ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಶಿವಲಿಂಗಕ್ಕೆ ಅರಿಶಿಣ ಹಚ್ಚಬಾರದು ಯಾಕೆ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವಾರಾಧನೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಶಿವನಿಗೆ ಹಾಲು, ಮೊಸರು, ತುಪ್ಪ, ಜೇನು, ವಿಭೂತಿ, ಬಿಲ್ವಪತ್ರೆ, ಅಕ್ಷತೆ, ಶುದ್ಧ ನೀರು, ಗಂಗಾಜಲ ಮತ್ತು ಶ್ರೀಗಂಧ ಮುಂತಾದ ಅನೇಕ ದ್ರವ್ಯಗಳಿಂದ ಅಭಿಷೇಕ ಮಾಡಲಾಗುತ್ತದೆ.
ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವಲಿಂಗಕ್ಕೆ ಅರಿಶಿಣ ಅಥವಾ ಅರಿಶಿಣ ಮಿಶ್ರಿತ ನೀರನ್ನು ಅರ್ಪಿಸಬಾರದು. ಹೀಗೆ ಮಾಡಿದರೆ ಪೂಜೆಯ ಸಂಪೂರ್ಣ ಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅರಿಶಿಣವು ಮಹಿಳೆಯರಿಗೆ ಪ್ರಿಯವಾದ ಸೌಂದರ್ಯವರ್ಧಕವಾಗಿದ್ದು, ಇದನ್ನು ಲಿಂಗಾಕಾರದ ಶಿವನ ಪುಲ್ಲಿಂಗ ಸ್ವರೂಪಕ್ಕೆ ಅರ್ಪಿಸುವುದು ಸೂಕ್ತವಲ್ಲ. ಬದಲಾಗಿ, ಶಿವಲಿಂಗದ ಕೆಳಗಿರುವ ಪಾಣಿಪೀಠವು ಪಾರ್ವತಿ ದೇವಿಯ ಅಂಶವನ್ನು ಪ್ರತಿನಿಧಿಸುವುದರಿಂದ, ಆ ಭಾಗಕ್ಕೆ ಅರಿಶಿಣವನ್ನು ಅರ್ಪಿಸಬಹುದು. ಶಿವನು ಲಯಕಾರಕ ಮತ್ತು ತಣ್ಣನೆಯ ದ್ರವ್ಯಗಳಿಂದ ಸಂತೃಪ್ತನಾಗುವ ದೇವರು. ಅರಿಶಿಣ ಅರ್ಪಣೆಯು ತಮೋಗುಣವನ್ನು ಹೆಚ್ಚಿಸಿ ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 25, ಸೋಮವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮರತು ಶುಕ್ಲ ಪಕ್ಷ ನವಮಿ, ಪುಬ್ಬ ನಕ್ಷತ್ರ, ಅರ್ಶನ ಯೋಗ, ಕೌಲವ ಕರಣಗಳಿಂದ ಕೂಡಿದೆ.ಇಂದು ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯ ಪುಬ್ಬ ನಕ್ಷತ್ರದಲ್ಲಿ ಸಂಚಾರ ಮಾಡುವುದರಿಂದ, ಇದು ಶಿವನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ಶಿವನಾಮ ಜಪಿಸುವವರಿಗೆ ಲಯಕಾರಕನಾಗಿರುವ ಶಿವನು ಶುಭ ಫಲಗಳನ್ನು ನೀಡುತ್ತಾನೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಕೃತ್ತಿಕಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ವ್ಯಾಘಾತ, ಕರಣ : ತೈತಿಲ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:33 – 09:09, ಯಮಗಂಡ ಕಾಲ 10:45 – 12:21, ಗುಳಿಕ ಕಾಲ 13:58 – 15:34.
ಮೇಷ ರಾಶಿ: ಇಂದು ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ಸಂಗಾತಿಯೊಂದಿಗೆ ಉತ್ತಮ ಸಂವಾದ ನಡೆಯಲಿದೆ. ಪರರ ಅಸೂಯೆಗೆ ಔಷಧವಿಲ್ಲ. ಆರೋಗ್ಯವನ್ನು ಕಡೆಗಣಿಸಬೇಡಿ, ವಿಶ್ರಾಂತಿಗೆ ಒತ್ತುನೀಡಿ. ದಿನದ ಕೊನೆಗೆ ಒಂದು ಶುಭಸುದ್ದಿ ಕೇಳಲಿದ್ದೀರಿ. ಈ ದಿನ ಸಕಾರಾತ್ಮಕ ವಿಚಾರಕ್ಕೆ ಒತ್ತುಕೊಟ್ಟರೆ ಅದರತ್ತ ಸಾಗುತ್ತಿದೆ. ಮಾನಸಿಕವಾಗಿ ಋುಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿವೆ. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ತರುವಿರಿ.
ವೃಷಭ ರಾಶಿ: ಮಾತಿನಿಂದ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಜಾಹೀರಾತು ಕ್ಷೇತ್ರದವರಿಗೆ ಅಪೂರ್ವ ಯೋಜನೆ ಗೊತ್ತಾಗುವುದು. ಕೋಪಗೊಳ್ಳುವ ಬದಲು ಶಾಂತಿಯುತವಾಗಿ ಪರಿಸ್ಥಿತಿಯನ್ನು ಪರಿಹರಿಸಿದರೆ ಉತ್ತಮ. ನಿಮ್ಮೊಳಗೆ ಅಹಂಕಾರದಂತಹ ಪರಿಸ್ಥಿತಿ ಬೆಳೆಯಲು ಬಿಡಬೇಡಿ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ಮಿಥುನ ರಾಶಿ: ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ಕೆಲಸದಲ್ಲಿ ಬದಲಾವಣೆ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಯಿಂದ ದೊಡ್ಡ ಕೆಲಸವನ್ನೇ ಬಿಡಬೇಕಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಬಹುದು. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು. ನಿಮ್ಮ ವಸ್ತುವು ಕಳೆದುಹೋಗಬಹುದು. ಯಾವುದೇ ಉದ್ವೇಗಕ್ಕೆ ಒಳಗಾಗುವುದು ಬೇಡ.
ಕರ್ಕಾಟಕ ರಾಶಿ: ನಿಮ್ಮ ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಸ್ನೇಹಿತರಿಂದ ಉತ್ತಮ ಸುದ್ದಿ ಕೇಳಬಹುದು. ಕೆಲವು ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು, ಹಿರಿಯರ ಸಲಹೆ ಉಪಯುಕ್ತ. ಆರೋಗ್ಯದಲ್ಲಿ ಸಣ್ಣ ಅಸ್ವಸ್ಥತೆಗಳು ಕಾಣಿಸಬಹುದು. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ನೀವು ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.
ಸಿಂಹ ರಾಶಿ: ನಿರ್ಮಾಣದ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ದುರಾಸೆಯಿಂದ ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಸತ್ಯ ಮತ್ತು ತಾಳ್ಮೆಯಿಂದ ಮಾತ್ರ ಇಂದಿನ ದಿನ ಸುಧಾರಿಸುತ್ತದೆ. ಸಂಜೆಗೆ ಹಿಂದಿನ ನಷ್ಟಗಳನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ನಿರಾಶೆ ಕೊನೆಗೊಳ್ಳುತ್ತದೆ ಮತ್ತು ಆಲೋಚನೆಯಲ್ಲಿ ಸಕಾರಾತ್ಮಕತೆ ಬರುತ್ತದೆ. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಆರೋಗ್ಯದ ವಿಷಯದಲ್ಲಿ ಇಂದು ಸ್ವಲ್ಪ ತೊಂದರೆಯಾಗಬಹುದು. ಉದ್ಯಮಕ್ಕೆ ಹೊಸ ದಿಕ್ಕನ್ನು ಕೊಡುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಆತ್ಮೀಯರೊಂದಿಗೆ ಸಂತೋಷದ ಕ್ಷಣಗಳ ನಿರೀಕ್ಷೆ. ನೀವು ಆರ್ಥಿಕ, ದೈಹಿಕ ಮತ್ತು ಮಾನಸಿಕ ಶಾಂತಿಯನ್ನು ಪಡೆಯುತ್ತೀರಿ. ಜಾಣ ಮರೆವನ್ನು ತೋರಿಸುವಿರಿ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ಇನ್ನೊಬ್ಬರ ವಸ್ತುಗಳ ಮೇಲೆ ಬಯಕೆ ಆಗಬಹುದು. ಆಸೆಗಳನ್ನು ಹಿಡಿತದಲ್ಲಿ ಇಡಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ವಿರೋಧಿಗಳಿಗೆ ನೀವು ತಲೆನೋವಾಗಿ ಉಳಿಯುತ್ತೀರಿ. ನಿಮ್ಮ ನೇರ ಮಾತುಗಳು ಇಷ್ಟವಾಗದ ಕಾರಣ ನಿಮ್ಮಿಂದ ಯಾರಾದರೂ ದೂರವಿರಬಹುದು.
ತುಲಾ ರಾಶಿ: ಹಣದ ಖರ್ಚು ನಿಯಂತ್ರಣದಲ್ಲಿ ಇರಲಿದೆ. ಆಪ್ತರೊಂದಿಗೆ ಸಣ್ಣ ವ್ಯಾಜ್ಯ ಸಾಧ್ಯವಿದೆ, ಬುದ್ದಿವಂತಿಕೆಯಿಂದ ಬಗೆಹರಿಸಿ. ಆರೋಗ್ಯ ಸುಧಾರಿತ ಸ್ಥಿತಿಯಲ್ಲಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ತುರ್ತು ನಿರ್ಣಯ ಬೇಕಾಗಬಹುದು. ಯಾರ ಅನುಭವವೂ ನಿಮ್ಮ ಗಣನೆಗೆ ಬರದು. ನಿಮ್ಮ ಖರೀದಿಯಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಭೋಗದ ವಿಧಾನಗಳು ಹೆಚ್ಚಾಗುತ್ತವೆ. ಮಕ್ಕಳಿಂದ ಬೇಸರವಾಗುವ ಸಾಧ್ಯತೆ ಇದೆ. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ.
ವೃಶ್ಚಿಕ ರಾಶಿ: ಸಂಗಾತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಉಪಾಯದಿಂದ ಗೆಲ್ಲುವ ದಾರಿಯನ್ನು ನೋಡಿ. ಮಕ್ಕಳ ಪ್ರಯತ್ನ ಫಲ ನೀಡಬಹುದು. ದಾಂಪತ್ಯ ಜೀವನದಲ್ಲಿ ಅನ್ನೋನ್ಯತೆ ಇರುತ್ತದೆ. ಕುಟುಂಬದ ಕೀರ್ತಿಯನ್ನು ಬೆಳೆಸುವವರಿದ್ದೀರಿ. ಮನೆಯಲ್ಲಿ ಸಹಕಾರ ಮತ್ತು ಸಂತೋಷದ ವಾತಾವರಣವೂ ಇರುತ್ತದೆ. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವು ನಿಮ್ಮದಾಗುತ್ತದೆ.
ಧನು ರಾಶಿ: ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ನೂತನ ಗೃಹನಿರ್ಮಾಣದ ಕನಸು ಕಾಣುವಿರಿ. ಈ ಸಮಯದಲ್ಲಿ ಆದಾಯ ಹೆಚ್ಚಳ ತರುತ್ತದೆ. ನಿಮ್ಮ ಆತ್ಮವಿಶ್ವಾಸ ಬಲವಾಗಿ ಉಳಿಯುತ್ತದೆ, ವಿಶ್ವಾಸಾರ್ಹ ಜನರೊಂದಿಗೆ ಮಾತ್ರ ಸಂಪರ್ಕದಲ್ಲಿರಿ. ನಕಾರಾತ್ಮಕ ವಿಚಾರಗಳ ಗಮನ ಕೊಟ್ಟು ನಿಮ್ಮ ಸಮಯವು ಹಾಳಾಗುವುದು. ನಿಮ್ಮಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ.
ಮಕರ ರಾಶಿ: ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗುವುದು. ಪ್ರೀತಿಗೆ ಗೆಳೆಯರ ಸಹಾಯ ಸಿಗುವುದು. ಕೆಲವು ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಹಣದ ವ್ಯವಹಾರಗಳಲ್ಲಿ ಲಾಭದ ಸೂಚನೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಯಾವುದೇ ಕೌಟುಂಬಿಕ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ವ್ಯಾಪಾರದಲ್ಲಿನ ಹೊಸ ಒಪ್ಪಂದಗಳು ಲಾಭದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವಿರಿ.
ಕುಂಭ ರಾಶಿ: ಇಂದು ಆರ್ಥಿಕವಾಗಿ ಸ್ವಲ್ಪ ಒತ್ತಡ ಅನುಭವಿಸಬಹುದು ಆದರೆ ಅದು ತಾತ್ಕಾಲಿಕ. ಕೆಲಸದಲ್ಲಿ ಹಿರಿಯರಿಂದ ಶ್ಲಾಘನೆ ದೊರೆಯಬಹುದು. ಮನೆತನದ ಪ್ರತಿಷ್ಠೆಗೆ ಯೋಗ್ಯರೀತಿಯಲ್ಲಿ ವರ್ತಿಸುವಿರಿ. ಸಂಬಂಧಗಳಲ್ಲಿ ಸ್ಪಷ್ಟತೆ ಇಟ್ಟರೆ ಗೊಂದಲ ತಪ್ಪಬಹುದು. ವಾಹನ, ಮನೆ ಸಂಬಂಧಿತ ಕೆಲಸಗಳಿಗೆ ಅನುಕೂಲ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಉದ್ಯೋಗ, ವ್ಯವಹಾರಗಳಲ್ಲಿ ಉಲ್ಲಾಸಕರ ವಾತಾವರಣವಿರಲಿದೆ.
ಮೀನ ರಾಶಿ: ನಿಮ್ಮ ಹತ್ತಾರು ಕನಸುಗಳಲ್ಲಿ ಒಂದು ಸಾಕಾರಗೊಳ್ಳುವುದು. ಸುಮ್ಮನಿರುವುದು ಹಲವು ಕಲಹವನ್ನು ತಪ್ಪಿಸುವುದು. ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ನಿಮ್ಮ ಅಭ್ಯಾಸವನ್ನು ಸುಧಾರಿಸಿ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಳೆಯ ಅನುಭವಗಳನ್ನು ನೆನಪಿಸಿಕೊಳ್ಳಿ. ನೀವು ಯಾವುದೇ ನಿರ್ಧಾರಕ್ಕೆ ಕಟ್ಟುಬೀಳದೇ ಸ್ವತಂತ್ರವಾಗಿ ಇರಲು ಬಯಸುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ.
ಐಪಿಎಲ್ 2026 (IPL 2026) ರ ಕೊನೆಯ ಲೀಗ್ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (KKR vs DC) ನಡುವೆ ನಡೆಯಿತು. ಎರಡೂ ತಂಡಗಳು ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿತ್ತು. ಅದರಂತೆ ಈ ಔಪಚಾರಿಕ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿದ ಡೆಲ್ಲಿ ತನ್ನ 7ನೇ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಇತ್ತ ಕೆಕೆಆರ್ ತನ್ನ 7ನೇ ಸೋಲಿನೊಂದಿಗೆ 7ನೇ ಸ್ಥಾನಕ್ಕೆ ಜಾರಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 203 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕ ಕೈಕೊಟ್ಟ ಕಾರಣದಿಂದಾಗಿ ಶಾರುಖ್ ಪಡೆ 40 ರನ್ಗಳಿಂದ ಸೋಲೊಪ್ಪಿಕೊಂಡಿತು.
200 ರನ್ ದಾಟಿದ ಡೆಲ್ಲಿ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಒಟ್ಟು 6 ಬ್ಯಾಟ್ಸ್ಮನ್ಗಳು ಅಮೋಘ ಪ್ರದರ್ಶನ ನೀಡಿ ತಂಡವನ್ನು 200 ರನ್ಗಳ ಗಡಿ ದಾಟಿಸಿದರು. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ 30 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್ನಲ್ಲಿ 60 ರನ್ ಬಾರಿಸಿದರು. ಇದು 19 ನೇ ಸೀಸನ್ನಲ್ಲಿ ಕೆಎಲ್ ಅವರ ಐದನೇ ಅರ್ಧಶತಕವಾಗಿತ್ತು. ಈ ಇನ್ನಿಂಗ್ಸ್ನಲ್ಲಿ ಕೆಎಲ್ 4 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಕೆಎಲ್ ಹೊರತುಪಡಿಸಿ, ನಾಯಕ ಅಕ್ಷರ್ ಪಟೇಲ್ 39 ರನ್, ಡೇವಿಡ್ ಮಿಲ್ಲರ್ 28 ರನ್, ಸಾಹಿಲ್ ಪರಾಖ್ 24 ರನ್ ಮತ್ತು ಅಭಿಷೇಕ್ ಪೊರೆಲ್ 22 ರನ್ ಗಳಿಸಿದರು. ಕೊನೆಯಲ್ಲಿ ಅಶುತೋಷ್ ಶರ್ಮಾ 11 ಎಸೆತಗಳಲ್ಲಿ ಔಟಾಗದೆ 18 ರನ್ ಗಳಿಸಿ ದೆಹಲಿ 200 ರನ್ ದಾಟಲು ಸಹಾಯ ಮಾಡಿದರು. ಕೆಕೆಆರ್ ಪರ ಸೌರಭ್ ದುಬೆ 2 ವಿಕೆಟ್ ಪಡೆದರೆ, ಅನುಕುಲ್ ರಾಯ್, ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.
ರಹಾನೆ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಉತ್ತಮ ಆರಂಭ ಪಡೆಯಿತು. ರಹಾನೆ ಹಾಗೂ ಅಲೆನ್ ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟ ನಡೆಸಿದರು. ಆದರೆ 20 ರನ್ ಬಾರಿಸಿದ ಅಲೆನ್ ಔಟಾಗುವ ಮೂಲಕ ಈ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಆ ಬಳಿಕ ಬಂದ ಕನ್ನಡಿಗ ಮನೀಶ್ ಪಾಂಡೆ 25 ರನ್ ಬಾರಿಸಿ ಔಟಾದರೆ, ಗ್ರೀನ್ ಇನ್ನಿಂಗ್ಸ್ ಕೇವಲ 2 ರನ್ಗಳಿಗೆ ಅಂತ್ಯವಾಯಿತು. ಸತತ ವಿಕೆಟ್ ಪತನದ ನಡುವೆಯೂ ನಾಯಕನ ಇನ್ನಿಂಗ್ಸ್ ಆಡಿದ ಅಜಿಂಕ್ಯ ರಹಾನೆ ಅರ್ಧಶತವನ್ನು ಪೂರೈಸಿದರು.
ಕೈಕೊಟ್ಟ ಮಧ್ಯಮ ಕ್ರಮಾಂಕ
ಆದರೆ 63 ರನ್ ಬಾರಿಸಿ ರಹಾನೆ ಔಟಾಗುವುದರೊಂದಿಗೆ ಕೆಕೆಆರ್ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ರಹಾನೆ ಕ್ರೀಸ್ನಲ್ಲಿ ಇರುವ ತನಕ ಕೆಕೆಆರ್ ಗೆಲುವಿನ ಫೇವರೇಟ್ ಎನಿಸಿತ್ತು. ಆದರೆ ತಂಡದ ಮಧ್ಯಮ ಕ್ರಮಾಂಕ ಬೇಗನೇ ಕುಸಿದ ಕಾರಣ ಕೆಕೆಆರ್ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರು ಹಲವಾರು ಎವರ್ ಗ್ರೀನ್ ಕನ್ನಡ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಈಗ ಬೇರೆ ಬೇರೆ ಗಾಯಕರು, ಸಂಗೀತ ನಿರ್ದೇಶಕರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರ ಹಾಡುಗಳನ್ನು ಸಹ ಹಾಡುತ್ತಿರುವುದುಂಟು. ಇದೀಗ ಖುದ್ದು ಹಂಸಲೇಖ ಮತ್ತು ರವಿಚಂದ್ರನ್ ಅವರು ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲು ಮುಂದಾಗಿದ್ದು, ಕಾನ್ಸರ್ಟ್ಗೆ ‘ಕ್ರೇಜಿಬ್ರಹ್ಮ’ ಎಂದು ಹೆಸರಿಡಲಾಗಿದೆ. ಈ ಲೈವ್ ಕಾನ್ಸರ್ಟ್ ಎಲ್ಲಿ ನಡೆಯಲಿದೆ? ಯಾವಾಗ ನಡೆಯಲಿದೆ? ವಿಶೇಷತೆಗಳು ಏನಿರಲಿವೆ? ಎಲ್ಲದರ ಮಾಹಿತಿ ಇಲ್ಲಿದೆ ನೋಡಿ…
‘ಹೇರಾ ಫೇರಿ 3’ ಸಿನಿಮಾ (Cinema) ಘೋಷಣೆ ಮಾಡಿದಾಗಿನಿಂದಲೂ ಸುದ್ದಿಯಲ್ಲಿದೆ. ಹಿಂದಿ ಚಿತ್ರರಂಗದ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹೇರಾ ಪೇರಿ’ಯ ಮೂರನೇ ಸೀಸನ್ ಭಾಗ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು, ಆದರೆ ಸಿನಿಮಾದ ಪ್ರಮುಖ ಪಾತ್ರಧಾರಿ ಪರೇಶ್ ರಾವಲ್ ಅವರು ಪದೇ ಪದೇ ಸಿನಿಮಾದ ಬಗ್ಗೆ ಸಹನಟರ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದುತ್ತಿದ್ದು, ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಾರಿ ತಾವು ಪಡೆದ ಸಂಭಾವನೆಯ 15% ಹೆಚ್ಚುವರಿ ಹಣವನ್ನು ನಿರ್ಮಾಪಕರಿಗೆ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ.
ಸಿನಿಮಾ ಆರಂಭವಾದಾಗ ಪರೇಶ್ ರಾವಲ್ ತಾವು ಸಿನಿಮಾನಲ್ಲಿ ನಟಿಸುವುದಿಲ್ಲ ಎಂದರು. ಆದರೆ ಸಿನಿಮಾದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಅಕ್ಷಯ್ ಕುಮಾರ್, ಮನವೊಲಿಸಿದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಈಗ ಮತ್ತೆ ಪರೇಶ್ ರಾವಲ್ ಹೊರ ಬಂದಿದ್ದು, ಚಿತ್ರಕ್ಕಾಗಿ ಪಡೆದಿದ್ದ ಮುಂಗಡ 11 ಲಕ್ಷವನ್ನು ಶೇ. 15 ರಷ್ಟು ವಾರ್ಷಿಕ ಬಡ್ಡಿ ಮತ್ತು ಹೆಚ್ಚುವರಿ ಪರಿಹಾರದೊಂದಿಗೆ ನಿರ್ಮಾಪಕರಿಗೆ ಹಿಂತಿರುಗಿಸಿದ್ದಾರೆ.
ಚಿತ್ರರಂಗದ ಆಪ್ತ ಮೂಲಗಳ ಪ್ರಕಾರ, ‘ಹೇರಾ ಫೇರಿ 3 ಚಿತ್ರಕ್ಕಾಗಿ ಪರೇಶ್ ರಾವಲ್ ಅವರ ಒಟ್ಟು ಸಂಭಾವನೆಯನ್ನು 15 ಕೋಟಿಗೆ ನಿಗದಿಪಡಿಸಲಾಗಿತ್ತು. ಆದರೆ, ಅಗ್ರಿಮೆಂಟ್ ಷರತ್ತಿನ ಪ್ರಕಾರ ಅವರಿಗೆ ಕೇವಲ 11 ಲಕ್ಷ ಮುಂಗಡ ನೀಡಿ, ಬಾಕಿ ಉಳಿದ 14.89 ಕೋಟಿ ರೂಪಾಯಿಗಳನ್ನು ಸಿನಿಮಾ ಬಿಡುಗಡೆಯಾದ ಒಂದು ತಿಂಗಳ ನಂತರ ನೀಡುವುದಾಗಿ ತಿಳಿಸಲಾಗಿತ್ತು. ಈ ವಿಲಕ್ಷಣ ಷರತ್ತಿನ ಬಗ್ಗೆ ಹಿರಿಯ ನಟ ಪರೇಶ್ ರಾವಲ್ ಅವರಿಗೆ ತೀವ್ರ ಆಕ್ಷೇಪವಿತ್ತು’ ಎಂದು ತಿಳಿದುಬಂದಿದೆ.
ಚಿತ್ರದ ಮುಖ್ಯ ಶೂಟಿಂಗ್ ಮುಂದಿನ ವರ್ಷವಷ್ಟೇ (2027) ಆರಂಭವಾಗಲು ನಿರ್ಧರಿಸಲಾಗಿದೆ. ಇದರರ್ಥ ‘ಹೇರಾ ಫೇರಿ 3’ ಸಿನಿಮಾ 2027 ರ ಕೊನೆಯ ಭಾಗದಲ್ಲಿ ಅಥವಾ 2028 ರಲ್ಲಷ್ಟೇ ತೆರೆಗೆ ಬರುವ ಸಾಧ್ಯತೆಯಿದೆ. ಸಂಭಾವನೆಯ ನಿಯಮಗಳ ಪ್ರಕಾರ, ಪರೇಶ್ ರಾವಲ್ ಅವರು ತಮ್ಮ ಬಾಕಿ ಹಣವನ್ನು ಪಡೆಯಲು ಕನಿಷ್ಠ ಎರಡು ವರ್ಷಗಳ ಕಾಲ ಕಾಯಬೇಕಾಗುತ್ತಿತ್ತು. ಈ ಸುದೀರ್ಘ ಕಾಯುವಿಕೆಗೆ ಒಪ್ಪದ ನಟ, ಪ್ರಾಜೆಕ್ಟ್ನಿಂದ ಹೊರಬರಲು ನಿರ್ಧರಿಸಿದರು. ಆದಾಗ್ಯೂ, ಈ ವರದಿಗಳ ಬಗ್ಗೆ ನಟನ ಕಡೆಯಿಂದಾಗಲಿ ಅಥವಾ ಚಿತ್ರತಂಡದಿಂದಾಗಲಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಇದು ಈ ಚಿತ್ರಕ್ಕೆ ಎದುರಾಗುತ್ತಿರುವ ಮೊದಲ ಸಮಸ್ಯೆಯಲ್ಲ. ಕಳೆದ ವರ್ಷವೂ ಪರೇಶ್ ರಾವಲ್ ಹೇರಾ ಪೇರಿ 3 ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆಗ ಅಕ್ಷಯ್ ಕುಮಾರ್ ಅವರ ಪ್ರೊಡಕ್ಷನ್ ಬ್ಯಾನರ್ ‘ಕೇಪ್ ಆಫ್ ಗುಡ್ ಫಿಲ್ಮ್ಸ್’, ಹಠಾತ್ ಎಕ್ಸಿಟ್ನಿಂದಾಗಿ ತಮಗೆ ನಷ್ಟವಾಗಿದೆ ಎಂದು ಆರೋಪಿಸಿ ಪರೇಶ್ ರಾವಲ್ ವಿರುದ್ಧ 25 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ನೋಟಿಸ್ ಜಾರಿ ಮಾಡಿತ್ತು. ತದನಂತರ ಉಭಯ ನಟರು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡಿದ್ದರು ಮತ್ತು ಅಕ್ಷಯ್ ಕೇಸ್ ವಾಪಸ್ ಪಡೆದಿದ್ದರು. ಇತ್ತೀಚೆಗಷ್ಟೇ ಅಕ್ಷಯ್, ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ಜೊತೆಯಾಗಿ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ನಟಿಸುತ್ತಿರುವುದರಿಂದ ‘ಹೇರಾ ಫೇರಿ 3’ ಗೊಂದಲಗಳೂ ಮುಗಿದಿವೆ ಎನ್ನಲಾಗಿತ್ತು, ಆದರೆ ಈಗ ಮತ್ತೆ ಹೊಸ ಸಮಸ್ಯೆ ಉದ್ಭವಿಸಿದೆ.
ಶಿವಮೊಗ್ಗ, ಮೇ 24: ಬಿಜೆಪಿ ಮುಖಂಡ, ವಕೀಲ ಭರತ್ ವಿರುದ್ಧ ಅತ್ಯಾಚಾರ ಹಾಗೂ ಬೆದರಿಕೆ ಆರೋಪ ಕೇಳಿಬಂದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೇಪರ್ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ಮಹಿಳೆ ಮೇಲೆ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಬಿಜೆಪಿ ಮುಖಂಡ ಭರತ್ ಪರಾರಿಯಾಗಿದ್ದಾರೆ. ಸದ್ಯ ಪೇಪರ್ಟೌನ್ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಹಂಸಲೇಖ (Hamsalekha) ಮತ್ತು ರವಿಚಂದ್ರನ್ (Ravichandran) ಕನ್ನಡ ಚಿತ್ರರಂಗದ ನಂಬರ್ 1 ‘ಜೋಡಿ’. ಹಲವಾರು ಅತ್ಯದ್ಭುತ ಹಾಡುಗಳನ್ನು ಈ ಜೋಡಿ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇದೀಗ ಈ ಜೋಡಿ ಒಟ್ಟಿಗೆ ಲೈವ್ ಕಾನ್ಸರ್ಟ್ ಮಾಡಲಿದ್ದಾರೆ. ತಮ್ಮ ಜೋಡಿಯಲ್ಲಿ ಬಂದ ಹಾಡುಗಳನ್ನು ಲೈವ್ ಕಾನ್ಸರ್ಟ್ನಲ್ಲಿ ಪುನಃ ಸೃಷ್ಟಿಸಲಿದ್ದಾರೆ. ಹಂಸಲೇಖ ಮತ್ತು ರವಿಚಂದ್ರನ್ ಅವರ ಈ ಕಾನ್ಸರ್ಟ್ಗೆ ‘ಕ್ರೇಜಿ-ಬ್ರಹ್ಮ’ ಎಂದು ಹೆಸರಿಡಲಾಗಿದೆ. ಇಂದು ಈ ಲೈವ್ ಕಾನ್ಸರ್ಟ್ ಬಗ್ಗೆ ಮಾಹಿತಿ ನೀಡಲೆಂದು ಸುದ್ದಿಗೋಷ್ಠಿ ನಡೆಸಲಾಗಿದ್ದು, ಈ ವೇಳೆ ಹಂಸಲೇಖ ಅವರು ತಮ್ಮ ಮಾಜಿ ‘ಯಜಮಾನ್ರು’ ರವಿಚಂದ್ರನ್ ಅವರ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ…
ರಾಯಚೂರು, ಮೇ 24: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಇತ್ತ ರಾಯರ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಅಬ್ಬರಕ್ಕೆ ಕಂಗಾಲಾಗಿದ್ದರು. ಈ ವೇಳೆ ಮಾಹಿತಿ ತಿಳಿದು ತಡ ರಾತ್ರಿ ಪ್ರಾಂಗಣಕ್ಕೆ ದೌಡಾಯಿಸಿದ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರನ್ನು ಭೇಟಿ ಮಾಡಿ ಮಳೆಯಿಂದಾದ ಅಡಚಣೆ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬಳಿಕ ಭಕ್ತರಿಗೆ ಶ್ರೀಮಠದ ಕಲ್ಯಾಣ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಖುದ್ದು ತಾವೇ ನಿಂತು ಭಕ್ತರನ್ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಟ್ಟರು. ವಿಡಿಯೋ ನೋಡಿ.
ಬೆಂಗಳೂರು, (ಮೇ 24): ಸಿಎಂ ಕುರ್ಚಿ ಮುಸುಕಿನ ಗುದ್ದಾಟ ಹಾಗೂ ಸಂಪುಟ ವಿಸ್ತರಣೆಯ ರಾಜಕೀಯ ಪ್ರಹಸನಗಳು. ಹೀಗೆ ಕರ್ನಾಟಕ ಕಾಂಗ್ರೆಸ್ನಲ್ಲಿ (karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಇದರ ಮಧ್ಯೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಹೌದು… ಮೇ 26ರಂದು ದೆಹಲಿಗೆ (New Delhi) ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಕರೆ ನೀಡಿದೆ. ಮೇಲ್ನೋಟಕ್ಕೆ ರಾಜ್ಯಸಭಾ ಚುನಾವಣೆ ಸಂಬಂಧ ಚರ್ಚಿಸಲು ಈ ಆಹ್ವಾನ ನೀಡಿರಬಹುದು ಎನ್ನಲಾಗಿದೆ. ಆದ್ರೆ, ಇದೇ ವೇಳೆ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಹಾಗೂ ನಾಯಕತ್ವ ಬದಲಾವಣೆ ವಿಚಾರವಾಗಿ ನಿರ್ಮಾಣವಾಗಿರುವ ಗೊಂದಲಗಳನ್ನ ಕೇರಳದಲ್ಲಿ ಸರ್ಕಾರ ರಚನೆ ನಂತರ ಗಮನ ಹರಿಸುವುದಾಗಿ ಹೈಕಮಾಂಡ್ ಹೇಳಿತ್ತು. ಅದರಂತೆ ಇದೀಗ ರಾಜ್ಯದತ್ತ ಚಿತ್ತ ಹರಿಸಿದ್ದು, ಮಂಗಳವಾರ ದೆಹಲಿಗೆ ಬರುವಂತೆ ಸಿಎಂ ಹಾಗೂ ಡಿಸಿಎಂಗೆ ಆಹ್ವಾನ ನೀಡಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ.