ಉಘೇ ಉಘೇ ಮಾದಪ್ಪ: ಮಾದಪ್ಪನ ಸನ್ನಿಧಿಯಲ್ಲಿ ಕೇವಲ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!

ಉಘೇ ಉಘೇ ಮಾದಪ್ಪ: ಮಾದಪ್ಪನ ಸನ್ನಿಧಿಯಲ್ಲಿ ಕೇವಲ 23 ದಿನಗಳಲ್ಲಿ 2.33 ಕೋಟಿ ರೂ. ಹುಂಡಿ ಹಣ ಸಂಗ್ರಹ!

ಚಾಮರಾಜನಗರ, ಮಾರ್ಚ್​ 28: ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಕ್ಷೇತ್ರಕ್ಕೆ ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸರಣಿ ರಜಾ ದಿನಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಆರಾಧ್ಯ ದೈವ ಮಾದಪ್ಪನಿಗೆ ಒಟ್ಟು ಕೋಟ್ಯಂತರ ರೂಪಾಯಿ ಕಾಣಿಕೆ ಸಮರ್ಪಣೆಯಾಗಿದೆ. ಕೇವಲ 23 ದಿನಗಳ ಅವಧಿಯಲ್ಲಿ ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.33 ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಈ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಸಂಗ್ರಹವಾದ ಒಟ್ಟು ಕಾಣಿಕೆ ವಿವರ

  • ನಗದು: 2,33,84,201 ರೂ.
  • ಚಿನ್ನ: 21 ಗ್ರಾಂ
  • ಬೆಳ್ಳಿ: 800 ಗ್ರಾಂ
  • ಡಿಜಿಟಲ್ ಪಾವತಿ (PhonePe/G-Pay): 5,78,897 ರೂ.
  • ವಿಶೇಷ: ಚಲಾವಣೆ ರದ್ದಾಗಿರುವ 2000 ರೂ. ಮುಖಬೆಲೆಯ 3 ನೋಟುಗಳು ಹಾಗೂ 4 ವಿದೇಶಿ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೌರಿ ಕಲ್ಯಾಣ ಸೀರಿಯಲ್ ಸಂತೆ; ಕಣ್ಣು ಕಟ್ಟಿದರೂ ಚಂದನಾ ಪತ್ತೆ ಹಚ್ಚಿದ ಹರಿ

ಕಲರ್ಸ್ ಕನ್ನಡದಲ್ಲಿ ‘ಗೌರಿ ಕಲ್ಯಾಣ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯ ಸೀರಿಯಲ್ ಸಂತೆ ನಡೆದಿದೆ. ಇದರಲ್ಲಿ ಹರಿಗೆ ಒಂದು ಚಾಲೆಂಜ್ ಇತ್ತು. ಎಲ್ಲರನ್ನೂ ಸಾಲಾಗಿ ಕೂರಿಸಲಾಗಿತ್ತು. ಹರಿಯ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು. ಇವರಲ್ಲಿ ಚಂದನಾ ಯಾರು ಅಂತ ಹೇಳಬೇಕಿತ್ತು. ಕೊನೆಗೂ ಹೇಳಿದರು ಹರೀಶ್ ಹೇಳಿಯೇಬಿಟ್ಟರು. ಈ ವಿಡಿಯೋ ಗಮನ ಸೆಳೆದಿದೆ. ಗೌರಿ ಕಲ್ಯಾಣ ಸೀರಿಯಲ್ ಸಂತೆ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರ ಕಾಣಲಿದೆ. ಗಿಲ್ಲಿ ನಟ ಕೂಡ ಇದಕ್ಕೆ ಬರಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: RCB ಪರ ಇಬ್ಬರು ಪಾದಾರ್ಪಣೆ ಸಾಧ್ಯತೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ರ ಮೊದಲ ಪಂದ್ಯದಲ್ಲೇ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಅಭಿಯಾನ ಶುರು ಮಾಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.8) ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಮೂಲಕ ಆರ್​ಸಿಬಿ ಪರ ಇಬ್ಬರು ಆಟಗಾರರು ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಏಕೆಂದರೆ ಮೊದಲ ಪಂದ್ಯಕ್ಕೆ ಆರ್​ಸಿಬಿ ತಂಡದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. ಇಲ್ಲಿ ಜೋಶ್ ಹೇಝಲ್​ವುಡ್ ಫಿಟ್​ನೆಸ್ ಕಾರಣದಿಂದಾಗಿ ಹೊರಗುಳಿದರೆ, ಯಶ್ ದಯಾಳ್ ವೈಯುಕ್ತಿಕ ಕಾರಣಗಳಿಂದಾಗಿ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ. ಇನ್ನು ಮತ್ತೋರ್ವ ವೇಗಿ ನುವಾನ್ ತುಷಾರ ಗಾಯದ ಸಮಸ್ಯೆಯ ಕಾರಣ ಇನ್ನೂ ಕೂಡ ಆರ್​ಸಿಬಿ ತಂಡವನ್ನು ಕೂಡಿಕೊಂಡಿಲ್ಲ. ಹೀಗಾಗಿ ಈ ಮೂವರು ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಇತ್ತ ಈ ಮೂವರಲ್ಲಿ ಜೋಶ್ ಹೇಝಲ್​ವುಡ್ ಹಾಗೂ ಯಶ್ ದಯಾಳ್ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿದ್ದರು. ಅಂದರೆ ಕಳೆದ ಬಾರಿಯ ಫೈನಲ್​ನಲ್ಲಿ ಕಣಕ್ಕಿಳಿದಿದ್ದ ಆಟಗಾರರು. ಇದೀಗ ಅವರ ಅನುಪಸ್ಥಿತಿಯಲ್ಲಿ ಆರ್​ಸಿಬಿ ಇಬ್ಬರು ಹೊಸ ಮುಖಗಳಿಗೆ ಚಾನ್ಸ್ ನೀಡುವ ಸಾಧ್ಯತೆ ಹೆಚ್ಚಿದೆ.

ಯಾರಿಗೆ ಸಿಗಲಿದೆ ಅವಕಾಶ?

ಜೇಕಬ್ ಡಫಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ಮೊದಲ ಪಂದ್ಯದ ಮೂಲಕ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಜೋಶ್ ಹೇಝಲ್​ವುಡ್ ಬದಲಿಯಾಗಿ ಡಫಿ ಅಲ್ಲದೆ ಮತ್ತೋರ್ವ ವಿದೇಶಿ ವೇಗಿ ತಂಡದಲ್ಲಿಲ್ಲ. ಹೀಗಾಗಿ ಡಫಿಗೆ ಇಂದು ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು.

ಮಂಗೇಶ್ ಯಾದವ್: ಯಶ್ ದಯಾಳ್ ಟೂರ್ನಿಯಿಂದ ಹೊರಗುಳಿದಿರುವ ಆಟಗಾರ ಆರ್​ಸಿಬಿ ಮಂಗೇಶ್ ಯಾದವ್​ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಏಕೆಂದರೆ ಮಂಗೇಶ್ ಇತ್ತೀಚಿನ ಅಭ್ಯಾಸ ಪಂದ್ಯಗಳಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಮಂಗೇಶ್ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಹೇಗಿರಲಿದೆ ಆರ್​ಸಿಬಿ ಪ್ಲೇಯಿಂಗ್ 11?

  • ವಿರಾಟ್ ಕೊಹ್ಲಿ
  • ಫಿಲ್ ಸಾಲ್ಟ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ರೊಮಾರಿಯೊ ಶೆಫರ್ಡ್
  • ಕೃನಾಲ್ ಪಾಂಡ್ಯ
  • ಭುವನೇಶ್ವರ್ ಕುಮಾರ್
  • ಜೇಕಬ್ ಡಫಿ
  • ಮಂಗೇಶ್ ಯಾದವ್
  • ಸುಯಶ್ ಶರ್ಮಾ

ಇದನ್ನೂ ಓದಿ: IPL ನಿಂದ ಇಬ್ಬರು ಆಟಗಾರರಿಗೆ ನಿಷೇಧ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಕಾನಿಷ್ಕ್ ಚೌಹಾನ್, ಯಶ್ ದಯಾಳ್ (ಅಲಭ್ಯ).

Source link

Bengaluru Air Quality: ಸುಧಾರಿಸುತ್ತಿಲ್ಲ ಮಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮಾರ್ಚ್​ 28: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ  (Bengaluru Air Quality) ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಉಡುಪಿಯ ಏರ್ ಕ್ವಾಲಿಟಿ ನೋಡಿದಾಗ ಆತಂಕ ಸೃಷ್ಟಿಯಾಗುವುದಂತೂ ನಿಜ. 100ರಿಂದ 150ರ ಒಳಗಿದ್ದ ಉಡುಪಿಯ AQI ಇಂದು ಒಮ್ಮೆಲೇ 200ರ ಗಡಿ ದಾಟಿರುವುದು ಆಶ್ಚರ್ಯವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ 150ಕ್ಕೂ ಹೆಚ್ಚಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 158ಕ್ಕೆ ತಲುಪಿದೆ. ಕೆಲ ದಿನಗಳಿಂದ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –158
  • ಮಂಗಳೂರು-160
  • ಮೈಸೂರು –147
  • ಬೆಳಗಾವಿ – 128
  • ಕಲಬುರ್ಗಿ-101
  • ಶಿವಮೊಗ್ಗ – 158
  • ಬಳ್ಳಾರಿ – 150
  • ಹುಬ್ಬಳ್ಳಿ- 134
  • ಉಡುಪಿ –153
  • ವಿಜಯಪುರ –114

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ನೀವು ಸಿಹಿ ಹೆಚ್ಚು ಇಷ್ಟಪಡುತ್ತೀರಾ? ಹಾಗಿದ್ರೆ ಜ್ಯೋತಿಷ್ಯದ ಪ್ರಕಾರ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ನಮ್ಮ ದೈನಂದಿನ ಜೀವನದಲ್ಲಿ ಸಿಹಿ ಮತ್ತು ಖಾರವಾದ ಆಹಾರಕ್ಕೆ ವಿಭಿನ್ನ ಪ್ರಾಮುಖ್ಯತೆಯಿದೆ. ಕೆಲವರು ಸಿಹಿ ಆಹಾರವನ್ನು ಹೆಚ್ಚು ಇಷ್ಟಪಟ್ಟರೆ, ಮತ್ತೆ ಕೆಲವರು ಖಾರದ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಈ ಆಹಾರದ ಆಯ್ಕೆ ನಮ್ಮ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಸಿಹಿ ಆಹಾರವನ್ನು ಇಷ್ಟಪಡುವ ವ್ಯಕ್ತಿಗಳು:

ಸಿಹಿ ಆಹಾರವನ್ನು ಹೆಚ್ಚು ಇಷ್ಟಪಡುವವರ ಮೇಲೆ ಮುಖ್ಯವಾಗಿ ಗುರು ಗ್ರಹ (ಬೃಹಸ್ಪತಿ) ಮತ್ತು ಶುಕ್ರ ಗ್ರಹಗಳ ಪ್ರಭಾವವಿರುತ್ತದೆ. ಈ ಗ್ರಹಗಳ ಅನುಗ್ರಹದಿಂದಾಗಿ, ಸಿಹಿ ಪ್ರಿಯರು ಸಾಮಾನ್ಯವಾಗಿ ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಸಾತ್ವಿಕ ಸ್ವಭಾವದವರು, ನಿಧಾನವಾಗಿ ಮಾತನಾಡುವವರು, ತಾಳ್ಮೆ ಮತ್ತು ಸೌಮ್ಯತೆಯನ್ನು ಹೊಂದಿರುತ್ತಾರೆ. ಯಾವುದೇ ಕಷ್ಟದ ಸಂದರ್ಭದಲ್ಲಿ ಗಲಿಬಿಲಿಗೊಳ್ಳದೆ, ಯೋಚನಾಶಕ್ತಿಯಿಂದ ವರ್ತಿಸುತ್ತಾರೆ. ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಮತ್ತು ವಿವಾಹ ವಿಷಯಗಳಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಇವರಲ್ಲಿ ಕಲೆ ಮತ್ತು ಪ್ರತಿಭೆ ಹೆಚ್ಚಾಗಿರುತ್ತದೆ. ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚುವ ಪ್ರವೃತ್ತಿ ಹೊಂದಿರುತ್ತಾರೆ. ಕೆಲವೊಮ್ಮೆ ಸಾಧಕರಾಗಿದ್ದರೂ, ಅದೃಷ್ಟವನ್ನು ಸರಿಯಾಗಿ ಬಳಸಿಕೊಳ್ಳದಿರುವ ಸಾಧ್ಯತೆಯೂ ಇರುತ್ತದೆ. ಇವರು ಬೇರೆಯವರ ಅಧೀನದಲ್ಲಿ ಇರಲು ಇಷ್ಟಪಡುವುದಿಲ್ಲ.

ಖಾರ ಆಹಾರವನ್ನು ಇಷ್ಟಪಡುವ ವ್ಯಕ್ತಿಗಳು:

ಖಾರವಾದ ಆಹಾರವನ್ನು ಇಷ್ಟಪಡುವವರ ಮೇಲೆ ಕುಜ ಗ್ರಹ (ಮಂಗಳ) ಮತ್ತು ರವಿ ಗ್ರಹಗಳ (ಸೂರ್ಯ) ಪ್ರಭಾವ ಹೆಚ್ಚಾಗಿರುತ್ತದೆ. ಇಂತಹ ವ್ಯಕ್ತಿಗಳು ಶಕ್ತಿವಂತರು, ಧೈರ್ಯವಂತರು ಮತ್ತು ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ಇವರಲ್ಲಿ ಒಂದು ಪ್ರಮುಖ ಗುಣವೆಂದರೆ ಬೇಗ ನಿರ್ಧಾರ ತೆಗೆದುಕೊಳ್ಳುವುದು. ಕೆಲವೊಮ್ಮೆ ಇದು ಆತುರದ ನಿರ್ಧಾರಗಳಾಗಿ ಮಾರ್ಪಟ್ಟು ಜೀವನದಲ್ಲಿ ಅಡೆತಡೆಗಳಿಗೆ ಕಾರಣವಾಗಬಹುದು. ಖಾರ ಪ್ರಿಯರು ನೇರವಾಗಿ ಮಾತನಾಡುವವರು, ಸ್ಪಷ್ಟವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು ಆಗಿರುತ್ತಾರೆ. ಕೋಪ ಹೆಚ್ಚಾಗಿದ್ದರೂ, ಹೋರಾಟದ ಮನೋಭಾವ ಹೊಂದಿರುತ್ತಾರೆ. ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಪ್ರವೃತ್ತಿ ಇವರಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಸಮತೋಲಿತ ಆಹಾರದ ಮಹತ್ವ:

ಜೀವನದಲ್ಲಿ ಸಿಹಿ ಮತ್ತು ಖಾರ ಎರಡೂ ಅವಶ್ಯಕ. ಬೇವಿನ-ಬೆಲ್ಲ, ಎಳ್ಳು-ಬೆಲ್ಲದಂತಹ ಸಂಪ್ರದಾಯಗಳು ಈ ಸಮತೋಲನದ ಮಹತ್ವವನ್ನು ಸಾರುತ್ತವೆ. ಪೂರ್ವಿಕರು ಹಬ್ಬಗಳಲ್ಲಿ ಇಂತಹ ಆಹಾರ ಪದ್ಧತಿಗಳನ್ನು ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಆಯಾ ಕಾಲಕ್ಕೆ ತಕ್ಕಂತೆ ರೂಪಿಸಿದ್ದಾರೆ. ಕೇವಲ ಸಿಹಿ ಅಥವಾ ಕೇವಲ ಖಾರ ಸೇವಿಸುವುದರಿಂದ ದೇಹಕ್ಕೆ ಸಂಪೂರ್ಣ ಪೋಷಣೆ ದೊರೆಯುವುದಿಲ್ಲ. ಸಮತೋಲಿತ ಆಹಾರ ಸೇವನೆ ದೇಹಕ್ಕೆ ಅತ್ಯಗತ್ಯ. ಸಿಹಿ ಮತ್ತು ಖಾರದ ಆಹಾರದ ಆಯ್ಕೆಯು ನಮ್ಮ ಶರೀರದಲ್ಲಿರುವ ರಜೋಗುಣ, ತಮೋಗುಣ ಮತ್ತು ಸಾತ್ವಿಕ ಗುಣಗಳನ್ನು ಪ್ರಜ್ವಲಿಸಲು ಮತ್ತು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಮುಗಿದ ಬಳಿಕ ಮೊದಲ ಬಾರಿಗೆ ಸಿನಿಮಾ ಘೋಷಿಸಿದ ಸಂಗೀತಾ ಶೃಂಗೇರಿ

Source link

ಹಾಡಹಗಲೇ ಮಹಿಳೆಯ ಮಾಂಗಲ್ಯ ಸರ ಕಿತ್ತು ಪರಾರಿಯಾದ ಖದೀಮರು: ಸಿಸಿಟಿವಿ ವಿಡಿಯೋ ನೋಡಿ

ನೆಲಮಂಗಲ, ಮಾರ್ಚ್ 28: ಹಾಡಹಗಲೇ, ಜನಸಂಚಾರ ಇರುವ ಪ್ರದೇಶದಲ್ಲೇ ಖದೀಮರು ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಬಿಕಾ ಎಂಬವರು ಸ್ನೇಹಿತೆಯೊಂದಿಗೆ ಬೇಕರಿ ಮುಂದೆ ನಿಂತು ಮಾತನಾಡುತ್ತಿದ್ದಾಗ, ಅಲ್ಲೇ ಜ್ಯೂಸ್ ಕುಡಿಯುತ್ತಿದ್ದಂತೆ ನಟಿಸಿದ ಇಬ್ಬರು ಖತರ್ನಾಕ್ ಖದೀಮರು ಕ್ಷಣಾರ್ಧದಲ್ಲಿ ಮಹಿಳೆಯ ಕತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಸರ ಎಳೆದ ರಭಸಕ್ಕೆ ಮಹಿಳೆ ನೆಲಕ್ಕುರುಳಿದ್ದಾರೆ. ಸುಮಾರು 55 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕದ್ದೊಯ್ಯಲಾಗಿದೆ.

ಸರ ಕಳವಿನ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL ನಿಂದ ಇಬ್ಬರು ಆಟಗಾರರಿಗೆ ನಿಷೇಧ..!

Source link

ಮೊನಾಲಿಸಾ ಭೋಸ್ಲೆಗೆ ಸಂಕಷ್ಟ; ವೈರಲ್ ಸುಂದರಿ ಮೇಲೆ ಮಾನನಷ್ಟ ಮೊಕದ್ದಮೆ

ಮೊನಾಲಿಸಾ ಭೋಸ್ಲೆ (Monalisa Bhosle) ಇತ್ತೀಚೆಗೆ ಪ್ರೇಮ ವಿವಾಹವಾದರು. ಆರು ತಿಂಗಳ ಕಾಲ ಫರ್ಮಾನ್ ಖಾನ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮೊನಾಲಿಸಾ ಇತ್ತೀಚೆಗೆ ಕೇರಳ ಪೊಲೀಸರ ಸಮ್ಮುಖದಲ್ಲಿ ವಿವಾಹವಾದರು. ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರಾ ಇವರ ಮದುವೆ ಅಮಾನ್ಯವಾಗಿದೆ ಎಂದು ಆಕ್ಷೇಪಿಸಿದರು. ನಿರ್ದೇಶಕ ಸನೋಜ್ ಮಿಶ್ರಾ ಸಿನಿಮಾದಲ್ಲಿಯೇ ಮೊನಾಲಿಸಾ ನಟಿಸುತ್ತಿದ್ದಾರೆ. ಅವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಮೊನಾಲಿಸಾ ಆರೋಪಿಸಿದ್ದರು. ಇದನ್ನು ಸನೋಜ್ ಅಲ್ಲಗಳೆದಿದ್ದಾರೆ.

ಇತ್ತೀಚೆಗೆ ಕೇರಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ನಿರ್ದೇಶಕ ಸನೋಜ್ ಮಿಶ್ರಾ ಚಲನಚಿತ್ರ ಅವಕಾಶದ ಹೆಸರಿನಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ, ಎಲ್ಲೆಡೆ ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಹೇಳಿದ್ದರು. ಈ ಬಗ್ಗೆ ತನ್ನ ಕುಟುಂಬಕ್ಕೆ ಹೇಳಿದ್ದರೂ, ಅದು ತನ್ನ ಮೊದಲ ಚಿತ್ರವಾದ್ದರಿಂದ ತನ್ನ ಕುಟುಂಬವು ಮೌನವಾಗಿರಲು ಹೇಳಿತ್ತು ಎಂದು ಮೊನಾಲಿಸಾ ಹೇಳಿದರು. ನಿರ್ದೇಶಕ ಸನೋಜ್ ಮಿಶ್ರಾ ಇತ್ತೀಚೆಗೆ ಮೊನಾಲಿಸಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಸನೋಜ್ ಮಿಶ್ರಾ, ಮೊನಾಲಿಸಾ ಅವರ ಹೇಳಿಕೆಗಳು ಸುಳ್ಳು ಎಂದು ಹೇಳಿದ್ದಾರೆ. ‘ಅವರ ಕುಟುಂಬದ ಸುಮಾರು 7-8 ಜನರು ಇನ್ನೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾನು ಅವರ ಮದುವೆ ಅಮಾನ್ಯ ಎಂದು ಹೇಳಿದೆ. ಅದಕ್ಕಾಗಿಯೇ ಅವರು ನನ್ನ ಮೇಲೆ ಆರೋಪ ಮಾಡಿದರು. ಇಷ್ಟು ದಿನ, ನಾನು ಅವರಿಗೆ ಸಂಭಾಷಣೆ ಹೇಳುವುದು, ನಟಿಸುವುದು, ಕಥೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ನಗುವುದು ಮತ್ತು ಅಳುವುದು ಹೇಗೆ ಎಂದು ಕಲಿಸಲು ಶ್ರಮಿಸುತ್ತಿದ್ದಾಗ, ಅವರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಅವರ ಮೇಲೆ ಹಲ್ಲೆ ನಡೆದಿದ್ದರೆ, ಅವರು ತಕ್ಷಣವೇ ತಮ್ಮ ಕುಟುಂಬಕ್ಕೆ ದೂರು ನೀಡುತ್ತಿದ್ದರು. ಆದರೆ ಅವರು ಫರ್ಮಾನ್ ಖಾನ್ ಅವರೊಂದಿಗಿನ ಅವರ ಮದುವೆ ಅಮಾನ್ಯ ಎಂದು ನಾನು ಅವರಿಗೆ ಹೇಳಿದ್ದರಿಂದ ಅವರು ನನ್ನ ಮೇಲೆ ಅಂತಹ ಆರೋಪಗಳನ್ನು ಮಾಡಿದರು’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಮೊನಾಲಿಸಾ ಗಂಭೀರ ಆರೋಪ

ಮೊನಾಲಿಸಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ. ಶೀಘ್ರದಲ್ಲೇ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸನೋಜ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದರು. ಅವರು ಹೇಳುವುದು ನಿಜವಾಗಿದ್ದರೆ, ಅವರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಇಂದೂ ಮುಂದುವರೆದ ವರುಣನ ಆರ್ಭಟ! 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 28: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಸಹ ಹಲವೆಡೆ ಮಳೆಯಾಗುವ (Weather Forecast)  ಸೂಚನೆಯಿದ್ದು, ಹವಾಮಾನ ಇಲಾಖೆ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲ ಭಾಗಗಳಲ್ಲಿ ಒಣ ಹವೆಯ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ?

ಕರಾವಳಿಯ ದಕ್ಷಿಣ ಕನ್ನಡದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಒಣಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 30-40 Km/h ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Exit mobile version