ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್ – Kannada News | Rajnath Singh inaugurates NIBE defence manufacturing complex in Shirdi

ಮುಂಬೈ, ಮೇ 25: ಪುಣೆ ಮೂಲದ ನೈಬ್ ಗ್ರೂಪ್​ನ (NIBE group) ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಥಾಪನೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟನೆ ಮಾಡಿದ್ದಾರೆ. ನೈಬ್ ಘಟಕದಲ್ಲಿ ರಾಕೆಟ್ ಲಾಂಚರ್ ಸಿಸ್ಟಂಗಳು, ಕಾಮಿಕಾಜೆ ಡ್ರೋನ್ ಹಾಗೂ ಇತರ ದೇಶೀಯ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ. ಉದ್ಘಾಟನೆ ವೇಳೆ ರಾಜನಾಥ್ ಸಿಂಗ್ ಅವರ ಜೊತೆ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರೂ ಉಪಸ್ಥಿತರಿದ್ದರು.

ನೈಬ್ ಸಂಸ್ಥೆ ಬೆಂಗಳೂರು ಸೇರಿದಂತೆ ದೇಶದ ಕೆಲವೆಡೆ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿದೆ. ಭಾರತೀಯ ಸೇನೆಗೆ ಸಾಕಷ್ಟು ಮಿಲಿಟರಿ ಶಸ್ತ್ರಾಸ್ತ್ರಗಳ ಪೂರೈಕೆ ಮಾಡುತ್ತದೆ. ಇತ್ತೀಚೆಗೆ ಅದು ಸೂರ್ಯಾಸ್ತ್ರ ಎನ್ನುವ ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಿದೆ. ಈ ಸೂರ್ಯಾಸ್ತ್ರ ಸಿಸ್ಟಂನಿಂದ 300 ಕಿಮೀ ದೂರದವರೆಗೆ ರಾಕೆಟ್​ಗಳನ್ನು ಹಾರಿಸಲು ಸಾಧ್ಯ. ಒಡಿಶಾದ ಚಂಡೀಪುರ್​ನಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್) ರಾಕೆಟ್ ಲಾಂಚರ್ ಸಿಸ್ಟಂ ಅನ್ನು ಪರೀಕ್ಷಿಸಲಾಯಿತು.

ಇದನ್ನೂ ಓದಿ: ವಾಯುಸೇನೆಗೆ ಭರ್ಜರಿ ಬಲ; ಫ್ರಾನ್ಸ್​ನಿಂದ ಇನ್ನೂ 114 ರಫೇಲ್ ಜೆಟ್ ಖರೀದಿಗೆ ಸಜ್ಜು; 90 ವಿಮಾನಗಳು ಭಾರತದಲ್ಲೇ ಜೋಡಣೆ

ಅಹಿಲ್ಯಾ ನಗರ್ ಜಿಲ್ಲೆಯಲ್ಲಿರುವ ಈ ನೈಬ್ ಘಟಕದಲ್ಲಿ ಸಮಗ್ರ ಉತ್ಪಾದನಾ ವ್ಯವಸ್ಥೆಯನ್ನು ನಿರ್ಮಿಲಾಗುತ್ತಿದೆ. ಮದ್ದುಗುಂಡುಗಳು, ಮಿಸೈಲ್ ಸಿಸ್ಟಂಗಳು, ಸುಧಾರಿತ ಡಿಫೆನ್ಸ್ ಟೆಕ್ನಾಲಜಿ, ಕ್ಲೀನ್ ಎನರ್ಜಿ ಇತ್ಯಾದಿಯನ್ನು ಒಂದೇ ಕಡೆ ನೆಲೆಗೊಳಿಸಲಾಗಿದೆ.

ಭಾರತ 25-30 ವರ್ಷದಲ್ಲಿ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶವಾಗಲಿದೆ: ರಾಜನಾಥ್

ಭಾರತವನ್ನು ಮುಂದಿನ 25-30 ವರ್ಷದಲ್ಲಿ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ದೇಶವಾಗಲು ಯಾವ ಶಕ್ತಿಗೂ ತಡೆಯಲು ಆಗದು ಎಂದು ಈ ವೇಳೆ ಡಿಫೆನ್ಸ್ ಮಿನಿಸ್ಟರ್ ರಾಜನಾಥ್ ಸಿಂಗ್ ಹೇಳಿದರು.

ಇದನ್ನೂ ಓದಿ: 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಪೈಲಟ್‌ಗೆ ಹೃದಯಾಘಾತ; ಪ್ರಯಾಣಿಕರ ಕತೆ ಏನಾಯ್ತು?

ಇದೇ ವೇಳೆ ಅವರು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಹೆಚ್ಚುತ್ತಿರುವ ಕುರಿತು ಮಾತನಾಡಿದರು. ಕೆಲ ವರ್ಷಗಳ ಹಿಂದೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ತೊಡಗಿದ್ದ ಖಾಸಗಿ ಕಂಪನಿಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಈಗ ಶೇ. 25-30ಕ್ಕೆ ಏರಿದೆ. ಮುಂದಿನ ವರ್ಷಗಳಲ್ಲಿ ಸಂಖ್ಯೆ ಶೇ. 50ಕ್ಕೆ ಏರುವ ಗುರಿ ಇದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು: ಮಳೆಗಾಲದ ಮುಂಜಾಗ್ರತಾ ಕ್ರಮಗಳ ನಿರ್ಲಕ್ಷ್ಯ ಆರೋಪ, ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಕಿಡಿ! – Kannada News | Mangaluru Monsoon Preparedness Row: Vedavyas Kamath Criticises Dinesh Gundu Rao Over Negligence in Flooding Precautions

Mangalore Politicsaಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಶಾಸಕ ವೇದವ್ಯಾಸ್ ಕಾಮತ್ ಕಿಡಿImage Credit source: tv9

ಮಂಗಳೂರು, ಮೇ 25: ಕರಾವಳಿ (Coastal Karnataka) ಭಾಗದಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು, ಇಲ್ಲಿನ ಸಾರ್ವಜನಿಕರಲ್ಲಿ ಆತಂಕದ ನೆರಳು ಆವರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಮಳೆಗಾಲ ಸೃಷ್ಟಿಸಿದ ಭೀಕರ ಅವಾಂತರಗಳು ಮತ್ತು ಪ್ರಾಣಹಾನಿಯ ಕಹಿ ನೆನಪುಗಳು ಜನರನ್ನು ಇಂದಿಗೂ ಬೆಚ್ಚಿಬೀಳಿಸುತ್ತವೆ. ಆದರೆ, ಈ ಬಾರಿಯ ಮುಂಗಾರು (Monsoon) ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದ್ದರೂ, ಮಂಗಳೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹಾಗೂ ಪಾಲಿಕೆ ಮಳೆಗಾಲದ ಪೂರ್ವಸಿದ್ಧತೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮುಂಜಾಗ್ರತಾ ಸಿದ್ಧತೆಯ ವೈಫಲ್ಯದ ವಿಷಯ ಇದೀಗ ಕರಾವಳಿ ರಾಜಕಾರಣದಲ್ಲಿ ಭಾರಿ ಕೆಸರೆರಚಾಟಕ್ಕೂ ಕಾರಣವಾಗಿದೆ.

ಮುಖ್ಯಾಂಶಗಳು

  • ಮಳೆಗಾಲ ಸಮೀಪಿಸುತ್ತಿದ್ದರೂ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ.
  • ಪ್ರತಿ ವಾರ್ಡ್‌ಗೆ ಗ್ಯಾಂಗ್‌ಮ್ಯಾನ್ ನೇಮಿಸದ ಹಾಗೂ ಸಭೆ ನಡೆಸದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ತೀವ್ರವಾಗಿ ಕಿಡಿಕಾರಿದ್ದಾರೆ.
  • ಶಾಸಕರ ಆರೋಪಗಳನ್ನು ತಳ್ಳಿಹಾಕಿರುವ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಡಳಿತದೊಂದಿಗೆ ಈಗಾಗಲೇ ಸಭೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೂಳೆತ್ತದ ರಾಜಕಾಲುವೆಗಳು, ಕೃತಕ ನೆರೆಯ ಭೀತಿ

ಪ್ರತಿ ವರ್ಷ ಭಾರಿ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಕೆರೆಯಂತಾಗುವುದು ಸಾಮಾನ್ಯವಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಬಾರಿಯೂ ಪಾಲಿಕೆಯು ಕೇವಲ ಹೆಸರಿಗಷ್ಟೇ ಹೂಳೆತ್ತುವ ಕಾಮಗಾರಿ ನಡೆಸಿದ್ದು, ಜೆಸಿಬಿಗಳು ಹೋಗದ ಕಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ದೂರಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಅಪಾಯವಿರುವ ಸ್ಥಳಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿದೆ.

ಇದನ್ನೂ ಓದಿ: ವೀಕೆಂಡ್, ಬೇಸಿಗೆ ರಜೆ ಎಫೆಕ್ಟ್​​: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಸಾಗರ

ಅಲ್ಲದೆ ಮಳೆಗಾಲ ಮುಗಿಯುವವರೆಗೆ ಯಾವುದೇ ರಸ್ತೆ ಅಥವಾ ಮಣ್ಣು ಅಗೆಯುವ ಕಾಮಗಾರಿ ನಡೆಸದಂತೆ ಕಠಿಣ ಆದೇಶ ಹೊರಡಿಸಲಾಗಿದೆ. ಆದರೆ, ಕೇವಲ ಕಾಗದದ ಮೇಲಿರುವ ಈ ಆದೇಶಗಳು ತಳಮಟ್ಟದಲ್ಲಿ ಸರಿಯಾಗಿ ಜಾರಿಯಾಗದಿದ್ದರೆ, ಈ ಬಾರಿಯೂ ಕರಾವಳಿಯಲ್ಲಿ ಮನುಷ್ಯನ ಎಡವಟ್ಟುಗಳಿಂದಾಗಿ ಕೃತಕ ಪ್ರವಾಹದ ಅವಾಂತರಗಳು ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರ ಭವಿಷ್ಯ: ಸಿಗಬೇಕಿದ್ದ ಕೆಲಸಗಳು ಅನ್ಯರ ಪಾಲಾಗುವ ಆತಂಕ!: ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು? – Kannada News | Rashi Bhavishya May 24 30, 2026: Your Fortunes and Forecast for All 12 Zodiacs

2026ರ ಮೇ 24ರಿಂದ 30ರವರೆಗೆ ಕೊನೆಯ ವಾರದಲ್ಲಿ ಸಮಯದ ಕೊರತೆಯಿಂದ ಯೋಜನೆ ದಿಕ್ಕು ತಪ್ಪುವುದು, ಸಿಗಬೇಕಿದ್ದ ಕಾರ್ಯಗಳು ಅನ್ಯರ ಪಾಲಾಗುವುದು, ಹಣದ ಹೊಂದಾಣಿಕೆಗೆ ಓಡಾಟ ಇಂತಹ ನಕಾರಾತ್ಮಕ ಅಂಶಗಳು ಅಧಿಕವಾಗಿ ಈ ವಾರ ಇರಲಿದೆ. ಎಲ್ಲ ಕಡೆಯೂ ದೃಷ್ಟಿ ಇಟ್ಟು ಕಾರ್ಯ ಮಾಡಬೇಕು.

ಮೇಷ ರಾಶಿ :

​ಮಂಗಳನ ಶುಭ ಪ್ರಭಾವದಿಂದ ವಾರದ ಆರಂಭದಲ್ಲಿ ಧನಲಾಭವಾಗಲಿದೆ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದ್ದು, ಹೊಸ ಜವಾಬ್ದಾರಿಗಳು ಸಿಗಲಿವೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಭರವಸೆಯಿಂದ ಮುನ್ನಡೆಯಿರಿ.


ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಆಸ್ತಿ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ದೂರದ ಪ್ರಯಾಣದಿಂದ ಲಾಭವಿದೆ. ವಾರದ ಮಧ್ಯಭಾಗದಲ್ಲಿ ಶುಭ ವಾರ್ತೆ ಕೇಳುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ತಾಳ್ಮೆ ಮುಖ್ಯ.


ಮಿಥುನ ರಾಶಿ :

​ತ್ರಿಗ್ರಹ ಕೂಟದಿಂದ ಈ ವಾರ ನಿಮಗೆ ಅತ್ಯಂತ ಅದೃಷ್ಟ ತರಲಿದೆ. ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಅಪೇಕ್ಷಿತ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಲಿದೆ.

​ಕರ್ಕಾಟಕ ರಾಶಿ :

​ಚಂದ್ರನ ಸಂಚಾರದಿಂದ ವಾರದ ಆರಂಭದಲ್ಲಿ ಸ್ವಲ್ಪ ಮಾನಸಿಕ ಗೊಂದಲವಿರಬಹುದು. ಆದರೆ ದ್ವಿತೀಯಾರ್ಧದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಕಠಿಣ ಶ್ರಮಕ್ಕೆ ತಕ್ಕಂತೆ ವೃತ್ತಿಯಲ್ಲಿ ಉತ್ತಮ ಗೌರವ, ಧನಲಾಭ ದೊರೆಯಲಿದೆ.


ಸಿಂಹ ರಾಶಿ :

​ಲಾಭಸ್ಥಾನದ ಪ್ರಭಾವದಿಂದ ಈ ವಾರ ಆದಾಯದ ಮೂಲಗಳು ಹೆಚ್ಚಲಿವೆ. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ವ್ಯವಹಾರದಲ್ಲಿ ಪ್ರಗತಿಯಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ.


ಕನ್ಯಾ ರಾಶಿ :

​ಶನಿಯ ಶುಭ ಸ್ಥಿತಿಯಿಂದಾಗಿ ಕೋರ್ಟ್ ಕಚೇರಿ ಕೆಲಸಗಳು ಮತ್ತು ಸ್ಪರ್ಧೆಗಳಲ್ಲಿ ವಿಜಯ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಸಣ್ಣಪುಟ್ಟ ಏರುಪೇರುಗಳು ಸರಿಯಾಗಲಿವೆ. ನಿರೀಕ್ಷಿತ ಆರ್ಥಿಕ ಸಹಾಯ ಹಸ್ತ ದೊರೆಯಲಿದೆ.


ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ಮನಸ್ಸಿನಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಲೋಚನೆಗಳು ಹೆಚ್ಚಲಿವೆ. ಹೊಸ ಹೂಡಿಕೆಗೆ ವಾರ ಪೂರಕವಾಗಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಸಂತೋಷ ನೆಲೆಸಲಿದೆ.


ವೃಶ್ಚಿಕ ರಾಶಿ :

​ವಾರದ ಆರಂಭದಲ್ಲಿ ಚಂದ್ರನ ಪ್ರಭಾವದಿಂದ ಖರ್ಚುಗಳು ಹೆಚ್ಚಾಗಬಹುದು, ನಿಧಾನ ನಡೆ ಅಗತ್ಯ. ಆದರೆ ವಾರಾಂತ್ಯದ ವೇಳೆಗೆ ಮಂಗಳನ ಬಲದಿಂದ ಆಸ್ತಿ ಒಡಂಬಡಿಕೆಗಳು ಯಶಸ್ವಿಯಾಗಲಿವೆ. ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದ್ದು, ಉತ್ಸಾಹ ಮೂಡಲಿದೆ.


ಧನು ರಾಶಿ :

​ಗುರುವಿನ ಕೃಪೆಯಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರ್ಥಿಕ ಮುಗ್ಗಟ್ಟುಗಳು ನಿವಾರಣೆಯಾಗಿ ಧನಹರಿವು ಸುಲಭವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸ್ನೇಹಿತರಿಂದ ನಿರೀಕ್ಷಿತ ಸಹಾಯ ಮತ್ತು ಮಾರ್ಗದರ್ಶನ ದೊರೆಯಲಿದೆ.

​ಮಕರ ರಾಶಿ :

​ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಶನಿಯ ಬಲದಿಂದ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ. ನೂತನ ಗೃಹೋಪಯೋಗಿ ವಸ್ತುಗಳ ಖರೀದಿ ಅಥವಾ ಆಸ್ತಿ ವೃದ್ಧಿಯಾಗುವ ಶುಭ ಯೋಗವಿದೆ.

​ಕುಂಭ ರಾಶಿ :

​ಭಾಗ್ಯೋದಯದ ವಾರವಿದು. ಸುದೀರ್ಘ ಕಾಲದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಉನ್ನತ ಶಿಕ್ಷಣದ ಪ್ರಯತ್ನಗಳಿಗೆ ವೇಗ ಸಿಗಲಿದೆ. ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ನೆಮ್ಮದಿ ಮತ್ತು ಹೆಮ್ಮೆಯ ವಾರ್ತೆಗಳನ್ನು ಕೇಳುವಿರಿ.

ಇದನ್ನೂ ಓದಿ: ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ

​ಮೀನ ರಾಶಿ :

​ಕೆಲಸದ ಒತ್ತಡ ಹೆಚ್ಚಿದ್ದರೂ, ವಾರಾಂತ್ಯದಲ್ಲಿ ನಿಶ್ಚಿಂತೆ ಮೂಡಲಿದೆ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಕಷ್ಟದ ಕೆಲಸಗಳು ನಿವಾರಣೆಯಾಗಲಿವೆ. ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಕುಟುಂಬ ಸದಸ್ಯರ ಸಲಹೆಗಳು ವೃತ್ತಿ ಬೆಳವಣಿಗೆಗೆ ಸಹಕಾರಿಯಾಗಲಿವೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:03 pm, Mon, 25 May 26

Source link

Skin Cancer: ಸ್ಮಾರ್ಟ್ ಟ್ಯಾಟೂ ಮೂಲಕ ಆರಂಭಿಕ ಹಂತದಲ್ಲೇ ಚರ್ಮದ ಕ್ಯಾನ್ಸರ್ ಪತ್ತೆ – Kannada News | Detection of skin cancer at the early stage through a smart tattoo is Possible

ನವದೆಹಲಿ, ಮೇ 25: ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ವೈದ್ಯಕೀಯ ಲೋಕದ ದೊಡ್ಡ ಸವಾಲುಗಳಲ್ಲಿ ಒಂದು. ಅದರಲ್ಲೂ ಚರ್ಮದ ಕ್ಯಾನ್ಸರ್ (Skin Cancer) ಕಣ್ಣಿಗೆ ಕಾಣಿಸುವಷ್ಟರ ಮಟ್ಟಿಗೆ ಬೆಳೆಯುವ ಮುನ್ನವೇ ಅದನ್ನು ಪತ್ತೆಹಚ್ಚಲು ವಿಜ್ಞಾನಿಗಳು ಈಗ ಒಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ಅದೇ ‘ಸ್ಮಾರ್ಟ್ ಟ್ಯಾಟೂ’ (Smart Tattoo). ಕೆನಡಾದ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡೆ ಲಾ ರೆಚೆರ್ಚೆ ಸೈಂಟಿಫಿಕ್ (INRS) ಮತ್ತು ಯೂನಿವರ್ಸಿಟಿ ಡಿ ಮಾಂಟ್ರಿಯಲ್‌ನ ಸಂಶೋಧಕರು ಜಂಟಿಯಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಏನಿದು ‘ಸ್ಮಾರ್ಟ್ ಟ್ಯಾಟೂ’ ತಂತ್ರಜ್ಞಾನ?:

ಇದು ನಾವು ಸಾಮಾನ್ಯವಾಗಿ ಚರ್ಮದ ಮೇಲೆ ಹಾಕಿಸಿಕೊಳ್ಳುವ ಮಾಮೂಲಿ ಟ್ಯಾಟೂ ಅಲ್ಲ. ಇದೊಂದು ತಾತ್ಕಾಲಿಕ ಪ್ಯಾಚ್ (Patch) ಆಗಿದ್ದು, ಚರ್ಮಕ್ಕೆ ಯಾವುದೇ ನೋವಾಗದಂತೆ ಅತ್ಯಂತ ಸೂಕ್ಷ್ಮವಾದ ಮೈಕ್ರೋನೀಡಲ್‌ಗಳನ್ನು ಒಳಗೊಂಡಿರುತ್ತದೆ. ಈ ಮೈಕ್ರೋನೀಡಲ್‌ಗಳ ಮೂಲಕ ಚರ್ಮದ ಅತ್ಯಂತ ಮೇಲ್ಪದರದ ಕೆಳಗೆ ವಿಶೇಷವಾದ ನ್ಯಾನೊಪಾರ್ಟಿಕಲ್‌ಗಳನ್ನು ಇಳಿಸಲಾಗುತ್ತದೆ. ಈ ನ್ಯಾನೊಪಾರ್ಟಿಕಲ್‌ಗಳು ಚರ್ಮದ ಒಳಗೆ ಸೇರಿದ ತಕ್ಷಣ ಒಂದು ಅತ್ಯಾಧುನಿಕ ಡಿಜಿಟಲ್ ಥರ್ಮಾಮೀಟರ್‌ನಂತೆ ಕೆಲಸ ಮಾಡಲು ಆರಂಭಿಸುತ್ತವೆ. ಇದನ್ನೇ ವಿಜ್ಞಾನಿಗಳು ‘ಸ್ಮಾರ್ಟ್ ಟ್ಯಾಟೂ’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆಯೇ ಕ್ಯಾನ್ಸರ್ ಅಪಾಯ ಹೆಚ್ಚಳಕ್ಕೆ ಕಾರಣ; ತಜ್ಞರಿಂದ ಎಚ್ಚರಿಕೆ

ಇದು ಕ್ಯಾನ್ಸರ್ ಅನ್ನು ಹೇಗೆ ಪತ್ತೆಹಚ್ಚುತ್ತದೆ?:

ಕ್ಯಾನ್ಸರ್ ಕೋಶಗಳ ಮೂಲ ಸ್ವಭಾವವೆಂದರೆ, ಅವು ಸಾಮಾನ್ಯ ಜೀವಕೋಶಗಳಿಗಿಂತ ಹೆಚ್ಚಿನ ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಆ ಭಾಗದಲ್ಲಿ ಚರ್ಮದ ತಾಪಮಾನವು ಅತ್ಯಂತ ಸೂಕ್ಷ್ಮವಾಗಿ ಹೆಚ್ಚಾಗುತ್ತದೆ.

ಈ ಸ್ಮಾರ್ಟ್ ಟ್ಯಾಟೂ ಇರುವ ಜಾಗಕ್ಕೆ ವಿಶೇಷ ಬೆಳಕನ್ನು ಹಾಯಿಸಿದಾಗ, ಒಳಗಿರುವ ನ್ಯಾನೊಪಾರ್ಟಿಕಲ್‌ಗಳು ಮರಳಿ ದೃಶ್ಯ ಬೆಳಕನ್ನು ಸೂಸುತ್ತವೆ. ಈ ಬೆಳಕಿನ ಅವಧಿಯನ್ನು ಸಂಶೋಧಕರು ವಿಶೇಷ ಹೈ-ಸ್ಪೀಡ್ ಕ್ಯಾಮೆರಾಗಳ ಮೂಲಕ ಸೆರೆಹಿಡಿಯುತ್ತಾರೆ. ಚರ್ಮದ ಯಾವ ಭಾಗದಲ್ಲಿ ಅತಿ ಸೂಕ್ಷ್ಮವಾಗಿ ಉಷ್ಣಾಂಶ ಹೆಚ್ಚಾಗಿದೆಯೋ, ಅಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುತ್ತಿವೆ ಎಂಬುದನ್ನು ಈ ತಂತ್ರಜ್ಞಾನ ನಿಖರವಾಗಿ ತೋರಿಸುತ್ತದೆ.

ಈ ಹೊಸ ತಂತ್ರಜ್ಞಾನದ ಪ್ರಮುಖ ಪ್ರಯೋಜನಗಳೇನು?:

ಪ್ರಸ್ತುತ ಇರುವ ಸ್ಕ್ಯಾನಿಂಗ್ ವಿಧಾನಗಳಲ್ಲಿ ಚರ್ಮದ ಮೇಲಿನ ಗಡ್ಡೆ ಅಥವಾ ಕ್ಯಾನ್ಸರ್ ಕಲೆ ಕನಿಷ್ಠ 5 ಮಿಲಿಮೀಟರ್ ಬೆಳೆದ ನಂತರವಷ್ಟೇ (ಕಣ್ಣಿಗೆ ಕಾಣಿಸುವ ಹಂತದಲ್ಲಿ) ಪತ್ತೆಯಾಗುತ್ತದೆ. ಆದರೆ, ಈ ಸ್ಮಾರ್ಟ್ ಟ್ಯಾಟೂ ತಂತ್ರಜ್ಞಾನವು ಚರ್ಮದ ಮೇಲೆ ಯಾವುದೇ ಕಲೆ ಮೂಡುವ ಮುನ್ನವೇ, ಅಂದರೆ ಕ್ಯಾನ್ಸರ್ ಕೋಶಗಳು ಸೃಷ್ಟಿಯಾದ ಕೇವಲ 4 ದಿನಗಳಲ್ಲೇ ಅದನ್ನು ಪತ್ತೆಹಚ್ಚಬಲ್ಲದು!

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಸೂಜಿ ಚುಚ್ಚುವ ಯಾವುದೇ ನೋವಿಲ್ಲದೆ ಸುಲಭವಾಗಿ ಚರ್ಮದ ಮೇಲೆ ಈ ಟ್ಯಾಟೂ ಹಾಕಬಹುದು. ಸಾಂಪ್ರದಾಯಿಕ ಇನ್ಫ್ರಾರೆಡ್ ಕ್ಯಾಮೆರಾಗಳಿಗಿಂತ ಇದು ಅತ್ಯಂತ ನಿಖರವಾದ ಉಷ್ಣಾಂಶದ ಮ್ಯಾಪಿಂಗ್ ವಿವರಗಳನ್ನು ನೀಡುತ್ತದೆ. ಈಗಾಗಲೇ ಈ ಸಂಶೋಧನೆಯನ್ನು ಯಶಸ್ವಿಯಾಗಿ ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಇಲಿಗಳಲ್ಲಿ ಕಂಡುಬರುವ ಹರಡುವಿಕೆಯು ಮಾನವನ ಚರ್ಮದ ಕ್ಯಾನ್ಸರ್ ತಳಿಗಳಿಗೇ (Melanoma) ಹೋಲುತ್ತಿರುವುದರಿಂದ ಶೀಘ್ರದಲ್ಲೇ ಮಾನವರ ಮೇಲಿನ ಕ್ಲಿನಿಕಲ್ ಪ್ರಯೋಗಗಳು ಆರಂಭವಾಗಲಿವೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಯಶಸ್ವಿಯಾದರೆ, ಕೇವಲ ಚರ್ಮದ ಕ್ಯಾನ್ಸರ್ ಮಾತ್ರವಲ್ಲದೆ ದೇಹದ ಪಿಎಚ್ (pH) ಮಟ್ಟ ಹಾಗೂ ಇತರ ಗಂಭೀರ ಕಾಯಿಲೆಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಇದು ವೈದ್ಯಕೀಯ ಜಗತ್ತಿಗೆ ಹೊಸ ದಾರಿಯಾಗಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ – Kannada News | Karnataka Power Tussle: Congress High command calls Siddaramaiah, here Is Here Is Inside Details

ಬೆಂಗಳೂರು, (ಮೇ 25): ಕರ್ನಾಟಕ ಕಾಂಗ್ರೆಸ್​ನಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಇಷ್ಟು ದಿನ ನಡೆದ ಪಟ್ಟದ ಪಗಡೆಯಾಟಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗ್ತಿದೆ. ಸಿಎಂ ಕುರ್ಚಿ ಫೈಟ್ ಕಂಪ್ಲೀಟ್ ಹೈಕಮಾಂಡ್​ ಅಂಗಳಕ್ಕೆ ಶಿಫ್ಟ್ ಆಗಿದ್ದು, ಪಟ್ಟದ ಆಟಕ್ಕೆ ಇತಿಶ್ರೀ ಹಾಡೋಕೆ ಹೈಕಮಾಂಡ್ ಒಂದೆಜ್ಜೆ ಮುಂದೆ ಇಟ್ಟೇ ಬಿಟ್ಟಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಗೆ ಬುಲಾವ್ ಕೊಡೋ ಮೂಲಕ ಇಡೀ ರಾಜ್ಯದ ಚಿತ್ತ ಹೈಕಮಾಂಡ್​ನತ್ತ ಹರಿಸುವಂತೆ ಮಾಡಿದ್ದು, ಹೈಕಮಾಂಡ್ ಅಂಗಳದಲ್ಲಿ ಅದೇನು ತೀರ್ಮಾನವಾಗುತ್ತೋ ಎನ್ನುವ ಕುತೂಹಲ ಹುಟ್ಟಿಸಿದೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಆಗ್ತಿರೋ ಕ್ಷಿಪ್ರ ಬೆಳವಣಿಗೆಗಳನ್ನ ನೋಡ್ತಿದ್ರೆ, ಸಿಎಂ ಕುರ್ಚಿ ಫೈಟ್​ ಒಂದು ರೀತಿಯಲ್ಲಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತೆ ಕಾಣಿಸ್ತಿದೆ. ಯಾಕೆ ಇದೀಗ ಹೀಗೆ ಹೇಳ್ತಿದ್ದೀವಿ ಅಂದ್ರೆ ಅದಕ್ಕೆ ತಕ್ಕಂತೆಯೇ ಹೈಕಮಾಂಡ್ ಮಟ್ಟದಲ್ಲಿ ಬೆಳವಣಿಗಳು ಕೂಡ ಆಗ್ತಿದೆ.  ಇನ್ನು ಸಿಎಂಗೆ ಹೈಕಮಾಂಡ್ ಬುಲಾವ್ ಹಿಂದಿದೆ ರೋಚಕ ಸ್ಟೋರಿ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಬೆಲೆ ಏರಿಕೆ ಬಿಸಿ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಮರಳಿದ ರೈತರು; ಟ್ರ್ಯಾಕ್ಟರ್ ಬಿಟ್ಟು ಎತ್ತುಗಳಿಂದ ಉಳುಮೆ – Kannada News | Fuel price hike forces farmers to return to bullock plowing as tractor costs rise

ಎತ್ತುಗಳಿಂದ ಉಳುಮೆ ಮಾಡುತ್ತಿರುವುದು Image Credit source: tv9 kannada

ಬೀದರ್​​, ಮೇ 25: ರಾಜ್ಯದಲ್ಲಿ ತೈಲ ಬೆಲೆ ಏರಿಕೆಯ ಬಿಸಿ (Fuel Price Hike) ಇದೀಗ ನೇರವಾಗಿ ದೇಶದ ಅಣ್ಣದಾತನಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ ಕೃಷಿ ಚಟುವಟಿಕೆಗಳ ವೆಚ್ಚ ಗಗನಕ್ಕೇರಿದ್ದು, ರೈತರು ಕಂಗಾಲಾಗಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದರ ದುಬಾರಿಯಾದ ಹಿನ್ನೆಲೆಯಲ್ಲಿ, ಬೀದರ್ (bidar) ಜಿಲ್ಲೆಯ ರೈತರು ಮತ್ತೆ ಹಳೆಯ ಸಾಂಪ್ರದಾಯಿಕ ಕೃಷಿ ಪದ್ಧತಿಯತ್ತ ಮುಖ ಮಾಡಿದ್ದಾರೆ. ಟ್ರ್ಯಾಕ್ಟರ್ ಬದಲಿಗೆ ಎತ್ತುಗಳನ್ನು ಖರೀದಿಸಿ ಉಳುಮೆ ಮಾಡಲು ಮುಂದಾಗಿದ್ದು, ಜಾನುವಾರು ಮಾರುಕಟ್ಟೆಯಲ್ಲಿ ಎತ್ತುಗಳ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ.

ಮುಖ್ಯಾಂಶಗಳು

  • ಬೀದರ್‌ನಲ್ಲಿ ಗಗನಕ್ಕೇರಿದ ಟ್ರ್ಯಾಕ್ಟರ್ ಬಾಡಿಗೆ
  • ಎತ್ತುಗಳ ಖರೀದಿಗೆ ಮುಗಿಬಿದ್ದ ರೈತರು
  • ಎತ್ತುಗಳಿಂದ ಉಳುಮೆಗೆ ಮುಂದಾದ ಅಣ್ಣದಾತರು

ಕೃಷಿ ಕ್ಷೇತ್ರಕ್ಕೂ ಹೊಡೆದ ನೀಡಿದ ತೈಲ ಬೆಲೆ ಏರಿಕೆ

ರಾಜ್ಯದಲ್ಲಿ ತೈಲ ಬೆಲೆ ಏರಿಕೆಯಾಗಿರುವುದು ಕೃಷಿ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದೆ. ಬಿತ್ತನೆಗೂ ಮುನ್ನ ಹೊಲ ಹದಗೊಳಿಸಲು ಬಳಸುವ ಟ್ರ್ಯಾಕ್ಟರ್ ಬಾಡಿಗೆ ದರದಲ್ಲಿ ಭಾರೀ ಏರಿಕೆಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಒಂದು ಎಕರೆ ಹೊಲಕ್ಕೆ ನೇಗಿಲು ಹೊಡೆಯಲು ಎರಡು ಸಾವಿರ ರೂ. ಒಳಗೇ ಟ್ರ್ಯಾಕ್ಟರ್ ಸಿಗುತ್ತಿತ್ತು. ಆದರೆ ಇದೀಗ ಅದೇ ಕೆಲಸಕ್ಕೆ ಎರಡೂವರೆ ಸಾವಿರ ರೂಪಾಯಿವರೆಗೂ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಇದರಿಂದ ಬೇಸತ್ತ ರೈತರು, ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತೆ ಸಾಂಪ್ರದಾಯಿಕ ಎತ್ತುಗಳ ಉಳುಮೆಯತ್ತ ಒಲವು ತೋರುತ್ತಿದ್ದಾರೆ. ಟ್ರ್ಯಾಕ್ಟರ್ ಬಾಡಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಎತ್ತುಗಳನ್ನು ಖರೀದಿಸುವುದೇ ದೀರ್ಘಾವಧಿ ಲಾಭಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಅಣ್ಣದಾತರು ಬಂದಿದ್ದಾರೆ.

ಜೋಡೆತ್ತುಗಳಿಗೆ ನಾಲ್ಕು ಲಕ್ಷ ರೂ 

ಇನ್ನು ಬೀದರ್ ಜಿಲ್ಲೆಯ ಔರಾದ್ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಉಳುಮೆ ಎತ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ. ಕೇವಲ ಸ್ಥಳೀಯ ರೈತರು ಮಾತ್ರವಲ್ಲದೆ, ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ನೂರಾರು ರೈತರು ಇಲ್ಲಿಗೆ ಆಗಮಿಸಿ ಎತ್ತುಗಳನ್ನು ಖರೀದಿಸುತ್ತಿದ್ದಾರೆ.

ಎತ್ತುಗಳ ಮಾರಾಟ ಜೋರು

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಜೋಡಿ ಉಳುಮೆ ಎತ್ತುಗಳ ಬೆಲೆ ಒಂದೂವರೆ ಲಕ್ಷ ರೂಪಾಯಿಯಿಂದ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿದೆ. ತೀವ್ರ ಬಿರು ಬಿಸಿಲಿನಿಂದಾಗಿ ಮೇವು ಮತ್ತು ನೀರಿನ ಕೊರತೆ ಎದುರಾಗುತ್ತಿದ್ದರೂ ಸಹ, ಕೃಷಿ ವೆಚ್ಚವನ್ನು ಸರಿದೂಗಿಸಲು ರೈತರು ಎತ್ತುಗಳನ್ನು ಸಾಕಲು ತೀವ್ರ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಅನ್ನ ನೀಡುವ ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ

ಸುಮಾರು 15 ವರ್ಷಗಳ ಹಿಂದೆ ಬಹುತೇಕ ರೈತರು ಎತ್ತುಗಳನ್ನೇ ಬಳಸಿ ಕೃಷಿ ಮಾಡುತ್ತಿದ್ದರು. ಆ ಬಳಿಕ ಆಧುನಿಕತೆಗೆ ತೆರೆದುಕೊಂಡು ಯಾಂತ್ರೀಕೃತ ಕೃಷಿಯತ್ತ ಮುಖ ಮಾಡಿದ್ದ ರೈತರು, ಈಗ ತೈಲ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ ಮತ್ತೆ ಸಾಂಪ್ರದಾಯಿಕ ಉಳುಮೆ ಪದ್ಧತಿಗೆ ಮರಳುವಂತಾಗಿದೆ. ಒಟ್ಟಾರೆಯಾಗಿ, ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಕೃಷಿ ಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತಿದ್ದು, ಯಾಂತ್ರೀಕೃತ ಕೃಷಿಯಿಂದ ಸಾಂಪ್ರದಾಯಿಕ ಕೃಷಿಯತ್ತ ಅಣ್ಣದಾತರು ಮರಳುತ್ತಿರುವುದು ಬೀದರ್ ಜಿಲ್ಲೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಭಾರತದಲ್ಲಿ ವಿದೇಶಿಗನ ಏಕಾಂಗಿ ಪ್ರಯಾಣ; ಟ್ರಿಪ್‌ ಅನುಭವ ಹಂಚಿಕೊಂಡ ಆಫ್ರಿಕನ್ ವ್ಯಕ್ತಿ – Kannada News | India feels like a fantasy world: Why is an African person like this?

ವಿದೇಶಿ ಪ್ರಜೆಗಳು (foreigner) ಭಾರತಕ್ಕೆ ಆಗಾಗ ಭೇಟಿ ಕೊಡ್ತಾರೆ. ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇತಿಹಾಸಗಳನ್ನು ಕೆದಕುತ್ತಾರೆ. 21 ವರ್ಷದ ಆಫ್ರಿಕನ್ ವ್ಯಕ್ತಿಯೊಬ್ಬರು (African) ಏಕಾಂಗಿಯಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಏಕಾಂಗಿ ಪ್ರವಾಸದ ವೇಳೆ ಈ ದೇಶದ ಆಧ್ಯಾತ್ಮಿಕತೆ, ಅವ್ಯವಸ್ಥೆ ಮತ್ತು ಇತಿಹಾಸವು ತಾನು ಜಗತ್ತನ್ನು ನೋಡುವ ವಿಧಾನವನ್ನು ಆಳವಾಗಿ ಬದಲಾಯಿಸಿತು ಎಂದು ಹೇಳಿಕೊಂಡಿದ್ದಾರೆ. ತಾನು ಕಲಿತ ಐದು ಪಾಠಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

@hunchsquare ಬಳಕೆದಾರ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ವಾರಣಾಸಿಯಲ್ಲಿ ಸಂಜೆ ಗಂಗಾ ಆರತಿಯಲ್ಲಿ ಭಾಗವಹಿಸಿದ್ದನ್ನು ತೋರಿಸಲಾಗಿದೆ. ಈ ವಿಡಿಯೋದ ಕ್ಲಿಪ್ ನಲ್ಲಿ ನಾನು 21 ವರ್ಷದ ಆಫ್ರಿಕನ್ ಆಗಿ ಭಾರತದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೆ. ನಾನು ಕಲಿತದ್ದು ಇಲ್ಲಿದೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದೊಂದಿಗೆ ಭಾರತವು ಒಂದು ಕಾಲದಲ್ಲಿ ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ನಾಗರಿಕತೆಯಾಗಿತ್ತು. ವಸಾಹತುಶಾಹಿಗೆ ಮುಂಚಿತವಾಗಿ, ಭಾರತವು ಜಾಗತಿಕ GDP ಯ 25% ಅನ್ನು ಹೊಂದಿತ್ತು. ಈ ಸ್ಥಳದಲ್ಲಿ ನಡೆಯುವಾಗ ಕುಸಿಯುತ್ತಿರುವ ಭವ್ಯತೆ, ಬಡತನದಿಂದ ಆವೃತವಾದ ದೇವಾಲಯಗಳೊಳಗಿನ ಚಿನ್ನ, ನೀವು ಎಲ್ಲೆಡೆ ಆ ಗಾಯವನ್ನು ಅನುಭವಿಸುತ್ತೀರಿ. ನೀವು ಆಫ್ರಿಕನ್ ಆಗಿದ್ದಾಗ ನಿಮಗೆ ವಿಭಿನ್ನ ಅನುಭವವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ನಿಮ್ಮ ಮೆದುಳು ಫಿಲ್ಟರ್ ಮಾಡುವ ಪ್ರಯತ್ನವನ್ನು ಬಿಟ್ಟುಬಿಡುತ್ತದೆ ಹಾಗೂ ನೀವು ಶರಣಾಗುತ್ತೀರಿ. ವಿಚಿತ್ರವೆಂದರೆ, ಇದು ನಾನು ಅನುಭವಿಸಿದಅತ್ಯಂತ ಪ್ರಸ್ತುತವಾಗಿದೆ. ಇಲ್ಲಿನ ಆಚರಣೆಗಳು, ಭಕ್ತಿ, ಸಂಪೂರ್ಣ ಪ್ರಾಮಾಣಿಕತೆ ನನ್ನ ರಕ್ಷಣೆಯನ್ನು ಮೀರಿತು. ನಾನು ನನಗೆ ತಿಳಿದಿರದ ಭಾವನೆಗಳು ಹೊರಹೊಮ್ಮಿದವು. ನಾನು ಅಳುತ್ತಿದ್ದೆ. ಆದರೆ ಏಕೆ ಎಂದು ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದಿದ್ದಾರೆ.

ಭಾರತವು ಒಂದು ಕಾಲ್ಪನಿಕ ಜಗತ್ತುಎಂಬ ಭಾವನೆಯನ್ನು ಹೊಂದಿದೆ. ಆದರೆ ಇಲ್ಲಿನ ವಾಸ್ತುಶಿಲ್ಪ, ಬಣ್ಣಗಳು ಮತ್ತು ಅವ್ಯವಸ್ಥೆಯು ತಾನು ಹಿಂದೆ ಅನುಭವಿಸಿದ್ದಕ್ಕಿಂತ ಭಿನ್ನವಾಗಿದೆ ಇದು ನಿಜವೆಂದು ಭಾವಿಸುವುದಿಲ್ಲ. ಯಾರೋ ಶುದ್ಧ ಕಲ್ಪನೆಯಿಂದ ನಾಗರಿಕತೆಯನ್ನು ರಚಿಸಿದಂತಿದೆ. ಭಾರತದ ವಸಾಹತುಶಾಹಿ ಇತಿಹಾಸದ ಹೊರತಾಗಿ, ಅದರ ಸ್ಥಿತಿಸ್ಥಾಪಕತ್ವವನ್ನು ನೋಡಿ ತಾನು ಆಘಾತಕ್ಕೊಳಗಾಗಿದ್ದೇನೆ. ಭಾರತವನ್ನು ಲೂಟಿ ಮಾಡಲಾಗಿದೆ. ಬ್ರಿಟಿಷರು ತಮ್ಮ ಕೈಲಾದಷ್ಟು ತೆಗೆದುಕೊಂಡರು. ಆದರೂ ಈ ಸ್ಥಳದ ಆತ್ಮವು ಸ್ಪಷ್ಟ ಮತ್ತು ಅಖಂಡವಾಗಿದೆ. ನಾನು ಇನ್ನೂ ಪ್ರಕ್ರಿಯೆಗೊಳಿಸುತ್ತಿದ್ದೇನೆ ಎಂಬ ಪಾಠವಿದೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯುರೋಪಿಯನ್ನರು ಭಾರತೀಯರಿಂದ ಈ ವಿಷ್ಯಗಳನ್ನು ಕಲಿಯಬೇಕು ಎಂದ ವಿದೇಶಿ ಮಹಿಳೆ

ಈ ವಿಡಿಯೋ ಹತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತದಲ್ಲಿನ ಸಕಾರಾತ್ಮಕ ಅಂಶಗಳನ್ನು ನೀವು ಬಳಸಿಕೊಂಡಿದ್ದಕ್ಕೆ ಸಂತೋಷ! ಚಿಯರ್ಸ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮ್ಮಂತಹ ಜನರು ನಮ್ಮ ದೇಶದಲ್ಲಿ ಇರುವುದು ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಾಮಾಣಿಕ ಅಭಿಪ್ರಾಯ ನೀಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ರಾಮ್ ಚರಣ್ ‘ಪೆದ್ದಿ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ವಿಡಿಯೋ ನೋಡಿ.. – Kannada News | Ram Charan Peddi movie press meet in Bengaluru with Shivarajkumar Janhvi Kapoor watch live video

ಖ್ಯಾತ ನಟ ರಾಮ್ ಚರಣ್ (Ram Charan) ಅವರು ಬೆಂಗಳೂರಿಗೆ ಬಂದಿದ್ದಾರೆ. ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಭಾಗಿ ಆಗಿದ್ದಾರೆ. ಅವರ ಜೊತೆ ನಾಯಕಿ ಜಾನ್ವಿ ಕಪೂರ್, ನಟ ಶಿವರಾಜ್​ಕುಮಾರ್ (Shivarajkumar) ಸೇರಿದಂತೆ ಚಿತ್ರತಂಡದ ಹಲವರು ಪಾಲ್ಗೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ತೆರೆಕಾಣಲಿದೆ. ಹಾಗಾಗಿ ಬೆಂಗಳೂರಿಗೆ ಬಂದಿರುವ ರಾಮ್ ಚರಣ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಪೆದ್ದಿ’ (Peddi) ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರಿಗೆ ವಿಶೇಷ ಪಾತ್ರವಿದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಮಾತನಾಡುತ್ತಿದ್ದಾರೆ. ‘ಪೆದ್ದಿ’ ಸುದ್ದಿಗೋಷ್ಠಿ ಲೈವ್ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಇನ್ನಿಬ್ಬರಿಂದ 47 ಲಕ್ಷ ರೂ ಮೌಲ್ಯದ ಬಿಟ್‌ಕಾಯಿನ್ ಜಪ್ತಿ ಮಾಡಿದ ಇಡಿ – Kannada News | Bitcoin Scam: ED Seizes 47 Lakh Worth Bitcoin from Sriki and Two Others

ಬೆಂಗಳೂರು, ಮೇ 25: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಬಹುಕೋಟಿ ಬಿಟ್‌ಕಾಯಿನ್ ಹಗರಣ ಪ್ರಕರಣಕ್ಕೆ (Bitcoin Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಪ್ರಮುಖ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಾಗೂ ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಬಿಟ್‌ಕಾಯಿನ್ ಹಗರಣದ ಮೂಲ ಮತ್ತು ಇಡಿ ತನಿಖೆ
  • ಮೂವರು ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಬಿಟ್‌ಕಾಯಿನ್ ವಶಕ್ಕೆ
  • ನ್ಯಾಯಾಂಗ ಬಂಧನದಲ್ಲಿರುವ ಮೂವರು ಆರೋಪಿಗಳು

50 ಸಾವಿರ ಯುಎಸ್​​ಡಿಟಿ ಮೌಲ್ಯದ ಬಿಟ್‌ಕಾಯಿನ್ ಜಪ್ತಿ

ಬಿಟ್‌ಕಾಯಿನ್​​ ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗ್ಡೆ ಎಂಬುವವರಿಂದ ಸುಮಾರು 50 ಸಾವಿರ ಯುಎಸ್​​ಡಿಟಿ ಮೌಲ್ಯದ ಬಿಟ್‌ಕಾಯಿನ್ ಅನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣ ಹಿನ್ನೆಲೆ ಶ್ರೀಕಿ ಅರೆಸ್ಟ್! ಮಹಮ್ಮದ್ ನಲಪಾಡ್​ಗೂ ಎದುರಾಗುತ್ತಾ ಸಂಕಷ್ಟ?

ಇದರ ಭಾರತೀಯ ಕರೆನ್ಸಿ ಮೌಲ್ಯ ಸುಮಾರು 47,66,275 ರೂಪಾಯಿಗಳಾಗಿದೆ ಎಂದು ಅಂದಾಜಿಸಲಾಗಿದೆ. ಬಿಟ್‌ಕಾಯಿನ್ ಮಾತ್ರವಲ್ಲದೆ, ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ 3 ಲ್ಯಾಪ್‌ಟಾಪ್ ಹಾಗೂ 3 ಮೊಬೈಲ್ ಫೋನ್‌ಗಳನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಅಮೆರಿಕ ಕಂಪನಿ ಹ್ಯಾಕ್ ಮಾಡಿದ್ದ ಖದೀಮರು

ತನಿಖೆಯ ವೇಳೆ ಆರೋಪಿಗಳು ಅಮೆರಿಕ ಮೂಲದ ಪ್ರತಿಷ್ಠಿತ ಕಂಪನಿಯೊಂದರ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ಕಾನೂನುಬಾಹಿರವಾಗಿ ಹ್ಯಾಕ್ ಮಾಡಿದ ಹಣದ ಮೂಲಕವೇ ಆರೋಪಿಗಳು 50 ಸಾವಿರ USDT ಮೌಲ್ಯದ ಬಿಟ್‌ಕಾಯಿನ್ ಖರೀದಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಹಗರಣಕ್ಕೂ ಶಾಸಕ ಹ್ಯಾರಿಸ್​ಗೂ ಏನು ಸಂಬಂಧ? ಕಾಂಗ್ರೆಸ್ ಶಾಸಕರ, ನಲಪಾಡ್ ಮನೆ ಮೇಲೆ ಇಡಿ ದಾಳಿ ಮಾಡಿದ್ದೇಕೆ?

ಸದ್ಯ ಜಾರಿ ನಿರ್ದೇಶನಾಲಯದ ಬಲೆಯಲ್ಲಿರುವ ಈ ಮೂವರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಇ.ಡಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಂಭ ರಾಶಿಯಲ್ಲಿ ರಾಹುವಿನ ಉಲ್ಟಾ ನಡೆ!: ಈ 3 ರಾಶಿಗಳಿಗೆ 18 ವರ್ಷಗಳ ಕಾಲ ಲಾಟರಿ ಹೊಡೆಯೋದು ಗ್ಯಾರಂಟಿ – Kannada News | Rahu Transit and Dasha: Decoding Mixed Effects and Good Fortune for 12 Zodiacs

ಕುಂಭ ರಾಶಿಯು ರಾಹುವಿಗೆ ಅತ್ಯಂತ ಬಲವಾದ ಹಾಗೂ ಸ್ವಕ್ಷೇತ್ರಕ್ಕೆ ಸಮಾನವಾದ ರಾಶಿಯೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಇದರೊಂದಿಗೆ ರಾಹುವು ಶನಿಯ ದ್ರೇಕ್ಕಾಣ ಮತ್ತು ತ್ರಿಂಶಾಂಶ, ರವಿಯ ಹೋರೆ, ಗುರುವಿನ ನವಾಂಶ ಹಾಗೂ ಶುಕ್ರನ ದ್ವಾದಶಾಂಶದಲ್ಲಿದ್ದು ಮಿಶ್ರ ಫಲವನ್ನು ನೀಡುತ್ತಾನೆ.

​ರಾಹುವಿನ ಸಂಚಾರ :

​ದ್ವಾದಶ ರಾಶಿಗಳ ಫಲವನ್ನು ತಿಳಿಯುವ ಮುನ್ನ ರಾಹುವಿನ ಈ ಷಡ್ವರ್ಗ ಸ್ಥಿತಿಯ ಆಂತರಿಕ ಬಲವನ್ನು ಅರ್ಥಮಾಡಿಕೊಳ್ಳಬೇಕು.

​ಕುಂಭ ರಾಶಿ :

ರಾಹು ಶನಿಯ ಮನೆಯಲ್ಲಿದ್ದು, ಶನಿಯದೇ ದ್ರೇಕ್ಕಾಣ ಹಾಗೂ ತ್ರಿಂಶಾಂಶದಲ್ಲಿ ಇರುವುದರಿಂದ ಅತ್ಯಂತ ತೀಕ್ಷ್ಣವಾದ, ಗಂಭೀರವಾದ ಹಾಗೂ ಕರ್ಮಫಲಕ್ಕೆ ತಕ್ಕಂತೆ ಫಲ ನೀಡುವ ಶಕ್ತಿಯನ್ನು ಪಡೆಯುತ್ತಾನೆ. ಇದು ತಾಂತ್ರಿಕ ಜ್ಞಾನ, ಸಂಶೋಧನೆ ಮತ್ತು ಆಳವಾದ ಚಿಂತನೆಗೆ ಉತ್ತಮ.

ರಾಹು ಸೂರ್ಯನ ಹೋರೆಯಲ್ಲಿದ್ದಾಗ ಭೌತಿಕ ಸುಖ, ಅಧಿಕಾರ ಲಾಲಸೆ ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳುವ ಹಠವನ್ನು ಹೆಚ್ಚಿಸುತ್ತಾನೆ. ನವಾಂಶದಲ್ಲಿ ಗುರುವಿನ ಬಲವಿರುವುದರಿಂದ ರಾಹುವಿನ ತಾಮಸಿಕ ಗುಣಗಳು ಕಡಿಮೆಯಾಗಿ, ಧಾರ್ಮಿಕ ಪ್ರವೃತ್ತಿ, ನ್ಯಾಯಯುತ ಆಲೋಚನೆ ಮತ್ತು ಉನ್ನತ ಜ್ಞಾನ ಲಭಿಸುತ್ತದೆ. ಶುಕ್ರನ ಸಂಬಂಧದಿಂದಾಗಿ ಕಲಾತ್ಮಕತೆ, ಲೌಕಿಕವಾದ ಸುಖ-ಭೋಗಗಳ ಮೇಲಿನ ಆಕರ್ಷಣೆ ಹೆಚ್ಚುತ್ತದೆ.

​ರಾಹು ದಶೆಯಲ್ಲಿ 12 ರಾಶಿಗಳು

​ರಾಹು ದಶೆಯು ಒಟ್ಟು ೧೮ ವರ್ಷಗಳ ಕಾಲ ಇರುತ್ತದೆ. ಪ್ರಸ್ತುತ ರಾಹುವು ಶುಭ ಗ್ರಹಗಳಾದ ಗುರು ಮತ್ತು ಶುಕ್ರ ಹಾಗೂ ಕ್ರೂರ ಗ್ರಹಗಳಾದ ಶನಿ ಮತ್ತು ಸೂರ್ಯನ ಮಿಶ್ರ ಬಲವನ್ನು ಹೊಂದಿರುವುದರಿಂದ, ರಾಹು ದಶೆಯ ಫಲಗಳು ಅತ್ಯಂತ ರೋಚಕವಾಗಿರಲಿದೆ.

ರಾಹು ದಶೆಯ ಪ್ರಮುಖ ಫಲಗಳು

ಮೇಷ, ಮಿಥುನ, ಧನು ಅತ್ಯುತ್ತಮ ಫಲ:

ಈ ರಾಶಿಗಳಿಗೆ ರಾಹು ದಶೆಯು ಅದೃಷ್ಟವನ್ನು ತರುತ್ತದೆ. ಆಕಸ್ಮಿಕ ಧನಲಾಭ, ಉನ್ನತ ಪದವಿ, ಸಮಾಜದಲ್ಲಿ ಗೌರವ ಹಾಗೂ ವಿದೇಶ ಪ್ರಯಾಣದ ಯೋಗಗಳು ಈ ದಶೆಯಲ್ಲಿ ಸಿದ್ಧಿಸಲಿವೆ. ಗುರುವಿನ ನವಾಂಶ ಬಲವು ಇವರನ್ನು ತಪ್ಪು ಹಾದಿಗೆ ಹೋಗದಂತೆ ತಡೆಯುತ್ತದೆ.

ವೃಷಭ, ಕನ್ಯಾ, ಮಕರ ವೃತ್ತಿ ಮತ್ತು ಆರ್ಥಿಕ ಯಶಸ್ಸು: ಶನಿಯ ವರ್ಗಗಳ ಪ್ರಭಾವದಿಂದಾಗಿ ಈ ರಾಶಿಗಳವರಿಗೆ ಕಠಿಣ ಪರಿಶ್ರಮದ ಅನಂತರ ಅಪಾರ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ವಿಸ್ತರಣೆ, ರಾಜಕೀಯ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಉನ್ನತಿ ಲಭಿಸಲಿದೆ. ಆದರೆ ಮಾನಸಿಕ ಒತ್ತಡ ಸಾಮಾನ್ಯ.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ

ಸಿಂಹ, ತುಲಾ, ಕುಂಭ ಮಿಶ್ರ ಫಲ :

ಶುಕ್ರನ ದ್ವಾದಶಾಂಶ ಇರುವುದರಿಂದ ಈ ರಾಶಿಗಳಿಗೆ ಭೌತಿಕ ಸುಖ, ಪ್ರೇಮ ಸಂಬಂಧ ಹಾಗೂ ಕಲಾತ್ಮಕ ಯಶಸ್ಸು ಸಿಗುತ್ತದೆ. ಆದರೆ ಸೂರ್ಯ ಮತ್ತು ಶನಿಯ ವೈರತ್ವದ ಪ್ರಭಾವದಿಂದಾಗಿ ದಾಂಪತ್ಯದಲ್ಲಿ ಅಥವಾ ಪಾಲುದಾರಿಕೆಯಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.

ಕರ್ಕಾಟಕ, ವೃಶ್ಚಿಕ, ಮೀನ :

ಈ ರಾಶಿಗಳಿಗೆ ರಾಹು ದಶೆಯು ಆರಂಭದಲ್ಲಿ ಸ್ವಲ್ಪ ಸಂಘರ್ಷಮಯವಾಗಿರಬಹುದು. ಆದರೆ ಗುರುವಿನ ನವಾಂಶದ ಬಲ ಇರುವುದರಿಂದ, ಇವರು ಜ್ಯೋತಿಷ್ಯ, ಮಂತ್ರ-ತಂತ್ರ, ಸಂಶೋಧನೆ ಅಥವಾ ಆಧ್ಯಾತ್ಮಿಕ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಲಿದ್ದಾರೆ. ಆರೋಗ್ಯ ಮತ್ತು ವೆಚ್ಚಗಳ ಮೇಲೆ ನಿಯಂತ್ರಣ ಅಗತ್ಯ.

​ಈ ಸ್ಥಿತಿಯಯಲ್ಲಿ ರಾಹುವು ಭೌತಿಕವಾಗಿ ಯಶಸ್ಸನ್ನು ನೀಡಿದರೂ, ಆಂತರಿಕವಾಗಿ ಶನಿ ಮತ್ತು ರವಿಯ ಪ್ರಭಾವದಿಂದಾಗಿ ಸಂಘರ್ಷವನ್ನು ತಂದೊಡ್ಡಬಹುದು. ಆದರೆ ಗುರುವಿನ ನವಾಂಶ ಬಲವು ಇಡೀ ಜಾತಕಕ್ಕೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುವುದರಿಂದ, ರಾಹು ದಶೆಯಲ್ಲಿ ಅಂತಿಮವಾಗಿ ಶುಭ ಫಲಗಳೇ ಹೆಚ್ಚಾಗುತ್ತವೆ.

​ರಾಹು ದಶೆಯ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ದೇವಗುರು ಬೃಹಸ್ಪತಿಯ ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಹಾಗೂ ಶನಿವಾರದಂದು ದೀಪಾರಾಧನೆ ಮಾಡುವುದು ಶ್ರೇಯಸ್ಕರ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:59 pm, Mon, 25 May 26

Source link

Exit mobile version