ಕನ್ನಡ ಬಾವುಟದಿಂದ ವಾಹನಕ್ಕೆ ಕ್ಯಾಪ್ ಕಟ್ಟಿ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ – Kannada News | Bengaluru: Namma Metro Staff Face Backlash For Using Kannada Flag To Tie Transit Equipment At Cubbon Park

ಬೆಂಗಳೂರು, ಜೂನ್ 24: ಬೆಂಗಳೂರಿನ ನಮ್ಮ ಮೆಟ್ರೋ ಸಿಬ್ಬಂದಿ ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಹನವೊಂದಕ್ಕೆ ‘ಕರೆಂಟ್ ಕಲೆಕ್ಟರ್ ಶೂ ಕ್ಯಾಪ್’ ಕಟ್ಟಲು ಕನ್ನಡದ ಬಾವುಟವನ್ನು ಬಳಸಲಾಗಿದ್ದು, ಈ ಘಟನೆ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳವಾರ ತಡರಾತ್ರಿ ಕಬ್ಬನ್ ಪಾರ್ಕ್‌ನಲ್ಲಿ ಅಳವಡಿಕೆಗೆ ತಂದಿದ್ದ ಕರೆಂಟ್ ಕಲೆಕ್ಟರ್ ಶೂ ಕ್ಯಾಪ್ ಅನ್ನು ಸಾಗಿಸಲು ಕನ್ನಡ ಬಾವುಟದಿಂದ ಕಟ್ಟಲಾಗಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕನ್ನಡ ಧ್ವಜಕ್ಕೆ ಮಾಡಿದ ಅಪಮಾನ ಎಂದಿದ್ದಾರೆ. ಮೆಟ್ರೋ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2027: ಬಿಗ್ ಟ್ರೇಡ್… ಇಬ್ಬರು ಆಟಗಾರರ ತಂಡಗಳು ಅದಲು-ಬದಲು

Source link

‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ

ವಿನೋದ್ ಪ್ರಭಾಕರ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು. ಬಿಪಿ ಏರಿಳಿತದಿಂದ ಈ ರೀತಿ ಆಗಿತ್ತು. ಅವರ ನಟನೆಯ ‘ಬಲರಾಮನ ದಿನಗಳು’ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಈ ರೀತಿ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಇದು ಸಿನಿಮಾ ಪ್ರಚಾರದ ಗಿಮಿಕ್’ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ನಿರ್ದೇಶಕ ‘ಬಲರಾಮನ ದಿನಗಳು’ ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ಮಾತನಾಡಿದ್ದಾರೆ. ‘ವಿನೋದ್ ಗಟ್ಟಿ ಮುಟ್ಟಾಗಿದ್ದಾರೆ. ಅವರಿಗೆ ಅನಾರೋಗ್ಯ ಆದರೆ, ಚಿತ್ರಕ್ಕೆ ಹೇಗೆ ಸಹಕಾರಿ ಆಗುತ್ತದೆ ನೀವೇ ಹೇಳಿ? ನಾವು ಆ ರೀತಿ ಗಿಮಿಕ್ ಮಾಡಿಲ್ಲ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Vastu Lemon Remedies: ಮನೆಯ ನಕಾರಾತ್ಮಕ ಶಕ್ತಿಯ ನಿವಾರಣೆಗೆ ನಿಂಬೆಹಣ್ಣಿನ ಪರಿಹಾರ; ವಾಸ್ತು ಸಲಹೆ ಇಲ್ಲಿದೆ – Kannada News | Vastu lemon remedies remove negative energy attract prosperity and peace at home

ವಾಸ್ತು ಶಾಸ್ತ್ರದಲ್ಲಿ ನಿಂಬೆಹಣ್ಣಿಗೆ ಅತ್ಯಂತ ವಿಶೇಷವಾದ ಸ್ಥಾನವಿದ್ದು, ಇದನ್ನು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ದೂರಮಾಡಲು ಅತ್ಯುತ್ತಮ ಸಾಧನವಾಗಿ ಬಳಸಲಾಗುತ್ತದೆ. ನಿಮ್ಮ ಮನೆಯಲ್ಲಿ ಪದೇ ಪದೇ ಜಗಳಗಳು ಆಗುತ್ತಿದ್ದರೆ, ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ ಅಥವಾ ಮನೆಯ ಸದಸ್ಯರಲ್ಲಿ ಸದಾ ಅಶಾಂತಿ ನೆಲೆಸಿದ್ದರೆ, ವಾಸ್ತು ಶಾಸ್ತ್ರದ ಈ ಸರಳ ನಿಂಬೆಹಣ್ಣಿನ ಪರಿಹಾರಗಳು ರಾಮಬಾಣವಾಗಿ ಕೆಲಸ ಮಾಡುತ್ತವೆ. ನಂಬಿಕೆ ಮತ್ತು ಸಕಾರಾತ್ಮಕ ಯೋಚನೆಯೊಂದಿಗೆ ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ನಕಾರಾತ್ಮಕ ಶಕ್ತಿಯ ನಿವಾರಣೆಗೆ ಸರಳ ಕ್ರಮಗಳು:

ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲು ಮತ್ತು ಕೆಟ್ಟ ಶಕ್ತಿಗಳನ್ನು ದೂರಮಾಡಲು ನಿಂಬೆಹಣ್ಣಿನ ಪರಿಹಾರಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಇದಕ್ಕಾಗಿ ಪ್ರತಿ ಶನಿವಾರ ಅಥವಾ ಮಂಗಳವಾರದಂದು ಮನೆಯ ಮುಖ್ಯ ಬಾಗಿಲಿಗೆ ಒಂದು ನಿಂಬೆಹಣ್ಣು ಮತ್ತು ಏಳು ಹಸಿರು ಮೆಣಸಿನಕಾಯಿಗಳನ್ನು ದಾರದಲ್ಲಿ ಪೋಣಿಸಿ ನೇತುಹಾಕಬೇಕು. ಇದು ಮನೆಯೊಳಗೆ ಯಾವುದೇ ಕೆಟ್ಟ ದೃಷ್ಟಿ ಪ್ರವೇಶಿಸದಂತೆ ತಡೆಯುತ್ತದೆ. ಇದರೊಂದಿಗೆ, ಒಂದು ಗಾಜಿನ ಲೋಟದಲ್ಲಿ ಸ್ವಚ್ಛವಾದ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಇಡೀ ನಿಂಬೆಹಣ್ಣನ್ನು ಹಾಕಿ, ಆ ಲೋಟವನ್ನು ಮನೆಯ ಲಿವಿಂಗ್ ರೂಮಿನ ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಪ್ರತಿ ಶನಿವಾರ ಈ ನೀರು ಮತ್ತು ನಿಂಬೆಹಣ್ಣನ್ನು ಬದಲಾಯಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆಯು ಸಂಪೂರ್ಣವಾಗಿ ದೂರವಾಗುತ್ತದೆ.

ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಪರಿಹಾರ:

ಮನೆಯ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗಲು ಮತ್ತು ಅನಗತ್ಯ ಮನಸ್ತಾಪಗಳನ್ನು ದೂರಮಾಡಲು ನಿಂಬೆಹಣ್ಣಿನ ವಿಶೇಷ ಪ್ರಯೋಗವನ್ನು ಮಾಡಬಹುದು. ಒಂದು ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ (ಆದರೆ ಅವು ಪರಸ್ಪರ ಬೇರೆಯಾಗದೆ ತಳಭಾಗ ಜೋಡಿಸಿರಬೇಕು) ಅದರ ಮೇಲೆ ಸ್ವಲ್ಪ ಕಲ್ಲು ಉಪ್ಪು ಹಾಕಿ ಮನೆಯ ಕತ್ತಲಿರುವ ಮೂಲೆಯಲ್ಲಿ ಇಡಬೇಕು. ನಂತರ ಬರುವ ಶನಿವಾರದಂದು ಅದನ್ನು ಯಾರು ತುಳಿಯದ ಜಾಗದಲ್ಲಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು. ಈ ಕ್ರಮದಿಂದ ಮನೆಯಲ್ಲಿದ್ದ ಉದ್ವೇಗ ಮತ್ತು ಒತ್ತಡದ ವಾತಾವರಣ ಕಡಿಮೆಯಾಗಿ, ಕುಟುಂಬದಲ್ಲಿ ಸಂತೋಷ ಹಾಗೂ ನೆಮ್ಮದಿ ನೆಲೆಸುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಆರ್ಥಿಕ ಪ್ರಗತಿ ಮತ್ತು ಸಂಪತ್ತಿನ ವೃದ್ಧಿಗಾಗಿ ಟಿಪ್ಸ್:

ವ್ಯಾಪಾರದಲ್ಲಿ ನಿರಂತರ ನಷ್ಟವಾಗುತ್ತಿದ್ದರೆ ಅಥವಾ ಕೈಯಲ್ಲಿ ಹಣ ನಿಲ್ಲದೆ ಆರ್ಥಿಕ ಸಂಕಷ್ಟ ಎದುರಾಗುತ್ತಿದ್ದರೆ ನಿಂಬೆಹಣ್ಣಿನ ವಾಸ್ತು ನಿಯಮಗಳನ್ನು ಪಾಲಿಸುವುದು ಸೂಕ್ತ. ನಿಮ್ಮ ಕಚೇರಿ ಅಥವಾ ಅಂಗಡಿಯ ನಾಲ್ಕು ಗೋಡೆಗಳಿಗೆ ಒಂದು ನಿಂಬೆಹಣ್ಣನ್ನು ಸ್ಪರ್ಶಿಸಿ, ನಂತರ ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ನಾಲ್ಕು ವಿಭಿನ್ನ ದಿಕ್ಕುಗಳಿಗೆ ಎಸೆದುಬಿಡಬೇಕು. ಇದನ್ನು ಮಾಡುವುದರಿಂದ ವ್ಯಾಪಾರದಲ್ಲಿರುವ ದೃಷ್ಟಿದೋಷ ನಿವಾರಣೆಯಾಗಿ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಹಾಗೆಯೇ ಉದ್ಯೋಗದ ಯಶಸ್ಸಿಗಾಗಿ, ಒಂದು ನಿಂಬೆಹಣ್ಣಿಗೆ 4 ಲವಂಗಗಳನ್ನು ಚುಚ್ಚಿ “ಓಂ ಹನುಮತೇ ನಮಃ” ಮಂತ್ರವನ್ನು 21 ಬಾರಿ ಜಪಿಸಿ, ಅದನ್ನು ಸಂದರ್ಶನಕ್ಕೆ ಅಥವಾ ಮಹತ್ವದ ಕೆಲಸಕ್ಕೆ ಹೋಗುವಾಗ ಕೊಂಡೊಯ್ಯುವುದರಿಂದ ಯಶಸ್ಸು ಲಭಿಸುತ್ತದೆ.

ನೆನಪಿನಲ್ಲಿಡಬೇಕಾದ ಪ್ರಮುಖ ವಾಸ್ತು ನಿಯಮಗಳು:

ನಿಂಬೆಹಣ್ಣಿನ ಪರಿಹಾರಗಳನ್ನು ಮಾಡುವಾಗ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯವಾಗಿದೆ. ಪರಿಹಾರಕ್ಕಾಗಿ ಬಳಸುವ ನಿಂಬೆಹಣ್ಣು ಯಾವುದೇ ಕಲೆ ಇಲ್ಲದೆ ಸ್ವಚ್ಛವಾಗಿ ಮತ್ತು ಹಳದಿ ಬಣ್ಣದಿಂದ ಕೂಡಿರಬೇಕು ಎಂಬುದನ್ನು ನೆನಪಿಡಿ. ಬಳಸಿದ ನಿಂಬೆಹಣ್ಣನ್ನು ಮನೆಯಿಂದ ಹೊರಗೆ ಎಸೆಯುವಾಗ ಯಾರೂ ಅದನ್ನು ತುಳಿಯದಂತೆ ಜಾಗ್ರತೆ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ರಸ್ತೆಯಲ್ಲಿ ಎಲ್ಲಾದರೂ ನಿಂಬೆಹಣ್ಣು ಮತ್ತು ಮೆಣಸಿನಕಾಯಿ ಬಿದ್ದಿರುವುದನ್ನು ನೋಡಿದರೆ ಅದರ ಮೇಲಿಂದ ಎಂದಿಗೂ ದಾಟಬಾರದು ಅಥವಾ ತುಳಿಯಬಾರದು, ಏಕೆಂದರೆ ಇದು ಇತರರ ನಕಾರಾತ್ಮಕ ಶಕ್ತಿ ನಿಮ್ಮನ್ನು ಆವರಿಸುವಂತೆ ಮಾಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲಾ ಪಂದ್ಯಗಳನ್ನು ಗೆದ್ದರೂ ಆಸ್ಟ್ರೇಲಿಯಾ ಇನ್ನೂ ಕೂಡ ಸೆಮಿಫೈನಲ್​ಗೇರಿಲ್ಲ! – Kannada News | Why Australia Women Haven’t Sealed Semis Spot Yet

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಆಡಿದ ನಾಲ್ಕೂ ಪಂದ್ಯಗಳನ್ನು ಗೆಲುವು ದಾಖಲಿಸಿರುವ ಆಸೀಸ್ ಪಡೆ ಒಟ್ಟು 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದಾಗ್ಯೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ ಎಂಬುದು ವಿಶೇಷ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದು, +4.724 ರಷ್ಟು ಬೃಹತ್ ನೆಟ್ ರನ್ ರೇಟ್ ಹೊಂದಿದ್ದರೂ ಸಹ ಆಸೀಸ್ ಪಡೆಯ ಸೆಮಿಫೈನಲ್​ ಎಂಟ್ರಿ ಖಚಿತವಾಗದಿರಲು ಮುಖ್ಯ ಕಾರಣ ಈ ಕೆಳಗಿನಂತಿದೆ.

ಸೆಮಿಫೈನಲ್​ಗೇರಿಲ್ಲ ಯಾಕೆ?

ಗ್ರೂಪ್ ‘A’ ನಲ್ಲಿ ಆಸ್ಟ್ರೇಲಿಯಾ ತನ್ನ 4 ಪಂದ್ಯಗಳನ್ನು ಆಡಿ ಮುಗಿಸಿದೆ. ಆದರೆ ಗ್ರೂಪ್‌ನ ಇತರ ಪ್ರಮುಖ ತಂಡಗಳಾದ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ಕೇವಲ 3 ಪಂದ್ಯಗಳನ್ನು ಆಡಿದ್ದು, ಈ ತಂಡಗಳಿಗೆ ತಲಾ ಎರಡೆರಡು ಪಂದ್ಯಗಳು ಬಾಕಿ ಇವೆ.

ಪ್ರಸ್ತುತ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಅಂದರೆ ಮುಂದಿನ ಎರಡು ಪಂದ್ಯಗಳ ಮೂಲಕ ಈ ಟೀಮ್​ಗಳಿಗೂ 8 ಅಂಗಳನ್ನು ಪಡೆಯಲು ಅವಕಾಶವಿದೆ.

  • ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಆಸ್ಟ್ರೇಲಿಯಾವನ್ನು ಸೋಲಿಸಿದರೆ 8 ಅಂಕ ತಲುಪುತ್ತದೆ.
  • ಸೌತ್ ಆಫ್ರಿಕಾ ತಂಡವು ನೆದರ್​ಲೆಂಡ್ಸ್ ಮತ್ತು ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದರೆ 8 ಅಂಕಗಳನ್ನು ಪಡೆಯಲಿದೆ.
  • ಬಾಂಗ್ಲಾದೇಶ್ ತಂಡವು ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ 8 ಅಂಕಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ 8 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡದ ಪಾಯಿಂಟ್ಸ್​ ಅನ್ನು ಸರಿದೂಗಿಸಲು ಮೂರು ತಂಡಗಳಿಗೆ ಅವಕಾಶವಿದೆ. ಒಂದು ವೇಳೆ ಅಂಕ ಪಟ್ಟಿಯಲ್ಲಿ ಮೂರು ತಂಡಗಳು 8 ಅಂಕಗಳನ್ನು ಪಡೆದುಕೊಂಡರೆ, ನೆಟ್​ ರನ್ ರೇಟ್ ಲೆಕ್ಕಾಚಾರ ಬರಲಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಹೀಗಾಗಿಯೇ 4 ಗೆಲುವು ದಾಖಲಿಸಿದರೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ. ಒಂದು ವೇಳೆ ಆಸೀಸ್ ಪಡೆ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದರೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಜೂನ್ 28 ರಂದು ನಡೆಯಲಿರುವ ಕೊನೆಯ ಪಂದ್ಯವು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳಿಗೆ ನಿರ್ಣಾಯಕ ಎನ್ನಬಹುದು.

Source link

‘ಕ್ಯಾಬ್​ಗೆ ಕೊಡಲು ರಜನಿ ಬಳಿ ಹಣ ಇರಲಿಲ್ಲ’; ಹಳೆಯ ಘಟನೆ ನೆನೆದ ನಿರ್ದೇಶಕ – Kannada News | Rajinikanth’s Unbelievable Humility: KC Bokadia Reveals Viral Taxi Incident Story

ಖ್ಯಾತ ಹಿರಿಯ ಚಲನಚಿತ್ರ ನಿರ್ದೇಶಕ ಕೆ.ಸಿ. ಬೊಕಾಡಿಯಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಪಾರ ಸರಳತೆಯ ಕುರಿತು ನೆನಪಿನ ಬುತ್ತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ‘ಹಿಂದಿ ರಶ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಜನಿಕಾಂತ್ ಅವರ (Rajinikanth) ನಮ್ರತೆ ಮತ್ತು ಅಹಂಕಾರವಿಲ್ಲದ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಮನ ಸೆಳೆದಿವೆ.

  • ರಜನಿಕಾಂತ್ ಸರಳತೆ ಬಿಚ್ಚಿಟ್ಟ ನಿರ್ದೇಶಕ ಕೆ.ಸಿ. ಬೊಕಾಡಿಯಾ
  • ವಾಹನ ಸಿಗದಿದ್ದರೂ ಶೂಟಿಂಗ್ ಸೆಟ್‌ಗೆ ಟ್ಯಾಕ್ಸಿಯಲ್ಲಿ ಬಂದ ರಜನಿ
  • ಕೋಪ ಮಾಡಿಕೊಳ್ಳದೆ ಟ್ಯಾಕ್ಸಿ ಬಾಡಿಗೆ ಕೇಳಿದ ಸೂಪರ್‌ಸ್ಟಾರ್

ಸಿನಿಮಾ ಶೂಟಿಂಗ್‌ ಸೆಟ್‌ನ ಘಟನೆಯೊಂದನ್ನು ನೆನಪಿಸಿಕೊಂಡ ಬೊಕಾಡಿಯಾ, ‘ಒಮ್ಮೆ ರಜನಿಕಾಂತ್ ಅವರನ್ನು ಕರೆತರಲು ಸೆಟ್‌ನಿಂದ ಯಾರೂ ಹೋಗಿರಲಿಲ್ಲ. ಆದರೆ, ಇದಕ್ಕಾಗಿ ಅವರು ಯಾವುದೇ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ತಾವೇ ಸ್ವತಃ ಒಂದು ಸಾಮಾನ್ಯ ಟ್ಯಾಕ್ಸಿ ಮಾಡಿಕೊಂಡು ಶೂಟಿಂಗ್ ಸೆಟ್‌ಗೆ ಬಂದು ತಲುಪಿದರು’ ಎಂದಿದ್ದಾರೆ.

ಅಷ್ಟಕ್ಕೇ ನಿಲ್ಲದ ರಜನಿಕಾಂತ್, ಸೆಟ್‌ಗೆ ಬಂದ ತಕ್ಷಣ ಅತ್ಯಂತ ವಿನಮ್ರವಾಗಿ ನಿರ್ದೇಶಕರ ಬಳಿ ಬಂದು, ‘ನನ್ನನ್ನು ಕರೆತರಲು ಯಾರೂ ಬರಲಿಲ್ಲ, ಹಾಗಾಗಿ ನಾನು ಟ್ಯಾಕ್ಸಿಯಲ್ಲಿ ಬಂದಿದ್ದೇನೆ. ದಯವಿಟ್ಟು ಆ ಟ್ಯಾಕ್ಸಿ ಚಾಲಕನಿಗೆ ಬಾಡಿಗೆ ಹಣ ಪಾವತಿಸಲು ಸ್ವಲ್ಪ ಹಣ ನೀಡುತ್ತೀರಾ?’ ಎಂದು ಅತ್ಯಂತ ಮರ್ಯಾದೆಯಿಂದ ಕೇಳಿದ್ದರು ಎಂದು ಬೊಕಾಡಿಯಾ ನೆನೆದಿದ್ದಾರೆ. ಕ್ಯಾಬ್​​ಗೆ ಹಣ ಕೊಡಲು ರಜನಿ ಬಳಿ ಹಣ ಇರಲಿಲ್ಲ.

ಇಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ರಜನಿಕಾಂತ್ ಅವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ. ಅವರ ಈ ಅದ್ಭುತ ನಮ್ರತೆ ಮತ್ತು ಸರಳ ಗುಣವೇ ಅವರನ್ನು ಇಂದು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಕೆ.ಸಿ. ಬೊಕಾಡಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರ ಈ ಹಳೆಯ ಅಪರೂಪದ ಕಥೆ ಈಗ ಸಿನಿ ಪ್ರೇಮಿಗಳ ಮನ ಗೆಲ್ಲುತ್ತಿದೆ.

ಇದನ್ನೂ ಓದಿ: ರಜನಿಕಾಂತ್‌ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ

ಟ್ಯಾಕ್ಸಿ ಕಳಿಸಿಲ್ಲ ಎಂದು ರಜನಿಕಾಂತ್ ಅವರು ಬಂದು ತಮ್ಮ ಕೋಪ ಹೊರಹಾಕಬಹಹುದಿತ್ತು. ಆದರೆ, ಅವರು ಆರೀತಿ ಮಾಡಿಲ್ಲ. ಇದು ರಜನಿಕಾಂತ್ ಅವರ ಹೆಚ್ಚುಗಾರಿಕೆ. ಇದು ಅನೇಕರಿಗೆ ಮಾದರಿ ಆಗುವಂಥದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಯರ್ ಮಾರಾಟ ಭಾರೀ ಜಿಗಿತ: ಒಂದೇ ತಿಂಗಳಲ್ಲಿ ಅಬಕಾರಿ ಆದಾಯ ಶೇ 14.84 ರಷ್ಟು ಏರಿಕೆ! – Kannada News | Karnataka Excise Revenue Jumps 14 Percent As Beer Sales Surge 54 Percent Post Price Revision

ಬೆಂಗಳೂರು, ಜೂನ್ 24: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಅಬಕಾರಿ ಸುಧಾರಣೆಗಳು ಮತ್ತು ಹೊಸ ದರ ಪರಿಷ್ಕರಣೆ ನೀತಿಯು ಖಜಾನೆಗೆ ಭಾರೀ ಆದಾಯ ತಂದುಕೊಟ್ಟಿದೆ. ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶ ಹೊಂದಿರುವ ಕೆಲವು ಬಿಯರ್ ಬ್ರ್ಯಾಂಡ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಬಿಯರ್ ಮಾರಾಟ ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಹೊಸ ದರ ಪಟ್ಟಿ ಅನುಷ್ಠಾನಕ್ಕೆ ಬಂದ ಮೇ 11 ರಿಂದ ಜೂನ್ 11 ರವರೆಗಿನ ಒಂದು ತಿಂಗಳ ಅವಧಿಯಲ್ಲಿ ರಾಜ್ಯದ ಅಬಕಾರಿ ಕಂದಾಯ ಸಂಗ್ರಹಣೆ ಬರೋಬ್ಬರಿ ಶೇ 14.84 ರಷ್ಟು ಹೆಚ್ಚಳವಾಗಿದೆ.

ಮುಖ್ಯಾಂಶಗಳು

  • ಬಿಯರ್ ಮಾರಾಟ ಶೇ 54.67 ಭಾರಿ ಏರಿಕೆ.
  • ಒಂದೇ ತಿಂಗಳಲ್ಲಿ 3745 ಕೋಟಿ ರೂ. ಸರ್ಕಾರದ ಖಜಾನೆಗೆ.
  • ಐಎಂಎಲ್ ಲಿಕ್ಕರ್ ಮಾರಾಟದಲ್ಲಿ ಅಲ್ಪ ಕುಸಿತ.

ದಾಖಲೆ ಬರೆದ ಬಿಯರ್ ಕೌಂಟ್: ಐಎಂಎಲ್ ಕುಸಿತ

ಮೇ 11 ರಿಂದ ಜೂನ್ 11 ರವರೆಗಿನ ಅವಧಿಯಲ್ಲಿ ಬರೋಬ್ಬರಿ 54.6 ಲಕ್ಷ ಕೇಸ್ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (35.3 ಲಕ್ಷ ಕೇಸ್) ಭಾರೀ ಏರಿಕೆ ದಾಖಲಾಗಿದೆ. ಆದರೆ, ಇದೇ ಅವಧಿಯಲ್ಲಿ ಭಾರತೀಯ ತಯಾರಿಕೆಯ ವಿದೇಶಿ ಮದ್ಯ (IML) ಮಾರಾಟದಲ್ಲಿ ಶೇ 0.35 ರಷ್ಟು ಅಲ್ಪ ಕುಸಿತ ಕಂಡುಬಂದಿದೆ. ಕಳೆದ ವರ್ಷ 54.74 ಲಕ್ಷ ಕೇಸ್ ಇದ್ದ ಐಎಂಎಲ್ ಮಾರಾಟ ಈ ಬಾರಿ 54.55 ಲಕ್ಷ ಕೇಸ್‌ಗಳಿಗೆ ಇಳಿಕೆಯಾಗಿದೆ. ಬಿಯರ್ ಬಳಕೆಯ ಹೆಚ್ಚಳದಿಂದಾಗಿ ರಾಜ್ಯದ ಒಟ್ಟು ಅಬಕಾರಿ ಆದಾಯವು ಕಳೆದ ವರ್ಷದ 3,261.24 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಈ ಬಾರಿ 3,745.14 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಬೆಲೆ ಕಡಿತ ಮತ್ತು ಬಿಸಿಲಿನ ಎಫೆಕ್ಟ್

ಕಳೆದ 2025-26 ರ ಆರ್ಥಿಕ ಸಾಲಿನಲ್ಲಿ ಬಿಯರ್ ಮಾರಾಟವು ಶೇ 11.3 ರಷ್ಟು ಕುಸಿತ ಕಂಡು ಒಟ್ಟು ಮಾರಾಟ 399.29 ಲಕ್ಷ ಕೇಸ್‌ಗಳಿಗೆ ಇಳಿದಿತ್ತು. ಆದರೆ ಈ ಬಾರಿ ಸರ್ಕಾರ ಜಾರಿಗೆ ತಂದ ಹೊಸ ಆಲ್ಕೋಹಾಲ್ ಆಧಾರಿತ ತೆರಿಗೆ ನೀತಿ ಮತ್ತು ರಾಜ್ಯದಲ್ಲಿದ್ದ ತೀವ್ರ ಬಿಸಿಲಿನ ವಾತಾವರಣದಿಂದಾಗಿ ಬಿಯರ್ ಮಾರಾಟ ಮರಳಿ ಚೇತರಿಸಿಕೊಂಡಿದೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್, ಬ್ಯಾಡ್ ನ್ಯೂಸ್: ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ

ಮುಂಬರುವ ದಿನಗಳಲ್ಲಿ ಮುಂಗಾರು ಮಳೆಯಿಂದಾಗಿ ಹವಾಮಾನ ತಂಪಾಗಲಿದ್ದು, ಮಾರಾಟದಲ್ಲಿ ಸ್ವಲ್ಪ ಏರಿಳಿತವಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆದಾಗ್ಯೂ, ಸರ್ಕಾರದ ಈ ಹೊಸ ಪ್ರಯೋಗ ಮದ್ಯದ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಂತೂ ನಿಜ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Deepa Lighting Rules: ದೇವರಿಗೆ ದೀಪ ಬೆಳಗುವಾಗ ಈ ಒಂದು ತಪ್ಪು ಮಾಡಲೇಬೇಡಿ; ದೀಪಾರಾಧನೆಯ ನಿಯಮ ಇಲ್ಲಿದೆ – Kannada News | Deepa Lighting Rules: Auspicious Timings and Directions for Positive Energy and Wealth

ದೇವಾಲಯ ಅಥವಾ ಪೂಜಾ ಕೋಣೆಯನ್ನು ಪ್ರವೇಶಿಸಿದ ತಕ್ಷಣ ಅಲ್ಲಿ ಬೆಳಗುವ ದೀಪವು ಮನಸ್ಸಿಗೆ ತಕ್ಷಣ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಹಿಂದೂ ಸನಾತನ ಧರ್ಮದಲ್ಲಿ ದೇವರು ಮತ್ತು ದೇವತೆಗಳ ಆರಾಧನೆಯಲ್ಲಿ ದೀಪಗಳಿಗೆ ಅತ್ಯುನ್ನತ ಸ್ಥಾನವಿದೆ. ದೀಪವಿಲ್ಲದ ಪೂಜೆಯನ್ನು ಶಾಸ್ತ್ರಗಳಲ್ಲಿ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಯಾವುದೇ ಸರಿಯಾದ ತಿಳುವಳಿಕೆಯಿಲ್ಲದೆ ತಪ್ಪು ರೀತಿಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ನಕಾರಾತ್ಮಕತೆ, ಬಡತನ ಮತ್ತು ಒತ್ತಡ ಹೆಚ್ಚಾಗಬಹುದು. ಆದ್ದರಿಂದ ದೀಪವನ್ನು ಬೆಳಗಿಸಲು ಮತ್ತು ಇಡಲು ಧರ್ಮಗ್ರಂಥಗಳಲ್ಲಿ ಕೆಲವು ನಿರ್ದಿಷ್ಟ ನಿರ್ದೇಶನಗಳು ಹಾಗೂ ಸಮಯದ ಮಿತಿಗಳನ್ನು ನೀಡಲಾಗಿದೆ.

ದೀಪ ಹಚ್ಚಲು ಅತ್ಯಂತ ಶುಭ ಸಮಯ:

ಶಾಸ್ತ್ರಗಳ ಪ್ರಕಾರ, ದಿನಕ್ಕೆ ಎರಡು ಬಾರಿ ಪೂಜಾ ದೀಪವನ್ನು ಬೆಳಗಿಸುವುದು ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರ ಎಂದು ಪರಿಗಣಿಸಲಾಗಿದೆ. ಮೊದಲನೆಯದಾಗಿ, ಬೆಳಿಗ್ಗೆ 5:00 ರಿಂದ 7:00 ರ ನಡುವಿನ ಸೂರ್ಯೋದಯದ ಅವಧಿಯಲ್ಲಿ ದೀಪವನ್ನು ಹಚ್ಚಬೇಕು. ಎರಡನೆಯದಾಗಿ, ಸಂಜೆ 5:30 ರಿಂದ 7:30 ರ ನಡುವಿನ ಪ್ರದೋಷ ಅವಧಿಯಲ್ಲಿ, ಅಂದರೆ ಸೂರ್ಯಾಸ್ತದ ನಂತರ ದೀಪವನ್ನು ಬೆಳಗಿಸಬೇಕು. ಬೇಸಿಗೆ ಮತ್ತು ಚಳಿಗಾಲದಲ್ಲಿ ಸೂರ್ಯಾಸ್ತದ ಸಮಯಗಳು ಬದಲಾಗುವುದರಿಂದ, ಸಂಜೆ ಕತ್ತಲೆ ಕವಿಯಲು ಪ್ರಾರಂಭಿಸಿದ ತಕ್ಷಣ ದೀಪವನ್ನು ಹಚ್ಚುವುದು ಸೂಕ್ತ. ವಿಶೇಷವಾಗಿ ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಮನೆಯ ಮುಖ್ಯ ದ್ವಾರದಲ್ಲಿ (ಹೊಸ್ತಿಲು) ದೀಪವನ್ನು ಬೆಳಗಿಸುವುದು ಬಹಳ ಉತ್ತಮ.

ಬತ್ತಿ ಮತ್ತು ಎಣ್ಣೆಯನ್ನು ಬಳಸುವ ನಿಯಮಗಳು:

ನಾವು ಸಾಮಾನ್ಯವಾಗಿ ಪೂಜೆಗಾಗಿ ಜೇಡಿಮಣ್ಣಿನಿಂದ ಮಾಡಿದ ಹಣತೆಗಳನ್ನು ಅಥವಾ ಹಿತ್ತಾಳೆ ಮತ್ತು ತಾಮ್ರದಂತಹ ಲೋಹದ ದೀಪಗಳನ್ನು ಬಳಸುತ್ತೇವೆ. ಒಂದು ವೇಳೆ ನೀವು ಮಣ್ಣಿನ ದೀಪಗಳನ್ನು ಬಳಸಲು ಬಯಸಿದರೆ, ಅವುಗಳನ್ನು ಬಳಸುವ ಮುನ್ನ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ, ನಂತರ ಚೆನ್ನಾಗಿ ಒಣಗಿಸಿ ಬಳಸಬೇಕು. ಈ ಕ್ರಮವು ದೀಪವು ಕಡಿಮೆ ಎಣ್ಣೆಯನ್ನು ಹೀರಿಕೊಳ್ಳಲು ಮತ್ತು ಬತ್ತಿಯು ಸಮವಾಗಿ ದೀರ್ಘಕಾಲ ಉರಿಯಲು ಸಹಾಯ ಮಾಡುತ್ತದೆ. ದೀಪಾರಾಧನೆಗೆ ಹಸುವಿನ ತುಪ್ಪ ಅತ್ಯಂತ ಶ್ರೇಷ್ಠವಾಗಿದ್ದು, ಇಲ್ಲದಿದ್ದರೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಬಳಸಬಹುದು. ಇಲ್ಲಿ ನೆನಪಿಡಬೇಕಾದ ಪ್ರಮುಖ ನಿಯಮವೆಂದರೆ, ತುಪ್ಪದ ದೀಪಕ್ಕೆ ಯಾವಾಗಲೂ ದುಂಡಗಿನ ಹತ್ತಿಯ ಬತ್ತಿಯನ್ನು ಮತ್ತು ಎಣ್ಣೆಯ ದೀಪಕ್ಕೆ ಉದ್ದವಾದ ಬತ್ತಿಯನ್ನು ಬಳಸಬೇಕು.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ದೇವರ ಮುಂದೆ ದೀಪವನ್ನು ಇಡಬೇಕಾದ ದಿಕ್ಕುಗಳು:

ಪೂಜಾ ಸ್ಥಳದಲ್ಲಿ ದೀಪವನ್ನು ಇಡುವಾಗ ದೇವರ ವಿಗ್ರಹ ಅಥವಾ ಚಿತ್ರಪಟಕ್ಕೆ ಅನುಗುಣವಾಗಿ ಸೂಕ್ತ ಸ್ಥಾನವನ್ನು ಆಯ್ಕೆ ಮಾಡಬೇಕು. ನೀವು ಎಣ್ಣೆಯ ದೀಪವನ್ನು ಹಚ್ಚಿದರೆ ಅದನ್ನು ಯಾವಾಗಲೂ ದೇವರ ಎಡಭಾಗದಲ್ಲಿ ಇಡಬೇಕು ಮತ್ತು ತುಪ್ಪದ ದೀಪವಾಗಿದ್ದರೆ ಅದನ್ನು ದೇವರ ಬಲಭಾಗದಲ್ಲಿ ಇರಿಸಬೇಕು. ಇದರೊಂದಿಗೆ ದೀಪದ ಜ್ವಾಲೆಯು ಮುಖ ಮಾಡಿರುವ ದಿಕ್ಕು ಕೂಡ ಮುಖ್ಯವಾಗುತ್ತದೆ. ಜ್ವಾಲೆಯನ್ನು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ನಿರ್ದೇಶಿಸಬೇಕು. ಪೂರ್ವಕ್ಕೆ ಮುಖ ಮಾಡಿ ಹಚ್ಚುವ ದೀಪವು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ನೀಡಿದರೆ, ಉತ್ತರಕ್ಕೆ ಮುಖ ಮಾಡಿ ಹಚ್ಚುವ ದೀಪವು ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತದೆ. ಆದರೆ, ದಕ್ಷಿಣ ದಿಕ್ಕು ಪೂರ್ವಜರು ಮತ್ತು ಯಮನೊಂದಿಗೆ ಸಂಬಂಧ ಹೊಂದಿರುವುದರಿಂದ, ದೀಪದ ಜ್ವಾಲೆಯನ್ನು ಎಂದಿಗೂ ಆ ದಿಕ್ಕಿಗೆ ಮಾಡಬಾರದು.

ದೀಪಾರಾಧನೆಯಲ್ಲಿ ಮಾಡಬಾರದ ತಪ್ಪುಗಳು:

ದೀಪವನ್ನು ಹಚ್ಚುವಾಗ ಬತ್ತಿ ಎಲ್ಲೂ ಮುರಿದಿರಬಾರದು ಮತ್ತು ದೀಪದ ಅಂಚುಗಳು ಸ್ವಲ್ಪವೂ ಒಡೆದಿರಬಾರದು (ಭಿನ್ನವಾಗಿರಬಾರದು) ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಭಿನ್ನವಾದ ದೀಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ದಾರಿದ್ರ್ಯ ಮತ್ತು ಕಷ್ಟಗಳು ಹೆಚ್ಚಾಗುತ್ತವೆ. ದೀಪವನ್ನು ಎಂದಿಗೂ ನೇರವಾಗಿ ಬರಿ ನೆಲದ ಮೇಲೆ ಇಡಬಾರದು, ಬದಲಿಗೆ ಅದರ ಕೆಳಗೆ ಒಂದು ಸಣ್ಣ ತಟ್ಟೆ ಅಥವಾ ಆಸನವನ್ನು ಇರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಒಂದು ದೀಪದ ಸಹಾಯದಿಂದ ಮತ್ತೊಂದು ದೀಪವನ್ನು ಎಂದಿಗೂ ಬೆಳಗಿಸಬಾರದು, ಏಕೆಂದರೆ ಹಾಗೆ ಮಾಡುವುದು ಮಹಾಪಾಪವೆಂದು ಪರಿಗಣಿಸಲ್ಪಟ್ಟಿದೆ. ದೀಪವನ್ನು ಯಾವಾಗಲೂ ಬೆಂಕಿಕಡ್ಡಿಯಿಂದಲೇ ನೇರವಾಗಿ ಬೆಳಗಿಸಬೇಕು. ಅಲ್ಲದೆ ದೀಪದಲ್ಲಿ ಸಾಕಷ್ಟು ಎಣ್ಣೆ ಅಥವಾ ತುಪ್ಪವನ್ನು ಸುರಿದು, ಗಾಳಿಗೆ ಅದು ಅರ್ಧದಲ್ಲೇ ಆರಿಹೋಗದಂತೆ ಜಾಗ್ರತೆ ವಹಿಸಬೇಕು.

ಪಠಿಸಬೇಕಾದ ಶುಭ ದೀಪ ಮಂತ್ರ:

ದೀಪವನ್ನು ಬೆಳಗಿಸುವಾಗ ಈ ಕೆಳಗಿನ ಶ್ಲೋಕವನ್ನು ಭಕ್ತಿಯಿಂದ ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಶತ್ರುನಾಶವಾಗುತ್ತದೆ:

“ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ ।

ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೇ ॥”

(ಅರ್ಥ: ಶುಭವನ್ನು ಉಂಟುಮಾಡುವ, ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಹಾಗೂ ಶತ್ರುಗಳ ಕೆಟ್ಟ ಬುದ್ಧಿಯನ್ನು ನಾಶಮಾಡುವ ದೀಪದ ಬೆಳಕಿಗೆ ನನ್ನ ನಮನಗಳು.)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್’; ತಮ್ಮ ಬಿರುದನ್ನು ಮಗನಿಗೆ ಕೊಟ್ಟ ಚಿರಂಜೀವಿ – Kannada News | Chiranjeevi Crowns Ram Charan as New Megastar: Emotional Praise for Son’s Success

ಮೆಗಾಸ್ಟಾರ್ ಚಿರಂಜೀವಿ ಅವರು (Chiranjeevi) ಸದ್ಯ ನಿರ್ದೇಶಕ ಬಾಬಿ ಅವರ ಮುಂಬರುವ ಸಿನಿಮಾ ಶೂಟ್​​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ, ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ಪೆದ್ದಿ’ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿರುವ ತಮ್ಮ ಮಗ ರಾಮ್ ಚರಣ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಶ್ಲಾಘಿಸಿದ್ದಾರೆ. ಈ ಮೊದಲು ಚಿರಂಜೀವಿ ಅವರನ್ನು ಮೆಗಾಸ್ಟಾರ್ ಎಂದು ಕರೆಯಲಾಗುತ್ತಿತ್ತು. ಈ ಪಟ್ಟವನ್ನು ಅವರು ಮಗನಿಗೆ ನೀಡಿದ್ದಾರೆ.

  • ಮಗ ರಾಮ್ ಚರಣ್ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ತಂದೆ ಚಿರಂಜೀವಿ.
  • ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಒಪ್ಪಿದ ಚಿರಂಜೀವಿ.
  • ಮಗನ ಸಾಧನೆ ಮತ್ತು ಯಶಸ್ಸು ಕಂಡು ಭಾವುಕರಾದ ಮೆಗಾಸ್ಟಾರ್ ಚಿರಂಜೀವಿ.

‘ಚರಣ್ ಈ ಸಿನಿಮಾದಲ್ಲಿ ಕೇವಲ ನಟಿಸಿಲ್ಲ, ಆ ಪಾತ್ರವಾಗಿ ಜೀವಿಸಿದ್ದಾನೆ. ಅದಕ್ಕಾಗಿಯೇ ಇನ್ನು ಮುಂದೆ ಅವನು ಬರೀ ‘ಚಿರಂಜೀವಿ’ಯ ಮಗ ಮಾತ್ರವಲ್ಲ, ಅವನೇ ಸ್ವತಃ ಚರಂಜೀವಿ (ಚರಣ್ ಜೀವಿ) ಆಗಿದ್ದಾನೆ. ಇದು ನನ್ನ ಮನದಾಳದಿಂದ ಬರುತ್ತಿರುವ ಮಾತುಗಳು’ ಎಂದು ಹೊಗಳಿದರು ಚಿರಂಜೀವಿ.

‘ನಿನ್ನೆ ತಾನೇ ದೆಹಲಿಯಲ್ಲಿ ನಡೆದ ರಿಪಬ್ಲಿಕ್ ಟಿವಿ ಕಾಂಕ್ಲೇವ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರಣ್ ಕೂಡ ಭಾಗವಹಿಸಿದ್ದನು. ಆ ಕಾರ್ಯಕ್ರಮದಲ್ಲಿ ಮೋದಿ ಅವರು ಚರಣ್‌ನನ್ನು ಹೊಸ ತಲೆಮಾರಿನ ಮೆಗಾಸ್ಟಾರ್ ಎಂದು ಕರೆದು ಗೌರವಿಸಿದರು’ ಎಂಬುದಾಗಿ ಚಿರಂಜೀವಿ ಹೇಳಿದ್ದಾರೆ.

‘ಇಂತಹ ದೊಡ್ಡ ಅವಕಾಶಗಳು ನನ್ನ ಕಾಲದಲ್ಲಿ ನನಗೆ ಸಿಕ್ಕಿರಲಿಲ್ಲ. ಆದರೆ ಚರಣ್‌ಗೆ ಈ ಅವಕಾಶ ಸಿಕ್ಕಿದೆ. ಅವನು ಅದನ್ನು ಅತ್ಯುತ್ತಮವಾಗಿ ಸಾಬೀತುಪಡಿಸಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾನೆ. ಆದ್ದರಿಂದ, ಚರಣ್‌ನನ್ನು ಮುಂದೆ ಬಿಟ್ಟು ನಾನು ಹಿಂದೆ ನಿಲ್ಲುವುದೇ ಸೂಕ್ತ ಮತ್ತು ಅದುವೇ ಸರಿ. ಮಕ್ಕಳು ಬೆಳೆದು ಮುಂದೆ ಹೋಗುತ್ತಿರುವಾಗ ಪೋಷಕರಿಗೆ ಸಿಗುವ ಆನಂದ ಅಷ್ಟಿಷ್ಟಲ್ಲ. ರಂಗಸ್ಥಲಂ ಸಿನಿಮಾದಿಂದ ಈ ಪೆದ್ದಿವರೆಗೆ ಒಬ್ಬ ತಂದೆಯಾಗಿ ನನಗೆ ನೂರಕ್ಕೆ ನೂರರಷ್ಟು ಖುಷಿ ಇದೆ’ ಎಂದು ಭಾವುಕರಾಗಿ ಮಾತನಾಡಿದರು.

ಇದನ್ನೂ ಓದಿ: ಸಮಂತಾ ತಾಯಿ ಆಗೋ ವಿಷಯವನ್ನು ಖಚಿತಪಡಿಸಿದ ಚಿರಂಜೀವಿ

ಚಿರಂಜೀವಿ ಅವರು ತಮ್ಮ ಮಗನ ಯಶಸ್ಸನ್ನು ಕಂಡು ವೇದಿಕೆಯ ಮೇಲೆ ಅತ್ಯಂತ ಭಾವುಕರಾಗಿ ಮತ್ತು ಹೆಮ್ಮೆಯಿಂದ ಮಾತನಾಡಿದ್ದಾರೆ. ಮಗನ ಸಾಧನೆಗೆ ತಂದೆಯಾಗಿ ಬೆನ್ನು ತಟ್ಟಿರುವ ಚಿರಂಜೀವಿ ಅವರ ಈ ವೀಡಿಯೋ ಮತ್ತು ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿ ವಲಯದಲ್ಲಿ ವೈರಲ್ ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಣರೋಚಕ ಪಂದ್ಯದಲ್ಲಿ ಪಾಕ್ ಪಡೆಯನ್ನು ಮಕಾಡೆ ಮಲಗಿಸಿದ ಭಾರತ – Kannada News | India beat Pakistan 4 3 in FIH Pro League

ಲಂಡನ್‌ನ ಲೀ ವ್ಯಾಲಿ ಹಾಕಿ ಅಂಡ್ ಟೆನಿಸ್ ಸೆಂಟರ್‌ನಲ್ಲಿ ನಡೆದ ಪುರುಷರ ಎಫ್‌ಐಎಚ್ ಪ್ರೊ ಲೀಗ್ (FIH Pro League) ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿದೆ. ಅದು ಸಹ 4-3 ಅಂತರದಿಂದ ಎಂಬುದು ವಿಶೇಷ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಪಾಕ್ ವಿರುದ್ಧ ತನ್ನ ದಶಕದ ಅಜೇಯ ನಾಗಾಲೋಟ ಮುಂದುವರೆಸಿದೆ.

ಅಂದರೆ ಪಾಕಿಸ್ತಾನ್ ತಂಡವು ಕಳೆದ 10 ವರ್ಷಗಳಿಂದ ಭಾರತದ ವಿರುದ್ಧ ಒಂದೇ ಗೆಲುವು ದಾಖಲಿಸಿಲ್ಲ. ಉಭಯ ತಂಡಗಳು ಕಳೆದ ಹತ್ತು ವರ್ಷಗಳಲ್ಲಿ 18 ಬಾರಿ ಮುಖಾಮುಖಿಯಾಗಿವೆ.

  • ಈ ವೇಳೆ  ಭಾರತ ತಂಡವು 16 ಪಂದ್ಯಗಳಲ್ಲಿ ಜಯ ಸಾಧಿಸಿದೆ.
  • ಇನ್ನೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ.

ಪಾಕ್ ಪಡೆ ವಿರುದ್ಧದ ಈ ಪಾರುಪತ್ಯವು ಈ ಬಾರಿ ಕೂಡ ಮುಂದುವರೆದಿದ್ದು, ಅದರಂತೆ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯಲ್ಲಿ 4-3 ಅಂತರದಿಂದ ಪಾಕಿಸ್ತಾನ್ ತಂಡವನ್ನು ಮಕಾಡೆ ಮಲಗಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.

ಪಂದ್ಯದ ಮುಖ್ಯಾಂಶಗಳು:

ಈ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ್ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಅದರ ಫಲವಾಗಿ 8ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡ ಅಹ್ಮದ್ ನದೀಮ್, ಪಾಕಿಸ್ತಾನಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತ ತಂಡದ 22ನೇ ನಿಮಿಷದಲ್ಲಿ ಅಭಿಷೇಕ್ ರಿಬೌಂಡ್ ಮೂಲಕ ಗೋಲು ಗಳಿಸಿ ಸಮಬಲ ತಂದರು. ಇದರ ಬೆನ್ನಲ್ಲೇ 24ನೇ ನಿಮಿಷದಲ್ಲಿ ನೀಲಕಂಠ ಶರ್ಮಾ ಮತ್ತೊಂದು ಗೋಲು ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲಾರ್ಧದ ಮುಕ್ತಾಯದ ವೇಳೆಗೆ 2-1 ಮುನ್ನಡೆ ಕಾಯ್ದುಕೊಂಡರು.

ದ್ವಿತೀಯಾರ್ಧದ 40ನೇ ನಿಮಿಷದಲ್ಲಿ ಸುಖ್‌ಜೀತ್ ಸಿಂಗ್ ಅಮೋಘ ಫೀಲ್ಡ್ ಗೋಲ್ ಮೂಲಕ ಸ್ಕೋರ್ ಅನ್ನು 3-1 ಕ್ಕೇರಿಸಿದರು. ಹೆಚ್ಚಿಸಿದರು. ಹಾಗೆಯೇ ಅಂತಿಮ ಕ್ವಾರ್ಟರ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ರಾಜಿಂದರ್ ಸಿಂಗ್​ 52ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತ ತಂಡದ ಮುನ್ನಡೆಯನ್ನು 4-1 ಅಂತರಕ್ಕೆ ವಿಸ್ತರಿಸಿದರು.

ಆದರೆ ಕೊನೆಯ ಕ್ಷಣದಲ್ಲಿ ಪುಟಿದೆದ್ದ ಪಾಕಿಸ್ತಾನ್ ತಂಡದ ಮುನ್ಪಡೆ ಆಟಗಾರರು ಭಾರತದ ಗೋಲ್ ಪೋಸ್ಟ್​ನತ್ತ ನಿರಂತರ ದಾಳಿ ನಡೆಸಿದರು. ಪರಿಣಾಮ 53ನೇ ನಿಮಿಷದಲ್ಲಿ ನಾಯಕ ಅಬು ಮಹಮೂದ್ ಸ್ಟಿಕ್​ನಿಂದ 2ನೇ ಗೋಲು ಮೂಡಿಬಂತು. ಇನ್ನೇನು ಪಂದ್ಯ ಮುಗಿಯಲು ಕೇವಲ 14 ಸೆಕೆಂಡುಗಳಿರುವಾಗ ಮೊಯಿನ್ ಶಕೀಲ್ ಗೋಲು ಬಾರಿಸಿ ಸೋಲಿನ ಅಂತರವನ್ನು 4-3 ಅಂತರಕ್ಕೆ ಇಳಿಸಿದರು.

ಗೋಲು ದಾಖಲಿಸಿದ ಆಟಗಾರರು:

  • ಭಾರತ (4 ಗೋಲುಗಳು): ಅಭಿಷೇಕ್ ನೈನ್ (22ನೇ ನಿಮಿಷ), ನೀಲಕಂಠ ಶರ್ಮಾ (24ನೇ ನಿಮಿಷ), ಸುಖ್‌ಜೀತ್ ಸಿಂಗ್ (40ನೇ ನಿಮಿಷ), ರಾಜಿಂದರ್ ಸಿಂಗ್ (52ನೇ ನಿಮಿಷ).
  •  ಪಾಕಿಸ್ತಾನ್ (3 ಗೋಲುಗಳು): ಅಹ್ಮದ್ ನದೀಮ್ (8ನೇ ನಿಮಿಷ), ಅಬು ಮಹಮೂದ್ (53ನೇ ನಿಮಿಷ), ಮೊಯಿನ್ ಶಕೀಲ್ (60ನೇ ನಿಮಿಷ).

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಹರ್ಮನ್‌ಪ್ರೀತ್ ಸಿಂಗ್ ಮುಂದಾಳತ್ವದ ಭಾರತ ತಂಡ ಈ ಗೆಲುವಿನೊಂದಿಗೆ ಒಟ್ಟು 13 ಅಂಕಗಳೊಂದಿಗೆ ಪ್ರೊ ಲೀಗ್ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದೆ. ಇನ್ನು ಟೀಮ್ ಇಂಡಿಯಾ ಕೇವಲ 3 ಪಂದ್ಯಗಳು ಮಾತ್ರ ಬಾಕಿಯಿದ್ದು, ಈ ಮ್ಯಾಚ್​ನಲ್ಲಿ ಗೆದ್ದರೂ ಗರಿಷ್ಠ 22 ಅಂಕಗಳನ್ನು ಮಾತ್ರ ಪಡೆಯಬಹುದು. ಹೀಗಾಗಿ ಎಫ್‌ಐಎಚ್ ಪ್ರೊ ಲೀಗ್​ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರುವುದು ಕಷ್ಟಸಾಧ್ಯ ಎಂದೇ ಹೇಳಬಹುದು.

Source link

Exit mobile version