ಸತೀಶ್ ಜಾರಕಿಹೊಳಿ ಬಾಮೈದನಿಗೆ ED ಶಾಕ್:ಮೈಸೂರಿನ ಸ್ನೇಹಿತೆಯ ನಿವಾಸದಲ್ಲೂ ಪರಿಶೀಲನೆ

ಮೈಸೂರು, (ಜೂನ್ 24): ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಂಜುನಾಥಗೆ ಸೇರಿದ ಬೆಳಗಾವಿ, ಬೆಂಗಳೂರು ಸೇರಿದಂತೆ ಎಲ್ಲಾ ಮನೆ ಮೇಲೂ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೈಸೂರಿನಲ್ಲಿ ಮಂಜುನಾಥ್ ಅವರ ಸ್ನೇಹಿತಯ ಮನೆ ಮೇಲೆ ದಾಳಿಯಾಗಿದೆ. ಹೌದು…ಮಂಜುನಾಥ್ ಹೆಸರಿನಲ್ಲಿರುವ ಮನೆಯಲ್ಲಿ ಅವರ ಗೆಳತಿ ವಾಸ ಮಾಡುತ್ತಿದ್ದು, ಇದೀಗ ಈ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಮಂಜುನಾಥ್ ಆಪ್ತ ಸ್ನೇಹಿತೆ ಯಮುನಾ, ಆಕೆಯ ತಾಯಿ ವಾಸವಿದ್ದು, ಮಂಜುನಾಥ್​ಗೆ ಸೇರಿದ ಮನೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಸೂರ್ಯಾಸ್ತ ನಿಯಮ ತರಲು ಭಾರತದ ಯತ್ನ; ಏನಿದು ಸನ್​​ಸೆಟ್ ಕ್ಲಾಸ್? – Kannada News | India may seek to induce sunset clause in the trade agreement with US

ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಜೊತೆ ಭಾರತದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್Image Credit source: PTI

ನವದೆಹಲಿ, ಜೂನ್ 24: ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India US trade agreement) ಏರ್ಪಡಲು ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕದ ಕೆಲ ಬೇಡಿಕೆಗಳು, ಮತ್ತು ಭಾರತದ ಕೆಲ ಬೇಡಿಕೆಗಳು ಪರಸ್ಪರ ಸಮ್ಮತವಾಗುವ ರೀತಿಯಲ್ಲಿ ಸಂಧಾನಗಳು, ಮಾತುಕತೆಗಳು ನಡೆಯುತ್ತಿವೆ. ಈ ಮಧ್ಯೆ ಭಾರತವು ಒಪ್ಪಂದದಲ್ಲಿ ತನ್ನದೇ ಕೆಲ ಬೇಡಿಕೆಗಳನ್ನು ಇಟ್ಟುಕೊಂಡು ಮಾತುಕತೆ ನಡೆಸುತ್ತಿದೆ. ಒಪ್ಪಂದದಲ್ಲಿ ಸನ್​ಸೆಟ್ ಕ್ಲಾಸ್​ನ (Sunset Clause) ಅವಕಾಶ ಸೇರಿಸುವಂತೆ ಭಾರತ ಡಿಮ್ಯಾಂಡ್ ಇಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನಿಯಮವನ್ನು ಬಯಸುತ್ತಿರುವುದು ಭಾರತ ಮಾತ್ರವಲ್ಲ, ವಿಶ್ವದ ಹಲವು ದೇಶಗಳು ವ್ಯಾಪಾರ ಒಪ್ಪಂದಗಳಲ್ಲಿ ಈ ಅಂಶ ಸೇರಿಸಿರುವುದುಂಟು.

‘ಸನ್‌ಸೆಟ್ ಕ್ಲಾಸ್’ ಎಂದರೇನು?

‘ಸನ್‌ಸೆಟ್ ಕ್ಲಾಸ್’ (Sunset Clause) ಎಂದರೆ ಯಾವುದೇ ಒಂದು ಕಾನೂನು, ನಿಯಮ ಅಥವಾ ಒಪ್ಪಂದವು ನಿರ್ದಿಷ್ಟ ವಾಯಿದೆವರೆಗೂ ಜಾರಿಯಲ್ಲಿರುತ್ತವೆ. ಎರಡೂ ಕಡೆಯವರು ಮತ್ತೆ ಅದನ್ನು ನವೀಕರಿಸುವವರೆಗೂ ಅವು ಆಟೊಮ್ಯಾಟಿಕ್ ಆಗಿ ಸ್ಥಗಿತಗೊಂಡಿರುತ್ತವೆ. ವ್ಯಾಪಾರ ಒಪ್ಪಂದಗಳಲ್ಲಿ ಸನ್​ಸೆಟ್ ಕ್ಲಾಸ್ ಇಲ್ಲದಾಗ, ಆ ಒಪ್ಪಂದ ಇರುವವರೆಗೂ ಎಲ್ಲಾ ಒಳ ನಿಯಮಗಳು ಚಾಲನೆಯಲ್ಲಿರುತ್ತವೆ. ಸನ್​ಸೆಟ್ ಕ್ಲಾಸ್ ಇದ್ದಾಗ, ನಿಯಮಗಳಿಗೆ ಸಮಯಾವಧಿ ನಿರ್ದಿಷ್ಟಪಡಿಸಬಹುದು. ಆ ಅವಧಿ ಮುಗಿದಾಗ, ಬೇಕೆಂದರೆ ಅದನ್ನು ನವೀಕರಿಸಬಹುದು.

ಇದನ್ನೂ ಓದಿ: ಡೆಲಿವರಿ ಬಾಯ್ ಆಗಿದ್ದವ ಇವತ್ತು ವಾಟ್ಸಾಪ್ ಬಾಸ್; ಕುಟುಂಬ ದಿವಾಳಿ ಎದ್ದರೂ ಜಗ್ಗದೆ ಗೆಲ್ಲಲು ಹೊರಟ ಸ್ಟ್ರೀಟ್​ಸ್ಮಾರ್ಟ್ ಹುಡುಗ ಕುನಾಲ್ ಶಾ

ಭಾರತ ಇದನ್ನು ಈಗ ಏಕೆ ಬಯಸುತ್ತಿದೆ?

ಅಮೆರಿಕದ ವ್ಯಾಪಾರ ಮತ್ತು ಸುಂಕದ (Tariff) ನೀತಿಗಳಲ್ಲಿ ಪದೇ ಪದೇ ಬದಲಾವಣೆಗಳಾಗುತ್ತಿರುವುದರಿಂದ ಭಾರತ ಈ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ. ಕೆಲ ನಿಯಮಗಳು, ಕ್ರಮಗಳು ನಿರ್ದಿಷ್ಟ ಅವಧಿಗೆ ಮಾತ್ರ ಸೂಕ್ತವಾಗಿರುತ್ತವೆ. ಆ ಬಳಿಕ ಅದು ಅಪ್ರಸ್ತುತವೆನಿಸಬಹುದು, ಅಥವಾ ಅನನುಕೂಲ ಎನಿಸಬುದು. ಆಗ ಅದನ್ನು ಪರಿಷ್ಕರಿಸಲು ಸನ್​ಸೆಟ್ ಕ್ಲಾಸ್ ಉಪಯುಕ್ತವೆನಿಸುತ್ತದೆ.

ಯುರೋಪಿಯನ್ ಯೂನಿಯನ್ (EU) ಮಾದರಿ

ಇತ್ತೀಚೆಗೆ ಯುರೋಪಿಯನ್ ಪಾರ್ಲಿಮೆಂಟ್ ಕೂಡ ಅಮೆರಿಕದೊಂದಿಗಿನ ತನ್ನ ವ್ಯಾಪಾರ ಒಪ್ಪಂದದಲ್ಲಿ ಇಂತಹದ್ದೇ ಒಂದು ಸನ್‌ಸೆಟ್ ಕ್ಲಾಸ್ ಅನ್ನು ಸೇರಿಸಿದೆ. ಅದರ ಪ್ರಕಾರ ಆ ಒಪ್ಪಂದವು ಡಿಸೆಂಬರ್ 31, 2029 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನವೇ ಒಪ್ಪಂದದಿಂದ ಉಂಟಾದ ಲಾಭ-ನಷ್ಟಗಳನ್ನು ಪರಿಶೀಲಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದೇ ಮಾದರಿಯನ್ನು ಭಾರತವೂ ಕೂಡ ಅಮೆರಿಕದೊಂದಿಗಿನ ಪ್ರಸ್ತಾಪಿತ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಬಳಸಿಕೊಳ್ಳಲು ಆಸಕ್ತಿ ತೋರಿದೆ.

ಇದನ್ನೂ ಓದಿ: ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್​ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ

ಅಮೆರಿಕದ ಕಠಿಣ ವ್ಯಾಪಾರ ನೀತಿಗಳಿಂದ ಭವಿಷ್ಯದಲ್ಲಿ ಭಾರತೀಯ ಉದ್ಯಮಗಳಿಗೆ, ಕೃಷಿ ವಲಯಕ್ಕೆ ಅಥವಾ ಸಣ್ಣ ಉದ್ಯಮಗಳಿಗೆ ತೊಂದರೆಯಾದರೆ, ಒಪ್ಪಂದಕ್ಕೆ ಸಿಲುಕಿ ಒದ್ದಾಡುವ ಬದಲು, ಸುಲಭವಾಗಿ ಒಪ್ಪಂದವನ್ನು ಮರುಪರಿಶೀಲಿಸಲು ಈ ‘ಸನ್‌ಸೆಟ್ ಕ್ಲಾಸ್’ ಭಾರತಕ್ಕೆ ಒಂದು ಸುರಕ್ಷತಾ ಕವಚದಂತೆ ಕೆಲಸ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಿನಕ್ಕೆ 180 ಲೀಟರ್‌ಗೂ ಹೆಚ್ಚು ರಕ್ತವನ್ನು ಶುದ್ಧೀಕರಿಸುವ ಕಿಡ್ನಿಯನ್ನು ಆರೋಗ್ಯವಾಗಿಡಲು ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Best Natural Ways to Keep Your Kidneys Healthy and Strong

ಮೂತ್ರಪಿಂಡಗಳು (ಕಿಡ್ನಿಗಳು) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಇವು ದಿನಕ್ಕೆ ಸುಮಾರು 180 ರಿಂದ 200 ಲೀಟರ್ ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿನ ವಿಷಕಾರಿ ತ್ಯಾಜ್ಯಗಳನ್ನು ಹಾಗೂ ಹೆಚ್ಚುವರಿ ದ್ರವವನ್ನು ಹೊರಹಾಕುವ ಕೆಲಸ ಮಾಡುತ್ತವೆ. ಕಿಡ್ನಿಗಳ ಆರೋಗ್ಯ ಹದಗೆಟ್ಟರೆ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಿಡ್ನಿ ಆರೋಗ್ಯ (Kidneys) ಕಾಪಾಡುವುದು ಬಹಳ ಮುಖ್ಯ. ಹಾಗಾದರೆ ಯಾವ ರೀತಿಯ ಅಭ್ಯಾಸಗಳನ್ನು ಕಿಡ್ನಿ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿದಿನ ವ್ಯಾಯಾಮ ಮಾಡಿ: ನಿಯಮಿತವಾಗಿ ವಾಕಿಂಗ್ ಮಾಡುವುದು, ವ್ಯಾಯಾಮ ಅಥವಾ ಈಜುವುದರಿಂದ ರಕ್ತದೊತ್ತಡ ಮತ್ತು ತೂಕ ನಿಯಂತ್ರಣದಲ್ಲಿರುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಚಟುವಟಿಕೆ ಕಿಡ್ನಿ ಆರೋಗ್ಯಕ್ಕೆ ಸಹಕಾರಿ.

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ: ದೀರ್ಘಕಾಲದ ಮಧುಮೇಹವು ಕಿಡ್ನಿ ವೈಫಲ್ಯದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ಸಿಹಿ ಪದಾರ್ಥಗಳು ಮತ್ತು ಸಕ್ಕರೆ ಪಾನೀಯಗಳ ಸೇವನೆಯನ್ನು ಮಿತಿಗೊಳಿಸುವುದು ಅಗತ್ಯ.

ಇದನ್ನೂ ಓದಿ: ಸಂಜೆ ಸಮಯದಲ್ಲಿ ಕಾಲಿನಲ್ಲಿ ಕಂಡು ಬರುವ ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ, ಇದು ಕಿಡ್ನಿ ಡ್ಯಾಮೇಜ್ ಆಗಿರುವ ಸೂಚನೆ

ರಕ್ತದೊತ್ತಡವನ್ನು ನಿಯಂತ್ರಿಸಿ: ಅಧಿಕ ರಕ್ತದೊತ್ತಡ ಕಿಡ್ನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುತ್ತದೆ. ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯಕರ ಆಹಾರ ಸೇವಿಸಿ: ತರಕಾರಿ, ಹಣ್ಣುಗಳು, ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಆಹಾರದಲ್ಲಿ ಸೇರಿಸಿ. ಸಮತೋಲನ ಆಹಾರವು ದೇಹದ ತೂಕ ನಿಯಂತ್ರಿಸಿ ಕಿಡ್ನಿಗಳನ್ನು ರಕ್ಷಿಸುತ್ತದೆ.

ಉಪ್ಪಿನ ಪ್ರಮಾಣ ಕಡಿಮೆ ಮಾಡಿ: ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡ ಏರಬಹುದು. ಸಂಸ್ಕರಿತ ಆಹಾರಗಳನ್ನು ಕಡಿಮೆ ಮಾಡಿ, ಬದಲಿಗೆ ನಿಂಬೆ, ಬೆಳ್ಳುಳ್ಳಿ ಮತ್ತು ನೈಸರ್ಗಿಕ ಸುವಾಸನೆ ಪದಾರ್ಥಗಳನ್ನು ಬಳಸಿ.

ಕಿಡ್ನಿ ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರುತ್ತದೆ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಕಿಡ್ನಿ ಸಮಸ್ಯೆಗಳನ್ನು ದೂರವಿಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:58 pm, Wed, 24 June 26

Source link

ಬಿಡದಿ ಜಮೀನು ವಿವಾದ: ‘ನನ್ನ ಹೆಸರಲ್ಲಿರೋದು 32 ಎಕರೆ ಮಾತ್ರ, ನೂರಲ್ಲ; ನೋವಾಗಿದ್ದರೆ ವಿಷಾದಿಸುವೆ ಎಂದ ಸಚಿವ – Kannada News | Karnataka Political Spat: Bidadi Smart Township Land Claims Fuel Kumaraswamy Patil War

ಬೆಂಗಳೂರು, ಜೂ.24: ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರಂಭವಾಗಿರುವ ರಾಜಕೀಯ ಕೆಸರೆರಚಾಟ ಈಗ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬಿಡದಿಯಲ್ಲಿ 100 ಎಕರೆ ಜಮೀನಿದೆ ಎಂದು ಆರೋಪಿಸಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಹೆಚ್‌ಡಿಕೆ ಕುಟುಂಬ ಕಾನೂನು ಸಮರಕ್ಕೆ ಸಜ್ಜಾಗಿದೆ. ನಮ್ಮ ತಾಯಿಯವರ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಸಾಬೀತುಪಡಿಸಬೇಕು. ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ನಿಖಿಲ್​​ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.  ಇದರ ಬೆನ್ನಲ್ಲೇ ಮತ್ತೊಂದೆಡೆ ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ಎಕ್ಸ್​​ ಮೂಲಕ ಟ್ವೀಟ್​​ ಮಾಡಿ ಎಂ.ಬಿ ಪಾಟೀಲ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.   ಇದರ ಬೆನ್ನಲ್ಲೇ ಎಚ್ಚೆತ್ತ ಬಿ ಪಾಟೀಲ್, ತಮ್ಮ ಮಾತಿನಿಂದ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಸಾಬೀತುಪಡಿಸದಿದ್ದರೆ ಮಾನಹಾನಿ ಮೊಕದ್ದಮೆ:

“ನಮ್ಮ ತಾಯಿಯವರ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಸಾಬೀತುಪಡಿಸಬೇಕು. ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಬಾಯಿಗೆ ಬಂದಂತೆ ನೂರಾರು ಎಕರೆ ಜಾಗವಿದೆ ಎಂದು ಸುಳ್ಳು ಆರೋಪ ಮಾಡುವುದು ಸಚಿವ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಟ್ವೀಟ್ ಮೂಲಕ ಎಂ.ಬಿ ಪಾಟೀಲ್​​​​ಗೆ ಉತ್ತರ ಕೊಟ್ಟ ಅನಿತಾ ಕುಮಾರಸ್ವಾಮಿ:

ಎಂ.ಬಿ ಪಾಟೀಲ್ ಅವರ ಈ ಹೇಳಿಕೆಯ ವಿರುದ್ಧ ಅನಿತಾ ಕುಮಾರಸ್ವಾಮಿ ಎಕ್ಸ್​ ಮೂಲಕ ಗುಡುಗಿದ್ದಾರೆ. “ನನ್ನ ಹೆಸರಿನಲ್ಲಿ ಬಿಡದಿಯಲ್ಲಿ ಇರುವುದು ಕೇವಲ 32 ಎಕರೆ ಜಮೀನು, ಸಚಿವರು ಹೇಳುತ್ತಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಮನೆಯವರನ್ನು ಮತ್ತು ಮಹಿಳೆಯರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಹಾಗೂ ನನ್ನ ಕುಟುಂಬದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನಿನ ಮೂಲಕವೇ ತಕ್ಕ ಉತ್ತರ ಕೊಡುತ್ತೇನೆ” ಎಂದು ಎಚ್ಚರಿಸಿದ್ದರು.

ಇದನ್ನೂ ಓದಿ: ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ: ಎಂ.ಬಿ. ಪಾಟೀಲ್‌ ವಿರುದ್ಧ ಮಾನಹಾನಿ ಮೊಕದ್ದಮೆ ಎಚ್ಚರಿಕೆ ಕೊಟ್ಟ ನಿಖಿಲ್​

ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ್:

ಎಂ.ಬಿ.ಪಾಟೀಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿಯ ಹೆಸರಿನಲ್ಲಿ ಬಿಡದಿಯಲ್ಲಿ ಜಮೀನಿದೆ ಎಂದು ಹೇಳಿದ್ದರು. ಬಿಡದಿಯಲ್ಲಿ ಅನಿತಾ ಅವರು 100 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಒಂದು ವೇಳೆ ಅಲ್ಲಿ ಅಷ್ಟು ಜಮೀನು ಇಲ್ಲದಿದ್ದರೆ ಅವರು ಆಗಲೇ ಸ್ಪಷ್ಟೀಕರಣ ನೀಡಬೇಕಿತ್ತು. ನಮ್ಮ ಭೂಮಿ ಇಲ್ಲ ಎಂದು ಹೇಳಿದರೆ ಇಲ್ಲಿಗೆ ಮುಗಿಯಿತು. ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ನಮಗೆ ಸಹೋದರಿ ಇದ್ದಂತೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Lizard in Home: ಪೂಜಾ ಕೋಣೆಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನರ್ಥ? ಶಕುನ ಶಾಸ್ತ್ರ ಹೇಳುವುದೇನು? – Kannada News | Lizard in Home: Vastu and Shakun Meanings – Good Omens, Wealth and Bad Signs Explained

ಪೂಜಾ ಕೋಣೆಯಲ್ಲಿ ಹಲ್ಲಿImage Credit source: Getty Images

ಮನೆಯ ಗೋಡೆಯ ಮೇಲೆ ಹಲ್ಲಿ ತೆವಳುವುದನ್ನು ಕಂಡರೆ ಅನೇಕ ಜನರು ಭಯಪಡುತ್ತಾರೆ. ಇನ್ನು ಕೆಲವರು ಇದನ್ನು ಅತ್ಯಂತ ಅಶುಭವೆಂದು ಭಾವಿಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಲ್ಲಿ ಕಾಣಿಸಿಕೊಳ್ಳುವ ರೀತಿ ಮತ್ತು ಸ್ಥಳಗಳ ಆಧಾರದ ಮೇಲೆ ಅದರ ಅರ್ಥಗಳು ಸಂಪೂರ್ಣವಾಗಿ ಬದಲಾಗುತ್ತವೆ. ಶಕುನ ಶಾಸ್ತ್ರದಲ್ಲಿ ಹಲ್ಲಿಯನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಅತ್ಯಂತ ಶುಭ ಮತ್ತು ಧನಾತ್ಮಕ ಸಂಕೇತವೆಂದು ಪರಿಗಣಿಸಲಾಗಿದೆ.

ಲಕ್ಷ್ಮಿ ದೇವಿಯ ಸಂಕೇತ ಮತ್ತು ದೇವಾಲಯದಲ್ಲಿ ಹಲ್ಲಿಯ ದರ್ಶನ:

ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಹಲ್ಲಿಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸಂಕೇತ ಅಥವಾ ವಾಹಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೂಜಾ ಕೋಣೆಯಲ್ಲಿ ಹಲ್ಲಿ ಕಂಡು ಬಂದರೆ ಅದೃಷ್ಟ ಎಂದು ಹೇಳಲಾಗುತ್ತದೆ. ಪೂಜಾ ಕೋಣೆಯಲ್ಲಿ ಹಲ್ಲಿ ಕಂಡುಬಂದರೆ ಕುಟುಂಬಕ್ಕೆ ಶೀಘ್ರದಲ್ಲೇ ಒಳ್ಳೆಯ ಸಮಯಗಳು ಮರಳುತ್ತವೆ ಮತ್ತು ದೀರ್ಘಕಾಲದ ಆರ್ಥಿಕ ಸಂಕಷ್ಟ ಅಥವಾ ಸಾಲದ ಹೊರೆಯಿಂದ ಮುಕ್ತಿ ಸಿಗುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಮುಖ್ಯ ದ್ವಾರದಲ್ಲಿ ಹಲ್ಲಿ ಮತ್ತು ಹಣದ ಆಗಮನ:

ಮನೆಯ ಮುಖ್ಯ ದ್ವಾರ ಅಥವಾ ಮುಂಭಾಗದ ಬಾಗಿಲಿನ ಬಳಿ ಹಲ್ಲಿಯನ್ನು ನೋಡುವುದು ಅತ್ಯಂತ ಸಕಾರಾತ್ಮಕವಾದ ಸಂಕೇತವಾಗಿದೆ. ಪ್ರಕೃತಿಯಲ್ಲಿ ಮುಂಬರುವ ಮಳೆಯನ್ನು ಮುನ್ಸೂಚನೆಗಳು ಹೇಗೆ ಸೂಚಿಸುತ್ತವೆಯೋ, ಹಾಗೆಯೇ ಮುಖ್ಯ ದ್ವಾರದ ಬಳಿ ಹಲ್ಲಿ ಕಾಣಿಸಿಕೊಳ್ಳುವುದು ಮನೆಗೆ ಹಠಾತ್ ಹಣದ ಆಗಮನ ಅಥವಾ ಧನಲಾಭವಾಗುವುದರ ನಿರ್ದಿಷ್ಟ ಸಂಕೇತವಾಗಿದೆ. ಇದು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಹಲ್ಲಿಗಳ ಜಗಳ ಮತ್ತು ಗೋಡೆಯ ಮೇಲಿನ ಚಲನೆ:

ಒಂದು ವೇಳೆ ಗೋಡೆಯ ಮೇಲೆ ಎರಡು ಹಲ್ಲಿಗಳು ಪರಸ್ಪರ ಜಗಳವಾಡುವುದನ್ನು ನೀವು ನೋಡಿದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು. ಇದು ಮುಂಬರುವ ದಿನಗಳಲ್ಲಿ ಕುಟುಂಬದ ಸದಸ್ಯರ ನಡುವೆ ಗಂಭೀರ ಮನಸ್ತಾಪಗಳು, ಜಗಳಗಳು ಅಥವಾ ಯಾರಿಗಾದರೂ ಅನಾರೋಗ್ಯ ಉಂಟಾಗಬಹುದು ಎಂಬುದನ್ನು ಸೂಚಿಸುತ್ತದೆ. ಹಾಗೆಯೇ, ಹಲ್ಲಿಯು ಗೋಡೆಯ ಮೇಲೆ ನಿಮ್ಮನ್ನು ನೋಡಿ ಬೇಗನೆ ಓಡಿ ತಪ್ಪಿಸಿಕೊಳ್ಳುವುದನ್ನು ನೋಡುವುದು ಕೂಡ ಒಳ್ಳೆಯ ಸಂಕೇತವಲ್ಲ; ಇದು ಕುಟುಂಬದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕನಸಿನಲ್ಲಿ ಹಲ್ಲಿ ಮತ್ತು ಸತ್ತ ಹಲ್ಲಿ ಕಾಣುವುದು:

ನಿದ್ದೆ ಮಾಡುವಾಗ ಕನಸಿನಲ್ಲಿ ಹಲ್ಲಿಯನ್ನು ನೋಡುವುದು ಬಹಳ ಅಶುಭ ಸಂಕೇತವಾಗಿದ್ದು, ಇದು ಜೀವನದಲ್ಲಿ ಹಠಾತ್ ವಿಪತ್ತು ಅಥವಾ ಯಾವುದೋ ಕೆಟ್ಟ ಘಟನೆ ಸಂಭವಿಸುವುದನ್ನು ಸೂಚಿಸುತ್ತದೆ. ಇದರೊಂದಿಗೆ, ಮನೆಯ ಮೂಲೆಯಲ್ಲಿ ಅಥವಾ ನೆಲದ ಮೇಲೆ ಸತ್ತ ಹಲ್ಲಿ ಬಿದ್ದಿರುವುದು ಕಂಡುಬಂದರೆ, ಅದು ತೀವ್ರ ದುರಾದೃಷ್ಟ ಮತ್ತು ನಕಾರಾತ್ಮಕತೆಯ ಸಂಕೇತವಾಗಿದೆ. ಇಂತಹ ಸಂದರ್ಭಗಳಲ್ಲಿ ಮನೆಯ ಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:54 pm, Wed, 24 June 26

Source link

ಶ್ವೇತಾ ಮೆನನ್ ವಿರುದ್ಧ ಮತ್ತೊಮ್ಮೆ ಪಿತೂರಿ? ‘ಅಮ್ಮ’ ಸಂಘಟನೆಯ ಸಾಮೂಹಿಕ ರಾಜೀನಾಮೆಗೆ ಅಸಲಿ ಕಾರಣ ಬಯಲು – Kannada News | Shwetha Menon Resigns from AMMA: Demands Forensic Audit Amidst Controversy

ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಅಧ್ಯಕ್ಷೆ ಶ್ವೇತಾ ಮೆನನ್ ಸೇರಿದಂತೆ ಇಡೀ ಕಾರ್ಯಕಾರಿ ಸಮಿತಿ ಜೂನ್ 21ರ ಭಾನುವಾರ ಒಟ್ಟಿಗೆ ರಾಜೀನಾಮೆ ನೀಡಿತ್ತು. ಈ ಹಠಾತ್ ಬೆಳವಣಿಗೆಯ ನಂತರ ನಟಿ ಶ್ವೇತಾ ಮೆನನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಸ್ವಗೌರವಕ್ಕಾಗಿ ರಾಜೀನಾಮೆ ನೀಡಿದ್ದೇನೆಯೇ ಹೊರತು ದೌರ್ಬಲ್ಯದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನನ್ನ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು. ಆದರೆ ನನ್ನ ಮಾತುಗಳನ್ನು ಸಾರ್ವಜನಿಕರ ಮುಂದೆ ಇಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಯಾರ ಕೈಗೊಂಬೆಯಾಗಲು ಇಷ್ಟಪಡದ ಕಾರಣ ರಾಜೀನಾಮೆ ನೀಡಿದ್ದೇನೆ. ಚುನಾವಣೆಗೂ ಮುನ್ನವೇ ಕೆಲವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹರಡಿದ್ದರು. ಆದರೂ ಬಹುಪಾಲು ಸದಸ್ಯರ ಬೆಂಬಲದಿಂದ ನಾನು ಚುನಾವಣೆಯಲ್ಲಿ ಗೆದ್ದಿದ್ದೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಕೆಲಸ ಮಾಡಿದ್ದೇನೆ’ ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಲೆಕ್ಕಪರಿಶೋಧನೆಗೆ ಆಗ್ರಹ:

‘ಹಳೆಯ ಸಮಿತಿಯ ಕೆಲ ಸದಸ್ಯರ ತಪ್ಪುಗಳನ್ನು ತನಿಖೆ ಮಾಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಮಗೆ ಅವಕಾಶ ನೀಡಲಿಲ್ಲ. ಕಳೆದ ಎರಡು ಅವಧಿಯ ಹಣಕಾಸಿನ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಮರುಪರಿಶೀಲಿಸಬೇಕು. ಇದರಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಫೋರೆನ್ಸಿಕ್ ಆಡಿಟ್ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ರಾಜಕೀಯ ಲಿಂಕ್ ಇಲ್ಲ:

ತಮ್ಮ ರಾಜೀನಾಮೆ ಕುರಿತಾದ ವದಂತಿಗಳನ್ನು ಶ್ವೇತಾ ಮೆನನ್ ತಳ್ಳಿಹಾಕಿದ್ದಾರೆ. ತಾವು ಬಿಜೆಪಿ ಅಥವಾ ಎಡಪಂಥೀಯ ಯಾವುದೇ ಪಕ್ಷದ ಪರವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ನಿರ್ಧಾರ ಸ್ವತಂತ್ರವಾದುದು ಎಂದಿದ್ದಾರೆ. ‘ನನ್ನ ನಿರ್ಧಾರ ದೌರ್ಬಲ್ಯದಿಂದ ಬಂದಿದ್ದಲ್ಲ. ಅದು ನನ್ನ ಸ್ವಗೌರವದ ಪ್ರಶ್ನೆ. ಕಥೆ ಇನ್ನು ಮುಗಿದಿಲ್ಲ’ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ.

ಹಳೆಯ ಪ್ರಕರಣಗಳ ಅಡ್ಡಿ:

ಶ್ವೇತಾ ಮೆನನ್ ಅವರು ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಅವರ ವಿರುದ್ಧ ಅಶ್ಲೀಲತೆಯ ಪ್ರಕರಣ ದಾಖಲಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ ಮಾಡಿದ ಕೆಲಸಕ್ಕೆ ಈಗ ಪ್ರಕರಣ ದಾಖಲಿಸಿರುವ ಉದ್ದೇಶದ ಬಗ್ಗೆ ಅವರು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅಶ್ಲೀಲ ಸಿನಿಮಾದಲ್ಲಿ ನಟಿಸಿದ ಆರೋಪ ಹೊತ್ತರೂ ಚುನಾವಣೆಯಲ್ಲಿ ಗೆದ್ದ ನಟಿ ಶ್ವೇತಾ ಮೆನನ್

ಇತ್ತೀಚೆಗೆ ದೇವಸ್ಥಾನದ ಟ್ರಸ್ಟ್ ಒಂದರ ಪ್ರಾಯೋಜಕತ್ವ ಪಡೆದಿದ್ದಕ್ಕೆ ಈ ಸಂಘಟನೆ ಭಾರಿ ಟೀಕೆ ಎದುರಿಸಿತ್ತು. ಆಗ ಸಂಘಟನೆಯ ಪರವಾಗಿ ಮಾತನಾಡಿದ್ದ ಶ್ವೇತಾ ಮೆನನ್, ಇದು ಚಾರಿಟೇಬಲ್ ಸಂಸ್ಥೆಯಾಗಿರುವುದರಿಂದ ರಾಜಕೀಯ ಅಥವಾ ಧಾರ್ಮಿಕ ಹಿನ್ನೆಲೆ ನೋಡಿ ಧನಸಹಾಯವನ್ನು ತಿರಸ್ಕರಿಸಬಾರದು ಎಂದು ಸಮರ್ಥಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿಎಂ ಡಿಕೆ ಶಿವಕುಮಾರ್ ಗೃಹ ಕಚೇರಿ ಕೃಷ್ಣಾ ಕಾರ್ಯಾರಂಭ – Kannada News | Karnataka CM DKS Begins Work from Kumarakrupa Roads Krishna Office

ಬೆಂಗಳೂರು, ಜೂನ್​​ 24: ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಗೃಹ ಕಚೇರಿ ಕೃಷ್ಣಾ ಕಾರ್ಯಾರಂಭ ಮಾಡಿದೆ. ಡಿ.ಕೆ. ಶಿವಕುಮಾರ್ ಅವರು ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ತಮ್ಮ ಆಡಳಿತಾತ್ಮಕ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಈ ಕಚೇರಿಯು ಇನ್ನು ಮುಂದೆ ರಾಜ್ಯದ ಆಡಳಿತಾತ್ಮಕ ಚಟುವಟಿಕೆಗಳ ಪ್ರಮುಖ ಕೇಂದ್ರಬಿಂದುವಾಗಲಿದೆ. ಕಚೇರಿಯಲ್ಲಿ ಅಜ್ಜಯ್ಯನ ಭಾವಚಿತ್ರವನ್ನು ಅಳವಡಿಸಿರುವುದು ಕೂಡ ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೋಗಿಗಳ ಜೀವದ ಜೊತೆ ಚೆಲ್ಲಾಟ: ಪತಿ ಸರಕಾರಿ ವೈದ್ಯ, ಆದರೆ ಚಿಕಿತ್ಸೆ ನೀಡೋದು ಪತ್ನಿ! – Kannada News | Government Doctor’s Wife Found Treating Patients and Pregnant Women at Bagalkot Health Centre

ವೈದ್ಯರ ಬದಲು ಅವರ ಪತ್ನಿಯಿಂದ ರೋಗಿಗಳಿಗೆ ಚಿಕಿತ್ಸೆ!Image Credit source: Tv9 Kannada

ಬೆಂಗಳೂರು, ಜೂನ್​​ 24: ಖಾಸಗಿ ಕ್ಲಿನಿಕ್​​ಗಳಿಗೆ ಹೋಗೋಣ ಎಂದರೆ ನಕಲಿ ಡಾಕ್ಟರ್​​ಗಳ ಹಾವಳಿ ಕಾರಣ ಮೊದಲೇ ಕಂಗಾಲಾಗಿರುವ ಜನರು ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮೇಲೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿದ್ದರು. ಆದರೆ ಬಾಗಲಕೋಟೆಯಲ್ಲಿ ನಡೆದಿರುವ ಘಟನೆ ಇನ್ನು ಯಾರನ್ನು ನಂಬಬೇಕು ಎಂಬ ಪ್ರಶ್ನೆಯನ್ನು ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ. ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಬದಲು ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ.

ಸ್ಥಳೀಯರ ಆಕ್ರೋಶ

ಹೌದು, ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರೋದು ಹೆಚ್. ವಿ. ಲೇಬಗಿರಿ. ಆದರೆ ಆಸ್ಪತ್ರೆಗೆ ಸಂಬಂಧಪಟ್ಟ ಯಾವುದೇ ಹುದ್ದೆಯಲ್ಲಿ ಇಲ್ಲದ ಅವರ ಪತ್ನಿ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧ ವಿತರಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪತಿ ಜೊತೆಗೆ ಆಸ್ಪತ್ರೆಗೆ ಬಂದು ವೈದ್ಯರ ರೀತಿ ಚೇರ್​​ನಲ್ಲಿ ಕೂರುವ ಆಕೆ ಬರುವ ರೋಗಿಗಳ ತಪಾಸಣೆ ಮಾಡುತ್ತಾರಂತೆ. ಸಾಮಾನ್ಯ ರೋಗಿಗಳಿಗೆ ಮಾತ್ರವಲ್ಲದೆ ಗರ್ಭಿಣಿಯರಿಗೂ ವೈದ್ಯರ ಪತ್ನಿ ಚಿಕಿತ್ಸೆ ನೀಡುತ್ತಾರೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ಏನಾದರೂ ವ್ಯಕ್ತಿರಿಕ್ತ ಪರಿಣಾಮವಾದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ತಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ; ಹೇಳೋರು ಇಲ್ಲ ಕೇಳೋರು ಇಲ್ಲ!

ಇನ್ನು ಇದೇ ವಿಚಾರವಾಗಿ ಆಸ್ಪತ್ರೆಯ ವೈದ್ಯಾಧಿಕಾರಿ ಹೆಚ್. ವಿ. ಲೇಬಗಿರಿ ಅವರನ್ನು ಸ್ಥಳೀಯರು ತರಾಟೆಗೆ ಪಡೆದ ಘಟನೆಯೂ ನಡೆದಿದೆ. ಈ ವೇಳೆ ಪ್ರಿಸ್ಕ್ರಿಪ್ಶನ್​​ನಲ್ಲಿ ಇರೋದು ತನ್ನ ಪತ್ನಿಯ ಬರಹ ಅಲ್ಲವೇ ಅಲ್ಲ ಎಂದು ವಾದಿಸಿರುವ ಲೇಬಗಿರಿ ಅವರು ವಾದಿಸಿದರೆ, ಮೊಬೈಲ್​​ನಲ್ಲಿ ಮಾತನಾಡುವ ನೆಪದಲ್ಲಿ ವೈದ್ಯಾಧಿಕಾರಿಯ ಪತ್ನಿ ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಟೆಯಿಂದ ಕೇತನ್​ನ ತಳ್ಳುವ ಮುನ್ನ, ಕೊಲೆಯನ್ನು ಅಪಘಾತ ಎಂದು ಬಿಂಬಿಸುವುದು ಹೇಗೆ? ಎಂದು ಸರ್ಚ್​ ಮಾಡಿದ್ದ ಸಿಯಾ – Kannada News | Google Search Trail Allegedly Reveals Advance Planning in Lohagad Fort Case

ಪುಣೆ, ಜೂನ್ 24: ಮಹಾರಾಷ್ಟ್ರದ ಲೋಹಗಡ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೋಟೆಯಿಂದ ತಳ್ಳಿ ಕೊಲೆ ಮಾಡಲಾಗಿತ್ತು. ಅದರ ಹಿಂದೆ ಭಾವಿ ಪತ್ನಿಯ ಕೈವಾಡವಿರುವುದು ಸಾಬೀತಾಗಿದೆ. ಕರಾಳ ಸಂಚು ರೂಪಿಸುವ ಸಂದರ್ಭದಲ್ಲಿ ಕೊಲೆಯನ್ನು ಅಪಘಾತವೆಂದು ಬಿಂಬಿಸುವುದು ಹೇಗೆ ಎಂದು ಸಿಯಾ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದಳು ಎಂಬುದರ ಮಾಹಿತಿ ಇಲ್ಲಿದೆ.

ಕಳ್ಳಾಟ ಬಯಲು ಮಾಡಿದ ಗೂಗಲ್ ಸರ್ಚ್ ಹಿಸ್ಟರಿ

ಆರಂಭದಲ್ಲಿ ಸಿಯಾ ಪೊಲೀಸರ ಮುಂದೆ, ಕೋಟೆಯ ಮೇಲೆ ಜೋರಾಗಿ ಗಾಳಿ ಬೀಸುತ್ತಿತ್ತು, ಆಗ ಕೇತನ್ ಫೋಟೋಗೆ ಪೋಸ್ ನೀಡುವಾಗ ಕಾಲು ಜಾರಿ ಬಿದ್ದರು ಎಂದು ಕಥೆ ಕಟ್ಟಿದ್ದಳು. ಲೋನಾವಾಲ ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದೇ ದಾಖಲಿಸಿಕೊಂಡಿದ್ದರು. ಆದರೆ ಆಕೆಯ ನಾಟಕದ ಮೇಲೆ ಅನುಮಾನ ಬಂದು ಪೊಲೀಸರು ಸಿಯಾಳ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಪೂರ್ವಯೋಜಿತ ಪಿತೂರಿ: ಕೊಲೆಗೆ ಕೆಲವು ದಿನಗಳ ಮೊದಲು ಸಿಯಾ ತನ್ನ ಗೂಗಲ್‌ನಲ್ಲಿ, ಕೊಲೆಯಿಂದ ಪಾರಾಗುವ ದಾರಿಗಳು ಮತ್ತು ಅದನ್ನು ಟ್ರೆಕ್ಕಿಂಗ್ ವೇಳೆ ನಡೆದ ಅಪಘಾತದಂತೆ ಜಗತ್ತಿಗೆ ತೋರಿಸುವುದು ಹೇಗೆ ಎಂಬ ಬಗ್ಗೆ ವ್ಯಾಪಕವಾಗಿ ರಿಸರ್ಚ್ ಮಾಡಿದ್ದಳು. ಈ ಡಿಜಿಟಲ್ ಹಾದಿಯೇ ಈಗ ಪ್ರಕರಣದ ಅತ್ಯಂತ ಬಲವಾದ ಸಾಕ್ಷಿಯಾಗಿದೆ.

ಮತ್ತಷ್ಟು ಓದಿ: ಮೊದಲ ಬಾರಿ ತಳ್ಳಿದಾಗ ಪೊದೆ ಹಿಡಿದು ಬದುಕಿದ್ದ ವರ: ರಹಸ್ಯ ಮುಚ್ಚಿಹಾಕಲು ಹಾವಿನ ಕಥೆ ಕಟ್ಟಿ ಅಪ್ಪಿಕೊಂಡಿದ್ದ ಕಪಟ ಯುವತಿ

ಹೂಡಿ ಧರಿಸಿ ಹಿಂಬಾಲಿಸಿದ್ದ ಪ್ರಿಯಕರ ಸಿಸಿಟಿವಿಯಲ್ಲಿ ಸೆರೆ

ಜೂನ್ 18 ರಂದು ಸಿಯಾ ಪ್ಲಾನ್ ಮಾಡಿ ಕೇತನ್‌ನನ್ನು ಲೋಹಗಡ್ ಕೋಟೆಗೆ ಕರೆದೊಯ್ದಿದ್ದಾಳೆ. ಆಕೆಯ ಒಣಹಣ್ಣುಗಳ ವ್ಯಾಪಾರಿ ಪ್ರಿಯಕರ ಚೇತನ್ ಚೌಧರಿ (22) ತನ್ನ ಗುರುತು ಸಿಗದಿರಲು ಹೂಡಿ ಮತ್ತು ಫೇಸ್ ಮಾಸ್ಕ್ ಧರಿಸಿ ಇವರಿಗಿಂತ ಕೇವಲ 20 ರಿಂದ 30 ಅಡಿ ದೂರದಲ್ಲಿ ಚಾರಣ ಮಾರ್ಗದಲ್ಲಿ ಹಿಂಬಾಲಿಸಿದ್ದಾನೆ. ಇವರು ಕೋಟೆಯ ಅಂಚಿನಲ್ಲಿ ನಿಂತಿರುವುದು ಮತ್ತು ಚೇತನ್ ಇವರನ್ನು ಫಾಲೋ ಮಾಡುತ್ತಿರುವುದು ಅಲ್ಲಿನ ಸಿಸಿಟಿವಿ  ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಕೋಟೆಯ ತುದಿಗೆ ತಲುಪಿದ ತಕ್ಷಣ ಸಿಯಾ ಮತ್ತು ಚೇತನ್ ಇಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ಕಂದಕಕ್ಕೆ ತಳ್ಳಿ ಕೊಂದಿದ್ದಾರೆ. ಕೊಲೆ ಸಂಪೂರ್ಣವಾಗಿ ಮುಗಿದ ಮೇಲೆ, ತಾನು ಗೂಗಲ್‌ನಲ್ಲಿ ಪ್ಲಾನ್ ಮಾಡಿದ ನಿರೂಪಣೆಯನ್ನು ನಿಜ ಮಾಡಲು ಸಿಯಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಹಾಕಿದ್ದಳು.

ನನ್ನ ಹುಟ್ಟುಹಬ್ಬದಂದೇ ನೀನು ನನ್ನನ್ನು ಬಿಟ್ಟು ಹೋದೆ, ವಾಪಸ್ ಬಾ ಎಂದು ಇಡೀ ಜಗತ್ತನ್ನು ನಂಬಿಸಲು ಕಣ್ಣೀರಿನ ನಾಟಕವಾಡಿದ್ದಳು. ಆದರೆ ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರ ಕಪಟ ಪ್ರೇಮದ ಕಥೆ ಮುಗಿದಿದ್ದು, ಇಬ್ಬರನ್ನೂ ಕೊಲೆ ಆರೋಪದಡಿ ಜೈಲಿಗಟ್ಟಲಾಗಿದೆ. ವಿಧಿವಿಜ್ಞಾನ ಹಾಗೂ ಇಂಟರ್ನೆಟ್ ದಾಖಲೆಗಳ ಹೆಚ್ಚಿನ ಪರಿಶೀಲನೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟೀಮ್ ಇಂಡಿಯಾದ 6 ಆಟಗಾರರಿಗೆ ಚೊಚ್ಚಲ ಐರಿಷ್ ಸರಣಿ! – Kannada News | The Six Indian Players Touring Ireland for the First Time

ಟಿ20 ವಿಶ್ವಕಪ್​ 2026ರ ಬಳಿಕ ಟೀಮ್ ಇಂಡಿಯಾ ಮತ್ತೆ ಚುಟುಕು ಕ್ರಿಕೆಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಬಾರಿ ಭಾರತ ತಂಡ ಕಣಕ್ಕಿಳಿಯಲಿರುವುದು ಹೊಸ ನಾಯಕ ಹಾಗೂ ಯುವ ಪಡೆಯೊಂದಿಗೆ ಎಂಬುದು ವಿಶೇಷ. ಇನ್ನು ಟೀಮ್ ಇಂಡಿಯಾದ ಎದುರಾಳಿ ಐರ್ಲೆಂಡ್.

ಜೂನ್ 26 ರಿಂದ ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆಯಾಗಿರುವ 16 ಸದಸ್ಯರ ಭಾರತ ತಂಡದಲ್ಲಿ, ಬರೋಬ್ಬರಿ ಆರು ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಐರ್ಲೆಂಡ್‌ನಲ್ಲಿ ಪಂದ್ಯವಾಡಲು ಸಜ್ಜಾಗಿದ್ದಾರೆ.  ಅಂದರೆ ಇದಕ್ಕೂ ಮುನ್ನ ಈ ಆರು ಆಟಗಾರರು ಐರ್ಲೆಂಡ್​ನಲ್ಲಿ ಒಂದೇ ಪಂದು ಪಂದ್ಯವಾಡಿಲ್ಲ. ಅವರೆಂದರೆ…

ಶ್ರೇಯಸ್ ಅಯ್ಯರ್ (ನಾಯಕ): ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಅಪಾರ ಅಂತಾರಾಷ್ಟ್ರೀಯ ಅನುಭವವಿದೆ. ಆದರೆ, ಅವರು ಇದುವರೆಗೆ ಐರ್ಲೆಂಡ್‌ನಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಇದೀಗ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಲು ಸಜ್ಜಾಗಿ ನಿಂತಿದ್ದಾರೆ.

ವೈಭವ್ ಸೂರ್ಯವಂಶಿ: ಐಪಿಎಲ್ 2026ರಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇಡೀ ವಿಶ್ವದ ಗಮನ ಸೆಳೆದಿದ್ದ 15 ವರ್ಷ ಬ್ಯಾಟಿಂಗ್ ವಿಸ್ಮಯ ವೈಭವ್ ಸೂರ್ಯವಂಶಿ ಕೂಡ ಇದೇ ಮೊದಲ ಬಾರಿಗೆ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.

ಅಭಿಷೇಕ್ ಶರ್ಮಾ: ಭಾರತದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರಿಗೂ ಇದು ಮೊದಲ ಐರ್ಲೆಂಡ್ ಪ್ರವಾಸವಾಗಿದೆ.

ಹರ್ಷಿತ್ ರಾಣಾ: ಭಾರತ ತಂಡದ ಉದಯೋನ್ಮುಖ ವೇಗದ ಬೌಲರ್ ಹರ್ಷಿತ್ ರಾಣಾ ಐರಿಷ್ ಪರಿಸ್ಥಿತಿಯಲ್ಲಿ ಮೊದಲ ಬಾರಿಗೆ ತಮ್ಮ ಬೌಲಿಂಗ್ ಪ್ರದರ್ಶಿಸಲು ಕಾಯುತ್ತಿದ್ದಾರೆ.

ಪ್ರಿನ್ಸ್ ಯಾದವ್: ದೇಶಿ ಕ್ರಿಕೆಟ್‌ನಲ್ಲಿ ಮಿಂಚಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಅನ್‌ಕ್ಯಾಪ್ಡ್ ವೇಗಿ ಪ್ರಿನ್ಸ್ ಯಾದವ್ ಅವರಿಗೂ ಇದು ಮೊದಲ ಐರ್ಲೆಂಡ್ ಸರಣಿ.

ಸೂರ್ಯಾಂಶ್ ಶೆಡ್ಗೆ: ಗಾಯಾಳು ನಿತೀಶ್ ಕುಮಾರ್ ರೆಡ್ಡಿ ಬದಲಿಯಾಗಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಆಲ್ ರೌಂಡರ್ ಸೂರ್ಯಾಂಶ್ ಶೆಡ್ಗೆ ಅವರಿಗೂ ಇದು ಚೊಚ್ಚಲ ಐರ್ಲೆಂಡ್‌ ಪ್ರವಾಸ.

ಇನ್ನುಳಿದಂತೆ ಪ್ರಸ್ತುತ ತಂಡದಲ್ಲಿರುವ ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಪ್ರಸಿದ್ಧ್ ಕೃಷ್ಣ ಈಗಾಗಲೇ ಐರ್ಲೆಂಡ್ ವಿರುದ್ಧ ಆಡಿದ್ದಾರೆ.

ಇದನ್ನೂ ಓದಿ: IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು

ಭಾರತ ಟಿ20 ತಂಡ:  ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

Published On – 2:18 pm, Wed, 24 June 26

Source link

Exit mobile version