ಸಾಯಿಬಾಬಾ ಸನ್ನಿಧಿಯಲ್ಲಿ ರಾಕೆಟ್ ಲಾಂಚರ್, ಡ್ರೋನ್ ಫ್ಯಾಕ್ಟರಿಗಳು; ಶಸ್ತ್ರಾಸ್ತ್ರ ರಫ್ತಿನಲ್ಲಿ ಭಾರತ ನಂ. 1 ಆಗಲಿದೆ ಎಂದ ರಾಜನಾಥ್ – Kannada News | Rajnath Singh inaugurates NIBE defence manufacturing complex in Shirdi
ಮುಂಬೈ, ಮೇ 25: ಪುಣೆ ಮೂಲದ ನೈಬ್ ಗ್ರೂಪ್ನ (NIBE group) ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಮಹಾರಾಷ್ಟ್ರದ ಶಿರಡಿಯಲ್ಲಿ ಸ್ಥಾಪನೆಯಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟನೆ ಮಾಡಿದ್ದಾರೆ. ನೈಬ್ ಘಟಕದಲ್ಲಿ ರಾಕೆಟ್ ಲಾಂಚರ್ ಸಿಸ್ಟಂಗಳು, ಕಾಮಿಕಾಜೆ ಡ್ರೋನ್ ಹಾಗೂ ಇತರ ದೇಶೀಯ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ. ಉದ್ಘಾಟನೆ ವೇಳೆ ರಾಜನಾಥ್ ಸಿಂಗ್ ಅವರ ಜೊತೆ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರೂ…