Headlines

ಮಾಕಳಿ ಬಳಿ ಸರಣಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೂ ಲೆಕ್ಕಿಸದೆ ಮೂಟೆಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋದ ಜನ! – Kannada News | Makali Accident: Biker Killed in Multi Vehicle Crash as Onions Are Looted, Sparks Public Outrage

ನೆಲಮಂಗಲ, ಜನವರಿ 21: ಬೆಂಗಳೂರು (Bangalore) ಉತ್ತರ ತಾಲೂಕಿನ ಮಾಕಳಿ ಸಮೀಪ ಭೀಕರ ಸರಣಿ ಅಪಘಾತ ಸಂಭವಿಸಿ, ಬೈಕ್ ಸವಾರನೊಬ್ಬ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ ಮತ್ತೊಬ್ಬ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಆಟೋ ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ರಸ್ತೆಯಲ್ಲಿ ಸಾಗುತ್ತಿದ್ದ ಆಟೋ ಸಡನ್ ಆಗಿ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಕ್ಯಾಂಟರ್ ಲಾರಿಗೆ…

Read More

Optical Illusion: ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪಾರಿವಾಳವನ್ನು ಕಂಡು ಹಿಡಿಯಬಲ್ಲಿರಾ – Kannada News | Optical Illusion: If you can spot the pigeon in this picture, you are smart

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳೇ ಹಾಗೆ, ನಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಕೆಲವೊಮ್ಮೆ ಈ ಒಗಟಿನ ಚಿತ್ರ ತಲೆಗೆ ಹುಳ ಬಿಡುತ್ತದೆ. ಎಷ್ಟೇ ಹರಸಾಹಸ ಪಟ್ಟರೂ ಉತ್ತರವಂತೂ ದೊರೆಯುವುದೇ ಇಲ್ಲ. ಇದೀಗ ಇಂತಹದ್ದೇ ಟ್ರಿಕ್ಕಿ ಒಗಟಿನ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಸವಾಲು ಪಾರಿವಾಳವನ್ನು ಕಂಡು ಹಿಡಿಯುವುದು. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯ ಇದೆಯೇ. ಈ ಚಿತ್ರವು ಏನನ್ನು ಹೇಳುತ್ತದೆ?…

Read More

ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಪತ್ನಿ ಉಷಾ – Kannada News | A Growing White House Family: Usha Vance Shares News of Baby Boy Arriving in July

ಜೆಡಿ ವ್ಯಾನ್ಸ್​-ಉಷಾ ವ್ಯಾನ್ಸ್​Image Credit source: Free Press Journal ವಾಷಿಂಗ್ಟನ್, ಜನವರಿ 21: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance)ಪತ್ನಿ ಉಷಾ ವ್ಯಾನ್ಸ್​(Usha Vance) ನಾಲ್ಕನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಷಾ ವ್ಯಾನ್ಸ್​ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಗಂಡು ಮಗುವಿನ ಪೋಷಕರಾಗಲಿದ್ದು, ಜುಲೈನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಉಷಾ ಮತ್ತು ಮಗು ಚೆನ್ನಾಗಿದ್ದಾರೆ ಮತ್ತು ಜುಲೈ ಅಂತ್ಯದಲ್ಲಿ ಮಗುವನ್ನು ಸ್ವಾಗತಿಸಲು ನಾವೆಲ್ಲರೂ ಎದುರು ನೋಡುತ್ತಿದ್ದೇವೆ. ಈ…

Read More

Neem Tree: ಮನೆಯ ಸಮೀಪ ಬೇವಿನ ಮರ ಇರುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | The Auspiciousness of Neem: Benefits of Having a Neem Tree Near Your Home

ಬೇವಿನ ಮರದ ಮಹತ್ವ ಮತ್ತು ಮನೆ ಹತ್ತಿರ ಇರುವುದರ ಶುಭಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಬೇವಿನ ಮರವನ್ನು ಮನೆಯ ಹತ್ತಿರ ಇರಿಸುವುದರಿಂದ ಮನಸ್ಸಿನ ವಿಕಾರಗಳುಂಟಾಗಬಹುದು ಅಥವಾ ದುಷ್ಟ ಶಕ್ತಿಗಳು ಆವರಿಸಬಹುದು ಎಂಬಂತಹ ಋಣಾತ್ಮಕ ನಂಬಿಕೆಗಳು ಕೆಲವರಲ್ಲಿ ಇವೆ. ಆದರೆ, ಈ ಮರದ ಬಗ್ಗೆ ಧನಾತ್ಮಕ ಮತ್ತು ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಅನೇಕ ಶುಭಫಲಗಳು…

Read More

ಸತತ 3 ಪಂದ್ಯಗಳಲ್ಲಿ ಸೋಲು, ಆದರೂ 2ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್​

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್‌ ಸೀಸನ್ 4 ಅನ್ನು ಸೋಲಿನೊಂದಿಗೆ ಆರಂಭಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಹ್ಯಾಟ್ರಿಕ್ ಸೋಲುಂಡಿದೆ. ಈ ಸೋಲುಗಳ ಹೊರತಾಗಿಯೂ ಹರ್ಮನ್ ಪ್ರೀತ್ ಕೌರ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಪರಾಜಯಗೊಂಡಿತ್ತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಪರ ಭರ್ಜರಿ ಜಯ ಸಾಧಿಸಿ ಒಟ್ಟು ನಾಲ್ಕು ಅಂಕಗಳನ್ನು ಪಡೆದುಕೊಂಡಿದ್ದರು. ಈ ಎರಡು ಗೆಲುವುಗಳ…

Read More

ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5.15 ಕೋಟಿ ರೂ. ಮೌಲ್ಯದ ಡ್ರಗ್ಸ್​, ನೈಜೀರಿಯಾ ಪ್ರಜೆ ವಶಕ್ಕೆ – Kannada News | Bengaluru CCB Busts Drug Racket, Seizes Drugs Worth Rs 5.15 Crore; Nigerian National Arrested

ಬೆಂಗಳೂರು, ಜನವರಿ 21: ಬೆಂಗಳೂರಿನಲ್ಲಿ (Bangalore) ಮಾದಕವಸ್ತು ಕಳ್ಳಸಾಗಣೆ ಜಾಲದ ಮೇಲೆ ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ದಾಳಿ ನಡೆಸಿದ್ದು, ನೈಜೀರಿಯಾದ ಪ್ರಜೆಯೊಬ್ಬನನ್ನು ಬಂಧಿಸಿ 5.15 ಕೋಟಿ ರೂ. ಮೌಲ್ಯದ 2.5 ಕೆಜಿ ಎಂಡಿಎಂಎ ಜೊತೆಗೆ 300 ಎಕ್​ಸ್ಟಸಿ ಪಿಲ್ಸ್ ವಶಪಡಿಸಿಕೊಂಡಿದ್ದಾರೆ. ಮಾರತ್ತಹಳ್ಳಿ ಬಳಿಯ ಮುನೆಕೊಳಲುವಿನ ಬಾಡಿಗೆ ಮನೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನೈಜೀರಿಯಾ ಮೂಲದ ಅರ್ನೆಸ್ಟ್ ಒನ್ಯೆಕಾಚಿ ಉಗಾ (45) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ…

Read More

‘ಟಾಕ್ಸಿಕ್’ ರೀತಿಯೇ ಸಖತ್ ರಾ ಆಗಿರಲಿದೆ ‘ಧುರಂದರ್ 2’ ಟೀಸರ್ – Kannada News | Dhurandhar 2: The Revenge Teaser Out soon Aditya Dhar’s Action Packed Sequel is very raw like a Toxic

ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಕಳೆದ ವರ್ಷ ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಪ್ರೇಕ್ಷಕರು ಈ ಚಿತ್ರವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಬಿಡುಗಡೆಯಾದ ಒಂದೂವರೆ ತಿಂಗಳ ನಂತರವೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್’ (Dhurandhar) ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿದೆ. ಈಗ ಚಿತ್ರದ ಟೀಸರ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದೆ. ‘ಧುರಂದರ್’ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ…

Read More

ಪ್ರೀತಿಸಿ ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು, ಮೂವರು ಪುರುಷರೊಂದಿಗೆ ಸಿಕ್ಕಿಬಿದ್ದ ಪತ್ನಿಯ ಕೊಲೆಗೈದ ಪತಿ – Kannada News | Love Marriage Tragedy: Kanpur Husband Kills Wife After Finding Her With Other Men

ಕಾನ್ಪುರ, ಜನವರಿ 21: ಇಬ್ಬರದ್ದೂ ಪ್ರೇಮ ವಿವಾಹ(Love Marriage), ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಹಾಲು,ಜೇನಿನಂತೆ ಸುಖವಾಗಿ ಸಂಸಾರ ಮಾಡಿಕೊಂಡಿರಬೇಕಾದ ಮಹಿಳೆ ಪರ ಪುರುಷರ ಸಂಗ ಮಾಡಿ ಕೊಲೆಯಾಗಿದ್ದಾಳೆ. ಮದುವೆಯಾಗಿ ನಾಲ್ಕೇ ನಾಲ್ಕು ತಿಂಗಳು ಕಳೆದಿತ್ತು, ಪತಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ತನ್ನ ಪತ್ನಿ ಮೂವರು ಪುರುಷರೊಂದಿಗೆ ಮಲಗಿದ್ದನ್ನು ನೋಡಿ ಆಘಾತಕ್ಕೊಳಗಾದ ಪತಿ ಬೇರೆ ಆಲೋಚನೆಯನ್ನೇ ಮಾಡದೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ…

Read More

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಸಿದ್ಧತೆ – Kannada News | Virat Kohli, Rohit Sharma Set For Demotion in BCCI Annual Contracts

ಟೀಮ್ ಇಂಡಿಯಾ ಆಟಗಾರರ ಜೊತೆಗಿನ 2026ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ಧತೆಗಳನ್ನು ಶುರು ಮಾಡಿದೆ. ಈ ಬಾರಿಯ ಒಪ್ಪಂದದಲ್ಲಿ ಕೆಲ ಮಹತ್ವದ ಬದಲಾವಣೆ ಕಂಡು ಬರಲಿದೆ. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾದ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಹಿಂಬಡ್ತಿ ನೀಡುವ ಸಾಧ್ಯತೆಯಿದೆ. ಪ್ರಸ್ತುತ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ A+ ಗ್ರೇಡ್​ನಲ್ಲಿದ್ದಾರೆ. ಅದರಂತೆ ಈ ನಾಲ್ವರು ಆಟಗಾರರು ವಾರ್ಷಿಕವಾಗಿ ತಲಾ 7 ಕೋಟಿ…

Read More

ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದ ಗೆಳೆಯರು! ಘನಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಮಾಗಡಿ – Kannada News | New Year Party Turns Fatal in Vajarahalli, Magadi: Broken spine Youth Killed by Friends, Drowned in Lake

ಆರೋಪಿಗಳಾದ ಪ್ರಜ್ವಲ್ ಮತ್ತು ಸುದೀಪ್ ರಾಮನಗರ, ಜನವರಿ 21: ಹೀಗೂ ಸ್ನೇಹಿತರು ಇರುತ್ತಾರಾ? ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ ಜೊತೆಯಲ್ಲಿದ್ದ ಯುವಕನನ್ನು ನಿರ್ದಯವಾಗಿ ಕೆರೆಯಲ್ಲಿ…

Read More