ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ: ಹುಡುಗನ ಜೊತೆಗೆ ಹುಡುಗ ಡೇಟಿಂಗ್​​​​​​​​​​​​ ಮಾಡಲು ಕರೆಸಿ ಕಿಡ್ನಾಪ್ – Kannada News | Two Arrested for Man kidnapped Who went Dating with Boy Friend at Bengaluru

ಬೆಂಗಳೂರು, (ಜೂನ್ 22): ಸಾಮಾಜಿಕ ಜಾಲತಾಣಗಳು ಈಗ ಅವುಗಳ ಲಿಮಿಟ್ ಮೀರಿ ಹೋಗಿದೆ. ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾಗಿದ್ದವು ನಂತರದ ದಿನದಲ್ಲಿ ಯುವಕ ಯುವತಿಯರ ಡೇಟಿಂಗ್ ಆ್ಯಪ್​​​ ಗಳಾಗಿ ಬದಲಾಗಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಯುವಕ ಯುವಕರೂ ಡೇಟಿಂಗ್ ಮಾಡುವ ಆ್ಯಪ್​​​ ಗಳು ಬಂದಿದ್ದು, ಇದೇ ರೀತಿ ಆ್ಯಪ್​​​ ನಂಬಿ ಹೋದವನೊಬ್ಬ ಕಿಡ್ನಾಪ್ ಆಗಿ ಚಾಕುವಿನಿಂದ ಇರಿಸಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಹೊರ ಬಂದಿದ್ದೇ ಒಂದು ರೀತಿ ರೋಚಕ.

ಡೇಟೇಂಗ್​​​ಗೆ ಹೋದವನು ಕಿಡ್ನಾಪ್

ಸೈಯದ್ ಮಜರ್ ಎನ್ನುವಾತ ಡೇಟಿಂಗ್ ಆ್ಯಪ್ ನ ಮೂಲಕ ವಾಸೀಂ ಎಂಬಾತನ ಜೊತೆಗೆ ಗೆಳೆತನ ಮಾಡಿದ್ದ. ಆದ್ರೆ ಅಸಲಿಗೆ ಅವನು ವಾಸೀಂ ಆಗಿರಲಿಲ್ಲ ಅವನ ನಿಜವಾದ ಹೆಸರು ತನ್ನು. ಈಗ ಅದು ತನ್ನು ಅಲಿಯಾಸ್ ವಾಸೀಂ ಅಗಿದೆ. ಇಬ್ಬರು ಕೆಲ ದಿನಗಳ ಕಾಲ ಚಾಟ್ ಮಾಡಿದ್ದಾರೆ. ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಏರಿಯಾದಲ್ಲಿ ಭೇಟಿ ಮಾಡಲು ಪ್ಲ್ಯಾನ್ ಮಾಡಿದ್ದರು. ಆದ್ರೆ ತನ್ನು ಅಲಿಯಾಸ್ ವಾಸಿಂ ಒಬ್ಬನೇ ಬಂದಿರಲಿಲ್ಲ. ಬದಲಾಗಿ ಕಾರಿನಲ್ಲಿ ತಬ್ರೇಜ್ ಸೇರಿ ಇನ್ನೂ ಮೂವರನ್ನು ಕರೆದುಕೊಂಡು ಬಂದಿದ್ದ. ಕಾರಿನ ಬಳಿಗೆ ಸೈಯದ್ ನ ಕರೆಸಿಕೊಂಡು ನಂತರ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಚಾಕು ಹಾಕಿ ಬೆದರಿಸಿ ಹಣ, ಮೊಬೈಲ್ ದೋಚಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆ ಕರೆದು ಪೊಲೀಸರಿಂದ ಹಲ್ಲೆ ಆರೋಪ: ಠಾಣೆಯಲ್ಲೇ ವೃದ್ಧ ಸಾವು

ಕಿಡ್ನಾಪ್ ಕಥೆ ಹೊರ ಬಂದಿದ್ದೇ ರೋಚಕ

ಅಷ್ಟಕ್ಕೂ ಈ ಕೇಸ್ ಹೊರ ಬಂದಿದ್ದೆ ಒಂದು ರೋಚಕ.ಆರೋಪಿಗಳು ಚಾಕು ಇರಿದು ಕಾರಿನಲ್ಲೇ ಸುತ್ತಾಡಿಸುತ್ತಿರುವಾಗ ಬಾಗಲೂರ ಬಳಿ ಕಿಡ್ನಾಪ್ ಆಗಿದ್ದ ಸೈಯದ್ ತಪ್ಪಿಸಿಕೊಂಡಿದ್ದಾನೆ. ಕಾರಿನಿಂದ ಓಡಿ ಹೋಗಿ ಅಲ್ಲಿದ್ದ ಸ್ಥಳೀಯರ ಸಹಾಯ ಕೇಳಿದ್ದಾನೆ. ಈ ವೇಳೆ ಸ್ಥಳೀಯರು ಕಾರಿನಲ್ಲಿದ್ದವರನ್ನು ಓಡಿಸಿಕೊಂಡು ಹೋದಾಗ ಓರ್ವ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಬಳಿಕ ಕಾಲು ಮುರಿದುಕೊಂಡವ, ತನ್ನ ಮೇಲೆ ಹಲ್ಲೆ ಮಾಡಿ ಕಾಲು ಮುರಿದ್ದಾರೆ ಎಂದು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸ್ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಡೇಟಿಂಗ್ ಆ್ಯಪ್ ಕಿಡ್ನಾಪ್ ಕಥೆ ಬಯಲಾಗಿದೆ.

ಬಳಿಕ ಸಂಪಿಗೆಹಳ್ಳಿ ಪೊಲೀಸರು ಕಿಡ್ನಾಪ್ ಕೇಸ್ ದಾಖಲು ಮಾಡಿ ಇಬ್ಬರನ್ನು ಅರೆಸ್ಟ್ ಮಾಡಿದ್ದು ಇನ್ನೋರ್ವ ಆಸ್ಪತ್ರೆಯಲ್ಲಿ ಇದ್ದು ಆತ ಗುಣಮುಖ ಆದ ನಂತರ ಬಂಧಿಸಲಿದ್ದಾರೆ. ಜೊತೆಗೆ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ ಯಾವುದೋ ಆ್ಯಪ್ ,ಯಾವುದೋ ವೆಬ್ ಸೈಟ್ ನಲ್ಲಿ ಪರಿಚಯ ಆದ ಅಂತ ಲಿಂಗಭೇದ ಮರೆತು ಡೇಟಿಂಗ್ ಹೋಗುವ ಮೊದಲು ಎಚ್ಚರಿಕೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ದುಡ್ಡಿಗಾಗಿ ಶಕ್ತಿಮಾನ್ ತನ್ನನ್ನೇ ಮಾರಿಕೊಂಡ’: ಜನರಿಂದ ಮುಕೇಶ್ ಖನ್ನಾಗೆ ತೀವ್ರ ಟೀಕೆ – Kannada News | Mukesh Khanna Samay Raina unexpected advertisement collab sparks controversy

ತೀವ್ರ ವಾಗ್ದಾಳಿ ಹಾಗೂ ವಿವಾದಗಳ ನಂತರ, ಬಾಲಿವುಡ್‌ನ ಹಿರಿಯ ನಟ ‘ಶಕ್ತಿಮಾನ್’ ಖ್ಯಾತಿಯ ಮುಕೇಶ್ ಖನ್ನಾ (Mukesh Khanna) ಮತ್ತು ಖ್ಯಾತ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಸಮಯ್ ರೈನಾ (Samay Raina) ಈಗ ಕಮರ್ಷಿಯಲ್ ಜಾಹೀರಾತಿನಲ್ಲಿ ಒಂದಾಗಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಒಬ್ಬರನ್ನೊಬ್ಬರು ಕೆಣಕುತ್ತಾ ಜಗಳವಾಡಿದ್ದ ಈ ಇಬ್ಬರ ದಿಢೀರ್ ಒಂದಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಮುಕೇಶ್ ಖನ್ನಾ ಅವರ ನಡೆಯನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ‘ದುಡ್ಡಿಗಾಗಿ ಶಕ್ತಿಮಾನ್ ತನ್ನನ್ನೇ ತಾನು ಮಾರಿಕೊಂಡ’ ಎಂದು ಜನರು ಟೀಕಿಸುತ್ತಿದ್ದಾರೆ.

ವಿವಾದದ ಮೂಲ 2025ರ ಫೆಬ್ರವರಿಯಲ್ಲಿ ನಡೆದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಹೋಗಿ ನಿಲ್ಲುತ್ತದೆ. ಈ ಶೋನಲ್ಲಿ ರಣವೀರ್ ಅಲಹಾಬಾದಿಯಾ ಆಡಿದ ಕೆಲವು ಮಾತುಗಳು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿ, ಸಮಯ್ ರೈನಾ ಹಾಗೂ ರಣವೀರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ವೇಳೆ ಶೋನ ಕಂಟೆಂಟ್ ಬಗ್ಗೆ ಕಿಡಿಕಾರಿದ್ದ ಮುಕೇಶ್ ಖನ್ನಾ, ಇದು ಅತ್ಯಂತ ಅಶ್ಲೀಲ ಶೋ ಎಂದಿದ್ದರು.

ಟೀಕೆಗೆ ಗುರಿಯಾದ ಜಾಹೀರಾತು:

ಇದಕ್ಕೆ ಪ್ರತಿಯಾಗಿ ಸಮಯ್ ರೈನಾ ಅವರು ತಮ್ಮ ಕಾಮಿಡಿ ಶೋನಲ್ಲಿ ಮುಕೇಶ್ ಖನ್ನಾ ಮತ್ತು ಶಕ್ತಿಮಾನ್ ಪಾತ್ರವನ್ನು ಅಣಕಿಸಿದ್ದರು. ಇದರಿಂದ ಕೋಪಗೊಂಡಿದ್ದ ಮುಕೇಶ್ ಖನ್ನಾ, ‘ಸಮಯ್ ರೈನಾ ನಿನ್ನ ಮುಖಕ್ಕೆ ಮಸಿ ಬಳಿದು ಕತ್ತೆ ಮೇಲೆ ಕೂರಿಸಿ ಇಡೀ ದೇಶ ಸುತ್ತಿಸಬೇಕು. ಮಕ್ಕಳು ನಿನ್ನ ಮೇಲೆ ಮೊಟ್ಟೆ, ಟೊಮೆಟೊ ಎಸೆಯಬೇಕು’ ಎಂದು ತೀವ್ರವಾಗಿ ನಿಂದಿಸಿದ್ದರು.

ಹೀಗೆ ಸಾರ್ವಜನಿಕವಾಗಿ ಪರಸ್ಪರ ಕಿಡಿಕಾರಿದ್ದ ಇಬ್ಬರು, ಈಗ ದಿಢೀರನೆ ಒಂದೇ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ನೆಟ್ಟಿಗರಲ್ಲಿ ಎರಡು ಬಗೆಯ ಅಭಿಪ್ರಾಯವನ್ನು ಮೂಡಿಸಿದೆ. ಕೆಲವರು ಇದನ್ನು ‘ಜಿಟಿಎ 6 ಗೇಮ್ ರಿಲೀಸ್ ಆಗುವ ಮುನ್ನ ನೋಡುತ್ತಿರುವ ಅತ್ಯಂತ ಅನಿರೀಕ್ಷಿತ ಕೊಲಾಬರೇಷನ್’ ಎಂದು ಹಾಸ್ಯ ಮಾಡಿದ್ದರೆ, ಇನ್ನು ಕೆಲವರು ಮುಕೇಶ್ ಖನ್ನಾ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ರಣವೀರ್ ಸಿಂಗ್‌ ಶಕ್ತಿಮಾನ್ ಆಗಲು ಮುಖೇಶ್ ಖನ್ನಾ ಒಪ್ಪಿಲ್ಲ ಎಂಬುದೆಲ್ಲ ಪ್ರಚಾರದ ಗಿಮಿಕ್’

ಮುಕೇಶ್ ಖನ್ನಾ ಅವರ ದ್ವಂದ್ವ ನಿಲುವನ್ನು ಟೀಕಿಸಿರುವ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ‘ಕೆಲವೇ ದಿನಗಳ ಹಿಂದೆ ಸಂಸ್ಕೃತಿ ಹಾಳು ಮಾಡುತ್ತಿದ್ದಾನೆ ಎಂದು ಸಮಯ್ ರೈನಾನನ್ನು ಬಾಯಿಗೆ ಬಂದಂತೆ ಬೈದಿದ್ದ ಶಕ್ತಿಮಾನ್, ಇಂದು ಅದೇ ಸಮಯ್ ಜೊತೆ ನಗುತ್ತಾ ಶೂಟಿಂಗ್ ಮಾಡುತ್ತಿದ್ದಾರೆ. ಹಣಕ್ಕಾಗಿ ತಮ್ಮ ಸಂಸ್ಕಾರ ಮತ್ತು ನೈತಿಕತೆಯನ್ನು ಮಾರಿಬಿಟ್ಟರೇ’ ಎಂದು ಪ್ರಶ್ನಿಸಿದ್ದಾರೆ. ‘ಕೊನೆಗೂ ನಮ್ಮ ಶಕ್ತಿಮಾನ್ ಕೂಡ ಮಾರಾಟವಾದರು. ಸಮಯ್ ರೈನಾ ಜೊತೆ ವಿವಾದ ಮಾಡಿಕೊಂಡರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತದೆ ಎಂಬುದು ಇವರಿಗೆ ಅರ್ಥವಾಗಿದೆ’ ಎಂದು ಟೀಕಿಸಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಋತುಮಾನಕ್ಕೆ ಅನುಗುಣವಾಗಿ ಬರುವ ರೋಗಗಳಿಂದ ದೂರವಿರಬೇಕು ಅಂದ್ರೆ ಈ ಆರೋಗ್ಯ ಸೂತ್ರಗಳನ್ನು ತಪ್ಪದೇ ಪಾಲಿಸಿ – Kannada News | 5 Seasonal Diseases That Spread Fast And How To Stay Safe

ಹವಾಮಾನ ಬದಲಾದಾಗ ಜ್ವರ, ಶೀತ, ಕೆಮ್ಮು ಹಾಗೂ ವೈರಲ್ ಸೋಂಕುಗಳಂತಹ ಋತುಮಾನಕ್ಕೆ ಅನುಗುಣವಾಗಿ ಬರುವ ರೋಗ (Seasonal Infections) ಹೆಚ್ಚಾಗುವುದು ಸಾಮಾನ್ಯ. ಆದರೆ ಕೆಲವು ಸರಳ ಆರೋಗ್ಯ ಅಭ್ಯಾಸಗಳನ್ನು ಪಾಲಿಸುವುದರಿಂದ ಇಂತಹ ಸೋಂಕುಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಸಾಮಾನ್ಯವಾಗಿ ನಾವು ಪ್ರತಿನಿತ್ಯ ಮಾಡವಂತಹ ಅಭ್ಯಾಸಗಳಿಂದ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸೀಸನಲ್ ರೋಗಗಳಿಂದ ದೂರವಿರಬಹುದು. ಹಾಗಾದರೆ ಏನು ಮಾಡಬೇಕು, ಹೇಗೆ ಆರೋಗ್ಯವಾಗಿರಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೈಗಳನ್ನು ಸ್ವಚ್ಛವಾಗಿಡಿ

ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕೈಗಳ ಮೂಲಕವೇ ದೇಹಕ್ಕೆ ಪ್ರವೇಶಿಸುತ್ತವೆ. ಆದ್ದರಿಂದ ಊಟ ಮಾಡುವ ಮೊದಲು, ಹೊರಗಿನಿಂದ ಮನೆಗೆ ಬಂದ ಬಳಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಏನಾದರೂ ಸ್ಪರ್ಶಿಸಿದ ನಂತರ ಸಾಬೂನು ಬಳಸಿ ಕೈಗಳನ್ನು ಚೆನ್ನಾಗಿ ತೊಳೆಯುವುದು ಅತ್ಯಗತ್ಯ.

ಅನಾರೋಗ್ಯ ಇದ್ದರೆ ವಿಶ್ರಾಂತಿ ಪಡೆಯಿರಿ

ಶೀತ, ಜ್ವರ ಅಥವಾ ಫ್ಲೂ ಲಕ್ಷಣಗಳು ಕಂಡುಬಂದರೆ ಕೆಲಸಕ್ಕೆ ಅಥವಾ ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ. ಮನೆಯಲ್ಲೇ ವಿಶ್ರಾಂತಿ ಪಡೆಯುವುದರಿಂದ ಬೇಗ ಗುಣಮುಖರಾಗಬಹುದು ಮತ್ತು ಸೋಂಕು ಇತರರಿಗೆ ಹರಡುವುದನ್ನು ತಡೆಯಬಹುದು.

ಇದನ್ನೂ ಓದಿ: ಜಪಾನೀಯರ ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯವಂತರಾಗಿ ನೂರ್ಕಾಲ ಬಾಳಿ

ಅಗತ್ಯ ಲಸಿಕೆಗಳನ್ನು ಪಡೆಯಿರಿ

ಫ್ಲೂ ಸೇರಿದಂತೆ ಕೆಲವು ಋತುಮಾನಿಕ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಲಸಿಕೆಗಳು ಪರಿಣಾಮಕಾರಿ. ವೈದ್ಯರ ಸಲಹೆಯಂತೆ ವಯಸ್ಸು ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾದ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದು ಉತ್ತಮ.

ಗಾಳಿ ಮತ್ತು ಬೆಳಕು ಇರುವ ವಾತಾವರಣದಲ್ಲಿ ಇರಿ

ಮನೆ ಅಥವಾ ಕಚೇರಿಯ ಕಿಟಕಿಗಳನ್ನು ಸಂಪೂರ್ಣ ಮುಚ್ಚಿಟ್ಟರೆ ಗಾಳಿಯ ಹರಿವು ಕಡಿಮೆಯಾಗುತ್ತದೆ. ಇದರಿಂದ ಸೋಂಕುಕಾರಕ ಜೀವಾಣುಗಳು ಸುಲಭವಾಗಿ ಹರಡಬಹುದು. ಆದ್ದರಿಂದ ಸಾಧ್ಯವಾದಷ್ಟು ತಾಜಾ ಗಾಳಿ ಮತ್ತು ನೈಸರ್ಗಿಕ ಬೆಳಕು ಒಳಬರುವಂತೆ ನೋಡಿಕೊಳ್ಳಿ.

ಸರಿಯಾಗಿ ನಿದ್ರೆ ಮಾಡಿ

ಉತ್ತಮ ರೋಗನಿರೋಧಕ ಶಕ್ತಿಗೆ ಸಮರ್ಪಕ ನಿದ್ರೆ ಅತ್ಯಗತ್ಯ. ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ನಿದ್ರೆ ಪಡೆಯುವುದರಿಂದ ದೇಹವು ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಹಾಯವಾಗುತ್ತದೆ.

ಋತುಮಾನಿಕ ರೋಗಗಳಿಂದ ರಕ್ಷಿಸಿಕೊಳ್ಳಲು ದುಬಾರಿ ಔಷಧಿಗಳಿಗಿಂತ ಸ್ವಚ್ಛತೆ, ಸರಿಯಾದ ನಿದ್ರೆ, ಸರಿಯಾದ ಲಸಿಕೆ ಮತ್ತು ಆರೋಗ್ಯಕರ ಜೀವನಶೈಲಿಯೇ ಅತ್ಯುತ್ತಮ ಮಾರ್ಗವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾಫಿಕ್ ಫೈನ್ ಪಾವತಿಗೆ ಶೇ 50 ವಿನಾಯಿತಿ: ಎರಡು ದಿನದಲ್ಲಿ 2.24 ಕೋಟಿ ರೂ ದಂಡ ಸಂಗ್ರಹ – Kannada News | 50% Traffic Fine Discount Drives Record Collections of ₹2.24 Crore in 48 Hours

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಜೂನ್​​ 22: ರಾಜ್ಯ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ಫೈನ್​ನಲ್ಲಿ (fine) ಶೇಕಡಾ 50 ರಿಯಾಯಿತಿ ಘೋಷಿಸುವ ಮೂಲಕ ವಾಹನ ಸವಾರರಿಗೆ ಗುಡ್​ ನ್ಯೂಸ್​ ನೀಡಿದೆ. ಇದೀಗ ಈ ಉಪಕ್ರಮ ನಿನ್ನೆಯಿಂದ ಅಂದರೆ ಜೂನ್​​ 21ರಿಂದ ಆರಂಭವಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿರುವ ವಾಹನ ಸವಾರರು ಆರಂಭವಾಗಿ ಎರಡು ದಿನದಲ್ಲಿ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು

  • ಸರ್ಕಾರದಿಂದ ಟ್ರಾಫಿಕ್ ಫೈನ್​ನಲ್ಲಿ 50% ರಿಯಾಯಿತಿ
  • ಎರಡು ದಿನದಲ್ಲಿ 2,24,70,450 ರೂ. ದಂಡ ಸಂಗ್ರಹ
  • ಜು.10ರವರೆಗೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರ

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?  

ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್​ ಮಾಡಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಜೂನ್​​ 4ರಂದು ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್​ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50% ರಷ್ಟು ರಿಯಾಯಿತಿಗೆ ಆದೇಶಿಸಲಾಗಿತ್ತು.

ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​

ಈ ಆದೇಶವು ಜೂನ್​​ 21ರಿಂದ ಜಾರಿಗೆ ಬಂದಿದೆ. ಎರಡು ದಿನದಲ್ಲಿ ಅಂದರೆ ಜೂನ್​​ 21 ಮತ್ತು 22ರಂದು ಮಾತ್ರ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ಆಗದೆ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರಿಗಾಗಿ ಸರ್ಕಾರ ಮತ್ತೊಮ್ಮೆ 50% ರಿಯಾಯಿತಿ ಅವಕಾಶ ನೀಡಿದೆ.  ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ಜಂಟಿಯಾಗಿ ಬಾಕಿ ಚಲನ್ ಮೊತ್ತದ ಮೇಲೆ ಈ ಬಾರಿ 50% ರಿಯಾಯಿತಿಯನ್ನು ಇತ್ತೀಚೆಗೆ ಘೋಷಿಸಿತ್ತು. ದಂಡ ಭರಿಸಲು ಪರದಾಡುತ್ತಿದ್ದ ಸವಾರರಿಗೆ ಇದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ

ಸದ್ಯ ವಾಹನ ಸವಾರರು ರಾಜ್ಯ ಸರ್ಕಾರ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು ಕೇವಲ ಎರಡೇ ದಿನದಲ್ಲಿ ಕೋಟ್ಯಂತರ ರೂ ಸಂಗ್ರಹವಾಗಿದೆ. ಜುಲೈ 10ರವರೆಗೆ 50% ರಿಯಾಯಿತಿ ದಂಡ ತುಂಬಲು ಅವಕಾಶವಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ; ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ – Kannada News | Lucknow coaching centre fire accident CM Yogi Adityanath meets injured people

ಲಕ್ನೋ, ಜೂನ್ 22: ಉತ್ತರ ಪ್ರದೇಶದ ಲಕ್ನೋದ ಕೋಚಿಂಗ್ ಇನ್​ಸ್ಟಿಟ್ಯೂಟ್​ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ (Lucknow Fire Accident) 15 ಜನರು ಸಾವನ್ನಪ್ಪಿದ ನಂತರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಜಿಎಂಯುಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು. ಈ ದುರಂತಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಈ ಘಟನೆಯ ಸಂಪೂರ್ಣ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದರು.

ಲಕ್ನೋದ ಕೋಚಿಂಗ್ ಇನ್​ಸ್ಟಿಟ್ಯೂಟ್​​ನಲ್ಲಿ ಸಂಭವಿಸಿದ ಬೆಂಕಿಯ ನಂತರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ (ಕೆಜಿಎಂಯು) ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳು ಮತ್ತು ಗಾಯಾಳುಗಳನ್ನು ಭೇಟಿ ಮಾಡಿದರು. ಅವರೊಂದಿಗೆ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಇದ್ದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಆರ್ಥಿಕ ನೆರವು ಘೋಷಿಸಿದರು.

ಅಲಿಗಂಜ್ ಬೆಂಕಿ ಅವಘಡದ ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಶ್ಚಿಮ ಉತ್ತರ ಪ್ರದೇಶದ ಪ್ರವಾಸವನ್ನು ಮೊಟಕುಗೊಳಿಸಿ ರಾಜ್ಯ ರಾಜಧಾನಿಗೆ ಮರಳಿದರು. ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಅಲಿಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗೆ ದುರಂತದ ಬಗ್ಗೆ ತಿಳಿಯಿತು. ಅಪಘಾತದ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ ಮುಖ್ಯಮಂತ್ರಿ, ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs IRE: ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ ಪ್ರಕಟ – Kannada News | India T20 Tour of Ireland: New Captain Lorcan Tucker, Key Players Injured, Full Squads

ಭಾರತ ಹಾಗೂ ಐರ್ಲೆಂಡ್ (India vs Ireland) ನಡುವೆ ಎರಡು ಪಂದ್ಯಗಳ ಟಿ20 ಸರಣಿ ಇದೇ ಜೂನ್ 26 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾವನ್ನು ಸಹ ಪ್ರಕಟಿಸಲಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತದ ಯುವ ಪಡೆ ಐರ್ಲೆಂಡ್ ಪ್ರವಾಸಕ್ಕೆ ಇಷ್ಟರಲ್ಲೇ ತೆರಳಲಿದೆ. ಈ ನಡುವೆ ಸರಣಿ ಆರಂಭಕ್ಕೆ ನಾಲ್ಕು ದಿನಗಳು ಬಾಕಿ ಇರುವಾಗ ಈ ಸರಣಿಗೆ ಐರ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಸರಣಿಗೆ ಐರ್ಲೆಂಡ್ ತಂಡದ ನಾಯಕನ ಬದಲಾವಣೆಯಾಗಿದೆ. ಬಲಗೈ ಬ್ಯಾಟ್ಸ್‌ಮನ್ ಲೋರ್ಕನ್ ಟಕರ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

2026 ರ ಟಿ20 ವಿಶ್ವಕಪ್ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದ ಪಾಲ್ ಸ್ಟಿರ್ಲಿಂಗ್ ಗಾಯದಿಂದ ಬಳಲುತ್ತಿರುವ ಕಾರಣ ಅವರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಹಾಗೆಯೇ ಸ್ಟಿರ್ಲಿಂಗ್ ಸೇರಿದಂತೆ ಆರು ಆಟಗಾರರು ಕೂಡ ಗಾಯದಿಂದ ಬಳಲುತ್ತಿದ್ದು ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಇನ್ನು ಐರ್ಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರನನ್ನೂ ಆಯ್ಕೆ ಮಾಡಲಾಗಿದ್ದು, ಎಡಗೈ ವೇಗದ ಬೌಲರ್ ಆಗಿರುವ ಜೈ ಮುಂಧ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

6 ಆಟಗಾರರಿಗೆ ಇಂಜುರಿ

  • ಜೋಶ್ ಲಿಟಲ್
  • ಮಾರ್ಕ್ ಅಡೈರ್
  • ಪಾಲ್ ಸ್ಟಿರ್ಲಿಂಗ್
  • ಕರ್ಟಿಸ್ ಕ್ಯಾಂಪರ್
  • ಬ್ಯಾರಿ ಮೆಕಾರ್ಥಿ
  • ಜೋರ್ಡಾನ್ ನೀಲ್

ಐರ್ಲೆಂಡ್ ತಂಡ: ಲೋರ್ಕನ್ ಟಕರ್ (ನಾಯಕ), ರಾಸ್ ಅಡೈರ್, ಬೆನ್ ಕೌಲ್ಟಿಡ್ಜ್, ಗ್ಯಾರೆತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಮ್ಯಾಥ್ಯೂ ಹಂಫ್ರೈಸ್, ಗ್ಯಾವಿನ್ ಹೋಯ್, ಮ್ಯಾಥ್ಯೂ ಹೊಲ್ಲಾರ್ಡ್, ಲಿಯಾಮ್ ಮೆಕಾರ್ಥಿ, ಜೇ ಮುಂದ್ರಾ, ಹ್ಯಾರಿ ಟೆಕ್ಟರ್, ಟಿಮ್ ಟೆಕ್ಟರ್, ರೂಬೆನ್ ವಿಲ್ಸನ್.

ಲೋರ್ಕನ್ ಟಕರ್ ಯಾರು?

ಐರ್ಲೆಂಡ್‌ನ ಹೊಸ ಟಿ20 ನಾಯಕ ಲೋರ್ಕನ್ ಟಕರ್ ಕಳೆದ 10 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. 2016 ರಲ್ಲಿ ಪಾದಾರ್ಪಣೆ ಮಾಡಿದ ಅವರು 91 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 22.7 ರ ಸರಾಸರಿಯಲ್ಲಿ 1,730 ರನ್ ಗಳಿಸಿದ್ದಾರೆ. ಹಾಗೆಯೇ ಏಕದಿನ ಪಂದ್ಯಗಳಲ್ಲಿ 25 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 1,054 ರನ್ ಗಳಿಸಿದ್ದಾರೆ. 10 ಟೆಸ್ಟ್‌ಗಳಲ್ಲಿ ಟಕರ್, 41.83 ರ ಸರಾಸರಿಯಲ್ಲಿ 753 ರನ್ ಗಳಿಸಿದ್ದಾರೆ. ಮೂರು ಮಾದರಿಯಲ್ಲಿ ಅವರು 21 ಅರ್ಧಶತಕಗಳು ಮತ್ತು ಒಂದು ಶತಕವನ್ನು ಸಹ ಬಾರಿಸಿದ್ದಾರೆ.

ಭಾರತದ ಟಿ20 ನಾಯಕನಾಗಿ ಶ್ರೇಯಸ್ ಅಯ್ಯರ್​ ಪ್ರಯಾಣ ಇಷ್ಟರಲ್ಲೇ ಅಂತ್ಯ

 ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ ಮತ್ತು ವೈಭವ್ ಸೂರ್ಯವಂಶಿ

ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಸಂಜೆ 6 ಗಂಟೆಗೆ ಆರಂಭವಾಗಲಿದೆ.
  • ಎರಡನೇ ಟಿ20 ಪಂದ್ಯ ಜೂನ್ 28 ರಂದು ಸಂಜೆ 6 ಗಂಟೆಗೆ ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:00 pm, Mon, 22 June 26

Source link

ಸಿಎಂ ವಿಜಯ್‌ 52ನೇ ಜನ್ಮದಿನಕ್ಕೆ ತ್ರಿಶಾ ಕೃಷ್ಣನ್ ಮೌನ: ಶುಭಾಶಯದ ಸುಳಿವೇ ಇಲ್ಲ – Kannada News | TN Chief Minister Vijay Birthday celebrations Fans wait for Trisha Krishnan wish

ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಸಿ. ಜೋಸೆಫ್ ವಿಜಯ್ (CM Vijay) ಇಂದು (ಜೂನ್ 22) 52ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟನೆಯಿಂದ ರಾಜಕೀಯಕ್ಕೆ ಪ್ರವೇಶಿಸಿ ಇತ್ತೀಚೆಗಷ್ಟೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಅವರಿಗೆ ದೇಶದಾದ್ಯಂತ ರಾಜಕಾರಣಿಗಳು, ಚಿತ್ರರಂಗದ ಪ್ರಮುಖರು ಹಾಗೂ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದಾರೆ. ಆದರೆ ಅವರ ಆಪ್ತ ಗೆಳತಿ ತ್ರಿಶಾ ಕೃಷ್ಣನ್ (Trisha Krishnan) ಮಾತ್ರ ಮೌನ ತಾಳಿದ್ದಾರೆ!

ಹಿರಿಯ ನಟ ಕಮಲ್ ಹಾಸನ್ ಅವರು ಟ್ವೀಟ್ ಮಾಡಿ, ‘ಕೋಟಿ ಕೋಟಿ ಹೃದಯಗಳನ್ನು ಗೆದ್ದಿರುವ ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಹಾಗೂ ನನ್ನ ಪ್ರೀತಿಯ ಕಿರಿಯ ಸೋದರ ವಿಜಯ್ ಅವರಿಗೆ ಹಾರ್ದಿಕ ಜನ್ಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕೂಡ ವಿಶ್ ಮಾಡಿದ್ದಾರೆ.

ಖುಷ್ಬೂ ಅವರು ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡು, ‘ನನ್ನ ಸಹೋದರ, ತಮಿಳುನಾಡಿನ ಸಿಎಂ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆರೋಗ್ಯ, ಆಯುಷ್ಯ ನೀಡಿ ಆಶೀರ್ವದಿಸಲಿ’ ಎಂದು ಹಾರೈಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್, ನಟರಾದ ವಿಶಾಲ್ ಮತ್ತು ರಾಘವ ಲಾರೆನ್ಸ್ ಕೂಡ ವಿಜಯ್‌ಗೆ ಶುಭ ಕೋರಿದ್ದಾರೆ. ಈ ಬಾರಿ ವಿಜಯ್ ಸಿಎಂ ಆಗಿರುವುದರಿಂದ ಅವರ ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ ಎಂದು ಸಹೋದ್ಯೋಗಿಗಳು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ಪ್ರತಿ ವರ್ಷ ವಿಜಯ್ ಜನ್ಮದಿನಕ್ಕೆ ಎಲ್ಲರಿಗಿಂತ ಮುಂಚಿತವಾಗಿ ವಿಶೇಷವಾಗಿ ಶುಭ ಕೋರುತ್ತಿದ್ದ ನಟಿ ತ್ರಿಶಾ ಕೃಷ್ಣನ್ ಈ ಬಾರಿ ಇನ್ನು ಯಾವುದೇ ಪೋಸ್ಟ್ ಹಾಕದಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಬರ್ತ್‌ಡೇ ಟ್ರೆಂಡ್ ಆಗುತ್ತಿದ್ದರೆ, ಅಭಿಮಾನಿಗಳು ಮಾತ್ರ ‘ತ್ರಿಶಾ ಅವರ ಶುಭ ಹಾರೈಕೆಯ ಪೋಸ್ಟ್‌ಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ ತ್ರಿಶಾ ಅವರ ಹಳೆಯ ಟ್ವೀಟ್‌ಗಳನ್ನು ಮರುಹಂಚಿಕೊಂಡು, ‘ನಿಮ್ಮ ಪೋಸ್ಟ್‌ಗಾಗಿ ಕಾಯುತ್ತಿದ್ದೇವೆ’ ಎಂದು ಬರೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ ನೀಡಿ ಸರ್ಕಾರ ಆದೇಶ, ಅರ್ಜಿ ಸಲ್ಲಿಸಲು 15 ದಿನ ಅವಕಾಶ – Kannada News | Karnataka government orders permanent electricity connection without oc here is application date details

ಬೆಂಗಳೂರು, (ಜೂನ್ 22): ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ (Electricity Connection) ಕಾಯುತ್ತಿರುವವರಿಗೆ ಕೊನೆಗೂ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಒಸಿಯಿಂದ (Occupancy Certificate (OC)) ವಿನಾಯಿತಿ ನೀಡಿ ಡಿಕೆ ಶಿವಕುಮಾರ್ (DK Shivakumar) ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಪ್ರಕರಣಗಳಿಗೆ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ, ವಿನಾಯಿತಿ ನೀಡಿ ಇಂಧನ ಇಲಾಖೆ ಆದೇಶಿಸಿದ್ದು, ಅರ್ಹರು ಅರ್ಜಿ ಸಲ್ಲಿಕೆಗೆ 15 ದಿನಗಳವರೆಗೆ ಅವಕಾಶ ಕಲ್ಪಿಸಲಾಗಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ವಸತಿ ಕಟ್ಟಡಗಳ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ
  • ಮೇ 31ರೊಳಗೆ ಪೂರ್ಣಗೊಂಡ ವಸತಿ ಕಟ್ಟಡಗಳಿಗೆ ವಿನಾಯಿತಿ
  • ಒಸಿ ಇಲ್ಲದೆ ಅರ್ಜಿ ಸಲ್ಲಿಸಲು ಇಂದಿನಿಂದ 15 ದಿನಗಳ ಕಾಲಾವಕಾಶ‌
  • ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಶಾಂತರಾಮುರಿಂದ ಆದೇಶ
  • ಜೂ.20ರಂದು ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು

ಅರ್ಜಿ ಸಲ್ಲಿಸಲು 15 ದಿನ ಅವಕಾಶ

ಈ ವಿನಾಯಿತಿ 31 ಮೇ 2026ರೊಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವವರು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವವರು ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಪೂರ್ಣಗೊಳಿಸಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಇಂತಹ ಅರ್ಜಿದಾರರಿಗೆ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದು ಬಾರಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿದ್ಯುತ್ ಸಂಪರ್ಕಕ್ಕೆ ವಿನಾಯಿತಿ ದೊರೆಯಲಿದೆ.

ಇದನ್ನೂ ಓದಿ: 25 ರಿಂದ 30 ಹೊಸ ಜನಪ್ರಿಯ ಯೋಜನೆಗಳ ಘೋಷಣೆಗೆ ಡಿಕೆಶಿ ಸರ್ಕಾರ ಚಿಂತನೆ, ಎಚ್ಚರಿಕೆ ಕೊಟ್ಟ ಆರ್ಥಿಕ ತಜ್ಞರು!

ಯಾರ್ಯಾರಿಗೆ ಇದು ಅನ್ವಯ?

ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಮಹಾನಗರ ಪಾಲಿಕೆಗಳ ವ್ಯಾಪ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೆ ಈ ಆದೇಶ ಅನ್ವಯವಾಗಲಿದೆ. 2400 ಚದರ ಅಡಿಗಳವರೆಗಿನ ಅಳತೆಯ ನಿವೇಶನಗಳ ವಸತಿ ಕಟ್ಟಡಗಳು, ಜೊತೆಗೆ ಜಿ+3 ಅಥವಾ ಸ್ಟಿಲ್ಟ್ ಪಾರ್ಕಿಂಗ್+4 ಮಹಡಿಗಳ ವಸತಿ ಕಟ್ಟಡಗಳಿಗೆ ನಿಯಮ ಅನ್ವಯಿಸುತ್ತದೆ. ಗ್ರಾಮೀಣ ಭಾಗದ ರೈತರ ಮನೆ, ತೋಟದ ಮನೆ, ಕೃಷಿ ಉಪಕರಣದ ಮನೆ, ದನದ ಕೊಟ್ಟಿಗೆ ಹಾಗೂ ರೇಷ್ಮೆ ಗೂಡಿನ ಮನೆಗಳಿಗೂ ವಿನಾಯಿತಿ ನೀಡಲಾಗಿದ್ದು, 15 ದಿನಗಳ ಒಳಗೆ ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಭಾವಚಿತ್ರ ಮತ್ತು ಜಿಪಿಎಸ್ ದಾಖಲೆಯನ್ನು ಅರ್ಜಿ ಜೊತೆಗೆ ಸಲ್ಲಿಸಬೇಕು.

ಇದನ್ನೂ ನೋಡಿ: ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟ ಡಿಕೆ ಶಿವಕುಮಾರ್ : ತಾತ್ಕಾಲಿಕ ವಿದ್ಯುತ್ ಹೊಂದಿದವರಿಗೆ ಕಾಯಂ ಬೆಳಕು, ನೀರು

ಇನ್ನು, ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ, ರೇಷ್ಮೆ ಗೂಡಿನ ಮನೆ – ಇವುಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ, ವಿನಾಯಿತಿ ನೀಡಲಾಗಿದೆ. ವಿದ್ಯುತ್‌ ಸರಬರಾಜು ಕಂಪನಿಗಳು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲು ತೀರ್ಮಾನಿಸಲಾಗಿದೆ. ಇನ್ನು ಈ ನಿರ್ಧಾರದಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯುವ ಪ್ರಕ್ರಿಯೆ ಸುಗಮವಾಗಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಜೂನ್ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2400 ಚದರ್​ ಅಡಿಗಳವರೆಗೆ (+20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ನಿವೇಶನಗಳಲ್ಲಿ ನಿರ್ಮಿಸಲಾದ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ವಿಶೇಷ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಟಿ20 ನಾಯಕನಾಗಿ ಶ್ರೇಯಸ್ ಅಯ್ಯರ್​ ಪ್ರಯಾಣ ಇಷ್ಟರಲ್ಲೇ ಅಂತ್ಯ – Kannada News | Shreyas Iyer’s India T20 Captaincy: Is Shubman Gill the Next Leader After Asian Games?

ರೆವ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಆಯ್ಕೆ ಸಮಿತಿಯು ಶುಭ್​ಮನ್ ಗಿಲ್ ಅವರನ್ನು ಟಿ20 ತಂಡಕ್ಕೂ ಮರಳಿ ಕರೆತಂದು ಅವರಿಗೆ ನಾಯಕತ್ವ ವಹಿಸುವ ಬಗ್ಗೆ ಚಿಂತಿಸಲಾರಂಬಿಸಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದವರೆಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಆಯ್ಕೆದಾರರು ಅಂತಿಮವಾಗಿ ನಿರ್ಧರಿಸಿದ್ದು, ಈ ಕ್ರೀಡಾಕೂಟ ಮುಗಿದ ಬಳಿಕ ಇವರಿಬ್ಬರಲ್ಲಿ ಒಬ್ಬರನ್ನು ಟಿ20 ತಂಡದ ಖಾಯಂ ನಾಯಕನಾಗಿ ನೇಮಿಸುವ ಇರಾದೆಯಲ್ಲಿ ಆಯ್ಕೆ ಸಮಿತಿ ಇದೆ ಎಂದು ವರದಿಯಾಗಿದೆ (PC-PTI).

Source link

ಮರಣ ಹೊಂದಿದ ವ್ಯಕ್ತಿಯ ಮೂಗಿಗೆ ಹತ್ತಿಯನ್ನು ಹತ್ತಿಯನ್ನಿಡುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ – Kannada News | Why is cotton placed in the nose and ears of a dead body? Know the scientific reason behind this

ಹುಟ್ಟು-ಸಾವು ಜಗದ ನಿಯಮ. ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಹೀಗೆ ಸಾವು ಸಂಭವಿಸಿದಾಗ ಪ್ರತಿಯೊಂದು ಧರ್ಮದಲ್ಲೂ ವ್ಯಕ್ತಿಯ ಶವ ಸಂಸ್ಕಾರಕ್ಕೂ ಮುನ್ನ ಹಲವು ವಿಧಿ ವಿಧಾನ, ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಅದೇ ರೀತಿ ಅಂತ್ಯ ಸಂಸ್ಕಾರಕ್ಕೂ ಮುನ್ನ ಮರಣ ಹೊಂದಿದ ವ್ಯಕ್ತಿಯ ಕಿವಿ ಮತ್ತು ಮೂಗಿಗೆ ಹತ್ತಿಯನ್ನು (cotton) ಇಡಲಾಗುತ್ತದೆ. ಮೃತ ವ್ಯಕ್ತಿಗಳ ಅಂತಿಮ ದರ್ಶನದ ವೇಳೆ ನೀವು ಕೂಡ ಇದನ್ನು ಗಮನಿಸಿರಬಹುದಲ್ವಾ. ಅಷ್ಟಕ್ಕೂ ಅಂತ್ಯ ಸಂಸ್ಕಾರಕ್ಕೂ ಮುನ್ನ ಮೃತ ವ್ಯಕ್ತಿಯ ಮೂಗಿಗೆ ಹತ್ತಿಯನ್ನು ಏಕೆ ಇಡಲಾಗುತ್ತದೆ, ಅದರ ಹಿಂದಿನ ವೈಜ್ಞಾನಿಕ ಕಾರಣ ಏನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮೃತ ವ್ಯಕ್ತಿಯ ಮೂಗಿಗೆ ಹತ್ತಿಯನ್ನು ಇಡುವುದೇಕೆ?

ನಮ್ಮಲ್ಲಿ ಹಲವರು ಇದನ್ನು ಕೇವಲ ಹಳೆಯ ಆಚರಣೆ ಅಥವಾ ಮೂಢನಂಬಿಕೆ ಎಂದು ಭಾವಿಸುತ್ತಾರೆ, ಆದರೆ ಇದರ ವೈಜ್ಞಾನಿಕ ಕಾರಣಗಳಿವೆ. ವಾಸ್ತವವಾಗಿ, ಸಾವಿನ ಕೆಲವು ಗಂಟೆಗಳಲ್ಲಿ ಮೃತ ದೇಹದಲ್ಲಿ ಅನೇಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಸಾವಿನ ನಂತರ, ಜೀರ್ಣಾಂಗ ವ್ಯವಸ್ಥೆಯ ಅವಶೇಷಗಳು ಮೀಥೇನ್ ಮತ್ತು ಹೈಡ್ರೋಜನ್ ಸಲ್ಫೈಡ್‌ನಂತಹ ವಿವಿಧ ಅನಿಲಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಅನಿಲಗಳ ಬಿಡುಗಡೆಯು ದೇಹಕ್ಕೆ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಅವುಗಳ ಬಿಡುಗಡೆಯನ್ನು ತಡೆಗಟ್ಟಲು ಕಿವಿ ಮತ್ತು ಮೂಗಿಗೆ ಹತ್ತಿಯನ್ನಿಡಲಾಗುತ್ತದೆ.

ಅಲ್ಲದೆ ಸಾವಿನ ನಂತರ, ದೇಹದೊಳಗೆ ದುರ್ವಾಸನೆಯ ದ್ರವಗಳು ರೂಪುಗೊಳ್ಳುತ್ತವೆ. ಈ ದುರ್ವಾಸನೆಯ ದ್ರವವು ಮೂಗು ಅಥವಾ ಬಾಯಿಯ ಮೂಲಕ ಹೊರಬರಬಹುದು, ಇದರಿಂದಾಗಿ ಬ್ಯಾಕ್ಟೀರಿಯಾಗಳು ಬೇಗನೆ ಹರಡುತ್ತವೆ ಮತ್ತು ದೇಹವು ಊದಿಕೊಳ್ಳಲು ಪ್ರಾರಂಭಿಸುತ್ತದೆ. ಹಾಗಾಗಿ ಮೃತ ದೇಹದಿಂದ ಅನಿಲಗಳು ಮತ್ತು ದುರ್ವಾಸನೆಯ ದ್ರವಗಳು ಹೊರಹೋಗುವುದನ್ನು ತಡೆಯಲು ಕಿವಿ ಮತ್ತು ಮೂಗಿಗೆ ಹತ್ತಿ ಇಡಲಾಗುತ್ತದೆ.

ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?

ಇದರೊಂದಿಗೆ, ಒಬ್ಬ ವ್ಯಕ್ತಿಯು ಸತ್ತ ನಂತರ, ಉಸಿರಾಟವು ನಿಲ್ಲುತ್ತದೆ, ಅಂತಹ ಪರಿಸ್ಥಿತಿಯಲ್ಲಿ ಗಾಳಿಯು ಮೂಗು ಮತ್ತು ಕಿವಿಗಳ ಮೂಲಕ ದೇಹವನ್ನು ಸುಲಭವಾಗಿ ಪ್ರವೇಶಿಸಬಹುದು, ಇದರಿಂದಾಗಿ ದೇಹವು ಊದಿಕೊಳ್ಳಬಹುದು. ಈ ಕಾರಣಕ್ಕಾಗಿಯೂ ಮೂಗಿಗೆ ಹತ್ತಿ ಇಡಲಾಗುತ್ತದೆ. ಒಟ್ಟಾರೆಯಾಗಿ ಮೃತ ವ್ಯಕ್ತಿಯ ಮೂಗು ಮತ್ತು ಕಿವಿಗೆ ಹತ್ತಿ ಇಟ್ಟುಕೊಳ್ಳುವುದರಿಂದ ಕೆಟ್ಟ ವಾಸನೆ ಹರಡುವುದನ್ನು ತಡೆಯಬಹುದು ಮತ್ತು ಶವದ ಮೇಲೆ ನೊಣಗಳು, ಕೀಟಗಳು ಮುತ್ತಿಕೊಳ್ಳುವುದನ್ನು, ಮೃತ ದೇಹವನ್ನು ಸೂಕ್ಷ್ಮಜೀವಿಗಳು ಪ್ರವೇಶಿಸುವುದನ್ನು ತಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version