‘ಪೆದ್ದಿ’ ಚಿತ್ರತಂಡದಿಂದ ಅಂತರ ಕಾಯ್ದುಕೊಂಡ ಜಾನ್ಹವಿ – Kannada News | Janhvi Kapoor stayed away from Peddi movie success event

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು, ಇದೀಗ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಯಶಸ್ಸು ಗಳಿಸಿದೆ. ಆದರೆ ಸಿನಿಮಾ ಬಿಡುಗಡೆ ಆದಾಗ ಸಿನಿಮಾನಲ್ಲಿ ನಟಿ ಜಾನ್ಹವಿ ಕಪೂರ್ ಅವರನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ವಿವಾದ ಎದ್ದಿತ್ತು. ಅತಿಯಾದ ಗ್ಲಾಮರಸ್ ಆಗಿ ನಟಿಯನ್ನು ತೆರೆಯ ಮೇಲೆ ತೋರಿಸಲಾಗಿತ್ತು. ಖುದ್ದು ಜಾನ್ಹವಿ ಕಪೂರ್ ಸಹ ಈ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಬಳಿಕ, ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೇಳಿ, ಜಾನ್ಹವಿಯ ದೃಶ್ಯಗಳನ್ನು ಡಿಲೀಟ್ ಮಾಡಿದರು.

ಆದರೆ ಈ ವಿವಾದದಿಂದ ಜಾನ್ಹವಿ ಕಪೂರ್ ಹಾಗೂ ‘ಪೆದ್ದಿ’ ಚಿತ್ರತಂಡದ ನಡುವೆ ಮನಸ್ತಾಪ ಏರ್ಪಟ್ಟಿದೆ. ನಿನ್ನೆಯಷ್ಟೆ ‘ಪೆದ್ದಿ’ ಸಿನಿಮಾದ ಅದ್ಧೂರಿ ಸಕ್ಸಸ್ ಪಾರ್ಟಿ ನಡೆಯಿತು. ಆದರೆ ಈ ಕಾರ್ಯಕ್ರಮಕ್ಕೆ ನಟಿ ಜಾನ್ಹವಿ ಕಪೂರ್ ಗೈರಾಗಿದ್ದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಬುಚ್ಚಿಬಾಬು, ನಟ ರಾಮ್ ಚರಣ್, ಅತಿಥಿಗಳಾಗಿ ಮೆಗಾಸ್ಟಾರ್ ಚಿರಂಜೀವಿ, ನಿರ್ದೇಶಕ ಸುಕುಮಾರ್ ಅವರುಗಳು ಭಾಗವಹಿಸಿದ್ದರು. ಆದರೆ ಜಾನ್ಹವಿ ಕಪೂರ್ ಗೈರಾಗಿದ್ದರು.

ಇದನ್ನೂ ಓದಿ:ನಿರ್ಮಾಪಕರಿಗೆ ಹೇಳದೆ ‘ಪೆದ್ದಿ’ ಆದಾಯ ಹಂಚಿಕೆ: ದೂರು ದಾಖಲು

ಅದು ಮಾತ್ರವೇ ಅಲ್ಲದೆ, ವೇದಿಕೆ ಮೇಲೆ ಮಾತನಾಡಿದ ಹಲವರು ನಟಿ ಜಾನ್ಹವಿ ಕಪೂರ್ ಅವರ ಹೆಸರನ್ನು ಸಹ ಹೇಳಲಿಲ್ಲ. ಉದ್ದೇಶಪೂರ್ವಕವಾಗಿ ಚಿತ್ರತಂಡ ಸಹ ಜಾನ್ಹವಿ ಕಪೂರ್ ಅವರನ್ನು ಉಪೇಕ್ಷಿಸಿತು. ಜಾನ್ಹವಿ ಕಪೂರ್ ಹಾಗೂ ‘ಪೆದ್ದಿ’ ಚಿತ್ರತಂಡದ ನಡುವೆ ಉಂಟಾಗಿರುವ ಮನಸ್ತಾಪವನ್ನು ನಿನ್ನೆಯ ಕಾರ್ಯಕ್ರಮ ಜಗಜ್ಜಾಹೀರು ಮಾಡಿದೆ.

ಜಾನ್ಹವಿ ಕಪೂರ್ ಅವರು ‘ಪೆದ್ದಿ’ ಸಿನಿಮಾನಲ್ಲಿ ಅಚ್ಚಿಯಮ್ಮ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ನಿರ್ದೇಶಕರು ಜಾನ್ಹವಿಯ ಪಾತ್ರವನ್ನು ಕೇವಲ ಗ್ಲಾಮರ್​​ಗಾಗಿ ಮಾತ್ರ ಬಳಸಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಜಾನ್ಹವಿ ಕಪೂರ್ ಪರದೆಯ ಮೇಲೆ ಕಾಣಿಸಿಕೊಂಡಾಗೆಲ್ಲ, ನಿರ್ದೇಶಕರು ಕ್ಯಾಮೆರಾ ಅನ್ನು ನಟಿಯ ಎದೆ ಮತ್ತು ಸೊಂಟದ ಕಡೆಗೆ ತಿರುಗಿಸಿದ್ದರು. ಜಾನ್ಹವಿಯ ಪಾತ್ರಕ್ಕೆ ಧರಿಸಿರುವ ಬಟ್ಟೆಗಳು ಸಹ ಅತ್ಯಂತ ರಿವೀಲಿಂಗ್ ಆಗಿದ್ದವು. ವಿವಾದ ಉಂಟಾದ ಬಳಿಕ ನಿರ್ದೇಶಕ ಬುಚ್ಚಿಬಾಬು ಸನಾ, ಕ್ಷಮೆ ಕೇಳಿ, ಜಾನ್ಹವಿಯ ಗ್ಲಾಮರಸ್ ದೃಶ್ಯಗಳನ್ನು ಡಿಲೀಟ್ ಮಾಡಿ, ಸಿನಿಮಾ ಮರು ಬಿಡುಗಡೆ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ – Kannada News | Monitor Lizard in Kollegal Printing Press: Snake Babu Rescues Wild Reptile

ಕೊಳ್ಳೇಗಾಲ, ಜೂ.24: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದ ಅಪರೂಪದ ಅತಿಥಿಯೊಂದು ಪ್ರಿಂಟಿಂಗ್ ಪ್ರೆಸ್ ಒಳಗೆ ಪ್ರತ್ಯಕ್ಷವಾಗಿ ಕೆಲಕಾಲ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ ಘಟನೆ ನಡೆದಿದೆ. ಪಟ್ಟಣದ ಹಳೇ ನಗರಸಭೆ ರಸ್ತೆಯಲ್ಲಿರುವ ಬಾಬು (ರವಿಬಾಬು) ಎಂಬುವರ ಒಡೆತನದ ಪ್ರಿಂಟಿಂಗ್ ಪ್ರೆಸ್ ಅಂಗಡಿಗೆ ಬೃಹತ್ ಉಡವೊಂದು (Monitor Lizard) ನುಗ್ಗಿದ್ದು, ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಂಗಡಿ ಮಾಲೀಕರು ಮಧ್ಯಾಹ್ನ ಪ್ರಿಂಟಿಂಗ್ ಪ್ರೆಸ್‌ನ ಬಾಗಿಲು ಹಾಕಿಕೊಂಡು ಊಟಕ್ಕಾಗಿ ಮನೆಗೆ ತೆರಳಿದ್ದರು. ಬಳಿಕ ವಾಪಸ್ ಬಂದು ಅಂಗಡಿಯ ಬಾಗಿಲು ತೆರೆದಾಗ ಒಳಗೆ ಬೃಹತ್ ಗಾತ್ರದ ಉಡವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮಾಲೀಕರು ತಕ್ಷಣವೇ ಜಾಣ್ಮೆ ಪ್ರದರ್ಶಿಸಿ ಮತ್ತೆ ಅಂಗಡಿಯ ಬಾಗಿಲನ್ನು ಮುಚ್ಚಿ, ಸ್ಥಳೀಯ ಉರಗ ರಕ್ಷಕ ಹಾಗೂ ವನ್ಯಜೀವಿ ಪ್ರೇಮಿ ‘ಸ್ನೇಕ್ ಬಾಬು’ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಬಾಬು, ಅಂಗಡಿಯ ಒಳಗಡೆ ಅಡಗಿಕುಳಿತಿದ್ದ ಉಡವನ್ನು ಹಿಡಿಯಲು ಸತತ ಪ್ರಯತ್ನ ನಡೆಸಿದರು. ಪ್ರಿಂಟಿಂಗ್ ಯಂತ್ರಗಳ ನಡುವೆ ಸಿಲುಕಿದ್ದ ಉಡಕ್ಕೆ ಯಾವುದೇ ರೀತಿಯ ಗಾಯ ಅಥವಾ ತೊಂದರೆಯಾಗದಂತೆ ಅತ್ಯಂತ ಜಾಗರೂಕತೆಯಿಂದ ಹಿಡಿದು ಗೋಣಿಚೀಲದಲ್ಲಿ ಸಂರಕ್ಷಿಸುವಲ್ಲಿ ಯಶಸ್ವಿಯಾದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಎಷ್ಟು ಕೋಟಿ ಹೇಳಿ… ಹಾರ್ದಿಕ್ ಪಾಂಡ್ಯ ಖರೀದಿಗೆ KKR..! – Kannada News | KKR management has approached Mumbai Indians for Hardik Pandya

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನವೇ ಮತ್ತೊಂದು ಬಿಗ್ ಟ್ರೇಡ್ ನಡೆಯುವ ಸಾಧ್ಯತೆಯಿದೆ. ಈ ಬಾರಿ ಟ್ರೇಡ್ ನಡೆಯಲಿರುವುದು ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಮುಂಬೈ ಇಂಡಿಯನ್ಸ್ ನಡುವೆ. ಅದು ಕೂಡ ಹಾರ್ದಿಕ್ ಪಾಂಡ್ಯಗಾಗಿ..!

ಅಂದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಆಸಕ್ತಿ ತೋರಿದೆ.  ಅಲ್ಲದೆ ಈ ಕುರಿತು ಕೆಕೆಆರ್ ಆಡಳಿತ ಮಂಡಳಿಯು ಈಗಾಗಲೇ ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ಆರಂಭಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಕೋಲ್ಕತಾ ನೈಟ್ ರೈಡರ್ಸ್ ತಂಡವು ಹಾರ್ದಿಕ್ ಪಾಂಡ್ಯಗೆ ಕೇವಲ ದೊಡ್ಡ ಮೊತ್ತದ ಆಫರ್ ಮಾತ್ರ ನೀಡಿಲ್ಲ, ಬದಲಿಗೆ ತಂಡದ ದೀರ್ಘಕಾಲದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಆಮಿಷ ಒಡ್ಡಿದೆ ಎಂದು ತಿಳಿದು ಬಂದಿದೆ.

ಅಂದರೆ ಐಪಿಎಲ್ 2027ರ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯರನ್ನು ಖರೀದಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನನ್ನಾಗಿ ಮಾಡಲು ಕೆಕೆಆರ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಕೆಕೆಆರ್ ಎರಡು ಆಯ್ಕೆಗಳನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮುಂದಿಟ್ಟಿದ್ದಾರೆ.

  • ಕ್ಯಾಶ್ ಡೀಲ್: ಹಾರ್ದಿಕ್ ಪಾಂಡ್ಯರನ್ನು ಎಷ್ಟಕ್ಕೆ ಮಾರಾಟ ಮಾಡುತ್ತೀರಾ? ಎಂಬ ಪ್ರಶ್ನೆಯನ್ನು ಕೆಕೆಆರ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ನ ಮುಂದಿಟ್ಟಿದ್ದಾರೆ. ಅಂದರೆ ಮುಂಬೈ ಇಂಡಿಯನ್ಸ್ ಹೇಳುವ ಮೊತ್ತ ನೀಡಿ ಪಾಂಡ್ಯರನ್ನು ಖರೀದಿಸಲು ಕೆಕೆಆರ್ ಮುಂದಾಗಲಿದೆ.
  • ಸ್ವಾಪ್ ಡೀಲ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿರುವ ಕ್ಯಾಮರೋನ್ ಗ್ರೀನ್ ಅವರನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕೂಡ ಕೆಕೆಆರ್ ರೆಡಿ ಇದೆ ಎಂದು ತಿಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಬೇಡಿಕೆ ಏನು?

ಹಾರ್ದಿಕ್ ಪಾಂಡ್ಯ ಬದಲಿಗೆ ಕೆಕೆಆರ್ ತಂಡದಿಂದ ಹರ್ಷಿತ್ ರಾಣಾ, ಆಂಗ್​ಕ್ರಿಶ್ ರಘುವಂಶಿ, ರಮಣ್​ದೀಪ್ ಸಿಂಗ್ ಅವರಂತಹ ಪ್ರಮುಖ ಆಟಗಾರರನ್ನು ನೀಡುವಂತೆ ಮುಂಬೈ ಇಂಡಿಯನ್ಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಆದರೆ ಈ ಮೂವರು ಆಟಗಾರರು ಕೆಕೆಆರ್ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರು. ಹೀಗಾಗಿಯೇ ಸ್ವಾಪ್ ಡೀಲ್ ಕುದುರಲಿದೆಯಾ ಎಂಬುದೇ ಪ್ರಶ್ನೆ.

ರೇಸ್​ನಲ್ಲಿ ರಾಜಸ್ಥಾನ್ ರಾಯಲ್ಸ್:

ಒಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣಿಟ್ಟಿದ್ದರೆ, ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ತೆರೆಮರೆಯ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಇದನ್ನೂ ಓದಿ: IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು

ಪ್ರಸ್ತುತ ಮಾಹಿತಿ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಯಶಸ್ವಿ ಜೈಸ್ವಾಲ್ ಅವರನ್ನುನೀಡಿ, ಹಾರ್ದಿಕ್‌ ಪಾಂಡ್ಯರನ್ನು ಪಡೆಯಲು ಚಿಂತನೆ ನಡೆಸುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಮುಂದಿನ ಸೀಸನ್​ನಲ್ಲಿ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದೇ ಈಗ ದೊಡ್ಡ ಕುತೂಹಲವಾಗಿ ಮಾರ್ಪಟ್ಟಿದೆ.

Source link

ಜೀನಿಯಸ್ ರೂಪದಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಬರೆದಿದ್ದ ಹಂಸಲೇಖ – Kannada News | How Hamsalekha write Akasmika’s ‘Huttidare Kannada’: The Iconic Song’s written

ಕನ್ನಡ ನೆಲ, ಜಲ ಹಾಗೂ ಭಾಷೆಯ ಹಿರಿಮೆಯನ್ನು ಸಾರುವ ನೂರಾರು ಗೀತೆಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಆದರೆ, ಡಾ. ರಾಜ್‌ಕುಮಾರ್ ಅಭಿನಯದ ‘ಆಕಸ್ಮಿಕ’ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಹಾಡಿಗೆ ಇರುವ ಕ್ರೇಜ್ ಹಾಗೂ ಗೌರವವೇ ಬೇರೆ. ಕನ್ನಡಿಗರ ಪಾಲಿಗೆ ಇದು ಕೇವಲ ಒಂದು ಸಿನಿಮಾದ ಹಾಡಲ್ಲ, ಇದೊಂದು ಅನಧಿಕೃತ ನಾಡಗೀತೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸ ಬರೆದ ಈ ಕಲ್ಟ್ ಹಾಡು ಮೊದಲು ಸಿನಿಮಾದ ಕಥೆಯಲ್ಲೇ ಇರಲಿಲ್ಲ ಎಂಬ ಅಚ್ಚರಿಯ ಸಂಗತಿ ನಿಮಗೆ ಗೊತ್ತೇ?

  • ಹಂಸಲೇಖ ಕಲ್ಪನೆಯಲ್ಲಿ ಮೂಡಿತ್ತು ‘ಹುಟ್ಟಿದರೆ ಕನ್ನಡ ನಾಡಲಿ’ ಹಾಡು
  • ಸಾಹಿತ್ಯದ ಪುಸ್ತಕಗಳನ್ನು ಓದಲು ನಿರಾಕರಿಸಿದ್ದ ಹಂಸಲೇಖ
  • ಡಿವಿಜಿ ಕಗ್ಗದಿಂದ ಪ್ರೇರಣೆಗೊಂಡು ಸಾಲುಗಳನ್ನು ಬರೆದರು

ಹೌದು, ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ‘ಆಕಸ್ಮಿಕ’ ಚಿತ್ರದ ಚಿತ್ರಕಥೆ ಸಿದ್ಧಪಡಿಸಿ ಅಣ್ಣಾವ್ರ ಮುಂದೆ ವಿವರಿಸಿದಾಗ ಆ ಸನ್ನಿವೇಶದಲ್ಲಿ ಯಾವುದೇ ಹಾಡಿನ ಪ್ಲ್ಯಾನ್ ಇರಲಿಲ್ಲವಂತೆ. ಆದರೆ ಚಿತ್ರಕಥೆಯ ಜೀನಿಯಸ್ ಒಬ್ಬರ ಮಾಸ್ಟರ್ ಐಡಿಯಾದಿಂದಾಗಿ ಈ ಹಾಡು ಜನ್ಮತಾಳಿತು.

ಕ್ಲೈಮ್ಯಾಕ್ಸ್ ಟ್ವಿಸ್ಟ್ ಬೇಡ ಎಂದಿದ್ದ ನಾಗಾಭರಣ!

ನಾಗಾಭರಣ ಅವರು ಸಿನಿಮಾದ ಸಂಪೂರ್ಣ ಕಥೆಯನ್ನು ಡಾ. ರಾಜ್‌ಕುಮಾರ್ ಅವರ ಸಹೋದರ ವರದಣ್ಣ ಅವರಿಗೆ ವಿವರಿಸಿದಾಗ, ಕಥೆಯ ಆ ನಿರ್ದಿಷ್ಟ ಜಾಗದಲ್ಲಿ ಒಂದು ಹಾಡಿದ್ದರೆ ಚೆನ್ನಾಗಿರುತ್ತದೆ ಎಂದು ವರದಣ್ಣ ಸಲಹೆ ನೀಡಿದರು. ಆದರೆ ನಾಗಾಭರಣ ಅವರಿಗೆ ಈ ಆಲೋಚನೆ ಇಷ್ಟವಾಗಲಿಲ್ಲ. ‘ಚಿತ್ರವು ಕ್ಲೈಮ್ಯಾಕ್ಸ್ ಹಂತ ತಲುಪಿರುವಾಗ ಹಾಡೊಂದನ್ನು ತೂರಿಸಿದರೆ ಸಿನಿಮಾದ ರೋಚಕತೆ ಕಮ್ಮಿಯಾಗುತ್ತದೆ, ಪ್ರೇಕ್ಷಕರ ಗಮನ ಬೇರೆಡೆಗೆ ಸರಿಯುತ್ತದೆ’ ಎಂಬುದು ನಿರ್ದೇಶಕರ ವಾದವಾಗಿತ್ತು.

ಆದರೆ ವರದಣ್ಣ ಅವರ ಯೋಚನೆಯೇ ಬೇರೆಯಾಗಿತ್ತು. ‘ನಮಗೆ ಬೇಕಿರುವುದೂ ಅದೇ! ಪ್ರೇಕ್ಷಕ ಕಥೆಯ ಗಂಭೀರತೆಯನ್ನು ಮರೆತು ಹಾಡಿನ ಮಜಾದಲ್ಲಿ ತೇಲಬೇಕು. ಹಾಡು ಮುಗಿಯುತ್ತಿದ್ದಂತೆಯೇ ದಿಢೀರ್ ಅಂತ ಒಂದು ಶಾಕ್ ಕೊಟ್ಟು ಮತ್ತೆ ಅವನನ್ನು ಕಥೆಯೊಳಗೆ ಎಳೆದುಕೊಂಡು ಬರಬೇಕು. ಇದು ಚಿತ್ರಕ್ಕೆ ದೊಡ್ಡ ಪ್ಲಸ್ ಆಗುತ್ತದೆ’ ಎಂದು ಮನವರಿಕೆ ಮಾಡಿಕೊಟ್ಟರು. ವರದಣ್ಣ ಅವರ ಈ ವಿಭಿನ್ನ ಆಲೋಚನೆಗೆ ನಾಗಾಭರಣ ಕೊನೆಗೂ ಒಪ್ಪಿಗೆ ಸೂಚಿಸಿದರು.

ಕುವೆಂಪು ಪುಸ್ತಕ ಬೇಡ ಎಂದಿದ್ದ ನಾದಬ್ರಹ್ಮ!

ಯಾವ ತರಹದ ಹಾಡು ಬೇಕು ಎಂದು ಚರ್ಚೆ ನಡೆದಾಗ, ಅಣ್ಣಾವ್ರು ಕನ್ನಡದ ಹಿರಿಮೆ ಸಾರುವ ಸಾಲುಗಳನ್ನು ಹಾಡಿ ಬಹಳ ದಿನಗಳಾಗಿವೆ, ಹಾಗಾಗಿ ಕನ್ನಡದ ಕುರಿತೇ ಹಾಡು ಮಾಡೋಣ ಎಂದು ವರದಣ್ಣ ಐಡಿಯಾ ಕೊಟ್ಟರು. ತಕ್ಷಣವೇ ನಾಗಾಭರಣ ಅವರು ರೆಫರೆನ್ಸ್‌ಗಾಗಿ ಕುವೆಂಪು ಸೇರಿದಂತೆ ಪ್ರಸಿದ್ಧ ಸಾಹಿತಿಗಳ ಕವನ ಸಂಕಲನಗಳನ್ನು ತಂದು ಹಂಸಲೇಖ ಅವರ ಕೈಗಿಟ್ಟರು. ಆದರೆ ಹಂಸಲೇಖ ಅವರು, “ನನಗೆ ಇಷ್ಟೊಂದು ಪುಸ್ತಕಗಳನ್ನು ಓದಲು ಸಮಯವಿಲ್ಲ, ಇವೆಲ್ಲವನ್ನೂ ವಾಪಸ್ ತಗೊಂಡು ಹೋಗಿ” ಎಂದು ಬೇಸರ ಮಾಡಿಕೊಂಡರಂತೆ!

ಡಿವಿಜಿಯವರ ಸಾಲಿನಿಂದ ಹುಟ್ಟಿತು ಮಹಾಕಾವ್ಯ!

ಪುಸ್ತಕಗಳನ್ನು ಬದಿಗಿಟ್ಟ ಹಂಸಲೇಖ ಅವರು ಡಿ.ವಿ. ಗುಂಡಪ್ಪ (ಡಿವಿಜಿ) ಅವರ ಮಂಕುತಿಮ್ಮನ ಕಗ್ಗದ “ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ” ಎಂಬ ಸಾಲಿನಿಂದ ಪ್ರೇರಣೆ ಪಡೆದುಕೊಂಡರು. ಅದನ್ನೇ ಕೊಂಚ ಬದಲಾಯಿಸಿ “ಬದುಕಿದು ಜಟಕಾ ಬಂಡಿ, ವಿಧಿ ಓಡಿಸುವಾ ಬಂಡಿ” ಎಂದು ಸಾಲುಗಳನ್ನು ಹೊಸದಾಗಿ ಹೆಣೆದು ಅಣ್ಣಾವ್ರ ಮನೆಗೆ ಹೋಗಿ ಹಾಡಿ ತೋರಿಸಿದರು.

ಇದನ್ನೂ ಓದಿ: ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು

ಹಾಡಿನ ಸಾಲುಗಳ ಬಗ್ಗೆ ಚರ್ಚೆ ಮುಂದುವರಿದಾಗ, ಹಂಸಲೇಖ ಅವರ ಕಲ್ಪನೆಯಲ್ಲಿ ಮೂಡಿದ್ದೇ “ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು” ಎಂಬ ಅಮರ ಸಾಲು. ಇದನ್ನೇ ಹಾಡಿನ ಪಲ್ಲವಿಯನ್ನಾಗಿ ಮಾಡಲು ಇಡೀ ತಂಡ ಒಪ್ಪಿಕೊಂಡಿತು. ಅಲ್ಲಿಂದ ಮುಂದೆ ಹಂಸಲೇಖ ಅವರು ಬರೆದ ಪ್ರತಿಯೊಂದು ಸಾಲುಗಳು ಇಂದಿಗೂ ಕೋಟ್ಯಂತರ ಕನ್ನಡಿಗರ ರಕ್ತದಲ್ಲಿ ದೇಶಾಭಿಮಾನದ ಕಿಚ್ಚು ಹೊತ್ತಿಸುತ್ತಿವೆ. ಇಬ್ಬರು ಸಿನಿಮೀಯ ಜೀನಿಯಸ್‌ಗಳ ದೂರದೃಷ್ಟಿಯಿಂದ ಮೂಡಿಬಂದ ಈ ಹಾಡು ಇಂದಿಗೂ ಮರೆಯಲಾಗದ ಇತಿಹಾಸ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ ನಾಯಕರ ಮೇಲೆನೇ ಆಗೋದು ಇಡಿ ದಾಳಿ: ನನ್ನ ಮೇಲೂ ಆಗಬಹುದು ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ – Kannada News | Only Congress Leaders Are Targeted by ED, I Might Be Next: Minister Priyank Kharge Slams Central Agencies

ಬೆಂಗಳೂರು, ಜೂನ್ 24: ಜಾರಿ ನಿರ್ದೇಶನಾಲಯ ದಾಳಿಗಳ ಸ್ವರೂಪ ಮತ್ತು ಅವುಗಳ ರಾಜಕೀಯ ಉದ್ದೇಶಗಳ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ಸಾವಿರಾರು ಇಡಿ ದಾಳಿಗಳು ನಡೆದಿವೆ. ಆದರೆ, ಈ ದಾಳಿಗಳಲ್ಲಿ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಶೇಕಡಾ 2 ಕ್ಕಿಂತಲೂ ಕಡಿಮೆ, ಅಂದರೆ ಶೇಕಡಾ 1.5 ಕ್ಕಿಂತಲೂ ಕಡಿಮೆ ಇದೆ. ಈ ಅಂಕಿಅಂಶಗಳು ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯಾವಾಗ ಬೇಕೋ ಆವಾಗ ಛೂ ಬಿಡ್ತಾರೆ ಎಂದು ಕೇಂದ್ರ ಸಂಸ್ಥೆಗಳ ಕಾರ್ಯವೈಖರಿಯನ್ನು ಖಂಡಿಸಿದ ಖರ್ಗೆ, ತಮ್ಮ ಮೇಲೂ ಇಡಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇವತ್ತಲ್ಲ ನಾಳೆ ಅದು ಆಗಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿಕರ ಮನೆ ಮೇಲೆ ಇಡಿ ದಾಳಿಯಾದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಷಾ ಹಂಚಿಕೊಂಡಿದ್ದು ಹಳೆಯ ಫೋಟೋ? ಸಾಕ್ಷಿ ತಂದ ಫ್ಯಾನ್ಸ್ – Kannada News | Trisha’s Old Photo for Vijay’s Birthday? Fans Uncover Truth

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ ಜನ್ಮದಿನದ ಅಂಗವಾಗಿ ನಟಿ ತ್ರಿಷಾ ಕೃಷ್ಣನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಒಂದು ಫೋಟೋ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ತ್ರಿಷಾ ಅವರು ವಿಜಯ್ ಜೊತೆ ನಿಂತಿದ್ದಾರೆ. ಎದರು ಕೇಕ್ ಇದೆ. ವಿಜಯ್ ಅವರ ಬರ್ತ್‌ಡೇ ಆಚರಣೆಯ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಇತ್ತೀಚಿನ ಫೋಟೋ ಇದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕ್ಷಿ ಸಮೇತ ಈ ಫೋಟೋದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು, ನಟಿ ತ್ರಿಷಾ ಹಂಚಿಕೊಂಡಿರುವ ಫೋಟೋ ಇತ್ತೀಚಿನದ್ದಲ್ಲ, ಅದು ಹಳೆಯ ಫೋಟೋ ಎಂಬುದು ಈಗ ಸಾಬೀತಾಗಿದೆ.

  • ತ್ರಿಷಾ ಹಂಚಿಕೊಂಡ ವಿಜಯ್ ಬರ್ತ್‌ಡೇ ಫೋಟೋ ಹಳೆಯದು
  • ವಿಜಯ್ ಧರಿಸಿದ ಶರ್ಟ್ ನೋಡಿ ಸತ್ಯ ಬಿಚ್ಚಿಟ್ಟರು
  • ಹೇರ್‌ಸ್ಟೈಲ್ ಮತ್ತು ಗಡ್ಡದ ವಿನ್ಯಾಸವೂ ಒಂದೇ ರೀತಿ ಇದೆ

ತ್ರಿಷಾ ಅವರು ವಿಜಯ್ ಬರ್ತ್​​​ಡೇ ದಿನ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಮರುದಿನ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಮೂಲಕ ಜನ್ಮದಿನದ ವಿಶ್ ಮಾಡಿದ್ದರು. ತ್ರಿಷಾ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಅವರು ಕೇಕ್ ಮುಂದೆ ನಿಂತು ನಗುತ್ತಿದ್ದರೆ, ತ್ರಿಷಾ ಅವರು ವಿಜಯ್ ಅವರನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ಎಲ್ಲರೂ ಇದನ್ನು ಇತ್ತೀಚಿನ ಬರ್ತ್​​ಡೇ ಆಚರಣೆಯ ಫೋಟೋ ಎಂದೇ ನಂಬಿದ್ದರು. ಆದರೆ, ಅಭಿಮಾನಿಯೊಬ್ಬರು ಈ ಹಿಂದೆ ಹಂಚಿಕೊಂಡಿದ್ದ ಮತ್ತೊಂದು ಫೋಟೋ ಈಗ ಎಲ್ಲದಕ್ಕೂ ಉತ್ತರ ನೀಡಿದೆ.

ಅದೇ ಶರ್ಟ್, ಅದೇ ಲುಕ್:

ಅಭಿಮಾನಿಯೊಬ್ಬರು 2024ರಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಅವರು ಧರಿಸಿರುವ ಕಪ್ಪು ಮತ್ತು ಬ್ರೌನ್ ಬಣ್ಣದ ವಿನ್ಯಾಸವಿರುವ ಶರ್ಟ್ ಹಾಗೂ ತ್ರಿಷಾ ಈಗ ಹಂಚಿಕೊಂಡಿರುವ ಫೋಟೋದಲ್ಲಿರುವ ಶರ್ಟ್ ಎರಡೂ ಒಂದೇ ಆಗಿದೆ. ಕೇವಲ ಶರ್ಟ್ ಮಾತ್ರವಲ್ಲದೆ, ಎರಡು ಫೋಟೋಗಳಲ್ಲಿರುವ ವಿಜಯ್ ಅವರ ಹೇರ್‌ಸ್ಟೈಲ್ ಮತ್ತು ಗಡ್ಡದ ವಿನ್ಯಾಸವೂ ಒಂದೇ ರೀತಿ ಇದೆ.

ಇದನ್ನೂ ಓದಿ: ವಿಜಯ್-ತ್ರಿಷಾ ಮಧ್ಯೆ ಬ್ರೇಕಪ್? ನಡೆಯಿತು ಪ್ರಮುಖ ಬೆಳವಣಿಗೆ

ಈ ಎರಡು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ನೆಟ್ಟಿಗರು, ತ್ರಿಷಾ ಅವರು ವಿಜಯ್ ಬರ್ತ್​​ಡೇಗೆ ಹಂಚಿಕೊಂಡಿರುವುದು ಇತ್ತೀಚಿನ ಫೋಟೋ ಅಲ್ಲವೇ ಅಲ್ಲ, ಅದು ಹಳೆಯ ಫೋಟೋ ಎಂದು ಕನ್ಫರ್ಮ್ ಮಾಡಿದ್ದಾರೆ. ತ್ರಿಷಾ ಅವರು ವಿಜಯ್ ಅವರನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಅನ್​​​ಫಾಲೋ ಮಾಡಿರೋ ವಿಷಯ ಕೂಡ ಸಾಕಷ್ಟು ಚರ್ಚೆಗಳನ್ನು ಹುಟ್ಟಿಹಾಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

NCERT: ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ: ಕೇಸರೀಕರಣದ ಆರೋಪ! – Kannada News | Controversy Erupts Over NCERT Class 6 Kannada Textbook for Alleged Saffronisation and Lack of Regional Diversity

ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ

ಬೆಂಗಳೂರು, ಜೂನ್ 23: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) 6ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಪಠ್ಯಪುಸ್ತಕವು ಕರ್ನಾಟಕದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಸಾರ್ವಜನಿಕ ಒಕ್ಕೂಟ (PAFRE) ಮಂಗಳವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತೀವ್ರವಾಗಿ ಟೀಕಿಸಿದೆ.

ಮುಖ್ಯಾಂಶಗಳು

  • ಎನ್‌ಸಿಇಆರ್‌ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಶಿಕ್ಷಣ ತಜ್ಞರ ಆಕ್ರೋಶ.
  • ಪಠ್ಯಪುಸ್ತಕದಲ್ಲಿ ಕರ್ನಾಟಕದ ಪ್ರಾದೇಶಿಕ ಸಾಂಸ್ಕೃತಿಕ ವೈವಿಧ್ಯತೆ ಕಡೆಗಣಿಸಲಾಗಿದೆ ಎಂದು ಆರೋಪ.
  • ಮಾಂಸಾಹಾರಿ ಆಹಾರ ಪದ್ಧತಿ ನಿರ್ಲಕ್ಷಿಸಿ ಪಠ್ಯ ಕೇಸರೀಕರಣಗೊಳಿಸಲು ಯತ್ನ ನಡೆದಿದೆ ಎಂದು ಆಕ್ಷೇಪ.

ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಕಡೆಗಣನೆ

ಒಕ್ಕೂಟದ ಮುಖ್ಯ ಸಂಚಾಲಕರಾದ ಪ್ರೊ. ನಿರಂಜನಾರಾಧ್ಯ ವಿ.ಪಿ. ಅವರು ಮಾತನಾಡಿ, ಈ ಪಠ್ಯಪುಸ್ತಕದಲ್ಲಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳಿಲ್ಲ. ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಜೀವನಶೈಲಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಇಡೀ ಪಠ್ಯಪುಸ್ತಕದ ನಿರೂಪಣೆಯು ಅತ್ಯಂತ ನೀರಸವಾಗಿದ್ದು, ಕೇವಲ ಬೋಧನಾತ್ಮಕ ಧಾಟಿಯಲ್ಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ಎನ್‌ಸಿಇಆರ್‌ಟಿಯ ಕೇಸರೀಕರಣದ ಪ್ರಯತ್ನದ ಒಂದು ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪಂಪ, ಕುವೆಂಪು, ಕಾರಂತ ಮತ್ತು ಬಸವಣ್ಣನವರ ಸೌಹಾರ್ದಯುತ ಸಿದ್ಧಾಂತ ಹಾಗೂ ಚಿಂತನೆಗಳಲ್ಲಿ ಕರ್ನಾಟಕದ ಅಸ್ಮಿತೆ ಅಡಗಿದೆ. ಆದರೆ ಎನ್‌ಸಿಇಆರ್‌ಟಿ ಧರ್ಮ ಆಧಾರಿತ ರಾಜಕಾರಣವನ್ನು ಮುನ್ನೆಲೆಗೆ ತರುತ್ತಿದ್ದು, ರಾಜ್ಯದ ಸಾಂಸ್ಕೃತಿಕ ಮತ್ತು ವೈಚಾರಿಕ ಪರಂಪರೆಯನ್ನು ನಿರ್ಲಕ್ಷಿಸಿ ಪುಸ್ತಕಕ್ಕೆ ಧಾರ್ಮಿಕ ಹೆಸರು ಇಟ್ಟಿರುವುದು ಖಂಡನೀಯ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಆಹಾರ ಪದ್ಧತಿಯಲ್ಲಿ ತಾರತಮ್ಯದ ಆರೋಪ

ಪಠ್ಯಪುಸ್ತಕದಲ್ಲಿರುವ ಆರೋಗ್ಯವೇ ಭಾಗ್ಯ ಎಂಬ ಪಾಠದ ವಿರುದ್ಧವೂ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪಾಠದಲ್ಲಿ ತೋರಿಸಲಾಗಿರುವ ಆಹಾರದ ತಟ್ಟೆಯಲ್ಲಿ ಕೇವಲ ರೊಟ್ಟಿ, ಅನ್ನ, ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಮಾತ್ರ ಚಿತ್ರಿಸಲಾಗಿದೆ. ಆದರೆ ಮಾಂಸಾಹಾರಿ ಆಹಾರಗಳಾದ ಮೊಟ್ಟೆ, ಮೀನು ಮತ್ತು ಮಾಂಸವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.

ಕರ್ನಾಟಕ ಎಂದರೆ ಕೇವಲ ರಾಗಿ ಮುದ್ದೆ ಮತ್ತು ಬಸ್ಸಾರು ಮಾತ್ರವೇ? ಇಲ್ಲಿ ಕೋಟ್ಯಂತರ ಜನ ಪಾಂಡಿ ಕರಿ, ಮೀನಿನ ಸಾರು ಹಾಗೂ ಖೀಮಾ ಉಂಡೆಗಳನ್ನು ಸೇವಿಸುತ್ತಾರೆ. ಕರಾವಳಿಯ ಮಗು ತಿನ್ನುವ ಮೀನು ಅಥವಾ ಉತ್ತರ ಕರ್ನಾಟಕದ ಮಗು ತಿನ್ನುವ ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ ಎಲ್ಲಿ ಹೋಗಿದೆ? ಇದು ಉದ್ದೇಶಪೂರ್ವಕವಾಗಿ ಮಾಂಸಾಹಾರದ ಆಹಾರ ಪದ್ಧತಿಯನ್ನು ನಿರ್ಲಕ್ಷಿಸುವ ಮತ್ತು ಒಂದು ನಿರ್ದಿಷ್ಟ ಸೌರಭವನ್ನು ಹೇರುವ ಪ್ರಯತ್ನವಾಗಿದೆ ಎಂದು ಪ್ರೊ. ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶವಿಲ್ಲ; NCERT ಪಠ್ಯಪುಸ್ತಕ ವಿವಾದದ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಪಠ್ಯ ಹಿಂಪಡೆಯಲು ಆಗ್ರಹ

ಶಾಲಾ ಪಠ್ಯಪುಸ್ತಕಗಳಲ್ಲಿ ರಾಜಕೀಯ ಪ್ರೇರಿತ ಮತ್ತು ಏಕಪಕ್ಷೀಯ ವಿಷಯಗಳನ್ನು ಸೇರಿಸಿರುವುದನ್ನು PAFRE ತೀವ್ರವಾಗಿ ಖಂಡಿಸಿದೆ. ತಕ್ಷಣವೇ ಈ ವಿವಾದಾತ್ಮಕ ಕನ್ನಡ ಪಠ್ಯಪುಸ್ತಕವನ್ನು ಎನ್‌ಸಿಇಆರ್‌ಟಿ ಹಿಂಪಡೆಯಬೇಕು ಮತ್ತು ಈ ನಡೆಯ ಕುರಿತು ಸಾರ್ವಜನಿಕರಿಗೆ ಸೂಕ್ತ ವಿವರಣೆ ನೀಡಬೇಕು ಎಂದು ಒಕ್ಕೂಟವು ಕಟ್ಟುನಿಟ್ಟಾಗಿ ಆಗ್ರಹಿಸಿದೆ. ಈ ವಿವಾದವು ಮುಂಬರುವ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಚಿರತೆ ದಾಳಿ: ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಬದುಕಿದ್ದೇ ಪವಾಡ! – Kannada News | Miraculous Escape: Tribal Woman Survives Sudden Leopard Attack in Chamarajanagar; Villagers Slam Forest Officials

ಚಾಮರಾಜನಗರ, ಜೂನ್​​ 24: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಕಾಡಂಚಿನ ಗ್ರಾಮಗಳ ಜನರ ಬದುಕೇ ದುಸ್ತರವಾಗಿ ಮಾರ್ಪಟ್ಟಿದೆ. ಜನವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ವನ್ಯ ಜೀವಿಗಳು ಲಗ್ಗೆ ಇಡುತ್ತಿರವ ಕಾರಣಕ್ಕೆ ಜೀವ ಭಯದಲ್ಲಿಯೇ ಜನ ಬದುಕುವಂತಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ಆನೆಹೊಲ ಹಾಡಿಯಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಕುರಿ ಮೇಯಿಸುತ್ತಿದ್ದ ಆದಿವಾಸಿ ಮಹಿಳೆ ಪವಾಡ ಎಂಬಂತೆ ಜೀವ ಉಳಿಸಿಕೊಂಡಿದ್ದಾಳೆ.

ಕಳೆದ 6 ತಿಂಗಳಿಂದ ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿವೆ. ಘಟನೆಗಳಿಂದ ಹಾಡಿಯ ನಿವಾಸಿಗಳು ಮತ್ತು ಮಾದಪ್ಪನ ಭಕ್ತರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ; ಹೋಮ್ ಗಾರ್ಡ್ ಕಾರು ಜಖಂ, ಅಂಗಡಿ ಪುಡಿ!

ಅರಣ್ಯ ಸಿಬ್ಬಂದಿಗೆ ಚೆಲ್ಲಾಟ ಆದಿವಾಸಿ ಸೋಲಿಗರಿಗೆ ಪ್ರಾಣ ಸಂಕಟ!

ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ಕೂಡ ಕೇಳಿಬಂದಿದೆ. ಬೇರೆಡೆ ಸೆರೆ ಹಿಡಿದ ಚಿರತೆಯನ್ನ ಪಾಲಾರ್ ಕಾಡಿಗೆ ತಂದು ಬಿಡಲಾಗುತ್ತಿದೆ. ಮಾದಪ್ಪನ ಬೆಟ್ಟದಲ್ಲಿ ಪಾದಯಾತ್ರಿಯನ್ನ ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಸೆರೆ ಹಿಡಿದು ಕಾಲರ್ ಐಡಿ ಅಳವಡಿಸಿದ್ದ ಅರಣ್ಯ ಸಿಬ್ಬಂದಿ ಅದನ್ನು ಮತ್ತೆ ಪಾಲಾರ್ ಹಾಗೂ ಪೊನ್ನಾಚಿ ಕಾಡಿನ ಮಧ್ಯೆ ಬಿಟ್ಟಿದ್ದರು. ಇದೇ ಕಾಡು ಪ್ರದೇಶದಲ್ಲಿ ಹಾಡಿಗಳಿದ್ದು, ಹಸು, ಮೇಕೆ ಹಾಗೂ ಜಾನುವಾರುಗಳ ಮೇಲೆ ಪದೇ ಪದೆ ಚಿರತೆ ದಾಳಿ ನಡೆಯುತ್ತಿದೆ. ಪೊನ್ನಾಚಿ ಬಳಿಯ ಕಕ್ಕೆ ಹೊಲ ಗ್ರಾಮದ ಇಟ್ಟಿದ್ದ ಪಂಜರಕ್ಕೆ ಬಿದ್ದ ಚಿರತೆ ಕತ್ತಿನಲ್ಲಿಯೂ ಕಾಲರ್ ಐಡಿ ಪತ್ತೆಯಾಗಿರೋದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಂಚ್ ಬ್ರೇಕ್‌ 1 ನಿಮಿಷ ತಡವಾದ್ರೂ 1 ಗಂಟೆ ಎಕ್ಸ್​​ಟ್ರಾ ಕೆಲಸ ಮಾಡ್ಬೇಕು; ವೈರಲ್ ಆಗುತ್ತಿದೆ ಕಂಪನಿ ರೂಲ್ಸ್ – Kannada News | Viral Office Rule: 1 Min Late Lunch, 1 Hour Unpaid Work Sparks Outrage

ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡ ಮತ್ತು ವಿಲಕ್ಷಣ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ಒಂದು ಆಘಾತಕಾರಿ ಮತ್ತು ವಿಚಿತ್ರವಾದ ಕಚೇರಿ ನಿಯಮದ (New Office Rule) ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. “ನಿಮ್ಮ ಲಂಚ್ ಬ್ರೇಕ್ ನಿಗದಿತ ಸಮಯಕ್ಕಿಂತ ಕೇವಲ ಒಂದು ನಿಮಿಷ ಹೆಚ್ಚಾದರೂ, ನೀವು ಕಂಪನಿಗೆ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿಕೊಡಬೇಕು” ಎಂಬ ನಿಯಮ ಉದ್ಯೋಗಿಗಳನ್ನು ಬೆಚ್ಚಿಬೀಳಿಸಿದೆ.

ನೋಟಿಸ್‌ನಲ್ಲಿ ಏನಿದೆ? ಉದ್ಯೋಗಿಗಳಿಗೆ ಮ್ಯಾನೇಜ್‌ಮೆಂಟ್ ವಾರ್ನಿಂಗ್!

@NalinisKitchen ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​ ನಲ್ಲಿ “ಹೊಸ ಆಫೀಸ್ ನಿಯಮ: ನಿಮ್ಮ ಲಂಚ್ ಬ್ರೇಕ್ ನಿಗದಿಪಡಿಸಿದ 30 ನಿಮಿಷಗಳಿಗಿಂತ 1 ನಿಮಿಷ ಹೆಚ್ಚಾದರೂ ಸಹ, ನೀವು ಸಂಜೆ 6 ಗಂಟೆಯ ನಂತರ ಕಂಪನಿಗೆ 60 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉಚಿತವಾಗಿ (Unpaid Focus Time) ಕೆಲಸ ಮಾಡಬೇಕಾಗುತ್ತದೆ” ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, ಉದ್ಯೋಗಿಗಳಿಗೆ ಅರ್ಥವಾಗುವಂತೆ ಒಂದು ಉದಾಹರಣೆಯನ್ನೂ ನೀಡಲಾಗಿದ್ದು, “ಒಂದು ವೇಳೆ ನೀವು 31 ನಿಮಿಷಗಳ ಕಾಲ ಊಟದ ವಿರಾಮ ತಗೆದುಕೊಂಡರೆ, ನೀವು ಸಂಜೆ 7 ಗಂಟೆಗೆ ಕಚೇರಿಯಿಂದ ಹೊರಡಬೇಕಾಗುತ್ತದೆ. ಬೇಗ ಊಟ ಮಾಡಿ (Eat Faster)” ಎಂದು ಮ್ಯಾನೇಜ್‌ಮೆಂಟ್ ಪರವಾಗಿ ‘ಪ್ರತಿಕ್ ಶೆಟ್ಟಿ’ ಎಂಬುವವರು ಸಹಿ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ನೆಟ್ಟಿಗರ ಆಕ್ರೋಶ; ಇದು ಆಫೀಸಾ ಅಥವಾ ಜೈಲಾ?

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳು ಕಂಪನಿಯ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇದು ಕಚೇರಿಯೋ ಅಥವಾ ಜೈಲೋ? ಊಟ ಮಾಡಲು ಕೇವಲ 30 ನಿಮಿಷ ನೀಡುವುದೇ ತಪ್ಪು, ಅದರಲ್ಲೂ 1 ನಿಮಿಷ ತಡವಾದರೆ 1 ಗಂಟೆ ಸಂಬಳವಿಲ್ಲದೆ ಕೆಲಸ ಮಾಡಿಸಿಕೊಳ್ಳುವುದು ಯಾವ ನ್ಯಾಯ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು, “ಇಂತಹ ವಿಷಕಾರಿ ಕೆಲಸದ ವಾತಾವರಣ ಇರುವ (Toxic Work Culture) ಕಂಪನಿಗಳಿಗೆ ತಕ್ಷಣವೇ ರಾಜೀನಾಮೆ ನೀಡಿ ಹೊರಬರುವುದು ಒಳ್ಳೆಯದು” ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಲಕ್ಷಣ ನಿಯಮದ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:49 am, Wed, 24 June 26

Source link

ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ: ಎಂ.ಬಿ. ಪಾಟೀಲ್‌ ವಿರುದ್ಧ ಮಾನಹಾನಿ ಮೊಕದ್ದಮೆ ಎಚ್ಚರಿಕೆ ಕೊಟ್ಟ ನಿಖಿಲ್​ – Kannada News | Bidadi Land Row: Nikhil Kumaraswamy Issues Defamation Warning to MB Patil

ಬೆಂಗಳೂರು, ಜೂನ್​​ 24: ಬಿಡದಿ ಭೂಮಿ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಈ ನಡುವೆ ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ 100 ಎಕರೆ ಜಾಗ ಆರೋಪ ಮಾಡಿರುವ ಸಚಿವ ಎಂ.ಬಿ. ಪಾಟೀಲ್​​ ವಿರುದ್ಧ ಜೆಡಿಎಸ್​​ ಯುವ ಮುಖಂಡ ನಿಖಿಲ್​​ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಎಂಬಿ ಪಾಟೀಲ್‌ರನ್ನು ಗೌರವಾನ್ವಿತ ಮತ್ತು ವಿದ್ಯಾವಂತ ಸಚಿವರು ಎಂದು ತಿಳಿದಿದ್ದೆ. ಕುಮಾರಸ್ವಾಮಿ ಅವರ ಪತ್ನಿಯ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಅವರು ಸಾಬೀತುಪಡಿಸಬೇಕು. ಆಗದಿದ್ದರೆ ಅವರು ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಬಾಯಿಗೆ ಬಂದಂತೆ ನೂರಾರು ಎಕರೆ ಜಾಗವಿದೆ ಎಂದು ಸುಳ್ಳು ಆರೋಪ ಮಾಡಬಾರದು. ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಎಂಬಿ ಪಾಟೀಲ್‌ ವಿರುದ್ಧ ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version