Headlines

IND vs SL: ಭಾರತ ವಿರುದ್ಧದ ಮೊದಲ ಟೆಸ್ಟ್​ಗೆ ಶ್ರೀಲಂಕಾ ತಂಡ ಪ್ರಕಟ – Kannada News | Sri Lanka Squad Announced for India Test Series: Dickwella Returns, De Silva Captains

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇನ್ನು ಮೂರು ದಿನಗಳಲ್ಲಿ ಅಂದರೆ ಆಗಸ್ಟ್ 15 ರಿಂದ ಪ್ರಾರಂಭವಾಗಲಿದೆ. ಈ ಸರಣಿಗಾಗಿ ಈಗಾಲೇ ಟೀಂ ಇಂಡಿಯಾ ಶ್ರೀಲಂಕಾದಲ್ಲಿದೆ. ಶುಭ್​ಮನ್ ಗಿಲ್ ನಾಯಕತ್ವದ 15 ಸದಸ್ಯರ ತಂಡವನ್ನು ಬಿಸಿಸಿಐ ಎರಡು ವಾರಗಳ ಮೊದಲೇ ಪ್ರಕಟಿಸಿತ್ತು. ಇದೀಗ ಉಭಯ ತಂಡಗಳ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಧನಂಜಯ ಡಿ ಸಿಲ್ವಾ ತಂಡವನ್ನು ಮುನ್ನಡೆಸಲಿದ್ದು, ಕಾಮಿಂದು ಮೆಂಡಿಸ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ….

Read More

ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಘೋಷಣೆ – Kannada News | Cauvery Water Dispute: KRV Praveen Shetty And Sa Ra Govindu Withdraws Their Support For Karnataka Bandh on August 13

ಬೆಂಗಳೂರು, (ಆಗಸ್ಟ್ 12): ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ (ಆಗಸ್ಟ್ 13) ಕರ್ನಾಟಕ ಬಂದ್​​​​​ಗೆ ಕರೆ ನೀಡಲಾಗಿದೆ. ಆದ್ರೆ, ಈ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌದು….ಕೆಲ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​​​ಗೆ ಬೆಂಬಲ ಘೋಷಿಸಿದ್ದರೆ, ಇನ್ನು ಪ್ರವೀಣ್ ಶೆಟ್ಟಿ ಬಣ ಹಾಗೂ ಸಾರಾ ಗೋವಿಂದ್ ಅವರು ನಾಳಿನ ಬಂದ್​​​​ಗೆ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡುತ್ತಲ್ಲೇ ಇದ್ದೇವೆ. ಮುಂದೆಯೂ ಮಾಡುತ್ತೇವೆ. ಆದ್ರೆ, ಗುರುವಾರದ ಕರ್ನಾಟಕ ಬಂದ್​​​ಗೆ…

Read More

ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ – Kannada News | US invites ISRO to join NASA in its Moon Base project, why Indian organization involved in this programme

ಬೆಂಗಳೂರು, ಆಗಸ್ಟ್ 12: ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆಯನ್ನು ನಿರ್ಮಿಸುವ ಹಾಗೂ ಭವಿಷ್ಯದ ಮಂಗಳ ಗ್ರಹದ (Mars) ಸಂಶೋಧನೆಗಳಿಗೆ ಅಡಿಪಾಯ ಹಾಕುವ ನಾಸಾದ ಬೃಹತ್ ಯೋಜನೆಗೆ ಇಸ್ರೋವನ್ನು ಜೊತೆಗೂಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಇದು ಭಾರತದ ಪಾಲಿಗೆ ಬಹಳ ಮಹತ್ವದ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿಗೆ ಸಿಕ್ಕಿರುವ ಪ್ರಮುಖ ಜಾಗತಿಕ ಮನ್ನಣೆ ಇದೆನಿಸಿದೆ. ಬೆಂಗಳೂರಿನಲ್ಲಿ ನಡೆದ 9ನೇ ‘ಭಾರತ-ಯುಎಸ್ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆ’ (India-US CSJWG) ಸಭೆಯಲ್ಲಿ ನಾಸಾ ಈ ಆಹ್ವಾನವನ್ನು ನೀಡಿದೆ….

Read More

Varalakshmi Vrat: ವರಮಹಾಲಕ್ಷ್ಮಿ ಪೂಜೆಗೆ ಯಾವ ಬಣ್ಣದ ಸೀರೆ ಶುಭ? ಬಣ್ಣಗಳ ಮಹತ್ವ ತಿಳಿಯಿರಿ – Kannada News | Varalakshmi Vrata: Auspicious Saree Colors, Jewelry and Flowers for Lakshmi Puja

ವರಮಹಾಲಕ್ಷ್ಮಿ ವ್ರತ ಮತ್ತು ಪೂಜೆಯ ಸಂದರ್ಭದಲ್ಲಿ ಸೀರೆ, ಆಭರಣ ಹಾಗೂ ಹೂವುಗಳ ಆಯ್ಕೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಲಕ್ಷ್ಮಿ ದೇವಿಯ ಪೂಜೆಯಲ್ಲಿ ಕೆಲವು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸುವ ಸಂಪ್ರದಾಯವಿದೆ. ಹಸಿರು, ಕೆಂಪು, ಹಳದಿ, ಚಿನ್ನ, ಮರೂನ್ ಮತ್ತು ಗುಲಾಬಿ ಬಣ್ಣದ ಸೀರೆಗಳು ಪೂಜೆಯ ಸಂದರ್ಭದಲ್ಲಿ ವಿಶೇಷವಾಗಿ ಜನಪ್ರಿಯವಾಗಿವೆ. ಆದರೆ ಬಣ್ಣಗಳ ಮಹತ್ವವು ಕುಟುಂಬದ ಸಂಪ್ರದಾಯ ಮತ್ತು ಪ್ರಾದೇಶಿಕ ಆಚರಣೆಗಳಿಗೆ ಅನುಗುಣವಾಗಿ ಬದಲಾಗಬಹುದು. ಹಸಿರು ಸೀರೆ: ಹಸಿರು ಬಣ್ಣವನ್ನು ಸಂಪತ್ತು, ಅಭಿವೃದ್ಧಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ….

Read More

ರಾಜ್ಯಾದ್ಯಂತ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸಮರ: ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ – Kannada News | Karnataka Imposes One Year Ban on Gutkha and Pan Masala

ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ ಬೆಂಗಳೂರು, ಆಗಸ್ಟ್ 12: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಳಪೆ ಹೋಟೆಲ್‌ಗಳು ಹಾಗೂ ನಿಯಮಬಾಹಿರ ಕಾಸ್ಮೆಟಿಕ್ (ಸೌಂದರ್ಯವರ್ಧಕ) ಉದ್ಯಮಗಳ ವಿರುದ್ಧ ಸರಣಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದ ಬೆನ್ನಲ್ಲೇ  ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ,…

Read More

‘ರಾಮಾಯಣ’ ಗ್ರಾಫಿಕ್ಸ್​ ಟೀಕೆ ಮಾಡಿದವರಿಗೆ ರಣಬೀರ್ ಖಡಕ್ ಉತ್ತರ – Kannada News | Ranbir Kapoor Responds to Ramayana VFX Criticism and Urges Fans to Watch on IMAX

‘ರಾಮಾಯಣ’ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿನ ವಿಎಫ್‌ಎಕ್ಸ್‌ ಗ್ರಾಫಿಕ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಎಲ್ಲಾ ವಿಮರ್ಶೆಗಳಿಗೆ ಚಿತ್ರತಂಡ ಈಗ ಸೂಕ್ತ ಉತ್ತರ ನೀಡಿದೆ. ನಿರ್ದೇಶಕ ನಿತೀಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟ ರಣಬೀರ್ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ. ಪ್ರೇಕ್ಷಕರು ಬಿಗ್ ಸ್ಕ್ರೀನ್ ಅನುಭವಕ್ಕಾಗಿ ಕಾಯಬೇಕು ಎಂದು ವಿನಂತಿಸಿದ್ದಾರೆ. ಮೊಬೈಲ್ ವೀಕ್ಷಣೆ ಮತ್ತು ಸಿಜಿಐ ಟೀಕೆ ‘ಜನರು ಮೊಬೈಲ್‌ನಲ್ಲಿ ಟ್ರೇಲರ್ ನೋಡಿ ವಿಎಫ್‌ಎಕ್ಸ್ ನಿರ್ಧರಿಸುತ್ತಿದ್ದಾರೆ….

Read More

ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್​​ನಲ್ಲಿ ನಡೆದಿದ್ದೇನು? – Kannada News | Renuka Swamy case: SSP wants to question Renuka Swamy’s mother

ರೇಣುಕಾ ಸ್ವಾಮಿ (Renuka Swamy) ಪ್ರಕರಣದ ವಿಚಾರಣೆಯಲ್ಲಿ ಕಳೆದ ಕೆಲ ದಿನಗಳಿಂದ ಕೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ದರ್ಶನ್ ಆಪ್ತ ಪ್ರದೋಶ್, ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಅರ್ಜಿ ಹಾಕಿದ್ದು, ಅರ್ಜಿಯ ವಿಚಾರಣೆ ನಡೆದಿದ್ದು, ಆಗಸ್ಟ್ 18ಕ್ಕೆ ಪ್ರದೋಶ್, ತಮ್ಮ ಹೇಳಿಕೆ ದಾಖಲು ಮಾಡಲಿದ್ದಾರೆ. ಇಂದು (ಆಗಸ್ಟ್ 12) ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ರೇಣುಕಾ ಸ್ವಾಮಿ ಅವರ ತಾಯಿಯನ್ನು ಪಾಟಿ ಸವಾಲು ಮಾಡಲು ಕೋರಿ ಅರ್ಜಿ ಹಾಕಿದ್ದಾರೆ. ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಪ್ರಸನ್ನ ಕುಮಾರ್ ವಾದ…

Read More

Independence Day 2026: ಹೆಮ್ಮೆಯ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಈ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು – Kannada News | Independence Day 2026: Follow these rules while flying the national flag at home

ಭಾರತದಾದ್ಯಂತ ನಾಗರಿಕರು ಆಗಸ್ಟ್‌ 15 ನೇ ತಾರಿಕಿನಂದು 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲು ಸಜ್ಜಾಗಿದ್ದಾರೆ. ಎಂದಿನಂತೆ ಈ ದಿನ ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣವನ್ನು ನಡೆಸಲಾಗುತ್ತದೆ. ಅಲ್ಲದೆ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶಾದ್ಯಂತ ಹರ್‌ ಘರ್‌ ತಿರಂಗಾ 2026 ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋವನ್ನು ಪೋಸ್ಟ್‌ ಮಾಡುವ ಮೂಲಕ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ದೇಶದ ನಾಗರಿಕರಿಗೆ ಕರೆಯನ್ನು ನೀಡಿದ್ದಾರೆ. ಈ…

Read More

ಪೋರ್ಚುಗಲ್ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ನಾಯಕ! – Kannada News | Moises Henriques To Captain Portugal In T20 World Cup Qualifiers

ಪೋರ್ಚುಗಲ್ ತಂಡದ ನೂತನ ನಾಯಕನಾಗಿ ಮೊಯ್ಸೆಸ್ ಹೆನ್ರಿಕ್ಸ್ (Moises Henriques) ಆಯ್ಕೆಯಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದ ಹೆನ್ರಿಕ್ಸ್ ಇತ್ತೀಚೆಗಷ್ಟೇ ಪೋರ್ಚುಗಲ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಮುಂಬರುವ 2028ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ಸಿ  ಟೂರ್ನಿಯಲ್ಲಿ ಅವರು ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ. ಪೋರ್ಚುಗೀಸ್ ಮೂಲ: ಮೊಯ್ಸೆಸ್ ಹೆನ್ರಿಕ್ಸ್ ಅವರು ಫೆಬ್ರವರಿ 1, 1987 ರಂದು ಪೋರ್ಚುಗಲ್‌ನ ಫಂಚಲ್‌ನಲ್ಲಿ ಜನಿಸಿದ್ದರು. ಆದರೆ ಅವರು ಚಿಕ್ಕ ಮಗುವಾಗಿದ್ದಾಗಲೇ ಅವರ ಕುಟುಂಬವು ಆಸ್ಟ್ರೇಲಿಯಾಕ್ಕೆ ವಲಸೆ…

Read More

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – Kannada News | Delhi SpiceJet AC Failure: Passengers Demand Action After Averted Mid Air Crisis

ದೆಹಲಿ, ಆ.12: ದೆಹಲಿಯಿಂದ ಪುಣೆಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಇಂದು (ಆ.12) ಇದ್ದಕ್ಕಿದ್ದಂತೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರ ಜಾಗರೂಕತೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ. ವಿಮಾನದ ಕ್ಯಾಬಿನ್‌ನಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿ, ಉಸಿರಾಟದ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಮಾನ ಏರಿದ ತಕ್ಷಣ, ಕ್ಯಾಬಿನ್ ಒಳಗಿನ ಹವಾನಿಯಂತ್ರಣ (AC) ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡು ತಾಪಮಾನ ಅತಿಯಾಗಿ ಏರಿಕೆಯಾಯಿತು. ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ವಿಮಾನದೊಳಗೆ ಉಸಿರಾಡಲು ಕಷ್ಟಪಟ್ಟು…

Read More