ಮೈದಾನದಲ್ಲೇ ಕೊನೆಯುಸಿರೆಳೆದ ಕರ್ನಾಟಕದ ಕ್ರಿಕೆಟಿಗ! – Kannada News | Former Karnataka Pacer SL Akshay Passes Away at 39
ಕರ್ನಾಟಕ ಕ್ರಿಕೆಟ್ ಲೋಕ ಇಂದು ಅತ್ಯಂತ ಆಘಾತಕಾರಿ ಮತ್ತು ದುಃಖದ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ. ತನ್ನ ಸ್ವಿಂಗ್ ಬೌಲಿಂಗ್ ಮತ್ತು ಸೌಮ್ಯ ಸ್ವಭಾವದಿಂದ ಎಲ್ಲರ ಮನಗೆದ್ದಿದ್ದ ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಅವರು ಕೆ.ಎಸ್.ಸಿ.ಎ ಡಿವಿಷನ್ ಪಂದ್ಯವೊಂದನ್ನು ಆಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಸಿರು ಮೈದಾನವನ್ನೇ ದೇವರೆಂದು ನಂಬಿದ್ದ ಆಟಗಾರ, ಅದೇ ಮೈದಾನದಲ್ಲೇ ಕೊನೆಯುಸಿರೆಳೆದಿರುವುದು ಇಡೀ ಕ್ರೀಡಾಲೋಕವನ್ನು ದಿಗ್ಭ್ರಮೆಗೊಳಿಸಿದೆ. ಮೈದಾನದಲ್ಲಿ ನಡೆದಿದ್ದೇನು? ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಸಫೈರ್ ಸಿಸಿ ಮತ್ತು ಭರತ್ ಸಿಸಿ ತಂಡಗಳ…