Headlines

ಇಲಿ ಕಡಿತವನ್ನು ಸಾಮಾನ್ಯ ಎಂದು ಪರಿಗಣಿಸಿ ಪ್ರಾಣಕ್ಕೇ ಅಪಾಯ ತಂದುಕೊಳ್ಳಬೇಡಿ, ತಪ್ಪದೇ ಈ ಮುನ್ನೆಚ್ಚರಿಕಾ ಕ್ರಮ ಅನುಸರಿಸಿ – Kannada News | Bitten By A Rat? Follow These 3 Life Saving Tips From Experts Without Fail

ಇಲಿಗಳ ಹಾವಳಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ, ಇದರ ಬಗ್ಗೆ ಯಾರೂ ಹೆಚ್ಚಾಗಿ ಗಮನಹರಿಸುವುದಿಲ್ಲ ಹಾಗೇ ಗಂಭೀರವಾಗಿಯೂ ಪರಿಗಣಿಸುವುದಿಲ್ಲ. ಮನೆಯಲ್ಲಿ ಇಲಿಗಳ ಓಡಾಟ ಎಷ್ಟು ಕಿರಿಕಿರಿ ಉಂಟುಮಾಡುತ್ತದೆಯೋ, ಅದು ಕಡಿದರೆ ಅಷ್ಟೇ ಅಪಾಯವನ್ನೂ ಉಂಟುಮಾಡುತ್ತದೆ. ಏಕೆಂದರೆ ಇಲಿ ಕಡಿತವನ್ನು (Rat Bite) ವಿಷವೆಂದು ಪರಿಗಣಿಸಲಾಗುತ್ತದೆ ಹಾಗೂ ತಕ್ಷಣದ ವೈದ್ಯಕೀಯ ನೆರವೂ ಅಗತ್ಯವಾಗಿರುತ್ತದೆ. ಇಲಿಯ ಕಡಿತ, ಪರಚುವಿಕೆ ಸಣ್ಣ ಸಂಗತಿಯಲ್ಲ, ಇದು ಜೀವಕ್ಕೆ ಅಪಾಯ ತಂದೊಡ್ಡಬಹುದು. ಜೊತೆಗೆ ಇಲಿಯ ವೀರ್ಯ, ಮಲ, ಮೂತ್ರಗಳಿಂದಲೂ ಸೋಂಕುಗಳು ಹರಡುತ್ತವೆ….

Read More

ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು ‘ಪಂಕ್ಚರ್ ಮಾಫಿಯಾ’ ಆಟ! ರಸ್ತೆ ತುಂಬಾ ಮೊಳೆಗಳನ್ನು ಚೆಲ್ಲಿ ಕೃತ್ಯ! – Kannada News | Shocking Bengaluru Puncture Scam: Police Station Front, Driver Safety Risk

ಬೆಂಗಳೂರು, ಮೇ,25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುವ ಹಾಗೂ ವಾಹನ ಸವಾರರ ಜೀವಕ್ಕೆ ಕುತ್ತು ತರುವ ಕುಖ್ಯಾತ ‘ಪಂಕ್ಚರ್ ಮಾಫಿಯಾ’ (Puncture Mafia) ಮತ್ತೆ ಸಕ್ರಿಯವಾಗಿದೆ. ಈ ಬಾರಿ ಈ ಜಾಲದ ಧೈರ್ಯ ಎಷ್ಟು ಹೆಚ್ಚಾಗಿದೆಯೆಂದರೆ, ನೇರವಾಗಿ ಪೊಲೀಸ್ ಠಾಣೆಯೊಂದರ ಮುಂಭಾಗದ ರಸ್ತೆಯಲ್ಲೇ ನೂರಾರು ಮೊಳೆಗಳನ್ನು ಉದ್ದೇಶಪೂರ್ವಕವಾಗಿ ಚೆಲ್ಲಿ ವಾಹನ ಸವಾರರಿಗೆ ಭೀಕರ ಬಲೆ ಬೀಸಲಾಗಿದೆ! ಈ ದಂಧೆಕೋರರ ಮೋಡಸ್ ಆಪರೇಟಿ (ಕಾರ್ಯವೈಖರಿ) ಅತ್ಯಂತ ಸರಳ ಆದರೆ ಅಷ್ಟೇ ಕ್ರೂರವಾಗಿದೆ. ಸಾರ್ವಜನಿಕರು ಹೆಚ್ಚಾಗಿ ಸಂಚರಿಸುವ…

Read More

Video: ಆಟೋ ಚಾಲಕಿಯನ್ನು ಶ್ಲಾಘಿಸಿದ ಬೆಂಗಳೂರಿನ ಅಮೆಜಾನ್ ಉದ್ಯೋಗಿ, ಕಾರಣ ಇದೇ ನೋಡಿ – Kannada News | Bengaluru: Amazon employee in Bengaluru shocked after hearing woman auto driver’s words

ಬೆಂಗಳೂರು, ಮೇ 25: ಮಹಿಳೆಯರು ಆಟೋ ಓಡಿಸುವುದು ದೂರದ ಮಾತು ಎನ್ನುವ ಕಾಲವಿತ್ತು. ಆದರೆ, ಇದೀಗ ಆಟೋವನ್ನೇ ಬದುಕಿಗೆ ಆಧಾರವಾಗಿಸಿಕೊಂಡ ಮಹಿಳೆಯರು ನಮ್ಮ ಸುತ್ತಮುತ್ತಲಿನಲ್ಲಿದ್ದಾರೆ. ಹೌದು, ಬೆಂಗಳೂರಿನ (Bengaluru) ಅಮೆಜಾನ್ ಉದ್ಯೋಗಿಯೊಬ್ಬರು ಆಟೋ ಓಡಿಸುವ ಮಹಿಳೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಆಟೋ ಚಾಲಕಿ ಈ ಕೆಲಸ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಕಾರಣ ರಿವೀಲ್ ಮಾಡಿದ್ದು ಇದನ್ನು ಕೇಳಿ ಅಮೆಜಾನ್ ಉದ್ಯೋಗಿ ಶಾಕ್ ಆಗಿದ್ದಾರೆ. ಈ ಕುರಿತಾದ ವಿಡಿಯೋ ಹಂಚಿಕೊಂಡಿದ್ದು ಗಟ್ಟಿಗಿತ್ತಿ ಮಹಿಳಾ ಆಟೋ ಚಾಲಕಿಯನ್ನು…

Read More

ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು – Kannada News | Setback for Edappadi Palaniswami as 3 AIADMK rebel MLAs resigns ikely to join Vijays TVK

ಚೆನ್ನೈ, ಮೇ 25: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯ (Tamil Nadu Assembly Elections) ಬೆನ್ನಲ್ಲೇ ಅಲ್ಲಿನ ರಾಜಕಾರಣದಲ್ಲಿ ಹೊಸ ತಿರುವು ಉಂಟಾಗಿದೆ. ಬಹುಮತ ಸಿಗದ ಹಿನ್ನೆಲೆಯಲ್ಲಿ ಇತರೆ ಪಕ್ಷಗಳ ಬೆಂಬಲ ಪಡೆಯಲು ವಿಜಯ್ ನೇತೃತ್ವದ ಟಿವಿಕೆ ಹರಸಾಹಸ ಪಟ್ಟಿತ್ತು. ಕೊನೆಗೂ ಎಡ ಪಕ್ಷಗಳು ಮತ್ತು ಕಾಂಗ್ರೆಸ್​​ನ ಬೆಂಬಲದೊಂದಿಗೆ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಎಐಎಡಿಎಂಕೆ (AIADMK) ಪಕ್ಷದ ಮೂವರು ಶಾಸಕರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ…

Read More

ಚೀನಾದಲ್ಲಿ ವಿಶ್ವದ ಅತಿದೊಡ್ಡ ಹೈಸ್ಪೀಡ್ ರೈಲ್ವೆ ನಿಲ್ದಾಣ; ಬೆಟ್ಟವನ್ನೇ ಸವರಿ, ರೋಬೋಟ್, ಎಐ ಬಳಸಿ ಆಯಿತು ನಿರ್ಮಾಣ – Kannada News | China’s tech Marvel: Chongqing East High Speed Rail Station, a Global Engineering Feat

ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋದ ಸ್ಕ್ರೀನ್​ಶಾಟ್Image Credit source: X user @Ivan_8848 ಬೀಜಿಂಗ್, ಮೇ 25: ಚೀನಾ ದೇಶವು ಮೂಲಸೌಕರ್ಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತಹ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ನೈಋತ್ಯ ಚೀನಾದ ಚಾಂಗ್‌ಕಿಂಗ್ (Chongqing) ನಗರದಲ್ಲಿ ವಿಶ್ವದ ಅತ್ಯಂತ ದೊಡ್ಡ ಹೈ-ಸ್ಪೀಡ್ ರೈಲ್ವೆ ನಿಲ್ದಾಣವಾದ ‘ಚಾಂಗ್‌ಕಿಂಗ್ ಈಸ್ಟ್ ರೈಲ್ವೆ ಸ್ಟೇಷನ್’ (Chongqing East Railway Station ನಿರ್ಮಾಣ ಕಾರ್ಯವನ್ನು ಕೇವಲ 38 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದೆ. ಭೌಗೋಳಿಕವಾಗಿ ಅತ್ಯಂತ ಕಠಿಣವಾಗಿದ್ದ…

Read More

ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ? – Kannada News | Why do Chinese people like to eat cockroaches?

ಪ್ರತಿಯೊಂದು ದೇಶವೂ ತನ್ನದೇ ಆದ ಆಹಾರ ಪದ್ಧತಿಗಳನ್ನು ಪಳಗೊಂಡಿದೆ. ಆದರೆ ಚೀನಾ (China) ತನ್ನ ವಿಚಿತ್ರ ಆಹಾರ ಪದ್ಧತಿಯ ಕಾರಣದಿಂದಲೇ ವಿಶ್ವ ಪ್ರಸಿದ್ಧವಾಗಿದೆ. ಇಲ್ಲಿನ ಜನ ಹಾವಿನ ಸೂಪ್‌, ಬಾವಲಿ ಸೂಪ್, ನಾಯಿ ಮಾಂಸ, ಜೇಡ ಎಲ್ಲವನ್ನೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಅದೇ ರೀತಿ ಜಿರಳೆಗಳನ್ನು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಜಿರಳೆಗಳನ್ನು ಕಂಡರೆ ಹೊಡೆದು ಸಾಯಿಸುತ್ತೇವೆ. ಚೀನಾದ ಜನ ಮಾತ್ರ ಇದೇ ಜಿರಳೆಯಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಅಷ್ಟಕ್ಕೂ ಚೀನಿಯರು…

Read More

Weather Forecast: ಉತ್ತರ ಮತ್ತು ದಕ್ಷಿಣ ಒಳನಾಡಿನ ಜನರೇ ಎಚ್ಚರ!: ಮುಂದಿನ 5 ದಿನ ರಾಜ್ಯದಲ್ಲಿ ವರುಣನ ಆರ್ಭಟ ಜೋರು – Kannada News | IMD Alert: Karnataka Braces for 5 Days of Rain, Storms; Bengaluru Cooler

ಬೆಂಗಳೂರು, ಮೇ.25: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಮೇ 25 ರಿಂದ ಮೇ 29ರ ವರೆಗಿನ ಪ್ರಸ್ತುತ ಪರಿಸ್ಥಿತಿಯ ಕಂಪ್ಲೀಟ್ ವಿವರ ಇಲ್ಲಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮೇ 25, 26 ಮತ್ತು 29 ರಂದು ಉತ್ತರ ಒಳನಾಡಿನ (NIK)…

Read More

ಭಟ್ಕಳದ ಮೂರಿನ್ ಕಟ್ಟೆಯ ಇತಿಹಾಸವೇನು? ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣ ಏನು? – Kannada News | Bhatkal’s Moorin Katte Controversy: The History and Reason Behind the Communal Clash

ಕಾರವಾರ, ಮೇ 25: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ (Bhatkal) ಐತಿಹಾಸಿಕ ಮೂರಿನ್​ ಕಟ್ಟೆ (Moorinakatte) ಕಿಚ್ಚು ಜೋರಾಗಿದೆ. ಕಟ್ಟೆ ಪುನರ್​ ನಿರ್ಮಾಣಕ್ಕೆ ಅನ್ಯ ಕೋಮಿನ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಕಟ್ಟೆಯನ್ನ ತೆರವುಗೊಳಿಸಲಾಗಿದೆ. ಇದು ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗುವಂತೆ ಮಾಡಿದೆ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹಾಗೂ ಭಕ್ತರ ಅಪಾರ ಶ್ರದ್ಧಾಕೇಂದ್ರವಾಗಿರುವ ಮೂರಿನ್ ಕಟ್ಟೆಯ ವಿವಾದ ಸದ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಾಂಶಗಳು ಭಟ್ಕಳದ ಮೂರಿನ್ ಕಟ್ಟೆಗೆ ನೂರಾರು ವರ್ಷಗಳ ಇತಿಹಾಸ ಮೂರಿನ್…

Read More

ಸಿದ್ದರಾಮಯ್ಯ ದೆಹಲಿ ಭೇಟಿ ಹಿಂದೆಯೇ ಸತೀಶ್ ಜಾರಕಿಹೊಳಿ ಸೇರಿ 7 ಮಂದಿ ಸಚಿವರ ಪಟಲಾಂ ರಾಜಧಾನಿಗೆ ದೌಡು! – Kannada News | CM Siddaramaiah Delhi Visit: Satish Jarkiholi and 6 Other Karnataka Ministers Rush to Capital for High Command Meeting

ಬೆಂಗಳೂರು, ಮೇ 25: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಲವು ಹಿರಿಯ ಸಚಿವರೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಹಾಗೂ ಸಚಿವರು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ರಾಜ್ಯ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸುವ ನಿರೀಕ್ಷೆಯಿದೆ. ಈ ಭೇಟಿಯು ಸಿಎಂ ಮತ್ತು ಡಿಸಿಎಂ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಐಟಿಬಿಟಿ ಪ್ರಿಯಾಂಕ್ ಖರ್ಗೆ ಅವರಂತಹ ಇತರ ಪ್ರಮುಖ ಸಚಿವರು ಕೂಡ ದೆಹಲಿಗೆ ತೆರಳುತ್ತಿರುವುದು ಕುತೂಹಲ ಹೆಚ್ಚಿಸಿದೆ. ಸಿದ್ದರಾಮಯ್ಯ ಮಾತ್ರವಲ್ಲದೆ ಸಚಿವರಾದ ಹೆಚ್​ಕೆ…

Read More

ಬೂದಿ ಮುಚ್ಚಿದ ಕೆಂಡದಂತಾಗಿದೆ ಭಟ್ಕಳ, ಮೂರಿನ್ ಕಟ್ಟೆ ಧ್ವಂಸಗೊಳಿಸಿದ್ದಕ್ಕೆ ಸಮರ್ಥಿಸಿಕೊಂಡ ಮುಸ್ಲಿಂ ಮುಖಂಡ – Kannada News | Bhatkal Murin Katte Row: Muslim Leader Talks about Why opposed

ಕಾರವಾರ, (ಮೇ 25): ತಣ್ಣಗಾಗಿದ್ದ ಕರಾವಳಿಯ ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ ಮೂರಿನಕಟ್ಟೆ ವಿವಾದ ಮತ್ತೆ ಕಿಚ್ಚು ಹೊತ್ತಿಸಿದೆ. ಭಟ್ಕಳದ ವೆಂಕಟಾಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದ ಮೂರಿನಕಟ್ಟೆಯನ್ನು ಭಾನುವಾರ ರಾತ್ರಿ ಅನ್ಯಕೋಮಿನ ಯುವಕರು ಸೇರಿ ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಭಟ್ಕಳ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಭಟ್ಕಳ ಪಟ್ಟಣ ಹಾಗೂ ಜಾಲಿ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ…

Read More