ಡಾಲರ್ ಎದುರು ರುಪಾಯಿ 39 ಪೈಸೆ ವೃದ್ಧಿ; ಭಾರತದ ಕರೆನ್ಸಿಗೆ ಬಲ ಸಿಕ್ಕಿದ್ದು ಹೇಗೆ? – Kannada News | Rupee gains against US dollar as west asia tension eases, crude oil prices down and FII inflows rise

ಡಾಲರ್ ಎದುರು ರುಪಾಯಿImage Credit source: Shutterstock

ನವದೆಹಲಿ, ಏಪ್ರಿಲ್ 17: ಇರಾನ್ ಯುದ್ಧ ಭೀತಿ ಸ್ವಲ್ಪ ತಗ್ಗುತ್ತಿದ್ದಂತೆಯೇ ವಿವಿಧ ಮಾರುಕಟ್ಟೆಗಳು ಸಮಾಧಾನದ ಉಸಿರು ಬಿಡುತ್ತಿವೆ. ಡಾಲರ್ ಎದುರು ಉಸಿರುಗಟ್ಟುತ್ತಿದ್ದ ರುಪಾಯಿಗೆ ಸ್ವಲ್ಪ ಜೀವ ಸಿಕ್ಕಿದೆ. ಶುಕ್ರವಾರದ ಬೆಳಗಿನ ಟ್ರೇಡಿಂಗ್​ನಲ್ಲಿ ಡಾಲರ್ ಎದುರು ರುಪಾಯಿ 39 ಪೈಸೆ ಹೆಚ್ಚಿದೆ. ಟ್ರೇಡಿಂಗ್​ನ ಒಂದು ಹಂತದಲ್ಲಿ ರುಪಾಯಿ ಮೌಲ್ಯ 92.75 ಮಟ್ಟದಲ್ಲಿತ್ತು.

ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ನಿನ್ನೆ ಗುರುವಾರ ಒಂದು ಡಾಲರ್​ಗೆ ರುಪಾಯಿ 93ಕ್ಕಿಂತ ಹೆಚ್ಚು ಇತ್ತು. ಇವತ್ತು 92.91ರಲ್ಲಿ ವಹಿವಾಟು ಆರಂಭ ಕಂಡ ರುಪಾಯಿ 92.75ರವರೆಗೆ ಏರಿದೆ. ಡಾಲರ್ ಎದುರು ರುಪಾಯಿ ಸತತ ಎರಡನೇ ದಿನ ಏರಿಕೆ ಕಂಡಿರುವುದು ವಿಶೇಷ. ನಿನ್ನೆ 19 ಪೈಸೆ ಹೆಚ್ಚಿದರೆ ಇವತ್ತು 39 ಪೈಸೆಯಷ್ಟು ಬಲಪಡೆದಿದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ

ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಲು ಏನು ಕಾರಣ?

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಯುದ್ಧ ಭೀತಿ ಕಡಿಮೆ ಆಗಿ ಶಾಂತಿ ಮರಳುವ ಸಾಧ್ಯತೆ ಕಾಣುತ್ತಿದೆ. ಇದು ರುಪಾಯಿ ವೃದ್ಧಿಗೆ ಪ್​ರಮುಖ ಕಾರಣವಿರಬಹುದು ಎಂದು ಭಾವಿಸಲಾಗಿದೆ.

ಇಸ್ರೇಲ್ ಮತ್ತು ಲೆಬನಾನ್ ಮಧ್ಯೆ 10 ದಿನದ ಕದನ ವಿರಾಮ ಏರ್ಪಟ್ಟಿರುವುದು; ಇರಾನ್ ಮತ್ತು ಅಮೆರಿಕದ ಮಧ್ಯೆ ಮಾತುಕತೆ ಪುನಾರಂಭಗೊಳ್ಳುವುದು ಸೇರಿದಂತೆ ವಿವಿಧ ಪೂರಕ ವಿದ್ಯಮಾನಗಳು ಮಾರುಕಟ್ಟೆ ಅಪಾಯವನ್ನು ಕಡಿಮೆಗೊಳಿಸಿವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ತಲೆನೋವಾಗಿದ್ದ ಹಾರ್ಮುಜ್ ಜಲಸಂಧಿ ತಡೆಯೂ ನಿವಾರಣೆಯಾಗುವ ಆಶಯ ಇದೆ. ಹಾರ್ಮುಜ್​ನಲ್ಲಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಇರಾನ್​ಗೆ ಚೀನಾ ಮನವಿ ಮಾಡಿಕೊಂಡಿರುವುದು ದೊಡ್ಡ ವಿಚಾರವಾಗಿದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

ಕಚ್ಚಾ ತೈಲ ಬೆಲೆ ಮತ್ತು ಎಫ್​ಐಐ ಒಳಹರಿವು

ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್​ಗಿಂತ ಕೆಳಗೆ ಇಳಿದಿದೆ. ತೈಲ ಬೆಲೆ ಕಡಿಮೆ ಆದರೆ ಭಾರತದ ಆಮದು ವೆಚ್ಚವೂ ಕಡಿಮೆ ಆಗುತ್ತದೆ. ಇನ್ನೊಂದು ಸಂಗತಿ ಎಫ್​​ಐಐಗಳದ್ದು. ಈ ವಿದೇಶೀ ಸಾಂಸ್ಥಿಕ ಹೂಡಿಕೆಗಳ ಒಳಹರಿವು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿರುವುದು ಕೂಡ ರುಪಾಯಿ ಕರೆನ್ಸಿಗೆ ಬಲ ಸಿಗಲು ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ – Kannada News | Panchamasali Mutt Dispute Intensifies: Expelled Vachanananda Swamiji Holds Ground at Harihar Gurupeetha

ಸ್ವಾಮೀಜಿಗೆ ಭಕ್ತರ ಭದ್ರತೆImage Credit source: Tv9 Kannada

ದಾವಣಗೆರೆ, ಏಪ್ರಿಲ್​​ 17: ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಧರ್ಮದರ್ಶಿ ಮಂಡಳಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಿದೆಯಾದರೂ ಸ್ವಾಮೀಜಿ ಮಾತ್ರ ಇನ್ನೂ ಮಠದಲ್ಲೇ ತಂಗಿದ್ದಾರೆ. ಏ.13ರಂದು ಪೀಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದ್ದು, ಅವರ ವೈಯಕ್ತಿಕ ಸಾಮಾಗ್ರಿಗಳ ಜೊತೆಗೆ ಮಠ ತೊರೆಯುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಹೀಗಿದ್ದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಮಠದಲ್ಲಿಯೇ ಸ್ವಾಮೀಜಿ ತಂಗಿದ್ದಾರೆ. ಕೋರ್ಟ್​ಗೆ ಕೇವಿಯಟ್ ಹಾಕಿ ಮಠದಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ.

ಶ್ರೀಗಳಿಗೆ ಗ್ರಾಮಸ್ಥರ ಕಾವಲು

ಇನ್ನು ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗಳಿಗೆ ಧರ್ಮದರ್ಶಿ ಸಮಿತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಭಕ್ತರೇ ಸ್ವಾಮೀಜಿಗೆ ಕಾವಲಾಗಿದ್ದಾರೆ. ಹರಿಹರ ತಾಲೂಕಿನ ಹಳ್ಳಿಗಳಿಂದ ಮಠ ಕಾಯಲು ಭಕ್ತರು ಬರುತ್ತಿದ್ದು, ಲೆಕ್ಕ ಕೊಡಿ ಅಭಿಯಾನದ ಉಸ್ತುವಾರಿ ಆಗಿರುವ ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಮಠದಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಶ್ರೀಗಳು ಮಕ್ಕಳಿಂದ ಮಸಾಜ್​​ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದ ಧರ್ಮದರ್ಶಿ ಮಂಡಳಿ, ಮಕ್ಕಳಿಗೆ ವಚನಾನಂದಶ್ರೀ ಹಿಂಸೆ ನೀಡಿದ್ದಾರೆ ಎಂದು ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ ಉಚ್ಛಾಟನೆ; ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ಧರ್ಮದರ್ಶಿ ಮಂಡಳಿ ನಿರ್ಧಾರ ಖಂಡಿಸಿದ್ದ ಶ್ರೀಗಳು

ಪಂಚಮಸಾಲಿ ಗುರುಪೀಠದಿಂದ ತಮ್ಮನ್ನು ಉಚ್ಛಾಟಿಸುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ವಚನಾನಂದ ಶ್ರೀಗಳು ನಿರ್ಧಾರ ಹಾಸ್ಯಾಸ್ಪದ ಎಂದಿದ್ದರು. ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಾಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ನಾನು ಲಕ್ಷಾಂತರ ಭಕ್ತರಿಗೆ ಉತ್ತರಿಸಬೇಕು, ಈ 12 ಜನರಿಗೆ ಉತ್ತರಿಸಲ್ಲ. ಟ್ರಸ್ಟ್​ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ದೂರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:49 am, Fri, 17 April 26

Source link

ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್​​ಗೆ ಆರಂಭವಾಯ್ತು ಎರಡನೇ ಸೀಸನ್; ಗೆದ್ದವರಿಗೆ 5 ಲಕ್ಷ ರೂಪಾಯಿ – Kannada News | TV9 Corporate Badminton Championship S2: Win 5 Lakhs Registrations Open

ಟಿವಿ9 ಕಾರ್ಪೋರೇಟ್ ಬ್ಯಾಡ್ಮಿಂಟ್ ಚಾಂಪಿಯನ್​​ಶಿಪ್

ಟಿವಿ9 ನೆಟ್ವರ್ಕ್ ಈ ಮೊದಲು ಆಯೋಜಿಸಿದ್ದ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಯಶಸ್ವಿ ಆಗಿತ್ತು. ವೃತ್ತಿಪರತೆ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ತುಂಬಲು ಇದು ಸಹಕಾರಿ ಆಗಿತ್ತು. ಅಲ್ಲದೆ, ಉದ್ಯಮದ ನಾಯಕರನ್ನು ಒಂದು ಕಡೆ ಸೇರಿಸಿತ್ತು. ಸೀಸನ್ 1 ಯಶಸ್ಸಿನ ಬಳಿಕ ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಆರಂಭ ಆಗುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮೊದಲ ಸೀಸನ್ ಅಲ್ಲಿ ಮೈಕ್ರೋಸಾಫ್ಟ್, ಇನ್​​ಫೋಸಿಸ್, ಅಮೇಜಾನ್, ಐಕಿಯಾ, ಮೇಕ್​​ ಮೈ ಟ್ರಿಪ್, ಟೈಮ್ಸ್ ಆಫ್ ಇಂಡಿಯಾ, ಎಬಿಬಿ, ಡಾಕ್ಟರ್​ ರೆಡ್ಡಿಸ್, ನೋವಾರ್ಟಿಸ್, ಡೆಲ್​, ಕ್ಯಾಬ್ಜಮಿನಿ, ಗ್ರೀಂಕೋ ಸೇರಿದಂತೆ ಹಲವು ಕಂಪನಿಗಳು ಭಾಗಿ ಆಗಿದ್ದವು. 1000 ಕ್ಕೂ ಹೆಚ್ಚು ಪಂದ್ಯಗಳು ನಡೆದವು.

ಈಗ ಕಾರ್ಪೊರೇಟ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್​ಗೆ ಎರಡನೇ ಸೀಸನ್ ಬರುತ್ತಿದೆ. ಅದು ಕೂಡ ಮತ್ತಷ್ಟು ಹಿರಿದಾಗಿ. ಮೇ 15ರಿಂದ 17ರವರೆಗೆ ಹೈದರಾಬಾದ್​​ನ ಪ್ರತಿಷ್ಠಿತ ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಈ ಚಾಂಪಿಯನ್​​ಶಿಪ್ ನಡೆಯಲಿದೆ.

ಭಾರತದ ಅತ್ಯಂತ ಗೌರವಾನ್ವಿತ ಬ್ಯಾಡ್ಮಿಂಟನ್ ಐಕಾನ್‌ಗಳಲ್ಲಿ ಒಬ್ಬರಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪುಲ್ಲೇಲ ಗೋಪಿಚಂದ್ ಅವರೊಂದಿಗಿನ ಸಹಯೋಗದಲ್ಲಿ ಚಾಂಪಿಯನ್‌ಶಿಪ್ ಮುಂದುವರಿಯುತ್ತಿದೆ. ಐತಿಹಾಸಿಕ ಆಲ್ ಇಂಗ್ಲೆಂಡ್ ಚಾಂಪಿಯನ್ (2001) ಮತ್ತು ಭಾರತದ ಬ್ಯಾಡ್ಮಿಂಟನ್ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿರುವ ಗೋಪಿಚಂದ್, ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ರೂಪಿಸುವಲ್ಲಿ ಮತ್ತು ಭಾರತದಲ್ಲಿ ಕ್ರೀಡೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಂಪಿಯನ್‌ಶಿಪ್‌ನೊಂದಿಗಿನ ಅವರ ಸಂಯೋಜಕತ್ವ ವೃತ್ತಿಪರತೆ, ವಿಶ್ವಾಸಾರ್ಹತೆ ಮತ್ತು ವಿಶ್ವ ದರ್ಜೆಯ ಪಂದ್ಯಾವಳಿಯ ಅನುಷ್ಠಾನಕ್ಕೆ ಸಹಕಾರಿ ಆಗಿದೆ.

ಚಾಂಪಿಯನ್​​ಶಿಪ್ ವಿಭಾಗ: ಚಾಂಪಿಯನ್​​ಶಿಪ್ ವಿಭಾಗದಲ್ಲಿ ಪುರುಷರ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ ನಡೆಯಲಿದೆ. ಕನಿಷ್ಠ 3 ಜನರು ಹಾಗೂ ಗರಿಷ್ಠ 5 ಜನರು ತಂಡದಲ್ಲಿ ಇರಲು ಅವಕಾಶವಿದೆ. ತಂಡದ ಎಲ್ಲ ಸದಸ್ಯರು ಒಂದೇ ಕಂಪನಿಗೆ ಸೇರಿರಬೇಕು.

ಮುಕ್ತ ವಿಭಾಗದ ಚಾಂಪಿಯನ್‌ಶಿಪ್: ಈ ವಿಭಾಗದಲ್ಲಿ ವೈಯಕ್ತಿಕವಾಗಿ ಭಾಗವಹಿಸಬಹುದು.

ಮಹಿಳಾ ಸಿಂಗಲ್ಸ್: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಮಿಶ್ರ ಡಬಲ್ಸ್‌: ಭಾಗವಹಿಸುವವರು ಒಂದೇ ಅಥವಾ ಬೇರೆ ಕಂಪನಿಯಿಂದ ಆಗಿರಬಹುದು.

ಪ್ರತಿ ವಿಭಾಗದಲ್ಲಿ ವಿನ್ ಆದವರಿಗೆ 5 ಲಕ್ಷ ರೂಪಾಯಿ ಹಣ ಸಿಗಲಿದೆ.

ಚಾಂಪಿಯನ್‌ಶಿಪ್ ಎಲ್ಲಾ ವಿಭಾಗಗಳಲ್ಲಿ ಒಟ್ಟು 5 ಲಕ್ಷ ಬಹುಮಾನಗಳನ್ನು ನೀಡಲಾಗುತ್ತದೆ. ಆಕರ್ಷಕ ಟ್ರೋಫಿ ಕೂಡ ಸಿಗಲಿದೆ.

www.tv9x.com/corporatecup ಲಾಗಿನ್ ಆಗಿ ನೋಂದಣಿ ಮಾಡಿಕೊಳ್ಳಿ. ಯಾವುದೇ ಪ್ರಶ್ನೆಗಳಿಗೆ: corporatecup@tv9.com ಮೇಲ್ ಮಾಡಿ ಅಥವಾ 70320 03222 ಸಂಖ್ಯೆಗೆ ಕರೆ ಮಾಡಿದೆ.

ಈವೆಂಟ್ ಪಾಲುದಾರಿಕೆಗಳು ಮತ್ತು ಸಹಯೋಗಗಳಿಗಾಗಿ, ದಯವಿಟ್ಟು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಿ:

ಆಂಧ್ರ-ತೆಲಂಗಾಣ: ಎಂಎನ್​ ಚರ್ಯ: 9948299698
ಕರ್ನಾಟಕ: ಶ್ರೀಧರ್ : 9008026103
ಕೋಲ್ಕತ್ತಾ: ಮೊಹುವಾ ರಾಯ್: 8334872780
ದೆಹಲಿ: ವಿಕಾಸ್: 9810266385
ಗುಜರಾತ್: ಮೌಲಿಕ್ ಶಾ: 9909941607
ಮಹರಾಷ್ಟ್ರ: ಭೂಷಣ್: 9820139372

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗ್ರಾಹಕರಿಗೆ ಶಾಕ್: ರೊಟ್ಟಿ, ಚಪಾತಿ, ಹೋಳಿಗೆ ದರ ಏರಿಕೆ – Kannada News | Raichur Food Crisis: Prices of Roti and Chapati Hiked Due to Commercial LPG Shortage; Consumers Feel the Heat

ರಾಯಚೂರು, ಏಪ್ರಿಲ್ 17: ರಾಯಚೂರಿನಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್‌ಗಳ ಅಭಾವದ ಪರಿಣಾಮವಾಗಿ ರೊಟ್ಟಿ ಕೇಂದ್ರಗಳು ಸಮಸ್ಯೆಯನ್ನು ಎದುರಿಸುತ್ತಿವೆ. ಸಾಮ್ರಾಟ್ ರೊಟ್ಟಿ ಕೇಂದ್ರದಲ್ಲಿ, ಸೌದೆ ಒಲೆಗಳ ಮೂಲಕ ಇತರ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಆದರೆ, ಗ್ರಾಹಕರಿಗೆ ತ್ವರಿತವಾಗಿ ಬಿಸಿಬಿಸಿಯಾಗಿ ನೀಡಬೇಕಾದ ರೊಟ್ಟಿ ಮತ್ತು ಚಪಾತಿಗೆ ಗ್ಯಾಸ್ ಬಳಸಲಾಗುತ್ತಿದೆ. ಎಲ್​ಪಿಜಿ ಗ್ಯಾಸ್ ಸಮಸ್ಯೆ ಮತ್ತು ಹೆಚ್ಚಿದ ವೆಚ್ಚದಿಂದಾಗಿ, ರೊಟ್ಟಿ ಮತ್ತು ಚಪಾತಿಯ ಬೆಲೆಯನ್ನು 2 ರೂಪಾಯಿ ಹೆಚ್ಚಿಸಲಾಗಿದೆ. ಇದರೊಂದಿಗೆ, 10 ರೂಪಾಯಿ ಇದ್ದ ರೊಟ್ಟಿ ಮತ್ತು ಚಪಾತಿ ಇಂದಿನಿಂದ 12 ರೂಪಾಯಿ ಆಗಿದೆ. ಹೋಳಿಗೆ ಬೆಲೆ ಕೂಡ 5 ರೂಪಾಯಿ ಏರಿಕೆ ಕಂಡಿದೆ. ರೊಟ್ಟಿ ಕೇಂದ್ರದ ಮಾಲೀಕರ ಪ್ರಕಾರ, ಅನಿಲ ಸಮಸ್ಯೆ ದೇಶವ್ಯಾಪಿಯಾಗಿದ್ದು, ತುರ್ತು ಅಗತ್ಯದ ಕಾರಣ ರೊಟ್ಟಿ ಮತ್ತು ಚಪಾತಿ ಬೆಲೆ ಮಾತ್ರ ಹೆಚ್ಚಿಸಲಾಗಿದೆ. ಇತರ ಪದಾರ್ಥಗಳನ್ನು ಸೌದೆ ಒಲೆಯಲ್ಲಿ ತಯಾರಿಸುವುದರಿಂದ ಅವುಗಳ ಬೆಲೆಯನ್ನು ಹೆಚ್ಚಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಬೆಲೆ ಏರಿಕೆಯು ಗ್ರಾಹಕರಿಗೆ ಹೊರೆಯಾಗಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಸಿಲಿಂಡರ್ ಸಮಸ್ಯೆ ಮುಂದುವರಿದರೆ ಮತ್ತಷ್ಟು ದರ ವ್ಯತ್ಯಾಸವಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಾನೂ ಒಬ್ಬ ಅಪ್ಪ, ಅಣ್ಣ… ಹೆದರಬೇಡಿ, ನನ್ನ ಆಟೋದಲ್ಲಿ ನೀವು ಸೇಫ್: ಆಟೋ ಚಾಲಕನ ಸೀಟಿನ ಹಿಂಬದಿ ಬರೆದ ಸಾಲುಗಳು ವೈರಲ್ – Kannada News | I am also a father, a brother… Don’t be afraid: Lines written on the back of the auto driver’s seat go viral

ಮುಂಬೈ, ಏಪ್ರಿಲ್ 17: ಕಾಲ ತುಂಬಾನೇ ಕೆಟ್ಟಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ರಾತ್ರಿ ಬಿಡಿ, ಹಗಲಿನಲ್ಲಿ ಓಡಾಡಲು ಭಯ ಪಡ್ತಾರೆ. ಅದಲ್ಲದೇ, ಬಸ್, ಕ್ಯಾಬ್, ಆಟೋದಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಇದಕ್ಕೆ ವ್ಯಕತಿರಿಕ್ತವಾಗಿ ಆಟೋದಲ್ಲಿ ಬರೆದ ಸಾಲುಗಳು. ಮುಂಬೈ ಆಟೋ ಡ್ರೈವರ್‌ರೊಬ್ಬರು (Mumbai auto driver) ತಮ್ಮ ಸೀಟಿನ ಹಿಂಭಾಗದಲ್ಲಿ ನಿಮ್ಮ ಸುರಕ್ಷತೆ ನನಗೆ ಮುಖ್ಯ, ಯಾವುದೇ ಭಯ ಬೇಡ, ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಈ ಸಾಲುಗಳು ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವಂತಿದೆ. ಈ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಈ ಸಾಲುಗಳನ್ನು ಸೆರೆ ಹಿಡಿದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಉನ್ನತಿ ದೇವಲಿಯಾ (Unnati Devaliya) ಎಂಬ ಯುವತಿ ತಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಕಂಡ ಸಾಲುಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಎಲ್ಲಾ ಪುರುಷರೂ ಅಪಾಯಕಾರಿಗಳಲ್ಲ, ಕೆಲವರು ಸುರಕ್ಷಿತ ಜಾಗವನ್ನು ಸೃಷ್ಟಿಸುತ್ತಾರೆ ಎಂಬುದನ್ನು ಅರಿತುಕೊಂಡ ಕ್ಷಣವದು. ಇಂತಹ ಸಣ್ಣ ಕಾಳಜಿಯೂ ಇಂದಿನ ಕಾಲದಲ್ಲಿ ದೊಡ್ಡ ಐಷಾರಾಮಿ ಎನಿಸುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಆಟೋ ಚಾಲಕನ ಸೀಟಿನ ಹಿಂಭಾಗದಲ್ಲಿ, ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ನನಗೆ ಮುಖ್ಯ. ಯಾವುದೇ ಭಯ ಬೇಡ, ಆರಾಮವಾಗಿ ಆಟೋದಲ್ಲಿ ಕುಳಿತುಕೊಳ್ಳಿ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲು

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದರೆ, ಮತ್ತೊಬ್ಬರು, ಈ ಸಾಲುಗಳನ್ನು ನೋಡಿ ನನಗೆ ಖುಷಿಯಾಯಿತು. ಎಲ್ಲರೂ ಇವರ ಹಾಗೆ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ಇದು ಭಾರತದ ಕನಸು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೋಗೀಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿ ಸೇರಿ ಇತರ ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಕಟ – Kannada News | Bengaluru: Yogesh Gowda Murder Verdict Vinay Kulkarni and Co. Convicted, Sentencing Today

ಬೆಂಗಳೂರು. ಏ,17: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಇಂದು (ಏ.17) ಜನರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ಘೋಷಿಸಿದೆ. ಏಪ್ರಿಲ್ 17ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಇಂದು ವಿನಯ್ ಕುಲಕರ್ಣಿ ಸೇರಿ ಎಲ್ಲ ಅಪರಾಧಿಗಳು ನ್ಯಾಯಾಧೀಶರ ಮುಂದೆ ಶಿಕ್ಷೆ ಕಡಿಮೆ ಮಾಡುವಂತೆ ಕಣ್ಣೀರಿಟ್ಟಿದ್ದಾರೆ. ಇದೀಗ ವಿಚಾರಣೆ ಹಾಗೂ ಶಿಕ್ಷೆ ಲೈವ್​​​ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಮ್ಯಾನೇಜರ್ ಮಲ್ಲಿ ಸುಳ್ಳು ಹೇಳಿದ್ದಾರೆ: ತೂಗುದೀಪ ಅಕೌಂಟೆಂಟ್ ದೀಪಕ್ – Kannada News | Thoogudeepa accountant Deepak talks about Mallikarjun’s allegations

ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಮ್ಯಾನೇಜರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ 2018 ರಿಂದಲೂ ನಾಪತ್ತೆ ಆಗಿದ್ದರು. ಅವರ ಮೇಲೆ ಸಾಲ, ವಂಚನೆ ಆರೋಪಗಳಿದ್ದವು. ಅವರ ಮೇಲೆ ಲುಕೌಟ್ ನೊಟೀಸ್ ಸಹ ಜಾರಿ ಆಗಿತ್ತು. ನಿನ್ನೆ ಹಠಾತ್ತನೆ ಮಲ್ಲಿಕಾರ್ಜುನ್ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ವೈಯಕ್ತಿಕ ಜೀವನ, ಹಣಕಾಸು ಸಮಸ್ಯೆ, ನಾಪತ್ತೆ ಆಗಿದ್ದಕ್ಕೆ ಕಾರಣ ಹೀಗೆ ಹಲವು ವಿಷಯಗಳನ್ನು ಮಾತನಾಡಿದರು. ಈ ವೇಳೆ ‘ಪ್ರೇಮಬರಹ’ ಸಿನಿಮಾದ ವಿವಾದ ಕುರಿತು ಮಾತನಾಡುತ್ತಾ, ಆಗಿದ್ದ ಅಕೌಂಟಂಟ್ ಮಾಡಿದ ತಪ್ಪಿನಿಂದ ಅರ್ಜುನ್ ಸರ್ಜಾ ಹಾಗೂ ತಮಗೆ ವಿವಾದ ಉಂಟಾಯ್ತು ಎಂದಿದ್ದರು.

ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ್ದ ‘ಪ್ರೇಮಬರಹ’ ಸಿನಿಮಾವನ್ನು ಮಲ್ಲಿಕಾರ್ಜುನ್ ವಿತರಣೆ ಮಾಡಿದ್ದರು. ವಿತರಣೆಗೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವರಿಗೆ ಮಲ್ಲಿಕಾರ್ಜುನ್ ಒಂದಷ್ಟು ಲೆಕ್ಕಗಳನ್ನು ನೀಡಿದ್ದರು. ಅದರಲ್ಲಿ ತಪ್ಪು ಕಂಡುಬಂದಿತ್ತು. ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ದೀಪಕ್ ಟೈಪ್ ಮಾಡಿ ಕೊಟ್ಟ ಲೆಕ್ಕವನ್ನು ನಾನು ಸರಿಯಾಗಿ ನೋಡದೇ ಅರ್ಜುನ್ ಸರ್ಜಾ ಅವರಿಗೆ ಕೊಟ್ಟಿದ್ದೆ ಎಂದು ಮಲ್ಲಿಕಾರ್ಜುನ್ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಕೌಂಟೆಂಟ್ ದೀಪಕ್, ‘ಡೈಲಿ ಮಾಧ್ಯಮ’ ಯೂಟ್ಯೂಬ್ ಚಾನೆಲ್​​ ಜೊತೆ ಮಾತನಾಡಿ ವಿವರಣೆ ನೀಡಿದ್ದಾರೆ. ‘ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲವನ್ನೂ ಮಲ್ಲಿಕಾರ್ಜುನ ಅವರೇ ನೋಡಿಕೊಳ್ಳುತ್ತಿದ್ದರು. ಬೇರೆಯವರೆಲ್ಲ ಕೇವಲ ನಾಮಕಾವಸ್ತೆಗೆ ಇದ್ದವರಷ್ಟೆ. ಅವರು ಹೇಳಿದಂತೆ ನಾನು ಲೆಕ್ಕ ಬರೆದುಕೊಟ್ಟೆ, ಅದನ್ನೇ ಅವರು ಅರ್ಜುನ್ ಸರ್ಜಾ ಅವರಿಗೆ ಕೊಟ್ಟರು. ಅರ್ಜುನ್ ಸರ್ಜಾ ಅವರು ಹೇಳಿದ ಬಳಿಕ ಮತ್ತೆ ಲೆಕ್ಕ ಬದಲಾಯಿಸಿದ್ದು ಸಹ ನಿಜ. ಆದರೆ ನಾನು ಲೆಕ್ಕ ಬರೆದೆ ಎಂಬುದು ಸುಳ್ಳು’ ಎಂದಿದ್ದಾರೆ.

ಇದನ್ನೂ ಓದಿ:ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್

‘ನಾನು (ದೀಪಕ್) ತೂಗುದೀಪ ಸಂಸ್ಥೆಯಲ್ಲಿ ಸುಮಾರು ಐದು ವರ್ಷಗಳ 2013 ರಿಂದ 2018ರ ವರೆಗೆ ಅಕೌಂಟೆಂಟ್ ಆಗಿ ಕೆಲಸ ಮಾಡಿದೆ. ಮಲ್ಲಿಕಾರ್ಜುನ್ ಅವರು ಅಲ್ಲಿ ಬಹಳ ವರ್ಷಗಳಿಂದಲೂ ಇದ್ದರು. ಎಲ್ಲ ವ್ಯವಹಾರವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರು ಹೇಳಿದಂತೆ ಎಲ್ಲರೂ ಕೇಳಬೇಕಿತ್ತು’ ಎಂದು ದೀಪಕ್ ಹೇಳಿದ್ದಾರೆ.

ಅರ್ಜುನ್ ಸರ್ಜಾ ಅವರ ‘ಪ್ರೇಮ ಬರಹ’ ಸಿನಿಮಾದ ವಿತರಣೆ ವಿಷಯದಲ್ಲಿ ಮಲ್ಲಿಕಾರ್ಜುನ್ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ವಿರುದ್ಧ ದೂರು ಸಹ ದಾಖಲಿಸಿದ್ದರು. ಇದೇ ದೂರಿನ ಅನ್ವಯ ಮಲ್ಲಿಕಾರ್ಜುನ್ ವಿರುದ್ಧ ಲುಕೌಟ್ ನೊಟೀಸ್ ಸಹ ಹೊರಡಿಸಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್! ಹೊಸ ಎಸ್​ಒಪಿ ಬಗ್ಗೆ ಅರಣ್ಯ ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ – Kannada News | Karnataka Trekking Rules: New SOPs for Safety, Online Booking Mandatory

ಚಾರಣಿಗರಿಗೆ ಸ್ಟ್ರಿಕ್ಟ್ ರೂಲ್ಸ್! ಹೊಸ ಎಸ್​ಒಪಿ ಬಗ್ಗೆ ಅರಣ್ಯ ಸಚಿವರು ಕೊಟ್ಟ ಮಾಹಿತಿ ಇಲ್ಲಿದೆ

ಬೆಂಗಳೂರು, ಏಪ್ರಿಲ್ 17: ರಾಜ್ಯದಲ್ಲಿ ಚಾರಣಕ್ಕೆ (Trekking) ತೆರಳಿ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿ ಎಸ್‌ಒಪಿ ಬಿಡುಗಡೆ ಮಾಡಿ ಮಹತ್ವದ ಮಾಹಿತಿ ನೀಡಿದ್ದಾರೆ.

ಸಚಿವರು ಹೇಳಿದ್ದೇನು?

ರಾಜ್ಯದಲ್ಲಿ ಪ್ರಸ್ತುತ 44 ಚಾರಣ ಪಾಯಿಂಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ತಡಿಯಾಂಡಮೊಳ್ ಸೇರಿದಂತೆ ಹಲವು ಕಡೆಗಳಲ್ಲಿ ಚಾರಣಕ್ಕೆ ತೆರಳಿದವರು ನಾಪತ್ತೆಯಾಗಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಬಾಲಕಿ ಸಾವನ್ನಪ್ಪಿದ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಹೊಸ ನಿಯಮಗಳ ಪ್ರಕಾರ, ಚಾರಣಿಗರು ಆನ್‌ಲೈನ್ ಮೂಲಕಏ ಬುಕ್ಕಿಂಗ್ ಮಾಡಬೇಕು. 10 ಮಂದಿಗೆ ಒಬ್ಬ ಗೈಡ್ ಕಡ್ಡಾಯವಾಗಿದ್ದು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ. ಟ್ರೆಕಿಂಗ್ ಹೋಗುವವರ ಮೊಬೈಲ್‌ಗಳಲ್ಲಿ ಟ್ರ್ಯಾಕಿಂಗ್ ಆಪ್ ಅಳವಡಿಕೆ ಮಾಡಲಾಗುತ್ತದೆ. ಜೊತೆಗೆ ಗೈಡ್‌ಗಳಿಗೆ ಜಿಪಿಎಸ್ ಸೌಲಭ್ಯ ಇರುವ ವಾಕಿಟಾಕಿ ನೀಡಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ ಮೂರು ದಿನಗಳಾದರೂ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾದ ಬಾಲಕಿಯ ಸುಳಿವಿಲ್ಲ! ಕಿಡ್ನ್ಯಾಪ್ ಆಗಿರಬಹುದೇ?

ಪ್ರತಿ ಸ್ಥಳದ ಕ್ಯಾರಿಂಗ್ ಕೆಪಾಸಿಟಿಯನ್ನು ನಿಯಂತ್ರಿಸಲಾಗಿದ್ದು, ಒಮ್ಮೆ 150 ಮಂದಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಂಡ ಮರಳಿದ ಬಳಿಕವೇ ಮತ್ತೊಂದು ತಂಡವನ್ನು ಕಳುಹಿಸಲಾಗುತ್ತದೆ. ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿರು ಖಂಡ್ರೆ, ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನ, ಬೆಳ್ಳಿ ಬೆಲೆಗಳ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 17th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 17: ಸತತ ಮೂರು ದಿನ ಬೆಲೆ ಏರಿಕೆ ಕಂಡಿದ್ದ ಚಿನ್ನ ಇವತ್ತು ಸ್ವಲ್ಪ ತಗ್ಗಿದೆ. ಮೂರು ದಿನದಲ್ಲಿ ಹತ್ತಿರಹತ್ತಿರ 300 ರೂಗಳಷ್ಟು ಬೆಲೆ ಏರಿತ್ತು. ಇವತ್ತು ಶುಕ್ರವಾರ ಇದರ ಬೆಲೆ (Gold Rates) ಗ್ರಾಮ್​ಗೆ 125 ರೂಗಳಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ತಗ್ಗಿದೆ. ಇರಾನ್ ಯುದ್ಧ ನಿಲ್ಲುವ ಆಶಯ ಸ್ವಲ್ಪ ಬಲಗೊಂಡಿರುವುದು ಇದಕ್ಕೆ ಕಾರಣವಿರಬಹುದು. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯಲ್ಲೂ ಇವತ್ತು ಕಡಿಮೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,420 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,135 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,565 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,420 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,135 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,135 ರೂ
  • ಚೆನ್ನೈ: 14,210 ರೂ
  • ಮುಂಬೈ: 14,135 ರೂ
  • ದೆಹಲಿ: 14,150 ರೂ
  • ಕೋಲ್ಕತಾ: 14,135 ರೂ
  • ಕೇರಳ: 14,135 ರೂ
  • ಅಹ್ಮದಾಬಾದ್: 14,140 ರೂ
  • ಜೈಪುರ್: 14,150 ರೂ
  • ಲಕ್ನೋ: 14,150 ರೂ
  • ಭುವನೇಶ್ವರ್: 14,135 ರೂ

ಇದನ್ನೂ ಓದಿ: ಎಲ್​ಐಸಿಯಿಂದ ಎರಡು ಹೊಸ ಆ್ಯಪ್​ಗಳು ಬಿಡುಗಡೆ; ಗ್ರಾಹಕರಿಗೆ MyLIC, ಮಾರಾಟಗಾರರಿಗೆ Super Sales Saathi ಆ್ಯಪ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 582 ರಿಂಗಿಟ್ (13,657 ರುಪಾಯಿ)
  • ದುಬೈ: 535 ಡಿರಾಮ್ (13,529 ರುಪಾಯಿ)
  • ಅಮೆರಿಕ: 150 ಡಾಲರ್ (13,927 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (13,889 ರುಪಾಯಿ)
  • ಕತಾರ್: 532 ಕತಾರಿ ರಿಯಾಲ್ (13,551 ರೂ)
  • ಸೌದಿ ಅರೇಬಿಯಾ: 543 ಸೌದಿ ರಿಯಾಲ್ (13,442 ರುಪಾಯಿ)
  • ಓಮನ್: 57.05 ಒಮಾನಿ ರಿಯಾಲ್ (13,760 ರುಪಾಯಿ)
  • ಕುವೇತ್: 44.06 ಕುವೇತಿ ದಿನಾರ್ (13,362 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 10:49 am, Fri, 17 April 26

Source link

ಸಮಾಜ ದೂರ ತಳ್ಳಿದವರಿಗೆ ಇವರೇ ಆಸರೆ! ಎಚ್‌ಐವಿ ಪೀಡಿತ ಮಕ್ಕಳ ಕಣ್ಣೀರು ಒರೆಸುತ್ತಿರುವ ಮಂಗಳೂರಿನ ತಬುಸುಮ್ – Kannada News | Mangaluru’s Snehadipa: Tabassum’s Unwavering HIV Care Transforms Lives for 19 Years

ಮಂಗಳೂರು, ಏ.17: ಸಮಾಜದಲ್ಲಿ ಇಂದಿಗೂ ಎಚ್‌ಐವಿ ಪೀಡಿತರನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಇಂತಹ ಸಂದರ್ಭದಲ್ಲಿ ಎಚ್‌ಐವಿ ಪೀಡಿತ ಮಕ್ಕಳು ಮತ್ತು ವ್ಯಕ್ತಿಗಳಿಗೆ ಆಸರೆಯಾಗಿ ನಿಂತಿರುವ ಮಂಗಳೂರಿನ ಬೊಂದೆಲ್​​​​​ನ  ‘ಸ್ನೇಹದೀಪ’ ಸಂಸ್ಥೆಯ ಶ್ರೀಮತಿ ತಬುಸುಮ್ ಅವರು ತಮ್ಮ ಸುದೀರ್ಘ 19 ವರ್ಷಗಳ ಸೇವೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೊಲ್ಮೆ ಎಂಬ ಯ್ಯೂಟಬ್​​ ಚಾನೆಲ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಐವಿ ಪೀಡಿತರನ್ನು ದೂರು ಇಡುವ ಮುನ್ನ ಈ ಕಥೆಯನ್ನು ಒಮ್ಮೆ ನೋಡಲೇಬೇಕು. ಈ ಮಹಿಳೆಯ ಸೇವೆಗೆ ಅನೇಕ ಪ್ರಶಸ್ತಿಗಳು ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ. ಅದರೂ ಈ ಪರಿಶ್ರಮದ ಹಿಂದೆ ಅನೇಕ ನೋವಿನ ಕಥೆಗಳು ಇದೆ.

‘ಸ್ನೇಹದೀಪ’ ಸಂಸ್ಥೆಯನ್ನು ಎಚ್‌ಐವಿ ಸೋಂಕಿತ ಮಕ್ಕಳಿಗಾಗಿ ಪ್ರೀತಿ ಮತ್ತು ಕಾಳಜಿ ನೀಡುವ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಇಲ್ಲಿ ಮಕ್ಕಳಿಗೆ ಕೇವಲ ವಸತಿ ಮಾತ್ರವಲ್ಲದೆ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗೂ ಆದ್ಯತೆ ನೀಡಲಾಗುತ್ತದೆ. ಆರಂಭದಲ್ಲಿ ಸೋಂಕಿತರ ಅಂತ್ಯಸಂಸ್ಕಾರ ಮಾಡುವಾಗ ಸಮಾಜದಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಮುಸ್ಲಿಂ ಸಮುದಾಯದವರೇ ಆಗಲಿ ಅಥವಾ ಇತರೇ ಆಗಲಿ, ಎಚ್‌ಐವಿ ಪೀಡಿತರ ಮೃತದೇಹಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲವದು. ಅಂತಹ ಸಮಯದಲ್ಲಿ ತಬುಸುಮ್ ಮತ್ತು ಅವರ ತಂಡವೇ ಮುಂದೆ ನಿಂತು ಸುಮಾರು ಮೃತದೇಹಗಳ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ: ಯಾಣದ ಕಪ್ಪು ಶಿಲೆಗಳಿಗೆ ಈಗ ‘ರಾಷ್ಟ್ರೀಯ ಪಾರಂಪರಿಕ’ ಕಿರೀಟ: ಜಿಎಸ್‌ಐನಿಂದ ಐತಿಹಾಸಿಕ ಘೋಷಣೆ!

ವಿಡಿಯೋ ಇಲ್ಲಿದೆ ನೋಡಿ:

ಸೋಂಕಿತ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರದ ಅಗತ್ಯವಿದೆ. ಇಲ್ಲಿ ಪ್ರತಿದಿನ ತಾಜಾ ಉಪಹಾರ ಮತ್ತು ಸಮತೋಲಿತ ಊಟವನ್ನು ನೀಡಲಾಗುತ್ತದೆ. ಎಚ್‌ಐವಿ ಎನ್ನುವುದು ಕೇವಲ ಶಾರೀರಿಕ ಕಾಯಿಲೆಯಲ್ಲ, ಅದು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಆದ್ದರಿಂದ ಸಮಾಜ ಅವರನ್ನು ದೂರವಿಡದೆ, ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕು ಎಂಬುದು ಅವರ ಮುಖ್ಯ ಮನವಿಯಾಗಿದೆ. ಯಾವುದೇ ಪ್ರಚಾರದ ಹಂಬಲವಿಲ್ಲದೆ ಕೇವಲ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಇವರಿಗೆ, ಗುಣಮುಖರಾಗುತ್ತಿರುವ ಮಕ್ಕಳನ್ನು ನೋಡುವುದೇ ದೊಡ್ಡ ಸಮಾಧಾನ ಎಂದು ಹೇಳಿದ್ದಾರೆ. ಇವರ ಈ ಸೇವೆ ಅವರ ಕುಟುಂಬ ಕೂಡ ಹೆಚ್ಚಿನ ಬೆಂಬಲ ನೀಡಿದೆ. ತಮ್ಮ ಈ ಸೇವೆಯಲ್ಲಿ ಹಲವು ಸಮಸ್ಯೆಗಳು ಹಾಗೂ ಸವಾಲು ಎದುರಾಗಿದೆ ಎಂದು ಕಣ್ಣೀರು ಕೂಡ ಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version