ರಶ್ಮಿಕಾ ಮಂದಣ್ಣ ಇಂದ ತಡವಾಯ್ತು ವಿಜಯ್ ದೇವರಕೊಂಡ ಸಿನಿಮಾ? – Kannada News | Due To Rashmika Mandanna Ranabaali movie release postponed

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಇದೇ ವರ್ಷ ಫೆಬ್ರವರಿಯಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದಲ ಪರಸ್ಪರ ಪ್ರೀತಿಯಲ್ಲಿದ್ದರು, ಕೊನೆಗೆ ಈ ವರ್ಷ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಬಲು ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಮದುವೆಯ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಈ ಜೋಡಿ ಮುಂದುವರೆಸಿದ್ದು, ಇದೀಗ ಇಬ್ಬರೂ ಒಟ್ಟಿಗೆ ‘ರಣಬಾಲಿ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇಬ್ಬರ ಮದುವೆಗೆ ಮುಂಚೆಯೇ ಈ ಸಿನಿಮಾ ಪ್ರಾರಂಭವಾಗಿತ್ತು. ಇದೇ ಸೆಪ್ಟೆಂಬರ್​​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಸಿನಿಮಾದ ಚಿತ್ರೀಕರಣ ತಡವಾಗುತ್ತಿದೆ.

ಸೆಪ್ಟೆಂಬರ್ 11ಕ್ಕೆ ‘ರಣಬಾಲಿ’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಸಿನಿಮಾ ನಿರೀಕ್ಷೆಗಿಂತಲೂ ತುಸು ತಡವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಸೆಪ್ಟೆಂಬರ್ ಬದಲಿಗೆ ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಆದರೆ ಸಿನಿಮಾದ ಬಿಡುಗಡೆ ತಡವಾಗುವುದಕ್ಕೆ ರಶ್ಮಿಕಾ ಮಂದಣ್ಣ ಕಾರಣ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ರಶ್ಮಿಕಾ ಮಂದಣ್ಣ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು ಅವರ ಡೇಟ್ಸ್ ಸಮಸ್ಯೆಯಿಂದಾಗಿ ಚಿತ್ರೀಕರಣ ತುಸು ತಡವಾಗಿದೆ ಅದರ ಜೊತೆಗೆ ಈಗ ಅವರು ಈಗ ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದು, ಅದೂ ಸಹ ಚಿತ್ರೀಕರಣದ ಹಿನ್ನಡೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕಾಗಿ ಡ್ಯಾನ್ಸ್ ಒಂದರ ತರಬೇತಿ ಪಡೆಯುತ್ತಿದ್ದಾಗ ರಶ್ಮಿಕಾರಿಗೆ ಸೊಂಟದ ಇಂಜುರಿ ಆಗಿದೆಯಂತೆ. ಸುಮಾರು ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಎರಡು ತಿಂಗಳು ಅವರು ಚಿತ್ರೀಕರಣದಿಂದ ದೂರ ಉಳಿಯಬೇಕಿದೆ.

ಇದನ್ನೂ ಓದಿ:ಆರೋಗ್ಯದ ಬಗ್ಗೆ ಹೊಸ ಅಪ್​​​ಡೇಟ್​ ನೀಡಿದ ನಟಿ ರಶ್ಮಿಕಾ ಮಂದಣ್ಣ

ಇದೇ ಕಾರಣಕ್ಕೆ ‘ರಣಬಾಲಿ’ ಸಿನಿಮಾದ ಬಿಡುಗಡೆ ಮುಂದೂಡಲಾಗುತ್ತಿದೆ ಎನ್ನಲಾಗುತ್ತಿದೆ. ರಶ್ಮಿಕಾರ ಗಾಯದಿಂದ ‘ರಣಬಾಲಿ’ ಮಾತ್ರವೇ ಅಲ್ಲದೆ ಅವರ ನಟನೆಯ ‘ಮೈಸಾ’ ಸಿನಿಮಾಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಸಿನಿಮಾಕ್ಕಾಗಿ ಸೆಟ್​​ಗಳನ್ನು ನಿರ್ಮಿಸಿ, ಇತರೆ ಕಲಾವಿದರ ಡೇಟ್ಸ್​​ಗಳನ್ನೆಲ್ಲ ಫೈನಲ್ ಮಾಡಲಾಗಿತ್ತು. ಆದರೆ ಈಗ ರಶ್ಮಿಕಾ ಗಾಯಗೊಂಡಿರುವ ಕಾರಣ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ.

ರಶ್ಮಿಕಾ ಮಂದಣ್ಣ ಪ್ರಸ್ತುತ ‘ರಣಬಾಲಿ’, ‘ಮೈಸಾ’, ಅಲ್ಲು ಅರ್ಜುನ್ ನಟನೆಯ ‘ರಾಕಾ’, ತಮಿಳಿನಲ್ಲಿ ಎರಡು ಹೊಸ ಸಿನಿಮಾ ಹಾಗೂ ಬಾಲಿವುಡ್​​ನಲ್ಲಿ ಒಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಸಿಬಿ ದಾಳಿ: ಪ್ರಜ್ವಲ್ ರೇವಣ್ಣ​ ಬ್ಯಾರಕ್​ನಲ್ಲಿದ್ದ ಫೋನ್​​​​ನಲ್ಲಿ ಏನೇನು ಸಿಕ್ತು? ಸ್ಫೋಟಕ ಅಂಶ ಬಿಚ್ಚಿಟ್ಟ ಅಲೋಕ್​​ ಕುಮಾರ್ – Kannada News | CCB Raid: What Was Found on Prajwal Revanna’s Phone in Barracks; Alok Kumar Reveals Details

ಬೆಂಗಳೂರು, ಆಗಸ್ಟ್​​ 12: ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ (CCB) ದಾಳಿ ವೇಳೆ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಬ್ಯಾರಕ್​​​ ಸೇರಿ ವಿವಿಧೆಡೆ 10ಕ್ಕೂ ಹೆಚ್ಚು ಮೊಬೈಲ್​​ಗಳು​​ ಪತ್ತೆ ಆಗಿವೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ‘ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್​ಪಿ ಅನ್ಶುಕುಮಾರ್​ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ (DGP Alok Kumar) ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಚಾರ್ಜರ್ ಪತ್ತೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ9 ಜೊತೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿದ್ದು, ‘ನಿನ್ನೆ ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಚಾರ್ಜರ್ ಪತ್ತೆಯಾಗಿದೆ. ಆತನ ಮೊಬೈಲ್​ನಲ್ಲಿ ಒಟಿಟಿ ಆ್ಯಪ್​ಗಳು ಪತ್ತೆಯಾಗಿವೆ. ಜೈಲಿನ ವೈಫೈ ಏನಾದರೂ ಬಳಕೆ ಆಗಿದೆಯಾ ಎಂದು ಪರಿಶೀಲನೆ ಮಾಡ್ತೀನಿ’ ಎಂದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಪ್ರಜ್ವಲ್​​ ರೇವಣ್ಣ ಬ್ಯಾರಕ್​​ ಸೇರಿ ವಿವಿಧೆಡೆ ಒಟ್ಟು 10ಕ್ಕೂ ಹೆಚ್ಚು ಮೊಬೈಲ್​​ಗಳು​​ ಪತ್ತೆ

‘ಈ ಹಿಂದೆ ಸರಬರಾಜು ಆದ ಮೊಬೈಲ್​ಗಳು ಇನ್ನೂ ಒಳಗೆ ಇದೆ. ಕೆಲ ದಿನಗಳ ಹಿಂದೆ ನಾವು ದಾಳಿ ಮಾಡಿದ್ದಾಗ ಏನೂ ಸಿಕ್ಕಿರಲಿಲ್ಲ. ಸದ್ಯ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣರನ್ನು ಸಸ್ಪೆಂಡ್ ಮಾಡಿದ್ದೇನೆ. ಎಸ್​ಪಿ ಅನ್ಶುಕುಮಾರ್​ಗೆ ನೋಟಿಸ್ ನೀಡಿ ಮಾಹಿತಿ ಕೇಳಿದ್ದೇನೆ’ ಎಂದು ಅವರು ಹೇಳಿದರು.

ಮುಲಾಜಿಲ್ಲದೆ ಸಸ್ಪೆಂಡ್ ಎಂದ ಅಲೋಕ್​ ಕುಮಾರ್

ಇನ್ನು ‘ಕೈದಿಗಳ ಜೊತೆಗೆ ಜೈಲಿನ ಅಧಿಕಾರಿಗಳೇ ಶಾಮೀಲು ಆಗಿದ್ದಾರೆ ಎಂದಿರುವ ಅಲೋಕ್​ ಕುಮಾರ್, ಅಧಿಕಾರಿಗಳ ಕೈವಾಡ ಗೊತ್ತಾದರೆ ಮುಲಾಜಿಲ್ಲದೆ ಸಸ್ಪೆಂಡ್ ಮಾಡುತ್ತೇನೆ. ಸರ್ಕಾರ ಕೆಲಸ, ಊಟ ಕೊಟ್ಟಿದೆ ಅಂದರೆ ಅದಕ್ಕೆ ನಿಯತ್ತಾಗಿರಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸಮರ: ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ

‘ಮಂಗಳವಾರ ಸಿಸಿಬಿ ದಾಳಿ ನಡೆಸಿ ಹೋದ ಮೇಲೆ ಜೈಲು ಅಧಿಕಾರಿಗಳಿಗೆ ಮತ್ತೆ ಎರಡು ಮೊಬೈಲ್ ಸಿಕ್ಕಿದೆ. ಇನ್ನೂ ಶೇ.10ರಷ್ಟು ಮೊಬೈಲ್​ಗಳು ಒಳಗೆ ಇರುವ ಸಾಧ್ಯತೆ ಇದೆ’ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chief Electoral Officer Press Meet: ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು, ಆಗಸ್ಟ್ 12): ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು ಮತ್ತೆ ಆ.17ರ ವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಜುಲೈ 29ರವರೆಗಿದ್ದ ಗಡುವನ್ನು ಆ.8ರವರೆಗೆ ವಿಸ್ತರಿಸಿತ್ತು. ಆದ್ರೆ. ಎಸ್ ಐ ಆರ್ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿಬಂದ ಬೆನ್ನಲ್ಲೇ ಆಯೋಗ ಎರಡನೇ ಬಾರಿಗೆ ವಿಸ್ತರಿಸಿದೆ. ಇನ್ನು ಮತದಾರರು ತಮ್ಮ ಸಹಿ ಮಾಡಿದ ಎಣಿಕೆ ನಮೂನೆ (Enumeration Form)ಯನ್ನು ಬೂತ್ ಮಟ್ಟದ ಅಧಿಕಾರಿಗೆ (BLO) ಸಲ್ಲಿಸಿದ್ದರೂ, ತಮ್ಮ ಹೆಸರು ASDDO (Absent, Shifted, Dead, Duplicate, Others) ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದಾರೆ.

Source link

‘ನಾಳೆ ಮಧ್ಯಾಹ್ನ 3 ಗಂಟೆಯವರೆಗೂ ಚರ್ಚೆಗೆ ಸಿದ್ಧ’; ವಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು – Kannada News | Home Minister Amit Shah says ready for discussion in Parliament Session till Thursday 3 pm

ನವದೆಹಲಿ, ಆಗಸ್ಟ್ 12: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯ ವಿಚಾರದಲ್ಲಿ ಅಮಿತ್ ಶಾ (Amit Shah) ಅವರಿಗೆ ಸಂಸತ್ತಿಗೆ ಬರಲು ಧೈರ್ಯವಿಲ್ಲ, ಈ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿಲ್ಲ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಈ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಗೈರುಹಾಜರಿಯನ್ನು ಪ್ರಶ್ನಿಸುವಾಗ ವಿಪಕ್ಷಗಳು ಬಳಸಿದ ‘ಅಸಂಸದೀಯ’ ಪದಗಳ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೇ, ‘ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನಾನು ಸಂಸತ್​ನಲ್ಲಿ ಚರ್ಚೆಗೆ ಸಿದ್ಧವಿದ್ದೇನೆ. ವಿಪಕ್ಷಗಳು ಈಗ ಯಾಕೆ ಓಡಿಹೋಗುತ್ತಿವೆ?’ ಎಂದು ಪ್ರಶ್ನಿಸಿದ್ದಾರೆ.

ಇಂದು ಸಂಸತ್ತಿನ ಸಂಕೀರ್ಣದ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮಿತ್ ಶಾ, “ಸಂಸತ್ ಅಧಿವೇಶನ ಪ್ರಾರಂಭವಾದಾಗಿನಿಂದಲೂ ನಾನು ಪ್ರತಿದಿನವೂ ಬಂದು ನನ್ನ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದೇನೆ. ಆದರೆ, ವಿರೋಧ ಪಕ್ಷಗಳು ಎರಡೂ ಸದನಗಳ ಕಲಾಪ ನಡೆಯಲು ಬಿಡದಿದ್ದಾಗ, ಯಾರಾದರೂ ಏನು ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ವಿಪಕ್ಷಗಳು ಗದ್ದಲ ಎಬ್ಬಿಸಬಾರದು’; ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್​ನಲ್ಲಿ ಭಾಷಣಕ್ಕೆ ಅಮಿತ್ ಶಾ ಸಿದ್ಧ

“ನೀಟ್ ಪ್ರತಿಭಟನೆ ಮತ್ತು ಪೊಲೀಸರ ಕ್ರಮಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈಗಾಗಲೇ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ಪೂರ್ಣಪ್ರಮಾಣದ ಚರ್ಚೆಗೆ ಸಿದ್ಧವಿದೆ ಎಂದು ತಿಳಿಸಿದ್ದು, ಚರ್ಚೆಗೆ ಸಮಯ ನಿಗದಿಪಡಿಸಲು ಮತ್ತು ವಿಪಕ್ಷಗಳಿಗೆ ಸಿದ್ಧರಾಗಲು ಕೋರಲಾಗಿತ್ತು. ಇದೇ ವಿರೋಧ ಪಕ್ಷಗಳ ಆರಂಭಿಕ ಬೇಡಿಕೆಯಾಗಿತ್ತು. ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ನಾನು ಸಹ ಸದನದಲ್ಲಿ ಕುಳಿತು ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದೇನೆ. ಆದರೆ, ವಿಪಕ್ಷಗಳಿಗೆ ಚರ್ಚೆ ನಡೆಯುವುದೇ ಇಷ್ಟವಿಲ್ಲ. ಈಗ ಯಾರು ಓಡಿಹೋಗುತ್ತಿದ್ದಾರೆ ಎಂಬುದನ್ನು ದೇಶದ ಜನರೇ ನಿರ್ಧರಿಸಲಿ” ಎಂದು ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಧ್ಯಾಹ್ನ 3 ಗಂಟೆಯೊಳಗೆ ವಿಪಕ್ಷಗಳು ಸ್ಪೀಕರ್‌ಗೆ ಪತ್ರ ನೀಡಲಿ ಎಂದು ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದರು. ಪತ್ರ ನೀಡಿದರೆ ತಕ್ಷಣವೇ ಚರ್ಚೆ ಆರಂಭಿಸಿ, ತಡರಾತ್ರಿಯವರೆಗೂ ಚರ್ಚೆ ಮುಂದುವರಿಸಿ, ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ನಾನು ಸದನದಲ್ಲೇ ಇದ್ದು ಉತ್ತರ ನೀಡಲು ಸಿದ್ಧ ಎಂದಿದ್ದಾರೆ. “ಇಂದು ಮಧ್ಯಾಹ್ನ 3 ಗಂಟೆಯಿಂದ ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ನಾವು ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆಗೆ ಸಿದ್ಧರಿದ್ದೇವೆ. ನಾನು ಖುದ್ದಾಗಿ ಸದನದಲ್ಲಿ ಕುಳಿತು, ಪ್ರತಿಯೊಬ್ಬರ ಮಾತುಗಳನ್ನು ಆಲಿಸಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ” ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ: ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಪ್ರತಿಪಕ್ಷಗಳ ಮನವಿ ಪರಿಗಣಿಸಲು ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ

“ಸರ್ಕಾರದ ಬಳಿ ಮುಚ್ಚಿಡುವಂತದ್ದು ಯಾವುದೂ ಇಲ್ಲ. ವಿಪಕ್ಷಗಳು ಇಷ್ಟು ದಿನ ಚರ್ಚೆಗೆ ಏಕೆ ಅವಕಾಶ ನೀಡಲಿಲ್ಲ ಎಂಬುದನ್ನೂ ಚರ್ಚಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್‌ಡಿಎ ಸರ್ಕಾರವು ಯಾವುದೇ ವಿಷಯದ ಬಗ್ಗೆಯೂ ಚರ್ಚಿಸಲು ಸಿದ್ಧವಿದ್ದು, ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಬಿಡಬೇಕು” ಎಂದು ಅಮಿತ್ ಶಾ ವಿಪಕ್ಷಗಳಿಗೆ ಮನವಿ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:17 pm, Wed, 12 August 26

Source link

IND vs SL: ಭಾರತ ವಿರುದ್ಧದ ಮೊದಲ ಟೆಸ್ಟ್​ಗೆ ಶ್ರೀಲಂಕಾ ತಂಡ ಪ್ರಕಟ – Kannada News | Sri Lanka Squad Announced for India Test Series: Dickwella Returns, De Silva Captains

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇನ್ನು ಮೂರು ದಿನಗಳಲ್ಲಿ ಅಂದರೆ ಆಗಸ್ಟ್ 15 ರಿಂದ ಪ್ರಾರಂಭವಾಗಲಿದೆ. ಈ ಸರಣಿಗಾಗಿ ಈಗಾಲೇ ಟೀಂ ಇಂಡಿಯಾ ಶ್ರೀಲಂಕಾದಲ್ಲಿದೆ. ಶುಭ್​ಮನ್ ಗಿಲ್ ನಾಯಕತ್ವದ 15 ಸದಸ್ಯರ ತಂಡವನ್ನು ಬಿಸಿಸಿಐ ಎರಡು ವಾರಗಳ ಮೊದಲೇ ಪ್ರಕಟಿಸಿತ್ತು. ಇದೀಗ ಉಭಯ ತಂಡಗಳ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಧನಂಜಯ ಡಿ ಸಿಲ್ವಾ ತಂಡವನ್ನು ಮುನ್ನಡೆಸಲಿದ್ದು, ಕಾಮಿಂದು ಮೆಂಡಿಸ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

ಅನುಭವಿಗಳಿಗೆ ಸ್ಥಾನ

ಅಲ್ಲದೆ ಬರೋಬ್ಬರಿ ಮೂರು ವರ್ಷಗಳ ನಂತರ ನಿರೋಷನ್ ಡಿಕ್ವೆಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಕುಸಲ್ ಮೆಂಡಿಸ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ಅವರು ವಹಿಸಿಕೊಳ್ಳಲಿದ್ದಾರೆ. ಕೊನೆಯ ಬಾರಿಗೆ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದ ನಿರೋಷನ್ ಡಿಕ್ವೆಲ್ಲಾಗೆ ಕೊನೆಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ. ಹಾಗೆಯೇ ಬ್ಯಾಟ್ಸ್‌ಮನ್ ಪಸಿಂದು ಸೂರ್ಯಬಂಡಾರ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅನುಭವಿ ಆಟಗಾರ ದಿನೇಶ್ ಚಾಂಡಿಮಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡದಲ್ಲಿ ಐವರು ಸ್ಪಿನ್ನರ್‌ಗಳು

ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಈ ತಂಡದಲ್ಲಿ ಪ್ರಭಾತ್ ಜಯಸೂರ್ಯ ಸೇರಿದಂತೆ ಐವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದೆ. ಹಾಗೆಯೇ ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆರಂಭಿಕ ಆಟಗಾರ ನಿಶಾನ್ ಮದುಷ್ಕ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಿಶಾನ್ ಮದುಷ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು ಅಭ್ಯಾಸ ಪಂದ್ಯದಲ್ಲಿ ಆಡಿದ್ದ ಸ್ಪಿನ್ನರ್‌ಗಳಾದ ರಮೇಶ್ ಮೆಂಡಿಸ್, ಸೋನಲ್ ದಿನುಷಾ ಮತ್ತು ಕೇಸರ ನುವಂತಾ ಕೂಡ ತಂಡದ ಭಾಗವಾಗಿದ್ದಾರೆ.

ಗಾಲೆ ಟೆಸ್ಟ್ ಪಂದ್ಯಕ್ಕೆ ತಂಡ: ಧನಂಜಯ ಡಿ ಸಿಲ್ವ(ನಾಯಕ), ಲಹಿರು ಉದಾನ, ನಿಶಾನ್ ಮದುಷ್ಕ, ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಲ್, ಪಸಿಂದು ಸೂರಿಯಬಂಡಾರ, ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಕೇಶರ ನುವಂತ, ಮಿಲನ್ ರತ್ನಾಯಕೆ, ಅಸಿತ ಫೆರ್ನಾಂಡೋ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ದಿಲ್ಶನ್ ಮಧುಶಂಕ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್ ಘೋಷಣೆ – Kannada News | Cauvery Water Dispute: KRV Praveen Shetty And Sa Ra Govindu Withdraws Their Support For Karnataka Bandh on August 13

ಬೆಂಗಳೂರು, (ಆಗಸ್ಟ್ 12): ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ (ಆಗಸ್ಟ್ 13) ಕರ್ನಾಟಕ ಬಂದ್​​​​​ಗೆ ಕರೆ ನೀಡಲಾಗಿದೆ. ಆದ್ರೆ, ಈ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌದು….ಕೆಲ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​​​ಗೆ ಬೆಂಬಲ ಘೋಷಿಸಿದ್ದರೆ, ಇನ್ನು ಪ್ರವೀಣ್ ಶೆಟ್ಟಿ ಬಣ ಹಾಗೂ ಸಾರಾ ಗೋವಿಂದ್ ಅವರು ನಾಳಿನ ಬಂದ್​​​​ಗೆ ಬೆಂಬಲ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಕಾವೇರಿ ನದಿ ನೀರಿಗಾಗಿ ಹೋರಾಟ ಮಾಡುತ್ತಲ್ಲೇ ಇದ್ದೇವೆ. ಮುಂದೆಯೂ ಮಾಡುತ್ತೇವೆ. ಆದ್ರೆ, ಗುರುವಾರದ ಕರ್ನಾಟಕ ಬಂದ್​​​ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ – Kannada News | US invites ISRO to join NASA in its Moon Base project, why Indian organization involved in this programme

ಬೆಂಗಳೂರು, ಆಗಸ್ಟ್ 12: ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆಯನ್ನು ನಿರ್ಮಿಸುವ ಹಾಗೂ ಭವಿಷ್ಯದ ಮಂಗಳ ಗ್ರಹದ (Mars) ಸಂಶೋಧನೆಗಳಿಗೆ ಅಡಿಪಾಯ ಹಾಕುವ ನಾಸಾದ ಬೃಹತ್ ಯೋಜನೆಗೆ ಇಸ್ರೋವನ್ನು ಜೊತೆಗೂಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಇದು ಭಾರತದ ಪಾಲಿಗೆ ಬಹಳ ಮಹತ್ವದ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿಗೆ ಸಿಕ್ಕಿರುವ ಪ್ರಮುಖ ಜಾಗತಿಕ ಮನ್ನಣೆ ಇದೆನಿಸಿದೆ. ಬೆಂಗಳೂರಿನಲ್ಲಿ ನಡೆದ 9ನೇ ‘ಭಾರತ-ಯುಎಸ್ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆ’ (India-US CSJWG) ಸಭೆಯಲ್ಲಿ ನಾಸಾ ಈ ಆಹ್ವಾನವನ್ನು ನೀಡಿದೆ.

ಇಸ್ರೋ ಪ್ರಧಾನ ಕಚೇರಿಯಲ್ಲಿ ನಿನ್ನೆ ನಡೆದ ಈ ಸಭೆಯಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಆರ್ಟೆಮಿಸ್ ಒಪ್ಪಂದ ವಿಸ್ತರಣೆ

ಈ ಆಹ್ವಾನವು ಭಾರತ ಮತ್ತು ಅಮೆರಿಕ ನಡುವಿನ ‘ಆರ್ಟೆಮಿಸ್ ಒಪ್ಪಂದ’ದ (Artemis Accords) ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ವೈಜ್ಞಾನಿಕ ದತ್ತಾಂಶಗಳನ್ನು (Scientific Data Sharing) ಪರಸ್ಪರ ಮುಕ್ತವಾಗಿ ಹಂಚಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ಇದನ್ನೂ ಓದಿ: ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್​ಗಳಿಂದಾಗಿ ಇಂಧನ ದುಬಾರಿ

ಚಂದ್ರನ ದಕ್ಷಿಣ ಧ್ರುವದಲ್ಲಿ ‘ಮೂನ್ ಬೇಸ್’; ಯಾಕೆ?

ನಾಸಾದ ‘ಮೂನ್ ಬೇಸ್’ ಯೋಜನೆಯು ಚಂದ್ರನ ದಕ್ಷಿಣ ಧ್ರುವದ ಬಳಿ (Lunar South Pole) ಮಾನವ ಕುಲದ ಮೊದಲ ಖಾಯಂ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಚಂದ್ರನ ಮೇಲೆ ಗಗನಯಾತ್ರಿಗಳು ವಾಸಿಸಲು, ಸಂಶೋಧನೆ ನಡೆಸಲು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇದು ವೇದಿಕೆಯಾಗಲಿದೆ.

ಚಂದ್ರನ ದಕ್ಷಿಣ ಧ್ರುವ ಭಾಗವು ಸದಾ ನೆರಳಲ್ಲೇ ಇರುವ ಜಾಗ. ಇಲ್ಲಿ ವಿಪರೀತ ತಣ್ಣನೆಯ ಜಾಗ. ಇಲ್ಲಿ ನೀರಿನ ಮಂಜುಗಡ್ಡೆ ಇರುವ ಸಾಧ್ಯತೆ ದಟ್ಟವಾಗಿದೆ. ಮಾನವನ ನೆಲೆ ನಿರ್ಮಿಸಿ, ವಿವಿಧ ಪ್ರಯೋಗಗಳನ್ನು ಮಾಡಲು ಈ ಜಾಗ ಹೇಳಿ ಮಾಡಿಸಿದ್ದಾಗಿದೆ ಎಂಬುದು ಹೆಚ್ಚಿನ ವಿಜ್ಞಾನಿಗಳ ಅನಿಸಿಕೆ.

ಭಾರತವನ್ನು ಈ ಯೋಜನೆಗೆ ಆಹ್ವಾನಿಸಿದ್ದು ಯಾಕೆ?

ಅಮೆರಿಕದ ಈ ಮೂನ್ ಬೇಸ್ ಯೋಜನೆಯಲ್ಲಿ ಸುಮಾರು 70 ದೇಶಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಕೊಂಡಿವೆ. ಆದರೆ, ಭಾರತ ಸ್ವತಂತ್ರವಾಗಿ ಬಾಹ್ಯಾಕಾಶ ಪರಿಶೋಧನೆಯಲ್ಲಿರುವ ದೇಶವಾಗಿದೆ. ಸ್ಪೇಸ್ ತಂತ್ರಜ್ಞಾನದಲ್ಲಿ ಸ್ವತಂತ್ರವಾಗಿ ಪರಿಣತಿ ಪಡೆದಿದೆ. ಚಂದ್ರನ ನೆಲಕ್ಕೆ ಈಗಾಗಲೇ ನೌಕೆಯನ್ನು ಕಳುಹಿಸಿದೆ. ಮನುಷ್ಯರನ್ನು ಕಳುಹಿಸುವ ಪ್ಲಾನ್ ಕೂಡ ಹಾಕಿದೆ. ಭಾರತೀಯ ವಿಜ್ಞಾನಿಗಳ ಬಾಹ್ಯಾಕಾಶ ಜ್ಞಾನವು ಮತ್ತು ತಂತ್ರಜ್ಞಾನವು ನಾಸಾದ ಮೂನ್ ಬೇಸ್ ಯೋಜನೆಗೆ ಅನುಕೂಲವಾಗುವಂತೂ ಹೌದು. ಕೆಲವೇ ದೇಶಗಳಿಗೆ ಮಾತ್ರ ಈ ಪರಿಣಿತಿ ಇರುವುದು.

ಇದನ್ನೂ ಓದಿ: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?

ಚೀನಾದಿಂದ ಪರ್ಯಾಯ ಗುಂಪು

ಇನ್ನೊಂದೆಡೆ, ಅಮೆರಿಕದ ಮೂನ್ ಬೇಸ್​ಗೆ ಪರ್ಯಾಯವಾಗಿ ಚೀನಾ ಕೂಡ ಚಂದ್ರ ಯೋಜನೆಗಳನ್ನು ಹಮ್ಮಿಕೊಂಡಿದೆ. ಚೀನಾಗೆ ರಷ್ಯಾ ಜೊತೆಯಾಗಿದೆ. ಎರಡನೇ ವಿಶ್ವ ಮಹಾಯುದ್ಧ ಬಳಿಕ ಅಮೆರಿಕ ಮತ್ತು ಸೋಷಿಯತ್ ರಷ್ಯಾ ನಡುವೆ ಇದ್ದಂತಹ ಶೀತಲ ಸಮರ ಈಗ ಅಮೆರಿಕ ಮತ್ತು ಚೀನಾ ಮಧ್ಯೆ ಶುರುವಾದಂತಿದೆ. ಈ ಸಮರವು ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೆ ಎಡೆ ಮಾಡಿಕೊಡಲೂಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Varalakshmi Vrat: ವರಮಹಾಲಕ್ಷ್ಮಿ ಪೂಜೆಗೆ ಯಾವ ಬಣ್ಣದ ಸೀರೆ ಶುಭ? ಬಣ್ಣಗಳ ಮಹತ್ವ ತಿಳಿಯಿರಿ – Kannada News | Varalakshmi Vrata: Auspicious Saree Colors, Jewelry and Flowers for Lakshmi Puja

ವರಮಹಾಲಕ್ಷ್ಮಿ ವ್ರತ ಮತ್ತು ಪೂಜೆಯ ಸಂದರ್ಭದಲ್ಲಿ ಸೀರೆ, ಆಭರಣ ಹಾಗೂ ಹೂವುಗಳ ಆಯ್ಕೆಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಲಕ್ಷ್ಮಿ ದೇವಿಯ ಪೂಜೆಯಲ್ಲಿ ಕೆಲವು ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸುವ ಸಂಪ್ರದಾಯವಿದೆ. ಹಸಿರು, ಕೆಂಪು, ಹಳದಿ, ಚಿನ್ನ, ಮರೂನ್ ಮತ್ತು ಗುಲಾಬಿ ಬಣ್ಣದ ಸೀರೆಗಳು ಪೂಜೆಯ ಸಂದರ್ಭದಲ್ಲಿ ವಿಶೇಷವಾಗಿ ಜನಪ್ರಿಯವಾಗಿವೆ. ಆದರೆ ಬಣ್ಣಗಳ ಮಹತ್ವವು ಕುಟುಂಬದ ಸಂಪ್ರದಾಯ ಮತ್ತು ಪ್ರಾದೇಶಿಕ ಆಚರಣೆಗಳಿಗೆ ಅನುಗುಣವಾಗಿ ಬದಲಾಗಬಹುದು.

ಹಸಿರು ಸೀರೆ:

ಹಸಿರು ಬಣ್ಣವನ್ನು ಸಂಪತ್ತು, ಅಭಿವೃದ್ಧಿ, ಫಲವತ್ತತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಅನೇಕ ಮಹಿಳೆಯರು ಹಸಿರು ಬಣ್ಣದ ಸೀರೆಯನ್ನು ಆಯ್ಕೆ ಮಾಡುತ್ತಾರೆ. ಹಸಿರು ರೇಷ್ಮೆ ಸೀರೆಗೆ ಚಿನ್ನದ ಜರಿ ಬಾರ್ಡರ್ ಇದ್ದರೆ ಸಾಂಪ್ರದಾಯಿಕ ನೋಟ ಮತ್ತಷ್ಟು ಹೆಚ್ಚುತ್ತದೆ.

ಕೆಂಪು ಬಣ್ಣ:

ಕೆಂಪು ಬಣ್ಣವು ಶಕ್ತಿ, ಭಕ್ತಿ ಮತ್ತು ಮಂಗಳದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಜರಿ ಹೊಂದಿರುವ ಕೆಂಪು ರೇಷ್ಮೆ ಸೀರೆ ವರಮಹಾಲಕ್ಷ್ಮಿ ಪೂಜೆಯಂತಹ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ಹಾಗೂ ಆಕರ್ಷಕ ನೋಟ ನೀಡುತ್ತದೆ.

ಹಳದಿ ಅಥವಾ ಚಿನ್ನದ ಬಣ್ಣ:

ಹಳದಿ ಮತ್ತು ಚಿನ್ನದ ಬಣ್ಣಗಳನ್ನು ಮಂಗಳ, ಸಂಪತ್ತು ಹಾಗೂ ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸುವ ಸಂಪ್ರದಾಯವಿದೆ. ಹೀಗಾಗಿ ಪೂಜೆಯ ಸಂದರ್ಭದಲ್ಲಿ ಹಳದಿ ಅಥವಾ ಚಿನ್ನದ ಛಾಯೆಯ ಸೀರೆಯನ್ನು ಧರಿಸುವುದು ಹಲವೆಡೆ ಜನಪ್ರಿಯವಾಗಿದೆ.

ಮರೂನ್ ಸೀರೆ:

ಮರೂನ್ ಬಣ್ಣದ ಸೀರೆಗಳಿಗೂ ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ವಿಶೇಷ ಮೆಚ್ಚುಗೆ ಇದೆ. ಚಿನ್ನದ ಜರಿ ಅಥವಾ ಲೇಸ್ ಬಾರ್ಡರ್ ಹೊಂದಿರುವ ಮರೂನ್ ರೇಷ್ಮೆ ಸೀರೆ ಸಾಂಪ್ರದಾಯಿಕ ಹಾಗೂ ರಾಜಮನೆತನದಂತಹ ನೋಟ ನೀಡುತ್ತದೆ. ಚಿನ್ನದ ಆಭರಣಗಳು ಮತ್ತು ದೇವಾಲಯದ ವಿನ್ಯಾಸದ ಆಭರಣಗಳೊಂದಿಗೆ ಇದು ಮತ್ತಷ್ಟು ಸುಂದರವಾಗಿ ಕಾಣುತ್ತದೆ.

ಗುಲಾಬಿ ಬಣ್ಣ:

ವರಮಹಾಲಕ್ಷ್ಮಿ ಪೂಜೆಗೆ ಗುಲಾಬಿ ಬಣ್ಣವನ್ನೂ ಅನೇಕರು ಆಯ್ಕೆ ಮಾಡುತ್ತಾರೆ. ವಿಶೇಷವಾಗಿ ರಾಣಿ ಪಿಂಕ್‌ನಂತಹ ಗಾಢ ಗುಲಾಬಿ ಛಾಯೆಗಳು ರೇಷ್ಮೆ ಸೀರೆಗಳಿಗೆ ಹಬ್ಬದ ಮೆರುಗು ನೀಡುತ್ತವೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ರೇಷ್ಮೆ ಸೀರೆಗೆ ವಿಶೇಷ ಆದ್ಯತೆ:

ವರಮಹಾಲಕ್ಷ್ಮಿ ವ್ರತದಂತಹ ಸಾಂಪ್ರದಾಯಿಕ ಪೂಜಾ ಸಂದರ್ಭಗಳಲ್ಲಿ ರೇಷ್ಮೆ ಸೀರೆ ಧರಿಸುವುದು ಹಲವೆಡೆ ವಾಡಿಕೆಯಾಗಿದೆ. ಹಸಿರು, ಕೆಂಪು, ಮರೂನ್, ಹಳದಿ ಮತ್ತು ಚಿನ್ನದ ಬಣ್ಣಗಳ ಜರಿ ಬಾರ್ಡರ್ ಇರುವ ರೇಷ್ಮೆ ಸೀರೆಗಳು ಪೂಜೆಯ ಸಂದರ್ಭಕ್ಕೆ ವಿಶೇಷವಾಗಿ ಹೊಂದಿಕೆಯಾಗುತ್ತವೆ.

ಆಭರಣ ಮತ್ತು ಹೂವುಗಳಿಂದ ಹೆಚ್ಚಿಸಿ ಸಾಂಪ್ರದಾಯಿಕ ಸೌಂದರ್ಯ:

ಸೀರೆಯ ಬಣ್ಣಕ್ಕೆ ಹೊಂದುವಂತೆ ಸಾಂಪ್ರದಾಯಿಕ ಚಿನ್ನದ ಆಭರಣ, ಲಕ್ಷ್ಮಿ ಹಾರ, ಬಳೆಗಳು ಮತ್ತು ಜಿಮಿಕಿಗಳನ್ನು ಧರಿಸಬಹುದು. ಜಡೆಗೆ ಮಲ್ಲಿಗೆ ಹೂವುಗಳನ್ನು ಮುಡಿಸುವುದರಿಂದ ವರಮಹಾಲಕ್ಷ್ಮಿ ಪೂಜೆಯ ಸಾಂಪ್ರದಾಯಿಕ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.

ಒಂದೇ ಬಣ್ಣದ ಸೀರೆ ಧರಿಸಬೇಕು ಎಂಬ ನಿಯಮವಿಲ್ಲ:

ವರಮಹಾಲಕ್ಷ್ಮಿ ಪೂಜೆಗೆ ನಿರ್ದಿಷ್ಟವಾದ ಒಂದೇ ಬಣ್ಣದ ಸೀರೆಯನ್ನು ಧರಿಸಬೇಕು ಎಂಬ ನಿಯಮ ಎಲ್ಲ ಪ್ರದೇಶಗಳಲ್ಲಿಯೂ ಒಂದೇ ರೀತಿಯಾಗಿಲ್ಲ. ಕುಟುಂಬದ ಸಂಪ್ರದಾಯ, ಪ್ರಾದೇಶಿಕ ಆಚರಣೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ಸೀರೆಯ ಬಣ್ಣವನ್ನು ಆಯ್ಕೆ ಮಾಡಬಹುದು. ಹೀಗಾಗಿ ನಿಮ್ಮ ಮನೆಯಲ್ಲಿ ಯಾವ ಪದ್ಧತಿಯನ್ನು ಅನುಸರಿಸಲಾಗುತ್ತದೆಯೋ ಅದಕ್ಕೆ ಆದ್ಯತೆ ನೀಡುವುದು ಉತ್ತಮ. ಪೂಜೆಯ ಸಂದರ್ಭದಲ್ಲಿ ಭಕ್ತಿ ಮತ್ತು ಶ್ರದ್ಧೆಯೇ ಮುಖ್ಯವಾಗಿದ್ದು, ಸೀರೆಯ ಬಣ್ಣವು ಸಂಪ್ರದಾಯದ ಒಂದು ಭಾಗ ಮಾತ್ರ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್ಯಾದ್ಯಂತ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸಮರ: ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ – Kannada News | Karnataka Imposes One Year Ban on Gutkha and Pan Masala

ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ

ಬೆಂಗಳೂರು, ಆಗಸ್ಟ್ 12: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ರಾಜ್ಯಾದ್ಯಂತ ಕಳಪೆ ಹೋಟೆಲ್‌ಗಳು ಹಾಗೂ ನಿಯಮಬಾಹಿರ ಕಾಸ್ಮೆಟಿಕ್ (ಸೌಂದರ್ಯವರ್ಧಕ) ಉದ್ಯಮಗಳ ವಿರುದ್ಧ ಸರಣಿ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದ ಬೆನ್ನಲ್ಲೇ  ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆಗಸ್ಟ್ 10ರಿಂದಲೇ ಜಾರಿ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಕಲಂ 30(2)(a) ಸೇರಿದಂತೆ Food Safety and Standards Regulations, 2011ರ ನಿಯಮ 2.3.4 ಅಡಿಯಲ್ಲಿ ಈ ಕಠಿಣ ಕ್ರಮ ಜರುಗಿಸಲಾಗಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 2026ರ ಆಗಸ್ಟ್ 10ರಂದು ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಪ್ಯಾಕ್ ಮಾಡಿದ ಅಥವಾ ಪ್ರತ್ಯೇಕವಾಗಿ ಮಾರಾಟ ಮಾಡುವ ಎಲ್ಲಾ ಮಾದರಿಯ ನಿಷೇಧಿತ ತಂಬಾಕು ಉತ್ಪನ್ನಗಳ ಮೇಲೆಯೂ ಇಲಾಖೆ ತೀವ್ರ ನಿಗಾ ಇರಿಸಿದೆ.

ವಿಶೇಷ ಕಾರ್ಯಾಚರಣೆ ಮತ್ತು ಕಠಿಣ ಕ್ರಮ

ರಾಜ್ಯಾದ್ಯಂತ ನಿಯಮ ಉಲ್ಲಂಘನೆಗಳನ್ನು ತಡೆಗಟ್ಟಲು ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಪಾಸಣೆ ಮತ್ತು ಜಾರಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ನಿಷೇಧಿತ ಉತ್ಪನ್ನಗಳ ತಯಾರಿಕೆ, ಮಾರಾಟ ಅಥವಾ ವಿತರಣೆ ಕಂಡುಬಂದರೆ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಇದರೊಂದಿಗೆ, ಸಾರ್ವಜನಿಕರು ತಮ್ಮ ಆಸುಪಾಸಿನಲ್ಲಿ ಇಂತಹ ನಿಷೇಧಿತ ಉತ್ಪನ್ನಗಳ ಅಕ್ರಮ ಮಾರಾಟ ಅಥವಾ ಸಂಗ್ರಹಣೆ ಕಂಡುಬಂದಲ್ಲಿ ತಕ್ಷಣವೇ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಆರೋಗ್ಯಕರ ಹಾಗೂ ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಸಾರ್ವಜನಿಕರು ಸರ್ಕಾರದ ಈ ಮಹತ್ತರ ಆಂದೋಲನಕ್ಕೆ ಪೂರ್ಣ ಸಹಕಾರ ನೀಡಬೇಕಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಮಾಯಣ’ ಗ್ರಾಫಿಕ್ಸ್​ ಟೀಕೆ ಮಾಡಿದವರಿಗೆ ರಣಬೀರ್ ಖಡಕ್ ಉತ್ತರ – Kannada News | Ranbir Kapoor Responds to Ramayana VFX Criticism and Urges Fans to Watch on IMAX

‘ರಾಮಾಯಣ’ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿನ ವಿಎಫ್‌ಎಕ್ಸ್‌ ಗ್ರಾಫಿಕ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಎಲ್ಲಾ ವಿಮರ್ಶೆಗಳಿಗೆ ಚಿತ್ರತಂಡ ಈಗ ಸೂಕ್ತ ಉತ್ತರ ನೀಡಿದೆ. ನಿರ್ದೇಶಕ ನಿತೀಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಟ ರಣಬೀರ್ ಕಪೂರ್ ಈ ಬಗ್ಗೆ ಮಾತನಾಡಿದ್ದಾರೆ. ಪ್ರೇಕ್ಷಕರು ಬಿಗ್ ಸ್ಕ್ರೀನ್ ಅನುಭವಕ್ಕಾಗಿ ಕಾಯಬೇಕು ಎಂದು ವಿನಂತಿಸಿದ್ದಾರೆ.

ಮೊಬೈಲ್ ವೀಕ್ಷಣೆ ಮತ್ತು ಸಿಜಿಐ ಟೀಕೆ

‘ಜನರು ಮೊಬೈಲ್‌ನಲ್ಲಿ ಟ್ರೇಲರ್ ನೋಡಿ ವಿಎಫ್‌ಎಕ್ಸ್ ನಿರ್ಧರಿಸುತ್ತಿದ್ದಾರೆ. ಸಣ್ಣ ಪರದೆಯಲ್ಲಿ ಉತ್ತಮ ಇಂಟರ್ನೆಟ್ ಇಲ್ಲದೆ ಸಿನಿಮಾ ಅಳೆಯುವುದು ತಪ್ಪು. ಇತ್ತೀಚೆಗೆ ಎಲ್ಲರೂ ಸಿಜಿಐ ವಿಮರ್ಶಕರಾಗುತ್ತಿದ್ದಾರೆ. ಕಲಾವಿದರು ವರ್ಷಗಟ್ಟಲೆ ಶ್ರಮಿಸಿ ಕೆಲಸ ಮಾಡುತ್ತಿದ್ದಾರೆ. ಪ್ರೇಕ್ಷಕರು ಇದನ್ನು ಐಮ್ಯಾಕ್ಸ್ ಚಿತ್ರಮಂದಿರಗಳಲ್ಲಿ ನೋಡಿ ತೀರ್ಮಾನಿಸಬೇಕು’ ಎಂದು ರಣಬೀರ್ ಹೇಳಿದ್ದಾರೆ.

ತಾಂತ್ರಿಕ ಸವಾಲುಗಳು ಮತ್ತು ಪೂರ್ಣಗೊಳ್ಳದ ಕೆಲಸ

ಟ್ರೇಲರ್ ಬಿಡುಗಡೆಯಾದಾಗ ಸಿನಿಮಾದ ಕೊನೆಯ ಹಂತದ ಕೆಲಸಗಳು ನಡೆಯುತ್ತಿರುತ್ತವೆ. ಇನ್ನೂ ಆರು ಎಂಟು ತಿಂಗಳು ಕೆಲಸ ಬಾಕಿ ಇರುತ್ತದೆ. ದೃಶ್ಯಾವಳಿಗಳನ್ನು ಪೂರ್ಣವಾಗಿ ಮುಗಿಸಲು ಸಮಯ ಬೇಕಾಗುತ್ತದೆ. ‘ಡಿಎನ್‌ಇಜಿ’ ಸಂಸ್ಥೆ ಹಲವು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಂಸ್ಥೆಗೆ ರಾಮಾಯಣ ಅತ್ಯಂತ ಸವಾಲಿನ ಯೋಜನೆಯಾಗಿದೆ. ನಿತೀಶ್ ತಿವಾರಿ ಪ್ರಕಾರ ಕೆಲವು ದೃಶ್ಯಗಳಿಗೆ ಮೂರು ವರ್ಷ ಹಿಡಿದಿದೆ.

ಇದನ್ನೂ ಓದಿ: ಭಾರತಕ್ಕೂ ಮುನ್ನ ವಿದೇಶದಲ್ಲಿ ರಾಮಾಯಣ ರಿಲೀಸ್; ಲೀಕ್ ಭೀತಿಯಲ್ಲಿ ಫ್ಯಾನ್ಸ್ ಅಪ್ಸೆಟ್

ಸಿನಿಮಾದ ಬಿಡುಗಡೆ ವಿವರ

ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗ ಈ ವರ್ಷದ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರದಲ್ಲಿದ್ದಾರೆ. ಸನ್ನಿ ಡಿಯೋಲ್ ಹಾಗೂ ರವಿ ದುಬೆ ಕೂಡ ಅಭಿನಯಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಭಾರತದಲ್ಲಿ ಇದನ್ನು ವಿತರಣೆ ಮಾಡುತ್ತಿದೆ. ಜಗತ್ತಿನಾದ್ಯಂತ ಸುಮಾರು 59,000 ಪರದೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ದೊಡ್ಡ ಪರದೆಯಲ್ಲಿ ಹೊಸ ಅನುಭವ ನೀಡಲು ತಂಡ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version