂಗಾಲಾಗಿದ್ದ ರಾಜಧಾನಿ ಬೆಂಗಳೂರಿನ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ಅತ್ಯಂತ ತಂಪಾದ ಮುನ್ಸೂಚನೆಯೊಂದನ್ನು ನೀಡಿದೆ. ನಗರದಲ್ಲಿ ಮುಂದಿನ ಇಡೀ ವಾರ ಅಂದರೆ ಮೇ 29 ರವರೆಗೆ ವ್ಯಾಪಕ ಮಳೆಯಾಗುವ (Widespread Rains) ಬಲವಾದ ಸಾಧ್ಯತೆ ಇದ್ದು, ವರುಣನ ಆಗಮನದಿಂದ ತಾಪಮಾನ ಗಣನೀಯವಾಗಿ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಐಎಂಡಿ ಭಾನುವಾರ ಹೊರಡಿಸಿರುವ ಇತ್ತೀಚಿನ ವರದಿಯ ಪ್ರಕಾರ, ಮೇ ಕೊನೆಯ ವಾರದಾದ್ಯಂತ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹವಾಮಾನ ಕಂಪ್ಲೀಟ್ ಬದಲಾಗಲಿದೆ. ನಗರದಾದ್ಯಂತ ನಿರಂತರವಾಗಿ ದಟ್ಟ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಗುಡುಗು, ಸಿಡಿಲು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಮಳೆಯ ಮಾರುತಗಳು ಇಡೀ ನಗರದ ವಾತಾವರಣವನ್ನು ಕೂಲ್ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:39 pm, Mon, 25 May 26

Source link

ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು? – Kannada News | Bhatkal’s Moorin Katte Controversy: The History and Reason Behind the Communal Clash

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಐತಿಹಾಸಿಕ ಮೂರಿನ್​ ಕಟ್ಟೆ (Moorinakatte) ಕಿಚ್ಚು ಜೋರಾಗಿದೆ. ಕಟ್ಟೆ ಪುನರ್​ ನಿರ್ಮಾಣಕ್ಕೆ ಅನ್ಯ ಕೋಮಿನ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಕಟ್ಟೆಯನ್ನ ತೆರವುಗೊಳಿಸಲಾಗಿದೆ. ಇದು ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹಾಗೂ ಭಕ್ತರ ಅಪಾರ ಶ್ರದ್ಧಾಕೇಂದ್ರವಾಗಿರುವ ಮೂರಿನ್ ಕಟ್ಟೆಯ ವಿವಾದ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಭಟ್ಕಳದ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸ
  • ಮೂರಿನ್ ಕಟ್ಟೆಗೆ ಶಿರಸಿ ಮತ್ತು ಸಾಗರದ ಮಾರಿಕಾಂಬೆಯ ಸಂಬಂಧ
  • ಮುಸ್ಲಿಂರ ಆಕ್ರೋಶಕ್ಕೆ ಹಿಂದೂಗಳಿಂದ ಭಾರೀ ವಿರೋಧ

ಮೂರಿನ್ ಕಟ್ಟೆಯ ಇತಿಹಾಸವೇನು?

ಭಟ್ಕಳದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಐತಿಹಾಸಿಕ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸವಿದೆ. ಭಟ್ಕಳದ ಈ ಮೂರಿನ್ ಕಟ್ಟೆಗೆ ಸುಪ್ರಸಿದ್ಧ ಶಿರಸಿ ಮತ್ತು ಸಾಗರದ ಮಾರಿಕಾಂಬಾ ದೇವಿಯ ಧಾರ್ಮಿಕ ಸಂಬಂಧವಿದೆ. ಸಾಗರದಿಂದ ಶಿರಸಿವರೆಗೆ ಮಾರಿಕಾಂಬಾ ದೇವಿಯ ‘ವಜ್ಜೆ’ (ದೇವಿಯ ನಿತ್ಯೋಪಯೋಗದ ವಸ್ತುಗಳು) ಇಡುವ ಪವಿತ್ರ ಸ್ಥಳಗಳಿದ್ದು, ಆ ಪೈಕಿ ಭಟ್ಕಳದ ಈ ಮೂರಿನ್ ಕಟ್ಟೆ ಕೂಡ ಒಂದಾಗಿದೆ.

ಇದನ್ನೂ ಓದಿ: ಭಟ್ಕಳದಲ್ಲಿ ಮುರಿನಕಟ್ಟೆ ಧ್ವಂಸ ಬೆನ್ನಲ್ಲೇ ಹೈ ಅಲರ್ಟ್​: ಇಂದಿನಿಂದ 3 ದಿನ ಇಡೀ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

ದೇವಿಯ ಈ ಪವಿತ್ರ ವಜ್ಜೆಯನ್ನು ಕಾಲಕಾಲಕ್ಕೆ ಒಂದೂರಿಂದ ಇನ್ನೊಂದು ಊರಿಗೆ, ಅಂದರೆ ಸಾಗರದಿಂದ ಶಿರಸಿವರೆಗೆ ಸ್ಥಳಾಂತರಿಸಲಾಗುತ್ತಿರುತ್ತದೆ. ಈ ಕಟ್ಟೆಯ ಮೇಲೆ ದೇವಿಯ ವಜ್ಜೆಯನ್ನಿಟ್ಟು ಭಕ್ತರು ಹರಕೆ ಕೇಳಿಕೊಂಡರೆ, ತಾಯಿ ಮಾರಿಕಾಂಬೆಯು ಅದನ್ನು ಸಿದ್ಧಿ ಮಾಡಿಕೊಡುತ್ತಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ.

ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು?

ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೆದ್ದಾರಿಗೆ ಅಡ್ಡಿಯಾಗುತ್ತಿದ್ದ ಈ ಕಟ್ಟೆಯನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿತ್ತು. ಅದರಂತೆ, ಮೂಲ ಮೂರಿನ್ ಕಟ್ಟೆಗೆ ಯಾವುದೇ ಧಕ್ಕೆ ಮಾಡದೆ, ಅದರ ಮೂಲ ಸ್ಥಾನದ ಪಕ್ಕದಲ್ಲೇ ಹೊಸದಾಗಿ ಮೂರಿನ್ ಕಟ್ಟೆ ನಿರ್ಮಿಸಲು ಇತ್ತೀಚೆಗೆ ಫೌಂಡೇಶನ್ ಹಾಕಲಾಗಿತ್ತು. ಆದರೆ, ಈ ಹೊಸ ಫೌಂಡೇಶನ್ ಕಲ್ಲನ್ನು ಕಿತ್ತೆಸೆದಿರುವ ಮುಸ್ಲಿಂ ಸಮುದಾಯದ ಕೆಲವರು, ಇಲ್ಲಿ ಕಟ್ಟೆ ನಿರ್ಮಾಣ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಮುಸ್ಲಿಂ ಸಮುದಾಯದ ಈ ನಡೆಗೆ ಭಟ್ಕಳದ ಹಿಂದೂ ಮುಖಂಡರು ಹಾಗೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಭಟ್ಕಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ ಎಂ. ದೀಪನ್

ಇನ್ನು ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಒಟ್ಟಾರೆಯಾಗಿ, ಹೆದ್ದಾರಿ ಅಭಿವೃದ್ಧಿಯ ನಡುವೆ ಸೃಷ್ಟಿಯಾಗಿರುವ ಈ ಧಾರ್ಮಿಕ ಸಂಘರ್ಷ ಸದ್ಯ ಭಟ್ಕಳದಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿದ್ದರಾಮಯ್ಯ ದೆಹಲಿ ಭೇಟಿ ಹಿಂದೆಯೇ ಸತೀಶ್ ಜಾರಕಿಹೊಳಿ ಸೇರಿ 7 ಮಂದಿ ಸಚಿವರ ಪಟಲಾಂ ರಾಜಧಾನಿಗೆ ದೌಡು! – Kannada News | CM Siddaramaiah Delhi Visit: Satish Jarkiholi and 6 Other Karnataka Ministers Rush to Capital for High Command Meeting

ಬೆಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಲವು ಹಿರಿಯ ಸಚಿವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಹಾಗೂ ಸಚಿವರು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ರಾಜ್ಯ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಈ ಭೇಟಿಯು ಸಿಎಂ ಮತ್ತು ಡಿಸಿಎಂ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಐಟಿಬಿಟಿ ಪ್ರಿಯಾಂಕ್ ಖರ್ಗೆ ಅವರಂತಹ ಇತರ ಪ್ರಮುಖ ಸಚಿವರು ಕೂಡ ದೆಹಲಿಗೆ ತೆರಳುತ್ತಿರುವುದು ಕುತೂಹಲ ಹೆಚ್ಚಿಸಿದೆ.

ಸಿದ್ದರಾಮಯ್ಯ ಮಾತ್ರವಲ್ಲದೆ ಸಚಿವರಾದ ಹೆಚ್​ಕೆ ಪಾಟೀಲ್, ಹೆಚ್​ಸಿ ಮಹದೇವಪ್ಪ, ಬೈರತಿ ಸುರೇಶ್, ಕೆಜೆ ಜಾರ್ಜ್ ಮತ್ತು ಗೃಹ ಸಚಿವ ಡಾ. ಜಿ ಪರಮೇಶ್ವರ ಸಹ ದೆಹಲಿಗೆ ತೆರಳುತ್ತಿದ್ದಾರೆ. ರಾಜ್ಯದ ಆರು ತಿಂಗಳಿನಿಂದ ನಡೆಯುತ್ತಿರುವ ಕೆಲ ವಿಷಯಗಳು ಈ ಸಭೆಯ ಪ್ರಮುಖ ಅಜೆಂಡಾ ಆಗುವ ಸಾಧ್ಯತೆಯಿದೆ. ರಾಜ್ಯಸಭೆ ಚುನಾವಣೆ ಹಾಗೂ ಎಂಎಲ್ಸಿಗಳ ಕುರಿತು ಚರ್ಚಿಸಲು ಹೈಕಮಾಂಡ್ ಈ ನಾಯಕರನ್ನು ದೆಹಲಿಗೆ ಕರೆದಿದೆ ಎಂದು ಹೇಳಲಾಗಿದೆ. ಆದರೆ, ಒಟ್ಟಾರೆಯಾಗಿ ಪ್ರಮುಖ ನಾಯಕರ ದೆಹಲಿ ಭೇಟಿ ವೇಳೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೂದಿ ಮುಚ್ಚಿದ ಕೆಂಡದಂತಾಗಿದೆ ಭಟ್ಕಳ, ಮೂರಿನ್ ಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಸಮರ್ಥಿಸಿಕೊಂಡ ಮುಸ್ಲಿಂ ಮುಖಂಡ – Kannada News | Bhatkal Murin Katte Row: Muslim Leader Talks about Why opposed

ಕಾರವಾರ, (ಮೇ 25): ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮೂರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮೂರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ಹೊರಡಿಸಲಾಗಿದೆ. ಇನ್ನು ಭಟ್ಕಳದಲ್ಲಿನ ಹಿಂದೂಗಳ ಮೂರಿನ್ ಕಟ್ಟೆ ಧ್ವಂಸಗೊಳಿಸಿರುವುದಕ್ಕೆ ಮುಸ್ಲಿಂ ಮುಖಂಡ ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ Tv9 ಜೊತೆ ಭಟ್ಕಳ ತಂಜೀಮ್ ಅಧ್ಯಕ್ಷ ಇನಾಯತವುಲ್ಲಾ ಶಾಂಬಾಂದ್ರಿ ಮಾತನಾಡಿದ್ದು, ಮೂರಿನ್ ಕಟ್ಟೆ ಇದ್ದಲ್ಲಿಯೇ ಇದ್ರೆ ನಮಗೆ ಸಮಸ್ಯೆ ಇಲ್ಲ. ಆದ್ರೆ ಹೊಸ ಮೂರಿನ್ ಕಟ್ಟೆ ನಿರ್ಮಾಣಕ್ಕೆ ನಮ್ಮ ವಿರೋಧ ಇದೆ. ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸರ ಗಮನಕ್ಕೆ ತಂದಿದ್ವಿ. ಹೊಸ ಮೂರಿನ್ ಕಟ್ಟೆ ಮುಸ್ಲಿಂ ಮನೆ ಮುಂದೆ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಮತ್ತೆ ಸಮಸ್ಯೆ ಆಗಬಾರದೆಂದು ನಾವು ವಿರೋಧ ಮಾಡಿದ್ವಿ. ನಮ್ಮ ಹುಡುಗರಿಗೆ ಕಂಟ್ರೋಲ್ ಆಗಲಿಲ್ಲ ನಿನ್ನೆ ಒಡೆದ ಹಾಕಿದ್ದಾರೆ. ಇನ್ಮೂಂದೆಯೂ ಯಾವುದೇ ಕಾರಣಕ್ಕೂ ಅಲ್ಲಿ ನಿರ್ಮಾಣ ಮಾಡಬಾರದು. ಸ್ವಲ್ಪ ಮುಂದೆ ಹಿಂದೂ ಮನೆಗಳಿವೆ ಅಲ್ಲಿ ನಿರ್ಮಾಣ ಮಾಡಲಿ. ಈ ಬಗ್ಗೆ ಈಗಾಗಲೇ ಡಿಸಿ ಹಾಗೂ ಎಸ್ಪಿ ಗಮನಕ್ಕೆ ತಂದಿದ್ದೆವೆ. ಅದೆ ಸ್ಥಳದಲ್ಲಿ ಮತ್ತೆ ನಿರ್ಮಾಣ ಮಾಡುವುದಾದ್ರೆ ನಮ್ಮ ವಿರೋಧ ಇದೆ. ಮುಂದೆ ನಾವು ಕಾನೂನು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version