‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’; ನೀನಾಸಂ ಸತೀಶ್ – Kannada News | Ninasam Satish Says hero Should release one Cinema Per Year

ಇಂಡಸ್ಟ್ರಿ ಬಡವಾಗಿದೆ, ಸರಿಯಾಗಿ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ ಎನ್ನುವ ಬೇಸರ ಎಲ್ಲರಿಗೂ ಇದೆ. ಇತ್ತೀಚೆಗೆ ಈ ಬಗ್ಗೆ ನೀನಾಸಂ ಸತೀಶ್ ಮಾತನಾಡಿದ್ದಾರೆ. ನಿರ್ಮಾಪಕರ ಬಗ್ಗೆ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡುವ ವಿಷಯವಾಗಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು. ಆಗ ಇಂಡಸ್ಟ್ರಿ ಉಳಿಯುತ್ತದೆ’ ಎಂದರು. ಇದರಿಂದ ಚಿತ್ರರಂಗ ಮೊದಲಿನ ಕಳೆಯನ್ನು ಪಡೆದುಕೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಪರೂಪದ ಪ್ರಕರಣ: ಋತುಸ್ರಾವದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳಲು ಅಸಮರ್ಥ ಯುವತಿಯ ಗರ್ಭಾಶಯ ತೆಗೆಯಲು ಹೈಕೋರ್ಟ್ ಅನುಮತಿ – Kannada News | Karnataka High Court Allows Uterus Removal of 23 Year Old Intellectually Disabled Woman on Health Grounds

ಕರ್ನಾಟಕ ಹೈಕೋರ್ಟ್​​Image Credit source: Getty Images

ಬೆಂಗಳೂರು, ಜೂನ್​​ 23: ಅಪರೂಪದ ಪ್ರಕರಣವೊಂದರಲ್ಲಿ 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ಶಸ್ತ್ರಚಿಕಿತ್ಸೆಯನ್ನು ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಯುವತಿ ದಿನನಿತ್ಯದ ಮೂಲಭೂತ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದು, ನಿರ್ವಹಿಸುವುದು ಹಾಗೂ ಸ್ವತಂತ್ರವಾಗಿ ಬದುಕುವುದು ಸಾಧ್ಯವಾಗದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಈ ಸಂಬಂಧ ನ್ಯಾಯಾಲಯ ತೀರ್ಪು ನೀಡಿದೆ.

ಪೋಷಕರ ವಾದ

ಯುವತಿಯ ಮಾಸಿಕ ಋತುಚಕ್ರ ಅನಿಯಮಿತವಾಗಿದ್ದು, ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ ಮರುಮರು ಸೋಂಕುಗಳು, ಜ್ವರ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಪೋಷಕರು ನ್ಯಾಯಾಲಯಕ್ಕೆ ತಿಳಿಸಿದ್ದರು. ತಾವು ವಯೋವೃದ್ಧರಾಗುತ್ತಿದ್ದು, ಮಗಳ ಏಕೈಕ ಆರೈಕೆದಾರರಾಗಿರುವ ಕಾರಣ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಒತ್ತಡ ಹೆಚ್ಚಾಗಿದೆ ಎಂದು ಉಲ್ಲೇಖಿಸಿ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: 30 ವರ್ಷ ದಾಟಿದ ಬಳಿಕ ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ಈ ಅಭ್ಯಾಸಗಳನ್ನು ಪಾಲಿಸಬೇಕು

ಯುವತಿ ಗ್ಲೋಬಲ್​​ ಡೆವಲಪ್​​ಮೆಂಟ್​​ ಡಿಲೆ ಮತ್ತು ಮೊಡರೇಟ್​​ ಪರ್ಮನೆಂಟ್ ಇಂಟಲೆಕ್ಚುವಲ್​​ ಆ್ಯಂಡ್​​ ಡೆವಲಪ್​​ಮೆಂಟಲ್​​ ಡಿಸಾಬಿಲಿಟಿ ​​ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಸಾಮಾಜಿಕ ವಯಸ್ಸು ಸುಮಾರು 5 ವರ್ಷ 4 ತಿಂಗಳ ಮಗುವಿನ ಮಟ್ಟದಲ್ಲಿದೆ. ಆಕೆಯ ಐಕ್ಯೂ (IQ) 36 ಆಗಿದ್ದು, ಶೇ.75ರಷ್ಟು ಶಾಶ್ವತ ಅಂಗವೈಕಲ್ಯವಿದೆ. ಜೊತೆಗೆ, ಆಕೆ ಅಪಸ್ಮಾರ (seizures) ಸಮಸ್ಯೆಯನ್ನೂ ಎದುರಿಸುತ್ತಿರುವ ಬಗ್ಗೆ ವೈದ್ಯಕೀಯ ಮಂಡಳಿ ಕೂಡ ವರದಿ ನೀಡಿತ್ತು.

ಹೀಗಾಗಿ ಈ ಸಂಬಂಧ ನ್ಯಾಯಮೂರ್ತಿ ಸೂರಜ್​​ ಗೋವಿಂದರಾಜ್​​ ಅವರು ಆದೇಶ ನೀಡಿದ್ದು, ಈ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ, ಸ್ವಚ್ಛತೆ, ಘನತೆ, ಸುರಕ್ಷತೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದಲೇ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದು ಜನಸಂಖ್ಯೆ ನಿಯಂತ್ರಣ, ಬಲವಂತದ ಸಂತಾನೋತ್ಪತ್ತಿ ತಡೆ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಯ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದ ಕ್ರಮವಲ್ಲ. ಬದಲಾಗಿ, ಯುವತಿಯ ಆರೋಗ್ಯ ಮತ್ತು ಕಲ್ಯಾಣದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾದ ನಿರ್ಧಾರ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ – Kannada News | Zee Kannada’s Halli Power Reloaded: Akul Balaji Hosts, Auditions Open in Bengaluru

ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿದ್ದ ಹೈ ವೋಲ್ಟೇಜ್ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈ ಬಾರಿ ಈ ರಿಯಾಲಿಟಿ ಶೋ ‘ಹಳ್ಳಿ ಪವರ್ ರಿಲೋಡೆಡ್’ ಹೆಸರಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಂಪೂರ್ಣವಾಗಿ ರೆಡಿಯಾಗಿದೆ. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಈ ಶೋ ಅನ್ನು ನಡೆಸಿಕೊಡಲಿದ್ದು, ಕಾರ್ಯಕ್ರಮದ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

ಮಾಡರ್ನ್ ಸಿಟಿ ಹುಡುಗಿಯರಿಗೆ ಮುಕ್ತ ಅವಕಾಶ:

‘ಮಾಡರ್ನ್ ಸಿಟಿ ಹುಡುಗಿರೆಲ್ಲಾ ಹಳ್ಳಿಗೆ ಬರೋಕೆ ರೆಡಿನಾ?’ ಎಂಬ ಶೀರ್ಷಿಕೆಯಡಿ ಈ ಬಾರಿ ಆಡಿಷನ್ ಕರೆಯಲಾಗಿದೆ. ನಗರ ಪ್ರದೇಶದ ಆಧುನಿಕ ಹುಡುಗಿಯರು ಹಳ್ಳಿಯ ವಾತಾವರಣದಲ್ಲಿ ಹೇಗೆ ಬದುಕುತ್ತಾರೆ ಮತ್ತು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಈ ಶೋನ ಹೈಲೈಟ್ ಆಗಿರಲಿದೆ. ಆಡಿಷನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳಿಗೆ 18 ರಿಂದ 28 ವರ್ಷಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.

ಆಡಿಷನ್ ದಿನಾಂಕ ಮತ್ತು ಸ್ಥಳದ ವಿವರ:

ದಿನಾಂಕ ಮತ್ತು ಸಮಯ: ಜೂನ್ 27, ಶನಿವಾರದಂದು ಬೆಳಗ್ಗೆ 9 ಗಂಟೆಗೆ ಆಡಿಷನ್ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರಿನ ಚಿಕ್ಕಲ್ಲಸಂದ್ರದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಭಾಗವಹಿಸಲು ಬಯಸುವವರು ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ಜೊತೆಗೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ 9513134434 ಈ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಬಹುದು. ಇನ್ನು ನಿಮ್ಮ ಭಾವಚಿತ್ರ ಹಾಗೂ ಸಂಪೂರ್ಣ ವಿವರಗಳನ್ನು ಮೇಲಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ. ಈ ಸಂಖ್ಯೆಗೆ ಯಾವುದೇ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜೀ ವಾಹಿನಿಯಲ್ಲಿ ಈ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಕಟ್ಟುವಂತಿಲ್ಲ ಮತ್ತು ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಹಳ್ಳಿ ಪವರ್’ ಶೋ ಈ ಮೊದಲು ನಿತ್ಯವೂ ಪ್ರಸಾರ ಆಗಿತ್ತು. ಬೆಳಗಾವಿಯಲ್ಲಿ ಈ ಶೋ ಆಯೋಜನೆಗೊಂಡಿತ್ತು. ಈ ಬಾರಿ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

Published On – 11:21 am, Tue, 23 June 26

Source link

ಟಿ-ಶರ್ಟ್ ಮೇಲಿದ್ದ ಅದೊಂದೇ ವಾಕ್ಯ: ಇಂಟರ್​ವ್ಯೂನಲ್ಲಿ ಪ್ರತಿಷ್ಠಿತ ಕಂಪೆನಿ ಕೆಲಸ ಕಳೆದುಕೊಂಡ ಯುವತಿ! – Kannada News | Job Interview Rejection: Amazon Exec Rejects Candidate Over T Shirt Slogan

ಕೆಲಸ ಕಳೆದುಕೊಂಡ ಯುವತಿImage Credit source: Getty Images

ಮುಂಬೈ: ಇಂಟರ್ವ್ಯೂನಲ್ಲಿ ನಿಮ್ಮ ಪ್ರತಿಭೆ ಎಷ್ಟು ಮುಖ್ಯವೋ, ನಿಮ್ಮ ಡ್ರೆಸ್ಸಿಂಗ್​ ಸೆನ್ಸ್​​ ಮತ್ತು ವರ್ತನೆ ಕೂಡ ಅಷ್ಟೇ ಮುಖ್ಯ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ, ಅಮೆಜಾನ್ ಪ್ರೈಮ್ ವಿಡಿಯೋ (Prime Video) ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ಅಭ್ಯರ್ಥಿಯೊಬ್ಬಳನ್ನು ಇಂಟರ್ವ್ಯೂ ಆರಂಭವಾಗುವ ಮುನ್ನವೇ ರಿಜೆಕ್ಟ್ ಮಾಡಿದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆ ಧರಿಸಿದ್ದ ಟಿ-ಶರ್ಟ್. ಪ್ರೈಮ್ ವಿಡಿಯೋದ ಸೋಶಿಯಲ್ ಮತ್ತು ಎಡಿಟೋರಿಯಲ್ ಲೀಡ್ ಆಗಿರುವ ಭಾವಿಷಾ ಜೈನ್ (Bhavisha Jain) ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರೊಫೈಲ್ ಸೂಪರ್, ಆದರೆ ಟಿ-ಶರ್ಟ್ ಸ್ಲೋಗನ್ ಯಡವಟ್ಟು:

ಭಾವಿಷಾ ಜೈನ್ ತಿಳಿಸಿರುವ ಪ್ರಕಾರ, ಮೂರು ತಿಂಗಳ ಹಿಂದೆ ಅವರು ತಮ್ಮ ತಂಡದ ಕಾಂಟೆಂಟ್ ಕ್ರಿಯೇಷನ್ ಅಥವಾ ಕಲ್ಪನಾತ್ಮಕ (Creative Role) ಹುದ್ದೆಗಾಗಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದರು. ಆಗ ಒಬ್ಬ ಯುವತಿಯ ಸಿವಿ (CV) ಅವರಿಗೆ ತುಂಬಾ ಇಷ್ಟವಾಗಿತ್ತು. ಆಕೆಗೆ ಪ್ರಮುಖ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ ಅನುಭವವಿತ್ತು ಮತ್ತು ಸೋಶಿಯಲ್ ಮೀಡಿಯಾದಲ್ಲಿ 50,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಆಕೆಯ ಪ್ರತಿಭೆ ನೋಡಿ ಭಾವಿಷಾ ಪ್ರಭಾವಿತರಾಗಿದ್ದರು. ಆದರೆ, ಇಂಟರ್ವ್ಯೂ ದಿನದಂದು ಆ ಯುವತಿ ಕ್ಯಾಮೆರಾ ಮುಂದೆ ಬಂದಾಗ ಭಾವಿಷಾ ಅವರಿಗೆ ಶಾಕ್ ಕಾದಿತ್ತು. ಆಕೆ ಧರಿಸಿದ್ದ ಟಿ-ಶರ್ಟ್ ಮೇಲೆ ದೊಡ್ಡದಾಗಿ ಹೀಗೆ ಬರೆಯಲಾಗಿತ್ತು:“I am too hot for a job” (ಅಂದರೆ, ‘ಕೆಲಸ ಮಾಡಲು ನಾನು ತುಂಬಾ ಹಾಟ್ ಆಗಿದ್ದೇನೆ’ ಅಥವಾ ‘ಈ ಕೆಲಸಕ್ಕಿಂತ ನಾನು ಮಿಗಿಲಾದವಳು’). ಇದನ್ನು ನೋಡಿದ ತಕ್ಷಣ ಭಾವಿಷಾ ಅವರು ಇಂಟರ್ವ್ಯೂ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ, ಆಕೆಯನ್ನು ಕೆಲಸಕ್ಕೆ ಆಯ್ಕೆ ಮಾಡದಿರಲು ನಿರ್ಧರಿಸಿದರು.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

“ಇದು ಬಟ್ಟೆಯ ವಿಷಯವಲ್ಲ, ನಿಮ್ಮ ಆಟಿಟ್ಯೂಡ್ ಮುಖ್ಯ!”

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾವಿಷಾ, “ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಾಗಲಿ ಅಥವಾ ಗ್ಲಾಮರಸ್ ಆಗಿದ್ದಾಳೆ ಎಂದಾಗಲಿ ಅಲ್ಲ. ಬದಲಿಗೆ, ಆಕೆ ಧರಿಸಿದ್ದ ಬಟ್ಟೆಯ ಮೇಲಿನ ಸಂದೇಶ ಅವಳಿಗೆ ಈ ಕೆಲಸದ ಮೇಲೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತಿತ್ತು. ನಾವು ಮದುವೆಗೆ ಸ್ವಿಮ್‌ಸೂಟ್ ಹಾಕಿಕೊಂಡು ಹೋಗಲ್ಲ, ಜಿಮ್‌ಗೆ ಟುಕ್ಸೆಡೋ (ಕೋಟ್ ಸೂಟ್) ಧರಿಸಲ್ಲ. ಸಂದರ್ಭಕ್ಕೆ ತಕ್ಕಂತೆ ಇರುವುದು ಕನಿಷ್ಠ ಜವಾಬ್ದಾರಿ” ಎಂದಿದ್ದಾರೆ. “ನಿಮ್ಮನ್ನು ನೀವು ಸಾಬೀತುಪಡಿಸಲು ಇಂಟರ್ವ್ಯೂನಲ್ಲಿ ಕೇವಲ 30 ನಿಮಿಷ ಸಿಗುತ್ತದೆ. ನಿಮ್ಮ ಮಾತು, ನಿಮ್ಮ ಕೆಲಸದ ಫೈಲ್ ಜೊತೆಗೆ ನಿಮ್ಮ ಬಟ್ಟೆಯ ಮೇಲಿರುವ ಬರಹವೂ ನಿಮ್ಮ ವ್ಯಕ್ತಿತ್ವವನ್ನು ಕಮ್ಯುನಿಕೇಟ್ ಮಾಡುತ್ತದೆ. ಆಕೆ ಇಂಟರ್ವ್ಯೂ ಶುರುವಾಗುವ ಮುನ್ನವೇ ತಾನು ಈ ಕೆಲಸಕ್ಕೆ ಮಿಗಿಲಾದವಳು ಎಂದು ಹೇಳಿಕೊಂಡಿದ್ದಳು, ನಾನು ಅದನ್ನೇ ನಂಬಿ ರಿಜೆಕ್ಟ್ ಮಾಡಿದೆ” ಎಂದು ಭಾವಿಷಾ ಬರೆದುಕೊಂಡಿದ್ದಾರೆ. ಸದ್ಯ ಪೋಸ್ಟ್​ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಯಿ ಮುಚ್ಚಿಕೊಂಡ ಆಟಗಾರನನ್ನು ಹೊರಹಾಕಿದ ಮ್ಯಾಚ್ ರೆಫರಿ! – Kannada News | Fifa World Cup 2026: Miguel Almirón sent off for covering his mouth

ಬಾಯಿ ಮುಚ್ಚಿಕೊಂಡಿದ್ದಕ್ಕೆ ಯಾರಾದರೂ ಮೈದಾನದಿಂದ ಹೊರ ಹೋಗ್ತಾರಾ? ಹೋಗ್ತಾರೆ… ಹೋಗಲೇಬೇಕು ಎನ್ನುವುದು ಹೊಸ ನಿಯಮ. ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ವೇಳೆ ಬಾಯಿ ಮುಚ್ಚಿಕೊಂಡು ಮಾತನಾಡಿದಕ್ಕೆ ಪರಾಗ್ವೆ ತಂಡದ ಮಿಚೆಲ್ ಅಲ್ಮಿರೋನ್ ಅವರನ್ನು ಹೊರಗೆ ಕಳುಹಿಸಲಾಗಿದೆ. ಅದು ಸಹ ನೇರವಾಗಿ ರೆಡ್ ಕಾರ್ಡ್ ನೀಡಿ!

ಫಿಫಾ ವಿಶ್ವಕಪ್​ನ 25ನೇ ಪಂದ್ಯದಲ್ಲಿ ಪರಾಗ್ವೆ ಹಾಗೂ ಟರ್ಕಿ ತಂಡಗಳು ಮುಖಾಮುಖಿಯಾಗಿದ್ದವು. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಟರ್ಕಿ ಆಟಗಾರನೊಂದಿಗೆ ವಾಗ್ವಾದ ನಡೆಸುವಾಗ ಅಲ್ಮಿರೋನ್ ತಮ್ಮ ಕೈಯಿಂದ ಬಾಯಿ ಮುಚ್ಚಿಕೊಂಡಿದ್ದರು.

ಇದನ್ನು ಗಮನಿಸಿದ ರೆಫರಿ ಇವಾನ್ ಬಾರ್ಟನ್, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಪರಿಶೀಲನೆ ನಡೆಸಿ ಅಲ್ಮಿರೋನ್‌ಗೆ ನೇರ ರೆಡ್ ಕಾರ್ಡ್ ನೀಡಿದರು. ಪರಿಣಾಮ ಮಿಚೆಲ್ ಅಲ್ಮಿರೋನ್ ಅರ್ಧದಲ್ಲೇ ಮೈದಾನ ತೊರೆಯಬೇಕಾಯಿತು.

ಬಾಯಿ ಮುಚ್ಚಿದಕ್ಕೆ ರೆಡ್ ಕಾರ್ಡ್​ ಪಡೆದ ಮೊದಲ ಆಟಗಾರ:

ಫಿಫಾ ವಿಶ್ವಕಪ್​ 2026ರ ನಿಯಮದ ಪ್ರಕಾರ, ಆಟಗಾರರ ಮೈದಾನದಲ್ಲಿ ಬಾಯಿ ಮುಚ್ಚಿಕೊಂಡು ವಾಗ್ವಾದ ನಡೆಸುವಂತಿಲ್ಲ. ಒಂದು ವೇಳೆ ಬಾಯಿ ಮುಚ್ಚಿಕೊಂಡು ವಾಕ್ಸಮರ ನಡೆಸುತ್ತಿರುವುದು ಕಂಡು ಬಂದರೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಲಾಗುತ್ತದೆ. ಅದರಂತೆ ಇದೀಗ ಮಿಚೆಲ್ ಅಲ್ಮಿರೋನ್ ಬಾಯಿ ಮುಚ್ಚಿದಕ್ಕೆ ರೆಡ್ ಕಾರ್ಡ್​ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಏನಿದು ಹೊಸ ನಿಯಮ?

ಮೈದಾನದಲ್ಲಿ ಆಟಗಾರರು ಪರಸ್ಪರ ನಿಂದಿಸುವುದನ್ನು ಮತ್ತು ಜನಾಂಗೀಯ ನಿಂದನೆ ಮಾಡಿ ತಪ್ಪಿಸಿಕೊಳ್ಳುವುದನ್ನು ತಡೆಯಲು ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ ಈ ಬಾರಿ ಕಠಿಣ ನಿಯಮವನ್ನು ತಂದಿದೆ. ಈ ನಿಯಮದ ಪ್ರಕಾರ ಮೈದಾನದಲ್ಲಿ ಬಾಯಿ ಮುಚ್ಚಿಕೊಂಡು ಮಾತನಾಡುವಂತಿಲ್ಲ.

  • ಮೈದಾನದಲ್ಲಿ ಎದುರಾಳಿ ಆಟಗಾರ ಅಥವಾ ರೆಫರಿ ಜೊತೆ ಜಗಳವಾಡುವಾಗ ಯಾವುದೇ ಆಟಗಾರ ತನ್ನ ಕೈ, ಜೆರ್ಸಿ ಅಥವಾ ತೋಳಿನಿಂದ ಬಾಯಿ ಮುಚ್ಚಿಕೊಂಡರೆ ಅದಕ್ಕೆ ನೇರ ರೆಡ್ ಕಾರ್ಡ್ ನೀಡಲಾಗುತ್ತದೆ.

ಈ ನಿಯಮ ಜಾರಿಗೆ ತರಲು ಕಾರಣವೇನು?

ಮೈದಾನದಲ್ಲಿ ಆಟಗಾರರು ಎದುರಾಳಿಗಳ ವಿರುದ್ಧ ಜನಾಂಗೀಯ ನಿಂದನೆ ಅಥವಾ ಅಸಭ್ಯ ಪದಗಳನ್ನು ಬಳಸಿ, ಕ್ಯಾಮೆರಾಗಳಿಗೆ ಮತ್ತು ಲಿಪ್-ರೀಡರ್‌ಗಳಿಗೆ ಸಿಗದಂತೆ ಬಾಯಿ ಮುಚ್ಚಿಕೊಳ್ಳುತ್ತಿದ್ದರು. ಸಾಕ್ಷಿ ಸಿಗದ ಕಾರಣ ತನಿಖೆ ನಡೆಸುವುದು ಫಿಫಾಗೆ ಕಷ್ಟವಾಗುತ್ತಿತ್ತು.

ಈ ರಹಸ್ಯ ನಿಂದನೆಗೆ ಸಂಪೂರ್ಣ ಬ್ರೇಕ್ ಹಾಕಲು, “ಬಾಯಿ ಮುಚ್ಚಿಕೊಳ್ಳುವ ಕೃತ್ಯವನ್ನೇ” ಅಪರಾಧ ಎಂದು ಪರಿಗಣಿಸಿ ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇದಾಗ್ಯೂ ತಂತ್ರಗಾರಿಕೆ ರೂಪಿಸಲು, ಫ್ರೀ-ಕಿಕ್ ಬಗ್ಗೆ ಚರ್ಚಿಸಲು ಸ್ವಂತ ತಂಡದ ಆಟಗಾರರೊಂದಿಗೆ ಬಾಯಿ ಮುಚ್ಚಿ ಮಾತನಾಡಬಹುದು. ಆದರೆ ಎದುರಾಳಿ ಆಟಗಾರರೊಂದಿಗೆ ಜಗಳವಾಡುವಾಗ ಅಥವಾ ರೆಫರಿ ಜೊತೆ ವಾದ ಮಾಡುವಾಗ ಕೈ ಅಥವಾ ಜೆರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವಂತಿಲ್ಲ.

ಇದನ್ನೂ ಓದಿ: 3 ಸರಣಿಗಳಿಂದ ಟೀಮ್ ಇಂಡಿಯಾ ಆಟಗಾರ ಔಟ್!

ಈ ನಿಯಮವನ್ನು ಉಲ್ಲಂಘಿಸಿ ಪರಾಗ್ವೆ ತಂಡದ ಮಿಚೆಲ್ ಅಲ್ಮಿರೋನ್ ಟರ್ಕಿ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಇದನ್ನು ಪರಿಶೀಲಿಸಿದ ಮ್ಯಾಚ್ ರೆಫರಿ ತಕ್ಷಣವೇ ರೆಡ್ ಕಾರ್ಡ್ ನೀಡುವ ಮೂಲಕ ಅಲ್ಮಿರೋನ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ.

Published On – 11:30 am, Tue, 23 June 26

Source link

ತೆಲುಗು ಚಿತ್ರರಂಗವನ್ನು ತುಳಿಯಲು ಯತ್ನಿಸುತ್ತಿದೆ ಬಾಲಿವುಡ್​: ಆರೋಪ – Kannada News | Telugu Director accused that Bollywood trying to kill Tollywood

ಒಂದು ಸಮಯವಿತ್ತು, ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ (Bollywood) ಎನ್ನಲಾಗುತ್ತಿತ್ತು, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅದು ಬದಲಾಗಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಉದ್ಯಮ ಎಂಬ ಹೆಸರು ಸಹ ಈಗ ಬಾಲಿವುಡ್​ ಕೈಯಲ್ಲಿಲ್ಲ. ತೆಲುಗು ಚಿತ್ರರಂಗ ಭಾರತದ ಅತ್ಯಂತ ಲಾಭದಾಯಕ ಚಿತ್ರೋದ್ಯಮವಾಗಿ ಬೆಳೆದು ನಿಂತಿದೆ. ರಾಜಮೌಳಿ, ಪ್ರಭಾಸ್, ಅಲ್ಲು ಅರ್ಜುನ್ ಇನ್ನೂ ಕೆಲವು ಸ್ಟಾರ್ ನಟ, ನಿರ್ದೇಶಕರುಗಳು ತೆಲುಗು ಚಿತ್ರರಂಗವನ್ನು ಬಾಲಿವುಡ್​​ಗಿಂತಲೂ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಆದರೆ ತೆಲುಗು ಚಿತ್ರರಂಗದ ಈ ಜಿಗಿತವನ್ನು ಬಾಲಿವುಡ್​ನ ಕೆಲವರಿಗೆ ಸಹಿಸಲಾಗುತ್ತಿಲ್ಲ, ಅವರು ತೆಲುಗು ಚಿತ್ರರಂಗವನ್ನು ತುಳಿಯುವ ಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ತೆಲುಗು ಸಿನಿಮಾ ನಿರ್ದೇಶಕರೊಬ್ಬರು ಬಹಿರಂಗವಾಗಿ ಇಂಥಹಾ ಆರೋಪ ಒಂದನ್ನು ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆ ಆದ ‘ದೀವಾನಾ’ ಹೆಸರಿನ ತೆಲುಗು ಸಿನಿಮಾದ ನಿರ್ದೇಶಕ ಶ್ರೀಕಾಂತ್ ಸಂಗಿಶೆಟ್ಟಿ ಈ ಆರೋಪವನ್ನು ಮಾಡಿದ್ದು, ಮುಂಬೈನಲ್ಲಿ ಕುಳಿತಿರುವ ಕೆಲವು ಬಾಲಿವುಡ್ ಮಂದಿ ತೆಲುಗು ಚಿತ್ರರಂಗವನ್ನು, ತೆಲುಗು ಸಿನಿಮಾಗಳನ್ನು ಕೊಲ್ಲಲು ಯತ್ನಿಸಿದ್ದಾರೆ, ತೆಲುಗು ಚಿತ್ರರಂಗದ ಏಳ್ಗೆಯನ್ನು ಅವರಿಗೆ ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ. ‘ದೀವಾನಾ’ ಸಿನಿಮಾ ‘ಮಾ ಇಂಟಿ ಬಂಗಾರಂ’ ಜೊತೆಗೆ ಕಳೆದ ವಾರ ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಬಿಡುಗಡೆ ಒಂದು ದಿನ ತಡವಾಯ್ತು.

ಈ ಬಗ್ಗೆ ಮಾತನಾಡಿದ ನಿರ್ದೇಶಕರು, ‘ಸಿಬಿಎಫ್​​ಸಿ ಅಧಿಕಾರಿಗಳು ವಿನಾಕಾರಣ ನಮ್ಮ ಸಿನಿಮಾವನ್ನು ಗುರಿ ಮಾಡಿಕೊಂಡರು. ನಾವು ಎಲ್ಲ ನಿಯಮಗಳನ್ನು ಪಾಲಿಸಿದರೂ ಸಹ ನಮಗೆ ‘ಎ’ ಸರ್ಟಿಫಿಕೇಟ್ ನೀಡಿದರು. ಬಾಲಿವುಡ್​​ನ ಹಲವು ಸಿನಿಮಾಗಳು ಕೆಟ್ಟ ಭಾಷೆ, ಅಶ್ಲೀಲ ಡೈಲಾಗ್​​, ಅತಿಯಾದ ವೈಲೆನ್ಸ್ ಹೊಂದಿಯೂ ಸಹ ‘ಯು/ಎ’ ಪಡೆಯುತ್ತವೆ ಆದರೆ ತೆಲುಗು ಸಿನಿಮಾಗಳ ಮೇಲೆ ಅನವಶ್ಯಕ ನಿಯಮ, ಶಿಸ್ತು ಹೇರಲಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯತೆಯ ಸಿನಿಮಾಗಳೇ ಭಾರತೀಯ ಚಿತ್ರರಂಗದ ಭವಿಷ್ಯ: ರಾಮ್ ಚರಣ್

‘ದೀವಾನಾ’ ಸಿನಿಮಾನಲ್ಲಿ ಸಿಬಿಎಫ್​​ಸಿಯು ಒಂದು ಹಾಡನ್ನು ಕತ್ತರಿಸಿದೆ, ಜೊತೆಗೆ ಮಗುವೊಂದು ನಟಿಸಿದ್ದ ದೃಶ್ಯವನ್ನು ತೆಗೆದಿದೆ. ಸಿಬಿಎಫ್​​ಸಿ ತೆಗೆದಿರುವ ಹಾಡು, ಇಡೀ ಸಿನಿಮಾದ ಮುಖ್ಯ ಭಾಗವಾಗಿತ್ತು, ಬಹಳ ಕ್ರಿಯಾಶೀಲತೆಯಿಂದ ಹಾಡನ್ನು ನಾವು ಚಿತ್ರೀಕರಿಸಿದ್ದೆವು ಆದರೆ ಸಿಬಿಎಫ್​​ಸಿ ಹಾಡನ್ನು ಕತ್ತರಿಸಿದೆ. ಸಿಬಿಎಫ್​​ಸಿ ಹೇಳಿದ ಎಲ್ಲವನ್ನೂ ಪಾಲಿಸಿದ ಬಳಿಕವೂ ನಮ್ಮ ಸಿನಿಮಾಕ್ಕೆ ಅವರು ‘ಎ’ ಪ್ರಮಾಣ ಪತ್ರ ನೀಡಿದ್ದಾರೆ ಎಂದು ನಿರ್ದೇಶಕರು ಆಕ್ರೋಶ ಹೊರಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 1,950 ರೂ ಇಳಿಕೆ; ಬೆಳ್ಳಿಯೂ ಅಗ್ಗ – Kannada News | Gold Price Today on 23rd June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆಯ ಹಾದಿಗೆ ಬಂದಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ ಬರೋಬ್ಬರಿ 190-210 ರೂಗಳಷ್ಟು ತಗ್ಗಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಕಡಿಮೆಗೊಂಡರೆ, ಇನ್ನೂ ಕೆಲವೆಡೆ ಅಲ್ಪ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ಇವತ್ತು ಐದು ರೂ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,591 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,375 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,944 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,591 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,375 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,375 ರೂ
  • ಚೆನ್ನೈ: 13,560 ರೂ
  • ಮುಂಬೈ: 13,375 ರೂ
  • ದೆಹಲಿ: 13,390 ರೂ
  • ಕೋಲ್ಕತಾ: 13,375 ರೂ
  • ಕೇರಳ: 13,375 ರೂ
  • ಅಹ್ಮದಾಬಾದ್: 13,380 ರೂ
  • ಜೈಪುರ್: 13,390 ರೂ
  • ಲಕ್ನೋ: 13,390 ರೂ
  • ಭುವನೇಶ್ವರ್: 13,375 ರೂ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸುವುದು ತಿಳಿಯಿರಿ; ಖರ್ಚು ಹೆಚ್ಚದಂತೆ ರಿವಾರ್ಡ್ಸ್ ಪಡೆಯುವ ಸ್ಮಾರ್ಟ್ ಪ್ಲಾನ್ ತಿಳಿದಿರಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (13,013 ರುಪಾಯಿ)
  • ದುಬೈ: 506 ಡಿರಾಮ್ (13,041 ರುಪಾಯಿ)
  • ಅಮೆರಿಕ: 138.50 ಡಾಲರ್ (13,110 ರುಪಾಯಿ)
  • ಸಿಂಗಾಪುರ: 184 ಸಿಂಗಾಪುರ್ ಡಾಲರ್ (13,464 ರುಪಾಯಿ)
  • ಕತಾರ್: 507 ಕತಾರಿ ರಿಯಾಲ್ (13,167 ರೂ)
  • ಸೌದಿ ಅರೇಬಿಯಾ: 521 ಸೌದಿ ರಿಯಾಲ್ (13,137 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (13,118 ರುಪಾಯಿ)
  • ಕುವೇತ್: 42.37 ಕುವೇತಿ ದಿನಾರ್ (13,037 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 245 ರೂ
  • ಚೆನ್ನೈ: 250 ರೂ
  • ಮುಂಬೈ: 245 ರೂ
  • ದೆಹಲಿ: 245 ರೂ
  • ಕೋಲ್ಕತಾ: 245 ರೂ
  • ಕೇರಳ: 250 ರೂ
  • ಅಹ್ಮದಾಬಾದ್: 245 ರೂ
  • ಜೈಪುರ್: 245 ರೂ
  • ಲಕ್ನೋ: 245 ರೂ
  • ಭುವನೇಶ್ವರ್: 250 ರೂ
  • ಪುಣೆ: 245

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಕಸಕೊಪ್ಪ ಡ್ಯಾಂ ಖಾಲಿ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ – Kannada News | Belagavis Monsoon Crisis Deepens: Rakaskoppa Dam Runs Dry, City Faces Severe Water Shortage

ಬೆಳಗಾವಿ, ಜೂನ್ 23: ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ತೀವ್ರ ನೀರಿನ ಬಿಕ್ಕಟ್ಟು ಎದುರಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಾಕಸಕೊಪ್ಪ ಡ್ಯಾಂ ಸಂಪೂರ್ಣವಾಗಿ ಬರಿದಾಗಿದ್ದು, ಡೆಡ್ ಸ್ಟೋರೇಜ್ ನೀರನ್ನೇ ಬಳಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪರಿಸ್ಥಿತಿಯಿಂದಾಗಿ ಬೆಳಗಾವಿ ನಗರದಲ್ಲಿ ಪ್ರತಿ 12 ದಿನಗಳಿಗೊಮ್ಮೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಮೂರರಿಂದ ಐದು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ನೀರಿನ ಅಭಾವದಿಂದ ಈ ಅವಧಿ ಹೆಚ್ಚಾಗಿದೆ. ಡ್ಯಾಂನಲ್ಲಿ ಇನ್ನು ಕೇವಲ ಎರಡು ವಾರಗಳಷ್ಟು ನೀರು ಮಾತ್ರ ಲಭ್ಯವಿದ್ದು, ಮಳೆ ಬರದಿದ್ದರೆ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ರೈತಾಪಿ ವರ್ಗ ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಹಿಡಕಲ್ ಜಲಾಶಯದಲ್ಲೂ ಕೇವಲ 5 ಟಿಎಂಸಿ ನೀರು ಉಳಿದಿದ್ದು, ಒಟ್ಟಾರೆ ಪರಿಸ್ಥಿತಿ ಗಂಭೀರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ನೀರಿನ ನಿರ್ವಹಣೆ ಸವಾಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Nandini milk Reel: ನಂದಿನಿ ಸ್ಟ್ರಾಬೆರಿ ಹಾಲು ನಕಲಿ ಎಂದಿದ್ದ ವೈದ್ಯೆಗೆ ಹೈಕೋರ್ಟ್ ಶಾಕ್; ತನಿಖೆಗೆ ತಡೆ ನೀಡಲು ನಿರಾಕರಣೆ! – Kannada News | Nandini Strawberry Milk Reel: High Court Declines to Stay FIR Against Bengaluru Doctor

ಬೆಂಗಳೂರು, ಜೂನ್ 23: ಕೆಎಂಎಫ್‌ನ (KMF) ಹೆಮ್ಮೆಯ ಬ್ರ್ಯಾಂಡ್ ನಂದಿನಿ ಸ್ಟ್ರಾಬೆರಿ ಫ್ಲೇವರ್ ಹಾಲು ಕೃತಕ ಮತ್ತು ನಕಲಿ ಎಂದು ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels) ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಬೆಂಗಳೂರಿನ ವೈದ್ಯೆ ಡಾ. ಶರಣ್ಯ ಪದ್ಮ ಅವರಿಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಮ್ಮ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ತನಿಖೆಗೆ ತಡೆ ನೀಡಬೇಕೆಂದು ಕೋರಿ ವೈದ್ಯೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮುಖ್ಯಾಂಶಗಳು

  • ನಂದಿನಿ ಸ್ಟ್ರಾಬೆರಿ ಹಾಲು ನಕಲಿ ಎಂದಿದ್ದ ವೈದ್ಯೆಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
  • ಸಾರ್ವಜನಿಕರಲ್ಲಿ ಅನಗತ್ಯವಾಗಿ ಆತಂಕ ಮೂಡಿಸಲು ಇನ್‌ಸ್ಟಾಗ್ರಾಮ್ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
  • ವೈದ್ಯೆ ವಿರುದ್ಧದ ಪೊಲೀಸ್ ಎಫ್‌ಐಆರ್ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಇನ್‌ಸ್ಟಾಗ್ರಾಮ್ ಇರೋದು ಸಾರ್ವಜನಿಕರಲ್ಲಿ ಆತಂಕ ಮೂಡಿಸೋಕಲ್ಲ!

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವೈದ್ಯೆಯ ಪರ ವಕೀಲರಿಗೆ ಪ್ರಶ್ನೆಗಳನ್ನು ಹಾಕಿದೆ. ಹಾಲು ನಕಲಿ, ಸ್ಟ್ರಾಬೆರಿ ಫ್ಲೇವರ್ ಒಳ್ಳೆಯದಲ್ಲ ಎಂದು ಈ ರೀತಿ ಸಾರ್ವಜನಿಕರಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಸಲು ಸಾಧ್ಯವಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ಕುಡಿಯಬೇಡಿ, ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವೇನಿತ್ತು? ನಿಮಗೇನಾದರೂ ಹಾಲಿನ ಗುಣಮಟ್ಟ ಪರೀಕ್ಷಿಸಲು ಸರ್ಕಾರ ಜವಾಬ್ದಾರಿ ನೀಡಿತ್ತೇ? ಸುಮ್ಮನೆ ಸಣ್ಣ ವಿಷಯಗಳಿಗೂ ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಇನ್‌ಸ್ಟಾಗ್ರಾಮ್ ಇರುವುದು ಇಂತಹ ಕೆಲಸಗಳಿಗಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿದೆ.

ವೈದ್ಯೆಯ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಕೇವಲ ಸ್ಟ್ರಾಬೆರಿ ಫ್ಲೇವರ್ ಬಗ್ಗೆ ಮಾತನಾಡಿದ್ದಾರೆಯೇ ಹೊರತು, ಒಟ್ಟಾರೆ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಲ್ಲ. ಈಗಾಗಲೇ ಅವರು ಈ ರೀಲ್ಸ್ ಕುರಿತು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಕೋರಿದ್ದರು. ಆದರೆ, ಕೋರ್ಟ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.

ಕ್ಯಾನ್ಸರ್ ಬರುತ್ತದೆ ಎಂದಿದ್ದ ವೈದ್ಯೆ

ಸುಮಾರು ಒಂದು ತಿಂಗಳ ಹಿಂದೆ ಡಾ. ಶರಣ್ಯ ಪದ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಂದಿನಿ ಹಾಲಿನ ಉತ್ಪನ್ನಗಳು, ವಿಶೇಷವಾಗಿ ಸ್ಟ್ರಾಬೆರಿ ಫ್ಲೇವರ್ ಹಾಲು ಅಸಲಿ ಅಲ್ಲ, ಅದು ಕೇವಲ ಕೃತಕ ಫ್ಲೇವರ್ ಮಾತ್ರ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಈ ಉತ್ಪನ್ನಗಳ ಬಳಕೆಯಿಂದಾಗಿ ಮನುಷ್ಯರಲ್ಲಿ ಆಟೋಇಮ್ಯೂನ್ ಕಾಯಿಲೆಗಳು ಮತ್ತು ಕ್ಯಾನ್ಸರ್ (Cancer) ಬರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ ಹೊಸ ಟೆಕ್ನಾಲಜಿ ಮೊರೆ ಹೋದ KMF: ನಕಲಿ, ಕಲಬೆರಕೆ ನಂದಿನಿ ಉತ್ನನ್ನ ಕಂಡುಹಿಡಿಯುವುದಿನ್ನು ಸುಲಭ

ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆಎಂಎಫ್ (KMF) ನಿರ್ದೇಶಕಿ ಆರ್. ಪದ್ಮಾವತಿ, ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(1)(b) ಅಡಿಯಲ್ಲಿ ಸಾರ್ವಜನಿಕರಲ್ಲಿ ಸುಳ್ಳು ಸುದ್ದಿ ಹರಡಿ ದಾರಿ ತಪ್ಪಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.

ಪ್ರಸ್ತುತ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಹಾಗೂ ದೂರುದಾರೆ ಪದ್ಮಾವತಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪೊಲೀಸ್ ತನಿಖೆ ಮುಂದುವರಿಯಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On – 11:04 am, Tue, 23 June 26

Source link

ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ: ಹೋಮ್ ಗಾರ್ಡ್ ಕಾರು ಜಖಂ, ಅಂಗಡಿ ಪುಡಿ! – Kannada News | Chamarajanagar Wild Elephant Attacks Home Guard Car and Shop at Biligirirangana Hills Temple

ಚಾಮರಾಜನಗರ, ಜೂನ್ 23: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಸ್ವಾಮಿ ಟೈಗರ್ ರಿಸರ್ವ್ (BRT) ಅರಣ್ಯ ಪ್ರದೇಶದಲ್ಲಿರುವ ಸುಪ್ರಸಿದ್ಧ ಬಿಳಿಗಿರಿರಂಗನಾಥ ದೇವಾಲಯದ ಆವರಣದಲ್ಲಿ ಒಂಟಿ ಸಲಗವೊಂದು ದಾಂಧಲೆ ನಡೆಸಿದೆ. ಇಷ್ಟು ದಿನ ಕೇವಲ ಅರಣ್ಯದ ಒಳಗಿನ ಕೆರೆಗಳ ಬಳಿಯಷ್ಟೇ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿತ್ತು. ಇದೀಗ ಒಂಟಿ ಸಲಗವೊಂದು ನೇರವಾಗಿ ದೇವಾಲಯದ ಗೋಪುರದ ಬಳಿಗೇ ಲಗ್ಗೆ ಇಟ್ಟು ಹಾನಿ ಮಾಡಿದೆ. ರಾತ್ರಿ ಕರ್ತವ್ಯ ಮುಗಿಸಿ ಹೋಮ್ ಗಾರ್ಡ್ ರಂಗನಾಥ್ ತಮ್ಮ ಕಾರನ್ನು ದೇವಾಲಯದ ಆವರಣದಲ್ಲೇ ಪಾರ್ಕ್ ಮಾಡಿದ್ದರು. ಮುಂಜಾನೆ ಬಂದು ನೋಡಿದಾಗ ಕಾಡಾನೆಯು ಕಾರಿನ ವೈಪರ್ ಕಿತ್ತುಹಾಕಿ, ದಂತದಿಂದ ತಿವಿದು ಕಾರನ್ನು ಜಖಂ ಮಾಡಿರುವುದು ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ಒಂದು ಪೆಟ್ಟಿ ಅಂಗಡಿಯ ಶೆಟರ್ ಅನ್ನು ಸಹ ಆನೆ ಜಖಂ ಮಾಡಿದೆ. ಇತಿಹಾಸ ಪ್ರಸಿದ್ಧ ರಂಗನಾಥನ ಸನ್ನಿಧಿಗೆ ಆನೆ ನುಗ್ಗಿರುವ ಕಾರಣ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version